Tag: ವೆಬಿನಾರ್

  • ಭಾರತವು ಗ್ರೀನ್ ಹೈಡ್ರೋಜನ್‍ನ ಜಾಗತಿಕ ಹಬ್ ಆಗಬಹುದು: ಮೋದಿ

    ಭಾರತವು ಗ್ರೀನ್ ಹೈಡ್ರೋಜನ್‍ನ ಜಾಗತಿಕ ಹಬ್ ಆಗಬಹುದು: ಮೋದಿ

    ನವದೆಹಲಿ: ಭಾರತವು ಹಸಿರು ಜಲಜನಕದ ಜಾಗತಿಕ ಹಬ್ ಆಗಬಹುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

    ‘ಎನರ್ಜಿ ಫಾರ್ ಸಸ್ಟೈನಬಲ್ ಗ್ರೋತ್’ ವೆಬಿನಾರ್‌ನಲ್ಲಿ ಮಾತನಾಡಿದ ಅವರು, ನವೀಕರಿಸಬಹುದಾದ ಇಂಧನ ಶಕ್ತಿಯ ಸಾಕಷ್ಟು ಲಭ್ಯತೆಯು ಭಾರತಕ್ಕೆ ಅಂತರ್ಗತ ಪ್ರಯೋಜನವನ್ನು ನೀಡುತ್ತದೆ ಎಂದರು. ಇದನ್ನೂ ಓದಿ: ಬಿಸಿಯೂಟ ತಯಾರಕರಿಗೆ 1,000 ರೂ. ಗೌರವಧನ ಹೆಚ್ಚಳ

    ಭಾರತವು ಹಸಿರು ಜಲಜನಕದ ಜಾಗತಿಕ ಕೇಂದ್ರವಾಗಬಹುದು. ಸುಸ್ಥಿರ ಇಂಧನ ಮೂಲಗಳಿಂದ ಮಾತ್ರ ಸುಸ್ಥಿರ ಬೆಳವಣಿಗೆ ಸಾಧ್ಯ ಎಂಬುದು ಭಾರತದ ಸ್ಪಷ್ಟ ದೃಷ್ಟಿಯಾಗಿದೆ ಎಂದರು. ಇದನ್ನೂ ಓದಿ: ಪುಟಿನ್ ನಮ್ಮ ಚಿಕ್ಕಪ್ಪ, ಯುದ್ಧ ನಡೆಯಲ್ಲ – ಸರ್ಕಾರದ ಸೂಚನೆಯನ್ನು ಲೇವಡಿ ಮಾಡಿದ್ದ ವಿದ್ಯಾರ್ಥಿಗಳು

    ಗೃಹೋಪಯೋಗಿ ಉಪಕರಣಗಳನ್ನು ಒಳಗೊಂಡಂತೆ ಹೆಚ್ಚು ಶಕ್ತಿ-ಸಮರ್ಥ ಉತ್ಪನ್ನಗಳನ್ನು ತಯಾರಿಸಲು ಬಹಳಷ್ಟು ಮಾಡಬೇಕಾಗಿದೆ. ಮಿಷನ್ ಮೋಡ್‍ನಲ್ಲಿ ಎಥೆನಾಲ್ ಮಿಶ್ರಣಕ್ಕೆ ಆದ್ಯತೆ ನೀಡಲಾಗಿದೆ. ನಾವು ನಮ್ಮ ಸಕ್ಕರೆ ಕಾರ್ಖಾನೆಗಳು ಮತ್ತು ಡಿಸ್ಟಿಲರಿಗಳನ್ನು ಇನ್ನಷ್ಟು ಆಧುನೀಕರಿಸಬೇಕಾಗಿದೆ ಎಂದರು.

  • ಡಿಜಿಟಲ್ ವಿಶ್ವವಿದ್ಯಾಲಯವು ಭಾರತದ ಶಿಕ್ಷಣ ನೀತಿಯಲ್ಲಿ ಅಭೂತಪೂರ್ವ ಹೆಜ್ಜೆ: ಮೋದಿ

    ಡಿಜಿಟಲ್ ವಿಶ್ವವಿದ್ಯಾಲಯವು ಭಾರತದ ಶಿಕ್ಷಣ ನೀತಿಯಲ್ಲಿ ಅಭೂತಪೂರ್ವ ಹೆಜ್ಜೆ: ಮೋದಿ

    ನವದೆಹಲಿ: ಡಿಜಿಟಲ್ ವಿಶ್ವವಿದ್ಯಾನಿಲಯವು ಭಾರತದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅಭೂತಪೂರ್ವ ಹೆಜ್ಜೆಯಾಗಿದ್ದು, ದೇಶದಲ್ಲಿ ಸೀಟುಗಳ ಕೊರತೆಯ ಸಮಸ್ಯೆಯನ್ನು ಕೊನೆಗೊಳಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

    2022ರ ಕೇಂದ್ರ ಬಜೆಟ್‍ನಲ್ಲಿ ಮಾಡಲಾದ ಘೋಷಣೆಗಳ ಅನುಷ್ಠಾನದ ಕುರಿತು ಶಿಕ್ಷಣ ಸಚಿವಾಲಯದ ವೆಬಿನಾರ್‍ನ ಸಮಗ್ರ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, 2022-23ರ ಕೇಂದ್ರ ಬಜೆಟ್ ಹೊಸದನ್ನು ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದೋಂದು ಆಳವಾದ ಶಿಕ್ಷಣ ನೀತಿಯಾಗಿದೆ ಎಂದರು. ಇದನ್ನೂ ಓದಿ: ಇಂಟಲಿಜೆನ್ಸ್ ಈಶ್ವರಪ್ಪ ಹತ್ರ ಇದೆಯಾ..?- ಪ್ರಿಯಾಂಕ್ ಖರ್ಗೆ ಕಿಡಿ

    ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಡಿಜಿಟಲ್ ಸಂಪರ್ಕವು ಭಾರತದ ಶಿಕ್ಷಣ ವ್ಯವಸ್ಥೆಯನ್ನು ಹೇಗೆ ಚಾಲನೆಯಲ್ಲಿಟ್ಟಿತು ಎಂಬುದನ್ನು ಸಹ ಪ್ರಧಾನಿಯವರು ವೆಬಿನಾರ್‍ನಲ್ಲಿ ಭಾಗವಹಿಸಿದ ಸಭಿಕರಿಗೆ ತಿಳಿಸಿದರು.

    ಯುವ ಪೀಳಿಗೆಯನ್ನು ಭಾರತದ ಭವಿಷ್ಯ ಅಂತ ವಿವರಿಸಿದ ಅವರು ಸೋಮವಾರ ಭಾರತದ ಭವಿಷ್ಯದ ನಾಯಕರನ್ನು ಸಬಲೀಕರಣಗೊಳಿಸಲು ಕರೆ ನೀಡಿದರು. ನಮ್ಮ ಯುವ ಪೀಳಿಗೆ ದೇಶದ ಭವಿಷ್ಯದ ನಾಯಕರು. ಆದ್ದರಿಂದ ಇಂದಿನ ಯುವ ಪೀಳಿಗೆಯನ್ನು ಸಶಕ್ತಗೊಳಿಸುವುದು ಎಂದರೆ ಭಾರತದ ಭವಿಷ್ಯವನ್ನು ಸಶಕ್ತಗೊಳಿಸುವುದಾಗಿದೆ ಎಂದರು.

    2022ರ ಕೇಂದ್ರ ಬಜೆಟ್‍ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ 5 ವಿಷಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಮೊದಲನೆಯದು ಗುಣಮಟ್ಟದ ಶಿಕ್ಷಣದ ಸಾರ್ವತ್ರೀಕರಣ, ಎರಡನೆಯದು ಕೌಶಲ್ಯ ಅಭಿವೃದ್ಧಿ, ಮೂರನೆಯದು ನಗರ ಯೋಜನೆ ಮತ್ತು ವಿನ್ಯಾಸ. ನಾಲ್ಕನೆಯದು ಅಂತರಾಷ್ಟ್ರೀಕರಣ – ಭಾರತದಲ್ಲಿ ವಿಶ್ವ ದರ್ಜೆಯ ವಿದೇಶಿ ವಿಶ್ವವಿದ್ಯಾಲಯಗಳು ಮತ್ತು ಐದನೆಯದು ಎವಿಜಿಸಿ – ಆನಿಮೇಷನ್ ವಿಷುಯಲ್ ಎಫೆಕ್ಟ್ಸ್ ಗೇಮಿಂಗ್ ಕಾಮಿಕ್ ಆಗಿದೆ ಎಂದರು.

