ಬೆಂಗಳೂರು: ಏಪ್ರಿಲ್‍ನಲ್ಲಿ ನಡೆದಿದ್ದ 2019 ಸಿಇಟಿ(ಸಾಮಾನ್ಯ ಪ್ರವೇಶ ಪರೀಕ್ಷೆ) ಫಲಿತಾಂಶ ಶನಿವಾರ ಬೆಳಗ್ಗೆ 11 ಗಂಟೆಗೆ ಪ್ರಕಟವಾಗಲಿದೆ.
ಶನಿವಾರ ಬೆಳಗ್ಗೆ 11 ಗಂಟೆಗೆ ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡರಿಂದ ಸುದ್ದಿಗೋಷ್ಟಿ ನಡೆಯಲಿದ್ದು, ಈ ವೇಳೆ ಸಿಇಟಿ ಫಲಿತಾಂಶವನ್ನು ಪ್ರಕಟಗೊಳಿಸಲಾಗುತ್ತದೆ. ಮಧ್ಯಾಹ್ನ 1 ಗಂಟೆಯ ನಂತರ ಕೆಇಎ ವೆಬ್ ಸೈಟ್‍ನಲ್ಲಿ ಫಲಿತಾಂಶ ಪ್ರಕಟವಾಗಲಿದೆ.
ಎ. 29 ಹಾಗೂ 30ರಂದು ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪಡೆಯಲು ಮುಂದಾದ ವಿದ್ಯಾರ್ಥಿಗಳಿಗೆ ಸಿಇಟಿ ಪರಿಕ್ಷೆಯನ್ನು ನಡೆಸಲಾಗಿತ್ತು. ಒಟ್ಟು 1,94,311 ಮಂದಿ ವಿದ್ಯಾರ್ಥಿಗಳು ನೋಂದಣಿ ಮಾಡಿದ್ದರು. ಅದರಲ್ಲಿ ಶೇ. 79ರಿಂದ ಶೇ. 92 ವಿದ್ಯಾರ್ಥಿಗಳು ಜೀವಶಾಸ್ತ್ರ, ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ವಿಷಯಕ್ಕೆ ಪರೀಕ್ಷೆ ಬರೆದಿದ್ದಾರೆ.
ಬೆಂಗಳೂರು: ಭಾರತೀಯ ಜನತಾ ಪಕ್ಷ ಅಧಿಕೃತ ವೆಬ್‍ಸೈಟ್ ಹ್ಯಾಕ್ ಆಗಿದೆ. ಹ್ಯಾಕ್ ಆದ ವಿಚಾರವನ್ನು ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ಪ್ರಸ್ತಾಪಿಸಿ ಕಾಲೆಳೆದಿದ್ದಾರೆ.
ಭಾಯಿ ಔರ್ ಬೆಹನೋ.. ಈಗ ಬಿಜೆಪಿ ವೆಬ್ ಸೈಟನ್ನು ಒಂದು ಬಾರಿ ನೋಡಿ ಎಂದು ಹೇಳಿ ಕಾಲೆಳೆದಿದ್ದಾರೆ. ಆ ಕೂಡಲೇ ಪ್ರತಿಕ್ರಿಯಿಸಿದ ಬಿಜೆಪಿ, ಕೆಲವೇ ಕ್ಷಣಗಳಲ್ಲಿ ಬಿಜೆಪಿ ವೆಬ್ ಸೈಟ್ ಸರಿಹೋಗಲಿದೆ ಎಂದು ಸ್ಪಷ್ಟಪಡಿಸಿದೆ.
