Tag: ವೆಂಕಯ್ಯ ನಾಯ್ಡು

  • ರಾಜ್ಯಸಭೆಯಲ್ಲಿ ವೆಂಕಯ್ಯ ನಾಯ್ಡುಗೆ ಬೀಳ್ಕೊಡುಗೆ – ಕನ್ನಡದಲ್ಲಿ ಭಾಷಣ ಮಾಡಿ ಜೋಶಿ ಶುಭ ಹಾರೈಕೆ

    ರಾಜ್ಯಸಭೆಯಲ್ಲಿ ವೆಂಕಯ್ಯ ನಾಯ್ಡುಗೆ ಬೀಳ್ಕೊಡುಗೆ – ಕನ್ನಡದಲ್ಲಿ ಭಾಷಣ ಮಾಡಿ ಜೋಶಿ ಶುಭ ಹಾರೈಕೆ

    ನವದೆಹಲಿ: ರಾಜ್ಯಸಭೆಯಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಇಂದು ಭಾವುಕ ದಿನ, ಭಾವನಾತ್ಮಕ ಕ್ಷಣ. ನೂತನ ಉಪರಾಷ್ಟ್ರಪತಿಯಾಗಿ ಜಗದೀಪ್ ಧನಕರ್ ಅವರು ಆಯ್ಕೆ ಆದ ಹಿನ್ನೆಲೆಯಲ್ಲಿ ವೆಂಕಯ್ಯ ನಾಯ್ಡು ಅವರು ಇಂದು ರಾಜ್ಯಸಭೆಯಲ್ಲಿ ಸಭಾಪತಿಯಾಗಿ ಕೊನೆಯ ದಿನದ ಕಲಾಪ ನಡೆಸಿದರು.

    ಈ ವೇಳೆ ಮಾತನಾಡಿದ ಕೇಂದ್ರ ಸಚಿವರು ಹಾಗೂ ರಾಜ್ಯಸಭೆಯ ಹಲವು ಸದಸ್ಯರು ವೆಂಕಯ್ಯ ನಾಯ್ಡು ಅವರ ಕಾರ್ಯವೈಖರಿ ಶ್ಲಾಘಿಸಿದರು. ವಿಶೇಷವಾಗಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಕನ್ನಡದಲ್ಲಿಯೇ ಭಾಷಣ ಮಾಡಿ ಗಮನ ಸೆಳೆದರು. ಇದನ್ನೂ ಓದಿ: ಪ್ರಧಾನಿ ಮೋದಿ ಅವರ ತಿರಂಗಾ ಡಿಪಿ ಕರೆಯನ್ನು ಆರ್‌ಎಸ್‌ಎಸ್‌ ತಿರಸ್ಕರಿಸಿದೆ – ಬಿಜೆಪಿ ಕಾಲೆಳೆದ ಕಾಂಗ್ರೆಸ್‌

    ಉಪ ರಾಷ್ಟ್ರಪತಿ ಹಾಗೂ ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಅವರಿಗೆ ಕನ್ನಡದಲ್ಲೇ ಭಾಷಣ ಮಾಡುವ ಮೂಲಕ ಬೀಳ್ಕೊಡುಗೆ ನೀಡಿದ ಪ್ರಲ್ಹಾದ್ ಜೋಶಿಯವರು, ಕರ್ನಾಟಕದ ಜೊತೆಗಿನ ವೆಂಕಯ್ಯ ನಾಯ್ಡು ಅವರ ಬಾಂಧವ್ಯ, ಮಾತೃ ಭಾಷೆ ಬಗ್ಗೆ ಅವರಿಗಿದ್ದ ಅಭಿಮಾನ, ಪ್ರಾಸಬದ್ಧ ಭಾಷಣ, ವಿಶೇಷವಾಗಿ ದಕ್ಷಿಣ ಭಾರತದ ಡ್ರೆಸ್ ಕೋಡ್ ಪಾಲನೆಯಲ್ಲಿ ವೆಂಕಯ್ಯ ನಾಯ್ಡು ಅವರ ಶಿಸ್ತಿನ ಬಗ್ಗೆ ಜೋಶಿ ಸ್ಮರಿಸಿದರು.

    ವೆಂಕಯ್ಯ ನಾಯ್ಡು ಅವರು ರಾಜ್ಯಸಭೆ ಸಭಾಪತಿಯಾಗಿ ಸದನದಲ್ಲಿ ಭಾರತದ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದರು. ರಾಜ್ಯಸಭೆಯಲ್ಲಿ ಸದಸ್ಯರು ತಮ್ಮ ಮಾತೃಭಾಷೆಯಲ್ಲಿ ಮಾತನಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದರು. ಸುಮಾರು 22 ಪ್ರಾದೇಶಿಕ ಭಾಷೆಗಳಲ್ಲಿ ಮಾತನಾಡಲು ರಾಜ್ಯಸಭೆಯಲ್ಲಿ ಅನುಮತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ವೆಂಕಯ್ಯ ನಾಯ್ಡು ಅವರಿಗೆ ವಂದನಾ ಭಾಷಣದಲ್ಲಿ ಪ್ರಲ್ಹಾದ್ ಜೋಶಿ ತಮ್ಮ ಮಾತೃ ಭಾಷೆ ಕನ್ನಡದಲ್ಲಿಯೇ ಮಾತನಾಡುವ ಮೂಲಕ ನಾಯ್ಡು ಅವರು ಹಾಕಿದ್ದ ಮೇಲ್ಪಂಕ್ತಿಗೆ ಪ್ರಶಂಸೆ ವ್ಯಕ್ತಪಡಿಸಿದರು.

    ವೆಂಕಯ್ಯ ನಾಯ್ಡು ಸರಳ ಸ್ವಭಾವ, ಬೆಂಗಳೂರಿಗೆ ಬಂದ್ರೆ ಸಣ್ಣ ಜನಾರ್ದನ ಹೋಟೆಲ್‍ಗೆ ಹೋಗೋ ಅವರ ಸರಳತೆ, ಯಾವ ಹುದ್ದೆಯಲ್ಲಿದ್ರೂ ಜನಕ್ಕೆ ಮುಕ್ತವಾಗಿ ಸಿಗೋ ಅವರ ಸರಳತೆಯನ್ನೂ ಪ್ರಶಂಸಿದ್ರು. ದಣಿವರಿಯದ ನಾಯಕರಾದ ನಿಮ್ಮ ಮಾರ್ಗದರ್ಶನವಿರಲಿ ಅಂತ ವೆಂಕಯ್ಯ ನಾಯ್ಡುಗೆ ಜೋಶಿಯವರು ಇದೇ ವೇಳೆ ತುಂಬು ಹೃದಯದ ಶುಭಾಶಯ ಕೋರಿದ್ದು ವಿಶೇಷ.