    ರಾಷ್ಟ್ರೀಯ ಡಿಜಿಟಲ್ ವಿಶ್ವವಿದ್ಯಾಲಯವು ಭಾರತದಲ್ಲಿ ಸೀಟುಗಳ ಕೊರತೆಯ ಸಮಸ್ಯೆಯನ್ನು ಪರಿಹರಿಸುತ್ತದೆ. ಈ ನೀತಿಯಲ್ಲಿ ಅನಿಯಮಿತ ಸೀಟುಗಳಿರುತ್ತವೆ. ಡಿಜಿಟಲ್ ವಿಶ್ವವಿದ್ಯಾನಿಲಯವು ಸಾಧ್ಯವಾದಷ್ಟು ಬೇಗ ಪ್ರಾರಂಭಿಸಲು ನಾನು ಎಲ್ಲಾ ಮಧ್ಯಸ್ಥಗಾರರನ್ನು ಕೋರುತ್ತೇನೆ ಎಂದು ಆಗ್ರಹಿಸಿದರು.

    ಮಾತೃಭಾಷೆಯಲ್ಲಿ ಶಿಕ್ಷಣವು ಮಕ್ಕಳ ಮಾನಸಿಕ ಬೆಳವಣಿಗೆಗೆ ಸಂಬಂಧಿಸಿದೆ. ಹಲವಾರು ವೈದ್ಯಕೀಯ, ಟೆಕ್-ಎಡ್ಯೂ ಸ್ಟಾರ್ಟ್‍ಅಪ್‍ಗಳು ಅನೇಕ ರಾಜ್ಯಗಳಲ್ಲಿ ಸ್ಥಳೀಯ ಭಾಷೆಗಳಲ್ಲಿ ಪ್ರಾರಂಭವಾಗಿವೆ. ಇ-ವಿದ್ಯಾ, ಒನ್ ಕ್ಲಾಸ್ ಒನ್ ಚಾನೆಲ್, ಡಿಜಿಟಲ್ ಲ್ಯಾಬ್‍ಗಳು, ಡಿಜಿಟಲ್ ಯೂನಿವರ್ಸಿಟಿಯಂತಹ ಶೈಕ್ಷಣಿಕ ಮೂಲಸೌಕರ್ಯಗಳು ಯುವಕರಿಗೆ ಬಹಳಷ್ಟು ಸಹಾಯ ಮಾಡಲಿವೆ ಎಂದರು. ಇದನ್ನೂ ಓದಿ: 2 ವರ್ಷದ ಹಿಂದೆಯೇ 10 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದರು: ಮೃತನ ಸಂಬಂಧಿ ಹೇಳಿಕೆ

    ಶಿಕ್ಷಣ ಮತ್ತು ಕೌಶಲ್ಯ ವಲಯದ ಕುರಿತು ವೆಬಿನಾರ್ ಅನ್ನು ಆಯೋಜಿಸುತ್ತಿರುವ ಶಿಕ್ಷಣ ಸಚಿವಾಲಯವು ಪ್ರಸ್ತುತತೆಯ ವಿವಿಧ ವಿಷಯಗಳ ಕುರಿತು ಅಧಿವೇಶನಗಳನ್ನು ನಡೆಸುತ್ತದೆ. ವಿವಿಧ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳ ಸರ್ಕಾರಿ ಅಧಿಕಾರಿಗಳು, ಉದ್ಯಮ ಪ್ರತಿನಿಧಿಗಳು, ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳು, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು ಹಾಗೂ ಇತರ ತಜ್ಞರು ಈ ವೆಬಿನಾರ್‍ನಲ್ಲಿ ಭಾಗವಹಿಸುತ್ತಾರೆ.

    ಹಲವಾರು ವಿಷಯಗಳ ಅಡಿಯಲ್ಲಿ ಏಳು ಸಮಾನಾಂತರ ವಿರಾಮವಿಲ್ಲದ ಸೆಷನ್‍ಗಳನ್ನು ನಡೆಸಲಾಗುತ್ತದೆ. ಶಿಕ್ಷಣದ ಸುಲಭತೆ ಮತ್ತು ಉದ್ಯೋಗಾವಕಾಶಗಳನ್ನು ಬಳಸಿಕೊಳ್ಳುವುದರ ಮೇಲೆ ಗಮನಹರಿಸುವ ತತ್ವಗಳಿಗೆ ಅನುಗುಣವಾಗಿ ಕಾರ್ಯಗತಗೊಳಿಸಲು ಕ್ರಮದ ಅಂಶಗಳು, ವಿಶಾಲವಾದ ಕಾರ್ಯತಂತ್ರಗಳು ಮತ್ತು ಟೈಮ್‍ಲೈನ್‍ಗಳಂತಹ ವಿಷಯಗಳ ಕುರಿತು ಈ ವೆಬಿನಾರ್‍ನಲ್ಲಿ ಚರ್ಚಿಸಲಾಗುತ್ತದೆ.

    ಡಿಜಿಟಲ್ ಯೂನಿವರ್ಸಿಟಿ, ದಿ ಡಿಜಿಟಲ್ ಟೀಚರ್, ಒನ್ ಕ್ಲಾಸ್ ಒನ್ ಚಾನೆಲ್‍ನ ವಿಸ್ತರಣೆ, ನಗರ ಯೋಜನೆ ಮತ್ತು ವಿನ್ಯಾಸದಲ್ಲಿ ಭಾರತದ ನಿರ್ದಿಷ್ಟ ಜ್ಞಾನ, ಬಲವಾದ ಉದ್ಯಮ-ಕೌಶಲ್ಯ ಸಂಪರ್ಕವನ್ನು ಬೆಳೆಸುವ ಕಡೆಗೆ ಅಭಿವೃದ್ಧಿಪಡಿಸುವುದು. ಸಿಟಿಯಲ್ಲಿನ ಶಿಕ್ಷಣ ಸಂಸ್ಥೆಗಳು ಮತ್ತು ಎವಿಜಿಸಿಯಲ್ಲಿ ಉದ್ಯಮ-ಕೌಶಲ್ಯ ಸಂಪರ್ಕವನ್ನು ಬಲಪಡಿಸುವುದು ವೆಬ್‍ನಾರ್‍ನ ವಿಷಯಗಳಾಗಿವೆ.

    ಬಜೆಟ್ ಘೋಷಣೆಗಳ ಸಮರ್ಥ ಮತ್ತು ತ್ವರಿತ ಅನುಷ್ಠಾನಕ್ಕೆ ಅನುಕೂಲವಾಗುವಂತೆ, ಭಾರತ ಸರ್ಕಾರವು ವಿವಿಧ ಪ್ರಮುಖ ವಲಯಗಳಲ್ಲಿ ವೆಬಿನಾರ್‍ಗಳ ಸರಣಿಯನ್ನು ನಡೆಸುತ್ತದೆ. ಸಾರ್ವಜನಿಕ ಮತ್ತು ಖಾಸಗಿ ವಲಯಗಳು, ಶೈಕ್ಷಣಿಕ ಮತ್ತು ಉದ್ಯಮದ ತಜ್ಞರೊಂದಿಗೆ ಚರ್ಚೆ ಮಾಡುವುದು. ವಿವಿಧ ಕ್ಷೇತ್ರಗಳ ಅಡಿಯಲ್ಲಿ ವಿವಿಧ ಸಮಸ್ಯೆಗಳ ಅನುಷ್ಠಾನಕ್ಕೆ ಹೇಗೆ ಉತ್ತಮವಾಗಿ ಮುಂದುವರಿಯುವುದು ಎಂಬುದರ ಕುರಿತು ಕಾರ್ಯತಂತ್ರಗಳನ್ನು ಗುರುತಿಸುವುದು ಇದರ ಉದ್ದೇಶವಾಗಿದೆ ಎಂದು ಶಿಕ್ಷಣ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

  • ಸಶಸ್ತ್ರಪಡೆಗಳಲ್ಲಿ ಮಹಿಳೆಯರಿಗೆ ಅವಕಾಶ ಹೆಚ್ಚಿಸಲು ನೂರು ಸೈನಿಕ ಶಾಲೆಗಳ ಸ್ಥಾಪನೆ: ರಾಜನಾಥ್ ಸಿಂಗ್

    ಸಶಸ್ತ್ರಪಡೆಗಳಲ್ಲಿ ಮಹಿಳೆಯರಿಗೆ ಅವಕಾಶ ಹೆಚ್ಚಿಸಲು ನೂರು ಸೈನಿಕ ಶಾಲೆಗಳ ಸ್ಥಾಪನೆ: ರಾಜನಾಥ್ ಸಿಂಗ್

    ನವದೆಹಲಿ: ಹೆಣ್ಣು ಮಕ್ಕಳು ಸಶಸ್ತ್ರಪಡೆಗಳನ್ನು ಸೇರಲು ಸೈನಿಕ ಶಾಲೆಗಳು ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.

