Tag: ವೀಡಿಯೋ ವೈರಲ್

  • ಕಳ್ಳತನ ಮಾಡುವುದಕ್ಕೂ ಮುನ್ನ ದೇವರ ಪಾದ ಮುಟ್ಟಿ ನಮಸ್ಕರಿಸಿದ!- ವೀಡಿಯೋ ವೈರಲ್

    ಕಳ್ಳತನ ಮಾಡುವುದಕ್ಕೂ ಮುನ್ನ ದೇವರ ಪಾದ ಮುಟ್ಟಿ ನಮಸ್ಕರಿಸಿದ!- ವೀಡಿಯೋ ವೈರಲ್

    ಮುಂಬೈ: ಎಲ್ಲ ಕಳ್ಳರು ದುಡ್ಡು ಸಿಕ್ಕರೆ ಸಾಕು ಮೊದಲು ಅಲ್ಲಿಂದ ಹೊರಟು ಹೋಗಬೇಕು ಎನ್ನುವಾಗ ಇಲ್ಲೊಬ್ಬ ಕಳ್ಳ ದೇವರ ಪಾದಕ್ಕೆ ನಮಸ್ಕರಿಸಿದ ವಿಲಕ್ಷಣ ಘಟನೆಯೊಂದು ಮಹಾರಾಷ್ಟ್ರದ ಥಾಣೆ ನಗರದ ದೇವಸ್ಥಾನದಲ್ಲಿ ನಡೆದಿದೆ.

    ಮಹಾರಾಷ್ಟ್ರದ ಥಾಣೆ ನಗರದ ಖೋಪಾಟ್ ಪ್ರದೇಶದ ಹನುಮಂತ ದೇವಸ್ಥಾನಕ್ಕೆ ನುಗ್ಗಿದ ಕಳ್ಳನೊಬ್ಬ ಹುಂಡಿಯನ್ನು ಕದಿಯಲು ಬಂದಿದ್ದಾನೆ. ಆದರೆ ಇಲ್ಲಿರುವ ವಿಶೇಷವೆಂದರೆ ಆತ ಹಣ ಕದಿಯುವ ಮುನ್ನ ಹನುಮಾನ್ ದೇವರ ಕಾಲಿಗೆ ಬಿದ್ದು, ಪ್ರಾರ್ಥನೆ ಮಾಡಿದ್ದಾನೆ. ನಂತರ ವಿಗ್ರಹದ ಮುಂದೆ ಇದ್ದ ಹುಂಡಿಯನ್ನು ಕದ್ದು ಪರಾರಿಯಾಗಿದ್ದಾನೆ. ಪ್ರಸ್ತುತ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ತಮಿಳು ಚಿತ್ರತಂಡದ ನಂತರ ಮತ್ತೆ ಸಕ್ಕರೆ ನಾಡಿನಲ್ಲಿ ತೆಲುಗು ಸಿನಿಮಾದವರಿಂದ ಅವಾಂತರ

    ದೇವಸ್ಥಾನಕ್ಕೆ ಬೆಳಗ್ಗೆ ಬಂದು ನೋಡಿದ ನಂತರ ಕಳ್ಳತನವಾಗಿರುವುದು ತಿಳಿದುಬಂದಿದೆ. ನಂತರ ಪೊಲೀಸರಿಗೆ ಈ ಮಾಹಿತಿ ತಿಳಿಸಿದ್ದು, ಅವರು ಸಿಸಿಟಿವಿಯನ್ನು ಪರಿಶೀಲಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.

    ಪ್ರಸ್ತುತ ನೌಪದ ಪೊಲೀಸರು ಶನಿವಾರ ಆರೋಪಿಯನ್ನು ಬಂಧಿಸಿದ್ದು, ಆತ ಕದ್ದ ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ

  • ಫೋಟೋ ಶೂಟ್ ಮಾಡಿಸಲು ಹೋಗಿ ನದಿಯೊಳಗೆ ಬಿದ್ದ ಮಹಿಳೆ – ವೀಡಿಯೋ ವೈರಲ್

    ಫೋಟೋ ಶೂಟ್ ಮಾಡಿಸಲು ಹೋಗಿ ನದಿಯೊಳಗೆ ಬಿದ್ದ ಮಹಿಳೆ – ವೀಡಿಯೋ ವೈರಲ್

    ದಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಳ್ಳಲು ಹೋಗಿ ಮಹಿಳೆ ನೀರಿನೊಳಗೆ ಬಿದ್ದಿರುವ ಹಾಸ್ಯಮಯ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    Photoshoot

    ಮಹಿಳೆಯೊಬ್ಬರು ನದಿಯ ದಡದಲ್ಲಿ ಸುಂದರವಾದ ಪಿಂಕ್ ಕಲರ್ ಲಾಂಗ್ ಡ್ರೆಸ್ ಅನ್ನು ಧರಿಸಿ, ಹೇರ್ ಸ್ಟೈಲ್ ಮಾಡಿಸಿಕೊಂಡು ತೂಗಾಡುವ ಉಯ್ಯಾಲೆಯ ಮೇಲೆ ಕುಳಿತುಕೊಂಡಿರುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ಪ್ರಾಕೃತಿಕ ವಿಕೋಪಕ್ಕೆ ಚೆನ್ನೈ ತತ್ತರ – ಹಿಂದಿಗಿಂತ 5.5 ಪಟ್ಟು ಹೆಚ್ಚು ಮಳೆ

    ಈ ಉಯ್ಯಾಲೆಯನ್ನು ಮರದ ಹಲಗೆಯಿಂದ ಸಿದ್ಧಪಡಿಸಲಾಗಿದ್ದು, ಅದನ್ನು ಹಗ್ಗದಿಂದ ನೇತಾಡುವಂತೆ ಕಟ್ಟಲಾಗಿತ್ತು. ನಂತರ ಫೋಟೋ ಶೂಟ್ ಮಾಡಿಸಲು ಮಹಿಳೆ ಉಯ್ಯಾಲೆ ಮೇಲೆ ಕುಳಿತು ಸ್ಟೈಲ್ ಆಗಿ ಕ್ಯಾಮೆರಾಗೆ ಪೋಸ್ ನೀಡುತ್ತಿರುತ್ತಾರೆ. ಅಲ್ಲದೇ ಫೋಟೋ ಸೆರೆಹಿಡಿಯುವ ವೇಳೆ ಮಹಿಳೆಯ ಲಾಂಗ್ ಡ್ರೆಸ್ ಅನ್ನು ದೂರದಿಂದ ವ್ಯಕ್ತಿಯೊಬ್ಬರು ಕೈಯಲ್ಲಿ ಹಿಡಿದು ಗಾಳಿಯಲ್ಲಿ ಅಲುಗಾಡಿಸಲು ಪ್ರಯತ್ನಿಸುತ್ತಾರೆ. ಆಗ ಮಹಿಳೆಯ ತೂಕಕ್ಕೆ ಉಯ್ಯಾಲೆ ಮುರಿದು ನೀರಿನಲ್ಲಿ ಬೀಳುತ್ತದೆ. ಇದೇ ವೇಳೆ ಉಯ್ಯಾಲೆ ಜೊತೆ ನೀರಿನೊಳಗೆ ಬಿದ್ದ ಮಹಿಳೆ ನೀರಿನಿಂದ ಮೇಲಕ್ಕೆ ಎದ್ದು ಸ್ವತಃ ತಾವೇ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ. ಇದನ್ನೂ ಓದಿ: ನನ್ನ ಸಾವಿಗೆ ಪಕ್ಷದ ಮುಖಂಡರೇ ಕಾರಣ – ಪಟ್ಟಣ ಪಂಚಾಯ್ತಿ ಸದಸ್ಯೆ ಆತ್ಮಹತ್ಯೆಗೆ ಯತ್ನ

    ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇಲ್ಲಿಯವರೆಗೂ 5,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಜೊತೆಗೆ ಅನೇಕ ಲೈಕ್ಸ್ ಹಾಗೂ ಕಾಮೆಂಟ್‍ಗಳು ಹರಿದುಬಂದಿದೆ.

  • ವೀಡಿಯೋ-ಚಾಟಿ ಏಟು ತಿಂದ ಛತ್ತೀಸ್‍ಗಢ ಸಿಎಂ

    ವೀಡಿಯೋ-ಚಾಟಿ ಏಟು ತಿಂದ ಛತ್ತೀಸ್‍ಗಢ ಸಿಎಂ

    ರಾಯ್ಪುರ್: ಛತ್ತೀಸ್‍ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಗೋವರ್ಧನ ಪೂಜೆಯ ಭಾಗವಾಗಿ ಚಾಟಿ ಏಟನ್ನು ಸ್ವೀಕರಿಸಿದ್ದಾರೆ. ಈ ವೀಡಿಯೋ ಸಖತ್ ವೈರಲ್ ಆಗಿದೆ.

    ಛತ್ತೀಸ್‍ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ದುರ್ಗ್‍ನಲ್ಲಿ ಗೋವರ್ಧನ ಪೂಜೆಯ ಆಚರಣೆಯ ಅಂಗವಾಗಿ ಚಾಟಿಯಿಂದ ಹೊಡೆಸಿಕೊಂಡಿದ್ದಾರೆ. ದುರ್ಗ್ ಜಿಲ್ಲೆಯ ಜಾಂಜ್ ಗರಿ ಗ್ರಾಮದಲ್ಲಿ ಗೋವರ್ಧನ ಪೂಜೆಯಲ್ಲಿ ಪಾಲ್ಗೊಂಡು ಪ್ರತಿ ವರ್ಷದಂತೆ ಈ ಬಾರಿಯೂ ಹುಲ್ಲಿನಿಂದ ಮಾಡಿದ ಚಾಟಿ ಏಟು ತಿನ್ನುವ ಸಂಪ್ರದಾಯವನ್ನು ಪಾಲಿಸಿದ್ದಾರೆ. ರಾಜ್ಯದ ಒಳಿತಿಗಾಗಿ ಪ್ರಾರ್ಥಿಸಿದ್ದು, ನಮ್ಮ ನೆಲದ ಅಸ್ಮಿತೆಯನ್ನು ಕಾಪಾಡುವುದು ಮತ್ತು ಅದನ್ನು ಉತ್ತೇಜಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಸಿಎಂ ಬಘೇಲ್ ಹೇಳಿದ್ದಾರೆ. ಇದನ್ನೂ ಓದಿ:  ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಿಂದ ಬೊಕ್ಕಸಕ್ಕೆ 2,100 ಕೋಟಿ ಆದಾಯ ನಷ್ಟ: ಸಿಎಂ

    ವೀಡಿಯೋದಲ್ಲಿ ಏನಿದೆ?: ದೇವಸ್ಥಾನದ ಸಿಬ್ಬಂದಿಯೋರ್ವ ಸಿಎಂ ಅವರಿಗೆ ಚಾಟಿಯಿಂದ ಕೈಗೆ ಹೊಡೆಯುತ್ತಿರುವುದನ್ನು ನೋಡಹುದು. ಈ ವೇಳೆ ಡೋಲು ಇತರೇ ಸಾಂಪ್ರದಾಯಿಕ ವಾದ್ಯಗಳನ್ನು ಬಾರಿಸಲಾಗುತ್ತಿತ್ತು. ಈ ವೀಡಿಯೋವನ್ನು ಛತ್ತೀಸ್‍ಗಢದ ದುರ್ಗ್ ಜಿಲ್ಲೆಯ ದೇವಾಲಯವೊಂದರಲ್ಲಿ ಚಿತ್ರೀಕರಿಸಲಾಗಿದೆ. ಬರೋಬ್ಬರಿ 8 ಬಾರಿ ಸಿಎಂ ಚಾಟಿ ಎಟು ಕೊಟ್ಟ ವ್ಯಕ್ತಿ. ಬಳಿಕ ಸಿಎಂ ಅವರನ್ನು ಅಪ್ಪಿಕೊಂಡು ಧನ್ಯವಾದ ತಿಳಿಸಿದ್ದಾರೆ ಈ ವೀಡಿಯೋವನ್ನು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹಂಚಿಕೊಂಡಿದ್ದು, ದೆವರಿಗೆ ಹರಕೆ ಮಾಡಿಕೊಂಡಿದ್ದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಪೆಟ್ರೋಲ್ 100.63, ಡೀಸೆಲ್ 85.03ರೂ. – ಸರ್ಕಾರದಿಂದ ಅಧಿಕೃತ ಅಧಿಸೂಚನೆ

    ದೀಪಾವಳಿಯ ಮರುದಿನ ಪ್ರತಿವರ್ಷ ಗೋವರ್ಧನ ಪೂಜೆಯನ್ನು ನಡೆಸಲಾಗುತ್ತದೆ. ಈ ವರ್ಷ ಹಬ್ಬವನ್ನು ಇಂದು ಆಚರಸಲಾಗಿದೆ. ಶ್ರೀಕೃಷ್ಣ ಇದೇ ದಿನದಂದು ಗೋವರ್ಧನ ಪರ್ವತವನ್ನು ಕಿರುಬೆರಳಿನಲ್ಲಿ ಎತ್ತಿ ಜನರನ್ನು ರಕ್ಷಣೆ ಮಾಡಿ ಇಂಧ್ರದೇವನ ಅಹಂಕರವನ್ನು ಅಡಗಿಸಿದ್ದ ಎಂಬ ಧಾರ್ಮಿಕ ನಂಬಿಕೆ ಸ್ಥಳೀಯರಲ್ಲಿದೆ. ಈ ದಿನದಂದು ದೇವಾಲಯದಲ್ಲಿ ಚಾಟಿ ಏಟು ಸ್ವೀಕರಿಸಿದರೇ ಕಷ್ಟಗಳು ದೂರವಾಗಿ ಜೀವನದಲ್ಲಿ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಸ್ಥಳೀಯರಲ್ಲಿದೆ.

  • ಬಾರ್ ಮಾಲೀಕರಿಂದ ದುಪ್ಪಟ್ಟು ಹಣ ವಸೂಲಿ – ವೀಡಿಯೋ ವೈರಲ್

    ಬಾರ್ ಮಾಲೀಕರಿಂದ ದುಪ್ಪಟ್ಟು ಹಣ ವಸೂಲಿ – ವೀಡಿಯೋ ವೈರಲ್

    ನೆಲಮಂಗಲ: ಮದ್ಯಪ್ರಿರಿಯರಿಗೆ ಬಾರ್ ಮಾಲೀಕರು ಮಹಾ ಮೋಸ ಮಾಡಿ ವಸೂಲಿಗಿಳಿದಿದ್ದಾರೆ ಎಂಬ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಟಾಬಯಲಾಗಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ನಗರದಲ್ಲಿರುವ ಕೆಲವು ಬಾರ್, ವೈನ್ ಹಾಗೂ ಬಾರ್ ಅಂಡ್ ರೆಸ್ಟೋರೆಂಟ್ ಗಳಲ್ಲಿ ಮದ್ಯದ ದರಕ್ಕಿಂತ ಸುಮಾರು 30% ರಿಂದ 40% ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಮಾಡಿ ಮದ್ಯಪ್ರಿಯರಿಗೆ ಮಹಾ ಮೋಸ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಇಂದಿರಾ ಗಾಂಧಿಯನ್ನು ಏಕವಚನದಲ್ಲಿ ಬೈಯ್ದಿದ್ದಾರೆ – ಸಿದ್ದುಗೆ ಕಟೀಲ್ ಸವಾಲು

    ಹೆಚ್ಚಿನ ದರಕ್ಕೆ ಮದ್ಯಮಾರಾಟದ ಹಿಂದೆ ನೆಲಮಂಗಲ ಅಬಕಾರಿ ಇಲಾಖೆ ಅಧಿಕಾರಿಗಳು ಶಾಮೀಲಾಗಿರುವ ಆರೋಪ ಕೂಡ ಇದ್ದು, ಬಾರ್ ಅಂಡ್ ರೆಸ್ಟೊರೆಂಟ್ ಅಲ್ಲಿ ಬಿಲ್ ಕೇಳಿದ್ರೆ ಮದ್ಯನೆ ಕೊಡಲ್ಲ ಎಂಬ ಆರೋಪ ಕೂಡ ಇದೆ. ಅದು ಅಲ್ಲದೇ ಈ ಎಲ್ಲ ಅಕ್ರಮಗಳಿಗೆ ಕಡಿವಾಣ ಹಾಕುವಂತೆ ಸಾಮಾಜಿಕ ಜಾಲತಾಣದಲ್ಲಿ ಆಗ್ರಹ ಮಾಡಿದ್ದು, ಅಧಿಕಾರಿಗಳ ಜಾಣ ಕುರುಡುತನಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕೂಡಲೇ ಇಂತಹ ಅಕ್ರಮಕ್ಕೆ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕೆಂದು ಜನರು ಆಗ್ರಹಿಸಿದ್ದಾರೆ.

  • ಸಮ್ಮರ್ ಆಫ್ 69 ಸಾಂಗ್ ಹಾಡಿದ ಮೇಘಾಲಯ ಸಿಎಂ – ವೀಡಿಯೋ ವೈರಲ್

    ಸಮ್ಮರ್ ಆಫ್ 69 ಸಾಂಗ್ ಹಾಡಿದ ಮೇಘಾಲಯ ಸಿಎಂ – ವೀಡಿಯೋ ವೈರಲ್

    ಶಿಲ್ಲಾಂಗ್: ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು, ಬಿಯಾನ್ ಆಡಮ್ಸ್ ಅವರ ಜನಪ್ರಿಯ ಸಾಂಗ್‍ವೊಂದನ್ನು ಹಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    CM Conrad Sangma

    ಇಟಾನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ವೀಡಿಯೋವನ್ನು ಸೆರೆಹಿಡಿಯಲಾಗಿದ್ದು, ಕಾನ್ರಾಡ್ ಸಂಗ್ಮಾ ಅವರು ವೇದಿಕೆ ಮೇಲೆ ಸಮ್ಮರ್ ಆಫ್ 69 ಹಾಡನ್ನು ಸಖತ್ ಎಂಜಾಯ್ ಮಾಡುತ್ತಾ ಹಾಡುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ನಟಿ ಶ್ರೀಲೀಲಾ ನನ್ನ ಮಗಳಲ್ಲ – ವಿವಾದಾತ್ಮಕ ಹೇಳಿಕೆ ಕೊಟ್ಟ ಉದ್ಯಮಿ

    ಸದ್ಯ ಸಿಎಂ ಹಾಡಿರುವ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ವೀಡಿಯೋವನ್ನು ಇಲ್ಲಿಯವರೆಗೂ 12,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಕಾಮೆಂಟ್‍ಗಳ ಸುರಿ ಮಳೆಯೇ ಹರಿದುಬರುತ್ತಿದೆ. ಅಲ್ಲದೇ ಸಿಎಂ ಈ ಹಾಡನ್ನು ಹಾಡಿರುಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

    ಸಮ್ಮರ್ ಆಫ್ 69 ಗೀತೆ 1984ರಲ್ಲಿ ರೆಕ್ಲೆಸ್ ಆಲ್ಬಂನಲ್ಲಿ ಬಿಡುಗಡೆಯಾಗಿತ್ತು. ಬ್ರಿಯಾನ್ ಆಡಮ್ಸ್ ಅವರು ಅಭಿನಯಿಸಿದ್ದು, ಈ ಹಾಡು ಅಂದಿನ ಯುವಕರಿಗೆ ಫೇವರೇಟ್ ಹಾಗೂ ಬಹಳ ಫೇಮಸ್ ಆಗಿತ್ತು.  ಇದನ್ನೂ ಓದಿ:  ವಮಿಕಾ ಫೋಟೋ ಶೇರ್ ಮಾಡಿದ ಅನುಷ್ಕಾ

  • ನಾನು ಕಬಡ್ಡಿಯಾಡಿದ್ದನ್ನು ರಾವಣರು ವೀಡಿಯೋ ಮಾಡಿದ್ದಾರೆ: ಪ್ರಜ್ಞಾ ಠಾಕೂರ್

    ನಾನು ಕಬಡ್ಡಿಯಾಡಿದ್ದನ್ನು ರಾವಣರು ವೀಡಿಯೋ ಮಾಡಿದ್ದಾರೆ: ಪ್ರಜ್ಞಾ ಠಾಕೂರ್

    ಭೋಪಾಲ್: ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ಮೈದಾನದಲ್ಲಿ ಕಬಡ್ಡಿ ಆಡುತ್ತಿರುವ ವೀಡಿಯೊವೊಂದು ವೈರಲ್ ಆಗಿತ್ತು. ಈ ವೀಡಿಯೋ ಮೂಲಕವಾಗಿ ಇದೀಗ ಪ್ರಜ್ಞಾ ಸಿಂಗ್ ಠಾಕೂರ್ ಸುದ್ದಿಯಾಗುತ್ತಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಕಬಡ್ಡಿ ಆಡಿರುವ ವೀಡಿಯೋ ಚಿತ್ರೀಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಅಪ್‍ಲೋಡ್ ಮಾಡಿದವರು ರಾವಣರು. ದುರ್ಗಾ ಪೂಜೆಯ ವೇಳೆ ಆರತಿ ಬೆಳಗಲು ಹೋಗಿದ್ದೆ. ಮೈದಾನದಲ್ಲಿ ಆಟವಾಡುತ್ತಿದ್ದ ಕೆಲವು ಕ್ರೀಡಾಪಟುಗಳು ನನಗೆ ಕಬಡ್ಡಿ ಆಡುವಂತೆ ಕೇಳಿಕೊಂಡರು. ನನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದ ಸಿಂಧಿಗಳಲ್ಲಿ ಯಾರೋ ರಾವಣನ ವ್ಯಕ್ತಿತ್ವದವರು ಇದ್ದಾರೆ. ಅವರು ನನ್ನನ್ನು ದೊಡ್ಡ ಶತ್ರುವಿನಂತೆ ನೋಡುತ್ತಿದ್ದಾರೆ. ದೇಶಭಕ್ತರು, ಕ್ರಾಂತಿಕಾರಿಗಳು, ನನ್ನ ರೀತಿಯ ಸಂತರೊಡನೆ ಸಂಘರ್ಷಕ್ಕಿಳಿದರೆ ನಿಮ್ಮ ವೃದ್ಧಾಪ್ಯ ಮತ್ತು ಮುಂದಿನ ಜನ್ಮವೂ ಹಾಳಾಗಿ ಹೋಗುತ್ತದೆ ಎಂದು ಪ್ರಜ್ಞಾ ಸಿಂಗ್ ಠಾಕೂರ್ ಕಿಡಿ ಕಾರಿದ್ದಾರೆ. ಇದನ್ನೂ ಓದಿ:  ಗೋಮೂತ್ರದಿಂದ ನನ್ನ ಸ್ತನಕ್ಯಾನ್ಸರ್ ವಾಸಿಯಾಯ್ತು- ಸಾಧ್ವಿ ಪ್ರಜ್ಞಾಸಿಂಗ್

    ಪ್ರಜ್ಞಾ ಸಿಂಗ್  ಮಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದರು. ಆದರೆ ವೈದ್ಯಕೀಯ ಆಧಾರದ ಮೇಲೆ ಜಾಮೀನು ನೀಡಲಾಗಿತ್ತು. ಸಾಕಷ್ಟು ಸಮಯದಿಂದ ವ್ಹೀಲ್ ಚೇರ್ ಮೇಲೆ ಕುಳಿತೇ ಸಂಚರಿಸುತ್ತಿದ್ದರು. ಆದರೆ ಮೈದಾನದಲ್ಲಿ ಅವರು ಕಬಡ್ಡಿ ಆಡುತ್ತಿರುವ ವೀಡಿಯೊವೊಂದು ವೈರಲ್ ಆಗಿದೆ. ಠಾಕೂರ್ ಕಬಡ್ಡಿ ಆಡುತ್ತಿರುವ ವೀಡಿಯೋ ನೋಡಿದವರು ಆಶ್ಚರ್ಯ ಹೊರಹಾಕಿದ್ದಾರೆ. ಜೈಲು ವಾಸದಿಂದ ತಪ್ಪಿಸಿಕೊಳ್ಳಲು ಅವರು ಅನಾರೋಗ್ಯದ ಕಾರಣವೊಡ್ಡಿದ್ದಾರೆ. ವೈದ್ಯಕೀಯ ಕಾರಣ ನೀಡಿ ಜಾಮೀನು ಪಡೆದಿದ್ದ ಪ್ರಜ್ಞಾ ಸಿಂಗ್ ಠಾಕೂರ್ ಕಬಡ್ಡಿ ಆಡುವಷ್ಟು ದೈಹಿಕವಾಗಿ ಫಿಟ್ ಇದ್ದಾರೆ ಎಂದ ಮೇಲೆ ಜಾಮೀನು ಪಡೆದಿದ್ದೇಕೆ? ಎಂದು ನೆಟ್ಟಿಗರು ಟೀಕಿಸಿದ್ದಾರೆ. ಇದನ್ನೂ ಓದಿ:   EXCLUSIVE: ಸಿನಿಮಾಗೂ ಸಿಗದೇ ಇರುವ ಪಬ್ಲಿಸಿಟಿ ರಿಲೀಸ್ ಆಗದ ದಿನ ಸಿಕ್ತು: ಕಿಚ್ಚ

  • ಹಾಡಿನ ಮೂಲಕ ನೋವು ತೋಡಿಕೊಂಡ ರೈತ – ವೀಡಿಯೋ ವೈರಲ್

    ಹಾಡಿನ ಮೂಲಕ ನೋವು ತೋಡಿಕೊಂಡ ರೈತ – ವೀಡಿಯೋ ವೈರಲ್

    ಬೀದರ್: ಮಳೆ ನಿಂತರು ರೈತರ ಜಮೀನಿನಲ್ಲಿ ನೀರು ನಿಂತ್ತಿದ್ದು, ಸೋಯಾ ಬೆಳೆ ಕಳೆದುಕೊಂಡ ರೈತ ಹಾಡಿನ ಮೂಲಕ ತನ್ನ ನೋವು ವ್ಯಕ್ತಪಡಿಸಿದ ವೀಡಿಯೋ ಈಗಾ ವೈರಲ್ ಆಗಿದೆ.

    ಸೋಯಾ ಬೆಳೆದಿದ್ದ ಬೆಳೆ ಕೊಳೆತು ಹೋಗಿರುವ ಜಮೀನಿನಲ್ಲಿ ನಿಂತ ರೈತ ಹಾಡು ಹಾಡುತ್ತಾ ತನ್ನ ಅಳಲು ತೋಡಿಕೊಂಡಿದ್ದಾರೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕುಂಟೆಸಿರ್ಸಿ ಗ್ರಾಮದ ರೈತರ ಕಿರಣ್ ಖಂಡ್ರೆ ವೀಡಿಯೋ ಮಾಡಿದ್ದು, ರೈತರ ಗೋಳನ್ನು ಈ ವೀಡಿಯೋದಲ್ಲಿ ಅನಾವರಣಗೊಳಿಸಿದ್ದಾರೆ. ಇದನ್ನೂ ಓದಿ: ಸೋನಿಯಾ ಗಾಂಧಿ ನಾಯಕತ್ವದಲ್ಲಿ ಸಂಪೂರ್ಣ ನಂಬಿಕೆ ಇದೆ: ಸಿಧು

    ರೈತರ ಗೋಳು ಕೇಳೋರು ಯಾರಣ್ಣ, ದೇಶಕ್ಕೆ ಅನ್ನ ಹಾಕುವರು ನಮ್ಮ ರೈತರು ಎಂದು ಹೇಳೋರು ನಮ್ಮ ಪ್ರಧಾನಿ ಮೋದಿಯಣ್ಣ, ರಾಜಕೀಯ ನಾಯಕರು ತಮ್ಮ ಡೊಂಬರಾಟ ಮಾಡಿ ಹೋಗುವರಣ್ಣ ಎಂದು ಹಾಡು ಹಾಡುವ ಮೂಲಕ ಜನಪ್ರತಿನಿಧಿಗಳ ವಿರುದ್ಧ ರೈತ ಹಿಡಿಶಾಪ ಹಾಕಿದ್ದಾರೆ. ಈಗಾಗಲೇ ಮಹಾ ಮಳೆ ಹಾಗೂ ನೆರೆಗೆ ಲಕ್ಷಾಂತರ ಎಕರೆ ಬೆಳೆ ಕಳೆದುಕೊಂಡು ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಪರಿಹಾರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿ ಶಾಸಕನ ವಾಹನದ ಮೇಲೆ ಬಾಂಬ್ ಎಸೆಯಲೆತ್ನಿಸಿದ ಐವರ ಬಂಧನ

  • 550 ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡ ವ್ಯಕ್ತಿ – ವೀಡಿಯೋ ವೈರಲ್

    550 ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡ ವ್ಯಕ್ತಿ – ವೀಡಿಯೋ ವೈರಲ್

    ಮುಂಬೈ: ಹುಟ್ಟುಹಬ್ಬದ ದಿನ ಏನಾದರು ನೆನಪಿನಲ್ಲಿ ಉಳಿಯುವಂತಹ ಕೆಲಸವನ್ನು ಮಾಡಲು ಇಷ್ಟಪಡುತ್ತಾರೆ. ಆದರೆ ಇಲ್ಲಿ ವ್ಯಕ್ತಿಯೊಬ್ಬ 550 ಕೇಕ್ ಕಟ್ ಮಾಡಿ ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗಿದ್ದಾರೆ.

    ಹುಟ್ಟುಹಬ್ಬಕ್ಕೆ ಎಲ್ಲರೂ ತಮ್ಮ ಸ್ನೇಹಿತರ ಜೊತೆ ಮತ್ತು ಕುಟುಂಬದವರ ಜೊತೆ ಕೇಕ್ ಕಟ್ ಮಾಡಿ ಆಚರಣೆ ಮಾಡಿಕೊಳ್ಳುತ್ತಾರೆ. ಹೆಚ್ಚು ಎಂದರೂ 10 ಕೇಕ್ ಕಟ್ ಮಾಡಬಹುದು. ಆದರೆ ಇಲ್ಲೊಬ್ಬ ವ್ಯಕ್ತಿ 550 ಕೇಕ್ ಕಟ್ ಮಾಡಿದ್ದು, ಆ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.

    ಮುಂಬೈನ ಕಾಂಡಿವಲಿ ಪಶ್ಚಿಮ ನಿಲ್ದಾಣದ ಬಳಿ ಸೂರ್ಯ ರಾತುರಿ ತನ್ನ ಹುಟ್ಟುಹಬ್ಬವನ್ನು ಏಕಕಾಲದಲ್ಲಿ 550 ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡಿದ್ದಾರೆ. ಇದನ್ನೂ ಓದಿ: ಲಸಿಕೆ ಪಡೆಯಲು ಹೇಳಿದ್ದಕ್ಕೆ ಪೊಲೀಸರಿಗೆ ಬೆದರಿಕೆ ಹಾಕಿದ ವೃದ್ಧೆ

    ಮೂರು ದೊಡ್ಡ ಟೇಬಲ್‍ಗಳಲ್ಲಿ 550 ವರ್ಣರಂಜಿತ ಕೇಕ್‍ಗಳನ್ನು ಇರಿಸಲಾಗಿದ್ದು, ಆ ಎಲ್ಲ ಕೇಕ್ ನನ್ನು ಸೂರ್ಯ ತನ್ನ ಎರಡು ಕೈಯಲ್ಲಿ ಚಾಕು ಹಿಡಿದುಕೊಂಡು ಒಂದೊಂದಾಗಿ ಕತ್ತರಿಸಿದ್ದಾರೆ. ಸೂರ್ಯ ಅವರ ಸುತ್ತಲೂ ಒಂದು ದೊಡ್ಡ ಜನಸಮೂಹ ಜಮಾಯಿಸಿದ್ದು, ಹಲವರು ತಮ್ಮ ಫೋನ್‍ಗಳಲ್ಲಿ ಈ ವಿಶೇಷ ದಿನವನ್ನು ಸೆರೆ ಹಿಡಿದಿದ್ದಾರೆ.

    ಈ ವೀಡಿಯೋ ವೀಕ್ಷಿಸಿದ ಜನರು, ಆಚರಣೆ ವೇಳೆ ಯಾರಲ್ಲೂ ಸಾಮಾಜಿಕ ಅಂತರ ಕಾಣಿಸುತ್ತಿಲ್ಲ. ಅದರಲ್ಲಿಯೂ ಒಬ್ಬರ ಮುಖದ ಮೇಲೆಯೂ ಮಾಸ್ಕ್ ಇಲ್ಲ. ಕೊರೊನಾ ನಿಯಮವನ್ನು ಯಾರು ಪಾಲಿಸುತ್ತಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಉಪ್ಪಿಗೆ ರೆಡ್ ಆಕ್ಸೈಡ್ ಮಿಶ್ರಣ ಮಾಡಿ ಗೊಬ್ಬರವೆಂದು ಮಾರಾಟ – ಆರೋಪಿಗಳು ಪೊಲೀಸರ ಬಲೆಗೆ

  • ಮದುವೆ ವೇದಿಕೆಯಲ್ಲಿ ಕುಣಿಯುತ್ತಾ ಕೆಳಗೆ ಬಿದ್ದ ವಧು, ವರ – ವೀಡಿಯೋ ವೈರಲ್

    ಮದುವೆ ವೇದಿಕೆಯಲ್ಲಿ ಕುಣಿಯುತ್ತಾ ಕೆಳಗೆ ಬಿದ್ದ ವಧು, ವರ – ವೀಡಿಯೋ ವೈರಲ್

    ಪ್ರತಿಯೊಬ್ಬರು ತಮ್ಮ ಮದುವೆಯ ದಿನ ಸದಾ ನೆನಪಿನಲ್ಲಿ ಉಳಿಯಬೇಕು ಎಂದು ಬಯಸುತ್ತಾರೆ. ಮದುವೆ ಎಂಬುವುದು ಪ್ರತಿಯೊಬ್ಬರ ಜೀವನದಲ್ಲಿಯೂ ಒಂದು ದೊಡ್ಡ ಕನಸಾಗಿರುತ್ತದೆ. ಮದುವೆಗೂ ಮುನ್ನ ಮಾಡಿದ ಪ್ಲಾನ್‍ಗಳು ಕೆಲವೊಮ್ಮೆ ಮದುವೆ ಸಮಯದಲ್ಲಿ ಅಂದುಕೊಂಡಂತೆ ನಡೆಯುವುದಿಲ್ಲ. ಸದ್ಯ ಜೋಡಿಯೊಂದು ಮದುವೆಯ ದಿನ ವೇದಿಕೆ ಮೇಲೆ ನೃತ್ಯ ಮಾಡುವಾಗ ಕೆಳಕ್ಕೆ ಬಿದ್ದಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

     Bride Groom

    ವೀಡಿಯೋದಲ್ಲಿ ನವ ದಂಪತಿಗಳು ಹುಮ್ಮಸಿನಿಂದ ವೇದಿಕೆ ಮೇಲೆ ನೃತ್ಯ ಮಾಡುತ್ತಾ ಬರುವುದನ್ನು ಕಾಣಬಹುದಾಗಿದೆ. ವೇದಿಕೆ ಮೇಲೆ ಬರುತ್ತಿದ್ದಂತೆ ವಧುವನ್ನು ವರ ತನ್ನ ಬೆನ್ನ ಮೇಲೆ ಎತ್ತಿಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ವರ ಬ್ಯಾಲೆನ್ಸ್ ತಪ್ಪಿ ಇಬ್ಬರು ವೇದಿಕೆಯಿಂದ ಕೆಳಗೆ ಬೀಳುತ್ತಾರೆ.  ಇದನ್ನೂ ಓದಿ:  ಆರ್ ಆ್ಯಂಡ್ ಡಿ ಹೊಸ ನೀತಿ ರೂಪಿಸಲು ಕಾರ್ಯಪಡೆ ರಚನೆ: ಬಸವರಾಜ ಬೊಮ್ಮಾಯಿ

    ಆದರೂ ಇಬ್ಬರು ಮತ್ತೆ ಅದೇ ಉತ್ಸಾಹದಿಂದ ಮೇಲಕ್ಕೆ ಎದ್ದು ವೇದಿಕೆಯತ್ತಾ ಮರಳುತ್ತಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ವರೆಗೂ ಸುಮಾರು 2.5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.  ಇದನ್ನೂ ಓದಿ: ಕಿರುತೆರೆ ಖಡಕ್ ಖಳನಟ ಈಗ ಬೆಳ್ಳಿತೆರೆಯ ನಾಯಕನಟ – ‘ಬಹುಕೃತಂ ವೇಷಂ’ನಲ್ಲಿ ಶಶಿಕಾಂತ್ ಹೊಸ ಅವತಾರ

  • ನೆಟ್ಟಿಗರ ಮನಗೆದ್ದ ನ್ಯೂಸ್‍ಪೇಪರ್ ಬಾಯ್

    ನೆಟ್ಟಿಗರ ಮನಗೆದ್ದ ನ್ಯೂಸ್‍ಪೇಪರ್ ಬಾಯ್

    ಹೈದರಾಬಾದ್: ತೆಲಂಗಾಣ ಸಚಿವ ಕೆ.ಟಿ ರಾಮರಾವ್ ಓರ್ವ ಉತ್ತಮ ರಾಜಕಾರಣಿ ಮಾತ್ರವಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಮೂಲಕ ಅನೇಕ ಘಟನೆಗಳನ್ನು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿರುತ್ತಾರೆ. ಅದೇ ರೀತಿ ಜಗ್ಗಿತಲ ಪಟ್ಟಣದ 12 ವರ್ಷದ ನ್ಯೂಸ್ ಪೇಪರ್ ಹುಡುಗ ಸಚಿವರ ಗಮನ ಸೆಳೆದಿದ್ದು, ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

    ಸೈಕಲ್ ಮೂಲಕ ಹುಡುಗ ನ್ಯೂಸ್ ಪೇಪರ್ ಹಾಕುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ವೀಡಿಯೋವನ್ನು ದಾರಿಹೋಕರೊಬ್ಬರು ರೆಕಾರ್ಡ್ ಮಾಡಿದ್ದು, ಇದೇ ವೀಡಿಯೋ ಸಚಿವರ ಗಮನ ಸೆಳೆದಿದೆ.

    ವೀಡಿಯೋದಲ್ಲಿ ಏನಿದೆ?
    ಹುಡುಗ ಸೈಕಲ್‍ನಲ್ಲಿ ಪೇಪರ್ ಹಾಕುವಾಗ ಬೈಕ್ ಮೇಲೆ ಬರುವ ವ್ಯಕ್ತಿ ಹುಡುಗನ ಹತ್ತಿರ ಬೈಕ್ ನಿಲ್ಲಿಸಿ ನಿನ್ನ ಶಾಲೆ ಯಾವುದು ಎಂದು ಪ್ರಶ್ನಿಸುತ್ತಾರೆ. ಸರ್ಕಾರಿ ಹೈಸ್ಕೂಲ್ ಎಂದು ಉತ್ತರಿಸುತ್ತಾನೆ. ಅದು ಎಲ್ಲಿ ಬರುತ್ತದೆ ಎಂದು ಪ್ರಶ್ನಿಸಿದಾಗ ಹಳೆ ಬಸ್ ನಿಲ್ದಾಣದ ಬಳಿ ಇದೆ ಎಂದು ಹುಡುಗ ಉತ್ತರಿಸುತ್ತಾನೆ. ಈ ವಯಸ್ಸಿನಲ್ಲೇ ಪೇಪರ್ ಹಾಕುತ್ತಿದ್ದಿಯ ಎಂದು ಕೇಳಿದಾಗ, ಹಾಕಬಾರದಾ ಎಂದು ಹುಡುಗನೇ ಮುರು ಪ್ರಶ್ನಿಸುತ್ತಾನೆ. ಹಾಗೇನು ಇಲ್ಲ, ನೀನು ಮಾಡುತ್ತಿರುವುದು ಒಳ್ಳೆಯ ಕೆಲಸವಾಗಿದೆ. ಆದರೆ ಓದಿಕೊಳ್ಳುವ ವಯಸ್ಸಿನಲ್ಲಿ ಈ ರೀತಿ ಕೆಲಸ ಮಾಡುತ್ತಿದ್ದೀಯಲ್ಲ ಅದಕ್ಕೆ ಕೇಳಿದೆ ಎಂದು ಬೈಕ್ ಸವಾರ ಹೇಳುತ್ತಾರೆ.

    ಬೈಕ್ ಸವಾರರ ಪ್ರಶ್ನಗೆ ಉತ್ತರಿಸಿದ ಬಾಲಕ ಚೆನ್ನಾಗಿ ಓದುತ್ತೇನೆ. ಹಾಗೇ ಕೆಲಸವನ್ನು ಮಾಡುತ್ತೇನೆ. ಅದರಲ್ಲೇನು ತಪ್ಪಿದೆ ಎನ್ನುತ್ತಾರೆ. ತಪ್ಪೇನು ಇಲ್ಲ ಓದಿಕೊಳ್ಳುವ ವಯಸ್ಸಿನಲ್ಲಿ ನೀನು ಇಷ್ಟು ಕಷ್ಟಪಡುತ್ತಿದ್ದೀಯಲ್ಲ ಅದು ನನಗೆ ಇಷ್ಟವಾಯಿತ್ತು ಅದಕ್ಕೆ ಕೇಳಿದೆ ಎನ್ನುತ್ತಾರೆ. ಈಗ ಕಷ್ಟಪಟ್ಟರೆ ಏನಾದರೂ ಸಾಧಿಸಬಹುದು ಎಂದು ಹೇಳುತ್ತಾನೆ.

    ಈ ವೀಡಿಯೋ ಟ್ವೀಟ​ರ್‌​ನಲ್ಲಿ ಶೇರ್ ಮಾಡಿಕೊಂಡಿರುವ ಕೆ.ಟಿ ರಾಮರಾವ್, ಜಗ್ಗಿತಲ ಪಟ್ಟಣದ ಈ ವೀಡಿಯೋ ನಿಜಕ್ಕೂ ನನಗೆ ಇಷ್ಟವಾಯಿತು. ಸರ್ಕಾರಿ ಹೈಸ್ಕೂಲ್ ವಿದ್ಯಾರ್ಥಿ ಪ್ರಕಾಶ್ ಅವರ ನಂಬಿಕೆ, ಚಿಂತನೆ ಮತ್ತು ಅಭಿವ್ಯಕ್ತಿಯ ಸ್ಥಿರತೆ ನನಗೆ ಇಷ್ಟವಾಯಿತ್ತು ಎಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಾಲಕನ ಕುರಿತಾಗಿ ಮೆಚ್ಚುಗೆ ವ್ಯಕ್ತವಾಗಿದೆ.