Tag: ವೀರಕಪುತ್ರ ಶ್ರೀನಿವಾಸ್

  • ಡಾ. ವಿಷ್ಣು ಅಭಿಮಾನ ಸ್ಮಾರಕ – ಪುತ್ಥಳಿ ನಿರ್ಮಾಣಕ್ಕೆ ಚಾಲನೆ

    ಡಾ. ವಿಷ್ಣು ಅಭಿಮಾನ ಸ್ಮಾರಕ – ಪುತ್ಥಳಿ ನಿರ್ಮಾಣಕ್ಕೆ ಚಾಲನೆ

     ಡಾ. ವಿಷ್ಣುವರ್ಧನ್ (Vishnuvardhan) ಅಭಿಮಾನ ಸ್ಮಾರಕಕ್ಕೆ ಚಾಲನೆ ಸಿಕ್ಕಿದೆ. ಕೆಂಗೇರಿ (Kengeri) ಬಳಿ ಅರ್ಧ ಎಕರೆ ಜಮೀನು ಖರೀದಿಸಿರುವ ನಟ ಸುದೀಪ್, ಆ ಜಮೀನನ್ನು ವಿಷ್ಣು ಸ್ಮಾರಕ ಮಾಡಲು ಹೊರಟಿದ್ದಾರೆ. ಅದಕ್ಕೆ ವೀರಕಪುತ್ರ ಶ್ರೀನಿವಾಸ್ ಮುಂದಾಳತ್ವ ವಹಿಸಿಕೊಂಡಿದ್ದಾರೆ. ಇದೀಗ ಪುತ್ಥಳಿ ನಿರ್ಮಾಣಕ್ಕೆ ಅಡ್ವಾನ್ಸ್ ಕೊಡುವ ಮೂಲಕ ಕೆಲಸಕ್ಕೆ ಚಾಲನೆ ನೀಡಲಾಗಿದೆ.

    ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿಗಳು ಅತಿ ದೊಡ್ಡ ಪ್ಲಾನ್ ಮಾಡಿದ್ದಾರೆ. ಅಭಿಮಾನ್ ಸ್ಟುಡಿಯೋದಲ್ಲಿದ್ದ (Abhiman Studio) ದಾದಾ ಸಮಾಧಿಯನ್ನು ಇತ್ತೀಚೆಗೆ ತೆರವುಗೊಳಿಸಲಾಗಿತ್ತು. ಇದೀಗ ಸೆಪ್ಟೆಂಬರ್ 18ರಂದು ವಿಷ್ಣುವರ್ಧನ್ ಹುಟ್ಟುಹಬ್ಬದ ದಿನವೇ ಸ್ಮಾರಕ ನಿರ್ಮಾಣಕ್ಕೆ ಅಡಿಗಲ್ಲು ಹಾಕಲು ಅಭಿಮಾನಿಗಳು ಮುಂದಾಗಿದ್ದಾರೆ. ಸೆಪ್ಟೆಂಬರ್ 18ರಂದು ಅಮೃತ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ಇದೇ ದಿನದಂದು ಮಹತ್ವದ ಕೆಲಸಕ್ಕೆ ದಾದಾರ ಫ್ಯಾನ್ಸ್ ಮುಂದಾಗುತ್ತಿದ್ದಾರೆ.  ಇದನ್ನೂ ಓದಿ: ಮೈಸೂರು ಸ್ಯಾಂಡಲ್ ಸೋಪ್‌ ಪ್ರಚಾರಕ್ಕೆ 48.88 ಕೋಟಿ ತಮನ್ನಾಗೆ 6.20 ಕೋಟಿ, ಯಾರಿಗೆ ಎಷ್ಟು?

    ಕಿಚ್ಚನಿಂದ ಅನಾವರಣ
    ಸೆಪ್ಟೆಂಬರ್ 2ರಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ. ಹೇಳಿಕೇಳಿ ಕಿಚ್ಚ ವಿಷ್ಣುದಾದಾರ ಅಪ್ಪಟ ಅಭಿಮಾನಿ. ಸುದೀಪ್ ಅವರ ಹುಟ್ಟುಹಬ್ಬದಂದೇ ಯಜಮಾನರ ಸ್ಮಾರಕದ ಬ್ಲ್ಯೂಪ್ರಿಂಟ್ ನ್ನು ಸ್ವತಃ ಕಿಚ್ಚ ಅನಾವರಣ ಮಾಡಲಿದ್ದಾರೆ. ಸೆಪ್ಟೆಂಬರ್ 18ರಂದು ದಾದಾ ಬರ್ತಡೇ ದಿನವೇ ಸ್ಮಾರಕಕ್ಕೆ ಅಡಿಗಲ್ಲು ಹಾಕಲಾಗುವುದು. ಕೆಂಗೇರಿ ಬಳಿ ನಿರ್ಮಾಣ ಆಗುವ ಸ್ಮಾರಕ, ಅಭಿಮಾನ್ ಸ್ಟುಡಿಯೋ ಪುಣ್ಯಭೂಮಿಗೆ ಸಮ ಅಲ್ಲ ಅನ್ನುವುದನ್ನು ವೀರಕಪುತ್ರ ಅವರು ತಿಳಿಸಿದ್ದಾರೆ. ಇದನ್ನೂ ಓದಿಇದೇ 28 ರಂದು ಬೆಂಗಳೂರಿನಲ್ಲಿ ಮದುವೆಯಾಗಲಿದ್ದಾರೆ ಅನುಶ್ರೀ

    ಈ ವೇಳೆ ಮಾತನಾಡಿದ ವೀರಕಪುತ್ರ ಶ್ರೀನಿವಾಸ್ ಮಾತನಾಡಿ, ಅಮೃತವರ್ಷ ಆಚರಿಸಲು ಮೂರು ವರ್ಷದಿಂದ ಪ್ಲಾನ್ ಮಾಡಿಕೊಳ್ಳುತ್ತಿದ್ದೇವೆ. ಅದೇ ದಿನದಂದು ಸ್ಮಾರಕ ಕೆಲಸ ನಿರ್ಮಾಣ ಕೆಲಸ ಆರಂಭಿಸುತ್ತಿದ್ದೇವೆ. ಸೆಪ್ಟೆಂಬರ್ 2ರಂದು ಕಿಚ್ಚ ಸುದೀಪ್ ಸರ್ ಬರ್ತಡೇ ದಿನದಂದು ಸ್ಮಾರಕ ಹೇಗಿರಲಿದೆ ಎಂಬ ಮಾಡೆಲ್ ಪರಿಚಯಿಸುತ್ತೇವೆ. ಸೆಪ್ಟೆಂಬರ್ 18ಕ್ಕೆ ಸ್ಮಾರಕಕ್ಕೆ ಅಡಿಗಲ್ಲು ಹಾಕುತ್ತೇವೆ. ಇದು ಪುಣ್ಯಭೂಮಿಗೆ ಸಮ ಎಂದು ವಾದ ಮಾಡಲು ಹೋಗುವುದಿಲ್ಲ. ಮೈಸೂರಿನಲ್ಲಿರುವ ಸ್ಮಾರಕಕ್ಕೆ ಪ್ಯಾರೆಲ್ ಎಂದು ಹೇಳುವುದಿಲ್ಲ. ಇದು ಅಸಂಖ್ಯಾತ ಭಾವನೆ ಬೆಸೆದ ಜಾಗ ಇದು. ಪುಣ್ಯಭೂಮಿ ಉಳಿಸಿಕೊಳ್ಳುತ್ತೇವೆ. ಅದಕ್ಕಾಗಿ ಹೋರಾಟ ಮಾಡುತ್ತೇವೆ. ಕುಟುಂಬದವರು ನಿನ್ನೆ ಹೇಳಿದ್ದಾರೆ. ನೀವೆಲ್ಲರೂ ನಿರ್ಧಾರ ಮಾಡಿಕೊಂಡು ಬನ್ನಿ ಎಂದಿದ್ದಾರೆ. ಅದಕ್ಕಾಗಿ ರೂಪುರೇಷೆ ಸಿದ್ದ ಪಡಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ದಾದಾ ಅವರ ದರ್ಶನ ಕೇಂದ್ರ ಮಾಡುತ್ತೇವೆ. ಅದು ಅರ್ಥಪೂರ್ಣ ಕೆಲಸಕ್ಕೆ ವೇದಿಕೆಯಾಗಲಿದೆ ಎಂಬುದನ್ನು ಸೆಪ್ಟೆಂಬರ್ 2ಕ್ಕೆ ಮಾಹಿತಿ ನೀಡುತ್ತೇನೆ ಎಂದರು.

    ಯಜಮಾನರ ಮಹೋತ್ಸವ
    ಸಾಹಸ ಸಿಂಹ ವಿಷ್ಣುವರ್ಧನ್ ಅವರ ಯಜಮಾನರ ಅಮೃತ ಮಹೋತ್ಸವನ್ನ ಒಂದು ದಿನ ಮಾಡೋಕೆ ಪ್ಲಾನ್ ಮಾಡಲಾಗಿದೆ. ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಈ ಸಂಭ್ರಮ ಮಾಡಲಾಗುತ್ತಿದೆ. ಈ ಒಂದು ಅಮೃತ ಮಹೋತ್ಸವದಲ್ಲಿ ಇಡೀ ಇಂಡಸ್ಟ್ರಿ ಭಾಗಿ ಆಗಲಿದೆ ಅಂತಲೂ ಹೇಳಬಹುದು.

  • ವಿಷ್ಣುವರ್ಧನ್ ಪುಣ್ಯಭೂಮಿ ಉಳಿವಿನ ಹೋರಾಟಕ್ಕೆ ಕಿಚ್ಚನ ಬೆಂಬಲ

    ವಿಷ್ಣುವರ್ಧನ್ ಪುಣ್ಯಭೂಮಿ ಉಳಿವಿನ ಹೋರಾಟಕ್ಕೆ ಕಿಚ್ಚನ ಬೆಂಬಲ

    ನ್ನಡ ಸಿನಿಮಾ ರಂಗದ ಹೆಸರಾಂತ ನಟ ವಿಷ್ಣುವರ್ಧನ್ (Vishnuvardhan) ಅವರ ಸಮಾಧಿ ಜಾಗವನ್ನುಉಳಿಸಿಕೊಳ್ಳುವ ನಿಟ್ಟಿನಲ್ಲಿ ಡಾ.ವಿಷ್ಣು ಸೇನಾ ಸಮಿತಿಯು ವೀರಕಪುತ್ರ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಡಿ.17ರಂದು ಬೃಹತ್ ಹೋರಾಟವನ್ನು ಹಮ್ಮಿಕೊಂಡಿದೆ. ರಾಜ್ಯದ ಮೂಲೆ ಮೂಲೆಗಳಿಂದ ಅಂದು ಡಾ.ವಿಷ್ಣು ಸೇನಾ ಸಮಿತಿಯ ಸದಸ್ಯರು ಮತ್ತು ವಿಷ್ಣುವರ್ಧನ್ ಅವರ ಅಭಿಮಾನಿಗಳು ಹೋರಾಟದಲ್ಲಿ ಭಾಗಿಯಾಗಲಿದ್ದಾರೆ.

    ಈ ಹೋರಾಟಕ್ಕೆ ಈಗಾಗಲೇ ಬಹುತೇಕ ಕನ್ನಡಪರ ಸಂಘಟನೆ ಬೆಂಬಲ ಸೂಚಿಸಿವೆ. ಜೊತೆಗೆ ನಾನಾ ಸಂಘಟನೆಗಳು ಕೈ ಜೋಡಿಸಿವೆ. ಇದೀಗ ಕಿಚ್ಚ ಸುದೀಪ್ ಕೂಡ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ವಿಷ್ಣುಸೇನಾ ಸಮಿತಿ ವೀರಕಪುತ್ರ ಶ್ರೀನಿವಾಸ್ (Veerakaputra Srinivas)  ಅವರು ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಹೋರಾಟಕ್ಕೆ ಕಿಚ್ಚ (Kiccha Sudeep) ಬೆಂಬಲ ನೀಡಿರುವುದಾಗಿ ತಿಳಿಸಿದ್ದಾರೆ.

    ಪುಣ್ಯಭೂಮಿ ಉಳಿಸಿಕೊಳ್ಳಲು ಏನೆಲ್ಲಾ ಮಾಡಬಹುದೋ ಅದೆಲ್ಲವನ್ನೂ ಮಾಡುವೆ. ನಾನೂ ನಿಮ್ಮಲ್ಲೊಬ್ಬ ಎಂದು ಭಾವಿಸಿ ಮುನ್ನೆಡೆಯಿರಿ ಎಂದು ಸುದೀಪ್ ಹೇಳಿರುವುದಾಗಿ ವೀರಕಪುತ್ರ ಶ್ರೀನಿವಾಸ್ ಬರೆದುಕೊಂಡಿದ್ದಾರೆ. ನಮ್ಮ ಬೇಡಿಕೆ ನ್ಯಾಯವಿದ್ದಾಗ ಜಗವೂ ನ್ಯಾಯದ ಪರವೇ ನಿಲ್ಲುತ್ತದೆ ಎನ್ನುವ ಆತ್ಮವಿಶ್ವಾಸದ ಪದಗಳನ್ನು ಅವರು ಬರೆದುಕೊಂಡಿದ್ದಾರೆ.

     

    ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣುವರ್ಧನ್ ಅವರ ಸಮಾಧಿಯನ್ನು ನೆಲಸಮ ಮಾಡುವ ಹುನ್ನಾರ ನಡೆದಿದೆ ಎಂದು ವಿಷ್ಣು ಸೇನಾ ಸಮಿತಿ ಆರೋಪಿಸಿದೆ. ಇದರ ವಿರುದ್ಧವೇ ಅವರು ಪ್ರತಿಭಟನೆಗೆ ಮುಂದಾಗಿದ್ದಾರೆ. ರವಿವಾರದಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯನ್ನೂ ಹಮ್ಮಿಕೊಂಡಿದ್ದಾರೆ. ಈ ಮೂಲಕ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ಹೋರಾಟಕ್ಕೆ ಕಿಚ್ಚನ ಬೆಂಬಲ ಆನೆ ಬಲ ಬಂದಂತಾಗಿದೆ.

  • ಡಾ.ವಿಷ್ಣು ಪುಣ್ಯಭೂಮಿಗಾಗಿ ಬೃಹತ್ ಪ್ರತಿಭಟನೆ: ಅಭಿಮಾನಿಗಳ ಆಕ್ರೋಶ

    ಡಾ.ವಿಷ್ಣು ಪುಣ್ಯಭೂಮಿಗಾಗಿ ಬೃಹತ್ ಪ್ರತಿಭಟನೆ: ಅಭಿಮಾನಿಗಳ ಆಕ್ರೋಶ

    ಕನ್ನಡದ ಹೆಸರಾಂತ ನಟ ಡಾ.ವಿಷ್ಣುವರ್ಧನ್ (Vishnuvardhan) ಅವರ ಸಮಾಧಿ ವಿವಾದ ಮತ್ತಷ್ಟು ತಾರಕಕ್ಕೇರಿದೆ. ಮೈಸೂರಿಗೆ ಸ್ಮಾರಕವನ್ನು ಶಿಫ್ಟ್ ಮಾಡಿರುವ ಹಿನ್ನೆಲೆಯಲ್ಲಿ ಅವರ ಸಮಾಧಿ ಸ್ಥಳವನ್ನು ತೆರವು ಮಾಡಲು ನಿರ್ಧರಿಸಲಾಗಿತ್ತು. ಈ ವಿವಾದ ಕೋರ್ಟ್ ಮೆಟ್ಟಿಲು ಕೂಡ ಏರಿತ್ತು. ಈಗ ಮತ್ತೆ ಅಭಿಮಾನಿಗಳ ಮತ್ತು ಅಭಿಮಾನ ಸ್ಟುಡಿಯೋ ಮಾಲೀಕರ ನಡುವೆ ಮತ್ತೊಂದು ಸುತ್ತಿನ ಸಮರ ಶುರುವಾಗುತ್ತಿದೆ. ಈ ಕುರಿತಂತೆ ಅಭಿಮಾನಿಗಳು ಮೊನ್ನೆ ಸಭೆ ಸೇರಿ ಬೃಹತ್ ಪ್ರತಿಭಟನೆ (Protest) ಮಾಡಲು ನಿರ್ಧರಿಸಿದ್ದಾರೆ. ಈ ಕುರಿತಂತೆ ವಿಷ್ಣು ಸೇನಾ ಸಮಿತಿ ಅಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ್ (Veerakaputra Srinivas) ಅವರ ಬರೆದ ಪತ್ರ ಇಲ್ಲಿದೆ.

    ಮೇರು ನಟ ಡಾ.ವಿಷ್ಣುವರ್ಧನ್‌ ಅವರು ಅಗಲಿ 14 ವರ್ಷಗಳಾದವು. ಆದರೆ ಇಂದಿಗೂ ಅವರ ಅಂತ್ಯಸಂಸ್ಕಾರಗೊಂಡ ಜಾಗವನ್ನು ಅಭಿವೃದ್ದಿಪಡಿಸುವ ಕೆಲಸವನ್ನು ಯಾವುದೇ ಸರ್ಕಾರ ಮಾಡಿಲ್ಲ. ವಾಸ್ತವದಲ್ಲಿ ಹಿರಿಯ ಕಲಾವಿದ ಬಾಲಕೃಷ್ಣ ಅವರಿಗೆ ಸರ್ಕಾರ ಅನುದಾನವಾಗಿ ನೀಡಿರುವ ಜಾಗವೇ ಅಭಿಮಾನ್‌ ಸ್ಟುಡಿಯೋ.  ಕನ್ನಡಿಗರು ಚಿತ್ರರಂಗದ ಕೆಲಸಗಳಿಗೆ ಮದರಾಸಿಗೆ ಹೋಗುವುದನ್ನು ತಪ್ಪಿಸಬೇಕು ಎಂದು ಕನಸು ಹೊತ್ತು ಬಾಲಣ್ಣನವರು ಸರ್ಕಾರದ ಬಳಿ ಇಪ್ಪತ್ತು ಎಕರೆ ಜಾಗವನ್ನು 99 ವರುಷಕ್ಕೆ ಅನುದಾನವಾಗಿ ಪಡೆದು ಅಭಿಮಾನ್‌ ಸ್ಟುಡಿಯೋ ನಿರ್ಮಿಸಿದ್ದರು. ಆದರೆ ಅವರ ಅಗಲಿಕೆಯ ನಂತರ 2004 ರಲ್ಲಿ ಅವರ ಮಕ್ಕಳು ಅದರಲ್ಲಿ ಹತ್ತು ಎಕರೆ ಜಾಗವನ್ನು ಮಾರಾಟ ಮಾಡಿ, ಸರ್ಕಾರಿ ಜಮೀನನ್ನು ದುರುಪಯೋಗಪಡಿಸಿಕೊಂಡಿದ್ದರು. ಈ ಕಾರಣದಿಂದ ಹಿಂದಿನ ಜಿಲ್ಲಾಧಿಕಾರಿ ಶಂಕರ್‌ ಅವರು ಅಭಿಮಾನ್‌ ಸ್ಟುಡಿಯೋ ಮುಟ್ಟುಗೋಲಿಗೆ ಆದೇಶಿಸಿದ್ದರು. ಆಗ ಬಾಲಕೃಷ್ಣ ಅವರ ಕುಟುಂಬಸ್ಥರು ನ್ಯಾಯಾಲಯದಲ್ಲಿ ತಡೆಯಾಜ್ಞೆಯನ್ನು ತಂದಿದ್ದರು.

    ಈ ನಡುವೆ, ಡಾ.ವಿಷ್ಣುವರ್ಧನ್‌ ಅವರ ಸ್ಮಾರಕವು ಮೈಸೂರಿಗೆ ಸ್ಥಳಾಂತರಗೊಂಡಿತು. ಆದರೆ ಅಭಿಮಾನಿಗಳು ಸ್ಮಾರಕ ಎಲ್ಲೇ ಆದರೂ ಅಂತ್ಯಸಂಸ್ಕಾರಗೊಂಡ ಜಾಗದಲ್ಲಿಯೇ ಪುಣ್ಯಭೂಮಿ ಇರಬೇಕು ಎಂದು ಹಠವಿಡಿದು, ಪ್ರತಿವರ್ಷದ ಹುಟ್ಟುಹಬ್ಬ ಮತ್ತು ಪುಣ್ಯಸ್ಮರಣೆಯನ್ನು ಅತ್ಯಂತ ಅದ್ದೂರಿಯಾಗಿ ಅಭಿಮಾನ್‌ ಸ್ಟುಡಿಯೋದ ಡಾ.ವಿಷ್ಣು ಪುಣ್ಯಭೂಮಿಯಲ್ಲಿ ಆಚರಿಸುತ್ತಾ ಬರುತ್ತಿದ್ದಾರೆ.

    ಆದರೆ, ಈಗ ಅಭಿಮಾನ್‌ ಸ್ಟುಡಿಯೋದ ಮಾಲೀಕರು ಅಭಿಮಾನಿಗಳಿಗೆ ಒಳಪ್ರವೇಶಿಸಲು ನಿರ್ಬಂಧಗಳನ್ನು ವಿಧಿಸುವುದರ ಜೊತೆಗೆ, ಪ್ರತಿವರ್ಷದ ಹುಟ್ಟುಹಬ್ಬ ಮತ್ತು ಪುಣ್ಯಸ್ಮರಣೆಗೆ ಹಲವಾರು ತೊಂದರೆಗಳನ್ನು  ನೀಡುತ್ತಿದ್ದಾರೆ. ಈ ಕುರಿತಾಗಿ ಮಾನ್ಯ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್‌ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್‌ ತಂಗಡಗಿ ಅವರನ್ನು ಭೇಟಿಮಾಡಿ ಅಹವಾಲನ್ನು ಸಲ್ಲಿಸಲಾಗಿದೆ.  ಒಬ್ಬೇ ನಟನಿಗೆ ಎರಡೆರಡು ಕಡೆ ಸ್ಮಾರಕ, ಪುಣ್ಯಭೂಮಿ ಮಾಡುವುದು ಸರ್ಕಾರಕ್ಕೆ ಕಷ್ಟವಾದರೆ, ಆ ಜಮೀನಿಗೆ ತಗಲುವ ಮತ್ತು ಪುಣ್ಯಭೂಮಿ ಅಭಿವೃದ್ಧಿಗೆ ಬೇಕಾಗುವ ಹಣವನ್ನು ಅಭಿಮಾನಿಗಳೇ ನೀಡುವುದಾಗಿ ತಿಳಿಸಿರುತ್ತೇವೆ.

    ಆದರೂ ಯಾವುದೇ ಸೂಕ್ತಪ್ರತಿಕ್ರಿಯೆಗಳು ಅವರಿಂದ ಬರದೇ ಇರುವುದರಿಂದ ಇದೇ ಡಿಸೆಂಬರ್‌ 17 ರಂದು ಡಾ.ವಿಷ್ಣುವರ್ಧನ್‌ ಅಭಿಮಾನಿ ಸಂಘಗಳ ಒಕ್ಕೂಟದ ವತಿಯಿಂದ ಬೃಹತ್‌ ಪ್ರತಿಭಟನೆಯನ್ನು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೆಳಿಗ್ಗೆ ಹತ್ತರಿಂದ ಸಂಜೆ ಆರು ಗಂಟೆ ತನಕ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ನಾಡಿನ ಎಲ್ಲಾ ಕನ್ನಡಪರ ಸಂಘಟನೆಗಳು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕಲಾವಿದರ ಸಂಘ ಆದಿಯಾಗಿ ಡಾ.ವಿಷ್ಣುವರ್ಧನ್‌ ಅವರ ಒಡನಾಡಿಗಳೆಲ್ಲರೂ ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ಅಂದು ಸುಮಾರು ಐವತ್ತು ಸಾವಿರ ಜನ ಸೇರುವ ನಿರೀಕ್ಷೆ ಇದೆ.

    ಒಂದು ವೇಳೆ ಈ ಪ್ರತಿಭಟನೆಗೂ ಸರ್ಕಾರ ಸ್ಪಂದಿಸದೇ ಹೋದಲ್ಲಿ, ದೆಹಲಿಯಲ್ಲಿ ನಾವು ಹೋರಾಟವನ್ನು ಮುಂದುವರಿಸಲಿದ್ದೇವೆ ಜೊತೆಗೆ ಸರ್ಕಾರದ ಮಂತ್ರಿಗಳು ಭಾಗವಹಿಸುವ ಎಲ್ಲಾ ಕಾರ್ಯಕ್ರಮಗಳಲ್ಲಿ ಕಪ್ಪುಬಾವುಟ ಪ್ರದರ್ಶನಕ್ಕೆ ಮುಂದಾಗಲಿದ್ದೇವೆ ಎಂದು ವಿಷ್ಣು ಸೇನಾ ಸಮಿತಿ ಮಾಧ್ಯಮ ಪ್ರಕಟಣೆ ನೀಡಿದೆ. ಪ್ರತಿಭಟನೆ ಸಲುವಾಗಿ ಸಮಾಲೋಚನೆ ಸಭೆಯನ್ನು ಇದೇ ಭಾನುವಾರ ವೀರಕಪುತ್ರ ಶ್ರೀನಿವಾಸ ನೇತೃತ್ವದಲ್ಲಿ ಕರೆಯಲಾಗಿತ್ತು. ಈ ಸಭೆಗೆ ಐನೂರಕ್ಕೂ ಹೆಚ್ಚು ಸೇನಾನಿಗಳು ಹಾಜರಿದ್ದರು.

  • ಮೇರುನಟ ಡಾ.ವಿಷ್ಣು ಅವರ 52ನೇ ಪುತ್ಥಳಿ ಅನಾವರಣ

    ಮೇರುನಟ ಡಾ.ವಿಷ್ಣು ಅವರ 52ನೇ ಪುತ್ಥಳಿ ಅನಾವರಣ

    ನ್ನಡದ ಮೇರುನಟ ಡಾ. ವಿಷ್ಣುವರ್ಧನ್ ಅವರ ಪುತ್ಥಳಿಗಳು ರಾಜ್ಯಾದ್ಯಂತ ತಲೆಯೆತ್ತಿವೆ. ವಿಷ್ಣು ಅಭಿಮಾನಿಗಳು ರಾಜ್ಯದ ನಾನಾ ಕಡೆ ಅವರ ಪುತ್ಥಳಿಯನ್ನು (Putthali) ಪ್ರತಿಷ್ಠಾಪಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ (Bangalore) ಕರುನಾಡ  ತಿಲಕ ಡಾ.ವಿಷ್ಣು ಕನ್ನಡ ಅಭಿಮಾನಿಗಳ‌ ಸಂಘದ ವತಿಯಿಂದ ಗಿರಿನಗರ ಹಿರಣ್ಣನ ಗುಟ್ಟೆ ಸರ್ಕಲ್ ನಲ್ಲಿ  ಡಾ‌.ವಿಷ್ಣು ಸೇನಾ ಸಮಿತಿ ರಾಜ್ಯಾಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ್ (Veerakaputra Srinivas) ಅವರ  ಉಪಸ್ಥಿತಿಯಲ್ಲಿ ಶಾಸಕ ಎಂ ಕೃಷ್ಣಪ್ಪ (M. Krishnappa) ಅಮೃತ ಹಸ್ತದಿಂದ ಪುತ್ಥಳಿ ಅನಾವರಣವಾಯಿತು

    ವಿಶೇಷ ಏನಂದ್ರೆ ಇದು ವೀರಕಪುತ್ರ ಶ್ರೀನಿವಾಸ್ ಅವರು ವೈಯಕ್ತಿಕವಾಗಿ ಡಾ.ವಿಷ್ಣುವರ್ಧನ್ ಅವರ ಪುತ್ಥಳಿಯನ್ನು ಕೊಡುಗೆಯಾಗಿ ನೀಡುತ್ತಿರುವ 52 ನೇ ಪುತ್ಥಳಿ ಆಗಿರುವುದು ವಿಶೇಷ. ವಿಷ್ಣು ಅವರ ಹೆಸರಿನಲ್ಲಿ ಸಾಕಷ್ಟು ಕೆಲಸಗಳನ್ನು ಮಾಡುತ್ತಾ ಬಂದಿರುವ ವೀರಕಪುತ್ರ ಶ್ರೀನಿವಾಸ್ ಸಾಕಷ್ಟು ಕಡೆ ಪುತ್ಥಳಿಯನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಮೂಲಕ ಅಭಿಮಾನ ಮೆರೆದಿದ್ದಾರೆ. ಇದನ್ನೂ ಓದಿ:‘ಕಬಾಲಿ’ ನಿರ್ಮಾಪಕ ಅರೆಸ್ಟ್ ಬೆನ್ನಲ್ಲೇ ಡ್ರಗ್ಸ್ ಪ್ರಕರಣದಲ್ಲಿ ನಟಿ ಅಶು ರೆಡ್ಡಿ ಹೆಸರು

    ಮೊನ್ನೆಯಷ್ಟೇ ವಿಷ್ಣುವರ್ಧನ್ (Dr. Vishnuvardhan) ಹೆಸರಿನಲ್ಲಿ ದಾಖಲೆ (Record) ಯೊಂದು  ಸೃಷ್ಟಿಯಾಗಿತ್ತು. ವೀರಕಪುತ್ರ ಶ್ರೀನಿವಾಸ್ ಮತ್ತು ವಿಷ್ಣು ಸೇನಾನಿಗಳು ವಿಷ್ಣುವರ್ಧನ್ ಹುಟ್ಟು ಹಬ್ಬದಂದು ಕಟೌಟ್ ಜಾತ್ರೆ ಮಾಡಿದ್ದರು. ನೆಚ್ಚಿನ ನಟನ 52 ಕಟೌಟ್‌ಗಳನ್ನು ಅಂದು ಬೆಂಗಳೂರಿನ ಬಾಲಣ್ಣ ಸ್ಟುಡಿಯೋದಲ್ಲಿರುವ ವಿಷ್ಣುವರ್ಧನ್ ಅವರ ಸ್ಮಾರಕದ ಮುಂದೆ ನಿಲ್ಲಿಸಿದ್ದರು. ಇದನ್ನು ಪರಿಗಣಿಸಿ ಏಷ್ಯಾ ಬುಕ್ ಮತ್ತು ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಅದು ದಾಖಲಾಗಿತ್ತು.

    ಡಾ. ವಿಷ್ಣುವರ್ಧನ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 50 ವರ್ಷಗಳಾದ ಹಿನ್ನಲೆಯಲ್ಲಿ ಅವರ 50 ಸೇನಾನಿಗಳು ಡಾ. ವಿಷ್ಣು ಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ ಅವರ ನೇತೃತ್ವದಲ್ಲಿ 2022ರ ಸೆಪ್ಟೆಂಬರ್‌ 18 ರಂದು ಬೆಂಗಳೂರಿನ ಡಾ. ವಿಷ್ಣು ಪುಣ್ಯಭೂಮಿಯಲ್ಲಿ 51 ಬೃಹತ್‌ ಕಟೌಟ್‌ಗಳನ್ನು ಸ್ಥಾಪಿಸಿ ‘ಕಟೌಟ್‌ ಜಾತ್ರೆ’ ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಆ ಕಟೌಟ್‌ಗಳಿಗೆ ಬೃಹತ್‌ ಹಾರಗಳನ್ನು ಸಹ ಹಾಕಿಸಿದ್ದರು. ಪೊಲೀಸ್‌ ಇಲಾಖೆಯ ಪ್ರಕಾರ ಎರಡೂವರೆ ಲಕ್ಷ ಕನ್ನಡಿಗರು ಈ ಕಟೌಟ್‌ ಜಾತ್ರೆಯಲ್ಲಿ ಭಾಗವಹಿಸಿದ್ದರು.

     

    ಅಂದೇ ಈ ಕಟೌಟ್‌ ಜಾತ್ರೆಯನ್ನು ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ದಾಖಲಿಸಲು ಮನವಿಯನ್ನು ಸಲ್ಲಿಸಲಾಗಿತ್ತು. ಆ ಸಂಸ್ಥೆಯು ನಮ್ಮ ದಾಖಲೆ ಸಂಬಂಧ ಅನೇಕ ಹಂತದ ಪರೀಕ್ಷೆಗಳನ್ನು ನಡೆಸಿದರಲ್ಲದೆ, ಖುದ್ದಾಗಿ ಸ್ಥಳ ಪರಿಶೀಲನೆಯನ್ನು ಸಹ ಮಾಡಿದ್ದರು. ನಂತರ ಕಟೌಟ್ ಜಾತ್ರೆಯು ಏಷ್ಯಾ ಬುಕ್‌ ಆಫ್‌ ‌ ರೆಕಾರ್ಡ್‌ನಲ್ಲಿ ದಾಖಲೆಯಾಗಿದೆ.

  • ಡಾ.ವಿಷ್ಣು ಹೆಸರಿನಲ್ಲಿ ಕ್ರಿಕೆಟ್ : ಜೂ 24, 25ಕ್ಕೆ ಯಜಮಾನ ಪ್ರೀಮಿಯರ್ ಲೀಗ್

    ಡಾ.ವಿಷ್ಣು ಹೆಸರಿನಲ್ಲಿ ಕ್ರಿಕೆಟ್ : ಜೂ 24, 25ಕ್ಕೆ ಯಜಮಾನ ಪ್ರೀಮಿಯರ್ ಲೀಗ್

    ಸ್ಯಾಂಡಲ್ ವುಡ್ ನಲ್ಲಿ ಕ್ರಿಕೆಟ್ (Cricket) ಪಂದ್ಯ ಶುರು ಮಾಡಿದ ಕೀರ್ತಿ ಡಾ.ವಿಷ್ಣುವರ್ಧನ್ (Vishnuvardhan) ಅವರಿಗೆ ಸಲ್ಲುತ್ತದೆ. ಸಿನಿಮಾ ತಂಡಗಳನ್ನು ಕಟ್ಟಿಕೊಂಡು ವಿಷ್ಣು ಸದಾ ಕ್ರಿಕೆಟ್ ಆಡುತ್ತಿದ್ದರು. ವೃತ್ತಿಪರ ಕ್ರಿಕೆಟ್ ಆಟಗಾರರ ಜೊತೆಯೂ ಅವರು ಪಂದ್ಯಾವಳಿಗಳನ್ನು ಆಡಿದ್ದೂ ಇದೆ. ಆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಅವರ ಅಭಿಮಾನಿಗಳು ಕೂಡ ‘ಯಜಮಾನ ಪ್ರೀಮಿಯರ್ ಲೀಗ್’ (Yajamana Premier League) ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜನೆ ಮಾಡುತ್ತಾ ಬಂದಿದ್ದಾರೆ.

    ಈ ಬಾರಿಯ ಪಂದ್ಯಾವಳಿಯು ಇದೇ ಜೂನ್ 24 ಹಾಗೂ 25 ರಂದು ಬಿಐಸಿಸಿ ಇನ್ಫಿನಿಟಿ ಔಟ್ ಡೋರ್ ಗ್ರೌಂಡ್ ಮಾಗಡಿ ರಸ್ತೆ, ಬೆಂಗಳೂರಿನಲ್ಲಿ ನಡೆಯಲಿದೆ. ಈ ಮಾಹಿತಿಯನ್ನು ಮೊನ್ನೆಯಷ್ಟೇ ಕಿಚ್ಚ ಸುದೀಪ್ (Sudeep) ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ನಮ್ಮ ಉದ್ದೇಶಗಳು ಸರಿಯಾಗಿದ್ದರೆ, ಅವು ನಮ್ಮ ನಂತರವೂ ಜೀವಂತವಾಗಿರುತ್ತವೆ ಎಂಬುದಕ್ಕೆ ಉದಾಹರಣೆ ಈ ಯಜಮಾನ ಪ್ರೀಮಿಯರ್ ಲೀಗ್’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಶರ್ವಾನಂದ್ ರಿಸೆಪ್ಷನ್ ಸಂಭ್ರಮದಲ್ಲಿ ಸಿನಿ ತಾರೆಯರ ದಂಡು

    ಡಾ.ವಿಷ್ಣು ಸೇನಾ ಸಮಿತಿಯು ಹಮ್ಮಿಕೊಂಡಿರುವ ಎರಡನೇ ಸೀಸನ್ ಇದಾಗಿದ್ದು, ವೀರಕಪುತ್ರ ಶ್ರೀನಿವಾಸ್ (Veerkaputra Srinivas) ನೇತೃತ್ವದಲ್ಲಿ ವಿಷ್ಣು ಸೇನಾನಿಗಳು ಪಂದ್ಯಗಳನ್ನು ಆಡಲಿದ್ದಾರೆ. ವಿಷ್ಣುವರ್ಧನ್ ಹೆಸರಿನಲ್ಲಿ ವೀರಕಪುತ್ರ ಶ್ರೀನಿವಾಸ್ ಅವರು ಹತ್ತಾರು ಕೆಲಸಗಳನ್ನು ಮಾಡುತ್ತಾ ಬಂದಿದ್ದು, ಅದಕ್ಕೆ ಸೇರ್ಪಡೆ ಈ ಯಜಮಾನ ಕಪ್ ಆಗಿದೆ. ಜನಪರ ಕೆಲಸಗಳ ಜೊತೆಗೆ ಕ್ರೀಡಾ ಲೋಕಕ್ಕೂ ಉತ್ತೇಜನ ಕೊಡುವ ನಿಟ್ಟಿನಲ್ಲಿ ಈ ಪಂದ್ಯಾವಳಿ ಆಯೋಜನೆಗೊಂಡಿದೆ.

    ಯಜಮಾನರ ಹೆಸರಿನಲ್ಲಿ ಕ್ರಿಕೆಟ್ ಆಡುವುದು ಎಲ್ಲರಿಗೂ ಸಂಭ್ರಮ ತರುವ ವಿಚಾರ. ಮೊದಲಿನಿಂದಲೂ ಯಜಮಾನರು ಕಲೆ, ಸಂಗೀತ, ಕ್ರಿಕೆಟ್ ಗೆ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿದ್ದಾರೆ. ಸ್ವತಃ ಅವರು ಕೂಡ ಕ್ರಿಕೆಟ್ ಆಡುತ್ತಿದ್ದರು. ಅವರ ನೆನಪಿನಲ್ಲಿ ನಾವೆಲ್ಲ ಕ್ರಿಕೆಟ್ ಆಡುತ್ತೇವೆ. ಇದಕ್ಕೆ ಸ್ಯಾಂಡಲ್ ವುಡ್ ನ ಅನೇಕ ಕಲಾವಿದರು ಮತ್ತು ತಂತ್ರಜ್ಞರು ಜೊತೆಯಾಗುತ್ತಿದ್ದಾರೆ. ಪ್ರತಿ ವರ್ಷವೂ ಇದನ್ನು ಆಯೋಜನೆ ಮಾಡುತ್ತೇವೆ ಎನ್ನುವುದು ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರ ಮಾತು.

  • ಮಗನಿಗೆ ಸಾಹಸಸಿಂಹ ವಿಷ್ಣುವರ್ಧನ್ ಹೆಸರಿಟ್ಟ ವಿಷ್ಣು ಅಭಿಮಾನಿ

    ಮಗನಿಗೆ ಸಾಹಸಸಿಂಹ ವಿಷ್ಣುವರ್ಧನ್ ಹೆಸರಿಟ್ಟ ವಿಷ್ಣು ಅಭಿಮಾನಿ

    ಮ್ಮ ನೆಚ್ಚಿನ ನಟನ ಹೆಸರಿನಲ್ಲಿ ನಾನಾ ರೀತಿಯ ಕೆಲಸಗಳನ್ನು ಮಾಡಿದ ಉದಾಹರಣೆಗಳು ಇವೆ. ಅದರಲ್ಲೂ ಡಾ.ವಿಷ್ಣು ಸೇನಾ ಸಮಿತಿಯು ಪ್ರತಿ ವರ್ಷವೂ ಹತ್ತಾರು ಜನಪರ ಕೆಲಸಗಳನ್ನು ಮಾಡುತ್ತಲೇ ಇರುತ್ತದೆ. ಇದೀಗ ವಿಷ್ಣು ಅಭಿಮಾನಿಯೊಬ್ಬರು (fan) ತಮ್ಮ ಪುತ್ರನಿಗೆ ನೆಚ್ಚಿನ ನಟ ಹೆಸರನ್ನು ಇಟ್ಟಿದ್ದಾರೆ. ಆ ಹೆಸರನ್ನು ನೋಂದಾವಣೆ ಕೂಡ ಮಾಡಿದ್ದಾರೆ. ಈ ಮೂಲಕ ಡಾ.ವಿಷ್ಣುವರ್ಧನ್ (Vishnuvardhan) ಅವರನ್ನು ಸದಾ ಜೀವಂತವಾಗಿರಿಸುವ ಕೆಲಸ ಮಾಡಿದ್ದಾರೆ.

    ಈ ವಿಷಯವನ್ನು ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ (Veerakaputra Srinivas) ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ‘ಅಭಿಮಾನಿಯ ಅಭಿಮಾನ ತಾಯಿ ಪ್ರೀತಿಯಷ್ಟೇ ಶ್ರೇಷ್ಠ ಎಂಬ ನನ್ನ ಅಭಿಪ್ರಾಯ ಮತ್ತೊಮ್ಮೆ ನಿಜವೆಂದು ಸಾಬೀತಾಯಿತು. ನಿನ್ನ ಅಭಿಮಾನಕ್ಕೆ ಶರಣು ಗೆಳೆಯ’ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ, ಅಭಿಮಾನಿ ಮಗುವಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: ಧ್ವನಿಯಿಂದ ಎದುರಿಸಿದ ಟೀಕೆ ಬಗ್ಗೆ ಬಾಯ್ಬಿಟ್ಟ ರಾಣಿ ಮುಖರ್ಜಿ

    ಅಂದಹಾಗೆ ರವಿ ದೇವರಮನಿ (Ravi Devarmani) ಹೆಸರಿನ ಈ ಅಭಿಮಾನಿ ಯಾದಗಿರಿ ಜಿಲ್ಲೆಯವರು. ತಮ್ಮ ಮಗನಿಗೆ ವಿಷ್ಣುವರ್ಧನ ದೇವರಮನಿ ಎಂದು ಹೆಸರಿಟ್ಟಿದ್ದಾರೆ. ಚಿಕ್ಕಂದಿನಿಂದಲೂ ವಿಷ್ಣುವರ್ಧನ್ ಅಭಿಮಾನಿಯಾಗಿರುವ ರವಿ, ವಿಷ್ಣು ಹೆಸರಿನಲ್ಲಿ ನಾನಾ ಕೆಲಸಗಳನ್ನು ಮಾಡುತ್ತಲೇ ಇರುತ್ತಾರಂತೆ. ನೆಚ್ಚಿನ ನಟ ತಮ್ಮ ಮನೆಯಲ್ಲಿ ಸದಾ ಓಡಾಡುತ್ತಿರಲಿ ಎನ್ನುವ ಕಾರಣಕ್ಕಾಗಿ ಮಗನಿಗೆ ವಿಷ್ಣು ಹೆಸರು ಇಟ್ಟಿದ್ದಾರೆ.

  • ವಿಷ್ಣುವರ್ಧನ್ ಗೆ ‘ಕರ್ನಾಟಕ ರತ್ನ’: ಭರವಸೆ ನೀಡಿದ ಸಿಎಂ ಬೊಮ್ಮಾಯಿ

    ವಿಷ್ಣುವರ್ಧನ್ ಗೆ ‘ಕರ್ನಾಟಕ ರತ್ನ’: ಭರವಸೆ ನೀಡಿದ ಸಿಎಂ ಬೊಮ್ಮಾಯಿ

    ನ್ನಡದ ಹೆಸರಾಂತ ನಟ ವಿಷ್ಣುವರ್ಧನ್ (Vishnuvardhan) ಈ ನಾಡಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಹಾಗಾಗಿ ಅವರ ಅಭಿಮಾನಿಗಳು ವಿಷ್ಣುವರ್ಧನ್ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುವಂತೆ ಒತ್ತಾಯ ಮಾಡಿದ್ದಾರೆ. ಅಭಿಮಾನಿಗಳ ಭಾವನೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತೇವೆ. ಮುಂದಿನ ದಿನಗಳಲ್ಲಿ ಕರ್ನಾಟಕ ರತ್ನ (Karnataka Ratna) ನೀಡುವ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಭರವಸೆ ನೀಡಿದ್ದಾರೆ.

    ಇಂದು ಮೈಸೂರಿನಲ್ಲಿ ನಡೆದ ವಿಷ್ಣು ಸ್ಮಾರಕ ಉದ್ಘಾಟನೆ ವೇಳೆ ಮಾತನಾಡಿದ ಸಿಎಂ, ‘ವಿಷ್ಣುವರ್ಧನ್ ಅವರ ಕಲೆ, ಸಾಹಸ, ಚಿತ್ರರಂಗದಲ್ಲಿ ಮಾಡಿರೋ ಸಾಧನೆ ಕಣ್ಣ ಮುಂದೆ ಇದೆ. ನಾನು ಒಬ್ಬ ವಿಷ್ಣುವರ್ಧನ್ ಅಭಿಮಾನಿಯಾಗಿ ಇಲ್ಲಿ ಬಂದಿದ್ದೇನೆ. 70 ರ ದಶಕದಲ್ಲಿ ನಾಗರಹಾವಿನ ಹೊಸ ನಾಯಕ, ಅವ್ರ ಚಿತ್ರ ಬಂದಿತ್ತು. ಮೊದಲ ಸಲಾ ನೋಡಿದವ್ರು ಖಂಡಿತವಾಗಿ ವಿಷ್ಣುವರ್ಧನ್ ಫ್ಯಾನ್ ಆಗ್ತಾ ಇದ್ದರು. ನಾಗರಹಾವು ಚಿತ್ರದ ಮೂಲಕ ನಾಡಿನ ಜನಮನ ಗೆದ್ದವರು ಡಾ. ವಿಷ್ಣುವರ್ಧನ್. ಎಲ್ಲಾ ರೀತಿಯ ಪಾತ್ರಗಳನ್ನು ಮಾಡಿ ಸಾಹಸ ಸಿಂಹನಾಗಿ ಕರ್ನಾಟಕದಲ್ಲಿ ಮೆರೆದವರು’ ಎಂದು ಕೊಂಡಾಡಿದರು. ಕರ್ನಾಟಕ ರತ್ನ ಕುರಿತು ಪ್ರಸ್ತಾಪ ಮಾಡಿದರು. ಇದನ್ನೂ ಓದಿ: ನಟ ನಂದಮೂರಿ ತಾರಕರತ್ನ ಸ್ಥಿತಿ ಗಂಭೀರ : ಮಾಜಿ ಸಿಎಂ ಚಂದ್ರಬಾಬು ನಾಯ್ಡು ಭೇಟಿ

    ನಿನ್ನೆಯಷ್ಟೇ ಡಾ.ವಿಷ್ಣುಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ (Veerakaputra Srinivas), ಸರಕಾರದ ವಿರುದ್ಧ ಹರಿಹಾಯ್ದಿದ್ದರು. ಬೇರೆ ನಟರಿಗೆ ಕೊಡುವ ಗೌರವವನ್ನು ವಿಷ್ಣುವರ್ಧನ್ ಅವರಿಗೆ ಯಾಕೆ ಕೊಡುತ್ತಿಲ್ಲವೆಂದು ಖಾರವಾಗಿಯೇ ಪ್ರಶ್ನೆ ಮಾಡಿದ್ದರು. ಅಲ್ಲದೇ, ಕರ್ನಾಟಕ ರತ್ನ ಪ್ರಶಸ್ತಿಯನ್ನು ಘೋಷಿಸುವಂತೆ ಆಗ್ರಹಿಸಿದ್ದರು. ವೀರಕಪುತ್ರ ಶ್ರೀನಿವಾಸ್ ಅವರ ಬೇಡಿಕೆಗೆ ಸ್ಪಂದಿಸಿರುವ ಸಿಎಂ, ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಮಾತುಗಳನ್ನು ಆಡಿದ್ದಾರೆ.

    ಸತತ ಹದಿಮೂರು ವರ್ಷಗಳ ನಂತರ ಡಾ.ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆಯಾಗುತ್ತಿದೆ. ಕೋಟ್ಯಂತರ ಅಭಿಮಾನಿಗಳು ಹಾಗೂ ಕುಟುಂಬದ ಬಹು ದೊಡ್ಡ ಕನಸಾಗಿದ್ದ ವಿಷ್ಣು ಸ್ಮಾರಕ ನಾಳೆ ಲೋಕಾರ್ಪಣೆಯಾಗುತ್ತಿದೆ. ಈ ಬಗ್ಗೆ ವಿಷ್ಣು ಅಭಿಮಾನಿಗಳ ಪರವಾಗಿ ಡಾ.ವಿಷ್ಣು ಸೇನಾ ಸಮಿತಿ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ನಡೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಜೊತೆಗೆ ಒಂದಿಷ್ಟು ಬೇಡಿಕೆಯನ್ನೂ ಅವರು ಸರ್ಕಾರದ ಮುಂದಿಟ್ಟಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಟ ವಿಷ್ಣುವರ್ಧನ್ ಅವರಿಗೆ ‘ಕರ್ನಾಟಕ ರತ್ನ’ ಘೋಷಿಸಿ : ಸೇನಾನಿ ವೀರಕಪುತ್ರ ಶ್ರೀನಿವಾಸ್ ಆಗ್ರಹ

    ನಟ ವಿಷ್ಣುವರ್ಧನ್ ಅವರಿಗೆ ‘ಕರ್ನಾಟಕ ರತ್ನ’ ಘೋಷಿಸಿ : ಸೇನಾನಿ ವೀರಕಪುತ್ರ ಶ್ರೀನಿವಾಸ್ ಆಗ್ರಹ

    ತತ ಹದಿಮೂರು ವರ್ಷಗಳ ನಂತರ ಡಾ.ವಿಷ್ಣುವರ್ಧನ್ (Vishnuvardhan) ಸ್ಮಾರಕ ಉದ್ಘಾಟನೆಯಾಗುತ್ತಿದೆ.  ಕೋಟ್ಯಂತರ ಅಭಿಮಾನಿಗಳು ಹಾಗೂ ಕುಟುಂಬದ ಬಹು ದೊಡ್ಡ ಕನಸಾಗಿದ್ದ ವಿಷ್ಣು ಸ್ಮಾರಕ ನಾಳೆ ಲೋಕಾರ್ಪಣೆಯಾಗುತ್ತಿದೆ. ಈ ಬಗ್ಗೆ ವಿಷ್ಣು ಅಭಿಮಾನಿಗಳ ಪರವಾಗಿ ಡಾ.ವಿಷ್ಣು ಸೇನಾ ಸಮಿತಿ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್ (Veerakaputra Srinivas) ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ನಡೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ಒಂದಿಷ್ಟು ಬೇಡಿಕೆಯನ್ನೂ ಅವರು  ಸರ್ಕಾರದ ಮುಂದಿಟ್ಟಿದ್ದಾರೆ.

    ಡಾ ವಿಷ್ಣುವರ್ಧನ್ ಸ್ಮಾರಕ 13 ವರ್ಷಗಳ ನಂತರ ಲೋಕಾರ್ಪಣೆ ಆಗುತ್ತಿದೆ. ಸ್ಮಾರಕಕ್ಕಾಗಿ ನಮ್ಮ ಹೋರಾಟ, ನೋವು, ಕಾಯುವಿಕೆ ಲೆಕ್ಕಕ್ಕೆ ಇಡದಷ್ಟು. ಕುಟುಂಬದವರು ಇದಕ್ಕಾಗಿ ಸಾಕಷ್ಟು ಹೋರಾಟ ನಡೆಸಿ ಅವರಿಂದಾಗಿಯೇ ಸ್ಮಾರಕ ಮೈಸೂರಿನಲ್ಲಿ ಆಗಿದೆ. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ (Basavaraja Bommai) ಆಗಮಿಸುತ್ತಿದ್ದಾರೆ. ಚಿತ್ರರಂಗದವರನ್ನು ಕೂಡ ಕಾರ್ಯಕ್ರಮಕ್ಕೆ ಆಹ್ವಾನಿಸುವ ಕೆಲಸ ನಡೆಯುತ್ತಿದೆ. ನಟ ಸುದೀಪ್ ಅವರು ಫೆಬ್ರವರಿಯಲ್ಲಿ ಸ್ಮಾರಕಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. ಯಶ್ ಅವರಿಗೆ ಆಹ್ವಾನ ನೀಡಬೇಕಿದೆ ಎಂದು ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ. ಇದನ್ನೂ ಓದಿ: ವಿಷ್ಣುವರ್ಧನ್ ಪರಭಾಷಾ ನಟರಾ?: ಫಿಲ್ಮ್ ಚೇಂಬರ್ ವಿರುದ್ಧ ವೀರಕಪುತ್ರ ಶ್ರೀನಿವಾಸ್ ಆಕ್ರೋಶ

    ಚಿತ್ರರಂಗದ ಮೇರು ನಟ, ಪಂಚಭಾಷೆ ತಾರೆಯಾಗಿದ್ದ ವಿಷ್ಣು ಸ್ಮಾರಕ ಉದ್ಘಾಟನೆಗೆ ಅವರ ಗೆಳೆಯರಾದ ಅಕ್ಷಯ್ ಕುಮಾರ್, ಚಿರಂಜೀವಿ, ಮೋಹನ್ ಲಾಲ್, ರಜನಿಕಾಂತ್ ಸೇರಿದಂತೆ ಹಲವರನ್ನು ಸರ್ಕಾರ ಆಹ್ವಾನಿಸುತ್ತದೆ ಎಂದು ಅಂದುಕೊಂಡಿದ್ದೆವು. ಆದ್ರೆ ಆ ಕೆಲಸ ಆಗಿಲ್ಲ. ಅಭಿಮಾನಿಗಳಾಗಿ ನಮಗೆ ಇದು ಬೇಸರ ತರಿಸಿದೆ. ಬೇರೆ ನಟರ ಕಾರ್ಯಕ್ರಮಗಳಿಗೆ ನೀಡುವ ಮನ್ನಣೆಯನ್ನು ಸರ್ಕಾರ ವಿಷ್ಣು ಅವರ ಸ್ಮಾರಕ ಉದ್ಘಾಟನೆ ವಿಚಾರದಲ್ಲಿ ನೀಡುತ್ತಿಲ್ಲ.

    ಚಿತ್ರರಂಗದ ಹಿರಿಯ, ಕಿರಿಯ ಹಾಗೂ ಸ್ಟಾರ್ ನಟರುಗಳ್ಯಾರು ಕೂಡ ಸ್ಮಾರಕದ ಕುರಿತಾಗಿ ಮಾತನಾಡುತ್ತಿಲ್ಲ. ಸ್ಮಾರಕ ಉದ್ಘಾಟನೆ ವೇಳೆ ಸರ್ಕಾರ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ (Karnataka Ratna) ಪ್ರಶಸ್ತಿ ಘೋಷಿಸಬೇಕು ಜೊತೆಗೆ ಅವರ ಪುಣ್ಯಭೂಮಿ ಅಭಿವೃದ್ದಿಗೆ ಅಭಿಮಾನಿಗಳಿಗೆ ಅವಕಾಶ ಮಾಡಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸೋದಾಗಿ ವೀರಕಪುತ್ರ ಶ್ರೀನಿವಾಸ್ ಇದೇ ವೇಳೆ ತಿಳಿಸಿದರು.

    ಸ್ಮಾರಕ ಉದ್ಘಾಟನೆಯಾಗುವ ದಿನ ಮೈಸೂರಿನಿಂದ ಸ್ಮಾರಕದವರೆಗೆ ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣದಿಂದ ವಿಶೇಷ ಬಸ್ ವ್ಯವಸ್ಥೆ ಮಾಡಿಸಬೇಕು. ಬೆಂಗಳೂರಿನಿಂದ ಸ್ಮಾರಕದವರೆಗೆ 700 ವಾಹನಗಳ ಬೃಹತ್ ಜಾಥಾ ಹಮ್ಮಿಕೊಂಡಿರುವುದರಿಂದ ಅಭಿಮಾನಿಗಳಿಗೆ ಅನುಕೂಲವಾಗುವಂತೆ ಅಗತ್ಯವಿದ್ದ ಕಡೆ ಟ್ರಾಫಿಕ್ ಕ್ಲಿಯರೆನ್ಸ್ ಗೆ ಆದೇಶಿಸಬೇಕು ಎಂದು ಹಲವು ಬೇಡಿಕೆಯನ್ನು ವಿಷ್ಣು ಅಭಿಮಾನಿಗಳ ಪರವಾಗಿ ವೀರಕಪುತ್ರ ಶ್ರೀನಿವಾಸ್ ಸರ್ಕಾರದ ಮುಂದಿಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿಷ್ಣುವರ್ಧನ್ ಪರಭಾಷಾ ನಟರಾ?: ಫಿಲ್ಮ್ ಚೇಂಬರ್ ವಿರುದ್ಧ ವೀರಕಪುತ್ರ ಶ್ರೀನಿವಾಸ್ ಆಕ್ರೋಶ

    ವಿಷ್ಣುವರ್ಧನ್ ಪರಭಾಷಾ ನಟರಾ?: ಫಿಲ್ಮ್ ಚೇಂಬರ್ ವಿರುದ್ಧ ವೀರಕಪುತ್ರ ಶ್ರೀನಿವಾಸ್ ಆಕ್ರೋಶ

    ದಿಮೂರು ವರ್ಷಗಳ ಹೋರಾಟದ ಫಲವಾಗಿ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಮೈಸೂರಿನಲ್ಲಿ ತಲೆಯೆತ್ತಿದೆ. ಈ ಸಂಭ್ರಮವನ್ನು ಎಲ್ಲರಿಗಿಂತ ಮೊದಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಅದರ ಇತರ ಅಂಗಸಂಸ್ಥೆಗಳು ಆಚರಿಸಬೇಕಿತ್ತು. ಆದರೆ, ತಮಗೆ ಸಂಬಂಧವೇ ಇಲ್ಲದಂತೆ ಅವುಗಳು ಮೌನವಹಿಸಿವೆ. ವಿಷ್ಣುವರ್ಧನ್ ಅವರೇನು ಪರಭಾಷಾ ನಟರಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಡಾ.ವಿಷ್ಣುಸೇನಾ ಸಮಿತಿಯ ಅಧ್ಯಕ್ಷರ ವೀರಕಪುತ್ರ ಶ್ರೀನಿವಾಸ್. ಚೇಂಬರ್ ಈ ನಡೆಯನ್ನು ಅವರು ಖಂಡಿಸಿದ್ದಾರೆ.

    ‘ವಿಷ್ಣುವರ್ಧನ್ ಅವರ ವಿಷಯದಲ್ಲಿ ಮೊದಲಿನಿಂದಲೂ ಇಂಥದ್ದೊಂದು ಧೋರಣೆ ನಡೆದುಕೊಂಡು ಬಂದಿದೆ. ಕನ್ನಡ ಸಿನಿಮಾ ರಂಗಕ್ಕೆ ಯಜಮಾನರು ಕೊಟ್ಟ ಕೊಡುಗೆಯನ್ನು ಇವರಿಗೆಲ್ಲ ಯಾವ ರೀತಿಯಲ್ಲಿ ಅರ್ಥ ಮಾಡಿಸಬೇಕು ಎಂದು ಗೊತ್ತಾಗುತ್ತಿಲ್ಲ. ಸ್ಮಾರಕ ಉದ್ಘಾಟನೆಯನ್ನು ಸ್ವತಃ ಚಿತ್ರೋದ್ಯಮವೇ ಸಡಗರದಿಂದ ಮಾಡಬೇಕಿತ್ತು. ವಾಣಿಜ್ಯ ಮಂಡಳಿಯು ಮುಂದೆ ನಿಂತುಕೊಂಡು ಎಲ್ಲರಿಗೂ ಆಹ್ವಾನಿಸಿ, ಮೈಸೂರಿನಲ್ಲಿ ಸೇರುವಂತೆ ಮಾಡಬೇಕಿತ್ತು. ಆದರೆ, ಅದು ಆಗುತ್ತಿಲ್ಲ ಎನ್ನುವುದೇ ಬೇಸರ’ ಎನ್ನುತ್ತಾರೆ ವೀರಕಪುತ್ರ ಶ್ರೀನಿವಾಸ್.

    ಹಾಗಂತ ಅಭಿಮಾನಿಗಳು ಸುಮ್ಮನಿಲ್ಲ ಎನ್ನುವುದನ್ನೂ ಶ್ರೀನಿವಾಸ್ ಹೇಳುತ್ತಾರೆ. ಜನವರಿ 29ರಂದು ನಡೆಯಲಿರುವ ವಿಷ್ಣುವರ್ಧನ್ ಸ್ಮಾರ ಲೋಕಾರ್ಪಣೆಗೆ ಅಭಿಮಾನಿಗಳು ಸರ್ವರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದಾರೆ. ಸರಕಾರವು ಸ್ಮಾರಕ ಉದ್ಘಾಟನೆಯನ್ನು ಕೇವಲ ಸರಕಾರಿ ಕಾರ್ಯಕ್ರಮದಂತೆ ಹಮ್ಮಿಕೊಂಡಿದ್ದರೆ, ವಿಷ್ಣುಸೇನಾ ಸಮಿತಿಯ ಅಸಂಖ್ಯಾತ ಅಭಿಮಾನಿಗಳು ಜಾತ್ರೆಯ ರೀತಿಯಲ್ಲಿ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನುತ್ತಾರೆ. ಈಗಾಗಲೇ ಸರ್ವ ರೀತಿಯಲ್ಲೂ ಅಭಿಮಾನಿಗಳು ಸ್ಮಾರಕ ಲೋಕಾರ್ಪಣೆಗೆ ರೆಡಿಯಾಗಿದ್ದು, ಬೆಂಗಳೂರು ಮೈಸೂರು ರಸ್ತೆಯಲ್ಲಿ ವಿಷ್ಣುವರ್ಧನ್ ಅವರ ಕಟೌಟ್ ಗಳು ರಾರಾಜಿಸುತ್ತಿವೆ. ರಾಜ್ಯಾದ್ಯಂತ ಗೋಡೆಗಳ ಮೇಲೆ ವಿಷ್ಣುವರ್ಧನ್ ಸ್ಮಾರಕದ  ಪೋಸ್ಟರ್ ಅಂಟಿಸಲಾಗಿದೆ. ಇಷ್ಟೇ ಅಲ್ಲದೇ ಹತ್ತು ಹಲವು ಕಾರ್ಯಕ್ರಮಗಳನ್ನು ಜನವರಿ 29 ರ ಬೆಳಗ್ಗೆಯಿಂದ ವಿಷ್ಣುಸೇನಾ ಸಮಿತಿಯ ಸದಸ್ಯರು ಹಮ್ಮಿಕೊಂಡಿದ್ದಾರೆ. ಇದನ್ನೂ ಓದಿ: ನಂದಮೂರಿ ತಾರಕ ರತ್ನಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

    ವಿಷ್ಣುವರ್ಧನ್ ಅವರ ಸ್ಮಾರಕ ಉದ್ಘಾಟನೆಗೆ ವಾಹನ ಜಾಥಾ, ಕುಂಭಮೇಳ, ದೀಪೋತ್ಸವ, ಜಾನಪದ ಮೇಳ, ಕಟೌಟ್ ಜಾತ್ರೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ. ಜನವರಿ 29ರ ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಬಳಿ ಅಭಿಮಾನಿಗಳು ಒಟ್ಟಾಗಿ ಸೇರಲಿದ್ದು, ಅಲ್ಲಿಂದ 6.30ಕ್ಕೆ ವಾಹನ ಜಾಥಾ ನಡೆಯಲಿದೆ. ಬೆಂಗಳೂರು ಮೈಸೂರು ಮಧ್ಯೆ ಇರುವಂತಹ ಅಭಿಮಾನಿಗಳು ತಮ್ಮ ಊರಿನ ಹತ್ತಿರದ ಹೈವೆಗಳಲ್ಲಿ ಬಂದು ಜೊತೆಯಾಗಲಿದ್ದಾರೆ ಎಂದಿದ್ದಾರೆ.

    ಒಟ್ಟು ನೂರು ಕಟೌಟ್ ಗಳು ಸ್ಮಾರಕದ ಉದ್ಘಾಟನೆಗಾಗಿಯೇ ಸಿದ್ಧಗೊಂಡಿವೆ. ಅವುಗಳು ಬೆಂಗಳೂರಿನಿಂದ ಮೈಸೂರುವರೆಗೂ ಮತ್ತು ಸ್ಮಾರಕದ ಹತ್ತಿರವೂ ತಲೆಯೆತ್ತಿ ನಿಲ್ಲಲಿವೆ. ಈಗಾಗಲೇ ಹಲವು ಕಡೆ ದುಂಡನೆಯ ಕಟೌಟ್ ಗಳನ್ನು ನಿಲ್ಲಿಸಲಾಗಿದೆ. ಜನವರಿ 29ರಂದು ವಾಹನ ಇಲ್ಲದವರಿಗಾಗಿಯೇ ಒಟ್ಟು ಹತ್ತು ಬಸ್ ಗಳನ್ನು ಆಯೋಜನೆ ಮಾಡಲಾಗಿದೆ. ಐದು ಬಸ್ ಗಳಲ್ಲಿ ಕುಂಭ ಹೊರುವ ಮತ್ತು ದೀಪೋತ್ಸವದಲ್ಲಿ ಭಾಗಿ ಆಗುವ ಹೆಣ್ಣುಮಕ್ಕಳಿಗೆ ಮೀಸಲಿಡಲಾಗಿದೆ. ಇನ್ನೂ ಐದು ಬಸ್ ಗಳು ವಾಹನ ಇಲ್ಲದವರಿಗಾಗಿ ಕಾದಿರುತ್ತವೆ.

    ಎಲ್ಲರೂ ಮೈಸೂರಿನಲ್ಲಿ ಒಟ್ಟಾಗಿ ಅಲ್ಲಿಂದ ಮೂರು ಕೀಲೋ ಮೀಟರ್ ಜಾಥಾ ಹಮ್ಮಿಕೊಂಡು ಸ್ಮಾರಕ ತಲುಪಲಾಗುತ್ತದೆ. ಈ ಜಾಥಾದಲ್ಲಿ ವಿಷ್ಣುವರ್ಧನ್ ಅವರ ಗೀತೆಗಳು, ಜಾನಪದ ನೃತ್ಯ, ಜಾನಪದ ಕಲೆಗಳನ್ನು ಬಿಂಬಿಸುವಂತಹ ಯೋಜನೆ ಸಿದ್ಧವಾಗಿದೆ. ಕುಂಭಮೇಳದೊಂದಿಗೆ ಮಹಿಳೆಯರು ಕೂಡ ಜಾಥಾದಲ್ಲಿ ಹೆಜ್ಜೆ ಹಾಕಲಿದ್ದಾರೆ. ಜನವರಿ 29ರಂದು ಮೈಸೂರಿನಲ್ಲಿ ವಿಷ್ಣು ಜಾತ್ರೆಯೇ ನಡೆಯಲಿದೆ ಎಂದು ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಡಾ.ವಿಷ್ಣು ಸ್ಮಾರಕ ಉದ್ಘಾಟನೆಗೆ ಅಭಿಮಾನಿಗಳು ಸಜ್ಜು : 300 ವಾಹನ ಜಾಥಾ, 100 ಕಟೌಟ್, ಸಾವಿರ ದೀಪೋತ್ಸವ

    ಡಾ.ವಿಷ್ಣು ಸ್ಮಾರಕ ಉದ್ಘಾಟನೆಗೆ ಅಭಿಮಾನಿಗಳು ಸಜ್ಜು : 300 ವಾಹನ ಜಾಥಾ, 100 ಕಟೌಟ್, ಸಾವಿರ ದೀಪೋತ್ಸವ

    ನ್ನಡದ ಮೇರುನಟ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಜನವರಿ 29ರಂದು ಲೋಕಾರ್ಪಣೆ ಆಗುತ್ತಿದ್ದು, ಅಭಿಮಾನಿಗಳು ಸರ್ವರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದಾರೆ. ಸರಕಾರವು ಸ್ಮಾರಕ ಉದ್ಘಾಟನೆಯನ್ನು ಕೇವಲ ಸರಕಾರಿ ಕಾರ್ಯಕ್ರಮದಂತೆ ಹಮ್ಮಿಕೊಂಡಿದ್ದರೆ, ವಿಷ್ಣುಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಅಸಂಖ್ಯಾತ ಅಭಿಮಾನಿಗಳು ಜಾತ್ರೆಯ ರೀತಿಯಲ್ಲಿ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

    ಈಗಾಗಲೇ ಸರ್ವ ರೀತಿಯಲ್ಲೂ ಅಭಿಮಾನಿಗಳು ಸ್ಮಾರಕ ಲೋಕಾರ್ಪಣೆಗೆ ರೆಡಿಯಾಗಿದ್ದು, ಬೆಂಗಳೂರು ಮೈಸೂರು ರಸ್ತೆಯಲ್ಲಿ ವಿಷ್ಣುವರ್ಧನ್ ಅವರ ಕಟೌಟ್ ಗಳು ರಾರಾಜಿಸುತ್ತಿವೆ. ರಾಜ್ಯಾದ್ಯಂತ ಗೋಡೆಗಳ ಮೇಲೆ ವಿಷ್ಣುವರ್ಧನ್ ಸ್ಮಾರಕದ  ಪೋಸ್ಟರ್ ಅಂಟಿಸಲಾಗಿದೆ. ಇಷ್ಟೇ ಅಲ್ಲದೇ ಹತ್ತು ಹಲವು ಕಾರ್ಯಕ್ರಮಗಳನ್ನು ಜನವರಿ 29 ರ ಬೆಳಗ್ಗೆಯಿಂದ ವಿಷ್ಣುಸೇನಾ ಸಮಿತಿಯ ಸದಸ್ಯರು ಹಮ್ಮಿಕೊಂಡಿದ್ದಾರೆ. ಇದನ್ನೂ ಓದಿ: ತೀವ್ರ ಎದೆನೋವಿನಿಂದ ಬಾಲಿವುಡ್ ನಟ ಅನ್ನು ಕಪೂರ್ ಆಸ್ಪತ್ರೆಗೆ ದಾಖಲು

    ವಿಷ್ಣುವರ್ಧನ್ ಅವರ ಸ್ಮಾರಕ ಉದ್ಘಾಟನೆಗೆ ವಾಹನ ಜಾಥಾ, ಕುಂಭಮೇಳ, ದೀಪೋತ್ಸವ, ಜಾನಪದ ಮೇಳ, ಕಟೌಟ್ ಜಾತ್ರೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ. ಜನವರಿ 29ರ ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಬಳಿ ಅಭಿಮಾನಿಗಳು ಒಟ್ಟಾಗಿ ಸೇರಲಿದ್ದು, ಅಲ್ಲಿಂದ 6.30ಕ್ಕೆ ವಾಹನ ಜಾಥಾ ನಡೆಯಲಿದೆ. ಬೆಂಗಳೂರು ಮೈಸೂರು ಮಧ್ಯೆ ಇರುವಂತಹ ಅಭಿಮಾನಿಗಳು ತಮ್ಮ ಊರಿನ ಹತ್ತಿರದ ಹೈವೆಗಳಲ್ಲಿ ಬಂದು ಜೊತೆಯಾಗಲಿದ್ದಾರೆ ಎಂದಿದ್ದಾರೆ.

    ಒಟ್ಟು ನೂರು ಕಟೌಟ್ ಗಳು ಸ್ಮಾರಕದ ಉದ್ಘಾಟನೆಗಾಗಿಯೇ ಸಿದ್ಧಗೊಂಡಿವೆ. ಅವುಗಳು ಬೆಂಗಳೂರಿನಿಂದ ಮೈಸೂರುವರೆಗೂ ಮತ್ತು ಸ್ಮಾರಕದ ಹತ್ತಿರವೂ ತಲೆಯೆತ್ತಿ ನಿಲ್ಲಲಿವೆ. ಈಗಾಗಲೇ ಹಲವು ಕಡೆ ದುಂಡನೆಯ ಕಟೌಟ್ ಗಳನ್ನು ನಿಲ್ಲಿಸಲಾಗಿದೆ. ಜನವರಿ 29ರಂದು ವಾಹನ ಇಲ್ಲದವರಿಗಾಗಿಯೇ ಒಟ್ಟು ಹತ್ತು ಬಸ್ ಗಳನ್ನು ಆಯೋಜನೆ ಮಾಡಲಾಗಿದೆ. ಐದು ಬಸ್ ಗಳಲ್ಲಿ ಕುಂಭ ಹೊರುವ ಮತ್ತು ದೀಪೋತ್ಸವದಲ್ಲಿ ಭಾಗಿ ಆಗುವ ಹೆಣ್ಣುಮಕ್ಕಳಿಗೆ ಮೀಸಲಿಡಲಾಗಿದೆ. ಇನ್ನೂ ಐದು ಬಸ್ ಗಳು ವಾಹನ ಇಲ್ಲದವರಿಗಾಗಿ ಕಾದಿರುತ್ತವೆ.

    ಎಲ್ಲರೂ ಮೈಸೂರಿನಲ್ಲಿ ಒಟ್ಟಾಗಿ ಅಲ್ಲಿಂದ ಮೂರು ಕೀಲೋ ಮೀಟರ್ ಜಾಥಾ ಹಮ್ಮಿಕೊಂಡು ಸ್ಮಾರಕ ತಲುಪಲಾಗುತ್ತದೆ. ಈ ಜಾಥಾದಲ್ಲಿ ವಿಷ್ಣುವರ್ಧನ್ ಅವರ ಗೀತೆಗಳು, ಜಾನಪದ ನೃತ್ಯ, ಜಾನಪದ ಕಲೆಗಳನ್ನು ಬಿಂಬಿಸುವಂತಹ ಯೋಜನೆ ಸಿದ್ಧವಾಗಿದೆ. ಕುಂಭಮೇಳದೊಂದಿಗೆ ಮಹಿಳೆಯರು ಕೂಡ ಜಾಥಾದಲ್ಲಿ ಹೆಜ್ಜೆ ಹಾಕಲಿದ್ದಾರೆ. ಜನವರಿ 29ರಂದು ಮೈಸೂರಿನಲ್ಲಿ ವಿಷ್ಣು ಜಾತ್ರೆಯೇ ನಡೆಯಲಿದೆ ಎಂದು ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k