Tag: ವೀನೀಡ್ ಕೆಜಿಎಫ್2 ಟೀಸರ್

  • ಕೆಜಿಎಫ್-2 ಸಿನಿಮಾದ ಬಗ್ಗೆ ಟ್ರೆಂಡ್ ಆಯ್ತು ಅಭಿಮಾನಿಗಳ ಬೇಡಿಕೆ

    ಕೆಜಿಎಫ್-2 ಸಿನಿಮಾದ ಬಗ್ಗೆ ಟ್ರೆಂಡ್ ಆಯ್ತು ಅಭಿಮಾನಿಗಳ ಬೇಡಿಕೆ

    ಬೆಂಗಳೂರು: ಕೆಜಿಎಫ್-2, ಯಶ್ ಅಭಿಮಾನಿಗಳು ಮಾತ್ರವಲ್ಲದೆ ಪ್ರತಿಯೊಬ್ಬ ಸಿನಿಮಾ ಅಭಿಮಾನಿಯೂ ಬಹುನೀರಿಕ್ಷೆಯಿಂದ ಕಾಯುತ್ತಿರುವ ಸಿನಿಮಾವಾಗಿದೆ. ಸದ್ಯ ಅಭಿಮಾನಿಗಳ ಬೇಡಿಕೆಯೊಂದು ಟ್ವಿಟ್ಟರ್ ನಲ್ಲಿ ಭಾರೀ ಟ್ರೆಂಡ್ ಆಗಿದೆ.

    ಹೌದು. ಕೆಜಿಎಫ್-2 ಸಿನಿಮಾದ ಟೀಸರ್ ಬಿಡುಗಡೆ ಮಾಡುವಂತೆ ಟ್ವಿಟ್ಟರ್ ಮೂಲಕವಾಗಿ ಅಭಿಮಾನಿಗಳು ಸಿನಿಮಾ ತಂಡದ ಮುಂದೆ ಬೇಡಿಕೆ ಇಡುತ್ತಿದ್ದಾರೆ. ‘ವೀನೀಡ್ ಕೆಜಿಎಫ್2 ಟೀಸರ್’ ಹ್ಯಾಶ್‍ಟ್ಯಾಗ್‍ನೊಂದಿಗೆ ಟ್ವೀಟ್ ನ ಸುರಿಮಳೆ ಗೈದಿದ್ದಾರೆ. ಬೆಳಗ್ಗಿನಿಂದಲೇ ಈ ವಿಚಾರ ಟ್ವಿಟರ್‍ನಲ್ಲಿ ಟ್ರೆಂಡಿಂಗ್ ಆಗಿದೆ.

    https://twitter.com/RakhiYashCult/status/1319511051289849856

    ಚಾಪ್ಟರ್-2 ಅಕ್ಟೋಬರ್ 23 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಕೋವಿಡ್ 19 ಸಾಂಕ್ರಾಮಿಕ ರೋಗ ಇರುವುದರಿಂದ 2021ಕ್ಕೆ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ. ಹೀಗಾಗಿ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಿರ್ಮಾಪಕ ಕಾರ್ತಿಕ್ ಗೌಡ ಅವರಿಗೆ ಕೆಜಿಎಫ್-2 ಟೀಸರ್ ಕುರಿತು ಅಪ್‍ಡೇಟ್ಸ್ ನೀಡುವಂತೆ ಅಭಿಮಾನಿಗಳು ಕೇಳುತ್ತಿದ್ದಾರೆ.

    ಒಟ್ಟಿನಲ್ಲಿ ಚಾಪ್ಟರ್ ಒಂದನ್ನು ಪರದೆಯ ಮೇಲೆ ನೋಡಿ ಸಂಭ್ರಮಿಸಿದ ಅಭಿಮಾನಿಗಳಿಗೆ ಕೆಜಿಎಫ್-2 ಕುರಿತಾಗಿ ಬಹುನೀರಿಕ್ಷೆಯನ್ನು ಇಟ್ಟುಕೊಂಡಿದ್ದು, ಇದೀಗ ಟೀಸರ್ ಬಿಡುಗಡೆ ಮಾಡುವಂತೆ ಟ್ವೀಟ್ ಮಾಡುವ ಮೂಲಕ ಒತ್ತಾಯಿಸುತ್ತಿದ್ದಾರೆ.