Tag: ವೆಂಕಟರೆಡ್ಡಿ ಮುದ್ನಾಳ

  • ಯಾದಗಿರಿ| ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ ನಿಧನ

    ಯಾದಗಿರಿ| ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ ನಿಧನ

    ಯಾದಗಿರಿ: ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ (71) ಚಿಕಿತ್ಸೆ ಫಲಕಾರಿಯಾಗದೇ ಇಂದು (ಮಂಗಳವಾರ) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

    ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವೆಂಕಟರೆಡ್ಡಿ (Venkatreddy Mudnal) ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಮೋದಿ ಜನ್ಮದಿನದಂದೇ ಜನನ – ಪುತ್ರನಿಗೆ ‘ನರೇಂದ್ರ’ ಎಂದು ಹೆಸರಿಟ್ಟ ಕೊಡಗಿನ ದಂಪತಿ

     

    ವೆಂಕಟರೆಡ್ಡಿ ಅವರು 2018ರಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಿ ಯಾದಗಿರಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಪರಾಭವಗೊಂಡಿದ್ದರು. ಇವರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಆಪ್ತರಾಗಿದ್ದು, ಯಾದಗಿರಿಯ ಪುರಸಭೆಯ ಅಧ್ಯಕ್ಷರಾಗಿದ್ದರು. ಅಲ್ಲದೇ ಅಖಿಲ ಭಾರತ ವೀರಶೈವ ಮಹಾಸಭಾದ ಉಪಾಧ್ಯಕ್ಷರಾಗಿದ್ದರು. ಇದನ್ನೂ ಓದಿ: ವಿಎಓ/ಜಿಟಿಟಿಸಿ ಪರೀಕ್ಷೆ ಹೊಸದಾಗಿ ಅರ್ಜಿ ಸಲ್ಲಿಸಲು ಸೆ.19ರಿಂದ ಅವಕಾಶ: ಕೆಇಎ

    ಮೃತರ ಪಾರ್ಥಿವ ಶರೀರವನ್ನು ಇಂದು ರಾತ್ರಿ ಯಾದಗಿರಿಗೆ ತರಲಾಗುತ್ತದೆ. ನಾಳೆ (ಬುಧವಾರ) ಸಂಜೆ ಯಾದಗಿರಿ ತಾಲೂಕಿನಲ್ಲಿರುವ ಸ್ವಗ್ರಾಮದ ಜಮೀನಿನಲ್ಲಿ ವೆಂಕಟರೆಡ್ಡಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಇದನ್ನೂ ಓದಿ: ಬಿಜೆಪಿ ಶಾಸಕ ಮುನಿರತ್ನಗೆ ನ್ಯಾಯಾಂಗ ಬಂಧನ – ನಾಳೆಗೆ ಅರ್ಜಿ ವಿಚಾರಣೆ

    ವಿಜಯೇಂದ್ರ ಸಂತಾಪ:
    ಇನ್ನು ವೆಂಕಟರೆಡ್ಡಿ ಮುದ್ನಾಳ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತೀವ್ರ ಸಂತಾಪ ಸೂಚಿಸಿದ್ದಾರೆ. ನೇರನುಡಿ, ಜನಾನುರಾಗಿಯಾಗಿದ್ದ ವೆಂಕಟರೆಡ್ಡಿ ಮುದ್ನಾಳ ಅವರು ನಿಧನರಾಗಿದ್ದಾರೆ ಎಂಬ ಸುದ್ದಿ ತಿಳಿದು ತುಂಬಾ ದುಃಖವಾಗಿದೆ. ಕಲ್ಯಾಣ ಕರ್ನಾಟಕದ ಹಿರಿಯ ರಾಜಕಾರಣಿಗಳಾದ ಮುದ್ನಾಳ ಅವರು, ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಗಣನೀಯ ಸೇವೆ ಸಲ್ಲಿಸಿದವರು. ಶಾಸಕರಾಗಿ ಸಾಮಾಜಿಕ, ರಾಜಕೀಯವಾಗಿ ತಮ್ಮ ಜಿಲ್ಲೆಯ ಅಭಿವೃದ್ಧಿಗೆ ಕಾರಣಕರ್ತರು. ಅವರ ಕುಟುಂಬಸ್ಥರು ಬಂಧುಗಳು, ಹಿತೈಷಿಗಳು ಹಾಗೂ ಅಭಿಮಾನಿಗಳಿಗೆ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ. ಇದನ್ನೂ ಓದಿ: ಮಹಿಳಾ ವೈದ್ಯರಿಗೆ ನೈಟ್ ಶಿಫ್ಟ್ ತೆಗೆದು ಅಧಿಸೂಚನೆ – ಮಮತಾ ಸರ್ಕಾರಕ್ಕೆ ಸುಪ್ರೀಂ ಚಾಟಿ

  • ಗ್ರಾಮಸ್ಥರಿಗೆ ಲಸಿಕೆ ಬಗ್ಗೆ ಜಾಗೃತಿ ಮೂಡಿಸಿ ಕ್ರಿಕೆಟ್ ಕಿಟ್ ಪಡೆಯಿರಿ: ವೆಂಕಟರೆಡ್ಡಿ ಮುದ್ನಾಳ

    ಗ್ರಾಮಸ್ಥರಿಗೆ ಲಸಿಕೆ ಬಗ್ಗೆ ಜಾಗೃತಿ ಮೂಡಿಸಿ ಕ್ರಿಕೆಟ್ ಕಿಟ್ ಪಡೆಯಿರಿ: ವೆಂಕಟರೆಡ್ಡಿ ಮುದ್ನಾಳ

    ಯಾದಗಿರಿ: ನೀವೆಲ್ಲರೂ ಕೋವಿಡ್ ಲಸಿಕೆ ಪಡೆದು ಬಳಿಕ ಅದರ ಬಗ್ಗೆ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಬೇಕು. ಈ ಕೆಲಸ ಮಾಡಿದರೆ ನಾನು ನಿಮಗೆ ಕ್ರಿಕೆಟ್ ಕಿಟ್ ನೀಡುತ್ತೆನೆಂದು ಯುವಕರಿಗೆ ಶಾಸಕ ವೆಂಕಟರೆಡ್ಡಿ ಮುದ್ನಾಳ ಹೇಳಿದ್ದಾರೆ.

    ಜಿಲ್ಲೆಯಲ್ಲಿ ಲಸಿಕೆ ಪಡೆಯಲು ಜನ ಹಿಂದೇಟು ಹಾಕುತ್ತಿದ್ದು, ಜನರ ಮನವೊಲಿಸಲು ಶಾಸಕರು ವಿಶೇಷ ರೌಂಡ್ಸ್ ನಡೆಸುತ್ತಿದ್ದಾರೆ. ಹೀಗಾಗಿ ಜಿಲ್ಲೆಯ ಶಹಾಪುರ ತಾಲೂಕಿನ ಹುರಸಗುಂಡಗಿ ಗ್ರಾಮದಲ್ಲಿ ಜಾಗೃತಿಗಾಗಿ ತೆರಳಿದ್ದರು.

    ಈ ವೇಳೆ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವಕರನ್ನು ಕಂಡು ಅವರ ಬಳಿಗೆ ತೆರಳಿದ ಶಾಸಕರು, ಈ ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿ ಇರಬೇಕು ಮೊದಲು ಆರೋಗ್ಯ ಮುಖ್ಯ ಅಂತ ಬುದ್ಧಿಮಾತು ಹೇಳಿದ್ದಾರೆ. ಇದನ್ನೂ ಓದಿ: ಮುಂಗಾರುಮಳೆ-2 ಚಿತ್ರದ ನಟಿಯ ತಂದೆ ಅರೆಸ್ಟ್..!

    ಅದೇ ರೀತಿ ಮಾಸ್ಕ್ ಹಾಕದೇ ಕ್ರಿಕೆಟ್ ಆಡುತ್ತಿದ್ದವರಿಗೆ ಯುವಕರಿಗೆ ಮಾಸ್ಕ್ ನೀಡಿ, ಲಸಿಕೆ ಬಗ್ಗೆ ಜಾಗೃತಿ ಮೂಡಿಸಿದರು. ನೀವು ನಿಮ್ಮ ಗ್ರಾಮಸ್ಥರಿಗೆ ಲಸಿಕೆ ಬಗ್ಗೆ ಜಾಗೃತಿ ಮೂಡಿಸಿದ್ರೆ ನಾನೇ ನಿಮಗೆ ಕ್ರಿಕೆಟ್ ಕಿಟ್ ನೀಡುತ್ತೆನೆಂದು ಯುವಕರಿಗೆ ಉತ್ಸಾಹ ತುಂಬಿದರು.

  • ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳಗೆ ಕೊರೊನಾ ಪಾಸಿಟಿವ್

    ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳಗೆ ಕೊರೊನಾ ಪಾಸಿಟಿವ್

    -ಅಭಿಮಾನಿಗಳಿಂದ ಉರುಳು ಸೇವೆ, ಉಪವಾಸ ವೃತ

    ಯಾದಗಿರಿ: ಜಿಲ್ಲೆಯಲ್ಲಿ ಪ್ರವಾಹದ ಭೀತಿ ನಡುವೆಯೆ ಕೊರೊನಾ ಆರ್ಭಟ ಮುಂದುವರಿದಿದೆ. ಈಗ ಯಾದಗಿರಿ ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರಿಗೆ ಕೊರೊನಾ ಧೃಡಪಟ್ಟಿದ್ದು, ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

    ಆಗಸ್ಟ್ 15 ರಂದು ಧ್ವಜಾರೋಹಣ ಕಾರ್ಯಕ್ರಮ ಬಳಿಕ, ಶಾಸಕರು ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದರು. ಸದ್ಯ ವರದಿ ಬಂದಿದ್ದು ಶಾಸಕರಿಗೆ ಕೊರೊನಾ ಸೋಂಕು ತಗುಲಿರೋದು ಧೃಡಪಟ್ಟಿದೆ. ಶಾಸಕ ವೆಂಕಟರೆಡ್ಡಿ ಮುದ್ನಾಳರಿಗೆ ಕೊರೊನಾ ಪಾಸಿಟಿವ್ ಬಂದಿರುವುದು ಅಪಾರ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

    ಶಾಸಕರು ಆದಷ್ಟು ಬೇಗ ಗುಣಮುಖರಾಗಲೆಂದು ಅವರ ಅಭಿಮಾನಿಗಳು ದೇವಸ್ಥಾನಗಳಲ್ಲಿ ವಿಶೇಷ ಪೂಜೆಯ ಜೊತೆ ಉರುಳು ಸೇವೆ ಸಲ್ಲಿಸುವ ಮೂಲಕ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಯಾದಗಿರಿ ನಗರದ ಅವರ ಅಭಿಮಾನಿ ಮತ್ತು ಎಬಿವಿಪಿ ಜಿಲ್ಲಾಧ್ಯಕ್ಷ ಭೀಮು ಪೂಜಾರಿ ಎಂಬ ಯುವಕ ಐದು ದಿನ ಉಪವಾಸ ಸಹ ಕೈಗೊಂಡಿದ್ದಾರೆ.

  • ಅಧಿಕಾರಿಗಳಿಗೆ ಶಾಸಕರಿಂದ ಕೃಷಿ ಪಾಠ

    ಅಧಿಕಾರಿಗಳಿಗೆ ಶಾಸಕರಿಂದ ಕೃಷಿ ಪಾಠ

    ಯಾದಗಿರಿ: ಬೀಜ ಉತ್ಪಾದನೆಯಲ್ಲಿ ನಿರ್ಲಕ್ಷ್ಯ ತೋರಿದ ಕೃಷಿ ಅಧಿಕಾರಿಗಳನ್ನು ಜಮೀನಿಗೆ ಕರೆದುಕೊಂಡು ಹೋಗಿ, ಯಾದಗಿರಿ ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ನಾಳ ವ್ಯವಸಾಯದ ಬಗ್ಗೆ ಭರ್ಜರಿ ಪಾಠ ಮಾಡಿದ್ದಾರೆ.

    ಯಾದಗಿರಿ ನಗರದ ಹೊರ ವಲಯದಲ್ಲಿ ಸುಮಾರು 35 ಎಕರೆ ಸರ್ಕಾರಿ ಭೂಮಿದ್ದು, ಇದರಲ್ಲಿ ಬೀಜ ಉತ್ಪಾದನಾ ಕೇಂದ್ರವಿದೆ. ಬೀಜ ಉತ್ಪಾದನೆಗಾಗಿ ಜಿಲ್ಲಾಡಳಿತದಿಂದ ವರ್ಷ ಲಕ್ಷ-ಲಕ್ಷ ಅನುದಾನ ಸಹ ನೀಡಲಾಗುತ್ತದೆ. ಹೀಗಿದ್ದರೂ ಬೀಜ ಉತ್ಪಾದನೆ ಮಾಡಲು ಅಧಿಕಾರಿಗಳ ನಿರ್ಲಕ್ಷ್ಯ ತೋರಿದ್ದಾರೆ.

    ಅಲ್ಲದೆ ಸಾಕಷ್ಟು ಜಮೀನು ಇದ್ದರು ಕೇವಲ ಕಾಟಾಚಾರಕ್ಕೆ ಬೆಳೆ ಬೆಳೆಯುತ್ತಿದ್ದಾರೆ. ಅಧಿಕಾರಗಳ ಬೇಜಾವಾಬ್ದಾರಿಗೆ ಬೇಸತ್ತ ಶಾಸಕ ಮುದ್ನಾಳ, ಜಿಲ್ಲಾ ಕೃಷಿ ಮುಖ್ಯಾಧಿಕಾರಿ ದೇವಿಕಾ ಮತ್ತು ಇಲಾಖೆ ಪ್ರಮುಖ ಅಧಿಕಾರಿಗಳನ್ನು ಜಮೀನಿಗೆ ಕರೆದುಕೊಂಡು ಹೋಗಿ, ಬೆಳೆಯನ್ನು ಹೇಗೆ ಬೆಳೆಯಬೇಕು, ಹೊಲವನ್ನು ಹೇಗೆ ಉಳುಮೆ ಮಾಡಬೇಕು ಎಂದು ಹೇಳಿಕೊಟ್ಟು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.