    ಸೈನಿಕ ಶಾಲೆಗಳ ವೆಬಿನಾರ್ ನಲ್ಲಿ ಭಾಗವಹಿಸಿದ್ದ ಸಿಂಗ್ ಅವರು, ಹೆಣ್ಣು ಮಕ್ಕಳಿಗೆ ಸಶಸ್ತ್ರಪಡೆಗಳಲ್ಲಿ ಹೆಚ್ಚಿನ ಅವಕಾಶ ನೀಡಲು 100 ಸೈನಿಕ ಶಾಲೆಗಳನ್ನು ಪ್ರಾರಂಭಿಸುತ್ತಿರುವುದಾಗಿ ಘೋಷಿಸಿದರು. ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಆ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸುತ್ತಿದ್ದು, ಮಹಿಳೆಯರ ಹಾದಿಯನ್ನು ಸುಗಮಗೊಳಿಸಲು ಸೈನಿಕ ಶಾಲೆಯಲ್ಲಿ ಆದ್ಯತೆ ನೀಡಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ – ಇಂದು ಮಧ್ಯಾಹ್ನ 3.30ಕ್ಕೆ ಚುನಾವಣಾ ಆಯೋಗದಿಂದ ದಿನಾಂಕ ಪ್ರಕಟ

    Indian Army orders inquiry into alleged harassment of woman officer in  Punjab - India News

    ‘ಸೈನಿಕ’ ಏಕತೆ, ಶಿಸ್ತು ಮತ್ತು ಭಕ್ತಿಯನ್ನು ಸೂಚಿಸಿದರೆ, ‘ಶಾಲೆ’ ಶಿಕ್ಷಣದ ಕೇಂದ್ರವಾಗಿದೆ. ಆದ್ದರಿಂದ ಸೈನಿಕ ಶಾಲೆಗಳು ಮಕ್ಕಳನ್ನು ಸಮರ್ಥ ನಾಗರಿಕರನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಹೊಸ ಸೈನಿಕ ಶಾಲೆಗಳನ್ನು ಸ್ಥಾಪಿಸುವ ನಿರ್ಧಾರವು ದೇಶಕ್ಕೆ ಸೇವೆ ಸಲ್ಲಿಸುವ ತಮ್ಮ ಕನಸುಗಳನ್ನು ನನಸಾಗಿಸಲು ಮಹಿಳೆಯರನ್ನು ಉತ್ತೇಜಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    147 More Women Officers Granted Permanent Commission, Results of Some  Withheld: Indian Army

    ಮಕ್ಕಳ ಮೂಲಭೂತ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಮತ್ತು ದೇಶದ ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಕಳೆದ ಆರು-ಏಳು ವರ್ಷಗಳಲ್ಲಿ ಸರ್ಕಾರವು ತೆಗೆದುಕೊಂಡ ಅನೇಕ ಪ್ರಮುಖ ನಿರ್ಧಾರಗಳಲ್ಲಿ ಸೈನಿಕ ಶಾಲೆಗಳ ವಿಸ್ತರಣೆಯ ಘೋಷಣೆಯು ಒಂದು. ಸೈನಿಕ ಶಾಲೆಗಳಲ್ಲಿ ರಕ್ಷೆ ಮತ್ತು ಶಿಕ್ಷೆಗಳ ವಿಲೀನವು ಮುಂದಿನ ದಿನಗಳಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಆಶಿಸಿದರು. ಇದನ್ನೂ ಓದಿ: ಅಧಿಕಾರದಲ್ಲಿದ್ದಾಗ ಕುಂಭಕರ್ಣ ನಿದ್ದೆ, ಈಗ ಮೇಕೆದಾಟು ಹೋರಾಟ: ಡಿಕೆಶಿಗೆ ಕಾರಜೋಳ ಟಾಂಗ್

  • ವ್ಯಾಪಾರ ಜಗತ್ತು ಡಿಜಿಟಲೀಕರಣಕ್ಕೆ ಸಜ್ಜಾಗಿ – ಬಿಸಿಸಿಐ ಯುಎಇ ವೆಬಿನಾರಿನಲ್ಲಿ ರಾಶಿದ್ ಹಜಾರಿ

    ವ್ಯಾಪಾರ ಜಗತ್ತು ಡಿಜಿಟಲೀಕರಣಕ್ಕೆ ಸಜ್ಜಾಗಿ – ಬಿಸಿಸಿಐ ಯುಎಇ ವೆಬಿನಾರಿನಲ್ಲಿ ರಾಶಿದ್ ಹಜಾರಿ

    ಬೆಂಗಳೂರು: ಡಿಜಿಟಲ್ ರೆವಲ್ಯೂಶನ್ ಆನ್ ಬ್ಯುಸಿನೆಸ್ ಆಂಡ್ ಎಂಟ್ರಪನರ್’ಶಿಪ್’ ಎಂಬ ವಿಷಯದಲ್ಲಿ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ (ಬಿಸಿಸಿಐ) ಯುಎಇ ವತಿಯಿಂದ ಸೆಪ್ಟೆಂಬರ್ 10ರಂದು ಯಶಸ್ವಿ ವೆಬಿನಾರ್ ನಡೆಯಿತು.

    ಬಿಸಿಸಿಐ ಯುಎಇ ಚಾಪ್ಟರ್ ಅಧ್ಯಕ್ಷ ಎಸ್.ಎಂ ಬಶೀರ್ ತಮ್ಮ ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣದಲ್ಲಿ ಬಿಸಿಸಿಐನ ಧ್ಯೇಯೋದ್ದೇಶಗಳನ್ನು ಸರಳವಾಗಿ ವಿವರಿಸಿ, ಯುಎಇ ಚಾಪ್ಟರ್ ನ ತಂಡವನ್ನು ಪರಿಚಯಿಸಿದರು. ಉಪಾಧ್ಯಕ್ಷರಾದ ಅಬ್ದುಲ್ಲಾ ಮದುಮೂಲೆ ಕಾರ್ಯಕ್ರಮದ ಮುಖ್ಯ ಅತಿಥಿಯಾದ ದುಬೈ ಸರ್ಕಾರದ ಎಕೋನಮಿಕ್ ಡೆವಲಪ್ಮೆಂಟ್ ವಿಭಾಗದ ಮುಖ್ಯ ತಂತ್ರಜ್ಞರಾದ ರಾಶಿದ್ ಹಜಾರಿಯವರ ಸಂಕ್ಷಿಪ್ತ ಪರಿಚಯ ನೀಡಿ ಸ್ವಾಗತಿಸಿದರು.

    ಡಿಜಿಟಲ್ ಮಾಧ್ಯಮವು ಉದ್ಯಮರಂಗದಲ್ಲಿ ಸೃಷ್ಟಿಸಿದ ಹೊಸ ಸಂಚಲನದ ಬಗ್ಗೆ ಬೆಳಕು ಚೆಲ್ಲಿದ ರಾಶಿದ್, ಜಗತ್ತು ಬದಲಾಗುತ್ತಿದೆ, ಅತ್ಯಂತ ವೇಗವಾಗಿ ಆಗುತ್ತಿರುವ ಈ ಬದಲಾವಣೆಗೆ ನಾವು ತಯಾರಾಗಿಲ್ಲ, ಬದಲಾವಣೆಗೆ ಅನುಗುಣವಾಗಿ ನಮ್ಮ ಕಲಿಕೆಯ ವಿಷಯವನ್ನು, ಉಜ್ವಲ ಭವಿಷ್ಯವಿರುವ ಉದ್ಯೋಗ ವಿಭಾಗವನ್ನು ಆಯ್ಕೆ ಮಾಡುವುದರಲ್ಲಿ ಎಡವುತ್ತಿದ್ದೇವೆ. ಪ್ರಸಕ್ತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಂದಿನ ಕೆಲವೇ ವರ್ಷಗಳಲ್ಲಿ, 2030ರ ಆಸುಪಾಸಿನಲ್ಲಿ ಇನ್ನಷ್ಟು ಅತ್ಯಾಧುನಿಕ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಮಾನವರಹಿತ, ರೋಬೋಟಿಕ್ ತಂತ್ರಜ್ಞಾನ 80 ಕೋಟಿಗೂ ಹೆಚ್ಚು ಜನರ ಉದ್ಯೋಗಕ್ಕೆ ಕುತ್ತು ತರಲಿದ್ದು, ಉದ್ಯೋಗ ಕಳೆದುಕೊಳ್ಳಲಿದ್ದಾರೆ. ದುಬೈ ಸೇರಿದಂತೆ ಹಲವು ದೇಶಗಳಲ್ಲಿ ರೋಬೋಟಿಕ್ ತಂತ್ರಜ್ಞಾನದ ಅಳವಡಿಕೆ ಈಗಾಗಲೇ ಪ್ರಾರಂಭವಾಗಿದೆ ಎಂದರು.

    ಹಲವು ಹೊಸ ಸಾಫ್ಟ್ವೇರ್ ನಿಂದಾಗಿ ಈಗಾಗಲೇ ಹಣಕಾಸು ವಿಭಾಗ, ಅಕೌಂಟೆಂಟ್ ಉದ್ಯೋಗಕ್ಕೆ ಕತ್ತರಿ ಬಿದ್ದಿದೆ, ತೆರಿಗೆ ಕಟ್ಟುವ ವಿಭಾಗವೂ ಯಾಂತ್ರೀಕೃತವಾಗಿ ಲೆಕ್ಕ ಪರಿಶೋಧಕರ ಉದ್ಯೋಗವನ್ನು ಕಡಿತಗೊಳಿಸಿದೆ. ಒಂದು ನಿರ್ದಿಷ್ಟ ಉದ್ಯೋಗ ಪಡೆಯಲು ಆಶಿಸಿ ನಿರ್ಧಿಷ್ಟ ವಿಷಯವನ್ನು ಆಯ್ಕೆ ಮಾಡಿದ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಪೂರ್ಣಗೊಳ್ಳುವ ಮುನ್ನವೇ ಆ ವಿಭಾಗವನ್ನು ರೋಬೋಟಿಕ್ ತಂತ್ರಜ್ಞಾನ ಸಂಪೂರ್ಣವಾಗಿ ಸ್ವಾಧೀನಪಡಿಸಿದರೆ ಅವರ ಭವಿಷ್ಯದ ಗತಿಯೇನು? ಈ ಬಗ್ಗೆ ವಿದ್ಯಾರ್ಥಿಗಳು, ಹೆತ್ತವರು ಜಾಗೃತರಾಗಬೇಕಾಗಿದ್ದು, ವೇಗವಾಗಿ ಬದಲಾಗುತ್ತಿರುವ ಜಗತ್ತಿಗೆ ಒಗ್ಗಿಕೊಂಡು ಬದಲಾವಣೆಯನ್ನು ಅರಿತು, ಅಳವಡಿಸಿಕೊಂಡು ಸೂಕ್ತ ಆಯ್ಕೆ ಮಾಡಬೇಕು ಎಂದು ಸಲಹೆ ನೀಡಿದರು.

    ಡಿಜಿಟಲ್ ಜಗತ್ತಿನಲ್ಲಿ ಹೇಗೆ ಉಬರ್, ಓಲಾ ಟ್ಯಾಕ್ಸಿ ಕ್ಷೇತ್ರದಲ್ಲಿ ಕ್ಷಿಪ್ರ ಬದಲಾವಣೆಗೆ ಸಾಕ್ಷಿಯಾಯಿತು, ಕಳೆದ ಹತ್ತು ವರ್ಷಗಳಿಂದ ದುಬೈ ಯಶಸ್ವಿಯಾಗಿ ಚಾಲಕ ರಹಿತ ಮೆಟ್ರೋದಿಂದ ಕೋಟ್ಯಂತರ ಪ್ರಯಾಣಿಕರ ಪ್ರಯಾಣವನ್ನು ಸರಳಗೊಳಿಸಿದೆಯೋ ಅದೇ ರೀತಿ ಮುಂದೆ ಮಾನವರಹಿತ, ಹಾರುವ ‘ಏರ್ ಟ್ಯಾಕ್ಸಿ’ ಮತ್ತು 150ಞm ದೂರವನ್ನು 12ನಿಮಿಷಗಳಲ್ಲಿ ತಲುಪಬಲ್ಲ ಹೈಪರ್ಲೂಪ್ ಸಾರಿಗೆ ಕ್ಷೇತ್ರದಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡಲಿದೆ. ಈ ಬದಲಾವಣೆಯೂ ನೇರವಾಗಿ, ಪರೋಕ್ಷವಾಗಿ ದೊಡ್ಡ ಮಟ್ಟದ ಉದ್ಯೋಗ ನಷ್ಟಕ್ಕೆ ಕಾರಣವಾಗಲಿದೆ.

    ಈ ಡಿಜಿಟಲ್ ಕ್ರಾಂತಿ ಎಲ್ಲಾ ಉದ್ಯೋಗ ಕ್ಷೇತ್ರದಲ್ಲೂ ಬದಲಾವಣೆ ತರಲಿದೆ, ಕೆಲವು ಕ್ಷೇತ್ರಗಳಲ್ಲಿ ತುರ್ತು ಬದಲಾವಣೆ ಇನ್ನು ಕೆಲವು ಕ್ಷೇತ್ರಗಳಲ್ಲಿ ನಿಧಾನವಾಗಿ, ಹಲವು ಕ್ಷೇತ್ರಗಳಲ್ಲಿ ಸಂಪೂರ್ಣ ಬದಲಾವಣೆ ಉಂಟಾದರೆ, ಇನ್ನು ಕೆಲವು ಕ್ಷೇತ್ರಗಳಲ್ಲಿ ಭಾಗಶಃ ಬದಲಾವಣೆಗೆ ಕಾರಣವಾಗುತ್ತದೆ. ರಿಟೇಲ್ ಅಥವಾ ಚಿಲ್ಲರೆ ವ್ಯಾಪಾರ ಆನ್ಲೈನ್ ಈ ಕಾಮರ್ಸ್ ಕಂಪನೆಗಳ ಭರಾಟೆಯಿಂದ ಬಹುತೇಕ ನಷ್ಟ ಅನುಭವಿಸಿದೆ, ಸಾವಿರಾರು ರಿಟೇಲ್ ಮಳಿಗೆಗಳು ಮುಚ್ಚಿವೆ. ಹೊಸ ಹೊಸ ಬುಕ್ಕಿಂಗ್ ಅಪ್ಲಿಕೇಶನ್ ನಿಂದಾಗಿ ಟ್ರಾವೆಲ್ ಏಜೆಂಟ್ ಗಳ ಉದ್ಯಮಕ್ಕೂ ಹೊಡೆತ ಬಿದ್ದಿದೆ. ಹಣಕಾಸು, ದೂರಸಂಪರ್ಕ, ಅಟೋಮೊಬೈಲ್ ಸರಕು ಸಾಗಣೆ, ರೀಟೇಲ್, ಆರೋಗ್ಯ ಜೀವವಿಜ್ಞಾನ, ಮಾಧ್ಯಮ, ಮನೋರಂಜನೆ, ರಿಯಲ್ ಎಸ್ಟೇಟ್, ಸರ್ಕಾರ ಮತ್ತು ಸಾರ್ವಜನಿಕ ವಲಯ ಈ ಎಲ್ಲಾ ವಿಭಾಗಗಳಲ್ಲೂ ಬದಲಾವಣೆ ಆಗುತ್ತಿದೆ, ಡಿಜಿಟಲ್ ಜಗತ್ತಿಗೆ ಅಳವಡಿಸಿಕೊಳ್ಳುವ ಕೆಲಸ ನಡೆಯುತ್ತಿದೆ.

    ಬದಲಾವಣೆ ಜಗದ ನಿಯಮ, ಈ ಬದಲಾವಣೆಯಿಂದ ಕೇವಲ ಉದ್ಯೋಗ ನಷ್ಟ ಸಂಭವಿಸಲಿದೆ ಎಂದು ಮಾತ್ರ ಚಿಂತಿಸಬೇಕಾಗಿಲ್ಲ, ಈ ಬದಲಾವಣೆ ಹೊಸ ಹೊಸ ಉದ್ಯಮ, ಉದ್ಯೋಗಪತಿ, ಉದ್ಯೋಗಾವಕಾಶಕ್ಕೂ ಕಾರಣವಾಗಲಿದೆ. ನಮ್ಮ ಬದುಕುವ ಶೈಲಿಯನ್ನೇ ಬದಲಾಯಿಸಲಿದೆ. ಬದಲಾವಣೆಯನ್ನು ಗ್ರಹಿಸಿ, ಅಳವಡಿಸಿಕೊಂಡರೆ, ಸವಾಲಾಗಿ ಸ್ವೀಕರಿಸಿದರೆ ದೊಡ್ಡ ಮಟ್ಟದ ಹೊಸ ಅವಕಾಶಗಳಿಗೆ ದಾರಿಯಾಗಲಿದೆ. ಕೋವಿಡ್ 19ನಿಂದಾಗಿ ಡಿಜಿಟಲೀಕರಣದ ವೇಗ ಇನ್ನಷ್ಟು ಹೆಚ್ಚಾಯಿತು, ಜನಸಾಮಾನ್ಯರಿಗೂ ಡಿಜಿಟಲ್ ಜಗತ್ತಿಗೆ ಪರಿಚಯವೂ ಆಗತೊಡಗಿತು.

    ಅಮೇಜಾನ್ ಗಳಂತಹ ಈ ಕಾಮರ್ಸ್, ವ್ಯಾಲೆಟ್, ಮೊಬೈಲ್ ಪೇ, ಬಿಟ್ ಕಾಯಿನ್ ಗಳಂತಹ ಡಿಜಿಟಲ್ ಕರೆನ್ಸಿ, ಓಲಾ ಉಬರ್ ಗಳಂತಹ ಶೇರಿಂಗ್ ಎಕಾನಮಿ, ಈ-ಗೇಮಿಂಗ್, ನೆಟ್‍ಫ್ಲಿಕ್ಸ್ ತರಹದ ಒಟಿಟಿ ಪ್ಲಾಟ್ಫಾರ್ಮ್, ಅಪ್ಲಿಕೇಶನ್ ಡೆವಲಪ್ಮೆಂಟ್, ಟ್ವಿಟರ್ ಫೇಸ್ಬುಕ್, ಇನ್ಸ್ಟಾಗ್ರ್ಯಾಮ್ ಗಳಂತಹ ಹಲವು ಹೊಸ ಸಾಮಾಜಿಕ ಜಾಲತಾಣಗಳು, ಬಿಗ್ ಡೇಟಾ, ಓಪನ್ ಬ್ಯಾಂಕಿಂಗ್ ಗಳಂತಹ ಡೆಟಾ ಎಕಾನಮಿ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಡ್ರೋನ್ಸ್, ನ್ಯಾನೋ ಟೆಕ್ನಾಲಜಿ, 3ಆ ಪೈಂಟಿಂಗ್ ಇವೆಲ್ಲವೂ ಭವಿಷ್ಯದಲ್ಲಿ ಹೆಚ್ಚು ಬೆಳವಣಿಗೆ ಹೊಂದಲಿರುವ ಕೆಲವು ಕ್ಷೇತ್ರಗಳು.

    ಯುವ ಉದ್ಯಮಿಗಳು, ವ್ಯಾಪಾರಿಗಳು ಡಿಜಿಟಲ್ ಕ್ಷೇತ್ರದಲ್ಲಿ ಬೆಳವಣಿಗೆ ಹೊಂದುತ್ತಿರುವ ಕಂಪೆನಿಗಳ ಬಗ್ಗೆ ಅರಿತು, ಹೇಗೆ ನಿಮ್ಮ ಉದ್ಯಮದಲ್ಲಿ ಅದನ್ನು ಅಳವಡಿಸಬಹುದು, ನಿಮ್ಮ ಗ್ರಾಹಕರ ನಿರೀಕ್ಷೆಗಳ ಬಗ್ಗೆಯೂ ಗ್ರಾಹಕರ ದೃಷ್ಟಿಕೋನದಿಂದಲೇ ವಿಶ್ಲೇಷಣೆ ನಡೆಸಿ, ಹೊಸ ರೂಪುರೇಷೆ ಗಳೊಂದಿಗೆ, ಡಿಜಿಟಲೀಕರಣದ ಸಹಾಯದಿಂದ ಬೆಳವಣಿಗೆ ಹೊಂದಬಹುದು ಎಂದು ಸಲಹೆ ನೀಡಿದರು.

    ಈ ಉಪಯುಕ್ತ ವೆಬಿನಾರಿನಲ್ಲಿ 16ಕ್ಕೂ ಹೆಚ್ಚಿನ ದೇಶಗಳಿಂದ 225ಕ್ಕೂ ಹೆಚ್ಚಿನ ಆಸಕ್ತರು ಪಾಲ್ಗೊಂಡಿದ್ದರು. ಬಿಸಿಸಿಐ ಯುಎಇ ಚಾಪ್ಟರ್ ಉಪಾಧ್ಯಕ್ಷರಾದ ಹಿದಾಯತ್ ಅಡ್ಡೂರ್ ಧನ್ಯವಾದ ಅರ್ಪಿಸಿದರು, ಪ್ರಧಾನ ಕಾರ್ಯದರ್ಶಿ ಅನ್ವರ್ ಹುಸೇನ್ ಕಾರ್ಯಕ್ರಮ ನಿರೂಪಿಸಿದರು.

  • ಶಾಲೆ, ಕಾಲೇಜು ಆರಂಭಿಸದಿದ್ದಲ್ಲಿ ಮಕ್ಕಳು ಬಾಲ ಕಾರ್ಮಿಕರಾಗುತ್ತಿದ್ದರು: ಸುರೇಶ್ ಕುಮಾರ್

    ಶಾಲೆ, ಕಾಲೇಜು ಆರಂಭಿಸದಿದ್ದಲ್ಲಿ ಮಕ್ಕಳು ಬಾಲ ಕಾರ್ಮಿಕರಾಗುತ್ತಿದ್ದರು: ಸುರೇಶ್ ಕುಮಾರ್

    – ಹೆಣ್ಣು ಮಕ್ಕಳ ಬಾಲ್ಯವಿವಾಹ ಹೆಚ್ಚುತ್ತಿತ್ತು

    ಬೆಂಗಳೂರು: ಕೊರೊನಾದಿಂದಾಗಿ ಕೆಲವು ತಿಂಗಳಿಂದ ಸ್ಥಗಿತವಾಗಿದ್ದ ಶೈಕ್ಷಣಿಕ ಚಟುವಟಿಕೆಗಳು ಪುನರಾರಂಭಗೊಂಡಿದ್ದು, ಇದು ಶಿಕ್ಷಣ ವಲಯದಲ್ಲಿ ಭರವಸೆ ಮೂಡಿಸಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

    ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಹಾಗೂ ಕರ್ನಾಟಕ ಪತ್ರಕರ್ತೆಯರ ಸಂಘ ಆಯೋಜಿಸಿದ್ದ `ಕೋವಿಡ್ ವಿಭಿನ್ನ ಆಯಾಮಗಳು’ ವೆಬಿನಾರ್ ಸರಣಿ ಸಂವಾದದಲ್ಲಿ ಮಾತನಾಡಿದ ಅವರು, ಕೋವಿಡ್ ಪರಿಸ್ಥಿತಿ ಕುರಿತು ಆರೋಗ್ಯ ಇಲಾಖೆಯ ತಾಂತ್ರಿಕ ಸಲಹಾ ಸಮಿತಿ ನೀಡಿದ ವರದಿ ಆಧರಿಸಿ ಮುಖ್ಯಮಂತ್ರಿ ಹಾಗೂ ತಜ್ಞರೊಂದಿಗೆ ಸಮಾಲೋಚನೆ ನಡೆಸಿಯೇ ಶಾಲಾ-ಕಾಲೇಜು ಪ್ರಾರಂಭಕ್ಕೆ ಅನುಮತಿ ಕೊಡಲಾಗಿದೆ. ಸಂಕಷ್ಟದ ಸಮಯದಲ್ಲಿ ಸಮಸ್ಯೆಗಳನ್ನು ಎದುರಿಸುತ್ತ ಶಾಲೆಗಳನ್ನು ಯಶಸ್ವಿಯಾಗಿ ನಡೆಸುವುದು ಸರ್ಕಾರದ ಮುಂದಿರುವ ಬಹದೊಡ್ಡ ಸವಾಲು ಎಂದರು.

    ಕೊರೊನಾ ಸಂಕಷ್ಟದ ಸಮಯದಲ್ಲಿ ಶಾಲಾ-ಕಾಲೇಜು ಪ್ರಾರಂಭಿಸುವುದು ಸರ್ಕಾರದ ಎದುರಿದ್ದ ದೊಡ್ಡ ಸವಾಲು. ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳನ್ನು ಪ್ರಾರಂಭಿಸಲಾಗಿದೆ. ದಿನೇ ದಿನೇ ತರಗತಿಗೆ ಮಕ್ಕಳ ಹಾಜರಾತಿ ಸಮಾಧಾನ ತಂದಿದ್ದು, ಶೈಕ್ಷಣಿಕ ವಲಯದಲ್ಲಿ ಹೊಸ ಭರವಸೆ ಮೂಡಿಸಿದೆ ಎಂದರು.

    ಕೊರೊನಾ ಭಯದಿಂದ ಕೆಲ ತಿಂಗಳಿಂದ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಈ ವೇಳೆ ಗ್ರಾಮೀಣ ಭಾಗಗಳಲ್ಲಿ ಮಕ್ಕಳ ಕೈಯಲ್ಲಿ ದುಡಿಸಿಕೊಳ್ಳಲಾಗಿದೆ. ಹೆಣ್ಣುಮಕ್ಕಳನ್ನು ಬಾಲ್ಯವಿವಾಹಕ್ಕೆ ಗುರಿಮಾಡಲಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದಿದ್ದೇ ಆದಲ್ಲಿ ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ಕರೆತರುವುದು ಕಷ್ಟದ ಕೆಲಸ. ಮಕ್ಕಳನ್ನು ಮತ್ತೆ ಶಿಕ್ಷಣ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಪೋಷಕರಿಗೂ ಕೂಡ ಬಹುದೊಡ್ಡ ಸವಾಲು. ಈ ಎಲ್ಲ ಸಮಸ್ಯೆಗಳನ್ನು ಪರಾಮರ್ಶಿಸಿಯೇ ಸರ್ಕಾರ ಆರೋಗ್ಯ ಇಲಾಖೆಯ ಸಲಹಾ ಸಮಿತಿ ತಜ್ಞರೊಡನೆ ದೀರ್ಘ ಸಮಾಲೋಚನೆ ನಡೆಸಿ ಶಾಲಾ-ಕಾಲೇಜು ಪ್ರಾರಂಭಿಸಿದೆ. ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ 6-9ನೇ ತರಗತಿ ಮಕ್ಕಳಿಗೆ ವಿದ್ಯಾಗಮ ಕಾರ್ಯಕ್ರಮದಡಿಯಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ ಎಂದರು.

    ಕೊರೊನಾ ಸಂದರ್ಭದಲ್ಲಿ ಹತ್ತನೇ ತರಗತಿಯ ಪರೀಕ್ಷೆಗಳನ್ನು ನಡೆಸುವುದೇ ಕಷ್ಟವಾಗಿತ್ತು. ಕೊರೊನಾ ಸೋಂಕು ತೀವ್ರವಾಗಿದ್ದ ದಿನಗಳಲ್ಲಿ ಮಕ್ಕಳಿಗೆ ಅನ್ಯಾಯವಾಗಬಾರದು, ಕಲಿತ ಮಕ್ಕಳಿಗೆ ವಂಚನೆಯಾಗಬಾರದೆಂದು ಮುನ್ನೆಚ್ಚರಿಕೆ ವಹಿಸಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದವು. ಮಕ್ಕಳು ಧೈರ್ಯದಿಂದ ಪರೀಕ್ಷೆ ಬರೆದರು. ಒಂದೆಡೆ ಭಯ, ಆತಂಕದ ಸನ್ನಿವೇಶದಲ್ಲಿ ವಿವಿಧ ಇಲಾಖೆಗಳು, ಪೋಷಕರು, ವಿದ್ಯಾರ್ಥಿಗಳು ತುಂಬಾ ಸಹಕಾರ ನೀಡಿದರು ಎಂದು ಸ್ಮರಿಸಿದರು.

    ವಿದ್ಯಾರ್ಥಿಗಳ ಧೈರ್ಯದ ಬಗ್ಗೆ ಸುಪ್ರೀಂಕೋರ್ಟ್ ಸಹ ಮೆಚ್ಚುಗೆ ವ್ಯಕ್ತಪಡಿಸಿತು. ನಂತರ ಸ್ಪರ್ಧಾತ್ಮಕ ಪರೀಕ್ಷೆಗಳು ಕೂಡ ನಡೆದವು. ಈ ಸವಾಲು ಹೊಸ ವಿಷಯಗಳ ಕಲಿಕೆಗೆ ಅವಕಾಶ ನೀಡಿತು. ವಿದ್ಯಾಗಮ ಒಳಗೊಂಡಂತೆ ಹೊಸ ಯೋಜನೆಗಳು ಕಾರ್ಯರೂಪಕ್ಕೆ ಬರಲು ಅನುವು ಮಾಡಿಕೊಟ್ಟಿದೆ ಎಂದರು.

    ಮುನ್ನೆಚ್ಚರಿಕೆಯ ಕ್ರಮದೊಂದಿಗೆ ಶಾಲೆಗಳನ್ನು ಪ್ರಾರಂಭಿಸಲಾಗಿದೆ, ಎಸ್‍ಎಸ್‍ಎಲ್‍ಸಿ ಹಾಗೂ ದ್ವೀತಿಯ ಪಿಯುಸಿಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ ಕಲಿಕೆ ಮಕ್ಕಳಿಗೆ ಆಗಲೇಬೇಕಿರುವುದರಿಂದ ಪಠ್ಯಕ್ರಮದಲ್ಲಿ ಯಾವುದೇ ಕಡಿತ ಇರುವುದಿಲ್ಲ. ಈ ವರ್ಷದಲ್ಲಿ ಮಕ್ಕಳಿಗೆ ಮನೋಬಲ ತುಂಬಬೇಕಾದ ನಿಟ್ಟಿನಲ್ಲಿ ಪಠ್ಯ ಕಡಿತ ಮಾಡುವ ವಿಚಾರ ಸರ್ಕಾರದ ಮುಂದಿಲ್ಲ. ನಿಗದಿತ ಅವಧಿಯಲ್ಲಿ ತರಗತಿಯ ವಿಷಯಗಳನ್ನು ಸಂಪೂರ್ಣವಾಗಿ ಕಲಿಸಿಕೊಡುವ ನಿಟ್ಟಿನಲ್ಲಿ ಪರ್ಯಾಯ ಶೈಕ್ಷಣಿಕ ವೇಳಾಪಟ್ಟಿಯನ್ನು ತಯಾರಿಸುವ ಕುರಿತು ಹಾಗೂ ಅದರ ಸಾಧಕ-ಬಾಧಕಗಳನ್ನು ಶಿಕ್ಷಣ ತಜ್ಞರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ವಸತಿನಿಲಯದ ಸೌಲಭ್ಯ ಹೊಂದಿರುವ ಶಾಲೆಗಳಲ್ಲೂ ವಿದ್ಯಾರ್ಥಿಗಳ ಆರೋಗ್ಯದ ಹಿತರಕ್ಷಣೆಗೆ ಆದ್ಯತೆ ನೀಡಲಾಗುವುದು. ಈ ಕುರಿತಂತೆ ಪಾಲಿಸಬೇಕಾದ ಎಚ್ಚರಿಕೆಯ ಕ್ರಮಗಳ ಕುರಿತು ವಸತಿಶಾಲೆಗಳ ಮುಖ್ಯಸ್ಥರಿಗೆ ಮಾರ್ಗಸೂಚಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.

    ಪೋಷಕರು ಅಷ್ಟೇ ಅಲ್ಲ ಮಕ್ಕಳು ಕೂಡ ಒತ್ತಡದಲ್ಲಿದ್ದಾರೆ. ಮಕ್ಕಳಿಗೂ ಕೌನ್ಸೆಲಿಂಗ್ ಅಗತ್ಯವಿದೆ. ಸದ್ಯಕ್ಕೆ ತರಗತಿಗಳು ಪ್ರಾರಂಭವಾಗಿವೆ. ಶಾಲೆಯಲ್ಲಿ ದೈಹಿಕ ಚಟುವಟಿಕೆಗಳನ್ನು ಪ್ರಾರಂಭಿಸುವ ಕುರಿತು ಸದ್ಯದಲ್ಲೇ ನಿರ್ಧರಿಸಲಾಗುವುದು. ಕೊರೊನಾದ ಎರಡನೇ ಅಲೆಯ ಭೀತಿಯ ನಡುವೆಯೂ ಜೀವ ಹಾಗೂ ಜೀವನ ಎರಡನ್ನೂ ಸಮತೋಲನವಾಗಿ ಮುನ್ನಡೆಸಬೇಕಾದ ಹೊಣೆಗಾರಿಕೆ ನಮ್ಮೆಲ್ಲರದಾಗಬೇಕು. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುತ್ತ ಕೋವಿಡ್‍ನ ನಿಯಂತ್ರಣಕ್ಕೆ ಎಲ್ಲರೂ ಒಟ್ಟಾಗಿ ಶ್ರಮಿಸಬೇಕಿದೆ ಎಂದರು.

    ಯೂರೋಪ್ ದೇಶಗಳಲ್ಲಿ ಕೊರೊನಾ ಎರಡನೇ ಅಲೆ ಗಂಭೀರ ಪರಿಣಾಮಗಳನ್ನೇ ಬೀರಿದೆ. ಭಾರತದಲ್ಲೂ ಎರಡನೇ ಅಲೆ ಪ್ರಾರಂಭವಾಗುವ ಲಕ್ಷಣಗಳು ಕಂಡುಬಂದಿದ್ದು, ಜನವರಿ ಮೂರನೇ ವಾರ ಇಲ್ಲವೇ ಫೆಬ್ರವರಿ ಮೊದಲ ವಾರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ, ಆರೋಗ್ಯ ಇಲಾಖೆಯ ಸಂಶೋಧನಾ ಅಧಿಕಾರಿ ಡಾ.ಮೊಹಮ್ಮದ್ ಷರೀಫ್ ಎಚ್ಚರಿಕೆ ನೀಡಿದರು.

    ರೂಪಾಂತರ ವೈರಾಣು ಮಿಥ್ಯ ಮತ್ತು ವಾಸ್ತವಗಳು-ಸಂಕ್ರಾಂತಿ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಮಾತನಾಡಿದ ಅವರು, ಬ್ರಿಟನ್‍ನ ರೂಪಾಂತರ ವೈರಾಣುಗಳಿಂದ ಹೆಚ್ಚಿನ ಅಪಾಯ ಇಲ್ಲ. ಆದರೂ ಮುನ್ನೆಚ್ಚರಿಕೆ ವಹಿಸದಿದ್ದಲ್ಲಿ ಅಪಾಯ ತಪ್ಪಿದ್ದಲ್ಲ. ಯೂರೋಪ್ ದೇಶಗಳಲ್ಲಿ ಕೊರೊನಾದ ಎರಡನೇ ಅಲೆ ಪ್ರಾರಂಭವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ದೇಶಗಳಲ್ಲಿ ಮತ್ತೆ ಲಾಕ್‍ಡೌನ್ ಜಾರಿಯಾಗಿದೆ. ಕರ್ನಾಟಕದಲ್ಲೂ ಕೂಡ ಜನವರಿ ಕೊನೆ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಎರಡನೇ ಅಲೆಯ ಪರಿಣಾಮದ ಬಗ್ಗೆ ಮಾಹಿತಿ ಲಭಿಸಲಿದೆ. ಬ್ರಿಟನ್‍ನಿಂದ ಕರ್ನಾಟಕಕ್ಕೆ ಬಂದ 112 ಮಂದಿಯನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಈ ಪೈಕಿ ಬೆಂಗಳೂರಿನಲ್ಲಿ 9, ಬಳ್ಳಾರಿಯಲ್ಲಿ 1 ಹಾಗೂ ಶಿವಮೊಗ್ಗದಲ್ಲಿ 2 ಸೋಂಕಿನ ಲಕ್ಷಣಗಳಿರುವ ಕುರಿತು ವರದಿ ಬಂದಿದ್ದು, ಪತ್ತೆ ಹಚ್ಚುವ ಕೆಲಸ ನಡೆದಿದೆ ಎಂದರು.

    ಸಂಕ್ರಾಂತಿ ಸುಗ್ಗಿ ಹಬ್ಬವಾಗಿದ್ದು, ಗ್ರಾಮೀಣ ಭಾಗದಲ್ಲಿ ಹಬ್ಬ ಕಳೆಗಟ್ಟಲಿದೆ. ಹಬ್ಬದಲ್ಲಿ ಪಾಲಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಜ್ಞರ ಸಮಿತಿ ಸರ್ಕಾರದೊಡನೆ ಸಮಾಲೋಚನೆ ನಡೆಸಿ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂದರು. ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಶಾಂತಲಾ ಧರ್ಮರಾಜ್, ಪಿಐಬಿಯ ಅಧಿಕಾರಿ ಜಯಂತಿ ಸೇರಿದಂತೆ ಹಿರಿಯ ಪತ್ರಕರ್ತರು ವೆಬಿನಾರ್ ನಲ್ಲಿ ಭಾಗವಹಿಸಿದ್ದರು.

  • ಸಾಮುದಾಯಿಕ ಆಚರಣೆಗಳ ಹಿಂದೆ ಆರೋಗ್ಯದ ಗುಟ್ಟು

    ಸಾಮುದಾಯಿಕ ಆಚರಣೆಗಳ ಹಿಂದೆ ಆರೋಗ್ಯದ ಗುಟ್ಟು

    ಬೆಂಗಳೂರು: ವಿವಿಧ ಸಮುದಾಯಗಳು ನಿರ್ದಿಷ್ಟ ಹಬ್ಬ ಅಥವಾ ಋತುಮಾನಕ್ಕೆ ಅನುಗುಣವಾಗಿ ಆಚರಿಸುವ ಪಾರಂಪರಿಕ ಪದ್ಧತಿಗಳ ಹಿಂದೆ ಖಂಡಿತವಾಗಿಯೂ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳಿರುತ್ತವೆ ಎಂದು ಯಲಹಂಕದ ಅಂತರ್ ಶಿಸ್ತೀಯ ಆರೋಗ್ಯವಿಜ್ಞಾನಗಳು ಹಾಗೂ ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಫುಲ್‍ಬ್ರೈಟ್ ಫೆಲೋ ಆಗಿರುವ ಹಿರಿಯ ವಿಜ್ಞಾನಿ ಡಾ.ಬಿ.ಎಸ್.ಸೋಮಶೇಖರ್ ಅಭಿಪ್ರಾಯಪಟ್ಟರು.

    ಪ್ರೆಸ್ ಇನ್ಫರ್ಮೇಷನ್ ಬ್ಯುರೊ ಹಾಗೂ ಕರ್ನಾಟಕ ಪತ್ರಕರ್ತೆಯರ ಸಂಘ `ಭಾರತೀಯ ವಿಜ್ಞಾನ ಮತ್ತು ಸಮೃದ್ಧ ಪರಂಪರೆ’ ಕುರಿತು ಸೋಮವಾರ ಜಂಟಿಯಾಗಿ ಆಯೋಜಿಸಿದ್ದ ವೆಬಿನಾರ್ ನಲ್ಲಿ ಅವರು ಮಾತನಾಡಿದರು. ಡಿಸೆಂಬರ್ 22ರಿಂದ ಆರಂಭವಾಗಲಿರುವ `ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಮಹೋತ್ಸವ -2020’ಕ್ಕೆ ಪೂರ್ವಭಾವಿಯಾಗಿ ಈ ವೆಬಿನಾರ್ ಆಯೋಜಿಸಲಾಗಿತ್ತು.

    `ರಾಜ್ಯದ ಕರಾವಳಿ, ಮಲೆನಾಡು ಮತ್ತು ಬಯಲುಸೀಮೆಯ ಅನೇಕ ಹಳ್ಳಿಗಳಲ್ಲಿ ನಿರ್ದಿಷ್ಟ ಋತುಗಳಲ್ಲಿ ಅನುಸರಿಸುವ ಧಾರ್ಮಿಕ ಆಚರಣೆ ಅಥವಾ ಅಡುಗೆ ವಿಧಾನಗಳ ಹಿಂದೆ ಆರೋಗ್ಯ ಕಾಪಾಡಿಕೊಳ್ಳುವಂತಹ ರಹಸ್ಯ ಅಡಗಿದೆ. ಕರಾವಳಿಯ ತುಳು ಜನಾಂಗದವರು ಆಷಾಢ ಅಮಾವಾಸ್ಯೆಯ ದಿನ ಮದ್ದಾಲೆ ಮರದ ಎಲೆಯ ಕಷಾಯವನ್ನು ಆಟಿ ಕಷಾಯ ಎಂದು ಸೇವಿಸುತ್ತಾರೆ. ಅತಿಹೆಚ್ಚು ಮಳೆ ಬೀಳುವ ಆ ಪ್ರದೇಶದಲ್ಲಿ ಆ ಕಾಲದಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಲೇರಿಯಾ ಜ್ವರಕ್ಕೆ ಅದನ್ನು ಔಷಧವಾಗಿ ಬಳಸಲಾಗುತ್ತಿತ್ತು. ಮಲೇರಿಯಾಕ್ಕೆ ನೀಡಲಾಗುವ ಅಲೋಪತಿ ಔಷಧದಲ್ಲಿ ಇರುವ ರಾಸಾಯನಿಕ ಅಂಶಗಳು ಆ ಎಲೆಯಲ್ಲಿಯೂ ಇವೆ. ಅದನ್ನು ಹೇಗೋ ಕಂಡುಕೊಂಡ ಆ ಪ್ರದೇಶದ ಹಿರಿಯರು ಅದನ್ನು ಹಬ್ಬದ ಆಚರಣೆಯ ರೀತಿಯಲ್ಲಿ ಅನುಸರಿಸಿದರು.

    ಮಂಡ್ಯ ಜಿಲ್ಲೆಯ ಹಳ್ಳಿಯೊಂದರ ತಿಮ್ಮಪ್ಪನ ದೇವಾಲಯದಲ್ಲಿ ಪ್ರತಿವರ್ಷ ತಾವರೆ ಎಲೆಯಲ್ಲಿ ಪ್ರಸಾದ ಬಡಿಸಲಾಗುತ್ತಿದ್ದು, ನೂರಾರು ಜನ ಅಲ್ಲಿ ತಾವರೆ ಎಲೆಯಲ್ಲಿ ಪ್ರಸಾದ ಸೇವಿಸುತ್ತಾರೆ. ಸುಮಾರು ನೂರು ವರ್ಷಗಳ ಹಿಂದೆ ಆ ಹಳ್ಳಿಯಲ್ಲಿ ಕಾಲರಾ ಕಾಣಿಸಿಕೊಂಡಿತ್ತು ಅದಕ್ಕೆ ಮದ್ದಾಗಿ ಇದನ್ನು ಬಳಕೆಗೆ ತರಲಾಯಿತು. ಕಾಲರಾ ಇಲ್ಲದಿದ್ದರೂ ಪ್ರತಿವರ್ಷ ಅದನ್ನು ಪಾರಂಪರಿಕವಾಗಿ ಆಚರಿಸಲಾಗುತ್ತಿದೆ. ಏಕಾದಶಿ ಉಪವಾಸದ ಮಾರನೇ ದಿನ ಅಗಸೆ ಸೊಪ್ಪನ್ನು ಅಡುಗೆಯಲ್ಲಿ ಬಳಸಲಾಗುತ್ತದೆ. ಉಪವಾಸದಿಂದ ದೇಹದಲ್ಲಿ ಉತ್ಪತ್ತಿಯಾದ ಅತಿಯಾದ ಪಿತ್ತವನ್ನು ಅದು ಕಡಿಮೆ ಮಾಡುತ್ತದೆ’ ಎಂದು ಸೋಮಶೇಖರ್ ಅವರು ವಿವರಿಸಿದರು.

    ಭಾರತದ ಪ್ರಸಿದ್ಧ ಗಣಿತಜ್ಞ `ಶ್ರೀನಿವಾಸ್ ರಾಮಾನುಜಮ್’ ಕುರಿತು ಮಾತನಾಡಿದ ಹಿರಿಯ ಡೇಟಾ ವಿಜ್ಞಾನಿ ಡಾ.ಉದಯ್ ಶಂಕರ್ ಪುರಾಣಿಕ್, ಈಗ ನಾವು ನಿತ್ಯ ಬಳಸುವ ಸ್ಕ್ಯಾನರ್, ಪ್ರಿಂಟರ್ ಹಾಗೂ ವೈದ್ಯಕೀಯ ಉಪಕರಣಗಳಲ್ಲಿ ಶ್ರೀನಿವಾಸ್ ರಾಮಾನುಜಮ್ ಕಳೆದ ಶತಮಾನದಲ್ಲೇ ಮಂಡಿಸಿದ್ದ ಗಣಿತ ಸೂತ್ರಗಳು ಬಳಕೆಯಾಗುತ್ತಿವೆ. ಮುಂದೊಂದು ದಿನ ಜಗತ್ತು ತಾಂತ್ರಿಕವಾಗಿ ಇಷ್ಟೊಂದು ಮುಂದುವರಿಯಲಿದೆ ಎಂಬ ಕಲ್ಪನೆ ರಾಮಾನುಜಮ್ ಅವರಿಗೆ ಇರಲಿಕ್ಕಿಲ್ಲ. ಆದರೆ ಅವರು ಮಂಡಿಸಿದ ಸೂತ್ರಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಅವರು ಹೇಳಿದರು. ಡಿಸೆಂಬರ್ 22 ಶ್ರೀನಿವಾಸ್ ರಾಮಾನುಜಮ್ ಹುಟ್ಟುಹಬ್ಬವಾಗಿರುವುದು ಒಂದು ವಿಶೇಷ.

    `ವಿಜ್ಞಾನದ ತಾತ್ವಿಕತೆ’ ಕುರಿತು ಮಾತನಾಡಿದ ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನ ಕೇಂದ್ರದ ಸಹ ಪ್ರಾಧ್ಯಾಪಕ ಡಾ.ವಿಶ್ವೇಶ ಗುತ್ತಲ್, ವೈಜ್ಞಾನಿಕ ಸೂತ್ರವೊಂದನ್ನು ಅಂತಿಮವಾಗಿ ಮಂಡಿಸುವ ಮುನ್ನ ಹೇಗೆ ನಿಷ್ಕರ್ಷೆ ಮಾಡಲಾಗುತ್ತದೆ ಎಂದು ವಿವರಿಸಿದರು. ಪ್ರಯೋಗ ಹಾಗೂ ಸತತ ವೀಕ್ಷಣೆಯ ಮೂಲಕ ಒಪ್ಪಿಕೊಳ್ಳಲು ಸಾಧ್ಯವಾದರೆ ಮಾತ್ರ ಅಂತಹ ಸೂತ್ರವನ್ನು ವಿಜ್ಞಾನಿಗಳು, ವೈಜ್ಞಾನಿಕ ಸಂಸ್ಥೆಗಳು ಅಂಗೀಕರಿಸುತ್ತವೆ ಎಂದು ಗುತ್ತಲ್ ತಿಳಿಸಿದರು.

    ಹಿರಿಯ ಪತ್ರಕರ್ತೆಯರಾದ ಎಂ.ಪಿ.ಸುಶೀಲ, ಕೆ.ಎಚ್.ಸಾವಿತ್ರಿ, ಆಕಾಶವಾಣಿ ನಿರ್ದೇಶಕಿ ನಿರ್ಮಲಾ ಯಲಿಗಾರ್ ಸಂವಾದದಲ್ಲಿ ಭಾಗಿಯಾದರು. ಪ್ರೆಸ್ ಇನ್ಫರ್ಮೇಷನ್ ಬ್ಯುರೊ ಅಧಿಕಾರಿ ಕೆ.ವೈ.ಜಯಂತಿ, ಪತ್ರಕರ್ತರ ಸಂಘದ ಅಧ್ಯಕ್ಷೆ ಶಾಂತಲಾ ಧರ್ಮರಾಜ್, ಕಾರ್ಯದರ್ಶಿ ಮಾಲತಿ ಭಟ್, ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ರೂಪಾ ಚಿಂತಾಮಣಿ, ಪತ್ರಕರ್ತೆಯರಾದ ಉಷಾ ಕಟ್ಟೆಮನೆ, ವಾಣಿಶ್ರೀ ಪತ್ರಿ, ಚಿತ್ರಾ ಫಾಲ್ಗುಣಿ, ಅಕ್ಷರಾ ಕುಮಾರ್ ಹಾಗೂ ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ವೆಬಿನಾರ್ ನಲ್ಲಿ ಪಾಲ್ಗೊಂಡಿದ್ದರು.

  • ವರದಿಗಾರ ಹನುಮಂತು ಕುಟುಂಬಕ್ಕೆ ವೆಬಿನಾರ್ ಹಣ – ಸುರಾನಾ ಕಾಲೇಜು ತೀರ್ಮಾನ

    ವರದಿಗಾರ ಹನುಮಂತು ಕುಟುಂಬಕ್ಕೆ ವೆಬಿನಾರ್ ಹಣ – ಸುರಾನಾ ಕಾಲೇಜು ತೀರ್ಮಾನ

    ಬೆಂಗಳೂರು: ಸುರಾನಾ ಪೀಣ್ಯಾ ಕ್ಯಾಂಪಸ್ ಅಲ್ಲಿ ವೆಬಿನಾರ್ ಅನ್ನು ಆಯೋಜನೆ ಮಾಡಲಾಗಿದೆ. ಕಾಲೇಜಿನ ವಿದ್ಯಾರ್ಥಿಗಳಿಗೆ ಅನ್‍ಲೈನ್ ಕ್ಲಾಸ್ ಮಾಡಲು ತೀರ್ಮಾನಿಸಿ ಇದನ್ನು ಶುರು ಮಾಡಿದ್ದೇವೆ ಎಂದು ಕಾಲೇಜಿನ ಪ್ರಾಂಶುಪಾಲೆ ರಮ್ಯಾ ಅವರು ಹೇಳಿದ್ದಾರೆ.

    ಕೇವಲ ಉಪನ್ಯಾಸಕರಿಂದ ಕ್ಲಾಸ್ ಮಾಡುವುದಕ್ಕಿಂತ ಅತಿಥಿ ಉಪನ್ಯಾಸಕರಿಂದ ಆನ್‍ಲೈನ್ ಕ್ಲಾಸ್ ಮಾಡಿಸಲು ಶುರು ಮಾಡಿದ್ದೇವೆ. ವಿದ್ಯಾರ್ಥಿಗಳಿಗೆ ಕ್ಲಾಸಿನ ಬಗ್ಗೆ ಗಂಭೀರತೆ ಇರಲಿ ಎಂದು 100, 200 ರೂಪಾಯಿ ಎಂದು ಫೀಸ್ ಕೂಡ ಮಾಡಿದ್ದೇವೆ. ಈ ಹಣವನ್ನು ಈ ಕೊರೊನಾ ಲಾಕ್‍ಡೌನ್ ಇದರೂ ತಮ್ಮ ಪ್ರಾಣ ಪಣಕ್ಕಿಟ್ಟು ಕೆಲಸ ಮಾಡುತ್ತಿರುವ ಹೇಲ್ತ್ ವಾರಿಯರ್ಸ್, ಮೀಡಿಯಾ, ಸಿಎಂ ರಿಲೀಫ್ ಫಂಡಿಗೆ ಕೊಡಲು ಕಾಲೇಜಿನ ಆಡಳಿತ ಮಂಡಳಿ ತೀರ್ಮಾನಿಸಿದೆ.

    ಇಂದಿನ ವೆಬಿನಾರ್ ಕ್ಲಾಸ್ ಮಾಧ್ಯಮಕ್ಕೆ ಸಂಬಂಧಪಟ್ಟಿತ್ತು, ಹೀಗಾಗಿ ಕೊರೊನಾ ಲಾಕ್‍ಡೌನ್‍ನಲ್ಲಿ ವರದಿ ಮಾಡುತ್ತಿದ್ದ ಸಂದರ್ಭದಲ್ಲೇ ಪಬ್ಲಿಕ್ ಟಿವಿ ರಾಮನಗರ ವರದಿಗಾರ ಹನುಮಂತು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅವರ ಕುಟುಂಬಕ್ಕೆ ಇಂದಿನ ಹಣವನ್ನು ನೇರವಾಗಿ ನೀಡಲು ತೀರ್ಮಾನಿಸಲಾಗಿದೆ ಎಂದು ರಮ್ಯಾ ಅವರು ತಿಳಿಸಿದ್ದಾರೆ.