Tag: ವೃದ್ಧ ದಂಪತಿ

  • ಮೋದಿ ಮತ್ತೊಮ್ಮೆ ಪ್ರಧಾನಿ- ರಾಯರಿಗೆ ಚಿನ್ನದ ರಥೋತ್ಸವ ಸೇವೆ ನೀಡಿದ ವೃದ್ಧ ದಂಪತಿ!

    ಮೋದಿ ಮತ್ತೊಮ್ಮೆ ಪ್ರಧಾನಿ- ರಾಯರಿಗೆ ಚಿನ್ನದ ರಥೋತ್ಸವ ಸೇವೆ ನೀಡಿದ ವೃದ್ಧ ದಂಪತಿ!

    ರಾಯಚೂರು: ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಆಶಿಸಿ ವೃದ್ಧ ದಂಪತಿ ಮಂತ್ರಾಲಯ ರಾಘವೇಂದ್ರ ಸ್ವಾಮಿಗೆ ಮೋದಿ ಹೆಸರಿನಲ್ಲಿ ವಿಶೇಷ ಚಿನ್ನದ ರಥೋತ್ಸವ ಸೇವೆಯನ್ನ ಮಾಡಿಸಿದ್ದಾರೆ.

    ಮಂತ್ರಾಲಯ ರಾಘವೇಂದ್ರ ಮಠದಲ್ಲಿ 7 ಸಾವಿರ ರೂಪಾಯಿ ರಥೋತ್ಸವ ಶುಲ್ಕ ನೀಡಿ ಮೋದಿ ಅವರ ಹೆಸರಿನಲ್ಲಿ ರಶೀದಿ ಪಡೆದಿದ್ದಾರೆ. ಮಾರ್ಚ್ 24ರಂದು ಬೆಳಗಾವಿ ಮೂಲದ ದಂಪತಿ ರಾಯರಿಗೆ ಪೂಜೆ ಸಲ್ಲಿಸಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ರಾಯರಿಗೆ ವಿಶೇಷ ಪೂಜೆ ಸಲ್ಲಿಸಿದರೆ ಅಂದುಕೊಂಡಿದ್ದೆಲ್ಲಾ ನೆರೆವೇರುತ್ತೆ ಅನ್ನೋ ನಂಬಿಕೆಯಲ್ಲಿ ವೃದ್ಧ ದಂಪತಿ ಈ ವಿಶೇಷ ರಥೋತ್ಸವ ಸೇವೆ ಸಲ್ಲಿಸಿದ್ದಾರೆ. ಈ ದಂಪತಿ ಮೋದಿ ಮೇಲಿಟ್ಟಿರುವ ಪ್ರೀತಿ, ಅಭಿಮಾನ ಸದ್ಯ ನೆಟ್ಟಿಗರ ಮನ ಗೆದ್ದಿದೆ.

  • ಸೇನೆಗೆ ಹೋದ ಮಗ 24 ವರ್ಷದಿಂದ ನಾಪತ್ತೆ – ಪುತ್ರನ ಆಗಮನಕ್ಕಾಗಿ ಕಾದು ಕುಳಿತ ವೃದ್ಧ ದಂಪತಿ

    ಸೇನೆಗೆ ಹೋದ ಮಗ 24 ವರ್ಷದಿಂದ ನಾಪತ್ತೆ – ಪುತ್ರನ ಆಗಮನಕ್ಕಾಗಿ ಕಾದು ಕುಳಿತ ವೃದ್ಧ ದಂಪತಿ

    ಬೆಂಗಳೂರು: ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ 40 ಯೋಧರು ಹುತಾತ್ಮರಾದ್ರೆ, ಇಲ್ಲಿಯ ವೃದ್ಧ ದಂಪತಿ ಪುತ್ರ ಸೇನೆಗೆ ಅಂತಾ ಹೋದವ 24 ವರ್ಷಗಳಾದ್ರೂ ಮರಳಿ ಬಂದಿಲ್ಲ. ಇಂದು ಸಹ ಮಗ ಬರ್ತಾನೆ ಅಂತಾ ವೃದ್ಧ ದಂಪತಿ ಪುತ್ರನ ಫೋಟೋ ಹಿಡಿದು ಮನೆಯ ಮುಂದೆ ಕಾಯುತ್ತಾ ಕುಳಿತಿದ್ದಾರೆ.

    ನಗರದ ಹೊರವಲಯದ ನೆಲಮಂಗಲ ತಾಲೂಕಿನ ಇಸ್ಲಾಂಪುರದ ನಿವಾಸಿಯಾಗಿರುವ ಮಹಮ್ಮದ್ ಕಲಂದರ್ ಮತ್ತು ಮೆಹರುನ್ನಿಸಾ ವೃದ್ಧ ದಂಪತಿ ಮಗನ ಬರುವಿಕೆಗಾಗಿ ಕಾಯುತ್ತಿದ್ದಾರೆ. ವೃದ್ಧ ದಂಪತಿಯ ಪುತ್ರ ಮಹಮ್ಮದ್ ರಫೀಕ್ 24 ವರ್ಷಗಳಿಂದ ಎಲ್ಲಿದ್ದಾರೆ ಎಂಬುವುದು ಯಾರಿಗೂ ಗೊತ್ತಿಲ್ಲ. ಅಪ್ಪಟ ದೇಶಪ್ರೇಮಿಯಾಗಿದ್ದ, ಮಹಮ್ಮದ್ ರಫೀಕ್ ಸೇನೆಗೆ ಸೇರಿದ ಆರಂಭದ ನಾಲ್ಕು ವರ್ಷಕ್ಕೆ ಪೋಷಕರಿಗೆ ಪತ್ರ ಬರೆಯುತ್ತಿದ್ದರು. ರಜೆ ಪಡೆದುಕೊಂಡು ಗ್ರಾಮಕ್ಕೂ ಬಂದಿದ್ದರು. ಒಂದು ಬಾರಿಗೆ ಊರಿಗೆ ಬಂದ ಮಗ ಮತ್ತೆ ಸೇನೆಗೆ ಹೋದವ ಬಂದಿಲ್ಲ ಎಂದು ವೃದ್ಧ ದಂಪತಿ ಕಣ್ಣೀರಿಡುತ್ತಿದ್ದಾರೆ.

    ನಾಗಾಲ್ಯಾಂಡ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಮಹಮ್ಮದ್ ರಫೀಕ್ ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದೆ. ಈ ಸಂಬಂಧ ವೃದ್ಧ ದಂಪತಿ ಪುತ್ರನನ್ನ ಹುಡುಕಿಕೊಡಿ ಎಂದು ಸೇನೆಯಲ್ಲಿ ಹಲವು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಮಗನಿಗೆ ಏನು ಆಗಿಲ್ಲ, ಇಂದಲ್ಲ ನಾಳೆ ಬಂದೇ ಬರುತ್ತಾನೆ ಎಂದು ಪುತ್ರ ಬರೆದಿರುವ ಪತ್ರ ಮತ್ತು ಫೋಟೋ ಹಿಡಿದುಕೊಂಡು ಬಾಗಿಲ ಬಳಿಯೇ ದಂಪತಿ ನಿಂತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ವೃದ್ಧ ದಂಪತಿಗೆ ಬ್ಯಾಂಕ್ ಸಿಬ್ಬಂದಿಯಿಂದ 10 ಲಕ್ಷ ರೂ. ಮೋಸ!

    ವೃದ್ಧ ದಂಪತಿಗೆ ಬ್ಯಾಂಕ್ ಸಿಬ್ಬಂದಿಯಿಂದ 10 ಲಕ್ಷ ರೂ. ಮೋಸ!

    – ನಕಲಿ ಸಹಿ ಮಾಡಿ ಹಣ ಡ್ರಾ ಮಾಡಿದ್ನಾ ಕ್ಯಾಶಿಯರ್?

    ಬಳ್ಳಾರಿ: ಬ್ಯಾಂಕ್ ನಲ್ಲಿ ಹಣ ಇಟ್ರೆ ಫುಲ್ ಸೇಫ್ ಆಗಿರುತ್ತೆ ಅಂತಾರೆ. ಆದ್ರೆ ಬ್ಯಾಂಕ್ ನಲ್ಲಿಟ್ಟ 10 ಲಕ್ಷ ಹಣವನ್ನ ಬ್ಯಾಂಕ್ ಸಿಬ್ಬಂದಿಯೇ ಡ್ರಾ ಮಾಡಿ ವೃದ್ಧ ದಂಪತಿಗೆ ಮೋಸ ಮಾಡಿರುವ ಆರೋಪವೊಂದು ಕೇಳಿ ಬಂದಿದೆ.

    80 ವರ್ಷ ಇಳಿವಯಸ್ಸಿನ ಕೆಟಿ ಹನುಮಂತಪ್ಪ ಹಾಗೂ ಝಾನ್ಸಿ ಲಕ್ಷಿಭಾಯಿ ಬಳ್ಳಾರಿಯ ಇಂಡಿಯನ್ ಬ್ಯಾಂಕ್ ನಲ್ಲಿ ಕಳೆದ 25 ವರ್ಷಗಳಿಂದ ವ್ಯವಹಾರ ನಡೆಸುತ್ತಿದ್ದಾರೆ. 2017ರ ಸಪ್ಟೆಂಬರ್ 6ರಂದು ಬ್ಯಾಂಕಿನ ತಮ್ಮ ಅಕೌಂಟಗೆ ಹತ್ತು ಲಕ್ಷ ರೂಪಾಯಿ ಡೆಪಾಸಿಟ್ ಮಾಡಿದ್ದಾರೆ. ಆದ್ರೆ ಇವರು ಮಾಡಿದ ಡಿಪಾಸಿಟ್ ಹಣವನ್ನು ಬ್ಯಾಂಕ್ ಸಿಬ್ಬಂದಿಯೊಬ್ರು ನಕಲಿ ಸಹಿ ಮಾಡಿ ಸೆಪ್ಟೆಂಬರ್ 19ರಂದು ಹಣ ವಿತ್ ಡ್ರಾ ಮಾಡಿದ್ದಾರೆ ಅಂತ ವಕೀಲ ರವೀಂದ್ರ ಆರೋಪಿಸಿದ್ದಾರೆ.

    ಈ ವೃದ್ಧ ದಂಪತಿ ಬ್ಯಾಂಕಿಗೆ ಹೋದಾಗೆಲ್ಲಾ ಬ್ಯಾಂಕ್ ಕ್ಯಾಶಿಯರ್ ಚಂದ್ರಪ್ಪ ಎಂಬಾತ ಇವರ ಚೆಕ್ ಬುಕ್ ಪಡೆದು ಹಣ ವಿತ್ ಡ್ರಾ ಮಾಡಿಕೊಡುತ್ತಿದ್ದರಂತೆ. ದಂಪತಿಯ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡ ಚಂದ್ರಪ್ಪ ಚೆಕ್ ಪಡೆದು ನಕಲಿ ಸಹಿ ಮಾಡಿ ಹಣ ವಿತ್ ಮಾಡಿದ್ದಾನೆ ಅನ್ನೋದು ದಂಪತಿ ಆರೋಪವಾಗಿದೆ.

    ಈಗ ಹಣಕ್ಕಾಗಿ ಬಳ್ಳಾರಿ ಎಸ್‍ಪಿ ಮೊರೆ ಹೋಗಿರುವ ವೃದ್ಧ ದಂಪತಿ ಬ್ಯಾಂಕ್ ಸಿಬ್ಬಂದಿ ವಿರುದ್ಧ ದೂರು ಕೊಟ್ಟಿದ್ದಾರೆ. ಈ ಬಗ್ಗೆ ಮ್ಯಾನೇಜರ್ ಶಿವಕುಮಾರ್ ನನ್ನು ಕೇಳಿದ್ರೆ, ಬ್ಯಾಂಕಿನಲ್ಲಿ ಈ ರೀತಿ ಮೋಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ಇಷ್ಟೇ ಅಲ್ಲ, ಬ್ಯಾಂಕ್‍ನಲ್ಲಿ ಉಳಿದ ಎಫ್‍ಡಿ ಹಣ ಡ್ರಾ ಮಾಡಲು ಹೋದರೆ `ವಯಸ್ಸಾಗಿದೆ ನಮ್ಮ ಕೈ ನಡುಗುತ್ತೆ ಹೀಗಾಗಿ ಸಹಿ ವ್ಯತ್ಯಾಸವಾಗಿರಬಹುದು’ ಅನ್ನೋ ಪತ್ರಕ್ಕೆ ಸಹಿ ಕೇಳ್ತಿದ್ದಾರಂತೆ. ಇನ್ನಾದ್ರೂ ಇಳಿವಯಸ್ಸಿನ ಈ ದಂಪತಿಗೆ ಆಗ್ತಿರೋ ಮೋಸವನ್ನು ತಡೆಗಟ್ಟಲು ಪೊಲೀಸರು ಮುಂದಾಗಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುರಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ದಂಪತಿ

    ಕುರಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ದಂಪತಿ

    ಸಾಂದರ್ಭಿಕ ಚಿತ್ರ

    ಕೋಲಾರ: ಕೃಷಿ ಹೊಂಡಕ್ಕೆ ಬಿದ್ದ ಕುರಿ ರಕ್ಷಿಸಲು ಹೋಗಿ ವೃದ್ಧ ದಂಪತಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಜಿಲ್ಲೆಯ ಮುಳಬಾಗಿಲು ತಾಲೂಕಿನ ಬೈರಕೂರು ಗ್ರಾಮದ ಬಳಿ ಇಂದು ನಡೆದಿದೆ.

    ಬೈರಕೂರು ಗ್ರಾಮದ ಬತ್ಯಪ್ಪ (70) ಹಾಗೂ ವೆಂಕಟಲಕ್ಷ್ಮಮ್ಮ (63) ಮೃತರಾದ ದಂಪತಿ. ಕುರಿ ಮೇಯಿಸಲು ಹೋಗಿದ್ದಾಗ ಘಟನೆ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಘಟನೆಯ ವಿವರ:
    ಬತ್ಯಪ್ಪ ಹಾಗೂ ವೆಂಕಟಲಕ್ಷ್ಮಮ್ಮ ಎಂದಿನಂತೆ ಶನಿವಾರ ಕೂಡ ಕುರಿ ಮೇಯಿಸಲು ಹೋಗಿದ್ದಾರೆ. ಬಳಿಕ ಮನೆಗೆ ಬರುವಾಗ ಕೃಷಿ ಹೊಂಡದಲ್ಲಿ ನೀರು ಕುಡಿಯಲು ಕುರಿಗಳನ್ನು ಬಿಟ್ಟಿದ್ದಾರೆ. ಈ ವೇಳೆ ಕುರಿಯೊಂದು ಹೊಂಡದಲ್ಲಿ ಸಿಲುಕಿಕೊಂಡಿದೆ. ಅದನ್ನು ಹೊರ ತೆಗೆಯಲು ಮುಂದಾಗಿದ್ದ ಇಬ್ಬರೂ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ.

    ರಾತ್ರಿಯಾದರೂ ಅಪ್ಪ ಅಮ್ಮ ಬರಲಿಲ್ಲ ಅಂತ ಮಕ್ಕಳು ಗಾಬರಿಯಾಗಿ ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ಕೆರೆಯ ಬಳಿಗೆ ಬಂದು ನೋಡಿದಾಗ ಮೃತ ದೇಹಗಳು ಪತ್ತೆಯಾಗಿವೆ. ಈ ಕುರಿತು ಮಾಹಿತಿ ಪಡೆದ ಸ್ಥಳಕ್ಕೆ ಆಗಮಿಸಿದ ಅಗ್ನಿಶಮಕ ದಳವು ಸ್ಥಳೀಯರ ಸಹಾಯ ಪಡೆದು ಶವಗಳನ್ನು ಹೊರ ತೆಗೆದಿದೆ. ಈ ಕುರಿತು ನಂಗಲಿಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸಿಲಿಕಾನ್ ಸಿಟಿ ವೃದ್ಧ ದಂಪತಿಗಳೇ ಎಚ್ಚರ ಎಚ್ಚರ..!

    ಸಿಲಿಕಾನ್ ಸಿಟಿ ವೃದ್ಧ ದಂಪತಿಗಳೇ ಎಚ್ಚರ ಎಚ್ಚರ..!

    – 60 ವರ್ಷ ಮೇಲ್ಪಟ್ಟವರೇ ಇವ್ರ ಮೇನ್ ಟಾರ್ಗೆಟ್..!

    ಬೆಂಗಳೂರು: ಬೆಂಗಳೂರಿನಲ್ಲಿ ದಿನೇ ದಿನೇ ಮೋಸ ಮಾಡುವವರಿಗೇನು ಕಡಿಮೆ ಇಲ್ಲ. ಅದರಲ್ಲೂ ರಾಜಕಾರಣಿಗಳ ಹೆಸರು ಹೇಳಿ ಯಾಮಾರಿಸುವವರೇ ಹೆಚ್ಚು. ಅದರೆ ನಮ್ಮ ದೇಶದ ಪ್ರಧಾನಿ ಹೆಸರಲ್ಲಿ ಕೂಡ ಹುಟ್ಟಿಕೊಂಡಿದೆ ದೂಡ್ಡ ಜಾಲ. ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಮೋಸ ಮಾಡುವ ಜಾಲ ಹುಟ್ಟಿಕೊಂಡಿದೆ. ಈ ಜಾಲದ ಪ್ರಮುಖ ಟಾರ್ಗೆಟ್ 60ವರ್ಷ ಮೇಲ್ಪಟ್ಟ ದಂಪತಿಗಳು.

    ಬೆಂಗಳೂರಿನ ವಿಜಯನಗರದ ಹೋಸಹಳ್ಳಿಯಲ್ಲಿ ನಾಗೇಶ್ವರ ರಾವ್ ದಂಪತಿಗಳಿಗೆ ಇಬ್ಬರು ಆಗುಂತಕರು ಕೆಇಬಿ ಇಂಜನಿಯರ್ಸ್ ಅಂತಾ ಹೇಳಿಕೂಂಡು ಮನೆಗೆ ಬಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಸೀನಿಯರ್ ಸಿಟಿಜನ್‍ಗಳಿಗೆ ಫ್ರೀಯಾಗಿ ಲೈಟ್‍ಗಳನ್ನು ಕೊಡುತ್ತಿದ್ದಾರೆ ಅಂತಾ ಹೇಳಿದ್ದಾರೆ. ಮೊದಲಿಗೆ 90 ಲೈಟ್‍ಗಳನ್ನು ಕೊಟ್ಟಿದ್ದಾರೆ. ನಂತರ 9000 ರೂ. ಕೊಡಿ ಸ್ಕ್ಯಾನ್ ಮಾಡಿ ವಾಪಾಸ್ ಕೊಡತ್ತೀವಿ. ಆಧಾರ್ ಕಾರ್ಡ್ ತೆಗೆದುಕೊಂಡು ಬನ್ನಿ ಎಂದು ಹೇಳಿ ದುಡ್ಡು ತೆಗೆದುಕೊಂಡು ಬೈಕ್ ಹತ್ತಿ ಓಡಿ ಹೋಗುತ್ತಾರೆ.

    ಮೋಸ ಮಾಡಿ ಓಡಿ ಹೋಗುತ್ತಿರುವ ದೃಶಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಜಯನಗರದ ಸುತ್ತಮುತ್ತ ಇತಂಹ ಘಟನೆಗಳು ಹೆಚ್ಚಾಗಿ ನಡೆಯುತ್ತಿದ್ದು, ಇಲ್ಲಿನ ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು. ಭಯದಲ್ಲಿ ಬದುಕುವಂತಾಗಿದೆ. ವಿಜಯನಗರ ಪೂಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೋಸಗಾರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.