Tag: ವೀರ್ ಸಾರ್ವಕರ್

  • ಸಾವರ್ಕರ್ ಬದಲು ಗೋಡ್ಸೆಗೆ ಭಾರತರತ್ನ ಕೊಡಿ: ಹೆಚ್‍ಡಿಕೆ ವಿವಾದ

    ಸಾವರ್ಕರ್ ಬದಲು ಗೋಡ್ಸೆಗೆ ಭಾರತರತ್ನ ಕೊಡಿ: ಹೆಚ್‍ಡಿಕೆ ವಿವಾದ

    ಬೆಂಗಳೂರು : ಸಿಎಎ, ಎನ್‍ಆರ್ ಸಿ ವಿರೋಧ ಪ್ರತಿಭಟನೆಗಳು, ಸಭೆಗಳು ಹೊಸ ಹೊಸ ವಿವಾದಗಳಿಗೆ ಎಡೆ ಮಾಡಿಕೊಡುತ್ತಿದೆ. ನಿನ್ನೆ ಸಿಎಎ, ಎನ್‍ಆರ್ ಸಿ  ವಿರೋಧಿ ಸಭೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೊಸ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.

    ಬೆಂಗಳೂರಿನ ಖುದಾಸ್ ಸಾಹೇಬ್ ಈದ್ಗಾ ಹಾಲ್ ನಲ್ಲಿ ಮುಸ್ಲಿಂ ಮುಖಂಡರು ಜೊತೆ ಮಾಜಿ ಸಿಎಂ ಕುಮಾರಸ್ವಾಮಿ ನಿನ್ನೆ ಸಭೆ ನಡೆಸಿದ್ದರು. ಸಭೆಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಗಾಂಧೀಜಿ ಹಂತಕನಿಗೆ ಭಾರತ ರತ್ನ ಕೊಡಿ ಅಂತ ವಿವಾದದ ಹೇಳಿಕೆ ನೀಡಿದರು.

    ಜಾಯಿಂಟ್ ಆಕ್ಷನ್ ಕಮಿಟಿ ಕರ್ನಾಟಕ ಆಯೋಜನೆ ಮಾಡಿದ್ದ ಸಭೆಯಲ್ಲಿ ಮಾತನಾಡಿ ಕುಮಾರಸ್ವಾಮಿ, ಬಿಜೆಪಿ ಒಂದು ಸಮುದಾಯ ತುಳಿಯಲು ಸಿಎಎ, ಎನ್‍ಆರ್ ಸಿ ಜಾರಿಗೆ ತಂದಿದೆ. ಮುಸ್ಲಿಮರ ಶಕ್ತಿ ಕುಂದಿಸುವ ಕೆಲಸ ಬಿಜೆಪಿ ಮಾಡ್ತಿದೆ. ಮುಸ್ಲಿಮರ ವಿರುದ್ಧ ಹಿಡನ್ ಅಜೆಂಡಾ ಇಟ್ಟುಕೊಂಡು ಬಿಜೆಪಿ ಕೆಲಸ ಮಾಡ್ತಿದೆ ಅಂತ ಕಿಡಿಕಾರಿದ್ರು. ಈ ವೇಳೆ ಸಾವರ್ಕರ್ ಬಗ್ಗೆ ಪ್ರಸ್ತಾಪಿಸಿದ ಕುಮಾರಸ್ವಾಮಿ ಸಾವರ್ಕರ್ ಭಾರತ ರತ್ನ ಕೊಡೋದಕ್ಕೆ ಬಿಜೆಪಿ ಮುಂದಾಗಿದೆ. ಸಾವರ್ಕರ್ ಗೆ ಭಾರತರತ್ನ ಕೊಡೋ ಬದಲು ನಾಥೂರಾಮ್ ಗೋಡ್ಸೆಗೆ ಬಿಜೆಪಿ ಅವರು ಭಾರತರತ್ನ ಕೊಡಲಿ ಅಂತ ವಿವಾದಾತ್ಮಕ ಹೇಳಿಕೆ ಕೊಟ್ಟರು.