Tag: ವೀರ ಮದಕರಿ

  • ವೀರ ಮದಕರಿಯಲ್ಲಿ ಕಿಚ್ಚನ ಮಗಳಾಗಿ ನಟಿಸಿದ್ದ ಹುಡುಗಿ ಈಗ ಹೀರೋಯಿನ್

    ವೀರ ಮದಕರಿಯಲ್ಲಿ ಕಿಚ್ಚನ ಮಗಳಾಗಿ ನಟಿಸಿದ್ದ ಹುಡುಗಿ ಈಗ ಹೀರೋಯಿನ್

    ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ (Kiccha Sudeep) ನಟನೆಯ ‘ವೀರ ಮದಕರಿ’ (Veera Madakari) ಸಿನಿಮಾದಲ್ಲಿ ನಟಿಸಿದ್ದ ಬಾಲ ನಟಿ ಜೆರುಶಾ (Jerusha Christopher) ಈಗ ಚಿತ್ರರಂಗದಲ್ಲಿ ಹೀರೋಯಿನ್ (Heroine) ಆಗಿ ಮಿಂಚ್ತಿದ್ದಾರೆ. ಪವನ್ ಕಲ್ಯಾಣ್ ನಿರ್ದೇಶನದ ಸಿನಿಮಾದಲ್ಲಿ ನಾಯಕಿಯಾಗಿ ಜೆರುಶಾ ನಟಿಸಿದ್ದಾರೆ.

    ಸುದೀಪ್-ರಾಗಿಣಿ ನಟನೆಯ ‘ವೀರ ಮದಕರಿ’ ಸಿನಿಮಾದಲ್ಲಿ ಕಿಚ್ಚನ ಮಗಳಾಗಿ ಮುದ್ದಾಗಿ ಜೆರುಶಾ ನಟಿಸಿದ್ದರು. ಇದೀಗ 14 ವರ್ಷಗಳ ನಂತರ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ವೀರ ಮದಕರಿ ಸಿನಿಮಾದಲ್ಲಿ ಸುದೀಪ್ ಮಗಳಾಗಿ ನಟಿಸಿದ್ದೆ ಎಂದು ಜೆರುಶಾ ರಿವೀಲ್ ಮಾಡಿದ್ದಾರೆ. 50ಕ್ಕೂ ಆ್ಯಡ್ ಶೂಟ್‌ಗಳಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ರಾಮ್ ಚರಣ್ ಎದುರು ಅಬ್ಬರಿಸಲಿದ್ದಾರೆ ವಿಜಯ್ ಸೇತುಪತಿ

    ಜೆರುಶಾ ಈ ಚೆಲುವೆ ಮೂಲತಃ ಬೆಂಗಳೂರಿನವರೇ. ಇತ್ತೀಚಿನ ಫಹಾದ್ ಫಾಸಿಲ್ ನಟನೆಯ ‘ಧೂಮಂ’ ಸಿನಿಮಾದಲ್ಲಿ ಜೆರುಶಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈಗ ತಮ್ಮ ಐಡೆಂಟಿಟಿಯನ್ನು ಯುವನಟಿ ರಿವೀಲ್ ಮಾಡಿದ್ದಾರೆ.

    ಇದೀಗ ಜೆರುಶಾ ಸಖತ್ ಬೋಲ್ಡ್ & ಬ್ಯೂಟಿಫುಲ್ ಆಗಿದ್ದಾರೆ. ಮಾಲಿವುಡ್ ರಂಗದಲ್ಲಿ ನಾಯಕಿಯಾಗಿ ಗಮನ ಸೆಳೆಯುತ್ತಿದ್ದಾರೆ. ಸುದೀಪ್‌ಗೆ ನಾಯಕಿಯಾಗುವ ಮಟ್ಟಿಗೆ ಜೆರುಶಾ ಬೆಳೆದು ನಿಂತಿದ್ದಾರೆ. ಜೆರುಶಾ ಲುಕ್ ನೋಡಿ ಕಿಚ್ಚನ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮದಕರಿ ನಾಯಕ ಕಾದಂಬರಿ ಓದುತ್ತಿದ್ದೇನೆ: ಕುತೂಹಲ ಮೂಡಿಸಿದ ಕೌರವ

    ಮದಕರಿ ನಾಯಕ ಕಾದಂಬರಿ ಓದುತ್ತಿದ್ದೇನೆ: ಕುತೂಹಲ ಮೂಡಿಸಿದ ಕೌರವ

    ಕೌರವ ಖ್ಯಾತಿಯ ಬಿ.ಸಿ. ಪಾಟೀಲ್ (BC Patil) ‘ಮದಕರಿ ನಾಯಕ’ನ (Veera Madkari) ಕುರಿತಾದ ಕಾದಂಬರಿ ಓದುತ್ತಿದ್ದೇನೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಈಗಾಗಲೇ ಮದಕರಿ ನಾಯಕನ ಕುರಿತಾಗಿ ಸಿನಿಮಾ ಮಾಡಲು ಇಬ್ಬರು ಸ್ಟಾರ್ ನಟರು ತಯಾರಿ ಮಾಡಿಕೊಂಡಿದ್ದರು. ಅದರಲ್ಲೂ ಸುದೀಪ್ (Sudeep) ಹೆಸರು ಹೆಚ್ಚು ಓಡಾಡಿತು.

    ಮದಕರಿ ನಾಯಕನ ಸಿನಿಮಾ ಕುರಿತಂತೆ ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಹಲವಾರು ಭಾರಿ ಚರ್ಚೆ ನಡೆದಿವೆ. ನಟರ ಫ್ಯಾನ್ಸ್ ವಾರ್ ಗೂ ಅದು ಕಾರಣವಾಗಿತ್ತು. ತಮ್ಮದೇ ಆದ ರೀತಿಯಲ್ಲಿ ಅಭಿಮಾನಿಗಳು ಪೋಸ್ಟರ್ ಮಾಡಿಯೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇಷ್ಟೆಲ್ಲ ನಡುವೆಯೂ ಬಿ.ಸಿ. ಪಾಟೀಲ್ ಮತ್ತೊಂದು ಅಚ್ಚರಿಯ ಸುದ್ದಿಯನ್ನು ನೀಡಿದ್ದಾರೆ. ಇದನ್ನೂ ಓದಿ:ದಾಂಪತ್ಯಕ್ಕೆ ಅಂತ್ಯ ಹಾಡಿದ ನಟಿ, ಡಿವೋರ್ಸ್ ಬಗ್ಗೆ ಬಿಗ್ ಬಾಸ್ ಚೈತ್ರಾ ಅಪ್‌ಡೇಟ್

    ತಾವೇ ನಟಿಸಲು ಆ ಕಾದಂಬರಿ ಓದುತ್ತಿದ್ದಾರೋ ಅಥವಾ ನಿರ್ಮಾಣಕ್ಕೆ ಏನಾದರೂ ಪ್ಲ್ಯಾನ್ ಮಾಡಿದ್ದರೋ ಗೊತ್ತಿಲ್ಲ. ಆ ಕುರಿತು ಅವರು ಯಾವುದೇ ಮಾಹಿತಿಯನ್ನೂ ನೀಡಿಲ್ಲ. ಆದರೆ, ಕಾದಂಬರಿ ಓದುತ್ತಿರುವ ಕುರಿತು ಅವರು ಮಾತನಾಡಿದ್ದಾರೆ. ಮುಂದೆ ನೋಡೋಣ ಎನ್ನುವ ಕುತೂಹಲವನ್ನೂ ಉಳಿಸಿಕೊಂಡಿದ್ದಾರೆ.

     

    ಗರಡಿ ಸೇರಿದಂತೆ ಹಲವು ಸಿನಿಮಾಗಳನ್ನು ಪಾಟೀಲರು ನಿರ್ಮಾಣ ಮಾಡುತ್ತಿದ್ದಾರೆ. ಜೊತೆಗೆ ಗರಡಿಯಲ್ಲಿ ಅವರು ಪ್ರಮುಖ ಪಾತ್ರವನ್ನೂ ಮಾಡಿದ್ದಾರೆ. ಶಶಾಂಕ್ ಜೊತೆ ಕೈ ಜೋಡಿಸಿ ನಿರ್ಮಾಣ ಮಾಡಿರುವ ಕೌಸಲ್ಯ ಸುಪ್ರಜಾ ರಾಮ ಸಿನಿಮಾ ಈ ವಾರ ರಿಲೀಸ್ ಆಗಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮದಕರಿ ಡೈಲಾಗ್ ಹೇಳಿದ್ರೆ ಜಾತೀಯತೆ ಮಾಡ್ತೀನಿ ಅಂತಾರೆ ಏನ್ಮಾಡ್ಲಿ – ಕಿಚ್ಚ ಸುದೀಪ್

    ಮದಕರಿ ಡೈಲಾಗ್ ಹೇಳಿದ್ರೆ ಜಾತೀಯತೆ ಮಾಡ್ತೀನಿ ಅಂತಾರೆ ಏನ್ಮಾಡ್ಲಿ – ಕಿಚ್ಚ ಸುದೀಪ್

    ಬಾಗಲಕೋಟೆ: ಕಳೆದ ಕೆಲವು ದಿನಗಳಿಂದ ರಾಜಕೀಯ ಅಖಾಡಕ್ಕಿಳಿದಿರುವ ನಟ ಕಿಚ್ಚ ಸುದೀಪ್ (Kiccha Sudeep) ಸ್ಟಾರ್ ಪ್ರಚಾರಕರಾಗಿ ಬಿಜೆಪಿ ಅಭ್ಯರ್ಥಿಗಳ (BJP Candidates) ಪರ ಪ್ರಚಾರ ನಡೆಸುತ್ತಿದ್ದಾರೆ.

    ಮಂಗಳವಾರ ಬಾಗಲಕೋಟೆ (Bagalkot) ಜಿಲ್ಲೆಯ ಜಮಖಂಡಿ ನಗರ ಹಾಗೂ ಬೀಳಗಿ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ನಡೆಸಿದರು. ಜಮಖಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಗುಡಗುಂಟಿ ಪರ, ರೋಡ್ ಶೋ ಆರಂಭಿಸಿದ ಕಿಚ್ಚ ಸುದೀಪ್, ನಗರದ ಕಟ್ಟೆ ಕೆರೆಯಿಂದ, ದೇಸಾಯಿ ಸರ್ಖ್ ವರೆಗೆ ರೋಡ್ ಶೋ ನಡೆಸಿದರು. ಬೀಳಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿ ಪರವಾಗಿಯೂ ಪ್ರಚಾರ ನಡೆಸಿದರು. ಇದನ್ನೂ ಓದಿ: ಭಯೋತ್ಪಾದನೆಗೆ ಉತ್ತೇಜನ ಕೊಟ್ರೆ, PFI, ಭಜರಂಗದಳ ಆದ್ರೂ ಬ್ಯಾನ್ ಮಾಡಲಾಗುತ್ತೆ: ಬಿ.ಕೆ‌ ಹರಿಪ್ರಸಾದ್

