Tag: ವೀಲಿಂಗ್

  • ತುಮಕೂರಲ್ಲಿ ಮತ್ತೆ ಬೈಕ್ ವೀಲಿಂಗ್ ಹಾವಳಿ- ಟಚ್ ಮಾಡಿದ್ದಕ್ಕೆ ಬೈಕಿಗೆ ಬೆಂಕಿ ಹಚ್ಚಿದ ಸ್ಥಳೀಯರು

    ತುಮಕೂರಲ್ಲಿ ಮತ್ತೆ ಬೈಕ್ ವೀಲಿಂಗ್ ಹಾವಳಿ- ಟಚ್ ಮಾಡಿದ್ದಕ್ಕೆ ಬೈಕಿಗೆ ಬೆಂಕಿ ಹಚ್ಚಿದ ಸ್ಥಳೀಯರು

    ತುಮಕೂರು: ನಗರದಲ್ಲಿ ಮತ್ತೆ ಬೈಕ್ ವೀಲಿಂಗ್ ಹಾವಳಿ ಶುರುವಾಗಿದ್ದು, ವೀಲಿಂಗ್ ಮಾಡಬೇಕಾದರೆ ವ್ಯಕ್ತಿಗೆ ಬೈಕ್ ಟಚ್ ಆದ ಪರಿಣಾಮ ಸ್ಥಳೀಯರು ಬೈಕಿಗೆ ಬೆಂಕಿ ಹಚ್ಚಿದ ಘಟನೆ ತುಮಕೂರು ನಗರದ ಟೌನ್ ಹಾಲ್ ಸರ್ಕಲ್ ಬಳಿ ನಡೆದಿದೆ.

    ಫಾರೂಕ್(23), ಶಮೀರ್(19) ಹಾಗೂ ಸಲ್ಮಾನ್(20) ಬೈಕ್ ವೀಲಿಂಗ್ ಮಾಡಿದ ಯುವಕರು. ಮೂವರು ಮರಳೂರು ದಿಣ್ಣೆ ಸಮೀಪದ ನಜಬಾದ್ ನಿವಾಸಿಗಳಾಗಿದ್ದು, ಭಾನುವಾರ ರಾತ್ರಿ ವೀಲಿಂಗ್ ಮಾಡಬೇಕಾದರೆ ವ್ಯಕ್ತಿಗೆ ಬೈಕ್ ಟಚ್ ಆಗಿದೆ.

    ಮೂವರು ಯುವಕರು ಸೇರಿ ಎರಡು ಬೈಕಿನಲ್ಲಿ ವೀಲಿಂಗ್ ಮಾಡಿಕೊಂಡು ಬಂದಿದ್ದಾರೆ. ಕಂಟ್ರೋಲ್ ಸಿಗದೆ ದಾರಿಹೋಕನಿಗೆ ಬೈಕ್ ಟಚ್ ಮಾಡಿದ್ದಾರೆ. ಟಚ್ ಮಾಡಿದ ಪರಿಣಾಮ ಸ್ಥಳೀಯರು ಬೈಕ್ ಸವಾರರಿಗೆ ಥಳಿಸಿ ಬೈಕಿಗೆ ಬೆಂಕಿ ಹಚ್ಚಿದ್ದಾರೆ.

    ಸದ್ಯ ಮೂವರು ಯುವಕರನ್ನು ಸ್ಥಳೀಯರು ಟೌನ್ ಠಾಣೆ ಪೊಲೀಸರಿಗೆ ಒಪ್ಪಿಸಿದ್ದು, ನಗರ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

     

  • ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸವಾರರ ಅಪಾಯಕಾರಿ ವೀಲಿಂಗ್! ವಿಡಿಯೋ ನೋಡಿ

    ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸವಾರರ ಅಪಾಯಕಾರಿ ವೀಲಿಂಗ್! ವಿಡಿಯೋ ನೋಡಿ

    ತುಮಕೂರು: ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಪಡ್ಡೆ ಹುಡುಗರ ಬೈಕ್ ವೀಲಿಂಗ್ ಮೀತಿ ಮೀರಿದೆ. ಅಪಾಯಕಾರಿ ಬೈಕ್ ವ್ಹೀಲಿಂಗ್ ಮಾಡುವ ಮೂಲಕ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ.

    ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಇತರ ಪಡ್ಡೆ ಹೈಕ್ಳು ನಿರಂತರವಾಗಿ ಬೈಕ್ ವೀಲಿಂಗ್ ಮಾಡಿ ವಿಡಿಯೋವನ್ನು ಸೆರೆ ಹಿಡಿದು ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಡುತ್ತಿದ್ದಾರೆ. ಶಹಬ್ಬಾಸ್ ಗಿರಿ ಪಡೆಯುತಿದ್ದಾರೆ.

    ಹುಡುಗರ ಈ ಅಪಾಯಕಾರಿ ಸಾಹಸ ಸಹ ವಾಹನ ಚಾಲಕರಿಗೆ ಭಯ ಹುಟ್ಟುವಂತೆ ಮಾಡಿದೆ. ಪೊಲೀಸರು ಈ ವಿಡಿಯೋ ನೋಡಿ ಎಚ್ಚೆತ್ತು ಈ ಸವಾರರಿಗೆ ಬಿಸಿ ಮುಟ್ಟಿಸಬೇಕಿದೆ.

    https://www.youtube.com/watch?v=0wIuLyK_N54