Tag: ವೀರಸ್ವಾಮಿ

  • ಬಾಳಿ ಬದುಕಿದ್ದ ಮನೆಯನ್ನೇ ಖಾಲಿ ಮಾಡಿದ ಕ್ರೇಜಿಸ್ಟಾರ್ ರವಿಚಂದ್ರನ್

    ಬಾಳಿ ಬದುಕಿದ್ದ ಮನೆಯನ್ನೇ ಖಾಲಿ ಮಾಡಿದ ಕ್ರೇಜಿಸ್ಟಾರ್ ರವಿಚಂದ್ರನ್

    ಬೆಂಗಳೂರಿನ ರಾಜಾಜಿನಗರದ (Rajajinagar) ಡಾ.ರಾಜ್ ಕುಮಾರ್ ರಸ್ತೆ ಅಂದಾಕ್ಷಣ ಅಲ್ಲಿ ರವಿಚಂದ್ರನ್ ಮನೆ ನೆನಪಾಗುತ್ತದೆ. ಖ್ಯಾತ ನಿರ್ಮಾಪಕರೂ, ರವಿಚಂದ್ರನ್ ಅವರ ತಂದೆಯವರೂ ಆದ ವೀರಸ್ವಾಮಿ (Veeraswamy) ಅವರಿಂದ ರವಿಚಂದ್ರನ್ ಪುತ್ರರ ತನಕ ಈ ಮನೆಯೇ ಕುಟುಂಬಕ್ಕೆ ನೆರಳಾಗಿದೆ. ಒಂದು ಕಾಲದಲ್ಲಿ ಅದು ಸಿನಿಮಾ ಇಂಡಸ್ಟ್ರಿಯ ಪ್ರಮುಖ ಸ್ಥಳವೂ ಆಗಿತ್ತು. ಅನೇಕ ಸಿನಿದಿಗ್ಗಜರು ಆ ಮನೆಗೆ ಬಂದಿದ್ದೂ ಇದೆ. ಇಂತಹ ಮನೆಯನ್ನು ರವಿಚಂದ್ರನ್ ತೊರೆದಿದ್ದಾರೆ.

    ರವಿಚಂದ್ರನ್ (Ravichandran) ಆ ಮನೆಯಲ್ಲಿ ಇಲ್ಲ ಎಂಬ ವಿಷಯ ವಾರದಿಂದ ಗಾಂಧಿನಗರದಲ್ಲಿ ಗಿರಿಕಿ ಹೊಡೆಯುತ್ತಿತ್ತು. ಕೆಲವರು ಆ ಮನೆಯನ್ನು ಮಾರಿದರು ಎಂದು ಹೇಳಿದರೆ, ಇನ್ನೂ ಕೆಲವರು ವಾಸ್ತು ಕಾರಣಕ್ಕಾಗಿ ಬಿಟ್ಟಿದ್ದಾರೆ ಎಂದೂ ಮಾತನಾಡಿಕೊಳ್ಳುತ್ತಿದ್ದರು. ರಿಪೇರಿ ಕಾರಣಕ್ಕಾಗಿ ಬೇರೆ ಮನೆಗೆ ಶಿಫ್ಟ್ ಆಗಿದ್ದಾರೆ ಎಂದೂ ಹೇಳಲಾಗಿತ್ತು. ಆದರೆ, ರವಿಚಂದ್ರನ್ ಅವರೇ ನಿನ್ನೆ ಬನಾರಸ್ ಸಿನಿಮಾದ ಟೀಸರ್ ಬಿಡುಗಡೆಗೂ ಮುನ್ನ, ಕೆಲ ಮಾಧ್ಯಮ ಸ್ನೇಹಿತರ ಮುಂದೆ ವಾಸ್ತವ ತೆರೆದಿಟ್ಟಿದ್ದಾರೆ.

    ಅಸಲಿಯಾಗಿ ರವಿಚಂದ್ರನ್ ಸಂಪೂರ್ಣವಾಗಿ ಮನೆ ತೊರೆದಿಲ್ಲ. ಆದರೆ, ಹೊಸ ಮನೆಗೆ ಶಿಫ್ಟ್ ಆಗಿದ್ದು ನಿಜ ಎಂದಿದ್ದಾರೆ. ಮಗನ ಮದುವೆಯ ನಂತರ ಹೊಸ ಮನೆಗೆ ಹೋಗುವುದು ಎಂದು ಮೊದಲೇ ನಿರ್ಧಾರವಾಗಿತ್ತು. ಹಾಗಾಗಿ ಹೊಸ ಮನೆಗೆ ಹೋಗಿದ್ದೇವೆ. ಹಳೆ ಮನೆಯಲ್ಲೂ ನಾನು ಇರುತ್ತೇನೆ. ಸಿನಿಮಾ ಸಂಬಂಧಿ  ಕೆಲಸಗಳನ್ನು ಇಲ್ಲಿಯೇ ಮಾಡುತ್ತಿದ್ದೇನೆ. ಹೊಸಕೆರೆ ಹಳ್ಳಿಯಲ್ಲಿರುವ ಅಪಾರ್ಟ್ಮೆಂಟ್ ನಲ್ಲಿ ಸದ್ಯ ರವಿಚಂದ್ರನ್ ವಾಸವಾಗಿದ್ದಾರೆ.

    ಹೊಸ ಮನೆಗೆ ಶಿಫ್ಟ್ ಆಗಬೇಕು ಎನ್ನುವುದು ಹಲವು ವರ್ಷಗಳಿಂದ ನಡೆಯುತ್ತಲೇ ಇತ್ತು. ಅಮ್ಮನಿಗಾಗಿ ಹಳೆ ಮನೆಯಲ್ಲೇ ಇದ್ದೆವು. ಮನೋರಂಜನ್ (Manoranjan) ಮದುವೆ ನಂತರ ಹೋಗುವ ಕುರಿತು ಪ್ಲ್ಯಾನ್ ಮಾಡಲಾಗಿತ್ತು. ಅದರಂತೆಯೇ ಇದೀಗ ಹೊಸ ಮನೆಗೆ ಶಿಫ್ಟ್ ಆಗಿರುವುದಾಗಿ ರವಿಚಂದ್ರನ್ ತಿಳಿಸಿದ್ದಾರೆ. ಈ ಮೂಲಕ ಹರಡಿರುವ ಗಾಸಿಪ್ ಗೆ ತೆರೆ ಎಳೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕ್ರೇಜಿಸ್ಟಾರ್ ವಿ.ರವಿಚಂದ್ರನ್ ತಾಯಿ ವಿಧಿವಶ

    ಕ್ರೇಜಿಸ್ಟಾರ್ ವಿ.ರವಿಚಂದ್ರನ್ ತಾಯಿ ವಿಧಿವಶ

    ನ್ನಡದ ಖ್ಯಾತ ನಟ ವಿ.ರವಿಚಂದ್ರನ್ ತಾಯಿ ಮತ್ತು ಕನ್ನಡದ ಹೆಸರಾಂತ ನಿರ್ಮಾಪಕ ವೀರಸ್ವಾಮಿ‌ ಅವರ ಧರ್ಮಪತ್ನಿ ‌ ಶ್ರೀಮತಿ ಪಟ್ಟಮ್ಮಾಳ್ ವೀರಸ್ವಾಮಿ‌ ಇಂದು ಬೆಳಗ್ಗೆ 6.30ರ ಸಮಯದಲ್ಲಿ ವಿಧಿವಶರಾಗಿದ್ದಾರೆ.  83 ವರ್ಷದ ಪಟ್ಟಮ್ಮಾಳ್  ಅವರು ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಹಲವು ವರ್ಷಗಳಿಂದ ಅಮ್ಮನ ಆರೈಕೆಯಲ್ಲಿದ್ದರು ರವಿಚಂದ್ರನ್. ಇದನ್ನೂ ಓದಿ : ನಿಜ ಜೀವನದಲ್ಲಿಯೂ ಹೀರೋಯಿನ್ ಆದ ಶ್ವೇತಾ ಶ್ರೀವಾತ್ಸವ್.

    ಪಟ್ಟಮ್ಮಾಳ್ ಅವರಿಗೆ ರವಿಚಂದ್ರನ್ ಮತ್ತು ಬಾಲಾಜಿ ಇಬ್ಬರು ಗಂಡು ಮಕ್ಕಳು ಹಾಗೂ ಮೂವರು ಹೆಣ್ಣುಮಕ್ಕಳಿದ್ದಾರೆ.  ಇಂದು ಬೆಳಗ್ಗೆ 10.30 ರ ನಂತರ ರವಿಚಂದ್ರನ್ ಅವರ ಸ್ವಗೃಹದಲ್ಲಿ‌ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ಅಂತ್ಯಕ್ರಿಯೆ ನೆರವೇರಲಿದ್ದಾ ಎಂದಿದೆ ರವಿಚಂದ್ರನ್ ಕುಟುಂಬ.