Tag: ವೃದ್ಧೆ

  • ಮಳೆಗಾಗಿ 5 ದಿನದಿಂದ ವೃದ್ಧೆಯಿಂದ ಉಪವಾಸ

    ಮಳೆಗಾಗಿ 5 ದಿನದಿಂದ ವೃದ್ಧೆಯಿಂದ ಉಪವಾಸ

    ಧಾರವಾಡ: ನಿರಂತರ ಬರಗಾಲದಿಂದ ತತ್ತರಿಸುತ್ತಿರುವ ರಾಜ್ಯಕ್ಕೆ ಉತ್ತಮ ಮಳೆಯಾಗಲಿ ಎಂದು ವೃದ್ಧೆಯೊಬ್ಬರು ಕಳೆದ ಐದು ದಿನಗಳಿಂದ ಉಪವಾಸ ವ್ರತವನ್ನು ಹಮ್ಮಿಕೊಂಡಿದ್ದಾರೆ.

    ನವಲಗುಂದ ಪಟ್ಟಣದ ಅಂಬೇಡ್ಕರ್ ನಗರದ ಮಹಿಳೆ ಹನಮವ್ವ ದುರ್ಗಪ್ಪ ದೊಡ್ಡಮನಿ (65) ಮಳೆಗಾಗಿ ಪ್ರಾರ್ಥಿಸಿ ಕಳೆದ ಐದು ದಿನಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

    ದುರ್ಗಾಮ್ಮ ದೇವಸ್ಥಾನದಲ್ಲಿ ಉಪವಾಸ ಕೈಗೊಂಡಿರುವ ಹನಮವ್ವ ಗುರುವಾರದಿಂದ ಒಂದು ಹನಿ ನೀರನ್ನು ಕುಡಿದಿಲ್ಲ. ಅವರ ವ್ರತಕ್ಕೆ ಗ್ರಾಮದ ಕೆಲ ಮಹಿಳೆಯರು ಬೆಂಬಲ ನೀಡಿದ್ದಾರೆ.

    ಉಪವಾಸದಿಂದ ಅಸ್ವಸ್ಥರಾದ ಹನುಮವ್ವ ಅವರ ಆರೋಗ್ಯ ತಪಾಸಣೆ ಮಾಡಿದ ವೈದ್ಯರು ಎಳನೀರು ಸೇವಿಸುವಂತೆ ಸೂಚಿಸಿದರೂ ಹನುಮವ್ವ ಏನೇನೂ ಸ್ವೀಕರಿಸಿಲ್ಲ. ಹೀಗಾಗಿ ಮಳೆಯಾಗುವವರೆಗೂ ತೊಟ್ಟು ನೀರು ಕುಡಿಯುವದಿಲ್ಲ ಎಂಬ ದಿಟ್ಟ ನಿರ್ಧಾರದಿಂದ ವ್ರತಾಚರಣೆ ನಡೆಸುತ್ತಿದ್ದಾರೆ.

  • ಮರೆಯಾದ ಮಾನವೀಯತೆ.. ಆಸ್ಪತ್ರೆ ಮುಂದೆ ನರಳಿ ನರಳಿ 70 ವರ್ಷದ ವೃದ್ಧೆ ಸಾವು!

    ಮರೆಯಾದ ಮಾನವೀಯತೆ.. ಆಸ್ಪತ್ರೆ ಮುಂದೆ ನರಳಿ ನರಳಿ 70 ವರ್ಷದ ವೃದ್ಧೆ ಸಾವು!

    ತುಮಕೂರು: ಸರ್ಕಾರಿ ಆಸ್ಪತ್ರೆ ಎದುರೇ ರಸ್ತೆಯಲ್ಲಿ ಬಿದ್ದು ನರಳಿ ನರಳಿ ವೃದ್ಧೆಯೊಬ್ಬರು ಬುಧವಾರ ಪ್ರಾಣಬಿಟ್ಟ ಘಟನೆ ತುರುವೇಕೆರೆ ತಾಲೂಕು ಸರ್ಕಾರಿ ಆಸ್ಪತ್ರೆ ಬಳಿ ನಡೆದಿದೆ.

    ಲಕ್ಷ್ಮಮ್ಮ(70) ಸಾವನ್ನಪ್ಪಿದ ವೃದ್ಧೆ. ಲಕ್ಷ್ಮಮ್ಮ ಚಿಕ್ಕಶೆಟ್ಟಿ ಕೆರೆ ಗ್ರಾಮದ ನಿವಾಸಿಯಾಗಿದ್ದು, ಟಿಬಿ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ರಕ್ತವಾಂತಿ ಮಾಡಿಕೊಂಡು ಬಿದ್ದು ನರಳಾಡಿ ಪ್ರಾಣ ಬಿಟ್ಟಿದ್ದಾರೆ.

    ನರಳಾಡುತ್ತಿರುವಾಗ ಆಸ್ಪತ್ರೆ ಪಕ್ಕದಲ್ಲಿದ್ದರೂ ಯಾರೂ ಜನ ಕರೆದುಕೊಂಡು ಹೋಗಲಿಲ್ಲ. ಹೀಗಾಗಿ ಈ ವೃದ್ಧೆ 20 ನಿಮಿಷಗಳ ಕಾಲ ನರಳಾಡಿ ಮೃತಪಟ್ಟಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಮೃತಪಟ್ಟ ನಂತರ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ.

    ತುರುವೇಕೆರೆ  ಪೊಲೀಸ್  ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    https://youtu.be/nGhAOrsoJkE

  • ಮಹಿಳೆಗೆ ಸಿಗರೇಟ್‍ನಿಂದ ಸುಟ್ಟು ಕಿರುಕುಳ ನೀಡಿದ ಯುವಕರು

    ಮಹಿಳೆಗೆ ಸಿಗರೇಟ್‍ನಿಂದ ಸುಟ್ಟು ಕಿರುಕುಳ ನೀಡಿದ ಯುವಕರು

    ಬೆಂಗಳೂರು: ವೃದ್ಧಾಶ್ರಮದಲ್ಲಿ ಆಯಾ ಆಗಿ ಕೆಲಸ ಮಾಡೋ ಮಹಿಳೆಗೆ ಕೆಲ ಯುವಕರು ಸಿಗರೇಟ್‍ನಿಂದ ಸುಟ್ಟು ಕಿರುಕುಳ ನೀಡಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‍ನಲ್ಲಿ ನಡೆದಿದೆ.

    ಇಲ್ಲಿನ ಎಐಎ ವೃದ್ಧಾಶ್ರಮ ಮತ್ತು ಪಿಜಿಯಲ್ಲಿ ಕೆಲಸಕ್ಕಿದ್ದ ಮಂಜುಳಾ ಎಂಬವರ ವಿರುದ್ಧ ಮೊಬೈಲ್ ಕಳ್ಳತನದ ಆರೋಪ ಹೊರೆಸಿದ ಪಿಜಿ ಯುವಕರು ಅವರಿಗೆ ಹೊಡೆದು ಸಿಗರೇಟ್‍ನಿಂದ ಸುಟ್ಟಿದ್ದಾರೆ. ಇದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರ ಗಮನಕ್ಕೆ ತಂದಿದ್ದಾರೆ. ಈ ಬೆನ್ನಲ್ಲೇ ಪೊಲೀಸರು ವೃದ್ಧಾಶ್ರಮಕ್ಕೆ ಭೇಟಿ ನೀಡಿದಾಗ ಮಂಜುಳಾ ಗಾಯಗೊಂಡಿರುವುದು ಗೊತ್ತಾಗಿದೆ.

    ಕೂಡಲೇ ಮಂಜುಳಾರನ್ನು ಕೆ.ಸಿ ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸಿಗರೇಟ್‍ನಿಂದ ಸುಟ್ಟು ಕಿರುಕುಳ ನೀಡಿರೋ ಯುವಕರನ್ನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ.

  • ಬಿಸಿಲಿನ ಝಳಕ್ಕೆ ಬೆಂದುಹೋದ ಬಳ್ಳಾರಿ – ಸೂಕ್ತ ಚಿಕಿತ್ಸೆ ಸಿಗದೆ ವೃದ್ಧೆ ಬಲಿ

    ಬಿಸಿಲಿನ ಝಳಕ್ಕೆ ಬೆಂದುಹೋದ ಬಳ್ಳಾರಿ – ಸೂಕ್ತ ಚಿಕಿತ್ಸೆ ಸಿಗದೆ ವೃದ್ಧೆ ಬಲಿ

    ಬಳ್ಳಾರಿ: ಬಿಸಿಲಿನ ಝಳಕ್ಕೆ ಬಳ್ಳಾರಿಯಲ್ಲಿ ವೃದ್ಧೆಯೊಬ್ಬರು ಬಲಿಯಾಗಿದ್ದಾರೆ. ಆದ್ರೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದ್ರೆ ಅವರನ್ನು ಬದುಕಿಸಿಕೊಳ್ಳಬಹುದಿತ್ತು.

    ಹೂವಿನ ಹಡಗಲಿಯಿಂದ ಹೊಸಪೇಟೆಗೆ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧೆ ಬಿಸಿಲಿನಿಂದ ಬಳಲಿ ಅಸ್ವಸ್ಥರಾದರು. ತಕ್ಷಣವೇ ಅವರನ್ನು ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಆದ್ರೆ ವೈದ್ಯರು ಇಲ್ಲದ ಕಾರಣ ಸಕಾಲಕ್ಕೆ ಚಿಕಿತ್ಸೆ ಸಿಗದೆ ಅವರು ಮೃತಪಟ್ಟರು.

    ಬಳ್ಳಾರಿಯಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದೆ. ಉಷ್ಣಾಂಶ 40 ಡಿಗ್ರಿಯಿಂದ 43 ಡಿಗ್ರಿಗೆ ಏರಿಕೆಯಾಗಿದೆ. ಹೀಗಾಗಿ ಮಕ್ಕಳು ನಿರ್ಜಲೀಕರಣದಿಂದ ಬಳಲುತ್ತಿದ್ದು ವಿಮ್ಸ್ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಚಿಕ್ಕ ಮಕ್ಕಳಲ್ಲಿ ನೀರಿನಂಶ ಕಡಿಮೆಯಾಗುತ್ತಿದೆ. ನವಜಾತ ಶಿಶುಗಳನ್ನು ತ್ರೀವ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತಾಯಿ ಮಗುವಿಗೆ ಎದೆಹಾಲು ಹೆಚ್ಚಿಗೆ ನೀಡಬೇಕು ಮತ್ತು ಮಕ್ಕಳ ದೇಹದಲ್ಲಿ ನೀರಿನಾಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಬಾಣಂತಿಯರು ನಿತ್ಯ ಎಳನೀರು ಸೇರಿದಂತೆ ತಂಪು ಪಾನೀಯಗಳನ್ನು ಸೇವಿಸಬೇಕು ಅಂತಾ ವೈದ್ಯರು ಸಲಹೆ ನೀಡುತ್ತಿದ್ದಾರೆ.

    ಭಿಕ್ಷುಕ ಸಾವು: ಕಲಬುರಗಿ ನಗರದ ಕೋಟೆಯಲ್ಲಿ ಬಿಸಿಲಿನ ತಾಪ ತಾಳಲಾರದೇ ಭಿಕ್ಷುಕ ಮೃತಪಟ್ಟಿದ್ದಾರೆ. ಸೋಮವಾರ ಸಂಜೆ ಭಿಕ್ಷುಕನ ಶವ ಪತ್ತೆಯಾಗಿದ್ದು ರವಿವಾರ ಮೃತಪಟ್ಟಿರುವ ಶಂಕೆಯಿದೆ. ಮೃತ ಭಿಕ್ಷಕುಕನ ಹೆಸರು ಮತ್ತು ವಿಳಾಸದ ಬಗ್ಗೆ ಪೊಲೀಸರಿಗೆ ಲಭ್ಯವಾಗಿಲ್ಲ. ಸದ್ಯ ವೃದ್ಧ ಸತ್ತಿರುವ ಸ್ಥಿತಿ ನೋಡಿದ್ರೆ ಬಿಸಲಿನ ತಾಪಕ್ಕೆ ಬಲಿಯಾದಂತಿದೆ. ಸ್ಥಳಕ್ಕೆ ಚೌಕ್ ಪೊಲೀಸರು ಭೇಟಿ ನೀಡಿ ಶವದ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಕುರಿತು ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹೆತ್ತ ಮಕ್ಕಳು ಪ್ರತಿಷ್ಠಿತ ಹುದ್ದೆಯಲ್ಲಿದ್ದರೂ ಬೀದಿ ಪಾಲಾದ ವೃದ್ಧೆ

    ಹೆತ್ತ ಮಕ್ಕಳು ಪ್ರತಿಷ್ಠಿತ ಹುದ್ದೆಯಲ್ಲಿದ್ದರೂ ಬೀದಿ ಪಾಲಾದ ವೃದ್ಧೆ

    ಬೆಂಗಳೂರು: ಹೆತ್ತ ಮಕ್ಕಳು ಪ್ರತಿಷ್ಠಿತ ಸರ್ಕಾರಿ ಹುದ್ದೆಯಲ್ಲಿದ್ದರೂ ಅವರ ನಿರ್ಲಕ್ಷಕ್ಕೊಳಗಾಗಿ ವೃದ್ಧೆಯೊಬ್ಬರು ಬೀದಿಗೆ ಬಿದ್ದಿರೋ ಮನಕಲುಕುವ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ.

    ಜಯಮ್ಮ ಎಂಬವರೇ ಬೀದಿಗೆ ಬಿದ್ದಿರುವ ವೃದ್ಧೆ. ಇಂದು ಬೆಳಿಗ್ಗೆ ಜಯಮ್ಮ ನಂದಿನಿಲೇಔಟ್ ನಿಂದ ಬ್ಯಾಡರಹಳ್ಳಿಗೆ ಬಂದು ಅಂಗಡಿಯೊಂದರ ಮುಂದೆ ಬಿಸಿಲಿನಲ್ಲೇ ಕೂತಿದ್ದರು. ಇದನ್ನ ಗಮನಿಸಿದ ಸ್ಥಳೀಯರು ಜಯಮ್ಮರ ಹಿನ್ನೆಲೆ ವಿಚಾರಿಸಿದ್ರು. ಆಗ ಜಯಮ್ಮ ಮೂಲತಃ ಅರಸಿಕೆರೆಯವರಾಗಿದ್ದು, ಇವರಿಗೆ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳು ಸೇರಿ ಒಟ್ಟು ನಾಲ್ಕು ಜನ ಮಕ್ಕಳಿರೋ ವಿಷಯ ಗೊತ್ತಾಗಿದೆ.

    ವೃದ್ಧೆ ಜಯಮ್ಮ ಅವರ ಓರ್ವ ಗಂಡು ಮಗ ಬಿಇಎಲ್‍ನಲ್ಲಿ ಹಾಗೂ ಮತ್ತೊಬ್ಬ ಮಗ ಹೆಚ್‍ಎಎಲ್ ನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಕಿರಿಯ ಮಗಳು ವಿಧಾನಸೌಧದಲ್ಲಿ ಕೆಲಸ ಮಾಡುತ್ತಿದ್ದಾರೆ. ಗಂಡು ಮಕ್ಕಳ ನಿಲಕ್ಷ್ರ್ಯದಿಂದ ಕಂಗಾಲಾಗಿದ್ದ ಜಯಮ್ಮ ತಮ್ಮ ಹಿರಿಯ ಮಗಳ ಮನೆಯಲ್ಲಿ ಆಶ್ರಯ ಪಡೆದಿದ್ದರು. ಇತ್ತೀಚೆಗೆ ಅವರು ತೀರಿಹೋದ ಬಳಿಕ, ಆಶ್ರಯ ನೀಡುವಂತೆ ತಮ್ಮ ಉಳಿದ ಮಕ್ಕಳ ಬಳಿ ಕೇಳಿಕೊಂಡ್ರೂ ಯಾರೊಬ್ಬರು ಜಯಮ್ಮರನ್ನು ಜೋಪಾನ ಮಾಡುವ ಮನಸ್ಸು ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಜಯಮ್ಮ ಕಾಲುನಡಿಗೆಯಲ್ಲೇ ಊರುರು ತಿರುಗುತ್ತಾ ಬೀದಿಯಲ್ಲೇ ಕಾಲಕಳೆಯುತ್ತಿದ್ದಾರೆ.

    ಇನ್ನಾದ್ರೂ ಅವರ ಮಕ್ಕಳು ಇಳಿವಯಸ್ಸಿನಲ್ಲಿರುವ ಜಯಮ್ಮರ ಆರೈಕೆ ಮಾಡುವ ಮನಸ್ಸು ಮಾಡಬೇಕಿದೆ.