Tag: ವೆಬ್ ಸೀರಿಸ್

  • ವೆಬ್ ಸೀರಿಸ್‌ನಲ್ಲೂ ಬ್ಯುಸಿಯಾದ ನಿವಿನ್ ಪೌಲಿ

    ವೆಬ್ ಸೀರಿಸ್‌ನಲ್ಲೂ ಬ್ಯುಸಿಯಾದ ನಿವಿನ್ ಪೌಲಿ

    ಮಾಲಿವುಡ್ ಸ್ಟಾರ್ ನಿವಿನ್ ಪೌಲಿಯವರ (Nivin Pauly) ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಮುಂಬರುವ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಅನೌನ್ಸ್ ಮಾಡಿದ್ದಾರೆ. ಈಗಾಗಲೇ ಮಲಯಾಳಂ ಇಂಡಸ್ಟ್ರಿಯಲ್ಲಿ (Mollywood )ವರ್ಸಟೈಲ್ ಆಕ್ಟರ್ ಅಂತಾನೆ ಗುರುತಿಸಿಕೊಂಡಿರೋ ನಿವಿನ್ ಪೌಲಿ ವಿಭಿನ್ನ ಪಾತ್ರಗಳ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

    ಮೊದಲಿಗೆ ‘ಸರ್ವಂ ಮಾಯ’, ಅನ್ನೋ ಹಾರರ್ ಕಾಮಿಡಿ ಸಿನಿಮಾ, 2025ರ ಕ್ರಿಸ್ಮಸ್ ಹಬ್ಬಕ್ಕೆ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಅಜು ವರ್ಗೀಸ್ ಅವರೊಂದಿಗೆ ನಿವಿಲ್ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಅದರ ನಂತರ ‘ಬೆತ್ಲೆಹೆಮ್ ಕುಟುಂಬ ಯುನಿಟ್’ ಎಂಬ ಸಿನಿಮಾ ತೆರೆಗೆ ಬರಲಿದೆ. ಬ್ಲಾಕ್ ಬಸ್ಟರ್ ಪ್ರೇಮಲು ತಂಡದಿಂದ ಸಿದ್ಧವಾಗುತ್ತಿರುವ ರೊಮ್ಯಾಂಟಿಕ್ ಕಾಮಿಡಿ ಚಿತ್ರ ಇದಾಗಿದ್ದು ಈ ಚಿತ್ರದಲ್ಲಿ ನಿವಿನ್ ಪೌಲಿ ಜೊತೆ ಮಮಿತಾ ಬೈಜು ನಟಿಸುತ್ತಿದ್ದಾರೆ.

    ಇವುಗಳ ಜೊತೆಗೆ ‘ಬೆಬಿ ಗರ್ಲ್’ ಎಂಬ ಥ್ರಿಲ್ಲರ್ ಸಿನಿಮಾದಲ್ಲಿ ನಿವಿನ್ ಅಭಿನಯಿಸಿದ್ದಾರೆ. ಇದರ ಜೊತೆಗೆ ತಮಿಳಿನಲ್ಲಿ ನಿರ್ದೇಶಕ ರಾಮ್ ಆಕ್ಷನ್ ಕಟ್ ಹೇಳ್ತಿರೋ ವಿಶಿಷ್ಟ ರೊಮ್ಯಾಂಟಿಕ್ ಸೈಕಲಾಜಿಕಲ್ ಥ್ರಿಲ್ಲರ್ ಏಳು ಕಡಲ್ ಏಳು ಮಲೈ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದೆಲ್ಲದಕ್ಕಿಂತಲೂ ದೊಡ್ಡ ಸುದ್ದಿ ಎಂದರೆ, ಲೋಕೇಶ್ ಕನಗರಾಜ್ ನಿರ್ಮಾಣದ ‘ಬೆನ್ಜ್’ ಚಿತ್ರದಲ್ಲಿ ವಾಲ್ಟರ್ ಪಾತ್ರದ ಮೂಲಕ ಡಿಫ್ರೆಂಟ್ ಆಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ ನಿವಿಲ್ ಪೌಲಿ.

    ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಜೊತೆಗೆ ಬಹು ನಿರೀಕ್ಷಿತ ವೆಬ್ ಸೀರೀಸ್ ‘ಫಾರ್ಮಾ’ ಮೂಲಕ ಡಿಜಿಟಲ್ ಕ್ಷೇತ್ರಕ್ಕೂ ಪದಾರ್ಪಣೆ ಮಾಡುತ್ತಿದ್ದಾರೆ. ಇದಷ್ಟೇ ಅಲ್ಲದೆ ನಿರ್ಮಾಪಕರಾಗಿ ನಿವಿನ್ ಪೌಲಿ ‘ಪ್ಯಾನ್‌ ಇಂಡಿಯನ್ ಸೂಪರ್‌ ಹೀರೋ ಫಿಲ್ಮ್ – ಮಲ್ಟಿವರ್ಸ್ ಮನುಮಧನ್’ ಹಾಗೂ ನಯನತಾರಾ ಅಭಿನಯದ ‘ಡಿಯರ್ ಸ್ಟುಡೆಂಟ್ಸ್’ ಮುಂತಾದ ಮಹತ್ವಾಕಾಂಕ್ಷಿ ಚಿತ್ರಗಳಿಗೆ ಬೆಂಬಲ ನೀಡುತ್ತಿದ್ದಾರೆ. ಒಟ್ಟಾರೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ವೆಬ್ ಸೀರಿಸ್ ಹಾಗೀ ನಿರ್ಮಾಣದಲ್ಲಿಯೂ ಬ್ಯುಸಿ ಆಗಿದ್ದಾರೆ ನಿವಿನ್ ಪೌಲಿ.

  • ಶೋಧ ವೆಬ್ ಸಿರೀಸ್ ಸ್ಟ್ರೀಮಿಂಗ್ ಡೇಟ್ ಫಿಕ್ಸ್

    ಶೋಧ ವೆಬ್ ಸಿರೀಸ್ ಸ್ಟ್ರೀಮಿಂಗ್ ಡೇಟ್ ಫಿಕ್ಸ್

    ಜೀ5 ವೆಬ್ ಸರಣಿಗಳಿಗೆ ವೇದಿಕೆ ಸೃಷ್ಟಿಸಿದೆ. ಈ ಮೊದಲು ‘ಅಯ್ಯನ ಮನೆ’ ಹೆಸರಿನ ಮಿನಿ ವೆಬ್ ಸರಣಿಯನ್ನು ಪ್ರಸಾರ ಮಾಡಿ ಯಶಸ್ಸು ಕಂಡಿದೆ. ಈಗ ‘ಶೋಧ’ (Shodha) ಹೆಸರಿನ ವೆಬ್ ಸಿರೀಸ್ ರಿಲೀಸ್ ಮಾಡಲು ರೆಡಿ ಆಗಿದೆ. ಈ ಸರಣಿಯ ಟ್ರೇಲರ್‌ಗೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ತಿಂಗಳ 29 ರಿಂದ ಶೋಧ zee5ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.

    ಈ ಕುರಿತು ಇಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಜೀ5 ಬ್ಯುಸಿನೆಸ್ ಹೆಡ್ ದೀಪಕ್ ಶ್ರೀರಾಮಲು ಮಾತನಾಡಿ, zee5 ಈ ಮೊದಲು ಒಂದೇ ಒಟಿಟಿ ಫ್ಲಾಟ್‌ಫಾರ್ಮ್ ಆಗಿತ್ತು. ಈಗ ಭಾಷೆಗಾಗಿ ಒಂದು ವಿಶೇಷ ಒಟಿಟಿ ಶುರು ಮಾಡಿದ್ದೇವೆ. Zee5 ಈಗ ಕನ್ನಡ zee5 ಆಗಿದೆ. ಈಗ ಇದರ ಜೊತೆಗೆ ವೆಬ್ ಸಿರೀಸ್ ಶುರು ಮಾಡಿದ್ದೇವೆ. ಇದು zee5 ಮೊದಲ ಪ್ರಯತ್ನ. ಮಿನಿ ಸಿರೀಸ್ ಹಾಗೂ ಮೈಕ್ರೋ ಸಿರೀಸ್ ಎಂಬುದನ್ನು ಶುರು ಮಾಡಿದ್ದೇವೆ. ಮಿನಿ ಮತ್ತು ಮೆಗಾ ಸಿರೀಸ್ ಇದೆ. ಮಿನಿ ಸೀರಿಸ್ ಮೊದಲ ಹೆಜ್ಜೆಯೇ ಅಯ್ಯನ ಮನೆ. ಅದಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಈ ಸಕ್ಸಸ್ ಮುಂದಿನ ಹೆಜ್ಜೆಯೇ ಶೋಧ. ಶೋಧ ಶುರು ಮಾಡಿದಾಗ ಕೆಆರ್ ಜಿಯವರು ಸಾಥ್ ಕೊಟ್ಟರು. ಇದರ ಮುಂದುವರೆದ ಭಾಗವಾಗಿ ಪಿಆರ್‌ಕೆ ಪ್ರೊಡಕ್ಷನ್ ಹಾಗೂ ತರುಣ್ ಸುಧೀರ್ ಪ್ರೊಡಕ್ಷನ್ ಸೇರಿದಂತೆ ಹಲವು ಪ್ರೊಡಕ್ಷನ್ ಜೊತೆ ಕೈ ಜೋಡಿಸಿದ್ದೇವೆ. ಈ ಸಿರೀಸ್ ಪ್ರಪಂಚವೇ ವಿಭಿನ್ನ ಎಂದರು.‌ ಇದನ್ನೂ ಓದಿ: ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ವಿಚಾರ – ಆ.23 ಕ್ಕೆ ವಿಚಾರಣೆ ಮುಂದೂಡಿಕೆ

    ಕೆಆರ್‌ಜಿ ಸ್ಟುಡಿಯೋದ ಕಾರ್ತಿಕ್ ಗೌಡ ಮಾತನಾಡಿ, ಅಯ್ಯನ ಮನೆ ಸಕ್ಸಸ್ ಬಳಿ ಪ್ರದೀಪ್ ಬಂದು ವೆಬ್ ಸಿರೀಸ್ ಐಡಿ ಇದೆ ಮಾಡೋಣಾ ಎಂದು ಕೇಳಿದರು. ಅದಕ್ಕೆ ಫ್ರೆಶ್ ರೈಟಿಂಗ್ ಬರಬೇಕು. ಸುಹಾಸ್ ಹಿಂದಿಯಲ್ಲಿ ಫರ್ಜಿ ವೆಬ್ ಸಿರೀಸ್, ಫ್ಯಾಮಿಲಿ ಮ್ಯಾನ್ 2, 3 ವೆಬ್ ಸರಣಿಗೆ ರೈಟರ್ ಆಗಿ ಕೆಲಸ ಮಾಡಿದ್ದರು. ಅವರನ್ನು ತಂದೆವು. ಬಳಿಕ ಸುನಿಲ್ ಮೈಸೂರು ಬಂದರು. ಹೀಗೆ ಒಬೊಬ್ಬರೇ ತಂಡ ಸೇರಿಕೊಂಡರು. ತುಂಬಾ ಜನ ಸೇರಿಕೊಂಡು ವೆಬ್ ಸಿರೀಸ್ ಮಾಡಿದ್ದೇವೆ. ಟ್ರೇಲರ್ ಗೆ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆ. ಇದೇ ತಿಂಗಳ 29ರಂದು ಜೀ5ನಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂದರು.

    ನಟ ಪವನ್ ಕುಮಾರ್ ಮಾತನಾಡಿ, ನಾವು ಹಿಂದಿಯಲ್ಲಿ ಸಿರೀಸ್ ಮಾಡಿದ್ದೆ. ಕನ್ನಡದಲ್ಲಿಯೂ ಮಾಡಬೇಕು ಎಂದಾಗ ರಿಜೆಕ್ಟ್ ಆಗುತ್ತಿತ್ತು. zee5ನಲ್ಲಿ ವೆಬ್ ಸಿರೀಸ್ ಮಾಡುತ್ತಿದ್ದಾರೆ ಎಂದಾಗ ಖುಷಿಯಾಯ್ತು. ಶೋಧದಲ್ಲಿ ಆಕ್ಟ್ ಮಾಡ್ತೀಯಾ ಎಂದು ಕೇಳಿದರು. ಕಥೆ ಕೇಳಿದಾಗ ನಾನು ಆಟವಾಡಲು ಅವಕಾಶವಿದೆ ಎಂದು ತಿಳಿಯಿತು. ವೆಬ್ ಸಿರೀಸ್‌ನಲ್ಲಿ ಒಳ್ಳೊಳ್ಳೆ ಕಥೆಗಳನ್ನು ಹೇಳಬಹುದು. ತುಂಬಾ ಜನ ಡೈರೆಕ್ಟರ್ ಹಾಗೂ ರೈಟರ್ಸ್‌ಗೆ ದೊಡ್ಡ zee5 ಫ್ಲಾಟ್‌ಫಾರ್ಮ್ ಆಗಲಿ ಎಂದು ಶುಭ ಹಾರೈಸಿದರು. ಇದನ್ನೂ ಓದಿ: `ವೇಷಗಳು’ ಚಿತ್ರದ ವಿಭಿನ್ನ ಪಾತ್ರಕ್ಕೆ ಬಣ್ಣ ಹಚ್ಚಿದ ಶರತ್ ಲೋಹಿತಾಶ್ವ

