Tag: ವೃತ್ತ

  • ‘ವೃತ್ತ’ ಸಿನಿಮಾಗೆ ಪ್ರಸೆಂಟ್ ಮಾಡಲು ಬಂದ ನೀನಾಸಂ ಸತೀಶ್

    ‘ವೃತ್ತ’ ಸಿನಿಮಾಗೆ ಪ್ರಸೆಂಟ್ ಮಾಡಲು ಬಂದ ನೀನಾಸಂ ಸತೀಶ್

    ಪ್ರತಿ ದಿನ ಹೊಸ ಸಿನಿಮಾ ಸೆಟ್ಟೇರೋದು ಟ್ರೇಲರ್‌ ಟೀಸರ್‌ ಬಿಡುಗಡೆ ಆಗೋದು ಹೊಸತೇನಲ್ಲ. ಆದರೆ ಬಿಡುಗಡೆ ಆದ ಕೆಲವೇ ಕೆಲವು ಸಿನಿಮಾ ಟೀಸರ್‌  ಪ್ರೇಕ್ಷಕರ ಗಮನ ಸೆಳೆಯುತ್ತವೆ. ಸದ್ಯ ಈಗ ಸಿನಿ ಪ್ರೇಮಿಗಳ ಗಮನ ಸೆಳೆದಿರುವ ಟೀಸರ್‌ ವೃತ್ತ. ವೃತ್ತ (Virtta) ಅಂದ ತಕ್ಷಣ ಒಂದು ಸರ್ಕಲ್‌ ನಲ್ಲಿ ನಡೆಯೋ ಸ್ಟೋರಿ ಇರಬೇಕು ಅನ್ನೋದು ಮೊದಲಿಗೆ ಅನ್ನಿಸುತ್ತೆ ಆದ್ರೆ ಈ ವೃತ್ತ ಸಿನಿಮಾದ ಕಾನ್ಸೆಪ್ಟ್‌ ಬೇರೆ. ಸಿನಿಮಾ ಕಂಪ್ಲೀಟ್‌ ಮಾಡಿ ಟೀಸರ್‌ ಬಿಡುಗಡೆ ಮಾಡಿರೋ ವೃತ್ತ ತಂಡಕ್ಕೆ ನಟ ನೀನಾಸಂ ಸತೀಶ್‌ ಸಾಥ್‌ ಸಿಕ್ಕಿದೆ. ಸಿನಿಮಾ ಟೀಸರ್‌, ಟ್ರೇಲರ್‌ ನೋಡಿ ಚಿತ್ರವನ್ನ ತಮ್ಮದೇ ಬ್ಯಾನರ್‌ ಅಡಿಯಲ್ಲಿ ಪ್ರಸೆಂಟ್‌ ಮಾಡೋದಕ್ಕೆ ಸತೀಶ್‌ ನಿರ್ಧಾರ ಮಾಡಿದ್ದಾರೆ ಟೀಸರ್‌ ಲಾಂಚ್‌ ಗೆ ಬಂದು ಹೊಸಬರ ಪ್ರಯತ್ನಕ್ಕೆ ಸಾಥ್‌ ಕೊಟ್ರು. ಹೊಸ ತಂಡವಾದ್ರು ಎಲ್ಲಾ ರೀತಿಯಲ್ಲೂ ತಯಾರಿ ಮಾಡಿಕೊಂಡೆ ಬಂದಿದ್ದಾರೆ ಅನ್ನೋದು ಟೀಸರ್‌ ನೋಡಿದ್ರೆ ತಿಳಿಯುತ್ತೆ.

    ವೃತ್ತ ಸಿನಿಮಾವನ್ನ ನಿರ್ದೇಶನ ಮಾಡುವುದರ ಜೊತೆಗೆ ಲಿಖಿಕ್‌ ಕುಮಾರ್‌ ಎಸ್ ಕನ್ನಡ ಸಿನಿಮಾರಂಗಕ್ಕೆ ನಿರ್ದೇಶಕನಾಗಿ ಕಾಲಿಡುತ್ತಿದ್ದಾರೆ…ಇನ್ನು ಚಿತ್ರವನ್ನ ಲಕ್ಷ್ಯ ಆರ್ಟ್ಸ್‌ ಬ್ಯಾನರ್‌ ಅಡಿಯಲ್ಲಿ ಟಿ ಶಿವಕುಮಾರ್‌ ನಿರ್ಮಾಣ ಮಾಡಿದ್ದಾರೆ..ಚಿತ್ರದ ವಿಶೇಷ ಅಂದ್ರೆ ನಾಯಕ ಒಬ್ಬನ ಸುತ್ತಲೇ ಕಥೆ ಕೇಂದ್ರೀಕೃತವಾಗಿರುತ್ತಂತೆ. ಚಿತ್ರಕ್ಕೆ ಸಿಂಕ್ರೋನೈಸ್‌ ಮಾಡಿದ ಧ್ವನಿಯನ್ನ ಬಳಸಲಾಗಿದೆ… ಸಿನಿಮಾಗೆ ಯೋಗೀಶ್‌ ಗೌಡ ಚಿತ್ರಕಥೆ ಬರೆದಿದ್ದಾರೆ ಸುರೇಶ್‌ ಆರ್ಮುಗಂ ಸಂಕಲನ, ಶಂಕರ್‌ ರಾಮನ್‌ ಅವರ ಸಂಭಾಷಣೆ, ಗೌತಮ್‌ ಕೃಷ್ಣ ಅವರ ಛಾಯಾಗ್ರಹಣ ಮತ್ತು ಆಂಟನಿ ಹಾಗೂ ಹರಿ ಕ್ರಿಶಾಂತ್‌ ಎಸ್‌ ಅವರ ಸಂಗೀತ ಚಿತ್ರಕ್ಕಿದೆ..ಬಹುತೇಕ ಹೊಸಬರೇ ಕೂಡಿ ಮಾಡಿರೋ ಚಿತ್ರ ಇದಾಗಿದ್ದು, ಟೆಕ್ನಿಕಲಿ ಸ್ಟ್ರಾಂಗ್‌ ಆಗಿ ಇದ್ದರೆ ಸಿನಿಮಾ ಕೂಡ ಚೆನ್ನಾಗಿ ಇರುತ್ತೆ ಅನ್ನೋದು ಸಿನಿಮಾತಂಡದ ಮಾತು…

    ಚಿತ್ರದ ತಾರಾಗಣದಲ್ಲಿ ನಾಯಕನಾಗಿ ಮಾಹಿರ್‌ ಮೊಹಿದ್ದೀನ್‌ , ಚೈತ್ರಾ ಜೆ ಆಚಾರ್‌ , ಹತಿಣಿ ಸುಂದರ ರಾಜನ್‌ ಅಭಿನಯ ಮಾಡಿದ್ದಾರೆ ..ನಾಯಕನಾಗಿ ಕಾಣಿಸಿಕೊಳ್ತಿರೋ ಮಾಹಿರ್‌ ಸಾಕಷ್ಟು ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ…ಟೀಸರ್‌ ನಲ್ಲಿ ಮಾಹಿರ್‌ ಅಭಿನಯ ಗಮನ ಸೆಳೆದಿದ್ದು ಮುಂದಿನ ದಿನಗಳಲ್ಲಿ ಮಾಹಿರ್‌ ಅದ್ಬುತ ಕಲಾವಿದನಾಗಿ ಚಿತ್ರರಂಗದಲ್ಲಿ ಉಳಿದುಕೊಳ್ಳುವ ಎಲ್ಲಾ ಭರವಸೆಗಳು ಕಾಣ್ತಿದೆ…

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕ ಮಾಹೀರ್‌ ನಟನೆ ನನ್ನ ಬಹು ದಿನದ ಕನಸು ಅದನ್ನ ನಾಟಕಗಳ ಮೂಲಕ ನನಸು ಮಾಡಿಕೊಳ್ಳುತ್ತಿದ್ದೆ ಈಗ ವೃತ್ತ ಸಿನಿಮಾ ಮೂಲಕ ದೊಡ್ಡ ಪರದೆಗೆ ಬರುತ್ತಿರೋದು ಮತ್ತಷ್ಟು ಖುಷಿಕೊಟ್ಟಿದೆ ಎಂದರು..ನಿರ್ದೇಶಕ ಲಿಖಿತ್‌ ಮಾತನಾಡಿ ಹೊಸ ಸಿನಿಮಾಗೆ ಸತೀಶ್‌ ಅವರ ಸಪೋರ್ಟ್‌ ಸಿಕ್ಕಿರೋದು ಖುಷಿ ತಂದಿದೆ.. ಕಿರು ಚಿತ್ರಗಳನ್ನ ಮಾಡುತ್ತಾ ಇದ್ದ ತಂಡ ಇವತ್ತು ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಿದ್ದರಾಗಿಗಿದ್ದೇವೆ ಎಂದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿನಿಮಾತಂಡ ನಿನಾಸಂ ಸತೀಶ್‌ ಅವರ ಸಹಾಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ರು…. ಸಿನಿಮಾ ನೋಡಿ ಖುಷಿಯಾಗಿರೋ ಸತೀಶ್‌ ಹೊಸಬರ ಸಿನಿಮಾ ಅನ್ನೋ ಕಾರಣಕ್ಕೆ ಬಂದಿಲ್ಲ ಸಿನಿಮಾ ಚೆನ್ನಾಗಿದೆ ಅನ್ನೋ ಕಾರಣಕ್ಕೆ ಸಪೋರ್ಟ್‌ ಮಾಡುತ್ತಿದ್ದೇನೆ ಅಂದ್ರು…. ಸದ್ಯ ಟೀಸರ್‌ ಬಿಡುಗಡೆ ಮಾಡಿರುವ ತಂಡ ಆದಷ್ಟು ಬೇಗ ಟ್ರೇಲರ್‌ ಲಾಂಚ್‌ ಮಾಡಿ ಇದೇ ವರ್ಷಾಂತ್ಯದಲ್ಲಿ ತೆರೆಗೆ ಬರೋ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

  • ಶಿರವಾಳ ಗ್ರಾಮದ ವೃತ್ತಕ್ಕೆ ಪುನೀತ್ ಹೆಸರು ನಾಮಕರಣ

    ಶಿರವಾಳ ಗ್ರಾಮದ ವೃತ್ತಕ್ಕೆ ಪುನೀತ್ ಹೆಸರು ನಾಮಕರಣ

    ಶಿವಮೊಗ್ಗ: ಶಿರವಾಳ ಗ್ರಾಮದ ವೃತ್ತಕ್ಕೆ ಪುನೀತ್ ರಾಜ್‍ಕುಮಾರ್ ವೃತ್ತ ಎಂದು ನಾಮಕರಣ ಮಾಡಲಾಗಿದೆ.

    ಅಭಿಮಾನಿಗಳ ಅಭಿಮಾನಕ್ಕೆ, ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪವರ್ ಸ್ಟಾರ್ ಪುನೀತ್‍ರಾಜ್‍ಕುಮಾರ್ ಅವರ ಅಗಲಿಕೆ ಅಭಿಮಾನಿಗಳಿಗೆ ಸಾಕಷ್ಟು ನೋವುಂಟು ಮಾಡಿದೆ. ಈ ಹಿನ್ನೆಲೆ ಅಭಿಮಾನಿಗಳಿಗೆ ತೋಚಿದ ರೀತಿಯಲ್ಲಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಸಾಗರ ತಾಲೂಕಿನ ಶಿರವಾಳ ಗ್ರಾಮಸ್ಥರು ತಮ್ಮ ಗ್ರಾಮದ ವೃತ್ತವೊಂದಕ್ಕೆ ಪುನೀತ್ ರಾಜ್‍ಕುಮಾರ್ ವೃತ್ತ ಎಂದು ನಾಮಕರಣ ಮಾಡಿ ತಮ್ಮ ಅಭಿಮಾನವನ್ನು ಮೆರೆದಿದ್ದಾರೆ. ಇದನ್ನೂ ಓದಿ: ಅಪ್ಪು ಸಮಾಧಿ ಬಳಿ ನೃತ್ಯ ನಮನ ಸಲ್ಲಿಸಿದ ಪುಟಾಣಿಗಳು

    ತಮ್ಮ ಗ್ರಾಮದಲ್ಲಿ ಪುನೀತ್ ರಾಜ್‍ಕುಮಾರ್ ವೃತ್ತ ಎಂದು ನಾಮಕರಣ ಮಾಡುವ ಮೂಲಕ ತಮ್ಮ ನೆಚ್ಚಿನ ನಟನ ಹೆಸರನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಮಾಡಿದ್ದಾರೆ.

  • Photos: ವಿದ್ಯುತ್ ದೀಪಗಳಿಂದಲೇ ಮಿಂದೆದ್ದ ಮೈಸೂರು- ಬೆಳಕಿನ ವೈಭವ ನೋಡುಗರ ಕಣ್ಣಿಗೆ ಹಬ್ಬ

    Photos: ವಿದ್ಯುತ್ ದೀಪಗಳಿಂದಲೇ ಮಿಂದೆದ್ದ ಮೈಸೂರು- ಬೆಳಕಿನ ವೈಭವ ನೋಡುಗರ ಕಣ್ಣಿಗೆ ಹಬ್ಬ

    ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾದ ವಿದ್ಯುತ್ ದೀಪಾಲಂಕಾರ ಅದುವೇ ಬೆಳಕಿನ ಚಿತ್ತಾರ. ನಾನಾ ಬಗೆಯಲ್ಲಿ ಬೆಳಕು ಸೂಸುವ ಬಗೆಬಗೆಯ ವಿನ್ಯಾಸದ ಮನಮೋಹಕ ಬೆಳಕಿನ ವೈಭವ ನೋಡುಗರ ಕಣ್ಣುಗಳಲ್ಲಿ ಹಬ್ಬದ ಸಡಗರ ಸಂಭ್ರಮ ಮನೆ ಮಾಡುತ್ತದೆ. ಈ ಬಾರಿ ವಿಭ್ನಿನವಾಗಿ ಹಾಗೂ ವಿಶೇಷವಾಗಿ ಅಲಂಕಾರ ಮಾಡಲಾಗಿದೆ.

    ದಸರಾ ವೇಳೆ ಮೈಸೂರು ಅರಮನೆ ಮಾತ್ರವಲ್ಲದೆ, ಇಡೀ ನಗರ ಕತ್ತಲಾಗುತ್ತಿದ್ದಂತೆಯೇ ವಿದ್ಯುತ್ ದೀಪಗಳ ಅಲಂಕಾರ, ಬೆಳಕಿನ ವೈಯ್ಯಾರ ಕಣ್ಣಿಗೆ ಕಟ್ಟುತ್ತಿದೆ. ನಗರದ ಎಲ್ಲಾ ರಸ್ತೆಗಳು ಹಾಗೂ ವೃತ್ತಗಳು ಬಣ್ಣ ಬಣ್ಣದ ದೀಪಗಳಿಂದ ಕಂಗೊಳಿಸುತ್ತಿವೆ.

    ಈ ಬಾರಿ ವಿಶೇಷವಾಗಿ ನಗರದ ರಸ್ತೆಗಳಲ್ಲಿ ಹಾಗೂ ವೃತ್ತಗಳಲ್ಲಿ ಅನೇಕ ಗಣ್ಯರ ಹಾಗೂ ಪಾರಂಪರಿಕ ಕಟ್ಟಡಗಳನ್ನು ಬಿದಿರಿನಿಂದ ತಯಾರು ಮಾಡಿ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಚಾಮುಂಡೇಶ್ವರಿ, ಬುದ್ಧ, ಬಸವ, ಅಂಬೇಡ್ಕರ್, ಗಾಂಧಿಜೀ, ನಾಲ್ವಡಿ, ವಿಶ್ವೇಶ್ವರಯ್ಯ, ಕೃಷ್ಣರಾಜ ಒಡೆಯರ್, ಜಂಜೂ ಸವಾರಿ ಸೇರಿದಂತೆ ಅನೇಕ ಮಹನೀಯರ ಪ್ರತಿಕೃತಿಗಳನ್ನು ನಗರದಲ್ಲಿ ನಿರ್ಮಿಸಲಾಗಿದೆ.

    ಮೈಸೂರು ಅರಮನೆ, ಸಂಸತ್ ಭವನ, ವಿಧಾನಸೌಧ, ಕೆಆರ್‍ಎಸ್ ಇಂಡಿಯಾ ಗೇಟ್, ಹಂಪಿಯ ರಥ ಸೇರಿದಂತೆ ಹಲವು ಪ್ರತಿಕೃತಿಗಳು ಲೈಟ್ ಗಳಲ್ಲಿ ಜಗಮಗಿಸುತ್ತೀವೆ. ಪ್ರವಾಸಿಗರಿಗೆ ಇಂತಹ ಕಟ್ಟಡಗಳ ಮಹತ್ವವನ್ನು ಸಾರುವ ದೃಷ್ಟಿಯಿಂದ ಮಾಡಲಾಗಿದೆ.

    https://www.youtube.com/watch?v=KhpVKpi1lno

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲೇ ಕಿತ್ತಾಡಿಕೊಂಡ ಪೊಲೀಸ್ ಪೇದೆಗಳು

    ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲೇ ಕಿತ್ತಾಡಿಕೊಂಡ ಪೊಲೀಸ್ ಪೇದೆಗಳು

    ಗದಗ: ಕುಡಿದ ಮತ್ತಿನಲ್ಲಿ ಪೊಲೀಸ್ ಪೇದೆಗಳು ನಡುರಸ್ತೆಯಲ್ಲೇ ಕಿತ್ತಾಡಿಕೊಂಡ ಘಟನೆ ನಗರದ ಬೆಟಗೇರಿ ಬಳಿಯ ಸಹಸ್ರಾರ್ಜುನ ವೃತ್ತದ ಬಳಿ ನಡೆದಿದೆ.

    ನಗರದ ಸಹಸ್ರಾರ್ಜುನ ವೃತ್ತದ ಬಳಿ ಇಬ್ಬರು ಪೊಲೀಸ್ ಪೇದೆಗಳು ಕುಡಿದ ಮತ್ತಿನಲ್ಲೇ ಕಿತ್ತಾಡಿಕೊಂಡು ಸಾರ್ವಜನಿಕರಿಗೆ ಉಚಿತ ಮನರಂಜನೆ ನೀಡಿದ್ದಾರೆ. ಮಹಿಳಾ ಠಾಣೆಯ ಪೇದೆ ಶರಣಪ್ಪ ಬಸಾಪುರ ಹಾಗೂ ಗ್ರಾಮೀಣ ಠಾಣೆಯ ಪೇದೆ ಮಂಜುನಾಥ ಬಾರಕೇರ್ ಕಿತ್ತಾಡಿಕೊಂಡ ಪೊಲೀಸ್ ಪೇದೆಗಳಾಗಿದ್ದಾರೆ.

    ಪೇದೆಗಳು ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲೇ ಕಿತ್ತಾಡಿಕೊಂಡಿರುವುದನ್ನು ಸ್ಥಳೀಯರು ವಿಡಿಯೋ ಮಾಡಿದ್ದಾರೆ. ಬಳಿದ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರಿಂದ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಜಾಲತಾಣಿಗರು ಹಾಗೂ ಸಾರ್ವಜನಿಕರು ಪೇದೆಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

    ವಿಡಿಯೋ ವೈರಲ್ ಆದ ಬೆನ್ನಲ್ಲೇ ಕೂಡಲೇ ಎಚ್ಚೆತ್ತ ಜಿಲ್ಲಾವರಿಷ್ಠಾಧಿಕಾರಿ ಸಂತೋಷ ಬಾಬುರವರು, ಪೊಲೀಸ್ ಪೇದೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews