Tag: ವೀರಶೈವ ಮಹಾಸಭಾ

  • ಕ್ಯಾಬಿನೆಟ್‍ಗೂ ಮುನ್ನವೇ ವೀರಶೈವ ಮುಖಂಡರ ಸಭೆ: ಶಾಮನೂರು ಶಿವಶಂಕರಪ್ಪ

    ಕ್ಯಾಬಿನೆಟ್‍ಗೂ ಮುನ್ನವೇ ವೀರಶೈವ ಮುಖಂಡರ ಸಭೆ: ಶಾಮನೂರು ಶಿವಶಂಕರಪ್ಪ

    ದಾವಣಗೆರೆ: ಕ್ಯಾಬಿನೆಟ್‍ಗೂ ಮುನ್ನವೇ ಬೆಂಗಳೂರಿನಲ್ಲಿ ವೀರಶೈವ ಲಿಂಗಾಯತ ಮಹಾಸಭಾ (Veerashaiva Lingayat Mahasabha) ಮುಖಂಡರ ಸಭೆ ನಡೆಯಲಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ (Shamanuru Shivashankarappa) ತಿಳಿಸಿದ್ದಾರೆ.

    ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಜಾತಿ ಜನಗಣತಿ ವರದಿ (Caste Census Report) ಸರ್ಕಾರ ಬಿಡುಗಡೆ ವಿಚಾರವಾಗಿ ಮಾತನಾಡಿದರು. ಈ ವೇಳೆ ಕ್ಯಾಬಿನೆಟ್ ಸಭೆಗೂ ಮುನ್ನವೇ ವೀರಶೈವ ಲಿಂಗಾಯತ ಮುಖಂಡರ ಸಭೆ ನಡೆಯಲಿದೆ. ಅ.22ರ ಮಂಗಳವಾರ ಸಭೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸುದೀಪ್ ಸರ್‌ನ ನೋಡೋಕೆ ಆಗುತ್ತಿಲ್ಲ: ಲಹರಿ ವೇಲು

    ಇದರಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್ ಎಂಬ ವಿಚಾರ ಬರುವುದಿಲ್ಲ. ಲಿಂಗಾಯತ ಸಮಾಜದ ಎಲ್ಲಾ ಮುಖಂಡರು ಸೇರಿ ಸಭೆ ಮಾಡುತ್ತಿದ್ದೇವೆ. ಈ ಸಭೆ ನಡೆದೇ ನಡೆಯುತ್ತದೆ. ಇದು ನಮ್ಮ ಸಮಾಜದ ಪ್ರಶ್ನೆಯೇ ಹೊರತು ಪಕ್ಷದ ಪ್ರಶ್ನೆಯಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಗೆಲ್ಲುವ ಅಭ್ಯರ್ಥಿ ಸಿಪಿವೈ – ಬೆಲ್ಲದ್ ಬ್ಯಾಟಿಂಗ್

  • ಶೆಟ್ಟರ್‌ಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ; ವೀರಶೈವ ಮಹಾಸಭಾದಿಂದ ಸಿಎಂಗೆ ಪತ್ರ

    ಶೆಟ್ಟರ್‌ಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ; ವೀರಶೈವ ಮಹಾಸಭಾದಿಂದ ಸಿಎಂಗೆ ಪತ್ರ

    ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್‌ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ (DCM Post) ನೀಡಬೇಕೆಂದು ಆಗ್ರಹಿಸಿ ಅಖಿಲ ಭಾರತ ವೀರಶೈವ ಮಹಾಸಭಾವು (Veerashaiva Mahasabha) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಪತ್ರ ಬರೆದಿದೆ.

    ಮುಂದಿನ ಲೋಕಸಭಾ ಚುನಾವಣೆಯನ್ನು (Lok Sabha Elections) ಗಮನದಲ್ಲಿಟ್ಟುಕೊಂಡು ಶೆಟ್ಟರ್‌ (Jagadish Shettar) ಅವರಿಗೆ ಡಿಸಿಎಂ ಹುದ್ದೆ ನೀಡಬೇಕು ಎಂದು ಮಹಾಸಭಾದ ಹುಬ್ಬಳ್ಳಿ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ್‌ ಯಂಟ್ರಾವಿ, ಸಿಎಂಗೆ  ಪತ್ರ ಬರೆದಿದ್ದಾರೆ. ಇದೇ ಮಂಜುನಾಥ್ ಈ ಹಿಂದೆ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಗೆಲ್ಲಲಿದೆ ಎಂದು ರಕ್ತದಲ್ಲಿ ಪತ್ರ ಬರೆದಿದ್ದ‌ರು. ಇದನ್ನೂ ಓದಿ: ಸಂತ್ರಸ್ತ ಬಾಲಕಿ ದತ್ತು ಪಡೆಯಲು ಮುಂದಾದ ಅತ್ಯಾಚಾರ ಪ್ರಕರಣ ಭೇದಿಸಿದ ಪೊಲೀಸ್ ಅಧಿಕಾರಿ

    ಬಿಜೆಪಿಯಲ್ಲಿ ವೀರಶೈವ ಸಮಾಜವನ್ನು ಕಡೆಗಣಿಸಿದ್ದರಿಂದ ಜಗದೀಶ್‌ ಶೆಟ್ಟರ್‌ ಅವರು ಪಕ್ಷ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದರು. ಈಗ ಶೆಟ್ಟರ್‌ ಅವರ ಮೂಲಕ ಸಾಕಷ್ಟು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಸೇರಲು ಸಜ್ಜಾಗುತ್ತಿದ್ದಾರೆ. ಇದರಿಂದ ಲೋಕಸಭಾ ಚುನಾವಣೆಯಲ್ಲೂ ಗೆಲುವು ಸಾಧಿಸಬಹುದು. ಹಾಗಾಗಿ ವೀರಶೈವ ಸಮಾಜದ ಶೆಟ್ಟರ್‌ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಮಂಜುನಾಥ್‌ ಯಂಟ್ರಾವಿ ಒತ್ತಾಯಿಸಿದ್ದಾರೆ.

    ಸದ್ಯ ರಾಜ್ಯ ಕಾಂಗ್ರೆಸ್‌ನಲ್ಲಿ ಡಿಸಿಎಂ ಕೂಗಿನ ಬೆನ್ನಲ್ಲೇ ಲಿಂಗಾಯತ ಸಿಎಂ ಕೂಗು ಸಹ ಎದ್ದಿದೆ. ಲಿಂಗಾಯತ ಸಮುದಾಯಕ್ಕೂ ಡಿಸಿಎಂ‌ ಹುದ್ದೆ ನೀಡಬೇಕು ಎಂಬ ಕೂಗು ಕಾಂಗ್ರೆಸ್ ನಾಯಕರಿಂದಲೇ ಈ ಹಿಂದೆ ‌ಕೇಳಿ ಬಂದಿತ್ತು. ಈಗ ಡಿಸಿಎಂ ಆಗಿ ಏನು ಮಾಡಬೇಕು. ಆದರೆ ಸಿಎಂ ಆಗಬೇಕು ಎನ್ನುವ ಮೂಲಕ ಶಾಮನೂರು ಶಿವಶಂಕರಪ್ಪ ಲಿಂಗಾಯತ ಸಿಎಂ ಪರ ಧ್ವನಿ ಎತ್ತಿದ್ದಾರೆ. ಇದಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: Asian Games 2023: ಎದುರಾಳಿ ಪಾಕ್‌ ವಿರುದ್ಧ ಭಾರತಕ್ಕೆ ಜಯ – ಸ್ಕ್ವಾಷ್‌ನಲ್ಲಿ ಚಿನ್ನದ ಬೇಟೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೀರಶೈವ ಮಹಾಸಭಾದಲ್ಲಿ ಲಿಂಗಾಯತ ಸೇರಲ್ಲ, ಅವರೇ ಬಂದು ನಮ್ಮ ಜೊತೆ ಸೇರ್ಪಡೆಯಾಗಲಿ: ಎಸ್.ಎಂ.ಜಾಮದಾರ್

    ವೀರಶೈವ ಮಹಾಸಭಾದಲ್ಲಿ ಲಿಂಗಾಯತ ಸೇರಲ್ಲ, ಅವರೇ ಬಂದು ನಮ್ಮ ಜೊತೆ ಸೇರ್ಪಡೆಯಾಗಲಿ: ಎಸ್.ಎಂ.ಜಾಮದಾರ್

    ಬೆಂಗಳೂರು: ಲಿಂಗಾಯತರು ವೀರಶೈವ ಮಹಾಸಭಾದಲ್ಲಿ ಸೇರಲ್ಲ. ಅವರೇ ಬಂದು ನಮ್ಮ ಜೊತೆ ಸೇರಲಿ ಎಂದು ನಿವೃತ್ತ ಐಎಎಸ್ ಅಧಿಕಾರಿ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಎಸ್ ಎಂ ಜಮ್ದಾರ್ ಹೇಳಿದ್ದಾರೆ.

    ನಮ್ಮ ಪ್ರತ್ಯೇಕ ಧರ್ಮ ಹಾಗೂ ಅಲ್ಪಸಂಖ್ಯಾತ ನಿಲುವುಗಳನ್ನು ವೀರಶೈವ ಮಹಾಸಭಾದವರು ಒಪ್ಪಿದ್ದಾರೆ. ಲಿಂಗಾಯತ ಮಹಾಸಭೆ ಅಥವಾ ಲಿಂಗಾಯತ ವೀರಶೈವ ಮಹಾಸಭೆಯನ್ನು ಒಪ್ಪಿಕೊಂಡು ವೀರಶೈವ ಮಹಾಸಭಾದವರು ಬರುವುದಾದಲ್ಲಿ ಸಂತೋಷದಿಂದ ಸ್ವಾಗತ ಮಾಡುತ್ತೇವೆ. ತಾತ್ವಿಕವಾಗಿ ಸೈದ್ಧಾಂತಿಕವಾಗಿ ಒಂದಾಗುವುದಾದಲ್ಲಿ ಒಪ್ಪುತ್ತೇವೆ, ರಾಜಕೀಯ ಆಮೇಲಿನದು. ಇಲ್ಲಿಯವರೆಗೆ ಯಾವುದೇ ಸಭೆಗಳು ಆಗಿಲ್ಲ. ಅವರು ಮಾತಾಡುವುದಾದರೆ ಸ್ವಾಗತಿಸುತ್ತೇವೆ ಎಂದು ತಿಳಿಸಿದರು.

    ಧರ್ಮದ ಬಗ್ಗೆ ಅಪಪ್ರಚಾರ ಮಾಡಿದ್ದೇ ಶಾಮನೂರು ಶಿವಶಂಕರಪ್ಪ. ಪಂಚಪೀಠಗಳನ್ನ ಮುಂದೆ ಇಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡಿದ್ದು ಯಾರು ಎಂಬ ಪ್ರಶ್ನೆಗೆ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪನವರು ಉತ್ತರಿಸಬೇಕಿದೆ. ಕಾಂಗ್ರೆಸ್ ಶಾಮನೂರು ಶಿವಶಂಕರಪ್ಪರನ್ನು ಪಕ್ಷದಿಂದ ಹೊರ ಹಾಕಬೇಕಿದ್ದು, ಚುನಾವಣೆಯಲ್ಲಿ ಅವರ ಮಗನನ್ನು ಸೋಲಿಸುವ ಮೂಲಕ ಜನರು ತಕ್ಕ ಪಾಠವನ್ನು ಕಲಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ರು.

    ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಶಿಫಾರಸ್ಸನ್ನು ಒಪ್ಪಿಲ್ಲ ಎಂದು ಖಚಿತವಾದ ಅಧಿಕೃತ ಹೇಳಿಕೆ ಬಂದಿಲ್ಲ. ನಮ್ಮ ಹೋರಾಟ ರಾಜಕೀಯ ಉದ್ದೇಶವನ್ನ ಹೊಂದಿಲ್ಲ. ಈ ಹೋರಾಟಕ್ಕೆ ವೀರಶೈವ ಮಹಾಸಭಾ ಕಾರಣ. ವೀರಶೈವ ಮಹಾಸಭಾ ತಮ್ಮ ನಿಲುವನ್ನ ಬದಲಿಸಿದರೆ ನಾವು ಒಂದಾಗಲೂ ಸಿದ್ಧ ಇಲ್ಲ ಅಂದಲ್ಲಿ ಒಂದಾಗಲ್ಲ. ಪ್ರತ್ಯೇಕ ಧರ್ಮಕ್ಕಾಗಿ ನಮ್ಮ ಹೋರಾಟ ನಿಂತಿಲ್ಲ ಮುಂದುವರೆದಿದೆ. ಮೊದಲಿಗೆ ಸಾಮಾಜಿಕ ಧಾರ್ಮಿಕ ಹೋರಾಟ ಮಾಡುತ್ತೇವೆ ಆನಂತರ ರಾಜಕೀಯ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

  • ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಪ್ರಸ್ತಾವನೆಯನ್ನು 2013ರಲ್ಲಿ ತಿರಸ್ಕರಿಸಿತ್ತು ಯುಪಿಎ

    ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಪ್ರಸ್ತಾವನೆಯನ್ನು 2013ರಲ್ಲಿ ತಿರಸ್ಕರಿಸಿತ್ತು ಯುಪಿಎ

    ನವದೆಹಲಿ: ಜನಗಣತಿ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವಂತೆ ಅಖಿಲ ಭಾರತ ವೀರಶೈವ ಮಹಾಸಭಾ 2010ರಲ್ಲಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು 2013ರಲ್ಲಿ ಯಪಿಎ ಸರ್ಕಾರ ತಿರಸ್ಕರಿಸಿದ ವಿಚಾರ ಈಗ ಬೆಳಕಿಗೆ ಬಂದಿದೆ.

    ಲಿಂಗಾಯತ ಸಮುದಾಯವು 4 ಕೋಟಿಗೂ ಅಧಿಕ ಸಂಖ್ಯೆಯ ಅನುಯಾಯಿಗಳನ್ನು ಒಳಗೊಂಡಿದ್ದು, ಬೌದ್ಧ, ಸಿಖ್ ಹಾಗೂ ಜೈನ ಧರ್ಮದ ಅನುಯಾಯಿಗಳಿಗಿಂತ ಅಧಿಕ ಸಂಖ್ಯೆಯ ಅನುಯಾಯಿಗಳನ್ನು ಹೊಂದಿದೆ. ಹೀಗಾಗಿ ಜಾತಿಗಣತಿ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮವನ್ನು ಸೂಚಿಸುವ ಪ್ರತ್ಯೇಕ ಕಾಲಂ, ಸಾಲು ಹಾಗೂ ಕೋಡ್ ಸಂಖ್ಯೆ ನಮೂದಿಸಿ, ಜನಗಣತಿಯ ಅರ್ಜಿ ನಮೂನೆ ಮುದ್ರಿಸುವಂತೆ ವೀರಶೈವ ಮಹಾಸಭಾ ಕೇಳಿಕೊಂಡಿತ್ತು.

    ಈ ಮನವಿಯನ್ನು ತಿರಸ್ಕರಿಸಿದ್ದ ಕಾಂಗ್ರೆಸ್ ನೇತೃತ್ವದ ಯಪಿಎ ಸರ್ಕಾರ ವೀರಶೈವ ಮತ್ತು ಲಿಂಗಾಯತ ಸಮುದಾಯವು ಹಿಂದೂ ಧರ್ಮದ ಒಂದು ಪಂಗಡ ಎಂದು ಹೇಳಿತ್ತು. ಕೇಂದ್ರದ ಗೃಹ ಕಚೇರಿಯ ಕೋರಿಕೆಯ ಮೇರೆಗೆ ಪರಿಶೀಲನೆ ನಡೆಸಿದ್ದ ಭಾರತೀಯ ರಿಜಿಸ್ಟ್ರಾರ್ ಜನರಲ್ ಕಚೇರಿಯು 2013ರ ನವೆಂಬರ್ 14ರಂದು `ವೀರಶೈವ ಮಹಾಸಭಾದ ಪ್ರತ್ಯೇಕ ಧರ್ಮ ಸ್ಥಾನಮಾನದ ಬೇಡಿಕೆಯು ಅತಾರ್ಕಿಕವಾದದ್ದು’ ಎಂದು ಅಭಿಪ್ರಾಯಪಟ್ಟಿತ್ತು.

    ಈ ಸಂಬಂಧ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಸುದ್ದಿಗೋಷ್ಠಿ ನಡೆಸಿ, ವೀರಶೈವ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವಂತೆ 2013ರಲ್ಲಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಶಿಫಾರಸನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ತಿರಸ್ಕರಿಸಿತ್ತು ಎಂದು ಹೇಳಿದರು.

    ಕಾಂಗ್ರೆಸ್ ಸರ್ಕಾರ ರಾಜಕೀಯ ದುರುದ್ದೇಶಕ್ಕಾಗಿ ಈ ವಿಷಯವನ್ನು ಬಳಸಿಕೊಳ್ಳುವ ಮೂಲಕ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಅವರು ದೂರಿದರು .