Bhaiya aur Bhehno if you’re not looking at the BJP website right now- you’re missing out
— Ramya/Divya Spandana (@divyaspandana) March 5, 2019
ಮೋದಿ ಪ್ರಶ್ನಿಸಿದ್ದ ರಮ್ಯಾ:
ಈ ಮೊದಲು ರಮ್ಯಾ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿದ್ದರು. ಹಿಂದೆ ನಡೆದ ಸರ್ಕಾರ ಉಗ್ರರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ ನಮ್ಮ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಇದು ಹೊಸ ಭಾರತ ಎಂದು ಮೋದಿ ಗುಜರಾತಿನಲ್ಲಿ ಭಾಷಣ ಮಾಡಿದ ವಿಡಿಯೋ ಪ್ರಧಾನ ಮಂತ್ರಿಗಳ ಟ್ವಿಟ್ಟರ್ ಖಾತೆಯಿಂದ ಅಪ್ಲೋಡ್ ಆಗಿತ್ತು. ಈ ಟ್ವೀಟ್ ಗೆ ರಮ್ಯಾ, 2014ರಲ್ಲಿ ನೀವು ಇದನ್ನೇ ಹೇಳಿ ನಂತರ ಪಾಕಿಸ್ತಾನಕ್ಕೆ ತೆರಳಿ ನವಾಜ್ ಷರೀಫ್ ಜೊತೆ ಬಿರಿಯಾನಿ ತಿಂದು ಮರಳಿದ್ದೀರಿ. ಹೀಗಾಗಿ ಈ ಸಮಯದಲ್ಲಿ ನಾವು ನಿಮ್ಮನ್ನು ನಂಬುವುದು ಹೇಗೆ? ನೋಟು ನಿಷೇಧ ಮಾಡಿದರೆ ಭಯೋತ್ಪಾದನೆ ನಿಲ್ಲುತ್ತದೆ ಎಂದು ಹೇಳಿದ್ದೀರಿ. ಆದರೆ ಇದು ಕಾರ್ಯಗತವಾಗಲಿಲ್ಲ. ನನ್ನ ಪ್ರಕಾರ ಸ್ಟ್ರೈಕ್ ಎಲ್ಲರನ್ನು ಹತ್ಯೆ ಮಾಡಿರಬಹುದು ಅಲ್ಲವೇ ಎಂದು ಪ್ರಶ್ನಿಸಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ರಮ್ಯಾ ಟ್ವೀಟ್ ಗೆ ನೆಟ್ಟಿಗರು ಖಾರವಾಗಿ ಟ್ವೀಟ್ ಮಾಡುತ್ತಿದ್ದಾರೆ.
2014 you said the same thing & post your election you went to Pak hugged Nawaz Sharief had biryani & came back. Why should we believe you this time around? You also said Demonetisation was going to stop terrorism, it didn’t- also the strike killed them all I thought, no? 🤔🤥 https://t.co/B6P5mMFxvC
— Ramya/Divya Spandana (@divyaspandana) March 4, 2019
ಇಸ್ಲಾಮಾಬಾದ್: ಪಾಕಿಸ್ತಾನದ ವಿದೇಶಾಂಗ ಇಲಾಖೆಯ ವೆಬ್‍ಸೈಟ್ ಹ್ಯಾಕ್ ಆಗಿದ್ದು, ಪಾಕ್ ಅಧಿಕಾರಿಗಳು ಹ್ಯಾಕಿಂಗ್ ಹಿಂದೆ ಭಾರತ ಕೈವಾಡ ಇದೆ ಎಂದು ಆರೋಪಿಸಿದ್ದಾರೆ.
ಪಾಕಿಸ್ತಾನದ ಡಾನ್ ಪತ್ರಿಕೆ ಈ ಕುರಿತು ವರದಿ ಮಾಡಿದ್ದು, ಪಾಕ್ ವಿದೇಶಾಂಗ ವಕ್ತಾರ ಡಾ. ಮಿಹಮ್ಮದ್ ಫೈಸಲ್ ನೀಡಿರುವ ಮಾಹಿತಿಯಂತೆ ಆಸ್ಟ್ರೇಲಿಯಾ, ಸೌದಿ ಆರೇಬಿಯಾ, ಬ್ರಿಟನ್, ಹಾಲೆಂಡ್ ದೇಶಗಳಲ್ಲಿ ವೆಬ್‍ಸೈಟ್ ಭೇಟಿ ನೀಡಲು ಸಮಸ್ಯೆ ಆಗುತ್ತಿದೆ. ಆದರೆ ಪಾಕಿಸ್ತಾನದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾಗಿ ವರದಿ ಮಾಡಿದೆ.
ಕೆಲ ವರದಿಗಳ ಅನ್ವಯ ಪಾಕಿಸ್ತಾನ ಆರ್ಮಿ ವೆಬ್ ಸೈಟ್ ಸೇರಿದಂತೆ 7ಕ್ಕೂ ಹೆಚ್ಚು ಇಲಾಖೆಗಳ ವೆಬ್ ಸೈಟ್ ಹ್ಯಾಕ್ ಆಗಿದೆಯಂತೆ. ಸದ್ಯ ಪಾಕ್ ವೆಬ್ ಸೈಟ್ ಸರಿಯಾಗಿ ಕಾರ್ಯನಿರ್ವಹಿಸುಂತೆ ಮಾಡಲು ಐಟಿ ತಂಡ ಕಾರ್ಯ ನಿರ್ವಹಿಸಿದ್ದು, ರಕ್ಷಣೆ ಮಾಡಲು ಯಶಸ್ವಿಯಾಗಿದೆ ಎನ್ನಲಾಗಿದೆ.
ಜಮ್ಮು ಕಾಶ್ಮೀರದಲ್ಲಿ ಸಿಆರ್ ಪಿಎಫ್ ಪಡೆಯ ಮೇಲೆ ದಾಳಿ ನಡೆದ 3 ದಿನಗಳ ಬಳಿಕ ಹ್ಯಾಕ್ ಆಗಿದೆ. ಪುಲ್ವಾಮಾ ದಾಳಿಯ ಹೊಣೆಯನ್ನು ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ವಹಿಸಿಕೊಂಡಿತ್ತು. ಇದಾದ ಬಳಿಕ ಭಾರತ 1996ರಲ್ಲಿ ನೀಡಿದ್ದ ಪರಮಾಪ್ತ ರಾಷ್ಟ್ರ ಸ್ಥಾನವನು ರದ್ದು ಪಡಿಸಿತ್ತು. ಅಲ್ಲದೇ ಆ ಬಳಿಕ ಪಾಕಿಸ್ತಾನದಿಂದ ಆಮದಾಗುವ ವಸ್ತುಗಳ ಮೇಲೆ ಶೇ.200 ರಷ್ಟು ಸುಂಕವನು ಹೆಚ್ಚಳ ಮಾಡಿದೆ.
ಭಾರತದ ಯೋಧರ ಮೇಲೆ ಉಗ್ರರು ನಡೆಸಿದ ದಾಳಿಯ ಹಿನ್ನೆಲೆಯಲ್ಲಿ ವಿಶ್ವದ ಪ್ರಮುಖ ರಾಷ್ಟಗಳು ಪಾಕಿಸ್ತಾನ ಉಗ್ರವಾದಕ್ಕೆ ನೀಡುತ್ತಿದ್ದ ಬೆಂಬಲಕ್ಕೆ ಟೀಕೆ ವ್ಯಕ್ತಪಡಿಸಿವೆ.
ಮಂಡ್ಯ: ನಗರದ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ ಮಾಹಿತಿಗಾಗಿ ನೂತನ ವೆಬ್ ಸೈಟ್ ಒಂದು ಅನಾವರಣಗೊಂಡಿದೆ. ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ ಅವರು http://www.mandyadistrictpolice.com/ ವೆಬ್ ಸೈಟ್ ಅನಾವರಣಗೊಳಿಸಿದರು.
ಪೊಲೀಸ್ ಇಲಾಖೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಸಾರ್ವಜನಿಕರಿಗೆ ಸಿಗಲೆಂದ ಈ ವೆಬ್ ಸೈಟನ್ನು ರೂಪಿಸಲಾಗಿದೆ. ಜಿಲ್ಲಾಮಟ್ಟದ ಪೊಲೀಸ್ ಅಧಿಕಾರಿಗಳು, ಕಚೇರಿಗಳು, ದೂರವಾಣಿ ಸಂಖ್ಯೆಗಳ ಮಾಹಿತಿ ಹಾಗೂ ಮಕ್ಕಳು ಮತ್ತು ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದ ಸಹಾಯವಾಣಿ ಸೇರಿದಂತೆ ಪೊಲೀಸ್ ಇಲಾಖೆಗೆ ಸಂಬಂಧಿಸಿದ ನೋಟಿಫಿಕೇಷನ್ ಗಳೂ ಕೂಡ ಈ ವೆಬ್‍ಸೈಟ್ ನಲ್ಲಿ ಲಭ್ಯವಾಗಲಿದೆ.
ಜಿಲ್ಲಾ ಪೊಲೀಸ್ ವೆಬ್‍ಸೈಟನ್ನು ಸದುಪಯೋಗ ಪಡಿಸಿಕೊಳ್ಳಲು ಸಾರ್ವಜನಿಕರಲ್ಲಿ ಮಂಡ್ಯ ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡಿಕೊಂಡಿದೆ.
ಶಿವಮೊಗ್ಗ: ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಶಿವಮೊಗ್ಗದ ಕುವೆಂಪು ವಿವಿಯ ಅಧಿಕೃತ ವೆಬ್ ಸೈಟ್ ಹ್ಯಾಕ್ ಮಾಡಲಾಗಿದೆ.
http://www.kuvempu.ac.in ಹೆಸರಿನ ಈ ವೆಬ್ ಪುಟದಲ್ಲಿ ಕುವೆಂಪು ಅವರ ಭಾವಚಿತ್ರ, ವಿಶ್ವಮಾನವ ಸಂದೇಶ ಹಾಗೂ ವಿವಿಯ ಚಟುವಟಿಕೆಗಳ ಮಾಹಿತಿ ಇತ್ತು. ಆದರೆ ಇಂದು ಬೆಳಗ್ಗೆ ವೆಬ್‍ಸೈಟ್ ಪೇಜ್ ನಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಜೊತೆಗೆ ಸೆಕ್ಯುರಿಟಿ ಈಸ್ ಜಸ್ಟ್ ಫ್ಯಾಂಟಸಿ ಎಂಬ ವಾಕ್ಯಗಳು ಕಂಡು ಬಂದಿವೆ.
ಈ ಕುರಿತು ಹಂಟರ್ ಬುಜ್ವಾ ಎಂಬ ಹ್ಯಾಕರ್ ತಂಡವು ತಮ್ಮ ಕೃತ್ಯ ಎಂದು ಹೇಳಿಕೊಂಡಿದೆ. ಇದನ್ನು ತಮ್ಮ ಫೇಸ್ ಬುಕ್ ನಲ್ಲೂ ಕುವೆಂಪು ವಿವಿ ವೆಬ್ ಸೈಟ್ ಹ್ಯಾಕ್ ಮಾಡಿರುವುದಾಗಿ ಪ್ರಕಟಿಸಿದೆ. ಕಾಲೇಜು ದಾಖಲಾತಿ ನಡೆಯುತ್ತಿರುವುದರಿಂದ ವೆಬ್ ಸೈಟ್ ಹ್ಯಾಕ್ ಆಗಿರುವುದು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಮೂಡಿಸಿತ್ತು. ವಿವಿಯ ಐಟಿ ತಂಡ ವೆಬ್ ಸೈಟ್ ಡೌನ್ ಮಾಡಿ, ಮಾಹಿತಿಯ ಪುನರ್ ಪರಿಶೀಲನೆ ಮಾಡಿ ಮಧ್ಯಾಹ್ನದ ವೇಳೆಗೆ ಸರಿಪಡಿಸಿದೆ.
ಈ ಬಗ್ಗೆ ವಿವಿ ಕುಲಪತಿ ಜೋಗರ್ ಶಂಕರ್ ಶಿವಮೊಗ್ಗ ಸೈಬರ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ತನಿಖೆಯ ನಂತರವಷ್ಟೇ ಈ ಹ್ಯಾಕ್ ಮಾಡಿರುವುದು ನಿಜವಾಗಿಯೂ ಪಾಕಿಸ್ತಾನಿ ಹ್ಯಾಕರ್ ಗಳೇ ಅಥವಾ ಸ್ಥಳೀಯರೇ ಎಂಬುದು ತಿಳಿಯಲಿದೆ.
ಬೆಂಗಳೂರು: ನಾನು ಕುಂದಾಪುರದಿಂದ ಸ್ಪರ್ಧಿಸುತ್ತೇನೆಂಬುದು ಸುಳ್ಳು ವಿಚಾರ. ಎಲ್ಲ ಅಭ್ಯರ್ಥಿಗಳು ಆದ ಮೇಲೆ ನಾನು ನಿಲ್ಲುವ ಬಗ್ಗೆ ಹೇಳ್ತಿನಿ. ನಾನು ಎಲ್ಲಿ ಸ್ಪರ್ಧಿಸಬೇಕೆಂಬ ಬಗ್ಗೆ ಇಷ್ಟರಲ್ಲೇ ಹೇಳ್ತೀನಿ ಅಂತ ರಿಯಲ್ ಸ್ಟಾರ್ ಹಾಗೂ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ ಅಧ್ಯಕ್ಷ ಉಪೇಂದ್ರ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಪಿಜೆಪಿ ಪಕ್ಷದ ಅಭ್ಯರ್ಥಿಯಾಗಲು ಮುಕ್ತ ಅವಕಾಶವಿದ್ದು, ಯಾರು ಬೇಕಾದರೂ ಸಂಪರ್ಕ ಮಾಡಬಹುದು. ವೈಯುಕ್ತಿಕ ಸಂದರ್ಶನ ಮಾಡಲಾಗುತ್ತದೆ. ಆಯಾ ಕ್ಷೇತ್ರದ ಬಗ್ಗೆ ವಿವರ, ಸಮಸ್ಯೆಗಳ ಅರಿವಿರಬೇಕು. ವಿದ್ಯಾರ್ಹತೆ ಇಲ್ಲಿ ಪರಿಗಣಿಸಲಾಗುವುದಿಲ್ಲ. ಚುನಾವಣೆಗೆ ಸ್ಪರ್ಧೆ ಮಾಡಲು ಇಚ್ಛಿಸುವವರು ಒಂದು ತಿಂಗಳ ಒಳಗೆ ಅಪ್ಲಿಕೇಷನ್ ಫಿಲ್ ಮಾಡಿ ಕಳಿಸಬೇಕು ಅಂತ ಹೇಳಿದ್ರು.
ಮಹಿಳೆಯರು ಕೂಡ ನಮ್ಮ ಪಕ್ಷಕ್ಕೆ ಅಭ್ಯರ್ಥಿಯಾಗಿ ಬರಲು ಆಸಕ್ತಿ ತೋರಿಸಿದ್ದಾರೆ. ಮಹಿಳೆಯರಿಗೂ ಮುಕ್ತ ಅವಕಾಶ ನಮ್ಮಲಿದೆ. ಒಳ್ಳೆ ಒಳ್ಳೆ ಐಡಿಯಾಗಳನ್ಮು ತೆಗೆದುಕೊಂಡು ಬನ್ನಿ ಅಂತ ಉಪ್ಪಿ ಕರೆ ಕೊಟ್ಟಿದ್ದಾರೆ. ಎಲ್ಲ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಸ್ಪರ್ಧೆ ನಡೆಯಲಿದೆ. ಅಭ್ಯರ್ಥಿಗಳ ಆಯ್ಕೆಗೆ ಇಂತದ್ದೇ ಎಂಬ ಮಾನದಂಡವಿಲ್ಲ. ಅವಿದ್ಯಾವಂತರಿಗೂ ಪಕ್ಷದಲ್ಲಿದೆ ಅವಕಾಶ. ಒಂದು ತಿಂಗಳಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಡೆಡ್ ಲೈನ್, ಸಂವಿಧಾನಕ್ಕನುಗುಣವಾಗಿ ಕಾಲಂ ಇಟ್ಟಿದ್ದೇವೆ. ನಮ್ಮ ಪಕ್ಷದಲ್ಲಿ ಜಾತಿ, ವರ್ಗಕ್ಕೆ ಅವಕಾಶವಿಲ್ಲ ಅಂದ್ರು.
ವೆಬ್ ಸೈಟ್,ಆಪ್ ಲಾಂಚ್: ಇಂದಿನ ಕಾರ್ಯಕ್ರಮದಿಂದ ಕುಟುಂಬ ಸದಸ್ಯರನ್ನ ಹೊರಗಿಟ್ಟ ಉಪೇಂದ್ರ ಅವರು, ಪ್ರಜಾಕೀಯ ವೆಬ್ ಸೈಟ್ ಲೋಕಾರ್ಪಣೆ ಮಾಡಿದ್ರು. ನಗ್ನ ಸತ್ಯ ಎಂಬ ಹೆಡ್ ನಲ್ಲಿ ಹಲವು ಮಾಹಿತಿ ಹೊರಬರಲಿದ್ದು, ಅಭ್ಯರ್ಥಿಗಳ ಮಾನದಂಡದ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದ್ರು.
https://www.kpjpuppi.org ಉಪೇಂದ್ರ ವೆಬ್ ಸೈಟ್ ಇದಾಗಿದ್ದು, ಈ ವೆಬ್ ಸೈಟ್ ನಲ್ಲಿ ಜನರಿಗೆ ಮಾಹಿತಿ ನೀಡಲು ಅವಕಾಶ ಮಾಡಿಕೊಡಲಾಗಿದೆ. ಅಭ್ಯರ್ಥಿಯಾಗ ಬಯಸುವವರು ಇದರಲ್ಲಿ ಡಿಟೇಲ್ಸ್ ಅಪ್ಡೇಟ್ ಮಾಡಬೇಕು. ವಿಧಾನಸಭಾ ಕ್ಷೇತ್ರಕ್ಕೆ ಏನೇನು ಬೇಕೆಂಬ ಬಗ್ಗೆ ಮಾಹಿತಿಯನ್ನು ಜನರಿಗೆ ಈ ವೆಬ್ ಸೈಟ್ ನಲ್ಲಿ ನೀಡಲಿದ್ದೇವೆ ಅಂದ್ರು. ಪ್ರಜಾಕೀಯ ಟ್ಯಾಗ್ ಲೈನ್ ನಲ್ಲಿ ಕರ್ನಾಟಕ ಧ್ವಜದ ಮಾದರಿಯಲ್ಲಿ ಆಪ್ ಲೋಕಾರ್ಪಣೆಯಾಯಿತು.
ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಪಟ್ಟಿ ಮಾಡಿ ಅದಕ್ಕೆ ಪರಿಹಾರ ಕೂಡಾ ಪಟ್ಟಿ ಮಾಡಿ ಕಳುಹಿಸಿ. ಈ ಪಕ್ಷಕ್ಕೆ ಸೇರಬಯಸುವವರಿಗೆ ಯಾವುದೇ ವಿದ್ಯಾರ್ಹತೆಯ ಅಗತ್ಯವಿಲ್ಲ. ಗ್ರಾಮ ಪಂಚಾಯ್ತಿ, ನಗರ ಸಭೆ, ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ಶಾಸಕ ಅಭ್ಯರ್ಥಿಗಳು ನಮ್ಮ ವೆಬ್‍ಗೆ ಡಿಟೇಲ್ಸ್ ಕಳಿಸಬಹುದು ಅಂತ ತಿಳಿಸಿದ್ರು.
ವೇದಿಕೆಯಲ್ಲಿ ಚೇರ್ ಗಳನ್ನ ಚುನಾವಣಾ ಅಭ್ಯರ್ಥಿಗಳಿಗಾಗಿ ಖಾಲಿ ಉಳಿಸಿದ ಉಪೇಂದ್ರ, ನಮ್ಮ ಪಕ್ಷ ಒಂದು ಮುಕ್ತವಾದ ವೇದಿಕೆ. ಖಾಲಿ ಕುರ್ಚಿಗಳನ್ನು ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಪಕ್ಷದ ಒಂದು ಆಪ್, ಒಂದು ವೆಬ್ ಸೈಟ್ ಮಾಡಿದ್ದೇವೆ. ಅದರಲ್ಲಿ ಪಕ್ಷದ ಎಲ್ಲವೂ ಒಳಗೊಂಡಿರುತ್ತೆ. ಮೈಕೋ ನವೀನ್ ಮತ್ತು ಸ್ನೇಹಿತರು ವೆಬ್‍ಸೈಟ್ ಡಿಸೈನ್ ಮಾಡಿದ್ದಾರೆ ಅಂತ ನಟ ಉಪೇಂದ್ರ ವಿವರಿಸಿದ್ರು.
ಬದುಕುವುದಕ್ಕೆ ಕೆಲಸ ಅನಿವಾರ್ಯ. ಇದೂ ಇದೆ ವೃತ್ತಿಯೂ ಇದೆ. ಬದುಕುವುದಕ್ಕೆ ಅದೂ ಅನಿವಾರ್ಯವಾಗಿದೆ. ಇದರಲ್ಲೇ ಮುಂದುವರಿಯುತ್ತೇನೆ. ಅನಿವಾರ್ಯವಾದರೆ ಅಲ್ಲಿಗೂ ಹೋಗ್ತೇನೆ ಅಂತ ಹೇಳಿದ್ರು. ಇನ್ನು ಪಕ್ಷ ಉದ್ಘಾಟನೆಯಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವಿಡಿಯೋ ಬಿಜೆಪಿ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದ ಕುರಿತು ಮಾತನಾಡಿದ ಅವರು, ಬಿಜೆಪಿ ಅವರು ತಪ್ಪಾಗಿ ತಿಳ್ಕೊಂಡಿದ್ರು. ಯಾರೋ ಮಾಡಿದ ವಿಡಿಯೋಗೆ ನನ್ನ ಟೀಕೆ ಮಾಡಿದ್ರು. ಅವರಿಗೆ ವಾಸ್ತವ ತಿಳಿಸಿದ್ದೆ, ಬಳಿಕ ಸರಿ ಹೋಗಿದೆ. ನಾನು ಯಾರನ್ನೂ ದೂಷಿಸುವುದಿಲ್ಲ ಅಂತ ಅಂದ್ರು.
ನಿರ್ಮಾಪಕ ಸೌಂದರ್ಯ ಜಗದೀಶ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಈ ವೇಳೆ ಭಾಗಿಯಾಗಿದ್ದರು.
What’s your opinion on “prajeekeeya” K.P.J.P going CASHLESS ? And how to reach people unconventionally ? Uppi.
ಆಂಡ್ರಾಯ್ಡ್ ಬಳಕೆದಾರರಿಗೆ ಇಂದು ಪ್ರಜಾಕಿಯಾ ಅಪ್ಲಿಕೇಶನ್ ಬಿಡುಗಡೆಯಾಗಿದೆ. ಐಒಎಸ್ ಐಫೋನ್ ಬಳಕೆದಾರರಿಗೆ ಅಪ್ಲಿಕೇಶನ್ ಅನ್ನು ಕೆಲವೇ ದಿನಗಳಲ್ಲಿ ಸಕ್ರಿಯಗೊಳಿಸಲಾಗುತ್ತದೆ. ಧನ್ಯವಾದ.
ಬೆಂಗಳೂರು: ಟಾಲಿವುಡ್‍ನ ನಟಿಯರ ಫೋಟೋ, ವೀಡಿಯೋಗಳನ್ನು ಅಶ್ಲೀಲವಾಗಿ ತೋರಿಸಿ ಆಪ್‍ಲೋಡ್ ಮಾಡ್ತಿದ್ದ ವ್ಯಕ್ತಿಯೊಬ್ಬನನ್ನು ಹೈದರಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾಮುಕ ವ್ಯಕ್ತಿಯನ್ನು ದಾಸರಿ ಪ್ರದೀಪ್ ಎನ್ನಲಾಗಿದ್ದು, ಈತ ಸುಮಾರು 30 ವೈಬ್‍ಸೈಟ್‍ಗಳಿಗೆ ನಿರ್ವಹಣೆ ಮಾಡುತ್ತಿದ್ದನು. ಅಲ್ಲದೇ ಮನಬಂದಂತೆ ನಟಿಯರ ಬಗ್ಗೆ ಅಸಭ್ಯವಾಗಿ ಆಪ್‍ಲೋಡ್ ಮಾಡ್ತಿದ್ದ ಎನ್ನಲಾಗುತ್ತಿದೆ.
ನಟಿಯರ ದೂರಿನ ಮೇರೆಗೆ ಎಚ್ಚೆತ್ತ ಹೈದ್ರಾಬಾದ್ ಸೈಬರ್ ಕ್ರೈಂ ಪೊಲೀಸರು ನಿನ್ನೆ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಿ ಆರೋಪಿ ಪ್ರದೀಪ್‍ನನ್ನು ವಶಕ್ಕೆ ಪಡೆದಿದ್ದು ಇಂದು ಹೈದ್ರಾಬಾದ್‍ನ ಕೋರ್ಟ್‍ಗೆ ಹಾಜರುಪಡಿಸಲಿದ್ದಾರೆ.
ಬೆಂಗಳೂರು: ನಮ್ಮದು ಕನ್ನಡಿಗರ ಪರವಾದ ಸರ್ಕಾರ. ಕನ್ನಡಕ್ಕೆ ನಮ್ಮ ಮೊದಲ ಆದ್ಯತೆ ಅನ್ನೋ ಸಿಎಂ ಸಿದ್ದರಾಮಯ್ಯರ ಅಸಲಿ ಕನ್ನಡ ಪ್ರೇಮದ ಸ್ಟೋರಿ ಇದು. ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಸಿಎಂ ಆಗಿ ನಾಲ್ಕೂವರೆ ವರ್ಷ ಕಳೆದ್ರೂ ಅವರ ಅಧೀನದ ಪ್ರಭಾವಿ ಇಲಾಖೆಗಳಲ್ಲಿ ಮಾತ್ರ ಕನ್ನಡದ ಅನುಷ್ಠಾನ ಆಗಿಲ್ಲ.
ಸುಮಾರು 15ಕ್ಕೂ ಹೆಚ್ಚು ಇಲಾಖೆಗಳ ವೆಬ್‍ಸೈಟ್‍ಗಳು ಈಗಲೂ ಇಂಗ್ಲೀಷ್‍ನಲ್ಲಿವೆ. ಕೇವಲ ಇಲಾಖೆಗಳ ವೆಬ್ ಸೈಟ್ ಮಾತ್ರವಲ್ಲ. ರಾಜ್ಯದ ಮೊದಲ ಪ್ರಜೆ ಘನವೆತ್ತ ರಾಜ್ಯಪಾಲರಾದ ಅಧಿಕೃತ ವೆಬ್‍ಸೈಟ್ ಕೂಡಾ ಕನ್ನಡದಲ್ಲಿ ಇಲ್ಲ. ಬೇರೆ ರಾಜ್ಯದ ವೆಬ್ ಸೈಟ್‍ನಲ್ಲಿ ಸ್ಥಳೀಯ ಭಾಷೆಗೆ ಆದ್ಯತೆ ನೀಡಲಾಗಿದೆ. ನಮ್ಮ ರಾಜ್ಯದಲ್ಲಿ ರಾಜ್ಯಪಾಲರು ಮಾತ್ರ ಕನ್ನಡಕ್ಕೆ ಕೊಕ್ ಕೊಟ್ಟಿದ್ದಾರೆ.
ಹೀಗಾಗಿ ಮೆಟ್ರೋ ನಿಲ್ದಾಣಕ್ಕೆ ಕನ್ನಡ ಹೆಸ್ರು ಇಡಲು ಪತ್ರ ಬರೆಯೋ ಸಿಎಂ ಸಾಹೇಬ್ರು ಅವರ ಇಲಾಖೆಗಳತ್ತಲೂ ಒಮ್ಮೆ ಗಮನಹರಿಸಲಿ.
ಮೈಸೂರು: ಲೋಕ್ಯಾಟೋ ಎಂಬ ಅನ್‍ಲೈನ್ ವೇಶ್ಯಾವಾಟಿಕೆಯ ವೆಬ್‍ಸೈಟ್ ನಲ್ಲಿ ಕಿಡಿಗೇಡಿಗಳು ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ಫೋಟೋ ಮತ್ತು ಮೊಬೈಲ್ ನಂಬರ್ ಹಾಕಿದ್ದಾರೆ.
ಪರಿಣಾಮ, ವೆಬ್‍ಸೈಟ್ ನೋಡುವ ಕಾಮುಕರು ಆ ನಂಬರ್‍ಗಳಿಗೆ ಕರೆ ಮಾಡಿ ಕೆಟ್ಟದಾಗಿ ಮಾತಾಡುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿಯ ವಿಜ್ಞಾನ ವಿಭಾಗದ 10 ವಿದ್ಯಾರ್ಥಿನಿಯರ ಫೋಟೋ ಮತ್ತು ಮೊಬೈಲ್ ನಂಬರ್ ಅನ್ನು ವೆಬ್‍ಸೈಟ್‍ನಲ್ಲಿ ಅಪ್ ಲೋಡ್ ಮಾಡಲಾಗಿದೆ.
ನಮ್ಮ ನಂಬರ್ ಬೇರೆಯವರಿಗೆ ಹೇಗೆ ಸಿಕ್ಕಿತು, ಅದರಲ್ಲೂ ಈ ರೀತಿ ಯಾಕೆ ಕೆಟ್ಟದಾಗಿ ಮಾತಾಡುತ್ತಿದ್ದಾರೆ ಅಂತಾ ವಿದ್ಯಾರ್ಥಿನಿಯರ ಪರಿಶೀಲಿಸಿದಾಗ ಅವರ ಫೋಟೋ ಮತ್ತು ನಂಬರ್ ಅನ್‍ಲೈನ್ ವೇಶ್ಯಾವಾಟಿಕೆಯ ವೆಬ್‍ಸೈಟ್‍ನಲ್ಲಿ ಇರುವುದು ಗೊತ್ತಾಗಿದೆ. ತಕ್ಷಣ ಈ ವಿಚಾರವನ್ನು ವಿಭಾಗದ ಮುಖ್ಯಸ್ಥರ ಗಮನಕ್ಕೆ ತಂದು ನಂತರ ವಿವಿಯ ಕುಲಸಚಿವರ ಗಮನಕ್ಕೆ ತರಲಾಗಿದೆ. ಅವರ ಅನುಮತಿಯಂತೆ ಮೈಸೂರಿನ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ವಿದ್ಯಾರ್ಥಿನಿಯರ ಫೋಟೋ ಮತ್ತು ಮೊಬೈಲ್ ನಂಬರ್ ಅನ್ನು ವೆಬ್‍ಸೈಟ್‍ಗೆ ಹಾಕಿದವರು ಯಾರು? ಇದು ಸಹಪಾಠಿಗಳ ಕೃತ್ಯವಾ? ಅನ್ನೋದು ಸ್ಪಷ್ಟವಾಗಬೇಕಿದೆ.