Tag: ವೆಟ್ಟೈಯಾನ್‌

  • ‌’ವೆಟ್ಟೈಯಾನ್’ ಟ್ರೈಲರ್ ಔಟ್- ತಲೈವಾ, ಬಿಗ್ ಬಿ ಮುಖಾಮುಖಿ

    ‌’ವೆಟ್ಟೈಯಾನ್’ ಟ್ರೈಲರ್ ಔಟ್- ತಲೈವಾ, ಬಿಗ್ ಬಿ ಮುಖಾಮುಖಿ

    ಜನಿಕಾಂತ್ (Rajanikanth) ನಟನೆಯ ‌’ವೆಟ್ಟೈಯಾನ್’ (Vettaiyan) ಟ್ರೈಲರ್ ರಿಲೀಸ್ ಆಗಿದೆ. ದಿಗ್ಗಜರಾದ ರಜನಿಕಾಂತ್, ಬಿಗ್ ಬಿ ಸಂಘರ್ಷ ರೋಚಕವಾಗಿದೆ. ‌ತಲೈವಾ ಖಡಕ್‌ ಆಗಿ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:‘ಪ್ರೇಮಲು’ ಬ್ಯೂಟಿಗೆ ಜಾಕ್‌ಪಾಟ್- ‘ದಳಪತಿ 69’ ಸಿನಿಮಾದಲ್ಲಿ ಮಮಿತಾ ಬೈಜು

    ರಜನಿಕಾಂತ್ ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಜೀವ ತುಂಬಿದ್ದಾರೆ. ಬಿಗ್ ಬಿ ನ್ಯಾಯಾಧೀಶರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಟ್ರೈಲರ್ ನೋಡಿದಾಗ ‘ವೆಟ್ಟೈಯಾನ್’ ಇಬ್ಬರು ಮಹಾನ್ ನಟರ ಜುಗಲ್‌ಬಂದಿ ಬಗ್ಗೆ ಫ್ಯಾನ್ಸ್‌ಗೆ ಕುತೂಹಲ ಮೂಡಿಸಿದೆ. ಈ ಸಿನಿಮಾ ಪೊಲೀಸ್ ಹಾಗೂ ಕಾನೂನಿನ ನಡುವಿನ ಸಮರ ಎಂಬುದರ ಸುಳಿವು ನೀಡಿದ್ದಾರೆ.

    ಮಹಿಳೆಯ ವಿರುದ್ಧ ಎಸಗಿದ ಅಪರಾಧಕ್ಕೆ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರ ಮೇಲೆ ಒತ್ತಡ ಹಾಕಲಾಗುತ್ತದೆ. ಈ ವೇಳೆ ರಜನಿಕಾಂತ್ ಅವರೆಲ್ಲರನ್ನೂ ಮೂರು ದಿನದಲ್ಲಿ ಎನ್‌ಕೌಂಟರ್ ಮಾಡುತ್ತೇನೆಂದು ಮಾತು ಕೊಡುತ್ತಾರೆ. ಅನ್ಯಾಯದ ವಿರುದ್ಧ ಮತ್ತೊಂದು ಅನ್ಯಾಯ ಆಗಬಾರದು ಎಂದು ಬಿಗ್ ಬಿ ಹೇಳುವ ಡೈಲಾಗ್ ಕುತೂಹಲ ಮೂಡಿಸಿದೆ. ಇದು ರಜನಿಕಾಂತ್ ಹಾಗೂ ಬಿಗ್ ಬಿ (Amitabh Bachchan) ನಡುವಿನ ಸಂಘರ್ಷಕ್ಕೆ ಮುನ್ನುಡಿ ಬರೆದಿದೆ.

    ಅಂದಹಾಗೆ, ವೆಟ್ಟೈಯಾನ್ ಸಿನಿಮಾ ಸದ್ಯದಲ್ಲೇ ರಿಲೀಸ್‌ ಆಗುತ್ತಿದೆ. ತಲೈವಾ, ಬಿಗ್ ಬಿ ಜೊತೆ ರಾಣಾ ದಗ್ಗುಬಾಟಿ, ರಿತಿಕಾ ಸಿಂಗ್, ಮಂಜು ವಾರಿಯರ್ ಸೇರಿದಂತೆ ಅನೇಕರು ನಟಿಸಿದ್ದಾರೆ.