    ಕನ್ನಡ ಚಿತ್ರರಂಗಕ್ಕೆ ಸದಭಿರುಚಿ ಸಿನಿಮಾಗಳನ್ನು ನೀಡುತ್ತಿರುವ ‘ಕೆಆರ್ಜಿ ಸ್ಟುಡಿಯೋಸ್’ ‘ಶೋಧ’ಕ್ಕೆ ಬಂಡವಾಳ ಹೂಡಿದೆ. ಸುನಿಲ್ ಮೈಸೂರು ಈ ವೆಬ್ ಸರಣಿಗೆ ನಿರ್ದೇಶನ ಮಾಡಿದ್ದಾರೆ. ನಿರ್ದೇಶನದ ಜೊತೆಗೆ ನಟನೆಯಲ್ಲೂ ಗಮನ ಸೆಳೆದವರು ಪವನ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿರಿ ರವಿಕುಮಾರ್, ಅರುಣ್ ಸಾಗರ್ ಮತ್ತು ಅನುಷಾ ರಂಗನಾಥ್ ತಾರಾಬಳಗದಲ್ಲಿದ್ದಾರೆ. ಸಪ್ತಮಿ ಗೌಡ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಈ ವೆಬ್ ಸರಣಿಗೆ ಸುಹಾಸ್ ನವರತ್ನ ಕಥೆ ಬರೆದಿದ್ದು, ಆರು ಎಪಿಸೋಡ್‌ಗಳುಳ್ಳ ಸಖತ್ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಎಳೆಯೇ ‘ಶೋಧ’. ಆಗಸ್ಟ್ 29ರಿಂದ ಜೀ5 ಒಟಿಟಿಯಲ್ಲಿ ‘ಶೋಧ’ ವೆಬ್ ಸಿರೀಸ್ ವೀಕ್ಷಣೆಗೆ ಲಭ್ಯವಾಗಲಿದೆ.

  • ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆ ನಿರ್ಮಾಣದ ‘ಆದಿ ಶಂಕರಾಚಾರ್ಯ’ ವೆಬ್‌ ಸರಣಿ ಟ್ರೈಲರ್‌ ಬಿಡುಗಡೆ

    ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆ ನಿರ್ಮಾಣದ ‘ಆದಿ ಶಂಕರಾಚಾರ್ಯ’ ವೆಬ್‌ ಸರಣಿ ಟ್ರೈಲರ್‌ ಬಿಡುಗಡೆ

    ಬೆಂಗಳೂರು: ಆರ್ಟ್ ಆಫ್ ಲಿವಿಂಗ್ (Art Of Living) ಸಂಸ್ಥೆಯಿಂದ ನಿರ್ಮಿತವಾದ ಪ್ರಥಮ ವೆಬ್ ಸರಣಿಯಾದ ‘ಆದಿ ಶಂಕರಾಚಾರ್ಯ’ದ (Adi Shankaracharya) ಟ್ರೈಲರ್‌ ಅನ್ನು ದಸರಾ ದಿನದಂದು ಬಿಡುಗಡೆಗೊಳಿಸಲಾಯಿತು.

    ತೀವ್ರ ಕಾತುರದಿಂದ ಕಾಯಲಾಗುತ್ತಿದ್ದ ಆರ್ಟ್ ಆಫ್ ಲಿವಿಂಗ್‌ನ ಪ್ರಥಮ ವೆಬ್ ಸರಣಿಯಾದ ‘ಆದಿ ಶಂಕರಾಚಾರ್ಯ’ದ ಟ್ರೈಲರ್‌ ದಸರಾ ಹಬ್ಬದ ಪ್ರಯುಕ್ತವಾಗಿ, ಜಾಗತಿಕ ಮಾನವತಾವಾದಿಗಳೂ, ಆಧ್ಯಾತ್ಮಿಕ ಗುರುಗಳೂ ಆದ ಗುರುದೇವ್ ಶ್ರೀ ಶ್ರೀ ರವಿಶಂಕರರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು. ಗುರುದೇವರು, ‘ಆಗಿಂದಾಗ್ಗೆ ಜ್ಞಾನದ ಪುನರುಜ್ಜೀವನವಾಗುತ್ತಲೇ ಇರಬೇಕು. ಆದಿ ಶಂಕರರು ಜ್ಞಾನದ ಪುನರುತ್ಥಾನವನ್ನು ಮಾಡಿದರು. ಅವರು ಭಕ್ತಿ, ಜ್ಞಾನ ಮತ್ತು ಕರ್ಮವನ್ನು ಒಂದಾಗಿ ತಂದರು. ‘ಜೀವನವು ದುಃಖಮಯವಲ್ಲ, ಆನಂದಮಯ’ ಎಂಬುದೇ ಅವರ ಸಂದೇಶವಾಗಿತ್ತು ಎನ್ನುತ್ತಾರೆ.‌ ಇದನ್ನೂ ಓದಿ: ದೊಡ್ಮನೆ ಸ್ಪರ್ಧಿಗಳಿಗೆ ಡಬಲ್ ಧಮಾಕಾ- ಈ ವಾರಾಂತ್ಯ ನೋ ಎಲಿಮಿನೇಷನ್?

    ಆದಿ ಶಂಕರರ ಬಾಲ್ಯ ಹಾಗೂ ಯೌವ್ವನದ ಸವಿಸ್ತಾರವಾದ ಚಿತ್ರಣವನ್ನು ಭಾರತಾದ್ಯಂತದ ಅವರ ಪಯಣ ಮತ್ತು ಆ ಪಯಣದಲ್ಲಿ ಆಧ್ಯಾತ್ಮಿಕತೆಯ ಪರಂಪರೆಯ ಪುನರುತ್ಥಾನವನ್ನು ತೋರಿಸಲಾಗಿದೆ. ಇವರ ಈ ಪುನರುತ್ಥಾನದ ಕಾರ್ಯವು ಇಂದಿಗೂ ಜೀವಂತವಾಗಿದೆ. ಈ ಸರಣಿಯ ಸೀಸನ್ 1 ರಲ್ಲಿ 10 ಧಾರಾವಾಹಿಗಳಿದ್ದು, ಪ್ರತಿಯೊಂದು ಧಾರಾವಾಹಿಯ ಅವಧಿಯು 40 ನಿಮಿಷಗಳು. ಶಂಕರರ ಜೀವನದ ಮೊದಲ ಎಂಟು ವರ್ಷಗಳನ್ನು ಇದು ತೋರಿಸುತ್ತದೆ. ಶ್ರೀ ಶ್ರೀ ಪಬ್ಲಿಕೇಷನ್ಸ್‌ನ ಟ್ರಸ್ಟಿಯಾದ ನಕುಲ್ ಧವನ್ ಅವರು, ಆದಿ ಶಂಕರರು ಭಾರತೀಯ ಇತಿಹಾಸದಲ್ಲಿ ಖ್ಯಾತನಾಮರಾಗಿದ್ದರೂ ಸಹ, ಎಲ್ಲರಿಗೂ ಅವರ ಜೀವನ ಚರಿತ್ರೆ ತಿಳಿದಿಲ್ಲ. ಅವರು ಅಲ್ಪಾಯುಷಿಗಳಾದರೂ ಸಹ ಆಗಿನ ಸಮಯಗಳಲ್ಲಿ ಅವರು ಕಾಲ್ನಡಿಗೆಯಲ್ಲೇ ಭಾರತದ ಉದ್ದಗಲಕ್ಕೂ ಪ್ರಯಾಣ ಮಾಡಿ, ದೇಶವನ್ನು ಸಾಂಸ್ಕೃತಿಕವಾಗಿ ಏಕೀಕರಣಗೊಳಿಸಿದರು. ಅವರು ಸಂರಕ್ಷಿಸಿದ ಸಂಪ್ರದಾಯಗಳು, ಪರಂಪರೆ, ಸಂಸ್ಥೆಗಳು ಇಂದಿಗೂ ಸಹ ಜೀವಂತವಾಗಿವೆ. ಅವರು ಭಾರತದ ಸಾಂಸ್ಕೃತಿಕ ಪುನರುತ್ಥಾನದ ರೂವಾರಿಗಳು ಎಂದಿದ್ದಾರೆ.

    ಈ ಯೋಜನೆಯ ಬಗ್ಗೆ ಮಾತನಾಡುತ್ತಾ ನಿರ್ದೇಶಕರಾದ ಓಂಕಾರ್ ನಾಥ್ ಮಿಶ್ರಾ, ಈ ಸರಣಿಯನ್ನು ಮಹಾ ಗುರುಗಳಾದ ಆದಿ ಶಂಕರರಿಗೆ ಮುಡಿಪಾಗಿಸಲಾಗಿದೆ. ಅವರ ಬುದ್ಧಿ, ಜ್ಞಾನ ಮತ್ತು ಆಧ್ಯಾತ್ಮಿಕ ಶಕ್ತಿಯು ದೇಶಕ್ಕೆ ಒಂದು ರೂಪವನ್ನೇ ನೀಡಿತು. 300 ಭಾಗಗಳಾಗಿ ವಿಭಜಿತವಾಗಿದ್ದ ಭಾರತ ದೇಶದಲ್ಲಿ ನಡೆದು, ಆದಿ ಶಂಕರಾಚಾರ್ಯರು ಸನಾತನ ಧರ್ಮದ ಅಡಿಯಲ್ಲಿ ಭಾರತವನ್ನು ಒಗ್ಗೂಡಿಸಿದರು. ಭಾರತದ ಸಾಂಸ್ಕೃತಿಕ, ಧಾರ್ಮಿಕ ಪುನರುತ್ಥಾನಕ್ಕೆ ಅವರು ಅಪಾರ ಕಾಣಿಕೆಯನ್ನು ನೀಡಿದರು. ಆಧುನಿಕ ಪ್ರೇಕ್ಷಕರಿಗೆ ಸ್ಪಂದಿಸುವ ರೀತಿಯಲ್ಲಿ ಅವರ ಜೀವನ ಚರಿತ್ರೆಯನ್ನು ನಾವು ಹೊರತಂದಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೈಸೂರು ದಸರಾ ಜಂಬೂಸವಾರಿಗೆ ವಿಜೃಂಭಣೆಯ ಚಾಲನೆ

    ವಿಜಯದಶಮಿಯ ಶುಭ ದಿನದಂದು ಬಿಡುಗಡೆಯಾಗುತ್ತಿರುವ ಆದಿ ಶಂಕರಾಚಾರ್ಯ ಟ್ರೈಲರ್, ಭಾರತದ ಆಧ್ಯಾತ್ಮಿಕ ಗತದ ಭವ್ಯವಾದ ಪಯಣ. ಈ ಸರಣಿಯು ಆರ್ಟ್ ಆಫ್ ಲಿವಿಂಗ್ ಆ್ಯಪ್‌ನಲ್ಲಿ ನವೆಂಬರ್ 1 ರಿಂದ ಲಭ್ಯವಾಗಿದೆ. ಜಾಗತಿಕ ಪ್ರೇಕ್ಷಕರಿಗೆ ಭಾರತದ ಅತೀ ದೊಡ್ಡ ರಾಷ್ಟ್ರೀಯ ನಾಯಕನ ಕಥೆಯು ಜೀವಂತವಾಗಿ ಬರಲಿದೆ.

  • ಕಂದಹಾರ್ ವಿಮಾನ ಅಪಹರಣ ಸೀರಿಸ್‌ನಲ್ಲಿ ಹಿಂದೂಗಳಿಗೆ ಅವಮಾನ – ನೆಟ್‌ಫ್ಲಿಕ್ಸ್‌ಗೆ ಸಮನ್ಸ್

    ಕಂದಹಾರ್ ವಿಮಾನ ಅಪಹರಣ ಸೀರಿಸ್‌ನಲ್ಲಿ ಹಿಂದೂಗಳಿಗೆ ಅವಮಾನ – ನೆಟ್‌ಫ್ಲಿಕ್ಸ್‌ಗೆ ಸಮನ್ಸ್

    ನವದೆಹಲಿ: ಕಂದಹಾರ್ ವಿಮಾನ ಅಪಹರಣ IC 814 ಸೀರಿಸ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು (Ministry of Information and Broadcasting) ಭಾರತದ ನೆಟ್‌ಫ್ಲಿಕ್ಸ್ (Netflix) ಕಂಟೆಂಟ್ ಚೀಫ್ ಮೋನಿಶಾ ಶೇರ್ಗಿಲ್ (Monika Shergill) ಅವರಿಗೆ ಸಮನ್ಸ್ ಮಾಡಿದೆ.

    ಕಂಟೆಂಟ್ ಚೀಫ್ ಶೆರ್ಗಿಲ್ ಅವರನ್ನು ಸೆಪ್ಟೆಂಬರ್ 3, ಮಂಗಳವಾರದಂದು ವೆಬ್ ಸರಣಿಯ ವಿವಾದಾತ್ಮಕ ಅಂಶಗಳ ಕುರಿತು ವಿವರಣೆಯನ್ನು ನೀಡಲು ಹಾಜರಾಗುವಂತೆ ಸೂಚಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.ಇದನ್ನೂ ಓದಿ: 2 ತಿಂಗಳ ಒಳಗಡೆ ಕೆಪಿಎಸ್‌ಸಿ ಮರು ಪರೀಕ್ಷೆ – ಅಧಿಕಾರಿಗಳು ಅಮಾನತು: ಸಿಎಂ ಘೋಷಣೆ

    1999ರಲ್ಲಿ ತಾಲಿಬಾನ್ ಉಗ್ರರು ನಡೆಸಿದ್ದ ಏರ್ ಇಂಡಿಯಾ ವಿಮಾನದ ಅಪಹರಣದ ಕಥೆಯನ್ನು ಆಧರಿಸಿ ನಿರ್ಮಾಣವಾಗಿದ್ದ ಸಿನಿಮಾ ಆ.29 ರಂದು ನೆಟ್‌ಫ್ಲಿಕ್ಸ್‌ನಲ್ಲಿ ತೆರೆಕಂಡಿತ್ತು. ದಿ ಕಂದಹಾರ್ ಹೈಜಾಕ್’ ಐಸಿ 814 (The Kandahar Hijack IC 814) ಸಿನಿಮಾದಲ್ಲಿ ಇಬ್ಬರು ಅಪಹರಣಕಾರರ ಹೆಸರನ್ನು ಹಿಂದೂ ಹೆಸರುಗಳಿಗೆ ಬದಲಾಯಿಸಿದ ಆರೋಪದ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

    ಏನಿದು ವಿವಾದ?
    ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಹರ್ಕತ್-ಉಲ್-ಮುಜಾಹಿದ್ದೀನ್‌ನಿಂದ 1999ರಲ್ಲಿ ನಡೆದ ಏರ್ ಇಂಡಿಯಾ ವಿಮಾನದ ಅಪಹರಣದಲ್ಲಿ ಮುಸ್ಲಿಂ ಉಗ್ರರ ಹೆಸರನ್ನು ಬದಲಿಸಿ ಹಿಂದೂ ಹೆಸರನ್ನು ಬಳಸಿರುವ ಕುರಿತು ಆರೋಪ ವ್ಯಕ್ತವಾಗಿದೆ.

    ವಿಮಾನ ಅಪಹರಿಣದಲ್ಲಿ ಇಬ್ರಾಹಿಂ ಅಖ್ತರ್, ಶಾಹಿದ್ ಅಖ್ತರ್‌ಸೈದ್, ಸನ್ನಿ ಸಹ್ಮದ್ ಖಾಜಿ, ಜಹೂರ್ ಮಿಸ್ತ್ರೀ ಮತ್ತು ಶಾಖೀರ್ ಭಾಗಿಯಾಗಿದ್ದ ಉಗ್ರರ ಹೆಸರನ್ನು ಬದಲಿಸಿ, ಸಿನಿಮಾದಲ್ಲಿ ಅಪಹರಣಕಾರರನ್ನು ಚೀಫ್, ಡಾಕ್ಟರ್, ಬರ್ಗರ್, ಭೋಲಾ ಮತ್ತು ಶಂಕರ್ ಎಂದು ಕೋಡ್‌ನೇಮ್‌ಗಳನ್ನು ಬಳಸುತ್ತಿದ್ದರು. ಈ ಕಾರಣಕ್ಕೆ ಆ ಹೆಸರನ್ನು ಇರಿಸಿ ಸರಣಿಯನ್ನು ತೆಗೆಯಲಾಗಿದೆ ಎಂದು ನಿರ್ದೇಶಕ ಅನುಭವ್ ಸಿನ್ಹಾ (Anubhav Sinha) ಸ್ಪಷ್ಟನೆ ನೀಡಿದ್ದರು.ಇದನ್ನೂ ಓದಿ: ಸಂಸ್ಕೃತ ಬರದಿದ್ರೆ ದೇವಲೋಕಕ್ಕೆ ವೀಸಾ ಇಲ್ಲ: ಚರ್ಚೆಗೆ ಗ್ರಾಸವಾದ ಪುತ್ತಿಗೆ ಶ್ರೀ ಹೇಳಿಕೆ

    ಸದ್ಯ ಸಿನಿಮಾ ಮೂಲಕ ನೈಜ ಘಟನೆಯನ್ನು ತಪ್ಪಾಗಿ ಚಿತ್ರಿಸುತ್ತಾರೆ ಹಾಗೂ ಧಾರ್ಮಿಕತೆಯನ್ನು ಪ್ರಚೋದಿಸುತ್ತಾರೆ. ನಿರ್ಮಾಪಕರು ಉದ್ದೇಶಪೂರ್ವಕವಾಗಿ ಹಿಂದೂ ಹೆಸರುಗಳನ್ನು ಆರಿಸಿಕೊಂಡಿದ್ದಾರೆ ಎಂದು ಹೆಸರುಗಳ ಕುರಿತಾಗಿ ಆರೋಪಿಸಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

  • ಸಿನಿಮಾ ಶೂಟಿಂಗ್ ಕಷ್ಟ ಕಷ್ಟ: ಶಾರುಖ್ ಖಾನ್ ಪುತ್ರಿ ಹೇಳಿದ್ದೇನು?

    ಸಿನಿಮಾ ಶೂಟಿಂಗ್ ಕಷ್ಟ ಕಷ್ಟ: ಶಾರುಖ್ ಖಾನ್ ಪುತ್ರಿ ಹೇಳಿದ್ದೇನು?

    ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಇದೀಗ ತಂದೆಯಂತೆಯೇ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಮೊದಲ ಬಾರಿಗೆ ಅವರು ವೆಬ್ ಸೀರಿಸ್ ಒಂದಕ್ಕೆ ಬಣ್ಣ ಹಚ್ಚಿದ್ದು, ಈಗ ಈ ವೆಬ್ ಸೀರಿಸ್ ಶೂಟಿಂಗ್ ಊಟಿಯ ವಿವಿಧ ಸ್ಥಳಗಳಲ್ಲಿ ನಡೆಯುತ್ತಿದೆ. ತಮಗೆ ಬೋರು ಆಗಬಾರದು ಎಂದೇ ಫ್ರೆಂಡ್ಸ್ ಅನ್ನೂ ಜೊತೆಗೆ ಅವರು ಕರೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ : Exclusive : ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಮೊದಲ ವರ್ಷದ ಪುಣ್ಯಸ್ಮರಣೆ : ಪುತ್ಥಳಿ ಅನಾವರಣ

    ದಿ ಆರ್ಚೀಸ್ ಹೆಸರಿನಲ್ಲಿ ತಯಾರಾಗುತ್ತಿರುವ ಈ ವೆಬ್ ಸೀರಿಸ್ ನಲ್ಲಿ ಸುಹಾನಾ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಬಹುತೇಕ ದೃಶ್ಯಗಳಲ್ಲಿ ಇವರೇ ಇರುವುದರಿಂದ ಕಷ್ಟವಾದರೂ ಇಷ್ಟಪಟ್ಟು ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರಂತೆ. ಶೂಟಿಂಗ್ ವೇಳೆಯಲ್ಲಿ ಪದೇ ಪದೇ ಅವರು ತಂದೆಯನ್ನು ನೆನಪಿಸಿಕೊಳ್ಳುತ್ತಿದ್ದಾರಂತೆ. ಇದನ್ನೂ ಓದಿ : ಕೆಜಿಎಫ್ 2 ಐವತ್ತು ದಿನ ಪೂರೈಸಿದ ಬೆನ್ನಲ್ಲೆ ಮತ್ತೊಂದು ಹೊಸ ಸಿನಿಮಾ ರಿಲೀಸ್ ಘೋಷಣೆ

    ಶೂಟಿಂಗ್ ಅಂದರೆ, ಅಲ್ಲಿ ಬಿಂದಾಸ್ ಆಗಿ ಇರಬಹುದು ಎನ್ನುವ ಕಲ್ಪನೆ ನನ್ನಲ್ಲಿತ್ತು. ಈಗ ಅದರ ಕಷ್ಟ ಗೊತ್ತಾಗುತ್ತಿದೆ. ಅಪ್ಪಾಜಿ ಅಷ್ಟೊಂದು ವರ್ಷ ಅದು ಹೇಗೆ ಸಹಿಸಿಕೊಂಡು ಬಂದಿದ್ದಾರೋ ಎಂದು ನಿರ್ದೇಶಕರ ಮುಂದೆ ತಂದೆಯನ್ನು ಹಾಡಿ ಹೊಗಳಿದ್ದಾರಂತೆ. ಅಲ್ಲದೇ ತಮ್ಮೊಂದಿಗೆ ಕೆಲಸ ಮಾಡುತ್ತಿರುವ ಖುಷಿ ಕಪೂರ್ ಮತ್ತು ಜೋಯಾ ಅಖ್ತರ್ ಬಳಿಯೂ ತಮ್ಮ ತಂದೆಯನ್ನು ಗುಣಗಾನ ಮಾಡಿದ್ದಾರಂತೆ ಸುಹಾನಾ.

  • ವೆಬ್ ಸರಣಿಗೂ ಕಾಲಿಡಲಿದ್ದಾರೆ ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್

    ವೆಬ್ ಸರಣಿಗೂ ಕಾಲಿಡಲಿದ್ದಾರೆ ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್

    ವೇದ ಸೇರಿದಂತೆ ಹಲವು ಚಿತ್ರಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್. ವೇದ ಸಿನಿಮಾದಲ್ಲಿ ಹೊಸ ಬಗೆಯ ಪಾತ್ರವನ್ನು ಅವರು ನಿರ್ವಹಿಸುತ್ತಿದ್ದು, ಈ ಚಿತ್ರಕ್ಕೆ ಇವರ ಪತ್ನಿಯೇ ನಿರ್ಮಾಪಕರು. ಈಗಾಗಲೇ ಮೈಸೂರಿನಲ್ಲಿ ಎರಡು ಹಂತದ ಶೂಟಿಂಗ್ ಕೂಡ ಮುಗಿದಿದೆ. ಈ ಸಿನಿಮಾದ ನಂತರ ಮತ್ತಷ್ಟು ಚಿತ್ರಗಳಿಗೆ ಅವರು ಸಹಿ ಮಾಡಿದ್ದಾರೆ. ಇದನ್ನೂ ಓದಿ : ತೆರೆಯ ಮೇಲೂ ನಿರ್ದೇಶಕನಾಗಿ ನಟಿಸಿದ ಯೋಗರಾಜ್ ಭಟ್

    ವೇದ ಶೂಟಿಂಗ್ ನಡುವೆಯೂ ಅವರು ಇನ್ನೂ ಮೂರು ಸಿನಿಮಾಗಳಿಗೆ ಸಹಿ ಮಾಡಿದ್ದಾರೆ. ಒಂದು ಚಿತ್ರಕ್ಕೆ ಶ್ರೀನಿ ನಿರ್ದೇಶನ ಮಾಡುತ್ತಿದ್ದರೆ, ಮತ್ತೊಂದು ಸಿನಿಮಾವನ್ನು ಸಚಿನ್ ಎನ್ನುವವರು ನಿರ್ದೇಶನ ಮಾಡಲಿದ್ದಾರೆ. ಈ ನಡುವೆ ಅಭಿಮಾನಿಗಳಿಗೆ ಮತ್ತೊಂದು ಹೊಸ ಸುದ್ದಿ ನೀಡಿದ್ದಾರೆ ಶಿವರಾಜ್ ಕುಮಾರ್. ಅದು ನಿಜಕ್ಕೂ ಅಚ್ಚರಿ ಮೂಡಿಸುವಂತಹ ಸುದ್ದಿ ಆಗಿದೆ. ಇದನ್ನೂ ಓದಿ : ಪೊಲೀಸ್ ಪೇದೆ ನನ್ನನ್ನು ಸೆಕ್ಸ್ ವರ್ಕರ್ ರೀತಿ ನೋಡಿದ : ಮಲಯಾಳಿ ನಟಿ ಅರ್ಚನಾ ಆರೋಪ

    ಶಿವರಾಜ್ ಕುಮಾರ್ ಪುತ್ರಿ ಈಗಾಗಲೇ ವೆಬ್ ಸೀರಿಸ್ ಲೋಕಕ್ಕೆ ಕಾಲಿಟ್ಟಾಗಿದೆ. ಹನಿಮೂನ್ ಎಂಬ ವೆಬ್ ಸಿರೀಸ್ ಅನ್ನು ಅವರು ನಿರ್ಮಾಣ ಮಾಡಿದ್ದಾರೆ. ಅಲ್ಲದೇ, ಈ ಹಿಂದೆ ಪ್ರದೀಪ್ ಜೊತೆಗೂಡಿ ಲೂಸ್ ಕನೆಕ್ಷನ್ ಎಂಬ ವೆಬ್ ಸೀರಿಸ್ ಕೂಡ ಮಾಡಿದ್ದರು. ಇದೀಗ ಮತ್ತೊಂದು ವೆಬ್ ಸೀರಿಸ್ ಮಾಡಲು ಮುಂದಾಗಿದೆ ಈ ಟೀಮ್. ಶಿವರಾಜ್ ಕುಮಾರ್ ಅವರಿಗಾಗಿಯೇ ಕತೆಯನ್ನು ಸಿದ್ಧ ಮಾಡಿಕೊಂಡಿದೆಯಂತೆ. ಇದನ್ನೂ ಓದಿ : ಕಾಶ್ಮೀರ ಟಿವಿ ಸ್ಟಾರ್ ನಟಿ ಹತ್ಯೆ ಮಾಡಿದ ಭಯೋತ್ಪಾದಕರು

    ಓಂಕಾರ ಹೆಸರಿನ ಕಥೆಯನ್ನು ವೆಬ್ ಸೀರಿಸ್ ಗಾಗಿಯೇ ಈ ಟೀಮ್ ರೆಡಿ ಮಾಡಿಕೊಂಡಿದ್ದು, ಶಿವರಾಜ್ ಕುಮಾರ್ ಅವರಿಗೆ ಕಥೆಯನ್ನು ಹೇಳಿದೆಯಂತೆ. ಕಥೆ ಕೇಳಿ ಶಿವಣ್ಣ ಥ್ರಿಲ್ ಆಗಿದ್ದು, ಮುಂದಿನ ದಿನಗಳಲ್ಲಿ ಕಾಲ್ ಶೀಟ್ ಕೊಡುವುದಾಗಿಯೂ ಹೇಳಿದ್ದಾರೆ ಎನ್ನುವ ಸುದ್ದಿಯಿದೆ. ಈಗಾಗಲೇ ಕೈಯಲ್ಲಿ ಇರುವ ಸಿನಿಮಾಗಳನ್ನು ಮುಗಿಸಿ, ನಂತರ ವೆಬ್ ಸೀರಿಸ್ ನಲ್ಲಿ ಅವರು ನಟಿಸಲಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

  • ಹೃತಿಕ್ ರೋಷನ್ ನಟನೆಯ ವೆಬ್ ಸರಣಿಯಲ್ಲಿ ಕನ್ನಡದ ನಟಿ?

    ಹೃತಿಕ್ ರೋಷನ್ ನಟನೆಯ ವೆಬ್ ಸರಣಿಯಲ್ಲಿ ಕನ್ನಡದ ನಟಿ?

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ನಭಾ ನಟೇಶ್ ಬಾಲಿವುಡ್ ನಟ ಹೃತಿಕ್ ರೋಷನ್ ನಟನೆಯ ವೆಬ್ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಹೃತಿಕ್‍ಗೆ ಜೋಡಿಯಾಗಿ ನಭಾ ನಟೇಶ್ ಕಾಣಿಸಿಕೊಳ್ಳಲಿದ್ದಾರೆ ಎಂದು ಬಾಲಿವುಡ್ ಅಂಗಳದಲ್ಲಿ ಮಾತು ಕೇಳಿ ಬರುತ್ತಿದೆ. ಒಂದು ವೇಳೆ ಈ ಗಾಸಿಪ್ ಸತ್ಯ ಆದರೆ ನಭಾ ದೊಡ್ಡಮಟ್ಟದಲ್ಲಿ ಬಾಲಿವುಡ್‍ಗೆ ಎಂಟ್ರಿ ನೀಡಲಿದ್ದಾರೆ. ನಟ ಸುಧೀರ್ ಬಾಬು ಜೊತೆ ನನ್ನು ದೋಚುಕುಂಡುವಟೆ ಸಿನಿಮಾ ಮೂಲಕ ಟಾಲಿವುಡ್‍ಗೆ ಕಾಲಿಟ್ಟಿದ್ದ ನಭಾ ಸದ್ಯ ತೆಲುಗು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರೀಗ ಯಾವುದೇ ಕನ್ನಡ ಪ್ರಾಜೆಕ್ಟ್‍ನ್ನು ಒಪ್ಪಿಕೊಂಡಿಲ್ಲ. ಆದರೆ ಇದೀಗ ಬಾಲಿವುಡ್‍ನಲ್ಲಿ ಮಿಂಚಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

    ಬಾಲಿವುಡ್ ನಟ ಸೈಫ್ ಅಲಿ ಖಾನ್, ಅಭಿಷೇಕ್ ಬಚ್ಚನ್, ಅಕ್ಷಯ್ ಕುಮಾರ್ ಅವರು ವೆಬ್ ಸಿರೀಸ್ ಲೋಕಕ್ಕೆ ಈಗಾಗಲೇ ಕಾಲಿಟ್ಟಿದ್ದಾರೆ. ನಟ ಹೃತಿಕ್ ರೋಷನ್ ಅವರು ವೆಬ್ ಸಿರೀಸ್ ಮಾಡುತ್ತಿದ್ದಾರೆ ಶೀಘ್ರದಲ್ಲಿಯೇ ಅವರು ವೆಬ್ ಸಿರೀಸ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಾನ್ ಲೆ ಕ್ಯಾರಿ ಅವರ ‘ದಿ ನೈಟ್ ಮ್ಯಾನೇಜರ್’ ವೆಬ್ ಸಿರೀಸ್‍ನ ಹಿಂದಿ ರಿಮೇಕ್‍ನಲ್ಲಿ ಹೃತಿಕ್ ಬಣ್ಣ ಹಚ್ಚಲಿದ್ದಾರೆ.

     

    ಎ. ಹರ್ಷ ನಿರ್ದೇಶನದ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ವಜ್ರಕಾಯ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟವರು ನಟಿ ನಭಾ ನಟೇಶ್. ಪಟಾಕಾ ಪಾರ್ವತಿ ಪಾತ್ರದಲ್ಲಿ ಬಿಂದಾಸ್ ಆಗಿ ನಟಿಸಿ ತಮ್ಮ ಮೊದಲ ಚಿತ್ರದಲ್ಲೇ ಕಮಾಲ್ ಮಾಡಿ ಕನ್ನಡಿಗರ ಮನದಲ್ಲಿ ಜಾಗ ಗಿಟ್ಟಿಸಕೊಂಡಿದ್ದರು. ವಜ್ರಕಾಯ ಚಿತ್ರದ ಗೆಲುವಿನ ನಂತರ ಸಾಹೇಬದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. `ನನ್ನು ದೋಚುಕುಂಡುವಟೆ ಚಿತ್ರದ ಮೂಲಕ ತೆಲುಗು ಚಿತ್ರಜಗತ್ತಿಗೆ ಎಂಟ್ರಿ ಕೊಟ್ಟಿದ್ದ ನಭಾ ಅಧುಗೋ, ಇಸ್ಮಾರ್ಟ್ ಶಂಕರ್, ಡಿಸ್ಕೋ ರಾಜ, ಅಲ್ಲುಡು ಅಧುರ್ಸ್ ಸೇರಿದಂತೆ ಒಂದರ ಹಿಂದೊಂದು ತೆಲುಗು ಚಿತ್ರಗಳಲ್ಲಿ ನಟಿಸುತ್ತಲೇ ಇದ್ದಾರೆ.

     

    View this post on Instagram

     

    A post shared by Nabha Natesh (@nabhanatesh)

    ಪೂಜಾ ಹೆಗಡೆ, ರಕುಲ್ ಪ್ರೀತ್ ಸಿಂಗ್, ಪ್ರಗ್ಯಾ ಜೈಸ್ವಾಲ್, ಶಾಲಿನಿ ಪಾಂಡೆ ಮತ್ತು ಕನ್ನಡತಿ ರಶ್ಮಿಕಾ ಮಂದಣ್ಣ ಸೇರಿದಂತೆ ಸಾಕಷ್ಟು ಜನ ನಟಿಯರು ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿ, ನಂತರ ಬಾಲಿವುಡ್ ಸಿನಿಮಾಗಳಲ್ಲಿ ಮಿಂಚಿದ್ದಾರೆ. ನಭಾ ನಟೇಶ್ ಕೂಡಾ ಕನ್ನಡದಿಂದ ತೆಲುಗಿಗೆ ಹೋಗಿ, ಈಗ ಅಲ್ಲಿಂದ ಹಿಂದಿ ಚಿತ್ರರಂಗಕ್ಕೆ ಅಡಿಯಿರಿಸುತ್ತಿದ್ದಾರೆ. ಅಂದ, ಚೆಂದದ ಜೊತೆಗೆ ಅಭಿನಯದಲ್ಲೂ ಪಳಗಿರುವ ನಭಾ ಹಿಂದಿ ಚಿತ್ರರಂಗದಲ್ಲಿ ಭದ್ರವಾದ ನೆಲೆ ಕಂಡುಕೊಳ್ಳುತ್ತಾರೆ ಎನ್ನುವ ಅಭಿಪ್ರಾಯ ಎಲ್ಲೆಡೆ ಮೂಡಿಬರುತ್ತಿದೆ.

     

    ಕಡಿಮೆ ಅವಧಿಯೊಳಗೆ ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ನಭಾ ಈಗ ವೆಬ್ ಸಿರೀಸ್ ಒಂದರಲ್ಲಿ ನಟಿಸುವುದರೊಂದಿಗೆ ಬಾಲಿವುಡ್‍ನಲ್ಲೂ ಖಾತೆ ತೆರೆಯುವ ಹಂತದಲ್ಲಿದ್ದಾರೆ. ಕನ್ನಡದಲ್ಲಿ ಮಿಂಚಿರುವ ನಭಾ ನಟೇಶ್ ಬಾಲಿವುಡ್‍ನಲ್ಲಿ ಹೇಗೆ ಕಮಾಲ್ ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

  • ಇನ್ನೊಬ್ಬರ ಮುಖದಲ್ಲಿ ನಗು ತರಿಸಲು ನನಗೆ ಇಷ್ಟ: ಸನ್ನಿ ಲಿಯೋನ್

    ಇನ್ನೊಬ್ಬರ ಮುಖದಲ್ಲಿ ನಗು ತರಿಸಲು ನನಗೆ ಇಷ್ಟ: ಸನ್ನಿ ಲಿಯೋನ್

    ಮುಂಬೈ: ಇನ್ನೊಬ್ಬರ ಮುಖದಲ್ಲಿ ನಗು ತರಿಸಲು ನನಗೆ ಇಷ್ಟವಾಗುತ್ತದೆ ಎಂದು ಬಾಲಿವುಡ್‍ನ ಮಾದಕ ನಟಿ ಸನ್ನಿ ಲಿಯೋನ್ ಹೇಳಿದ್ದಾರೆ.

    ಸಿನಿಮಾ ಮತ್ತು ರಿಯಾಲಿಟಿ ಶೋಗಳ ಜೊತೆಗೆ ವೆಬ್ ಸೀರಿಸ್‍ನಲ್ಲೂ ನಟಿಸುತ್ತಿರುವ ಸನ್ನಿ, ಆನ್‍ಲೈನ್ ಚಾನೆಲ್‍ವೊಂದರಲ್ಲಿ ಪ್ರಸಾರವಾಗುವ ವೈಬ್ ಸೀರಿಸ್‍ನಲ್ಲಿ ನಟಿಸಲು ಸಿದ್ಧವಾಗಿದ್ದಾರೆ. ಇದು ಕಾಮಿಡಿ ವೆಬ್ ಸೀರಿಸ್ ಆಗಿದ್ದು, ನನಗೆ ಕಾಮಿಡಿ ಚಿತ್ರಗಳಲ್ಲಿ ನಟಿಸಲು ತುಂಬಾ ಇಷ್ಟ. ಇನ್ನೊಬ್ಬರ ಮುಖದಲ್ಲಿ ನಗು ತರಿಸುವ ಕೆಲಸ ನನಗೆ ಬಹಳ ಸಂತೋಷ ಕೊಡುತ್ತದೆ ಎಂದು ಹೇಳಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಸನ್ನಿ ಲಿಯೋನ್, ಈಗ ಸದ್ಯಕ್ಕೆ ವೆಬ್ ಸೀರಿಸ್ ಬಗ್ಗೆ ಹಚ್ಚಿನ ಮಾಹಿತಿ ನೀಡಲು ಆಗುವುದಿಲ್ಲ. ಆದರೆ ಈ ವೆಬ್ ಸೀರಿಸ್‍ಗಾಗಿ ನಾನು ಕಾತುರದಿಂದ ಕಾಯುತ್ತಿದ್ದೇನೆ. ಇದರಲ್ಲಿ ಕಾಮಿಡಿ ಜಾನರ್ ನಲ್ಲಿ ನಟಿಸಲು ಬಹಳ ಸಂತೋಷವಾಗುತ್ತಿದೆ. ಇನ್ನೊಬ್ಬರ ಮುಖದಲ್ಲಿ ನಗು ತರಿಸುವ ಕೆಲಸ ನನಗೆ ಇಷ್ಟ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ತಾವೇ ನಿರ್ಮಾಪಕರಾಗಿ ಸಿನಿಮಾಗಳನ್ನು ನಿರ್ಮಾಣ ಮಾಡಲು ತಯಾರಿ ನಡೆಸುತ್ತಿರುವ ಸನ್ನಿ, ಈ ಹಿಂದೆ ಕೆಲ ವೆಬ್ ಸೀರಿಸ್‍ನಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ತನ್ನದೇ ಬಯೋಗ್ರಫಿಯಾದ ಕರೆನ್ಜಿತ್ ಕೌರ್ ಮತ್ತು ರಾಗಿಣಿ ಎಂಎಂಎಸ್ ರಿಟನ್ರ್ಸ್-2 ಎಂಬ ವೆಬ್ ಸೀರಿಸ್‍ನಲ್ಲಿ ನಟಿಸಿದ್ದರು. ಇದರ ಜೊತೆಗೆ ಇತ್ತೀಚೆಗೆ ಬಿಡುಗಡೆಯಾದ ವಾಟ್ ದಿ ಲವ್ ವಿತ್ ಕರಣ್ ಜೋಹರ್ ಎಂಬ ವೆಬ್ ಸರಣಿಯಲ್ಲಿ ಅಭಿನಯಿಸಿದ್ದರು.

    ಈ ಮೂರು ವೆಬ್ ಸರಣಿಗಳ ನಂತರ ಈಗ ಕಾಮಿಡಿ ಜಾನರ್ ನಲ್ಲಿ ಬರುತ್ತಿರುವ ವೆಬ್ ಸೀರಿಸ್ ಮಾಡಲು ಸನ್ನಿ ಓಕೆ ಎಂದಿದ್ದಾರೆ. ಈ ಮೂಲಕ ಇಷ್ಟು ದಿನ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದ ಈ ಹಾಟ್ ಬ್ಯೂಟಿ, ಈಗ ಪ್ರೇಕ್ಷಕರನ್ನು ನಗೆ ಎಂಬ ದೋಣಿಯಲ್ಲಿ ತೇಲಿಸಲು ಸಿದ್ಧವಾಗಿದ್ದಾರೆ. ಆದರೆ ಈ ವೆಬ್ ಸೀರಿಸ್ ಯಾವಾಗ ಬಿಡುಗಡೆಯಾಗುತ್ತದೆ. ಉಳಿದ ಕಲಾವಿದರ ವಿವರ ತಿಳಿಯಬೇಕಿದೆ.

    ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಸನ್ನಿ, ತನ್ನ ಅವಳಿ ಮಕ್ಕಳ ಹುಟ್ಟುಹಬ್ಬವನ್ನು ಆಚರಿಸಿ ಅದನ್ನು ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು. ಜೊತಗೆ ಇಬ್ಬರು ಮಕ್ಕಳಿಗೂ ಎರಡನೇ ವರ್ಷದ ಹುಟ್ಟು ಹಬ್ಬದ ಶುಭಾಶಯಗಳು. ನನ್ನ ಜೀವನದ ಪ್ರತಿಯೊಂದು ದಿನವನ್ನು ಸಂತೋಷವನ್ನಾಗಿ ಮಾಡಿದ್ದೀರಿ. ಪ್ರತಿ ಬಾರಿ ನೀವು ನಕ್ಕು ಕುಣಿದಾಡಿದಾಗ, ಡ್ಯಾನ್ಸ್, ಹಾಡು, ನನ್ನನ್ನು ಅಮ್ಮಾ ಎಂದು ಕರೆದಾಗ ಹೃದಯ ಕರಗಿದಂತ ಅನುಭವವಾಗುತ್ತದೆ. ನನ್ನ ಮಕ್ಕಳ ಮೇಲೆ ದೇವರ ಆಶೀರ್ವಾದ ಇರಲಿ ಎಂದು ಸದಾ ಪ್ರಾರ್ಥಿಸುತ್ತೇನೆ ಎಂದು ಸನ್ನಿ ಲಿಯೋನ್ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದರು.

    https://www.instagram.com/p/B8bvjAFB5Mo/