Tag: ವೀಡಿಯೋ ವೈರಲ್

  • ಜಿಮ್‍ನಲ್ಲಿ ಒಟ್ಟಿಗೆ ವರ್ಕೌಟ್ ಮಾಡಿದ ಶಿಖರ್ ಧವನ್, ಪ್ರೀತಿ ಜಿಂಟಾ ವೀಡಿಯೋ ವೈರಲ್

    ಜಿಮ್‍ನಲ್ಲಿ ಒಟ್ಟಿಗೆ ವರ್ಕೌಟ್ ಮಾಡಿದ ಶಿಖರ್ ಧವನ್, ಪ್ರೀತಿ ಜಿಂಟಾ ವೀಡಿಯೋ ವೈರಲ್

    ಮುಂಬೈ: ಜಿಮ್‍ವೊಂದರಲ್ಲಿ ಪಂಜಾಬ್ ತಂಡದ ಪ್ರಮುಖ ಎಡಗೈ ಬ್ಯಾಟ್ಸ್‌ಮ್ಯಾನ್ ಶಿಖರ್ ಧವನ್ ಮತ್ತು ಬಾಲಿವುಡ್ ನಟಿ ಪ್ರೀತಿ ಜಿಂಟಾ ಒಟ್ಟಿಗೆ ವರ್ಕೌಟ್ ಮಾಡುತ್ತಿದ್ದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

     

    View this post on Instagram

     

    A post shared by Shikhar Dhawan (@shikhardofficial)

    ಬಾಲಿವುಡ್‍ನ ಡಿಂಪಲ್ ಕ್ವೀನ್ ಮತ್ತು ಪಂಜಾಬ್ ಕಿಂಗ್ಸ್ ತಂಡದ ಒಡತಿ ಪ್ರೀತಿ ಜಿಂಟಾ, ಕ್ರಿಕೆಟಿಗ ಶಿಖರ್ ಧವನ್ ಜೊತೆ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿರುವ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಟೈಗರ್ ಶ್ರಾಫ್ ನಟನೆಯ ಹೀರೊಪಂತಿ-2 ಚಿತ್ರದ ಡೈಲಾಗ್‍ಗಳಿರುವುದನ್ನು ಕೇಳಬಹುದು. ಇದನ್ನೂ ಓದಿ: ಕೆ.ಎಲ್ ರಾಹುಲ್ ಜೊತೆ ಮಗಳ ಮದುವೆಗೆ ಸುನೀಲ್ ಶೆಟ್ಟಿ ಗ್ರೀನ್ ಸಿಗ್ನಲ್

     

    View this post on Instagram

     

    A post shared by Shikhar Dhawan (@shikhardofficial)

    ಶಿಖರ್ ಅವರೇ ಪ್ರೀತಿ ಅವರ ಜಿಮ್‍ಗೆ ಹೋಗಿ ಅವರೊಂದಿಗೆ ವರ್ಕೌಟ್ ಮಾಡಿದ್ದಾರೆ. ಪ್ರೀತಿ ಜಿಂಟಾ ತಮ್ಮ ತಂಡದ ಆಟಗಾರರನ್ನು ಅತ್ಯಂತ ಗೌರವದೊಂದಿಗೆ ಕಾಣುತ್ತಾರೆ. ಅವರಿಗೆ ಜಿಮ್‍ನಲ್ಲಿ ವರ್ಕೌಟ್ ಮಾಡಲು ಅವಕಾಶವನ್ನು ಕಲ್ಪಿಸಿದ್ದಾರೆ. ಈ ಹಿಂದೆಯೂ ಕೂಡ ಪಂಜಾಬ್ ಕಿಂಗ್ಸ್‌ನ ಹಲವಾರು ಕ್ರಿಕೆಟಿಗರು ವರ್ಕೌಟ್ ಮಾಡಿದ್ದಾರೆ. ವಾರಾಂತ್ಯದ ಪಾರ್ಟಿಗಳಲ್ಲೂ ಭಾಗವಹಿಸಿದ್ದಾರೆ. ಇದನ್ನೂ ಓದಿ: `ಟಗರು’ ನಟಿ ಮಾನ್ವಿತಾ ಸ್ನಾತಕೋತ್ತರ ಪದವೀಧರೆ

  • ಬೀಚ್‍ನಲ್ಲಿ ಬೇಬಿ ಡೈನೋಸಾರ್?- ವೀಡಿಯೋ ವೈರಲ್

    ಬೀಚ್‍ನಲ್ಲಿ ಬೇಬಿ ಡೈನೋಸಾರ್?- ವೀಡಿಯೋ ವೈರಲ್

    ಮೆಕ್ಸಿಕೋ: ಬೀಚ್‍ನಲ್ಲಿ ಬೇಬಿ ಡೈನೋಸಾರ್‌ಗಳ ಗುಂಪು ಓಡುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವೀಡಿಯೋ ನೋಡಿ ಕೆಲವರು ಆಶ್ಚರ್ಯರಾಗಿದ್ದಾರೆ.

    ಡೈನೋಸಾರ್ ಮರಿಗಳು ಸಮುದ್ರದ ಬೀಚ್‍ನಲ್ಲಿ ಓಡಾಡುತ್ತಿವೆ ಎಂಬ ಶೀರ್ಷಿಕೆಯನ್ನು ನೀಡಿ ಈ ವೀಡಿಯೋ ಒಬ್ಬರು ಹಂಚಿಕೊಂಡಿದ್ದಾರೆ. ಈ ವೀಡಿಯೋ 14 ಸೆಕೆಂಡಿದ್ದು, ನೋಡಗರನ್ನು ಗೊಂದಲಕ್ಕಿಡು ಮಾಡುತ್ತದೆ. ಈಗಾಗಲೇ ಈ ವೀಡಿಯೋವನ್ನು 9.9 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, 47 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದೆ.

    ವೀಡಿಯೋದಲ್ಲಿ ಏನಿದೆ?:
    ಉದ್ದನೆಯ ಕುತ್ತಿಗೆಯ ಡೈನೋಸಾರ್ ಜಾತಿಯ ಪ್ರಾಣಿಯೊಂದು ಸಮುದ್ರದ ಕಡೆಗೆ ಓಡುತ್ತಿವೆ. ಇದನ್ನು ಒಮ್ಮೆಲೆ ನೋಡಿದಾಗ ಡೈನೋಸಾರ್ ರೀತಿಯೇ ಕಾಣುತ್ತದೆ. ಆದರೆ ಸೂಕ್ಷ್ಮವಾಗಿ ನೋಡಿದಾಗ ಡೈನೋಸಾರ್ ಅಲ್ಲ ಎನ್ನುವುದು ನಮ್ಮ ಅರಿವಿಗೆ ಬರುತ್ತದೆ.

    ಅಂದ ಹಾಗೆ ಈ ವೀಡಿಯೋದಲ್ಲಿರುವ ಪ್ರಾಣಿ ಡೈನೋಸಾರ್ ಅಲ್ಲ, ಬದಲಿಗೆ ಕೋಟಿಸ್ ಎನ್ನುವ ಪ್ರಾಣಿ. ಇದರ ಬಾಲ ಉದ್ದವಿರುವುದರಿಂದ ಇದು ನೋಡಲು ಡೈನೋಸಾರ್ ಹಾಗೆ ಕಾಣುತ್ತಿದೆ. ಈ ವೀಡಿಯೋವನ್ನು ಸೂಕ್ಷ್ಮವಾಗಿ ನೋಡಿದಾಗ ಕೋತಿಸ್ ಓಡುತ್ತಿರುವುದನ್ನು ಉಲ್ಟಾ ತೋರಿಸಿದ್ದಾರೆ ಎನ್ನುವುದು ತಿಳಿಯುತ್ತದೆ. ಇದನ್ನೂ ಓದಿ: ನಾನು ಒಳ್ಳೆಯದನ್ನೂ ಮಾಡಿದ್ದೀನಿ, ಅದನ್ನೂ ತೋರಿಸಿ – ಕ್ಯಾಮೆರಾ ಮುಂದೆ ಕೈ ಮುಗಿದ ಕಿಂಗ್‍ಪಿನ್ ಆರ್.ಡಿ.ಪಾಟೀಲ್

    ಕೋಟಿಸ್ ಅಮೆರಿಕ, ಮೆಕ್ಸಿಕೊ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇವು 33 ರಿಂದ 68 ಇಂಚು ಎತ್ತರವಿದ್ದು, 2ರಿಂದ 8 ಕ.ಜಿಯವರೆಗೆ ತೂಕವಿರಲಿದೆ. ಇದನ್ನೂ ಓದಿ: ಹಿಮಾಚಲ ಅಸೆಂಬ್ಲಿ ಗೇಟ್‌ನಲ್ಲಿ ಖಲಿಸ್ತಾನ್ ಧ್ವಜ – ಸಿಎಂ ಜೈರಾಮ್ ಠಾಕೂರ್ ಕಿಡಿ

  • 90 ವರ್ಷದ ಬುದ್ಧಿಮಾಂದ್ಯ ತಾಯಿ, ಮಗನನ್ನು ಗುರುತಿಸುವ ಭಾವನಾತ್ಮಕ ವೀಡಿಯೋ ವೈರಲ್

    90 ವರ್ಷದ ಬುದ್ಧಿಮಾಂದ್ಯ ತಾಯಿ, ಮಗನನ್ನು ಗುರುತಿಸುವ ಭಾವನಾತ್ಮಕ ವೀಡಿಯೋ ವೈರಲ್

    ವಾಷಿಂಗ್ಟನ್: ಬುದ್ಧಿಮಾಂದ್ಯತೆಯಿಂದ ಬಳಲುತ್ತಿರುವ 90 ವರ್ಷದ ವೃದ್ಧೆ ತನ್ನ ಮಗನನ್ನು ಗುರುತಿಸಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ವೀಡಿಯೋ ನೋಡಿದ ನೆಟ್ಟಿಗರು ಭಾವನಾತ್ಮಕವಾಗಿ ಕಾಮೆಂಟ್ ಮಾಡುತ್ತಿದ್ದಾರೆ.

    ತನ್ನ ತಾಯಿಯ 90ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆ ಸರ್ಪ್ರೈಸ್‌ ಕೊಡಬೇಕೆಂದು ಮಗ ಹಲವು ವರ್ಷಗಳ ನಂತರ ಮನೆಗೆ ಬಂದಿದ್ದನು. ಈ ವೇಳೆ ತಾಯಿ ತನ್ನ ಮಗನನ್ನು ಗುರುತಿಸಿ, ನೀನು ನನ್ನ ಮಗ ಜೋಯಿ ಎಂದು ಬರೆಯುವ ಕ್ಷಣ ನೋಡುಗರನ್ನು ಭಾವುಕರನ್ನಾಗಿಸುತ್ತೆ. ಇನ್‍ಸ್ಟಾಗ್ರಾಮ್‍ನಲ್ಲಿ ಈ ವೀಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ನನ್ನ ಸಹೋದರ ತನ್ನ ತಾಯಿಯ 90ನೇ ವರ್ಷದ ಹುಟ್ಟುಹಬ್ಬದಂದು ಸರ್ಪ್ರೈಸ್‌ ಕೊಟ್ಟಿದ್ದಾನೆ ಎಂದು ಬರೆದುಕೊಳ್ಳಲಾಗಿದೆ. ನೆಟ್ಟಿಗರು ಸಹ ಈ ವೀಡಿಯೋ ನೋಡಿ ಮೆಚ್ಚಿಕೊಂಡಿದ್ದಾರೆ. ಇದನ್ನೂ ಓದಿ:  ಹಾಡಹಗಲೇ ಅತ್ಯಾಚಾರ – ‘ಕಾಲಿಗೆ ಬೀಳುತ್ತೇನೆ ನನ್ನನ್ನು ಬಿಟ್ಟು ಬಿಡಿ’ ಎಂದ್ರೂ ಬಿಡದ ಪಾಪಿಗಳು

    ವೀಡಿಯೋದಲ್ಲಿ ಏನಿದೆ?
    ಮಗ ಜೋಯಿ ಬಾಗಿಲು ಬಡಿಯುತ್ತಿರುವುದರಿಂದ ವೀಡಿಯೋ ಪ್ರಾರಂಭವಾಗುತ್ತೆ. ಜೋಯಿ ತಾಯಿ ಮಂಚದ ಮೇಲೆ ಕುಳಿತ್ತಿರುತ್ತಾಳೆ. ಅಲ್ಲಿಗೆ ಜೋಯಿ ಬಂದು ವಿಶ್ ಮಾಡಿ, ತಾಯಿಯನ್ನು ಹೇಗಿದ್ದೀಯಾ ಎಂದು ಕೇಳುತ್ತಾನೆ. ಅದಕ್ಕೆ ಅವಳು ಜೋರು ಧ್ವನಿಯಲ್ಲಿ ನಾನು ಚೆನ್ನಾಗಿದ್ದೇನೆ, ಧನ್ಯವಾದಗಳು ಎಂದು ಕೇಳುತ್ತಾರೆ.

    ಈ ವೇಳೆ ಜೋಯಿ ತನ್ನ ತಾಯಿಯನ್ನು, ನಾನು ಯಾರೆಂದು ಗುರುತಿಸು? ಎಂದಾಗ ಆಕೆ, ಜೋಯಿ, ನೀನು ನನ್ನ ಜೋಯಿ ಎಂದು ನಗುತ್ತ ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ಮಗ ಭಾವುಕನಾಗುತ್ತಾನೆ. ನಾನು ನಿನ್ನನ್ನು ಪ್ರೀತಿಸುತ್ತೇನೆ ನನ್ನ ಜೋಯಿ ಎಂದು ಹೇಳುತ್ತ ತಾಯಿಯು ತನ್ನ ಅಂಗೈಯಿಂದ ಜೋಯಿ ಮುಖವನ್ನು ಹಿಡಿದುಕೊಳ್ಳುತ್ತಾಳೆ. ಈ ವೀಡಿಯೋ ನೋಡಿದ ನೆಟ್ಟಿಗರು, ಇದನ್ನು ನೋಡಿ ನನಗೆ ಅಳುವನ್ನು ತಡೆದುಕೊಳ್ಳಲಾಗುತ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

    ಮತ್ತೆ ಕೆಲವರು, ಅವರ ತಾಯಿ, ಅವನಿಗೆ ಹೇಳುವ ರೀತಿ ಕೇಳಿಸಿಕೊಂಡು ನನಗೆ ಅಳುಬರುತ್ತಿದೆ. ದೇವರು ಅವರಿಗೆ ಆಶೀರ್ವದಿಸಲಿ, ವಿಶೇಷ ಕ್ಷಣ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:  ಕೇರಳ ರಾಜ್ಯದ ಲಾಟರಿ ಮಾರಾಟ – ಬಡವರು, ಕೂಲಿ ಕಾರ್ಮಿಕರೇ ಟಾರ್ಗೆಟ್! 

    ನಿಮ್ಮ ತಂದೆ-ತಾಯಿಗಳು ದೊಡ್ಡವರಾಗುತ್ತಾರೆ. ಆದರೆ ಅವರು ಬೆಳೆಯುತ್ತಾ ಬೆಳೆಯುತ್ತಾ ಮಕ್ಕಳಂತೆ ಆಗುತ್ತಾರೆ. ಇದು ಹೃದಯ ವಿದ್ರಾವಕ ವೀಡಿಯೋವಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

  • ಮದ್ಯದಿಂದ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ – ವೀಡಿಯೋ ವೈರಲ್

    ಮದ್ಯದಿಂದ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ – ವೀಡಿಯೋ ವೈರಲ್

    ಮೀರತ್: ಮದ್ಯದ ವಿಷಯಕ್ಕೆ ಜಗಳ ಶುರುವಾಗಿದ್ದು, ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಉತ್ತರಪ್ರದೇಶದ ಮೀರತ್‍ನಲ್ಲಿ ನಡೆದಿದೆ. ಕೊಲೆ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

    ಉತ್ತರ ಪ್ರದೇಶದ ಮೀರತ್ ನಡುರಸ್ತೆಯಲ್ಲಿ ಮೂವರು ಆರೋಪಿಗಳು ವ್ಯಕ್ತಿಯೊಬ್ಬನನ್ನು ಇರಿದು ಕೊಂದಿರುವ ಆಘಾತಕಾರಿ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದಕ್ಕೆ ಮೂಲ ಕಾರಣ, ಕೊಲೆಯಾದ ವ್ಯಕ್ತಿ ಜೊತೆಗೆ ಆರೋಪಿಗಳು ಮದ್ಯಪಾನದ ವಿಚಾರವಾಗಿ ಜಗಳವಾಡಿದ್ದರು. ಈ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯನ್ನು ನಡುರಸ್ತೆಯಲ್ಲಿ ಕೊಲೆ ಮಾಡಲಾಗಿದೆ. ಇದನ್ನೂ ಓದಿ:  ಉದ್ಧವ್ ಠಾಕ್ರೆ ಎಂಟ್ರಿ – 14 ದಿನಗಳ ಕಸ್ಟಡಿಗೆ ಒಳಗಾದ ಸಂಸದೆ, ಶಾಸಕ ದಂಪತಿ 

    ನಡೆದಿದ್ದೇನು?
    ಪೊಲೀಸ್ ಮೂಲಗಳ ಪ್ರಕಾರ, ಲಿಸಾರಿ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಫಿರೋಜ್ ನಗರದ ನಿವಾಸಿ ಸಾಜಿದ್(25) ಬ್ರಹ್ಮಪುರಿ ಪೊಲೀಸ್ ಠಾಣೆ ವ್ಯಾಪ್ತಿಯ ಇತ್ತೆಫಾಕ್ ನಗರಕ್ಕೆ ಯಾವುದೋ ಖಾಸಗಿ ಕೆಲಸಕ್ಕೆ ಹೋಗಿದ್ದಾನೆ. ಈ ವೇಳೆ ಹಿಂದಿನಿಂದ ಬಂದ ಕೆಲ ದಾಳಿಕೋರರು ಸಾಜಿದ್‍ನನ್ನು ಹಿಡಿದು ಚಾಕುವಿನಿಂದ ತೀವ್ರವಾಗಿ ಇರಿದಿದ್ದಾರೆ.

    ಸಾಜಿದ್ ಕೊಲೆಯ ಸಂಪೂರ್ಣ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆಯ ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರಿಗೆ ವಿಷಯ ತಿಳಿದ ತಕ್ಷಣ ಸಾಜಿದ್‍ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

    ಪ್ರಸ್ತುತ ಪೊಲೀಸರು ಘಟನೆ ಕುರಿತು ಮಾಹಿತಿ ನೀಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಘಟನೆಯ ಲೈವ್ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.

    crime

    ಸಂಬಂಧಿಕರಿಂದಲ್ಲೇ ಕೊಲೆ
    ಘಟನೆ ಕುರಿತು ಸಾಜಿದ್ ತಂದೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಶನಿವಾರ ನನ್ನ ಮಗ ಅವರ ಚಿಕ್ಕಪ್ಪ ನೌಶಾದ್, ಜಾವೇದ್ ಮತ್ತು ಶಹಜಾದ್ ಅವರೊಂದಿಗೆ ಮನೆಯಲ್ಲಿಯೇ ಮದ್ಯ ಸೇವಿಸಿ ಜಗಳವಾಡಿದ್ದರು. ಆದರೆ, ತಡರಾತ್ರಿ ಕುಟುಂಬಸ್ಥರೆಲ್ಲ ಸೇರಿ ಇವರಿಗೆ ರಾಜಿ ಮಾಡಿಸಿದ್ದೆವು. ಈ ದ್ವೇಷದಿಂದಲೇ ಸಾಜಿದ್ ಕೊಲೆ ಮಾಡಲಾಗಿದೆ ಎಂದು ಶಂಕೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಖಾಸಗಿ ಬಸ್ ನಿಲ್ದಾಣದಲ್ಲಿ ನವಜಾತ ಗಂಡು ಶಿಶು ಪತ್ತೆ

    ಮೀರತ್‍ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಭಾಕರ್ ಚೌಧರಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನಾವು ಆರೋಪಿಗಳ ಮನೆಗಳ ಮೇಲೆ ದಾಳಿ ಮಾಡಿದ್ದೇವೆ. ಆದರೆ ಅವರು ಪರಾರಿಯಾಗಿದ್ದಾರೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಭರವಸೆ ಕೊಟ್ಟರು.

  • ಅಂಗಡಿ ದೋಚಿದ ಖುಷಿಯಲ್ಲಿ ಡ್ಯಾನ್ಸ್ ಮಾಡಿದ ಕಳ್ಳ – ವೀಡಿಯೋ ವೈರಲ್

    ಅಂಗಡಿ ದೋಚಿದ ಖುಷಿಯಲ್ಲಿ ಡ್ಯಾನ್ಸ್ ಮಾಡಿದ ಕಳ್ಳ – ವೀಡಿಯೋ ವೈರಲ್

    ಲಕ್ನೋ: ಹಾರ್ಡ್‍ವೇರ್ ಅಂಗಡಿಯನ್ನು ದರೋಡೆ ಮಾಡಿದ ನಂತರ ಕಳ್ಳರು ಡ್ಯಾನ್ಸ್ ಮಾಡಿರುವ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್ ಆಗುತ್ತಿದೆ.

    ಉತ್ತರ ಪ್ರದೇಶದ ಚಾ ಅಂಡೌಲಿ ಎಂಬಲ್ಲಿ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರ ನಿವಾಸದ ಬಳಿ ಶನಿವಾರ ಈ ಘಟನೆ ನಡೆದಿದೆ. ಉತ್ತರ ಪ್ರದೇಶದ ಚಂದೌಲಿಯಲ್ಲಿ ಹಾರ್ಡ್‍ವೇರ್ ಅಂಗಡಿಯಲ್ಲಿ ಕಳ್ಳತನ ಮಾಡಿದ ನಂತರ ಕಳ್ಳ ಅಂಗಡಿಯೊಳಗೆ ಡ್ಯಾನ್ಸ್ ಮಾಡಲು ಪ್ರಾರಂಭಿಸಿದನು. ಕಳ್ಳ ಖುಷಿಯಲ್ಲಿ ತೇಲಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಬಂಡೀಪುರದಲ್ಲಿ ಅವಳಿ ಮರಿಗಳಿಗೆ ಜನ್ಮ ಕೊಟ್ಟ ಕಾಡಾನೆ

    ಅಂಗಡಿಯೊಳಗೆ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಕಳೆದ ವಾರ ನಡೆದ ಸಂಪೂರ್ಣ ಘಟನೆ ಸೆರೆಯಾಗಿದೆ. ಮುಖವನ್ನು ಮುಚ್ಚಿಕೊಂಡು ಅಂಗಡಿಗೆ ಪ್ರವೇಶಿಸಿದ ಕಳ್ಳ, ತನಗೆ ಬೇಕಾದುದನ್ನು ಕದ್ದು, ಡ್ಯಾನ್ಸ್ ಮಾಡಿ ನಂತರ ಅಲ್ಲಿಂದ ನುಸುಳಿಕೊಂಡು ಹೋಗಿರುವ ದೃಶ್ಯಾವಳಿ ಸೆರೆಯಾಗಿದೆ.

    ಕಳ್ಳ ಎಲ್ಲ ನಗದನ್ನು ಎತ್ತಿಕೊಂಡು ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳನ್ನು ಕದ್ದಿದ್ದಾನೆ ಎಂದು ಅಂಗಡಿ ಮಾಲೀಕ ಅಂಶು ಸಿಂಗ್ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ. ಷಟರ್ ಮುರಿದಿರುವುದನ್ನು ನೋಡಿದ ಸಿಂಗ್ ಅಂಗಡಿ ತೆರೆದು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಸಾಮಾನ್ಯವಾಗಿ ಸುರಕ್ಷತಾ ಕಾರಣಗಳಿಗಾಗಿ ಮತ್ತು ಕಳ್ಳರನ್ನು ಹೆದರಿಸಲು ಸಿಸಿಟಿವಿ ಕ್ಯಾಮೆರಾಗಳನ್ನು ಆಳವಡಿಸಲಾಗುತ್ತೆ. ಆದರೆ ಈ ಕಳ್ಳ ಯಾವುದನ್ನು ಲೆಕ್ಕಿಸಿಲ್ಲ. ಅಂಗಡಿಯೊಳಗಿದ್ದ ಸಿಸಿಟಿವಿ ಕ್ಯಾಮೆರಾ ಕಣ್ಣಿಗೆ ಬಿದ್ದ ತಕ್ಷಣ ಡ್ಯಾನ್ಸ್ ಮಾಡತೊಡಗಿದ್ದಾನೆ. ಇದನ್ನೂ ಓದಿ: ತಾಯಿಯಾಗುತ್ತಿದ್ದಾರೆ ಚಂದ್ರನ ರಾಣಿ ಶ್ರಿಯಾ ಸರನ್

    ಅಕ್ಟೋಬರ್ 2018 ರಲ್ಲಿ ಅಹಮದಾಬಾದ್‍ನಲ್ಲಿ ಇದೇ ರೀತಿಯ ಘಟನೆ ಸಂಭವಿಸಿದೆ. ಐದು ಜನರ ಗ್ಯಾಂಗ್‍ನ ಕಳ್ಳರಲ್ಲಿ ಒಬ್ಬ ಎಲ್ಲವನ್ನು ದೋಚಿದ ನಂತರ ಸಿಸಿಟಿವಿ ಮುಂದೆ ಬಂದು ಡ್ಯಾನ್ಸ್ ಮಾಡಿದ್ದನು.

  • ದಲಿತ ಹುಡುಗನಿಗೆ ಕಾಲು ನೆಕ್ಕಲು ಒತ್ತಾಯ – ವೀಡಿಯೋ ವೈರಲ್, 8 ಮಂದಿ ಅರೆಸ್ಟ್

    ದಲಿತ ಹುಡುಗನಿಗೆ ಕಾಲು ನೆಕ್ಕಲು ಒತ್ತಾಯ – ವೀಡಿಯೋ ವೈರಲ್, 8 ಮಂದಿ ಅರೆಸ್ಟ್

    ಲಕ್ನೋ: 10ನೇ ತರಗತಿಯ ದಲಿತ ವಿದ್ಯಾರ್ಥಿಯನ್ನು ಥಳಿಸಿ ವ್ಯಕ್ತಿಯೊಬ್ಬನು ಪಾದ ನೆಕ್ಕುಲು ಹೇಳುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಹಿನ್ನೆಲೆ 8 ಮಂದಿಯನ್ನು ಪೊಲೀರು ಬಂಧಿಸಿದ್ದಾರೆ.

    ಪೊಲೀಸರ ಪ್ರಕಾರ, ಏಪ್ರಿಲ್ 10 ರಂದು, ಜಗತ್‍ಪುರ ಪಟ್ಟಣದ ನಿವಾಸಿಯಾದ ದಲಿತ ಹುಡುಗನನ್ನು ಅವನ ಸ್ನೇಹಿತ ಬೈಕ್‌ನಲ್ಲಿ ರಾಮಲೀಲಾ ಮೈದಾನಕ್ಕೆ ಕರೆದೊಯ್ದನು. ನಂತರ ಆತನನ್ನು ಸಲೂನ್ ರಸ್ತೆಯ ಕಡೆಗೆ ಕರೆದೊಯ್ದ ಅಲ್ಲಿಂದ ಕೆಲವು ಯುವಕರು ತೋಟಕ್ಕೆ ಕರೆದೊಯ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸಂತೋಷ್ ಪಾಟೀಲ್ ಕುಟುಂಬಕ್ಕೆ 5 ಲಕ್ಷ ರೂ. ನೀಡುವ ಭರವಸೆ ಕೊಟ್ಟ ಕಾಂಗ್ರೆಸ್ ಶಾಸಕ

    crime

    ಆರೋಪಿಗಳು ಹುಡುಗನನ್ನು ತೋಟದಲ್ಲಿ ಥಳಿಸಿ ಆರೋಪಿಗಳಲ್ಲಿ ಒಬ್ಬನ ಪಾದ ನೆಕ್ಕಲು ಒತ್ತಾಯಿಸಿದ್ದಾರೆ. ಈ ವೀಡಿಯೋವನ್ನು ಫೋನ್‍ನಲ್ಲಿ ಸೆರೆಹಿಡಿಯಲಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವೀಡಿಯೋ ವೈರಲ್ ಆದ ನಂತರ, ಬಾಲಕ ತನ್ನ ತಾಯಿಯೊಂದಿಗೆ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಎಂದು ಹೇಳಿದ್ದಾರೆ.

    POLICE JEEP

    ಹುಡುಗನ ಮೇಲೆ ಏಕೆ ಹಲ್ಲೆ ನಡೆದಿದೆ ಎಂಬುದಕ್ಕೆ ಪೊಲೀಸರು ಸ್ಪಷ್ಟನೆ ನೀಡಿಲ್ಲ. ಇದಕ್ಕೆ ಸಂಬಂಧಿಸಿದಂತೆ ಸೆಕ್ಷನ್‍ಗಳ ಅಡಿಯಲ್ಲಿ ಎಫ್‍ಐಆರ್ ದೂರು ದಾಖಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಎಂಟು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಡಾಲ್ಮೌ ಸರ್ಕಲ್ ಅಧಿಕಾರಿ(ಸಿಒ) ಅಶೋಕ್ ಸಿಂಗ್ ಮಾಹಿತಿ ಕೊಟ್ಟಿದ್ದಾರೆ. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಜನರ ಮುಂದೆ ಎಲ್ಲ ಬಿಚ್ಚಿಟ್ಟಿದ್ದಾರೆ, ಇದನ್ನು ಬಿಚ್ಚಿಡಲಿ: ಡಿಕೆಶಿ

  • ಅಪ್ರಾಪ್ತ ದಲಿತ ಬಾಲಕನಿಂದ ಕಾಲು ನೆಕ್ಕಿಸಿಕೊಂಡ ಕಿಡಿಗೇಡಿಗಳು – ವೀಡಿಯೋ ವೈರಲ್

    ಅಪ್ರಾಪ್ತ ದಲಿತ ಬಾಲಕನಿಂದ ಕಾಲು ನೆಕ್ಕಿಸಿಕೊಂಡ ಕಿಡಿಗೇಡಿಗಳು – ವೀಡಿಯೋ ವೈರಲ್

    ಲಕ್ನೋ: ದಲಿತ ಸಮುದಾಯದ ಅಪ್ರಾಪ್ತ ಬಾಲಕನ ಮೇಲೆ ಮೇಲ್ಜಾತಿಯ ದುಷ್ಕರ್ಮಿಗಳು ಹಲ್ಲೆ ನಡೆಸಿ, ಅವರಲ್ಲಿ ಓರ್ವ ಬಾಲಕನಿಗೆ ಕಾಲು ನೆಕ್ಕಿಸಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ನಡೆದಿದೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    2 ನಿಮಿಷ 30 ಸೆಕೆಂಡ್‍ಗಳಿರುವ ಈ ವೀಡಿಯೋದಲ್ಲಿ ಬಾಲಕ ತನ್ನ ಕಿವಿಗಳ ಮೇಲೆ ಕೈಯಿಟ್ಟು ನೆಲದ ಮೇಲೆ ಮಂಡಿಯೂರಿ ಕುಳಿತಿರುವುದನ್ನು ಕಾಣಬಹುದಾಗಿದೆ. ಇದೇ ವೇಳೆ ಕಿಡಿಗೇಡಿಯೋರ್ವ ಮೋಟಾರ್ ಬೈಕ್ ಮೇಲೆ ಕುಳಿತು ತನ್ನ ಕಾಲು ನೆಕ್ಕುವಂತೆ ಹೇಳಿದ ತಕ್ಷಣ ಬಾಲಕ ನಡುಗುತ್ತಲೆ ಆತನ ಬಳಿ ಹೋಗಿ ಕಾಲನ್ನು ನೆಕ್ಕಿದ್ದಾನೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ರಾಯ್ಬರೇಲಿ ಪೊಲೀಸರು ಆರು ಮಂದಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಅಪಘಾತವಾದರೆ ರಸ್ತೆ ಅಗೆದವರೆ ಹೊಣೆ – ಬಿಬಿಎಂಪಿಯಿಂದ ಆದೇಶ

    ಈ ವಿಚಾರವಾಗಿ ಪ್ರತಿಕ್ರಿಯಿಸಿದ ರಾಯ್ಬರೇಲಿ ಪೊಲೀಸ್ ವರಿಷ್ಠಾಧಿಕಾರಿ ಶ್ಲೋಕ್ ಕುಮಾರ್ ಅವರು, ಪ್ರಕರಣದ ಪ್ರಮುಖ ಆರೋಪಿ ಅಪ್ರಾಪ್ತ ವಯಸ್ಕನಾಗಿದ್ದು, ಆತನನ್ನು ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗಿದೆ ಮತ್ತು ಉಳಿದಂತೆ ಅಭಿಷೇಕ್, ವಿಕಾಸ್ ಪಾಸಿ, ಮಹೇಂದ್ರ ಕುಮಾರ್, ಹೃತಿಕ್ ಸಿಂಗ್, ಅಮನ್ ಸಿಂಗ್ ಮತ್ತು ಯಶ್ ಪ್ರತಾಪ್‍ನನ್ನು ಸಹ ಬಂಧಿಸಲಾಗಿದೆ. ಹತ್ತನೇ ತರಗತಿಯ ದಲಿತ ವಿದ್ಯಾರ್ಥಿ ಕಾಲು ನೆಕ್ಕುವಂತೆ ಮಾಡಿದ ಇತರ ಆರೋಪಿಗಳ ಹುಡುಕಾಟವನ್ನು ಇನ್ನೂ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಈ ವರ್ಷದಿಂದಲೇ ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ: ಬಿಸಿ ನಾಗೇಶ್

  • ಮಹಿಳೆಯ ಚಿನ್ನದ ಸರ ಕದ್ದು ಖದೀಮರು ಎಸ್ಕೇಪ್ – ವೀಡಿಯೋ ವೈರಲ್

    ಮಹಿಳೆಯ ಚಿನ್ನದ ಸರ ಕದ್ದು ಖದೀಮರು ಎಸ್ಕೇಪ್ – ವೀಡಿಯೋ ವೈರಲ್

    ಬೀದರ್: ಅಂಗಡಿಯಿಂದ ಹಾಲು ತೆಗೆದುಕೊಂಡು ಬರುವಾಗ ಸರಗಳ್ಳರು ಮಹಿಳೆಯೊಬ್ಬರ ಸರ ಕದ್ದು ಕ್ಷಣಾರ್ಧದಲ್ಲಿ ಪರಾರಿಯಾದ ಘಟನೆ ಜಿಲ್ಲೆಯ ಪ್ರತಾಪ್ ನಗರದಲ್ಲಿ ನಡೆದಿದೆ.

    ನಗರದಲ್ಲಿ ಸರಗಳ್ಳರ ಹಾವಳಿಗೆ ಮಹಿಳೆಯರು ಬೆಚ್ಚಿ ಬಿದ್ದಿದ್ದು, ಬೈಕ್‍ನಲ್ಲಿ ಬಂದ ಖದೀಮರು ಮಹಿಳೆಯ ಕತ್ತಿನಲ್ಲಿದ್ದ ಸರ ಎಗರಿಸಿ ಪರಾರಿಯಾಗಿದ್ದಾರೆ. ಪ್ರತಾಪ ನಗರದ ನಿವಾಸಿ ಶ್ರೀದೇವಿ ಅವರ ಚಿನ್ನದ ಸರ ಕದ್ದು ಖದೀಮರು ಎಸ್ಕೇಪ್ ಆಗುವ ವೀಡಿಯೋ ಭಯಾನಕವಾಗಿದೆ. ಚಿನ್ನದ ಸರ ಎಗರಿಸಿದ ರಭಸಕ್ಕೆ ಮಹಿಳೆ ರಸ್ತೆ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಮೋದಿ, ಅಮಿತ್ ಶಾರನ್ನು ನಿಂದಿಸಿದ್ದ ವ್ಯಕ್ತಿ ಬಂಧನ

    ಖದೀಮರು ಮಹಿಳೆಯ ಕತ್ತಿನಿಂದ ಚಿನ್ನದ ಸರ ಎಗರಿಸುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ವೀಡಿಯೋವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗಂಭೀರವಾಗಿ ಗಾಯಗೊಂಡ ಮಹಿಳೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಕುರಿತು ನ್ಯೂ ಟೌನ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಮ್ಮಿಂದ ತಪ್ಪಾಗಿದೆ: ಕ್ಷಮೆ ಕೇಳಿದ ಶ್ರೀಲಂಕಾ ಅಧ್ಯಕ್ಷ

  • 17,500 ಅಡಿ ಎತ್ತರದಲ್ಲಿ 55ರ ಐಟಿಬಿಪಿ ಅಧಿಕಾರಿಯ 65 ಪುಶ್ ಅಪ್ ವಿಡಿಯೋ ವೈರಲ್

    17,500 ಅಡಿ ಎತ್ತರದಲ್ಲಿ 55ರ ಐಟಿಬಿಪಿ ಅಧಿಕಾರಿಯ 65 ಪುಶ್ ಅಪ್ ವಿಡಿಯೋ ವೈರಲ್

    ನವದೆಹಲಿ: ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು (ಐಟಿಬಿಪಿ) ತಮ್ಮ ಕೇಂದ್ರ ಪರ್ವತಾರೋಹಣ ತಂಡದೊಂದಿಗೆ ಹಿಮಾಲಯ ಪರ್ವತವಾದ ಮೌಂಟ್ ಕಾರ್ಜೋಕ್ ಕಂಗ್ರಿಯನ್ನು ಏರಿದೆ. ಕಮಾಂಡೆಂಟ್ ರತನ್ ಸಿಂಗ್ ಸೋನಾಲ್ ನೇತೃತ್ವದ ಪಡೆಯ ಆರು ಉನ್ನತ ಪರ್ವತಾರೋಹಿಗಳ ತಂಡವು ಫೆಬ್ರವರಿ 20 ರಂದು 20,177 ಅಡಿ ಎತ್ತರದ ಶಿಖರವನ್ನು ಏರಿದೆ ಎಂದು ಐಟಿಬಿಪಿ ತಿಳಿಸಿದೆ.

    ಐಟಿಬಿಪಿ ಬಾರ್ಡರ್ ಪೊಲೀಸ್ ತಂಡವು ಮೌಂಟ್ ಕಾರ್ಜೋಕ್ ಕಾಂಗ್ರಿಯನ್ನು ಮೊದಲ ಬಾರಿ ಆರೋಹಣ ಮಾಡಿದ್ದಾರೆ. ಏಸ್ ಪರ್ವತಾರೋಹಿ ಕಮಾಂಡೆಂಟ್ ರತನ್ ಸಿಂಗ್ ಸೋನಾಲ್ ನೇತೃತ್ವದ ಐಟಿಬಿಪಿಯ 6 ಉನ್ನತ ದರ್ಜೆಯ ಪರ್ವತಾರೋಹಿಗಳ ತಂಡವು ಲಡಾಖ್‍ನ ಹಿಮಪರ್ವತವಾದ 20,177 ಅಡಿ ಎತ್ತರದ ಶಿಖರವನ್ನು ಏರಿತು ಎಂದು ಐಟಿಬಿಪಿ ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: ಮೆಲಾನಿಯಾ ಟ್ರಂಪ್, ಕೇಜ್ರಿವಾಲ್ ಶಾಲೆಯನ್ನು ಮಾತ್ರ ನೋಡಬೇಕೆಂದಿದ್ದರು: ದೆಹಲಿ ಸಿಎಂ

    ತೀವ್ರವಾದ ಚಳಿಗಾಲದಲ್ಲಿ ದೈಹಿಕ ಮತ್ತು ಮಾನಸಿಕ ಗಟ್ಟಿತನವನ್ನು ತಡೆದುಕೊಂಡು ತಂಡವು ಯಾವುದೇ ವಿಶೇಷ ಪರ್ವತಾರೋಹಣ ಉಪಕರಣಗಳು ಮತ್ತು ಬೆಂಬಲ ವ್ಯವಸ್ಥೆಯನ್ನು ಬಳಸಿಕೊಳ್ಳದೆ ಆರೋಹಣವನ್ನು ಪೂರ್ಣಗೊಳಿಸಿತು ಎಂದು ಐಟಿಬಿಪಿಯ ಅಧಿಕಾರಿ ತಿಳಿಸಿದರು.

    ಮೌಂಟ್ ಕಾರ್ಜೋಕ್ ಕಂಗ್ರಿಯನ್ನು ಏರುತ್ತಿರುವ ಕೆಲ ದೃಶ್ಯಗಳನ್ನು ಐಟಿಬಿಪಿ ತಂಡವು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.

    ಮೈ ನಡುಗಿಸುವ ಚಳಿಯಲ್ಲಿ, ಮೈನಸ್ 30 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ 17,500 ಅಡಿ ಎತ್ತರದಲ್ಲಿ ಒಂದೇ ಬಾರಿಗೆ 65 ಪುಷ್-ಅಪ್‍ಗಳನ್ನು ಪೂರ್ಣಗೊಳಿಸಿದ ಕಮಾಂಡೆಂಟ್ ಸೋನಾಲ್ ಅವರ ವೀಡಿಯೋ ಕೂಡ ವೈರಲ್ ಆಗುತ್ತಿದೆ. ಇದನ್ನೂ ಓದಿ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿದ ತೃತೀಯಲಿಂಗಿ

    65 ಪುಷ್-ಅಪ್‍ಗಳನ್ನು ಹೊಡೆದ ಸೋನಾಲ್ 55 ವರ್ಷ ವಯಸ್ಸಿನ ಕಮಾಂಡೆಂಟ್ ಆಗಿದ್ದು, ಅವರ ಈ ಧಾಡಸಿ ವಾಯ್ಯಾಮವನ್ನು ನೋಡಿದ ನೆಟ್ಟಿಗರೊಬ್ಬರು ನಮ್ಮ ಸೇನಾ ಸಿಬ್ಬಂದಿ ಎಷ್ಟು ಪ್ರಬಲರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಸೋನಾಲ್ ಅವರ ಈ ಧಾಡಸಿ ವ್ಯಾಯಾಮದ ವೀಡಿಯೋವು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. 13,000 ಕ್ಕೂ ಹೆಚ್ಚು ಲೈಕ್‍ಗಳನ್ನು ಪಡೆದುಕೊಂಡಿದ್ದು, 1,800 ಕ್ಕೂ ಹೆಚ್ಚು ಜನರು ಶೇರ್ ಮಾಡಿಕೊಂಡಿದ್ದಾರೆ.

    1962 ರಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ರಚಿಸಲಾಯಿತು. ಹಿಮಾಲಯದ 3,488 ಕಿಮೀ ಉದ್ದದ ಗಡಿ ಅಲ್ಲದೇ ನಕ್ಸಲ್ ವಿರೋಧಿ ಕಾರ್ಯಾಚರಣೆ ಮತ್ತು ಇತರ ಆಂತರಿಕ ಭದ್ರತಾ ಕರ್ತವ್ಯಗಳಿಗೆ ಈ ಪಡೆಯನ್ನು ನಿಯೋಜಿಸಲಾಗಿದೆ.

  • ಮಗನ ಪ್ರಿಯತಮೆಗೆ ರೌಡಿಗಳಿಂದ ಧಮ್ಕಿ ಹಾಕಿಸಿದ ಪ್ರಭಾವಿ ರಾಜಕಾರಣಿ

    ಮಗನ ಪ್ರಿಯತಮೆಗೆ ರೌಡಿಗಳಿಂದ ಧಮ್ಕಿ ಹಾಕಿಸಿದ ಪ್ರಭಾವಿ ರಾಜಕಾರಣಿ

    ಬೆಂಗಳೂರು: ಪ್ರಭಾವಿ ರಾಜಕಾರಣಿಯೊಬ್ಬರು ಮಗನ ಪ್ರಿಯತಮೆಗೆ ರೌಡಿಗಳಿಂದ ಧಮ್ಕಿ ಹಾಕಿಸಿದ್ದಾರೆ.

    ರಾಜಕಾರಣಿ ಪುತ್ರನ ಗರ್ಲ್‍ಫ್ರೆಂಡ್‍ಗೆ ಹುಳಿಮಾವು ರೌಡಿಶೀಟರ್ ನಂದೀಶ್‍ನಿಂದ ಧಮ್ಕಿ ಆರೋಪ ವ್ಯಕ್ತವಾಗಿದೆ. ಬೆಂಗಳೂರು ಬಿಟ್ಟು ಹೋಗು, ಇಲ್ಲ ನಿನ್ನ ಖಾಸಗಿ ಫೋಟೋ ವೀಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಯುವತಿಯ ಖಾಸಗಿ ಫೋಟೋ ವೀಡಿಯೋಗಳನ್ನು ಅವಳ ತಂದೆ ಹಾಗೂ ಆಕೆಯ ಬಾಯ್‍ಫ್ರೆಂಡ್‍ಗೆ ವಾಟ್ಸಾಪ್ ಮಾಡಿದ್ದಾನೆ. ಇದನ್ನೂ ಓದಿ: ಮೊಬೈಲ್‍ಗಾಗಿ ಪೆಟ್ರೋಲ್ ಸುರಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ

    ಉತ್ತರ ಭಾರತದ 25 ವರ್ಷದ ಯುವತಿಯು ಆಗ್ನೇಯ ವಿಭಾಗ ಸೈಬರ್ ಕ್ರೈಂ ಪೊಲೀಸರಿಗೆ ರೌಡಿಶೀಟರ್ ನಂದೀಶ್‍ನ ವಿರುದ್ಧ ದೂರು ದಾಖಲಿಸಿದ್ದಾಳೆ. ಈ ವೇಳೆ ಯುವತಿಯ ದೂರಿನನ್ವಯ ಆರೋಪಿಯನ್ನು ಬಂಧಿಸಲಾಗಿದೆ. ರೌಡಿಶೀಟರ್ ನಂದೀಶ್ ಪ್ರಬಲ ರಾಜಕಾರಣಿಯ ಬಲಗೈ ಬಂಟನಾಗಿದ್ದಾನೆ.