Tag: ವೀರಾಪುರ

  • ಸಿದ್ದಗಂಗಾ ಶ್ರೀಗಳ 111 ಅಡಿ ಎತ್ತರದ ಪುತ್ಥಳಿ ನಿರ್ಮಾಣ – ನ.8ರಂದು ಸಿಎಂ ಶಂಕುಸ್ಥಾಪನೆ

    ಸಿದ್ದಗಂಗಾ ಶ್ರೀಗಳ 111 ಅಡಿ ಎತ್ತರದ ಪುತ್ಥಳಿ ನಿರ್ಮಾಣ – ನ.8ರಂದು ಸಿಎಂ ಶಂಕುಸ್ಥಾಪನೆ

    ನೆಲಮಂಗಲ: ಸಿದ್ದಗಂಗಾ ಶ್ರೀ ಶಿವಕುಮಾರ ಶ್ರೀಗಳ 111 ಅಡಿ ಎತ್ತರದ ಪುತ್ಥಳಿ ನಿರ್ಮಾಣಕ್ಕೆ ತಯಾರಿ ಜೋರಾಗಿ ನಡೆದಿದೆ.

    ಶ್ರೀಗಳ ಹುಟ್ಟೂರು ಮಾಗಡಿ ತಾಲೂಕಿನ ವೀರಾಪುರ ಗ್ರಾಮದಲ್ಲಿ ಭೂಮಿ ನಿಗದಿ ಪಡಿಸಲಾಗಿದ್ದು, ನವೆಂಬರ್ 8 ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

    ವೀರಾಪುರ ಗ್ರಾಮದಲ್ಲಿ ಈಗಾಗಲೇ ಸರ್ಕಾರದಿಂದ ಭೂಮಿ ನಿಗದಿಯಾಗಿದೆ. ಇದೆ ನ.8ರ ಶುಕ್ರವಾರದಂದು ಸಿಎಂ ಯಡಿಯೂರಪ್ಪ ಹಾಗೂ ಡಿಸಿಎಂ ಅಶ್ವಥ್ ನಾರಾಯಣ ಅವರಿಂದ ಶಂಕುಸ್ಥಾಪನೆ ಕಾರ್ಯ ನಡೆಯಲಿದೆ.

    ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ನಾನಾ ರೂಪುರೇಷೆಗಳು ಸಿದ್ಧವಾಗಿದ್ದು, ಸಿದ್ದಗಂಗಾ ಶ್ರೀಗಳ ಬೃಹತ್ ಪುತ್ಥಳಿಯ ನೀಲಿ ನಕ್ಷೆ ಕೂಡ ಅನಾವರಣಗೊಂಡಿದೆ. ಈ ಮೂಲಕ ಸಾಕಷ್ಟು ವರ್ಷಗಳಿಂದ ನಿರ್ಲಕ್ಷಿಸಲ್ಪಟ್ಟಿದ್ದ ಶಿವಕುಮಾರ ಶ್ರೀಗಳ ಹುಟ್ಟೂರು ವೀರಾಪುರ ಗ್ರಾಮಕ್ಕೆ ಇದೀಗ ಹೊಸ ರೂಪ ಬರಲಿದ್ದು, ಕಾರ್ಯಕ್ರಮದ ಸಿದ್ಧತೆಗಳು ಬರದಿಂದ ಸಾಗುತ್ತಿದೆ.

    25 ವರ್ಷಗಳ ಕಾಲ ಕಾಲಿಟ್ಟಿರಲಿಲ್ಲ:
    ನಡೆದಾಡುವ ದೇವರು, ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ತಮ್ಮ ಹುಟ್ಟೂರಿಗೆ 25 ವರ್ಷಗಳ ಕಾಲ ಕಾಲಿಟ್ಟಿರಲಿಲ್ಲ. ಹೌದು. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ವೀರಾಪುರದ ಪಟೇಲ್ ಹೊನ್ನಪ್ಪ ಅವರಿಗೆ ಮಗ ಶಿವಣ್ಣ (ಶಿವಕುಮಾರ ಸ್ವಾಮೀಜಿ) ಉನ್ನತ ಅಧಿಕಾರಿ ಆಗಬೇಕು ಎನ್ನುವ ಆಸೆಯಿತ್ತು. ಇತ್ತ ಉದ್ಧಾನ ಶಿವಯೋಗಿಗಳು, ಬಿ.ಎ. ವ್ಯಾಸಂಗ ಪೂರ್ಣಗೊಳಿಸಿದ್ದ ಶಿವಣ್ಣ ಸನ್ಯಾಸತ್ವ ಸ್ವೀಕರಿಸಬೇಕು. ಜಗತ್ತಿಗೆ ಬೆಳಕಾಗಬೇಕು ಎಂಬ ಮಹದಾಸೆಯನ್ನು ಹೊಂದಿದ್ದರು.

    ಶಿವಣ್ಣ ಸನ್ಯಾಸತ್ವ ಸ್ವೀಕರಿಸಿದ್ದಾನೆ ಎನ್ನುವುದನ್ನು ದು:ಖದಲ್ಲಿರುವ ಹೊನ್ನಪ್ಪ ಹಾಗೂ ಗಂಗಮ್ಮ ದಂಪತಿಗೆ ಸಾಂತ್ವಾನ ಹೇಳಲು ಶಿವಯೋಗಿಗಳು ಖುದ್ದಾಗಿ ವೀರಾಪುರಕ್ಕೆ ಹೋಗಿದ್ದರು. ಆದರೆ ಹೊನ್ನಪ್ಪ ಶಿವಯೋಗಿಗಳಿಗೆ ಭೇಟಿಯಾಗಬಾರದು ಅಂತ ಮನೆಯಿಂದ ಆಚೆ ಹೋಗಿದ್ದರು. ಇದರಿಂದಾಗಿ ಮನನೊಂದ ಶಿವಯೋಗಿಗಳು ಅಲ್ಲಿಂದ ನಡೆದುಕೊಂಡೇ ಮಠಕ್ಕೆ ಮರಳಿದ್ದರು.

    ಶ್ರೀಗಳು ಮಠಕ್ಕೆ ಮರಳಿದಾಗ ನಡೆದ ಘಟನೆಯನ್ನು ಶಿಷ್ಯ ಶಿವಕುಮಾರ ಸ್ವಾಮೀಜಿಗಳಿಗೆ ವಿವರಿಸಿದರಂತೆ. ಗುರುಗಳ ಮೇಲೆ ಅಪಾರ ಭಕ್ತಿ ಹೊಂದಿದ್ದ ಶಿವಕುಮಾರ ಶ್ರೀಗಳಿಗೆ ತಂದೆ ನಡೆದುಕೊಂಡಿದ್ದು ಸರಿಯಲ್ಲ ಅನಿಸಿತ್ತು. ಇದರಿಂದಾಗಿ ಹುಟ್ಟೂರು ವೀರಾಪುರ ಗ್ರಾಮಕ್ಕೆ ಹೋಗುವುದನ್ನೇ ನಿಲ್ಲಿಸಿಬಿಟ್ಟಿದ್ದರು.

    ಗ್ರಾಮಕ್ಕೆ ಕಾಲಿಟ್ಟಿದ್ದು ಹೇಗೆ?:
    ಸಿದ್ದಗಂಗಾ ಮಠದ ಜವಾಬ್ದಾರಿ ಹೊತ್ತ ಶ್ರೀಗಳು, ಮಕ್ಕಳು ಶಿಕ್ಷಣ, ದಾಸೋಹ, ಸಮಾಜಿಕ ಸೇವೆ, ಇಷ್ಟಲಿಂಗ ಪೂಜೆ, ಓದು, ಭಕ್ತರ ಭೇಟಿ, ಪ್ರವಚನದಲ್ಲಿ ನಿರತರಾಗಿದ್ದರು. ಈ ನಡುವೆ ತಮ್ಮ ಗ್ರಾಮಕ್ಕೆ ಬರುವಂತೆ ವೀರಾಪುರ ಜನರು 1930ರಿಂದ 1955ರ ವರೆಗೂ ಮನವಿ ಮಾಡಿಕೊಳ್ಳುತ್ತಿದ್ದರು. ಆದರೆ ಶ್ರೀಗಳು ಮಾತ್ರ ಭಕ್ತರಿಗೆ ನಗುಮುಗದಿಂದಲೇ ಬರಲು ಆಗುವುದಿಲ್ಲ ಅಂತ ಹೇಳುತ್ತಿದ್ದರು.

