Tag: ವೃತ್ರ’

  • ವೃತ್ರದತ್ತ ಸುಧಾರಾಣಿ ಬಂದ ಸುಳಿವು!

    ವೃತ್ರದತ್ತ ಸುಧಾರಾಣಿ ಬಂದ ಸುಳಿವು!

    ಗೌತಮ್ ಐಯ್ಯರ್ ನಿರ್ದೇಶನದ ವೃತ್ರ ಚಿತ್ರ ಈಗೊಂದಷ್ಟು ದಿನಗಳಿಂದ ಸದಾ ಸುದ್ದಿ ಕೇಂದ್ರದಲ್ಲಿದೆ. ಆರಂಭದಲ್ಲಿ ರಶ್ಮಿಕಾ ಮಂದಣ್ಣ ಈ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸುತ್ತಾರೆಂಬುದರಿಂದ ಹಿಡಿದು, ಅವರು ಇತ್ತೀಚೆಗೆ ಈ ಚಿತ್ರದಿಂದ ಎದ್ದು ಹೊರಡೋ ತನಕವೂ ಸುದ್ದಿಯದ್ದೇ ಕಾರುಬಾರು. ಇದೀಗ ಈ ಚಿತ್ರ ನಟಿಯೊಬ್ಬರ ಆಗಮನದಿಂದ ಮತ್ತೆ ಸದ್ದು ಮಾಡುತ್ತಿದೆ.

    ಇತ್ತೀಚೆಗಷ್ಟೇ ಈ ಚಿತ್ರದಲ್ಲಿ ರಶ್ಮಿಕಾ ಬಿಟ್ಟು ಹೋಗಿದ್ದ ಜಾಗಕ್ಕೆ ನವ ನಟಿ ನಿತ್ಯಾಶ್ರೀ ಆಗಮನವಾಗಿತ್ತು. ಈ ಮೂಲಕ ಈ ಚಿತ್ರಕ್ಕೆ ವಿಧ್ಯುಕ್ತ ಚಾಲನೆ ಸಿಕ್ಕ ವಿಚಾರವೂ ಜಾಹೀರಾಗಿತ್ತು. ಇದಾದೇಟಿಗೆ ಚಿತ್ರತಂಡ ಉಳಿಕೆ ತಾರಾಗಣದ ಆಯ್ಕೆ ಕಾರ್ಯದಲ್ಲಿ ಬ್ಯುಸಿಯಾಗಿದೆ. ಮಹಿಳಾ ಕೇಂದ್ರಿತವಾದ ಕಥಾ ಹಂದರ ಹೊಂದಿರುವ ಈ ಚಿತ್ರದ ಪ್ರಧಾನವಾದ ಪಾತ್ರಕ್ಕೆ ಸುಧಾ ರಾಣಿ ಆಯ್ಕೆಯಾಗಿದ್ದಾರೆ.

    ಇತ್ತೀಚೆಗಷ್ಟೇ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದಲ್ಲಿ ಅದ್ಭುತ ನಟನೆಯಿಂದ ಗಮನ ಸೆಳೆದಿದ್ದವರು ಸುಧಾರಾಣಿ. ಈ ಮೂಲಕವೇ ಅವರು ತಮ್ಮ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಅನ್ನು ಭರ್ಜರಿಯಾಗಿ ಶುರು ಮಾಡಿದ್ದರು. ಇದೀಗ ವೃತ್ರ ಚಿತ್ರದಲ್ಲಿಯೂ ಬೆರಗಾಗಿಸುವ ಪಾತ್ರವೊಂದು ಅವರಿಗಾಗಿ ಒಲಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಾಸಿಪ್ ಗಳಿಗೆ ರಶ್ಮಿಕಾ ಮಂದಣ್ಣ ಸ್ಪಷ್ಟನೆ

    ಗಾಸಿಪ್ ಗಳಿಗೆ ರಶ್ಮಿಕಾ ಮಂದಣ್ಣ ಸ್ಪಷ್ಟನೆ

    ಬೆಂಗಳೂರು: ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ನಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಕನ್ನಡ ‘ವೃತ್ರ’ ಸಿನಿಮಾದಿಂದ ಹೊರ ಬಂದಿದ್ದಾರೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿತ್ತು. ಈಗ ಈ ಗಾಸಿಪ್ ಗಳಿಗೆ ಸ್ವತಃ ರಶ್ಮಿಕಾ ಮಂದಣ್ಣ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.

    ‘ವೃತ್ರ’ ಸಿನಿಮಾವನ್ನು ಗೌತಮ್ ಅಯ್ಯರ್ ನಿರ್ದೇಶನ ಮಾಡುತ್ತಿದ್ದರು. ಆದರೆ ರಶ್ಮಿಕಾ ಈ ಸಿನಿಮಾದಿಂದ ಹೊರ ಬಂದಿದ್ದರ ಬಗ್ಗೆ ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ. ”ನಾನು ‘ವೃತ್ರ’ ಸಿನಿಮಾದಲ್ಲಿ ಇರುವುದಿಲ್ಲ. ನನ್ನ ವೃತ್ತಿ ಜೀವನದ ಆರಂಭದಲ್ಲಿಯೇ ಈ ರೀತಿಯ ನಿರ್ಧಾರ ತೆಗೆದುಕೊಳ್ಳುವುದು ಉತ್ತಮವಲ್ಲ ಎಂದು ನಾನು ಭಾವಿಸಿದ್ದೇನೆ. ಆದ್ದರಿಂದ ಈ ಬಗ್ಗೆ ನಾನು ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರ ಬಳಿ ಚರ್ಚೆ ಮಾಡಿದ್ದೇನೆ. ಅವರು ನನ್ನ ಪರಿಸ್ಥಿತಿಯನ್ನ ಅರ್ಥ ಮಾಡಿಕೊಂಡಿದ್ದಾರೆ. ಗೌತಮ್ ಹಾಗೂ ಚಿತ್ರ ತಂಡಕ್ಕೆ ನನ್ನ ಶುಭಾಶಯಗಳು ಮತ್ತು ಧನ್ಯವಾದಗಳು ” ಎಂದು ರಶ್ಮಿಕಾ ಮಂದಣ್ಣ ಬರೆದು ಟ್ವೀಟ್ ಮಾಡಿದ್ದಾರೆ.

    ಈಗಾಗಲೇ ‘ವೃತ್ರ’ ಸಿನಿಮಾಕ್ಕಾಗಿ ನಟಿ ರಶ್ಮಿಕಾ ಮಂದಣ್ಣ ಫೋಟೋ ಶೂಟ್ ಕೂಡ ಮಾಡಿಸಿದ್ದು, ರಶ್ಮಿಕಾ ಅವರ ಪೋಸ್ಟರ್ ಕೂಡ ರಿಲೀಸ್ ಆಗಿತ್ತು. ಈ ಸಿನಿಮಾದಲ್ಲಿ ರಶ್ಮಿಕಾಗೆ ತನಿಖಾ ಅಧಿಕಾರಿಯ ಪಾತ್ರದಲ್ಲಿ ಅಭಿನಯಿಸಬೇಕಿತ್ತು. ಆದರೆ ಈಗ ಅನಿವಾರ್ಯ ಕಾರಣಗಳಿಂದ ಕನ್ನಡ ಸಿನಿಮಾದಿಂದ ರಶ್ಮಿಕಾ ಹೊರ ಬಂದಿದ್ದಾರೆ.

    ಸದ್ಯಕ್ಕೆ ರಶ್ಮಿಕಾ ಟಾಲಿವುಡ್ ನಲ್ಲಿ ಬಹು ಬೇಡಿಕೆ ನಟಿಯಾಗಿದ್ದು, ಈಗಾಗಲೇ ಎರಡು ತೆಲುಗು ಸಿನಿಮಾಗಳಲ್ಲಿ ನಟಿಸಿ ಯಶಸ್ಸು ಕಂಡಿದ್ದಾರೆ. ಈಗ ನಟ ನಾಗರ್ಜುನ್ ಮತ್ತು ನಾನಿ ಅಭಿನಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಷ್ಟೇ ಅಲ್ಲದೇ ‘ಗೀತಾ ಗೋವಿಂದಂ’ ಸಿನಿಮಾದಲ್ಲಿ ಮಾಡಿದ್ದ ನಟ ವಿಜಯ್ ದೇವರಕೊಂಡ ಜೊತೆ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ.

    ಮುಂದಿನ ವರ್ಷದ ಆರಂಭದವರೆಗೂ ರಶ್ಮಿಕಾ ಮಂದಣ್ಣ ಅವರ ಡೇಟ್ಸ್ ಬುಕ್ ಆಗಿದೆ. ಆದ್ದರಿಂದ ‘ವೃತ್ರ’ ಸಿನಿಮಾ ಮಾಡಲು ಸಮಯದ ಅಭಾವದಿಂದ ಈ ಸಿನಿಮಾದಿಂದ ಹೊರ ಬಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv