Tag: ವೀಡಿಯೋ ವೈರಲ್

  • ಸಿಡಿಲು ಬಡಿತದಿಂದ ವ್ಯಕ್ತಿ ಜಸ್ಟ್ ಮಿಸ್ – ಬೆಚ್ಚಿ ಬೀಳಿಸುವ ವೀಡಿಯೋ ವೈರಲ್

    ಸಿಡಿಲು ಬಡಿತದಿಂದ ವ್ಯಕ್ತಿ ಜಸ್ಟ್ ಮಿಸ್ – ಬೆಚ್ಚಿ ಬೀಳಿಸುವ ವೀಡಿಯೋ ವೈರಲ್

    ಜಕಾರ್ತ: ಇಂಡೋನೇಷ್ಯಾದಲ್ಲಿ ವ್ಯಕ್ತಿಯೊಬ್ಬ ಸಿಡಿಲು ಬಡಿತದಿಂದ ಜಸ್ಟ್ ಮಿಸ್ ಆಗಿದ್ದು, ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾನೆ. ನೋಡುಗರನ್ನು ಬೆಚ್ಚಿ ಬೀಳಿಸುವ ವೀಡಿಯೋ ವೈರಲ್ ಆಗಿದೆ.

    ಉತ್ತರ ಜಕಾರ್ತಾದ ಕರಾವಳಿ ಪಟ್ಟಣ ಸಿಲಿನ್ಸಿಂಗ್‍ನಲ್ಲಿ ಈ ಭಯಾನಕ ಘಟನೆ ನಡೆದಿದೆ. ಅಬ್ದುಲ್ ರೋಸಿದ್ (35) ಸಿಡಿಲು ಬಡಿತಕ್ಕೆ ಒಳಗಾದ ವ್ಯಕ್ತಿ. ಇದನ್ನೂ ಓದಿ:  ಹಗಲು ಹೊತ್ತಿನಲ್ಲೇ ಬ್ಯಾಂಕ್ ದರೋಡೆ – ಸಿಬ್ಬಂದಿ ಹತ್ಯೆ

    ಸೆಕ್ಯುರಿಟಿ ಗಾರ್ಡ್ ಆಗಿರುವ ಅಬ್ದುಲ್, ಸಿಲಿನ್ಸಿಂಗ್‍ನಲ್ಲಿರುವ ಅಂಗಳದಲ್ಲಿ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ರೋಸಿದ್‍ಗೆ ಸಿಡಿಲು ಬಡೆಯುವ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವೀಡಿಯೋವನ್ನು ಯೂಟ್ಯೂಬ್ ಚಾನೆಲ್ ಮೀಡಿಯಾ ಸ್ಟಾರ್ಟ್‍ನಲ್ಲಿ ಹಂಚಿಕೊಳ್ಳಲಾಗಿದೆ.

    ಅಬ್ದುಲ್, ಕಾರ್ಖಾನೆಯ ಪಾಕಿರ್ಂಗ್ ಸ್ಥಳದಲ್ಲಿ ಛತ್ರಿ ಹಿಡಿದು ಮಳೆಯಲ್ಲಿ ಗಸ್ತು ತಿರುಗುತ್ತಿದ್ದಾಗ ಸಿಡಿಲು ಬಡಿದಿದೆ. ಆಗ ವ್ಯಕ್ತಿ ನೆಲದ ಮೇಲೆ ಕುಸಿದು ಬೀಳುತ್ತಾನೆ. ಈ ವೇಳೆ ಸಹೋದ್ಯೋಗಿಗಳು ಸ್ಥಳಕ್ಕೆ ಧಾವಿಸಿ ಅಬ್ದುಲ್‍ನನ್ನು ತಕ್ಷಣ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸುತ್ತಾರೆ. ಸಣ್ಣಪುಟ್ಟ ಗಾಯಗಳಾಗಿದ್ದ ಅಬ್ದುಲ್ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದನ್ನೂ ಓದಿ: ಮಹಿಳಾ ವಿಮಾ ಏಜೆಂಟ್ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್ – ಸ್ನೇಹಿತನಿಂದ ಹೊರಬಂತು ಸತ್ಯ

  • ವೀಡಿಯೋ: ಮೇಕಪ್ ಆರ್ಟ್‍ನಿಂದ ಶಾರೂಖ್ ಆಗಿ ರೂಪಾಂತರಗೊಂಡ ಯುವತಿ

    ವೀಡಿಯೋ: ಮೇಕಪ್ ಆರ್ಟ್‍ನಿಂದ ಶಾರೂಖ್ ಆಗಿ ರೂಪಾಂತರಗೊಂಡ ಯುವತಿ

    ಮುಂಬೈ: ದೆಹಲಿಯ ಮೇಕಪ್ ಆರ್ಟಿಸ್ಟ್ ಆಗಿರುವ ದೀಕ್ಷಿತಾ ಎಂಬವರು ತಮ್ಮ ಅದ್ಭುತವಾದ ಮೇಕಪ್ ಶೈಲಿಯಿಂದ ಬಾಲಿವುಡ್ ಬಾದ್‍ಶಾ ಶಾರೂಖ್ ಖಾನ್ ಆಗಿ ರೂಪಾಂತರಗೊಂಡ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ತಾಯಿ ಮೇಲೆ ಹಲ್ಲೆ ಮಾಡಿದನೆಂದು ಸಂಬಂಧಿಯನ್ನೇ ಕೊಂದ ಬಾಲಕಿಯರು!

    ಕೇವಲ ಮೇಕಪ್ ಸೆಟ್‍ಗಳನ್ನು ಬಳಸಿ ದೀಕ್ಷಿತಾ ಟುಕ್ಸೆಡೊದಲ್ಲಿ ಶಾರೂಖ್ ಅವರ ಚಿತ್ರವನ್ನು ತೋರಿಸುವುದರೊಂದಿಗೆ ಈ ವೀಡಿಯೋ ಪ್ರಾರಂಭಿಸುತ್ತಾರೆ. ಶಾರೂಖ್ ಅವರ ಚಮ್ಮಕ್ ಚಲ್ಲೋ ರಿಮಿಕ್ಸ್ ಬ್ಯಾಕ್ ಗ್ರೌಂಡ್ ಹಾಡು ಪ್ಲೇ ಆಗುತ್ತಿದ್ದಂತೆ, ಅವರು ತಮ್ಮ ಬ್ಲೆಂಡರ್‍ಗಳು ಮತ್ತು ಬ್ರಷ್‍ಗಳ ಕೆಲವು ಸ್ವೀಪ್‍ಗಳು ಮತ್ತು ಪಫ್‍ಗಳೊಂದಿಗೆ ಕಿಂಗ್ ಖಾನ್ ಆಗಿ ರೂಪಾಂತರಗೊಳ್ಳುತ್ತಾರೆ. ಇದನ್ನೂ ಓದಿ: ದೆಹಲಿ, ಮುಂಬೈನಲ್ಲಿ ಶುರುವಾಯ್ತಾ ಕೊರೊನಾ ಮೂರನೇ ಅಲೆ?

    ದಿಕ್ಷಿತಾ ಅವರು ತಮ್ಮ ಇನ್ಸ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದು, ಬಾಲಿವುಡ್ ರಾಜನಾಗಿ ರೂಪಾಂತರ ಎಂದು ಶಿರ್ಷಿಕೆ ಬರೆದುಕೊಂಡಿದ್ದಾರೆ. ವೀಡಿಯೋ 150 ಸಾವಿರಕ್ಕೂ ಹೆಚ್ಚು ಲೈಕ್ಸ್‌ಗಳನ್ನು ಪಡೆದಿದ್ದು, ಸಾಕಷ್ಟು ಜನರಿಂದ ಮೆಚ್ಚುಗೆಯ ಕಾಮೆಂಟ್ಸ್‌ಗಳನ್ನು  ಗಳಿಸಿದೆ.

  • ಹಾಲಿ ಶಾಸಕನಿಂದ ಮಾಜಿ ಶಾಸಕನ ಮೇಲೆ ಚಪ್ಪಲಿಯಿಂದ ಹಲ್ಲೆಗೆ ಯತ್ನ

    ಹಾಲಿ ಶಾಸಕನಿಂದ ಮಾಜಿ ಶಾಸಕನ ಮೇಲೆ ಚಪ್ಪಲಿಯಿಂದ ಹಲ್ಲೆಗೆ ಯತ್ನ

    ವಿಜಯನಗರ (ಬಳ್ಳಾರಿ): ಬಿಜೆಪಿಯ ಮಾಜಿ ಶಾಸಕ ನೇಮಿರಾಜನಾಯ್ಕ್ ಮೇಲೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಾ ನಾಯಕ್ ಚಪ್ಪಲಿಯಿಂದ ಹಲ್ಲೆಗೆ ಯತ್ನಸಿದ್ದಾರೆ.

    ನಿನ್ನೆ ನಡೆದ ಪುರಸಭೆಯ ಚುನಾವಣೆಯ ಮತದಾನದ ವೇಳೆ ಮತಕೇಂದ್ರದ ಒಳಗೆ ನೇಮಿರಾಜ್ ನಾಯಕ್, ಅವರು ಹೋಗಿದ್ದ ಕಾರಣ ಆರಂಭವಾದ ಜಗಳವು, ಇಬ್ಬರು ಶಾಸಕರ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತಿನ ಭರಾಟೆಯಲ್ಲಿ ಭೀಮಾ ನಾಯಕ್ ಕೈಯಲ್ಲಿ ಚಪ್ಪಲಿ ಹಿಡಿದು ಹಲ್ಲೆಗೆ ಯತ್ನಿಸಿದ್ದಾರೆ. ಹಾಲಿ ಶಾಸಕ ಕೈಯಲ್ಲಿ ಚಪ್ಪಲಿ ಹಿಡಿದು ಹಲ್ಲೆ ಮಾಡಲು ಮುಂದಾದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಇಂದು ವೈರಲ್ ಆಗಿದೆ. ಇದನ್ನೂ ಓದಿ: ಕರ್ನಾಟಕ ಬಂದ್ ಮಾಡುವ ಅನಿವಾರ್ಯತೆ ಇಲ್ಲ: ಸುನಿಲ್ ಕುಮಾರ್

    ಪುರಸಭೆ ಚುನಾವಣೆಯಲ್ಲಿ ಮತದಾನ ಕೇಂದ್ರದ ಮುಂದೆ ಪರಸ್ಪರ ಈ ವಾಗ್ವಾದ ನಡೆದಿದ್ದು, ನೇಮಿರಾಜ್ ನಾಯಕ್ ಹಾಗೂ ಅವರ ಬೆಂಬಲಿಗರ ಮೇಲೆ ಹಾಲಿ ಶಾಸಕ ಹಲ್ಲೆ ಮಾಡಲು ಮುಂದಾಗಿದ್ದರು. ಈ ವಾಗ್ವಾದ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ಪೊಲೀಸರು ಮಧ್ಯ ಪ್ರವೇಶಿಸಿದ್ದಾರೆ. ಇದನ್ನೂ ಓದಿ: ತೇಜಸ್ವಿ ಸೂರ್ಯನ ಬುರುಡೇಲಿ ಮೆದುಳೇ ಇಲ್ಲ: ರಮ್ಯಾ

  • ತಾಂಜೇನಿಯಾದ ಹುಡುಗನ ನೃತ್ಯಕ್ಕೆ ನೋರಾ ಫತೇಹಿ ಬೌಲ್ಡ್- ವೀಡಿಯೋ ವೈರಲ್

    ಮುಂಬೈ: ತಾಂಜೇನಿಯಾದ ಹುಡುಗ ಕಿಲಿ ಪೌಲ್ ಜನಪ್ರಿಯ ಬಾಲಿವುಡ್ ಹಾಡುಗಳಿಗೆ ಲಿಪ್-ಸಿಂಕ್ ಮಾಡುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.

     

    View this post on Instagram

     

    A post shared by Kili Paul (@kili_paul)

    ಈಗ ಕಿಲಿಯು ಹೊಸ ವೀಡಿಯೋದೊಂದಿಗೆ ಮತ್ತೆ ಮರಳಿದ್ದಾನೆ. ಈ ಬಾರಿ ಅವನು ಬಾಲಿವುಡ್ ನಟಿ ನೋರಾ ಫತೇಹಿ ಅವರ ಇತ್ತೀಚೆಗೆ ಬಿಡುಗಡೆಯಾದ ಡ್ಯಾನ್ಸ್ ಮೇರಿ ರಾಣಿ ಹಾಡಿಗೆ ನೃತ್ಯ ಮಾಡಿದ್ದಾನೆ. ಇದನ್ನೂ ಓದಿ: 14 ತಿಂಗಳ ನಂತರ ಭೇಟಿ – ಪಾಲಕನನ್ನು ಸುತ್ತುವರೆದು ಸೊಂಡಿಲಿನಿಂದ ಅಪ್ಪಿಕೊಂಡ ಆನೆಗಳು

    ಈ ವೈರಲ್ ವೀಡಿಯೋದಲ್ಲಿ ಕಿಲಿ ಪಾಲ್ ಡ್ಯಾನ್ಸ್ ಮೇರಿ ರಾಣಿ ಹಾಡಿನಲ್ಲಿರುವ ಹುಕ್ ಸ್ಟೆಪ್ಸ್ಗಳನ್ನು ಹಾಕುತ್ತಿದ್ದು, ತನ್ನ ಅಮೋಘ ನೃತ್ಯದ ಮೂಲಕ ಈಗಾಗಲೇ ಸಾಕಷ್ಟು ನೆಟ್ಟಿಗರ ಗಮನ ಸೆಳೆದಿದ್ದಾನೆ.

    ಕಿಲಿಯು ಈಗಾಗಲೇ ತನ್ನ ಇನ್ಸ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ವೀಡಿಯೋವನ್ನು ಹರಿಬಿಟ್ಟಿದ್ದು, ವೈರಲ್ ಆದ ಈ ವೀಡಿಯೋವು ನೆಟ್ಟಿಗರಿಂದ 60 ಲಕ್ಷ ವಿಕ್ಷಣೆಗಳನ್ನು ಪಡೆದಿದೆ. ನಾನು ನೋರಾ ಅವರು ಈ ಹಾಡಿನಲ್ಲಿ ಯಾವ ರೀತಿ ಹೆಜ್ಜೆ ಹಾಕಿದ್ದಾರೋ ಅದೇ ರೀತಿ ನೃತ್ಯ ಮಾಡಲು ಪ್ರಯತ್ನಿಸಿದ್ದೇನೆ ಎಂದು ವೀಡಿಯೋಗೆ ಶೀರ್ಷಿಕೆ ನೀಡಿದ್ದಾನೆ. ಇದನ್ನೂ ಓದಿ: 14 ತಿಂಗಳ ನಂತರ ಭೇಟಿ – ಪಾಲಕನನ್ನು ಸುತ್ತುವರೆದು ಸೊಂಡಿಲಿನಿಂದ ಅಪ್ಪಿಕೊಂಡ ಆನೆಗಳು

    ಕಿಲಿಯ ಈ ಅಮೋಘ ನೃತ್ಯವನ್ನು ವಿಕ್ಷಿಸಿದ ನೋರಾ ಬಹಳ ಪ್ರಭಾವಿತಳಾಗಿದ್ದು, ಅವನ ಆಫ್ರೋ ಮತ್ತು ಜಂಕು ಹೆಜ್ಜೆಗಳು ನೋಡಲು ತುಂಬಾ ಅದ್ಬುತವಾಗಿತ್ತು. ಕಿಲಿ ಪೌಲ್ ತಾಂಜೇನೀಯಾದಲ್ಲಿ ‘ಡ್ಯಾನ್ಸ್ ಮೇರಿ ರಾಣಿ’ ಎಂದು ಶಿರ್ಷಿಕೆ ಬರೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಡ್ಯಾನ್ಸ್ ಮೇರಿ ರಾಣಿಯನ್ನು ಗುರು ರಾಂಧವಾ ಮತ್ತು ಜಹ್ರಾ ಎಸ್ ಖಾನ್ ಅವರು ಹಾಡಿದ್ದು, ಇದೇ ತಿಂಗಳು ಡಿಸೆಂಬರ್ 21 ರಂದು ಈ ಹಾಡನ್ನು ಬಿಡುಗಡೆ ಮಾಡಲಾಗಿದೆ.

     

  • ಅನಾರೋಗ್ಯದಿಂದ ಜಾಮೀನಿನ ಮೇಲೆ ಹೊರಬಂದಿರೋ ಪ್ರಜ್ಞಾ ಸಿಂಗ್‌ರಿಂದ ಕ್ರಿಕೆಟ್, ಡ್ಯಾನ್ಸ್ – ವೀಡಿಯೋ ವೈರಲ್

    ಅನಾರೋಗ್ಯದಿಂದ ಜಾಮೀನಿನ ಮೇಲೆ ಹೊರಬಂದಿರೋ ಪ್ರಜ್ಞಾ ಸಿಂಗ್‌ರಿಂದ ಕ್ರಿಕೆಟ್, ಡ್ಯಾನ್ಸ್ – ವೀಡಿಯೋ ವೈರಲ್

    ಭೋಪಾಲ್: ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಅನಾರೋಗ್ಯದ ಕಾರಣದಿಂದ ಜಾಮೀನಿನ ಮೇಲೆ ಹೊರಬಂದಿದ್ದ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಕ್ರಿಕೆಟ್ ಆಟದಲ್ಲಿ ನಿರತರಾಗಿರುವ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

    ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಅವರು ಕ್ರಿಕೆಟ್ ಆಡುತ್ತಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಆರೋಪಿ ಆಗಿರುವ ಅವರು, ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಆದರೂ ಅವರು ಹಲವು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಬಾಸ್ಕೆಟ್ ಬಾಲ್ ಆಟ, ನೃತ್ಯ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅನಾರೋಗ್ಯದ ಕಾರಣ ನೀಡಿ ಜಾಮೀನಿನ ಮೇಲೆ ಹೊರಬಂದವರು ಕಾರ್ಯಕ್ರಮಗಳಲ್ಲಿ ಹೀಗೆ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದಕ್ಕೆ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ.

    ವೀಡಿಯೋದಲ್ಲಿ ಏನಿದೆ?
    ಭೋಪಾಲ್‌ನ ಶಕ್ತಿ ನಗರ ಪ್ರದೇಶದಲ್ಲಿ ಕೇಸರಿ ವಸ್ತ್ರಧಾರಿ ಸಂಸದೆ ಬ್ಯಾಟ್ ಹಿಡಿದುಕೊಂಡಿದ್ದಾರೆ. ಅವರ ಸುತ್ತ ಹಲವಾರು ಜನರಿದ್ದಾರೆ. ಒಬ್ಬರು ಬೌಲಿಂಗ್ ಮಾಡಿದ್ದು, ಬಾಲ್ ಅನ್ನು ಸಂಸದೆ ಹಿಟ್ ಮಾಡಿದ್ದಾರೆ. ಸಂಸದೆ ಸುತ್ತ ಇರುವ ಜನರೆಲ್ಲರೂ ಪ್ರೋತ್ಸಾಹಿಸುತ್ತಿರುವ ದೃಶ್ಯ ವೀಡಿಯೋದಲ್ಲಿದೆ.

    ಈ ವೀಡಿಯೋ ಹೆಚ್ಚು ವೀವ್ಸ್ ಪಡೆದಿದ್ದು, ಸಂಸದೆ ಯಾವುದೇ ಅನಾರೋಗ್ಯಕ್ಕೆ ತುತ್ತಾದವರ ಹಾಗೇ ಕಾಣುವುದಿಲ್ಲ ಎಂದು ನೆಟ್ಟಿಗರು ಟೀಕಿಸಿದ್ದಾರೆ. ಇದನ್ನೂ ಓದಿ: ಮತಾಂತರ ನಿಷೇಧ ಸರ್ಕಾರಿ ಪ್ರಾಯೋಜಿತ ಭಯೋತ್ಪಾದನಾ ಮಸೂದೆಯನ್ನು ಹಿಂಪಡೆಯಿರಿ: SDPI

    ಈ ಹಿಂದೆ ನವರಾತ್ರಿ ಆಚರಣೆ ವೇಳೆ ದೇಗುಲಕ್ಕೆ ಭೇಟಿ ನೀಡಿದ್ದಾಗ ಗಾರ್ಬಾ ನೃತ್ಯವನ್ನು ಸಂಸದೆ ಪ್ರದರ್ಶಿಸಿದ್ದರು. ಕೆಲ ದಿನಗಳ ನಂತರ ಬಾಸ್ಕೆಟ್ ಬಾಲ್ ಹಾಗೂ ಮಹಿಳಾ ಆಟಗಾರರೊಂದಿಗೆ ಕಬ್ಬಡಿಯನ್ನು ಆಡಿದ್ದ ವೀಡಿಯೋ ಭಾರೀ ವೈರಲ್ ಆಗಿತ್ತು. ಆಗ ಪ್ರತಿಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದರು. ಇದನ್ನೂ ಓದಿ: ಕೃಷಿ ಕಾಯ್ದೆಗಳ ವಿರುದ್ಧ ಹೋರಾಡಿದ್ದ ರೈತರು ಪಂಜಾಬ್‌ ಚುನಾವಣೆಯಲ್ಲಿ ಕಣಕ್ಕೆ

    2008ರ ಮಾಲೆಗಾಂವ್ ಬಾಂಬ್ ಸ್ಫೋಟದಲ್ಲಿ 10 ಜನರು ಸಾವನ್ನಪ್ಪಿದ್ದರು. ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದರು. ಈ ಪ್ರಕರಣದ ಆರೋಪಿಯಾಗಿ ಪ್ರಜ್ಞಾ ಠಾಕೂರ್ ಗುರುತಿಸಿಕೊಂಡಿದ್ದಾರೆ. 2017ರಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ನೀಡಲಾಗಿತ್ತು. ನಂತರ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರು. ಇದನ್ನೂ ಓದಿ: ಜ.3 ರಿಂದ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ: ಮೋದಿ

  • ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಂಡ ರಶ್ಮಿಕಾ, ವಿಜಯ್ ದೇವರಕೊಂಡ

    ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಂಡ ರಶ್ಮಿಕಾ, ವಿಜಯ್ ದೇವರಕೊಂಡ

    ಮುಂಬೈ: ಟಾಲಿವುಡ್ ನಟ ವಿಜಯ್ ದೇವರಕೊಂಡ ಹಾಗೂ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಇಬ್ಬರೂ ಮುಂಬೈನ ರೆಸ್ಟೋರೆಂಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಈ ಜೋಡಿಗಳು ಇದೀಗ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದವು, ಇದೀಗ ಮತ್ತೆ ಕಾಣಿಸಿಕೊಂಡಿರುವ ವೀಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯೊಬ್ಬರು ಶೇರ್ ಮಾಡಿದ್ದು, ಈ ವೀಡಿಯೋಕ್ಕೆ ಭರ್ಜರಿ ಕಾಮೆಂಟ್ಸ್ ಹಾಗೂ ಲೈಕ್‌ಗಳು ಬರುತ್ತಿವೆ. ಅಷ್ಟೇ ಅಲ್ಲದೆ ಅಭಿಮಾನಿಗಳು ರಶ್ಮಿಕಾ ಹಾಗೂ ದೇವರಕೊಂಡ ಜೋಡಿಯನ್ನು ರಣಬೀರ್ ಹಾಗೂ ಆಲಿಯಾ ಜೋಡಿಗೆ ಹೋಲಿಸಿದ್ದಾರೆ. ಇವರಿಬ್ಬರ ಜೋಡಿಗೆ ಅಭಿಮಾನಿಗಳು ಫೀದಾ ಆಗಿದ್ದಾರೆ.

    ವೀಡಿಯೋದಲ್ಲಿ ಏನಿದೆ?: ಖಾಸಗಿ ರೆಸ್ಟೋರೆಂಟ್‌ ನಿಂದ ಭಾನುವಾರ ರಾತ್ರಿ ನಟ ವಿಜಯ್ ದೇವರಕೊಂಡ ಮೊದಲು ಹೊರಗೆ ಬಂದು ತಮ್ಮ ಕಾರನ್ನು ಹತ್ತಿದ್ದಾರೆ. ನಂತರದಲ್ಲಿ ನಟಿ ರಶ್ಮಿಕಾ ಮಂದಣ್ಣ ಹೊರಗೆ ಬಂದು ಕಾರನ್ನು ಹತ್ತಿರುವ ವೀಡಿಯೋ ವೈರಲ್ ಆಗುತ್ತಿದೆ. ಒಬ್ಬರು ಒಂದೇ ಹೋಟೆಲ್ ನಿಂದ ಹೊರಗೆ ಬಂದರೂ ಕೂಡಾ ಬೇರೆ ಬೇರೆಯಾಗಿ ಬಂದು ತಮ್ಮ ಕಾರ್ ಹತ್ತಿ ಅಲ್ಲಿಂದ ಹೊರಟು ಹೋಗಿದ್ದಾರೆ. ಇದನ್ನೂ ಓದಿ: ರಿಷಭ್ ಪಂತ್ ಈಗ ಉತ್ತರಾಖಂಡ್ ಬ್ರಾಂಡ್ ಅಂಬಾಸಿಡರ್

     

    View this post on Instagram

     

    A post shared by Manav Manglani (@manav.manglani)

    2018ರಲ್ಲಿ ತೆರೆಕಂಡ ಗೀತಾ ಗೋವಿಂದಂ ಚಿತ್ರದಲ್ಲಿ ಮೊದಲ ಬಾರಿಗೆ ಸ್ಕ್ರಿನ್  ಹಂಚಿಕೊಂಡಿದ್ದರು. 2019ರಲ್ಲಿ ತೆರೆ ಕಂಡ ಡಿಯರ್ ಕಾಮ್ರೆಡ್ ಸಿನೆಮಾದಲ್ಲಿ ಈ ಜೋಡಿ ಯಶಸ್ಸು ಕಂಡಿತ್ತು. ನಂತರ ಈ ಜೋಡಿಗಳ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ತಲೆಕೂದಲು ತೆಗೆದ ಫೋಟೋ ಶೇರ್ ಮಾಡಿ ಶಾಕಿಂಗ್ ಸುದ್ದಿ ಕೊಟ್ಟ ಮೋಹಿನಿ ನಟಿ

    ಸದ್ಯ ಪುರಿ ಜಗನ್ನಾಥ್ ಅವರ ಮುಂಬರುವ ಚಿತ್ರ ಲೈಗರ್‌ನಲ್ಲಿ ವಿಜಯ್ ಅವರು ನಟಿ ಅನನ್ಯಾ ಪಾಂಡೆಯ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನೆಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

  • ಕಾರು-ಬೈಕ್ ಡಿಕ್ಕಿ – ಬೈಕ್ ಸವಾರ ಬೀಳುತ್ತಿರುವ ವೀಡಿಯೋ ವೈರಲ್

    ಕಾರು-ಬೈಕ್ ಡಿಕ್ಕಿ – ಬೈಕ್ ಸವಾರ ಬೀಳುತ್ತಿರುವ ವೀಡಿಯೋ ವೈರಲ್

    ಹಾಸನ: ವೇಗವಾಗಿ ಬಂದ ಕಾರು ಹಿಂಬದಿಯಿಂದ ಬೈಕ್‌ಗೆ ಗುದ್ದಿದ ಪರಿಣಾಮ ಬೈಕ್ ಸವಾರ ಕೆಳಗೆ ಬೀಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಹಾಸನ ಜಿಲ್ಲೆಯ ಮೊಸಳೆಹೊಸಹಳ್ಳಿ ಸಮೀಪದಲ್ಲಿ ಈ ಘಟನೆ ನಡೆದಿದೆ. ಬಸ್ತಿಹಳ್ಳಿಯ ಮಂಜುನಾಥ್ ಗಾಯಗೊಂಡ ಬೈಕ್ ಸವಾರ. ವೇಗವಾಗಿ ಬರುತ್ತಿದ್ದ ಕಾರು, ಬೈಕ್‌ಗೆ ಡಿಕ್ಕಿ ಹೊಡೆದಿದೆ. ಕಾರಿನ ಡಿಕ್ಕಿ ರಭಸಕ್ಕೆ ಬೈಕ್ ಸವಾರ, ಬೈಕ್ ಸಮೇತ ಕಾರಿನ ಮೇಲೆ ಜಂಪ್ ಆಗಿ ಬಿದ್ದಿದ್ದಾರೆ. ಈ ಭೀಕರ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಹಾಸನದಿಂದ ಮೈಸೂರಿನತ್ತ ಸ್ವಿಫ್ಟ್ ಕಾರು ತೆರಳುತ್ತಿತ್ತು. ಬೈಕ್‌ಗೆ ಡಿಕ್ಕಿ ಹೊಡೆದರೂ ಕಾರನ್ನು ನಿಲ್ಲಿಸದೆ ತಪ್ಪಿಸಿಕೊಂಡು ಹೋಗುವ ವೇಳೆ ಕಾರು ಪಲ್ಟಿಯಾಗಿದೆ. ಇದರಿಂದ ಕಾರಿನಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿವೆ. ಕಾರು ಡಿಕ್ಕಿಯಾದರು ಅದೃಷ್ಟವಶಾತ್ ಬೈಕ್ ಸವಾರರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: 5 ತಿಂಗಳ ಗರ್ಭಿಣಿ ಪತ್ನಿಯನ್ನು ನೀರಿನಲ್ಲಿ ಮುಳುಗಿಸಿ ಕೊಂದ ಪತಿ

    ಡಿಸೆಂಬರ್ 12ರ ಮಧ್ಯಾಹ್ನ 3 ಗಂಟೆಗೆ ಅಪಘಾತ ನಡೆದಿದ್ದು, ಇದೀಗ ಭೀಕರ ಅಪಘಾತದ ದೃಶ್ಯ ವೈರಲ್ ಆಗಿದೆ. ಹೊಳೆನರಸೀಪುರ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಯುವತಿಯ ಒಂದು ದೂರಿಗೆ 1 ಸಾವಿರ ಪೊಲೀಸರು ತನಿಖೆ ಮಾಡಿದ್ರು!

  • ಯಾದಗಿರಿ ಪೊಲೀಸರ ಲಂಚಾವತಾರದ ವೀಡಿಯೋ ವೈರಲ್

    ಯಾದಗಿರಿ ಪೊಲೀಸರ ಲಂಚಾವತಾರದ ವೀಡಿಯೋ ವೈರಲ್

    ಯಾದಗಿರಿ: ಹಾಡಹಗಲೇ ಯಾದಗಿರಿ ಪೊಲೀಸರು ಲಂಚಾವತಾರಕ್ಕೆ ಮುಂದಾಗಿದ್ದಾರೆ. ಪೊಲೀಸರು ಲಂಚ ಪಡೆದುಕೊಂಡಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ.

    ಮರಳು ಟಿಪ್ಪರ್ ಮಾಲೀಕರ ಜೊತೆ ಯಾದಗಿರಿ ಗ್ರಾಮೀಣ ಠಾಣಾ ಸಿಬ್ಬಂದಿ ಲಂಚ ಪಡೆದಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ತಾಲೂಕಿನ ಕೌಳೂರು ಗ್ರಾಮದ ಮುಖ್ಯ ರಸ್ತೆಯಲ್ಲಿ ಹಣ ಪಡೆದ ಆರೋಪ ಕೇಳಿ ಬರುತ್ತಿದೆ.

    MONEY

    ಠಾಣೆಯ ಪಿಎಸ್‌ಐ ಸುರೇಶ್ ತಮ್ಮ ವಾಹನದಲ್ಲಿದ್ದಾಗ ಅವರ ವಾಹನ ಚಾಲಕ, 30 ಸಾವಿರ ರೂ. ಲಂಚ ಪಡೆಯಲಾಗಿದೆ. ಒಂದು ಮರಳು ಟಿಪ್ಪರ್‌ಗೆ 50 ಸಾವಿರ ಲಂಚದ ಬೇಡಿಕೆಯಿಡಲಾಗಿದ್ದು, ಮುಂಗಡವಾಗಿ 30 ಸಾವಿರ ರೂ.ನ್ನು ಪೊಲೀಸರು ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ:  ಹಿರಿಯೂರಿನಲ್ಲಿ ಭೀಕರ ಸರಣಿ ಅಪಘಾತ- ನಾಲ್ವರು ಸ್ಥಳದಲ್ಲೇ ಸಾವು

    ಲಂಚ ಪಡೆದ ವೀಡಿಯೋ ವೈರಲ್ ಹಿನ್ನೆಲೆ ವಾಹನ ಚಾಲಕ ಕಂ ಕಾನ್ಸ್ಟೇಬಲ್ ಪ್ರಭುಗೌಡ ಅಮಾನತು ಮಾಡಲಾಗಿದೆ. ಆದರೆ ಕಾನ್ಸ್ಟೇಬಲ್ ಪ್ರಭುಗೌಡ ಲಂಚ ಪಡೆಯುವಾಗ ಪಿಎಸ್‌ಐ ಸುರೇಶ್ ಜೀಪ್‌ನಲ್ಲಿಯೇ ಇದ್ದರೂ, ಪಿಎಸ್‌ಐ ಸುರೇಶ್ ವಿರುದ್ಧ ಎಸ್ಪಿ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಹಲವಾರು ಅನುಮಾನಗಳನ್ನು ಹುಟ್ಟುಹಾಕಿದೆ. ಇದನ್ನೂ ಓದಿ: ಕಳೆದ 70 ವರ್ಷದಿಂದ ಕಾಂಗ್ರೆಸ್ ಕಟ್ಟಿದ್ದನ್ನು ಬಿಜೆಪಿ 7 ವರ್ಷದಲ್ಲಿ ಮಾರುತ್ತಿದೆ: ಪ್ರಿಯಾಂಕಾ ಗಾಂಧಿ

    ಇತ್ತೀಚೆಗೆ ಹಿರಿಯ ಅಧಿಕಾರಿಗಳು ಮಾಡುವ ತಪ್ಪುಗಳಿಗೆ ರಕ್ಷಕರಾಗಿರುವ ಎಸ್‌ಪಿ, ಕಿರಿಯ ಸಿಬ್ಬಂದಿ ಶಿಕ್ಷೆ ನೀಡುತ್ತಿದ್ದಾರೆ. ಯಾದಗಿರಿ ಗ್ರಾಮೀಣ ಠಾಣೆಯ ಪಿಎಸ್‌ಐ ಸುರೇಶ್, ಪದೇ ಪದೇ ತಪ್ಪು ಮಾಡುತ್ತಿದ್ದರು ಎಸ್‌ಪಿ ವೇದಮೂರ್ತಿ ಕೃಪಕಟಾಕ್ಷದಿಂದ ಶಿಕ್ಷೆಯಿಂದ ಪಾರಾಗುತ್ತಿದ್ದಾರೆ. ಪೊಲೀಸರ ಭ್ರಷ್ಟಾಚಾರಕ್ಕೆ ಜಿಲ್ಲೆಯಲ್ಲಿ ಇದೀಗ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

  • ವೆಡ್ಡಿಂಗ್ ಕೇಕ್ ಬೀಳಿಸಿ ದಂಪತಿಗೆ ಶಾಕ್ ಕೊಟ್ಟ ಸಪ್ಲೈಯರ್

    ವೆಡ್ಡಿಂಗ್ ಕೇಕ್ ಬೀಳಿಸಿ ದಂಪತಿಗೆ ಶಾಕ್ ಕೊಟ್ಟ ಸಪ್ಲೈಯರ್

    ವಾಷಿಂಗ್ಟನ್: ವೆಡ್ಡಿಂಗ್ ಕೇಕ್ ಬೀಳಿಸಿ ದಂಪತಿಗೆ ಸಪ್ಲೈಯರ್ ಶಾಕ್ ಕೊಟ್ಟ ವೀಡಿಯೋ ಈಗ ಸೋಶಿಯಲ್ ವೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ವೀಡಿಯೋ ನೋಡಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ

    ಕ್ರಿಶ್ಚಿಯನ್ನ ಸಂಪ್ರದಾಯದಲ್ಲಿ ಯಾವುದೇ ಶುಭ ಕಾರ್ಯಗಳಿಗೂ ಕೇಕ್ ಕಟ್ ಮಾಡುತ್ತಾರೆ. ಇನ್ನು ಮದುವೆಯ ಸಂದರ್ಭದಲ್ಲಿ ಕೇಕ್ ಅವಿಭಾಜ್ಯ ಅಂಗವಾಗಿರುತ್ತೆ. ಇಂತಹ ಸಂದರ್ಭದಲ್ಲಿ ಹೋಟೆಲ್ ಸಪ್ಲೈಯರ್ ಮದುವೆಯ ಕೇಕ್ ಅನ್ನು ಬೀಳಿಸಿ ವಧು-ವರನಿಗೆ ಶಾಕ್ ಕೊಟ್ಟಿದ್ದಾನೆ. ಈ ದೃಶ್ಯ ನೋಡಿದ ಎಲ್ಲರೂ ಶಾಕ್ ಆಗಿದ್ದು, ನಂತರ ಇನ್ನೊಂದು ಕಡೆಯಿಂದ ಕೇಕ್ ಬರುತ್ತಿರುವುದನ್ನು ನೋಡಿದ ಜನರು ಸಪ್ಲೈಯರ್ ಬೇಕೆಂದು ಈ ರೀತಿ ಶಾಕ್ ನೀಡಿದ್ದಾನೆ ಎಂದು ಅರಿತುಕೊಂಡಿದ್ದಾರೆ. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಕೋವಿಡ್-19 ಟೆಸ್ಟಿಂಗ್ ಹೆಚ್ಚಳ

    ಪ್ರಸ್ತುತ ಹೋಟೆಲ್ ಸಪ್ಲೈಯರ್ ಮದುವೆಯ ಕೇಕ್ ಬೀಳಿಸಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವೀಡಿಯೋವನ್ನು ಇನ್‍ಸ್ಟಾಗ್ರಾಮ್ ನ ಶಿ_ಸೈಡಿಎಸ್ ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, 20 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, ನೆಟ್ಟಿಗರು ಈ ವೀಡಿಯೋವನ್ನು ಇಷ್ಟ ಪಡುತ್ತಿದ್ದಾರೆ.

    ವೀಡಿಯೋದಲ್ಲಿ ಏನಿದೆ?
    ವಧು ಮತ್ತು ವರರು ತಮ್ಮ ವೆಡ್ಡಿಂಗ್ ನಲ್ಲಿ ಸ್ಟೆಪ್ ಬೈ ಸ್ಟೆಪ್ ಕೇಕ್ ಅನ್ನು ಸಪ್ಲೈಯರ್ ತರುತ್ತಿರುವುದನ್ನು ನೋಡುತ್ತಿದ್ದು, ಕೇಕ್ ಕೈ ಜಾರಿ ಉರುಳಿ ನೆಲದ ಮೇಲೆ ಬೀಳುತ್ತದೆ. ಈ ದೃಶ್ಯ ನೋಡಿದ ಆ ದಂಪತಿ ಫುಲ್ ಶಾಕ್ ನಲ್ಲಿ ನಿಂತುಕೊಳ್ಳುತ್ತಾರೆ. ಆದರೆ ಸಪ್ಲೈಯರ್ ಅವರಿಬ್ಬರಿಗೆ ತಮಾಷೆ ಮಾಡುತ್ತಿದ್ದು, ಕೆಲವು ನಿಮಿಷಗಳಲ್ಲಿ ಇನ್ನೊಂದು ಕಡೆಯಿಂದ ಮತ್ತೊಬ್ಬ ಸಪ್ಲೈಯರ್ ನಿಜವಾದ ಕೇಕ್ ನೊಂದಿಗೆ ಬರುತ್ತಾನೆ. ಇದನ್ನೂ ಓದಿ: ಮದುವೆ ಮಂಟಪದೊಳಗೆ ನುಗ್ಗಿ ಪ್ರೇಯಸಿಗೆ ಸಿಂಧೂರವಿಟ್ಟ ಪಾಗಲ್ ಪ್ರೇಮಿ

    ಸಪ್ಲೈಯರ್ ಕೊಟ್ಟ ಟ್ವಿಸ್ಟ್ ನೋಡಿ ದಂಪತಿ ನೆಮ್ಮದಿಯ ನಿಟ್ಟುಸಿರು ಬಿಟ್ಟು, ಕೇಕ್ ಕಟ್ ಮಾಡಿ ಸಂಭ್ರಮಿಸಿದರು. ವೀಡಿಯೋ ಶೇರ್ ಮಾಡಿದ ಅವರು, ದೇವರಿಗೆ ಧನ್ಯವಾದಗಳು. ಇದು ತಮಾಷೆಯಾಗಿತ್ತು. ನಮಗೆ ಈ ದೃಶ್ಯ ನೋಡಿ ಕಣ್ಣೀರು ಬಂದಿತ್ತು ಎಂದು ಬರೆದು ಪೋಸ್ಟ್ ಮಾಡಿದ್ದರು.

  • ವಿಮಾನ ತಳ್ಳುತ್ತಿರುವ ಜನರು- ವೀಡಿಯೋ ವೈರಲ್

    ವಿಮಾನ ತಳ್ಳುತ್ತಿರುವ ಜನರು- ವೀಡಿಯೋ ವೈರಲ್

    ಕಠ್ಮಂಡು: ಸಾಮಾನ್ಯವಾಗಿ ರಸ್ತೆಯಲ್ಲಿ ವಾಹನಗಳನ್ನು ತಳ್ಳುವುದನ್ನು ನೋಡಿದ್ದೇವೆ. ಆದರೆ ವಿಚಿತ್ರ ಎನ್ನುವಂತೆ ವಿಮಾನವೊಂದನ್ನು ಅದೇ ರೀತಿ ತಳ್ಳುತ್ತಿರುವ ವೀಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

    ಈ ಘಟನೆ ನೇಪಾಳದ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಈ ವೀಡಿಯೋವನ್ನು ಅಧಿಕ ಜನರು ವೀಕ್ಷಿಸಿದ್ದು, ಹೆಚ್ಚು ಲೈಕ್ ಮತ್ತು ಕಾಮೆಂಟ್‌ನ್ನು ಪಡೆದುಕೊಂಡಿದೆ.

    ವೀಡಿಯೋದಲ್ಲಿ ಏನಿದೆ?: ವಿಮಾನದ ರನ್‌ವೇ ಟೈರ್ ಸಿಡಿದಿದ್ದರಿಂದ, ಅದು ರನ್‌ವೇದಲ್ಲೇ ನಿಂತುಕೊಂಡಿತ್ತು. ಇದರಿಂದ ಇತರೇ ವಿಮಾನಗಳಿಗೆ ತೊಂದರೆ ಆಗಬಾರದು ಎಂದು ಅಲ್ಲಿದ್ದ ಭದ್ರತಾ ಸಿಬ್ಬಂದಿ ಹಾಗೂ ಪ್ರಯಾಣಿಕರು ತಳ್ಳಲು ಪ್ರಾರಂಭಿಸಿದ್ದಾರೆ. ಇದನ್ನು ಅಲ್ಲಿರುವ ಪ್ರಯಾಣಿಕರೆಲ್ಲರೂ ಸೇರಿ ವಿಮಾನವನ್ನು ತಳ್ಳುವುದನ್ನು ಅಲ್ಲಿದ್ದ ಪ್ರಯಾಣಿಕರೊಬ್ಬರು ಚಿತ್ರಿಕರಿಸಿಕೊಂಡಿದ್ದಾರೆ. ಇದನ್ನೂ ಓದಿ:  ವರದಕ್ಷಿಣೆ ಕಿರುಕುಳ – ಮಗನನ್ನು ಹತ್ಯೆಗೈದು ತಾಯಿ ಆತ್ಮಹತ್ಯೆ

    ಕೆಟ್ಟು ನಿಂತ ವಿಮಾನವನ್ನು ಬೇರೆ ಕಡೆಗೆ ಎಳೆಯಲು ಯಾವುದೇ ಸೌಲಭ್ಯವಿಲ್ಲದ ಕಾರಣ ಪ್ರಯಾಣಿಕರ ಸಹಾಯ ಪಡೆದು ವಿಮಾನವನ್ನು ತಳ್ಳಲಾಗಿದೆ ಎಂದು ಅಲ್ಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.