Tag: ವೆನೆಜುವೆಲಾ

  • ಮೂರು ವರ್ಷದ ಬಳಿಕ ವೆನೆಜುವಲಾದಿಂದ ತೈಲ ಖರೀದಿಗೆ ಮುಂದಾದ ಭಾರತ

    ಮೂರು ವರ್ಷದ ಬಳಿಕ ವೆನೆಜುವಲಾದಿಂದ ತೈಲ ಖರೀದಿಗೆ ಮುಂದಾದ ಭಾರತ

    ನವದೆಹಲಿ: ಮೂರು ವರ್ಷದ ಬಳಿಕ ವೆನೆಜುವಲಾದಿಂದ (Venezuela) ಭಾರತ (India) ಕಚ್ಚಾ ತೈಲವನ್ನು ಖರೀದಿಸಲು ಮುಂದಾಗಿದೆ.

    ವೆನೆಜುವೆಲಾ ಸೇರಿದಂತೆ ನಿರ್ಬಂಧ ಇಲ್ಲದ ಯಾವುದೇ ದೇಶದಿಂದ ತೈಲ (Crude Oil) ಆಮದು ಮಾಡಿಕೊಳ್ಳಲು ಭಾರತ ಸಿದ್ಧ ಎಂದು ಕೇಂದ್ರ ಪೆಟ್ರೋಲಿಯಂ ಖಾತೆಯ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಹೇಳಿದ್ದಾರೆ.

    ಭಾರತದ ಮೂರು ಕಂಪನಿಗಳಾದ ರಿಲಯನ್ಸ್ ಇಂಡಸ್ಟ್ರೀಸ್ (RIL), ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ಮತ್ತು ಎಚ್‌ಪಿಸಿಎಲ್-ಮಿತ್ತಲ್ ಎನರ್ಜಿ (HMEL) ವೆನೆಜುವೆಲಾದ ತೈಲ ಖರೀದಿಸಿದ್ದು, ಇದು ಮುಂದಿನ ಎರಡು ತಿಂಗಳುಗಳಲ್ಲಿ ಭಾರತಕ್ಕೆ ಬರುವ ಸಾಧ್ಯತೆಯಿದೆ.  ಇದನ್ನೂ ಓದಿ: ಜಾರ್ಜ್‌ ವಿರುದ್ಧ ಪೋಸ್ಟ್‌ – ತೆಲಂಗಾಣ ಮಾಜಿ ಪಾಲಿಕೆ ಸದಸ್ಯನ ಪುತ್ರ ಅರೆಸ್ಟ್‌

    ಭಾರತದಲ್ಲಿ ನಿರ್ದಿಷ್ಟವಾಗಿ ಖಾಸಗಿ ವಲಯದ ರಿಫೈನರ್ಸ್ ಆರ್‌ಐಎಲ್‌ ಮತ್ತು ನಯಾರಾ ಎನರ್ಜಿ (NEL) ವೆನೆಜುವೆಲಾದ ತೈಲವನ್ನು ಖರೀದಿಸುತ್ತಿದ್ದವು. ಆದರೆ ಅಮೆರಿಕ ಹೇರಿದ ನಿರ್ಬಂಧದ ಬಳಿಕ ಆಮದು ನಿಂತಿತ್ತು. ಭಾರತವು ಕೊನೆಯದಾಗಿ ವೆನೆಜುವೆಲಾದ ಕಚ್ಚಾ ತೈಲವನ್ನು ನವೆಂಬರ್ 2020 ರಲ್ಲಿ ಆಮದು ಮಾಡಿಕೊಂಡಿತ್ತು.

    ಭಾರತದ ಅಧಿಕೃತ ವ್ಯಾಪಾರದ ಮಾಹಿತಿಯ ಪ್ರಕಾರ 2019 ರಲ್ಲಿ ವೆನೆಜುವೆಲಾ ಐದನೇ ಅತಿ ದೊಡ್ಡ ತೈಲ ಪೂರೈಸುವ ದೇಶವಾಗಿದ್ದು, ಭಾರತೀಯ ಸಂಸ್ಕರಣಾಗಾರಗಳಿಗೆ ಸುಮಾರು 16 ಮಿಲಿಯನ್ ಟನ್ ಕಚ್ಚಾ ತೈಲವನ್ನು ಒದಗಿಸುತ್ತದೆ. ವೆನೆಜುವೆಲಾದಿಂದ 2019 ರಲ್ಲಿ ಭಾರತ 5.70 ಬಿಲಿಯನ್ ಡಾಲರ್‌ ತೈಲವನ್ನು ಆಮದು ಮಾಡಿಕೊಂಡಿದೆ.

