Tag: ವೆಂಕಟ್

  • ರಾಕಿಂಗ್ ಸ್ಟಾರ್ ಯಶ್ ಕೊಟ್ಟ ಗುಡ್ ನ್ಯೂಸ್

    ರಾಕಿಂಗ್ ಸ್ಟಾರ್ ಯಶ್ ಕೊಟ್ಟ ಗುಡ್ ನ್ಯೂಸ್

    ರಾಕಿಂಗ್ ಸ್ಟಾರ್ ಯಶ್ (Yash) ಹಾಗೂ ಕೆವಿಎನ್ (KVN)  ನಿಮಾರ್ತೃ ವೆಂಕಟ್ ಕೊನಂಕಿ ಯೋಜನೆ ಹಾಗೂ ಯೋಚನೆ ಎರಡು ದೊಡ್ಡದಾಗಿದೆ ಅನ್ನೋದಕ್ಕೆ ಟಾಕ್ಸಿಕ್ ಸಿನಿಮಾ ಅಂಗಳದಿಂದ ಸಿಕ್ಕಿರುವ ಲೇಟೆಸ್ಟ್ ಮಾಹಿತಿಯೇ ಸಾಕ್ಷಿ. ರಾಕಿಂಗ್ ಸ್ಟಾರ್ ಆಗಿದ್ದ ಯಶ್ ಕೆಜಿಎಫ್ ಸಿನಿಮಾ ಮೂಲಕ ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಟಾಕ್ಸಿಕ್ (Toxic) ಮೂಲಕ ಮತ್ತೊಂದು ದೊಡ್ಡ ಹೆಜ್ಜೆ ಇಟ್ಟಿರುವ ಯಶ್ ಪ್ಯಾನ್ ಇಂಡಿಯಾ ಬಿಟ್ಟು ಈಗ ಪ್ಯಾನ್ ವರ್ಲ್ಡ್ ಗುರಿ ಇಟ್ಟಿದ್ದಾರೆ. ಯಶ್ ವಿಷನ್ ಗೆ ಕೆವಿಎನ್ ಸಂಪೂರ್ಣವಾಗಿ ಬೆಂಬಲ ಕೊಟ್ಟಿದೆ.

    ಟಾಕ್ಸಿಕ್ ಕೇವಲ ಪ್ಯಾನ್ ಇಂಡಿಯನ್ ಸಿನಿಮಾವಲ್ಲ. ಜಾಗತಿಕ ಮಟ್ಟದಲ್ಲಿ ಈ ಚಿತ್ರವನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ನಿರ್ಮಾಪಕ ವೆಂಕಟ್ ಹಾಗೂ ಚಿತ್ರದ ನಾಯಕ ಯಶ್ ಶ್ರಮಿಸುತ್ತಿದ್ದಾರೆ. ಭಾರತೀಯ ಚಿತ್ರರಂಗದ ಅದ್ಧೂರಿ ಹಾಗೂ ದುಬಾರಿ ಸಿನಿಮಾವಾಗಿರುವ ಈ ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಚಿತ್ರೀಕರಿಸಲಾಗುತ್ತಿದೆ. ಬಳಿಕ ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿ ಇನ್ನೂ ಹಲವು ಅಂತಾರಾಷ್ಟ್ರೀಯ ಭಾಷೆಗಳಲ್ಲಿ ಡಬ್ ಮಾಡಲಾಗುತ್ತದೆ.

    ಸಾಮಾನ್ಯವಾಗಿ ಸಿನಿಮಾವನ್ನು ಮೊದಲು ಮೂಲ ಭಾಷೆಯಲ್ಲಿ ಶೂಟ್ ಮಾಡಿ ಉಳಿದ ಭಾಷೆಗೆ ಡಬ್ ಮಾಡಿ ರಿಲೀಸ್ ಮಾಡಲಾಗುತ್ತದೆ. ಕೆಲವೊಮ್ಮೆ ಎರಡು ಭಾಷೆಗಳಲ್ಲಿ ಸಿನಿಮಾಗಳು ಒಟ್ಟಿಗೆ ಶೂಟ್ ಆದ ಉದಾಹರಣೆ ಇದೆ. ಆದರೆ, ಕನ್ನಡ ಹಾಗೂ ಇಂಗ್ಲಿಷ್ನಲ್ಲಿ ಒಟ್ಟಿಗೆ ಸಿನಿಮಾ ಶೂಟ್ ಈವರೆಗೆ ಆಗಿಲ್ಲ. ಟಾಕ್ಸಿಕ್ ತಂಡ ಈಗ ಕನ್ನಡ ಹಾಗೂ ಇಂಗ್ಲಿಷ್ನಲ್ಲಿ ಒಟ್ಟಿಗೆ ಸಿನಿಮಾ ಶೂಟ್ ಮಾಡಿ ಹೊಸ ದಾಖಲೆ ಬರೆದಿದೆ. ಈ ಮೂಲಕ ಅಪರೂಪದ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ಭಾಷೆ, ಗಡಿ, ಸಂಸ್ಕೃತಿ, ಈ ಎಲ್ಲ ಮೀತಿಗಳನ್ನು ಮೀರಿ ಹೊರಹೊಮ್ಮುವ ಚಿತ್ರವಾಗಬೇಕು ಎಂಬ ಚಿತ್ರತಂಡ ಶ್ರಮಿಸುತ್ತಿದೆ.

    ಟಾಕ್ಸಿಕ್ ಸಿನಿಮಾವನ್ನು ವೆಂಕಟ್ ಕೆ. ನಾರಾಯಣ ಸಾರಥ್ಯದ ಕೆವಿಎನ್ ಪ್ರೊಡಕ್ಷನ್ ಹಾಗೂ ಯಶ್ ಮೊನಸ್ಟಾರ್ ಮೈಂಡ್ ಕ್ರಿಯೇಷನ್ ಜೊತೆಯಾಗಿ ಸೇರಿ ನಿರ್ಮಾಣ ಮಾಡುತ್ತಿದೆ. ಈಗಾಗಲೇ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಗೀತು ಮೋಹನದಾಸ್ ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದು. ಈ ಸಿನಿಮಾವನ್ನು ಪ್ಯಾನ್‌ ವರ್ಲ್ಡ್‌ ಹಂತಕ್ಕೆ ತೆಗೆದುಕೊಂಡು ಹೋಗಲು ಇಡೀ ಸಿನಿಮಾ ತಂಡ ಸಜ್ಜಾಗಿದೆ.

  • ‘ಬಿಗ್ ಬಾಸ್’ ಮನೆಯಲ್ಲಿ ಚಪ್ಪಲಿ ಎಸೆತ: ಹಿಂಸಾಚಾರಕ್ಕೆ ತಿರುಗಿದ ಮಾತು

    ‘ಬಿಗ್ ಬಾಸ್’ ಮನೆಯಲ್ಲಿ ಚಪ್ಪಲಿ ಎಸೆತ: ಹಿಂಸಾಚಾರಕ್ಕೆ ತಿರುಗಿದ ಮಾತು

    ಸಾಮಾನ್ಯವಾಗಿ ಬಿಗ್ ಬಾಸ್ (Bigg Boss) ಮನೆಯಲ್ಲಿ ಪ್ರೇಮ ಸಲ್ಲಾಪಗಳೇ ಕೇಳಿ ಬರುವುದು ಕಾಮನ್. ಸಣ್ಣಪುಟ್ಟ ಮನಸ್ತಾಪ, ಕಿರಿಕಿರಿ ನಡುವೆಯೂ ತೀರಾ ಹೊಡೆದಾಡಿಕೊಳ್ಳುವ ಮಟ್ಟಕ್ಕೆ ಯಾರೂ ಹೋಗುವುದಿಲ್ಲ. ಹಾಗೊಂದು ವೇಳೆ ತೀರಾ ಅತಿರೇಕಗಳು ನಡೆದಾಗ ಅಂತಹ ಸ್ಪರ್ಧಿಗಳನ್ನು ಮನೆಯಿಂದ ಹೊರ ಹಾಕಲಾಗತ್ತೆ. ಈ ಹಿಂದಿ ಪ್ರಥಮ್ (Pratham)ಮೇಲೆ ಹುಚ್ಚ ವೆಂಕಟ್ (Venkat) ಹಲ್ಲೆ ಮಾಡಿದಾಗ, ವೆಂಕಟ್ ಅವರನ್ನು ಮನೆಯಿಂದ ಆಚೆ ಕಳುಹಿಸಲಾಗಿತ್ತು. ಅದು ಬಿಗ್ ಬಾಸ್ ನಿಯಮ. ಇದೀಗ ಅಂತಹದ್ದೇ ಘಟನೆ ತಮಿಳು ಬಿಗ್ ಬಾಸ್ ನಿಂದ ಬಂದಿದೆ.

    ಕಿರುತೆರೆ ಲೋಕದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಆಗಿರುವುದರಿಂದ, ಬಿಗ್ ಬಾಸ್ ಮನೆಯಲ್ಲಿ ಇರುವವರು ಎಚ್ಚರಿಕೆಯಿಂದ ಇರಬೇಕಾಗತ್ತೆ. ಆದರೆ, ತಮಿಳಿನಲ್ಲಿ ಅದೆಲ್ಲವನ್ನೂ ಗಾಳಿಗೆ ತೂರಿ ಕಿತ್ತಾಡಿಕೊಂಡಿದ್ದಾರೆ ಬಿಗ್ ಬಾಸ್ ಮನೆಯ ಸದಸ್ಯರಾದ ಅಜೀಂ ಮತ್ತು ಆಯೇಷಾ. ಈ ಗಲಾಟೆ ಯಾವ ಮಟ್ಟಿಕ್ಕೆ ಹೋಗಿದೆ ಎಂದರೆ, ಜಗಳ ಹಿಂಸಾಚಾರಕ್ಕೆ ತಿರುಗಿದ್ದು, ಶೋ ಮೇಲೆ ಭಾರೀ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್ ಭೇಟಿ ಮಾಡಿ ಕಣ್ಣೀರಿಟ್ಟ ಜಪಾನ್ ಫ್ಯಾನ್ಸ್

    ತಮಿಳಿನಲ್ಲಿ (Tamil) ಬಿಗ್ ಬಾಸ್ ಸೀಸನ್ 6 ಶುರುವಾಗಿದೆ. ಕಮಲ್ ಹಾಸನ್ ಈ ರಿಯಾಲಿಟಿ ಶೋ ನಡೆಸಿಕೊಡುತ್ತಾರೆ. ಎರಡು ವಾರಗಳಿಂದ ಸ್ಪರ್ಧಿಗಳ ಸಖತ್ ಮನರಂಜನೆಯನ್ನೇ ಕೊಡುತ್ತಿದ್ದರು. ಆದರೆ, ಎರಡು ದಿನಗಳ ಹಿಂದೆ ಅಜೀಂ (Azim) ಮತ್ತು ಆಯೇಷಾ (Ayesha) ನಡುವಿನ ಕಿತ್ತಾಟ ತಾರಕಕ್ಕೇರಿ, ಅನಾಹುತವೇ ನಡೆದು ಹೋಗಿದೆ. ಮಹಿಳಾ ಸ್ಪರ್ಧಿಗಳನ್ನು ಅಜೀಂ ಕೆಟ್ಟ ಭಾಷೆಯಿಂದ ನಿಂದಿಸಿದ ಎನ್ನುವ ಕಾರಣಕ್ಕಾಗಿ ಆಯೇಷಾ ಸಿಟ್ಟಿಗೆದ್ದಿದ್ದಾರೆ. ಕೋಪದಿಂದ ಶೂ (Shoo) ತಗೆದು ಅಜೀಂ ಮೇಲೆ ಎಸೆದಿದ್ದಾರೆ.

    ತಮಿಳು ಬಿಗ್ ಬಾಸ್ ಮನೆಯಲ್ಲಿ ಈ ಘಟನೆ ಭಾರೀ ಆಘಾತವನ್ನು ಮೂಡಿಸಿದೆ. ಮನೆಯ ಸದಸ್ಯರು ದಂಗಾಗಿದ್ದಾರೆ. ಆಯೇಷಾ ಬೇರೆ ರೀತಿಯಲ್ಲಿ ಹೇಳಬಹುದಿತ್ತು ಎಂದೂ ಕೆಲವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಆದರೆ, ಆಯೇಷಾ ಮಾತ್ರ ತಮ್ಮ ನಿರ್ಧಾರ ಸರಿ ಇದೆ ಎಂದೇ ವಾದಿಸುತ್ತಿದ್ದಾರೆ. ಇಂಥದ್ದೊಂದು ಘಟನೆ ನಡೆಯಬಾರದಿತ್ತು, ನಡೆದು ಹೋಗಿದೆ. ವಾರಾಂತ್ಯದ ಎಪಿಸೋಡ್ ನಲ್ಲಿ ಕಮಲ್ ಹಾಸನ್ ಈ ಘಟನೆಯ ಬಗ್ಗೆ ಏನು ಹೇಳುತ್ತಾರೆ, ಯಾವ ನಿರ್ಧಾರ ತಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]