    ಕಿಚ್ಚ ಸುದೀಪ್ ಹೋದಲೆಲ್ಲಾ ರಸ್ತೆಯುದ್ದಕ್ಕೂ ಅಭಿಮಾನಿಗಳು ಕಿಕ್ಕಿರಿದಿದ್ದರು. ಬೀಳಗಿ ಕ್ಷೇತ್ರದ ಅಂಬೇಡ್ಕರ್ ವೃತ್ತದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಅಭಿಮಾನಿಗಳ ಒತ್ತಾಯದ ಮೇರೆಗೆ `ಸಾವು ಅಂದ್ರೆ ಭಯಪಡೋದಕ್ಕೆ ಗಲ್‌ಗಲ್ಲಿ ತಿರ್ಗೋ ಕಂತ್ರಿ, ಕಜ್ಜಿ ಗೂಂಡಾ ರೌಡಿ ಅನ್ಕೊಂಡ್ರೆನೋ ನನ್ನನ್ನ, ಮದಕರಿ…. ವೀರ ಮದಕರಿ…’ ಚಿತ್ರದ ಡೈಲಾಗ್ ಹೇಳುವ ಮೂಲಕ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಇದನ್ನೂ ಓದಿ: ಭಯೋತ್ಪಾದನೆಗೆ ಉತ್ತೇಜನ ಕೊಟ್ರೆ, PFI, ಭಜರಂಗದಳ ಆದ್ರೂ ಬ್ಯಾನ್ ಮಾಡಲಾಗುತ್ತೆ: ಬಿ.ಕೆ‌ ಹರಿಪ್ರಸಾದ್

    ಇದೇ ವೇಳೆ ಮಾತನಾಡಿ, ನೀವು ಮದಕರಿ ಡೈಲಾಗ್ ಕೇಳ್ತೀರಾ ಸರ್, ಆದ್ರೆ ನಾನು ಜಾತಿಯತೆ ಮಾಡ್ತೀನಿ ಅಂತಾರೆ, ಆದ್ರೆ ನಾವು ಸಿನೆಮಾರಂಗದವ್ರು. ಆದ್ರೆ ಮೂರು ಬಾರಿ ಗೆದ್ದಿರುವ ನಿರಾಣಿಯವರ ಮೇಲೆ ಜನರ ಪ್ರೀತಿ ಸಾಕಷ್ಟಿದೆ. 75 ಸಾವಿರ ಜನರಿಗೆ ನಿರಾಣಿಯವರು ಉದ್ಯೋಗ ನೀಡಿದ್ದಾರೆ. ಈ ಬಾರಿಯೂ ಬಹುಮತದಿಂದ ನಿರಾಣಿಯವರನ್ನ ಗೆಲ್ಲಿಸಿ ಅಂತಾ ಮನವಿ ಮಾಡಿದರು.

  • ಬಾತ್‌ಟಬ್‌ನಲ್ಲಿ ಹಾಟ್ ಆಗಿ ಪೋಸ್ ಕೊಟ್ಟ ತುಪ್ಪದ ಬೆಡಗಿ ರಾಗಿಣಿ

    ಬಾತ್‌ಟಬ್‌ನಲ್ಲಿ ಹಾಟ್ ಆಗಿ ಪೋಸ್ ಕೊಟ್ಟ ತುಪ್ಪದ ಬೆಡಗಿ ರಾಗಿಣಿ

    ಸ್ಯಾಂಡಲ್‌ವುಡ್ (Sandalwood) ನಟಿ ರಾಗಿಣಿ (Ragini Dwivedi) ಇದೀಗ ಸಾಲು ಸಾಲು ಸಿನಿಮಾಗಳ ಮೂಲಕ ಬ್ಯುಸಿಯಾಗಿದ್ದಾರೆ. ಈ ನಡುವೆ ರಾಗಿಣಿ ಹಾಟ್ ಆಗಿ ಫೋಟೋಶೂಟ್‌ವೊಂದು ಮಾಡಿಸಿದ್ದಾರೆ. ಈಗ ನಟಿಯ ಹೊಸ ಲುಕ್ ಪಡ್ಡೆಹುಡುಗರ ನಿದ್ದೆಗೆಡಿಸಿದೆ. ಇದನ್ನೂ ಓದಿ:ವಿಜಯ್ ನಟನೆಯ ‘ದಳಪತಿ 67’ ಸಿನಿಮಾಗೆ ಚಾಲನೆ

    `ವೀರಮದಕರಿ’ (Veeramadakari) ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಲಗ್ಗೆಯಿಟ್ಟ ನಟಿ ರಾಗಿಣಿ ದ್ವಿವೇದಿ, ಸಾಕಷ್ಟು ಸಂಕಷ್ಟಗಳ ನಂತರ ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಕೈತುಂಬಾ ಸಿನಿಮಾಗಳಲ್ಲಿ ನಟಿ ಬ್ಯುಸಿಯಿದ್ದಾರೆ. ಜೊತೆಗೆ ಬಾಲಿವುಡ್‌ಗೂ (Bollywood) ನಟಿ ಎಂಟ್ರಿ ಕೊಟ್ಟಿದ್ದಾರೆ.

    ನಟಿ ರಾಗಿಣಿ ದ್ವಿವೇದಿ ಹಾಟ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಬಾತ್‌ಟಬ್‌ನಲ್ಲಿ ಕುಳಿತು ಶಾರ್ಟ್ ಡ್ರೆಸ್ ಧರಿಸಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ನಟಿಯ ಹಸಿ ಬಿಸಿ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಬಳಕುವ ಬಳ್ಳಿ ತರ ಕಾಣುವ `ರಾ’ಗಿಣಿ ಲುಕ್‌ಗೆ ಫ್ಯಾನ್ಸ್ ಬೋಲ್ಡ್ ಆಗಿದ್ದಾರೆ. ನಟಿಯ ಫೋಟೋ ಈಗ ಎಲ್ಲೆಡೆ ಸದ್ದು ಮಾಡ್ತಿದೆ.

    ಹಿಂದಿ ಸೇರಿ ಒಟ್ಟು 7 ಸಿನಿಮಾಗಳಲ್ಲಿ ರಾಗಿಣಿ ಕಾಣಿಸಿಕೊಂಡಿದ್ದಾರೆ. ಈ ವರ್ಷ ಒಂದೊಂದೇ ಸಿನಿಮಾಗಳು ತೆರೆಗೆ ಅಬ್ಬರಿಸಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮತ ರಾಜಕೀಯಕ್ಕೆ ಮೀಸಲಾದ ಜಾತಿ ಕಲೆಗೆ ಬೇಡ, ಎಚ್ಚರವಾಗಿರಿ ಕಲಾಬಂಧುಗಳೇ- ಜಗ್ಗೇಶ್ ಕಿವಿ ಮಾತು

    ಮತ ರಾಜಕೀಯಕ್ಕೆ ಮೀಸಲಾದ ಜಾತಿ ಕಲೆಗೆ ಬೇಡ, ಎಚ್ಚರವಾಗಿರಿ ಕಲಾಬಂಧುಗಳೇ- ಜಗ್ಗೇಶ್ ಕಿವಿ ಮಾತು

    ಬೆಂಗಳೂರು: ಮದರಕರಿ ನಾಯಕನ ಕುರಿತ ಚಿತ್ರದಿಂದಾಗಿ ಸ್ಯಾಂಡಲ್‍ವುಡ್ ನಲ್ಲಿ ಜಾತಿಗಳ ಆರಂಭಗೊಂಡಿದ್ದು, ಈ ವಿವಾದಕ್ಕೆ ನಟ ಜಗ್ಗೇಶ್ ಟ್ವೀಟ್ ಮೂಲಕ ಪ್ರತಿಕ್ರಿಯೆ ಕೊಟ್ಟಿದ್ದಾರೆ.

    ನಟ ಜಗ್ಗೇಶ್ ಅವರು “ಶಾರದೆಯ ಕಲಾದೇಗುಲ ಚಿತ್ರರಂಗ ಜಾತಿ ರಹಿತ ಪುಣ್ಯಧಾಮ. ಕಲೆಗೆ ಜಾತಿಯಿಲ್ಲ. ವಿಶ್ವದಲ್ಲೇ ಜಾತಿ ಇಲ್ಲದೇ ಒಂದೆತಾಯಿ ಮಕ್ಕಳಂತೆ ಬದುಕುವ ಸ್ಥಳ ಶಾರದೆಯ ಮಡಿಲು. ಇಂಥ ಪವಿತ್ರ ಜಾಗದಲ್ಲಿ ಜಾತಿ ವಿಷಬೀಜ ನೆತ್ತುವರು ಅಳಿವಿನ ಅಂಚಿಗೆ ಸರಿಯುತ್ತಾರೆ. ಮತ ರಾಜಕೀಯಕ್ಕೆ ಮೀಸಲಾದ ಜಾತಿ ಕಲೆಗೆ ಬೇಡ. ವಿನಾಶಕಾಲಕ್ಕೆ ವಿಪರೀತಬುದ್ಧಿ. ಎಚ್ಚರವಾಗಿರಿ ಕಲಾಬಂಧುಗಳೇ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್‍ವುಡ್‍ನಲ್ಲಿ ಜಾತಿ ಜಗಳ – ವೀರ ಮದಕರಿ ಸಿನಿಮಾಗೆ ಮತ್ತೊಂದು ಸಂಕಷ್ಟ!

    ವೀರ ಮದಕರಿ ಸಿನಿಮಾ ಸೆಟ್ಟೇರುವುದಕ್ಕೆ ಮೊದಲೇ ಈಗ ಜಾತಿ ವಿಚಾರದಲ್ಲಿ ಸಂಘರ್ಷ ಆರಂಭವಾಗಿದೆ. ಮದಕರಿ ನಾಯಕನ ಪಾತ್ರವನ್ನು ಸುದೀಪ್ ಮಾಡಬೇಕು ಅಂತ ವಾಲ್ಮೀಕಿ ಸಮುದಾಯ ಧ್ವನಿ ಎತ್ತಿತ್ತೋ ದರ್ಶನ್ ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ. ಸಿನಿಮಾಗೆ ಜಾತಿ ಸ್ಪರ್ಶ ಮಾಡುವುದು ಅದೆಷ್ಟು ಸರಿ? ಕಲೆಗೆ ಅದ್ಯಾವ ಜಾತಿ ಇದೆ ಎಂದು ಪ್ರಶ್ನಿಸುತ್ತಿದ್ದಾರೆ. ಈ ಕುರಿತು ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂಘರ್ಷಕ್ಕೆ ಇಳಿದಿದ್ದಾರೆ.

    ವೀರ ಮದಕರಿ ಸಿನಿಮಾ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ನಿರ್ಮಾಪಕ ಮುನಿರತ್ನ, ನಟ ದರ್ಶನ್ ಮತ್ತು ಸುದೀಪ್ ಸ್ಯಾಂಡಲ್ ವುಡ್‍ನ ದೊಡ್ಡ ನಟರು. ಚಿತ್ರರಂಗದ ನಟನರ ನಡುವೆ ಜಾತಿ ತರುವುದು ಬೇಡ. ಸುದೀಪ್ ಹಾಗೂ ದರ್ಶನ್ ನಡುವೆ ಮದಕರಿ ಚಿತ್ರ ವಿವಾದ ತಂದಿದೆ. ಕಲೆಗೆ ಜಾತಿ ಇಲ್ಲ, ಜಾತಿಯನ್ನು ಬಿಂಬಿಸುವುದು ತಪ್ಪು. ಸಿನಿಮಾಗೆ ಜಾತಿಯನ್ನು ತರಬಾರದು. ಕಲೆಯನ್ನು ಕಲೆಯಾಗಿ ನೋಡಬೇಕು. ರಾಜಕೀಯದಲ್ಲಿ ಜಾತಿ ಬಂದು ಹಾಳಾಗಿದೆ ಈಗ ಸಿನಿಮಾಕ್ಕೆ ಜಾತಿ ತರುವುದು ಬೇಡ. ರಾಜ್ ಕುಮಾರ್ ಅವರ ಕಾಲದಲ್ಲಿ ಅನೇಕ ಸಿನಿಮಾಗಳು ಬಂದಿತ್ತು. ಆಗ ಜಾತಿ ಇರಲಿಲ್ಲ ಈಗ ಜಾತಿಯ ನಂಟನ್ನು ತರಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ಯಾಂಡಲ್‍ವುಡ್‍ನಲ್ಲಿ ಜಾತಿ ಜಗಳ – ವೀರ ಮದಕರಿ ಸಿನಿಮಾಗೆ ಮತ್ತೊಂದು ಸಂಕಷ್ಟ!

    ಸ್ಯಾಂಡಲ್‍ವುಡ್‍ನಲ್ಲಿ ಜಾತಿ ಜಗಳ – ವೀರ ಮದಕರಿ ಸಿನಿಮಾಗೆ ಮತ್ತೊಂದು ಸಂಕಷ್ಟ!

    ಬೆಂಗಳೂರು: ವೀರ ಮದಕರಿ ಸಿನಿಮಾ ಸೆಟ್ಟೇರುವುದಕ್ಕೆ ಮೊದಲೇ ಈಗ ಜಾತಿ ವಿಚಾರದಲ್ಲಿ ಸಂಘರ್ಷ ಆರಂಭವಾಗಿದೆ. ಇಷ್ಟು ದಿನ ಅಭಿಮಾನಿಗಳ ನಡುವೆ ಸಣ್ಣದಾಗಿ ಹೊತ್ತಿಕೊಂಡಿದ್ದ ಬೆಂಕಿಗೆ ವಾಲ್ಮೀಕಿ ಸಮುದಾಯದ ಸ್ವಾಮೀಜಿ ಮಾತು ತುಪ್ಪ ಸುರಿದಂತಾಗಿದೆ.

    ಮದಕರಿ ನಾಯಕನ ಪಾತ್ರವನ್ನು ಸುದೀಪ್ ಮಾಡಬೇಕು ಅಂತ ವಾಲ್ಮೀಕಿ ಸಮುದಾಯ ಧ್ವನಿ ಎತ್ತಿತ್ತೋ ದರ್ಶನ್ ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ. ಸಿನಿಮಾಗೆ ಜಾತಿ ಸ್ಪರ್ಶ ಮಾಡುವುದು ಅದೆಷ್ಟು ಸರಿ? ಕಲೆಗೆ ಅದ್ಯಾವ ಜಾತಿ ಇದೆ ಎಂದು ಪ್ರಶ್ನಿಸುತ್ತಿದ್ದಾರೆ. ಈ ಕುರಿತು ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂಘರ್ಷಕ್ಕೆ ಇಳಿದಿದ್ದಾರೆ. ಇದನ್ನೂ ಓದಿ: ಒಂದೇ ಕತೆಯ ಸಿನಿಮಾದಲ್ಲಿ ದರ್ಶನ್, ಸುದೀಪ್- ಅಭಿಮಾನಿಗಳಿಗೆ ಪತ್ರ ಬರೆದ ಕಿಚ್ಚ

    ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ವಾಲ್ಮೀಕಿ ಮಠದ ಪ್ರಸನ್ನಾಂದ ಸ್ವಾಮೀಜಿ, ಬೇರೆಯವರು ಸಿನಿಮಾ ಮಾಡುವುದರ ಬದಲು ನಮ್ಮ ಸಮುದಾಯದವರಾದ ಸುದೀಪ್ ಅವರೇ ಈ ಸಿನಿಮಾ ಮಾಡಬೇಕು. ಈ ಸಿನಿಮಾ ಸುದೀಪ್ ಅವರೇ ಮಾಡಬೇಕೆಂದು 7-8 ವರ್ಷದಿಂದ ನಾವು ಅವರನ್ನು ಒತ್ತಾಯಿಸುತ್ತಿದ್ದೇನೆ. ಹೀಗಿರುವಾಗ ರಾಕ್‍ಲೈನ್ ವೆಂಕಟೇಶ್ ಸಿನಿಮಾ ಮಾಡುತ್ತಿರುವುದಕ್ಕೆ ನನ್ನ ಅಸಮಾಧಾನವಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಂದೇ ಕತೆಯ ಸಿನಿಮಾದಲ್ಲಿ ದಚ್ಚು, ಕಿಚ್ಚ- ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಹೇಳಿದ್ದೇನು?

    ವೀರ ಮದಕರಿ ಸಿನಿಮಾ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ನಿರ್ಮಾಪಕ ಮುನಿರತ್ನ, ನಟ ದರ್ಶನ್ ಮತ್ತು ಸುದೀಪ್ ಸ್ಯಾಂಡಲ್ ವುಡ್‍ನ ದೊಡ್ಡ ನಟರು. ಚಿತ್ರರಂಗದ ನಟರ ನಡುವೆ ಜಾತಿ ತರುವುದು ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ.

    ಸುದೀಪ್ ಹಾಗೂ ದರ್ಶನ್ ನಡುವೆ ಮದಕರಿ ಚಿತ್ರ ವಿವಾದ ತಂದಿದೆ. ಕಲೆಗೆ ಜಾತಿ ಇಲ್ಲ, ಜಾತಿಯನ್ನು ಬಿಂಬಿಸುವುದು ತಪ್ಪು. ಸಿನಿಮಾಗೆ ಜಾತಿಯನ್ನು ತರಬಾರದು. ಕಲೆಯನ್ನು ಕಲೆಯಾಗಿ ನೋಡಬೇಕು. ರಾಜಕೀಯದಲ್ಲಿ ಜಾತಿ ಬಂದು ಹಾಳಾಗಿದೆ ಈಗ ಸಿನಿಮಾಕ್ಕೆ ಜಾತಿ ತರುವುದು ಬೇಡ. ರಾಜ್ ಕುಮಾರ್ ಅವರ ಕಾಲದಲ್ಲಿ ಅನೇಕ ಸಿನಿಮಾಗಳು ಬಂದಿತ್ತು. ಆಗ ಜಾತಿ ಇರಲಿಲ್ಲ ಈಗ ಜಾತಿಯ ನಂಟನ್ನು ಸ್ವಾಮೀಜಿ ತರಬಾರದು ಎಂದರು.  ಇದನ್ನೂ ಓದಿ: 100 ಕೋಟಿ ರೂ. ವೆಚ್ಚದಲ್ಲಿ ಪತಿಗಾಗಿ ಪ್ರಿಯಾ ಸುದೀಪ್ ಚಿತ್ರ ನಿರ್ಮಾಣ!

    ಜಾತಿಯನ್ನು ಬಿಟ್ಟು ದರ್ಶನ್ ಹಾಗೂ ಸುದೀಪ್ ಸಿನಿಮಾ ಮಾಡಬೇಕು. ಸಿನಿಮಾವನ್ನು ಚೆನ್ನಾಗಿ ಮಾಡಿ ಪ್ರೇಕ್ಷಕರ ಮನಗೆಲ್ಲಬೇಕು. ಪ್ರಸನ್ನಾನಂದ ಸ್ವಾಮೀಜಿಗಳು ಕಲೆಯನ್ನು ಗೌರವಿಸಬೇಕು. ದರ್ಶನ್ ಹಾಗೂ ಸುದೀಪ್ ಇಬ್ಬರೂ ಸಿನಿಮಾ ಮಾಡಲಿ. ಆದರೆ ಎಲ್ಲಿಯೂ ಕಥೆ ರಿಪೀಟಾಗದೆ ಇರುವ ಹಾಗೆ ನೋಡಿಕೊಳ್ಳಬೇಕು. ಅಂದಿನಿಂದ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಜಾತಿ ಬಿಂಬಿಸೊದು ದೊಡ್ಡ ತಪ್ಪು. ಕಲೆಯನ್ನು ಕಲೆಯಾಗಿ ನೋಡಿ. ಕಲೆಯಲ್ಲಿ ಜಾತಿಯನ್ನು ನೋಡಬೇಡಿ ಎಂದು ತಿಳಿಸಿದರು.

    ದರ್ಶನ್ ಹಾಗೂ ಕಿಚ್ಚ ಸುದೀಪ್ ಇಬ್ಬರೂ ಒಂದೇ ಕತೆಯ ಸಿನಿಮಾ ಮಾಡುವ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ರಾಕ್‍ಲೈನ್ ವೆಂಕಟೇಶ್ ಅವರು ಈಗಾಗಲೇ `ಗಂಡುಗಲಿ ಮದಕರಿ ನಾಯಕ’ ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದಾರೆ. ದರ್ಶನ್ ಚಿತ್ರದ ನಾಯಕನಾಗಿ ನಟಿಸುವುದಾಗಿ ಹೇಳಿದ್ದರು. ರಾಜೇಂದ್ರಸಿಂಗ್ ಬಾಬು ನಿರ್ದೇಶನದ ಹೊಣೆ ಹೊತ್ತಿದ್ದಾರೆ.

    ಇತ್ತ ಕಿಚ್ಚ ಸುದೀಪ್ ಅಭಿನಯದ ಈ ಚಿತ್ರಕ್ಕೆ `ದುರ್ಗದ ಹುಲಿ’ ಅಥವಾ `ನಾಯಕ’ ಹೆಸರನ್ನು ಇಡಲು ಚರ್ಚೆ ನಡೆದಿದ್ದು, `ದುರ್ಗದ ಹುಲಿ’ ಟೈಟಲ್ ಅಂತಿಮಗೊಳ್ಳುವ ಸಾಧ್ಯತೆಯಿದೆ. ಕೆಲ ದಿನಗಳಿಂದ ಈ ಚಿತ್ರದ ಕೆಲಸ ಆರಂಭಗೊಂಡಿದ್ದು, ವಿಶೇಷವಾಗಿ ಸುದೀಪ್ ಅವರೇ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಈ ಚಿತ್ರಕ್ಕೆ ಪ್ರಿಯಾ ಸುದೀಪ್ ಅವರು 100 ಕೋಟಿ ಬಂಡವಾಳ ಹಾಕಲಿದ್ದಾರೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=gGcw0ZhMPUM

    https://www.youtube.com/watch?v=_l254HQALME

  • ಒಂದೇ ಕತೆಯ ಸಿನಿಮಾದಲ್ಲಿ ದಚ್ಚು, ಕಿಚ್ಚ- ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಹೇಳಿದ್ದೇನು?

    ಒಂದೇ ಕತೆಯ ಸಿನಿಮಾದಲ್ಲಿ ದಚ್ಚು, ಕಿಚ್ಚ- ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಹೇಳಿದ್ದೇನು?

    ಬೆಂಗಳೂರು: ಕಿಚ್ಚ ಸುದೀಪ್ ಅವರು ವೀರ ಮದಕರಿ ಚಿತ್ರದ ಬಗ್ಗೆ ಅಭಿಮಾನಿಗಳಿಗಾಗಿ ಪತ್ರ ಬರೆದ ಹಿನ್ನೆಲೆಯಲ್ಲಿ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಸ್ಪಷ್ಟನೆ ನೀಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು ಈ ಚಿತ್ರ ನನ್ನ 4 ವರ್ಷದ ಕನಸು. ನಾನು ರಾಜೇಂದ್ರ ಬಾಬು ಅವರ ಜೊತೆ ಸೇರಿ ನಾಲ್ಕು ವರ್ಷದಿಂದ ಮಾತನಾಡಿ ಅವರ ಅಭಿಪ್ರಾಯ ಪಡೆದಿದ್ದೇನೆ. ರಾಜೇಂದ್ರ ಬಾಬು ಅವರು ಹಿರಿಯ ನಿರ್ದೇಶಕರಾಗಿದ್ದರಿಂದ 4 ವರ್ಷದಿಂದ ನಾನು ಇತಿಹಾಸದ ಬಗ್ಗೆ ಎಲ್ಲ ಮಾಹಿತಿ ಪಡೆದಿದ್ದೇನೆ ಎಂದರು. ಇದನ್ನೂ ಓದಿ: ಒಂದೇ ಕತೆಯ ಸಿನಿಮಾದಲ್ಲಿ ದರ್ಶನ್, ಸುದೀಪ್- ಅಭಿಮಾನಿಗಳಿಗೆ ಪತ್ರ ಬರೆದ ಕಿಚ್ಚ

    ಚಿತ್ರದುರ್ಗದ ಇತಿಹಾಸದಲ್ಲಿ ಸುಮಾರು 10 ರಿಂದ 13 ಪಾಳೇಗಾರರು ಇದ್ದಾರೆ. 13 ಪಾಳೇಗಾರರಲ್ಲಿ ಯಾರು ಯಾವ ರೀತಿಯಲ್ಲಿ ಚಿತ್ರದುರ್ಗದ ಇತಿಹಾಸದಲ್ಲಿ ಹೆಸರು ಮಾಡಿದ್ದಾರೆ ಎನ್ನುವುದನ್ನು ನೋಡಿಕೊಂಡು ಸಿನಿಮಾ ಮಾಡಬೇಕು. ಒಂದು ಸಾಧಾರಣ ಸಿನಿಮಾ ಮಾಡಬೇಕಾದರೆ ನಮಗೆ 8 ತಿಂಗಳಿಂದ ಒಂದು ವರ್ಷ ಬೇಕಾಗುತ್ತಿದೆ. ಆದರೆ ಇಂತಹ ಐತಿಹಾಸಿಕ ಸಿನಿಮಾ ಮಾಡಬೇಕೆಂದರೆ ನಾಲ್ಕು ವರ್ಷ ಅವಧಿ ಬೇಕಾಗುತ್ತದೆ ಎಂದು ಹೇಳಿದರು.

    ಹೆಸರಾಂತ ಸಾಹಿತಿ ಬಿ.ಎಲ್ ವೇಣು ಅವರ ಜೊತೆ ಈ ಚಿತ್ರ ಹೇಗೆ ಮಾಡಬಹುದು ಎಂದು ತಿಳಿದುಕೊಳ್ಳಲು 2 ವರ್ಷದಿಂದ ಸಂಪರ್ಕದಲ್ಲಿದ್ದೇನೆ. ಕಥೆಯ ಬಗ್ಗೆ ಎಲ್ಲ ಮಾಹಿತಿ ಪಡೆದ ನಂತರ ಚಿತ್ರದ ನಾಯಕ ಯಾರು ಆಗಬೇಕು ಎಂದು ನಾನು ಯೋಚಿಸಿರಲಿಲ್ಲ. ಮುನಿರತ್ನ ಅವರು ಕುರುಕ್ಷೇತ್ರ ಸಿನಿಮಾವನ್ನು ಮಾಡುವಾಗ ದರ್ಶನ್ ಅವರ ಗೆಟಪ್ ನೋಡಿ ಅವರಿಗೆ ಈ ಚಿತ್ರದ ಬಗ್ಗೆ ಕೇಳಿದೆ. ಆಗ ದರ್ಶನ್ ಅವರು ನಾನು ಈ ಸಿನಿಮಾ ಮಾಡುತ್ತೇನೆ. ನಿಮ್ಮಂತಹ ನಿರ್ಮಾಪಕರಿಗೆ ನಾನು ಸಿನಿಮಾ ಮಾಡದೇ ಇದ್ದರೆ ಇನ್ನು ಯಾರಿಗೆ ಸಿನಿಮಾ ಮಾಡಬೇಕೆಂದು ಹೇಳಿದರು. ನಾನು ಇದೂವರೆಗೂ ನನ್ನ ಚಿತ್ರವನ್ನು ಎಲ್ಲೂ ಪ್ರಚಾರ ಮಾಡಿರಲಿಲ್ಲ. ಹಾಗೆಯೇ ಈಗ ಕೂಡ ನಾನು ನನ್ನ ಚಿತ್ರವನ್ನು ಎಲ್ಲಿಯೂ ಪ್ರಚಾರ ಮಾಡಲಿಲ್ಲ. ಸುದೀಪ್ ಏನೇ ಮಾಡಿದರೂ ನನ್ನನ್ನು ಕರೆಯುತ್ತಾರೆ. ನಾವು ಆತ್ಮೀಯವಾಗಿ ಇದ್ದೇವೆ. ಆದರೆ ಈ ಚಿತ್ರದ ವಿಷಯವನ್ನು ಇಬ್ಬರು ಎಲ್ಲಿಯೂ ಪ್ರಸ್ತಾಪ ಮಾಡಿರಲಿಲ್ಲ. ಹಾಗಾಗಿ ಈ ವಿಷಯ ನಮಗೆ ಗೊತ್ತಿರಲಿಲ್ಲ ಎಂದು ತಿಳಿಸಿದರು.

    ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನನ್ನು ಈ ಪಾತ್ರದಲ್ಲಿ ನೋಡಬೇಕೆಂದು ಇಚ್ಚಿಸುತ್ತಾರೆ. ತಮ್ಮ ಅಭಿಮಾನಿಗಳ ಆಸೆಯನ್ನು ಆ ನಟರು ಪೂರೈಸಬೇಕು. ಒಂದೇ ನಾಯಕನ ಎರಡು ಸಿನಿಮಾ ಮಾಡಿದರೆ ಅದು ತಪ್ಪಾಗುತ್ತದೆ. 13 ಪಾಳೇಗಾರರಿದ್ದು ಬೇರೆ ಬೇರೆ ವೀರ ಮದಕರಿ ನಾಯಕನ ಪಾತ್ರವನ್ನು ಮಾಡಬಹುದು. ನಾನು ಕೊನೆಯ ಪಾಳೇಗಾರನ ಕತೆಯನ್ನು ಸಿನಿಮಾ ಮಾಡುತ್ತಿದ್ದೇನೆ ಎಂದು ರಾಕ್‍ಲೈನ್ ವೆಂಕಟೇಶ್ ಸ್ಪಷ್ಟನೆ ನೀಡಿದರು.

    ಈ ಚಿತ್ರದಿಂದ ಯಾವುದೇ ಗೊಂದಲವಾಗುವುದಿಲ್ಲ. ಏಕೆಂದರೆ 13 ವೀರ ಮದಕರಿ ಇದ್ದಾರೆ. ಇಬ್ಬರು ಮದಕರಿ ನಾಯಕನ ಕತೆ ಬಂದರೆ ಯಾವುದೇ ಸಮಸ್ಯೆಯಾಗುವುದಿಲ್ಲ. ಈ ಎರಡು ಚಿತ್ರ ಚೆನ್ನಾಗಿ ಯಶಸ್ಸು ಕಾಣಲಿ. ನನ್ನ ಹಾಗೂ ಸುದೀಪ್ ಭಾಂದವ್ಯ ಚೆನ್ನಾಗಿದೆ. ಹಾಗಾಗಿ ನಾವಿಬ್ಬರು ನಮ್ಮ ಚಿತ್ರದ ಕತೆಗಳ ಬಗ್ಗೆ ಮಾತನಾಡಿ ಸಿನಿಮಾ ಮಾಡುತ್ತೇವೆ ಎಂದು ರಾಕ್‍ಲೈನ್ ವೆಂಕಟೇಶ್ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv