Tag: ವೆಂಕಟೇಶ್

  • ಚಾ.ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ – ಸಚಿವ, ಶಾಸಕರ ನಡುವೆ ಜಟಾಪಟಿ

    ಚಾ.ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ – ಸಚಿವ, ಶಾಸಕರ ನಡುವೆ ಜಟಾಪಟಿ

    ಚಾಮರಾಜನಗರ: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಚಾರವಾಗಿ ಸಚಿವ ಮತ್ತು ಶಾಸಕರ ನಡುವೆ ಜಟಾಪಟಿ ನಡೆದಿದೆ.

    ಕಾವೇರಿ ಕುಡಿಯುವ ನೀರಿನ ಸಮಸ್ಯೆ ವಿಚಾರದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಶಾಸಕರತ್ತ ಬೊಟ್ಟು ಮಾಡಿ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್ ಉತ್ತರಿಸಿದರು. ಈ ವೇಳೆ ಸಚಿವ ವೆಂಕಟೇಶ್ ಹಾಗೂ ಶಾಸಕ ಪುಟ್ಟರಂಗಶೆಟ್ಟಿ ನಡುವೆ ಮಾತಿನ ಜಟಾಪಟಿ ನಡೆಯಿತು.

    ನಿನ್ನ ಜವಾಬ್ದಾರಿ ಮಾಡಪ್ಪ ಎಂದು ಶಾಸಕ ಪುಟ್ಟರಂಗಶೆಟ್ಟಿಗೆ ಸಚಿವ ವೆಂಕಟೇಶ್ ಹೇಳಿದರು. ಡಿಸಿ ಬಳಿ ಪ್ರಾಕೃತಿಕ ವಿಕೋಪ ಅನುದಾನ ಇದೆ. ಪಟ್ಟಣಪ್ರದೇಶಕ್ಕೆ ಅನುದಾನ ಕೊಡುವ ಜವಾಬ್ದಾರಿ ಡಿಸಿ ಅವರದ್ದು ಅಂತ ಶಾಸಕ ಪುಟ್ಟರಂಗಶೆಟ್ಟಿ ಹೇಳಿದರು. ‘ಹೇಳಿದ್ದನ್ನ ಕೇಳ್ರೀ… ಜವಾಬ್ದಾರಿ ಡಿಸಿಯದ್ದೆ ಅಂತ ಒಪ್ಕೊಳ್ಳೋಣ’ ಎಂದು ಸಚಿವರು ಪ್ರತಿಯಾಗಿ ಮಾತನಾಡಿದ್ದಾರೆ. ಇದು ಡಿಸಿ ಕರ್ತವ್ಯ ಎಂದು ಶಾಸಕ ಉತ್ತರಿಸಿದರು. ಇದು ಸ್ಥಳೀಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳು ಇದ್ದಮೇಲೆ ಡಿಸಿ ಹೇಗೆ ಜವಾಬ್ದಾರಿ ಎಂದು ಸಚಿವರು ಪ್ರಶ್ನಿಸಿದರು. ಕ್ರಿಯಾ ಯೋಜನೆಗೆ ಸಹಿ ಹಾಕೋದೆ ಡಿಸಿ ಅಂತ ಶಾಸಕ ಪ್ರತಿಯಾಗಿ ಮಾತನಾಡಿದರು. ಪ್ರಾಕೃತಿಕ ವಿಕೋಪ ಅನುದಾನ ಬಳಕೆಗೆ ಬರ ಘೋಷಣೆಯಾಗಬೇಕು. ಅದೇ ಬೇರೆ ಹಣ ಎಂದು ಸಚಿವರು ಸಮಜಾಯಿಸಿ ನೀಡಿದರು.

    ಕುಡಿಯುವ ನೀರಿಗೆ ವಿಶೇಷ ಅನುದಾನ ಇದೆ ಅಂತ ಶಾಸಕ ಪುಟ್ಟರಂಗಶೆಟ್ಟಿ ಹೇಳಿದರು. ಇದ್ದರೆ ಕೊಡ್ಸೋಣ ಬಿಡಪ್ಪ ಎಂದು ಸಚಿವ ವೆಂಕಟೇಶ್ ಹೇಳಿದ್ದಾರೆ.

  • ಆಕ್ಸಿಜನ್ ದುರಂತ ಸಂತ್ರಸ್ತರಿಗೆ ಶೀಘ್ರದಲ್ಲೇ ಸರ್ಕಾರಿ ಉದ್ಯೋಗ: ಸಚಿವ ವೆಂಕಟೇಶ್

    ಆಕ್ಸಿಜನ್ ದುರಂತ ಸಂತ್ರಸ್ತರಿಗೆ ಶೀಘ್ರದಲ್ಲೇ ಸರ್ಕಾರಿ ಉದ್ಯೋಗ: ಸಚಿವ ವೆಂಕಟೇಶ್

    ಚಾಮರಾಜನಗರ: ಆಕ್ಸಿಜನ್ ದುರಂತ (Chamarajanagar Oxygen Tragedy) ಸಂತ್ರಸ್ತರಿಗೆ ಅತಿ ಶೀಘ್ರದಲ್ಲೇ ಖಾಯಂ ನೇಮಕಾತಿ ಮಾಡುತ್ತೇವೆ ಎಂದು ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ವೆಂಕಟೇಶ್ (Venkatesh) ತಿಳಿಸಿದ್ದಾರೆ.

    ಸರ್ಕಾರದ ಪರಿಹಾರ ತಾರತಮ್ಯ ವಿಚಾರದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೆ ಆಕ್ಸಿಜನ್ ದುರಂತ ನಡೆದಾಗ ಬಿಜೆಪಿ ಸರ್ಕಾರವಿತ್ತು, ಅವರು ಸರಿಯಾದ ರೀತಿ ಪರಿಹಾರ ಕೊಟ್ಟಿಲ್ಲ ಎಂದರು. ಈಗ ಕಾಲ್ತುಳಿತ ಪ್ರಕರಣದಲ್ಲಿ ಸತ್ತವರಿಗೆ ಕೊಟ್ಟ ರೀತಿಯಲ್ಲಿ ಅವರಿಗೆ ಪರಿಹಾರ ಕೊಡಲು ಆಗಲ್ಲ. ಅವರಿಗೆ ಸರ್ಕಾರಿ ಉದ್ಯೋಗ ಕೊಡುವ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರದಲ್ಲಿ ಅವರಿಗೆ ಸರ್ಕಾರಿ ಉದ್ಯೋಗ ಸಿಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಮೂವರು ಅಧಿಕಾರಿಗಳನ್ನು ವಜಾಗೊಳಿಸಿ, ಇಲ್ದೆ ಇದ್ರೆ ಲೈಸನ್ಸ್‌ ರದ್ದು ಆಗುತ್ತೆ: ಏರ್‌ ಇಂಡಿಯಾಗೆ ಡಿಜಿಸಿಎ ಎಚ್ಚರಿಕೆ

    ಮನೆ ಮಂಜೂರು ಮಾಡಲು ಲಂಚ ನೀಡಬೇಕು ಎಂಬ ಆಡಿಯೋ ವೈರಲ್ ವಿಚಾರದ ಕುರಿತು ಪ್ರತಿಕ್ರಿಯಿಸಿ, ಬಿಆರ್ ಪಾಟೀಲ್ ಆಪಾದನೆ ಎಷ್ಟರ ಮಟ್ಟಿಗೆ ನಿಜ ಎಂಬ ಬಗ್ಗೆ ತನಿಖೆಯಾಗಬೇಕು. ಈಗಾಗಲೇ ವಸತಿ ಸಚಿವರು ನಮ್ಮಲ್ಲಿ ಆ ರೀತಿ ನಡೆದಿಲ್ಲ ಎಂದು ಸಿಎಂ ಭೇಟಿ ಮಾಡಿ ಸ್ಪಷ್ಟನೆ ನೀಡಿದ್ದಾರೆ ಎಂದರು. ಇದನ್ನೂ ಓದಿ: ಪಲ್ಟಿ ಹೊಡೆದು ಪಂತ್‌ ಶತಕ ಸಂಭ್ರಮ – ಧೋನಿ ರೆಕಾರ್ಡ್‌ ಬ್ರೇಕ್‌

    ತನಿಖೆ ಮಾಡಿಸಿ ಎಂದು ವಸತಿ ಸಚಿವರು ಸಿಎಂಗೆ ಹೇಳಿದ್ದಾರೆ. ಆ ರೀತಿ ಲಂಚ ನಡೆದಿದ್ದರೆ ಕ್ರಮ ತೆಗೆದುಕೊಳ್ಳುವುದಾಗಿ ಸಚಿವರು ಹೇಳಿದ್ದಾರೆ. ಈಗ ಮನೆಗಳನ್ನೇ ಕೊಡ್ತಿಲ್ಲ, ಮನೆಗಳನ್ನು ಎಲ್ಲಿಯೂ ಮಂಜೂರು ಮಾಡುತ್ತಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಮನೆ ಮಂಜೂರು ಮಾಡ್ತಿಲ್ಲ, ಹಳೇ ಸರ್ಕಾರದ ಬಾಕಿ ತೀರಿಸ್ತಾ ಇದ್ದೇವೆ ಎಂದರು. ಇನ್ನೂ ಅಕ್ರಮ ಗಣಿಗಾರಿಕೆ ಬಗ್ಗೆ ಸಚಿವ ಹೆಚ್.ಕೆ ಪಾಟೀಲ್ ಸಿಎಂಗೆ ಪತ್ರ ಬರೆದಿರುವ ವಿಚಾರದ ಕುರಿತು ನನಗೆ ಗೊತ್ತಿಲ್ಲ ಎಂದು ಜಾರಿಕೊಂಡರು. ಇದನ್ನೂ ಓದಿ: ಯೋಗ ದಿನದಲ್ಲಿ 51 ಪುಷ್‌-ಅಪ್‌ ಸಲೀಸಾಗಿ ಪೂರ್ಣಗೊಳಿಸಿದ ತ.ನಾಡು ರಾಜ್ಯಪಾಲ ರವಿ

  • ತುಮುಲ್ ಚುನಾವಣೆಯಲ್ಲಿ ಸಿಎಂ ಬಣ ಮೇಲುಗೈ – ಗುಬ್ಬಿ ಶಾಸಕ ಬಹಿರಂಗ ಅಸಮಾಧಾನ

    ತುಮುಲ್ ಚುನಾವಣೆಯಲ್ಲಿ ಸಿಎಂ ಬಣ ಮೇಲುಗೈ – ಗುಬ್ಬಿ ಶಾಸಕ ಬಹಿರಂಗ ಅಸಮಾಧಾನ

    ತುಮಕೂರು: ತುಮಕೂರು ಹಾಲು ಒಕ್ಕೂಟದ (TUMUL) ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಬಣ ಮೇಲುಗೈ ಸಾಧಿಸಿದೆ. ಸಚಿವರಾದ ಪರಮೇಶ್ವರ್ ಮತ್ತು ರಾಜಣ್ಣ ತಮ್ಮ ಬೆಂಬಲಿಗರಾದ ಪಾವಗಡ ಶಾಸಕ ವೆಂಕಟೇಶ್‌ರನ್ನು (H Venkatesh) ತುಮುಲ್ ಅಧ್ಯಕ್ಷರನ್ನಾಗಿಸಿದ್ದಾರೆ. ಇದೇ ಮೊದಲ ಬಾರಿಗೆ ನಾಮನಿರ್ದೇಶಿತ ಸದಸ್ಯರನ್ನು ಅಧ್ಯಕ್ಷರನ್ನಾಗಿ ಸರ್ಕಾರ ನೇಮಕ ಮಾಡಿದೆ.

    ಈ ಬೆಳವಣಿಗೆಯಿಂದ ಪತ್ನಿಯನ್ನು ತುಮುಲ್ ಅಧ್ಯಕ್ಷರನ್ನಾಗಿ ಮಾಡಲು ಮುಂದಾಗಿದ್ದ ಗುಬ್ಬಿ ಶಾಸಕ ಶ್ರೀನಿವಾಸ್‌ರನ್ನು (Gubbi Srinivas) ಕೆರಳಿಸಿದೆ. ಸಚಿವ ರಾಜಣ್ಣ ಮತ್ತು ಪರಮೇಶ್ವರ್ ವಿರುದ್ಧ ಶ್ರೀನಿವಾಸ್ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರೆ. ಇಬ್ಬರು ಸೇರಿಕೊಂಡು ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಸಚಿವರ ವರ್ತನೆ ಬಗ್ಗೆ ಸಿಎಂ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಹುಟ್ಟಿನಿಂದ ಸಿಗುವ ಪೌರತ್ವ ರದ್ದು – ಅಮೆರಿಕದಲ್ಲಿ ಹೆಚ್ಚಾಯ್ತು ಭಾರತೀಯ ಗರ್ಭಿಣಿಯರ ಸಿಸೇರಿಯನ್‌ ಹೆರಿಗೆ ಬೇಡಿಕೆ

    ಆದರೆ ಇದಕ್ಕೆಲ್ಲಾ ರಾಜಣ್ಣ ಡೋಂಟ್ ಕೇರ್ ಎಂದಿದ್ದಾರೆ. ಪ್ರಕರಣಕ್ಕೆ ದಲಿತ ಟ್ವಿಸ್ಟ್ ಕೊಟ್ಟಿದ್ದಾರೆ. ಪರಮೇಶ್ವರ್ ನಂಗೇನು ಗೊತ್ತಿಲ್ಲಪ್ಪ ಎಂದು ಜಾರಿಕೊಂಡಿದ್ದಾರೆ. ಗುಬ್ಬಿ ಶ್ರೀನಿವಾಸ್‌ಗೆ ಅನ್ಯಾಯ ಆಗಿದೆ ಪಾಪ ಎಂದು ಬಿಜೆಪಿ ಶಾಸಕ ಸುರೇಶ್‌ಗೌಡ ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ದಾಂಪತ್ಯಕ್ಕೆ ಅಂತ್ಯವಾಡಲು ಡಿವೋರ್ಸ್‌ ಮೊರೆ; ಕೇಸ್ ಕೋರ್ಟ್‌ನಲ್ಲಿರುವಾಗ್ಲೇ ಹೆಂಡ್ತಿ ಮನವೊಲಿಸಲು ಬಂದು ಸುಟ್ಟು ಕರಕಲು

  • ಹೋಟೆಲ್ ನೆಲಸಮ; ವೆಂಕಟೇಶ್, ರಾಣಾ ದಗ್ಗುಬಾಟಿ ಮೇಲೆ ಬಿತ್ತು ಎಫ್‌ಐಆರ್

    ಹೋಟೆಲ್ ನೆಲಸಮ; ವೆಂಕಟೇಶ್, ರಾಣಾ ದಗ್ಗುಬಾಟಿ ಮೇಲೆ ಬಿತ್ತು ಎಫ್‌ಐಆರ್

    ಟಾಲಿವುಡ್ ನಟರಾದ ವೆಂಕಟೇಶ್, ರಾಣಾ ದಗ್ಗುಬಾಟಿಗೆ (Rana Daggubati) ಸಂಕಷ್ಟ ಎದುರಾಗಿದೆ. ಕೋರ್ಟ್ ತಡೆಯಾಜ್ಞೆ ಇದ್ದರೂ ಕೂಡ ಆದೇಶ ಮೀರಿ ಡೆಕ್ಕನ್ ಕಿಚನ್ ಹೋಟೆಲ್ ನೆಲಸಮ ಮಾಡಿದ್ದಕ್ಕೆ ವೆಂಕಟೇಶ್ ಮತ್ತು ರಾಣಾ ಮೇಲೆ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ:ರಮ್ಯಾಗೆ ಮದುವೆಯ ಆಮಂತ್ರಣ ನೀಡಿದ ಡಾಲಿ

    ಆಸ್ತಿ ವಿವಾದ ಪ್ರಕರಣದಲ್ಲಿ ಹೈದರಾಬಾದ್‌ನ ಫಿಲ್ಮ್ ಸಿಟಿಯಲ್ಲಿನ ಡೆಕ್ಕನ್ ಕಿಚನ್ ಹೋಟೆಲ್‌ಗೆ ಕೋರ್ಟ್‌ನಿಂದ ತಡೆಯಾಜ್ಞೆ ನೀಡಲಾಗಿತ್ತು. ಹೀಗಿದ್ದರೂ ಕೂಡ ಹೋಟೆಲ್ ಅನ್ನು ನೆಲಸಮ ಮಾಡಿದ ಹಿನ್ನೆಲೆ ನಟ ವೆಂಕಟೇಶ್ (Venkatesh) ಎ1, ರಾಣಾ ದಗ್ಗುಬಾಟಿ ಎ2, ಅಭಿರಾಮ್ ದಗ್ಗುಬಾಟಿ ಎ3, ಸುರೇಶ್ ಬಾಬು ಎ4 ಆರೋಪಿಗಳು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ನಂದಕುಮಾರ್ ದೂರಿನನ್ವಯ ವೆಂಕಟೇಶ್, ರಾಣಾ ದಗ್ಗುಬಾಟಿ ಮೇಲೆ ಫಿಲ್ಮ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ರಾಣಾ ಕುಟುಂಬ ಮತ್ತು ನಂದಕುಮಾರ್ ಎಂಬವರ ಮಧ್ಯೆ ಈ ಹೋಟೆಲ್ ವಿಚಾರವಾಗಿ ವಿವಾದವಿತ್ತು. ಈ ಬಗ್ಗೆ ನಾಂಪಲ್ಲಿಯ ಸಿಟಿ ಕೋರ್ಟ್‌ಗೆ ನಂದಕುಮಾರ್ ಮೊರೆ ಹೋಗಿದ್ದರು. ಈ ಹಿನ್ನೆಲೆ ಡೆಕ್ಕನ್ ಕಿಚನ್‌ಗೆ ತಡೆಯಾಜ್ಞೆ ನೀಡಲಾಗಿತ್ತು. ಕೋರ್ಟ್ ಆದೇಶವನ್ನು ಲೆಕ್ಕಿಸದೇ ಹೋಟೆಲ್ ಅನ್ನು ತೆರವು ಮಾಡಲಾಗಿದೆ.

  • ಹಾಲಿನ ಪ್ರೋತ್ಸಾಹ ಧನ ಸದ್ಯಕ್ಕೆ ಹೆಚ್ಚಳ ಇಲ್ಲ: ವೆಂಕಟೇಶ್‌

    ಹಾಲಿನ ಪ್ರೋತ್ಸಾಹ ಧನ ಸದ್ಯಕ್ಕೆ ಹೆಚ್ಚಳ ಇಲ್ಲ: ವೆಂಕಟೇಶ್‌

    ಬೆಳಗಾವಿ: ಹಾಲಿನ ಪ್ರೋತ್ಸಾಹ ಧನ (Incentive) ಸದ್ಯಕ್ಕೆ ಹೆಚ್ಚಳ ಮಾಡುವುದಿಲ್ಲ ಎಂದು ಪಶು ಸಂಗೋಪನಾ ಸಚಿವ ಕೆ ವೆಂಕಟೇಶ್‌ (Venkatesh) ತಿಳಿಸಿದ್ದಾರೆ.

    ವಿಧಾನ ಪರಿಷತ್ ಕಲಾಪ ಶೂನ್ಯ ವೇಳೆಯಲ್ಲಿ ಜೆಡಿಎಸ್ ಮಂಜೇಗೌಡ ವಿಷಯ ಪ್ರಸ್ತಾಪ ಮಾಡಿದರು. ಇದಕ್ಕೆ ಉತ್ತರ ನೀಡಿದ ಸಚಿವರು, ಸದ್ಯಕ್ಕೆ ಹಾಲಿನ ಪ್ರೊತ್ಸಾಹ ಧನ ಹೆಚ್ಚಳ ಮಾಡಲು ಸಾಧ್ಯವಿಲ್ಲ. ನಮ್ಮ ಪ್ರಣಾಳಿಕೆಯಲ್ಲಿ ಹಾಲಿನ ಪ್ರೊತ್ಸಾಹ ಧನ ಹೆಚ್ಚಳ ಮಾಡುವ ಬಗ್ಗೆ ಹೇಳಿದ್ದೇವೆ. ನಮಗೆ ಇನ್ನು ಸಮಯ ಇದೆ. ಹೀಗಾಗಿ ಮುಂದೆ ಹೆಚ್ಚಳದ ಬಗ್ಗೆ ನೋಡುತ್ತೇವೆ ಎಂದರು. ಇದನ್ನೂ ಓದಿ: ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ – ಕವಲಗಾ ಪಿಡಿಒ ಅಮಾನತು

    ಹಾಲಿನ ಪ್ರೊತ್ಸಾಹ ಧನ ನಮ್ಮ ಸರ್ಕಾರದ ಅವಧಿಯದ್ದು ಬಾಕಿ ಇಲ್ಲ.ನಮ್ಮ ಸರ್ಕಾರದಲ್ಲಿ 2023-24ನೇ ಸಾಲಿನಲ್ಲಿ 1,300 ಕೋಟಿ ರೂ. ಪ್ರೊತ್ಸಾಹ ಧನ ಘೋಷಣೆ ಮಾಡಿದ್ದೇವೆ. ಈಗಾಗಲೇ 1,245 ಕೋಟಿ ರೂ. ಬಿಡುಗಡೆ ಆಗಿದೆ.ಬಾಕಿ ಹಣ ಆದಷ್ಟು ಬೇಗ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.

    700 ಕೋಟಿ ರೂ. ಬಾಕಿ ಇರುವುದು ಬಿಜೆಪಿ‌ ಅವಧಿಯದ್ದು. ಬಿಜೆಪಿ ಸರ್ಕಾರ ಹಣ ಬಿಡುಗಡೆ ಮಾಡಿರಲಿಲ್ಲ. ಸಿಎಂ ಅವರಿಗೆ ಬಾಕಿ ಹಣ ಬಿಡುಗಡೆ ಮಾಡುವ ಬಗ್ಗೆ ಮನವಿ ಮಾಡಲಾಗಿದೆ. ಆದಷ್ಟು ಬೇಗ ಬಿಜೆಪಿ ಅವಧಿಯಲ್ಲಿ ಬಾಕಿ ಇದ್ದ ಹಾಲಿನ ಪ್ರೊತ್ಸಾಹ ಧನವನ್ನು ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.

     

  • ಮೈಮೂಲ್‍ನಲ್ಲಿ ಹಿಡಿತಕ್ಕೆ ಸಿಎಂ ಯತ್ನನಾ..?- ಜಿಟಿಡಿ ಆಪ್ತ ಪ್ರಸನ್ನ ಕೆಳಗಿಳಿಸಲು ಸ್ಕೆಚ್

    ಮೈಮೂಲ್‍ನಲ್ಲಿ ಹಿಡಿತಕ್ಕೆ ಸಿಎಂ ಯತ್ನನಾ..?- ಜಿಟಿಡಿ ಆಪ್ತ ಪ್ರಸನ್ನ ಕೆಳಗಿಳಿಸಲು ಸ್ಕೆಚ್

    – ಸಚಿವ ವೆಂಕಟೇಶ್ ಮೂಲಕ ಬೆದರಿಕೆ ಆರೋಪ

    ಮೈಸೂರು: ಸಹಕಾರ ಕ್ಷೇತ್ರದ ಹಿಡಿತ ಪಡೆಯಲು ಸಿಎಂ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ತವರು ಜಿಲ್ಲೆಯಿಂದಲೇ ಕಾಂಗ್ರೆಸ್ ನಾಯಕರು ಸಹಕಾರ ಕ್ಷೇತ್ರದ ಆಪರೇಷನ್ ಶುರುಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

    ಡಿಸೆಂಬರ್ ನಲ್ಲಿ ನಡೆಯಬೇಕಿದ್ದ ಎಂಡಿಸಿಸಿ ಬ್ಯಾಂಕ್ (MDCC Bank) ಚುನಾವಣೆಯನ್ನು ರಾಜ್ಯ ಸರ್ಕಾರ ಮುಂದೂಡಿತ್ತು. ಅಲ್ಲದೇ ಜಿ.ಟಿ ದೇವೇಗೌಡ (GT Devegowda) ಮಗ, ಶಾಸಕ ಹರೀಶ್ ಗೌಡನನ್ನು ಅಪೇಕ್ಸ್ ಬ್ಯಾಂಕ್ ಉಪಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದೂ ಆಯ್ತು. ಈಗ ಮೈಮೂಲ್ ಸರದಿಯಾಗಿದೆ.

    ಸಹಕಾರ ಕ್ಷೇತ್ರದಲ್ಲಿ ಜಿಟಿ.ದೇವೇಗೌಡರ ಪಾರುಪತ್ಯ ಮುರಿಯಲು ಶತ ಪ್ರಯತ್ನ ನಡೆಸಲಾಗುತ್ತಿದೆ. 15 ಸದಸ್ಯರ ಪೈಕಿ 12 ಸದಸ್ಯ ಬಲದೊಂದಿಗೆ ಮೈಮೂಲ್ ಅಧ್ಯಕ್ಷ ಆಗಿರುವ ಪಿ.ಎಂ.ಪ್ರಸನ್ನ ಅವರು ಜಿಟಿಡಿ ಆಪ್ತ ಮಾಜಿ ಶಾಸಕ ಕೆ.ಮಹದೇವ್ ಪುತ್ರ. ಈ ಕಾರಣಕ್ಕೆ ಪ್ರಸನ್ನ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಯತ್ನಿಸಲಾಗುತ್ತಿದೆ ಎನ್ನಲಾಗಿದೆ.

    ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್ ಮೂಲಕ ಆಪರೇಷನ್ ನಡೆಯುತ್ತಿದ್ದು, ವಾಸಸ್ಥಳ ದೃಢೀಕರಣ ವಿಚಾರವಾಗಿಯೇ ಹೆಚ್ಚು ಬಾರಿ ನೋಟೀಸ್ ಕೊಟ್ಟು ಕಿರುಕುಳ ನೀಡಲಾಗುತ್ತದೆ. ಮೈಮೂಲ್ ಇತರ ಸದಸ್ಯರನ್ನು ಬೆದರಿಸುವ ಮೂಲಕ ಪ್ರಸನ್ನ ಮೇಲೆ ಒತ್ತಡ ಹೇರಲಾಗುತ್ತಿದೆ. ಈ ಮೂಲಕ ಸದ್ಯ ಸಚಿವ ವೆಂಕಟೇಶ್ ವಿರುದ್ಧ ದ್ವೇಷ ರಾಜಕಾರಣದ ಗಂಭೀರ ಆರೋಪ ಕೇಳಿಬಂದಿದೆ.

  • ರಾಮನನ್ನು ಬಿಜೆಪಿ ದೊಡ್ಡ ಅಸ್ತ್ರ ಮಾಡ್ಕೊಂಡು ಜನರ ಭಾವನೆ ಕೆರಳಿಸ್ತಿದೆ: ವೆಂಕಟೇಶ್

    ರಾಮನನ್ನು ಬಿಜೆಪಿ ದೊಡ್ಡ ಅಸ್ತ್ರ ಮಾಡ್ಕೊಂಡು ಜನರ ಭಾವನೆ ಕೆರಳಿಸ್ತಿದೆ: ವೆಂಕಟೇಶ್

    ಚಾಮರಾಜನಗರ: ರಾಮನನ್ನು ಬಿಜೆಪಿಯವರು (BJP) ದೊಡ್ಡ ಅಸ್ತ್ರ ಮಾಡಿಕೊಂಡು ಜನರ ಭಾವನೆ ಕೆರಳಿಸುತ್ತಿದ್ದಾರೆ ಎಂದು ರೇಷ್ಮೆ ಹಾಗೂ ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ (K. Venkatesh) ಆರೋಪಿಸಿದರು.

    ಚಾಮರಾಜನಗರ (Chamarajanagar) ಜಿಲ್ಲೆಯ ಮಹದೇಶ್ವರ ಬೆಟ್ಟದಲ್ಲಿ ಮಾತನಾಡಿದ ಅವರು, ರಾಮನ ಮೇಲೆ ನಮ್ಮ ಅಭ್ಯಂತರವಿಲ್ಲ.ನಮ್ಮ ಅಭ್ಯಂತರ ಇರೋದು ಬಿಜೆಪಿ ನಡವಳಿಕೆ ಮೇಲೆ. ರಾಮಮಂದಿರ ನಿರ್ಮಾಣದ ಬಗ್ಗೆ ನಮ್ಮ ತಕರಾರಿಲ್ಲ, ಆದರೆ ರಾಮ ನಮ್ಮವನೇ ಅಂತಾ ಬಿಜೆಪಿಯವರು ಹೇಳುವ ವಿಚಾರದಲ್ಲಿ ನಮ್ಮ ತಕರಾರಿದೆ, ಆಕ್ರೋಶ ಇದೆ ಎಂದರು.

    ಎಲ್ಲರಿಗೂ ಬೇಕಾದವನು ರಾಮ, ಹನುಮಂತ, ಸೀತೆಯನ್ನು ಎಲ್ಲರೂ ಪೂಜೆ ಮಾಡ್ತಾರೆ. ಅದರೆ ಬಿಜೆಪಿಯವರು ರಾಮ ತಮಗೆ ಸೇರಿದವನೆಂದು ಪ್ರತಿಬಿಂಬಿಸುತ್ತಿದ್ದಾರೆ. ಇದು ಸರಿಯಾದ ವರ್ತನೆಯಲ್ಲ. ಆ ದೃಷ್ಟಿಯಿಂದ ಸಿದ್ದರಾಮಯ್ಯ ನಮ್ಮ ನಾಯಕರು. ಆದ್ದರಿಂದ ರಾಮ ನಮ್ಮಲ್ಲಿ ಇದ್ದಾರೆಂದು ಮಾಜಿ ಸಚಿವ ಆಂಜನೇಯ ಹೇಳಿದ್ದಾರಷ್ಟೇ. ರಾಮನನ್ನು ತುಚ್ಛೀಕರಿಸುವ ರೀತಿ ಅವರು ಹೇಳಿಲ್ಲ ಎಂದು ಅವರು ಮಾಜಿ ಸಚಿವ ಆಂಜನೇಯ ಹೇಳಿಕೆ ಸಮರ್ಥಿಸಿಕೊಂಡರು. ಇದನ್ನೂ ಓದಿ: ನಿಮಗೆ ತಾಕತ್ ಇದ್ದರೆ ಕರಸೇವಕರನ್ನು ಬಂಧಿಸಿ: ಸಿಎಂ ವಿರುದ್ಧ ಸುನೀಲ್ ಕುಮಾರ್ ಕಿಡಿ

    ರಾಮಮಂದಿರ (Ram Mandir) ನಮ್ಮದೇ ಎಂದು ಬಿಜೆಪಿ ಬಿಂಬಿಸಿಕೊಳ್ಳುವುದು ಬೇಸರದ ಸಂಗತಿ. ಅಯೋಧ್ಯೆ ವಿಚಾರ ಬಿಟ್ಟು ಇವರಿಗೆ ಬೇರೆ ಏನೂ ಇಲ್ಲ. ಈ ದೇಶದ ಸಮಸ್ಯೆ ಬಗ್ಗೆ ಯಾರೂ ಮಾತಾಡ್ತಿಲ್ಲ. ಕುಡಿಯುವ ನೀರು, ಮನೆಯಿಲ್ಲದವರು ಈ ದೇಶದಲ್ಲಿ ಎಷ್ಟೋ ಜನರಿದ್ದಾರೆ. ಮೋದಿ ಅವರಿಗೆ ಇದೆಲ್ಲಾ ಏನೂ ಗೊತ್ತಾಗಲ್ಲ. ವರ್ಷದಲ್ಲಿ ಆರು ತಿಂಗಳು ಫಾರಿನ್ ಗೆ ಸುತ್ತುತ್ತಾರೆ. ಎಲ್ಲೋ ಒಂದು ಕಡೆ ಬಂದು ಭಾಷಣ ಮಾಡಿ ಹೋಗ್ತಾರೆ. ಬಿಹಾರ, ಮಧ್ಯಪ್ರದೇಶ, ಯುಪಿಯ ಹಳ್ಳಿಗಳಿಗೆ ಹೋಗಿ ನೋಡಿದ್ರೆ ಜನರ ಪರಿಸ್ಥಿತಿ ತಿಳಿಯುತ್ತೆ ಎಂದು ಸಚಿವ ಕೆ ವೆಂಕಟೇಶ್ ಹೇಳಿದರು.

  • ದಾರಿಯುದ್ದಕ್ಕೂ ಮಾತಾಡ್ತಲೇ ಇದ್ದ, ನಾನು ಬದುಕಲ್ಲ ಎಂದು ಕೂಗಿಕೊಳ್ತಿದ್ದ- ಮೃತ ವೆಂಕಟೇಶ್ ಸ್ನೇಹಿತ ಭಾವುಕ

    ದಾರಿಯುದ್ದಕ್ಕೂ ಮಾತಾಡ್ತಲೇ ಇದ್ದ, ನಾನು ಬದುಕಲ್ಲ ಎಂದು ಕೂಗಿಕೊಳ್ತಿದ್ದ- ಮೃತ ವೆಂಕಟೇಶ್ ಸ್ನೇಹಿತ ಭಾವುಕ

    ಬೆಂಗಳೂರು: ಪಟಾಕಿ ದುರಂತದಿಂದ ಗಾಯಗೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿಯುದ್ದಕ್ಕೂ ಮಾತಾಡ್ತಲೇ ಇದ್ದ, ನಾನು ಬದುಕಲ್ಲ ಎಂದು ಕೂಗಿಕೊಳ್ಳುತ್ತಿದ್ದ ಎಂದು ಮೃತ ವೆಂಕಟೇಶ್ (Venkatesh) ಗೆಳೆಯ ಮುರಳಿ ಭಾವುಕರಾಗಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಪಟಾಕಿ ಅಂಗಡಿಗೆ ಬೆಂಕಿ ಹೊರಗಿನಿಂದ ಬಂದಿದ್ದಲ್ಲ. ಗೋಡಾನ್ ಒಳಗಿನಿಂದಲೇ ಬೆಂಕಿ ಹೊತ್ತಿಕೊಂಡಿತ್ತು. ಕ್ಷಣಾರ್ಧದಲ್ಲಿ ಸಂಪೂರ್ಣ ಗೋಡಾನ್ ಧಗಧಗ ಹೊತ್ತಿ ಉರಿಯಿತು ಎಂದು ನಡೆದ ಘಟನೆ ವಿವರಿಸಿದರು. ಇದನ್ನೂ ಓದಿ: ಅತ್ತಿಬೆಲೆ ಪಟಾಕಿ ದುರಂತದಲ್ಲಿ ಗಾಯಗೊಂಡಿದ್ದ ಯುವಕ ದುರ್ಮರಣ- ಸಾವಿನ ಸಂಖ್ಯೆ 16ಕ್ಕೆ ಏರಿಕೆ

    ಪಟಾಕಿ ಖರೀದಿಗೆ (Attibele Fire Crackers Tragedy) ನಾನೂ, ವೆಂಕಟೇಶ್ ಹೋಗಿದ್ದೆವು. ಬೆಂಕಿ ಕಂಡ ಕೂಡಲೇ ಹೊರಗೆ ಓಡಿ ಬಂದ್ವಿ. ನಾನು ಎಡಗಡೆ ತಿರುವು ತೆಗೆದುಕೊಂಡೆ, ವೆಂಕಟೇಶ್ ಬಲಗಡೆ ಓಡಿದ. ನಾನು ಬೆಂಕಿಯಿಂದ ಬಚಾವ್ ಆದರೆ, ಆದರೆ ಸ್ನೇಹಿತ ಗಾಯಗೊಂಡ. ಆತನ ಬೆನ್ನಿನ ಭಾಗ ಹೆಚ್ಚಾಗಿ ಸುಟ್ಟಿತ್ತು. ಕೂಡಲೇ ಅವನನ್ನ ಆಸ್ಪತ್ರೆಗೆ ದಾಖಲು ಮಾಡಿದೆ. ದಾರಿಯುದ್ದಕ್ಕೂ ಮಾತನಾಡುತ್ತಲೇ ಇದ್ದ, ನಾನು ಬದುಕಲ್ಲ ಎಂದು ಕೂಗಿಕೊಳ್ಳುತ್ತಿದ್ದ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಭಯೋತ್ಪಾದಕರು ಮಕ್ಕಳ ಶಿರಚ್ಛೇದನ ಮಾಡೋ ಚಿತ್ರಗಳನ್ನು ಯಾವತ್ತೂ ನೋಡುತ್ತೇನೆ ಎಂದುಕೊಂಡಿರಲಿಲ್ಲ: ಆಘಾತ ವ್ಯಕ್ತಪಡಿಸಿದ ಬೈಡನ್

    ಗೆಳೆಯನಿಗೆ ಒಳ್ಳೆಯ ಚಿಕಿತ್ಸೆ ನೀಡುತ್ತಿದ್ದರೆ ಬದುಕುತ್ತಿದ್ದ. ಆದರೆ ಸರ್ಕಾರ ನಿರ್ಲಕ್ಷ್ಯ ಮಾಡಿದೆ ಎಂದು ಮುರಳಿ ಗಂಭೀರ ಆರೋಪ ಮಾಡಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅತ್ತಿಬೆಲೆ ಪಟಾಕಿ ದುರಂತದಲ್ಲಿ ಗಾಯಗೊಂಡಿದ್ದ ಯುವಕ ದುರ್ಮರಣ- ಸಾವಿನ ಸಂಖ್ಯೆ 16ಕ್ಕೆ ಏರಿಕೆ

    ಅತ್ತಿಬೆಲೆ ಪಟಾಕಿ ದುರಂತದಲ್ಲಿ ಗಾಯಗೊಂಡಿದ್ದ ಯುವಕ ದುರ್ಮರಣ- ಸಾವಿನ ಸಂಖ್ಯೆ 16ಕ್ಕೆ ಏರಿಕೆ

    ಬೆಂಗಳೂರು: ಅತ್ತಿಬೆಲೆ ಪಟಾಕಿ ದುರಂತದಲ್ಲಿ (Attibele Fire CrackersTragedy) ಗಾಗಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಮೃತಪಟ್ಟಿದ್ದಾರೆ. ಈ ಮೂಲಕ ದರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.

    ಮೃತನನ್ನು ವೆಂಕಟೇಶ್ ಎಂದು ಗುರುತಿಸಲಾಗಿದೆ. ಇವರು ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು (ಗುರುವಾರ) ಬೆಳಗ್ಗೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

    ಇನ್ನೇನು ದೀಪಾವಳಿ ಹತ್ತಿರ ಬರುತ್ತಿದೆ. ಈ ಹಿನ್ನೆಲೆಯಲ್ಲಿ ವೆಂಕಟೇಶ್ ಹಾಗೂ ಈತನ ಸ್ನೇಹಿತ ಪಟಾಕಿ ಖರೀದಿಗೆ ತೆರಳಿದ್ದರು. ಅದೇ ಸಂದರ್ಭದಲ್ಲಿ ದುರಂತ ಸಂಭವಿಸಿದೆ. ಘಟನೆಯಲ್ಲಿ ವೆಂಕಟೇಶ್ ಸ್ನೇಹಿತ ಪಾರಾಗಿದ್ದಾರೆ. ಆದರೆ ವೆಂಕಟೇಶ್ ಮಾತ್ರ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ್ದರು. ಇದನ್ನೂ ಓದಿ: ಅತ್ತಿಬೆಲೆ ಪಟಾಕಿ ದುರಂತ- ನಾಲ್ವರು ಅಧಿಕಾರಿಗಳ ಅಮಾನತು

    ಬೆನ್ನು, ತಲೆ, ಕೈ ಕಾಲುಗಳುಗಳಿಗೆ ಬೆಂಕಿ ಗಂಭೀರಗಾಯಗೊಂಡಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

    ಬಾಡಿ ಬಿಲ್ಡರ್ ಆಗಿದ್ದ ವೆಂಕಟೇಶ್ ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಶು ಸಂಗೋಪನಾ ಸಚಿವರನ್ನು ಮೆಂಟಲ್ ಆಸ್ಪತ್ರೆ ದಾಖಲಿಸಿ ಚೆಕ್ ಮಾಡಿಸ್ಬೇಕು: ಪ್ರಭು ಚವ್ಹಾಣ್ ಕಿಡಿ

    ಪಶು ಸಂಗೋಪನಾ ಸಚಿವರನ್ನು ಮೆಂಟಲ್ ಆಸ್ಪತ್ರೆ ದಾಖಲಿಸಿ ಚೆಕ್ ಮಾಡಿಸ್ಬೇಕು: ಪ್ರಭು ಚವ್ಹಾಣ್ ಕಿಡಿ

    ಬೀದರ್: ಸಚಿವ ಕೆ. ವೆಂಕಟೇಶ್ (K Venkatesh) ಮೆಂಟಲ್ ಆಗಿದ್ದಾರೆ. ಹೀಗಾಗಿ ಅವರನ್ನು ಮೆಂಟಲ್ ಆಸ್ಪತ್ರೆ (Mental Hospital) ದಾಖಲು ಮಾಡಿ ಚೆಕ್ ಮಾಡಿಸಬೇಕು. ಇಲ್ಲಾ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಏಕವಚನದಲ್ಲಿಯೇ ಮಾಜಿ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ (Prabhu Chauhan) ವಾಗ್ದಾಳಿ ನಡೆಸಿದರು.

    ಇತ್ತೀಚೆಗೆ ಎಮ್ಮೆ, ಕೋಣ ಕಡಿಯುತ್ತಾರೆ. ಹಾಗಾದರೆ ಗೋವುಗಳನ್ನು ಯಾಕೆ ಕಡಿಯಬಾರದು ಎಂಬ ಸಚಿವ ವೆಂಕಟೇಶ್ ನೀಡಿರುವ ವಿವಾದಾತ್ಮಕ ಹೇಳಿಕೆ ಕಾಂಗ್ರೆಸ್-ಬಿಜೆಪಿ ಜಟಾಪಟಿಗೆ ಕಾರಣವಾಗಿದೆ. ಈ ಹೇಳಿಕೆಗೆ ಪ್ರಭು ಚವ್ಹಾಣ್ ಕೆಂಡಾ ಮಂಡಲವಾಗಿದ್ದಾರೆ. ಮುಸ್ಲಿಂ ಓಲೈಕೆಗಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದು, ಗೋ ಹತ್ಯೆ ಕಾಯಿದೆ ರದ್ದು ಮಾಡಿದೆ. ರೈತರ ಜೊತೆಗೆ ಬೀದಿಗೆ ಬಂದು ಬಿಜೆಪಿ (BJP) ಉಗ್ರವಾದ ಆಂದೋಲನ ಮಾಡುತ್ತೆ ಎಂದು ಕಾಂಗ್ರೆಸ್ (Congress) ಸರ್ಕಾರಕ್ಕೆ ಚವ್ಹಾಣ್ ಎಚ್ಚರಿಕೆ ನೀಡಿದ್ದಾರೆ.

    ಈ ಹೇಳಿಕೆ ವಿರೋಧಿಸಿ ಸ್ವಾಮೀಜಿಗಳು ನನಗೆ ಫೋನ್ ಮಾಡುತ್ತಿದ್ದಾರೆ. ನೀವು ಕಸಾಯಿಖಾನೆಗೆ ಹೋಗಿ ನೋಡಿ ಗೋವಿಗೆ ಯಾವ ರೀತಿ ಅನ್ಯಾಯವಾಗುತ್ತಿದೆ ಎಂದು ಗೊತ್ತಾಗುತ್ತೆ ಎಂದು ಮಾಜಿ ಪಶುಸಂಗೋಪನಾ ಸಚಿವರು ಹಾಲಿ ಸಚಿವರ ವಿರುದ್ಧ ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಹಳಿ ತಪ್ಪಿದ್ದು ರೈಲಲ್ಲ, ಸರಕಾರ: ಮತ್ತೆ ಕೇಂದ್ರದ ವಿರುದ್ಧ ಗುಡುಗಿದ ನಟ ಕಿಶೋರ್