Tag: ವೀರ್ಯ ದಾನಿ

  • 30ನೇ ವಯಸ್ಸಿಗೆ 47 ಮಕ್ಕಳ ತಂದೆ, ಇನ್ನೂ ಹತ್ತು ಮಕ್ಕಳ ನಿರೀಕ್ಷೆಯಲ್ಲಿದ್ದಾನೆ – ಆದ್ರೆ ಸಿಗ್ತಿಲ್ಲ ಬಾಳ ಸಂಗಾತಿ!

    30ನೇ ವಯಸ್ಸಿಗೆ 47 ಮಕ್ಕಳ ತಂದೆ, ಇನ್ನೂ ಹತ್ತು ಮಕ್ಕಳ ನಿರೀಕ್ಷೆಯಲ್ಲಿದ್ದಾನೆ – ಆದ್ರೆ ಸಿಗ್ತಿಲ್ಲ ಬಾಳ ಸಂಗಾತಿ!

    ವಾಷಿಂಗ್ಟನ್: ಜಗತ್ತಿನಾದ್ಯಂತ 50 ಕ್ಕೂ ಹೆಚ್ಚು ಮಕ್ಕಳಿಗೆ ತಂದೆಯಾಗಿರುವ ಯುಎಸ್‌ನ ಕ್ಯಾಲಿಫೋರ್ನಿಯಾದ 30 ವರ್ಷದ ವ್ಯಕ್ತಿಯೊಬ್ಬ ತನ್ನೊಟ್ಟಿಗೆ ಸಹಬಾಳ್ವೆ ನಡೆಸುವ ಸಂಗಾತಿ ಇಲ್ಲ ಎಂಬ ಕೊರಗಿನಲ್ಲಿದ್ದಾನೆ.

    ಹೌದು, ಕೈಲ್‌ ಕಾರ್ಡಿ ಎಂಬ ವ್ಯಕ್ತಿ ಜಗತ್ತಿನಾದ್ಯಂತ 50 ಕ್ಕೂ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ. ಆದರೆ ಆ ಮಕ್ಕಳಿಗೆ ಈತ ಜೈವಿಕ ತಂದೆ. ವೀರ್ಯ ದಾನ ಮಾಡಿ ಈ ಮಕ್ಕಳಿಗೆ ತಂದೆಯಾಗಿದ್ದಾನೆ. ಅಷ್ಟೇ ಅಲ್ಲ ಈತ ಇನ್ನೂ 10 ಮಕ್ಕಳ ನಿರೀಕ್ಷೆಯಲ್ಲಿದ್ದಾನೆ. ಆದರೆ ಯಾವುದೇ ಕಾರಣಕ್ಕೂ ತಾನು ವೀರ್ಯ ದಾನ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದು ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ಭಾರತೀಯನಿಗೆ ಒಲಿಯಿತು ಸಿಐಎಯ ಮೊದಲ ಮುಖ್ಯ ತಂತ್ರಜ್ಞಾನ ಅಧಿಕಾರಿ ಪಟ್ಟ

    ಮಕ್ಕಳನ್ನು ಬಯಸುವ ಮಹಿಳೆಯರಿಗೆ ವೀರ್ಯ ದಾನ ಮಾಡಿ ಆಸರೆಯಾಗಿರುವ ಕೈಲ್‌ ಸ್ವತಃ ಬಾಳ ಸಂಗಾತಿ ಹೊಂದಲು ಈವರೆಗೂ ಸಾಧ್ಯವಾಗಿಲ್ಲ. ಈ ಬಗ್ಗೆ ಕೇಳಿದರೆ, ನನ್ನನ್ನು ಅರ್ಥ ಮಾಡಿಕೊಳ್ಳುವ ಮತ್ತು ನನ್ನನ್ನು ಒಪ್ಪಿ ನಡೆಯುವ ಸಂಗಾತಿ ಇನ್ನೂ ಸಿಕ್ಕಿಲ್ಲ ಎಂದು ಹೇಳುತ್ತಾನೆ.

    ನಾನು ಪ್ರಸ್ತುತ ವೀರ್ಯ ದಾನಕ್ಕಾಗಿ ವಿಶ್ವ ಪ್ರವಾಸದಲ್ಲಿದ್ದೇನೆ. ನನ್ನ ಮಕ್ಕಳನ್ನು ಭೇಟಿಯಾಗುತ್ತೇನೆ. ಇದರಿಂದ ತುಂಬಾ ಸಂತೋಷವಾಗುತ್ತದೆ. ಮಕ್ಕಳೊಂದಿಗೆ ಫೋಟೋ ತೆಗೆದುಕೊಳ್ಳುತ್ತೇನೆ. ಮಕ್ಕಳ ಸುಂದರ ಬದುಕು ನೋಡಿ ಖುಷಿಯೆನಿಸುತ್ತದೆ ಎಂದು ಕೈಲ್‌ ಅಭಿಪ್ರಾಯಪಡುತ್ತಾನೆ. ಇದನ್ನೂ ಓದಿ: ರಷ್ಯಾ ಮುತ್ತಿಗೆ – ಮರಿಯುಪೋಲ್‌ನಿಂದ ನೂರಾರು ಜನರ ಸ್ಥಳಾಂತರ

    ಕೈಲ್ ಎಂಟು ವರ್ಷಗಳ ಹಿಂದೆ ತನ್ನ ವೀರ್ಯವನ್ನು ದಾನ ಮಾಡಲು ಪ್ರಾರಂಭಿಸಿದರು. ಅಂದಿನಿಂದ 1,000 ಕ್ಕೂ ಹೆಚ್ಚು ಮಹಿಳೆಯರಿಗೆ ಸಹಾಯ ಮಾಡಿದ್ದಾನೆ ಎಂದು ವರದಿಗಳು ಹೇಳಿವೆ. ಇನ್ನೂ 10 ಮಕ್ಕಳ ನಿರೀಕ್ಷೆಯಲ್ಲಿರುವ ಕೈಲ್‌, ತನ್ನ ಸೇವೆಯ ಅಗತ್ಯವಿರುವ ಮಹಿಳೆಯರನ್ನು ಇನ್‌ಸ್ಟಾಗ್ರಾಮ್‌ ಖಾತೆಯ ಮೂಲಕ ಸಂಪರ್ಕಿಸುತ್ತಾನೆ.