Tag: ವೀಡಿಯೋ ವೈರಲ್

  • ಕಸ ಹಾಕೋ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ – ವೀಡಿಯೋ ವೈರಲ್

    ಕಸ ಹಾಕೋ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ – ವೀಡಿಯೋ ವೈರಲ್

    ಬೆಂಗಳೂರು: ಕಸ ಹಾಕುವ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಚನ್ನನಾಯಕನ ಪಾಳ್ಯದಲ್ಲಿ ನಡೆದಿದೆ.

    ನಿವೃತ್ತ ಎಎಸ್‍ಐ ಜವರೇಗೌಡ, ಮಕ್ಕಳಾದ ಆನಂದ್ ಪಾಪು, ಮಗಳು ಕೋಮಲ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ. ಅನಿತಾ ಹಾಗೂ ಕುಟುಂಬಸ್ಥರ ಮೇಲೆ ಜವರೇಗೌಡ ಫ್ಯಾಮಿಲಿಯಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಆಮ್ ಆದ್ಮಿ, ಕಾಂಗ್ರೆಸ್ ಪಕ್ಷದ Xerox Copy: ಮೋದಿ ವ್ಯಂಗ್ಯ

    ಚನ್ನನಾಯಕನ ಹಳ್ಳಿಯಲ್ಲಿ ಅನಿತಾ ಅವರು ಗಾರ್ಮೆಂಟ್ಸ್ ಹೊಂದಿದ್ದು, ಕಳೆದ ಮೂರುವರೆ ವರ್ಷದ ಹಿಂದೆ ಗಾರ್ಮೆಂಟ್ಸ್ ಆರಂಭವಾಗಿತ್ತು. ರೆಸಿಡೆನ್ಷಿಯಲ್ ಏರಿಯಾದಲ್ಲಿ ಗಾರ್ಮೆಂಟ್ಸ್ ಹೊಂದಿದ್ದರಿಂದ ಜವರೇಗೌಡ ಪ್ರಶ್ನಿಸಿದ್ದರು. ಹಾಗಾಗಿ ಇತ್ತೀಚೆಗೆ ಗಾರ್ಮೆಂಟ್ಸ್ ಶಿಫ್ಟ್ ಮಾಡಲು ಅನಿತಾ ಅವರು ಸಿದ್ಧತೆ ನಡೆಸುತ್ತಿದ್ದರಂತೆ. ಅಲ್ಲದೇ ಎಎಸ್‍ಐ ಮನೆ ಹಿಂದೆ ಖಾಲಿ ಜಾಗ ಕೂಡ ಇದ್ದು, ಆ ಖಾಲಿ ಜಾಗದಲ್ಲಿ ಸ್ಥಳೀಯರು ಕಸ ತಂದು ಹಾಕುತ್ತಿದ್ದರು. ಗಾರ್ಮೆಂಟ್ಸ್ ಆರಂಭವಾದ ಮೇಲೆ ಆ ಖಾಲಿ ಜಾಗಕ್ಕೆ ಜನ ಬಂದು ಕಸ ಹಾಕುತ್ತಿದ್ದಾರೆಂದು ಕೋಪಗೊಂಡು ಎಎಸ್‍ಐ ಕುಟುಂಬ ಮತ್ತು ಅನಿತಾ ಕುಟುಂಬದ ನಡುವೆ ಆಗಾಗ ಜಗಳವಾಗುತ್ತಿತ್ತು.

    ಕಳೆದ ಗುರವಾರ ಅನಿತಾ ಕುಟುಂಬ ಮಂತ್ರಾಲಯಕ್ಕೆ ತೆರಳಿದ್ದ ವೇಳೆ ಶುಕ್ರವಾರ ಬೆಳಗ್ಗೆ ಲಕ್ಷ್ಮಮ್ಮ ನಿಂಬೆಹಣ್ಣು ಹಾಕಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನು ಕಂಡು ವಾಮಾಚಾರ ಮಾಡಿದ್ದಾರೆಂದು ಆರೋಪಿಸಿ ಅನಿತಾ ಕುಟುಂಬ ಪ್ರಶ್ನಿಸಿದೆ. ಈ ಕಾರಣ ಎರಡು ಕುಟುಂಬಸ್ಥರ ಮಧ್ಯೆ ಮಾರಾಮಾರಿಯಾಗಿದೆ. ಅನಿತಾ ಕುಟುಂಬಸ್ಥರ ಮೇಲೆ ಜವರೇಗೌಡ ಕುಟುಂಬ ಹಲ್ಲೆ ಮಾಡಿದ್ದಾರೆ ಎಂದು ಸಿಸಿಟಿವಿ ದೃಶ್ಯ ಸಮೇತ ದೂರು ನೀಡಿದ್ದಾರೆ. ಸದ್ಯ ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ವಿಭಜಕ ಮನಸ್ಥಿತಿಯ ಜನರನ್ನು ಪಂಜಾಬ್‍ನಲ್ಲಿ ಆಳಲು ಬಿಡಬೇಡಿ: ಮೋದಿ

  • ಯಾವುದೇ ಒತ್ತಡವಿಲ್ಲ, ಸ್ವ-ಇಚ್ಛೆಯಿಂದ ಆತ್ಮಹತ್ಯೆ- ಸೆಲ್ಫಿ ವೀಡಿಯೋ ಮಾಡಿ ಯುವಕ ಬಾವಿಗೆ ಹಾರಿದ!

    ಯಾವುದೇ ಒತ್ತಡವಿಲ್ಲ, ಸ್ವ-ಇಚ್ಛೆಯಿಂದ ಆತ್ಮಹತ್ಯೆ- ಸೆಲ್ಫಿ ವೀಡಿಯೋ ಮಾಡಿ ಯುವಕ ಬಾವಿಗೆ ಹಾರಿದ!

    ಬೀದರ್: ಮೊಬೈಲ್‍ನಲ್ಲಿ ವೀಡಿಯೋ ಮಾಡಿಟ್ಟುಕೊಂಡು ಯುವಕನೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ನೌಬಾದ್ ಬಳಿ ನಡೆದಿದೆ.

    ನಗರದ ಅಬ್ದುಲ್ ಫೈಜಾ ದರ್ಗಾ ನಿವಾಸಿಯಾಗಿರುವ ಸೈಯದ್ ಅಮೀರ್ (20) ಆತ್ಮಹತ್ಯೆ ಮಾಡಿಕೊಂಡ ಯುವಕ. ಸೈಯದ್ ವೀಡಿಯೋ ಮಾಡಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ನಿಖರವಾದ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಯಾವುದೇ ಒತ್ತಡ ಇಲ್ಲ, ನಾನು ನನ್ನ ಇಚ್ಛೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಅಂತ ಯುವಕನು ವೀಡಿಯೋದಲ್ಲಿ ಹೇಳಿದ್ದಾನೆ. ಇದನ್ನೂ ಓದಿ:  ಫಿಟ್ನೆಸ್‍ಗಾಗಿ ತಂದೆ ಜೊತೆ ಸೈಕ್ಲಿಂಗ್ – ಬಾಲಕನಿಗೆ ಡಿಕ್ಕಿ ಹೊಡೆದ ಟ್ರಕ್

    ಎನ್‍ಜಿಓ ಸದಸ್ಯರು ಹಾಗೂ ಸ್ಥಳೀಯರ ಹಗ್ಗದ ಸಹಾಯದಿಂದ ಬಾವಿಯಿಂದ ಮೃತದೇಹವನ್ನು ಮೇಲೆ ತೆಗೆಯುತ್ತಿರುವ ದೃಶ್ಯವು ನೋಡಲು ಭಯಾನಕವಾಗಿದೆ. ಸದ್ಯ ವೀಡಿಯೋವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ:  ಮಹಾಭಾರತ ಸೀರಿಯಲ್‍ನ ಭೀಮ್ ಪಾತ್ರಧಾರಿ ಪ್ರವೀಣ್ ಕುಮಾರ್ ಸೋಬ್ತಿ ಇನ್ನಿಲ್ಲ

  • ಮೆಣಸಿನಕಾಯಿ ಬಜ್ಜಿಯಂತೆ ಹಲ್ಲಿಯನ್ನು ಸಲೀಸಾಗಿ ತಿಂದ ಭೂಪ

    ಮೆಣಸಿನಕಾಯಿ ಬಜ್ಜಿಯಂತೆ ಹಲ್ಲಿಯನ್ನು ಸಲೀಸಾಗಿ ತಿಂದ ಭೂಪ

    ಚಿತ್ರದುರ್ಗ: ವ್ಯಕ್ತಿಯೊಬ್ಬ ಮೆಣಸಿನಕಾಯಿ ಬಜ್ಜಿಯಂತೆ ಹಲ್ಲಿಯನ್ನು ಸಲೀಸಾಗಿ ಅಗೆದು ತಿಂದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಜಿಲ್ಲೆಯ ಹೊಸದುರ್ಗ ತಾಲೂಕು ದೊಡ್ಡ ಬ್ಯಾಲದಕೆರೆ ನಿವಾಸಿ ಉಮೇಶ್ ಹಲ್ಲಿ ತಿಂದು ಸುದ್ದಿಯಾಗಿದ್ದಾರೆ. ಅವರು ಸಾರ್ವಜನಿಕರ ಮುಂದೆ ಹಲ್ಲಿಯನ್ನು ಸಲೀಸಾಗಿ ತಿಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಬರೀ ಎರಡೇ ಅಲ್ಲ, ಮೂರು ಗುಂಪುಗಳಿವೆ: ಕಾರಜೋಳ

    ಮದ್ಯ ಸೇವಿಸಿ, ನಶೆಯಲ್ಲಿ ಹಲ್ಲಿ ಸೇವಿಸಿರಬಹುದು ಅಂತ ಶಂಕೆ ವ್ಯಕ್ತವಾಗಿದೆ. ಹಲ್ಲಿ ತಿಂದರೆ ಅಸ್ವಸ್ಥರಾಗುತ್ತಾರೆ. ಹೆಚ್ಚು ಕಡಿಮೆಯಾದರೆ ಪ್ರಾಣಕ್ಕೆ ಸಮಸ್ಯೆಯಾಗಬಹುದು ಎಂಬ ಮಾತುಗಳ ಮಧ್ಯೆ ಉಮೇಶ್ ಹಲ್ಲಿ ತಿಂದು ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ: ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್ ರಾವ್ ಇನ್ನಿಲ್ಲ

  • ನಟಿಗೆ ಪ್ರಪೋಸ್ ಮಾಡಿದ ಡಾಲಿ ಧನಂಜಯ್!

    ನಟಿಗೆ ಪ್ರಪೋಸ್ ಮಾಡಿದ ಡಾಲಿ ಧನಂಜಯ್!

    ಬೆಂಗಳೂರು: ಬಡವ ರಾಸ್ಕಲ್ ಗೆಲುವಿನ ಸಂಭ್ರಮದಲ್ಲಿರುವ ಡಾಲಿ ಧನಂಜಯ್ ಇದೀಗ ರೋಸ್ ಹಿಡಿದು ನಟಿಗೆ ಪ್ರಪೋಸ್ ಮಾಡಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಲವ್ ಬಗ್ಗೆ ತಲೆ ಕೆಡಸಿಕೊಳ್ಳದೇ, ಮದುವೆ ಬಗ್ಗೆ ಎಲ್ಲೂ ಬಾಯಿ ಬಿಡದ ಡಾಲಿ ಇದೀಗ ನಟಿ ಅಮೃತ ಅಯ್ಯಂಗಾರ್‌ಗೆ ಪ್ರಪೋಸ್ ಮಾಡಿದ್ದಾರೆ. ಈ ವೀಡಿಯೋ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಡಾಲಿ ಧನಂಜಯ್ ಅವರು ಅಮೃತಾ ಎದುರು ರೋಸ್ ಹಿಡಿದು ಕುಳಿತಿದ್ದಾರೆ. ಮಂಡಿಯೂರಿ ಬೇಡುವೆನು, ಹೃದಯ ಕಾಲಡಿ ಇಡುವೇನು ತೆಗೆದು ಬಚ್ಚಿಟ್ಟುಕೋ ಇಲ್ಲ ತುಳಿದು ಕಾಲ್ ತೋಳೆದುಕೋ. ಬೇಡ ಈ ಮೌನ, ನೀ ಮಾಡು ತೀರ್ಮಾನ ಎಂದು ಡಾಲಿ ಅಮೃತಾ ಎದುರು ಲವ್ ಪ್ರಪೋಸ್ ಇಟ್ಟಿದ್ದಾರೆ. ನಟಿ ಮಾತ್ರ ಮುಗುಳು ನಕ್ಕು ಸುಮ್ಮನಾಗಿದ್ದಾರೆ. ಇದನ್ನೂ ಓದಿ:  ಸೂಪರ್ ಹಾಟ್ ದೀಪಿಕಾ ಪಡುಕೋಣೆ ತೊಟ್ಟ ಡ್ರೆಸ್ ಬೆಲೆ ಎಷ್ಟು ಗೊತ್ತಾ?

    ಖಾಸಗಿ ವಾಹಿನಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿ ಕೊಡುವ ಕಾರ್ಯಕ್ರಮದಲ್ಲಿ ಈ ಜೋಡಿಗೆ ಟಾಸ್ಕ್ ನೀಡಲಾಗಿತ್ತು. ಅಮೃತಾ ಅವರಿಗೆ ಡಾಲಿ ಧನಂಜಯ್ ರೋಸ್ ಕೊಟ್ಟು ಡೈಲಾಗ್ ಹೇಳಿ ಪ್ರಪೋಸ್ ಮಾಡಬೇಕಿತ್ತು. ಜೊತೆಗೆ ರೊಮ್ಯಾಂಟಿಕ್ ಆಗಿ ಡ್ಯಾನ್ಸ್ ಕೂಡಾ ಮಾಡಿದ್ದಾರೆ. ಇದನ್ನೂ ಓದಿ: ಅದ್ದೂರಿಯಾಗಿ ನಡೆಯುತ್ತಿದೆ ಮೌನಿ ರಾಯ್ ಅರಿಶಿನ ಶಾಸ್ತ್ರ

  • ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದ್ರೆ ಯಾರನ್ನೂ ಬಿಡಲ್ಲ: ಆದಿಲ್ ಚೌಧರಿ ವೀಡಿಯೋ ವೈರಲ್

    ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದ್ರೆ ಯಾರನ್ನೂ ಬಿಡಲ್ಲ: ಆದಿಲ್ ಚೌಧರಿ ವೀಡಿಯೋ ವೈರಲ್

    ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ, ಒಬ್ಬ ವ್ಯಕ್ತಿಯನ್ನೂ ಬಿಡುವುದಿಲ್ಲ ಎಂದು ಸಮಾಜವಾದಿ ಪಕ್ಷದ ಅಭ್ಯರ್ಥಿ ಆದಿಲ್ ಚೌಧರಿ ಹೇಳಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ವೈರಲ್ ಆದ ವೀಡಿಯೋದಲ್ಲಿ ಏನಿದೆ?
    ವೀಡಿಯೋದಲ್ಲಿ ಹೆಸರಿಲ್ಲದ ವ್ಯಕ್ತಿಯನ್ನು ಉಲ್ಲೇಖಿಸಿ ಆದಿಲ್ ಚೌಧರಿ, ಚಿಂತಿಸಬೇಡಿ, ದೇವರ ಇಚ್ಛೆಯಂತೆ ನಾವು ಉತ್ತರ ಪ್ರದೇಶದಲ್ಲಿ ಸಮಾಜವಾದಿ ಸರ್ಕಾರವನ್ನು ರಚಿಸಲಿದ್ದೇವೆ. ಒಂದು ವೇಳೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಒಬ್ಬ ವ್ಯಕ್ತಿಯನ್ನು ಉಳಿಸಲಾಗುವುದಿಲ್ಲ. ಅವರು ನಮ್ಮ ವಿರುದ್ಧ ಅಪರಾಧ ಎಸಗುತ್ತಿರುವ ರೀತಿಯಲ್ಲಿ, ನಾವು ಸೇಡು ತೀರಿಸಿಕೊಳ್ಳುತ್ತೇವೆ. ಅವರು ಏನನ್ನಾದರೂ ಮಾಡುವ ಮೊದಲು 100 ಬಾರಿ ಯೋಚಿಸಬೇಕು ಹಾಗೆಯೇ ಮಾಡುತ್ತೇವೆ ಎಂದು ಹೇಳಿದ್ದಾರೆ.  ಇದನ್ನೂ ಓದಿ: ಪ್ರೀತಿ ಇದ್ದಲ್ಲಿಗೆ ಹೋಗುತ್ತೇನೆ: ರಮೇಶ್ ಜಾರಕಿಹೊಳಿ

    ವೀಡಿಯೋಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಅಮಿತ್ ಮಾಳವಿಯಾ, ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಎಸ್‍ಪಿ ಅಭ್ಯರ್ಥಿ ಹಿಂದೂಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಎಂದು ಆರೋಪಿಸಿದ್ದಾರೆ. ಆದರೆ ಚೌಧರಿ ವೀಡಿಯೊದಲ್ಲಿ ಯಾವುದೇ ಸಮುದಾಯದ ಬಗ್ಗೆ ಮಾತನಾಡಿರುವುದು ಕಂಡುಬಂದಿಲ್ಲ. ಮೀರತ್ ದಕ್ಷಿಣದ ಎಸ್‍ಪಿ ಅಭ್ಯರ್ಥಿ ಚೌಧರಿಯವರು ನಾವು ಸರ್ಕಾರ ರಚಿಸಿದರೆ ಅವರನ್ನು ಬಿಡುವುದಿಲ್ಲ. ಒಬ್ಬೊಬ್ಬರಾಗಿ ಸೇಡು ತೀರಿಸಿಕೊಳ್ಳುತ್ತೇವೆ ಅಂತ ಹಿಂದೂಗಳಿಗೆ ಬೆದರಿಕೆ ಹಾಕಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

    ನಾಹಿದ್ ಹಸನ್ ಮತ್ತು ಆದಿಲ್ ಚೌಧರಿ ಅವರಂತಹ ಹಿಂದೂ ವಿರೋಧಿ ಗೂಂಡಾಗಳು. ಚುನಾವಣಾ ಅಭ್ಯರ್ಥಿಗಳನ್ನು ಮಾತ್ರ ನಾಮನಿರ್ದೇಶನ ಮಾಡಿದ್ದಾರೆ. ಅವರು ವೀಡಿಯೊದಲ್ಲಿ ಮಾಡಿದ ಕಾಮೆಂಟ್‍ಗಳನ್ನು ಸ್ಪಷ್ಟಪಡಿಸಲು ಕೇಳಿದಾಗ ಚೌಧರಿಯವರು ನೇರ ಉತ್ತರವನ್ನು ನೀಡಲಿಲ್ಲ. ಬಿಜೆಪಿ ವೀಡಿಯೊವನ್ನು ಎಡಿಟ್ ಮಾಡಿದೆ ಅಂತ ಆರೋಪಿಸಿದ್ದಾರೆ. ಕೇಸರಿ ಪಕ್ಷವು ಅಗತ್ಯವಿರುವ ಯಾವುದೇ ವಿಧಾನಗಳನ್ನು ಬಳಸಲು ಸಮರ್ಥವಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಗಂಡನ ಕಿರುಕುಳ ತಾಳಲಾರದೇ ಗರ್ಭಿಣಿ ಆತ್ಮಹತ್ಯೆ

    ಈ ಕುರಿತು ಮೀರತ್ ಸಿಟಿ ಎಸ್‍ಪಿ ವಿನೀತ್ ಭಟ್ನಾಗರ್ ಅವರು ಎಸ್ಪಿ ಅಭ್ಯರ್ಥಿ ಬೆದರಿಕೆ ಹಾಕುತ್ತಿರುವ ವೀಡಿಯೋದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ. ವಿಡಿಯೋವನ್ನು ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ. ಅದರಲ್ಲಿ ಚುನಾವಣಾ ಆಯೋಗದ ನೈತಿಕ ನೀತಿ ಸಂಹಿತೆ ಉಲ್ಲಂಘನೆಯಾಗುವಂತಹ ಹೇಳಿಕೆಗಳಿದ್ದರೆ, ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

  • ಕೊರೊನಾ ಶೇಪ್ ರೈಸ್ ವಡೆ ವೀಡಿಯೋ ವೈರಲ್

    ಕೊರೊನಾ ಶೇಪ್ ರೈಸ್ ವಡೆ ವೀಡಿಯೋ ವೈರಲ್

    ಕೊರೊನಾ ವೈರಸ್‍ನಿಂದ ದೇಶ ತತ್ತರಿಸಿ ಹೋಗಿದೆ. ಆದರೆ ಕೆಲವು ಟ್ಯಾಲೆಂಟೆಡ್ ಮಂದಿ ಕೊರೊನಾ ವೈರಸ್‍ನಲ್ಲಿಯೂ ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸುತ್ತಿದ್ದಾರೆ. ಇದೀಗ ಮಹಿಳೆಯೊಬ್ಬರು ಕೊರೊನಾ ಶೇಪ್ ರೈಸ್ ವಡೆ ತಯಾರಿಸುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    corona rice vada

    2020ರಲ್ಲಿ ಕೋಲ್ಕತ್ತಾದ ಸಿಹಿತಿಂಡಿ ಅಂಗಡಿಯೊಂದರಲ್ಲಿ ಕೊರೊನಾ ಶೇಪ್‍ನಲ್ಲಿ ಖಾದ್ಯವೊಂದನ್ನು ತಯಾರಿಸಿದ್ದು, ನೆಟ್ಟಿಗರು ಅದನ್ನು ನೋಡಿ ಅಚ್ಚರಿಗೊಂಡಿದ್ದರು. ಇದೀಗ ಅದೇ ರೀತಿ ಮಹಿಳೆಯೊಬ್ಬರು ಕೊರೊನಾ ಶೇಪ್ ರೈಸ್ ವಡೆ ಮಾಡಿ ಭಾರೀ ಸದ್ದು ಮಾಡುತ್ತಿದ್ದಾರೆ. ಇದನ್ನೂ ಓದಿ: ಕೆಲವರಿಗೆ ದೇಶ ಭಕ್ತಿ ಅರ್ಥವಾಗುವುದಿಲ್ಲ: ರಾಹುಲ್ ಗಾಂಧಿ

    ಮಿಂಟಿ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಕೊರೊನಾ ರೈಸ್ ಮತ್ತು ಆಲೂಗಡ್ಡೆಯೊಂದಿಗೆ ಕೊರೊನಾ ಶೇಪ್‍ನಲ್ಲಿ ವಡೆ ಮಾಡುತ್ತಿರುವ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಮೊದಲಿಗೆ ಹಿಟ್ಟನ್ನು ತಯಾರಿಸಿಕೊಂಡು ನಂತರ ಆಲೂಗಡ್ಡೆ, ಈರುಳ್ಳಿ ಮತ್ತು ಟೊಮೆಟೊಗಳೊಂದಿಗೆ ಸ್ಟಫಿಂಗ್ ಮಾಡುತ್ತಾರೆ. ನಂತರ ಆಲೂಗಡ್ಡೆಯನ್ನು ಉಂಡೆ ಕಟ್ಟಿ, ರೈಸ್ ತುಂಬಿದ ಬಟ್ಟಲಿನಲ್ಲಿ ಲೇಪಿಸಿ ಹಬೆಯ ಪಾತ್ರೆಯಲ್ಲಿಟ್ಟು ಬೇಯಿಸುತ್ತಾರೆ. ನಂತರ ಗರಿಗರಿಯಾದ ವಡೆ ತಯಾರಾಗಿರುವುದನ್ನು ಕಾಣಬಹುದಾಗಿದೆ.

    ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಲೈಕ್ಸ್ ಹಾಗೂ ಕಾಮೆಂಟ್‍ಗಳ ಸುರಿಮಳೆಯೇ ಹರಿದು ಬರುತ್ತಿದೆ. ಇದನ್ನೂ ಓದಿ:  ರಾಷ್ಟ್ರಪಿತನ ಬಗ್ಗೆ ಅವಹೇಳನಕಾರಿ ಹೇಳಿಕೆ – ಕಾಳಿಚರಣ್ ಮಹಾರಾಜ್ ಬಂಧನ

  • ಯುವಕನನ್ನು ಬಟ್ಟೆ ಬಿಚ್ಚಿ ಥಳಿಸಿದ ಹಲವರ ವಿರುದ್ಧ ಕೇಸ್!

    ಯುವಕನನ್ನು ಬಟ್ಟೆ ಬಿಚ್ಚಿ ಥಳಿಸಿದ ಹಲವರ ವಿರುದ್ಧ ಕೇಸ್!

    ಹಾಸನ: ಯುವತಿಯನ್ನು ಚುಡಾಯಿಸಿದ್ದಾನೆ ಎಂದು ಆರೋಪಿಸಿ ಯುವಕನೊಬ್ಬನನ್ನು ನಿನ್ನೆ ಬಟ್ಟೆಬಿಚ್ಚಿ ಥಳಿಸಿದ್ದ ಪ್ರಕರಣ ಹಾಸನದ ಹೇಮಾವತಿ ಪ್ರತಿಮೆ ಬಳಿ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರ ವಿರುದ್ಧ ಕೇಸ್ ದಾಖಲಾಗಿದೆ.

    ಪಾರ್ಕ್‍ನಲ್ಲಿ ಕುಳಿತಿದ್ದ ಕಾಲೇಜು ಯುವತಿಯನ್ನು ಯುವಕನೊಬ್ಬ ಕೈಹಿಡಿದು ಎಳೆದಿದ್ದಾನೆ ಎಂದು ಆರೋಪಿಸಲಾಗಿತ್ತು. ಇದನ್ನು ಪ್ರಶ್ನೆ ಮಾಡಿದ ಸಾರ್ವಜನಿಕರ ಜೊತೆಯೂ ಯುವಕ ಗಲಾಟೆ ಮಾಡಿದ್ದಾನೆ ಎಂದು ಆರೋಪಿಸಿ ಹಿಗ್ಗಾಮುಗ್ಗ ಥಳಿಸಿ, ಯುವಕನ ಬೆತ್ತಲೆ ಮೆರವಣಿಗೆ ಮಾಡಲಾಗಿತ್ತು. ಈ ವೇಳೆ ಯುವಕ ತಾನು ತಪ್ಪು ಮಾಡಿಲ್ಲ ಎಂದು ಬೇಡಿಕೊಂಡಿದ್ದ.

    ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ತಾವೇ ಕಾನೂನು ಕೈಗೆತ್ತಿಕೊಂಡ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಯುವಕ, ಯುವತಿಯನ್ನು ಚುಡಾಯಿಸಿದ್ದರೆ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಬೇಕಿತ್ತು. ಅದನ್ನು ಬಿಟ್ಟು ಈ ರೀತಿ ಬೆತ್ತಲೆ ಮಾಡಿ ಮೆರವಣಿಗೆ ಮಾಡುವುದು ಅಮಾನವೀಯ ಎಂಬ ಮಾತು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಹಾಸನ ಪೆÇಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ದರೋಡೆ ಸಮಯ ಕಿಚಡಿ ಮಾಡಿ ಸಿಕ್ಕಿಬಿದ್ದ ಕಳ್ಳ

  • ಶಾಸಕ ಶರಣು ಸಲಗಾರ ಭರ್ಜರಿ ಡ್ಯಾನ್ಸ್- ವೀಡಿಯೋ ವೈರಲ್

    ಶಾಸಕ ಶರಣು ಸಲಗಾರ ಭರ್ಜರಿ ಡ್ಯಾನ್ಸ್- ವೀಡಿಯೋ ವೈರಲ್

    ಬೀದರ್: ಡ್ಯಾನ್ಸ್ ಕ್ಲಾಸ್ ಉದ್ಘಾಟನೆ ವೇಳೆ ನೃತ್ಯಗಾರರ ಜೊತೆ ಸೇರಿ ಬಸವಕಲ್ಯಾಣ ಶಾಸಕ ಶರಣು ಸಲಗಾರ ಭರ್ಜರಿ ಟಪ್ಪಾಂಗುಚ್ಚಿ ಡ್ಯಾನ್ಸ್ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

    ಶುಕ್ರವಾರದಂದು ನಗರದ ಬಸವಕಲ್ಯಾಣ ಪಟ್ಟಣದಲ್ಲಿ ನೂತನವಾಗಿ ಉದ್ಘಾಟನೆಯಾದ ಡ್ಯಾನ್ಸ್ ಕ್ರೇಜಿ ಅಕಾಡೆಮಿ ಉದ್ಘಾಟನೆಯಲ್ಲಿ ಡಾನ್ಸ್ ಮಾಡಿದ ಅವರು ಎಲ್ಲರ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ಕೊರೊನಾ ತನಗೆ ಬರಬಾರದೆಂದು ಸೋಂಕಿತ ಮಗನನ್ನೇ ಕಾರ್‌ನ ಟ್ರಂಕ್‌ನಲ್ಲಿ ಬಂಧಿಸಿದ್ದ ತಾಯಿ ಅರೆಸ್ಟ್

    ಒಂದು ಕಾಲದಲ್ಲಿ ಜೆಡಿಎಸ್ ಭದ್ರಕೋಟೆಯಾದ ಬಸವಕಲ್ಯಾಣದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನ ನಾರಾಯಣ ರಾವ್ ಗೆಲುವು ಸಾಧಿಸಿದ್ದರು. ಕ್ಷೇತ್ರದಲ್ಲಿ ಉತ್ತಮ ಹೆಸರನ್ನು ಗಳಿಸಿದ್ದ ನಾರಾಯಣ ರಾವ್ ಕೋವಿಡ್ ಸೋಂಕಿಗೆ ತುತ್ತಾಗಿ ಮೃತಪಟ್ಟರು. ಈ ಹಿನ್ನಲೆಯಲ್ಲಿ ನಡೆದ ಉಪಚುನಾವಣೆಯಲ್ಲಿ ಅವರ ಪತ್ನಿ ಮಾಲಾ ಅವರ ವಿರುದ್ಧ ಬಿಜೆಪಿ ಪರ ನಿಂತು ಭರ್ಜರಿ ಗೆಲುವು ಸಾಧಿಸಿದ್ದರು. ಇದನ್ನೂ ಓದಿ: ಕರ್ಫ್ಯೂ ವೇಳೆ ಕ್ರಿಕೆಟ್ ಆಡಬಹುದೇ – ಯುವಕನ ಪ್ರಶ್ನೆಗೆ ಪೊಲೀಸರ ‘ಸಿಲ್ಲಿ ಪಾಯಿಂಟ್’ ಉತ್ತರ

  • ಕೋಕಾ ಕೋಲಾದೊಂದಿಗೆ ಮ್ಯಾಗಿ ತಯಾರಿ – ವೀಡಿಯೋ ವೈರಲ್

    ಕೋಕಾ ಕೋಲಾದೊಂದಿಗೆ ಮ್ಯಾಗಿ ತಯಾರಿ – ವೀಡಿಯೋ ವೈರಲ್

    ಲಕ್ನೋ: ಗಾಜಿಯಾಬಾದ್ ಬೀದಿ ಬದಿ ವ್ಯಾಪಾರಿಯೊಬ್ಬ ಕೋಕಾ ಕೋಲಾದೊಂದಿಗೆ ಮ್ಯಾಗಿ ತಯಾರಿಸಿಸುತ್ತಿದ್ದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

     

    View this post on Instagram

     

    A post shared by Hanshul Anand (@bhukkad_dilli_ke)

    ಕೆಲವು ಜನರು ಮ್ಯಾಗಿಯನ್ನು ಸಾಕಷ್ಟು ತರಕಾರಿಗಳೊಂದಿಗೆ ಇಷ್ಟಪಟ್ಟರೆ, ಇತರರು ಇದರ ಸೂಪ್ ಅನ್ನು ಇಷ್ಟಪಡುತ್ತಾರೆ. ಆದಾಗ್ಯೂ ಕಳೆದ ಕೆಲವು ತಿಂಗಳುಗಳಲ್ಲಿ ನಾವು ಸಾಮಾಜಿಕ ಜಾಲತಾಣದಲ್ಲಿ ತಿಂಡಿಯ ಬಗ್ಗೆ ಸಾಕಷ್ಟು ವಿವಿಧ ಪ್ರಯೋಗಗಳನ್ನು ನೋಡಿದ್ದೇವೆ. ಫ್ಯಾಂಟಾ ಮ್ಯಾಗಿಯಿಂದ ಮ್ಯಾಗಿ ಮಿಲ್ಕ್‌ ಶೇಕ್‌ನವರೆಗೂ ಕೆಲವು ಸೂಪರ್ ಪ್ರಯೋಗಗಳು ನಡೆದಿವೆ. ಇದನ್ನೂ ಓದಿ: ಮೀನುಗಾರರ 2 ಗುಂಪುಗಳ ನಡುವೆ ಕಿತ್ತಾಟ- 7 ಮಂದಿಗೆ ಗಾಯ

    ಇದೀಗ ವೈರಲ್ ಆಗಿರುವ ವೀಡಿಯೋದಲ್ಲಿ ಬೀದಿ ಬದಿ ವ್ಯಾಪಾರಿ ಪ್ಯಾನ್‍ಗೆ ಸ್ವಲ್ಪ ಎಣ್ಣೆ ಮತ್ತು ತರಕಾರಿಗಳನ್ನು ಸೇರಿಸಿದ್ದಾನೆ. ಮುಂದೆ, ಅವನು ಸ್ವಲ್ಪ ಉಪ್ಪು ಮತ್ತು ಅದಕ್ಕೆ ಬೇಕಾದ ಕೆಲವು ಮಸಾಲೆಗಳನ್ನು ಸೇರಿಸಿದ್ದು, ಈ ಮಿಶ್ರಣಕ್ಕೆ ಕೋಕಾ-ಕೋಲಾದ ಸಣ್ಣ ಬಾಟಲಿಯನ್ನು ಹಾಕಿದ್ದಾನೆ. ನಂತರ ಅವನು ನೂಡಲ್ಸ್ ಮತ್ತು ಮ್ಯಾಗಿ ಮಸಾಲವನ್ನು ಸೇರಿಸಿದ್ದು, ಈ ಮಿಶ್ರಣವನ್ನು ಮತ್ತಷ್ಟು ಬೇಯಿಸಲು ಪ್ಯಾನ್ ಅನ್ನು ಮುಚ್ಚಿದ್ದಾನೆ. ಇದನ್ನೂ ಓದಿ:  ಹೆರಿಗೆಗಾಗಿ ಗರ್ಭಿಣಿಯನ್ನು ಮಂಚದ ಮೇಲೆ ಮಲಗಿಸಿ ಹೊತ್ತೊಯ್ದ ಗ್ರಾಮಸ್ಥರು!

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋವು 2 ಲಕ್ಷಕ್ಕೂ ಅಧಿಕ ವಿಕ್ಷಣೆಗಳನ್ನು ಪಡೆದುಕೊಂಡಿದೆ. ವೀಡಿಯೋಗೆ ಕೋಕಾ-ಕೋಲಾದೊಂದಿಗೆ ಮ್ಯಾಗಿ ಗಾಜಿಯಾಬಾದ್‍ನ ಸಾಗರ್ ಪಿಜ್ಜಾ ಅಂಗಡಿಯಲ್ಲಿ ಲಭ್ಯವಿದೆ ಎಂದು ಬರೆದುಕೊಂಡಿದ್ದು, ಸಾಕಷ್ಟು ನೆಟ್ಟಿಗರು ಕಾಮೆಂಟ್ ಬಾಕ್ಸ್ ಮೂಲಕ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.

  • ಮಂಟಪಕ್ಕೆ ಬರುತ್ತಿದ್ದ ವರನನ್ನು ನೋಡಿ ಕುಣಿದು ಕುಪ್ಪಳಿಸಿದ ವಧು

    ಮಂಟಪಕ್ಕೆ ಬರುತ್ತಿದ್ದ ವರನನ್ನು ನೋಡಿ ಕುಣಿದು ಕುಪ್ಪಳಿಸಿದ ವಧು

    ನವದೆಹಲಿ: ಮದುವೆ ಮಂಟಪಕ್ಕೆ ವರ ಬರುವುದನ್ನು ನೋಡಿದ ವಧು ಫುಲ್ ಜೋಶ್ ನಲ್ಲಿ ಕುಣಿದು ಕುಪ್ಪಳಿಸಿದ್ದಾಳೆ.

    ಮದುವೆ ಎಂದರೆ ಎಲ್ಲ ವಧು-ವರರಿಗೂ ವಿಶೇಷದ ಸಂಗತಿಯಾಗಿರುತ್ತೆ. ಮದುವೆ ದಿನ ಹತ್ತಿರವಾಗುತ್ತಿದಂತೆ ವಧು-ವರರ ಸಂಭ್ರಮ ಮನೆ ಮಾಡಿರುತ್ತೆ. ಅದೇ ರೀತಿ ಸೋಶಿಯಲ್ ಮೀಡಿಯಾದಲ್ಲಿ ಮದುವೆ ಮನೆಗೆ ವರನ ದಿಬ್ಬಣ ಬರುತ್ತಿರುವುದನ್ನು ನೋಡಿ ವಧು ಸ್ಟೆಪ್ ಹಾಕಿರುವ ವೀಡಿಯೋ ಸೊಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಗಡಿಯೊಳಗೆ ನುಸುಳಿದ ಪಾಕ್ ಯೋಧನ ಹತ್ಯೆ – ಶವವನ್ನ ಹಿಂದಕ್ಕೆ ತೆಗೆದುಕೊಳ್ಳಿ ಎಂದ ಭಾರತೀಯ ಸೇನೆ

    ಇನ್‍ಸ್ಟಾಗ್ರಾಮ್ ನ ವಿಟ್ಟಿ_ವೆಡ್ಡಿಂಗ್ ಖಾತೆಯಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ನೆಟ್ಟಿಗರು ವೀಡಿಯೋವನ್ನು ಫುಲ್ ಎಂಜಯ್ ಮಾಡುತ್ತಿದ್ದಾರೆ. ವೀಡಿಯೋದಲ್ಲಿ ಕೆಂಪು ಲೆಹೆಂಗಾವನ್ನು ಧರಿಸಿರುವ ವಧು ಕಿಟಕಿಯ ಬಳಿ ನಿಂತಿಕೊಂಡು ತನ್ನ ಭಾವಿ ಪತಿಗಾಗಿ ಕಾಯುತ್ತಿರುತ್ತಾಳೆ. ನಂತರ ಮದುವೆ ಮನೆಗೆ ವರನ ದಿಬ್ಬಣ ಬರುತ್ತಿದ್ದಂತೆ ಆತನನ್ನು ನೋಡುತ್ತಾ ವಧು ನೃತ್ಯ ಮಾಡಲು ಪ್ರಾರಂಭಿಸುತ್ತಾಳೆ. ಅಂಥ ವರನು ಸಹ ಶೆರ್ವಾನಿ ಧರಿಸಿದ್ದು, ಕುದುರೆಯ ಮೇಲೆ ಕುಳಿತು ತನ್ನ ಭಾವಿ ಹೆಂಡತಿಯನ್ನು ಪ್ರೀತಿಯಿಂದ ನೋಡುತ್ತಾ ನೃತ್ಯ ಮಾಡುತ್ತಿರುತ್ತಾನೆ.

    ಈ ವೇಳೆ ಸೋನು ನಿಗಮ್ ಮತ್ತು ಅಲ್ಕಾ ಯಾಗ್ನಿಕ್ ಅವರು ಹಾಡಿದ ‘ಚಲ್ ಪ್ಯಾರ್ ಕರೇಗಿ’ ಸಾಂಗ್ ಪ್ಲೇ ಆಗುತ್ತಿದ್ದು, ನಂತರ ವಧು-ವರ ಒಬ್ಬರನೊಬ್ಬರು ನೋಡಿಕೊಂಡು ಕೊಟ್ಟ ರಿಯಾಕ್ಷನ್ ನೋಡಿ ನೆಟ್ಟಿಗರು ಫುಲ್ ಖುಷ್ ಆಗಿದ್ದಾರೆ. ಇದನ್ನೂ ಓದಿ: ಕೊರಗರ ಮೇಲಿನ ಪೊಲೀಸ್ ದೌರ್ಜನ್ಯವನ್ನು ಖಂಡಿಸುತ್ತೇನೆ: ಸುನಿಲ್ ಕುಮಾರ್

    ಈ ವೀಡಿಯೋ ನೋಡಿದ ನೆಟ್ಟಿಗರು ತಮ್ಮ ಮದುವೆಯ ದಿನಗಳನ್ನು ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಈ ವೀಡಿಯೋ ನೋಡಿದರೆ ಅವರಿಬ್ಬರು ಎಷ್ಟು ಪ್ರೀತಿಸುತ್ತಾರೆ ಎಂಬುದು ಅರ್ಥವಾಗುತ್ತೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.