    ಶಿವಕುಮಾರ ಶ್ರೀಗಳ ಪೂರ್ವಾಶ್ರಮದ ಅಣ್ಣನ ಮಗ ಸಿದ್ದಗಂಗಾ ಮಠಕ್ಕೆ ಬಂದು, ನೂತನ ಗೃಹ ಪ್ರವೇಶಕ್ಕೆ ನೀವು ಬರಬೇಕು ಅಂತ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶ್ರೀಗಳು, ಶಿವಯೋಗಿಗಳ ಕೃಪೆಯಿಂದ ದೂರವಾಗಿರುವ ಆ ಮನೆಗೆ ನಾನು ಬರುವುದಿಲ್ಲ ಅಂತ ತಿಳಿಸಿದ್ದರು.

    ನಿಮ್ಮ ಅಪ್ಪಣೆಯಂತೆ ಆಗಲಿ. ನೀವು ಬಂದು ಗೃಹ ಪ್ರವೇಶ ಮಾಡಬೇಕು ಎನ್ನುವುದು ನಮ್ಮ ಸಂಕಲ್ಪ. ಒಂದು ವೇಳೆ ನೀವು ಬರದೇ ಹೋದರೆ ಮನೆ ಹಾಳುಬಿದ್ದರೂ ನಾವು ಗೃಹಪ್ರವೇಶ ಮಾಡುವುದಿಲ್ಲ ಎಂದು ಶ್ರೀಗಳಿಗೆ ನಮ್ಮ ಮನವಿ ಒಪ್ಪಿಸಿ ಗ್ರಾಮಕ್ಕೆ ತೆರಳಿದರು.

    ಭಕ್ತನ ಭಕ್ತಿ ದೊಡ್ಡದು, ಅದಕ್ಕೂ ಶಕ್ತಿಯಿದೆ ಅಂತ ಅರಿತಿದ್ದ ಶ್ರೀಗಳು ಭಕ್ತರ ಸಂಕಲ್ಪಕ್ಕೆ ಕರಗಿ ಗೃಹಪ್ರವೇಶಕ್ಕೆ ಬರುವುದಾಗಿ ತಿಳಿಸಿದ್ದರು. ಈ ಮೂಲಕ 25 ವರ್ಷದ ಬಳಿಕ 1955ರಲ್ಲಿ ಶ್ರೀಗಳು ಹುಟ್ಟೂರಿಗೆ ಕಾಲಿಟ್ಟಿದ್ದರು.

  • ಸಿದ್ದಗಂಗಾ ಶ್ರೀಗಳ ಹುಟ್ಟೂರನ್ನು ದತ್ತು ಪಡೆಯುತ್ತೇವೆ: ಡಿಕೆಶಿ

    ಸಿದ್ದಗಂಗಾ ಶ್ರೀಗಳ ಹುಟ್ಟೂರನ್ನು ದತ್ತು ಪಡೆಯುತ್ತೇವೆ: ಡಿಕೆಶಿ

    ರಾಮನಗರ: ತುಮಕೂರು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಹುಟ್ಟೂರು ವೀರಾಪುರ ಗ್ರಾಮವನ್ನು ದತ್ತು ಪಡೆಯುವುದಾಗಿ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ. ಶಿವಕುಮಾರ ಸ್ವಾಮೀಜಿಗಳ ಹುಟ್ಟೂರಾದ ವೀರಾಪುರವನ್ನ ದತ್ತು ಪಡೆಯುತ್ತೇವೆ. ಈ ಹಿಂದೆ ಆ ಗ್ರಾಮದಲ್ಲಿ ಸಣ್ಣ ಪುಟ್ಟ ಅಭಿವೃದ್ಧಿಯಾಗಿತ್ತು. ಇದೀಗ ಮತ್ತೆ ಅದರ ಅಭಿವೃದ್ಧಿ ಮಾಡಲು ತೀರ್ಮಾನ ಮಾಡಿರುವುದಾಗಿ ಅವರು ಹೇಳಿದ್ರು.

