Tag: ವೀಡಿಯೋ ವೈರಲ್

  • ವಿಮಾನವೇರುವ ವೇಳೆ 3 ಬಾರಿ ಎಡವಿ ಬಿದ್ದ ಅಮೆರಿಕ ಅಧ್ಯಕ್ಷ

    ವಿಮಾನವೇರುವ ವೇಳೆ 3 ಬಾರಿ ಎಡವಿ ಬಿದ್ದ ಅಮೆರಿಕ ಅಧ್ಯಕ್ಷ

    ವಾಷಿಂಗ್ಟನ್: ಅಟ್ಲಾಂಟಾಕ್ಕೆ ತೆರಳಲು ಏರ್  ಫೋರ್ಸ್ ಒನ್ ವಿಮಾನ ಏರುವ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಮೆಟ್ಟಿಲಿನಲ್ಲಿ ಮೂರು ಬಾರಿ ಎಡವಿದ ಘಟನೆ ಶುಕ್ರವಾರ ನಡೆದಿದೆ.

    ವಿಮಾನದ ಮೆಟ್ಟಿಲೇರುವ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷರು ಮುಗ್ಗರಿಸಿರುವ ವೀಡಿಯೋ ಇದೀಗ ವೈರಲ್ ಆಗಿದೆ. ತೀವ್ರವಾಗಿ ಬೀಸುತ್ತಿದ್ದ ಗಾಳಿಯ ನಡುವೆ ಆಯ ತಪ್ಪಿದ ಜೋ ಬೈಡನ್, ಆಸರೆಗಾಗಿ ಮೆಟ್ಟಿಲಿನ ಬದಿಯ ಕಂಬಿಗಳನ್ನು ಹಿಡಿದುಕೊಂಡಿದ್ದಾರೆ.

    ವೀಡಿಯೋದಲ್ಲಿ ಏನಿದೆ?
    ಮೊದಲ ಬಾರಿ ಎಡವಿದಾಗ ಹೇಗೋ ಮೇಲೆ ಎದ್ದು ಮುಂದೆ ಹೋಗಿದ್ದಾರೆ. ಮತ್ತೊಂದು ಹೆಜ್ಜೆ ಇರಿಸಿದಾಗ ಎರಡು ಬಾರಿ ಸತತವಾಗಿ ಮುಗ್ಗರಿಸಿದ್ದಾರೆ. ಅದೃಷ್ಟವಶಾತ್ ಮೆಟ್ಟಿಲಿನಿಂದ ಜಾರಿ ಅವಘಡ ಸಂಭವಿಸಿಲ್ಲ. ಮೂರನೇ ಬಾರಿ ಮುಗ್ಗರಿಸಿದಾಗ ಮೆಟ್ಟಿಲಿನ ಮೇಲೆ ಬೀಳುವಂತಾಗಿತ್ತು. ಬಳಿಕ ಎರಡೂ ಕಡೆಯ ಕಂಬಿಗಳನ್ನು ಹಿಡಿದು ಮೇಲೆ ಎದ್ದು ಮುಂದೆ ಹೋಗಿದ್ದಾರೆ.

    ಗಾಳಿ ಜೋರಾಗಿ ಬೀಸುತ್ತಿತ್ತು. ನಾನೂ ಕೂಡ ಮೆಟ್ಟಿಲು ಏರುವಾಗ ಹೆಚ್ಚೂ ಕಡಿಮೆ ಬಿದ್ದೇಬಿಟ್ಟಿದ್ದೆ. ಬೈಡನ್ ಅವರು ಶೇ.100ರಷ್ಟು ಆರಾಮಾಗಿ ಇದ್ದಾರೆ. ಯಾವ ಸಮಸ್ಯೆಯೂ ಆಗಿಲ್ಲ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೈನ್ ಜೀನ್ ಪೀರ್ರೆ ತಿಳಿಸಿದ್ದಾರೆ.

    ಪಾರ್ಲರ್‍ವೊಂದರಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯ ಕುರಿತಾಗಿ ಏಷ್ಯನ್-ಅಮೆರಿಕನ್ ಸಮುದಾಯವನ್ನು ಮುಂಡರನ್ನು ಭೇಟಿ ಮಾಡಿ ಚರ್ಚಿಸಲು ಬೈಡನ್ ಹೊರಟಿದ್ದರು. ಅಂಟ್ಲಾಟಿಕಾಕ್ಕೆ ತೆರಳುವ ವೇಳೆ ಈ ಘಟನೆ ನಡೆದಿದೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಜೋ ಬೈಡನ್ ಆರೋಗ್ಯವಾಗಿದ್ದಾರಾ ಎಂದು ಪ್ರಶ್ನಿಸುತ್ತಿದ್ದಾರೆ.

  • ವೀಡಿಯೋ: ನಿರ್ಮಾಣಹಂತದ ಕಟ್ಟಡ ಪ್ರದೇಶದಲ್ಲಿ 11 ಅಡಿ ಉದ್ದದ ಮೊಸಳೆ ಪತ್ತೆ

    ವೀಡಿಯೋ: ನಿರ್ಮಾಣಹಂತದ ಕಟ್ಟಡ ಪ್ರದೇಶದಲ್ಲಿ 11 ಅಡಿ ಉದ್ದದ ಮೊಸಳೆ ಪತ್ತೆ

    ನವದೆಹಲಿ: ನಿರ್ಮಾಣ ಹಂತದಲ್ಲಿರುವ ಕಟ್ಟಡದ ಪ್ರದೇಶದಲ್ಲಿ ಬೃಹದಾಕಾರದ ಮೊಸಳೆ ಪತ್ತೆಯಾಗಿರುವ ಘಟನೆ ಗುಜರಾತ್‍ನ ವಡೋರಾದಲ್ಲಿ ನಡೆದಿದೆ.

    ಕಟ್ಟಡ ನಿರ್ಮಾಣ ಮಾಡುತ್ತಿರುವ ಪ್ರದೇಶದಲ್ಲಿ ಮೊಸಳೆಯನ್ನು ನೋಡಿ ಕಾರ್ಮಿಕರು ತಕ್ಷಣ ವನ್ಯಜೀವಿ ಸಂರಕ್ಷಣಾ ಟ್ರಸ್ಟ್‍ಗೆ ತಿಳಿಸಿದ್ದಾರೆ. ಮೊಸಳೆ ಕಾಣಿಸಿಕೊಂಡಿರುವ ವೀಡಿಯೋ ಸಖತ್ ವೈರಲ್ ಆಗಿದೆ.

    ಮೊಸಳೆ 10 ರಿಂದ 11 ಅಡಿಯಷ್ಟು ಉದ್ದವಿದ್ದು, ಕೇಲ್‍ಪುರ್ ಪ್ರದೇಶ ಪ್ರದೇಶದ ಚರಂಡಿ ಪ್ರದೇಶದಲ್ಲಿ ಕಾಣಿಸಿಕೊಂಡಿದೆ. ಕಟ್ಟಡ ನಿರ್ಮಾಣದಲ್ಲಿ ತೊಡಗಿದ್ದ ಬಿಲ್ಡರ್ ನಮಗೆ ಕರೆಮಾಡಿ ಮೊಸಳೆ ಪತ್ತೆಯಾಗಿದೆ ಎಂದು ತಿಳಿಸಿದ್ದರು. ಮೊಸಳೆಯನ್ನು ರಕ್ಷಣೆ ಮಾಡಿ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ವನ್ಯಜೀವಿ ರಕ್ಷಣಾ ಟ್ರಸ್ಟ್‍ನ ಅಧ್ಯಕ್ಷ ಅರವಿಂದ್ ಪವಾರ್ ಹೇಳಿದ್ದಾರೆ.

  • ಮಕ್ಕಳ ಜೊತೆ ಜೂಟಾಟ ಆಡಿದ ಅದಿತಿ

    ಮಕ್ಕಳ ಜೊತೆ ಜೂಟಾಟ ಆಡಿದ ಅದಿತಿ

    ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್ ನಟಿಯಾಗಿರುವ ಮುದ್ದು ಮೊಗದ ಚೆಲುವೆ ಅದಿತಿ ಪ್ರಭುದೇವ ಶಾಲಾ ಮಕ್ಕಳ ಜೊತೆಯಲ್ಲಿ ಜೂಟಾಟ ಆಡಿದ್ದಾರೆ. ಈ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಸಖತ್ ವೈರಲ್ ಆಗಿದೆ.

    ಸರ್ಕಾರಿ ಶಾಲೆಯ ಮಕ್ಕಳ ಜೊತೆಗೆ ಒಂಟಿಕಾಲಿನ ಆಟವಾಡುತ್ತಾ ಮಕ್ಕಳ ಜೊತೆಗೆ ಸಮಯ ಕಳೆದಿದ್ದಾರೆ. ಈ ವೀಡಿಯೋವನ್ನು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಎಷ್ಟೆಲ್ಲ ನೆನಪುಗಳು ಶೂಟಿಂಗ್ ಬಿಡುವಿನ ಸಮಯದಲ್ಲಿ, ಹಳ್ಳಿ ಸೊಗಡಿನ ಮುಗ್ಧ ನಗುಗಳ ಜೊತೆಯಲ್ಲಿ ಆಟವಾಡಿ ಕಾಲ ಕಳೆದ ಈ ಸಂತೋಷಕ್ಕೆ ಬೆಲೆ ಕಟ್ಟಲಾದೀತೆ? ನನಗೆ ಹತ್ತು ವರ್ಷಗಳ ಹಿಂದೆ ಹೋದಂತೆ ಭಾಸವಾಯಿತ್ತು. ಜೊತೆಗೆ ಹೆಚ್ಚು ಕಡಿಮೆ ಶಾಲಾ ಉಡುಪು ಕೂಡಾ ಈ ಶಾಲಾ ಮಕ್ಕಳ ಯೂನಿಫಾರ್ಮ್‍ನಂತೆ ಇತ್ತು ಎಂದು ಬರೆದುಕೊಂಡು ಸಂತೋಷವನ್ನು ಅಪ್ಪಟ ಕನ್ನಡ ಹುಡುಗಿ ಅದಿತಿ ಪ್ರಭುದೇವ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by ADITI PRABHUDEVA (@aditiprabhudeva)

    ಮಕ್ಕಳ ಜೊತೆಗೆ ಆಟವಾಡುತ್ತಾ ತಾವು ಮಕ್ಕಳಂತೆ ಸಂತೋಷವಾಗಿ ಕೆಲ ಸಮಯ ಕಳೆದಿದ್ದಾರೆ. ಅದಿತಿ ಮಕ್ಕಳ ಜೊತೆಯಲ್ಲಿ ಆಟವಾಡುತ್ತಾ ಬಾಲ್ಯಕ್ಕೆ ಜಾರಿ ತಮ್ಮ ಶಾಲಾ ದಿವನ್ನು ನೆನೆಪಿಸಿಕೊಂಡಿದ್ದಾರೆ. ಅಭಿಮಾನಿಗಳು ಈ ವೀಡಿಯೋಗೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿತ್ತಿದ್ದಾರೆ. ನೆಟ್ಟಿಗರು ಅದಿತಿ ಆಟವಾಡುತ್ತಿರುವುದನ್ನು ಕಂಡು ಕಮೆಂಟ್‍ಗಳ ಸುರಿಮಳೆಗೈದಿದ್ದಾರೆ.

    ಸದ್ಯ ತೋತಾಪುರಿ ಸಿನಿಮಾ ಶೂಟಿಂಗ್‍ನಲ್ಲಿ ಬ್ಯುಸಿಯಾಗಿರುವ ಅದಿತಿ ಕೊಂಚ ಸಮಯ ಬಿಡುವು ಮಾಡಿಕೊಂಡು ಹಳ್ಳಿ ಶಾಲಾ ಮಕ್ಕಳ ಜೊತೆಗೆ ಆಟವಾಡಿದ್ದಾರೆ. ಆಟದ ಫೋಟೋ. ವೀಡಿಯೋವನ್ನು ಕ್ಲಿಕ್ಕಿಸಿಕೊಂಡ ಅದಿತಿ ಪ್ರಭುದೇವ ತಮ್ಮ ಬಾಲ್ಯದ ನೆನಪುಗಳನ್ನು ಮೆಲಕು ಹಾಕಿದ್ದಾರೆ.

  • ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬ್ಯಾಕ್ ಡೈವ್ ಸಾಹಸ – ವಿಡಿಯೋ ವೈರಲ್

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬ್ಯಾಕ್ ಡೈವ್ ಸಾಹಸ – ವಿಡಿಯೋ ವೈರಲ್

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ಪವರ್ ಸ್ಟಾರ್ ಹಂಚಿಕೊಂಡಿರುವ ಬ್ಯಾ ಡೈವ್‍ನ ಒಂದು ವೀಡಿಯೋವನ್ನು ಪ್ರಕಟಿಸಿದ್ದಾರೆ.

    ಪವರ್ ಸ್ಟಾರ್ ಸಮುದ್ರದಲ್ಲಿ ಬ್ಯಾಕ್ ಡೈವ್ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಇದು ಹೇಗೆ ಎಂದು ಅಚ್ಚರಿಯ ಕಾಮೆಂಟ್ ಮಾಡುತ್ತಾ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

    ‘ಬ್ಯಾಕ್ ಡೈವ್ ನೆನಪು. ವಿಭಿನ್ನ ಪ್ರಪಂಚಕ್ಕೆ ಡೈವ್ ಮಾಡುತ್ತಿರುವುದು’ ಎಂದು ಬರೆದುಕೊಂಡು ಡೈವ್ ಮಾಡುತ್ತಿರುವ ವೀಡೀಯೋವನ್ನು  ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋಗೂ ಮೊದಲು ಅಪ್ಪು ದಯವಿಟ್ಟು ಯಾರು ಈ ರೀತಿ ಪ್ರಯತ್ನ ಮಾಡಬೇಡಿ ಎನ್ನುವ ಸೂಚನೆ ನೀಡಿದ್ದಾರೆ. ಪವರ್ ಸ್ಟಾರ್ ಸಾಹಸಕ್ಕೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.

    ಮುರುಡೇಶ್ವರ ಕಡೆ ಪ್ರವಾಸ ಮಾಡಿದ್ದರು. ಸಮುದ್ರ ತೀರದಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋಗಳು ವೈರಲ್ ಆಗಿದ್ದವು. ಇದೀಗ ನೇತ್ರಾಣಿಯಲ್ಲಿ ಬ್ಯಾಕ್ ಡೈವ್ ಮಾಡಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

    ನಟನೆ ಮಾತ್ರವಲ್ಲದೇ ವರ್ಕೌಟ್, ಡ್ಯಾನ್ಸ್, ಸೈಕ್ಲಿಂಗ್ ಎಂದು ಆಗಾಗ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಇದೆಲ್ಲವನ್ನು ಮೀರಿಸುವ ಹೊಸ ಸಾಹಸವನ್ನು ಪವರ್ ಸ್ಟಾರ್ ಮಾಡಿದ್ದಾರೆ. ಸಾಹಸದ ವೀಡಿಯೋಗೆ ಈಗ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

    ಪವರ್ ಸ್ಟಾರ್, ಪುನೀತ್ ರಾಜ್ ಕುಮಾರ್, ಬ್ಯಾಕ್ ಡೈವ್, ಪಬ್ಲಿಕ್ ಟವಿ, ಸ್ಯಾಂಡಲ್‍ವುಡ್, ಸಿನಿಮಾ, ಸಮುದ್ರ, ವೀಡಿಯೋ ವೈರಲ್, ಸೋಷಿಯಲ್ ಮೀಡಿಯಾ

  • ಚಾಪೆ ಮೇಲೆ ಕುಳಿತು ಬಿರಿಯಾನಿ ಸವಿದ ರಾಹುಲ್ ಗಾಂಧಿ

    ಚಾಪೆ ಮೇಲೆ ಕುಳಿತು ಬಿರಿಯಾನಿ ಸವಿದ ರಾಹುಲ್ ಗಾಂಧಿ

    ಚೆನ್ನೈ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ರುಚಿ ರುಚಿಯಾದ ಬಿರಿಯಾನಿಯನ್ನು ಚಾಪೆ ಮೇಲೆ ಕುಳಿತು ಊಟ ಮಾಡುತ್ತಿರುವ ವೀಡಿಯೋ ವೈರಲ್ ಆಗಿದೆ.

    ವಿಲೇಜ್ ಕುಕ್ಕಿಂಗ್ ಯಟ್ಯೂಬ್ ಚಾನೆಲ್‍ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ. ರಾಹುಲ್ ಗಾಂಧಿ ಮಶ್ರೂಮ್ ಬಿರಿಯಾನಿ ಸವಿಯಲು ಮೊಸರು ಬಜ್ಜಿ ತಯಾರಿಸಿದ್ದಾರೆ. ರಾಹುಲ್ ಗಾಂಧಿ ರುಚಿಯಾದ ಅಡುಗೆಯನ್ನು ಹಳ್ಳಿ ಪ್ರದೇಶದಲ್ಲಿ ಕುಳಿತು ಸವಿದಿರುವ ವಿಡಿಯೋ ಯೂಟ್ಯೂಬ್‍ನಲ್ಲಿ 31.24 ಲಕ್ಷ ವೀಕ್ಷಣೆಯನ್ನು ಪಡೆದುಕೊಂಡಿದೆ.

    ವೀಡಿಯೋದಲ್ಲಿ ಏನಿದೆ?
    ಮಶ್ರೂಮ್ ಬಿರಿಯಾನಿ ತಯಾರಿಸುತ್ತಿರುತ್ತಾರೆ. ಬಳಿಕ ರಾಹುಲ್ ಗಾಂಧಿ ಆ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಆಗ ಅಲ್ಲಿನ ಜನರೊಂದಿಗೆ ಸೇರಿ ಅಡುಗೆ ಮಾಡುವುದನ್ನು ನೋಡುತ್ತಿರುತ್ತಾರೆ. ಈ ವೇಳೆ ತಾವೂ ಈರುಳ್ಳಿ ಹಾಗೂ ಮೊಸರಿಗೆ ಹಾಕಿ ಮೊಸರು ಬಜ್ಜಿಯನ್ನು ತಯಾರಿಸುತ್ತಾರೆ. ಅಡುಗೆ ತಯಾರಾದ ಬಳಿಕ ತಾವು ಜನರೊಂದಿಗೆ ಚಾಪೆ ಮೇಲೆ ಕುಳಿತು ಬಾಳೆ ಎಲೆ ಮೇಲೆ ಬಡಿಸಿರುವ ಮಶ್ರೂಮ್ ಬಿರಿಯಾನಿ ಸವಿಯುತ್ತಾರೆ.

    ಈ ವೇಳೆ ಸ್ಥಳೀಯ ಸಂಸದೆ ಜ್ಯೋತಿ ಮಣಿ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ದಿನೇಶ್ ಗುಂಡೂರಾವ್ ಕೂಡ ರಾಹುಲ್ ಗಾಂಧಿಗೆ ಸಾಥ್ ನೀಡಿದ್ದಾರೆ. ರಾಹುಲ್ ಗಾಂಧಿ ರಾಜಕೀಯ ವಿಚಾರಗಳನ್ನು ಬಿಟ್ಟು ಕೆಲ ಸಮಯ ವಿಲೇಜ್ ಕುಕ್ಕಿಂಗ್‍ನಲ್ಲಿ ಭಾಗವಹಿಸಿದ್ದು ಅಚ್ಚರಿಯನ್ನುಂಟು ಮಾಡಿದೆ.

  • ಮಗಳ ಕೋಣೆಯಲ್ಲಿದ್ದ ರಾಶಿ ರಾಶಿ ಜೇಡ ನೋಡಿ ಬೆಚ್ಚಿಬಿದ್ದ ತಾಯಿ

    ಮಗಳ ಕೋಣೆಯಲ್ಲಿದ್ದ ರಾಶಿ ರಾಶಿ ಜೇಡ ನೋಡಿ ಬೆಚ್ಚಿಬಿದ್ದ ತಾಯಿ

    ಕ್ಯಾನ್ಬೆರಾ: ಮಗಳ ಕೋಣೆಯಲ್ಲಿದ್ದ ರಾಶಿ ರಾಶಿ ಜೇಡಗಳನ್ನು ಕಂಡು ತಾಯಿ ಬೆಚ್ಚಿಬಿದ್ದಾಳೆ. ಬಿಳಿಗೋಡೆ ಮೇಲೆ ಹರಿದಾಡುತ್ತಿದ್ದ 100ಕ್ಕೂ ಅಧಿಕ ಜೇಡಗಳ ಫೋಟೋ ಮತ್ತು ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    ಹಂಟ್ಸ್ ಮನ್ ಜೇಡಗಳು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಅದು ನೋಡಲು ದೊಡ್ಡ ಗಾತ್ರದ ಜೇಡಗಳಾದ್ದು, ಮಾನವರ ಮೇಲೆ ಹೆಚ್ಚಾಗಿ ಪರಿಣಾಮ ಬೀರುವುದಿಲ್ಲ. ಹಾಗೂ ಈ ಜೇಡಗಳ ಕಾಲು 12 ಇಂಚಿನಷ್ಟಿದ್ದು, ಸಣ್ಣ ಸಣ್ಣ ಕೀಟಗಳನ್ನು ತಿಂದು ಜೀವಿಸುತ್ತವೆ.

    ಇತ್ತೀಚೆಗೆ ತಾಯಿಯೊಬ್ಬಳು ತನ್ನ ಮಗಳ ಕೋಣೆಗೆ ಹೋಗಿ ಲೈಟ್ ಆನ್ ಮಾಡಿದ್ದಾಳೆ. ಈ ವೇಳೆ ಕಿಟಕಿ ಚೌಕಟ್ಟಿನ ಮೂಲೆಗಳಲ್ಲಿ ಹರಿದಾಡುತ್ತಿದ್ದ ನೂರಾರು ಬೇಬಿ ಹಂಟ್ಸ್‍ಮನ್ ಜೇಡಗಳನ್ನು ಕಂಡು ಆಶ್ವರ್ಯಗೊಂಡಿದ್ದಾಳೆ. ನಂತರ ಅದನ್ನು ಕದಡಲು ಆರಂಭಿಸಿದ್ದಾಳೆ. ಆದರೆ ಮಗಳು ಜೇಡ ಹುಳುಗಳಿಂದ ಯಾವುದೇ ಅಪಾಯಗಳಾಗುವುದಿಲ್ಲ. ಕೇವಲ 50-60 ಇರಬಹುದು ಅಷ್ಟೇ ಎಂದು ತಿಳಿಸಿದ್ದಾಳೆ. ಆಗ ಮತ್ತೊಂದೆಡೆ ಇರುವ ಮೂಲೆಗಳನ್ನು ನೋಡು ಇನ್ನಷ್ಟು ಜೇಡಗಳ ರಾಶಿ ಇದೆ. ಅದನ್ನು ನೋಡಿದರೆ ಇನ್ನೊಮ್ಮೆ ನೀನು ಜೇಡಗಳನ್ನು ನೋಡಲು ಕೂಡ ಬಯಸುವುದಿಲ್ಲ ಎಂದು ತಾಯಿ ವೀಡಿಯೋನಲ್ಲಿ ಹೇಳುತ್ತಿರುವುದು ಕೇಳಿಸುತ್ತದೆ.

    ಜೊತೆಗೆ ನಗುತ್ತಾ…’ನಾವು ಹೊರಗೆ ಹೋಗಿ ಮನೆಯನ್ನು ಸುಟ್ಟು ಹಾಕೋಣವೇ ಆಗ ಜೇಡ ಹೋಗಬಹುದು’ ಎಂದು ಹಾಸ್ಯ ಮಾಡಿದ್ದಾಳೆ. ಗೋಡೆ ಮೇಲೆ ಜೇಡ ತೆವಳುತ್ತಿರುವ ಈ ವೀಡಿಯೋವನ್ನು ಮಹಿಳೆಯ ಸ್ನೇಹಿತೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

  • ಬಾಲ್ಕನಿಯಿಂದ ಮಗುವನ್ನು ರಕ್ಷಿಸಿದ ಬೆಕ್ಕಿನ ವೀಡಿಯೋ ವೈರಲ್

    ಬಾಲ್ಕನಿಯಿಂದ ಮಗುವನ್ನು ರಕ್ಷಿಸಿದ ಬೆಕ್ಕಿನ ವೀಡಿಯೋ ವೈರಲ್

    ನವದೆಹಲಿ: ಅಂಬೆಗಾಲಿಡುವ ಮಗು ಬಾಲ್ಕನಿಯಲ್ಲಿದ್ದ ಕಂಬದ ಮೇಲೆ ಕೈ ಇಟ್ಟು ಇಣುಕಿ ನೋಡುತ್ತಿದ್ದಾಗ ಬೆಕ್ಕು ತಡೆದು ಮಗುವಿನ ಪ್ರಾಣ ಉಳಿಸುತ್ತಿರುವ ವೀಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ನೆಟ್ಟಿಗರ ಮನ ಗೆಲ್ಲುತ್ತಿದೆ. ಈ ವೀಡಿಯೋ ತುಣಕನ್ನು ಭಾರತೀಯ ಅರಣ್ಯ ಸೇವೆ(ಐಎಫ್‍ಎಸ್) ಅಧಿಕಾರಿ ಸುಧಾ ರಾಮೆನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಇನ್ನೂ ಅಂಬೆಗಾಲಿಡುತ್ತಿರುವ ಮಗುವೊಂದು ಬಾಲ್ಕಾನಿಯಲ್ಲಿ ನಿಂತು ಹೊರಗೆ ನೋಡಲು ಅಲ್ಲಿದ್ದ ಕಂಬವನ್ನು ಹಿಡಿದು ಹತ್ತಲು ಪ್ರಯತ್ನಿಸುತ್ತಿರುವ ವೇಳೆ ಅಲ್ಲಿಯೇ ಕುಳಿತಿದ್ದ ಬೆಕ್ಕು ಮಗುವನ್ನು ಅಪಾಯದಿಂದ ರಕ್ಷಿಸುವ ಸಲುವಾಗಿ ರೇಲಿಂಗ್ ಮೇಲೆ ಇಟ್ಟಿದ್ದ ಆತನ ಕೈಗಳನ್ನು ಬಿಡಿಸಿದೆ. ಅಲ್ಲದೆ ಬಾಲ್ಕನಿ ಹಳಿಗಳ ಗೋಡೆ ಮೇಲೆ ನಡೆಯುವ ಮೂಲಕ ಬೆಕ್ಕು ತನ್ನ ಪ್ರಾಣವನ್ನು ಲೆಕ್ಕಿಸದೇ, ಮಗು ಕೆಳಗೆ ಇಣುಕಿ ನೋಡುವುದನ್ನು ತಡೆದಿದೆ.

    https://twitter.com/SudhaRamenIFS/status/1353192960972759042

    ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದಂತೆಯೇ ಸಾವಿರಕ್ಕೂ ಅಧಿಕ ಲೈಕ್ಸ್ ಮತ್ತು ಕಮೆಂಟ್ ಗಳು ಹರಿದು ಬಂದಿದ್ದು, ಕೆಲವರು ವೀಡಿಯೋವನ್ನು ಅದ್ಭುತ ಎಂದು ಕಮೆಂಟ್  ಮಾಡಿದರೆ ಇನ್ನೂ ಕೆಲವರು ಮಗುವಿನ ಪೋಷಕರ ಬೇಜವಾಬ್ದಾರಿ ಕುರಿತಂತೆ ಟೀಕಿಸಿದ್ದಾರೆ.

  • ಭಕ್ತರಿಗೆ ಆಶೀರ್ವಾದ ಮಾಡುತ್ತೆ ಶ್ವಾನ- ವೀಡಿಯೋ ವೈರಲ್

    ಭಕ್ತರಿಗೆ ಆಶೀರ್ವಾದ ಮಾಡುತ್ತೆ ಶ್ವಾನ- ವೀಡಿಯೋ ವೈರಲ್

    ಮುಂಬೈ: ದೇವಾಲಯದ ಬಾಗಿಲಿನಲ್ಲಿ ಕುಳಿತ ಶ್ವಾನ ಭಕ್ತರನ್ನು ಆಶೀರ್ವದಿಸುತ್ತಾ ಕೈಕುಲುಕುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮಹಾರಾಷ್ಟ್ರದ ಸಿದ್ಧತೆಕ್‍ನಲ್ಲಿರುವ ಸಿದ್ಧಿವಿನಾಯಕ್ ದೇವಸ್ಥಾನದಲ್ಲಿ ನಾಯಿಯೊಂದು ದೇವಸ್ಥಾನಕ್ಕೆ ಬರುವ ಭಕ್ತರನ್ನು ಆಶೀರ್ವದಿಸುವ ಮತ್ತು ಕೈಕುಲುಕುವ ಒಂದು ವೀಡಿಯೋ ಸಖತ್ ವೈರಲ್ ಆಗಿದೆ. ಈ ವೀಡಿಯೋವನ್ನು ಫೇಸ್‍ಬುಕ್‍ನಲ್ಲಿ ಅಪ್ಲೋಡ್ ಮಾಡಲಾಗಿದೆ. ಈಗ ಈ ವೀಡಿಯೋಗೆ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ.

     

    ವೈರಲ್ ವಿಡಿಯೋದಲ್ಲಿ ಏನಿದೆ?
    ದೇವಸ್ಥಾನದ ಪ್ರವೇಶದ್ವಾರದ ಹೊರಗೆ ಶ್ವಾನವೊಂದು ಕುಳಿತುಕೊಂಡಿದೆ. ದೇವರ ದರ್ಶನ ಪಡೆದು ಹೊರಗೆ ಬರುತ್ತಿರುವ ಭಕ್ತರು ಕೆಲವರು ನಾಯಿಯ ಕಡೆಗೆ ಕೈ ಚಾಚಿ ಕೈಕುಲುಕುತ್ತಿದ್ದಾರೆ. ಪ್ರಾಣಿ ತನ್ನ ಕೈಗಳನ್ನು ಅಲ್ಲಾಡಿಸಿ ಸ್ವಾಗತಿಸುತ್ತಿತ್ತು. ಹಾಗೆ ಇನ್ನೊಂದು ವೀಡಿಯೋದಲ್ಲಿ ಹೊರಗೆ ಕುಳಿತಿದ್ದ ಶ್ವಾನಕ್ಕೆ ಭಕ್ತರು ತಲೆ ಬಾಗಿ ನಮಸ್ಕಾರ ಮಾಡಿದ್ದಾರೆ. ಶ್ವಾನವು ಅವರ ತಲೆ ಮೇಲೆ ಕಾಲಿಟ್ಟು ಆಶೀರ್ವಾದವನ್ನು ಮಾಡಿದೆ.

    ಈ ವೀಡಿಯೋವನ್ನು ನೋಡಿದ ನೆಟ್ಟಿಗರು ನಾಯಿ ಕುರಿತಾಗಿ ಪ್ರೀತಿಯ ಮಾತುಗಳಾನ್ನಾಡಿದ್ದಾರೆ. ಎರಡೂ ವೀಡಿಯೋವನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಂಡ ಕೆಲವೇ ಕ್ಷಣದಲ್ಲಿ ವೈರಲ್ ಆಗಿದ್ದು 13 ಲಕ್ಷಕ್ಕೂ ಹೆಚ್ಚು ವ್ಯೂ ಪಡೆದುಕೊಂಡಿದೆ.

  • ಬಿಯರ್ ಗ್ಲಾಸ್‍ಗೆ ಬಿತ್ತು ಸಿಕ್ಸರ್ ಬಾಲ್ – ಚೆಂಡು ತೆಗೆಯದೇ 1 ಪೆಗ್ ಏರಿಸಿದ

    ಬಿಯರ್ ಗ್ಲಾಸ್‍ಗೆ ಬಿತ್ತು ಸಿಕ್ಸರ್ ಬಾಲ್ – ಚೆಂಡು ತೆಗೆಯದೇ 1 ಪೆಗ್ ಏರಿಸಿದ

    ಸಿಡ್ನಿ: 2020ರ ಬಿಗ್ ಬ್ಯಾಷ್ ಲೀಗ್‍ನ 23ನೇ ಪಂದ್ಯದಲ್ಲಿ ಬ್ಯಾಟ್ಸ್ ಮ್ಯಾನ್ ಸಿಕ್ಸರ್ ಗೆ ಅಟ್ಟಿದ ಚೆಂಡು ಪ್ರೇಕ್ಷಕನ ಬಿಯರ್ ಗ್ಲಾಸ್ ಸೇರಿದೆ. ಚೆಂಡು ಗ್ಲಾಸ್ ನಲ್ಲಿ ಬೀಳುತ್ತಿದ್ದಂತೆ ಖುಷಿಗೊಂಡ ಪ್ರೇಕ್ಷಕ ಬಾಲ್ ತೆಗೆಯದೇ ಮತ್ತೊಂದು ಗುಟುಕು ಏರಿಸಿದ್ದಾನೆ. ಐಸಿಸಿ ವೀಡಿಯೋ ಶೇರ್ ಮಾಡಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

    ಮೆಲ್ವರ್ನ್ ಸ್ಟಾರ್ಸ್ ಮತ್ತು ಹೊಬಾರ್ಟ್ ಹರಿಕೆನ್ಸ್ ತಂಡಗಳ ನಡುವೆ ಮ್ಯಾಚ್ ನಡೆದಿತ್ತು. ಹೋಬಾರ್ಟ್ ತಂಡದ ಬ್ಯಾಟಿಂಗ್ ವೇಳೆ 16ನೇ ಓವರ್ ನಲ್ಲಿ ಡೇವಿಡ್ ಮಲನ್ ಅದ್ಭುತವಾದ ಸಿಕ್ಸ್ ಬಾರಿಸಿದರು. ಈ ಬಾಲ್ ನೇರವಾಗಿ ಗ್ಯಾಲರಿಯಲ್ಲಿ ಕುಳಿತಿದ್ದ ವೀಕ್ಷಕರ ಬಿಯರ್ ಗ್ಲಾಸ್ ನಲ್ಲಿ ಬಿತ್ತು. ಇದಕ್ಕೂ ಮುಂಚೆ ಯುವಕನೋರ್ವ ಈ ಬಾಲ್ ಕ್ಯಾಚ್ ಹಿಡಿಯಲು ಪ್ರಯತ್ನಿಸಿದ್ದ. ಆದ್ರೆ ಆತನ ಕೈಗೆ ತಾಕಿದ ಬಾಲ್ ಬಿಯರ್ ಗ್ಲಾಸ್ ಸೇರಿಕೊಂಡಿತು.

    ಇತ್ತ ಫೀಲ್ಡರ್ ಬಾಲ್ ನೀಡುವಂತೆ ಹೇಳಿದಾಗ ಅಭಿಮಾನಿ ಗ್ಲಾಸ್ ನಲ್ಲಿದ್ದ ಬಾಲ್ ತೆಗೆಯದೇ ಒಂದು ಗುಟುಕು ಬಿಯರ್ ಕುಡಿದಿದ್ದಾನೆ. ಬಿಯರ್ ಖಾಲಿಯಾಗ್ತಿದ್ದಂತೆ ಬಾಲ್ ಎಸೆದಿದ್ದಾನೆ. ಬಿಯರ್ ಕುಡಿದಿದನ್ನ ನೋಡಿದ ಗ್ಯಾಲರಿಯಲ್ಲಿದ್ದ ಜನ ಚಪ್ಪಾಳೆ ಹೊಡೆದು ಜೋರಾಗಿ ಕೂಗಿದ್ದಾರೆ.

    ಈ ಪಂದ್ಯವನ್ನ ಹೋಬಾರ್ಟ್ ತಂಡ 21 ರನ್ ಗಳ ಅಂತರದಿಂದ ಗೆದ್ದು ಕೊಂಡಿತು. ಮೊದಲು ಬ್ಯಾಟ್ ಮಾಡಿದ್ದ ಹೋಬಾರ್ಟ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 164 ರನ್ ಪೇರಿಸಿತ್ತು. ಡೇವಿಡ್ ಮಲಾನ್ 75 ರನ್ ಸೇರಿಸಿ ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಹೋಬಾರ್ಟ್ ನೀಡಿದ ಮೊತ್ತವನ್ನ ಬೆನ್ನತ್ತಿದ ಮೆಲ್ವರ್ನ್ ಸ್ಟಾರ್ಸ್ 20 ಓವರ್ ಗಳಲ್ಲಿ 143 ರನ್ ಗಳಿಸಲು ಮಾತ್ರ ಶಕ್ತವಾಯ್ತು. ಮೆಲ್ಬರ್ನ್ ತಂಡದ ಆಟಗಾರ ಗ್ಲೆನ್ ಮ್ಯಾಕ್ಸವೆಲ್ 37 ಎಸೆತದಲ್ಲಿ 70 ರನ್ ಗಳಿಸಿ ತಂಡದ ಚೇತರಿಕೆಗೆ ಕಾರಣರಾಗಿದ್ದರು. 70 ರನ್ ನಲ್ಲಿ 4 ಫೋರ್ ಮತ್ತು 5 ಸಿಕ್ಸ್ ಸೇರಿವೆ.