Tag: ವೀರಶೈವ ಲಿಂಗಾಯತ

  • ದಾವಣಗೆರೆ ಶೃಂಗ ಸಮ್ಮೇಳನ – 15 ವರ್ಷಗಳ ಬಳಿಕ ಒಂದಾದ ಪಂಚಪೀಠಾಧೀಶರು

    ದಾವಣಗೆರೆ ಶೃಂಗ ಸಮ್ಮೇಳನ – 15 ವರ್ಷಗಳ ಬಳಿಕ ಒಂದಾದ ಪಂಚಪೀಠಾಧೀಶರು

    ದಾವಣಗೆರೆ: 40 ವರ್ಷಗಳ ಬಳಿಕ ಜಿಲ್ಲೆಯಲ್ಲಿ ನಡೆಯುತ್ತಿರುವ ಶೃಂಗ ಸಮ್ಮೇಳನದಲ್ಲಿ 15 ವರ್ಷಗಳ ನಂತರ ಪಂಚಪೀಠಾಧೀಶರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

    ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ನೇತೃತ್ವದಲ್ಲಿ ದಾವಣಗೆರೆಯ ರೇಣುಕಾ ಮಂದಿರದಲ್ಲಿ ಶೃಂಗಾ ಸಮ್ಮೇಳನ ಜರುಗಿತು. ಇದೇ ಮೊದಲ ಬಾರಿ ಪಂಚಪೀಠಗಳಾದ ಕೇದಾರ, ರಂಭಾಪುರಿ, ಉಜ್ಜಯಿನಿ, ಕಾಶಿ, ಶ್ರೀಶೈಲ ಪೀಠದ ಸ್ವಾಮೀಜಿಗಳು ಒಂದೇ ವೇದಿಕೆಯಲ್ಲಿ ಕಂಡು ಬರುವ ಮೂಲಕ ಒಗ್ಗಟ್ಟು ಪ್ರದರ್ಶಿಸುವಂತೆ ಕರೆ ನೀಡಿದರು. ಕಳೆದ 15 ವರ್ಷದ ನಂತರ ಪಂಚಪೀಠಾಧೀಶರು ಒಂದಾಗಿ ಸಮಾವೇಶದಲ್ಲಿ ಭಾಗಿಯಾಗಿ ಉಪಜಾತಿಗಳನ್ನ ಬಳಸುವ ಬದಲು ಅಖಂಡವಾಗಿ ವೀರಶೈವ ಲಿಂಗಾಯತವೆಂದು ಬಳಕೆ ಮಾಡುವಂತೆ ದೇಶದ ಎಲ್ಲಾ ವೀರಶೈವ ಲಿಂಗಾಯತ ಸಮಾಜದ ಜನರಿಗೆ ಕರೆನೀಡಿದರು.ಇದನ್ನೂ ಓದಿ: 1.25 ಲಕ್ಷ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಮಹಿಳಾ ಪಿಎಸ್‌ಐ

    ಇದೇ ವೇಳೆ ಶ್ರೀಶೈಲ ಪೀಠದ ಡಾ. ಚನ್ನಸಿದ್ದರಾಮ ಪಂಡೀತಾರಾಧ್ಯ ಶಿವಾಚಾರ್ಯ ಜಗದ್ಗುರು ಮಾತನಾಡಿ, ಇಸ್ಲಾಂ ಧರ್ಮದಲ್ಲಿ 786 ಇದ್ದ ಹಾಗೇ ನಮ್ಮ ಸಮುದಾಯಕ್ಕೆ 856 (8- ಅಷ್ಟಾವರ್ಣ. 5- ಪಂಚಾಚಾರ್ಯ. 6- ಶಟಸ್ಥಳ) ಕೋಡ್ ಇದೆ. ಇಡೀ ವೀರಶೈವ ಸಮಗ್ರ ಸಮುದಾಯವನ್ನು ಒಂದುಗೂಡಿಸುವ ಕೆಲಸವಾಗುತ್ತಿದೆ. ಸರ್ಕಾರಿ ಸೌಲಭ್ಯ ಹಾಗೂ ಮೀಸಲಾತಿಯನ್ನು ಪಡೆದುಕೊಳ್ಳಲು ಉಪಜಾತಿ ಬರೆಸಿ. ಆದರೆ ಜಾತಿ ಮಾತ್ರ ವೀರಶೈವ ಲಿಂಗಾಯತ ಎಂದು ಬರೆಸಿ. ಅದೇ ರೀತಿ ಕೇಂದ್ರ ಸರ್ಕಾರ ಜಾತಿ ಸಮೀಕ್ಷೆಯಲ್ಲಿ ಜಾತಿ ಬದಲು ಸಂಪ್ರದಾಯ. ಉಪಜಾತಿ ಕಾಲಂ ಮಾಡಲು ಮನವಿ ಮಾಡಿದ್ದಾರೆ ಎಂದು ತಿಳಿಸಿದರು.

    ಬಳಿಕ ರಂಭಾಪುರಿ ಶ್ರೀಗಳು ಮಾತನಾಡಿ, ಬಿಎಸ್ ಯಡಿಯೂರಪ್ಪ ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದರು. ಆದರೆ ಒಮ್ಮೆ ಕೂಡ ಪೂರ್ಣ ಅವಧಿ ಅಧಿಕಾರ ಮಾಡಲು ಬಿಡಲಿಲ್ಲ, ಇದರಿಂದ ಇಡೀ ಸಮಾಜಕ್ಕೆ ಆಘಾತ ಉಂಟಾಯಿತು. ಜೊತೆಗೆ ಕಳೆದ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಯಿತು. ಅವರನ್ನು ನೆಮ್ಮದಿಯಿಂದ ಇರಲು ಬಿಡಲಿಲ್ಲ, ಕಿರುಕುಳಕೊಟ್ಟರು. ಅವರು ಬಹಳ ನೋವು ಅನುಭವಿಸಿದರು. ಆದ್ದರಿಂದ ಅವರು ಎಲ್ಲೇ ಹೋದರೂ ಹೆಚ್ಚು ಮಾತನಾಡುವುದಿಲ್ಲ. ಇನ್ನು ಬಿವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ, ಕ್ರಿಯಾಶೀಲರಾಗಿ ಸಂಘಟನೆ ಮಾಡ್ತಿದ್ದಾರೆ. ಅವರ ಮುಂದಿನ ದಿನ ರಾಜಕೀಯ ಜೀವನದಲ್ಲಿ ಉಜ್ವಲವಾಗಲಿದೆ ಎಂದು ಹೇಳಿದರು.

    ಕೇದಾರ ಪೀಠದ ಭೀಮಾಶಂಕರಲಿಂಗ ಸ್ವಾಮೀಜಿ ಮಾತನಾಡಿ, ಜಾತಿಗಣತಿ ವಿಚಾರದಲ್ಲಿ ಅಖಿಲ ಭಾರತ ವೀರಶೈವ ಸಮಾಜದ ಅಧ್ಯಯನ ಆಗಬೇಕಾಗಿದೆ. ಜಾತಿಗಣತಿ ಮಾಡುವ ಯಾವುದೇ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಇದೇ ಕಾರಣಕ್ಕೆ ವೀರಶೈವ ಲಿಂಗಾಯತರು ಒಂದು ಸಮಿತಿ ಮಾಡಿ, ಜಾತಿಗಣತಿ ಯಾವ ಜಾತಿ ಎಂದು ಸರಿಯಾಗಿ ಭರ್ತಿ ಮಾಡಬೇಕು. ಸರ್ಕಾರದ ಸೌಲಭ್ಯಕ್ಕಾಗಿ ಬೇರೆ ಬೇರೆ ಜಾತಿ ಬರೆಸುವುದು ಸರಿಯಲ್ಲ. ಕೇದಾರಕ್ಕೆ ಪ್ರಧಾನಿಗಳು ಬಂದಾಗ ಈ ವಿಚಾರ ಅವರ ಗಮನಕ್ಕೆ ತಂದಿದ್ದೇವೆ. ಲಿಂಗಾಯತ ಮತ್ತು ವೀರಶೈವ ಒಂದೇ ಎಂಬುದನ್ನ ಸ್ಪಷ್ಟಪಡಿಸಲಾಗಿದೆ. ಪಂಚಪೀಠಗಳು ಹಿಂದೇ ಕೂಡಾ ಒಂದೇ ಇದ್ದವು, ಮುಂದೇ ಕೂಡಾ ಒಂದೇ ಆಗಿರುತ್ತವೆ ಎಂದು ಘೋಷಣೆ ಮಾಡಿದರು.

    ಉಜ್ಜಯನಿ ಪೀಠದ ಜಗದ್ಗುರುಗಳು ಮಾತನಾಡಿ, ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ಕಥೆ ಹೇಳುವ ಮೂಲಕ ಗುರು ವಿರಕ್ತರು ಒಂದಾಗಬೇಕು. ಹಾಗೆಯೇ ವೀರಶೈವ ಲಿಂಗಾಯತರು ಎಲ್ಲಾರೂ ಒಟ್ಟಾಗಿ ಇರಬೇಕಿದೆ. ಸಮಾಜದ ಎಲ್ಲಾ ರಾಜಕೀಯ ಮುಖಂಡರು ಸಮಾಜದ ಒಳಿತಿಗಾಗಿ ಒಂದಾಗಬೇಕಿದೆ. ಸಮಾಜದ ಕೆಲಸಕ್ಕೆ ಪಂಚಾಚಾರ್ಯರು ಕರೆ ಕೊಟ್ಟ ತಕ್ಷಣ ಮುಂದಾಗಬೇಕು. ಮಹಾರಾಷ್ಟ್ರದಲ್ಲಿ ಒಂದೂವರೆ ಕೋಟಿ ಜನರು ವೀರಶೈವ ಲಿಂಗಾಯತರಿದ್ದಾರೆ. ಕರ್ನಾಟಕದಲ್ಲಿ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವೀರಶೈವ ಲಿಂಗಾಯತರು ಇದ್ದಾರೆ. ಕೇಂದ್ರ ಸರ್ಕಾರ ತರುವ ಜಾತಿಗಣತಿಯಲ್ಲಿ ಮೂರು ಕಾಲಂಗಳನ್ನು ಮಾಡಬೇಕು. ಆಗ ಮಾತ್ರ ಜಾತಿಗಣತಿಯಲ್ಲಿ ವೀರಶೈವ ಲಿಂಗಾಯತರ ಸಂಖ್ಯೆ ಸ್ಪಷ್ಟವಾಗಲಿದೆ ಎಂದರು.ಇದನ್ನೂ ಓದಿ: D-CET ಶುಲ್ಕ ಪಾವತಿಗೆ ದಿನಾಂಕ ವಿಸ್ತರಣೆ: KEA

  • ಆಧುನಿಕ ಕರ್ನಾಟಕ ನಿರ್ಮಾಣಕ್ಕೆ ವೀರಶೈವ ಲಿಂಗಾಯತರ ಕೊಡುಗೆ ಅಪಾರ: ಈಶ್ವರ್ ಖಂಡ್ರೆ

    ಆಧುನಿಕ ಕರ್ನಾಟಕ ನಿರ್ಮಾಣಕ್ಕೆ ವೀರಶೈವ ಲಿಂಗಾಯತರ ಕೊಡುಗೆ ಅಪಾರ: ಈಶ್ವರ್ ಖಂಡ್ರೆ

    ಬೆಂಗಳೂರು: ಆಧುನಿಕ ಕರ್ನಾಟಕ, ಆಧುನಿಕ ಭಾರತ ನಿರ್ಮಾಣಕ್ಕೆ ವೀರಶೈವ ಲಿಂಗಾಯತ ಸಮುದಾಯದ ಕೊಡುಗೆ ಅಪಾರವಾದದ್ದು ಎಂದು ಅರಣ್ಯ, ಜೀವಿಶಾಸ್ತ್ರಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ (Eshwar Khandre) ಅಭಿಪ್ರಾಯಪಟ್ಟರು.

    ಬೆಂಗಳೂರಿನಲ್ಲಿಂದು ಕರ್ನಾಟಕ ವೀರಶೈವ ಲಿಂಗಾಯತ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲ ಜಾತಿ, ಧರ್ಮದವರಿಗೂ ಆಶ್ರಯ, ಅನ್ನ, ಅಕ್ಷರದ ಜೊತೆಗೆ ಉತ್ತಮ ಸಂಸ್ಕಾರ ನೀಡಿ ಸಮಾಜದ ಮುಖ್ಯವಾಹಿನಿಗೆ ತಂದ ಕೀರ್ತಿ ವೀರಶೈವ ಲಿಂಗಾಯತ ಮಠ ಮಾನ್ಯಗಳಿಗೆ ಸಲ್ಲುತ್ತದೆ ಎಂದರು.ಇದನ್ನೂ ಓದಿ: ಮಕ್ಕಳ ಕಾಲೇಜು ಫೀಸ್‌ಗೆ ಸಾಲ ಮಾಡಿ ತಂದಿಟ್ಟ ಹಣವನ್ನೇ ದೋಚಿದ ಖದೀಮರು

    ವಿದ್ಯಾವಂತ ಮತ್ತು ಗುಣವಂತ ನಾಗರಿಕರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಹೀಗಾಗಿ ನಮ್ಮ ಸಮಾಜದ ಮಠ, ಮಾನ್ಯಗಳ ಕೊಡುಗೆಯಿಂದ ಇಂದು ಕೋಟ್ಯಂತರ ಜನರು ವಿದ್ಯಾವಂತರಾಗಿದ್ದಾರೆ. ಉನ್ನತ ಹುದ್ದೆ ಅಲಂಕರಿಸಿದ್ದಾರೆ. ವೀರಶೈವ ಲಿಂಗಾಯತ ಸಮುದಾಯ ಮೇಲ್ವರ್ಗದ ಸಮುದಾಯವಾದರೂ ನಮ್ಮಲ್ಲಿಯೂ ಕಡು ಬಡವರಿದ್ದಾರೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಅವರೆಲ್ಲರೂ ಸಬಲರಾಗಬೇಕು. ಬಡತನದಿಂದ ಹೊರಬರಬೇಕು ಇದಕ್ಕಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಶ್ರಮಿಸುತ್ತಿದೆ ಎಂದರು.

    ನಮ್ಮ ರಾಜ್ಯದಲ್ಲಿ 7 ಕೋಟಿಗೂ ಅಧಿಕ ಜನರಿದ್ದಾರೆ. ಎಲ್ಲರಿಗೂ ಸರ್ಕಾರಿ ಉದ್ಯೋಗ ಸಿಗುವುದಿಲ್ಲ. ಇಡೀ ರಾಜ್ಯದಲ್ಲಿ 6.5 ಲಕ್ಷ ಸರ್ಕಾರಿ, ಅರೆಸರ್ಕಾರಿ ಸಿಬ್ಬಂದಿ ಇರಬಹುದು. ನೀವು ಅದೃಷ್ಟವಂತರು. ನೀವೆಲ್ಲರೂ ಸಮಾಜದ ಪ್ರತಿಭಾವಂತರ ಉನ್ನತ ವ್ಯಾಸಂಗಕ್ಕೆ ಶೇ.1ರಷ್ಟು ನಿಮ್ಮ ಆದಾಯ ವಿನಿಯೋಗಿಸಿ ಎಂದು ಕಿವಿ ಮಾತು ಹೇಳಿದರು.

    ಅಮೆರಿಕ ಅಧ್ಯಕ್ಷರಾಗಿದ್ದ ಜಾನ್ ಎಫ್ ಕೆನಡಿ ಅವರು ದೇಶ ನಿನಗೇನು ಕೊಟ್ಟಿದೆ ಎಂದು ಕೇಳಬೇಡ. ದೇಶಕ್ಕೆ ನೀನು ಏನು ಕೊಟ್ಟಿದ್ದೀಯಾ ಎಂದು ನಿನ್ನನ್ನೇ ಕೇಳಿಕೋ ಎಂದು ಹೇಳುತ್ತಿದ್ದರು. ಅದೇ ರೀತಿ ಸಮಾಜ ನಿಮಗೆ ಎಲ್ಲ ನೀಡಿದೆ. ನೀವು ಸಮಾಜಕ್ಕೆ ಏನಾದರೂ ಕೊಡುಗೆ ನೀಡಿ ಎಂದು ತಿಳಿಸಿದರು. ಸಮಾರಂಭದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಘದ ರವಿ ತಿರ್ಲಾಪುರ ಮತ್ತಿತರರು ಪಾಲ್ಗೊಂಡಿದ್ದರು.ಇದನ್ನೂ ಓದಿ: ಹೊಸ ದಾಖಲೆಗೆ ಸಿದ್ಧವಾಗ್ತಿದೆ ಕೆಆರ್‌ಎಸ್ – ಡ್ಯಾಂ ಸಂಪೂರ್ಣ ಭರ್ತಿಗೆ 5 ಅಡಿ ಬಾಕಿ

  • ಲಿಂಗಾಯತರು ಯಡಿಯೂರಪ್ಪ ಜೊತೆಗಿಲ್ಲ, ಜನರೇ ಹೊಸ ಪಕ್ಷ ಕಟ್ಟಲು ಸಲಹೆ ಕೊಡ್ತಿದ್ದಾರೆ – ಯತ್ನಾಳ್‌

    ಲಿಂಗಾಯತರು ಯಡಿಯೂರಪ್ಪ ಜೊತೆಗಿಲ್ಲ, ಜನರೇ ಹೊಸ ಪಕ್ಷ ಕಟ್ಟಲು ಸಲಹೆ ಕೊಡ್ತಿದ್ದಾರೆ – ಯತ್ನಾಳ್‌

    – ಉಚ್ಛಾಟನೆ ಬಳಿಕ ಬಿಎಸ್‌ವೈ ವಿರುದ್ಧ ಮತ್ತೆ ಸಿಡಿದ ಯತ್ನಾಳ್‌

    ಬೆಂಗಳೂರು: ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) 2ನೇ ಬಾರಿ ಬಿಜೆಪಿಯಿಂದ (BJP) ಉಚ್ಛಾಟನೆಗೊಂಡ ಬಳಿಕವೂ ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ. ಅಲ್ಲದೇ ಜನರೇ ಹೊಸ ಪಕ್ಷ ಕಟ್ಟಲು ಸಲಹೆ ಕೊಡ್ತಿದ್ದಾರೆ ಅಂತ ಬಾಂಬ್‌ ಸಿಡಿಸಿದ್ದಾರೆ.

    ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ ಅವರು, ಯಡಿಯೂರಪ್ಪ ಮಗ ಒತ್ತಡ ತಂದು ನನ್ನ ಉಚ್ಚಾಟನೆ ಮಾಡಿಸಿದ್ದಾರೆ. ಯಾವ ವೀರಶೈವ ಲಿಂಗಾಯತರು ಯಡಿಯೂರಪ್ಪ ಜೊತೆಗಿಲ್ಲ. ಭ್ರಮೆಯಿಂದ ಕೇಂದ್ರದವರು ಹೊರಗೆ ಬರಬೇಕು. ರಾಮಾಯಣ, ಮಹಾಭಾರತದಲ್ಲೂ ಅಪಮಾನ ಮಾಡಿರೋದಿದೆ. ಹಾಗಾಗಿ ನನಗೆ ಯಾವ ಮುಜುಗರವೂ ಇಲ್ಲ. ಬಿಎಸ್‌ವೈ ಕುಟುಂಬವನ್ನು ನಾನು ಹೊರಗೆ ಇಡೋವರೆಗೂ ಬಿಡೋದಿಲ್ಲ ಅಂತ ಶಪಥ ಮಾಡಿದ್ದಾರೆ. ಇದನ್ನೂ ಓದಿ: ಯತ್ನಾಳ್ ಉಚ್ಚಾಟನೆಯಿಂದ ಒತ್ತಡಕ್ಕೆ ಒಳಗಾಗಿದ್ದ ಬಿಜೆಪಿ ಪದಾಧಿಕಾರಿ – ಕಾರು ಅಪಘಾತದಲ್ಲಿ ಸಾವು

    ಮೂರು ನನಗೆ ಲಕ್ಕಿ, 3ನೇ ಬಾರಿ ಉಚ್ಚಾಟನೆ ಮಾಡಿರೋದು, ಮುಂದೆ ಏನಾಗುತ್ತೆ ನೋಡಿ, ಇದಕ್ಕೆ ಕಾರಣಕರ್ತರಾದವರು ನಾಶ ಆಗ್ತಾರೆ. ಯಾರ ಮನವರಿಕೆಯೂ ನಾನು ಮಾಡಲ್ಲ. ಜನಮೆಚ್ಚಿದ ನಾಯಕ ಯಾರೂ ಇಲ್ಲ. ವಿಜಯೇಂದ್ರ ಸೇರಿ ಯಾರಿಗೂ 3 ಜನ ಸೇರಿಸೋ ಯೋಗ್ಯತೆ ಇಲ್ಲ. ಆದ್ರೆ ನಾನು ಬಾಡಿಗೆ ಜನ ತಂದಿಲ್ಲ. ನಿನ್ನೆ ವಿಜಯಪುರದಲ್ಲಿ ಬಾಡಿಗೆ ಕೊಟ್ಟು ಕರೆಸಿಲ್ಲ. ಕಳೆದ ಚುನಾವಣೆಯಲ್ಲಿ ಸಿಟಿ ರವಿಯನ್ನು ತನ್ನ ಚೇಲಾ ನಿಲ್ಲಿಸಿ ಯಡಿಯೂರಪ್ಪ ಸೋಲಿಸಿದ ಅಂತ ಯತ್ನಾಳ್‌ ಮಾರ್ಮಿಕವಾಗಿ ನುಡಿದಿದ್ದಾರೆ. ಇದನ್ನೂ ಓದಿ:  ಯತ್ನಾಳ್‌ ಉಚ್ಛಾಟನೆ – ವಿಜಯಪುರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರು

    ಮುಂದುವರಿದು.. ನಾನು ಮತ್ತೆ ದೆಹಲಿಗೆ ಹೋಗಲ್ಲ. ಮರುಪರಿಶೀಲನೆಗೆ ನಾನು ಮನವಿ ಮಾಡಲ್ಲ. ನಾನು ಹಿಂದೂ ಪರವಾಗಿ ಹೋರಾಟ ಮಾಡ್ತೇನೆ. ಇಡೀ ರಾಜ್ಯ ಸುತ್ತುತ್ತೇನೆ. ಜನರೇ ಹೊಸ ಪಕ್ಷ ಕಟ್ಟಲು ಸಲಹೆ ಕೊಡ್ತಿದ್ದಾರೆ. ಹಿಂದೂಗಳ ರಕ್ಷಣೆ ಮಾಡುವವರು ಯಾರೂ ಇಲ್ಲ. ಉ.ಕರ್ನಾಟಕದ ಬಗ್ಗೆ ಮಾತನಾಡುವವರು ಯಾರೂ ಇಲ್ಲ. ನಮ್ಮ ಹಿಂದೆ ಬಹಳ ದೊಡ್ಡ ಶಕ್ತಿ ಇದೆ. ರಾಘವೇಂದ್ರ ಹೊರತು ಪಡಿಸಿ ಎಲ್ಲಾ ಸಂಸದರೂ ನಮ್ಮ ಪರ ಇದ್ದಾರೆ ಅಂತ ಯತ್ನಾಳ್‌ ಹೇಳಿದ್ದಾರೆ. ಇದನ್ನೂ ಓದಿ: ಯತ್ನಾಳ್‌ ಉಚ್ಛಾಟನೆ ಬೆನ್ನಲ್ಲೇ ಬಿಜೆಪಿಯ ಮತ್ತೊಬ್ಬ ಮುಖಂಡ ರಾಜೀನಾಮೆ – ಬೆಂಬಲಿಗರಿಂದ ಪ್ರತಿಭಟನೆಗೆ ಸಜ್ಜು!

  • ಯಡಿಯೂರಪ್ಪ ಹಿಂದೂ ಅಲ್ಲ, ವೀರಶೈವ ಲಿಂಗಾಯತರು: ಸಾಗರನಹಳ್ಳಿ ನಟರಾಜ್

    ಯಡಿಯೂರಪ್ಪ ಹಿಂದೂ ಅಲ್ಲ, ವೀರಶೈವ ಲಿಂಗಾಯತರು: ಸಾಗರನಹಳ್ಳಿ ನಟರಾಜ್

    ತುಮಕೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಹಿಂದೂ ಅಲ್ಲ, ವೀರಶೈವ ಲಿಂಗಾಯತರು. ಅವರು ವೀರಶೈವ ಲಿಂಗಾಯತರೇ ಆಗಿದ್ದರೆ ಹಿಂದೂ ಆಗಲು ಸಾಧ್ಯವಿಲ್ಲ, ಆದರೆ, ತಾವು ಹಿಂದೂ ಅಲ್ಲ ಎಂದು ಹೇಳಿಕೊಳ್ಳುವುದು, ಬಿಡುವುದು ಅವರ ವೈಯಕ್ತಿಕ ವಿಚಾರ ಎಂದು ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜ್ ವಿವಾದಾತ್ಮಕ ಹೇಳಿಕೆ ನೀಡಿದರು.

    ವೀರಶೈವ – ಲಿಂಗಾಯತ ಮಹಾಸಭಾ ಸಮಾವೇಶದ ಪೂರ್ವ ತಯಾರಿ ಕುರಿತು ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ವೀರಶೈವ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮವನ್ನು ಕೇಳುತ್ತೇವೆ. ಇನ್ನು ತಾವು ಹಿಂದೂ ಹೌದೋ ಅಲ್ಲವೋ ಎಂದು ಹೇಳಿಕೊಳ್ಳುವುದು ಬಿಡುವುದು ಯಡಿಯೂರಪ್ಪ ಅವರಿಗೆ ಬಿಟ್ಟಿದ್ದು ಎಂದು ಹೇಳಿದರು.

    ನಮ್ಮ ಬೈಲಾವನ್ನಲ್ಲಿ ಒಪ್ಪಿಕೊಂಡು ಬರುವವರಿಗೆ ಸ್ವಾಗತ. ವೀರಶೈವ ಲಿಂಗಾಯತ ಅನ್ನೋದು ಪ್ರತ್ಯೇಕ ಧರ್ಮ. ಹಿಂದೂ ಧರ್ಮಕ್ಕೂ, ನಮ್ಮ ಆಚರಣೆಗೂ ತುಂಬಾ ವ್ಯತ್ಯಾಸ ಇದೆ. ನಮ್ಮದೇ ಪ್ರತ್ಯೇಕ ಧರ್ಮವಾಗಿದೆ. ಹೇಗೆ ಬೌದ್ಧ ಧರ್ಮ, ಸಿಖ್ ಧರ್ಮ ಅಂತ ಪ್ರತ್ಯೇಕ ಮಾಡಿದ್ದೀರೋ ಹಾಗೇ ನಮಗೂ ಪ್ರತ್ಯೇಕ ಧರ್ಮ ಕೊಡಬೇಕು. ಮಾಜಿ ಸಚಿವ ಎಂ.ಬಿ. ಪಾಟೀಲ್ ಅವರ ಪ್ರತ್ಯೇಕ ಧರ್ಮ ಹೋರಾಟ ಸರಿಯಿದೆ. ಅದನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಬೆಂಬಲಿಸಿ ಪ್ರತಿಭಟನಾ ರ‍್ಯಾಲಿ – ಭಾವಚಿತ್ರಕ್ಕೆ ಕ್ಷೀರಾಭಿಷೇಕ

    ನಮ್ಮಲ್ಲೂ ಆಚರಣೆಗಳು ವಿಭಿನ್ನವಾಗಿವೆ. ಕೆಲವರಿಗೆ ವಿಭೂತಿಧಾರಣೆ ಇಷ್ಟ ಇಲ್ಲದೇ ಇರಬಹುದು. ಇನ್ನೂ ಕೆಲವರಿಗೆ ರುದ್ರಾಕ್ಷಿ ಧಾರಣೆ ಇಷ್ಟ ಇಲ್ಲದಿರಬಹುದು. ಆದರೆ, ಈ ಎಲ್ಲರನ್ನೊಳಗೊಂಡು ವೀರಶೈವ ಲಿಂಗಾಯತ ಧರ್ಮವಿದೆ. ನಾವು ಸಹ ಹಿಂದೂ ಧರ್ಮದ ಎಲ್ಲ ಹಬ್ಬಗಳನ್ನು ಆಚರಿಸುತ್ತೇವೆ. ಆದರೆ ನಮ್ಮ ಆಚರಣೆ, ಶಾಸ್ತ್ರ, ಸಂಸ್ಕೃತಿ ಬೇರೆ ಎಂದರು. ಇದನ್ನೂ ಓದಿ: ಪತ್ನಿಯನ್ನು ಕೊಚ್ಚಿ ಕೊಂದು ಮನೆಗೆ ಬೀಗ ಹಾಕಿ ಪರಾರಿಯಾದ ಪಾಪಿ ಪತಿ

    Live Tv
    [brid partner=56869869 player=32851 video=960834 autoplay=true]

  • ಮುರಾಘಾಶ್ರೀ ವೀರಶೈವ ಲಿಂಗಾಯತ ವೆಬ್‍ಸೈಟ್‍ಗೆ ವಿರೋಧ: ಬಸವ ಕೇಂದ್ರದಿಂದ ಅಸಮಧಾನ

    ಮುರಾಘಾಶ್ರೀ ವೀರಶೈವ ಲಿಂಗಾಯತ ವೆಬ್‍ಸೈಟ್‍ಗೆ ವಿರೋಧ: ಬಸವ ಕೇಂದ್ರದಿಂದ ಅಸಮಧಾನ

    ರಾಯಚೂರು: ಚಿತ್ರದುರ್ಗ ಮುರುಘಾಮಠದ ಡಾ.ಶಿವಮೂರ್ತಿಮುರುಘಾ ಶರಣರಿಂದ ಆರಂಭವಾದ ವೀರಶೈವ ಲಿಂಗಾಯತ ವೆಬ್ ಸೈಟ್‍ಗೆ ರಾಯಚೂರಿನ ಬಸವ ಕೇಂದ್ರದ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.

    ಲಿಂಗಾಯತರೇ ಬೇರೆ ವೀರಶೈವರೇ ಬೇರೆ. ಇಬ್ಬರೂ ಒಂದೇ ಅನ್ನೋ ರೀತಿಯಲ್ಲಿ ಒಟ್ಟಾಗಿ ವೆಬ್‍ಸೈಟ್ ಬಿಡುಗಡೆ ಮಾಡಿರುವುದರು ಸರಿಯಲ್ಲ. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ನಿಂತಿಲ್ಲ, ನಿರಂತರವಾಗಿ ನಡೆದಿದೆ. ಬಸವ ತತ್ವಕ್ಕೆ ಬದ್ಧವಾಗಿರುವವರು ಲಿಂಗಾಯತರು. ಮುರುಘಾಶ್ರೀಗಳು ಲಿಂಗಾಯತರು, ವೀರಶೈವರು ಒಂದೇ ಎನ್ನುವಂತ ವೆಬ್ ಸೈಟ್ ಆರಂಭಿಸಬಾರದಿತ್ತು ಅಂತ ಬಸವ ಕೇಂದ್ರದ ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ.

    ಸ್ವಪ್ರತಿಷ್ಠೆಗಾಗಿ ವೆಬ್ ಸೈಟ್ ಆರಂಭಿಸಿದ್ದು, ಇದಕ್ಕೆ ನಮ್ಮ ವಿರೋಧವಿದೆ ಅಂತ ಬಸವ ಕೇಂದ್ರದ ಸದಸ್ಯರು ಹೇಳಿದ್ದಾರೆ. ಜಿಲ್ಲಾ ಬಸವಕೇಂದ್ರದ ಅಧ್ಯಕ್ಷ ಕುರಕುಂದಿ ವೀರಭದ್ರಪ್ಪ, ಕಾರ್ಯದರ್ಶಿ ಚನ್ನಬಸವಣ್ಣ ಮಹಾಜನಶಟ್ಟಿ ,ಹಿರಿಯ ಸದಸ್ಯ ಬಸವರಾಜದೇವರು ಅರಿವಿನಮನೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾರ್ ಕಿಟಕಿಯ ಮೇಲೆ ಕುಳಿತು ಸ್ಟಂಟ್ – ಪೊಲೀಸರು ಕೊಟ್ರು 20-20ಯ ತ್ರಿಪಲ್ ಶಾಕ್!

  • ಸಮುದಾಯದ ಹೆಸರೇಳಿ ಸಿಎಂ ಆದವರಿಗೆ ಸಮಾಜದ ಕಳಕಳಿ ಇಲ್ಲ: ಯತ್ನಾಳ್

    ಸಮುದಾಯದ ಹೆಸರೇಳಿ ಸಿಎಂ ಆದವರಿಗೆ ಸಮಾಜದ ಕಳಕಳಿ ಇಲ್ಲ: ಯತ್ನಾಳ್

    – ಅಧಿವೇಶನದಲ್ಲಿ ಸಿಎಂ ವಿರುದ್ಧ ಯತ್ನಾಳ್ ಆಕ್ರೋಶ
    – ಸಿಎಂ ನಾಪತ್ತೆ ಯತ್ನಾಳ್ ಹೇಳಿಕೆಗೆ ರೇಣುಕಾಚಾರ್ಯ ತಿರುಗೇಟು

    ಬೆಂಗಳೂರು: ಸಮುದಾಯದ ಹೆಸರು ಹೇಳಿ ಸಿಎಂ ಆದವರಿಗೆ ಸಮಾಜದ ಕಳಕಳಿ ಇಲ್ಲ ಎಂದು ಅಧಿವೇಶನದಲ್ಲಿಯೇ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸುವ ಮೂಲಕ ಬಿಜೆಪಿ ನಾಯಕರಿಗೆ ಮುಜುಗುರ ಉಂಟು ಮಾಡಿದರು.

    ಪಂಚಮಸಾಲಿ ಮೀಸಲಾತಿ ವಿಚಾರಕ್ಕೆ ಮಾತನಾಡಲು ಬಸನಗೌಡ ಪಾಟೀಲ್ ಯತ್ನಾಳ್ ಅವಕಾಶ ಕೇಳಿದರು. ಆದ್ರೆ ಸ್ಪೀಕರ್ ಕೊನೆಯಲ್ಲಿ ಸಮಯ ನೀಡುತ್ತೇನೆಂದಾಗ ಕೋಪಗೊಂಡ ಯತ್ನಾಲ್ ಸದನದ ಬಾವಿಗಿಳಿದು ಧರಣಿ ನಡೆಸಲು ಮುಂದಾದರು. ಈ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಮೊದಲೇ ನೀವೇ ಮಾತನಾಡಿ. ಸಿಎಂ ಬಂದ ನಂತರ ನಾನು ಮಾತನಾಡುತ್ತೇನೆ ಎಂದರು.

    ಸಿಎಂ ಯಡಿಯೂರಪ್ಪ ನಿನ್ನೆ ಮಾತನಾಡ್ತೀನಿ ಅಂತ ಹೊರಗಡೆ ಹೇಳಿದ್ದರು. ಆದ್ರೆ ಉತ್ತರ ಕೊಡಬೇಕಾದ ಸಿಎಂ ನಾಪತ್ತೆಯಾಗಿದ್ದಾರೆ. ನಮ್ಮ ಸಮಾಜದ ಹೆಸರೇಳಿಕೊಂಡು ಸಿಎಂ ಆ ಖುರ್ಚಿ ಮೇಲೆ ಕುಳಿತುಕೊಂಡಿದ್ದಾರೆ. ಸಿಎಂ ಉತ್ತರ ಕೊಡ್ತಿಲ್ಲ ಅಂದರೆ ನಾಪತ್ತೆ ಆಗಿದ್ದಾರೆ ಎಂದರು. ಈ ವೇಳೆ ಮಧ್ಯ ಪ್ರವೇಶಿಸಿದ ಬಿಜೆಪಿ ಶಾಸಕ ರೇಣುಕಾಚಾರ್ಯ ಸಿಎಂ ನಾಪತ್ತೆ ಆಗಿದ್ದಾರೆಂದು ಹೇಳಬಾರದು ಎಂದಾಗ ಇಬ್ಬರ ನಡುವೆ ವಾಕ್ಸಮರ ಏರ್ಪಟಿತು.

    ಶೈಕ್ಷಣಿಕ ಸಾಮಾಜಿಕವಾಗಿ ಹಲವು ಸಮುದಾಯಗಳಿಗೆ ಮೀಸಲಾತಿ ಸಿಕ್ಕಿಲ್ಲ. ರಾಜ್ಯದಲ್ಲಿ ಸಾಮಾಜಿಕ ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡಬೇಕಾಗಿದೆ. ಸಣ್ಣ ಸಣ್ಣ ಸಮುದಾಯಗಳಿಗೆ ಅವರನ್ನು ಪ್ರತಿನಿಧಿಸುವವರೇ ಇಲ್ಲದೆ ಅನ್ಯಾಯ ಆಗ್ತಿದೆ. ಪಂಚಮಸಾಲಿ ಸಮುದಾಯ ಸಹ ಹಿಂದುಳಿದ ವರ್ಗಕ್ಕೆ ಸೇರಬೇಕು ಎಂಬುದು 25 ವರ್ಷದಿಂದ ಹೋರಾಟ ಮಾಡಿಕೊಂಡು ಬಂದಿದೆ. ಎಸ್‍ಎಂ ಕೃಷ್ಣ ಕಾಲದಲ್ಲಿ ಹಿಂದುಳಿದ ವರ್ಗಕ್ಕೆ ಅಧ್ಯಯನಕ್ಕೆ ಸೂಚಿಸಿದ್ದರು. ಪಂಚಮಸಾಲಿ ಸಮುದಾಯ ಎಲ್ಲಿಯೂ ತಮ್ಮ ಜಾತಿ ಹೆಸರು ಬರೆದಿಲ್ಲ. ವೀರಶೈವ ಲಿಂಗಾಯತ ಅಂತಲೇ ಬರೆದುಕೊಂಡು ಬಂದಿದ್ದರಿಂದ ಕೇಂದ್ರ ಓಬಿಸಿ ಪಟ್ಟಿಗೂ ಸೇರಿಸಿಲ್ಲ.

    ಸಿಎಂ ನೇರವಾಗಿ ಉತ್ತರ ನೀಡಲಿ: ನಮ್ಮ ಸಮುದಾಯಕ್ಕೆ ಸಿಎಂ ಯಡಿಯೂರಪ್ಪ ಹಿಂದೆ ಆಶ್ವಾಸನೆ ಕೊಟ್ಟಿದ್ದರು. ವೀರಶೈವ ಲಿಂಗಾಯತ ಇತಿಹಾಸದಲ್ಲಿ 10 ಲಕ್ಷ ಜನ ಸೇರಿ ಹೋರಾಟ ಮಾಡಿದ್ದು ಇದೇ ಮೊದಲು ಪಂಚಮಸಾಲಿ ಅಂದ್ರೆ ಕೊನೆ ಸಾಲಿನಲ್ಲಿರುವವರು ನಾವು. ನಮ್ಮ ಸಮುದಾಯ ಬಹಳಷ್ಟು ಹಿಂದುಳಿದಿದೆ. ನಮ್ಮ ಸಮುದಾಯ ವಿಚಾರದಲ್ಲಿ ಸರ್ಕಾರದಿಂದ ಬಹಳ ಕೆಟ್ಟ ಸಂದೇಶ ಹೋಗ್ತಾ ಇದೆ. ಸಿಎಂ ಯಡಿಯೂರಪ್ಪಗೆ ನಮ್ಮ ಸಮುದಾಯದ ದೊಡ್ಡ ಮತ ನೀಡಿದೆ. ನಮಗೆ ಬೇರೆ ಯಾವುದೇ ಮಂತ್ರಿಗಳ ಉತ್ತರ ಕೊಡಬೇಕಾಗಿಲ್ಲ. ಸ್ವತಃ ಸಿಎಂ ನೇರವಾಗಿ ಉತ್ತರ ಕೊಡಬೇಕು. ಇಲ್ಲದಿದ್ದರೆ ಸದನದ ಒಳಗೆ ನಾನು ಹೋರಾಟ ಮಾಡ್ತೇನೆ. ಅಲ್ಲಿ ಸಮಾಜದವರು ಹೋರಾಟ ಮಾಡ್ತಾರೆ. ಸ್ಪೀಕರ್ ಗೂ ಕೂಡ ನಮಗೆ ಮಾತನಾಡುವುದಕ್ಕೆ ಅವಕಾಶ ಕೊಡಬಾರದು ಎಂಬ ಒತ್ತಡ ಇತ್ತು ಅನ್ಸುತ್ತೆ ಎಂದರು. ನಮ್ಮನ್ನು ಈ ವಿಷಯದಲ್ಲಿ ಎಳೆದು ತರಬೇಡಿ ಎಂದು ಸ್ಪೀಕರ್ ಸೂಚಿಸಿದರು.

    ನಾನೇನು ಹಾದಿ ಬೀದಿಯಲ್ಲಿ ಹೋಗುವವನಲ್ಲ. ವಾಜಪೇಯಿ ಸರ್ಕಾರದಲ್ಲಿ ಸಚಿವನಾಗಿದ್ದೆ. ಸಮುದಾಯದ ವಿಚಾರದಲ್ಲಿ ಮಾತನಾಡುವಾಗ ರೇಣುಕಾಚಾರ್ಯ ಯಾಕೆ ಅಡ್ಡಿ ಮಾಡ್ತಾರೆ ಸಿಎಂ ಉತ್ತರ ಕೊಡದೇ ಹೋದರೆ ನಾಳೆಯಿಂದ ಶಿವರಾತ್ರಿ ಆಮರಾಣಾಂತ ಉಪವಾಸ ಶುರು ಮಾಡ್ತಾರೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

  • ಪಂಚಮಸಾಲಿ ಮೀಸಲು ಪಾದಯಾತ್ರೆಗೆ ಟ್ವಿಸ್ಟ್ – ವೀರಶೈವ ಲಿಂಗಾಯತ ಶ್ರೀಗಳಿಂದಲೂ ಬೆಂಬಲ

    ಪಂಚಮಸಾಲಿ ಮೀಸಲು ಪಾದಯಾತ್ರೆಗೆ ಟ್ವಿಸ್ಟ್ – ವೀರಶೈವ ಲಿಂಗಾಯತ ಶ್ರೀಗಳಿಂದಲೂ ಬೆಂಬಲ

    – ಇಡೀ ಸಮುದಾಯವನ್ನು ಒಬಿಸಿಗೆ ಸೇರಿಸಲು ಪಟ್ಟು
    – ಪಂಚಮಸಾಲಿ ಹೋರಾಟ ವಿಫಲಕ್ಕೆ ಯತ್ನ ನಡೀತಿದ್ಯಾ?

    ಬೆಂಗಳೂರು: ಮೀಸಲಾತಿ ಹೋರಾಟಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಪಂಚಮಸಾಲಿ ಸಮುದಾಯದ ಶ್ರೀಗಳು 2ಎ ಮೀಸಲಾತಿಗೆ ಆಗ್ರಹಿಸಿ ನಡೆಸಿರುವ ಪಾದಯಾತ್ರೆ ಮತ್ತಷ್ಟು ಬಲ ಬಂದಿದೆ. ಪಂಚಮಸಾಲಿಗಳ ಹೋರಾಟದಲ್ಲಿ ವೀರಶೈವ-ಲಿಂಗಾಯತ ಶ್ರೀಗಳೂ ಕೈ ಜೋಡಿಸಿದ್ದು, ಇಡೀ ಲಿಂಗಾಯತ ಸಮುದಾಯದ 102 ಉಪ ಜಾತಿಗಳಿಗೂ ಒಬಿಸಿ ಮೀಸಲಾತಿಗಾಗಿ ಕಹಳೆ ಮೊಳಗಿಸಿದ್ದಾರೆ.

    ಏಳು ಪುಟಗಳ ಮನವಿ: ಈಗಾಗಲೇ 40 ಉಪ ಜಾತಿಗಳಿಗಿರುವ ಹಿಂದುಳಿದ ವರ್ಗದ ಮೀಸಲಾತಿ ಇತರ ಉಪ ಜಾತಿಗಳಿಗೂ ಸಿಗಲಿದ್ಯಾ ಅನ್ನೋ ಪ್ರಶ್ನೆ ಈಗ ಎದ್ದಿದೆ. ಇವತ್ತು ಬೆಳಗ್ಗೆ ಬೆಂಗಳೂರಿನಲ್ಲಿ ಸಭೆ ನಡೆಸಿದ 150ಕ್ಕೂ ಸ್ವಾಮೀಜಿಗಳು ಇಡೀ ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಬೇಕೆಂದು ಹೊಸ ಬೇಡಿಕೆ ಇಟ್ಟಿದ್ದಾರೆ. ಇದಕ್ಕಾಗಿ ಪಂಚಮಸಾಲಿ ಪಾದಯಾತ್ರೆಯಲ್ಲಿ ಭಾಗಿಯಾಗಿ ಕೇಂದ್ರದ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ. ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಅಧ್ಯಕ್ಷ ಪರಮಶಿವಯ್ಯ ಮೂಲಕ ಸಿಎಂಗೂ ಏಳು ಪುಟಗಳ ಮನವಿ ಪತ್ರ ಸಲ್ಲಿಸಿದ್ದಾರೆ.

    ರಾಜ್ಯ ಸರ್ಕಾರ ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸುವಂತೆ ಮೋದಿ ಸರ್ಕಾರಕ್ಕೆ ಶಿಫಾರಸು ಮಾಡಿದರೆ, ಪ್ರಧಾನಿ ಬಳಿಗೂ ಮಠಾಧೀಶರ ನಿಯೋಗ ಕೊಂಡೊಯ್ಯುವುದಾಗಿ ಉಜ್ಜೈನಿ ಜಗದ್ಗುರುಗಳು ತಿಳಿಸಿದ್ದಾರೆ. ಶ್ರೀಶೈಲ ಶ್ರೀಗಳು ಮಾತನಾಡಿ, ಒಬಿಸಿ ಬೇಡಿಕೆ ಇವತ್ತಿನದ್ದಲ್ಲ. ಕಳೆದ ವರ್ಷ ಮೋದಿ, ಕಾಶಿಯ ಜಂಗಮವಾಡಿಗೆ ಬಂದಾಗಲೇ ಮನವಿ ನೀಡಲು ಸಜ್ಜಾಗಿದ್ದೀವಿ. ಇದು ಶಿಷ್ಟಾಚಾರ ಅಲ್ಲ ಎಂಬ ಕಾರಣಕ್ಕೆ ಸುಮ್ಮನಾದ್ದೀವಿ. ಈಗ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಬೇಕು ಎಂದು ಒತ್ತಾಯಿಸಿದರು.

    ಹೋರಾಟ ಅಲ್ಲ, ಹಕ್ಕೊತ್ತಾಯ: ದಿಂಗಾಲೇಶ್ವರ ಶ್ರೀಗಳು ಮಾತನಾಡಿ, ಸಮಸ್ತ ವೀರಶೈವ ಲಿಂಗಾಯಿತರನ್ನು ಒಬಿಸಿಗೆ ಸೇರ್ಪಡೆ ಮಾಡುವವರೆಗೆ ಹೋರಾಟ ಮಾಡಬೇಕು ಅಂತಾ ಕರೆ ನೀಡಿದರು. ಅಂದು ಒಬಿಸಿಗೆ ಸೇರ್ಪಡೆ ಮಾಡುವ ನಿರ್ಧಾರದಿಂದ ಸಿಎಂ ಯಡಿಯೂರಪ್ಪ ಹಿಂದೆ ಸರಿಯದೇ ಇದ್ದಿದ್ರೆ ಇಂದು ಪಂಚಮಸಾಲಿ ಜಗದ್ಗುರುಗಳು ಕಾಲಿಗೆ ಬೊಬ್ಬೆ ಬರುವ ಹಾಗೆ ಪಾದಯಾತ್ರೆ ಮಾಡಬೇಕಾಗಿ ಬರ್ತಿರಲಿಲ್ಲ ಅಂತಾ ಅಭಿಪ್ರಾಯಪಟ್ಟರು. ಹುಕ್ಕೇರಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇದು ಹೋರಾಟ ಅಲ್ಲ, ಹಕ್ಕೊತ್ತಾಯ. ಪಂಚಮಸಾಲಿಗಳ ಹೋರಾಟವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡ್ತಿಲ್ಲ ಎಂದು ಸ್ಪಷ್ಟಪಡಿಸಿದರು.

    ಸಭೆಯಲ್ಲಿ ಸಿಎಂ ಆಪ್ತರು: ವೀರಶೈವ ಲಿಂಗಾಯತ ಸಮುದಾಯ ಪಂಚಾಚಾರ್ಯರು, ವಿರಕ್ತ ಮಠಾಧೀಶರು ನಡೆಸಿದ ಬೃಹತ್ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಆಪ್ತರಾದ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಪರಮಶಿವಯ್ಯ, ವಿಜಯೇಂದ್ರ ಆಪ್ತ ಕ್ರೆಡಿಲ್ ಅಧ್ಯಕ್ಷ ರುದ್ರೇಶ್ ಪಾಲ್ಗೊಂಡಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡ್ತು. ಸಭೆ ಉದ್ದೇಶಿಸಿ ಮಾತನಾಡಿದ ಪರಮಶಿವಯ್ಯ, ಯಡಿಯೂರಪ್ಪ ಪಡುತ್ತಿರುವ ಹಿಂಸೆ ಕಂಡು ನೋವಾಗುತ್ತಿದೆ ಅಂದ್ರು. ಒಂದ್ಕಡೆ ಕುರುಬರು, ಮತ್ತೊಂದ್ಕಡೆ ವಾಲ್ಮೀಕಿಗಳು.. ಇನ್ನೊಂದ್ಕಡೆ ನಾವು ಸಿಎಂಗೆ ಹಿಂಸೆ ನೀಡ್ತಿದ್ದೇವೆ. ಅವರು ಮುಳ್ಳಿನ ಹಾಸಿಗೆ ಮೇಲಿದ್ದಾರೆ. ಮಹತ್ತರ ಜವಾಬ್ದಾರಿ ಸಿಎಂ ಮೇಲಿದೆ. ಆದರೂ ಫೆಬ್ರವರಿ 18-19 ರಂದು ಪ್ರಮುಖ ಮಠಾಧೀಶರ ನಿಯೋಗವನ್ನು ಸಿಎಂ ಭೇಟಿ ಮಾಡಲು ಉದ್ದೇಶಿಸಿದ್ದಾರೆ ಅಂತಾ ಪರಮಶಿವಯ್ಯ ತಿಳಿಸಿದರು.

    ಕ್ರೆಡಿಲ್ ಅಧ್ಯಕ್ಷ ರುದ್ರೇಶ್ ಮಾತನಾಡಿ, ಪಂಚಮಸಾಲಿ ಶ್ರೀಗಳ ಹೋರಾಟಕ್ಕೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು. ಅವರು ಹೋರಾಟ ಸರಿಯಾಗಿದೆ. ಆದ್ರೇ, ಅವರು ಕೇವಲ ಒಂದು ಪಂಗಡದ ಪರವಾಗಿ ಹೋರಾಟ ಮಾಡ್ತಿರೋದು ನೋವು ತಂದಿದೆ. ಮೀಸಲಾತಿ ಹೋರಾಟದ ಕಾರಣಕ್ಕೆ ನಮ್ಮ ಸಮಾಜ ಒಡೆಯಬಾರದು ಅಂತಾ ಅಭಿಪ್ರಾಯಪಟ್ರು. ಮಾಜಿ ಸಂಸದ ಪ್ರಭಾಕರ್ ಕೋರೆ ಮಾತಾಡಿ, ಪಂಚಮಸಾಲಿ ಶ್ರೀಗಳಿಗೆ ಕಾನೂನಿನ ತಿಳುವಳಿಕೆ ಕಮ್ಮಿ ಎಂದು ಕಾಣುತ್ತೆ. 2ಎಗಿಂತ ಓಬಿಸಿ ಹೆಚ್ಚು.. ಇಡೀ ಸಮುದಾಯವನ್ನು ಒಬಿಸಿಗೆ ಸೇರಿಸಬೇಕು ಅಂತಾ ಸಿಎಂಗೆ ಮನವಿ ಮಾಡಿದ್ದೀನಿ. ಪಂಚಮಸಾಲಿಗಳು ನಮ್ಮ ಹೋರಾಟದ ಜೊತೆ ಕೈಜೋಡಿಸಲಿ ಅಂತಾ ಹೇಳಿದರು.

    ವಿಜಯೇಂದ್ರ ವರ್ಸಸ್ ಕಾಶಪ್ಪನವರ್:
    ಮೀಸಲಾತಿ ಹೋರಾಟದಲ್ಲಿ ರಾಜಕೀಯ ನುಸುಳಿದಂತೆ ಕಾಣುತ್ತಿದೆ. ಪಂಚಮಸಾಲಿ ಹೋರಾಟವನ್ನು ಹತ್ತಿಕ್ಕಲು ಸಿಎಂ ಬಿಎಸ್‍ವೈ ಪುತ್ರ ವಿಜಯೇಂದ್ರ ಸಮುದಾಯದ ಎಲ್ಲಾ ಸ್ವಾಮೀಜಿಗಳನ್ನು ಎತ್ತಿಕಟ್ಟಿದ್ದಾರೆ ಎಂಬ ಗಂಭೀರ ಆಪಾದನೆ ಕೇಳಿಬಂದಿದೆ. ತುಮಕೂರಲ್ಲಿ ಮಾತಾಡಿದ ಕಾಂಗ್ರೆಸ್ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ಸ್ವಾಮೀಜಿಗಳ ಮೂಲಕ ಪಂಚಮಸಾಲಿಗಳಿಗೆ ಮೀಸಲಾತಿ ಕೊಡಬಾರದೆಂದು ಒತ್ತಡ ಹೇರುವ ಕೆಲಸ ನಡೆಯುತ್ತಿದೆ. ಇಲ್ಲಿ ಸಿಎಂ ಪುತ್ರ ವಿಜಯೇಂದ್ರ ನಡೆಸ್ತಿರುವ ಷಡ್ಯಂತ್ರ್ಯ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಕಾಶಪ್ಪನವರ್ ಆರೋಪ ಮಾಡಿದ್ದಾರೆ.

    ಪಂಚಮಸಾಲಿ ಪಾದಯಾತ್ರೆ ವೇಳೆಯೇ ಸ್ವಾಮೀಜಿಗಳನ್ನು ಸೇರಿಸಬೇಕಿತ್ತಾ? ವಿಜಯೇಂದ್ರ ಷಡ್ಯಂತ್ರ್ಯ ಫಲಪ್ರದ ಆಗಲು ಬಿಡಲ್ಲ. ನಮ್ಮ ಹೋರಾಟ ಹತ್ತಿಕ್ಕುವ ಕೆಲಸ ಮಾಡಿದ್ರೆ ಉಗ್ರ ಹೋರಾಟ ನಡೆಸ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ. ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ವೀರಶೈವ ಲಿಂಗಾಯತ ಸಮುದಾಯದ ಸ್ವಾಮೀಜಿಗಳ ಸಭೆ ಹಿಂದೆ ಪ್ರಮುಖರೊಬ್ಬರ ಪುತ್ರ ಇದ್ದಾರೆ ಎನ್ನಲಾಗಿದೆ. ಸಮುದಾಯದ ಸ್ವಾಮಿಜಿಗಳ ಹೋರಾಟ ನಮ್ಮ ಹೋರಾಟಕ್ಕೆ ಪೂರಕವಾಗಿರಬೇಕು. ಹತ್ತಿಕ್ಕುವ ಪ್ರಯತ್ನ ಇದ್ರಲ್ಲಿ ಇರಬಾರದು ಎಂದು ಹೇಳಿದರು.

    ಇದಕ್ಕೆ ಪ್ರತಿಕ್ರಿಯೆ ನೀಡಿದ ದಿಂಗಾಲೇಶ್ವರ ಶ್ರೀಗಳು, ನಾವು ಯಾವತ್ತು ಕೂಡ ಪಂಚಮಸಾಲಿ ಶ್ರೀಗಳ ನಿಲುವಿನ ವಿರುದ್ಧ ಇಲ್ಲ. ಅವರ ಹೋರಾಟವನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿಲ್ಲ. ನಮ್ಮ ನಿಲುವು ಒಂದೇ ಎಲ್ಲರನ್ನು ಓಬಿಸಿಗೆ ಸೇರಿಸಬೇಕು ಎನ್ನುವುದಷ್ಟೇ ಆಗಿದೆ ಎಂದು ಸ್ಪಷ್ಟಪಡಿಸಿದರು.

    ವಿಜಯೇಂದ್ರ ತಿರುಗೇಟು: ಕಾಶಪ್ಪನವರ್ ಆರೋಪಕ್ಕೆ ತಿರುಗೇಟು ನೀಡಿದ ವಿಜಯೇಂದ್ರ, ನಾನು ಯಾವ ಹೋರಾಟವನ್ನು ದಿಕ್ಕುತಪ್ಪಿಸಲು ಯತ್ನಿಸುತ್ತಿಲ್ಲ. ಕೆಲವರಿಗೆ ನನ್ನ ಹೆಸರು ಪ್ರಸ್ತಾಪ ಮಾಡದಿದ್ರೆ ತಿಂದ ಅನ್ನ ಅರಗೋದಿಲ್ಲ. ಯಾರ ಯೋಗ್ಯತೆ ಏನು ಗೊತ್ತಿದೆ. ಯಾರು ನನ್ನ ಬಗ್ಗೆ ಮಾತಾಡಿದ್ದು, ಬಾರ್‍ನಲ್ಲಿ ಗಲಾಟೆ ಮಾಡಿಕೊಂಡಿದ್ರಲ್ಲಾ ಆ ಕಾಶಪ್ಪನವರಾ ಎಂದು ಪ್ರಶ್ನಿಸಿ ಹರಿಹಾಯ್ದರು.

  • ಲಿಂಗಾಯತ ಮೀಸಲು ಸಿಎಂ ಬ್ರಹ್ಮಾಸ್ತ್ರಕ್ಕೆ ಹೈಕಮಾಂಡ್ ಬ್ರೇಕ್

    ಲಿಂಗಾಯತ ಮೀಸಲು ಸಿಎಂ ಬ್ರಹ್ಮಾಸ್ತ್ರಕ್ಕೆ ಹೈಕಮಾಂಡ್ ಬ್ರೇಕ್

    – ಸಿಎಂಗೆ ದೆಹಲಿ ಬರಲು ತುರ್ತು ಬುಲಾವ್
    – ಒಬಿಸಿ ಅಸ್ತ್ರದಿಂದ ಇಕ್ಕಟ್ಟಿಗೆ ಸಿಲುಕ್ತಾರಾ ಯಡಿಯೂರಪ್ಪ?

    ಬೆಂಗಳೂರು: ವೀರಶೈವ ಲಿಂಗಾಯಗತರಿಗೆ ಓಬಿಸಿ ಸ್ಥಾನಮಾನ ನೀಡುವ ಕುರಿತು ರಾತ್ರಿ ಪ್ರಹಸನ ನಡೆದಿದ್ದು, ಕೇಂದ್ರದ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಇದಕ್ಕೆ ಸಮುದಾಯದವರು ಸಿಎಂ ಮೇಲೆ ಮುಗಿಬಿದ್ದಿದ್ದಾರೆ.

    ಕಳೆದ ರಾತ್ರಿ ಸಿಎಂ ಪಡಸಾಲೆಯಿಂದ ಹೊರಬಿದ್ದ ಒಂದೇ ಸುದ್ದಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿತ್ತು. ಇವತ್ತಿನ ಸಂಪುಟ ಸಭೆಯಲ್ಲಿ ವೀರಶೈವ ಲಿಂಗಾಯತರಿಗೆ ಓಬಿಸಿ ಸ್ಥಾನಮಾನ ನೀಡಲು ಕೇಂದ್ರಕ್ಕೆ ಸರ್ಕಾರ ಶಿಫಾರಸ್ಸು ಮಾಡಲಿದೆ ಎಂಬ ಸುದ್ದಿಯೂ ಹರಿದಾಡಿತ್ತು. ಸಂಪುಟ ಸಭೆ ಬಳಿಕ ಮುಖ್ಯಮಂತ್ರಿಗಳೇ ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಪ್ರಕಟಿಸುತ್ತಾರೆ ಎಂಬ ಮಾಹಿತಿಯೂ ಹೊರಬಿದ್ದಿತ್ತು. ಈ ಮೂಲಕ ಸಂಪುಟ ಸರ್ಜರಿಗೆ ಗ್ರೀನ್ ಸಿಗ್ನಲ್ ನೀಡದೇ ಸತಾಯಿಸುತ್ತಿರುವ ಬಿಜೆಪಿ ಹೈಕಮಾಂಡ್‍ಗೆ ಸಡ್ಡು ಹೊಡೆಯಲು ಮುಂದಾಗಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಪೂರಕವಾಗಿ ಲಿಂಗಾಯತ ಸಮುದಾಯವನ್ನು ಓಬಿಸಿ ಪಟ್ಟಿಗೆ ಸೇರಿಸುವ ವಿಚಾರವನ್ನು ಇಂದಿನ ಕ್ಯಾಬಿನೆಟ್ ಅಜೆಂಡಾದಲ್ಲಿಯೂ ಸೇರಿಸಲಾಗಿತ್ತು. ಆದರೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಎಲ್ಲವೂ ಉಲ್ಟಾ ಆಗಿದೆ.

    ಸಿಎಂ ಯಡಿಯೂರಪ್ಪ ನಡೆಗೆ ಬೆಚ್ಚಿಬಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕರೆ ಮಾಡಿ ದೆಹಲಿಗೆ ಬನ್ನಿ ಮಾತಾಡೋಣ. ಅಲ್ಲಿಯವರೆಗೂ ಯಾವುದೇ ಪ್ರಮುಖ ನಿರ್ಣಯ ಕೈಗೊಳ್ಳಬೇಡಿ ಎಂದು ಸೂಚನೆ ನೀಡಿದ್ದಾರೆ. ಹೀಗಾಗಿ ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಬೇಕಿದ್ದ ವಿಷಯವನ್ನು ಮುಂದಿನ ಸಭೆಗೆ ಮುಂದೂಡಲಾಯಿತು. ದೆಹಲಿಗೆ ತೆರಳಿ ಅಮಿತ್ ಶಾ ಜೊತೆಗೆ ಚರ್ಚಿಸಿದ ಬಳಿಕ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ಸಚಿವರಿಗೆ ಹೇಳಿದರು.

    ಲಿಂಗಾಯತರನ್ನು ಓಬಿಸಿಗೆ ಸೇರಿಸುವ ಬಗ್ಗೆ ಇನ್ನೂ ಕಾನೂನಾತ್ಮಕ ಚರ್ಚೆ ಅಗತ್ಯ ಇದೆ ಎಂದು ಅಡ್ವೋಕೇಟ್ ಜನರಲ್ ಕೂಡ ಸಲಹೆ ನೀಡಿದ್ದರಿಂದ ಸಂಪುಟದಲ್ಲೂ ಚರ್ಚೆ ನಡೆಸಿಲ್ಲ. ಸಿಎಂ ಉದ್ದೇಶಿತ ಸುದ್ದಿಗೋಷ್ಟಿಯನ್ನೂ ರದ್ದು ಮಾಡಲಾಯಿತು.

    ಸಂಪುಟ ಸಭೆ ಬಳಿಕ ಮಾತನಾಡಿದ ಸಚಿವ ಮಾಧುಸ್ವಾಮಿ, ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಲು ಕೆಲ ಅಂಶಗಳ ಅಧ್ಯಯನ ನಡೆಸಬೇಕಿದೆ. ಈ ಕಾರಣಕ್ಕೆ ಶಿಫಾರಸು ಮುಂದೂಡಿದ್ದೇವೆ ಅಷ್ಟೇ. ಇದರಲ್ಲಿ ಕೇಂದ್ರದ ಪಾತ್ರವಿಲ್ಲ. ಸಂಪುಟ ಸರ್ಜರಿ ವಿಳಂಬಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು. ಸಚಿವ ಸೋಮಣ್ಣ ಸಹ ಡ್ಯಾಮೇಜ್ ಕಂಟ್ರೋಲ್ ಪ್ರಯತ್ನ ನಡೆಸಿದರು. ದೆಹಲಿ ನಾಯಕರೇನು ಮಧ್ಯ ಪ್ರವೇಶ ಮಾಡಿಲ್ಲ. ಸಮುದಾಯಕ್ಕೂ ಆಶಾ ಭಂಗ ಆಗಿಲ್ಲ ಎಂದರು.

    ಸಿಎಂ ಪ್ಲಾನ್ ಏನು?
    ಸದ್ಯ ಹಿಂದುಳಿದ ವರ್ಗ 3ಬಿ ಅಡಿಯಲ್ಲಿ ಶೇ.5ರಷ್ಟು ಮೀಸಲಾತಿ ಇದೆ. ವೀರಶೈವ ಲಿಂಗಾಯತ ಸೇರಿ 42 ಉಪ ಜಾತಿಗಳಿಗೆ ಮೀಸಲಾತಿ ಅನ್ವಯವಾಗಲಿದೆ. ಹೀಗಾಗಿ 2(ಎ)ಗೆ ಸೇರಿಸುವಂತೆ ವೀರಶೈವ ಮುಖಂಡರು ಒತ್ತಡ ಹೇರಿದ್ದರು. ಆದರೆ 2(ಎ)ಗೆ ಸೇರಿಸುವ ಬದಲು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಲು ಯೋಜನೆ ರೂಪಿಸಲಾಗಿತ್ತು. ಈ ಮೂಲಕ ರಾಜ್ಯ ಮೀಸಲಾತಿ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡದಿರಲು ಪ್ಲಾನ್ ಮಾಡಲಾಗಿತ್ತು.

    ದಾಳ ಉರುಳಲಿಲ್ಲ ಏಕೆ?
    ಸಿಎಂ ಯಡಿಯೂರಪ್ಪ ನಡೆಯಿಂದ ಆರ್‍ಎಸ್‍ಎಸ್‍ಗೆ ಶಾಕ್ ಆಗಿದೆ. ಹೀಗಾಗಿ ಆರ್‍ಎಸ್‍ಎಸ್ ಕೂಡಲೇ ಹೈಕಮಾಂಡ್ ಗಮನಕ್ಕೆ ತಂದಿದೆ. ಪಕ್ಷ, ಸಂಘದ ಅಜೆಂಡಾದಲ್ಲಿ ಇಲ್ಲದ ವಿಚಾರ ಇದು. ಮೀಸಲಾತಿಯಂತಹ ಪ್ರಮುಖ ವಿಚಾರ ಚರ್ಚೆ ನಡೆದ ಬಳಿಕ ಅನುಷ್ಠಾನವಾಗಬೇಕು. ಈಗ ಲಿಂಗಾಯತರಿಗೆ ಓಬಿಸಿ ಸ್ಥಾನಮಾನ ಕೊಟ್ಟರೆ ಮುಂದೆ ಬೇರೆ ಜಾತಿಗಳು ಪ್ರಶ್ನಿಸಬಹುದು. ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿಯಲು ಹೇಳಿ ಎಂದು ಬಿಜೆಪಿ ಹೈಕಮಾಂಡ್‍ಗೆ ಆರ್‍ಎಸ್‍ಎಸ್ ಪ್ರಮುಖರು ನಿರ್ದೇಶಿಸಿದ್ದಾರೆ.

    ಈ ಬೆನ್ನಲ್ಲೇ ಖುದ್ದು ಅಖಾಡಕ್ಕೆ ಇಳಿದ ಗೃಹ ಸಚಿವ ಅಮಿತ್ ಶಾ, ಬೆಳಗ್ಗೆ ಸಿಎಂ ಯಡಿಯೂರಪ್ಪಗೆ ತುರ್ತು ಕರೆ ಮಾಡಿ, ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ. ಅಲ್ಲದೆ ಯಾವುದೇ ನಿರ್ಣಯ ಕೈಗೊಳ್ಳದಂತೆ ಸೂಚಿಸಿದ್ದಾರೆ. ಇತ್ತ ಶಿಫಾರಸು ವಿಚಾರವಾಗಿ ಎಜಿ ಆಕ್ಷೇಪ ವ್ಯಕ್ತಪಡಿಸಿ, ಇನ್ನಷ್ಟು ಅಧ್ಯಯನ ಅಗತ್ಯತೆ, ಕಾನೂನು ವ್ಯಾಪ್ತಿ ಪರಿಶೀಲನೆ ಹಿನ್ನೆಲೆ ಮುಂದೂಡಲು ಸಲಹೆ ನೀಡಿದ್ದಾರೆ.

    ಬಿಎಸ್‍ವೈ ಮುಂದಿರುವ ಸವಾಲು
    ವೀರಶೈವ ಲಿಂಗಾಯತರನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸುವ ಬೇಡಿಕೆಗೆ ಬಿಜೆಪಿ ಹೈಕಮಾಂಡ್ ಅಸ್ತು ಎನ್ನದೇ ಇರಬಹುದು. ಅಲ್ಲದೆ ಓಬಿಸಿ ವಿಚಾರದಲ್ಲಿ ಸೈಲೆಂಟಾಗಿರುವಂತೆ ಸೂಚಿಸಬಹುದು. ಇದರಿಂದ ವೀರಶೈವ ಲಿಂಗಾಯತರು ಹೋರಾಟ ಆರಂಭಿಸುತ್ತಾರೆ. ವೀರಶೈವ ಲಿಂಗಾಯತರನ್ನು ಮನವರಿಕೆ ಮಾಡುವ ಸವಾಲು ಎದುರಾಗಲಿದೆ. ಬಳಿಕ ಸಮುದಾಯ ಓಲೈಕೆ ತಂತ್ರವೇ ತಿರುಗುಬಾಣ ಆಗಬಹುದು.

    ನಿರ್ಧಾರದ ಕುರಿತು ಸಿಎಂ ಹಿಂದೆ ಸರಿಯುತ್ತಿದ್ದಂತೆ ವೀರಶೈವ ಲಿಂಗಾಯತ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿದ್ದು, ಇವತ್ತು ಸಿಹಿ ಸುದ್ದಿ ನಿರೀಕ್ಷೆಯಲ್ಲಿದ್ದ ಸಮುದಾಯ ಶಾಕ್ ಆಗಿದೆ. ಕೇಂದ್ರದ ಒತ್ತಡಕ್ಕೆ ಮಣಿದ ಸಿಎಂ ವಿರುದ್ಧ ವೀರಶೈವ ಸ್ವಾಮೀಜಿಗಳು ಸಿಟ್ಟಾಗಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಪಂಚಮಸಾಲಿ ಮಠದ ಜಯಮೃತ್ಯುಂಜಯ ಸ್ವಾಮೀಜಿ, ಸಿಎಂ ವಿರುದ್ಧ ಗುಡುಗಿದ್ದಾರೆ. ನಿಮ್ಮ ರಾಜಕೀಯ ನಮಗೆ ಗೊತ್ತಿಲ್ಲ. ನಮ್ಮ ಬೇಡಿಕೆ ಈಡೇರಲೇಬೇಕು. ನಾಳೆಯೊಳಗೆ ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಅಂತಿಮ ನಿರ್ಧಾರ ತೆಗೆದುಕೊಳ್ಳಲೇಬೇಕು. ಇಲ್ಲದಿದ್ದರೆ ಕೂಡಲಸಂಗಮದಿಂದ ಹೋರಾಟ ತೀವ್ರಗೊಳಿಸುತ್ತೇವೆ. ಒಂದು ತಿಂಗಳು ಪಾದಯಾತ್ರೆ ನಡೆಸಿ ಡಿಸೆಂಬರ್ 23ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.

    ಇದರಿಂದ ಸಿಎಂ ಇಕ್ಕಟ್ಟಿಗೆ ಸಿಲುಕಿದಂತೆ ಕಂಡು ಬಂದಿದೆ. ಇನ್ನು ವೀರಶೈವ ಲಿಂಗಾಯತರಿಗೆ ಓಬಿಸಿ ಸ್ಥಾನಮಾನ ನೀಡದಿದ್ದರೆ ರಾಜ್ಯದಲ್ಲಿ ಬೆಂಕಿ ಹತ್ತಬಹದು ಹುಷಾರ್ ಎಂದು ಕಲಬುರಗಿಯ ಸಾರಂಗ ಮಠದ ಶ್ರೀಗಳು ಎಚ್ಚರಿಸಿದ್ದಾರೆ. ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ನೋಡಿದರೆ ರಾಜ್ಯದಲ್ಲಿ ಬಿಜೆಪಿ ನಾಮಾವಶೇಷ ಆಗುತ್ತೆ ಎಂದು ಬಿಜೆಪಿ ಹೈಕಮಾಂಡ್‍ಗೆ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಸಿಲು ಸಚಿವರು, ಶಾಸಕರು ನಿರಾಕರಿಸಿದ್ದಾರೆ.

  • ವೀರಶೈವ ಲಿಂಗಾಯತ ಪ್ರಾಧಿಕಾರ ರಚನೆ ಅಚ್ಚರಿ ತಂದಿದೆ: ಸಿದ್ದಗಂಗಾ ಶ್ರೀ

    ವೀರಶೈವ ಲಿಂಗಾಯತ ಪ್ರಾಧಿಕಾರ ರಚನೆ ಅಚ್ಚರಿ ತಂದಿದೆ: ಸಿದ್ದಗಂಗಾ ಶ್ರೀ

    ತುಮಕೂರು: ವೀರಶೈವ ಲಿಂಗಾಯತ ಪ್ರಾಧಿಕಾರ ರಚನೆ ಮಾಡಿರುವುದು ನನಗೆ ಅಚ್ಚರಿ ತಂದಿದೆ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.

    ಸಿದ್ದಗಂಗಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಧಿಕಾರ ರಚನೆ ನನಗೆ ಆಶ್ಚರ್ಯ ಎನಿಸುತ್ತದೆ. ಜಾತಿಗೊಂದು ಪ್ರಾಧಿಕಾರ ರಚನೆ ಮಾಡುತ್ತಾ ಹೋದರೆ ಅದಕ್ಕೆ ಮಿತಿನೇ ಇರಲ್ಲ. ಇದರ ಬದಲು ಎಲ್ಲಾ ಸಮಾಜ ಜಾತಿಯಲ್ಲಿ ಇದ್ದಂತಹ ಹಿಂದುಳಿದವರು ಹಾಗೂ ಆರ್ಥಿಕವಾಗಿ ಹಿಂದುಳಿದವರು ಇದ್ದಾರೆ. ಅಂಥವರಿಗೆ ಹೆಚ್ಚು ಒತ್ತುಕೊಡುವ ಕೆಲಸ ಸರ್ಕಾರ ಮಾಡಿದರೆ ಒಳ್ಳೆಯದು ಎಂದು ಸಲಹೆ ನೀಡಿದರು.

    ಎಲ್ಲಾ ಸಮಾಜದಲ್ಲೂ ತುಂಬಾ ಬಡವರಿದ್ದಾರೆ. ಬಡತನದ ಶ್ರೇಣಿ ಹೆಚ್ಚಿದೆ. ಆರ್ಥಿಕವಾಗಿ ಕಷ್ಟದಲ್ಲಿದ್ದವರಿಗೆ ಸರ್ಕಾರ ಹೆಚ್ಚು ಒತ್ತು ಕೊಡಬೇಕು. ಸರ್ಕಾರ ಒತ್ತು ಕೊಡುತ್ತಿದೆ. ಈ ನಡುವೆ ಕೆಲ ಬೆಳವಣಿಗೆಗಳು ನಡೀತಿದೆ. ಇಡೀ ರಾಜ್ಯದ ಅಭಿವೃದ್ಧಿಗೆ ಇಡೀ ಸರ್ಕಾರ ಇರೋದು ಎಂದು ಅಸಮಾಧಾನ ಹೊರಹಾಕಿದರು.

    ಆರ್ಥಿಕವಾಗಿ ಹಿಂದುಳಿದವರಿಗೆ ಉದ್ಯೋಗದಲ್ಲಿ ಅವಕಾಶ ಕೊಡುವ ವ್ಯವಸ್ಥೆ ಕಲ್ಪಿಸಿಕೊಟ್ಟರೆ ತುಂಬಾ ಸಂತೋಷ. ಒಂದು ಜಾತಿ ಪ್ರಾಧಿಕಾರ ಮಾಡಿದರೆ ಮುಂದು ಪ್ರತಿಯೊಬ್ಬರೂ ಕೇಳುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆಗೆ ಸಿಎಂ ಆದೇಶ

    ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಬೆನ್ನಲ್ಲೇ ವೀರಶೈವ ಲಿಂಗಾಯತ ಸಮುದಾಯದ ನಾಯಕರು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆ ಮಾಡುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಒತ್ತಡ ಹೇರಿದ್ದರು. ಈ ಒತ್ತಡಕ್ಕೆ ಮಣಿದ ಯಡಿಯೂರಪ್ಪನವರು ಇಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆ ಮಾಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಿದ್ದಾರೆ.

  • ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆಗೆ ಸಿಎಂ ಆದೇಶ

    ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆಗೆ ಸಿಎಂ ಆದೇಶ

    ಬೆಂಗಳೂರು: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆಗೆ ಸಿಎಂ ಯಡಿಯೂರಪ್ಪ ಅವರು ಆದೇಶ ಮಾಡಿದ್ದಾರೆ.

    ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಬೆನ್ನಲ್ಲೇ ವೀರಶೈವ ಲಿಂಗಾಯತ ಸಮುದಾಯದ ನಾಯಕರು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆ ಮಾಡುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಒತ್ತಡ ಹೇರಿದ್ದರು. ಈ ಒತ್ತಡಕ್ಕೆ ಮಣಿದ ಯಡಿಯೂರಪ್ಪನವರು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆ ಮಾಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಿದ್ದಾರೆ.

    ರಾಜ್ಯದಲ್ಲೀಗ ಪ್ರಾಧಿಕಾರ ಮತ್ತು ಮೀಸಲು ಪಾಲಿಟಿಕ್ಸ್ ಜೋರಾಗ್ತಿದೆ. ಬೈ ಎಲೆಕ್ಷನ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುತ್ತಲೇ, ವೀರಶೈವ ಲಿಂಗಾಯತರು ಧ್ವನಿ ಮುನ್ನಲೆಗೆ ಬಂದಿದೆ. ವೀರಶೈವ ಲಿಂಗಾಯತ ಸಮುದಾಯದ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ಮಾಡಬೇಕೆಂದು ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ಸೋಮಣ್ಣ, ಬಿಸಿ ಪಾಟೀಲ್, ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರು ಅವರಿದ್ದ ನಿಯೋಗ ಮುಖ್ಯಮಂತ್ರಿಗೆ ಮನವಿ ಮಾಡಿದೆ.

    ಜೊತೆಗೆ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ ನಂತರ ವೀರಶೈವ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಯುವ ಘಟಕದ ರಾಜ್ಯಾಧಕ್ಷರು ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು. ನಮ್ಮ ಸಮಾಜದ ಕಡು ಬಡವರು, ಸಮಾಜದ ಹಿಂದುಳಿದ ವರ್ಗಕ್ಕೆ ಮತ್ತು ಯುವಕರಿಗೆ ಸಹಾಯ ಆಗಬೇಕು. ಹೀಗಾಗಿ ವೀರಶೈವ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವಂತೆ ಆಗ್ರಹಿಸಿದ್ದರು.

    ಬೆಳಗಾವಿ ಬಸವ ಕಲ್ಯಾಣ ಉಪ ಚುನಾವಣೆ ಘೋಷಣೆಗೂ ಮುನ್ನವೇ, ಮರಾಠ ಸಮುದಾಯ ಓಲೈಸುವ ಸಲುವಾಗಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ಸಿಎಂ ಬಿಎಸ್‍ವೈ ಆದೇಶ ಹೊರಡಿಸಿದ್ದರು. ಅಲ್ಲದೇ 50 ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದ್ದಾರೆ. ರಾಜ್ಯ ಸರ್ಕಾರದ ಈ ತೀರ್ಮಾನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಕನ್ನಡ ಪರ ಸಂಘಟನೆಗಳು ಡಿಸೆಂಬರ್ 5ರಂದು ಕರ್ನಾಟಕ ಬಂದ್‍ಗೆ ಕರೆಕೊಟ್ಟಿದೆ.