  • ತಲೈವಾ ಆರೋಗ್ಯದಲ್ಲಿ ಏರುಪೇರು- ಹೆಲ್ತ್ ಅಪ್‌ಡೇಟ್ ತಿಳಿಸಿದ ಪತ್ನಿ ಲತಾ

    ತಲೈವಾ ಆರೋಗ್ಯದಲ್ಲಿ ಏರುಪೇರು- ಹೆಲ್ತ್ ಅಪ್‌ಡೇಟ್ ತಿಳಿಸಿದ ಪತ್ನಿ ಲತಾ

    ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಆರೋಗ್ಯದಲ್ಲಿ ಏರುಪೇರಾಗಿದ್ದು, ಚೆನ್ನೈನ ಖಾಸಗಿ ಆಸ್ಪತ್ರೆಗೆ ತಲೈವಾರನ್ನು ದಾಖಲಿಸಲಾಗಿದೆ. ನಟನ ಅನಾರೋಗ್ಯದ ಸುದ್ದಿ ಕೇಳಿ ಆತಂಕದಲ್ಲಿರುವ ಫ್ಯಾನ್ಸ್‌ಗೆ ರಜನಿಕಾಂತ್ ಪತ್ನಿ ಹೆಲ್ತ್ ಅಪ್‌ಡೇಟ್ ತಿಳಿಸಿದ್ದಾರೆ. ಆತಂಕಪಡಬೇಡಿ, ಅವರು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

    ಸೋಮವಾರ (ಸೆ.30) ತಡರಾತ್ರಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ರಜನಿಕಾಂತ್‌ರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಸೂಕ್ತ ಚಿಕಿತ್ಸೆ ಕೂಡ ನೀಡಲಾಗಿದೆ. ಇದೀಗ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಇಂದು ಸಂಜೆ ಅಥವಾ ನಾಳೆ ಅವರು ಡಿಸ್ಚಾರ್ಜ್ ಆಗಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಿದ ರಚಿತಾ ರಾಮ್- ಫ್ಯಾನ್ಸ್ ಬೇಸರ

    73 ವರ್ಷದ ತಲೈವಾ ಅನಾರೋಗ್ಯದ ಸುದ್ದಿ ಕೇಳಿ ಆತಂಕಕ್ಕೆ ಒಳಗಾಗಿದ್ದ ಅಭಿಮಾನಿಗಳಿಗೆ ರಜನಿಕಾಂತ್ ಪತ್ನಿ ಲತಾ (Latha) ಸ್ಪಷ್ಟನೆ ನೀಡಿದ್ದಾರೆ. ಆತಂಕ ಪಡುವ ಅಗತ್ಯವಿಲ್ಲ. ರಜನಿಕಾಂತ್ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ. ಇದೀಗ ಈ ಸುದ್ದಿ ಕೇಳಿ ಫ್ಯಾನ್ಸ್ ನಿರಾಳವಾಗಿದ್ದಾರೆ. ಆದಷ್ಟು ಬೇಗ ತಲೈವಾ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

    ಅಂದಹಾಗೆ, ಇದೇ ಅಕ್ಟೋಬರ್ 10ರಂದು ರಜನಿಕಾಂತ್ ನಟನೆಯ ‌’ವೆಟ್ಟೈಯಾನ್’ (Vettaiyan) ಸಿನಿಮಾ ರಿಲೀಸ್ ಆಗಲಿದೆ.

  • ‘ವೆಟ್ಟೈಯಾನ್‌’ಗೆ ಪೈಪೋಟಿ ಕೊಡಲ್ಲ- ‘ಕಂಗುವ’ ಪೋಸ್ಟ್‌ಪೋನ್..!

    ‘ವೆಟ್ಟೈಯಾನ್‌’ಗೆ ಪೈಪೋಟಿ ಕೊಡಲ್ಲ- ‘ಕಂಗುವ’ ಪೋಸ್ಟ್‌ಪೋನ್..!

    ಸರಾ ಹಬ್ಬ ಧಾಮ್‌ಧೂಮ್ ಮಾಡೋಕೆ ಸಾಲು ಸಾಲು ಸಿನಿಮಾಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿವೆ. ರಜನಿಕಾಂತ್ ನಟನೆಯ ವೆಟ್ಟೈಯಾನ್‌ ಸಿನಿಮಾ ಇದೇ ಅಕ್ಟೋಬರ್ 10ಕ್ಕೆ ತೆರೆಗೆ ಬರುತ್ತಿದೆ. ಇನ್ನು ಸೂರ್ಯ ನಟನೆಯ ‘ಕಂಗುವ’ ಸಿನಿಮಾ ಅಕ್ಟೋಬರ್‌ನಲ್ಲಿ ಬೆಳ್ಳಿತೆರೆ ಮೇಲೆ ಕಮಾಲ್ ಮಾಡೋಕೆ ಸಿದ್ಧವಾಗಿತ್ತು. ಆದ್ರೆ ರಜನಿಕಾಂತ್ ಸಿನಿಮಾ ಹಾಗೂ ‘ಕಂಗುವ’ ಸಿನಿಮಾ ಒಂದೇ ಟೈಮಿಗೆ ಬರೋದ್ರಿಂದ ಡೇಟ್ ಕ್ಲ್ಯಾಶ್ ಆಗುತ್ತೆ ಎನ್ನುವ ಕಾರಣದಿಂದ ‘ಕಂಗುವ’ (Kanguva) ಸಿನಿಮಾತಂಡ ಡೇಟ್ ಪೋಸ್ಟ್‌ಪೋನ್ ಮಾಡಿದೆ.

    ಒಂದು ಕಡೆ ರಜನಿಕಾಂತ್ ನಟನೆಯ ಹೈವೋಲ್ಟೇಜ್ ಸಿನಿಮಾ ‘ವೆಟ್ಟೈಯಾನ್‌’ (Vettaiyan), ಮತ್ತೊಂದು ಕಡೆ ಸೂರ್ಯ ನಟನೆಯ ವೆರಿ ಡಿಫರೆಂಟ್ ಸಿನಿಮಾ ‘ಕಂಗುವ’. ಈ ಎರಡೂ ಸಿನಿಮಾ ದಸರಾ ಹಬ್ಬಕ್ಕೆ ಭಕ್ತಗಣಕ್ಕೆ ಹೋಳಿಗೆ ಊಟ ಹಾಕೋಕೆ ರೆಡಿಯಾಗಿದ್ದವು. ಸ್ಟಾರ್ ನಟರ ಸಿನಿಮಾಗಳು ಎಂದಾಗ ಕೊಂಚ ಗ್ಯಾಪ್ ಇದ್ರೆ ಚೆನ್ನಾಗಿರುತ್ತೆ. ಇಷ್ಟು ದಿನ ಕಾದಿದ್ದಕ್ಕೂ ಅಭಿಮಾನಿಗಳು ಸಮಾಧಾನದಿಂದ ಸಿನಿಮಾ ನೋಡೋಕಾಗುತ್ತೆ ಅನ್ನೋ ಆಲೋಚನೆಯಿಂದ `ಕಂಗುವ’ ಚಿತ್ರತಂಡ ರಿಲೀಸ್ ದಿನಾಂಕವನ್ನ ಮುಂದೂಡಿದೆ.

    ಅಂದಹಾಗೆ `ಕಂಗುವ’ ಸಿನಿಮಾ ನವೆಂಬರ್ 14ಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಅನೌನ್ಸ್ ಮಾಡಿದೆ. ಈ ಸಿನಿಮಾದಲ್ಲಿ ಸೂರ್ಯಗೆ ಖಡಕ್ ವಿಲನ್ ಆಗಿ ಬಾಲಿವುಡ್ ನಟ ಬಾಬಿ ಡಿಯೋಲ್ ಪೈಪೋಟಿಗಿಳಿದಿದ್ದಾರೆ. ಇನ್ನುಳಿದಂತೆ `ಕಂಗುವ’ ಚಿತ್ರದಲ್ಲಿ ಜಗಪತಿ ಬಾಬು, ದಿಶಾ ಪಟಾನಿ, ಕಿಚ್ಚ ಸುದೀಪ್ ಸೇರಿದಂತೆ ಅತೀದೊಡ್ಡ ತಾರಾಗಣವಿದೆ.ಇದನ್ನೂ ಓದಿ:ಲೈಂಗಿಕ ದೌರ್ಜನ್ಯ ಆರೋಪ – ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಅರೆಸ್ಟ್‌

    ‘ಕಂಗುವ’ ಸಿನಿಮಾಗೆ ಶಿವ ನಿರ್ದೇಶನ ಮಾಡಿದ್ದು, ಸ್ಟುಡಿಯೋ ಗ್ರೀನ್ ಹಾಗೂ ಯುವಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿದೆ. ಈಗಾಗ್ಲೇ ಟ್ರೈಲರ್ ಮೂಲಕವೇ ‘ಕಂಗುವ’ ಹಾಗೂ ‘ವೆಟ್ಟೈಯಾನ್‌’ ಸಿನಿಮಾ ಗಮನ ಸೆಳೆದಿವೆ.

  • ಓಣಂ ಹಬ್ಬದಂದು ‌’ವೆಟ್ಟೈಯಾನ್’ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ತಲೈವಾ

    ಓಣಂ ಹಬ್ಬದಂದು ‌’ವೆಟ್ಟೈಯಾನ್’ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ತಲೈವಾ

    ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಅವರು ಓಣಂ ಹಬ್ಬದಂದು (ಸೆ.15) ‘ಮನಸಿಲಾಯೋ’ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ತಲೈವಾ ಮಾಡಿರುವ ಡ್ಯಾನ್ಸ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಇದೀಗ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಮೊದಲ ಬಾರಿಗೆ ಮಗನ ಮುಖ ರಿವೀಲ್ ಮಾಡಿದ ‘ಹೆಬ್ಬುಲಿ’ ನಟಿ ಅಮಲಾ

    ಲೋಕೇಶ್ ಕನಕರಾಜ್ ನಿರ್ದೇಶನದ ‘ಕೂಲಿ’ (Coolie) ಸಿನಿಮಾ ಸೆಟ್‌ನಲ್ಲಿ ತಾವೇ ನಟಿಸಿರುವ ‘ವೆಟ್ಟೈಯಾನ್’ ಸಿನಿಮಾದ ಹಾಡಿಗೆ ಚಿತ್ರತಂಡದ ಜೊತೆ ಹೆಜ್ಜೆ ಹಾಕಿ ರಜನಿಕಾಂತ್ ಸಂಭ್ರಮಿಸಿದ್ದಾರೆ. ಈ ಸ್ಪೆಷಲ್ ವಿಡಿಯೋ ಮೂಲಕ ಫ್ಯಾನ್ಸ್‌ಗೆ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ವಿಜಯ್ ಕೊನೆಯ ಸಿನಿಮಾದಲ್ಲಿ ಬಾಬಿ ಡಿಯೋಲ್ ವಿಲನ್

     

    View this post on Instagram

     

    A post shared by Lyca Productions (@lycaproductions)

    ಅಂದಹಾಗೆ, ಬಹುನಿರೀಕ್ಷಿತ ಸಿನಿಮಾ ‘ವೆಟ್ಟೈಯಾನ್’ ಬಿಡುಗಡೆ ಸಜ್ಜಾಗಿದೆ. ಅಕ್ಟೋಬರ್ 10ಕ್ಕೆ ಪಂಚ ಭಾಷೆಯಲ್ಲಿ ಚಿತ್ರ ತೆರೆಗೆ ಬರಲಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ವೆಟ್ಟೈಯಾನ್ ಬಳಗ ಮೊದಲ ಹಾಡನ್ನು ಇತ್ತೀಚೆಗೆ ರಿಲೀಸ್ ಮಾಡಿತ್ತು.

    ‘ವೆಟ್ಟೈಯಾನ್’ ಸಿನಿಮಾದ ‘ಮನಸಿಲಾಯೋ’ ಎಂಬ ಸಾಂಗ್ ಸಖತ್ ಸದ್ದು ಮಾಡುತ್ತಿದೆ. ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಹಾಡು ರಿಲೀಸ್ ಮಾಡಲಾಗಿದ್ದು, ಕಲರ್‌ಫುಲ್ ಸೆಟ್ ನಲ್ಲಿ ತಲೈವ ಜೊತೆ ಮಂಜು ವಾರಿಯರ್ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದರು. ರಾಕ್ ಸ್ಟಾರ್ ಅನಿರುದ್ಧ ರವಿಚಂದರ್ ಹಾಡಿಗೆ ಟ್ಯೂನ್ ಮಾಡಿರೋದು ವಿಶೇಷ.

    ರಜನಿಕಾಂತ್ ಹಾಗೂ ಅನಿರುದ್ಧ ಕಾಂಬೋದಲ್ಲಿ ಬಂದ ಹಾಡುಗಳು ಹಿಟ್ ಲಿಸ್ಟ್‌ ಸೇರಿವೆ. ಈ ಹಿಂದೆ ಪೆಟ್ಟಾ, ದರ್ಬಾರ್, ಜೈಲರ್ ಬಳಿಕ ಈ ಜೋಡಿ ವೆಟ್ಟೈಯಾನ್‌ಗಾಗಿ ಒಂದಾಗಿದೆ. ಮನಸಿಲಾಯೋ ಸಿಂಗಿಂಗ್ ಸಖತ್ ಸೌಂಡ್ ಮಾಡುತ್ತಿದ್ದು, ಟ್ರೆಂಡಿಂಗ್‌ನಲ್ಲಿದೆ.

    ಸೂರ್ಯ ನಟಿಸಿದ ‘ಜೈ ಭೀಮ್’ ಸಿನಿಮಾ ನಿರ್ದೇಶಿಸಿದ್ದ ಟಿ.ಜೆ. ಜ್ಞಾನವೇಲ್ `ವೆಟ್ಟೈಯಾನ್’ಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ಮೇಲೆ ನಿರೀಕ್ಷೆ ದುಪ್ಪಟ್ಟಾಗೋದಿಕ್ಕೆ ಮತ್ತೊಂದು ಕಾರಣ ತಲೈವಾ ಹಾಗೂ ಬಿಗ್ ಬಿ ಸಂಗಮ. ಭಾರತೀಯ ಚಿತ್ರರಂಗದ ದಿಗ್ಗಜರಾದ ಬಿಗ್ ಬಿ ಹಾಗೂ ರಜನಿಕಾಂತ್ ವೆಟ್ಟೈಯಾನ್ ಸಿನಿಮಾ ಮೂಲಕ ಮೂರು ದಶಕದ ಬಳಿಕ ಮತ್ತೊಮ್ಮೆ ಒಟ್ಟಿಗೆ ನಟಿಸಿದ್ದಾರೆ. ಭಾರತೀಯ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಈ ಅಭೂತಪೂರ್ವ ಸಮಾಗಮಕ್ಕೆ ವೇದಿಕೆ ನಿರ್ಮಿಸಿದೆ.

    ಈ ಚಿತ್ರದಲ್ಲಿ ರಜನಿಕಾಂತ್, ಅಮಿತಾಭ್ ಜೊತೆ ರಾಣಾ ದಗ್ಗುಬಾಟಿ, ಫಹಾದ್ ಫಾಸಿಲ್, ಮಂಜು ವಾರಿಯರ್, ರಿತಿಕಾ ಸಿಂಗ್, ವಿಜಯನ್, ಜಿಎಂ ಸುಂದರ್, ರೋಹಿಣಿ, ಅಭಿರಾಮಿ, ರಾವ್ ರಮೇಶ್, ರಮೇಶ್ ತಿಲಕ್, ರಕ್ಷಣ್ ಸೇರಿದಂತೆ ಇನ್ನೂ ಅನೇಕ ಪ್ರಮುಖ ನಟರು ನಟಿಸಿದ್ದಾರೆ.

  • ‌’ವೆಟ್ಟೈಯಾನ್’ ಚಿತ್ರದ ಸಾಂಗ್ ರಿಲೀಸ್- ಮಂಜು ವಾರಿಯರ್ ಜೊತೆ ತಲೈವಾ ಸಖತ್ ಸ್ಟೆಪ್ಸ್

    ‌’ವೆಟ್ಟೈಯಾನ್’ ಚಿತ್ರದ ಸಾಂಗ್ ರಿಲೀಸ್- ಮಂಜು ವಾರಿಯರ್ ಜೊತೆ ತಲೈವಾ ಸಖತ್ ಸ್ಟೆಪ್ಸ್

    ಜನಿಕಾಂತ್ (Rajanikanth) ನಟನೆಯ ‘ವೆಟ್ಟೈಯಾನ್’ (Vettaiyan) ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ನಟಿ ಮಂಜು ವಾರಿಯರ್ ಜೊತೆ ಸಖತ್ ಆಗಿ ತಲೈವಾ ಹೆಜ್ಜೆ ಹಾಕಿದ್ದಾರೆ. ‘ಜೈಲರ್’ ಸಿನಿಮಾದ ಬಳಿಕ ಮತ್ತೊಂದು ಡ್ಯಾನ್ಸ್ ನಂಬರ್ ಹಾಡಿನಲ್ಲಿ ಕುಣಿದು ಕುಪ್ಪಳಿಸಿದ್ದಾರೆ.

    ‘ವೆಟ್ಟೈಯಾನ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇದರ ನಡುವೆ ಕಲರ್‌ಫುಲ್ ಹಾಡಿನಲ್ಲಿ ತಲೈವಾ ಮಿಂಚಿದ್ದಾರೆ. 73ನೇ ವಯಸ್ಸಿನಲ್ಲೂ ಡ್ಯಾನ್ಸ್‌ನಲ್ಲಿ ಹಿಂದೆ ಬೀಳದೇ ರಜನಿಕಾಂತ್ ಅವರು ಮಂಜು ವಾರಿಯರ್ ಜೊತೆ ಸಖತ್‌ ಆಗಿಯೇ ಹೆಜ್ಜೆ ಹಾಕಿದ್ದಾರೆ. ‘ಮನಸಿಲಾಯೋ’ ಎಂಬ ಹಾಡಿನಲ್ಲಿ ತಮಿಳು ಮತ್ತು ಮಲಯಾಳಂ ಸಾಹಿತ್ಯ ಒಳಗೊಂಡಿದೆ. ಈ ಸಾಂಗ್‌ ಫ್ಯಾನ್ಸ್‌ಗೆ ಇಷ್ಟವಾಗಿದೆ.

     

    View this post on Instagram

     

    A post shared by Anirudh (@anirudhofficial)

    ತಲೈವಾ ಮತ್ತು ಮಂಜು ವಾರಿಯರ್ ಜೊತೆ ಗೆಸ್ಟ್ ಆಗಿ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್ ಕೂಡ ಹೆಜ್ಜೆ ಹಾಕಿದ್ದಾರೆ. ಇತ್ತೀಚೆಗೆ ಅವರು ಚಿತ್ರಕ್ಕೆ ಕಂಪೋಸ್‌ ಮಾಡಿದ ಹಾಡುಗೆಳೆಲ್ಲಾ ಹಿಟ್‌ ಆಗಿದೆ. ಈ ಹಾಡಿಗೂ ಕೂಡ ಈಗ ಉತ್ತಮ ರೆಸ್ಪಾನ್ಸ್‌ ಸಿಕ್ಕಿದೆ. ಇದನ್ನೂ ಓದಿ:ಒಂದು ಅವಕಾಶ ಕಳೆದು ಹೋದರೆ, ನೂರಾರು ಅವಕಾಶಗಳು ಬರುತ್ತವೆ: ಕಾಸ್ಟಿಂಗ್‌ ಕೌಚ್ ಬಗ್ಗೆ ಸನ್ನಿ ಲಿಯೋನ್ ಪ್ರತಿಕ್ರಿಯೆ

    ಇನ್ನೂ ‘ವೆಟ್ಟೈಯಾನ್’ ಚಿತ್ರ ಅಕ್ಟೋಬರ್ 10ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರವನ್ನು ಟಿ.ಜೆ ಜ್ಞಾನ್‌ವೇಲ್ ನಿರ್ದೇಶನ ಮಾಡಿದ್ದಾರೆ. ‘ಜೈಲರ್’ ಸಿನಿಮಾದಂತೆ ‘ವೆಟ್ಟೈಯಾನ್’ ಕೂಡ ಸಕ್ಸಸ್ ಲಿಸ್ಟ್‌ಗೆ ಸೇರುತ್ತಾ? ಕಾದುನೋಡಬೇಕಿದೆ. ಚಿತ್ರದ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.

  • ಪೊಲೀಸ್ ಅಧಿಕಾರಿಯಾಗಿ ತಲೈವಾ- ಅ.10ಕ್ಕೆ ‘ವೆಟ್ಟೈಯಾನ್’ ರಿಲೀಸ್‌ಗೆ ರೆಡಿ

    ಪೊಲೀಸ್ ಅಧಿಕಾರಿಯಾಗಿ ತಲೈವಾ- ಅ.10ಕ್ಕೆ ‘ವೆಟ್ಟೈಯಾನ್’ ರಿಲೀಸ್‌ಗೆ ರೆಡಿ

    ಕಾಲಿವುಡ್‌ನ ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ನಟನೆಯ’ವೆಟ್ಟೈಯಾನ್’ (Vettaiyan) ಸಿನಿಮಾ ರಿಲೀಸ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ತಲೈವಾ ನಟಿಸಿರುವ ಈ ಚಿತ್ರ ಅಕ್ಟೋಬರ್ 10ಕ್ಕೆ ಚಿತ್ರಮಂದಿರದಲ್ಲಿ ಅಬ್ಬರಿಸಲಿದೆ. ಇದನ್ನೂ ಓದಿ:‘ಟಾಕ್ಸಿಕ್’ ಸಿನಿಮಾ ಕೆಲಸದ ನಡುವೆ ಶಿವಣ್ಣರನ್ನು ಭೇಟಿಯಾದ ಯಶ್

    ಮತ್ತೊಮ್ಮೆ ಪೊಲೀಸ್ ಅಧಿಕಾರಿಯಾಗಿ ‘ವೆಟ್ಟೈಯಾನ್’ ಸಿನಿಮಾ ಮೂಲಕ ರಜನಿಕಾಂತ್ ಬರುತ್ತಿದ್ದಾರೆ. ಡಿಫರೆಂಟ್ ಗೆಟಪ್‌ನಲ್ಲಿ ಬರುತ್ತಿರುವ ತಲೈವಾಗೆ ಬಿಗ್ ಬಿ ಕೂಡ ಸಾಥ್ ನೀಡಿದ್ದಾರೆ. ಈ ಚಿತ್ರಕ್ಕೆ `ಜೈ ಭೀಮ್’ ಖ್ಯಾತಿಯ ಟಿ.ಜೆ ಜ್ಞಾನವೇಲ್ ನಿರ್ದೇಶನ ಮಾಡಿದ್ದಾರೆ.

    ಲೈಕಾ ಸಂಸ್ಥೆ ನಿರ್ಮಾಣದ ಈ ಸಿನಿಮಾದಲ್ಲಿ ರಜನಿಕಾಂತ್, ಅಮಿತಾಭ್ ಜೊತೆ ರಿತಿಕಾ ಸಿಂಗ್, ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಕನ್ನಡ, ತಮಿಳು, ಹಿಂದಿ ಮತ್ತು ತೆಲುಗಿನಲ್ಲಿ ‘‌ವೆಟ್ಟೈಯಾನ್’ ಚಿತ್ರ ಮೂಡಿ ಬಂದಿದೆ.

  • ‘ಮಾರ್ಟಿನ್’, ‘ದೇವರ’ ಅಖಾಡಕ್ಕೆ ತಲೈವ ಎಂಟ್ರಿ- ರಜನಿಕಾಂತ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್

    ‘ಮಾರ್ಟಿನ್’, ‘ದೇವರ’ ಅಖಾಡಕ್ಕೆ ತಲೈವ ಎಂಟ್ರಿ- ರಜನಿಕಾಂತ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್

    ಈ ವರ್ಷದ ದಸರಾ ಹಬ್ಬಕ್ಕೆ ಸ್ಯಾಂಡಲ್‌ವುಡ್‌ನ ಹೈವೋಲ್ಟೇಜ್ ಸಿನಿಮಾ ‘ಮಾರ್ಟಿನ್’ (Martin) ತೆರೆಗಪ್ಪಳಿಸೋಕೆ ಸಜ್ಜಾಗಿ ನಿಂತಿದೆ. ಮತ್ತೊಂದು ಕಡೆ ಟಾಲಿವುಡ್‌ನ ಯಂಗ್ ಟೈಗರ್ ಜ್ಯೂ.ಎನ್‌ಟಿಆರ್ ನಟನೆಯ ಮೋಸ್ಟ್ ಅವೈಟೆಡ್ ಸಿನಿಮಾ ‘ದೇವರ’ ಚಿತ್ರ ಕೂಡ ಅಕ್ಟೋಬರ್ 10ರಂದು ಐದು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಇದೀಗ ಕಾಲಿವುಡ್‌ನಿಂದಲೂ ತಲೈವ ತಮ್ಮ ಅಭಿಮಾನಿ ಬಳಗಕ್ಕೆ ಬಿಗ್ ಸರ್ಪ್ರೈಸ್ ಒಂದನ್ನ ನೀಡಿದ್ದಾರೆ. ಇದನ್ನೂ ಓದಿ:ತಮಿಳಿಗನೊಬ್ಬ ಭಾರತವನ್ನು ಆಳಬೇಕು ಎಂಬ ಕನಸಿದೆ ಎಂದ ಕಮಲ್ ಹಾಸನ್

    ಹೌದು, ಒಂದು ಕಡೆ ‘ದೇವರ’ (Devara) ಅಕ್ಟೋಬರ್ 10ಕ್ಕೆ ತೆರೆಕಾಣ್ತಿದೆ. ಮತ್ತೊಂದೆಡೆ ‘ಮಾರ್ಟಿನ್’ ಚಿತ್ರ ಅಕ್ಟೋಬರ್ 11ಕ್ಕೆ ಕೇವಲ ಒಂದು ದಿನದ ಅಂತರದಲ್ಲಿ ಸೌತ್‌ನ ಇಬ್ಬರು ಬಿಗ್ ಸ್ಟಾರ್ಸ್ ಸಿನಿಮಾಗಳು ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿವೆ ಅನ್ನುವ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಹೀಗಿರುವಾಗಲೇ ಮತ್ತೊಂದು ಬಿಗ್ ಸರ್ಪ್ರೈಸ್ ತಲೈವಾ ಕಡೆಯಿಂದ ಸಿಕ್ಕಿದೆ. ರಜನಿಕಾಂತ್ (Rajanikanth) ನಟನೆಯ ವೆಟ್ಟೈಯಾನ್ (Vettaiyan) ಸಿನಿಮಾ ಇದೇ ಅಕ್ಟೋಬರ್ 10ಕ್ಕೆ ದಸರಾ ಹಬ್ಬದ ಉಡುಗೊರೆಯಾಗಿ ಬೆಳ್ಳಿ ಪರದೆ ಮೇಲೆ ಆಟವನ್ನ ಶುರು ಮಾಡಲಿದೆಯಂತೆ. ಹೀಗಂತ ಖುದ್ದು ರಜನಿಕಾಂತ್ ಹೇಳಿದ್ದಾರೆ.

    ಇತ್ತೀಚೆಗೆ ಸೂಪರ್‌ಸ್ಟಾರ್ ರಜನಿಕಾಂತ್ ಹಿಮಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಯೋಗಿಗಳ ಜೊತೆ ಮಾತನಾಡುವ ಸಂದರ್ಭದಲ್ಲಿ ಸಿನಿಮಾದ ರಿಲೀಸ್ ಡೇಟ್ ರಿವೀಲ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ‌’ವೆಟ್ಟೈಯಾನ್’ ಚಿತ್ರ ಅಕ್ಟೋಬರ್ 10 ದಸರಾಗೆ ತೆರೆಗೆ ಬರುತ್ತೆ. ಜೂನ್ 10ರಿಂದ ‘ಕೂಲಿ’ (Coolie) ಸಿನಿಮಾ ಶೂಟಿಂಗ್ ಪ್ರಾರಂಭ ಮಾಡ್ತೀನಿ ಅಂತ ತಲೈವಾ ಹೇಳಿದ್ದಾರೆ.

    ದಸರಾ ಹಬ್ಬವನ್ನೇ ಟಾರ್ಗೇಟ್ ಮಾಡಿದ ಸೌತ್ ಸಿನಿ ದುನಿಯಾ, ಒಂದಲ್ಲ ಎರಡಲ್ಲ ಭರ್ತಿ ಮೂರು ಸಿನಿಮಾಗಳು ತೆರೆಗೆ ಬರೋಕೆ ಸಜ್ಜಾಗಿವೆ. ಆದರೆ ಈ ಮೂರು ಸಿನಿಮಾಗಳ ರಿಲೀಸ್ ಡೇಟ್‌ನಲ್ಲಿ ಏನಾದರೂ ಬದಲಾವಣೆ ಆಗಬಹುದಾ? ಅನ್ನುವ ಗುಸು-ಗುಸು ಮಾತುಗಳು ಶುರುವಾಗಿವೆ. ಒಟ್ಟಿನಲ್ಲಿ ಈ ಬಾರಿಯ ದಸರಾ ಸಿನಿ ರಸಿಕರ ಪಾಲಿಗೆ ಡಬಲ್ ಅಲ್ಲ ತ್ರಿಬಲ್ ಧಮಾಕಾ ಆಗೋದಂತು ಪಕ್ಕಾ.

  • ‘ವೆಟ್ಟೈಯಾನ್’ ಸಿನಿಮಾದ ಕಡೆಯ ದಿನದ ಫೋಟೋ ಹಂಚಿಕೊಂಡ ಚಿತ್ರತಂಡ

    ‘ವೆಟ್ಟೈಯಾನ್’ ಸಿನಿಮಾದ ಕಡೆಯ ದಿನದ ಫೋಟೋ ಹಂಚಿಕೊಂಡ ಚಿತ್ರತಂಡ

    ‘ಜೈಲರ್’ (Jailer) ಸಿನಿಮಾದ ಬಳಿಕ ‘ವೆಟ್ಟೈಯಾನ್’ ಚಿತ್ರದ ಮೂಲಕ ರಜನಿಕಾಂತ್ (Rajanikanth) ಬರುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಕೂಡ ಮುಗಿಸಿ ಕೊಟ್ಟಿದ್ದಾರೆ. ಕಡೆಯ ದಿನದ ಶೂಟಿಂಗ್ ಫೋಟೋವನ್ನು ಚಿತ್ರತಂಡ ಹಂಚಿಕೊಂಡಿದೆ. ಇದನ್ನೂ ಓದಿ:11 ವರ್ಷಗಳ ದಾಂಪತ್ಯಕ್ಕೆ ಕೊನೆ ಹಾಡುತ್ತಿದ್ದೇವೆ; ಮ್ಯೂಸಿಕ್‌ ಡೈರೆಕ್ಟರ್ ಜಿ.ವಿ ಪ್ರಕಾಶ್

    ‘ವೆಟ್ಟೈಯಾನ್’ ಚಿತ್ರವು ಜೈಲರ್‌ಗಿಂತ ವಿಭಿನ್ನವಾಗಿ ಮೂಡಿ ಬಂದಿದೆ. ಭಿನ್ನ ಪಾತ್ರದಲ್ಲಿ ತಲೈವಾ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ತಲೈವಾಗೆ ಬಾಲಿವುಡ್ ಸ್ಟಾರ್ ಅಮಿತಾಭ್ ಬಚ್ಚನ್ (Amitabh Bachchan) ಕೂಡ ಸಾಥ್ ನೀಡಿದ್ದಾರೆ. ಈ ಚಿತ್ರವನ್ನು ಟಿ.ಜೆ ಜ್ಞಾನ್‌ವೇಲ್ ನಿರ್ದೇಶನ ಮಾಡಿದ್ದಾರೆ.

    ಜೈಲರ್ ಚಿತ್ರದ ಸಕ್ಸಸ್ ನಂತರ ತಲೈವಾಗೆ ಹಲವು ಸಿನಿಮಾಗಳು ಲೈನ್ ಅಪ್ ಆಗಿವೆ. ಹಾಗಾಗಿ ಒಪ್ಪಿಕೊಂಡಿರುವ ಚಿತ್ರಗಳನ್ನು ಮುಗಿಸಿ ಕೊಡುತ್ತಿದ್ದಾರೆ. ಸದ್ಯ ‘ವೆಟ್ಟೈಯಾನ್’ (Vettaiyan) ಚಿತ್ರದ ಶೂಟಿಂಗ್ ಅಂತ್ಯವಾಗಿದೆ. ಈ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ.


    ರಜನಿಕಾಂತ್ ಜೊತೆ ಬಿಗ್ ಬಿ, ಫಹಾದ್ ಫಾಸಿಲ್, ರಿತಿಕಾ ಸಿಂಗ್ ನಟಿಸಿದ್ದಾರೆ. ಇದೇ ಅಕ್ಟೋಬರ್‌ನಲ್ಲಿ ಸಿನಿಮಾ ರಿಲೀಸ್ ಆಗಲಿದೆ.