Tag: ವೃದ್ಧೆಯರು

  • ಐದು ತಿಂಗಳಿಂದ ವಿಧವಾ ವೇತನ ನೀಡದ ಸರ್ಕಾರ: ಲಾಕ್‍ಡೌನ್ ಸಂಕಷ್ಟದಲ್ಲಿ ವೃದ್ಧರು

    ಐದು ತಿಂಗಳಿಂದ ವಿಧವಾ ವೇತನ ನೀಡದ ಸರ್ಕಾರ: ಲಾಕ್‍ಡೌನ್ ಸಂಕಷ್ಟದಲ್ಲಿ ವೃದ್ಧರು

    ರಾಯಚೂರು: ಲಾಕ್‍ಡೌನ್ ಹಿನ್ನೆಲೆ ಬಹುತೇಕ ಎಲ್ಲಾ ಕೆಲಸಗಳಿಗೂ ಪೂರ್ಣವಿರಾಮ ಬಿದ್ದಿದೆ. ಇಂತಹ ಸಂದರ್ಭದಲ್ಲಿ ವಿಧವಾ ವೇತನ ,ವೃದ್ಧಾಪ್ಯ ವೇತನ , ಕಲಾವಿದರ ಪಿಂಚಣಿಯನ್ನ ಸರ್ಕಾರ ಸರಿಯಾಗಿ ನೀಡದೆ ತಡೆಹಿಡಿದಿರುವುದು ಬಡವರಿಗೆ, ವಯೋವೃದ್ಧರು, ಮಹಿಳೆಯರಿಗೆ ಸಂಕಷ್ಟದ ಪರಿಸ್ಥಿತಿ ತಂದೊಡ್ಡಿದೆ. ರಾಯಚೂರು ಜಿಲ್ಲಾಧಿಕಾರಿ ಕಚೇರಿ ಎದುರು ವಿಧವಾ ವೇತನ ನೀಡುವಂತೆ ಮಹಿಳೆಯರು ಪ್ರತಿಭಟನೆ ಮಾಡಿದರು.

    ಐದು ತಿಂಗಳಿಂದ ವಿಧವಾ ವೇತನವಿಲ್ಲದೆ ಮಹಿಳೆಯರು, ವೃದ್ಧೆಯರು ಪರದಾಡುತ್ತಿದ್ದಾರೆ. ಲಾಕ್‍ಡೌನ್ ನಿಂದ ಕೆಲಸವೂ ಇಲ್ಲದೆ ಯಾವ ಆದಾಯವೂ ಇಲ್ಲದಂತಾಗಿದೆ. ಒಂದೆಡೆ ಕೆಲಸವೂ ಇಲ್ಲ, ಇನ್ನೊಂದೆಡೆ ವಿಧವಾ ವೇತನವೂ ಇಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಕಳೆದ 5 ತಿಂಗಳಿಂದ ವಿಧವಾ ವೇತನ ನೀಡದೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಹೀಗಾಗಿ ವಿಧವಾ ವೇತನ ನೀಡುವಂತೆ ಜಿಲ್ಲಾಧಿಕಾರಿ ಕಚೇರಿಗೆ ಬಂದು ಮಹಿಳೆಯರು ಮನವಿ ಸಲ್ಲಿಸಿದರು.

    ಲಾಕ್‍ಡೌನ್ ಹಿನ್ನೆಲೆ ಓಡಾಡಲು ಆಗದೇ ವೃದ್ಧರು ಮನೆಯಲ್ಲೇ ಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ನಮ್ಮ ಕಷ್ಟವನ್ನ ಅರ್ಥಮಾಡಿಕೊಂಡು ಕೂಡಲೇ ವೇತನ ಬಿಡುಗಡೆ ಮಾಡಬೇಕು ಅಂತ ಮಹಿಳೆಯರು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು.

  • ಗಂಡಂದಿರಿಗೆ ಮದ್ಯ ಖರೀದಿಸಲು ಬಂದ ವೃದ್ಧೆಯರು

    ಗಂಡಂದಿರಿಗೆ ಮದ್ಯ ಖರೀದಿಸಲು ಬಂದ ವೃದ್ಧೆಯರು

    ರಾಯಚೂರು: ಗಂಡದಿರಿಗಾಗಿ ಮದ್ಯ ಖರೀದಿಸಲು ವೃದ್ಧೆಯರು ಮದ್ಯದಂಗಡಿಗೆ ಆಗಮಿಸುವ ಮೂಲಕ ಹೆಬ್ಬೇರಿಸುವಂತೆ ಮಾಡಿದ್ದಾರೆ.

    ರಾಯಚೂರಿನ ಎಂಎಸ್‍ಐಎಲ್ ಮದ್ಯದಂಗಡಿಗಳಿಗೆ ವೃದ್ದೆಯರು ಲಗ್ಗೆ ಇಟ್ಟಿದ್ದು, ಮಹಿಳೆಯರು, ವೃದ್ಧೆಯರಿಂದ ಮದ್ಯ ಖರೀದಿ ಜೋರಾಗಿಯೇ ನಡೆದಿದೆ. ಎಂಎಸ್‍ಐಎಲ್ ಮದ್ಯದಂಗಡಿಯ ಮುಂದೆ ಸಾಲುಗಟ್ಟಿ ನಿಂತು ಮದ್ಯ ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಹಿಳೆಯರು ಹಾಗೂ ವೃದ್ಧೆಯರು ಸಾಲುಗಟ್ಟಿ ನಿಂತಿರುವುದನ್ನು ನೋಡಿದ ಸಾರ್ವಜನಿಕರು ಆಶ್ಚರ್ಯಕ್ಕೊಳಗಾದರು. ರಾಯಚೂರಿನಲ್ಲಿ ಬೆಳಗ್ಗೆ ಮಾತ್ರ ಮದ್ಯ ಖರೀದಿಗೆ ಅವಕಾಶವಿದ್ದು, ಈ ಹಿನ್ನೆಲೆ ಬೆಳ್ಳಂಬೆಳಗ್ಗೆ ಎದ್ದು ಎಣ್ಣೆಗಾಗಿ ಕ್ಯೂ ನಿಂತಿದ್ದಾರೆ.

    ವೃದ್ಧೆಯರು ನಾಲ್ಕೈದು ಕ್ವಾಟರ್ ಪ್ಯಾಕೆಟ್ ಮದ್ಯ ಖರೀದಿಸಿದ್ದು, ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ಮಾತ್ರ ಮದ್ಯ ಖರೀದಿಗೆ ಅವಕಾಶ ಇರುವ ಹಿನ್ನೆಲೆ ಮದ್ಯ ಪ್ರಿಯರ ಕ್ಯೂ ಹೆಚ್ಚಾಗುತ್ತಲೇ ಇದೆ. ಬೆಳಗ್ಗೆಯಿಂದಲೇ ಹತ್ತಾರು ಜನ ನಿಂತಿದ್ದು, ಇದರ ಮಧ್ಯೆ ಮಹಿಳೆಯರು ವೃದ್ಧೆಯರು ಸಹ ಮದ್ಯಕ್ಕಾಗಿ ಕಾದು ನಿಂತಿದ್ದರು. 40 ದಿನಗಳಿಂದ ಬಾಯಾರಿದ್ದ ಮದ್ಯ ವ್ಯಸನಿಗಳಿಗೆ ಇದೀಗ ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆ ಹಬ್ಬದಂತಾಗಿದ್ದು, ಸಾಲುಗಟ್ಟಿ ನಿಂತು ಮದ್ಯ ಖರೀದಿಸುತ್ತಿದ್ದಾರೆ.

  • ಪೌಡರ್ ಎರಚಿ ಪ್ರಜ್ಞೆ ತಪ್ಪಿಸುತ್ತಾರೆ ಎಂದು ಶಂಕಿಸಿ ವೃದ್ಧೆಯರನ್ನ ಥಳಿಸಿದ ಗ್ರಾಮಸ್ಥರು

    ಪೌಡರ್ ಎರಚಿ ಪ್ರಜ್ಞೆ ತಪ್ಪಿಸುತ್ತಾರೆ ಎಂದು ಶಂಕಿಸಿ ವೃದ್ಧೆಯರನ್ನ ಥಳಿಸಿದ ಗ್ರಾಮಸ್ಥರು

    – ಬಿಸಾಕಿದ್ದ ತರಕಾರಿ ಒಯ್ಯಲು ಬಂದಿದ್ದ ವೃದ್ಧೆಯರು

    ಬಾಲಗಕೋಟೆ: ಪೌಡರ್ ಎರಚಿ ಪ್ರಜ್ಞೆ ತಪ್ಪಿಸುತ್ತಾರೆ ಎಂಬ ಶಂಕೆ ಹಿನ್ನೆಲೆ ಮೂವರು ಅಪರಿಚಿತ ವೃದ್ಧೆಯರನ್ನು ಸ್ಥಳೀಯರು ಹಿಡಿದು ಥಳಿಸಿದ ಘಟನೆ ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ನಡೆದಿದೆ.

    ತೇರದಾಳ ಪಟ್ಟಣದಲ್ಲಿ ಪ್ರತಿ ಗುರುವಾರ ವಾರದ ಸಂತೆ ನಡೆಯುತ್ತದೆ. ಈ ಸಂತೆಗೆ ಇಂದು ಕೈ ಚೀಲ ಹಿಡಿದು ಮೂವರು ವೃದ್ಧೆಯರು ಬಂದಿದ್ದರು. ಆದರೆ ಅವರು ಸಂತೆಯಲ್ಲಿ ಅತ್ತಿತ್ತ ಅನುಮಾನಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಅವರನ್ನು ಹಿಡಿದು, ಚೀಲಗಳನ್ನು ಕಿತ್ತುಕೊಂಡು ನೋಡಿದಾಗ ಅದರಲ್ಲಿ ಏನೂ ಇರಲಿಲ್ಲ. ಆದರೂ ಕೆಲ ಯುವಕರು, ಮಹಿಳೆಯರು ವೃದ್ಧೆಯರನ್ನು ಎಳೆದಾಡಿ ಥಳಿಸಿದ್ದಾರೆ.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ತೇರದಾಳ ಪೊಲೀಸರು ವೃದ್ಧೆಯರನ್ನು ರಕ್ಷಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ವಿಚಾರಣೆ ನಡೆಸಿದಾಗ, ನಾವು ಬಡವರು. ತರಕಾರಿ ಖರೀದಿಸುವಷ್ಟು ಹಣ ನಮ್ಮ ಬಳಿ ಇಲ್ಲ. ಹೀಗಾಗಿ ಸಂತೆಯಲ್ಲಿ ವ್ಯಾಪಾರಿಗಳು ಬಿಸಾಕಿದ ತರಕಾರಿ ತೆಗೆದುಕೊಂಡು ಹೋಗಲು ಬಂದಿದ್ದೆವು. ಆದರೆ ಸಂತೆಯಲ್ಲಿ ಕೆಲವರು ನಮ್ಮ ಮೇಲೆ ಶಂಕೆ ವ್ಯಕ್ತಪಡಿಸಿ ಹಲ್ಲೆ ಮಾಡಿದ್ದಾರೆ ಎಂದು ವೃದ್ಧೆಯರು ಅಳಲು ತೋಡಿಕೊಂಡಿದ್ದಾರೆ.

    ಯಾರೋ ದುಷ್ಕರ್ಮಿಗಳು ಪೌಡರ್ ಎರಚಿ ಪ್ರಜ್ಞೆ ತಪ್ಪಿಸಿ ಹಣ ದೋಚುತ್ತಾರೆ ಎಂಬ ವದಂತಿ ತೇರದಾಳ ಪಟ್ಟಣದಲ್ಲಿ ಕೇಳಿ ಬರುತ್ತಿದೆ. ಹೀಗಾಗಿ ವೃದ್ಧೆಯರ ಮೇಲೆ ಶಂಕೆ ವ್ಯಕ್ತಪಡಿಸಿ ಸ್ಥಳೀಯರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.