Tag: ವೃದ್ಧರ ಸಾವು

  • ಫೈಝುರ್ ಲಸಿಕೆಗೆ ನಾರ್ವೆಯಲ್ಲಿ 23 ಮಂದಿ ಹಿರಿಯ ನಾಗರಿಕರು ಬಲಿ

    ಫೈಝುರ್ ಲಸಿಕೆಗೆ ನಾರ್ವೆಯಲ್ಲಿ 23 ಮಂದಿ ಹಿರಿಯ ನಾಗರಿಕರು ಬಲಿ

    ನಾರ್ವೆ: ಫೈಝುರ್ ಎಂಆರ್ ಎನ್‍ಎ ಆಧಾರಿತ ಕೊರೊನಾ ಲಸಿಕೆ ಪಡೆದ ಕೆಲವೇ ದಿನಗಳಲ್ಲಿ 23 ಹಿರಿಯ ನಾಗರಿಕರು ಮೃತಪಟ್ಟಿರುವ ಘಟನೆ ನಾರ್ವೆಯಲ್ಲಿ ನಡೆದಿದೆ.

    ದೇಶಾದ್ಯಂತ ಡಿಸೆಂಬರ್ 2019ರ ಅಂತ್ಯದಲ್ಲಿ ವ್ಯಾಕ್ಸಿನೇಷನ್ ಅಭಿಯಾನ ನಡೆಸಲಾಗಿತ್ತು, ಇದರಲ್ಲಿ ಮೊದಲ ಹಂತದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಲಸಿಕೆ ನೀಡಲಾಯಿತು. ಜೊತೆಗೆ ದೇಶದ ಹಿರಿಯ ನಾಗರಿಕರು ಸೇರಿದಂತೆ 85 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಯಿತು. ಲಸಿಕೆ ಪಡೆದವರಲ್ಲಿ 80 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ 90 ವರ್ಷಕ್ಕಿಂತ ಮೇಲ್ಪಟ್ಟ ಕೆಲವರು ಸಾವನ್ನಪ್ಪಿದ್ದಾರೆ. ಅದರಲ್ಲಿಯೂ ಈ ಎಲ್ಲಾ ಸಾವುಗಳು ಆಸ್ಪತ್ರೆ ಸಿಬ್ಬಂದಿಯಲ್ಲಿಯೇ ಸಂಭವಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

    ಅಲ್ಲದೆ ನಾರ್ವೇಜಿನ್ ಮೆಡಿಸಿನ್ ಏಜೆನ್ಸಿ ತ್ನನ ವೈಬ್ ಸೈಟ್ ನಲ್ಲಿ ಮೃತಪಟ್ಟ 23 ಹಿರಿಯರಲ್ಲಿ 13 ಮಂದಿ ಎಂಆರ್‍ಎನ್‍ಸಿ ಲಸಿಕೆ ಪಡೆದ ಬಳಿಕ ಅತಿಸಾರ, ವಾಂತಿ ಮತ್ತು ಜ್ವರದಂತಹ ಅಡ್ಡ ಪರಿಣಾಮದಿಂದ ಸಾವನ್ನಪ್ಪಿದ್ದಾರೆ ಎಂದು ಬಹಿರಂಗ ಪಡಿಸಿದೆ.

    ಘಟನೆಯ ಕುರಿತಂತೆ ನಾರ್ವೆ ಸರ್ಕಾರ 13 ಜನ ಹಿರಿಯರು ಫೈಝುರ್-ಬಯೋಎನ್ಟೆಕ್ ಲಸಿಕೆ ಸ್ವೀಕರಿಸಿದ ನಂತರ ಸಾವನ್ನಪ್ಪಿದ್ದಾರಾ ಅಥವಾ ಅದಕ್ಕೂ ಮುನ್ನವೇ ಅವರೆ ಆರೋಗ್ಯ ಸ್ಥಿರವಾಗಿರಲಿಲ್ಲವೋ ಎಂಬುದರ ಕುರಿತಂತೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ವೈದ್ಯರಿಗೆ ತಿಳಿಸಿದೆ. ಅಲ್ಲದೆ ಈ ಘಟನೆ ಆಕಸ್ಮಿಕವಾಗಿದೆ ಸಂಭವಿಸಿದೆಯೋ ಅಥವಾ ಲಸಿಕೆ ಸ್ವೀಕರಿಸಿದ ನಂತರ ಸಂಭವಿಸಿದೆಯೋ ಎಂಬುವುದರ ಕುರಿತು ಖಚಿತ ಮಾಹಿತಿ ದೊರೆತಿಲ್ಲ ಎಂದು ನಾರ್ವೇಜಿನ್ ಮೆಡಿಸಿನ್ ಏಜೆನ್ಸಿ ವೈದ್ಯಕೀಯ ನಿರ್ದೇಶಕ ಸ್ಟೈನರ್ ಮ್ಯಾಡ್ಸೆನ್ ಹೇಳಿದ್ದಾರೆ.

    ಅಲ್ಲದೆ ಚೀನಾ ತಜ್ಞರು, ರೋಗಿಗಳ ಸ್ಥಿತಿ ಮೊದಲೇ ಹದಗೆಟ್ಟಿತ್ತೋ ಅಥವಾ ಲಸಿಕೆ ಸ್ವೀಕರಿಸಿದ ನಂತರ ಸಾವು ಸಂಭವಿಸಿದೆಯೋ ಎಂಬವುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದೆ.

    ಇದೀಗ ಫೈಝುರ್ ಎಂಆರ್‍ಎನ್‍ಎ ಆಧಾರಿತ ಕೋವಿಡ್-19 ಲಸಿಕೆಯನ್ನು ನಾರ್ವೆ ದೇಶದಲ್ಲಿ ಸ್ಥಗಿತಗೊಳಿಸುವಂತೆ ನಾರ್ವೆ ತಜ್ಞರು ತಿಳಿಸಿದ್ದು, ಇತರೆ ದೇಶಗಳಿಗೂ ಲಸಿಕೆ ಬಳಸದಂತೆ ಕರೆ ನೀಡಿದ್ದಾರೆ ಎಂದು ಚೀನಿ ಪತ್ರಿಕಾ ಮಾಧ್ಯಮವೊಂದರಲ್ಲಿ ತಿಳಿಸಲಾಗಿದೆ.