Tag: ವುಹಾನ್

  • ಕೊರೊನಾ ವೈರಸ್‌ ವುಹಾನ್‌ ಲ್ಯಾಬ್‌ನಿಂದಲೇ ಸೋರಿಕೆ – ವಿಜ್ಞಾನಿಯಿಂದ ಸ್ಫೋಟಕ ಹೇಳಿಕೆ

    ಕೊರೊನಾ ವೈರಸ್‌ ವುಹಾನ್‌ ಲ್ಯಾಬ್‌ನಿಂದಲೇ ಸೋರಿಕೆ – ವಿಜ್ಞಾನಿಯಿಂದ ಸ್ಫೋಟಕ ಹೇಳಿಕೆ

    – ವುಹಾನ್‌ನಲ್ಲಿ ಸಂಶೋಧನೆ ನಡೆಸಿದ್ದ ಆಂಡ್ರ್ಯೂ ಹಫ್
    – ಸಂಶೋಧನೆಗೆ ಅಮೆರಿಕದಿಂದ ಧನ ಸಹಾಯ

    ನ್ಯೂಯಾರ್ಕ್‌: ಕೊರೊನಾ ವೈರಸ್‌(Corona Virus) ಮಾನವ ಸೃಷ್ಟಿ. ಚೀನಾದ ವುಹಾನ್‌ ಲ್ಯಾಬ್‌ನಿಂದಲೇ(China Wuhan Lab) ಸೋರಿಕೆಯಾಗಿದೆ ಎಂದು ಅಲ್ಲಿಯೇ ಸಂಶೋಧನೆ ನಡೆಸಿದ್ದ ವಿಜ್ಞಾನಿಯೊಬ್ಬರು ಸ್ಫೋಟಕ ಹೇಳಿಕೆ ನೀಡಿದ್ದಾರೆ.

     ವುಹಾನ್‌ ಲ್ಯಾಬ್‌ನಲ್ಲಿ ಚೀನಾ ನಡೆಸುತ್ತಿದ್ದ ವೈರಸ್‌ ಸಂಶೋಧನೆಗೆ ಅಮೆರಿಕ(USA) ಧನ ಸಹಾಯ ನೀಡಿತ್ತು ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಆಂಡ್ರ್ಯೂ ಹಫ್(Andrew Huff) ಹೇಳಿದ್ದಾರೆ.

    ಕೊರೊನಾ ಸಾಂಕ್ರಾಮಿಕ ಸೃಷ್ಟಿಯಾದ ಬಳಿಕ ಹಲವು ವಿಜ್ಞಾನಿಗಳು, ಮಾಧ್ಯಮಗಳು ಈ ವೈರಸ್‌ ವುಹಾನ್‌ ಲ್ಯಾಬ್‌ನಿಂದಲೇ ಸೋರಿಕೆಯಾಗಿದೆ ಎಂದು ಹೇಳಿದ್ದರೂ ಚೀನಾ ಎಲ್ಲವನ್ನೂ ತಿರಸ್ಕರಿಸಿತ್ತು. ಆದರೆ ಆಂಡ್ರ್ಯೂ ಹಫ್ ಅವರ ದಿ ಟ್ರೂತ್ ಎಬೌಟ್ ವುಹಾನ್‌(The Truth About Wuhan) ಪುಸ್ತಕದಲ್ಲಿ ಈ ಬಗ್ಗೆ ವಿವರವಾದ ಮಾಹಿತಿ ನೀಡಿದ್ದು ಸಂಚಲನ ಸೃಷ್ಟಿಸಿದೆ. ಇದನ್ನೂ ಓದಿ: ಚೀನಾ, ಅಮೆರಿಕ ಸಂಶೋಧನೆಯಿಂದ ವುಹಾನ್ ಮಾರುಕಟ್ಟೆಗೆ ಬಂತು ಕೊರೊನಾ

    ಸಾಂಕ್ರಾಮಿಕ ರೋಗಗಳನ್ನು (Pandemic) ಅಧ್ಯಯನ ಮಾಡುವ ನ್ಯೂಯಾರ್ಕ್ ಮೂಲದ ಲಾಭರಹಿತ ಸಂಸ್ಥೆಯಾದ ಇಕೋಹೆಲ್ತ್ ಅಲೈಯನ್ಸ್‌ನ ಮಾಜಿ ಉಪಾಧ್ಯಕ್ಷರಾಗಿರುವ ಆಂಡ್ರ್ಯೂ ಹಫ್ ಹೇಳಿಕೆ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

    “ಚೀನಾ ಲ್ಯಾಬ್‌ ಸರಿಯಾದ ನಿಯಂತ್ರಣ ಕ್ರಮಗಳನ್ನು ಹೊಂದಿರಲಿಲ್ಲ. ಸರಿಯಾದ ಜೈವಿಕ ಸುರಕ್ಷತೆ ಮತ್ತು ಅಪಾಯ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳದ ಕಾರಣ ಅಂತಿಮವಾಗಿ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಿಂದ ವೈರಸ್‌ ಸೋರಿಕೆಯಾಯಿತು. ಇದು ದೇಶಿಯವಾಗಿ ರೂಪುಗೊಂಡ ರೋಗದ ತಳಿ ಎನ್ನುವುದು ಚೀನಾಕ್ಕೆ ಮೊದಲ ದಿನದಿಂದಲೇ ತಿಳಿದಿತ್ತು” ಎಂದು ಬರೆದಿದ್ದಾರೆ. ಇದನ್ನೂ ಓದಿ: ವುಹಾನ್ ಮಾರುಕಟ್ಟೆಯ ಸೀಗಡಿ ಮಾರುತ್ತಿದ್ದ ಮಹಿಳೆ ಕೊರೊನಾ ‘ಝೀರೋ ಪೇಶೆಂಟ್’

    ಒಂದು ದಶಕಕ್ಕೂ ಹೆಚ್ಚು ಕಾಲ ವುಹಾನ್‌ ಸಂಸ್ಥೆಯು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನಿಂದ(NIH) ಧನಸಹಾಯದೊಂದಿಗೆ ಬಾವಲಿಗಳಲ್ಲಿನ(Bat) ಹಲವಾರು ಕೊರೊನಾ ವೈರಸ್‌ಗಳನ್ನು ಅಧ್ಯಯನ ಮಾಡುತ್ತಿದೆ. ಎನ್‌ಐಹೆಚ್ ವುಹಾನ್ ಲ್ಯಾಬ್‌ನೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ಬಯೋಮೆಡಿಕಲ್ ಮತ್ತು ಸಾರ್ವಜನಿಕ ಆರೋಗ್ಯ ಸಂಶೋಧನೆಯ ಜವಾಬ್ದಾರಿ ಹೊಂದಿರುವ ಈ ಎನ್‌ಐಎಚ್‌ ಅಮೆರಿಕ ಸರ್ಕಾರದ ಪ್ರಾಥಮಿಕ ಸಂಸ್ಥೆಯಾಗಿದೆ ಎಂದು ಉಲ್ಲೇಖಿಸಿದ್ದಾರೆ.

    ಕೊರೊನಾ ವೈರಸ್ ವೇಗವಾಗಿ ಹರಡಿದ್ದನ್ನು ಗಮನಿಸಿ ಚೀನಾವೇ ಈ ವೈರಸ್ ಸೃಷ್ಟಿ ಮಾಡಿದೆ. ಅಷ್ಟೇ ಅಲ್ಲದೇ ಈ ಸಂಶೋಧನೆಗೆ ಅಮೆರಿಕವೇ ಧನ ಸಹಾಯ ಮಾಡಿತ್ತು ಎಂದು ಈ ಹಿಂದೇಯೇ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಎಲ್ಲ ವರದಿ, ಆರೋಪಗಳನ್ನು ಚೀನಾ ತಿರಸ್ಕರಿಸಿತ್ತು. ಇದನ್ನೂ ಓದಿ: ಕೊರೊನಾ ವೈರಸ್‌ ಸೃಷ್ಟಿಯಾಗಿದ್ದು ಭಾರತದಲ್ಲಿ – ಚೀನಾದ ಮೊಂಡುವಾದ

    ಚೀನಾವೇ ಸೃಷ್ಟಿಸಿದ ವೈರಸ್?
    ವೈರಸ್ ಅಧ್ಯಯನ ಮಾಡಲೆಂದೇ ವುಹಾನ್ ನಗರದಲ್ಲಿ ಚೀನಾ ಸರ್ಕಾರ ಸಂಶೋಧನಾ ಕೇಂದ್ರಗಳನ್ನು ತೆರೆದಿದೆ. ವುಹಾನ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ ಸಂಸ್ಥೆಯಲ್ಲಿ ಸಾರ್ಸ್ ಸೇರಿದಂತೆ ಹಲವು ವೈರಸ್ ಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಈಗ ಕೊರೊನಾ ವೈರಸ್ ಸೃಷ್ಟಿಯಾದ ಕೇಂದ್ರ ಸ್ಥಳ ವುಹಾನ್ ಆಗಿದೆ. ವುಹಾನ್ ವಿಶ್ವವಿದ್ಯಾಲಯಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಪೀಡಿತರಾಗಿದ್ದರು. ಭಾರತದಲ್ಲಿ ಮೊದಲು ಕೇರಳದ ಮೂರು ಮಂದಿ ವಿದ್ಯಾರ್ಥಿ ಕೊರೊನಾ ವೈರಸ್ ಪತ್ತೆಯಾಗಿತ್ತು. ಈ ಮೂವರು ವುಹಾನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೇ ಆಗಿದ್ದರು ಎನ್ನುವುದು ವಿಶೇಷ.

    ವೈರಾಲಜಿ ಸಂಸ್ಥೆಯಲ್ಲಿ ಏನು ಪ್ರಯೋಗ ಕೈಗೊಳ್ಳಲಾಗುತ್ತದೆ ಎನ್ನುವುದು ಈಗಲೂ ರಹಸ್ಯವಾಗಿದೆ. ಯುದ್ಧದ ಮೂಲಕ ದೇಶಗಳ ಜೊತೆ ಹೋರಾಡುವುದು ಇಂದು ಬಹಳ ಕಷ್ಟ. ಹೀಗಾಗಿ ಚೀನಾ ಜೈವಿಕ ಅಸ್ತ್ರವನ್ನು ತಯಾರು ಮಾಡುತ್ತದೆ ಎನ್ನುವ ಆರೋಪ ಈ ಹಿಂದಿನಿಂದಲೂ ಕೇಳಿ ಬಂದಿತ್ತು. ಸಾರ್ಸ್ ಆರಂಭದಲ್ಲಿ ಕಂಡು ಬಂದಿದ್ದು ಇದೇ ವುಹಾನ್‌ನಲ್ಲಿ. 2002ರಲ್ಲಿ ಕಾಣಿಸಿಕೊಂಡಾಗ ಚೀನಾ ಈ ವಿಚಾರವನ್ನು ಮುಚ್ಚಿಟ್ಟಿತ್ತು. ಆದರೆ ವಿದೇಶಗಳಿಗೆ ಹರಡಿದಾಗ ಕೊನೆಗೆ ಸತ್ಯವನ್ನು ಒಪ್ಪಿಕೊಂಡಿತ್ತು. ಈಗಲೂ ಕೆಲ ವಿಜ್ಞಾನಿಗಳು ಇದು ಯಾವುದೋ ಪ್ರಾಣಿಯಿಂದ, ಪಕ್ಷಿಯಿಂದ ಕೊರೋನಾ ವೈರಸ್ ಸೃಷ್ಟಿಯಾಗಿಲ್ಲ. ಜೈವಿಕ ಅಸ್ತ್ರವನ್ನು ಪರೀಕ್ಷೆ ಮಾಡುತ್ತಿದ್ದಾಗ ಹೇಗೋ ಸೋರಿಕೆಯಾಗಿ ಈಗ ಜಗತ್ತಿಗೆ ಹರಡುತ್ತಿದೆ ಎಂದು ವಾದವನ್ನು ಮುಂದಿಡುತ್ತಿದ್ದಾರೆ. ಇದನ್ನೂ ಓದಿ: 2 ತಿಂಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ವುಹಾನ್ ಪತ್ರಕರ್ತ

    ಟ್ವೀಟ್‌ ಡಿಲೀಟ್‌:
    ಈ ಹಿಂದೆ ಚೀನಾ ಡೈಲಿ 2018ರಲ್ಲಿ ಮಾಡಿರುವ ಟ್ವೀಟ್ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಏಷ್ಯದ ಅತಿ ದೊಡ್ಡ ವೈರಸ್ ಬ್ಯಾಂಕಿನ ಚಿತ್ರವನ್ನು ವೀಕ್ಷಿಸಿ, ಮಧ್ಯ ಚೀನಾ ಹುಬೆ ಪ್ರಾಂತ್ಯದಲ್ಲಿರುವ ವುಹಾನ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಾಜಿ ಕೇಂದ್ರದಲ್ಲಿ 1,500 ವಿವಿಧ ವೈರಸ್ ಗಳನ್ನು ರಕ್ಷಿಸಲಾಗಿದೆ ಎಂದು ಚೀನಾ ಡೈಲಿ 2018ರ ಮೇ 29 ಬೆಳಗ್ಗೆ 5:45 ಕ್ಕೆ ಟ್ವೀಟ್ ಮಾಡಿತ್ತು. ನಂತರ ಈ ಟ್ವೀಟ್ ಅನ್ನು ಡಿಲೀಟ್ ಮಾಡಿತ್ತು.

    ವುಹಾನ್ ವಿಶೇಷತೆ ಏನು?
    ಮಧ್ಯ ಚೀನಾದ ದೊಡ್ಡ ನಗರ ವುಹಾನ್ ಆಗಿದ್ದು ಇಲ್ಲಿ ಬಂದರು, ವಿಮಾನ ನಿಲ್ದಾಣಗಳಿವೆ. 35 ಶಿಕ್ಷಣ ಸಂಸ್ಥೆಗಳಿದ್ದು ಚೀನಾದ ಶೈಕ್ಷಣಿಕ ಹಬ್ ಎಂದು ವುಹಾನ್ ನಗರವನ್ನು ಕರೆಯಲಾಗುತ್ತದೆ. ಈ ಕಾರಣಕ್ಕೆ ಹಲವು ರಾಷ್ಟ್ರಗಳ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ಚೀನಾ ಸರ್ಕಾರವೇ ಇಲ್ಲಿ ಹಲವು ಸಂಶೋಧನಾ ಕೇಂದ್ರಗಳನ್ನು ತೆರೆದಿದೆ. ಒಟ್ಟು ಇಲ್ಲಿ 350 ಸಂಶೋಧನಾ ಕೇಂದ್ರಗಳಿವೆ.

    Live Tv
    [brid partner=56869869 player=32851 video=960834 autoplay=true]

  • ಕೊರೊನಾ ವೈರಸ್ ಲೀಕ್ ಆಗಿದ್ದು ಚೀನಾದ ಲ್ಯಾಬ್‍ನಿಂದಲೇ-ಯುಎಸ್ ರಿಪಬ್ಲಿಕನ್ ವರದಿ

    ಕೊರೊನಾ ವೈರಸ್ ಲೀಕ್ ಆಗಿದ್ದು ಚೀನಾದ ಲ್ಯಾಬ್‍ನಿಂದಲೇ-ಯುಎಸ್ ರಿಪಬ್ಲಿಕನ್ ವರದಿ

    ಬೀಜಿಂಗ್: ಕೊರೊನಾ ವೈರಸ್ ಚೀನಾದಿಂದ ಹರಡಿದೆ ಎಂದು ಇಡೀ ವಿಶ್ವದ ಇತರ ದೇಶಗಳು ಬೊಟ್ಟು ಮಾಡುತ್ತಿದೆ. ಆದರೆ ಚೀನಾ ಇದನ್ನು ನಿರಾಕರಿಸುತ್ತ ಬಂದಿದೆ. ಇದೀಗ ಕೊರೊನಾ ವೈರಸ್ ಲೀಕ್ ಆಗಿದ್ದು ಚೀನಾ ಲ್ಯಾಬ್‍ನಿಂದಲೇ ಎಂದು ಸಾಕ್ಷಿ ಸಿಕ್ಕಿದೆ ಎನ್ನುವುದನ್ನು ಯುಎಸ್ ರಿಪಬ್ಲಿಕನ್ ವರದಿ ಮಾಡಿದೆ.

    ಕೊರೊನಾ ವೈರಸ್ ಹರಡಿರುವುದು ಚೀನಾದ ಲ್ಯಾಬ್ ನಿಂದಲೇ ಎನ್ನುವುದಕ್ಕೆ ಸಾಕ್ಷಿ ಸಿಕ್ಕಿದೆ ಎಂದು ಅಮೆರಿಕಾದ ಹೌಸ್ ಆಫ್ ಫಾರಿನ್ ಅಫೇರ್ಸ್ ಕಮಿಟಿಯ ಸದಸ್ಯ ಮೈಕ್ ಮೆಕಲ್ ತಿಳಿಸಿದ್ದಾರೆ ಎಂದು ಯುಎಸ್ ರಿಪಬ್ಲಿಕನ್ ವರದಿ ಮಾಡಿದೆ. ಆದರೆ ಚೀನಾ ಮಾತ್ರ ಈವರೆಗೆ ಕೊರೊನಾ ವೈರಸ್ ಲ್ಯಾಬ್ ನಿಂದ ಲೀಕ್ ಆಗಿಲ್ಲ. ಅದು ವುಹಾನ್‍ನ ಮಾರುಕಟ್ಟೆಯಿಂದ ಹರಡಿದೆ ಎಂದು ಹೇಳುತ್ತ ಬಂದಿದೆ.   ಇದನ್ನೂ ಓದಿ: ವುಹಾನ್ ಲ್ಯಾಬ್ ತನಿಖೆಗೆ ಮುಂದಾದ WHO – ಚೀನಾದಿಂದ ವಿರೋಧ

    ಹಲವು ದೇಶಗಳು ಮತ್ತು ಸಂಶೋಧನ ತಂಡಗಳು ಚೀನಾದ ಲ್ಯಾಬ್‍ನಿಂದ ಕೊರೊನಾ ವೈರಸ್ ಲೀಕ್ ಆಗಿರುವ ಬಗ್ಗೆ ಈ ಹಿಂದೆ ತಿಳಿಸಿದ್ದರು. ಆದರೆ ಚೀನಾ ಮಾತ್ರ ಇದನ್ನು ತಿರಸ್ಕರಿಸುತ್ತಾ ಬಂದಿದೆ. ಈ ನಡುವೆ ಅಮೆರಿಕದ ಸಂಶೋಧನ ತಂಡವೊಂದು ವೈರಸ್‍ನ ಸತ್ಯಾಂಶ ತಿಳಿಯಲು ಸಾಕ್ಷಿ ಸಂಗ್ರಹಿಸಿದೆ. ಇದನ್ನೂ ಓದಿ: ಕೊರೊನಾ ವೈರಸ್ ಲ್ಯಾಬ್‍ನಲ್ಲಿ ಸೃಷ್ಟಿಯಾಗಿಲ್ಲ- WHO ಹೇಳಿಕೆಯನ್ನು ಮುಂದಿಟ್ಟ ಚೀನಾ

    2019ರಲ್ಲಿ ಕೊರೊನಾ ವೈರಸ್ ಮೊದಲ ಬಾರಿಗೆ ಚೀನಾದ ವುಹಾನ್ ನಗರದಲ್ಲಿ ಕಾಣಿಸಿಕೊಂಡಿತ್ತು. ಆದರೆ ಚೀನಾ ಇದನ್ನು ಮುಚ್ಚಿಟ್ಟು ಇತರ ದೇಶಗಳಿಗೂ ಹರಡುವಂತೆ ಮಾಡಿತು. ಬಳಿಕ ವೈರಸ್ ಕುರಿತು ಹಲವು ಸಂಶೋಧನೆಯಲ್ಲಿ ಕಂಡುಬಂದ ಅಂಶಗಳ ಕುರಿತು ತನ್ನದೆ ವಾದದ ಮೂಲಕ ನಿರಾಕರಿಸುತ್ತ ಬಂದಿದೆ. ಆದರೆ ಇದೀಗ ಯುಎಸ್ ರಿಪಬ್ಲಿಕನ್ ವರದಿಯ ಪ್ರಕಾರ ಚೀನಾದ ಲ್ಯಾಬ್‍ನಿಂದಲೇ ಕೊರೊನಾ ವೈರಸ್ ಲೀಕ್ ಆಗಿರುವ ಬಗ್ಗೆ ಸಾಕ್ಷಿ ಸಿಕ್ಕಿರುವುದಾಗಿ ತಜ್ಞರ ತಂಡ ತಿಳಿಸಿರುವುದು ಕೂತುಹಲ ಮೂಡಿಸಿದೆ. ಮುಂದಿನ ದಿನಗಳಲ್ಲಿ ಸತ್ಯಾಂಶ ಹೊರಬರುವ ಸಾಧ್ಯತೆ ಇದೆ. ಇದನ್ನೂ ಓದಿ: ವುಹಾನ್ ಮಾರುಕಟ್ಟೆಯ ಸೀಗಡಿ ಮಾರುತ್ತಿದ್ದ ಮಹಿಳೆ ಕೊರೊನಾ ‘ಝೀರೋ ಪೇಶೆಂಟ್

  • ವುಹಾನ್ ಲ್ಯಾಬ್ ತನಿಖೆಗೆ ಮುಂದಾದ WHO – ಚೀನಾದಿಂದ ವಿರೋಧ

    ವುಹಾನ್ ಲ್ಯಾಬ್ ತನಿಖೆಗೆ ಮುಂದಾದ WHO – ಚೀನಾದಿಂದ ವಿರೋಧ

    – ಇದು ವಿಜ್ಞಾನಕ್ಕೆ ಅಪಮಾನ ಎಂದ ಚೀನಾ

    ಬೀಜಿಂಗ್: ಇಡೀ ವಿಶ್ವಕ್ಕೆ ಸಾಂಕ್ರಾಮಿಕ ರೋಗ ಕೊರೊನಾ ಹಬ್ಬಿದ್ದು ಹೇಗೆ ಎಂಬುದರ ರಸಹ್ಯ ತಿಳಿಯಲು ವಿಶ್ವ ಆರೋಗ್ಯ ಸಂಸ್ಥೆ ಮುಂದಾಗಿದೆ. ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಚೀನಾದ ವುಹಾನ್ ಪ್ರಯೋಗಾಲಯದಲ್ಲಿಯೇ ಕೊರೊನಾ ವೈರಸ್ ಉತ್ಪತ್ತಿಯಾಗಿದೆ ಎಂದು ಹೇಳುತ್ತಿವೆ. ಈ ಆರೋಪಗಳ ಹಿನ್ನೆಲೆ ವಿಶ್ವ ಆರೋಗ್ಯ ಸಂಸ್ಥೆ ವುಹಾನ್ ಲ್ಯಾಬ್ ಪರಿಶೀಲನೆಗೆ ವಿಶ್ವ ಆರೋಗ್ಯ ಸಂಸ್ಥೆ ಮುಂದಾಗಿದೆ. ಆದ್ರೆ ವಿಶ್ವ ಆರೋಗ್ಯ ಸಂಸ್ಥೆಯ ನಡೆಯನ್ನು ಚೀನಾ ವಿರೋಧಿಸಿದ್ದು, ಇದು ವಿಜ್ಞಾನಕ್ಕೆ ಮಾಡುತ್ತಿರುವ ಅಪಮಾನ ಎಂದು ಹೇಳಿದೆ.

    ಕೊರೊನಾದ ಮೂಲ ತಿಳಿಯಲು ವಿಶ್ವ ಆರೋಗ್ಯ ಸಂಸ್ಥೆ ಎರಡನೇ ಬಾರಿಗೆ ಚೀನಾ ಮತ್ತು ವುಹಾನ್ ಪ್ರಯೋಗಾಲಯದಲ್ಲಿ ಪರಿಶೀಲನೆ ನಡೆಸುವ ಪ್ರಸ್ತಾವವನ್ನು ಮುಂದಿರಿಸಿತ್ತು. ಆದ್ರೆ ಚೀನಾ ಕಡ್ಡಿ ತುಂಡು ಮಾಡಿದಂತೆ ಪ್ರಸ್ತಾವವನ್ನು ತಿರಸ್ಕರಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಈ ಆದೇಶ ಅಥವಾ ಪ್ರಸ್ತಾವವನ್ನು ನಾವು ಪಾಲನೆ ಮಾಡಲ್ಲ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಉಪಾಧ್ಯಕ್ಷ ಜೆಂಗ್ ಯೆಕ್ಸಿನ್ ಹೇಳಿದ್ದಾರೆ. ಇದನ್ನೂ ಓದಿ: ಕೊರೊನಾ ಸ್ಫೋಟದ ಆರಂಭದಲ್ಲೇ ಆಸ್ಪತ್ರೆಗೆ ದಾಖಲಾಗಿದ್ರು ವುಹಾನ್‍ನ ಮೂವರು ಸಂಶೋಧಕರು

    ವಿಶ್ವಸಂಸ್ಥೆ ಮತ್ತೊಮ್ಮೆ ವುಹಾನ್ ನಗರದಲ್ಲಿರುವ ಪ್ರಯೋಗಾಲಯದಲ್ಲಿ ತನಿಖೆ ನಡೆಸುವ ಪ್ಲಾನ್ ಮಾಡಿಕೊಳ್ಳುತ್ತಿದೆ. ಕೇವಲ ಲ್ಯಾಬ್ ಲೀಕ್ ಥೇರಿ ಮೇಲೆ ತನಿಖೆ ನಡೆಸೋದು ವಿಜ್ಞಾನಕ್ಕೆ ಮಾಡಿದ ಅಪಮಾನ ಆಗಲಿದೆ ಎಂದು ಯೆಕ್ಸಿನ್ ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ವುಹಾನ್‌ ಲ್ಯಾಬ್‌ನಿಂದ ಕೊರೊನಾ ವೈರಸ್‌ ಸೋರಿಕೆಯಾಗಿಲ್ಲ – ಡಬ್ಲ್ಯುಎಚ್‌ಒ ನಿಯೋಗ

    ಸದ್ಯ ಕೊರೊನಾ ವೈರಸ್ ವಿಶ್ವದ ತುಂಬೆಲ್ಲ ಪಸರಿಸಿದೆ. ಡಿಸೆಂಬರ್ 2019ರಲ್ಲಿ ಚೀನಾ ಈ ಮಹಾಮಾರಿಗೆ ತುತ್ತಾಗಿತ್ತು. ಅಂದೇ ಚೀನಾ ಕೊರನಾ ಮಾಹಾಮಾರಿಯ ಬಗ್ಗೆ ವಿಶ್ವಕ್ಕೆ ಮಾಹಿತಿ ನೀಡಿತ್ತು. ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ತಂಡ ಇಲ್ಲಿಗೆ ಬಂದಾಗ ಅವರಿಗೆ ಸಂಪೂರ್ಣ ಸಹಕಾರ ನೀಡಿದ್ದೇವೆ. ತಂಡ ಬಯಸಿದ ಪ್ರಯೋಗಾಲಯಕ್ಕೆ ಅವರನ್ನು ಕರೆದುಕೊಂಡು ಹೋಗಲಾಗಿತ್ತು. ಜೊತೆಗೆ ತಂಡದ ಸದಸ್ಯರ ಭೇಟಿಯಾಗಲು ಇಚ್ಛಿಸಿದ ಜನರ ಜೊತೆ ಮಾತನಾಡಲು ಅವಕಾಶ ನೀಡಲಾಗಿತ್ತು. ಇದನ್ನೂ ಓದಿ: ವುಹಾನ್‍ ಕೊರೊನಾದ ಭೀಕರತೆಯ ವರದಿ – ಗಟ್ಟಿಗಿತ್ತಿ ಪತ್ರಕರ್ತೆಗೆ 4 ವರ್ಷ ಜೈಲು ಶಿಕ್ಷೆ

    ಡಬ್ಲ್ಯೂಹೆಚ್‍ಓ ವೈಜ್ಞಾನಿಕ ಆಧಾರದ ಮೇಲೆ ಕೊರೊನಾ ಮೂಲವನ್ನು ಕಂಡು ಹಿಡಿಯುತ್ತದೆ ಎಂದು ನಾವು ನಂಬಿದ್ದೇವೆ. ವಿಶ್ವ ಆರೋಗ್ಯ ಸಂಸ್ಥೆ ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗಲ್ಲ ಅನ್ನೋದು ನಮ್ಮ ನಂಬಿಕೆ ಎಂದು ಯೆಕ್ಸಿನ್ ಹೇಳಿದ್ದಾರೆ.

  • ದೇಶದ ಮೊದಲ ಸೋಂಕಿತೆಯಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ ಕೊರೊನಾ

    ದೇಶದ ಮೊದಲ ಸೋಂಕಿತೆಯಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ ಕೊರೊನಾ

    ತಿರುವನಂತಪುರಂ: ದೇಶದಲ್ಲಿಯೇ ಮೊದಲ ಬಾರಿಗೆ ಸೋಂಕು ಪತ್ತೆಯಾಗಿದ್ದ ಕೇರಳದ ತ್ರಿಶ್ಯೂರಿನ ಮೂಲದ ವಿದ್ಯಾರ್ಥಿನಿಗೆ ಎರಡನೇ ಬಾರಿಗೆ ಸೋಂಕು ದೃಢಪಟ್ಟಿದೆ.

    ಚೀನಾದ ವುಹಾನ್ ವೈದ್ಯಕೀಯ ವಿಶ್ವವಿದ್ಯಾಲಯದ ವ್ಯಾಸಂಗ ಮಾಡುತ್ತಿರುವ ಕೇರಳದ 20 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಗೆ ಮತ್ತೆ ಕೊರೊನಾ ಬಂದಿದೆ. ಚೀನಾದ ವುಹಾನ್ ನಗರದಿಂದ ಕಳೆದ ಜನವರಿ 30ರಂದು ವಾಪಸ್ ಆಗಿದ್ದಾಗ ಈಕೆಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದು ದೇಶದಲ್ಲಿ ಪತ್ತೆಯಾದ ಮೊದಲ ಕೊರೊನಾ ಪ್ರಕರಣ ಆಗಿತ್ತು.

    ಭಾರತಕ್ಕೆ ವಾಪಸ್ಸಾದ ಬಳಿಕ ಇತ್ತೀಚಿಗೆ ಶಿಕ್ಷಣ ಕೆಲಸದ ಸಂಬಂಧ ಯುವತಿಯನ್ನು ದೆಹಲಿಗೆ ತೆರಳುವಾಗ ಮುನ್ನ ಟೆಸ್ಟಿಂಗ್ ಗೆ ಒಳಪಡಿಸಲಾಗಿದೆ. ಈ ವೇಳೆ ಆಂಟಿಜನ್ ಪರೀಕ್ಷೆಯಲ್ಲಿ ನೆಗೆಟಿವ್ ರಿಪೋರ್ಟ್ ಬಂದಿದೆ. ಬಳಿಕ ಆರ್‌ಟಿಪಿಸಿಆರ್ ಟೆಸ್ಟ್ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ.

    ತ್ರಿಶ್ಯೂರಿನ ಜಿಲ್ಲಾ ವೈದ್ಯಕೀಯ ಅಧಿಕಾರಿ ಪ್ರತಿಕ್ರಿಯಿಸಿ, ವಿದ್ಯಾರ್ಥಿನಿಗೆ ಯಾವುದೇ ರೋಗ ಲಕ್ಷಣ ಇಲ್ಲ. ಹೀಗಾಗಿ ಆಕೆ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾಳೆ. ಆಕೆಯ ಮೇಲೆ ನಿಗಾ ಇಡಲಾಗಿದೆ ಎಂದು ತಿಳಿಸಿದ್ದಾರೆ.  ಇದನ್ನೂ ಓದಿ: ಕೊರೊನಾ 3ನೇ ಅಲೆ ಎದುರಿಸಲು ಕೇಂದ್ರದಿಂದ ರಾಜ್ಯಕ್ಕೆ 1,500 ಕೋಟಿ: ಸಚಿವ ಸುಧಾಕರ್

    ಜುಲೈ 13 ರಂದು ಈಕೆ ಸೋಂಕು ಬಂದಿದೆ. ವಿದ್ಯಾರ್ಥಿನಿ ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿರಲಿಲ್ಲ.

    ಕೇರಳ ಮೂಲದ ವಿದ್ಯಾರ್ಥಿನಿ ವುಹಾನ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಶಿಕ್ಷಣ ಪಡೆದುಕೊಳ್ಳುತ್ತಿದ್ದಳು. ಕಳೆದ ವರ್ಷ ರಜೆ ಹಿನ್ನೆಲೆ ಕೇರಳಕ್ಕೆ ಆಗಮಿಸಿದ ವೇಳೆ ವಿದ್ಯಾರ್ಥಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಜನವರಿ 30ರಂದು ವರದಿ ಪಾಸಿಟಿವ್ ಬಂದಿತ್ತು. ತ್ರಿಶ್ಯೂರ್ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯನ್ನು ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಫೆಬ್ರವರಿ 20 ರಂದು ವಿದ್ಯಾರ್ಥಿನಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಳು.

  • ಕೋವಿಡ್ 19 ವೈರಸ್ ಮಾನವ ಸೃಷ್ಟಿ ಪೋಸ್ಟ್ ಡಿಲೀಟ್ ಮಾಡಲ್ಲ – ಫೇಸ್‍ಬುಕ್

    ಕೋವಿಡ್ 19 ವೈರಸ್ ಮಾನವ ಸೃಷ್ಟಿ ಪೋಸ್ಟ್ ಡಿಲೀಟ್ ಮಾಡಲ್ಲ – ಫೇಸ್‍ಬುಕ್

    ವಾಷಿಂಗ್ಟನ್: ಕೋವಿಡ್ 19 ವೈರಸ್ ಮಾನವ ಸೃಷ್ಟಿ ಎಂದು ಅಭಿಪ್ರಾಯ ವ್ಯಕ್ತಪಡಿಸುವ ಪೋಸ್ಟ್ ಗಳನ್ನು ಇನ್ನು ಮುಂದೆ ಡಿಲೀಟ್ ಮಾಡುವುದಿಲ್ಲ ಎಂದು ಫೇಸ್‍ಬುಕ್ ಹೇಳಿದೆ.

    ವೈರಸ್ ಮೂಲದ ಎದ್ದಿರುವ ಚರ್ಚೆಯ ಬಗ್ಗೆ ಈಗ ಹೊಸ ಆಯಾಮ ಸಿಕ್ಕಿದ ಹಿನ್ನೆಲೆಯಲ್ಲಿ ಮಾನವನ ಸೃಷ್ಟಿ ಎಂದು ಹೇಳುವ ಪೋಸ್ಟ್ ಇನ್ನು ಮುಂದೆ ಡಿಲಿಟ್ ಮಾಡದೇ ಇರಲು ಫೇಸ್‍ಬುಕ್ ಮಹತ್ವದ ನಿರ್ಧಾರ ಕೈಗೊಂಡಿದೆ.

    ಈ ಬಗ್ಗೆ ಈ ಮೂಲಕ ಪ್ರತಿಕ್ರಿಯೆ ನೀಡಿರುವ ಫೇಸ್‍ಬುಕ್ ವಕ್ತಾರರು, ವೈರಸ್ ಮೂಲದ ಬಗ್ಗೆ ನಡೆಯುತ್ತಿರುವ ತನಿಖೆ ಮತ್ತು ಸಾರ್ವಜನಿಕ ಆರೋಗ್ಯ ತಜ್ಞರೊಂದಿಗೆ ಚರ್ಚೆ ನಡೆಸಿದ ಬಳಿಕ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ.

    ವುಹಾನ್ ಇನ್‍ಸ್ಟಿಟ್ಯೂಟ್ ಆಫ್ ವೈರಲಾಜಿ ಕೇಂದ್ರದ ಮೂವರು ಸಂಶೋಧಕರು 2019 ನವೆಂಬರ್ ತಿಂಗಳಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಸ್ಫೋಟಕ ವಿಚಾರ ಕಳೆದ ವಾರ ಬೆಳಕಿಗೆ ಬಂದಿತ್ತು. ಇದನ್ನೂ ವೈರಸ್ – ಕೊರೊನಾ ವೈರಸ್ ಚೀನಾದ ಜೈವಿಕ ಅಸ್ತ್ರ?

    ಅಮೆರಿಕ ವಾಲ್‍ಸ್ಟ್ರೀಟ್ ಜರ್ನಲ್ ಅಮೆರಿಕದ ಗುಪ್ತಚರ ಮಾಹಿತಿಯನ್ನು ಆಧಾರಿಸಿ ಈ ವರದಿ ಮಾಡಿದ್ದು ಸಂಚಲನ ಮೂಡಿಸಿದೆ, ಅನಾರೋಗ್ಯ ಪೀಡಿತ ಸಂಶೋಧಕರ ಸಂಖ್ಯೆ, ಅವರ ಅನಾರೋಗ್ಯದ ಸಮಯ ಮತ್ತು ಅವರ ಆಸ್ಪತ್ರೆ ಭೇಟಿಗಳ ಬಗ್ಗೆ ಹೊಸ ವಿವರಗಳು ಈ ಗುಪ್ತಚರ ವರದಿಯಲ್ಲಿದೆ ಎಂದು ಹೇಳಿದೆ.

  • ಕೊರೊನಾ ಸ್ಫೋಟದ ಆರಂಭದಲ್ಲೇ ಆಸ್ಪತ್ರೆಗೆ ದಾಖಲಾಗಿದ್ರು ವುಹಾನ್‍ನ ಮೂವರು ಸಂಶೋಧಕರು

    ಕೊರೊನಾ ಸ್ಫೋಟದ ಆರಂಭದಲ್ಲೇ ಆಸ್ಪತ್ರೆಗೆ ದಾಖಲಾಗಿದ್ರು ವುಹಾನ್‍ನ ಮೂವರು ಸಂಶೋಧಕರು

    ವಾಷಿಂಗ್ಟನ್: ವುಹಾನ್ ಇನ್‍ಸ್ಟಿಟ್ಯೂಟ್ ಆಫ್ ವೈರಲಾಜಿ ಕೇಂದ್ರದ ಮೂವರು ಸಂಶೋಧಕರು 2019 ನವೆಂಬರ್ ತಿಂಗಳಿನಲ್ಲಿ ಆಸ್ಪತ್ರೆಗೆ  ದಾಖಲಾಗಿದ್ದ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.

    ಹೌದು. ಅಮೆರಿಕ ವಾಲ್‍ಸ್ಟ್ರೀಟ್ ಜರ್ನಲ್ ಅಮೆರಿಕದ ಗುಪ್ತಚರ ಮಾಹಿತಿಯನ್ನು ಆಧಾರಿಸಿ ಈ ವರದಿ ಮಾಡಿದ್ದು ಸಂಚಲನ ಮೂಡಿಸಿದೆ. ಡೊನಾಲ್ಡ್ ಟ್ರಂಪ್ ಆಡಳಿತ ಅವಧಿಯ ಕೊನೆಯ ದಿನಗಳಲ್ಲಿನ ಮಾಹಿತಿಯನ್ನು ಆಧಾರಿಸಿ ಈ ವರದಿಯನ್ನು ಪ್ರಕಟಿಸಿದೆ. ಅನಾರೋಗ್ಯ ಪೀಡಿತ ಸಂಶೋಧಕರ ಸಂಖ್ಯೆ, ಅವರ ಅನಾರೋಗ್ಯದ ಸಮಯ ಮತ್ತು ಅವರ ಆಸ್ಪತ್ರೆ ಭೇಟಿಗಳ ಬಗ್ಗೆ ಹೊಸ ವಿವರಗಳು ಈ ಗುಪ್ತಚರ ವರದಿಯಲ್ಲಿದೆ ಎಂದು ಹೇಳಿದೆ.

    ವಿವಿಧ ಮೂಲಗಳನ್ನು ಆಧಾರಿಸಿ ಗುಪ್ತಚರ ವರದಿಗಳು ಪ್ರಕಟವಾಗುತ್ತದೆ. ಮೂವರು ಸಂಶೋಧಕರು ಅನಾರೋಗ್ಯಕ್ಕೆ ಕಾರಣವಾಗಿದ್ದು ಯಾಕೆ ಎನ್ನುವುದು ತಿಳಿದು ಬರಬೇಕಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕೊರೊನಾ ವೈರಸ್ ಮೂಲದ ಬಗ್ಗೆ ತನಿಖೆ ನಡೆಸಲು ವಿಶ್ವ ಆರೋಗ್ಯ ಸಂಸ್ಥೆ ನೇಮಿಸಿದ ತಂಡದ ಮುಂದಿನ ಸಭೆ ಕೆಲ ದಿನಗಳಲ್ಲಿ ನಡೆಯಲಿರುವ ಬೆನ್ನಲ್ಲೇ ಈ ವರದಿ ಪ್ರಕಟಗೊಂಡಿದ್ದರಿಂದ ಈಗ ಮಹತ್ವ ಪಡೆದಿದೆ.

    2019ರ ಕೊನೆಯಲ್ಲಿ ಕೋವಿಡ್ 19 ಬಂದಿದ್ದರೂ ಈ ವಿಚಾರವನ್ನು ಮುಚ್ಚಿಟ್ಟಿತ್ತು ಎಂಬ ಗಂಭೀರ ಆರೋಪ ಚೀನಾದ ಮೇಲಿದೆ. ಈಗ ಈ ಆರೋಪಕ್ಕೆ ಪುಷ್ಠಿ ನೀಡುವಂತೆ ಈ ವರದಿ ಪ್ರಕಟಗೊಂಡಿದೆ.

    ಕೊರೋನಾ ವೈರಸ್ ವೇಗವಾಗಿ ಹರಡುತ್ತಿರುವುದನ್ನು ಗಮನಿಸಿ ಈಗ ಚೀನಾವೇ ಈ ವೈರಸ್ ಸೃಷ್ಟಿ ಮಾಡಿತೇ ಎಂಬ ಬಲವಾದ ಶಂಕೆ ಕಳೆದ ವರ್ಷವೇ ಎದ್ದಿತ್ತು. ವೈರಸ್ ಅಧ್ಯಯನ ಮಾಡಲೆಂದೇ ವುಹಾನ್ ನಗರದಲ್ಲಿ ಚೀನಾ ಸರ್ಕಾರ ಸಂಶೋಧನಾ ಕೇಂದ್ರಗಳನ್ನು ತೆರೆದಿದೆ. ವುಹಾನ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ ಎಂಬ ಸಂಸ್ಥೆಯಲ್ಲಿ ಸಾರ್ಸ್ ಸೇರಿದಂತೆ ಹಲವು ವೈರಸ್ ಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಈಗ ಕೊರೋನಾ ವೈರಸ್ ಸೃಷ್ಟಿಯಾದ ಕೇಂದ್ರ ಸ್ಥಳ ವುಹಾನ್ ಆಗಿದೆ.

    ವುಹಾನ್ ವಿಶ್ವವಿದ್ಯಾಲಯಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಪೀಡಿತರಾಗಿದ್ದರು. ಭಾರತದಲ್ಲಿ ಮೊದಲು ಕೇರಳದ ಮೂರು ಮಂದಿ ವಿದ್ಯಾರ್ಥಿಗಳಲ್ಲಿ ಕೊರೊನಾ ವೈರಸ್ ಪತ್ತೆಯಾಗಿತ್ತು. ಈ ಮೂವರು ವುಹಾನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೇ ಆಗಿದ್ದರು ಎನ್ನುವುದು ವಿಶೇಷ.

    ವೈರಾಲಜಿ ಸಂಸ್ಥೆಯಲ್ಲಿ ಏನು ಪ್ರಯೋಗ ಕೈಗೊಳ್ಳಲಾಗುತ್ತದೆ ಎನ್ನುವುದು ಈಗಲೂ ರಹಸ್ಯವಾಗಿದೆ. ಯುದ್ಧದ ಮೂಲಕ ದೇಶಗಳ ಜೊತೆ ಹೋರಾಡುವುದು ಇಂದು ಬಹಳ ಕಷ್ಟ. ಹೀಗಾಗಿ ಚೀನಾ ಜೈವಿಕ ಅಸ್ತ್ರವನ್ನು ತಯಾರು ಮಾಡುತ್ತದೆ ಎನ್ನುವ ಆರೋಪ ಈ ಹಿಂದಿನಿಂದಲೂ ಕೇಳಿ ಬಂದಿತ್ತು. ಸಾರ್ಸ್ ಆರಂಭದಲ್ಲಿ ಕಂಡು ಬಂದಿದ್ದು ಇದೇ ವುಹಾನ್ ನಲ್ಲಿ. 2002ರಲ್ಲಿ ಕಾಣಿಸಿಕೊಂಡಾಗ ಚೀನಾ ಈ ವಿಚಾರವನ್ನು ಮುಚ್ಚಿಟ್ಟಿತ್ತು. ಆದರೆ ವಿದೇಶಗಳಿಗೆ ಹರಡಿದಾಗ ಕೊನೆಗೆ ಸತ್ಯವನ್ನು ಒಪ್ಪಿಕೊಂಡಿತ್ತು. ಈಗಲೂ ಕೆಲ ವಿಜ್ಞಾನಿಗಳು ಇದು ಯಾವುದೋ ಪ್ರಾಣಿಯಿಂದ, ಪಕ್ಷಿಯಿಂದ ಕೊರೋನಾ ವೈರಸ್ ಸೃಷ್ಟಿಯಾಗಿಲ್ಲ. ಜೈವಿಕ ಅಸ್ತ್ರವನ್ನು ಪರೀಕ್ಷೆ ಮಾಡುತ್ತಿದ್ದಾಗ ಹೇಗೋ ಸೋರಿಕೆಯಾಗಿ ಈಗ ಜಗತ್ತಿಗೆ ಹರಡುತ್ತಿದೆ ಎಂದು ವಾದವನ್ನು ಮುಂದಿಡುತ್ತಿದ್ದಾರೆ.

  • ಕೊರೊನಾ ವೈರಸ್ ಚೀನಾದ ಜೈವಿಕ ಅಸ್ತ್ರ – ವಿಶ್ವದಲ್ಲೇ ಬಿರುಗಾಳಿ ಎಬ್ಬಿಸಿದ ವರದಿಯಲ್ಲಿ ಏನಿದೆ? ಅನುಮಾನ ಯಾಕೆ?

    ಕೊರೊನಾ ವೈರಸ್ ಚೀನಾದ ಜೈವಿಕ ಅಸ್ತ್ರ – ವಿಶ್ವದಲ್ಲೇ ಬಿರುಗಾಳಿ ಎಬ್ಬಿಸಿದ ವರದಿಯಲ್ಲಿ ಏನಿದೆ? ಅನುಮಾನ ಯಾಕೆ?

    ಕೋವಿಡ್ 19 ಆರಂಭದಲ್ಲೇ ಬಂದಿದ್ದರೂ ಪ್ರಪಂಚಕ್ಕೆ ಪದೇ ಸುಳ್ಳು ಹೇಳಿದ್ದ ಚೀನಾದ ಮೇಲೆ ಈಗ ಮತ್ತೆ ವಿಶ್ವದ ಕೆಂಗಣ್ಣು ಬಿದ್ದಿದೆ. ವಿಶ್ವದ 33 ಲಕ್ಷ ಜನರ ಪ್ರಾಣ ತೆಗೆದಿರುವ ಈ ವೈರಸ್ ಚೀನಾದ ಜೈವಿಕ ಅಸ್ತ್ರ ಎಂಬುದರ ಬಗ್ಗೆ ಈಗ ಭಾರೀ ಚರ್ಚೆಆಗುತ್ತಿದೆ. ಯಾಕೆ ಈ ಚರ್ಚೆ? ಚೀನಾದ ಮೇಲೆ ಅನುಮಾನ ಯಾಕೆ? ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.

    ಯಾಕೆ ಈಗ ಚರ್ಚೆ?
    ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‍ಎ) ಜೈವಿಕ ಅಸ್ತ್ರವಾಗಿ ಬಳಸಲು ಕೊರೊನಾ ವೈರಸ್ ಅನ್ನು ಐದು ವರ್ಷಗಳ ಹಿಂದೆಯೇ ಅನ್ವೇಷಣೆ ಮಾಡಿದೆ. ಜೈವಿಕ ಶಸ್ತ್ರಾಸ್ತ್ರ ಬಳಸಿಯೇ ಮೂರನೇ ವಿಶ್ವಯುದ್ಧ ನಡೆಯಲಿದೆ ಎಂಬುದಾಗಿ ಪಿಎಲ್‍ಎ ಅಂದಾಜಿಸಿತ್ತು ಎಂದು ‘ದಿ ಅಸ್ಟ್ರೇಲಿಯನ್’ ಪತ್ರಿಕೆ ವರದಿ ಮಾಡಿದೆ. ಈ ವರದಿಯನ್ನು ಆಧಾರಿಸಿ ಇಂಗ್ಲೆಡಿನ ‘ದಿ ಸನ್’ ಪತ್ರಿಕೆ ಚೀನಾದ ವಿಜ್ಞಾನಿಗಳು ಸಾರ್ಸ್ ಕೊರೊನಾ ವೈರಸ್ ಎಂದು ವರ್ಣಿಸಿದ್ದರು. ಅವುಗಳಲ್ಲಿ ಕೋವಿಡ್ ಒಂದು ಉದಾಹರಣೆ. ಇದು, ಜೈವಿಕ ಶಸ್ತ್ರಾಸ್ತ್ರಗಳ ಹೊಸ ಯುಗ ಎಂದು ವರದಿ ಮಾಡಿತ್ತು. ಇದನ್ನೂ ಓದಿ: ಕೊರೊನಾ ವೈರಸ್‌ ಸೃಷ್ಟಿಯಾಗಿದ್ದು ಭಾರತದಲ್ಲಿ – ಚೀನಾದ ಮೊಂಡುವಾದ

    ಸಾರ್ಸ್ ಕೊರೊನಾ ವೈರಸ್ ನನ್ನು ಜಾಗತಿಕ ಯುದ್ಧಕ್ಕೆ ‘ಜೈವಿಕ ಅಸ್ತ್ರ’ವಾಗಿ ಬಳಸಿಕೊಳ್ಳಬಹುದು. ಇಡೀ ಮಾನವ ಕುಲ ನಾಶಕ್ಕಾಗಿ ಈ ವೈರಸ್ ನನ್ನು ಪ್ರಬಲ ಅಸ್ತ್ರವನ್ನಾಗಿ ಬಳಸಬಹುದು ಎಂದು ಚೀನಾದ ವಿಜ್ಞಾನಿಗಳು ಹಾಗೂ ಆರೋಗ್ಯ ಅಧಿಕಾರಿಗಳು ಬರೆದಿರುವ ಒಂದು ಸಂಶೋಧನಾ ಲೇಖನದ ಬಗ್ಗೆ ದಿ ಆಸ್ಟ್ರೇಲಿಯನ್ ಬೆಳಕು ಚೆಲ್ಲಿದೆ. ಇದನ್ನೂ ಓದಿ:ಕೋವಿಡ್‌ 19 – ಬೆಳಕಿಗೆ ಬಂತು ಚೀನಾದ ಮತ್ತೊಂದು ಮಹಾ ಕಳ್ಳಾಟ

    ಚೀನಾದ ಪ್ರತಿಕ್ರಿಯೆ ಏನು?
    ಇದೊಂದು ಸುಳ್ಳು ವರದಿಯಾಗಿದ್ದು, ದೇಶದ ಬಲವನ್ನು ಕುಗ್ಗಿಸುವ ಒಂದು ಯತ್ನವಾಗಿದೆ. ಚೀನಾಗೆ ಕೆಟ್ಟ ಹೆಸರು ತರುವ ಒಂದು ಭಾಗ. ಚೀನಾ ಎಂದಿಗೂ ಜೈವಿಕ ಅಸ್ತ್ರಗಳನ್ನು ಅಭಿವೃದ್ಧಿ ಪಡಿಸುತ್ತಿಲ್ಲ. ಜೈವಿಕ ಪ್ರಯೋಗಾಲಯಗಳ ಸುರಕ್ಷತೆಗೆ ನಾವು ಕಠಿಣವಾದ ಕಾನೂನುಗಳನ್ನು ರೂಪಿಸಿದ್ದೇವೆ ಎಂದು ಚೀನಾ ವಿದೇಶಾಂಗ ಇಲಾಖೆ ಹೇಳಿದೆ.

    ಅನುಮಾನ ಯಾಕೆ?
    ಕೊರೊನಾ ವೈರಸ್ ಮೂಲ ಎಲ್ಲಿದೆ ಎನ್ನುವ ವಿಚಾರ ಇಲ್ಲಿಯವರೆಗೆ ತಿಳಿದು ಬಂದಿಲ್ಲ. ಇದು ಮನುಷ್ಯನಿಗೆ ಹರಡಿದ್ದು ಹೇಗೆ ಎನ್ನುವುದರ ಬಗ್ಗೆ ಚರ್ಚೆ ನಡೆಯುತ್ತಿದೆ. ವುಹಾನ್ ವೆಟ್ ಮಾರುಕಟ್ಟೆಯಿಂದ ಈ ವೈರಸ್ ಸೃಷ್ಟಿಯಾಗಿರಬಹುದು. ಈ ಮರುಕಟ್ಟೆಗೆ ವಿಶ್ವದ ಹಲವು ದೇಶಗಳಿಂದ ಮಾಂಸಗಳು ಬರುವ ಕಾರಣ ನಮ್ಮ ದೇಶದಲ್ಲೇ ಸೃಷ್ಟಿಯಾಗಿದೆ ಎಂದು ಹೇಳಲು ಬರುವುದಿಲ್ಲ ಎನ್ನುವುದು ಚೀನಾದ ವಾದ. ಇದನ್ನೂ ಓದಿ: 2 ತಿಂಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ವುಹಾನ್ ಪತ್ರಕರ್ತ

    ಲ್ಯಾಬ್‍ನಿಂದ ಸೋರಿಕೆ?
    ಏಷ್ಯಾದ ಅತಿ ದೊಡ್ಡ ವೈರಸ್ ಬ್ಯಾಂಕ್ ವುಹಾನ್ ನಗರದಲ್ಲಿದೆ. ಈ ಹಿಂದೆ”ಏಷ್ಯದ ಅತಿ ದೊಡ್ಡ ವೈರಸ್ ಬ್ಯಾಂಕಿನ ಚಿತ್ರವನ್ನು ವೀಕ್ಷಿಸಿ, ಮಧ್ಯ ಚೀನಾ ಹುಬೆ ಪ್ರಾಂತ್ಯದಲ್ಲಿರುವ ವುಹಾನ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಾಜಿ ಕೇಂದ್ರದಲ್ಲಿ 1,500 ವಿವಿಧ ವೈರಸ್ ಗಳನ್ನು ರಕ್ಷಿಸಲಾಗಿದೆ” ಎಂದು ಚೀನಾ ಡೈಲಿ 2018ರ ಮೇ 29 ಬೆಳಗ್ಗೆ 5:45ಕ್ಕೆ ಟ್ವೀಟ್ ಮಾಡಿತ್ತು. ಈ ಟ್ವೀಟ್ ಕಳೆದ ವರ್ಷ ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು.

    ವುಹಾನ್ ವಿಶೇಷತೆ ಏನು?
    ಮಧ್ಯ ಚೀನಾದ ದೊಡ್ಡ ನಗರ ವುಹಾನ್ ಆಗಿದ್ದು ಇಲ್ಲಿ ಬಂದರು, ವಿಮಾನ ನಿಲ್ದಾಣಗಳಿವೆ. 35 ಶಿಕ್ಷಣ ಸಂಸ್ಥೆಗಳಿದ್ದು ಚೀನಾದ ಶೈಕ್ಷಣಿಕ ಹಬ್ ಎಂದು ವುಹಾನ್ ನಗರವನ್ನು ಕರೆಯಲಾಗುತ್ತದೆ. ಈ ಕಾರಣಕ್ಕೆ ಹಲವು ರಾಷ್ಟ್ರಗಳ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ಚೀನಾ ಸರ್ಕಾರವೇ ಇಲ್ಲಿ ಹಲವು ಸಂಶೋಧನಾ ಕೇಂದ್ರಗಳನ್ನು ತೆರೆದಿದೆ. ಒಟ್ಟು ಇಲ್ಲಿ 350 ಸಂಶೋಧನಾ ಕೇಂದ್ರಗಳಿವೆ.

    ಚೀನಾವೇ ಸೃಷ್ಟಿಸಿದ ವೈರಸ್?
    ಕೊರೊನಾ ವೈರಸ್ ವೇಗವಾಗಿ ಹರಡುತ್ತಿರುವುದನ್ನು ಗಮನಿಸಿ ಈಗ ಚೀನಾವೇ ಈ ವೈರಸ್ ಸೃಷ್ಟಿ ಮಾಡಿತೇ ಎನ್ನುವ ಶಂಕೆ ಎದ್ದಿದೆ. ವೈರಸ್ ಅಧ್ಯಯನ ಮಾಡಲೆಂದೇ ವುಹಾನ್ ನಗರದಲ್ಲಿ ಚೀನಾ ಸರ್ಕಾರ ಸಂಶೋಧನಾ ಕೇಂದ್ರಗಳನ್ನು ತೆರೆದಿದೆ. ವುಹಾನ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಾಜಿ ಎಂಬ ಸಂಸ್ಥೆಯಲ್ಲಿ ಸಾರ್ಸ್ ಸೇರಿದಂತೆ ಹಲವು ವೈರಸ್ ಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಈಗ ಕೊರೊನಾ ವೈರಸ್ ಸೃಷ್ಟಿಯಾದ ಕೇಂದ್ರ ಸ್ಥಳ ವುಹಾನ್ ಆಗಿದೆ. ವುಹಾನ್ ವಿಶ್ವವಿದ್ಯಾಲಯಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಪೀಡಿತರಾಗಿದ್ದರು.

    ವೈರಾಲಾಜಿ ಸಂಸ್ಥೆಯಲ್ಲಿ ಏನು ಪ್ರಯೋಗ ಕೈಗೊಳ್ಳಲಾಗುತ್ತದೆ ಎನ್ನುವುದು ಈಗಲೂ ರಹಸ್ಯವಾಗಿದೆ. ಯುದ್ಧದ ಮೂಲಕ ದೇಶಗಳ ಜೊತೆ ಹೋರಾಡುವುದು ಇಂದು ಬಹಳ ಕಷ್ಟ. ಹೀಗಾಗಿ ಚೀನಾ ಜೈವಿಕ ಅಸ್ತ್ರವನ್ನು ತಯಾರು ಮಾಡುತ್ತದೆ ಎನ್ನುವ ಆರೋಪ ಈ ಹಿಂದಿನಿಂದಲೂ ಕೇಳಿ ಬಂದಿತ್ತು. ಸಾರ್ಸ್ ಆರಂಭದಲ್ಲಿ ಕಂಡು ಬಂದಿದ್ದು ಇದೇ ವುಹಾನ್ ನಲ್ಲಿ. 2002ರಲ್ಲಿ ಕಾಣಿಸಿಕೊಂಡಾಗ ಚೀನಾ ಈ ವಿಚಾರವನ್ನು ಮುಚ್ಚಿಟ್ಟಿತ್ತು. ಆದರೆ ವಿದೇಶಗಳಿಗೆ ಹರಡಿದಾಗ ಕೊನೆಗೆ ಸತ್ಯವನ್ನು ಒಪ್ಪಿಕೊಂಡಿತ್ತು. ಈಗಲೂ ಕೆಲ ವಿಜ್ಞಾನಿಗಳು ಇದು ಯಾವುದೋ ಪ್ರಾಣಿಯಿಂದ, ಪಕ್ಷಿಯಿಂದ ಕೊರೋನಾ ವೈರಸ್ ಸೃಷ್ಟಿಯಾಗಿಲ್ಲ. ಜೈವಿಕ ಅಸ್ತ್ರವನ್ನು ಪರೀಕ್ಷೆ ಮಾಡುತ್ತಿದ್ದಾಗ ಹೇಗೋ ಸೋರಿಕೆಯಾಗಿ ಈಗ ಜಗತ್ತಿಗೆ ಹರಡುತ್ತಿದೆ ಎಂದು ವಾದವನ್ನು ಮುಂದಿಡುತ್ತಿದ್ದಾರೆ. ಭಾರತದಲ್ಲಿ ಮೊದಲು ಕೇರಳದ ಮೂರು ಮಂದಿ ವಿದ್ಯಾರ್ಥಿ ಕೊರೋನಾ ವೈರಸ್ ಪತ್ತೆಯಾಗಿತ್ತು. ಈ ಮೂವರು ವುಹಾನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೇ ಆಗಿದ್ದರು ಎನ್ನುವುದು ವಿಶೇಷ.

  • ವುಹಾನ್‌ ಲ್ಯಾಬ್‌ನಿಂದ ಕೊರೊನಾ ವೈರಸ್‌ ಸೋರಿಕೆಯಾಗಿಲ್ಲ – ಡಬ್ಲ್ಯುಎಚ್‌ಒ ನಿಯೋಗ

    ವುಹಾನ್‌ ಲ್ಯಾಬ್‌ನಿಂದ ಕೊರೊನಾ ವೈರಸ್‌ ಸೋರಿಕೆಯಾಗಿಲ್ಲ – ಡಬ್ಲ್ಯುಎಚ್‌ಒ ನಿಯೋಗ

    – ಬಾವಲಿಗಳಿಂದ  ವೈರಸ್‌ ಹರಡಿರುವ ಸಾಧ್ಯತೆ ಹೆಚ್ಚು
    – ಆಹಾರ ಸರಬರಾಜು ಸರಪಳಿಯತ್ತ  ಸಾಗಿದ ತನಿಖೆ

    ಬೀಜಿಂಗ್‌: ವಿಶ್ವದ 10 ಕೋಟಿ ಜನರಿಗೆ ಬಾಧಿಸಿ, 23 ಲಕ್ಷ ಜನರನ್ನು ಬಲಿ ಪಡೆದ ಕೊರೊನಾ ವೈರಸ್‌ ಚೀನಾದ ವುಹಾನ್‌ನಲ್ಲಿರುವ ವೈರಾಲಜಿ ಲ್ಯಾಬ್‌ನಿಂದ ಸೋರಿಕೆಯಾಗಿರುವ ಸಾಧ್ಯತೆ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ತಜ್ಞ ವೈದ್ಯರೊಬ್ಬರು ಹೇಳಿದ್ದಾರೆ.

    ವುಹಾನ್‌ ಪ್ರಯೋಗಾಲಯದಿಂದ ಕೊರೊನಾ ವೈರಸ್‌ ಸೋರಿಕೆಯಾಗಿದೆ. ಆದರೆ ಚೀನಾ ಉದ್ದೇಶ ಪೂರ್ವಕವಾಗಿ ಈ ವಿಚಾರವನ್ನು ಮುಚ್ಚಿಟ್ಟಿದೆ ಎಂಬ ಗಂಭೀರ ಆರೋಪವಿದೆ. ಆದರೆ ಈ ಆರೋಪವೇ ತಪ್ಪು ಎಂಬಂತೆ ಡಬ್ಲ್ಯುಎಚ್‌ಒ ಆಹಾರ ಸುರಕ್ಷತೆ ಮತ್ತು ಪ್ರಾಣಿಗಳ ರೋಗ ತಜ್ಞ ಪೀಟರ್‌ ಬೆನ್‌ ಎಂಬರೇಕ್‌ ವುಹಾನ್‌ನಲ್ಲಿರುವ ವೈರಾಲಜಿ ಲ್ಯಾಬ್‌ನಿಂದ ಸೋರಿಕೆಯಾಗಿರುವ ಸಾಧ್ಯತೆ ಇಲ್ಲ. ಬದಲಾಗಿ ಪ್ರಾಣಿಗಳಿಂದ ಮಾನವರಿಗೆ ಹರಡಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

    ಡಬ್ಲ್ಯುಎಚ್‌ಒ 10 ದೇಶಗಳ ನಿಯೋಗ  ಸೋಂಕಿನ ಮೂಲ ಮತ್ತು 2019ರ ಡಿಸೆಂಬರ್‌ಗೂ ಮುನ್ನ ಚೀನಾದಲ್ಲಿ ಕೊರೋನಾ ಸಾರ್ಸ್‌- ಕೋವ್‌-2 ವೈರಸ್‌ ಇತ್ತೇ ಎಂಬುದನ್ನು ಪತ್ತೆ ಹಚ್ಚಲು ಚೀನಾಗೆ  ಭೇಟಿ ನೀಡಿ ತನಿಖೆ ಆರಂಭಿಸಿದೆ. ಸಿಂಗಾಪುರ ಮೂಲಕ ಜ.14ಕ್ಕೆ  ವುಹಾನ್‌ಗೆ ಭೇಟಿ ನೀಡಿದ ತಂಡ ಮೊದಲ 2 ವಾರ ಹೋಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿತ್ತು.  ಮೊದಲ 2 ವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾಹಿತಿ ಕಲೆ ಹಾಕಿದ ತಂಡ ಬಳಿಕ  ಆರೋಪ ಬಂದ ಸ್ಥಳಗಳಿಗೆ ಭೇಟಿ ನೀಡಿದೆ. ಇದನ್ನೂ ಓದಿ: ವುಹಾನ್‍ನಲ್ಲಿ 1,500 ವಿವಿಧ ವೈರಸ್ ರಕ್ಷಣೆ – ಬಿರುಗಾಳಿ ಎಬ್ಬಿಸಿದ ಚೀನಾ ಡೈಲಿ ಟ್ವೀಟ್

    ನಿಯೋಗ ʼದಿ ವುಹಾನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿ’ಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದೆ.  ಅಷ್ಟೇ ಅಲ್ಲದೇ ವುಹಾನ್‌ ಹೊರವಲಯದಲ್ಲಿರುವ ಪ್ರಾಣಿಗಳ ಮಾಂಸದ ಮಾರುಕಟ್ಟೆ(ವೆಟ್‌ ಮಾರುಕಟ್ಟೆ) ಭೇಟಿ ನೀಡಿದೆ.

    ಪರಿಶೀಲನೆ ಬಳಿಕ ಮಾತನಾಡಿರುವ ಪೀಟರ್‌ ಬೆನ್‌ ಎಂಬರೇಕ್‌, 2019ರ ಡಿಸೆಂಬರ್‌ಗೂ ಮೊದಲೇ ಚೀನಾದಲ್ಲಿ ಸಾರ್ಸ್‌ ಕೋವ್‌ 2 ವೈರಸ್‌ ಇತ್ತು ಎಂಬುದನ್ನು ದೃಢಪಡಿಸುವ ಯಾವುದೇ ಸಾಕ್ಷ್ಯಾಧಾರಗಳು ತಮ್ಮ ಪ್ರಾಥಮಿಕ ತನಿಖೆಯಲ್ಲಿ ಲಭ್ಯವಾಗಿಲ್ಲ ಎಂದು ಹೇಳಿದ್ದಾರೆ.

    ಈ ವೈರಸ್‌ ಬಾವಲಿಯಲ್ಲಿ ಉಗಮವಾಗಿ ಬಳಿಕ ಮಾನವರಿಗೆ ಹರಡಿರುವ ಸಾಧ್ಯತೆ ಇದೆ. ಆದರೆ ವುಹಾನ್‌ನಲ್ಲಿ ಬಾವಲಿಗಳು ಇಲ್ಲ. ಆದರೆ  ಬಾವಲಿಯಿಂದ  ಪ್ಯಾಂಗೊಲಿನ್ ಅಥವಾ ಬಿದಿರಿನ ಇಲಿಗೆ ಹರಡಿ ಬಳಿಕ ಮಾನವರಿಗೆ ಬಂದಿರುವ ಸಾಧ್ಯತೆಯಿದೆ. ಪ್ರಾಣಿಗಳ ಮೂಲಕ ವೈರಸ್‌ ಸಾಗಿಬಂದ ಪಥದ ಬಗ್ಗೆ ಇನ್ನಷ್ಟು ವಿಸ್ತೃತ ಅಧ್ಯಯನ ನಡೆದರೆ ಮತ್ತಷ್ಟು ವಿವರ ಲಭ್ಯವಾಗಬಹುದು ಎಂದಿದ್ದಾರೆ.

    ಶೀತಲೀಕೃತ ಉತ್ಪನ್ನಗಳ ಮೂಲಕವೂ ಮಾನವರಿಗೆ ಸೋಂಕು ಹರಡಿರುವ ಸಾಧ್ಯತೆ ಇದೆಯೇ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಅವರು ವಿವರಿಸಿದರು.

    ನಿಯೋಗದ ಸದಸ್ಯ ಡಾ. ಪೀಟರ್‌ ದಾಸ್ಜಾಕ್‌ ಮಾತನಾಡಿ, ನಾವು ಬಹಳಷ್ಟು ಕೆಲಸ ಮಾಡಿದ್ದೇವೆ. ದಕ್ಷಿಣ ಏಷ್ಯಾದಲ್ಲಿ ಚೀನಾ ದೊಡ್ಡ ದೇಶ. ಸಾಗರ ಆಹಾರದ ಸರಬರಾಜು ಸರಪಳಿ ಬಹಳ ವ್ಯಾಪಕವಾಗಿದೆ.  ವಿದೇಶದಿಂದ ಮತ್ತು ಚೀನಾದ ವಿವಿಧ ಭಾಗಗಳಿಂದ ಬರುತ್ತದೆ. ಹೀಗಾಗಿ ಈಗ ನಾವು ಸರಬರಾಜು ಸರಪಳಿಯತ್ತ ಗಮನ ಹರಿಸಿದ್ದೇವೆ ಎಂದು ತಿಳಿಸಿದರು.

    ಈ ಹಿಂದೆ ಚೀನಾ ಮಾಧ್ಯಮಗಳು ಭಾರತದಿಂದ ಈ ವೈರಸ್‌ ಬಂದಿರಬಹುದು ಎಂದು ವರದಿ ಮಾಡಿದ್ದವು. ವಿಶ್ವದ ವಿವಿಧ ರಾಷ್ಟ್ರಗಳಿಂದ ಆಹಾರ ಉತ್ಪನ್ನಗಳನ್ನು ಚೀನಾ ಆಮದು ಮಾಡಿಕೊಳ್ಳುತ್ತದೆ. ವಿಶೇಷವಾಗಿ ಭಾರತದಿಂದ ಮೀನುಗಳನ್ನು ತರಿಸಿಕೊಳ್ಳುತ್ತದೆ. ಈ ಮೂಲಕ ಚೀನಾಗೆ ವೈರಸ್‌ ಪ್ರವೇಶ ಆಗಿರುವ ಸಾಧ್ಯತೆಯಿದೆ ಎಂದು ಚೀನಾದ ಸರ್ಕಾರಿ ಮಾಧ್ಯಮಗಳು ವರದಿ ಮಾಡಿತ್ತು. ಈ ವರದಿಗೆ ವಿಶ್ವದೆಲ್ಲೆಡೆ ಭಾರೀ ಟೀಕೆ ವ್ಯಕ್ತವಾಗಿತ್ತು. ಇದನ್ನೂ ಓದಿ: ಕೊರೊನಾ ವೈರಸ್‌ ಸೃಷ್ಟಿಯಾಗಿದ್ದು ಭಾರತದಲ್ಲಿ – ಚೀನಾದ ಮೊಂಡುವಾದ

    ವಿಶ್ವ ಆರೋಗ್ಯ ಸಂಸ್ಥೆಯ ಮೇಲೆ ವಿವಿಧ ರಾಷ್ಟ್ರಗಳು ಒತ್ತಡ ಹಾಕಿ  ಕೊರೊನಾ ವೈರಸ್‌ ಮೂಲ ಪತ್ತೆ ಹಚ್ಚುವಂತೆ  ವಿವಿಧ ರಾಷ್ಟ್ರಗಳು ಡಬ್ಲ್ಯೂಎಚ್‌ಒ ಮೇಲೆ ಒತ್ತಡ ಹಾಕಿದ್ದವು.  ಆರಂಭದಲ್ಲಿ ಚೀನಾ ಸರ್ಕಾರ ತನಿಖೆಗೆ ಒಪ್ಪಿಗೆ ನೀಡಿರಲಿಲ್ಲ. ಆದರೆ ಅಂತರಾಷ್ಟ್ರೀಯ ಒತ್ತಡ ಡಬ್ಲ್ಯೂ ಎಚ್‌ಒ ಮೇಲೆ ಜಾಸ್ತಿಯಾದ ಬಳಿಕ  ತನಿಖೆ ನಡೆಸಲು ಅನುಮತಿ ನೀಡಿತ್ತು.

    ಬೀಜಿಂಗ್‌ನಲ್ಲಿ ತನಿಖಾ ತಂಡಕ್ಕೆ  ಸರ್ಕಾರ ಕೆಲ ನಿರ್ಬಂಧ ಹೇರಿದೆ. ಸಂಶೋಧಕರು  ಚೀನಾದ ವರದಿಗಾರರ ಜೊತೆ ಮಾತನಾಡದಂತೆ ತಡೆದಿದೆ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿದೆ.

  • ಐಸ್‍ಕ್ರೀಂನಲ್ಲಿ ಕೊರೊನಾ – ಸಾವಿರಾರು ಮಂದಿ ಕ್ವಾರಂಟೈನ್, 29 ಸಾವಿರ ಬಾಕ್ಸ್ ವಶಕ್ಕೆ

    ಐಸ್‍ಕ್ರೀಂನಲ್ಲಿ ಕೊರೊನಾ – ಸಾವಿರಾರು ಮಂದಿ ಕ್ವಾರಂಟೈನ್, 29 ಸಾವಿರ ಬಾಕ್ಸ್ ವಶಕ್ಕೆ

    ಬೀಜಿಂಗ್: ಚೀನಾದ ಈಶಾನ್ಯದಲ್ಲಿರುವ ಟಿಯಾಂಜಿನ್ ಪ್ರದೇಶದಲ್ಲಿ ಐಸ್‍ಕ್ರೀಂನಲ್ಲಿ ಕೊರೊನಾ ಪತ್ತೆಯಾಗಿದೆ. ಇದರಿಂದಾಗಿ ಇದೀಗ ಐಸ್‍ಕ್ರೀಂ ತಿಂದವರಲ್ಲಿ ಆತಂಕ ಮನೆಮಾಡಿದೆ.

    ಬೀಜಿಂಗ್‍ನ ಟಿಯಾಂಜಿನ್ ಪ್ರದೇಶದಲ್ಲಿರುವ ಡಕಿಯಾವಾಡು ಫುಡ್ ಕಂಪನಿಯು ತಯಾರು ಮಾಡಿದ್ದ ಐಸ್‍ಕ್ರೀಂ ಬಾಕ್ಸ್ ಗಳಲ್ಲಿ ಕೊರೊನಾ ಪತ್ತೆಯಾಗಿದೆ. ಕೂಡಲೇ ಸ್ಥಳೀಯಾಡಳಿತ ಅಧಿಕಾರಿಗಳು ಐಸ್‍ಕ್ರೀಂ ಕಂಪನಿಗೆ ಬೀಗ ಜಡಿದು, ಕಂಪನಿಯ ಎಲ್ಲಾ ಉದ್ಯೋಗಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. 1600 ಮಂದಿ ಉದ್ಯೋಗಿಗಳ ಪೈಕಿ 600 ಮಂದಿಯ ಪರೀಕ್ಷೆಯ ವರದಿ ನೆಗೆಟಿವ್ ಬಂದಿದೆ.

    ಐಸ್‍ಕ್ರೀಂನಿಂದಾಗಿ ಕೊರೊನಾ ಬಂದಿರುವ ಬಗ್ಗೆ ಇನ್ನೂ ದೃಢಪಟ್ಟಿಲ್ಲ ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಕಂಪನಿಯಲ್ಲಿ ತಯಾರಾಗಿರುವ 29 ಸಾವಿರ ಐಸ್‍ಕ್ರೀಂ ಬಾಕ್ಸ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈಗಾಗಲೇ ಸ್ಥಳಿಯವಾಗಿ ಮಾರಾಟವಾಗಿರುವ 390 ಬಾಕ್ಸ್‍ಗಳನ್ನು ಟಿಯಾಂಜಿನ್‍ನಲ್ಲಿ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದೇವೆ ಎಂದು ಸ್ಥಳೀಯಾಡಳಿತ ಮಾಹಿತಿ ನೀಡಿದೆ.

    ಐಸ್‍ಕ್ರೀಂನಲ್ಲಿ ಕೊರೊನಾ ಮಾನವ ಸಂಪರ್ಕದಿಂದ ಬಂದಿರುವ ಸಾಧ್ಯತೆ ಇದೆ. ಇನ್ನು ಉತ್ಪಾದನಾ ಘಟಕದಲ್ಲಿನ ನೈರ್ಮಲ್ಯದ ಕೊರತೆಯಿಂದ ಬಂದಿರಲುಬಹುದು. ಐಸ್‍ಕ್ರೀಂನ್ನು ಹೆಚ್ಚಿನ ಶೀತ ತಾಪಮಾನದಲ್ಲಿ ಸಂಗ್ರಹಿಸುವ ಕಾರಣದಿಂದ ವೈರಸ್ ಅದರಲ್ಲಿ ಬದುಕುಳಿದು ನಂತರ ಹರಡಿರುವ ಬಗ್ಗೆ ಸಂಶಯ ಇದೆ ಎಂದು ವರದಿಯಾಗಿದೆ.

    ಕಂಪನಿಯು ನ್ಯೂಜಿಲೆಂಡ್‍ನಿಂದ ಹಾಲಿನ ಪುಡಿ ಆಮದು ಮಾಡಿಕೊಂಡಿದೆ ಮತ್ತು ಉಕ್ರೇನ್‍ನಿಂದ ಕೆಲವು ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಐಸ್‍ಕ್ರೀಂ ತಯಾರಿಸಿದೆ ಎಂದು ಸರ್ಕಾರ ತಿಳಿಸಿದೆ.

    ಚೀನಾದ ವುಹಾನ್‍ನಲ್ಲಿ 2019ರಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ವೈರಸ್ ವಿದೇಶಗಳಿಂದ ಆಮದು ಮಾಡಿಕೊಂಡಿರುವ ಮೀನು ಮತ್ತು ಇತರ ಆಹಾರ ಪದಾರ್ಥಗಳಿಂದ ಬಂದಿದೆ ಈ ಹಿಂದೆ ಚೀನಾ ಮಾಧ್ಯಮಗಳು ವರದಿ ಪ್ರಕಟಿಸಿತ್ತು.

    ಹುಬೇ ಪ್ರಾಂತ್ಯದಲ್ಲಿ ಮತ್ತೆ 72 ಹೊಸ ಕೊರೊನಾ ಸೋಂಕು ಪತ್ತೆಯಾಗಿದೆ. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಸರ್ಕಾರ ಸೋಂಕು ನಿಯಂತ್ರಣಕ್ಕಾಗಿ ಪ್ರತ್ಯೇಕ 9 ಸಾವಿರದ ಐನೂರು ಕೊಠಡಿಗಳನ್ನು ಹೊಂದಿರುವ ಆಸ್ಪತ್ರೆಯನ್ನು ನಿರ್ಮಿಸಿದೆ. ಚೀನಾದಲ್ಲಿ ಒಟ್ಟು 88,227 ಮಂದಿಗೆ ಕೊರೊನಾ ಬಂದಿದ್ದು ಈ ಪೈಕಿ 4,652 ಮಂದಿ ಮೃತಪಟ್ಟಿದ್ದಾರೆ.

  • ವುಹಾನ್‍ ಕೊರೊನಾದ ಭೀಕರತೆಯ ವರದಿ – ಗಟ್ಟಿಗಿತ್ತಿ ಪತ್ರಕರ್ತೆಗೆ 4 ವರ್ಷ ಜೈಲು ಶಿಕ್ಷೆ

    ವುಹಾನ್‍ ಕೊರೊನಾದ ಭೀಕರತೆಯ ವರದಿ – ಗಟ್ಟಿಗಿತ್ತಿ ಪತ್ರಕರ್ತೆಗೆ 4 ವರ್ಷ ಜೈಲು ಶಿಕ್ಷೆ

    ಬೀಜಿಂಗ್: ಕೊರೊನಾ ವೈರಸ್‍ನ ತವರು ಮನೆ ವುಹಾನ್‍ಲ್ಲಿರುವ ಸ್ಥಿತಿಯ ಬಗ್ಗೆ ಪ್ರಥಮ ಬಾರಿಗೆ ವರದಿ ಮಾಡಿ, ಅವ್ಯವಸ್ಥೆಯನ್ನು ಜಗಜ್ಜಾಹೀರು ಮಾಡಿದ್ದ ಮಹಿಳಾ ಪತ್ರಕರ್ತೆಗೆ ಚೀನಾ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ವಿಧಿಸಿದೆ.

    ವಕೀಲ ವೃತ್ತಿ ಮಾಡುತ್ತಿದ್ದ 37 ವರ್ಷದ ಜಾಂಗ್ ಶಿಕ್ಷೆಗೆ ಗುರಿಯಾಗಿದ್ದಾರೆ. ವುಹಾನ್ ನಗರದಲ್ಲಿ ಫೆಬ್ರವರಿಯಲ್ಲಿ ಕಾಣಿಸಿಕೊಂಡ ಕೊರೊನಾದ ಭೀಕರತೆಯನ್ನು ವರದಿ ಮಾಡಿ ಬಿತ್ತರಿಸಿದ ಪರಿಣಾಮವಾಗಿ ಜನಗಳ ಮತ್ತು ಸಮಸ್ಯೆಗಳನ್ನು ಸೃಷ್ಟಿಸಲು ಪ್ರಚೋದಿಸಿದ ಆರೋಪ ಹೊರಿಸಿ ನ್ಯಾಯಾಲಯದಲ್ಲಿ ಕೇಸ್ ದಾಖಲಾಗಿತ್ತು. ಈ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈಗ ಶಿಕ್ಷೆಯ ಪ್ರಮಾಣವನ್ನು ಶಾಂಘೈ ಕೋರ್ಟ್ ಪ್ರಕಟಿಸಿದೆ.

     ಕೊರೊನಾ ಪ್ರಾರಂಭದ ಹಂತದಲ್ಲಿ ಇದ್ದ ಸ್ಥಿತಿ, ಕಠಿಣ ಲಾಕ್‍ಡೌನ್ ನೀತಿ, ತುಂಬಿ ತುಳುಕುತ್ತಿದ್ದ ಆಸ್ಪತ್ರೆ ಇತ್ಯಾದಿಗಳ ಫೋಟೋ, ವಿಡಿಯೋ ತೆಗೆದು ಚೀನಾದ ಸಾಮಾಜಿಕ ಜಾಲತಾಣ ಮತ್ತು ವಿ ಚಾಟ್‍ನಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಈ ವಿಡಿಯೋಗಳು ವೈರಲ್ ಆಗಿ ಪ್ರಪಂಚದ ಗಮನ ಸೆಳೆದಿತ್ತು.

    ಮೇ ಮಧ್ಯದಲ್ಲಿ ಈಕೆಯ ಖಾತೆಯಿಂದ ಯಾವುದೇ ಪೋಸ್ಟ್‌ಗಳು ಪ್ರಕಟವಾಗಿರಲಿಲ್ಲ. ಬಳಿಕ ಪೊಲೀಸರು ಈಕೆಯನ್ನು ಬಲವಂತವಾಗಿ ವಶದಲ್ಲಿಟ್ಟಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿತ್ತು. ಬಳಿಕ ಜಾಂಗ್ ಖಾತೆಯನ್ನು ಬ್ಲಾಕ್‌ ಮಾಡಲಾಗಿತ್ತು. ಇದನ್ನೂ ಓದಿ: ಭಯಕ್ಕೆ ಬಿದ್ದು ಭಾರತದ ವೆಬ್‌ಸೈಟ್‌ಗಳಿಗೆ ಕತ್ತರಿ ಹಾಕಿದ ಚೀನಾ

    ಈಕೆಯ ವಕೀಲರು ಪ್ರತಿಕ್ರಿಯಿಸಿ, ಸೋಮವಾರ ಜಾಂಗ್ ವೀಲ್ ಚೇರ್‌ನಲ್ಲಿ ಕೋರ್ಟ್‍ಗೆ ಹಾಜರಾಗಿದ್ದಳು. ವಿಚಾರಣೆ ಸಂದರ್ಭದಲ್ಲಿ ಈಕೆ ಆರೋಪ ಸಾಬೀತು ಪಡಿಸುವಂತಹ ಬಲವಾದ ಸಾಕ್ಷ್ಯಗಳು ಇರಲಿಲ್ಲ ಎಂದು ಹೇಳಿದ್ದಾರೆ.

    ಚೀನಾದಲ್ಲಿರುವ ಕಮ್ಯೂನಿಸ್ಟ್ ಸರ್ಕಾರದ ಪೊಲೀಸರು ಕೋವಿಡ್ 19 ಸಮಯದಲ್ಲಿ ವರದಿ ಮಾಡಿದ್ದಕ್ಕೆ ಜಾಂಗ್ ಮಾತ್ರವಲ್ಲದೇ ಹಲವು ಪತ್ರಕರ್ತಕರನ್ನು ವಶಕ್ಕೆ ಪಡೆದಿದ್ದರು.  ಇದನ್ನೂ ಓದಿ: 2 ತಿಂಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ವುಹಾನ್‌ ಪತ್ರಕರ್ತ