Tag: ವೀಲ್ ಚೇರ್

  • ವೀಲ್ ಚೇರ್ ಸಮೇತ ರೈಲ್ವೆ ಹಳಿಗೆ ಬಿದ್ದ ಅಂಗವಿಕಲ – ಟ್ರೈನ್‍ನಿಂದ ಜಸ್ಟ್ ಮಿಸ್

    ವೀಲ್ ಚೇರ್ ಸಮೇತ ರೈಲ್ವೆ ಹಳಿಗೆ ಬಿದ್ದ ಅಂಗವಿಕಲ – ಟ್ರೈನ್‍ನಿಂದ ಜಸ್ಟ್ ಮಿಸ್

    ನ್ಯೂಯಾರ್ಕ್: ಅಮೆರಿಕಾದ ಸಬ್ ವೇ ಟ್ರ್ಯಾಕ್ ಮೇಲೆ ಬಿದ್ದ ಅಂಗವಿಕಲರೊಬ್ಬರನ್ನು ವ್ಯಕ್ತಿಯೊಬ್ಬರು ರಕ್ಷಿಸಿ ಪ್ರಾಣ ಉಳಿಸಿರುವ ಘಟನೆ ನಗರದ ಯೂನಿಯನ್ ಸ್ಕ್ವೇರ್‌ನಲ್ಲಿ ನಡೆದಿದೆ.

    ರೈಲ್ವೆ ಹಳಿಯಲ್ಲಿ ವೀಲ್ ಚೇರ್ ಸಹಿತ ಕೆಳಗೆ ಬಿದ್ದಿದ್ದ ಅಂಗವಿಕಲರನ್ನು ಕಂಡು ವ್ಯಕ್ತಿಯೊಬ್ಬರು ತಮ್ಮ ಪ್ರಾಣವನ್ನು ಒತ್ತೆ ಇಟ್ಟು, ರೈಲ್ವೆ ಹಳಿಗೆ ಇಳಿದು ವೀಲ್ ಚೇರ್ ಹಾಗೂ ಅವರನ್ನು ಫ್ಲಾಟ್‍ಫಾರ್ಮ್ ಮೇಲೆ ಹತ್ತಿಸಿ ಕಾಪಾಡಿದ್ದಾರೆ. ರೈಲು ಬರುವುದಕ್ಕೆ ಇನ್ನೂ ಕೆಲವೇ ಸೆಕೆಂಡುಗಳು ಬಾಕಿ ಇದ್ದಾಗ ಈ ಘಟನೆ ಜರುಗಿದೆ. ಸದ್ಯ ಈ ವೀಡಿಯೋಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಪ್ರಶಂಸೆಗಳ ಸುರಿಮಳೆಯೇ ಹರಿದು ಬರುತ್ತಿದೆ.

    ಈ ವೀಡಿಯೋ ಜೊತೆಗೆ ಇಂದು ಮಧ್ಯಾಹ್ನ ಯೂನಿಯನ್ ಸ್ಕ್ವೇರ್ ನಲ್ಲಿ ವೀಲ್ ಚೇರ್‍ನಿಂದ ವ್ಯಕ್ತಿ ಆದ್ಯಾಗೋ ರೈಲ್ವೆ ಟ್ರ್ಯಾಕ್ ಒಳಗೆ ಬಿದ್ದಿದ್ದನು. ಅದೃಷ್ಟವಶಾತ್ ರೈಲು ನಿಲ್ದಾಣಕ್ಕೆ ಬರುವ ಮುನ್ನ ಒಬ್ಬ ವ್ಯಕ್ತಿ ರೈಲ್ವೆ ಹಳಿಗೆ ಹಾರಿ ಆ ವ್ಯಕ್ತಿಯನ್ನು ರಕ್ಷಿಸಿದ ಎಂದು ಕ್ಯಾಪ್ಷನ್‍ನಲ್ಲಿ ಬರೆಯಲಾಗಿದೆ.

    ಈ ಕುರಿತಂತೆ ಪೊಲೀಸರು, ಬುಧವಾರ ಮಧ್ಯಾಹ್ನ 1:30ಕ್ಕೆ ಈ ಘಟನೆ ಸಂಭವಿಸಿದ್ದು, ರೈಲ್ವೆ ಟ್ರ್ಯಾಕ್ ಮೇಲೆ ಬಿದ್ದ ವ್ಯಕ್ತಿಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿದೆ. ಅವರು ಪ್ರಜ್ಞೆ ಹೊಂದಿದ್ದು, ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ. ಸದ್ಯ ವ್ಯಕ್ತಿಯ ಧೈರ್ಯ ಹಾಗೂ ಸಾಹಸಕ್ಕೆ ಮೆಡಲ್‍ನನ್ನು ನೀಡಬೇಕು ಎಂದು ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ:ಶಾಸಕ ಜಮೀರ್‌ಗೆ ಇಡಿ ಶಾಕ್ – ಸತತ 23 ಗಂಟೆಗಳ ಕಾಲ ನಡೆದ ದಾಳಿ ಅಂತ್ಯ

  • ವೀಲ್ ಚೇರ್ ಮೇಲೆ ಕುಳಿತೇ ಪ್ರಚಾರ ಮುಂದುವರಿಸಿದ ದೀದಿ

    ವೀಲ್ ಚೇರ್ ಮೇಲೆ ಕುಳಿತೇ ಪ್ರಚಾರ ಮುಂದುವರಿಸಿದ ದೀದಿ

    ಕೋಲ್ಕತ್ತಾ: ಬಂಗಾಳದಲ್ಲಿ ಚುನಾವಣೆ ಪ್ರಚಾರದ ಅಬ್ಬರ ಕಾವೇರಿದೆ. ಇದರ ಮಧ್ಯೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವೀಲ್ ಚೇರ್ ಮೇಲೆ ಕುಳಿತು ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.

    ತಿಂಗಳ ಆರಂಭದಲ್ಲಿ ನಡೆದ ದಾಳಿ ವೇಳೆ ಮಮತಾ ಬ್ಯಾನರ್ಜಿ ಎಡ ಕಾಲಿಗೆ ತೀವ್ರವಾಗಿ ಗಾಯಗೊಂಡಿದ್ದರು. ಇದೀಗ ಎರಡನೇ ಹಂತದಲ್ಲಿ ಮತಚಲಾಯಿಸುವ ನಂದಿಗ್ರಾಮದಲ್ಲಿ ವೀಲ್ ಚೇರ್ ಮೇಲೆ ಕುಳಿತು 8 ಕಿ.ಮೀ ರೋಡ್ ಶೋ ನೆಡೆಸಿದ್ದಾರೆ.

    ಗುರುವಾರ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಹಾಗೂ ಬಿಜೆಪಿಯ ಮಾಜಿ ಸಹಾಯಕ ಸುವೇಂದು ಅಧಿಕಾರಿ ನಡುವೆ ನಡೆದ ಚುನಾವಣಾ ಪ್ರಚಾರದ ಮಹಾಯುದ್ಧವನ್ನು ನೋಡಿದ್ದೇವೆ. ಶೀಘ್ರದಲ್ಲಿಯೇ ಚುನಾವಣೆ ಪ್ರಚಾರ ಮುಕ್ತಾಯಗೊಳ್ಳಲಿದೆ.

    ತೃಣಮೂಲ ಕಾಂಗ್ರೆಸ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿರುವ ವೀಡಿಯೋದಲ್ಲಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವೀಲ್ ಚೇರ್ ಮೇಲೆ ಕುಳಿತುಕೊಂಡಿದ್ದರೆ, ಸುತ್ತಲು ಪಕ್ಷದ ಕಾರ್ಯಕರ್ತರು ಧ್ವಜಗಳನ್ನು ಹಿಡಿದು ಪಾದಯಾತ್ರೆ ನಡೆಸಿದ್ದಾರೆ.

    ತಿಂಗಳ ಆರಂಭದಲ್ಲಿ, ಮಮತಾ ಬ್ಯಾನರ್ಜಿಯವರು ನಾನು ಕಾರಿನಲ್ಲಿ ಸ್ಥಳೀಯ ದೇವಾಲಯಕ್ಕೆ ತೆರಳಿದ್ದಾಗ, ಕಾರ್ ಬಾಗಿಲು ತೆರೆದ ತಕ್ಷಣ 4-5 ಮಂದಿ ಬಂದು ಕಾರ್ ಡೋರ್‍ನನ್ನು ತಳ್ಳಿದರು. ಈ ವೇಳೆ ಪೊಲೀಸರ ಭದ್ರತೆ ಕೂಡ ಇರಲಿಲ್ಲ. ಹೀಗಾಗಿ ನನ್ನ ಕಾಲಿಗೆ ಗಾಯವಾಗಿದೆ ಎಂದು ಆರೋಪಿಸಿದ್ದರು.

    ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಪಕ್ಷ ಜಯ ಸಾಧಿಸಲು ಪ್ರಯತ್ನಿಸುತ್ತಿದ್ದು, ಮುಖ್ಯಮಂತ್ರಿಯ ಭದ್ರತೆ ಉಸ್ತುವಾರಿ ವಹಿಸಿಕೊಂಡಿದ್ದ ಪೊಲೀಸ್ ಅಧಿಕಾರಿಯನ್ನು ಚುನವಣಾ ಆಯೋಗ ಅಮಾನತುಗೊಳಿಸಿತ್ತು. ಮತದಾನ ಸಮಿತಿ ಕೂಡ ದಾಳಿಯನ್ನು ಕಡೆಗಣಿಸಿ ಇದು ಅಪಘಾತ ಎಂದು ಹೇಳಿದ್ದಾರೆ ಎಂದರು.

    ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಮತದಾನ ನಡೆಸಲಾಗುತ್ತಿದ್ದು, ಮೊದಲ ಹಂತದ ಮತದಾನ ಶನಿವಾರ ನಡೆದಿದೆ ಹಾಗೂ ರಾಜ್ಯದಲ್ಲಿ ಶೇ. 80ಕ್ಕಿಂತ ಹೆಚ್ಚು ಮತದಾನವಾಗಿದೆ. ಮೇ.2ರಂದು ಇದರ ಫಲಿತಾಂಶ ಹೊರ ಬೀಳಲಿದೆ.

  • ರೋಗಿಗಳಿಗಾಗಿ ವ್ಹೀಲ್‍ಚೇರ್ ಸಂಶೋಧನೆ-ಯಾವ ಭಾಷೆಯಲ್ಲಿ ಹೇಳಿದ್ರೂ ಚಲಿಸುತ್ತೆ

    ರೋಗಿಗಳಿಗಾಗಿ ವ್ಹೀಲ್‍ಚೇರ್ ಸಂಶೋಧನೆ-ಯಾವ ಭಾಷೆಯಲ್ಲಿ ಹೇಳಿದ್ರೂ ಚಲಿಸುತ್ತೆ

    -ಧಾರವಾಡ ಎಸ್‍ಡಿಎಂ ಸ್ಟೂಡೆಂಟ್ಸ್ ಸಾಧನೆ

    ಧಾರವಾಡ: ಈ ಚೇರ್ ಲೆಫ್ಟ್ ಅಂದ್ರೆ ಎಡಕ್ಕೆ ಹೋಗುತ್ತೆ. ರೈಟ್ ಅಂದ್ರೆ ಬಲಕ್ಕೆ ಹೋಗುತ್ತೆ. ಹೋಗುವಾಗ್ಲೆ ನಿಲ್ಲು ಅಂದ್ರೆ ನಿಂತೇ ಬಿಡುತ್ತದೆ. ಹೌದು. ಧಾರವಾಡದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ರೋಗಿಗಳಿಗಾಗಿ ಈ ಹೊಸ ಮೂವಿಂಗ್ ಚೇರನ್ನ ತಯಾರಿಸಿದ್ದಾರೆ.

    ಧಾರವಾಡದ ಎಸ್‍ಡಿಎಂ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿಗಳು ಈ ಆವಿಷ್ಕಾರವನ್ನ ಮಾಡಿದ್ದಾರೆ. ಇದನ್ನ ವಿಶೇಷವಾಗಿ ವೃದ್ಧ ಹಾಗೂ ಅಂಗವಿಕಲರನ್ನ ಗಮನದಲ್ಲಿಟ್ಟುಕೊಂಡು ಆವಿಷ್ಕರಿಸಲಾಗಿದೆ. ಪುಷ್ಪಾ ಚೌಹಾಣ್, ಕಿರಣ್, ವೈಷ್ಣವಿ ಹಾಗೂ ಕೃತಿಕಾ ಎಂಬ ವಿದ್ಯಾರ್ಥಿನಿಯರ ಒಂದು ವರ್ಷದ ಪರಿಶ್ರಮದಿಂದ ಈ ಚೇರ್ ಅನ್ನು ತಯಾರಿಸಿದ್ದಾರೆ.

    ವಿಶೇಷತೆ: 12 ವ್ಯಾಟಿನ ಚಾರ್ಜೇಬಲ್ ಬ್ಯಾಟರಿ ಮೇಲೆ ಓಡಾಡುವ ಈ ವ್ಹೀಲ್‍ಚೇರ್, ಒಟ್ಟು 7 ಆಯಾಮಗಳ ಕಡೆ ಚಲಿಸುತ್ತದೆ. ಈ ಕುರ್ಚಿ ಮೆಮೊರಿಯಲ್ಲಿ ಒಟ್ಟು 80 ಜನರ ಧ್ವನಿಯನ್ನ ಮುದ್ರಿಸಿ ಇಡಬಹುದು. ವಿಶ್ವದ ಯಾವುದೇ ಭಾಷೆಯಲ್ಲಿ ಮೂಮೆಂಟ್ ಆಗಲು ಹೇಳಿದ್ರೂ ಇದು ಚಲಿಸುತ್ತೆ. ಭಾಷೆ ಬದಲಿಸಲು ಕೇವಲ 30 ಸೆಕೆಂಡು ಸಾಕು. 75 ಕೆಜಿ ತೂಕದ ಮನುಷ್ಯ ಇದರ ಮೇಲೆ ಕುಳಿತುಕೊಂಡು ಓಡಾಡಬಹುದು. ಈ ಮೂವಿಂಗ್ ಚೇರ್ ತಯಾರಿಸಲು 48 ಸಾವಿರ ರೂ. ಖರ್ಚಾಗಿದೆ.

    ಸತತ ಒಂದು ವರ್ಷಗಳ ಕಾಲ ಪ್ರಯತ್ನ ಪಟ್ಟು ವಿದ್ಯಾರ್ಥಿಗಳು ಮೂವಿಂಗ್ ವ್ಹೀಲ್ ಚೇರ್ ಆವಿಷ್ಕರಿಸಿದ್ದಾರೆ. ವಿದ್ಯಾರ್ಥಿನಿಗಳ ಈ ಆವಿಷ್ಕಾರಕ್ಕೆ ಇನ್ನಷ್ಟು ಉತ್ತೇಜನ ಸಿಕ್ಕಿದ್ರೆ ವಿಶ್ವಖ್ಯಾತಿ ಪಡೆಯಬಹುದು.

    https://youtu.be/WZLElPCcUNs