Tag: ವೆಲ್ಡಿಂಗ್

  • ಮೇಲ್ಛಾವಣಿ ಕುಸಿತ – ವ್ಯಕ್ತಿ ಬಲಿ, ಮೂವರಿಗೆ ಗಾಯ

    ಮೇಲ್ಛಾವಣಿ ಕುಸಿತ – ವ್ಯಕ್ತಿ ಬಲಿ, ಮೂವರಿಗೆ ಗಾಯ

    ನವದೆಹಲಿ: ಮನೆಯ ಮೇಲ್ಛಾವಣಿಯ ಒಂದು ಭಾಗ ಕುಸಿದು ವ್ಯಕ್ತಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ಘಟನೆ ದೇಹಲಿಯ ಪೂರ್ವ ಭಾಗ ಸರಿಟಾ ವಿಹಾರ್ ಪ್ರದೇಶದಲ್ಲಿ ನಡೆದಿದೆ.

    ಮೂರು ಅಂತಸ್ತಿನ ಮನೆ ಕಟ್ಟಡದ ಮೇಲಿನ ಮೂರನೇ ಮಹಡಿಯ ಟೆರೇಸ್‍ನಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ವೇಳೆ ಈ ಮೇಲ್ಛಾಣಿ ಕುಸಿದಿದೆ. ಘಟನೆಯಲ್ಲಿ ಧರ್ಮ್ ಭೀರ್ ಎಂಬಾತ ಸಿಲುಕಿಕೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ಅಲ್ಲದೆ ಘಟನಾಸ್ಥಳಕ್ಕೆ ನಾಲ್ಕು ಅಗ್ನಿಶಾಮಕ ದಳವನ್ನು ಕರೆಸಲಾಗಿತ್ತು ಎಂದು ಅಗ್ನಿ ಶಾಮಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಘಟನೆ ಕುರಿತಂತೆ ತನಿಖೆ ನಡೆಸಿದಾಗ ಮಧ್ಯಾಹ್ನ 12.05ಕ್ಕೆ ಮನೆಯ ಮೇಲ್ಛಾವಣಿಯ ಒಂದು ಭಾಗ ಕುಸಿದಿದೆ. ಕಟ್ಟಡದ ಟೇರಸ್‍ನಲ್ಲಿ ವೆಲ್ಡಿಂಗ್ ಕೆಲಸಗಳಿಗೆ ಸಂಬಂಧಿಸಿದ ವಸ್ತುಗಳು ಬಿದ್ದಿದ್ದವು ಎಂದು ತಿಳಿದು ಬಂದಿದೆ.

    ಮದನ್ಪುರ್ ಖಾದರ್ ನಿವಾಸಿಯಾದ ಧರ್ಮ್‍ಬೀರ್ ಮೇಲ್ಛಾಣಿ ಕುಸಿದ ಸ್ಥಳದಲ್ಲಿಯೇ ಸಿಲುಕಿಕೊಂಡು ಪ್ರಾಣಬಿಟ್ಟಿದ್ದಾರೆ ಮತ್ತು ಹರೀಶ್ ರೊಟೆಲ್ಲಾ(ಮಾಲೀಕ), ಖಲೀಲ್ ಮತ್ತು ಶಿವಂ ಅವರನ್ನು ಹತ್ತಿರದ ಏಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸ್ ಅಧಿಕಾರಿ ಆರ್.ಪಿ ಮೀನಾ ಹೇಳಿದರು.

  • ವೆಲ್ಡಿಂಗ್ ಮಾಡುವಾಗ ಎಥಿನಾಲ್ ಟ್ಯಾಂಕರ್ ಸ್ಫೋಟ – ಇಬ್ಬರ ಸಾವು

    ವೆಲ್ಡಿಂಗ್ ಮಾಡುವಾಗ ಎಥಿನಾಲ್ ಟ್ಯಾಂಕರ್ ಸ್ಫೋಟ – ಇಬ್ಬರ ಸಾವು

    ವಿಜಯಪುರ: ವೆಲ್ಡಿಂಗ್ ಮಾಡುವಾಗ ಎಥಿನಾಲ್ ಟ್ಯಾಂಕರ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ವಿಜಯಪುರದಲ್ಲಿ ನಡೆದಿದೆ.

    ಎಥಿನಾಲ್ ತುಂಬಿದ ಟ್ಯಾಂಕರ್ ನ್ನು ಖಾಲಿ ಮಾಡಿ ಟ್ಯಾಂಕರ್ ಅನ ಕೆಲ ಭಾಗಕ್ಕೆ ವೆಲ್ಡಿಂಗ್‍ಗಾಗಿ ಗ್ಯಾರೇಜ್‍ಗೆ ತರಲಾಗಿತ್ತು. ವೆಲ್ಡಿಂಗ್ ಮಾಡುವಾಗ ಟ್ಯಾಂಕರ್ ಬ್ಲಾಸ್ಟ್ ಆಗಿ ಗ್ಯಾರೇಜ್‍ನ ಕೆಲಸಗಾರರಾದ ರಾಜು ಹಾಗೂ ಪ್ರಕಾಶ್ ಟೋನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ವಿಜಯಪುರ ನಗರದ ರೈಲ್ವೆ ನಿಲ್ದಾಣದ ಬಳಿ ನಾಡಗೌಡ ರೋಡಲೈನ್ಸ್ ಎಂಬ ಗ್ಯಾರೇಜ್ ನಲ್ಲಿ, ಈ ಘಟನೆ ನಡೆದಿದೆ. ಘಟನೆ ವೇಳೆ ಸ್ಥಳದಲ್ಲಿದ್ದ ವಿಶ್ವಾನಾಥ್ ಬಡಿಗೇರ, ಪ್ರಕಾಶ್ ಶಿರೋಳ, ಬಸವರಾಜ್ ಡೊಣೂರ್ ಎಂಬವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಭಾರೀ ಸ್ಫೋಟದಿಂದ ಸುತ್ತಮುತ್ತಲಿನ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ.

    ವಿಜಯಪುರದ ಗೋಲಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದ್ದು, ವಿಜಯಪುರ ಎಸ್ಪಿ ಪ್ರಕಾಶ್ ನಿಕ್ಕಮ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲು ಸೂಚನೆ ನೀಡಿದ್ದೇನೆ. ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಸಿಗಲಿದೆ ಪ್ರಕಾಶ್ ನಿಕ್ಕಮ್ ತಿಳಿಸಿದ್ದಾರೆ.

  • ವೆಲ್ಡಿಂಗ್ ಕಾರ್ಮಿಕನ ಅಚಾತುರ್ಯದಿಂದ ಧಗಧಗನೆ ಹೊತ್ತಿ ಉರಿದ ಲಾರಿ!

    ವೆಲ್ಡಿಂಗ್ ಕಾರ್ಮಿಕನ ಅಚಾತುರ್ಯದಿಂದ ಧಗಧಗನೆ ಹೊತ್ತಿ ಉರಿದ ಲಾರಿ!

    ಬೀದರ್: ವೆಲ್ಡಿಂಗ್ ಕಾರ್ಮಿಕನ ಅಚಾತುರ್ಯದಿಂದಾಗಿ ಲಾರಿಯೊಂದು ಧಗಧಗನೆ ಉರಿದ ಬೆಂಕಿಯ ಕೆನ್ನಾಲಿಗೆಯಲ್ಲಿ ಸುಟ್ಟು ಕರಕಲಾದ ಘಟನೆ ಜಿಲ್ಲೆಯ ಹೊರವಲಯದ ಶಾಪೂರ್ ಗೇಟ್ ಬಳಿ ನಡೆದಿದೆ.

    ಲಾರಿಯಲ್ಲಿದ್ದ ಡೀಸೆಲ್ ಖಾಲಿ ಮಾಡದೇ ವೆಲ್ಡಿಂಗ್ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ವೆಲ್ಡಿಂಗ್ ಕಾರ್ಮಿಕನ ಅಚಾರ್ತುದಿಂದಾಗ ಬೆಂಕಿಯ ಕೆನ್ನಾಲಿಗೆ ಲಾರಿ ಸುಟ್ಟು ಕರಕಲಾಗಿದೆ. ತುಕ್ಕು ಹಿಡಿದಿದ್ದ ಲಾರಿಯ ಟ್ಯಾಂಕರ್ ಗೆ ಕಾರ್ಮಿಕ ವೆಲ್ಡಿಂಗ್ ಮಾಡುತ್ತಿದ್ದನು. ಆದರೆ ಟ್ಯಾಂಕರ್ ನಲ್ಲಿದ್ದ ಡೀಸೆಲನ್ನು ಹಾಗೆಯೇ ಬಿಟ್ಟು ವೆಲ್ಡಿಂಗ್ ಮಾಡುವಾಗ ಬೆಂಕಿ ಕಿಡಿ ಹಾರಿ ಡೀಸೆಲ್ ಟ್ಯಾಂಕರ್ ನಲ್ಲಿ ಬಿದ್ದಿದ್ದು, ಕ್ಷಣಾರ್ಧದಲ್ಲಿ ಲಾರಿ ಧಗಧಗನೆ ಹೊತ್ತಿ ಉರಿದಿದೆ. ಇದನ್ನೂ ಓದಿ:ಆಕ್ಸಿಡೆಂಟ್ ರಭಸಕ್ಕೆ ಹೊತ್ತಿ ಉರಿದ ಕಂಟೇನರ್ – ಚಾಲಕರಿಬ್ಬರ ಸಜೀವ ದಹನ

    ವಿಷಯ ತಿಳಿಯುತ್ತಿದ್ದಂತೆ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಕೊನೆಗೂ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಲಬುರಗಿಯಲ್ಲಿ ಏಕಾಏಕಿ ಬಿರುಗಾಳಿಗೆ ಕುಸಿದುಬಿದ್ದ ಕ್ರೇನ್- 6 ಮಂದಿ ದುರ್ಮರಣ

    ಕಲಬುರಗಿಯಲ್ಲಿ ಏಕಾಏಕಿ ಬಿರುಗಾಳಿಗೆ ಕುಸಿದುಬಿದ್ದ ಕ್ರೇನ್- 6 ಮಂದಿ ದುರ್ಮರಣ

    ಕಲಬುರಗಿ: ವೆಲ್ಡಿಂಗ್ ಕೆಲಸದ ವೇಳೆ ಏಕಾಏಕಿ ಬೀಸಿದ ಬಿರುಗಾಳಿಗೆ ಕ್ರೇನ್ ಕುಸಿದು ಬಿದ್ದು ಆರು ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ಬಳಿಯಿರುವ ಶ್ರೀ ಸಿಮೆಂಟ್ ಕಂಪನಿಯಲ್ಲಿ ಈ ಘಟನೆ ನಡೆದಿದೆ.

    ಬಿಹಾರ್ ಮೂಲದ ತಬಾರಕ್ ಅಲಿ(25) ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದ ಐವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಐವರು ಯುವಕರನ್ನು ಬಿಪಿನ್, ಅಜಯ್, ಜುಬೇರ್, ಸುಧಾಕರ್ ಮತ್ತು ಕೋಕಾ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡ ಓರ್ವನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

    ಮೃತ ಕಾರ್ಮಿಕರು ಬೃಹತ್ ಕ್ರೇನ್ ಮೇಲೆ ಹತ್ತಿ ವೆಲ್ಡಿಂಗ್ ಮಾಡುತ್ತಿದ್ದು, ಬಿರುಗಾಳಿ ಹಾಗೂ ಮಳೆಗೆ ಏಕಾಏಕಿ ಕ್ರೆನ್ ಕುಸಿದುಬಿದ್ದು ಅವಘಡ ಸಂಭವಿಸಿದೆ ಎನ್ನಲಾಗಿದೆ. ಘಟನೆ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.