Tag: ವೀಡಿಯೋ ವೈರಲ್

  • ಹೋರ್ಡಿಂಗ್ಸ್ ತೆಗೆದಿದ್ದಕ್ಕೆ ಕಾಂಗ್ರೆಸ್ ಮಾಜಿ ಶಾಸಕನಿಂದ ಎಸ್‍ಡಿಎಂಸಿ ಸಿಬ್ಬಂದಿ ಮೇಲೆ ಹಲ್ಲೆ

    ಹೋರ್ಡಿಂಗ್ಸ್ ತೆಗೆದಿದ್ದಕ್ಕೆ ಕಾಂಗ್ರೆಸ್ ಮಾಜಿ ಶಾಸಕನಿಂದ ಎಸ್‍ಡಿಎಂಸಿ ಸಿಬ್ಬಂದಿ ಮೇಲೆ ಹಲ್ಲೆ

    ನವದೆಹಲಿ: ಹೋರ್ಡಿಂಗ್‍ಗಳು ಮತ್ತು ಪೋಸ್ಟರ್‌ಗಳನ್ನು ತೆಗೆದು ಹಾಕಿದ್ದಕ್ಕೆ ಮಾಜಿ ಕಾಂಗ್ರೆಸ್ ಶಾಸಕರೊಬ್ಬರು ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಸ್‍ಡಿಎಂಸಿ) ಸಿಬ್ಬಂದಿಯ ಮೇಲೆ ಲಾಠಿ ಪ್ರಹಾರ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    Former Congress MLA

    ಈ ಘಟನೆ ಸಂಬಂಧ ಪೊಲೀಸರು ಎಫ್‍ಐಆರ್ ದಾಖಲಿಸಿಕೊಳ್ಳುವುದಾಗಿ ಶುಕ್ರವಾರ ತಿಳಿಸಿದ್ದಾರೆ. ಆದರೆ ಇದೀಗ ಕಾಂಗ್ರೆಸ್ ಮಾಜಿ ಶಾಸಕ ಮೊಹಮ್ಮದ್ ಆಸಿಫ್ ಖಾನ್ ಹಲ್ಲೆಗೊಳಗಾದವರು ಎಸ್‍ಡಿಎಂಸಿ ಸಿಬ್ಬಂದಿ ಎಂಬುವುದೇ ನನಗೆ ತಿಳಿದಿರಲಿಲ್ಲ. ಈ ಘಟನೆ ಕುರಿತಂತೆ ನನಗೆ ಎಸ್‍ಡಿಎಂಸಿ ಕಡೆಯಿಂದ ಯಾವುದೇ ಕರೆ ಅಥವಾ ಸಂದೇಶ ಕೂಡ ಬಂದಿಲ್ಲ ಎಂದು ಹೇಳುತ್ತಿದ್ದಾರೆ.

    ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಮೊಹಮ್ಮದ್ ಆಸಿಫ್ ಖಾನ್ ಕೋಲಿನಿಂದ ನಾಲ್ಕು ಜನರಿಗೆ ಥಳಿಸಿ ಕಿವಿಗಳನ್ನು ಹಿಡಿದುಕೊಳ್ಳುವಂತೆ ನಿರ್ದೇಶಿಸುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಬೆಂಗಳೂರಿನ ಮತ್ತೊಂದು ಕಾಲೇಜಿನಲ್ಲಿ ಕೊರೊನಾ ಬ್ಲಾಸ್ಟ್ – 12 ವಿದ್ಯಾರ್ಥಿಗಳಿಗೆ ಪಾಸಿಟಿವ್

    ಇನ್ನೂ ಈ ಕುರಿತಂತೆ ಪ್ರತಿಕ್ರಿಯಿಸಿರುವ ಮೊಹಮ್ಮದ್ ಆಸಿಫ್ ಖಾನ್ ಅವರು, ಓಖ್ಲಾ ಪ್ರದೇಶದಲ್ಲಿ ನಾನು ಹಾಕಿಸಿದ್ದ ಕಾಂಗ್ರೆಸ್ ಹೋರ್ಡಿಂಗ್‍ಗಳು ಮತ್ತು ಪೋಸ್ಟರ್‌ಗಳನ್ನು ಮಾತ್ರ ತೆಗೆದುಹಾಕಲಾಯಿತು. ಆದರೆ ಇತರ ಪಕ್ಷಗಳ ಪೋಸ್ಟರ್ ಮತ್ತು ಹೋರ್ಡಿಂಗ್‍ಗಳನ್ನು ತೆಗೆದುಹಾಕಿರಲಿಲ್ಲ. ಹೀಗಾಗಿ ನಾನಾ ಈ ಬಗ್ಗೆ ಪ್ರಶ್ನಿಸಿದೆ. ಆದರೆ ಯಾರು ಉತ್ತರಿಸಲಿಲ್ಲ. ಹಾಗಾಗಿ ನಾನು ಅವರಿಗೆ ಪಾಠ ಕಲಿಸಿದೆ. ಆದರೆ ನನಗೆ ಅವರೆಲ್ಲಾ ಯಾರು ಅಂತ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇಂದು 400 ಗಡಿದಾಟಿದ ಕೊರೊನಾ – 6 ಸಾವು

    ಇನ್ನೂ ಹಲ್ಲೆಗೊಳಗಾದವರು ನಾಗರಿಕ ಸಂಸ್ಥೆಗೆ ಸೇರಿದವರಾಗಿದ್ದು, ಈ ವಿಚಾರ ಕುರಿತಂತೆ ಕೇಂದ್ರ ವಲಯದ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಮತ್ತು ಅಧಿಕಾರಿಗಳು ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ” ಎಂದು ಹಿರಿಯ ಎಸ್‍ಡಿಎಂಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಪೆನ್ಸಿಲ್ ನಿಬ್ ಕದ್ದ ಬಾಲಕನ ವಿರುದ್ಧ ದೂರು ದಾಖಲಿಸಲು ಠಾಣೆಗೆ ಹೋದ ಪುಟಾಣಿ

    ಪೆನ್ಸಿಲ್ ನಿಬ್ ಕದ್ದ ಬಾಲಕನ ವಿರುದ್ಧ ದೂರು ದಾಖಲಿಸಲು ಠಾಣೆಗೆ ಹೋದ ಪುಟಾಣಿ

    ಅಮರಾವತಿ: ತನ್ನ ಒಪ್ಪಿಗೆ ಪಡೆಯದೇ ಪೆನ್ಸಿಲ್ ನಿಬ್ ತೆಗೆದುಕೊಂಡಿದ್ದಕ್ಕೆ ಸಹಪಾಠಿಯ ವಿರುದ್ಧ ಪುಟ್ಟ ಬಾಲಕನೊಬ್ಬ ದೂರು ನೀಡಲು ಪೊಲೀಸ್ ಠಾಣೆಗೆ ಹೋಗುವ ಮೂಲಕವಾಗಿ ಸುದ್ದಿಯಾಗಿದ್ದಾನೆ.

    ಈ ವಿಚಿತ್ರ ಸಮಸ್ಯೆಯನ್ನು ಬಗೆಹರಿಸುವಲ್ಲಿ ನಿರತರಾಗಿರುವ ಪೊಲೀಸರು ಈ ವೀಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ. ಇದಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದ್ದು, ನೆಟ್ಟಿಗರು ಬಾಲಕನ ಮಾತಿಗೆ ಫಿದಾ ಆಗಿದ್ದಾರೆ.