    ಬಾಲಗಂಗಾಧರನಾಥ್ ಸ್ವಾಮೀಜಿ ಬಾಣಂದೂರು ಹಾಗೂ ವೀರಾಪುರ ಈ ಎರಡು ಗ್ರಾಮಗಳು ಮಹಾಪುರುಷರು ಜನ್ಮತಾಳಿದ ಗ್ರಾಮಗಳಾಗಿದ್ದು, ನಮ್ಮ ರಾಜ್ಯಕ್ಕೆ ಎರಡು ಕಣ್ಣುಗಳಿದ್ದಂತೆ. ಹೀಗಾಗಿ ಈ ಎರಡೂ ಗ್ರಾಮಗಳ ಸಮಗ್ರ ಅಭಿವೃದ್ಧಿ ಮಾಡಲು ಚಿಂತನೆ ಮಾಡಲಾಗಿದೆ ಅಂದ್ರು.

    ಡಾ. ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ಪ್ರಶಸ್ತಿ ನೀಡುವ ವಿಚಾರದ ಕುರಿತು ವಿಧಾನಸಭೆಯಲ್ಲಿ ಒಂದು ನಿರ್ಣಯ ಮಾಡುತ್ತವೆ. ಈ ಬಗ್ಗೆ ಮುಖ್ಯಮಂತ್ರಿಗಳು ಈಗಾಗಲೇ ಘೋಷಣೆ ಮಾಡಿದ್ದಾರೆ. ಸಂಸದರು ಕೂಡ ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರ ಭಾರತ ರತ್ನ ನೀಡಬೇಕು, ಅವರ ಮೇಲೆ ಒತ್ತಡ ತರಲಾಗುವುದು ಎಂದರು.

    ಈಗಲ್ ಟನ್ ರೆಸಾರ್ಟ್ ನಲ್ಲಿ ಶಾಸಕರು ಹೊಡೆದಾಡಿಕೊಂಡ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಶಾಸಕ ಆನಂದ್ ಸಿಂಗ್ ಆರೋಗ್ಯವಾಗಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಈ ಘಟನೆ ನಡೆಯಬಾರದಾಗಿತ್ತು ನಡೆದು ಹೋಗಿದೆ. ಈ ಪ್ರಕರಣ ಸಂಬಂಧ ಕಾನೂನು ವ್ಯವಸ್ಥೆ ನಡೆಯುತ್ತಿದೆ. ಶಾಸಕ ಗಣೇಶ್ ಎಲ್ಲಿದ್ದಾರೆ ಅಂತಾ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.

    ಮೇಕೆದಾಟು ಯೋಜನೆಗೆ ಡಿಪಿಆರ್ ತಯಾರು ಮಾಡಲಾಗಿದೆ. 9 ಸಾವಿರಕ್ಕೂ ಅಧಿಕ ಕೋಟಿ ರೂಪಾಯಿಗಳ ಡಿಪಿಆರ್ ಆಗಿದ್ದು ಕೇಂದ್ರಕ್ಕೆ ನೀಡಿದ್ದೇವೆ ಎಂದು ಅವರು ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹುಟ್ಟೂರಿಗೆ 25 ವರ್ಷ ಕಾಲಿಡದ ನಡೆದಾಡುವ ದೇವರು!

    ಹುಟ್ಟೂರಿಗೆ 25 ವರ್ಷ ಕಾಲಿಡದ ನಡೆದಾಡುವ ದೇವರು!

    ತುಮಕೂರು: ನಡೆದಾಡುವ ದೇವರು, ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ತಮ್ಮ ಹುಟ್ಟೂರಿಗೆ 25 ವರ್ಷಗಳ ಕಾಲ ಕಾಲಿಟ್ಟಿರಲಿಲ್ಲ.

    ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ವೀರಾಪುರದ ಪಟೇಲ್ ಹೊನ್ನಪ್ಪ ಅವರಿಗೆ ಮಗ ಶಿವಣ್ಣ (ಶಿವಕುಮಾರ ಸ್ವಾಮೀಜಿ) ಉನ್ನತ ಅಧಿಕಾರಿ ಆಗಬೇಕು ಎನ್ನುವ ಆಸೆಯಿತ್ತು. ಇತ್ತ ಉದ್ಧಾನ ಶಿವಯೋಗಿಗಳು, ಬಿ.ಎ. ವ್ಯಾಸಂಗ ಪೂರ್ಣಗೊಳಿಸಿದ್ದ ಶಿವಣ್ಣ ಸನ್ಯಾಸತ್ವ ಸ್ವೀಕರಿಸಬೇಕು. ಜಗತ್ತಿಗೆ ಬೆಳಕಾಗಬೇಕು ಎಂಬ ಮಹದಾಸೆಯನ್ನು ಹೊಂದಿದ್ದರು. ಇದನ್ನೂ ಓದಿ: ಅಂತ್ಯಸಂಸ್ಕಾರಕ್ಕೆ ಶಿವಣ್ಣನಾಗಿ ಬಂದವರು ಶಿವಕುಮಾರ ಸ್ವಾಮೀಜಿಯಾದ್ರು!

    ಶಿವಣ್ಣ ಸನ್ಯಾಸತ್ವ ಸ್ವೀಕರಿಸಿದ್ದಾನೆ ಎನ್ನುವುದನ್ನು ದು:ಖದಲ್ಲಿರುವ ಹೊನ್ನಪ್ಪ ಹಾಗೂ ಗಂಗಮ್ಮ ದಂಪತಿಗೆ ಸಾಂತ್ವಾನ ಹೇಳಲು ಶಿವಯೋಗಿಗಳು ಖುದ್ದಾಗಿ ವೀರಾಪುರಕ್ಕೆ ಹೋಗಿದ್ದರು. ಆದರೆ ಹೊನ್ನಪ್ಪ ಶಿವಯೋಗಿಗಳಿಗೆ ಭೇಟಿಯಾಗಬಾರದು ಅಂತ ಮನೆಯಿಂದ ಆಚೆ ಹೋಗಿದ್ದರು. ಇದರಿಂದಾಗಿ ಮನನೊಂದ ಶಿವಯೋಗಿಗಳು ಅಲ್ಲಿಂದ ನಡೆದುಕೊಂಡೇ ಮಠಕ್ಕೆ ಮರಳಿದ್ದರು.

    ಶ್ರೀಗಳು ಮಠಕ್ಕೆ ಮರಳಿದಾಗ ನಡೆದ ಘಟನೆಯನ್ನು ಶಿಷ್ಯ ಶಿವಕುಮಾರ ಸ್ವಾಮೀಜಿಗಳಿಗೆ ವಿವರಿಸಿದರಂತೆ. ಗುರುಗಳ ಮೇಲೆ ಅಪಾರ ಭಕ್ತಿ ಹೊಂದಿದ್ದ ಶಿವಕುಮಾರ ಶ್ರೀಗಳಿಗೆ ತಂದೆ ನಡೆದುಕೊಂಡಿದ್ದು ಸರಿಯಲ್ಲ ಅನಿಸಿತ್ತು. ಇದರಿಂದಾಗಿ ಹುಟ್ಟೂರು ವೀರಾಪುರ ಗ್ರಾಮಕ್ಕೆ ಹೋಗುವುದನ್ನೇ ನಿಲ್ಲಿಸಿಬಿಟ್ಟಿದ್ದರು. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳಿಗಾಗಿ ವಿಮಾನದಲ್ಲಿಯೇ ಕುಳಿತು ಕವನ ಬರೆದ ಅಬ್ದುಲ್ ಕಲಾಂ!

    ಗ್ರಾಮಕ್ಕೆ ಕಾಲಿಟ್ಟಿದ್ದು ಹೇಗೆ?:
    ಸಿದ್ದಗಂಗಾ ಮಠದ ಜವಾಬ್ದಾರಿ ಹೊತ್ತ ಶ್ರೀಗಳು, ಮಕ್ಕಳು ಶಿಕ್ಷಣ, ದಾಸೋಹ, ಸಮಾಜಿಕ ಸೇವೆ, ಇಷ್ಟಲಿಂಗ ಪೂಜೆ, ಓದು, ಭಕ್ತರ ಭೇಟಿ, ಪ್ರವಚನದಲ್ಲಿ ನಿರತರಾಗಿದ್ದರು. ಈ ನಡುವೆ ತಮ್ಮ ಗ್ರಾಮಕ್ಕೆ ಬರುವಂತೆ ವೀರಾಪುರ ಜನರು 1930ರಿಂದ 1955ರ ವರೆಗೂ ಮನವಿ ಮಾಡಿಕೊಳ್ಳುತ್ತಿದ್ದರು. ಆದರೆ ಶ್ರೀಗಳು ಮಾತ್ರ ಭಕ್ತರಿಗೆ ನಗುಮುಗದಿಂದಲೇ ಬರಲು ಆಗುವುದಿಲ್ಲ ಅಂತ ಹೇಳುತ್ತಿದ್ದರು.

    ಶಿವಕುಮಾರ ಶ್ರೀಗಳ ಪೂರ್ವಾಶ್ರಮದ ಅಣ್ಣನ ಮಗ ಸಿದ್ದಗಂಗಾ ಮಠಕ್ಕೆ ಬಂದು, ನೂತನ ಗೃಹ ಪ್ರವೇಶಕ್ಕೆ ನೀವು ಬರಬೇಕು ಅಂತ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶ್ರೀಗಳು, ಶಿವಯೋಗಿಗಳ ಕೃಪೆಯಿಂದ ದೂರವಾಗಿರುವ ಆ ಮನೆಗೆ ನಾನು ಬರುವುದಿಲ್ಲ ಅಂತ ತಿಳಿಸಿದ್ದರು. ಇದನ್ನೂ ಓದಿ: ಶ್ರೀಗಳ 50 ಶ್ರೀವಾಣಿಗಳು – ಕರ್ತನೆಂಬ ಅಹಂಕಾರ ಬಿಡು. ಕಿಂಕರನೆಂಬ ಭಾವ ಬೆಳೆಸಿಕೋ

    ನಿಮ್ಮ ಅಪ್ಪಣೆಯಂತೆ ಆಗಲಿ. ನೀವು ಬಂದು ಗೃಹ ಪ್ರವೇಶ ಮಾಡಬೇಕು ಎನ್ನುವುದು ನಮ್ಮ ಸಂಕಲ್ಪ. ಒಂದು ವೇಳೆ ನೀವು ಬರದೇ ಹೋದರೆ ಮನೆ ಹಾಳುಬಿದ್ದರೂ ನಾವು ಗೃಹಪ್ರವೇಶ ಮಾಡುವುದಿಲ್ಲ ಎಂದು ಶ್ರೀಗಳಿಗೆ ನಮ್ಮ ಮನವಿ ಒಪ್ಪಿಸಿ ಗ್ರಾಮಕ್ಕೆ ತೆರಳಿದರು.

    ಭಕ್ತನ ಭಕ್ತಿ ದೊಡ್ಡದು, ಅದಕ್ಕೂ ಶಕ್ತಿಯಿದೆ ಅಂತ ಅರಿತಿದ್ದ ಶ್ರೀಗಳು ಭಕ್ತರ ಸಂಕಲ್ಪಕ್ಕೆ ಕರಗಿ ಗೃಹಪ್ರವೇಶಕ್ಕೆ ಬರುವುದಾಗಿ ತಿಳಿಸಿದ್ದರು. ಈ ಮೂಲಕ 25 ವರ್ಷದ ಬಳಿಕ 1955ರಲ್ಲಿ ಶ್ರೀಗಳು ಹುಟ್ಟೂರಿಗೆ ಕಾಲಿಟ್ಟಿದ್ದರು.

    https://www.youtube.com/watch?v=ZE7ZGlEjjjM

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv