Tag: ವೆಂಕಯ್ಯ ನಾಯ್ಡು

  • ಸಾರ್ವಜನಿಕ ಸ್ಥಳದಲ್ಲಿ ಮೂತ್ರವಿಸರ್ಜನೆ ಮಾಡಬೇಡಿ ಎಂದಿದ್ದಕ್ಕೆ ವ್ಯಕ್ತಿಯ ಕೊಲೆ

    ಸಾರ್ವಜನಿಕ ಸ್ಥಳದಲ್ಲಿ ಮೂತ್ರವಿಸರ್ಜನೆ ಮಾಡಬೇಡಿ ಎಂದಿದ್ದಕ್ಕೆ ವ್ಯಕ್ತಿಯ ಕೊಲೆ

    ನವದೆಹಲಿ: ಸಾರ್ವಜನಿಕ ಸ್ಥಳದಲ್ಲಿ ಮೂತ್ರವಿಸರ್ಜನೆ ಮಾಡದಂತೆ ತಡೆದಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ಇ-ರಿಕ್ಷಾ ಚಾಲಕರಾದ 34 ವರ್ಷದ ರವಿಂದರ್ ಕುಮಾರ್ ಕೊಲೆಯಾದ ದುರ್ದೈವಿ. ಶನಿವಾರದಂದು ಉತ್ತರ ದೆಹಲಿಯ ಮುಖರ್ಜಿನಗರದ ಮೆಟ್ರೋ ನಿಲ್ದಾಣದ ಪಕ್ಕದಲ್ಲಿರೋ ಇ- ರಿಕ್ಷಾ ಸ್ಟ್ಯಾಂಡ್ ಬಳಿಯ ರಸ್ತೆಯಲ್ಲಿ ಇಬ್ಬರು ಯುವಕರು ಮೂತ್ರವಿಸರ್ಜನೆ ಮಾಡುತ್ತಿದ್ದಾಗ ರವಿಂದರ್ ಅದನ್ನು ವಿರೋಧಿಸಿದ್ದಾರೆ. ಇದರಿಂದ ಕೋಪಗೊಂಡ ಯುವಕರು ರವಿಂದರ್ ಅವರಿಗೆ ಬೆದರಿಕೆ ಹಾಕಿದ್ದು, ಕೆಲವು ಗಂಟೆಗಳ ನಂತರ ದೊಡ್ಡ ತಂಡದೊಂದಿಗೆ ಬಂದು ಕಲ್ಲುಗಳನ್ನು ತುಂಬಿದ ಟವೆಲ್ ಹಾಗೂ ಹಿತ್ತಾಳೆ ಲೋಹದಿಂದ ಸುಮಾರು 20 ನಿಮಿಷಗಳವರೆಗೆ ಥಳಿಸಿದ್ರು ಎಂದು ರವಿಂದರ್ ಕುಟುಂಬಸ್ಥರು ಹಾಗೂ ಸ್ನೇಹಿತರು ಹೇಳಿದ್ದಾರೆ.

    ರಾತ್ರಿ ಸುಮಾರು 8.30ರ ವೇಳೆಯಲ್ಲಿ ಈ ಘಟನೆ ನಡೆದಿದ್ದು, ರವಿಂದರ್ ಅವರ ರಕ್ಷಣೆಗೆ ಯಾರೂ ಮುಂದೆ ಬಂದಿಲ್ಲ. ನಂತರ ಅದೇ ರಾತ್ರಿ ರವಿಂದರ್ ಮೃತಪಟ್ಟಿದ್ದಾರೆ.

    ಘಟನೆಯ ಬಗ್ಗೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂಧು ಪೊಲೀಸ್ ಉಪ ಆಯುಕ್ತರಾದ ಮಿಲಿಂದ್ ಮಹಾದಿಯೋ ಸುದ್ಧಿ ಸಂಸ್ಥೆಗೆ ತಿಳಿಸಿದ್ದಾರೆ. 12 ರಿಂದ 13 ಯುವಕರು ಈ ಕೃತ್ಯದಲ್ಲಿ ಭಾಗಿಯಾಗಿರಬಹುದು ಎಂದು ನಮಗೆ ಅನ್ನಿಸುತ್ತಿದೆ. ಆದ್ರೆ ಅದಕ್ಕಿಂತಲೂ ಹೆಚ್ಚಿನವರು ಇರಬಹುದು ಎಂದು ಹೇಳಿದ್ದಾರೆ.

    ರವಿಂದರ್ ಅವರ ಸಹೋದರ ವಿಜೇಂದರ್ ಈ ಬಗ್ಗೆ ಹೇಳಿಕೆ ನೀಡಿದ್ದು, ಶನಿವಾರ ಆತ ಮನೆಗೆ ಬಂದಾಗ ಯಾವುದೇ ಕಾಣುವಂತಹ ಗಾಯಗಳು ಇರಲಿಲ್ಲವಾದ್ದರಿಂದ ವೈದ್ಯರ ಬಳಿ ಹೋಗ್ಲಿಲ್ಲ. ಆದ್ರೆ ಕೆಲ ಸಮಯದ ನಂತರ ಪ್ರಜ್ಞೆ ತಪ್ಪಿದ. ಆಸ್ಪತ್ರೆಗೆ ಕರೆದುಕೊಂಡು ಹೋದಾಗ ರವಿಂದರ್ ಸಾವನ್ನಪ್ಪಿರುವುದಾಗಿ ವೈದ್ಯರು ಹೇಳಿದ್ರು ಅಂತ ತಿಳಿಸಿದ್ದಾರೆ.

    ರವಿಂದರ್ ಸಾವಿಗೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ವಿಷಾದ ವ್ಯಕ್ತಪಡಿಸಿದ್ದಾರೆ. ರವಿಂದರ್ ಸ್ವಚ್ಛ ಭಾರತದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದವರಾಗಿದ್ರು. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೆಹಲಿಯ ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.

  • ರಜನಿಕಾಂತ್ ಬಿಜೆಪಿಗೆ ಬಂದ್ರೆ ಅವರನ್ನು ನಾವು ಸ್ವಾಗತಿಸುತ್ತೇವೆ: ಅಮಿತ್ ಷಾ

    ರಜನಿಕಾಂತ್ ಬಿಜೆಪಿಗೆ ಬಂದ್ರೆ ಅವರನ್ನು ನಾವು ಸ್ವಾಗತಿಸುತ್ತೇವೆ: ಅಮಿತ್ ಷಾ

    ನವದೆಹಲಿ: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಸೇರುವ ಬಗ್ಗೆ ಈಗಾಗಲೇ ಹಲವಾರು ಊಹಾಪೋಹಗಳು ಹರಿದಾಡುತ್ತಿದ್ದು, ಈ ಮಧ್ಯೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ `ಉತ್ತಮ ವ್ಯಕ್ತಿಗಳು ಬಿಜೆಪಿಗೆ ಸೇರಲು ಮನಸ್ಸು ಮಾಡಿದರೆ ಅವರಿಗೆ ಪಕ್ಷದ ಬಾಗಿಲು ತೆರೆದಿರುತ್ತದೆ ಅಂತಾ ಹೇಳಿದ್ದಾರೆ.

    ಒಂದು ವೇಳೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಬಿಜೆಪಿ ಪಕ್ಷ ಸೇರಲು ಇಚ್ಛಿಸಿದ್ದಲ್ಲಿ ಅವರನ್ನು ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಳ್ಳುತ್ತೇವೆ ಎಂದು ರಾಷ್ಟ್ರೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಬಳಿಕ ಅಮಿತ್ ಷಾ, ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಪ್ರಧಾನಿಯವರನ್ನು ಭೇಟಿ ಮಾಡುತ್ತಾರೆ ಅನ್ನೋ ಮಾತನ್ನ ಅಲ್ಲಗೆಳೆದು, ಪ್ರಧಾನಿಯವರನ್ನು ಹಲವಾರು ಮಂದಿ ಭೇಟಿಯಾಗ್ತಾರೆ ಅಂತಾ ಹೇಳಿದ್ದಾರೆ.

    ಕಳೆದ ವಾರವಷ್ಟೇ ರಜನಿಕಾಂತ್, `ರಾಜಕೀಯದತ್ತ ಮುಖಮಾಡುವುದು ದೇವರ ಇಚ್ಚೆ ಅಂತಾ ಹೇಳಿಕೆ ನೀಡಿದ್ದರು. ಆ ಬಳಿಕ 9 ವರ್ಷಗಳ ನಂತ್ರ ತನ್ನ ಅಭಿಮಾನಿಗಳ ಜೊತೆ ಸಂವಾದ ನಡೆಸಿ, ನಾನು ತಮಿಳಿಗ ನಾನು ಎಲ್ಲೂ ಹೋಗಲ್ಲ. ನನ್ನನ್ನ ತಮಿಳಿಗನಾಗಿ ಮಾಡಿದ ನಿಮಗೆಲ್ಲರಿಗೂ ಧನ್ಯವಾದ ಅಂತಾ ಹೇಳಿದ್ದರು. ಈ ಮೂಲಕ ರಜನಿ ತಮಿಳಿನಾಡಿನಲ್ಲಿದ್ದೇ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಅನ್ನೋ ಸುದ್ದಿ ಹರಿದಾಡಿತ್ತು.

    ಇಂತಹ ಊಹಾಪೋಹಗಳಿಂದಾಗಿ ತಮಿಳಿನಾಡಿನಲ್ಲಿ ಕನ್ನಡಿಗ ರಜನಿಕಾಂತ್ ರಾಜಕೀಯದಿಂದ ದೂರ ಉಳಿಯಬೇಕೆಂದು ತಮಿಳು ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಕೆಲ ಬಿಜೆಪಿ ನಾಯಕರು ರಜನಿಕಾಂತ್ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳಿಸಲು ಮುಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು.

    ರಜನೀಕಾಂತ್ ಒಬ್ಬ ಪ್ರಖ್ಯಾತ ನಟ. ಹಾಗೆಯೇ ರಾಜಕೀಯದಲ್ಲಿ ಪ್ರಧಾನಿಯವರು ಉತ್ತಮ ಮುಖಂಡ. ಹೀಗಾಗಿ ರಜನಿಕಾಂತ್  ಪ್ರಧಾನಿಯವರನ್ನು ಭೇಟಿಯಾಗಲು ಇಚ್ಛಿಸಿದ್ದಲ್ಲಿ, ಯಾವುದೇ ಸಮಸ್ಯೆಗಳಿಲ್ಲದೇ ಭೆಟಿಯಾಗಬಹುದು ಅಂತಾ ಸಚಿವ ವೆಂಕಯ್ಯ ನಾಯ್ಡು ಕಳೆದ ಭಾನುವಾರ ಬೆಂಗಳೂರಿನಲ್ಲಿ ಕೇಳಿಕೆ ನೀಡಿದ್ದರು.

  • ಭಾರತದ ಅತ್ಯಂತ ಸ್ವಚ್ಛ ನಗರಗಳ ಪಟ್ಟಿ ಬಿಡುಗಡೆ- ಈ ಬಾರಿ ಮೈಸೂರಿಗೆ ಎಷ್ಟನೇ ಸ್ಥಾನ?

    ಭಾರತದ ಅತ್ಯಂತ ಸ್ವಚ್ಛ ನಗರಗಳ ಪಟ್ಟಿ ಬಿಡುಗಡೆ- ಈ ಬಾರಿ ಮೈಸೂರಿಗೆ ಎಷ್ಟನೇ ಸ್ಥಾನ?

    ನವದೆಹಲಿ: ಭಾರತದ 25 ಅತ್ಯಂತ ಸ್ಚಚ್ಛ ನಗರಗಳ ಪಟ್ಟಿಯನ್ನು ಇಂದು ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಪ್ರಕಟಿಸಿದ್ದಾರೆ. ಸ್ವಚ್ಛ್ ಸರ್ವೇಕ್ಷಣ್-2017ರ ಭಾಗವಾಗಿ ಸ್ವಚ್ಛ ನಗರಗಳನ್ನ ಪಟ್ಟಿ ಮಾಡಲಾಗಿದ್ದು, 73 ನಗರಗಳಿಂದ ಸುಮರು 37 ಲಕ್ಷ ಮಂದಿ ಇದಕ್ಕೆ ಓಟ್ ಮಾಡಿದ್ದಾರೆ.

    ಈ ಬಾರಿ ಮಧ್ಯಪ್ರದೇಶದ ಇಂದೋರ್ ಅತ್ಯಂತ ಸ್ವಚ್ಛ ನಗರಗಳಲ್ಲಿ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನ ಕೂಡ ಇದೇ ರಾಜ್ಯದ ಭೋಪಾಲ್ ನಗರಕ್ಕೆ ಸಿಕ್ಕಿದೆ. ಇನ್ನು ಆಂಧ್ರಪ್ರದೇಶದ ವಿಶಾಖಪಟ್ಟಣ ಮೂರನೇ ಸ್ಥಾನದಲ್ಲಿದೆ. ಗುಜರಾತ್‍ನ ಸೂರತ್ ನಾಲ್ಕನೇ ಸ್ಥಾನದಲ್ಲಿದೆ. ಕಳೆದ ವರ್ಷ ಅತ್ಯಂತ ಸ್ವಚ್ಛ ನಗರಗಳಲ್ಲಿ ಮೊದಲನೇ ಸ್ಥಾನದಲ್ಲಿದ್ದ ಮೈಸೂರು ಈ ಬಾರಿ 5 ನೇ ಸ್ಥಾನಕ್ಕೆ ಇಳಿದಿದೆ.

    ಟಾಪ್ 10 ಅತ್ಯಂತ ಸ್ವಚ್ಛ ನಗರಗಳು:
    1. ಇಂದೋರ್- ಮಧ್ಯಪ್ರದೇಶ
    2. ಭೋಪಾಲ್- ಮಧ್ಯಪ್ರದೇಶ
    3. ವಿಶಾಖಪಟ್ಟಣ – ಆಂಧ್ರಪ್ರದೇಶ
    4. ಸೂರತ್ – ಗುಜರಾತ್
    5. ಮೈಸೂರು – ಕರ್ನಾಟಕ
    6. ತಿರುಚಿರಾಪಳ್ಳಿ – ತಮಿಳುನಾಡು
    7. ನವದೆಹಲಿ ಪುರಸಭೆ
    8. ನವೀ ಮುಂಬೈ – ಮಹಾರಾಷ್ಟ್ರ
    9. ತಿರುಪತಿ – ಆಂಧ್ರಪ್ರದೇಶ
    10. ವಡೋದರಾ – ಗುಜರಾತ್

    ಅತ್ಯಂತ ಸ್ಚಚ್ಛ ನಗರಗಳ ಪಟ್ಟಿ ಮಾಡಲು ನಡೆಸಿದ ಸಮೀಕ್ಷೆಯಲ್ಲಿ ಜನರಿಗೆ ಹಲವು ಪ್ರಶ್ನೆಗಳ ಮೇಲೆ ಓಟ್ ಮಾಡಲು ಕೇಳಲಾಗಿತ್ತು. ಸರ್ಕಾರದ ಮಾಹಿತಿಯ ಪ್ರಕಾರ ಜನರು ತಮ್ಮ ನಗರಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ ಸ್ವಚ್ಛತೆಗೆ ಸಂಬಂಧಿಸಿದಂತೆ ಸುಧಾರಣೆಯಾಗಿದೆ ಎಂದು ತಮ್ಮ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

    ಜನರು ನೀಡಿದ ಪ್ರತಿಕ್ರಿಯೆಯ ಜೊತೆಗೆ ಒಂದು ಪ್ರದೇಶದ ಸ್ವಚ್ಛತಾ ಕಾರ್ಯ ಮತ್ತು ನೈರ್ಮಲ್ಯತೆಯ ಬಗ್ಗೆ ಅಲ್ಲಿನ ಸ್ಥಳೀಯ ಸಂಸ್ಥೆಗಳು ನೀಡಿದ ಮಾಹಿತಿಯ ಆಧಾರದ ಮೇಲೆ ಮೌಲ್ಯಮಾಪನ ಮಾಡಿ ಸ್ವಚ್ಛ ನಗರಗಳ ಪಟ್ಟಿಯನ್ನ ಸಿದ್ಧಪಡಿಸಲಾಗಿದೆ.

    2019ರೊಳಗೆ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಗುರಿಯನ್ನು ಸಕಾರಗೊಳಿಸಲು ತೆಗೆದುಕೊಳ್ಳಲಾಗಿರುವ ಪ್ರಮುಖ ಹೆಜ್ಜೆಗಳಲ್ಲಿ ಈ ಸಮೀಕ್ಷೆಯೂ ಒಂದಾಗಿದೆ. ಬಯಲು ಶೌಚ ಮುಕ್ತವಾಗಲು ಭಾರತಕ್ಕೆ ಸರಿಸುಮಾರು 11.1 ಕೋಟಿ ಶೌಚಾಲಯಗಳ ಅಗತ್ಯವಿದ್ದು, ಈವರೆಗೆ ಸರ್ಕಾರ 3 ಕೋಟಿ ಶೌಚಾಲಯಗಳನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದೆ ಎಂದು ವರದಿಯಾಗಿದೆ.