    ವೀಡಿಯೋದಲ್ಲಿ ಏನಿದೆ?: ಪ್ರಾಥಮಿಕ ಶಾಲಾ ಮಕ್ಕಳ ಗುಂಪು ತಮ್ಮ ಸಹಪಾಠಿಯ ವಿರುದ್ಧ ದೂರು ದಾಖಲಿಸಲು ಕರ್ನೂಲ್ ಜಿಲ್ಲೆಯ ಪೇಡಾ ಕಡಬೂರು ಠಾಣೆಗೆ ಬಂದಿದ್ದಾರೆ. ಹಸಿರು ಬಣ್ಣದ ಶರ್ಟ್ ಧರಿಸಿರುವ ಬಾಲಕ ತನ್ನ ಪೆನ್ಸಿಲ್ ನಿಬ್ ಕದ್ದಿದ್ದಾನೆ. ಇವನ ವಿರುದ್ಧ ನಾನು ದೂರು ದಾಖಲಿಸುತ್ತೇನೆ ಎಂದು ಬಾಲಕನೊಬ್ಬ ಹೇಳಿದ್ದಾನೆ. ಅದಕ್ಕೆ ಹಸಿರು ಶರ್ಟ್ ಬಾಲಕನು ತೆಗೆದುಕೊಂಡಿದ್ದ ಪೆನ್ಸಿಲ್ ನಿಬ್‍ನ್ನು ವಾಪಸ್ ನೀಡಿರುವುದಾಗಿ ತಿಳಿಸುತ್ತಾನೆ. ಇಲ್ಲ ಎಂದು ವಾದಿಸುತ್ತಾ ದೂರು ದಾಖಲಿಸಲು ಬಂದಿರುವ ಬಾಲಕ ತನ್ನ ಹತ್ತಿರ ಇದ್ದ ನಿಬ್‍ನ್ನು ತೊರಿಸುತ್ತಾನೆ. ಇದನ್ನೂ ಓದಿ: ಒಳ್ಳೆ ಬುದ್ಧಿ ಕಲಿಯಿರಿ ಎಂದಿದ್ದಕ್ಕೆ ಸಾಮಾಜಿಕ ಕಾರ್ಯಕರ್ತನ ಕೊಲೆಗೈದ ಬಾಲಕರು!

    ಇದಲ್ಲೆವನ್ನು ತಾಳ್ಮೆಯಿಂದ ಆಲಿಸಿದ ಪೊಲೀಸರು ಪ್ರತಿಕ್ರಿಯಿಸಿ, ದೂರು ದಾಖಲಿಸುವುದರಿಂದ ಅವನ ತಂದೆ-ತಾಯಿಗೆ ತೊಂದರೆ ಆಗುತ್ತದೆ. ಇದರಿಂದ ಇದೊಂದು ಬಾರಿ ರಾಜಿ ಆಗಿ ಎಂದು ಸಲಹೆ ನೀಡುತ್ತಾರೆ. ಅದಕ್ಕೆ ಒಪ್ಪಿದ ಬಾಲಕ ನಂತರದಲ್ಲಿ ಅವನು ತಪ್ಪು ಮಾಡಿದ್ದಾನೆ. ದೂರು ದಾಖಲಿಸಬೇಕು ಎಂದು ವಾದಿಸುತ್ತಾನೆ. ಅದಕ್ಕೆ ಪೊಲೀಸರು ಇನ್ನೊಮ್ಮೆ ತಪ್ಪಾಗದಂತೆ ನಡೆದುಕೊಳ್ಳಬೇಕು ಎಂದು ಬಾಲಕನಿಗೆ ಬುದ್ಧಿವಾದ ಹೇಳುತ್ತಾರೆ. ಆರೋಪಿಗಳನ್ನು ಚೆನ್ನಾಗಿ ಓದಿ ಮತ್ತು ಇಬ್ಬರೂ ಸೌಹಾರ್ದಯುತ ಸಂಬಂಧವನ್ನು ಹೊಂದಬೇಕು ಎಂದು ಆಶಿಸಿರುವ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಇದನ್ನೂ ಓದಿ: IND vs NZ ಟೆಸ್ಟ್ ಪಂದ್ಯದಲ್ಲಿ ಸುದ್ದಿಯಾದ ಪಾನ್ ಭಾಯ್ – ವೀಡಿಯೋ ವೈರಲ್

    ಈ ವೀಡಿಯೋಕ್ಕೆ ನೆಟ್ಟಿಗರು ಆಶ್ಚರ್ಯವನ್ನು ವ್ಯಕ್ತಪಡಿದ್ದಾರೆ. ಹುಡುಗರು ಸಲೀಸಾಗಿ ಸಂವಹನ ನಡೆಸುತ್ತಿರುವುದನ್ನು ನೋಡಿ ಅನೇಕರಿಗೆ ಶಾಕ್ ಆದರೆ ಇನ್ನೂ ಕೆಲವರು ಅವರ ಜಾಗೃತಿಗಾಗಿ ಶ್ಲಾಘಿಸಿದ್ದಾರೆ. ಕೆಲವರು ಈ ಪುಟ್ಟ ಹುಡುಗ ಮುಂದೊಂದು ದಿನ ಪೊಲೀಸ್ ಅಧಿಕಾರಿಯಾಗಿ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಲಿದ್ದಾನೆ ಎಂದು ಆಶಿಸಿದ್ದಾರೆ.

  • ವಿದೇಶಿಗನ ಜೊತೆ ಸಖತ್ ಸ್ಟೆಪ್ ಹಾಕಿದ ಅಜ್ಜ – ವೀಡಿಯೋ ವೈರಲ್

    ವಿದೇಶಿಗನ ಜೊತೆ ಸಖತ್ ಸ್ಟೆಪ್ ಹಾಕಿದ ಅಜ್ಜ – ವೀಡಿಯೋ ವೈರಲ್

    ನವದೆಹಲಿ: ಸೋಶಿಯಲ್ ಮೀಡಿಯಾ ಬಂದಾಗಿನಿಂದ ಜನರು ತಮ್ಮ ಕ್ರೀಯಾಶೀಲತೆ ಮತ್ತು ತಮ್ಮ ಸಾಮರ್ಥ್ಯವನ್ನು ತೋರಿಸಲು ತುದಿಗಾಲಲ್ಲಿ ನಿಂತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಅಜ್ಜ ಫಾರಿನರ್ಸ್ ಜೊತೆ ಸಖತ್ ಆಗಿ ಸ್ಟೆಪ್ ಹಾಕಿದ್ದು, ಈಗ ಆ ವೀಡಿಯೋ ವೈರಲ್ ಆಗುತ್ತಿದೆ.

    ವಿದೇಶಿಗನೊಬ್ಬನು ಬಾಲಿವುಡ್ ಹಾಡಿಗೆ ರಸ್ತೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದು, ಇದರಿಂದ ಪ್ರೇರಣೆಗೊಂಡ ಅಜ್ಜ ಅವರ ಜೊತೆ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಅಲ್ಲಿ ನೆರೆದಿದ್ದ ಜನಸಮೂಹವು ಇವರ ಡ್ಯಾನ್ಸ್ ನೋಡಿ ಫುಲ್ ಎಂಜಾಯ್ ಮಾಡುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದು. ವಿದೇಶಿಗ ತನ್ನ ಸ್ಟೆಪ್ ನ್ನು ಹೇಳಿಕೊಂಡುತ್ತಿರುವುದನ್ನು ಲೆಕ್ಕಿಸದೆ, ಅಜ್ಜ ತನಗೆ ತೋಚಿದ ಸ್ಟೆಪ್ ಅನ್ನು ಹಾಕಿ ಕುಣಿದಿದ್ದಾರೆ. ಡ್ಯಾನ್ಸ್ ಮಾಡುತ್ತಿರುವಾಗ ಅಜ್ಜನಲ್ಲಿದ್ದ ಮುಗ್ಧತೆ, ಸಂತೋಷವನ್ನು ವೀಡಿಯೋದಲ್ಲಿ ಗಮನಿಸಬಹುದು. ಇದನ್ನೂ ಓದಿ: ಪುನೀತ್‍ರಂತೆಯೇ ಯಾವಾಗಲು ಒಳ್ಳೆಯ ಕೆಲಸ ಮಾಡೋಣ: ವಿಜಯ ರಾಘವೇಂದ್ರ

    ಟ್ವಿಟ್ಟರ್ ನಲ್ಲಿ ಸುಧೀರ್ದಂಡೋಟಿಯ ಎಂಬವರು ಈ ವೀಡಿಯೋವನ್ನು ಹಂಚಿಕೊಂಡಿದ್ದು, ಸ್ವದೇಶಿ ಶೈಲಿಯ ಮುಂದೆ ವಿದೇಶಿಯರೂ ಮಂಕಾಗುತ್ತಾರೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಈ ವೀಡಿಯೋ ನೋಡಿದ ನೆಟ್ಟಿಗರು ‘ದಾದಾಜಿ’, ‘ಕೀಪ್ ಇಟ್ ಅಪ್ ದಾದು!’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಯೇ ಹಮಾರೆ ದಾದಾಜಿ ಹೇ ಭಾರತೀಯ ದಾದಾಜಿ(ನಮ್ಮ ಅಜ್ಜ ಭಾರತೀಯ ಅಜ್ಜ) ಎಂದು ಕಮೆಂಟ್ ಮಾಡಿದ್ದಾರೆ.

    ವಿದೇಶಿಗ ಮತ್ತು ವೃದ್ಧ ಸಲ್ಮಾನ್ ಖಾನ್ ಮತ್ತು ಕಾಜೋಲ್ ನಟನೆಯ ‘ಪ್ಯಾರ್ ಕಿಯಾ ತೋ ಡರ್ನಾ ಕ್ಯಾ’ ಸಿನಿಮಾದಿಂದ ‘ಓ ಓ ಜಾನೇ ಜಾನಾ’ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಕೊನೆಯಲ್ಲಿ ಇಬ್ಬರು ಕೈಯನ್ನು ಕುಲುಕುವ ಮೂಲಕ ಉತ್ಸಾಹದಿಂದ ಹೊರಡುತ್ತಾರೆ. ಒಟ್ಟಿನಲ್ಲಿ ಈ ವೀಡಿಯೋ ನೋಡಿದವರತ್ತು ಅಜ್ಜನ ಡ್ಯಾನ್ಸ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ. ಇದನ್ನೂ ಓದಿ: 2ನೇ ಪತ್ನಿಯ ಕತ್ತು ಕೊಯ್ದ ಪತಿ ಮಹಾಶಯ ಪರಾರಿ

  • ಪ್ರಾಣವನ್ನೇ ಪಣಕ್ಕಿಟ್ಟು ಅರ್ಚಕನನ್ನು ರಕ್ಷಿಸಿದ ಟ್ರಾಫಿಕ್ ಪೊಲೀಸ್ – ವೀಡಿಯೋ ವೈರಲ್

    ಪ್ರಾಣವನ್ನೇ ಪಣಕ್ಕಿಟ್ಟು ಅರ್ಚಕನನ್ನು ರಕ್ಷಿಸಿದ ಟ್ರಾಫಿಕ್ ಪೊಲೀಸ್ – ವೀಡಿಯೋ ವೈರಲ್

    ಹೈದರಾಬಾದ್: ಟ್ರಾಫಿಕ್ ಪೊಲೀಸ್ ಪ್ರವಾಹದಲ್ಲಿ ಸಿಲುಕಿದ್ದ ಅರ್ಚಕರೊಬ್ಬರನ್ನು ರಕ್ಷಿಸಲು ತನ್ನ ಪ್ರಾಣವನ್ನು ಪಣಕ್ಕಿಟ್ಟ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹೀರೋ ಎಂದು ಪ್ರಶಂಸಿಸುತ್ತಿದ್ದಾರೆ.

    ಆಂಧ್ರಪ್ರದೇಶದ ನೆಲ್ಲೂರಿನಲ್ಲಿರುವ ಕೊಡವಲೂರು ಶಿವ ದೇವಸ್ಥಾನದ ಅರ್ಚಕರು ವೆಂಕಟೇಶ್ವರಪುರಂ ಸೇತುವೆ ಮೇಲೆ ಬೈಕ್‍ನಲ್ಲಿ ಹೋಗುತ್ತಿದ್ದರು. ಈ ವೇಳೆ ಪ್ರವಾಹದ ನೀರಿನ ಸೆಳೆತಕ್ಕೆ ಅರ್ಚಕರು ಕೊಚ್ಚಿಹೋಗುವ ವೇಳೆ ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಇದನ್ನೂ ಓದಿ: ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಹೈಟೆಕ್ ವಂಚನೆ

    ಈ ವೇಳೆ ಅಲ್ಲೇ ಇದ್ದ ಕರ್ತವ್ಯ ನಿರತ ಟ್ರಾಫಿಕ್ ಸರ್ಕಲ್ ಇನ್ಸ್ ಪೆಕ್ಟರ್ ನಾಯಕ್ ಅವರು ಅರ್ಚಕರನ್ನು ರಕ್ಷಿಸಲು ಮುಂದಾಗುತ್ತಾರೆ. ನಾಯಕ್ ಅವರು ಹಗ್ಗವನ್ನು ಬಳಸಿ ಅರ್ಚಕರು ಇರುವ ಸ್ಥಳಕ್ಕೆ ತಲುಪಿ ನಂತರ ಅವರು ಅರ್ಚಕರನ್ನು ಬಿಗಿಯಾಗಿ ಹಿಡಿದುಕೊಂಡು ಸುರಕ್ಷಿತವಾಗಿ ದಡ ಮುಟ್ಟಿಸುತ್ತಾರೆ.

    ನಾಯಕ್ ಅವರ ಸಾಹಸವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದ್ದು, ನೆಲ್ಲೂರು ಜಿಲ್ಲೆಯ ಕೊಡವಲೂರು ಶಿವ ದೇವಾಲಯದಲ್ಲಿ ಕೆಲಸ ಮಾಡುವ ಅರ್ಚಕರೊಬ್ಬರು ವೆಂಕಟೇಶ್ವರಪುರಂ ಸೇತುವೆಯ ಬಳಿ ಬೈಕ್‍ನಲ್ಲಿ ಹೋಗುತ್ತಿದ್ದಾಗ ಅವರು ಪ್ರವಾಹದ ನೀರಿನಿಂದ ಕೊಚ್ಚಿಹೋಗುತ್ತಿದ್ದರು. ಆಗ ಸಮಯಕ್ಕೆ ಸರಿಯಾಗಿ ಧೈರ್ಯ ಮಾಡಿದ ಟ್ರಾಫಿಕ್ ಸಿಐ ನಾಯಕ್ ಅವರು ಸುರಕ್ಷಿತವಾಗಿ ಕರೆತಂದಿದ್ದಾರೆ ಎಂದು ಬರೆದು ಟ್ವೀಟ್ ಮಾಡಲಾಗಿದೆ.

    ಈ ವೀಡಿಯೋ ವೈರಲ್ ಆಗಿದ್ದು ಟ್ರಾಫಿಕ್ ಪೊಲೀಸ್ ಸಾಹಸವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಪೊಲೀಸ್ ಮಹಾನಿರ್ದೇಶಕ ಗೌತಮ್ ಸವಾಂಗ್ ಈ ಕುರಿತು, ಸಾರ್ವಜನಿಕ ಸೇವೆಯಲ್ಲಿ ಮತ್ತು ವ್ಯಕ್ತಿಯ ಜೀವ ಉಳಿಸುವಲ್ಲಿ ಟ್ರಾಫಿಕ್ ಸಿಐ ಅವರು ತೋರಿದ ಶೌರ್ಯ ರಕ್ಷಣೆ ಮತ್ತು ಬದ್ಧತೆಯನ್ನು ಟ್ವೀಟ್ ಮಾಡಿ ಪ್ರಶಂಸಿದ್ದಾರೆ. ಇದನ್ನೂ ಓದಿ:  100 ರೂ. ನೋಟ್ ಒಳಗೆ ವೈಟ್ ಪೇಪರ್ ಇಟ್ಟು ವಂಚನೆ- ಐವರು ಅರೆಸ್ಟ್

  • ಜನ್ರನ್ನು ನಗಿಸೋದು ನನ್ನ ಕೆಲ್ಸ, ನಿಮ್ಗೆ ಹಾಸ್ಯವಾಗಿ ಕಾಣಿಸದಿದ್ದರೆ ನಗ್ಬೇಡಿ: ವೀರ್ ದಾಸ್

    ಜನ್ರನ್ನು ನಗಿಸೋದು ನನ್ನ ಕೆಲ್ಸ, ನಿಮ್ಗೆ ಹಾಸ್ಯವಾಗಿ ಕಾಣಿಸದಿದ್ದರೆ ನಗ್ಬೇಡಿ: ವೀರ್ ದಾಸ್

    ಮುಂಬೈ: ನಾನು ನನ್ನ ಕೆಲಸ ಮಾಡಲು ಇಲ್ಲಿದ್ದೇನೆ ಮತ್ತು ಅದನ್ನು ಮುಂದುವರೆಸುತ್ತೇನೆ, ನಿಲ್ಲಿಸುವುದಿಲ್ಲ. ಜನರನ್ನು ನಗಿಸುವುದು ನನ್ನ ಕೆಲಸ, ನಿಮಗೆ ಅದು ಹಾಸ್ಯವಾಗಿ ಕಾಣಿಸದಿದ್ದರೆ ನಗಬೇಡಿ ಎಂದು ಸ್ಟ್ಯಾಂಡ್‍ಅಪ್ ಕಾಮಿಡಿಯನ್(ವಿಡಂಬನಕಾರ) ವೀರ್ ದಾಸ್ ಹೇಳಿದ್ದಾರೆ.

    ಕಳೆದ ವಾರವಷ್ಟೇ, ನಾನು ಎರಡು ರೀತಿಯ ಭಾರತದಿಂದ ಬಂದಿದ್ದೇನೆ ಎಂಬ ವೀರ್ ದಾಸ್ ಅವರ ಆರು ನಿಮಿಷದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದರಲ್ಲಿ ಭಾರತದಲ್ಲಿರುವ ಒಳ್ಳೆಯ ಮತ್ತು ಕೆಟ್ಟದ್ದರ ಕುರಿತಂತೆ  ಮಾತನಾಡಿದ್ದರು. ಈ ವೀಡಿಯೋ ನೋಡಿ ಕೆಲವರು ಭಾರತಕ್ಕೆ ಅವಮಾನ ಮಾಡುತ್ತಿದ್ದರೆ ಎಂದು ಟೀಕಿಸಿದರೆ, ಮತ್ತೆ ಕೆಲವರು ಅವರ ಧೈರ್ಯಶಾಲಿ ಹೇಳಿಗೆ ಪ್ರಶಂಸೆ ವ್ಯಕ್ತಪಡಿಸಿದ್ದರು ಮತ್ತು ಅವರ ನಿಲುವಿಗೆ ಬೆಂಬಲ ನೀಡಿದ್ದರು.

    ಏಕಪಾತ್ರಭಿನಯ ಬಗ್ಗೆ ಕುರಿತಂತೆ ವೀರ್ ದಾಸ್ ಅವರು, ನಾನು ಕೇವಲ ಶೋಗಳನ್ನು ನೀಡುತ್ತೇನೆ. ಅದು ನನ್ನ ಪ್ರೇಕ್ಷಕರಿಗಾಗಿ ಒಂದಷ್ಟು ತುಣುಕುಗಳನ್ನು ಬರೆದಿದ್ದೇನೆ. ನನ್ನನ್ನು ಕರೆಸಿ ಸಂಭಾಷಣೆ ನಡೆಸಬೇಕೆಂದು ನಾನು ಎಂದಿಗೂ ಬಯಸಿಲ್ಲ. ಹಾಗೇ ನಾನು ಭಾವಿಸುವುದು ಇಲ್ಲ. ನಾನು ಕೇವಲ ಜನರನ್ನು ಕೋಣೆಯಲ್ಲಿ ನಗಿಸಲು ಬಯಸುತ್ತೇನೆ. ನೀವು ಹಾಗೆಯೇ ಭಾವಿಸುತ್ತೀರಾ ಅಂದುಕೊಂಡಿದ್ದೇನೆ.

    Vir Das

    ನಾನು ಬಹಳ ಅದೃಷ್ಟವಂತ ಏಕೆಂದರೆ ನಾನು ಯಾವುದೇ ಸೆನ್ಸಾರ್‍ಶಿಪ್ ಅನ್ನು ಎದುರಿಸಬೆಕಾಗಿಲ್ಲ. “ನಾನು ಅದನ್ನು ಅನುಭವಿಸದೇ ಇರುವಷ್ಟು ಅದೃಷ್ಟಶಾಲಿಯಾಗಿದ್ದೇನೆ. ನಾನು ನೆಟ್‍ಫ್ಲಿಕ್ಸ್‍ನಲ್ಲಿ ಮೂರು ಸ್ಪೆಷಲ್ ಕಾಮಿಡಿಗಳನ್ನು ಮಾಡಿದ್ದೇನೆ ಮತ್ತು ನಮ್ಮ ಕಾರ್ಯಕ್ರಮದ ಏಕೈಕ ಉದ್ದೇಶ ‘ಜನರನ್ನು ನಗಿಸುವುದು ಮತ್ತು ಅದು ನನಗೆ ‘ಸರಿ’ ಎನಿಸುತ್ತದೆ ಎಂದಿದ್ದಾರೆ. ಜೊತೆಗೆ “ಜನರನ್ನು ನಗಿಸಲು ಮತ್ತು ಪ್ರೀತಿಯನ್ನು ಹರಡಲು ನಮಗೆ ಭಾರತದಲ್ಲಿ ಹೆಚ್ಚಿನ ಕಾಮಿಡಿ ಕ್ಲಬ್‍ಗಳ ಅಗತ್ಯವಿದೆ” ಎಂದು ವೀರ್ ದಾಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ವೀರ್ ದಾಸ್‍ಗೆ ಪ್ರದರ್ಶನ ನೀಡಲು ಬಿಡುವುದಿಲ್ಲ: ನರೋತ್ತಮ್ ಮಿಶ್ರಾ

    ಇತ್ತೀಚೆಗಷ್ಟೇ ಅಮೇರಿಕಾದಲ್ಲಿ ನಡೆದ ಸಂದರ್ಶನವೊಂದರಲ್ಲಿ ವೀರ್ ದಾಸ್ ಅವರು ಮಹಿಳೆಯನ್ನು ಗೌರವಿಸುವ, ರಾತ್ರಿಯಲ್ಲಿ ಮಹಿಳೆ ಮೇಲೆ ಅತ್ತಾಚಾರ ಮಾಡುವ ದೇಶದಿಂದ ನಾನು ಬಂದಿದ್ದೇನೆ. ಅಲ್ಲಿ ಮಾಸ್ಕ್ ಹಾಕಿಕೊಂಡು ಮಕ್ಕಳು ಕೈ ಮುಗಿಯುವಾಗ, ನಾಯಕರು ಮಾಸ್ಕ್ ಇಲ್ಲದೇ ಅಪ್ಪಿಕೊಳ್ಳುತ್ತಾರೆ. ಅತಿ ದೊಡ್ಡ ಜನಸಂಖ್ಯೆ ಇರುವ ರಾಷ್ಟ್ರದಿಂದ ಬಂದಿದ್ದೇನೆ. 75 ವರ್ಷದ ಮುದುಕರಿಂದ 150 ವರ್ಷದ ಹಳೆಯದಾದ ಐಡಿಯಾಗಳನ್ನು ಕೇಳಲಾಗುತ್ತದೆ ಎಂದು ಹೇಳಿದ್ದರು.

    ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ವೀರ್ ದಾಸ್ ಭಾರತಕ್ಕೆ ಅವಮಾನ ಮಾಡಿದ್ದಾರೆ. ಹೀಗಾಗಿ ಇವರಿಗೆ ರಾಜ್ಯದಲ್ಲಿ ಹಾಸ್ಯ ಪ್ರದರ್ಶನ ನೀಡಲು ಬಿಡಿಬಾರದು ಎಂದು ಅನೇಕ ಮಂದಿ ಆಕ್ರೋಶ ವ್ಯಕ್ತಪಡಿಸದ್ದರು.

  • ರಸ್ತೆಯಲ್ಲಿದ್ದ ಸಸಿ ಕಿತ್ತುಕೊಂಡು ನೆಟ್ಟಿಗರ ಕಣ್ಣಿಗೆ ಗುರಿಯಾದ ಮಹಿಳೆಯರು – ವೀಡಿಯೋ ವೈರಲ್

    ರಸ್ತೆಯಲ್ಲಿದ್ದ ಸಸಿ ಕಿತ್ತುಕೊಂಡು ನೆಟ್ಟಿಗರ ಕಣ್ಣಿಗೆ ಗುರಿಯಾದ ಮಹಿಳೆಯರು – ವೀಡಿಯೋ ವೈರಲ್

    ನವದೆಹಲಿ: ಕಾರಿನಲ್ಲಿ ಬಂದ ಮಹಿಳೆಯರು ರಸ್ತೆಬದಿಯಲ್ಲಿದ್ದ ಸಸಿಯನ್ನು ಕಿತ್ತುಕೊಂಡು ಹೋಗಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರ ಕಣ್ಣಿಗೆ ಗುರಿಯಾಗಿದೆ.

    ವೀಡಿಯೋ ನೋಡಲು ಹಾಸ್ಯಸ್ಪದವಾಗಿದ್ದು, ಕಾರಿನಲ್ಲಿ ಬಂದ ಇಬ್ಬರು ಮಹಿಳೆಯರು ಸುಮ್ಮನೆ ರಸ್ತೆಯಲ್ಲಿ ಹೋಗುತ್ತಿರುವಂತೆ ನಟಿಸುತ್ತಾ, ನೋಡನೋಡುತ್ತಿದ್ದಂತೆ ರಸ್ತೆ ಪಕ್ಕದಲ್ಲಿದ್ದ ಸಸಿಯನ್ನು ಕಿತ್ತುಕೊಂಡು ಹೋಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೆಟ್ಟಿಗರ ಕಣ್ಣಿಗೆ ಗುರಿಯಾಗಿದೆ. ಇದನ್ನೂ ಓದಿ: ಕೊಡಗಿನಾದ್ಯಂತ ಕಳೆಗಟ್ಟಿದ ಪುತ್ತರಿ ಸಂಭ್ರಮ

    ಇನ್‍ಸ್ಟಾಗ್ರಾಮ್‍ನಲ್ಲಿ ಮೀಮ್ ಪೇಜ್ ಈ ವೀಡಿಯೋವನ್ನು ಟ್ರೋಲ್ ಮಾಡಿ, ಕಾಮಿಡಿ ಎಫೆಕ್ಟ್ ಕೊಟ್ಟು ‘ಬಾಡೆ ಲಾಗ್’ ಎಂದು ಬರೆದು ಪೋಸ್ಟ್ ಮಾಡಿದೆ. ಅದು ಅಲ್ಲದೇ ವೀಡಿಯೋ ಮೇಲೆಯೂ ‘ಸರ್ಕಾರಿ ಪೌಢ ಭೀ ಸೇಫ್ ನಹೀ'(ಸರ್ಕಾರಿ ಸಸ್ಯವೂ ಸಹ ಸುರಕ್ಷಿತವಲ್ಲ) ಎಂದು ಬರೆದು ಪೋಸ್ಟ್ ಮಾಡಲಾಗಿದೆ. ಈ ವೀಡಿಯೋ ನೋಡಿದ ವೀಕ್ಷಕರು ಫುಲ್ ಎಂಜಾಯ್ ಮಾಡುತ್ತಿದ್ದು, ನಗುವಿನ ಎಮೋಜಿಗಳನ್ನು ಕಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಈ ಇಬ್ಬರು ಮಹಿಳೆಯರು ಕಾರಿನಲ್ಲಿ ಪ್ರಯಾಣಿಸಲು ಅರ್ಹರಲ್ಲ ಎಂದು ಕಮೆಂಟ್ ಮಾಡಿದ್ದಾರೆ.

     

    View this post on Instagram

     

    A post shared by MEMES.BKS???????? (@memes.bks)

    ಸಿಸಿಟಿವಿ ದೃಶ್ಯದಲ್ಲಿ, ತಡರಾತ್ರಿ ರಸ್ತೆ ಬದಿಯಲ್ಲಿ ಕಾರೊಂದು ನಿಲ್ಲಿಸಲಾಗುತ್ತೆ. ಕಾರಿನಿಂದ ಹೊರಬಂದ, ಕಪ್ಪು ಡ್ರೆಸ್ ಧರಿಸಿದ ಮಹಿಳೆಯೊಬ್ಬರು ರಸ್ತೆಯಲ್ಲಿ ಅಡ್ಡಾಡಿದಂತೆ ಪಾದಚಾರಿ ಮಾರ್ಗದ ಮೇಲೆ ನಡೆಯುತ್ತಾ ಬರುತ್ತಾರೆ. ಅದು ಅಲ್ಲದೇ ಆ ಮಹಿಳೆ ಜೊತೆಯಲ್ಲಿ ಗುಲಾಬಿ ಬಣ್ಣದ ಬಟ್ಟೆಯನ್ನು ಧರಿಸಿರುವ ಇನ್ನೊಬ್ಬರು ಮಹಿಳೆ ಇರುತ್ತಾರೆ. ಕಪ್ಪು ವಸ್ತ್ರದ ಮಹಿಳೆ ಪಾದಚಾರಿ ಮಾರ್ಗದಲ್ಲಿ ಬೆಳೆದಿದ್ದ ಸಸ್ಯವನ್ನು ನೋಡ ನೋಡುತ್ತಿದ್ದಂತೆ ಕಿತ್ತು ಅದನ್ನು ಕಾರಿಗೆ ಒಯ್ಯುತ್ತಾಳೆ. ನಂತರ ಕಾರು ಅಲ್ಲಿಂದ ಹೊರಟು ಹೋಗುತ್ತೆ. ಈ ಪೂರ್ತಿ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇನ್ನು ಮುಂದೆ ರಸ್ತೆಯಲ್ಲಿ ಇರುವ ಸಸಿಗಳಿಗೂ ಸೇಫ್ ಇಲ್ಲ ಎಂದು ಎಲ್ಲರೂ ಮಹಿಳೆಯರನ್ನು ಹಾಸ್ಯಸ್ಪದವಾಗಿ ನೋಡುತ್ತಿದ್ದಾರೆ. ಇದನ್ನೂ ಓದಿ: ನೀನು ನನ್ನ ಮಗ ಎಂದು ಹೇಳಲು ಹೆಮ್ಮೆ ಪಡುತ್ತೇನೆ: ಬಿಗ್ ಬಿ

  • ಮಾವುತನಿಂದ ಬಾಬ್ ಕಟ್ ಕೂದಲು ಬಾಚಿಸಿಕೊಂಡ ಆನೆ – ವೀಡಿಯೋ ವೈರಲ್

    ಮಾವುತನಿಂದ ಬಾಬ್ ಕಟ್ ಕೂದಲು ಬಾಚಿಸಿಕೊಂಡ ಆನೆ – ವೀಡಿಯೋ ವೈರಲ್

    ಚೆನ್ನೈ: ಆನೆಯೊಂದು ತನ್ನ ಬಾಬ್ ಕಟ್ ಕೂದಲನ್ನು ಮಾವುತನ ಕೈಯಲ್ಲಿ ಬಾಚಿಸಿಕೊಳ್ಳುತ್ತಿರುವ ಕ್ಯೂಟ್ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಜಗತ್ತಿನ ಅತ್ಯಂತ ಕ್ಯೂಟ್ ಪ್ರಾಣಿಗಳ ಲಿಸ್ಟ್ ನಲ್ಲಿ ಆನೆ ಕೂಡ ಒಂದು. ಆನೆ ತುಂಬಾ ಸೂಕ್ಷ್ಮ ಹಾಗೂ ಬುದ್ಧಿವಂತ ಪ್ರಾಣಿಯಾಗಿದೆ. ಕೆಲವು ದಿನಗಳ ಹಿಂದೆ ಆನೆ ವ್ಯಕ್ತಿಗಳಿಂದ ಬಾಳೆ ಹಣ್ಣು ಕಿತ್ತು ತಿನ್ನುವ, ಆನೆ ಡ್ಯಾನ್ಸ್ ಮಾಡುವ ಹೀಗೆ ಅನೇಕ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಆನೆಯೊಂದು ಮಾವುತನ ಕೈಯಿಂದ ತನ್ನ ಬಾಬ್ ಕಟ್ ಕೂದಲನ್ನು ಬಾಚಿಸಿಕೊಳ್ಳುತ್ತಿರುವ ಕ್ಯೂಟ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಚುನಾವಣೆಯಲ್ಲಿ ಗೆಲ್ಲುವವರೆಗೂ ರಾಜ್ಯ ವಿಧಾನಸಭೆಗೆ ಕಾಲಿಡಲ್ಲ: ಎನ್.ಚಂದ್ರಬಾಬು ನಾಯ್ಡು ಪ್ರತಿಜ್ಞೆ

    ವೀಡಿಯೋದಲ್ಲಿ ಮಾವುತ ಆನೆಯ ಕೂದಲನ್ನು ಬಾಚಣಿಗೆಯಿಂದ ಬಾಚುತ್ತಿರುವುದನ್ನು ನೋಡಬಹುದಾಗಿದೆ. ಆನೆ ತನ್ನ ಕಾಲುಗಳನ್ನು ಕೆಳಗೆ ಬಾಗಿಸಿ ಕುಳಿತುಕೊಂಡು ಮಾವುತನ ಕೈಯಲ್ಲಿ ಕೂದಲನ್ನು ಬಾಚಿಸಿಕೊಂಡಿದೆ. ಅಲ್ಲದೇ ಮಾವುತ ಕೂದಲನ್ನು ಬಾಚುತ್ತಿದ್ದರೆ ಆನೆ ಸಖತ್ ಎಂಜಾಯ್ ಮಾಡಿದೆ. ಜೊತೆಗೆ ಆನೆಯ ಹಣೆಯ ಮೇಲೆ ದೊಡ್ಡ ತಿಲಕ ಇಡಲಾಗಿದ್ದು, ಆನೆ ನೋಡಲು ಬಹಳ ಮುದ್ದಾಗಿ ಕಾಣಿಸಿಕೊಂಡಿದೆ. ಇದನ್ನೂ ಓದಿ: ಹೆಸರುವಾಸಿಯಾಗಿದ್ದ ಕೇರಳದ ಟೀ ಮಾರಾಟಗಾರ ನಿಧನ

     

    View this post on Instagram

     

    A post shared by FindingTemples™ (@findingtemples)

    ಈ ವೀಡಿಯೋ ಕೊಯಮತ್ತೂರಿನ ತೆಕ್ಕಂಪಟ್ಟಿ ಗ್ರಾಮದ್ದಾಗಿದ್ದು, ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಹಲವಾರು ಲೈಕ್ಸ್ ಮತ್ತು ಕಾಮೆಂಟ್‍ಗಳ ಸುರಿಮಳೆಯೇ ಹರಿದು ಬಂದಿದೆ. ಕೆಲವರು ಆನೆ ನೋಡಿ ಸೋ ಕ್ಯೂಟ್ ಎಂದರೆ, ಮತ್ತೆ ಕೆಲವರು ಹ್ಯಾಂಡ್‍ಸಮ್ ಬಾಯ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

  • ನಡು ರಸ್ತೆಯಲ್ಲಿ ಮಹಿಳೆಯಿಂದ ಕ್ಯಾಬ್ ಡ್ರೈವರ್ ಮೇಲೆ ಹಲ್ಲೆ – ವೀಡಿಯೋ ವೈರಲ್

    ನಡು ರಸ್ತೆಯಲ್ಲಿ ಮಹಿಳೆಯಿಂದ ಕ್ಯಾಬ್ ಡ್ರೈವರ್ ಮೇಲೆ ಹಲ್ಲೆ – ವೀಡಿಯೋ ವೈರಲ್

    ನವದೆಹಲಿ: ನಡು ರಸ್ತೆಯಲ್ಲಿ ಮಹಿಳೆಯೊಬ್ಬಳು ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಕಳೆದ ವಾರ ಪಶ್ಚಿಮ ಪಟೇಲ್ ನಗರದ ಕಸ್ತೂರಿ ಲಾಲ್ ಆನಂದ್ ಮಾರ್ಗದಲ್ಲಿ ಈ ಘಟನೆ ನಡೆದಿದ್ದು, ವೀಡಿಯೋದಲ್ಲಿ ನೀಲಿ ಟೀ ಶರ್ಟ್ ಮತ್ತು ಮುಖಕ್ಕೆ ಮಾಸ್ಕ್ ಧರಿಸಿದ್ದ ಮಹಿಳೆ ರಸ್ತೆ ಮಧ್ಯೆ ಕ್ಯಾಬ್ ಚಾಲಕನ ಕಾಲರ್ ಹಿಡಿದುಕೊಂಡು ಥಳಿಸಿದ್ದಾಳೆ. ಇದನ್ನೂ ಓದಿ: “ಚರ್ಮದ ಸಂಪರ್ಕವಿಲ್ಲದೆ ಸ್ತನ ಹಿಡಿಯುವುದು ಲೈಂಗಿಕ ದೌರ್ಜನ್ಯ ಅಲ್ಲ” – ವಿವಾದಿತ ಆದೇಶವನ್ನು ರದ್ದುಗೊಳಿಸಿದ ಸುಪ್ರೀಂಕೋರ್ಟ್

    women

    ಮಹಿಳೆ ಸ್ಕೂಟಿಯಲ್ಲಿ ಚಲಾಯಿಸುತ್ತಿದ್ದ ವೇಳೆ ರಸ್ತೆಯಲ್ಲಿ ಇಕ್ಕಟ್ಟು ಉಂಟಾಗಿದೆ. ಇದೇ ವೇಳೆ ಇಕ್ಕಟ್ಟಿನಲ್ಲಿ ಸಿಲುಕಿದ್ದ ಕ್ಯಾಬ್ ಚಾಲಕ ಮಹಿಳೆ ತೆರಳಲು ಜಾಗಬಿಡಲಿಲ್ಲ ಎಂದು ಮಹಿಳೆ ಸ್ಕೂಟಿಯನ್ನು ಪಕ್ಕಕ್ಕೆ ನಿಲ್ಲಿಸಿ ಕ್ಯಾಬ್ ಚಾಲಕನಿಗೆ ನಿಂದಿಸಿದ್ದಾಳೆ. ಅಲ್ಲದೇ ಚಾಲಕನನ್ನು ಕಾರಿನಿಂದ ಹೊರಗೆ ಎಳೆದು ಕಾಲರ್ ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾಳೆ. ಇದೇ ವೇಳೆ ಜಗಳ ಬಿಡಿದಲು ಮಧ್ಯೆ ಪ್ರವೇಶಿಸಿದ ವ್ಯಕ್ತಿ ಮೇಲೂ ಮಹಿಳೆ ಕಿರುಚಾಡಿದ್ದಾಳೆ. ಇದನ್ನೂ ಓದಿ: MLC ಅಭ್ಯರ್ಥಿಯಾಗಿ ಸೂರಜ್ ರೇವಣ್ಣ ಸ್ಪರ್ಧೆ ಬಹುತೇಕ ಖಚಿತ

    ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಮಹಿಳೆಯ ವರ್ತನೆಯನ್ನು ಖಂಡಿಸಿದ ನೆಟ್ಟಿಗರು ಕಾಮೆಂಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಮಹಿಳೆಯಿಂದ ಹಲ್ಲೆಗೊಳಗಾದ ಕ್ಯಾಬ್ ಡ್ರೈವರ್‌ನಿಂದ ಪೊಲೀಸರು ಯಾವುದೇ ದೂರು ಸ್ವೀಕರಿಸಿಲ್ಲ. ಆದರೆ ಮಹಿಳೆಯ ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆಯ ಸಹಾಯದಿಂದ ಮಹಿಳೆಯನ್ನು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

  • ಆರೋಗ್ಯಕ್ಕಾಗಿ ಹಸುವಿನ ಸಗಣಿ ತಿನ್ನುವ ವೈದ್ಯ – ವೀಡಿಯೋ ವೈರಲ್

    ಆರೋಗ್ಯಕ್ಕಾಗಿ ಹಸುವಿನ ಸಗಣಿ ತಿನ್ನುವ ವೈದ್ಯ – ವೀಡಿಯೋ ವೈರಲ್

    ತ್ತಮ ಆರೋಗ್ಯಕ್ಕಾಗಿ ಗೋ ಶಾಲೆಯಲ್ಲಿ ವೈದ್ಯರೊಬ್ಬರು ಸಗಣಿ ತಿನ್ನುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಸಾಮಾನ್ಯವಾಗಿ ಹಸುವಿನ ಸಗಣಿ ಮತ್ತು ಮೂತ್ರವು ಹಲವಾರು ರೋಗಗಳನ್ನು ಗುಣಪಡಿಸುವ ಶಕ್ತಿಹೊಂದಿದೆ ಎಂದು ಭಾರತೀಯರು ನಂಬಿದ್ದಾರೆ. ಆದರೆ ವಿಜ್ಞಾನ ಬೇರೆ ರೀತಿಯೇ ಹೇಳುತ್ತದೆ. ಈ ನಡುವೆ ಮನೋಜ್ ಮಿತ್ತಲ್ ಎಂಬ ವೈದ್ಯರೊಬ್ಬರು ಹಸುವಿನ ಸಗಣಿ ತಿನ್ನುತ್ತಿರುವ ವೀಡಿಯೋವನ್ನು ತಮ್ಮ  ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ನನಗೆ ಸಲ್ಮಾನ್ ಜೊತೆ ನಟಿಸಲು ಇಷ್ಟವಿರಲಿಲ್ಲ ಎಂದ ಆಯುಷ್ ಶರ್ಮಾ

    ವೀಡಿಯೋದಲ್ಲಿ ಡಾ. ಮನೋಜ್ ಮಿತ್ತಲ್ ಅವರು, ನೆಲದ ಮೇಲಿದ್ದ ಹಸುವಿನ ಸಗಣಿಯನ್ನು ತೆಗೆದುಕೊಂಡು ಅದನ್ನು ಬಾಯಿಗೆ ಹಾಕಿಕೊಂಡು ಸವಿಯುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ಗೋ ಮೂತ್ರ ಹಾಗೂ ಹಸುವಿನ ಸಗಣಿ ತಿನ್ನುವುದರಿಂದ ಅನೇಕ ಕಾಯಿಲೆಗಳು ದೂರವಾಗುತ್ತದೆ ಎಂದು ತಿಳಿಸಿದ್ದಾರೆ.  ಇದನ್ನೂ ಓದಿ: ನಟ ದುನಿಯಾ ವಿಜಯ್‍ಗೆ ಪಿತೃ ವಿಯೋಗ

    ಹೆಂಗಸರಿಗೆ ನಾರ್ಮಲ್ ಡೆಲಿವರಿ ಆಗಬೇಕೆಂದರೆ ಹಸುವಿನ ಸಗಣಿ ಸೇವಿಸಬೇಕು ಇದರಿಂದ ಸಿಸೇರಿಯನ್‍ಗೆ ಆಗುವುದನ್ನು ತಪ್ಪಿಸಬಹುದು ಎಂದಿದ್ದಾರೆ. ಜೊತೆಗೆ ಗೋವಿನಿಂದ ಸಿಗುವ ಪಂಚಗವ್ಯದ ಪ್ರತಿಯೊಂದು ಭಾಗವೂ ಮನುಕುಲಕ್ಕೆ ಅತ್ಯಮೂಲ್ಯವಾದದ್ದು, ಗೋವಿನ ಸಗಣಿ ತಿಂದರೆ ನಮ್ಮ ದೇಹ ಮತ್ತು ಮನಸ್ಸು ಶುದ್ಧವಾಗುತ್ತದೆ. ನಮ್ಮ ಆತ್ಮ ಶುದ್ಧವಾಗುತ್ತದೆ. ಒಮ್ಮೆ ಅದು ನಮ್ಮ ದೇಹವನ್ನು ಪ್ರವೇಶಿಸಿದರೆ, ಅದು ನಮ್ಮ ದೇಹವನ್ನು ಶುದ್ಧೀಕರಿಸುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೂರ್ನಾಲ್ಕು ದಿನ ಮಳೆ ಸೂಚನೆ – ಆತಂಕದಲ್ಲಿ ಬಯಲುಸೀಮೆ ಮಂದಿ

    ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವೈದ್ಯರನ್ನು ಪ್ರಶ್ನಿಸಲು ಆರಂಭಿಸಿದ್ದಾರೆ. ವೈದ್ಯರ ಹೇಳಿಕೆಗಳನ್ನು ಕೆಲವರು ಒಪ್ಪಿದರೆ, ಮತ್ತೆ ಕೆಲವರು ಅವರ ಪದವಿಯನ್ನು ಪ್ರಶ್ನಿಸಿ, ಅಪಹಾಸ್ಯ ಮಾಡಿದ್ದಾರೆ.

  • ಸ್ವಂತ ಮಕ್ಕಳನ್ನು 50,000 ರೂ.ಗೆ ಮಾರಾಟ ಮಾಡಿದ ಪೊಲೀಸ್ – ವೀಡಿಯೋ ವೈರಲ್

    ಸ್ವಂತ ಮಕ್ಕಳನ್ನು 50,000 ರೂ.ಗೆ ಮಾರಾಟ ಮಾಡಿದ ಪೊಲೀಸ್ – ವೀಡಿಯೋ ವೈರಲ್

    ಇಸ್ಲಾಮಾಬಾದ್: ಪೊಲೀಸ್ ಒಬ್ಬರು ತನ್ನ ಸ್ವಂತ ಮಕ್ಕಳನ್ನು 50,000 ರೂ. ಗೆ ಮಾರಾಟ ಮಾಡಿದ ಕರುಳು ಹಿಂಡುವ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಘೋಟ್ಕಿ ಜಿಲ್ಲೆಯಲ್ಲಿ ನಡೆದಿದೆ. ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ.

    ಘೋಟ್ಕಿ ಜಿಲ್ಲೆಯಲ್ಲಿ ಪೊಲೀಸ್ ತಂದೆಯೊಬ್ಬರು ತಮ್ಮ ಸ್ವಂತ ಮಕ್ಕಳನ್ನು 50,000 ರೂ.ಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ವೀಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಈ ಕರುಳು ಹಿಂಡುವ ವೀಡಿಯೋ ನೋಡಿ ಜನರು ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ವೀಡಿಯೋದಲ್ಲಿ, ಕಾರಾಗೃಹ ಇಲಾಖೆಯ ಪೊಲೀಸ್ ನಿಸಾರ್ ಲಶಾರಿ ಅವರು ರಸ್ತೆಯ ಮಧ್ಯದಲ್ಲಿ ತನ್ನ ಇಬ್ಬರು ಮಕ್ಕಳನ್ನು ನಿಲ್ಲಿಸಿಕೊಂಡು ಕೂಗುತ್ತಿರುತ್ತಾರೆ. ನಂತರ ಕಿರಿಯ ಮಗನನ್ನು ತನ್ನ ಮಡಿಲಲ್ಲಿ ಎತ್ತಿಕೊಂಡು ತನ್ನ ಮಕ್ಕಳನ್ನು 50,000 ರೂ.ಗೆ ಮಾರುತ್ತಿರುವುದಾಗಿ ಕೂಗಿ ಜನರನ್ನು ಕರೆದಿದ್ದಾರೆ. ಇದನ್ನೂ ಓದಿ: ಉಗ್ರಗಾಮಿ ಕಮಾಂಡರ್ ಸೇರಿದಂತೆ ಐವರು ಉಗ್ರರು ಗುಂಡಿಗೆ ಬಲಿ

    ಈ ನಿರ್ಧಾರಕ್ಕೆ ಕಾರಣವೇನು?
    ಲಶಾರಿಗೆ ತನ್ನ ಮಗನ ವೈದ್ಯಕೀಯ ಚಿಕಿತ್ಸೆಗಾಗಿ ರಜೆಯ ಅಗತ್ಯವಿತ್ತು. ಅವರ ಬಾಸ್ ಬಳಿ ರಜೆ ಕೇಳಿದರೆ, ಅವರು ಬದಲಾಗಿ ಲಂಚವನ್ನು ಕೇಳಿದರು. ಮೇಲಧಿಕಾರಿಗೆ ಲಂಚ ಕೊಡಲು ಸಾಧ್ಯವಾಗದಿದ್ದಾಗ ಅವರ ರಜೆಯನ್ನು ರದ್ದುಪಡಿಸಿ ನಗರದಿಂದ 120 ಕಿ.ಮೀ ದೂರದಲ್ಲಿರುವ ಲರ್ಕಾನಾಗೆ ವರ್ಗಾವಣೆ ಮಾಡಲಾಗಿತ್ತು.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಲಂಚ ಕೊಡದಿದ್ದಕ್ಕೆ ಅವರು ನನಗೆ ಈ ಶಿಕ್ಷೆಯನ್ನು ಏಕೆ ನೀಡಿದರು? ನಾನು ತುಂಬಾ ಬಡವನಾಗಿದ್ದು, ಕಾರಾಗೃಹಗಳ ಇನ್ಸ್‍ಪೆಕ್ಟರ್ ಜನರಲ್‍ಗೆ ದೂರು ನೀಡಲು ಕರಾಚಿಗೆ ಹೋಗಲೂ ಸಾಧ್ಯವಾಗಲಿಲ್ಲ. ಇಲ್ಲಿನ ಜನರು ತುಂಬಾ ಶಕ್ತಿಶಾಲಿಗಳು ಮತ್ತು ಸಾಮಾನ್ಯವಾಗಿ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ’ ಎಂದು ತಿಳಿಸಿದರು.

    ನಾನು ಲಂಚವನ್ನು ಪಾವತಿಸಬೇಕೇ ಅಥವಾ ನನ್ನ ಮಗುವಿನ ಆರೋಗ್ಯಕ್ಕೆ ಹಣ ಪಾವತಿಸಬೇಕೇ? ನಾನು ಲರ್ಕಾನಾದಲ್ಲಿ ಕೆಲಸ ಮಾಡಬೇಕಿತ್ತೇ ಅಥವಾ ನನ್ನ ಮಗುವನ್ನು ಚಿಕಿತ್ಸೆಗಾಗಿ ಕರೆದುಕೊಂಡು ಹೋಗಬೇಕಿತ್ತೇ? ಎಂದು ಪ್ರಶ್ನಿಸಿದರು.

    ವೀಡಿಯೋ ವೈರಲ್ ಆಗಿದ್ದು, ತಂದೆಯ ಅಸಹಾಯಕತೆಯನ್ನು ಕಂಡು ನೆಟ್ಟಿಗರು ಎದೆಗುಂದಿದ್ದಾರೆ. ಒಬ್ಬ ವೀಕ್ಷಕರು, ಈ ವೀಡಿಯೋ ನೋಡಿ ತುಂಬಾ ದುಃಖವಾಗಿದೆ. ಅವರು ಅಸಹಾಯಕತೆಯಲ್ಲಿ ಏನು ಮಾಡುತ್ತಿದ್ದಾರೆ? ಎಂದು ಕಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:  ಮುಗ್ಧತೆಗೆ ಇನ್ನೊಂದು ಹೆಸರೇ ಮಕ್ಕಳು – ಈ ವೀಡಿಯೋ ನೋಡಿ!

    ವೀಡಿಯೋ ವೈರಲ್ ಆಗುತ್ತಿದ್ದಂತೆ, ಲಶಾರಿಯ ಸ್ಥಿತಿ ಬಗ್ಗೆ ಸಿಂಧ್‍ನ ಸಿಎಂ ಮುರಾದ್ ಅಲಿ ಶಾ ಅವರ ಗಮನಕ್ಕೆ ಬಂದಿದೆ. ನಂತರ ಅವರು ಈ ಸಮಸ್ಯೆಯಲ್ಲಿ ಮಧ್ಯಸ್ಥಿಕೆ ವಹಿಸಿ, ಲಶಾರಿಗೆ ಘೋಟ್ಕಿಯ ಜೈಲಿನಲ್ಲಿ ತನ್ನ ಕೆಲಸದಲ್ಲಿ ಉಳಿಯುವಂತೆ ಮಾಡಿದರು. ಅದು ಅಲ್ಲದೇ ಅವರಿಗೆ 14 ದಿನಗಳ ರಜೆಯನ್ನು ನೀಡುವಂತೆ ಮಾಡಿದರು. ಆದ್ದರಿಂದ ಅವರು ತಮ್ಮ ಮಗುವಿನೊಂದಿಗೆ ಚಿಕಿತ್ಸೆಗಾಗಿ ಇರಲು ಸಾಧ್ಯವಾಗಿದೆ. ಇದರಿಂದ ಖುಷಿಗೊಂಡ ಲಶಾರಿ ಅವರು ಅಲಿ ಶಾ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು.