ಮೃತ ಈಶಮ್ಮ ಟೀ ಕುಡಿಯಲು ಅಂಗಡಿಗೆ ತೆರಳಿದ್ದರು. ಈ ವೇಳೆ ಏಕಾಏಕಿ ಟೀ ಅಂಗಡಿಯ ಪಕ್ಕದ ಮನೆ ಛಾವಣಿ, ಗೋಡೆ ಕುಸಿದು ಬಿದ್ದಿದೆ. ಪರಿಣಾಮ ಈಶಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಲಬುರಗಿ: 75 ವರ್ಷದ ನಿಸ್ಸಹಾಯಕ ವೃದ್ಧೆಯ ಮೇಲೆ ಭಿಕ್ಷಾಟನೆ ಮಾಡುತ್ತಾ ಊರೂರು ಸುತ್ತುತ್ತಿದ್ದ ಯುವಕ ಅತ್ಯಾಚಾರವೆಸಗಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆ ಚಿಂಚೋಳಿ (Chincholi) ತಾಲೂಕಿನ ಚಂದ್ರಪಳ್ಳಿ ಗ್ರಾಮದಲ್ಲಿ ನಡೆದಿದೆ.
ತಯ್ಯಬ್ ಭಿಕ್ಷಾಟನೆ ಮಾಡುತ್ತಾ ಊರೂರು ಸುತ್ತುತ್ತಿದ್ದ. ಸದ್ಯ ಪರಾರಿಯಾಗಿರುವ ತಯ್ಯಬ್‌ನನ್ನು ಪತ್ತೆಹಚ್ಚುವ ಸಲುವಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತೀವ್ರ ಅಸ್ವಸ್ಥಗೊಂಡ ವೃದ್ಧೆಯನ್ನು ಬೀದರ್‌ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಉಡುಪಿಯ ಕಬ್ಬಿನಾಲೆಯಲ್ಲಿ ಎನ್‌ಕೌಂಟರ್ – ನಕ್ಸಲ್ ನಾಯಕ ವಿಕ್ರಂ ಗೌಡ ಹತ್ಯೆ
ಚಿತ್ರದುರ್ಗ: ತುಂತುರು ಮಳೆಗೆ (Rain) ನೆನೆದಿದ್ದ ಮನೆಗೋಡೆ ಕುಸಿದು (Wall Collapse) ವೃದ್ಧೆ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ (Chitradurga) ತಾಲೂಕಿನ ಈಚಲ ನಾಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಂಗಮ್ಮ(75) ಮೃತ ವೃದ್ಧೆ. ಮನೆ ಹಳೆಯದಾಗಿದ್ದು, ನಿರಂತರ ಮಳೆಗೆ ನೆನೆದು ಗೋಡೆ ಕುಸಿದಿದೆ. ಈ ವೇಳೆ ಮನೆಯೊಳಗಿದ್ದ ವೃದ್ಧೆ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಚಿತ್ರದುರ್ಗ ಕ್ಷೇತ್ರದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದನ್ನೂ ಓದಿ: ರಾಯಚೂರು ವಿವಿಗೆ ಮಹರ್ಷಿ ವಾಲ್ಮೀಕಿ ಹೆಸರು – ಸಿಎಂ ಸಿದ್ದರಾಮಯ್ಯ ಘೋಷಣೆ
ದಾವಣಗೆರೆ: ಕಲುಷಿತ ನೀರು (Contaminated Water) ಕುಡಿದು ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ದಾವಣಗೆರೆ (Davanagere) ಜಿಲ್ಲೆಯ ಹೊನ್ನಾಳಿ (Honnali) ತಾಲೂಕಿನ ಹುಣಸಘಟ್ಟ ಗ್ರಾಮದಲ್ಲಿ ನಡೆದಿದೆ.
ಚಂದ್ರಮ್ಮ (60) ಸಾವನ್ನಪ್ಪಿದ ವೃದ್ಧೆ. ಆ.21ರಂದು ಕಲುಷಿತ ನೀರು ಕುಡಿದು ಅಸ್ವಸ್ಥರಾಗಿ ಗ್ರಾಮದ 7 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಪೈಕಿ ಚಂದ್ರಮ್ಮ ವಾಂತಿ, ಬೇಧಿ, ಜ್ವರ ಹಾಗೂ ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಚಿಕಿತ್ಸೆ ಫಲಿಸದೆ ಚಂದ್ರಮ್ಮ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಇಂದಿನಿಂದ ದಸರಾ ಗಜಪಡೆಗಳ ತಾಲೀಮು ಆರಂಭ
ಭುವನೇಶ್ವರ: ಪ್ರದಾನಿ ನರೇಂದ್ರ ಮೋದಿಯವರು (Narendra Modi) ವೃದ್ಧೆಯೊಬ್ಬರ ಕಾಲಿಗೆ ಮಂಡಿಯೂರಿ ನಮಸ್ಕರಿಸಿದ್ದಾರೆ. ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ವೀಡಿಯೋ ವೈರಲ್ ಬೆನ್ನಲ್ಲೇ ಆ ವೃದ್ಧೆ ಯಾರು ಎಂಬ ಪ್ರಶ್ನೆ ಎದ್ದಿದೆ. ಈ ವೃದ್ಧೆಯ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಫೆಬ್ರವರಿ 26 ರಂದು 98 ನೇ ಆವೃತ್ತಿಯ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿ, ಅವರ ಕೆಲಸವನ್ನು ಶ್ಲಾಘಿಸಿದ್ದರು.
In today's #MannKiBaat, Prime Minister Shri @narendramodi told the nation how a sister named Kamala Maharana of Kendrapara district has saved the environment by using unused plastic and created employment for herself and many women. pic.twitter.com/dfD71EV5il
ಈ ವೃದ್ಧೆ ಯಾರು?, ಇವರು ಯಾಕೆ ಫೇಮಸ್?: ಈ ವೃದ್ಧೆಯ ಹೆಸರು ಕಮಲಾ ಮಹಾರಾಣಾ (Kamala Maharana). ಒಡಿಶಾ ಮೂಲದ ಇವರು ತ್ಯಾಜ್ಯ ವಸ್ತುಗಳನ್ನು ಬಳಸಿ ಅನೇಕ ಗೃಹೋಪಯೋಗಿ ವಸ್ತುಗಳನ್ನು ತಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿಯವರು ಇವರನ್ನು ಗುರುತಿಸಿ, ಕೆಲಸವನ್ನು ಕೊಂಡಾಡಿದ್ದರು. ಇದನ್ನೂ ಓದಿ: ಡಾ.ಮಂಜುನಾಥ್ ಗೆಲುವಿಗೆ ಹರಕೆಹೊತ್ತ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ
ಬುಧವಾರ ಪ್ರಧಾನಿಯವರು ಚುನಾವಣಾ ರ್ಯಾಲಿ ನಡೆಸಲು ಒಡಿಶಾದ ಕೇಂದ್ರಪಾರಕ್ಕೆ ತೆರಳಿದ್ದರು. ಅಂತೆಯೇ ರ್ಯಾಲಿ ಬಳಿಕ ವೇದಿಕೆಯಲ್ಲಿ ಕಮಲಾ ಮಹಾರಾಣಾ ಅವರನ್ನು ಭೇಟಿಯಾದರು. ಈ ವೇಳೆ ಕಮಲಾ ಅವರು ಮೋದಿಯವರ ಕಾಲಿಗೆ ನಮಸ್ಕರಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಮೋದಿ ಕೂಡ ಮಂಡಿಯೂರಿ ಕಮಲಾ ಕಾಲಿಗೆ ನಮಸ್ಕರಿಸಿದ್ದಾರೆ.
ಕಮಲಾ ಅವರು ಸ್ವ-ಸಹಾಯ ಗುಂಪಿನ ಭಾಗವಾಗಿದ್ದಾರೆ. ಮತ್ತು ‘ವೇಸ್ಟ್ ಟು ವೆಲ್ತ್’ ಜೊತೆಗೆ ಮಹಿಳಾ ಸಬಲೀಕರಣದಲ್ಲಿ ಕೆಲಸ ಮಾಡುತ್ತಾರೆ. ಇತ್ತೀಚೆಗೆ ಕಮಲಾ ಅವರು ಪ್ರಧಾನಿ ಮೋದಿಯವರಿಗೆ ವಸ್ತ್ರದಿಂದ ತಯಾರಿಸಿದ ರಾಖಿಯನ್ನೂ ಕಳುಹಿಸಿದ್ದರು.
ಯಾದಗಿರಿ: ವಿಪರೀತ ಬಿಸಿಲಿಗೆ (Extreme Heat) ವೃದ್ಧೆ (Old Woman) ಸಾವನ್ನಪ್ಪಿದ ಘಟನೆ ಯಾದಗಿರಿ (Yadagiri) ಜಿಲ್ಲೆಯ ವಡಗೇರಾ (Wadagera) ತಾಲೂಕಿನ ಕುರಕುಂದಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಹಣಮಂತಿ (60) ಮೃತ ಕಾರ್ಮಿಕ ವೃದ್ಧೆ. ಇವರು ಉದ್ಯೋಗ ಖಾತ್ರಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಅದೇ ರೀತಿ ಸೋಮವಾರವೂ ಕೂಲಿ ಕೆಲಸಕ್ಕೆ ಹೋಗಿದ್ದು, ಬಿಸಿಲಿನಲ್ಲೇ ಕೆಲಸ ಮಾಡುತ್ತಿದ್ದರು. ಈ ವೇಳೆ ಅಧಿಕ ಬಿಸಿಲಿನಿಂದಾಗಿ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬಾಗಲಕೋಟೆಯಲ್ಲಿ ಬಾಲಾಕೋಟ್ ಏರ್‌ಸ್ಟ್ರೈಕ್ ರಹಸ್ಯ ರಿವೀಲ್ ಮಾಡಿದ ಮೋದಿ
ಉಡುಪಿ: ಮನೆಯಲ್ಲಿ ಮತದಾನ (Vote) ಮಾಡಿ ಕೆಲವೇ ಕ್ಷಣಗಳಲ್ಲಿ ವಯೋವೃದ್ಧೆ (Old Woman) ಮೃತಪಟ್ಟ ಘಟನೆ ಉಡುಪಿ (Udupi) ಜಿಲ್ಲೆಯಲ್ಲಿ ನಡೆದಿದೆ.
ಪಿ.ಯಶೋಧಾ ನಾರಾಯಣ ಉಪಾಧ್ಯ (83) ಮೃತಪಟ್ಟ ಹಿರಿಯ ಮಹಿಳೆ. ಉಡುಪಿ ಜಿಲ್ಲೆಯ ಬ್ರಹ್ಮಾವರ (Bramhavar) ತಾಲೂಕಿನ ಸಾಸ್ತಾನ ಪಾಂಡೇಶ್ವರ ನಿವಾಸಿಯಾಗಿರುವ ಯಶೋಧಾ, ಚಡಗರ ಅಗ್ರಹಾರದ ನಿವಾಸಿಯಾಗಿದ್ದಾರೆ. ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ದಿ.ನಾರಾಯಣ ಉಪಾಧ್ಯ ಅವರ ಪತ್ನಿಯಾಗಿರುವ ಅವರು, ತನ್ನ ಜೀವನದಲ್ಲಿ ಎಲ್ಲಾ ಚುನಾವಣೆಗಳಲ್ಲೂ ತಪ್ಪದೆ ಹಕ್ಕು ಚಲಾಯಿಸಿದ್ದಾರೆ. ಇದನ್ನೂ ಓದಿ: ಡಿ.ಕೆ.ಸುರೇಶ್ ಆಪ್ತನ ಮನೆ ಮೇಲೆ ಐಟಿ ದಾಳಿ
ಈ ಬಾರಿ ಹಿರಿಯ ನಾಗರಿಕರ ಕಾರ್ಯಕ್ರಮದಡಿ ಮನೆಯಿಂದಲೇ ಮತದಾನ ಮಾಡಿದ್ದರು. ಬೆಳಗ್ಗೆಯಿಂದ ಕೊಂಚ ಎದೆನೋವು ಇತ್ತು ಎಂದು ಮನೆಯವರ ಬಳಿ ಹೇಳಿಕೊಂಡಿದ್ದರು. ಆದರೆ ಮತದಾನ ಮಾಡಿ ಆಸ್ಪತ್ರೆ ತೆರಳುವುದಾಗಿ ಹೇಳಿದ್ದ ಮಹಿಳೆ ಯಶೋಧಾ ಅವರನ್ನು ಮತ ಪ್ರಕ್ರಿಯೆ ಮುಗಿದ ಮೇಲೆ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಇದನ್ನೂ ಓದಿ: ಕೊತ್ವಾಲ್ ಬ್ರದರ್ಸ್ ‘ಆ ದಿನಗಳ’ ಗೂಂಡಾಗಿರಿ ಮುಂದುವರೆಸಿದ್ದಾರೆ: ಡಿಕೆಶಿ ವಿರುದ್ಧ ಬಿಜೆಪಿ ಆಕ್ರೋಶ
ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಚಿಕಿತ್ಸೆಗೆ ಸ್ಪಂದಿಸದೆ ಯಶೋಧಮ್ಮ ಕೊನೆಯುಸಿರೆಳೆದಿದ್ದಾರೆ. ಮೃತರು ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಚುನಾವಣಾ ಪ್ರಕ್ರಿಯೆ ತನ್ಮ ಹಕ್ಕು ಚಲಾಯಿಸಬೇಕೆಂಬ ಆಸೆಯನ್ನು ಪೂರ್ತಿಗೊಳಿಸಿ ಇಹಲೋಕ ತ್ಯಜಿಸಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಇದನ್ನೂ ಓದಿ: ನನಗೂ ನನ್ನ ಮಗನಿಗೂ ಭವಿಷ್ಯ ಇಲ್ಲ ಅಂತಾ ಗೊತ್ತಿದ್ದೇ ಈ ನಿರ್ಧಾರ ಮಾಡಿದ್ದೇನೆ: ಈಶ್ವರಪ್ಪ
ದಿಲ್ ಷಾದ್ ಹಾಗೂ ಖಲೀಂ ಅಕ್ಕ-ಪಕ್ಕದ ಮನೆಯಲ್ಲಿ ವಾಸವಿದ್ದಾರೆ. ಪದೇ ಪದೇ ಅವರ ಮನೆಯ ಕಸ ತಂದು ತನ್ನ ಮನೆ ಬಳಿ ಹಾಕ್ತಾರೆಂದು ಆಕ್ರೋಶ ವ್ಯಕ್ತಪಡಿಸಲಾಯಿತು. ಇದೇ ವಿಚಾರಕ್ಕೆ ಆಗಾಗ ಜಗಳ ಕೂಡ ಆಗುತ್ತಿತ್ತು. ನಿನ್ನೆ ರಾತ್ರಿ ಕೂಡ ಕಸ ಹಾಕುವ ವಿಚಾರಕ್ಕೆ ಗಲಾಟೆ ನಡೆದಿದೆ. ಈ ವೇಳೆ ಖಲೀಂ ದೊಣ್ಣೆಯಿಂದ ದಿಲ್ ಷಾದ್ ತಲೆಗೆ ಹೊಡೆದಿದ್ದಾನೆ.
ಪರಿಣಾಮ ವೃದ್ಧೆ ದಿಲ್ ಷಾದ್ ಗೆ ಗಂಭೀರ ಗಾಯಗಳಾಗಿವೆ. ಸದ್ಯ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು-ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಈ ಸಂಬಂಧ ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆನೇಕಲ್: ವಯಸ್ಸಾದ ವೃದ್ಧೆಯನ್ನು (Old Woman) ಮಗಳು (Daughter) ಹಾಗೂ ಅಳಿಯ (Son In Law) ರಾತ್ರೋರಾತ್ರಿ ರಸ್ತೆಯಲ್ಲಿ ಬಿಟ್ಟುಹೋದ ಘಟನೆ ಆನೇಕಲ್‌ನಲ್ಲಿ (Anekal) ನಡೆದಿದೆ.
ಗ್ರೇಸಿ ಪೀಟರ್ (80) ಎಂಬ ವೃದ್ಧೆಯನ್ನು ಆಕೆಯ ಮಗಳು ಹಾಗೂ ಅಳಿಯ ರಾತ್ರಿ ವೇಳೆ ಕಾರಿನಲ್ಲಿ ಕರೆದುಕೊಂಡು ಬಂದು ರಸ್ತೆಯಲ್ಲಿ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಪಾಪಿ ಮಗಳು ಮತ್ತು ಅಳಿಯನ ಈ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಗಳು ಆಶಾ ರಾಣಿ, ಅಳಿಯ ಮಂಜುನಾಥ್ ಹಾಗೂ ಮೊಮ್ಮಕ್ಕಳ ಜೊತೆ ವೃದ್ಧೆ ದೊಮ್ಮಸಂದ್ರದಲ್ಲಿ ವಾಸವಾಗಿದ್ದರು. ಇದೀಗ ಹೆತ್ತ ತಾಯಿಯನ್ನೇ ಮಗಳು ಮತ್ತು ಅಳಿಯ ಬೀದಿಗೆ ತಳ್ಳಿದ್ದಾರೆ. ಇದನ್ನೂ ಓದಿ: ಅಟ್ಟಾಡಿಸಿ ಮಾರಕಾಸ್ತ್ರಗಳಿಂದ 25 ಬಾರಿ ಇರಿದು ವ್ಯಕ್ತಿಯ ಹತ್ಯೆ
ಆನೇಕಲ್ ತಾಲೂಕಿನ ಸರ್ಜಾಪುರ (Sarjapur) ಸಮೀಪದ ವಿ.ಕಲ್ಲಹಳ್ಳಿಯಲ್ಲಿ ಘಟನೆ ನಡೆದಿದೆ. ವೃದ್ಧೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಆಕೆಯನ್ನು ದೇವಾಲಯದ ಬಳಿ ಮಲಗಿಸಿ ಅಲ್ಲಿಂದ ಕಾರಿನಲ್ಲಿ ಪರಾರಿಯಾಗಿದ್ದಾರೆ. ತಂದೆ-ತಾಯಿಯನ್ನು ಆಶ್ರಮಕ್ಕೆ ಬಿಡುವ ಮಕ್ಕಳನ್ನು ನೋಡಿದ್ದೇವೆ. ಆದರೆ ಇವರ ನಾಚಿಗೇಡಿನ ಕೆಲಸ ಎಂಥವರನ್ನೂ ಮನಕಲಕುವಂತೆ ಮಾಡುತ್ತದೆ. ವೃದ್ಧೆ ಗಾಳಿ, ಚಳಿಯಲ್ಲಿ ದೇವಾಲಯದ ಬಳಿ ಮಲಗಿದ್ದನ್ನು ನೋಡಿದ ಗ್ರಾಮಸ್ಥರು ಆಕೆಯನ್ನು ರಕ್ಷಣೆ ಮಾಡಿ ಆಶ್ರಮಕ್ಕೆ ಬಿಟ್ಟಿದ್ದಾರೆ. ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ 30 ಅಡಿ ಕಂದಕಕ್ಕೆ ಉರುಳಿದ ಬಸ್ – ಓರ್ವ ಸಾವು, 25 ಮಂದಿ ಗಂಭೀರ
ಇಷ್ಟು ಮಾತ್ರವಲ್ಲದೇ ಅಳಿಯ ಮಂಜುನಾಥ್ ದಿನನಿತ್ಯ ಕುಡಿದು ಬಂದು ವೃದ್ದೆಯ ಮೇಲೆ ಹಲ್ಲೆ ನಡೆಸುತ್ತಿದ್ದ. ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದನೆ ಕೂಡಾ ಮಾಡುತ್ತಿದ್ದ. ವೃದ್ಧೆಯ ಕಾಲು ಮುರಿದು ಈ ಪಾಪಿಗಳು ಹಲ್ಲೆ ನಡೆಸಿದ್ದರು. ಮೈಮೇಲಿನ ಗಾಯಗಳಿಂದ ವೃದ್ಧೆ ನರಳಾಡುತ್ತಿದ್ದರು. ದೇವಾಲಯದ ಬಳಿ ಮಲಗಿದ್ದ ಈ ಹಿರಿ ಜೀವವನ್ನು ಗ್ರಾಮಸ್ಥರು ಗಮನಿಸಿ ಬನ್ನೇರುಘಟ್ಟದ ಆಶ್ರಮಕ್ಕೆ ರವಾನಿಸಿದ್ದು, ವೈದ್ಯರ ಚಿಕಿತ್ಸೆಯೊಂದಿಗೆ ವೃದ್ಧೆ ಚೇತರಿಸಿಕೊಳ್ಳುತ್ತಿದ್ದಾರೆ. ಈ ಸಂಬಂಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಬೆನಾಪೋಲ್ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ – ಐವರು ಸಜೀವ ದಹನ
ಬೀಜಿಂಗ್: ಕಣ್ಣಿನ ವೈದ್ಯರೊಬ್ಬರು (Eye Doctor) ಶಸ್ತ್ರಚಿಕಿತ್ಸೆ ವೇಳೆ ವೃದ್ಧೆಯ ತಲೆಗೆ ಮೂರು ಬಾರಿ ಹೊಡೆದ ಘಟನೆ ಚೀನಾದಲ್ಲಿ (China) ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.
ಈ ಘಟನೆ 2019ರಲ್ಲಿ ನಡೆದಿದ್ದು, ಇದರ ವೀಡಿಯೋ ಸಾಕಷ್ಟು ವೈರಲ್ (Viral Video) ಆಗಿದೆ. ಈ ಸಂಬಂಧ ಆಸ್ಪತ್ರೆಯೂ ಕೂಡ ಸ್ಪಷ್ಟನೆಯ ಹೇಳಿಕೆ ಬಿಡುಗಡೆ ಮಾಡಿತ್ತು. ಸದ್ಯ ವೈದ್ಯನನ್ನೇ ಆಸ್ಪತ್ರೆಯಿಂದ ಅಮಾನತು ಮಾಡಲಾಗಿದೆ.
ನಡೆದಿದ್ದೇನು..?: 82 ವರ್ಷದ ವೃದ್ಧೆಯೊಬ್ಬರು ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ (Eye Surgery) ಆಸ್ಪತ್ರೆಗೆ ಹೋದರು. ಈ ವೇಳೆ ವೈದ್ಯರು ವೃದ್ಧೆಗೆ ಅನಸ್ತೇಶಿಯಾ ನೀಡಿದ್ದಾರೆ. ಈ ವೇಳೆ ವೈದ್ಯರು ಭಾಷೆ ವೃದ್ಧೆಗೆ ಅರ್ಥವಾಗುತ್ತಿರಲಿಲ್ಲ. ವೃದ್ಧೆ ಸ್ಥಳೀಯ ಭಾಷೆ ಮಾತನಾಡುತ್ತಿದ್ದರಿಂದ ಆಕೆಗೆ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ವೈದ್ಯರ ಎಚ್ಚರಿಕೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಪರಿಣಾಮ ತನ್ನ ಮಾತಿಗೆ ವೃದ್ಧೆ ಪ್ರತಿಕ್ರಿಯಿಸುತ್ತಿಲ್ಲ ಎಂದು ಸಿಟ್ಟುಗೊಂಡು ತಲೆಗೆ ಮೂರು ಬಾರಿ ಹೊಡೆದಿದ್ದಾರೆ.
ಈ ಘಟನೆ ತುಂಬಾ ಹಳೆಯದ್ದಾಗಿದ್ದು, ಅಂದರೆ 2019ರಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಈ ಘಟನೆಯ ಸಂಪೂರ್ಣ ವೀಡಿಯೋ ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೀಡಿಯೋವನ್ನು ಆಸ್ಪತ್ರೆಯ ವೈದ್ಯರೊಬ್ಬರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯೊಂದರಲ್ಲಿ ಹಂಚಿಕೊಂಡಿದ್ದರು. ಬಳಿಕ ಈ ವೀಡಿಯೋ ಸಾಕಷ್ಟು ವೈರಲ್ ಆಗಿತ್ತು, ಈಗಲೂ ವೈರಲ್ ಆಗುತ್ತಿದೆ.
ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಆಸ್ಪತ್ರೆ ಕೂಡ ಸ್ಪಷ್ಟನೆ ನೀಡಿದೆ. ಶಸ್ತ್ರಚಿಕಿತ್ಸೆಗಾಗಿ ರೋಗಿಗೆ ಅನಸ್ತೇಶಿಯಾ ನೀಡಲಾಯಿತು. ಆದರೆ ವೃದ್ಧೆ ಅದನ್ನು ಸಹಿಸಿಕೊಳ್ಳಲು ತಯಾರಿರಲಿಲ್ಲ. ಇಷ್ಟು ಮಾತ್ರವಲ್ಲದೇ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ವೃದ್ಧೆ ತನ್ನ ತಲೆ ಮತ್ತು ಕಣ್ಣುಗುಡ್ಡೆಗಳನ್ನು ಚಲಿಸುತ್ತಲೇ ಇದ್ದಳು. ರೋಗಿಯು ಸ್ಥಳೀಯ ಉಪಭಾಷೆಯನ್ನು ಮಾತನಾಡುತ್ತಿದ್ದರಿಂದ ಮ್ಯಾಂಡರಿನ್‌ನಲ್ಲಿ ವೈದ್ಯರ ಎಚ್ಚರಿಕೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ತುರ್ತು ಪರಿಸ್ಥಿತಿಯಲ್ಲಿಯೂ ರೋಗಿಗೆ ವೈದ್ಯರು ಚಿಕಿತ್ಸೆ ನೀಡಿದರು ಎಂದು ಆಸ್ಪತ್ರೆ ಸ್ಪಷ್ಟನೆ ನೀಡಿದೆ.
ಆದರೂ ವೃದ್ಧೆಯ ಮೇಲೆ ವೈದ್ಯರು ತೋರಿದ ಅಮಾನವೀಯತೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶದ ಜೊತೆಗೆ ಖಂಡನೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯು ಸದ್ಯ ವೈದ್ಯನನ್ನು ಅಮಾನತು ಮಾಡಿದೆ. ಅಲ್ಲದೆ ವೃದ್ಧೆಯ ಕ್ಷಮೆಯಾಚಿಸಿ ಆಸ್ಪತ್ರೆಯು ಆಕೆಗೆ 5,800 ರೂ. ಪರಿಹಾರವನ್ನು ನೀಡಿತು. ಈ ನಡುವೆ ತನ್ನ ತಾಯಿಯ ಎಡಗಣ್ಣು ಕುರುಡಾಗಿದೆ ಎಂದು ವೃದ್ಧೆಯ ಮಗ ಗಂಭೀರ ಆರೋಪ ಮಾಡಿದ್ದಾನೆ. ಆದರೆ ಇದು ಇದೇ ಘಟನೆಯಿಂದಾಗಿ ಇದು ಸಂಭವಿಸಿದೆ ಎಂದು ಸೂಚಿಸುವ ಯಾವುದೇ ವೈದ್ಯಕೀಯ ವರದಿಗಳಿಲ್ಲ ಎಂದು ಆಸ್ಪತ್ರೆ ಹೇಳಿದೆ.