Tag: ವೃದ್ಧಾಪ್ಯ ವೇತನ

  • ವೃದ್ಧಾಪ್ಯ ವೇತನಕ್ಕೆ ಕಚೇರಿಯಲ್ಲಿ ಕ್ಯೂನಲ್ಲಿ ನಿಂತಿದ್ದ 62ರ ವೃದ್ಧ ಸಾವು

    ವೃದ್ಧಾಪ್ಯ ವೇತನಕ್ಕೆ ಕಚೇರಿಯಲ್ಲಿ ಕ್ಯೂನಲ್ಲಿ ನಿಂತಿದ್ದ 62ರ ವೃದ್ಧ ಸಾವು

    ಶ್ರೀನಗರ: ವೃದ್ಧಾಪ್ಯ ವೇತನ (Old Age Pension) ಪಡೆಯಲು ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಕ್ಯೂನಲ್ಲಿ ನಿಂತಿದ್ದಾಗ 62 ವರ್ಷದ ವೃದ್ಧ ಸಾವಿಗೀಡಾಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಬಂಡಿಪೋರಾ ಜಿಲ್ಲೆಯಲ್ಲಿ ನಡೆದಿದೆ.

    ಬಂಡಿಪೋರಾದ ಮಲಂಗಮ್ ನಿವಾಸಿ ಸೋನಾವುಲ್ಲಾ ಭಟ್ ಅವರು ಮಂಗಳವಾರ ಬೆಳಗ್ಗೆ ತಹಸಿಲ್ ಸಮಾಜ ಕಲ್ಯಾಣ ಕಚೇರಿಯಲ್ಲಿ ತಮ್ಮ ದಾಖಲೆಗಳನ್ನು ಪರಿಶೀಲನೆಗಾಗಿ ಸಲ್ಲಿಸಲು ತಮ್ಮ ಸರದಿಗಾಗಿ ಕಾಯುತ್ತಿದ್ದಾಗ ಸಾವನ್ನಪ್ಪಿದ್ದಾರೆ. ಆದರೆ ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ವಿರುದ್ಧ ಸುಳ್ಳು ಸುದ್ದಿ ಪ್ರಸಾರ – 33 ಲಕ್ಷ ಚಂದಾದಾರರಿದ್ದ 3 ಯೂಟ್ಯೂಬ್ ಚಾನೆಲ್ ಪತ್ತೆ

    ಪಾವತಿ ಪ್ರಕ್ರಿಯೆಯನ್ನು ಆನ್‌ಲೈನ್ ಮೋಡ್‌ಗೆ ವರ್ಗಾಯಿಸಿರುವುದರಿಂದ ಕಾಶ್ಮೀರದಲ್ಲಿ ಸಾವಿರಾರು ವೃದ್ಧಾಪ್ಯ ಪಿಂಚಣಿದಾರರು ತಮ್ಮ ಪಿಂಚಣಿಯನ್ನು ಕ್ರಮಬದ್ಧಗೊಳಿಸುವುದಕ್ಕಾಗಿ ಹಲವು ತಿಂಗಳುಗಳಿಂದ ಮನೆಯಿಂದ ಕಚೇರಿಗೆ ಅಲೆಯುವಂತಾಗಿದೆ. ವೃದ್ಧರ ವಿಚಾರದಲ್ಲಿ ಮಾನವೀಯ ಧೋರಣೆ ಅಳವಡಿಸಿಕೊಳ್ಳುವಂತೆ ಆಡಳಿತ ಪಕ್ಷವನ್ನು ವಿಪಕ್ಷಗಳು ಒತ್ತಾಯಿಸಿವೆ.

    ಭಟ್ ಅವರ ಸಾವಿನ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಿಪಿಐ(ಎಂ) ಮುಖಂಡ ಮೊಹಮದ್ ಯೂಸುಫ್ ತರಿಗಾಮಿ, ಇಡೀ ಪ್ರಕ್ರಿಯೆಯನ್ನು ಸರಳಗೊಳಿಸುವ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ. ಇದನ್ನೂ ಓದಿ: ಈ ದೇಶಕ್ಕಾಗಿ BJP ನಾಯಕನ ಮನೆ ನಾಯಿಯೂ ಸತ್ತಿಲ್ಲ – ಕೋಲಾಹಲ ಎಬ್ಬಿಸಿದ ಖರ್ಗೆ ಹೇಳಿಕೆ

    ವಿಕಲಚೇತನರು ಸೇರಿದಂತೆ ವೃದ್ಧಾಪ್ಯದಲ್ಲಿರುವ ಫಲಾನುಭವಿಗಳನ್ನು ಕಚೇರಿಗಳ ಹೊರಗೆ ಗಂಟೆಗಳ ಕಾಲ ಉದ್ದನೆಯ ಸರತಿ ಸಾಲಿನಲ್ಲಿ ಕಾಯುವಂತೆ ಮಾಡಲಾಗುತ್ತಿದೆ. ಇದು ಈ ಬಡ ವೃದ್ಧರೊಬ್ಬರ ದುರದೃಷ್ಟಕರ ಸಾವಿಗೆ ಕಾರಣವಾಯಿತು.

    Live Tv
    [brid partner=56869869 player=32851 video=960834 autoplay=true]

  • ಪಿಂಚಣಿ ನಿಲ್ಲಿಸಲು ಬದುಕಿದ್ದ ವ್ಯಕ್ತಿ ಸತ್ತನೆಂದು ದಾಖಲೆ ಸೃಷ್ಟಿ – ಸರ್ಕಾರದ ವಿರುದ್ಧ 102ರ ವೃದ್ಧನಿಂದ ಪ್ರತಿಭಟನೆ

    ಪಿಂಚಣಿ ನಿಲ್ಲಿಸಲು ಬದುಕಿದ್ದ ವ್ಯಕ್ತಿ ಸತ್ತನೆಂದು ದಾಖಲೆ ಸೃಷ್ಟಿ – ಸರ್ಕಾರದ ವಿರುದ್ಧ 102ರ ವೃದ್ಧನಿಂದ ಪ್ರತಿಭಟನೆ

    ಚಂಡೀಗಢ: ಪಿಂಚಣಿ ನಿಲ್ಲಿಸಲು ಬದುಕಿದ್ದ ವ್ಯಕ್ತಿಯನ್ನು ಸತ್ತಿದ್ದಾನೆಂದು ದಾಖಲೆ ಸೃಷ್ಟಿಸಿದ್ದ ಸರ್ಕಾರದ ಅಧಿಕಾರಿಗಳ ವಿರುದ್ಧ 102 ವಯಸ್ಸಿನ ವೃದ್ಧ ಬೀದಿಗಿಳಿದು ಪ್ರತಿಭಟಿಸಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.

    ರೋಹ್ಟಕ್ ಜಿಲ್ಲೆಯ ದುಲಿ ಚಂದ್ ಅವರು ತಾನು ಜೀವಂತವಾಗಿರುವುದನ್ನು ಸಾಬೀತುಪಡಿಸಲು ಮಾಧ್ಯಮದ ಮುಂದೆ ಕಾಣಿಸಿಕೊಂಡರು. ನಂತರ ನಗರದಲ್ಲಿ ಮೆರವಣಿಗೆ ನಡೆಸಿ ತಮ್ಮ ಹಕ್ಕೊತ್ತಾಯ ಮಂಡಿಸಿ ಶೀಘ್ರವೇ ಪಿಂಚಣಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕೇಸರಿ ಶಾಲು ಧರಿಸುವುದು ನಂಬಿಕೆಯ ಆಕ್ರಮಣಕಾರಿ ಪ್ರದರ್ಶನ – ಹಿಜಬ್ ವಿಚಾರಣೆ ವೇಳೆ ವಕೀಲ ದೇವದತ್ ಕಾಮತ್ ವಾದ

    ನಾನು ಮಾರ್ಚ್‌ನಲ್ಲಿ ನನ್ನ ಕೊನೆಯ ವೃದ್ಧಾಪ್ಯ ವೇತನ ಪಡೆದಿದ್ದೇನೆ. ಅದರ ನಂತರ ಸರ್ಕಾರಿ ದಾಖಲೆಗಳು ನಾನು ಸತ್ತಿದ್ದೇನೆ ಎಂದು ತೋರಿಸಿದ್ದರಿಂದ ನನ್ನ ಪಿಂಚಣಿಯನ್ನು ನಿಲ್ಲಿಸಲಾಯಿತು. ನಾನು ಬದುಕಿದ್ದೇನೆಂದು ಪಿಂಚಣಿಗಾಗಿ ಕಚೇರಿಗೆ ಅಲೆದರೂ ಪ್ರಯೋಜನವಾಗಿಲ್ಲ ಎಂದು ಚಂದ್‌ ಅವರು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಕುಟುಂಬದ ಐಡಿ ಮತ್ತು ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ಸೇರಿದಂತೆ ಅವರ ಗುರುತಿನ ಪುರಾವೆಗಳನ್ನು ಮಾಧ್ಯಮದ ಮುಂದೆ ಹಾಜರುಪಡಿಸಿದ್ದಾರೆ.

    ಒಂದು ತಿಂಗಳ ಹಿಂದೆಯೇ ಹರಿಯಾಣ ಮುಖ್ಯಮಂತ್ರಿಗಳ ಕುಂದುಕೊರತೆ ಪರಿಹಾರ ಮತ್ತು ನಿಗಾ ವ್ಯವಸ್ಥೆಗೆ ದೂರು ನೀಡಿದ್ದರೂ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರ ಮೊಮ್ಮಗ ಹೇಳಿದ್ದಾರೆ. ಇದನ್ನೂ ಓದಿ: ಪಾರ್ವತಿ ವೇಷದಲ್ಲಿ ನರ್ತಿಸುತ್ತಿದ್ದ 20ರ ಹುಡುಗ- ಹೃದಯಾಘಾತದಿಂದ ಸ್ಟೇಜ್‍ನಲ್ಲೇ ಕುಸಿದು ಸಾವು

    ಚಂದ್‌ ಅವರ ವೃದ್ಧಾಪ್ಯ ವೇತನ ನೀಡುವುದನ್ನು ಮುಂದುವರಿಸಬೇಕು. ಇಂತಹ ವಯೋವೃದ್ಧರಿಗೆ ಪಿಂಚಣಿ ನಿಲ್ಲಿಸಿ ಕಿರುಕುಳ ನೀಡುತ್ತಿರುವುದು ವಿಷಾದನೀಯ. ಈ ಕುರಿತು ಮುಖ್ಯಮಂತ್ರಿಗಳ ಕುಂದುಕೊರತೆ ನಿವಾರಣಾ ಕೋಶಕ್ಕೆ ದೂರು ನೀಡಿದರೂ ಯಾವುದೇ ನಿರ್ದಿಷ್ಟ ಕ್ರಮ ಕೈಗೊಂಡಿಲ್ಲ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಹರಿಯಾಣ ಘಟಕದ ಮಾಜಿ ಅಧ್ಯಕ್ಷ ನವೀನ್ ಜೈಹಿಂದ್ ಆರೋಪಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅರ್ಜಿ ಸಲ್ಲಿಸದೇ ವೃದ್ಧಾಪ್ಯ ವೇತನ ಮನೆ ಬಾಗಿಲಿಗೆ: ಆರ್.ಅಶೋಕ್

    ಅರ್ಜಿ ಸಲ್ಲಿಸದೇ ವೃದ್ಧಾಪ್ಯ ವೇತನ ಮನೆ ಬಾಗಿಲಿಗೆ: ಆರ್.ಅಶೋಕ್

    ಮಡಿಕೇರಿ: ಸರ್ಕಾರದ ಕಾರ್ಯಕ್ರಮಗಳನ್ನು ಜನರ ಬಳಿಗೆ ಮತ್ತಷ್ಟು ಪರಿಣಾಮಕಾರಿಯಾಗಿ ತಲುಪಿಸುವಲ್ಲಿ ಕಂದಾಯ ಇಲಾಖೆಯಲ್ಲಿ ಮಹತ್ತರ ಯೋಜನೆ ರೂಪಿಸಿದ್ದು, ಅರ್ಜಿ ಸಲ್ಲಿಸದೆ ವೃದ್ಧಾಪ್ಯ ವೇತನವನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮ ಇನ್ನು 15-20 ದಿನಗಳಲ್ಲಿ ಜಾರಿಗೆ ಬರಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

    ಕಂದಾಯ ಇಲಾಖೆ ಹಾಗೂ ಕೊಡಗು ಜಿಲ್ಲಾಡಳಿತದಿಂದ ಜಿಲ್ಲೆಯ ಪೊನ್ನಂಪೇಟೆಯಲ್ಲಿ ನೂತನ ತಾಲೂಕು ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಆಧಾರ್ ಕಾರ್ಡ್ ಹೊಂದಿರುತ್ತಾರೆ. ಅಲ್ಲದೆ ತಾಲೂಕು ಕಚೇರಿಯಲ್ಲಿ ಬಿಪಿಎಲ್ ಕಾರ್ಡ್ ಸಹ ಹೊಂದಿರುತ್ತಾರೆ. ಅಂತಹ 60 ವರ್ಷ ಪೂರ್ಣಗೊಂಡವರ ಮನೆ ಬಾಗಿಲಿಗೆ ಬ್ಯಾಂಕ್ ಖಾತೆಯ ಮಾಹಿತಿ ಒದಗಿಸುವಂತೆ ತಾಲೂಕು ಅಥವಾ ಜಿಲ್ಲಾಡಳಿತದಿಂದ ಪತ್ರ ಹೋಗಲಿದೆ. ನಂತರ ಅರ್ಜಿ ಸಲ್ಲಿಸದೆ ವೃದ್ಧಾಪ್ಯ ವೇತನ ಪಡೆಯಬಹುದಾಗಿದೆ ಎಂದರು.

    ಸಾಮಾಜಿಕ ಭದ್ರತಾ ಯೋಜನೆಯಡಿ ರಾಜ್ಯದಲ್ಲಿ ಏಳೂವರೆ ಸಾವಿರ ಕೋಟಿ ವಿನಿಯೋಗ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 67 ಕೋಟಿ ರೂ ಹಣವಿದೆ. ಪ್ರಕೃತಿ ವಿಕೋಪ ಸಂದರ್ಭದಲ್ಲಿ 5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಜೊತೆಗೆ ಬೆಳೆಹಾನಿಯ ಪ್ರಥಮ ಹಾಗೂ ದ್ವಿತೀಯ ಹಂತದಲ್ಲಿ ಹಣ ಬಿಡುಗಡೆ ಮಾಡಲಾಗಿದ್ದು, ಈಗಾಗಲೇ 9 ಸಾವಿರಕ್ಕೂ ಹೆಚ್ಚು ರೈತರಿಗೆ ಬೆಳೆಹಾನಿ ಪರಿಹಾರ ಪಾವತಿಸಲಾಗಿದೆ. ಪ್ರವಾಹ ಸಂದರ್ಭದಲ್ಲಿ ಗೃಹೋಪಯೊಗಿ ವಸ್ತುಗಳ ಕಳೆದುಕೊಂಡವರ ಪರಿಹಾರಕ್ಕಾಗಿ 50 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಕೋವಿಡ್ ನಿರ್ವಹಣೆಗೆ 15 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

    ಮಡಿಕೇರಿ ಮತ್ತು ವಿರಾಜಪೇಟೆ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಹಣ ಬಿಡುಗಡೆ, ಜಿಲ್ಲಾಡಳಿತ ತಡೆಗೋಡೆ ನಿರ್ಮಾಣ, ಹೀಗೆ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಹಣ ಬಿಡುಗಡೆ ಮಾಡಲಾಗಿದೆ. ಕೋವಿಡ್ ಸಂದರ್ಭದಲ್ಲಿನ ಆರ್ಥಿಕ ಸಂಕಷ್ಟದ ನಡುವೆಯೂ ಹಲವು ಅಭಿವೃದ್ಧಿ ಕಾರ್ಯಗಳನ್ನು ಸರ್ಕಾರ ಕೈಗೊಂಡಿದೆ. ಪೊನ್ನಂಪೇಟೆಯನ್ನು ತಾಲೂಕು ಕೇಂದ್ರವನ್ನಾಗಿ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಪೊನ್ನಂಪೇಟೆ ನೂತನ ತಾಲೂಕಿನ ಮೂಲ ಸೌಲಭ್ಯಕ್ಕೆ ಹಣ ಬಿಡುಗಡೆ ಮಾಡಲಾಗುವುದು. ಈಗಾಗಲೇ ತಾಲೂಕು ಆಡಳಿತಕ್ಕೆ 12 ಹುದ್ದೆಗಳಿಗೆ ಮಂಜೂರಾತಿ ನೀಡಲಾಗಿದ್ದು, 25 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದರು.

  • ವೃದ್ಧಾಪ್ಯ ವೇತನ ಕೇಳ ಬಂದ ಅಜ್ಜಿಗೆ ‘ನೀವು ಸತ್ತು ಹೋಗಿದ್ದೀರಾ’ ಎಂದ ಅಧಿಕಾರಿಗಳು

    ವೃದ್ಧಾಪ್ಯ ವೇತನ ಕೇಳ ಬಂದ ಅಜ್ಜಿಗೆ ‘ನೀವು ಸತ್ತು ಹೋಗಿದ್ದೀರಾ’ ಎಂದ ಅಧಿಕಾರಿಗಳು

    – ಬದುಕಿರುವವರನ್ನ ದಾಖಲೆಯಲ್ಲಿ ಸಾಯಿಸಿದ ಗ್ರಾಮ ಲೆಕ್ಕಿಗ!

    ಚಿಕ್ಕಮಗಳೂರು: ಆರು ತಿಂಗಳಿಂದ ವೃದ್ಧಾಪ್ಯ ವೇತನ ಬಂದಿಲ್ಲ ಎಂದು ಕೇಳಲು ಹೋದ ವೃದ್ಧೆಗೆ ನೀವು ಸತ್ತು ಹೋಗಿದ್ದೀರಾ ಎಂಬ ಅಧಿಕಾರಿಯ ಮಾತು ಕೇಳಿ ವೃದ್ಧೆ ದಿಗ್ಭ್ರಾಂತರಾದ ಘಟನೆ ಕೊಪ್ಪ ತಾಲೂಕಿನಲ್ಲಿ ನಡೆದಿದೆ.

    ಕೊಪ್ಪ ತಾಲೂಕಿನ ಸಣ್ಣಕೆರೆ ಗ್ರಾಮದ ವೃದ್ಧೆ ಜಯಮ್ಮ ಅವರಿಗೆ ಕಳೆದ ಆರು ತಿಂಗಳಿಂದ ವೃದ್ಧಾಪ್ಯ ವೇತನ ಬಂದಿರಲಿಲ್ಲ. ಯಾಕೆ ಎಂದು ಕೇಳಲು ಹೋದಾಗ ತಾಲೂಕು ಪಂಚಾಯಿತಿಯ ಅಧಿಕಾರಿಗಳ ಮಾತು ಕೇಳಿ ವೃದ್ಧಿಗೆ ಬರಸಿಡಿಲು ಬಡಿದಂತಾಗಿದೆ. ವೃದ್ಧೆ ಬ್ಯಾಂಕ್ ಖಾತೆಗೆ ವೃದ್ಧಾಪ್ಯ ವೇತನ ಜನವರಿ ತಿಂಗಳಲ್ಲಿ ಜಮೆ ಆಗಿದ್ದೆ ಕೊನೆ. ಫೆಬ್ರವರಿಯಿಂದ ಹಣ ಜಮೆಯಾಗಿ ಬಂದಿರಲಿಲ್ಲ.

    ಕಳೆದ ನಾಲ್ಕೈದು ತಿಂಗಳಿಂದ ವೃದ್ಧಾಪ್ಯ ವೇತನ ಬಂದಿಲ್ಲ ಎಂದು ಹರಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಣ್ಣಕೆರೆಯ ಜಯಮ್ಮ ತಮ್ಮ ಮನೆಯ ಪಕ್ಕದ ಯುವಕ ಹರೀಶ್ ಎಂಬವನಿಗೆ ತಾಲೂಕು ಕಚೇರಿಯಲ್ಲಿ ವಿಚಾರಿಸಿಲು ಹೇಳಿದ್ದರು. ಬಸ್ ಬೇರೆ ಇಲ್ಲ, ವೃದ್ಧೆ ಅಲ್ಲಿವರೆಗೂ ಹೋಗೋದು ಬೇಡವೆಂದು ಹರೀಶ್ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳ ಬಳಿ ವಿಚಾರಿಸಿದ್ದಾರೆ. ಆಗ ಅಧಿಕಾರಿಗಳು ಜಯಮ್ಮ ಎಂಬುವರ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

    ಈ ವಿಷಯ ಕೇಳಿ ಹರೀಶ್ ಎಂಬ ಯುವಕನಿಗೂ ಶಾಕ್ ಆಗಿತ್ತು. ಅಯ್ಯೋ ದೇವ್ರೆ, ಅಜ್ಜಿ ನಮ್ಮ ಪಕ್ಕದ ಮನೆಯಲ್ಲೇ ವಾಸವಿದ್ದಾರೆ. ಇವ್ರು ಸತ್ತಿದ್ದಾರೆ ಅಂತಾರಲ್ಲ ಎಂದು ಆತನಿಗೂ ಕಂಗಾಲಾಗಿದ್ದಾನೆ. ಹರಂದೂರು ಗ್ರಾಮ ಪಂಚಾಯಿತಿ ಗ್ರಾಮ ಲೆಕ್ಕಿಗ ನೇಸರ್ ಎಂಬವರು ವರದಿ ನೀಡಿದ್ದಾರೆ. ಹಾಗಾಗಿ ಸಾಮಾಜಿಕ ಭದ್ರತಾ ಪಿಂಚಣೆ ಯೋಜನೆಯಿಂದ ಬರುವ ಹಣವನ್ನ ತಡೆಹಿಡಿಯಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಹರಂದೂರು ಗ್ರಾಮ ಪಂಚಾಯಿತಿ ಲೆಕ್ಕಿಗ ನೇಸರ್ ಮಾಡಿದ ಎಡವಟ್ಟಿನಿಂದಾಗಿ ಜಯಮ್ಮ ಎಂಬವರಿಗೆ ಪಿಂಚಣಿ ಬರುತ್ತಿಲ್ಲ ಎಂದು ಹೇಳಲಾಗುತ್ತಿದೆ. ಗ್ರಾಮ ಲೆಕ್ಕಿಗ ಜಯಮ್ಮ ಅವರ ಮನೆಗೆ ಭೇಟಿ ನೀಡದೆ, ಕಚೇರಿಯಲ್ಲೇ ಕುಳಿತು ವರದಿ ನೀಡಿದ್ದರಿಂದ ಬದುಕಿದ್ದವರು ಸಾವನ್ನಪ್ಪಿದ್ದಾರೆ. ಜಯಮ್ಮ ಸೇರಿದಂತೆ ಅಂತಹ ಹಲವರಿಗೆ ಸರ್ಕಾರದ ಪಿಂಚಣಿ ಹಣ ಬರುತ್ತಿಲ್ಲ. ಇದಕ್ಕೆಲ್ಲಾ ಕಾರಣ ಅಧಿಕಾರಿಗಳು ಬೇಜವಾವ್ದಾರಿ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

  • ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವೃದ್ಧಾಪ್ಯ, ಶಿಷ್ಯ ವೇತನ ಹಂಚಿಕೆ

    ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವೃದ್ಧಾಪ್ಯ, ಶಿಷ್ಯ ವೇತನ ಹಂಚಿಕೆ

    ಆನೇಕಲ್: ಸರ್ಕಾರ ನೀಡುವ ವೃದ್ಧಾಪ್ಯ ವೇತನದಿಂದ ಜೀವನ ನಡೆಸಲು ಸಾಧ್ಯವಿಲ್ಲ ಎಂಬುದನ್ನು ಅರಿತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಇದೀಗ ವರ್ಷ ವರ್ಷ ಹಿಂದುಳಿದ ವರ್ಗದ ವೃದ್ಧರನ್ನು ಗುರುತಿಸಿ ಅವರಿಗೆ ಸಂಘದಿಂದ ವೃದ್ಧಾಪ್ಯ ವೇತನ ನೀಡುತ್ತಿದೆ.

    ಇಂದು ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಆನೇಕಲ್ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಆನೇಕಲ್ ತಾಲೂಕಿನಾದ್ಯಂತ 250ಕ್ಕೂ ಹೆಚ್ಚು ವೃದ್ಧರಿಗೆ ವೃದ್ಧಾಪ್ಯ ವೇತನ ನೀಡಲಾಯಿತು. ಸಂಘದಲ್ಲಿ ಸದಸ್ಯರಾಗಿರುವವರ ಮಕ್ಕಳು ಉನ್ನತ ಶಿಕ್ಷಣ ಮಾಡುತ್ತಿದ್ದಾರೆ ಅಂತಹ ಮಕ್ಕಳಿಗೆ ಪ್ರತಿ ತಿಂಗಳು ಅವರ ವಿದ್ಯಾಭ್ಯಾಸದ ವೆಚ್ಚವೆಂದು 400 ರೂಪಾಯಿಂದ 1000 ರೂಪಾಯಿ ಶಿಷ್ಯ ವೇತನ ನೀಡುತ್ತಿದ್ದು, ಆನೇಕಲ್ ತಾಲೂಕಿನ ಸುಮಾರು 150 ಮಕ್ಕಳಿಗೆ ಈ ವರ್ಷ ಈ ಯೋಜನೆಯ ಅಡಿಯಲ್ಲಿ ಶಿಷ್ಯ ವೇತನ ನೀಡಲಾಯಿತು.

    ಅತ್ತಿಬೆಲೆಯ ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೃದ್ಧಾಪ್ಯ ವೇತನ ಹಾಗೂ ಶಿಷ್ಯ ವೇತನ ವಿತರಣೆ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಅನೇಕಲ್ ವಲಯ ಸಂಘದ ಮಂಜುನಾಥ್ ಮಾತನಾಡಿ, ನಮ್ಮ ಸಂಘವು ಕೇವಲ ಸಾಲ ನೀಡಿ ಮರು ವಸೂಲಿ ಮಾಡುವುದು ಎಂಬ ತಿಳುವಳಿಕೆ ಇದೆ. ಆದರೆ ನಮ್ಮ ಸಂಘ ಹಿಂದುಳಿದ ಪ್ರದೇಶಗಳಲ್ಲಿನ ಜನರನ್ನು ಗುರುತಿಸಿ ಅವರನ್ನು ಮೇಲೆತ್ತುವ ಕೆಲಸ ಮಾಡುತ್ತಿದ್ದು, ಮೊದಲಿಗೆ ನಾವು ವೃದ್ಧಾಪ್ಯ ವೇತನಕ್ಕೆ ಗುರುತಿಸಿ ನಂತರ ಕೇಂದ್ರ ಕಛೇರಿಯಿಂದ ಒಪ್ಪಿಗೆ ಪಡೆದು ವಿತರಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿದ್ದೇವೆ ಎಂದು ತಿಳಿಸಿದರು.