     

    ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆಯ ಒಪೆಕ್‌ (OPEC) ಸದಸ್ಯ ದೇಶವಾದ ವೆನೆಜುವೆಲಾವು ವಿಶ್ವದಲ್ಲೇ ಅತಿ ಹೆಚ್ಚು ತೈಲ ನಿಕ್ಷೇಪಗಳನ್ನು ಹೊಂದಿದೆ.

    ಅತಿ ಹೆಚ್ಚು ಕಚ್ಚಾ ತೈಲ ಆಮದು ಮಾಡುವ ಮೂರನೇ ಅತಿ ದೊಡ್ಡ ದೇಶ ಭಾರತವಾಗಿದ್ದು, ಅಗತ್ಯತೆಯ 85% ಪ್ರತಿಶತವನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ. ಎಲ್ಲಿ ಅಗ್ಗವಾಗಿ ಸಿಗುತ್ತದೋ ಅಲ್ಲಿಂದ ಭಾರತ ತೈಲ ಖರೀದಿಸುತ್ತದೆ ಎಂದು ಸಮರ್ಥಿಸಿಕೊಂಡಿದೆ.

    ಭಾರತವು ಅಕ್ಟೋಬರ್‌ನಲ್ಲಿ ರಷ್ಯಾದ ತೈಲಕ್ಕೆ ಪ್ರತಿ ಬ್ಯಾರೆಲ್‌ಗೆ 84.20 ಡಾಲರ್‌ ಸರಾಸರಿ ಬೆಲೆಯನ್ನು ಪಾವತಿಸಿದೆ. ಇದು ಜಿ7 ರಾಷ್ಟ್ರಗಳು ನಿಗದಿಪಡಿಸಿದ 60 ಡಾಲರ್‌ ಬೆಲೆಯ ಮಿತಿಗಿಂತಲೂ ಹೆಚ್ಚಾಗಿದೆ.

     

  • ಈ ದೇಶದಲ್ಲಿ ಸ್ಮಾರ್ಟ್‌ ಟಿವಿಗಿಂತ ಕಾಂಡೋಮ್ ಬೆಲೆ ದುಬಾರಿ – ಎಷ್ಟು ಅಂದ್ರೆ ನೀವು ಬೆಚ್ಚಿಬೀಳ್ತೀರಾ!

    ಈ ದೇಶದಲ್ಲಿ ಸ್ಮಾರ್ಟ್‌ ಟಿವಿಗಿಂತ ಕಾಂಡೋಮ್ ಬೆಲೆ ದುಬಾರಿ – ಎಷ್ಟು ಅಂದ್ರೆ ನೀವು ಬೆಚ್ಚಿಬೀಳ್ತೀರಾ!

    ವಾಷಿಂಗ್ಟನ್: ಅನೇಕ ದೇಶಗಳಲ್ಲಿ ಸರ್ಕಾರ ಕಾಂಡೋಮ್‍ಗಳನ್ನು ಉಚಿತವಾಗಿ ಪೂರೈಸುತ್ತದೆ. ಇನ್ನೂ ಅನೇಕ ದೇಶಗಳಲ್ಲಿ ಗರ್ಭಪಾತವನ್ನು ನಿಷೇಧಿಸಲಾಗಿದೆ. ಈ ವಿಚಾರವಾಗಿ ವಿವಿಧ ರೀತಿಯ ಕಾನೂನುಗಳಿವೆ. ಆದರೆ ಇತ್ತೀಚೆಗೆ ವೆನೆಜುವೆಲಾದಲ್ಲಿ ಕಾಂಡೋಮ್ ಬೆಲೆ ವಿಶ್ವಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಈ ದೇಶದಲ್ಲಿ ಒಂದು ಪ್ಯಾಕ್‌ ಕಾಂಡೋಮ್ ಬೆಲೆ ಸುಮಾರು 60,000 ರೂಪಾಯಿ ಎಂದು ತಿಳಿದು ಬಂದಿದೆ.

    ಕಾಂಡೋಮ್‍ಗಳಲ್ಲಿ ವಿವಿಧ ರೀತಿಯ ಹೆಸರಾಂತ ದುಬಾರಿ ಬ್ರ್ಯಾಂಡ್‍ಗಳಿದೆ. ಎಂದಾದರೂ ಕಾಂಡೋಮ್ ಬೆಲೆ 60,000 ರೂಪಾಯಿ ಎಂದು ನೀವು ಕೇಳಿದ್ದೀರಾ? ಆದರೆ ವೆನೆಜುವೆಲಾದ ಸಾಮಾನ್ಯ ಕಾಂಡೋಮ್‍ಗಳ ಬೆಲೆಯು ಪ್ರತಿಷ್ಠಿತ ಬ್ರ್ಯಾಂಡ್‍ನ ಟಿವಿ ಬೆಲೆಗಿಂತಲೂ ಹೆಚ್ಚಾಗಿದೆ. ಕಾಂಡೋಮ್‍ಗೆ ನೀಡುವ ಬೆಲೆಗೆ ಟಿವಿಯನ್ನೇ ಖರೀದಿಸಬಹುದು.

    ವೆನೆಜುವೆಲಾದ ಅಂಗಡಿಯೊಂದರಲ್ಲಿ ಒಂದು ಪ್ಯಾಕ್‌ ಕಾಂಡೋಮ್ 60,000 ರೂ.ಗೆ ಮಾರಾಟವಾಗುತ್ತಿದೆ. ಪ್ರಪಂಚಾದ್ಯಂತ ಈ ಸುದ್ದಿ ಜನರನ್ನು ದಿಗ್ಭ್ರಮೆಗೊಳಿಸಿದೆ. ಇದೀಗ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಇದನ್ನೂ ಓದಿ: ಮನೆಗೆ ಕರೆಸಿ ನವಜೋಡಿಯನ್ನು ಹತ್ಯೆ ಮಾಡಿದ ನವವಧು ಪೋಷಕರು

    ವೆನೆಜುವೆಲಾ ಲ್ಯಾಟಿನ್ ಅಮೆರಿಕದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದ್ದು, ಈ ದೇಶದಲ್ಲಿ ಗರ್ಭಪಾತವನ್ನು ನಿಷೇಧಿಸಲಾಗಿದೆ. ಯುಎನ್‍ನ ಸ್ಟೇಟ್ ಆಫ್ ವರ್ಲ್ಡ್ ಪಾಪ್ಯುಲೇಶನ್ ರಿಪೋರ್ಟ್ 2015ರ ಪ್ರಕಾರ, ವೆನೆಜುವೆಲಾ ಅತಿ ಹೆಚ್ಚು ಅಪ್ರಾಪ್ತರು ಗರ್ಭಧಾರಣೆ ಮಾಡಿರುವ ಪ್ರಕರಣಗಳು ವರದಿಯಾಗಿದೆ.

    ವೆನೆಜುವೆಲಾದಂತಹ ಇತರೆ ದೇಶಗಳಲ್ಲಿ ಅಪ್ರಾಪ್ತರು ಹೆಚ್ಚಾಗಿ ಗರ್ಭಧಾರಣೆ ಮಾಡುತ್ತಿದ್ದಾರೆ. ಇದೇ ವೇಳೆ ಗರ್ಭಪಾತ ಮಾಡಿಸುವುದರ ಮೇಲೆ ನಿಷೇಧ ಹೇರಲಾಗಿದ್ದು, ಕಾಂಡೋಮ್‍ಗಳ ಬೆಲೆಯನ್ನು ಗಗನಕ್ಕೇರಿಸಲಾಗಿದೆ. ಇದರಿಂದ ಆ ದೇಶದ ಜನ ಸಾಮಾನ್ಯರು ತಲೆ ಮೇಲೆ ಕೈ ಹೊತ್ತುಕೊಂಡಿದ್ದಾರೆ. ಆದರೆ ಈ ಬಗ್ಗೆ ಇನ್ನೂ ಸರ್ಕಾರ ಸರಿಯಾದ ಕ್ರಮ ಕೈಗೊಂಡಿಲ್ಲ. ಇದನ್ನೂ ಓದಿ: ಮೊದಲಬಾರಿಗೆ ಟ್ವಿಟ್ಟರ್ ಉದ್ಯೋಗಿಗಳ ಜೊತೆ ಮಾತನಾಡಲಿದ್ದಾರೆ ಮಸ್ಕ್

  • ಒಂದು ಕಾಫಿ ಬೇಕಿದ್ರೆ 20 ಲಕ್ಷ ಬೋಲಿವರ್ ನೀಡ್ಬೇಕು!

    ಒಂದು ಕಾಫಿ ಬೇಕಿದ್ರೆ 20 ಲಕ್ಷ ಬೋಲಿವರ್ ನೀಡ್ಬೇಕು!

    ಕಾರಾಕಾಸ್(ವೆನೆಜುವೆಲಾ): ಸರ್ಕಾರದ ದೂರಾಲೋಚನೆ ರಹಿತ ಆರ್ಥಿಕ ನೀತಿಗಳಿಂದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ವೆನೆಜುವೆಲಾ ದೇಶದಲ್ಲಿ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಇಲ್ಲಿನ ಜನರು ಒಂದು ಕಾಫಿ ಕುಡಿಯಲು 20 ಲಕ್ಷ ಬೋಲಿವರ್ ಹಣ ಖರ್ಚು ಮಾಡುವ ಸ್ಥಿತಿ ತಲುಪಿದ್ದಾರೆ.

    ಸ್ಥಳೀಯ ಮಾಧ್ಯಮಗಳು ವರದಿ ಮಾಡಿರುವ ಅನ್ವಯ ಕಳೆದ 1 ವರ್ಷದಿಂದ ದೇಶದ ಹಣದುಬ್ಬರ ಸೂಚ್ಯಂಕ 86,857% ಹೆಚ್ಚಳವಾಗಿದೆ. ಇದರಿಂದ ಬ್ಲಾಕ್ ಮಾರ್ಕೆಟ್ ನಲ್ಲಿ ಒಂದು ಕಾಫಿಗೆ 20 ಲಕ್ಷ ಬೋಲಿವರ್ ಅಂದರೆ 68.7 ರೂ. ನೀಡಬೇಕಿದೆ.

    ಅಂತರಾಷ್ಟ್ರೀಯ ಹಣ ನಿಧಿ ನೀಡಿರುವ ಮಾಹಿತಿ ಪ್ರಕಾರ, ವೆನೆಜುವೆಲಾ ಆರ್ಥಿಕ ಪರಿಸ್ಥಿತಿ ದೇಶದ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಿನಗಳಿದೆ. ಈ ಹಿಂದೆ 1920 ರಲ್ಲಿ ಜರ್ಮನಿ ಹಾಗೂ ದಶಕದ ಹಿಂದೆ ಜಿಂಬಾಂಬ್ವೆಯಲ್ಲಿ ಕಂಡು ಬಂದ ಆರ್ಥಿಕ ಕೆಟ್ಟ ಪರಿಸ್ಥಿತಿಗಿಂತಲೂ ಕೆಟ್ಟದಾಗಿದೆ ಎಂದು ತಿಳಿಸಿದೆ.

    ವೆನೆಜುವೆಲಾ ದೇಶಾದ್ಯಂತ ಜನರು ಊಟಕ್ಕೂ ಪರದಾಟ ನಡೆಸುತ್ತಿದ್ದು, ದೇಶದ ಆರ್ಥಿಕತೆ ಪುನಶ್ಚೇತನಕ್ಕೆ ಅಧ್ಯಕ್ಷ ನಿಕೊಲಾಸ್ ಮುಡುರೊ ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ವಿಫಲವಾಗಿದೆ. ಅಂದಹಾಗೇ ವೆನೆಜುವೆಲಾ ದೇಶದ ಹಣವನ್ನು ಬೋಲಿವರು ಎಂದು ಕರೆಯುತ್ತಾರೆ. ಸದ್ಯದ ಆರ್ಥಿಕ ಮಾರುಕಟ್ಟೆಯಲ್ಲಿ ದೇಶದ ಒಂದು ಬೋಲಿವರು ಭಾರತದ 0.00057 ರೂ. ಗೆ ಸಮಾನಾಗಿದೆ. ಅಮೆರಿಕದ ಖಂಡದ ಉತ್ತರ ಭಾಗದಲ್ಲಿರುವ ಸಮುದ್ರ ಕರಾವಳಿ ದೇಶ ವೆನೆಜುವೆಲಾ. ಈ ದೇಶದ ದಕ್ಷಿಣಕ್ಕೆ ಬ್ರೆಜಿಲ್, ಪೂರ್ವಕ್ಕೆ ಗಯಾನ, ಪಶ್ಚಿಮಕ್ಕೆ ಕೊಲಂಬಿಯಾ ದೇಶಗಳಿದೆ.