    Live Tv
    [brid partner=56869869 player=32851 video=960834 autoplay=true]

  • ಶಿಕ್ಷಣ ಕೇಸರಿಕರಣಗೊಳಿಸೋದ್ರಲ್ಲಿ ತಪ್ಪೇನಿದೆ: ವೆಂಕಯ್ಯ ನಾಯ್ಡು ಪ್ರಶ್ನೆ

    ಶಿಕ್ಷಣ ಕೇಸರಿಕರಣಗೊಳಿಸೋದ್ರಲ್ಲಿ ತಪ್ಪೇನಿದೆ: ವೆಂಕಯ್ಯ ನಾಯ್ಡು ಪ್ರಶ್ನೆ

    ಡೆಹ್ರಾಡೂನ್: ಶಿಕ್ಷಣವನ್ನು ಕೇಸರಿಕರಣಗೊಳಿಸಲಾಗುತ್ತಿದೆ ಎಂದು ಆರೋಪಿಸುತ್ತಾರೆ. ಶಿಕ್ಷಣ ಕೇಸರೀಕರಣಗೊಳಿಸುವುದರಲ್ಲಿ ತಪ್ಪೇನಿದೆ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಪ್ರಶ್ನಿಸಿದ್ದಾರೆ.

    ದೇಶದ ಜನರು ತಮ್ಮ ?ವಸಾಹತುಶಾಹಿ ಮನಸ್ಥಿತಿ’ಯನ್ನು ಬಿಟ್ಟು ತಮ್ಮ ಸ್ವಂತ ಅಸ್ಮಿತೆ ಬಗ್ಗೆ ಹೆಮ್ಮೆ ಪಡುವುದನ್ನು ಕಲಿಯಬೇಕಿದೆ. ದೇಶದಲ್ಲಿ ವಿದೇಶಿ ಭಾಷೆಯನ್ನು ಶಿಕ್ಷಣ ಮಾಧ್ಯಮವನ್ನಾಗಿ ಹೇರಿ ಶಿಕ್ಷಣವನ್ನು ಗಣ್ಯರಿಗೆ ಸೀಮಿತಗೊಳಿಸಿದರು. ಹೀಗಾಗಿ ಸ್ವಾತಂತ್ರ್ಯದ 75ನೇ ವರ್ಷದಲ್ಲಿ ಮೆಕಾಲೆ ಶಿಕ್ಷಣ ಪದ್ಧತಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂದು ಕರೆ ನೀಡಿದ್ದಾರೆ.

    ಶತಮಾನಗಳ ವಸಾಹತುಶಾಹಿ ಆಳ್ವಿಕೆಯು ನಮ್ಮನ್ನು ಕೀಳು ಜನಾಂಗವಾಗಿ ನೋಡುವುದನ್ನು ಕಲಿಸಿತು. ನಮ್ಮದೇ ಸಂಸ್ಕøತಿ, ಸಾಂಪ್ರದಾಯಿಕ ಬುದ್ಧಿವಂತಿಕೆಯನ್ನು ಧಿಕ್ಕರಿಸಲು ನಮಗೆ ಕಲಿಸಲಾಯಿತು. ಇದು ನಮ್ಮ ರಾಷ್ಟ್ರ ಬೆಳವಣಿಗೆಯನ್ನು ನಿಧಾನಗೊಳಿಸಿತು. ವಿದೇಶಿ ಭಾಷೆಯ ಹೇರಿಕೆಯು ಶಿಕ್ಷಣವನ್ನು ಸಮಾಜದ ಒಂದು ಸಣ್ಣ ವರ್ಗಕ್ಕೆ ಸೀಮಿತಗೊಳಿಸಿತು. ಹೆಚ್ಚಿನ ಜನಸಂಖ್ಯೆಯ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: 3 ಮಿಲಿಯನ್ ಬ್ಯಾರಲ್ ಕಚ್ಚಾ ತೈಲ ಆಮದಿಗೆ ರಷ್ಯಾದೊಂದಿಗೆ ಭಾರತ ಒಪ್ಪಂದ

    ನಾವು ನಮ್ಮ ಪರಂಪರೆ, ಸಂಸ್ಕೃತಿ, ನಮ್ಮ ಪೂರ್ವಜರ ಬಗ್ಗೆ ಹೆಮ್ಮೆ ಪಡಬೇಕು. ನಾವು ನಮ್ಮ ಬೇರುಗಳಿಗೆ ಹಿಂತಿರುಗಬೇಕು. ನಾವು ನಮ್ಮ ವಸಾಹತುಶಾಹಿ ಮನಸ್ಥಿತಿಯನ್ನು ಧಿಕ್ಕರಿಸಬೇಕು. ನಮ್ಮ ಮಕ್ಕಳಿಗೆ ಭಾರತೀಯ ಅಸ್ಮಿತೆ ಬಗ್ಗೆ ಹೆಮ್ಮೆ ಪಡುವಂತೆ ಮಾಡಬೇಕು. ನಾವು ಸಾಧ್ಯವಾದಷ್ಟು ಭಾರತೀಯ ಭಾಷೆಗಳನ್ನು ಕಲಿಯಬೇಕು. ನಾವು ನಮ್ಮ ಮಾತೃಭಾಷೆಯನ್ನು ಪ್ರೀತಿಸಬೇಕು. ಜ್ಞಾನದ ನಿಧಿಯಾಗಿರುವ ನಮ್ಮ ಗ್ರಂಥಗಳನ್ನು ತಿಳಿದುಕೊಳ್ಳಲು ಸಂಸ್ಕೃತವನ್ನು ಕಲಿಯಬೇಕು ಎಂದು ತಿಳಿಸಿದ್ದಾರೆ.

    ಎಲ್ಲಾ ಗ್ಯಾಜೆಟ್ ಅಧಿಸೂಚನೆಗಳನ್ನು ಆಯಾ ರಾಜ್ಯದ ಮಾತೃಭಾಷೆಯಲ್ಲಿ ಹೊರಡಿಸುವ ದಿನಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ. ನಿಮ್ಮ ಮಾತೃಭಾಷೆ ನಿಮ್ಮ ದೃಷ್ಟಿಯಂತಿದೆ. ಆದರೆ ವಿದೇಶಿ ಭಾಷೆಯ ನಿಮ್ಮ ಜ್ಞಾನವು ಕನ್ನಡಕವಿದ್ದಂತೆ. ಶಿಕ್ಷಣ ವ್ಯವಸ್ಥೆಯ ಭಾರತೀಕರಣವು ಭಾರತದ ಹೊಸ ಶಿಕ್ಷಣ ನೀತಿಯ ಕೇಂದ್ರವಾಗಿದೆ. ಇದು ಮಾತೃಭಾಷೆಗಳ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡುತ್ತದೆ ಎಂದಿದ್ದಾರೆ.

    ನಾವು ಶಿಕ್ಷಣವನ್ನು ಕೇಸರಿಕರಣಗೊಳಿಸುತ್ತೇವೆ ಎಂದು ಆರೋಪಿಸುತ್ತಾರೆ. ಆದರೆ ಕೇಸರಿಕರಣದಲ್ಲಿ ತಪ್ಪೇನಿದೆ? ಸರ್ವೇ ಭವಂತು ಸುಖಿನಃ (ಎಲ್ಲರೂ ಸಂತೋಷವಾಗಿರಲಿ) ಮತ್ತು ವಸುಧೈವ ಕುಟುಂಬಕಂ (ಜಗತ್ತೇ ಒಂದು ಕುಟುಂಬ) ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಅಡಕವಾಗಿರುವ ತತ್ವಶಾಸ್ತ್ರಗಳು ಇಂದಿಗೂ ಭಾರತದ ವಿದೇಶಾಂಗ ನೀತಿಯ ಮಾರ್ಗದರ್ಶಿ ಸೂತ್ರಗಳಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಮಾದರಿಯಲ್ಲಿ ಯಾವೆಲ್ಲ ಚಿತ್ರಗಳು ಬರಬೇಕು : ಪ್ರಕಾಶ್ ರೈ ಲಿಸ್ಟ್ ನೋಡಿ

    ಮೂಲ ಬೇರಿನ ಬಾಂಧವ್ಯ ಹೊಂದಿರುವ ಬಹುತೇಕ ಎಲ್ಲಾ ದಕ್ಷಿಣ ಏಷ್ಯಾದ ದೇಶಗಳೊಂದಿಗೆ ಭಾರತ ಉತ್ತಮ ಸಂಬಂಧವನ್ನು ಹೊಂದಿದೆ. ಸಿಂಧೂ ಕಣಿವೆಯ ನಾಗರಿಕತೆಯು ಅಫ್ಘಾನಿಸ್ತಾನದಿಂದ ಗಂಗಾ ಬಯಲಿನವರೆಗೆ ವಿಸ್ತರಿಸಿತು. ಯಾವುದೇ ದೇಶದ ಮೇಲೆ ಮೊದಲು ದಾಳಿ ಮಾಡದ ನಮ್ಮ ನೀತಿಯನ್ನು ಪ್ರಪಂಚದಾದ್ಯಂತ ಗೌರವಿಸಲಾಗುತ್ತದೆ. ಇದು ಹಿಂಸಾಚಾರಕ್ಕಿಂತ ಅಹಿಂಸೆ ಮತ್ತು ಶಾಂತಿಯನ್ನು ಆರಿಸಿದ ಯೋಧ ರಾಜ ಅಶೋಕನ ದೇಶ ಎಂದು ಬಣ್ಣಿಸಿದ್ದಾರೆ.

    ಪ್ರಾಚೀನ ಭಾರತೀಯ ವಿಶ್ವವಿದ್ಯಾನಿಲಯಗಳಾದ ನಳಂದಾ ಮತ್ತು ತಕ್ಷಶಿಲಾದಲ್ಲಿ ಅಧ್ಯಯನ ಮಾಡಲು ವಿಶ್ವದ ಎಲ್ಲೆಡೆಯಿಂದ ಜನರು ಬರುತ್ತಿದ್ದ ಕಾಲವೊಂದಿತ್ತು. ಆದರೆ ಅದರ ಸಮೃದ್ಧಿಯ ಉತ್ತುಂಗದಲ್ಲಿಯೂ ಭಾರತವು ಯಾವುದೇ ದೇಶದ ಮೇಲೆ ದಾಳಿ ಮಾಡಲು ಯೋಚಿಸಲಿಲ್ಲ. ಏಕೆಂದರೆ ಜಗತ್ತಿಗೆ ಶಾಂತಿ ಬೇಕು ಎಂದು ನಾವು ದೃಢವಾಗಿ ನಂಬಿದ್ದೇವೆ ಎಂದು ಹೇಳಿದ್ದಾರೆ.

  • ಶಾಲಾ, ಕಾಲೇಜುಗಳಲ್ಲಿ ಯಾವುದೇ ಕಾಂಟ್ರವರ್ಸಿ ಬೇಡ: ಉಪರಾಷ್ಟ್ರಪತಿ

    ಶಾಲಾ, ಕಾಲೇಜುಗಳಲ್ಲಿ ಯಾವುದೇ ಕಾಂಟ್ರವರ್ಸಿ ಬೇಡ: ಉಪರಾಷ್ಟ್ರಪತಿ

    ಬೆಂಗಳೂರು: ಶಾಲಾ, ಕಾಲೇಜುಗಳಲ್ಲಿ ಯಾವುದೇ ಕಾಂಟ್ರವರ್ಸಿ ಬೇಡ. ಶಾಲೆಗಳು ಮಾಡಿರುವ ಕ್ರಮವನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಲಹೆ ನೀಡಿದರು.

    ಆನೇಕಲ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಂದು ಶಾಲಾ ಕಾಲೇಜುಗಳು, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಯನ್ನು ಹೊಂದಬೇಕು. ಪರಿಸರ ಕಾಳಜಿ, ರೇಡಿಯೋ, ಹವಮಾನ ಸೇರಿದಂತೆ ಹಲವು ವಿಚಾರವನ್ನು ಒಳಪಡಿಸಬೇಕು. ಇಡೀ ದೇಶದ ಶೈಕ್ಷಣಿಕ ಸಂಸ್ಥೆಗಳನ್ನು ಅಳವಡಿಸಬೇಕು. ಅಲ್ಲದೇ ನಮ್ಮ ಧರ್ಮದ ಬಗ್ಗೆ ತಿಳಿಸಬೇಕು ಎಂದರು.

    ಆದರೆ ಇತ್ತೀಚೆಗೆ ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಒಳ್ಳೆಯದಲ್ಲ. ನಾವೆಲ್ಲಾ ಭಾರತೀಯರು. ಶಾಲೆಯಲ್ಲಿ ಯಾವುದೇ ಜಾತಿ ಮತ ಭಾಷೆ ಇಲ್ಲ, ಭಾರತೀಯತೆ ನಮ್ಮದಾಗಬೇಕು ಎಂದು ಕಿವಿಮಾತು ಹೇಳಿದರು. ನಿನ್ನೆ ಮದುವೆಯಾಗಿ ಇಂದು ದೇಶ ಸೇವೆಗೆ ಗನ್‌ ಹಿಡಿದ ದಂಪತಿ

    ನಮ್ಮ ಮಾತೃಭಾಷೆಯನ್ನು ಮರೆಯಬಾರದು. ಇರುವೆಗಳಿಗೆ ಸಕ್ಕರೆ ಹಾಕಿ, ಹಾವಿಗೆ ಹಾಲೆರದು, ಪಶುಗಳಿಗೆ ಮೇವು ಹಾಕಿ, ತಿಲಕವಿಟ್ಟು ಗೌರವಿಸುವ ಸಂಸ್ಕಾರ ನಮ್ಮದು. ಎಲ್ಲಾ ಭಾಷೆಯನ್ನು ಕಲಿಯಬೇಕು. ಆದರೆ ಮೊದಲು ನಿಮ್ಮ ಮಾತೃ ಭಾಷೆ ಕಲೀರಿ. ಮೊದಲು ಕನ್ನಡ ಕಲೀರಿ. ಮಾತೃಭಾಷೆ ಎನ್ನುವುದು ಕಣ್ಣು ಇದ್ದಂತೆ. ಇತರ ಭಾಷೆ ಕನ್ನಡಕ ಇದ್ದಂತೆ, ಕಣ್ಣೇ ಇಲ್ಲದಿದ್ದರೇ ರಿಬಾನ್ ಗ್ಲಾಸ್ ಹಾಕಿದ್ರೂ ಏನ್ ಪ್ರಯೋಜನ ಎಂದು ತಿಳಿಸಿದರು. ಹರಿದ್ವಾರದಿಂದ ತಂದ ಪವಿತ್ರ ಗಂಗಾಜಲ 2 ಸಾವಿರ ಶಿವ ದೇವಾಲಯಗಳಿಗೆ ವಿತರಣೆ

  • ವೆಂಕಯ್ಯ ನಾಯ್ಡು ಭೇಟಿ ಮಾಡಿದ ಶಿವರಾಜ್‍ಕುಮಾರ್

    ವೆಂಕಯ್ಯ ನಾಯ್ಡು ಭೇಟಿ ಮಾಡಿದ ಶಿವರಾಜ್‍ಕುಮಾರ್

    ನವದೆಹಲಿ: ಸ್ಯಾಂಡಲ್‍ವುಡ್ ನಟ ಶಿವರಾಜ್‍ಕುಮಾರ್ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರನ್ನು ಭೇಟಿಯಾಗಿದ್ದಾರೆ.

    ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿಯಾದ ಬೆನ್ನಲ್ಲೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರನ್ನು ಶಿವರಾಜ್‍ಕುಮಾರ್ ಭೇಟಿಯಾಗಿದ್ದಾರೆ.  ಮೈಸೂರಿನ ಶಕ್ತಿಧಾಮಕ್ಕೆ ಬರುವಂತೆ ಆಹ್ವಾನಿಸಿದರು. ಆಮಂತ್ರಣವನ್ನು ವೆಂಕಯ್ಯ ನಾಯ್ಡು ಸ್ವೀಕರಿಸಿದ್ದಾರೆ.

    ಕೆಲವು ದಿನಗಳ ಹಿಂದೆ ಶಿವರಾಕುಮಾರ್, ಗೀತಾ ದಂಪತಿ ಚೆನ್ನೈಗೆ ತೆರಳಿದ್ದರು. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿ ಆಗಿದ್ದರು. ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.  ಇದನ್ನೂ ಓದಿ:  ತಮಿಳುನಾಡು ಸಿಎಂ ಮನೆಗೆ ಶಿವರಾಜ್‍ಕುಮಾರ್ ದಂಪತಿ ಭೇಟಿ

    ವೆಂಕಯ್ಯ ನಾಯ್ಡು ಮತ್ತು ಶಿವರಾಜ್‍ಕುಮಾರ್ ಅವರದ್ದು, ಸಹಜ ಭೇಟಿ ಎಂದು ಹೇಳಲಾಗುತ್ತಿದೆ. ಭೇಟಿಯ ಉದ್ದೇಶ ಏನು ಎಂಬ ಬಗ್ಗೆ ಶಿವಣ್ಣ ಅಧಿಕೃತ ಹೇಳಿಕೆ ನೀಡಬೇಕಿದೆ. ಎಂ.ಕೆ. ಸ್ಟಾಲಿನ್ ಅವರ ಜೊತೆ ಶಿವರಾಜ್‍ಕುಮಾರ್ ಮತ್ತು ಗೀತಾ ಅವರು ನಿಂತಿರುವ ಫೋಟೋ ಸಹ ಲಭ್ಯವಾಗಿತ್ತು. ಇದೀಗ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರನ್ನು ಭೇಟಿಯಾಗಿದ್ದಾರೆ.

  • ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುಗೆ ಕೊರೊನಾ ಪಾಸಿಟಿವ್

    ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುಗೆ ಕೊರೊನಾ ಪಾಸಿಟಿವ್

    ನವದೆಹಲಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ.

    ಈ ಬಗ್ಗೆ ಟ್ವಿಟ್ಟರ್ ಮೂಲಕ ತಿಳಿಸಿದ ಅವರು, ನಾನು ಹೈದಾರಾಬಾದ್‍ನಲ್ಲಿದ್ದು, ಇಂದು ನನಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ. ಇನ್ನೂ ಒಂದು ವಾರ ಐಸೋಲೇಷನ್‌ ಆಗಿರಲು ನಿರ್ಧರಿಸಿದ್ದೇನೆ. ನನ್ನ ಸಂಪರ್ಕದಲ್ಲಿ ಇದ್ದವರು ಐಸೋಲೇಷನ್‌ಗೆ ಒಳಗಾಗಿ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ಕೊರೊನಾ ಮೊದಲ ಅಲೆ ವೇಳೆ 29 ಸೆಪ್ಟೆಂಬರ್‌ 2020 ರಲ್ಲೂ ಕೂಡ ವೆಂಕಯ್ಯ ನಾಯ್ಡುರಿಗೆ ಕೊರೊನಾ ಸೋಂಕು ತಗುಲಿತ್ತು. ಇದನ್ನೂ ಓದಿ: ರಾಜ್ಯದಲ್ಲಿಂದು 165 ಮಂದಿಗೆ ಓಮಿಕ್ರಾನ್ ದೃಢ

    ಕೆಲದಿನಗಳ ಹಿಂದೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಅವರಿಗೂ ಕೊರೊನಾ ಕಾಣಿಸಿಕೊಂಡಿತ್ತು. ಬಳಿಕ ಐಸೋಲೇಷನ್‌ಗೆ ಒಳಗಾಗಿದ್ದರು. ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಕೊರೊನಾ ಹರಡದಂತೆ ತಡೆಯಲು ನಿಗಾ ವಹಿಸಿ: ಕೆ.ಎಸ್.ಈಶ್ವರಪ್ಪ

  • 2 ದಿನ ಹಂಪಿ ವೀಕ್ಷಣೆ ಮಾಡಲಿದ್ದಾರೆ ವೆಂಕಯ್ಯ ನಾಯ್ಡು

    2 ದಿನ ಹಂಪಿ ವೀಕ್ಷಣೆ ಮಾಡಲಿದ್ದಾರೆ ವೆಂಕಯ್ಯ ನಾಯ್ಡು

    ಬಳ್ಳಾರಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ತಮ್ಮ ಕುಟುಂಬ ಸಮೇತವಾಗಿ ಎರಡು ದಿನ ವಿಶ್ವವಿಖ್ಯಾತ ಹಂಪಿ ವೀಕ್ಷಣೆ ಮಾಡಲಿದ್ದಾರೆ.

    ಆ.20 ಮತ್ತು 21 ರಂದು ತುಂಗಭದ್ರಾ ಡ್ಯಾಂ ಮತ್ತು ಐತಿಹಾಸಿಕ ಹಂಪಿ ಸ್ಮಾರಕಗಳ ವೀಕ್ಷಣೆಗೆ ಆಗಮಿಸುತ್ತಿದ್ದು ವೆಂಕಯ್ಯ ನಾಯ್ಡು ಅವರ ಜೊತೆಯಲ್ಲಿ ಅವರ ಧರ್ಮ ಪತ್ನಿ ಎಂ ಉಷಾ ಸಹ ಬರಲಿದ್ದಾರೆ. ಇದನ್ನೂ ಓದಿ: 1,250 ಕೋಟಿ ರೂ. ಜೊತೆ ಘನಿ ಪರಾರಿ – ಈಗ ಯುಎಇಯಲ್ಲಿ ಆಶ್ರಯ

    ಸುಗಮ ಪ್ರವಾಸಕ್ಕಾಗಿ ಹಂಪಿಯಲ್ಲಿ ಹಲವು ರೀತಿ ಸಿದ್ಧತೆಗಳು ನಡೆಯುತ್ತಿದ್ದು, ಅ.20 ರಂದು ಹುಬ್ಬಳ್ಳಿಯಿಂದ ಹೆಲಿಕಾಪ್ಟರ್ ಮೂಲಕ ಹೊಸಪೇಟೆಯ ತಾಲೂಕು ಕ್ರೀಡಾಂಗಣಕ್ಕೆ ಸಂಜೆ 5:20 ಕ್ಕೆ ಆಗಮಿಸುವ ಅವರು ನಂತರ ತುಂಗಭದ್ರಾ ಡ್ಯಾಂ ವೀಕ್ಷಣೆ ಮಾಡಲಿದ್ದಾರೆ. ಇದನ್ನೂ ಓದಿ: ಅಂಬೇಡ್ಕರ್‌ರನ್ನು ಕಾಂಗ್ರೆಸ್ ಎರಡು ಬಾರಿ ಸೋಲಿಸಿತು: ಎ ನಾರಾಯಣ ಸ್ವಾಮಿ

    ಭೇಟಿಯ ಬಳಿಕ  ಕಮಲಾಪುರದ ಮಯೂರ ಭುವನೇಶ್ವರಿ ಹೊಟೇಲ್ ನಲ್ಲಿ ತಂಗಲಿದ್ದಾರೆ.  ಆ.21 ರಂದು ಬೆಳಿಗ್ಗೆಯಿಂದ ಸಂಜೆವರಗೆ ಹಂಪಿಯ ಶ್ರೀವಿರೂಪಾಕ್ಷ ದೇವಸ್ಥಾನ, ಸಾಸುವೆಕಾಳು, ಕಡಲೇಕಾಳು ಗಣೇಶ, ಕೃಷ್ಣ ದೇವಸ್ಥಾನ, ಕಮಲ ಮಹಲ್, ಗಜಶಾಲೆ, ಮಹಾನವಮಿ ದಿಬ್ಬ, ವಿಜಯ ವಿಠ್ಠಲ ದೇವಸ್ಥಾನ ಮೊದಲಾದ ಸ್ಮಾರಕಗಳನ್ನು ವೀಕ್ಷಣೆ ಮಾಡಲಿದ್ದಾರೆ.

  • ವೆಂಕಯ್ಯ ನಾಯ್ಡು ಟ್ವಿಟ್ಟರ್ ಖಾತೆಯ ಬ್ಲೂ ಟಿಕ್ ಮಾಯಕ್ಕೆ ಅಸಲಿ ಕಾರಣವೇನು ಗೊತ್ತಾ?

    ವೆಂಕಯ್ಯ ನಾಯ್ಡು ಟ್ವಿಟ್ಟರ್ ಖಾತೆಯ ಬ್ಲೂ ಟಿಕ್ ಮಾಯಕ್ಕೆ ಅಸಲಿ ಕಾರಣವೇನು ಗೊತ್ತಾ?

    ನವದೆಹಲಿ: ಗಣ್ಯ ವ್ಯಕ್ತಿಗಳು, ರಾಜಕಾರಣಿಗಳು, ಸೆಲೆಬ್ರಿಟಿಗಳ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹೆಸರಿನ ಎದುರಿಗೆ ಬ್ಲೂ ಬ್ಯಾಡ್ಜ್ ಅಥವಾ ಟಿಕ್ ಮಾರ್ಕ್ ಬರುತ್ತದೆ. ನೀಲಿ ಬಣ್ಣದ ಟಿಕ್ ಮಾರ್ಕ್ ಇದ್ದರೆ ಸಂಬಂಧಪಟ್ಟವರ ಅಧಿಕೃತ ಟ್ವಿಟ್ಟರ್ ಖಾತೆ ಎಂದರ್ಥವಾಗುತ್ತದೆ. ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಅಧಿಕೃತ ಟ್ವಿಟ್ಟರ್ ಖಾತೆಯ ಬ್ಲೂ ಟಿಕ್ ಮಾಯವಾಗಿದೆ ಎನ್ನುವ ಸುದ್ದಿ ಹೊರ ಬೀಳುತ್ತಿದ್ದಂತೆ ಪುನಃ ಬ್ಲೂ ಟಿಕ್ ಮಾರ್ಕ್ ಹಾಕಲಾಗಿದೆ.

    ವೆಂಕಯ್ಯ ನಾಯ್ಡು ಅವರ ಹೆಸರಲ್ಲಿ ಹಲವು ಖಾತೆಗಳು ಇರುವ ಕಾರಣ, ಅಧಿಕೃತ ಖಾತೆಯೆ ಬಗ್ಗೆ ಗೊಂದಲ ಆಗಬಾರದು ಎಂಬ ಕಾರಣಕ್ಕೆ ಈ ದೃಢೀಕರಣ ಬ್ಯಾಡ್ಜ್‍ನ್ನು ನೀಡಲಾಗುತ್ತದೆ. ಆದರೆ ಸದ್ಯ ಎಂ.ವೆಂಕಯ್ಯನಾಯ್ಡು ಅವರ ವೈಯಕ್ತಿಕ ಟ್ವಿಟರ್ ಖಾತೆ (@MVenkaiahNaidu)ಗೆ ನೀಡಲಾಗಿದ್ದ ಈ ಬ್ಲ್ಯೂಟಿಕ್ ತೆಗೆದು ಹಾಕಲ್ಪಟ್ಟಿತ್ತು. ಆದರೆ ಅವರ ಕಚೇರಿಯ ಟ್ವಿಟರ್ ಖಾತೆ (@VPSecretariat)ದ ಬ್ಲ್ಯೂಟಿಕ್ ಇನ್ನೂ ಹಾಗೇ ಉಳಿಸಿತ್ತು.  ಇದನ್ನೂ ಓದಿ:  ದ್ವಿತೀಯ ಪಿಯುಸಿ ಪಾಸ್‍ಗೆ ಹೊಸ ಮಾನದಂಡ ಪ್ರಕಟ – ಪಬ್ಲಿಕ್ ಟಿವಿ ಸಲಹೆ ಸ್ವೀಕರಿಸಿದ ಶಿಕ್ಷಣ ಇಲಾಖೆ

    ಕಾರಣವೇನು?
    ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ವೈಯಕ್ತಿಕ ಟ್ವಿಟರ್ ಖಾತೆಯ ದೃಢೀಕರಣ ಬ್ಯಾಡ್ಜ್ ತೆಗೆದುಹಾಕಲ್ಪಟ್ಟಿದ್ದಕ್ಕೆ ಉಪರಾಷ್ಟ್ರಪತಿ ಕಚೇರಿ ಸ್ಪಷ್ಟೀಕರಣ ನೀಡಿದೆ. ವೆಂಕಯ್ಯನಾಯ್ಡು ಅವರ ವೈಯಕ್ತಿಕ ಖಾತೆ ಕಳೆದ ಆರು ತಿಂಗಳಿಂದಲೂ ನಿಷ್ಕ್ರಿಯವಾಗಿತ್ತು. ಅಲ್ಲಿಂದ ಯಾವುದೇ ಟ್ವೀಟ್‍ಗಳನ್ನೂ ಮಾಡಲಾಗಿಲ್ಲ. ಹಾಗಾಗಿ ಬ್ಲ್ಯೂಟಿಕ್ ತೆಗೆಯಲ್ಪಟ್ಟಿದೆ ಎಂದು ತಿಳಿಸಿದೆ. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲಾಗಿತ್ತು. ಇದನ್ನು ಪರಿಶೀಲಿಸಿದ ಬಳಿಕ ಟ್ವಿಟರ್ ಬ್ಲ್ಯೂಟಿಕ್ ವಾಪಸ್ ಕೊಟ್ಟಿದೆ ಎಂದೂ ಮಾಹಿತಿ ನೀಡಿದೆ.

    ಟ್ವಿಟರ್ ಬ್ಲ್ಯೂಟಿಕ್ ದೃಢೀಕರಣ ಬ್ಯಾಡ್ಜ್ ನೀಡಿದ ಬಳಿಕ ಆ ಅಕೌಂಟ್ ಸಂಪೂರ್ಣವಾಗಿ ಬಳಕೆಯಾಗುತ್ತಿರಬೇಕು ಅಂದರೆ ಸಕ್ರಿಯವಾಗಿರಬೇಕು. ಅದಿಲ್ಲದಿದ್ದರೆ ಅದನ್ನು ತೆಗೆಯುತ್ತದೆ. ಇನ್ನು ಬ್ಲ್ಯೂಟಿಕ್ ಪಡೆದ ಯಾರಾರೂ ಯೂಸರ್ ನೇಮ್ (ಬಳಕೆದಾರರು ಹೆಸರು) ಬದಲಿಸಿಕೊಂಡರೆ, ಆ ಕ್ಷಣಕ್ಕೆ ಟ್ವಿಟರ್ ಬ್ಲ್ಯೂಟಿಕ್ ತೆಗೆದುಹಾಕುತ್ತದೆ.

    ಟ್ವಿಟರ್ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದರೆ ಅಥವಾ ಟ್ವಿಟ್ಟರ್ ನಲ್ಲಿ ಉದ್ದೇಶಪೂರ್ವಕವಾಗಿ ಜನರನ್ನು ದಾರಿ ತಪ್ಪಿಸುವುದು ಸೇರಿದಂತೆ ಟ್ವಿಟರ್ ನಿಯಮಗಳ ತೀವ್ರ ಅಥವಾ ಪುನರಾವರ್ತಿತ ಉಲ್ಲಂಘನೆಯಲ್ಲಿ ಕಂಡುಬರುವ ಖಾತೆಗಳಿಂದ ಟ್ವಿಟರ್ ನೀಲಿ ಪರಿಶೀಲಿಸಿದ ಮಾರ್ಕ್ ನ್ನು ತೆಗೆದುಹಾಕಬಹುದು. ದ್ವೇಷಪೂರಿತ ನಡವಳಿಕೆ ನೀತಿ, ನಿಂದನೀಯ ನಡವಳಿಕೆ, ಹಿಂಸಾಚಾರ ನೀತಿಯ ವೈಭವೀಕರಣ, ನಾಗರಿಕ ಸಮಗ್ರತೆ ನೀತಿ, ಖಾಸಗಿ ಮಾಹಿತಿ ನೀತಿಯಲ್ಲಿ ಕೂಡ ಉಲ್ಲಂಘನೆ ಕಂಡುಬಂದರೆ ಸಂಸ್ಥೆ ಈ ಕ್ರಮ ಕೈಗೊಳ್ಳುತ್ತದೆ.

  • ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಕೊರೊನಾ ಸೋಂಕು

    ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಕೊರೊನಾ ಸೋಂಕು

    ನವದೆಹಲಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ವೆಂಕಯ್ಯ ನಾಯ್ಡು ಅವರ ಕೊರೊನಾ ವರದಿ ಪಾಸಿಟಿವ್ ಬಂದಿರೋದನ್ನ ಉಪರಾಷ್ಟ್ರಪತಿಗಳ ಕಚೇರಿ ಟ್ವಿಟ್ಟರ್ ಮೂಲಕ ಖಚಿತ ಪಡಿಸಿದೆ.

    ಇಂದು ಬೆಳಗ್ಗೆ ಎಂದಿನಂತೆ ವೆಂಕಯ್ಯ ನಾಯ್ಡು ಅವರು ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದರು. ವರದಿಯಲ್ಲಿ ಸೋಂಕು ತಗುಲಿರೋದು ದೃಢಪಟ್ಟಿದೆ. ಉಪರಾಷ್ಟ್ರಪತಿಗಳು ಆರೋಗ್ಯವಾಗಿದ್ದು, ಕೊರೊನಾ ಲಕ್ಷಣಗಳು ಕಂಡು ಬಂದಿಲ್ಲ. ವೈದ್ಯರ ಸಲಹೆ ಮೇರೆಗೆ ವೆಂಕಯ್ಯ ನಾಯ್ಡು ಅವರು ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ. ಇನ್ನು ಅವರ ಪತ್ನಿ ಶ್ರೀಮತಿ ಉಷಾ ನಾಯ್ಡು ಅವರ ವರದಿ ನೆಗೆಟಿವ್ ಬಂದಿದ್ದು, ಸ್ವಪ್ರೇರಿತವಾಗಿ ಐಸೋಲೇಷನ್ ನಲ್ಲಿದ್ದಾರೆ ಎಂದು ಉಪರಾಷ್ಟ್ರಪತಿಗಳ ಕಚೇರಿ ತಿಳಿಸಿದೆ.

    ಇಂದು ರಾಜ್ಯದಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯರಿಗೂ ಕೊರೊನಾ ಸೋಂಕು ತಗುಲಿದ್ದು, ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ. ಕಾಂಗ್ರೆಸ್ ಮಾಜಿ ಸಚಿವ ಹೆಚ್.ಕೆ.ಪಾಟೀಲ್, ದಿನೇಶ್ ಗುಂಡೂರಾವ್ª ಮತ್ತು ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೂ ಕೊರೊನಾ ಸೋಂಕು ತಗುಲಿದೆ.

  • ಅಮಾನತು ಸಂಸದರ ಮನವೊಲಿಕೆ ವಿಫಲ – ಉಪವಾಸ ನಿರಶನಕ್ಕೆ ಕೂತ ಉಪಸಭಾಪತಿ

    ಅಮಾನತು ಸಂಸದರ ಮನವೊಲಿಕೆ ವಿಫಲ – ಉಪವಾಸ ನಿರಶನಕ್ಕೆ ಕೂತ ಉಪಸಭಾಪತಿ

    ನವದೆಹಲಿ: ಸೋಮವಾರ ಅಮಾನತುಗೊಂಡ ರಾಜ್ಯಸಭೆಯ ಎಂಟು ಮಂದಿ ಸಂಸದರ ಮನವೊಲಿಕೆ ವಿಫಲವಾದ ಬಳಿಕ ಉಪಸಭಾಪತಿ ಹರಿವಂಶ್ ಉಪವಾಸ ನಿರಶನಕ್ಕೆ ಕೂತಿದ್ದಾರೆ.

    ಉಪವಾಸ ನಿರಶನಕ್ಕೂ ಮುನ್ನ ಇಂದು ಬೆಳಗ್ಗೆ, ಸಂಸತ್ ನ ಗಾಂಧಿ ಪ್ರತಿಮೆ ಬಳಿ ಅಮಾನತು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಎಂಟು ಮಂದಿ ಸಂಸದರು ಭೇಟಿ ಮಾಡಿ ಚಹಾ ನೀಡಿ ಮನವೊಲಿಸಲು ಪ್ರಯತ್ನಿಸಿದರು. ಆದರೆ ಸಂಸದರ ಆಕ್ರೋಶ ತಣಿಯದ ಹಿನ್ನಲೆ ಪ್ರತಿಭಟನೆ ಹಿಂಪಡೆಯಲು ನಿರಾಕರಿಸಿದರು.

    ಇದಾದ ಬೆನ್ನಲ್ಲೇ ರಾಜ್ಯಸಭೆ ಸಭಾಪತಿ ವೆಂಕಯ್ಯನಾಯ್ಡು ಅವರಿಗೆ ಪತ್ರ ಬರೆದ ಹರಿವಂಶ್, ತಾವು ನಾಳೆ ಬೆಳಗ್ಗೆವರೆಗೂ ಇಡೀ ದಿನ ಉಪವಾಸ ಕೂರುವುದಾಗಿ ಘೋಷಿಸಿದರು. ಮೊನ್ನೆ ಸದನದಲ್ಲಿ ಆದ ಘಟನೆ ಬಗ್ಗೆ ಪತ್ರದಲ್ಲಿ ಬೇಸರ ವ್ಯಕ್ತಪಡಿಸಿರುವ ಹರಿವಂಶ್, ವಿಪಕ್ಷಗಳ ಸದಸ್ಯರ ವರ್ತನೆಯಿಂದ ಬಹಳ ನೋವಾಗಿದ್ದು, ತನಗೆ ಇಡೀ ರಾತ್ರಿ ನಿದ್ರೆ ಬರಲಿಲ್ಲ. ನಾಳೆ ಬೆಳಗ್ಗೆಯವರೆಗೂ ಉಪವಾಸ ಕೂರುವುದಾಗಿ ಹೇಳಿದ್ದಾರೆ.

    ಲೋಕಸಭೆಯಲ್ಲಿ ಅನುಮೋದನೆ ಪಡೆದಿದ್ದ ಎರಡು ಕೃಷಿ ಮಸೂದೆಗಳನ್ನ ಭಾನುವಾರ ರಾಜ್ಯಸಭೆಯಲ್ಲಿ ಮಂಡನೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ವಿಪಕ್ಷಗಳ ಸದಸ್ಯರು ಮಸೂದೆ ವಿರುದ್ಧ ಪ್ರತಿಭಟನೆ ನಡೆಸಿದರು. ಕೆಲ ಸದಸ್ಯರು ಸದನದ ಬಾವಿಗಿಳಿದು ದುರ್ವರ್ತನೆ ತೋರಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಅನುಚಿತ ವರ್ತನೆ ಆರೋಪ- ನಾಸೀರ್ ಹುಸೇನ್ ಸೇರಿ 8 ಸಂಸದರು ಅಮಾನತು

    ಈ ಹಿನ್ನೆಲೆಯಲ್ಲಿ ನಿನ್ನೆ ಸಭಾಪತಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಈ ಘಟನೆಯನ್ನು ಸದನದಲ್ಲಿ ಪ್ರಸ್ತಾಪಿಸಿ ಸದಸ್ಯರ ದುರ್ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕದ ನಾಸಿರ್ ಹುಸೇನ್ ಸೇರಿದಂತೆ ಎಂಟು ಸಂಸದರನ್ನು ಒಂದು ವಾರದ ಕಾಲ ಅಮಾನತು ಮಾಡಿರುವುದಾಗಿ ತಿಳಿಸಿದರು.

  • ಅನುಚಿತ ವರ್ತನೆ ಆರೋಪ- ನಾಸೀರ್ ಹುಸೇನ್ ಸೇರಿ 8 ಸಂಸದರು ಅಮಾನತು

    ಅನುಚಿತ ವರ್ತನೆ ಆರೋಪ- ನಾಸೀರ್ ಹುಸೇನ್ ಸೇರಿ 8 ಸಂಸದರು ಅಮಾನತು

    ನವದೆಹಲಿ: ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಚರ್ಚೆ ವೇಳೆ ಗದ್ದಲ ಮಾಡಿ ಅನುಚಿತ ವರ್ತನೆ ತೋರಿದ ಆರೋಪದ ಹಿನ್ನೆಲೆ ವಿಪಕ್ಷದ ಎಂಟು ಮಂದಿ ಸಂಸದರನ್ನು ಒಂದು ವಾರಗಳ ಕಲಾಪದಿಂದ ಅಮಾನತು ಮಾಡಲಾಗಿದೆ.

    ಇಂದು ಕಲಾಪ ಆರಂಭವಾಗುತ್ತಿದ್ದಂತೆ ನಿನ್ನೆ ಘಟನೆಯ ಬಗ್ಗೆ ಸಭಾಧ್ಯಕ್ಷ ವೆಂಕಯ್ಯನಾಯ್ಡು ಆಕ್ರೋಶ ವ್ಯಕ್ತಪಡಿಸಿದರು. ಉಪಾಧ್ಯಕ್ಷರ ಕರ್ತವ್ಯ ನಿಭಾಯಿಸಲು ಅಡ್ಡಿ ಪಡಿಸಿದ ಆರೋಪದ ಮೇಲೆ ಡೆರೆಕ್ ಒ’ಬ್ರಿಯೆನ್ ಸೇರಿ ಎಂಟು ಮಂದಿ ಸಂಸದರು ಅಮಾನತು ಮಾಡಲಾಯಿತು.

    ನಿನ್ನೆ ಚರ್ಚೆ ವೇಳೆ ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ಸದನದ ಬಾವಿಗಿಳಿದು ಬಿಲ್ ಹರಿದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಡೆರೆಕ್ ಒ’ಬ್ರಿಯೆನ್ ಜೊತೆಗೆ ಕರ್ನಾಟಕದ ಕಾಂಗ್ರೆಸ್ ಸಂಸದರ ಸೈಯದ್ ನಾಸೀರ್ ಹುಸೇನ್, ಸಂಜಯ್ ಸಿಂಗ್, ರಾಜು ಸತವ್, ಕೆ.ಕೆ ರಾಗೇಶ್, ರಿಪುನ್ ಬೋರಾ, ಡೋಲಾ ಸೇನ್ ಮತ್ತು ಎಲಮರನ್ ಕರೀಮ್ ಮಸೂದೆ ವಿರೋಧಿಸಿ ಸದನದ ಬಾವಿಗಿಳಿದಿದ್ದರು. ಇದನ್ನೂ ಓದಿ: ವಿರೋಧದ ನಡುವೆ 2 ಕೃಷಿ ಮಸೂದೆ ರಾಜ್ಯಸಭೆಯಲ್ಲಿ ಪಾಸ್‌

    ಸಂಸದರ ಅಮಾನತು ನಿರ್ಧಾರ ಪ್ರಕಟಿಸುವ ಮುನ್ನ ಮಾತನಾಡಿದ ಸಭಾಧ್ಯಕ್ಷ ವೆಂಕಯ್ಯನಾಯ್ಡು ನಿನ್ನೆ ಬೆಳವಣಿಗೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯಸಭೆಗೆ ನಿನ್ನೆ ಕೆಟ್ಟ ದಿನ, ಉಪ ಸಭಾಧ್ಯಕ್ಷರಿಗೆ ಸದಸ್ಯರು ದೈಹಿಕ ಬೆದರಿಕೆ ಹಾಕಿದ್ದಾರೆ. ಕರ್ತವ್ಯ ನಿಭಾಯಿಸಲು ಅಡ್ಡಿಪಡಿಸಿದ್ದಾರೆ ಇದೊಂದು ದುರಾದೃಷ್ಟವಕರ ಬೆಳವಣಿಗೆ ಸಂಸದರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೇಂದ್ರದ ಕೃಷಿ ಮಸೂದೆಯಲ್ಲಿ ರೈತರ ಶೋಷಣೆಯೇ ಹೆಚ್ಚು – ರಾಜ್ಯಸಭೆಯಲ್ಲಿ ಹೆಚ್‍ಡಿಡಿ ವಿರೋಧ