Tag: ವೀಡಿಯೋ ವೈರಲ್

  • ಬರ್ತ್‍ಡೇ ಕ್ಯಾಂಡಲ್ ಊದುವಾಗ ಕೂದಲಿಗೆ ಬೆಂಕಿ – ಕಿರುಚಾಡಿದ ಟಿವಿ ಸ್ಟಾರ್

    ಬರ್ತ್‍ಡೇ ಕ್ಯಾಂಡಲ್ ಊದುವಾಗ ಕೂದಲಿಗೆ ಬೆಂಕಿ – ಕಿರುಚಾಡಿದ ಟಿವಿ ಸ್ಟಾರ್

    ವಾಷಿಂಗ್ಟನ್: ಹುಟ್ಟುಹಬ್ಬದ ಸಮಾರಂಭದಲ್ಲಿ ಬರ್ತ್‍ಡೇ ಕ್ಯಾಂಡಲ್ ಊದುವಾಗ ಅಮೇರಿಕ ಸ್ಟಾರ್ ನಟಿ ನಿಕೋಲ್ ರಿಚಿ ಕೂದಲಿಗೆ ಬೆಂಕಿ ಹೊತ್ತಿ ಕಿರುಚಾಡಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    birthday candle

    ಸಾಮಾನ್ಯವಾಗಿ ಬರ್ತ್‍ಡೇ ದಿನ ಪ್ರತಿಯಬ್ಬರು ತಮ್ಮ ಪ್ರೀತಿ ಪಾತ್ರರೊಂದಿಗೆ ಇರಲು ಇಚ್ಛಿಸುತ್ತಾರೆ. ಅದರಲ್ಲಿಯೂ ಕೇಕ್, ಮೇಣದ ಬತ್ತಿ, ಬರ್ತ್‍ಡೇ ಕ್ಯಾಪ್ ಇವೆಲ್ಲವೂ ಸದಾ ನೆನಪಿನಲ್ಲಿ ಉಳಿಯುತ್ತದೆ. ಆದರೆ ಅಮೇರಿಕದ ಟಿವಿ ಸ್ಟಾರ್ ನಿಕೋಲ್ ರಿಚಿಯವರ 40ನೇ ವರ್ಷದ ಹುಟ್ಟುಹಬ್ಬದ ದಿನದಂದು ನಡೆದಿದ್ದೇ ಬೇರೆಯಾಗಿದೆ. ಸದ್ಯ ಈ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಬರ್ತ್‍ಡೇ ಸಮಾರಂಭದಲ್ಲಿ ನಿಕೋಲ್ ರಿಚಿ ಮಾತ್ರವಲ್ಲ ಪಾರ್ಟಿಗೆ ಆಗಮಿಸಿದ್ದವರು ಕೂಡ ಈ ಘಟನೆಯನ್ನು ಸದಾ ನೆನಪಿನಲ್ಲಿಟ್ಟುಕೊಂಡಿರುತ್ತಾರೆ. ಇದನ್ನೂ ಓದಿ: ಮೂಲೆಗುಂಪಾಗಿರೋ ಕಾಂಗ್ರೆಸ್ ಟಾಂಗಾ, ಸೈಕಲ್ ಓಡಿಸೋದಕ್ಕೆ ಮಾತ್ರ ಸೀಮಿತ: ಆರ್. ಅಶೋಕ್

    ಸೆಪ್ಟೆಂಬರ್ 21ರಂದು 40ನೇ ವಸಂತಕ್ಕೆ ಕಾಲಿಟ್ಟ ರಿಚಿ, ಕುಟುಂಬ ಮತ್ತು ಸ್ನೇಹಿತರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ಕಪ್ಪು ಬಣ್ಣದ ಆಫ್ ಶೋಲ್ಡರ್ ಟಾಪ್ ಧರಿಸಿ, ಕೇಕ್ ಮೇಲೆ ನಿಲ್ಲಿಸಿದ್ದ ಕ್ಯಾಂಡಲ್‍ನನ್ನು ಊದಲು ಮುಂದಕ್ಕೆ ವಾಲಿದಾಗ ರಿಚಿ ಗುಂಗುರು ಕೂದಲು ಕ್ಯಾಂಡಲ್‍ಗೆ ತಾಗಿ ಬೆಂಕಿ ಹೊತ್ತಿಕೊಳ್ಳುತ್ತದೆ. ಈ ವೇಳೆ ಗಾಬರಿಗೊಂಡ ರಿಚಿ ಕಿರುಚಾಡುತ್ತಾ ಕೂದಲನ್ನು ಹೊಡೆದುಕೊಳ್ಳುತ್ತಾರೆ. ಆಗ ಇತರರು ಕೂಡ ಆಕೆಗೆ ಸಹಾಯ ಮಾಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

    ಸದ್ಯ ಹುಟ್ಟುಹಬ್ಬದ ದಿನದಂದು ತಮ್ಮ ಅನುಯಾಯಿಗಳೊಂದಿಗೆ ನಡೆದ ಈ ಅಹಿತಕರವಾದ ಘಟನೆಯನ್ನು ರಿಚಿಯವರು ಹಂಚಿಕೊಂಡಿದ್ದಾರೆ. ವೈರಲ್ ಆಗುತ್ತಿರುವ ಈ ವೀಡಿಯೋ, ಇಲ್ಲಿಯವರೆಗೂ 2.8 ಮಿಲಿಯನ್‌ಗೂ  ಅಧಿಕ ಮಂದಿ ವೀಕ್ಷಿಸಿದ್ದು, ಕೆಲವರು  ಅದೃಷ್ಟವಶಾತ್ ಒಳ್ಳೆಯದಾಯಿತು ಎಂದರೆ, ಮತ್ತಷ್ಟು ಮಂದಿ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಇದನ್ನೂ ಓದಿ: ನಾನು ಸಾಮಾನ್ಯ ಮುನುಷ್ಯ, ನನಗೆ ಸೆಕ್ಯೂರಿಟಿ ಬೇಡವೆಂದ: ಪಂಜಾಬ್ ಸಿಎಂ

  • 73ರ ಹರೆಯದಲ್ಲೂ ಯುವಕನಂತೆ ಸ್ಕೇಟಿಂಗ್ ಆಡಿದ ವೃದ್ಧ – ವೀಡಿಯೋ ವೈರಲ್

    73ರ ಹರೆಯದಲ್ಲೂ ಯುವಕನಂತೆ ಸ್ಕೇಟಿಂಗ್ ಆಡಿದ ವೃದ್ಧ – ವೀಡಿಯೋ ವೈರಲ್

    73 ವರ್ಷದ ವೃದ್ಧರೊಬ್ಬರು ಸ್ಕೇಟಿಂಗ್ ಬೋರ್ಡ್ ಮೇಲೆ ನಿಂತು ಯುವಕನಂತೆ ಸ್ಕೇಟಿಂಗ್ ಆಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    skating

    ಹೌದು, ನೀವು ಮಾಡುವ ಕೆಲಸದಲ್ಲಿ ಶ್ರದ್ಧೆ, ಶ್ರಮ ಹಾಗೂ ಉತ್ಸಾಹವಿದ್ದರೆ, ಏನನ್ನು ಬೇಕಾದರೂ ಸಾಧಿಸಬಹುದು ಎಂಬುವುದಕ್ಕೆ ಈ ವೀಡಿಯೋ ಸಾಕ್ಷಿಯಾಗಿದೆ. ಇಗೋರ್(73) ಎಂಬವರು ಅದ್ಭುತವಾಗಿ ಸ್ಕೇಟ್‍ಂಗ್ ಆಡಿದ್ದು, ಈ ವೀಡಿಯೋಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.  ಇದನ್ನೂ ಓದಿ: ನಾನು ಸಾಮಾನ್ಯ ಮುನುಷ್ಯ, ನನಗೆ ಸೆಕ್ಯೂರಿಟಿ ಬೇಡವೆಂದ: ಪಂಜಾಬ್ ಸಿಎಂ

    skating

    ವೀಡಿಯೋದಲ್ಲಿ ಇಗೋರ್ ಬೆರೆಟ್ ಮತ್ತು ಜಾಕೆಟ್ ಧರಿಸಿ ಸ್ಕೇಟ್ ಬೋರ್ಡ್ ಮೇಲೆ ಬಹಳ ಎಚ್ಚರಿಕೆಯಿಂದ ಅರ್ಧ ನಿಂತುಕೊಂಡು ಖಾಲಿ ರಸ್ತೆಯಲ್ಲಿ ಸ್ಕೇಟಿಂಗ್ ಮೇಲೆ ಸವಾರಿ ನಡೆಸಿದ್ದಾರೆ. ಅಲ್ಲದೇ ಸ್ಕೇಟಿಂಗ್ ರೈಡ್‍ನನ್ನು ಇಗೋರ್ ಸಖತ್ ಎಂಜಾಯ್ ಮಾಡುತ್ತಿರುವುದನ್ನು ನಾವು ವೀಡಿಯೋದಲ್ಲಿ ನೋಡಬಹುದಾಗಿದೆ.  ಇದನ್ನೂ ಓದಿ: ಅರೆನೂರು ಗ್ರಾಮಕ್ಕೆ ಸೇತುವೆ ಇಲ್ಲದೇ ಜನ ಪರದಾಟ- ಪ್ರಾಣ ಕೈಲಿಡಿದೇ ಓಡಾಟ!

    ಇಗೋರ್ 1981ರಿಂದ ಸ್ಕೇಟಿಂಗ್ ಆಡುತ್ತಿದ್ದು, ಇದೀಗ ಅವರಿಗೆ 73 ವರ್ಷ ವಯಸ್ಸಾಗಿದೆ. ಹೀಗಿದ್ದರೂ ಇಗೋರ್ 1981ರಿಂದ ಇಲ್ಲಿಯವರೆಗೂ ಸ್ಕೇಟಿಂಗ್ ಮಾಡುತ್ತಿರುವುದಾಗಿ ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಈ ವೀಡಿಯೋವನ್ನು ಮ್ಯಾಕ್ಸ್ ಟಿಮುಖಿನ್ ಅಪ್‍ಲೋಡ್ ಮಾಡಿದ್ದು, ಇಲ್ಲಿಯವರೆಗೂ 12.2 ಮಿಲಿಯನ್‍ಗೂ ಅಧಿಕ ವೀವ್ಸ್ ಪಡೆದಿದೆ. ಅನೆಕ ಮಂದಿ ಇಗೋರ್‌ಗೆ ಲೆಜೆಂಡ್ ಎಂದು ಕಾಮೆಂಟ್ ಮಾಡಿದ್ದಾರೆ.

  • ಅಧಿಕಾರಿಗಳು ಇರುವುದೇ ನಮ್ಮ ಚಪ್ಪಲಿ ಎತ್ತಿಕೊಳ್ಳಲು: ಉಮಾಭಾರತಿ

    ಅಧಿಕಾರಿಗಳು ಇರುವುದೇ ನಮ್ಮ ಚಪ್ಪಲಿ ಎತ್ತಿಕೊಳ್ಳಲು: ಉಮಾಭಾರತಿ

    – ಹೇಳಿಕೆ ವಿವಾದಕ್ಕೀಡಾದ ನಂತ್ರ ವಿಷಾದವ್ಯಕ್ತಪಡಿಸಿದ ಮಾಜಿ ಸಿಎಂ

    ಭೋಪಾಲ್: ಅಧಿಕಾರಿಗಳು ಇರುವುದೇ ನಮ್ಮ ಚಪ್ಪಲಿ ಎತ್ತಿಕೊಳ್ಳಲು ಎಂದು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ಸಚಿವೆ ಉಮಾಭಾರತಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

    ಉಮಾ ಭಾರತಿ ಅವರ ಈ ವಿವಾದಾತ್ಮಕ ಹೇಳಿಕೆಯ ವೀಡಿಯೋ ವೈರಲ್ ಆಗಿದೆ. ಅಧಿಕಾರಿಗಳು ಏನೂ ಅಲ್ಲ, ಅವರು ಇರುವದೇ ನಮ್ಮ ಚಪ್ಪಲ್‍ಗಳನ್ನು (ಚಪ್ಪಲಿ) ತೆಗೆದುಕೊಳ್ಳಲು. ನಾನು 11 ವರ್ಷಗಳ ಕಾಲ ಅಧಿಕಾರದಲ್ಲಿದ್ದೇನೆ, ಮಧ್ಯ ಪ್ರದೇಶ ಸಿಎಂ ಆಗಿ ಮತ್ತು ನಂತರ ಕೇಂದ್ರ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಅಧಿಕಾರಶಾಹಿ ಎಂದರೆ ಏನು ಎಂದು ನನಗೆ ಚೆನ್ನಾಗಿ ತಿಳಿದಿದೆ ಎಂದಿದ್ದಾರೆ.

    ನಾವು(ರಾಜಕಾರಣಿಗಳು) ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಅದರ ನಂತರವೇ ಫೈಲ್ ಪ್ರಕ್ರಿಯೆಗೆ ಮುಂದಾಗುತ್ತದೆ ಎಂದು ಉಮಾ ಭಾರತಿ ಅವರು ಶನಿವಾರ ಭೋಪಾಲ್ ನ ತಮ್ಮ ನಿವಾಸದಲ್ಲಿ ಒಬಿಸಿ ನಿಯೋಗದೊಂದಿಗೆ ನಡೆದ ಸಂವಾದದಲ್ಲಿ ಹೇಳಿದ್ದಾರೆ. ವಿವಾದಾತ್ಮಕ ಹೇಳಿಕೆಯ ವೀಡಿಯೋ ಸೋಮವಾರ ವೈರಲ್ ಆಗಿದ್ದು, ತಮ್ಮ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾಗುತ್ತಿದಂತೆ ಬಿಜೆಪಿ ನಾಯಕಿ ವಿಷಾದ ವ್ಯಕ್ತಪಡಿಸಿದ್ದಾರೆ.

    ನನ್ನ ಉದ್ದೇಶಗಳು ಒಳ್ಳೆಯದಾಗಿದ್ದರೂ ಅಸಮಂಜಸವಾದ ಭಾಷೆ ಬಳಸಿದ್ದಕ್ಕಾಗಿ ನಾನು ವಿಷಾದಿಸುತ್ತೇನೆ. ನನ್ನ ಅನುಭವದಿಂದ, ಪ್ರಾಮಾಣಿಕ ಅಧಿಕಾರಶಾಹಿ ಯಾವಾಗಲೂ ಬಲವಾದ ಮತ್ತು ಪ್ರಾಮಾಣಿಕ ರಾಜಕಾರಣಿಗಳಿಗೆ ಉತ್ತಮ ಕಂಪನಿ ನೀಡುತ್ತದೆ ಎಂದು ಹೇಳಬಲ್ಲೆ ಎಂದು ಉಮಾಭಾರತಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:  ಬಗೆದಷ್ಟು ಬಯಲಾಗ್ತಿದೆ ಐವರ ಡೆತ್ ಸೀಕ್ರೆಟ್ – ‘ಹಾಳಾಗ್ ಹೋಗ್ರಿ’ ಅಂದಿದ್ದಕ್ಕೇ ಆತ್ಮಹತ್ಯೆನಾ..?

    ಉಮಾ ಭಾರತಿ ಹೇಳಿಕೆ ನಾಚಿಕೆಗೇಡು ಎಂದು ಟೀಕಿಸಿರುವ ಕಾಂಗ್ರೆಸ್, ಈ ಬಗ್ಗೆ ಬಿಜೆಪಿ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದೆ.

  • ಸರ್ಕಾರದಿಂದ ಆದೇಶ ಹೊರಡಿಸಿ ಪುಣ್ಯ ಕಟ್ಟಿಕೊಳ್ಳಿ- ಮಾಜಿ ಸ್ಪೀಕರ್ ವಿರುದ್ಧ ಪೊಲೀಸರ ಆಕ್ರೋಶ

    ಸರ್ಕಾರದಿಂದ ಆದೇಶ ಹೊರಡಿಸಿ ಪುಣ್ಯ ಕಟ್ಟಿಕೊಳ್ಳಿ- ಮಾಜಿ ಸ್ಪೀಕರ್ ವಿರುದ್ಧ ಪೊಲೀಸರ ಆಕ್ರೋಶ

    ಕೋಲಾರ: ಸರ್ಕಾರದಿಂದ ಆದೇಶ ಹೊರಡಿಸಿ ಪುಣ್ಯಕಟ್ಟಿಕೊಳ್ಳಿ ರಮೇಶ್ ಸರ್ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಕೋಲಾರದ ಪೊಲೀಸ್ ಇಲಾಖೆ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದ ವೀಕ್ಷಕರು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ.

    ಪೊಲೀಸರು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಅವರ ಕಾರ್ಯವೈಖರಿಯ ಬಗ್ಗೆ ರಮೇಶ್ ಕುಮಾರ್ ಅವರು ತರಾಟೆಗೆ ತೆಗೆದುಕೊಂಡಿದ್ದರು. ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಈ ವಿಚಾರವಾಗಿ ಮಾಜಿ ಸ್ವೀಕರ್ ವಿರುದ್ಧ ಪೊಲೀಸ್ ಇಲಾಖೆಯಲ್ಲಿ ಆಕ್ರೋಶ ಭುಗಿಲೆದಿದೆ.ಇದನ್ನೂ ಓದಿ: ಮಂಗಳೂರು ಏರ್ ಪೋರ್ಟ್ ರ್‍ಯಾಪಿಡ್ ಪಿಸಿಆರ್ ಟೆಸ್ಟ್ – ಅನಿವಾಸಿಗಳ ಬೇಡಿಕೆಗೆ ಸ್ಪಂದಿಸಿದ ದ.ಕ. ಡಿಸಿ

    ಪೊಲೀಸರು ಯಾವುದೇ ವಾಹನಗಳನ್ನು ತಪಾಸಣೆ ಮಾಡುವಂತಿಲ್ಲ, ದಂಡ ಹಾಕುವಂತಿಲ್ಲ ಎಂದು ಸರ್ಕಾರದಿಂದ ಆದೇಶ ಹೊರಡಿಸಿ ಪುಣ್ಯಕಟ್ಟಿಕೊಳ್ಳಿ ರಮೇಶ್ ಕುಮಾರ್ ಸರ್. ಈ ನಿಮ್ಮ ಒಳ್ಳೆಯತನಕ್ಕಾದರು ಪೊಲೀಸರಿಗೆ ಬಿಪಿ, ಶುಗರ್ ಮಾಯವಾಗಲಿ. ಸಾರ್ವಜನಿಕರಿಗೆ ತಪ್ಪು ಸಂದೇಶವನ್ನು ನೀಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ವೀಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ರಮೇಶ್ ಅವರಿಗೆ ಟಕ್ಕರ್ ಕೊಡುತ್ತಿದ್ದಾರೆ. ಸ್ಟೇಟಸ್ ಹಾಗೂ ಫೇಸ್ಬುಕ್‍ನಲ್ಲಿ ರಮೇಶ್ ಅವರ ವಿರುದ್ಧ ಇಲಾಖೆಯ ಸಿಬ್ಬಂದಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ನಮಗೆ ಅಧಿಕಾರ ಕೊಟ್ಟವರು ನೀವೇ ಅದನ್ನು ಪ್ರಶ್ನೆ ಮಾಡುವವರು ನೀವೇ ಎಂದು ಟಾಂಗ್ ಕೊಟ್ಟಿದ್ದಾರೆ.ಇದನ್ನೂ ಓದಿ:ಲಾಲ್‍ಬಾಗ್, ಕಬ್ಬನ್ ಪಾರ್ಕ್ ಮಾದರಿಯಲ್ಲಿ ಮತ್ತೊಂದು ಉದ್ಯಾನವನ: ತೋಟಗಾರಿಕೆ ಸಚಿವ ಮುನಿರತ್ನ

    ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಇದರ ಪರ ವಿರೋಧದ ಚರ್ಚೆ ನಡೆಯುತ್ತಿದೆ.ಇದನ್ನೂ ಓದಿ:ರಮೇಶ್ ಕುಮಾರ್ ವಿರುದ್ಧ ಜೆ.ಪಿ ನಗರ ಎಎಸ್‍ಐ ಗರಂ

  • ನಿಕ್‍ಗೆ ಸಾರ್ವಜನಿಕ ಸ್ಥಳದಲ್ಲಿಯೇ ಕಿಸ್ ಕೊಟ್ಟ ಪ್ರಿಯಾಂಕಾ

    ನಿಕ್‍ಗೆ ಸಾರ್ವಜನಿಕ ಸ್ಥಳದಲ್ಲಿಯೇ ಕಿಸ್ ಕೊಟ್ಟ ಪ್ರಿಯಾಂಕಾ

    ಮುಂಬೈ: ಬಾಲಿವುಡ್‍ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಪತಿ ನಿಕ್ ಜೊನಾಸ್‍ಗೆ ಸಾರ್ವಜನಿಕ ಸ್ಥಳದಲ್ಲಿಯೇ ಮುತ್ತು ಕೊಟ್ಟಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ವೀಡಿಯೋದಲ್ಲಿ ಹೋಟೆಲ್ ಒಂದರಲ್ಲಿ ಕುಳಿತು, ಊಟ ಮಾಡುತ್ತಿದ್ದ ವೇಳೆ ಪ್ರಿಯಾಂಕಾ ನಿಕ್ ಅವರನ್ನು ಮುದ್ದು ಮಾಡುತ್ತಾ ಕಿಸ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪ್ರಿಯಾಂಕಾ ಅವರ ತಾಯಿ ಮಧು ಚೋಪ್ರಾ ಕೂಡಾ ಜೊತೆಯಲ್ಲಿದ್ದಾರೆ. ತಾರಾ ದಂಪತಿಯ ಈ ವೀಡಿಯೋ ಅಭಿಮಾನಿಗಳಿಗೆ ಖುಷಿ ನೀಡಿದ್ದು, ತಮ್ಮ ನೆಚ್ಚಿನ ಜೋಡಿ ಖುಷಿಯಿಂದ ದಿನ ಕಳೆಯುತ್ತಿರುವುದನ್ನು ನೋಡಿ ಪುಳಕಿತಗೊಂಡಿದ್ದಾರೆ.

     

    View this post on Instagram

     

    A post shared by Nick&Priyanka Jonas FC (@nickyanka18)

    ಪ್ರಿಯಾಂಕಾ ಇತ್ತೀಚೆಗೆ ಹಾಲಿವುಡ್ ಚಿತ್ರಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಈ ನಡುವೆ ಪ್ರಿಯಾಂಕಾ ಅವರ ಪತಿ ನಿಕ್ ಜೊನಾಸ್ ಕೂಡಾ ತಮ್ಮದೇ ಕೆಲಸಗಳಲ್ಲಿದ್ದಿದ್ದರಿಂದ ಈ ಜೋಡಿ ಕೆಲ ಕಾಲ ಅನಿವಾರ್ಯವಾಗಿ ದೂರವಾಗಿದ್ದರು. ಈಗ ಲಂಡನ್‍ನಲ್ಲಿ ಈ ಜೋಡಿ ಖುಷಿಯಿಂದ ರಜೆಯ ದಿನಗಳನ್ನು ಕಳೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಗಳನ್ನು ಹಂಚಿಕೊಂಡು ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.

    ಇತ್ತೀಚೆಗೆ ಪ್ರಿಯಾಂಕಾ ತಮ್ಮ ಪತಿಯೊಂದಿಗೆ ಖುಷಿಯಿಂದ ಕಳೆಯುತ್ತಿರುವ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಇದನ್ನು ಅವರ ಅಭಿಮಾನಿ ಪೇಜ್ ಒಂದು ಹಂಚಿಕೊಂಡಿದ್ದು, ವೈರಲ್ ಆಗಿದೆ.

  • ನೀರಜ್ ಚೋಪ್ರಾರಂತೆ ಜಾವೆಲಿನ್ ಎಸೆದ ರಾಖಿ ಸಾವಂತ್- ವೀಡಿಯೋ ವೈರಲ್

    ನೀರಜ್ ಚೋಪ್ರಾರಂತೆ ಜಾವೆಲಿನ್ ಎಸೆದ ರಾಖಿ ಸಾವಂತ್- ವೀಡಿಯೋ ವೈರಲ್

    ಮುಂಬೈ: ಬಾಲಿವುಡ್ ನಟಿ ರಾಖಿ ಸಾವಂತ್ ನೀರಜ್ ಚೋಪ್ರಾರಂತೆ ಜಾವೆಲಿನ್ ಎಸೆಯಲು ಪ್ರಯತ್ನಿಸಿರುವ ವೀಡೀಯೋ ಸಖತ್ ವೈರಲ್ ಆಗುತ್ತಿದೆ.

    ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತದಪರ ಅಥ್ಲೆಟಿಕ್ಸ್​ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ರಾಖಿ ಸಾವಂತ ಡಿಫರೆಂಟ್ ಎಂದು ಎಲ್ಲರಿಗೂ ಗೊತ್ತು. ಏನೇ ಮಾಡಿದ್ರೂ ಅದ್ರಕ್ಕೊಂದು ಇಮಿಟೇಷನ್ ಇದ್ದೇ ಇರುತ್ತದೆ. ಇದೀಗ ನೀರಜ್ ಚೋಪ್ರಾ ನಂತೆ ಜಾವೆಲಿನ್ ಎಸೆಯುವಂತೆ ಇಮಿಟೇಷನ್ ಮಾಡುವ ಮೂಲಕವಾಗಿ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ: ಮೂರು ವರ್ಷದ ಹಿಂದೆ ನಡೆದ ಕೊಲೆಗೆ ಮತ್ತೊಬ್ಬ ಬಲಿ

     

    View this post on Instagram

     

    A post shared by Viral Bhayani (@viralbhayani)

    ನೀರಜ್ ಚೋಪ್ರಾ ಜಯವನ್ನು ತಮ್ಮದೇ ಆದ ಶೈಲಿಯಲ್ಲಿ ಸಂಭ್ರಮಿಸಿರುವ ರಾಖಿ ಸಾವಂತ್, ಮರದ ಕೋಲೊಂದನ್ನು ತೆಗೆದುಕೊಂಡು ನೀರಜ್ ಅವರನ್ನು ಅನುಕರಿಸಿದ್ದಾರೆ. ಈ ವೀಡಿಯೋ ಈಗ ವೈರಲ್ ಆಗಿದ್ದು, ನೆಟ್ಟಿಗರು ನಾನಾವಿಧವಾಗಿ ಕಾಮೆಂಟ್ ಮಾಡಿದ್ದಾರೆ.

     

    View this post on Instagram

     

    A post shared by Rakhi Sawant (@rakhisawant2511)

    ರಾಖಿ ಸಾವಂತ್ ಈ ಮೊದಲೂ ಕೂಡಾ ಅಂಗಡಿಗಳ ಎದುರು, ಜಿಮ್‍ನ ಹೊರಗೆ ಛಾಯಾಚಿತ್ರಕಾರರಿಗೆ ಸಿಕ್ಕಾಗ ತಮಾಷೆಯ ವೀಡಿಯೋಗಳನ್ನು ಮಾಡಿದ್ದರು. ಈ ಬಾರಿ ಜಿಮ್‍ನಲ್ಲಿ ಕಸರತ್ತು ಮುಗಿಸಿ ಹೊರಬರುವಾಗ ಜಾವೆಲಿನ್ ಎಸೆತದ ಅನುಕರಣೆ ಮಾಡಿದ್ದಾರೆ. ಕೋಲನ್ನು ಎಸೆದು, ಹೇಗಿತ್ತು ತನ್ನ ಎಸೆತ ಎಂದು ಅವರು ವೀಡಿಯೋ ಸೆರೆಹಿಡಿಯುವವರಲ್ಲಿ ಕೇಳಿದ್ದಾರೆ. ಕೊನೆಯಲ್ಲಿ ನೀರಜ್ ಸಾಧನೆಗೆ ಸಲಾಮ್ ಹೇಳುವಂತೆ, ಜೈ ಹೊ, ಜೈ ಹಿಂದ್ ಎಂದು ಹೇಳುತ್ತಾ ತಮ್ಮ ಕಾರನ್ನೇರಿ ಹೊರಟಿದ್ದಾರೆ. ಈ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿಕೊಂಡು ಮೆಡಲ್ ಕೋಡಬೇಕು ಎಂದು ಪೋಸ್ಟ್ ಮಾಡಿದ್ದಾರೆ.

  • ಅಪ್ಪನ ಮೂಗು, ಮುಖಕ್ಕೆ ಪಂಚ್ ಮಾಡಿದ ಯಥರ್ವ್

    ಅಪ್ಪನ ಮೂಗು, ಮುಖಕ್ಕೆ ಪಂಚ್ ಮಾಡಿದ ಯಥರ್ವ್

    ಬೆಂಗಳೂರು: ನಟ ಯಶ್ ಮುದ್ದಾದ ಮಗನ ಜೊತೆಗೆ ಫೈಟ್ ಮಾಡುತ್ತಿರುವ ವೀಡಿಯೋವನ್ನು ಸ್ಯಾಂಡಲ್‍ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಯರ್ಥವ್ ಅಪ್ಪ ಯಶ್ ಮುಖಕ್ಕೆ ಪಂಚ್ ಮಾಡುತ್ತಾ ಅಪ್ಪನಿಗೆ ಮುದ್ದಾಗಿ ಅವಾಜ್ ಹಾಕಿದ್ದಾನೆ. ಯಶ್ ಮುಖ, ಮೂತಿ ನೋಡದೆ ಸರಿಯಾಗಿ ಪಂಚ್ ಕೊಡುತ್ತಿರುವ ಮಗನಿಗೆ, ನೀನು ಜಾಂಬಿಯಾ ಎಂದು ಯಶ್ ಕೇಳಿದ್ದಾರೆ. ಆಗ ಯರ್ಥವ್ ಮುದ್ದಾಗಿ ಏನು ಎಂದು ಕೇಳಿದಾ ಯಶ್ ನನಗೆ ನೋವಾಗುತ್ತಿದೆ ಎಂದು ಹೇಳಿದ್ದಾರೆ. ಆಗ ಮತ್ತೆ ಅಪ್ಪನ ಮುಖಕ್ಕೆ ಜೋರಾಗಿ ಗುದ್ದಿ ಯರ್ಥವ್ ಅಪ್ಪನ ಮೂಗನ್ನು ಕಚ್ಚಲು ಮುಂದಾಗಿದ್ದಾನೆ. ಈ ವೀಡಿಯೋವನ್ನು ರಾಧಿಕಾ ಪಂಡಿತ್ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡು ಅವನಿಗೆ ಬೇರೆ ಆಹಾರಗಳಿಗಿಂತ ಅವನ ಅಪ್ಪನ ಮೂಗೆ ತುಂಬಾ ರುಚಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮಗನ ಫೋಟೋ ಶೇರ್ ಮಾಡಿ ಕ್ಯೂರಿಯಾಸಿಟಿ ಹುಟ್ಟಿಸಿದ ರಾಧಿಕಾ ಪಂಡಿತ್

     

    View this post on Instagram

     

    A post shared by Radhika Pandit (@iamradhikapandit)

    ಯಥರ್ವ್ ಅವರ ಅಪ್ಪನನ್ನು ರೇಗಿಸಿ ಸ್ಮೈಲ್ ಮಾಡುತ್ತಿದ್ದಾನೆ. ನನ್ನ ಮುಂದಿನ ಪೋಸ್ಟ್ ನಲ್ಲಿ ವೀಡಿಯೋ ಅಪ್‍ಲೋಡ್ ಮಾಡುತ್ತೇನೆ ಬರೆದುಕೊಂಡು ಮುದ್ದಾದ ಫೋಟೋವನ್ನು ಕೆಲವು ದಿನಗಳ ಹಿಂದೆ ರಾಧಿಕಾ ಪಂಡಿತ್ ಹಂಚಿಕೊಂಡಿದ್ದರು. ಹಾಗೇ ಅಭಿಮಾನಿಗಳಲ್ಲಿ ಕ್ಯೂರಿಯಾಸಿಟಿಯನ್ನು ಹುಟ್ಟಿಸಿದ್ದರು. ಇದೀಗ ವೀಡಿಯೋ ಹಂಚಿಕೊಂಡಿದ್ದು ಸಖತ್ ವೈರಲ್ ಆಗುತ್ತಿದೆ.

     

    View this post on Instagram

     

    A post shared by Radhika Pandit (@iamradhikapandit)

    ನಿಮ್ಮ ಮುದ್ದಾದ ಮಕ್ಕಳ ಜೊತೆಗೆ ಒಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬನ್ನಿ, ನಿಮ್ಮ ಮಗನ ನಗು ತುಂಬ ಮುದ್ದಾಗಿದೆ. ಅಪ್ಪ, ಮಗನ ಕುಸ್ತಿಯನ್ನು ಮೆಚ್ಚಿ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

  • ವೀಡಿಯೋ ವೈರಲ್: ಸೀರೆಯುಟ್ಟು ಮ್ಯಾನ್‍ಹೋಲ್‍ಗೆ ಇಳಿದ ಮುನ್ಸಿಪಲ್ ಆಫೀಸರ್

    ವೀಡಿಯೋ ವೈರಲ್: ಸೀರೆಯುಟ್ಟು ಮ್ಯಾನ್‍ಹೋಲ್‍ಗೆ ಇಳಿದ ಮುನ್ಸಿಪಲ್ ಆಫೀಸರ್

    ಮುಂಬೈ: ಸ್ವಚ್ಛತಾ ಕಾಮಗಾರಿಯ ವೇಳೆ ಕಾರ್ಮಿಕರನ್ನು ಮ್ಯಾನ್‍ಹೋಲ್‍ಗೆ ದಬಾಯಿಸಿ ಇಳಿಸುವ ಅಧಿಕಾರಿಗಳನ್ನು ನಾವು ನೋಡಿದ್ದೇವೆ. ಅದರೆ ಸೀರೆಯುಟ್ಟು ಮ್ಯಾನ್‍ಹೋಲ್‍ಗೆ ಇಳಿದು ಕೆಲಸ ಮಾಡಿಸುತ್ತಿರುವ ಮುನ್ಸಿಪಲ್ ಆಫೀಸರ್ ಅಧಿಕಾರಿಯ ವೀಡಿಯೋ ವೈರಲ್ ಆಗಿದೆ.

    ಥಾಣೆಯಲ್ಲಿ ಮಳೆ ಹೆಚ್ಚಾಗಿರುವುದರಿಂದ ಮಳೆ ನೀರು ಸರಾಗವಾಗಿ ಹೋಗಲು ಚರಂಡಿ ವ್ಯವಸ್ಥೆ ಸರಿ ಇದೆಯೇ ಎಂದು ಮಹಿಳಾ ಅಧಿಕಾರಿ ಪರಿಶೀಲನೆ ನಡೆಸಿದ್ದಾರೆ. ಭಿವಾಂಡಿ-ನಿಜಾಂಪುರ್ ಮುನ್ಸಿಪಲ್ ಕಾರ್ಪೋರೇಷನ್ (ಬಿಎನ್‍ಎಂಸಿ)ನ ಸ್ಯಾನಿಟರಿ ಇನ್ಸ್‍ಪೆಕ್ಟರ್ ಸುವಿಧಾ ಚವಾಣ್, ಮರದ ಏಣಿಯ ಸಹಾಯದಿಂದ ಮ್ಯಾನ್ ಹೋಲ್ ಒಳಗೆ ಇಳಿದು ಪರಿಶಿಲನೆ ನಡೆಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಕತ್ತೆಗಳ ಸಂಖ್ಯೆ ಹೆಚ್ಚಳ

    ವೀಡಿಯೋದಲ್ಲಿ ಏನಿದೆ:
    ಮ್ಯಾನ್‍ಹೋಲ್‍ನಲ್ಲಿ ಸ್ವಚ್ಛತಾ ಕೆಲಸ ನಡೆಯುತ್ತಿತ್ತು. ವೇಳೆ ಅಲ್ಲಿಗೆ ಬಂದ ಮಹಿಳಾ ಅಧಿಕಾರಿ ಸ್ವತಃ ಮ್ಯಾನ್‍ಹೋಲ್ ಒಳಕ್ಕೆ ಇಳಿದಿದ್ದಾರೆ. ಮ್ಯಾನ್‍ಹೋಲ್‍ಗೆ ಮರದ ಏಣಿಯೊಂದನ್ನು ಇರಿಸಿ ಉಟ್ಟ ಸೀರೆಯಲ್ಲೇ ಕೆಳಕ್ಕಿಳಿದ ಸುವಿಧಾ, ಒಳಗೆ ಏನೇನು ಕೆಲಸ ನಡೆಯುತ್ತಿದೆ ಎಂದು ಫೋಟೋ ತೆಗೆದು, ಅಲ್ಲಿದ್ದ ಕಾರ್ಮಿಕರ ಬಳಿ ಮಾತನಾಡಿ ಸ್ವಚ್ಛತಾ ಕೆಲಸ ಪರಿಶೀಲನೆ ಮಾಡಿದ್ದಾರೆ. ಈ ಘಟನೆಯ ವೀಡಿಯೋ ಈಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಘಟನೆ ಮಹಾರಾಷ್ಟ್ರದ ಭಿವಾಂಡಿ, ನಿಜಾಮ್‍ಪುರ್ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ಫೀಸ್ ಕಟ್ಟುವಂತೆ ಒತ್ತಾಯ ಮಾಡುವ ಶಾಲೆಗಳ ವಿರುದ್ಧ ಕ್ರಮ: ಸಿಎಂ

    ಮುಂಗಾರು ಪ್ರಾರಂಭವಾಗುತ್ತಿರುವುದರಿಂದ ಅವ್ಯವಸ್ಥೆ ಆಗದಂತೆ ನೋಡಿಕೊಳ್ಳುವುದಕ್ಕಾಗಿ ಪಾಲಿಕೆ ವ್ಯಾಪ್ತಿಯ ವಿವಿಧೆಡೆ ಸ್ವಚ್ಛತಾ ಕಾರ್ಯಗಳ ಬಗ್ಗೆ ಹೀಗೆಯೇ ನಿಗಾ ವಹಿಸುತ್ತಿದ್ದು, ಇವರು ಇಷ್ಟೊಂದು ಮುತುವರ್ಜಿ ವಹಿಸಿ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿ ಇಂತಹ ಅಧಿಕಾರಿಗಳು ಇರಬೇಕು ಎಂದು ಶ್ಲಾಘಿಸುತ್ತಿದ್ದಾರೆ.

     

  • 36 ಪತ್ನಿಯರ ಎದುರು 37ನೇ ಮದುವೆಯಾದ- ವೀಡಿಯೋ ವೈರಲ್

    36 ಪತ್ನಿಯರ ಎದುರು 37ನೇ ಮದುವೆಯಾದ- ವೀಡಿಯೋ ವೈರಲ್

    ಹಿಂದೆಲ್ಲ ರಾಜರು ಡಜನ್‍ಗಟ್ಟಲೆ ಮದುವೆಯಾಗುತ್ತಿದ್ದರು ಎಂಬ ಕತೆಗಳನ್ನು ಓದಿದ್ದೇವೆ. ರಾಜ ಎಷ್ಟೇ ಮದುವೆಯಾದರೂ ಉಳಿದ ಪತ್ನಿಯರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿರಲಿಲ್ಲ. ಇಂತಹದ್ದೆ ಒಂದು ಘಟನೆ ಇದೀಗ ಸುದ್ದಿಯಾಗಿದೆ.

    21ನೇ ಶತಮಾನದಲ್ಲೂ ವ್ಯಕ್ತಿಯೊಬ್ಬ ಬರೋಬ್ಬರಿ 37 ಮದುವೆಯಾಗಿದ್ದಾನೆ. ಅದೂ, ಉಳಿದ  ಪತ್ನಿಯರ ಎದುರಿಗೇ 37ನೇ ಪತ್ನಿಯನ್ನು ವರಿಸಿದ್ದಾನೆ. ಮದುವೆಯಾಗುತ್ತಿರುವ ವೀಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ತೆರಿಗೆ ಕಟ್ಟಲು ಆಗ್ತಿಲ್ಲ – ಅಳಲು ತೋಡಿಕೊಂಡ ಕಂಗನಾ

    ಇದು ಅವರ 37ನೇ ಮದುವೆ ಎಂದು ಹೇಳಲಾಗಿದ್ದು, ಈ ವಿವಾಹಕ್ಕೆ ಅವರ ಉಳಿದ 28 ಪತ್ನಿಯರು, 35 ಮಕ್ಕಳು ಮತ್ತು 126 ಮರಿಮೊಮ್ಮಕ್ಕಳು ಸಾಕ್ಷಿಯಾಗಿದ್ದಾರೆ. ಈ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ.

    ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ ಎಂಬುವರು 45 ಸೆಕೆಂಡ್‍ಗಳ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಅತ್ಯಂತ ಧೈರ್ಯಶಾಲಿ ವ್ಯಕ್ತಿ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಆದರೆ ಈ ವೀಡಿಯೋ ಎಲ್ಲಿ, ಯಾವಾಗ ಚಿತ್ರೀಕರಿಸಿದ್ದು ಎಂಬುದು ಗೊತ್ತಾಗಿಲ್ಲ. ಆದರೆ ನೆಟ್ಟಿಗರು ವಿವಿಧ ಕಾಮೆಂಟ್‍ಗಳನ್ನು ಹಾಕಿದ್ದಾರೆ.

    ಈ ಹಿಂದೆ ತೈವಾನ್‍ನ ವ್ಯಕ್ತಿಯೊಬ್ಬ ಒಂದೇ ಮಹಿಳೆಯನ್ನು 37 ದಿನಗಳಲ್ಲಿ, ನಾಲ್ಕು ಬಾರಿ ಮದುವೆಯಾಗಿ, ಮೂರು ಬಾರಿ ವಿಚ್ಛೇದನ ನೀಡಿ ಸುದ್ದಿಯಾಗಿದ್ದರು.

  • ವೀಡಿಯೋ- ತನ್ನದೇ ನೆರಳು ನೋಡಿ ಹಾಯ್ ಅನ್ನುತ್ತಾ ಖುಪಿ ಪಟ್ಟಿದ್ದ ಐರಾ..!

    ವೀಡಿಯೋ- ತನ್ನದೇ ನೆರಳು ನೋಡಿ ಹಾಯ್ ಅನ್ನುತ್ತಾ ಖುಪಿ ಪಟ್ಟಿದ್ದ ಐರಾ..!

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿಯ ರಾಧಿಕಾ ಪಂಡಿತ್ ಅವರು ತಮ್ಮ ಪುತ್ರಿ ಐರಾ ಫ್ರೆಂಡ್ ನೋಡಿ ಸಖತ್ ಎಂಜಾಯ್ ಮಾಡುತ್ತಿರುವ ವೀಡಿಯೋವನ್ನು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ರಾಕಿಂಗ್‍ಸ್ಟಾರ್ ಯಶ್ ಸ್ಯಾಂಡಲ್‍ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಮುದ್ದಿನ ಮಗಳು ಐರಾಗೆ ಅಪ್ಪ-ಅಮ್ಮನಿಗೆ ಇರುವಂತೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಸದ್ಯ ರಾಧಿಕಾ ಪಂಡಿತ್ ಪೋಸ್ಟ್ ಮಾಡಿರುವ ಐರಾಳ ಹಳೆಯ ವೀಡಿಯೋವೊಂದರಲ್ಲಿ ಐರಾ ತನ್ನ ಮೊದಲ ಫ್ರೆಂಡ್ ಜೊತೆಗೆ ಮಾತುಕತೆ ನಡೆಸುತ್ತಿರುವ ವೀಡಿಯೋವಾಗಿದೆ.ಇದನ್ನೂ ಓದಿ: ಮದುವೆಯಾಗುವುದಾಗಿ ನಂಬಿಸಿ ಬಾಲಕಿಯ ಮೇಲೆ ಅತ್ಯಾಚಾರ- ಆರೋಪಿ ಬಂಧನ

     

    View this post on Instagram

     

    A post shared by Radhika Pandit (@iamradhikapandit)

    ಈ ವೀಡಿಯೋದಲ್ಲಿ ಮುದ್ದು ಐರಾ ಮೊದ ಮೊದಲು ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುತ್ತಿದ್ದಳಷ್ಟೆ. ತಾಯಿ ರಾಧಿಕಾ ಪಂಡಿತ್ ಹಾಗೂ ಅಜ್ಜಿಯ ಜೊತೆ ವಾಕ್ ಮಾಡುತ್ತಿರುವ ಐರಾಗೆ ಹೊಸ ಫ್ರೆಂಡ್ ಪರಿಚಯವಾಗಿತ್ತು. ನೆರಳು ಕಂಡು ಕೈ ಬೀಸಿ ಹಾಯ್ ಅಂದಿದ್ದಾಳೆ. ಐರಾಳ ಈ ಮುಗ್ಧತೆಯನ್ನು ನೋಡಿ ರಾಧಿಕಾ ಹಾಗೂ ಅವರ ತಾಯಿ ಖುಷಿಯಿಂದ ನಗುತ್ತಿರುವ ದೃಶ್ಯಗಳು ವೀಡಿಯೋದಲ್ಲಿದೆ. ಈ ವೀಡಿಯೋವನ್ನು ರಾಧಿಕಾ ಪಂಡಿತ್ ಹಂಚಿಕೊಡಿದ್ದು, ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

     

    View this post on Instagram

     

    A post shared by Radhika Pandit (@iamradhikapandit)

    ಆಗಿನ್ನೂ ಐರಾ ಹೆಚ್ಚೆ ಇಡೋದನ್ನ ಕಲಿಯುತ್ತದ್ದಳಷ್ಟೆ. ಆದರೆ ಒಬ್ಬ ಫ್ರೆಂಡ್‍ನಿಂದಾಗಿ ಅವಳ ಗಮನ ಬೇರೆ ಕಡೆಗೆ ಹೋಗಿತ್ತು. ಅದೇ ಅವಳ ನೆರಳು. ಮಕ್ಕಳು ಒಂದು ಅದ್ಭುತ ಗುಣವೇ ಇದು. ಮಕ್ಕಳು ಯಾರನ್ನೂ ಯಾವುದನ್ನೂ ಜಡ್ಜ್ ಮಾಡಲ್ಲ ಎಂದು ಬರೆದುಕೊಂಡು ಮಗಳ ಈ ಕ್ಯೂಟ್ ಆಗಿರುವ ವೀಡಿಯೋವನ್ನು ರಾಧಿಕಾ ಹಂಚಿಕೊಂಡಿದ್ದಾರೆ.

    ಕೆಲವುದಿನಗಳ ಹಿಂದೆ ರಾಧಿಕಾ ಪಂಡಿತ್ ಕೊರೊನಾ ವೈರಸ್ ಮತ್ತು ಲಾಕ್‍ಡೌನ್‍ನಿಂದ ಉಂಟಾಗಿರುವ ಕಷ್ಟದ ಪರಿಸ್ಥಿತಿಯಲ್ಲಿ ಎಲ್ಲರಿಗೂ ಧೈರ್ಯ ತುಂಬಲು ಇನ್ ಸ್ಟಾಗ್ರಾಮ್‍ನಲ್ಲಿ ಹೊಸ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅವರು ಕೆಲವು ವಿಚಾರಗಳನ್ನು ಬರೆದುಕೊಂಡಿದ್ದರು. ಪ್ರೀತಿಯ ಹಿತೈಷಿಗಳು ಮತ್ತು ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರಲು ಸಾಧ್ಯವಾಗದೇ ಇರುವುದಕ್ಕೆ ಕ್ಷಮೆ ಕೇಳುತ್ತೇನೆ. ನಿಮ್ಮಲ್ಲಿ ನಗು ಮೂಡಿಸಲು ಇನ್ಮುಂದೆ ಖುಷಿಯಾದ ಪಾಸಿಟಿವ್ ಪೋಸ್ಟ್​ಗಳನ್ನು ಹಾಕುತ್ತೇನೆ ಎಂದು ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದರು.

    ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿರುತ್ತಿದ್ದ ರಾಧಿಕಾ ಪಂಡಿತ್ ಅವರು ಇತ್ತೀಚೆಗೆ ಪೋಸ್ಟ್​ಗಳನ್ನು ಪ್ರಕಟಿಸುತ್ತಿರಲಿಲ್ಲ. ಈ ಬಗ್ಗೆ ಅಭಿಮಾನಿಗಳು ಪ್ರಶ್ನೆ ಕೇಳಿದ್ದರು. ಅದಕ್ಕಾಗಿ ಅವರು ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದರು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ.