Tag: ವೃದ್ಧ ಸಾವು

  • ಸತತ ಮಳೆಯಿಂದಾಗಿ ಗೋಡೆ ಕುಸಿದು ವೃದ್ಧ ಸಾವು

    ಸತತ ಮಳೆಯಿಂದಾಗಿ ಗೋಡೆ ಕುಸಿದು ವೃದ್ಧ ಸಾವು

    ದಾವಣಗೆರೆ: ಸತತ ಮಳೆಗೆ ಗೋಡೆ ಕುಸಿದು ವೃದ್ಧ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚನ್ನಗಿರಿ (Channagiri) ತಾಲೂಕಿನ ಸಂತೆಬೆನ್ನೂರಿನಲ್ಲಿ (Santhebennur) ನಡೆದಿದೆ.

    ಮೃತ ವೃದ್ಧನನ್ನು ಸಂತೆಬೆನ್ನೂರು ನಿವಾಸಿ ಕುಳಗಟ್ಟೆ ಬಸವರಾಜಪ್ಪ (81) ಎಂದು ಗುರುತಿಸಲಾಗಿದೆ. ಪುಷ್ಕರಣಿ ಬೀದಿಯಲ್ಲಿದ್ದ ಮನೆಯಲ್ಲಿ ಗೋಡೆ ಕುಸಿದು ಸಾವನ್ನಪ್ಪಿದ್ದಾರೆ.ಇದನ್ನೂ ಓದಿ: ಇನ್ನೂ ರಿಟ್ರೀವ್ ಆಗಿಲ್ಲ ದರ್ಶನ್, ಪವಿತ್ರಾಗೌಡ ಮೊಬೈಲ್!

    ರಾತ್ರಿ ಸತತ ಮಳೆ ಸುರಿಯುತ್ತಿದ್ದು, ಗೋಡೆ ಒಂದು ಕಡೆ ವಾಲುತ್ತಿತ್ತು. ಈ ವೇಳೆ ಮನೆಯಲ್ಲಿದ್ದ ಬಸವರಾಜಪ್ಪ, ಆತನ ಮಗ ಹಾಗೂ ಸೊಸೆ ಮನೆಯಿಂದ ಹೊರಬರಲು ಯತ್ನಿಸಿದ್ದಾರೆ. ಆತನ ಮಗ ಹಾಗೂ ಸೊಸೆ ಮನೆಯಿಂದ ಹೊರಗೆ ಬಂದಿದ್ದಾರೆ. ಆದರೆ ಮನೆಯಿಂದ ಹೊರಬರುವ ಪ್ರಯತ್ನದಲ್ಲಿದ್ದ ವೃದ್ಧ ಬಸವರಾಜಪ್ಪನ ಮೇಲೆ ಗೋಡೆ ಕುಸಿದಿದೆ. ಗೋಡೆ ಕುಸಿದು ತೀವ್ರ ಗಾಯಗೊಂಡು ಸಾವನ್ನಪ್ಪಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಚನ್ನಗಿರಿ ತಹಶೀಲ್ದಾರರಾದ ರುಕ್ಮಿಣಿಬಾಯಿ ಭೇಟಿ ನೀಡಿದ್ದು, ಮೃತರ ಕುಟುಂಬಕ್ಕೆ ಐದು ಲಕ್ಷ ರೂ. ಚೆಕ್‌ನ್ನು ಪರಿಹಾರವಾಗಿ ನೀಡಿದ್ದಾರೆ. ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: Women’s T20 World Cup; ಭಾರತ vs ಪಾಕಿಸ್ತಾನ ಫೈಟ್‌ – ಟೀಂ ಇಂಡಿಯಾಗೆ ಇಂದು ನಿರ್ಣಾಯಕ ಪಂದ್ಯ

  • ಓಮಿಕ್ರಾನ್‌ನಿಂದ ಗುಣಮುಖರಾಗಿದ್ದ ವೃದ್ಧ ಸಾವು

    ಓಮಿಕ್ರಾನ್‌ನಿಂದ ಗುಣಮುಖರಾಗಿದ್ದ ವೃದ್ಧ ಸಾವು

    ಜೈಪುರ್: ಕೊರೊನಾ ರೂಪಾಂತರಿ ಓಮಿಕ್ರಾನ್‌ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆದು ಗುಣಮುಖನಾಗಿ ಡಿಸ್ಚಾರ್ಜ್‌ ಆಗಿದ್ದ ವೃದ್ಧ ಸಾವಿಗೀಡಾಗಿರುವ ಘಟನೆ ರಾಜಸ್ಥಾನದ ಉದಯಪುರ್‌ನಲ್ಲಿ ನಡೆದಿದೆ.

    73 ವರ್ಷ ವಯಸ್ಸಿನ ವೃದ್ಧ ಓಮಿಕ್ರಾನ್‌ ಸೋಂಕಿಗೆ ಒಳಗಾಗಿದ್ದರು. ಉದಯಪುರ್‌ನ ಎಂಬಿಜಿಹೆಚ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಡಿಸ್ಚಾರ್ಜ್‌ ಆಗಿದ್ದರು. ಇದನ್ನೂ ಓದಿ: ಮಹಿಳೆಗೆ ಕೊರೊನಾ – ಚಲಿಸುತ್ತಿದ್ದ ವಿಮಾನದ ಟಾಯ್ಲೆಟ್‌ನಲ್ಲೇ 3 ಗಂಟೆ ಕ್ವಾರಂಟೈನ್‌

    ಈ ಕುರಿತು ಪ್ರತಿಕ್ರಿಯಿಸಿರುವ ಆಸ್ಪತ್ರೆಯ ವೈದ್ಯ ಸುಮನ್‌, ಡಿ.15ರಂದು ಕೋವಿಡ್‌ನಿಂದಾಗಿ ವೃದ್ಧ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಡಿ.21ರಂದು ಪರೀಕ್ಷೆಗೆ ಒಳಪಡಿಸಿದಾಗ ನೆಗೆಟಿವ್‌ ಬಂದಿತು. ಮತ್ತೆ ಡಿ.25ರಂದು ಅವರ ಮಾದರಿಯನ್ನು ಜೀನೋಮ್‌ ಸೀಕ್ವೆನ್ಸಿಂಗ್‌ ಕಳುಹಿಸಿದ್ದಾಗ ವರದಿಯಲ್ಲಿ ಓಮಿಕ್ರಾನ್‌ ದೃಢಪಟ್ಟಿತ್ತು.

    ಕೋವಿಡ್‌ ಲಸಿಕೆಯ ಎರಡು ಡೋಸ್‌ ಅನ್ನು ಅವರು ಪಡೆದುಕೊಂಡಿದ್ದರು. ಆದರೆ ಅವರು ಮಧುಮೇಹ ಮೆಲ್ಲಿಟಸ್‌, ಅಧಿಕ ರಕ್ತದೊತ್ತಡ, ಹೈಪೋಥೈರಾಯ್ಡಿಸಮ್‌ ಕಾಯಿಲೆಗಳಿಂದ ಬಳಲುತ್ತಿದ್ದರು. ಓಮಿಕ್ರಾನ್‌ನಿಂದ ಗುಣಮುಖರಾಗಿದ್ದರೂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಆಮ್ಲಜನಕ ಪ್ರಮಾಣವೂ ಕಡಿಮೆಯಾಗಿದ್ದರಿಂದ ಅವರು ಮೃತಪಟ್ಟರು ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ವಿದೇಶದಿಂದ ಬೆಂಗಳೂರಿಗೆ ಬಂದ 9 ಮಂದಿಗೆ ಕೊರೊನಾ