Tag: ವೀಡಿಯೋ ವೈರಲ್

  • ಕಾರನ್ನು ವೇಗವಾಗಿ ಚಲಿಸುತ್ತಾ ಡಿಕ್ಕಿ ಮೇಲೆ ಪಟಾಕಿ ಸಿಡಿಸಿದ ಕಿಡಿಗೇಡಿಗಳು- ವೀಡಿಯೋ ವೈರಲ್

    ಕಾರನ್ನು ವೇಗವಾಗಿ ಚಲಿಸುತ್ತಾ ಡಿಕ್ಕಿ ಮೇಲೆ ಪಟಾಕಿ ಸಿಡಿಸಿದ ಕಿಡಿಗೇಡಿಗಳು- ವೀಡಿಯೋ ವೈರಲ್

    ಲಕ್ನೋ: ಚಲಿಸುತ್ತಿರುವ ಕಾರಿನ (Car) ಡಿಕ್ಕಿ ಮೇಲೆ ಕಿಡಿಗೇಡಿಗಳು ಪಟಾಕಿಗಳನ್ನು (Firework) ಸಿಡಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Video Viral) ಆಗಿದೆ.

    ಉತ್ತರಪ್ರದೇಶದ ಗುರುಗ್ರಾಮದಲ್ಲಿ (Gurugram) ದೀಪಾವಳಿ ಆಚರಣೆ ವೇಳೆ ಅಪಾಯಕಾರಿಯಾಗಿ ಪಟಾಕಿಯನ್ನು ಸಿಡಿಸಿದ್ದಾರೆ. ಅಲ್ಲಿನ ಮೂವರು ನಿವಾಸಿಗಳು ಸೇರಿ ಕಾರನ್ನು ವೇಗವಾಗಿ ಚಲಿಸುತ್ತಿದ್ದರು. ಈ ವೇಳೆ ತಮ್ಮ ಕಾರಿನ ಮೇಲೆ ಪಟಾಕಿಯನ್ನು ಸಿಡಿಸಿದ್ದಾರೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

    ವೀಡಿಯೋದಲ್ಲಿ ಏನಿದೆ?: ಕಾರಿನ ಡಿಕ್ಕಿ ಮೇಲೆ ಪಟಾಕಿ ಪೆಟ್ಟಿಗೆಯೊಂದನ್ನು ಇಟ್ಟುಕೊಂಡು ಕಾರನ್ನು ಗುರುಗ್ರಾಮ್‍ನ ಬೀದಿಗಳಲ್ಲಿ ವೇಗವಾಗಿ ಚಲಿಸುತ್ತಿದ್ದಾರೆ. ಆ ಕಾರಿನ ಪಕ್ಕ ಇತರ ಕಾರುಗಳು ಚಲಿಸುತ್ತಿದೆ. ಆದರೂ ಚಾಲಕ ಹಾಗೂ ಕಾರಿನಲ್ಲಿದ್ದ ಇನ್ನಿಬ್ಬರೂ ಅದಕ್ಕೂ ಕೇರ್ ಮಾಡದೇ ಪಟಾಕಿಯನ್ನು ಸಿಡಿಸುತ್ತ ಹೋಗುತ್ತಿದ್ದಾರೆ. ವೈರಲ್ ಆದ ವೀಡಿಯೋದಲ್ಲಿ ಕಾರಿನ ಡಿಕ್ಕಿಯ ಮೇಲ್ಭಾಗದಿಂದ ಹಲವಾರು ಬಾರಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನೂ ಓದಿ: ಸ್ವಿಗ್ಗಿ ಡೆಲಿವರಿ ಬಾಯ್‍ಗೆ ಚಾಕುವಿನಿಂದ ಚುಚ್ಚಿ ಸುಲಿಗೆ

    ಘಟನೆಗೆ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೀಡಿಯೋ ವೈರಲ್ ಆಗುತ್ತಿದ್ದಂತೆ ಘಟನೆಗೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಪೂಜೆಗಾಗಿ ಅಡುಗೆ ಮಾಡುತ್ತಿದ್ದಾಗ ಗ್ಯಾಸ್ ಸಿಲಿಂಡರ್ ಸ್ಫೋಟ – ಹಲವರ ಸ್ಥಿತಿ ಗಂಭೀರ

    Live Tv
    [brid partner=56869869 player=32851 video=960834 autoplay=true]

  • ಬಸವಲಿಂಗ ಶ್ರೀ ವೀಡಿಯೋ ಕಾಲ್ ವೈರಲ್- ಮೂವರು ಮಹಿಳೆಯರ ಪ್ರತ್ಯೇಕ ವಿಚಾರಣೆ

    ಬಸವಲಿಂಗ ಶ್ರೀ ವೀಡಿಯೋ ಕಾಲ್ ವೈರಲ್- ಮೂವರು ಮಹಿಳೆಯರ ಪ್ರತ್ಯೇಕ ವಿಚಾರಣೆ

    ರಾಮನಗರ: ಮಾಗಡಿಯ (Magadi) ಬಂಡೆ ಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮಹಿಳೆಯೊಬ್ಬರ ಜೊತೆ ಸ್ವಾಮೀಜಿ ವೀಡಿಯೋ ಕಾಲ್ (Video Call) ಮಾಡಿ ಮಾತನಾಡಿದ್ದಾರೆ ಎನ್ನಲಾದ ವೀಡಿಯೋ ಈಗಾಗಲೇ ವೈರಲ್ (Video Viral) ಆಗಿದ್ದು, ಈ ವೀಡಿಯೋ ಆಧರಿಸಿ ಅನುಮಾನಿತ ಮೂವರು ಮಹಿಳೆಯರನ್ನು (Woman) ಪೊಲೀಸರು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

    ಬಂಡೆಮಠದ (Bande Mutt) ಬಸವಲಿಂಗ ಶ್ರೀಗಳ (Basavalinga Swamiji) ಆತ್ಮಹತ್ಯೆ ಪ್ರಕರಣ ಇದೀಗ ಮೇಜರ್ ಟ್ವಿಸ್ಟ್ ಪಡೆದುಕೊಂಡಿದೆ. ನಿನ್ನೆ ಶ್ರೀಗಳು ಬರೆದಿದ್ದಾರೆ ಎನ್ನಲಾದ ಡೆತ್‌ನೋಟ್‍ನ ಒಂದು ಪುಟ ವೈರಲ್ ಆದ ಬೆನ್ನಲ್ಲೆ ಇದೀಗ ಶ್ರೀಗಳ ವೀಡಿಯೋ ಕಾಲ್ ತುಣುಕೊಂದು ವೈರಲ್ ಆಗಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಮಹಿಳೆಯೊಬ್ಬಳ ಜೊತೆ ಸ್ವಾಮೀಜಿ ವೀಡಿಯೋ ಕಾಲ್‍ನಲ್ಲಿ ಮಾತನಾಡುತ್ತಿರುವ ವೀಡಿಯೋ ದೊರೆತಿದ್ದು, ಇದರ ಹಿಂದಿರುವ ಕಾಣದ ಕೈಗಳ ಹುಡುಕಾಟ ಶುರುವಾಗಿದೆ.

    ಆದರೆ ಸ್ವಾಮಿಗಳ ಆತ್ಮಹತ್ಯೆಗೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಸು ದಾಖಲಾಗಿದ್ದು, ಎಫ್‍ಐಆರ್‌ನಲ್ಲಿ ಅನಾಮಧೇಯ ಹೆಸರಿನಲ್ಲಿ 1 ಆರೋಪಿ ಎಂದು ಹೇಳಲಾಗಿದೆ. ಸ್ವಾಮೀಜಿಯ ಡೆತ್ ನೋಟ್‍ನಲ್ಲಿ ಹಲವರ ಹೆಸರು ಉಲ್ಲೇಖವಾಗಿದ್ದರೂ ಯಾರ ಹೆಸರೂ ಸಹ ಎಫ್‍ಐಆರ್‌ನಲ್ಲಿ ದಾಖಲಾಗದೆ ಇರೋದು ಪ್ರಕರಣ ಮುಚ್ಚಿಹಾಕುವ ಪ್ರಯತ್ನ ಮಾಡಲಾಗ್ತಿದ್ಯಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಇನ್ನು ಶ್ರೀಗಳನ್ನು ಖೆಡ್ಡಾಗೆ ಕೆಡವಲು 6 ತಿಂಗಳಿನಿಂದ ಕೆಲ ವ್ಯಕ್ತಿಗಳು ಕುತಂತ್ರ ಹೆಣೆಯಲಾಗಿತ್ತಂತೆ. ಮಹಿಳೆಯೊಂದಿಗೆ ಮಾತನಾಡುತ್ತಿದ್ದ ವೀಡಿಯೋ ಇರುವುದನ್ನು 1 ತಿಂಗಳ ಹಿಂದೆ ಶ್ರೀಗಳ ಗಮನಕ್ಕೆ ತರಲಾಗಿದ್ದು, ಈ ವಿಚಾರ ಗೊತ್ತಾಗುತ್ತಿದ್ದಂತೆ ಬಸವಲಿಂಗ ಸ್ವಾಮೀಜಿ ಖಿನ್ನತೆಗೆ ಒಳಗಾಗಿದ್ದರಂತೆ. ಸದ್ಯ ಶ್ರೀಗಳು ಬಳಸುತ್ತಿದ್ದ 2 ಮೊಬೈಲ್ ವಶಕ್ಕೆ ಪಡೆದಿರುವ ಪೊಲೀಸರು ಒಂದು ವರ್ಷದ ಕಾಲ್ ಡಿಟೇಲ್ಸ್ ತೆಗೆದು ತನಿಖೆ ನಡೆಸುತ್ತಿದ್ದಾರೆ.

    ಅಲ್ಲದೇ ಬಸವಲಿಂಗ ಸ್ವಾಮಿ ಶ್ರೀಗಳ ವೈರಲ್ ಆಗಿರುವ ವೀಡಿಯೋ ಆಧರಿಸಿ ಅನುಮಾನಿತ ಮೂವರು ಮಹಿಳೆಯರನ್ನು ಪೊಲೀಸರು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಪ್ರಕರಣ ಒಟ್ಟು 7 ಮಂದಿಯನ್ನು ಈಗಾಗಲೇ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮತ್ತೊಂದೆಡೆ ಬಸವಲಿಂಗ ಶ್ರೀಗಳ ಆರಾಧನಾ ಕಾರ್ಯಕ್ರಮ ನಡೆಸುವ ಸಂಬಂಧ ಇಂದು ಮಠದ ಆವರಣದಲ್ಲಿ ಲಿಂಗಾಯತ ಮುಖಂಡರು ಸಭೆ ನಡೆಸಿದ್ದಾರೆ. ನ. 3 ರಂದು ಶ್ರೀಗಳ 11ನೇ ದಿನದ ಪುಣ್ಯತಿಥಿ ನಡೆಯಲಿದ್ದು, ಕಾರ್ಯಕ್ರಮದ ಉಸ್ತುವಾರಿಯನ್ನು ಬೆಂಗಳೂರಿನ ಬಿನ್ನಿಮಿಲ್ ಗುರುವಣ್ಣದೇವರ ಮಠದ ಶ್ರೀ ನಂಜುಂಡ ಸ್ವಾಮೀಜಿಗೆ ವಹಿಸಲಾಗಿದೆ. ಪುಣ್ಯತಿಥಿ ಬಳಿಕ ಮಠದ ಮುಂದಿನ ಉತ್ತರಾಧಿಕಾರಿ ನೇಮಕ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಬಂಡೆಮಠ ಸ್ವಾಮೀಜಿ ಆತ್ಮಹತ್ಯೆಗೆ ಟ್ವಿಸ್ಟ್- ಮಹಿಳೆಯ ಜೊತೆಗಿನ ವೀಡಿಯೋ ಕಾಲ್ ವೈರಲ್

    ಒಟ್ಟಾರೆ ಷಡ್ಯಂತ್ರಕ್ಕೆ ಹೆದರಿ ಡೆತ್ ನೋಟ್ ಬರೆದು ಬಸವಲಿಂಗ ಶ್ರೀಗಳು ಸೂಸೈಡ್ ಮಾಡಿಕೊಂಡಿರೋದು ಬಹಿರಂಗವಾಗಿದೆ. ಶ್ರೀಗಳ ಡೆತ್‍ನೋಟ್ 2 ಮೊಬೈಲ್, ಬರವಣಿಗೆ ಸ್ಯಾಂಪಲ್ ಹಾಗೂ ಡೈರಿ ಜಪ್ತಿ ಮಾಡಿರುವ ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಆತ್ಮಹತ್ಯೆಗೆ ಸ್ಪಷ್ಟ ಕಾರಣ ಏನು ಎಂಬದನ್ನು ಬಯಲು ಮಾಡ್ತಾರಾ ಎಂದು ಕಾದು ನೋಡಬೇಕಿದೆ. ಇದನ್ನೂ ಓದಿ: ಬಂಡೆಮಠದ ಸ್ವಾಮೀಜಿಗೆ ಮಹಿಳೆಯಿಂದ ಬರುತ್ತಿತ್ತು ದೂರವಾಣಿ ಕರೆ- ಡೆತ್‍ನೋಟ್‍ನಲ್ಲಿ ರಹಸ್ಯ ಬಯಲು

    Live Tv
    [brid partner=56869869 player=32851 video=960834 autoplay=true]

  • ಬಂಡೆಮಠ ಸ್ವಾಮೀಜಿ ಆತ್ಮಹತ್ಯೆಗೆ ಟ್ವಿಸ್ಟ್- ಮಹಿಳೆಯ ಜೊತೆಗಿನ ವೀಡಿಯೋ ಕಾಲ್ ವೈರಲ್

    ಬಂಡೆಮಠ ಸ್ವಾಮೀಜಿ ಆತ್ಮಹತ್ಯೆಗೆ ಟ್ವಿಸ್ಟ್- ಮಹಿಳೆಯ ಜೊತೆಗಿನ ವೀಡಿಯೋ ಕಾಲ್ ವೈರಲ್

    ರಾಮನಗರ: ಮಾಗಡಿ (Magadi) ತಾಲೂಕಿನ ಕಂಚುಗಲ್ ಬಂಡೆಮಠದ ಬಸವಲಿಂಗ ಶ್ರೀ (Basavalinga Swamiji) ಆತ್ಮಹತ್ಯೆಗೆ ಟ್ವಿಸ್ಟ್ ದೊರೆತ್ತಿದ್ದು, ಸ್ವಾಮೀಜಿ, ಮಹಿಳೆಯೊಂದಿಗೆ (Woman) ವೀಡಿಯೋ ಕಾಲ್‍ನಲ್ಲಿ (Video Call) ಮಾತನಾಡುತ್ತಿದ್ದ ಅಶ್ಲೀಲ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Video Viral) ಆಗಿದೆ.

    ಮೂರು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ಬಂಡೆಮಠದ ಶ್ರೀಗಳ (Bande Mutt) ಸಾವಿನ ಸುತ್ತ ದಿನೇ ದಿನೇ ಹೊಸ ಸ್ಫೋಟಕ ವಿಷಯಗಳು ಬಯಲಾಗುತ್ತಿದೆ. ಅಷ್ಟೇ ಅಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಅವರು 2 ಪುಟಗಳ ಡೆತ್ ನೋಟ್ ಕೂಡಾ ಬರೆದಿದ್ದು, ಅದರಲ್ಲೂ ಹಲವರ ಹೆಸರನ್ನು ಬರೆದಿದ್ದು. ಆದರೆ ಪ್ರಕರಣಕ್ಕೆ ಸಂಬಂಧಿಸಿ ಕುದೂರು ಪೊಲೀಸರು ಅನಾಮಧೇಯನ ಹೆಸರಿನ ಮೇಲೆ ಎಫ್‍ಐಆರ್ ದಾಖಲಿಸಿಕೊಂಡಿದ್ದು ಹಲವಾರು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು.

    ಅದಾದ ಬಳಿಕ ಸ್ವಾಮೀಜಿ ಸಾವಿಗೆ ಬೆದರಿಕೆಯೇ ಕಾರಣನಾ ಎಂಬ ಅನುಮಾನಗಳು ಹೆಚ್ಚಾಗಿತ್ತು. ಏಕೆಂದರೆ ಸ್ವಾಮೀಜಿ ನೇಣಿಗೆ ಶರಣಾಗುವ ಮುನ್ನ ಶ್ರೀಗಳನ್ನು ಇಬ್ಬರು ವ್ಯಕ್ತಿಗಳು ಭೇಟಿ ಆಗಿದ್ದ ವಿಚಾರ ಬೆಳಕಿಗೆ ಬಂದಿತ್ತು. ಆದರೆ ಆ ಇಬ್ಬರು ವ್ಯಕ್ತಿಗಳು ಯಾರು ಎಂಬುದು ಇನ್ನೂ ಬಯಲಾಗಿಲ್ಲ. ಆದರೆ ದಿನ ಸುಮಾರು ಅರ್ಧಗಂಟೆಗೂ ಹೆಚ್ವು ಕಾಲ ಶ್ರೀಗಳ ಜೊತೆ ಗೌಪ್ಯ ಮಾತುಕತೆ ನಡೆದಿತ್ತು. ಅವರಿಬ್ಬರ ಭೇಟಿ ಬಳಿಕ ಶ್ರೀಗಳು ವಿಚಲಿತರಾಗಿದ್ರಾ? ಶ್ರೀಗಳನ್ನು ಭೇಟಿ ಮಾಡಿದ್ದಾ ಆ ಇಬ್ಬರು ವ್ಯಕ್ತಿಗಳು ಯಾರು ಎಂಬ ಪ್ರಶ್ನೆಗಳು ಮೂಡಿತ್ತು. ಇದನ್ನೂ ಓದಿ: ಬಂಡೆಮಠದ ಸ್ವಾಮೀಜಿಗೆ ಮಹಿಳೆಯಿಂದ ಬರುತ್ತಿತ್ತು ದೂರವಾಣಿ ಕರೆ- ಡೆತ್‍ನೋಟ್‍ನಲ್ಲಿ ರಹಸ್ಯ ಬಯಲು

    ಅದಾದ ಬಳಿಕ ಸ್ವಾಮೀಜಿಯನ್ನು ಹನಿಟ್ರ್ಯಾಪ್ ಮಾಡಲಾಗಿತ್ತು ಎಂಬ ವಿಷಯ ಹರಡಿತ್ತು. ಅದಕ್ಕೆ ಪುಷ್ಠಿ ನೀಡುವಂತೆ ಸ್ವಾಮೀಜಿ ಡೆತ್‍ನೋಟ್‍ನಲ್ಲೂ ತಿಳಿಸಿದ್ದರು. ಇದೀಗ ಅದೆಲ್ಲದಕ್ಕೂ ಪುಷ್ಠಿ ನೀಡುವ ಸಾಕ್ಷ್ಯ ದೊರೆತ್ತಿದ್ದು, ಸ್ವಾಮೀಜಿ, ಮಹಿಳೆ ಜೊತೆ ವೀಡಿಯೋ ಕಾಲ್‍ನಲ್ಲಿ ಮಾತುಕತೆ ನಡೆಸುತ್ತಿದ್ದ ವೀಡಿಯೋವೊಂದು ವೈರಲ್ ಆಗುತ್ತಿದೆ. ಅಷ್ಟೇ ಅಲ್ಲದೇ ಕಳೆದ 6 ತಿಂಗಳಿಂದ ಆ ಮಹಿಳೆಯ ಸಂಪರ್ಕದಲ್ಲಿ ಸ್ವಾಮೀಜಿ ಇದ್ದರು. ಅಷ್ಟೇ ಅಲ್ಲದೇ ಗೊತ್ತಿಲ್ಲದ ಮಹಿಳೆ ಜೊತೆ ಶ್ರೀಗಳು ಚಾಟಿಂಗ್ ಮಾಡುತ್ತಿದ್ದರು ಎಂಬ ವಿಷಯ ಬಯಲಾಗಿದೆ. ಇದನ್ನೂ ಓದಿ: ಹನಿಟ್ರ‍್ಯಾಪ್‌ಗೆ ಬಲಿಯಾದ್ರಾ ಬಂಡೇ ಮಠದ ಬಸವಲಿಂಗ ಶ್ರೀ?

    Live Tv
    [brid partner=56869869 player=32851 video=960834 autoplay=true]

  • ದೇವರ ತಲೆ ಮೇಲೆ ಕಾಲಿಟ್ಟು ಪೂಜೆ ಮಾಡಿದ ಅರ್ಚಕ – ಸಾರ್ವಜನಿಕ ವಲಯದಲ್ಲಿ ಆಕ್ರೋಶ

    ದೇವರ ತಲೆ ಮೇಲೆ ಕಾಲಿಟ್ಟು ಪೂಜೆ ಮಾಡಿದ ಅರ್ಚಕ – ಸಾರ್ವಜನಿಕ ವಲಯದಲ್ಲಿ ಆಕ್ರೋಶ

    ದಾವಣಗೆರೆ: ದೇವರನ್ನು ಒಲಿಸಿಕೊಳ್ಳಲು ನಾನಾ ರೀತಿಯ ಪೂಜೆ ಮಾಡುವುದನ್ನು ನಾವು ನೋಡೇ ಇರುತ್ತೇವೆ. ಆದರೆ ಇಲ್ಲೊಬ್ಬ ಬೇಡರ ಕಣ್ಣಪ್ಪನ ರೀತಿಯಲ್ಲಿ ದೇವರ ಮೂರ್ತಿ ಮೇಲೆ ಕಾಲಿಟ್ಟು ತನ್ನ ಭಕ್ತಿಯನ್ನು ಸಮರ್ಪಿಸಿದ ಹಾಗೇ ಪೂಜಾರಿಯೊಬ್ಬ (Priest) ಆಂಜನೇಯನ (Anjaneya) ಮೂರ್ತಿ ಮೇಲೆ ಕಾಲಿಟ್ಟು ಅಭಿಷೇಕ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ದಾವಣಗೆರೆ (Davanagere) ಜಿಲ್ಲೆಯಲ್ಲಿ ಇಂತಹ ವಿಚಿತ್ರ ಅರ್ಚಕನೋರ್ವ ದೇವರ ತಲೆ ಮೇಲೆ ಕಾಲಿಟ್ಟು ಪೂಜೆ ಮಾಡುವ ವಿಚಿತ್ರ ಆಚರಣೆ ಮಾಡಲಾಗಿದೆ. ಇನ್ನೂ ಈ ವೀಡಿಯೋ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ಆರ್ಚಕನ ವರ್ತನೆಯಿಂದ ಶ್ರೀರಾಮ ದೂತನ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ದೀಪೋತ್ಸವಕ್ಕೆ ಮೋದಿ ಚಾಲನೆ – ರಾಮ ಜನ್ಮಭೂಮಿಯಲ್ಲಿ ಬೆಳಗಿದವು 18 ಲಕ್ಷ ದೀಪ

    ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇದೇ ಗ್ರಾಮದ ಮಹೇಶ್ವರಯ್ಯ ಎಂಬ ಅರ್ಚಕ ವಿಚಿತ್ರ ಪೂಜೆ ನಡೆಸಿದ್ದಾನೆ. ಕತ್ತಿಗೆ ಗ್ರಾಮದ ಆಂಜನೇಯ ಸ್ವಾಮಿ ಮೂರ್ತಿಯ ಮೇಲೆ ಕಾಲಿಟ್ಟು ಪೂಜೆ ಮಾಡಿದ ಅರ್ಚಕನ ವಿರುದ್ಧ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಬೇಡರ ಕಣ್ಣಪ್ಪ ಶಿವನಿಗೆ ಒಂದು ಕಣ್ಣು ದಾನ ಕೊಟ್ಟು ಇನ್ನೊಂದು ಕಣ್ಣು ಕೊಡಲು ಶಿವಲಿಂಗದ ಮೇಲೆ ಕಾಲಿಡುವ ಮಾದರಿಯಲ್ಲಿ ಅರ್ಚಕ ಮಹೇಶ್ವರಯ್ಯ ಆಂಜನೇಯ ಸ್ವಾಮೀ ತಲೆ ಮೇಲೆ ಕಾಲಿಟ್ಟು ಮೂರ್ತಿಯನ್ನು ಶುದ್ಧ ಮಾಡುತ್ತಿರುವ ವೀಡಿಯೋ ವೈರಲ್ ಆಗಿದೆ. ಇದರಿಂದ ಅರ್ಚಕ ಮಹೇಶ್ವರಯ್ಯನ ವಿರುದ್ಧ ಸ್ವಗ್ರಾಮದವರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಸ್ಥಳೀಯರಿಂದ ತಿಳಿದುಬಂದಿದೆ. ಇದನ್ನೂ ಓದಿ: ಪೊಲೀಸರ ಮನೆಗೇ ಕನ್ನ ಹಾಕಿದ ಕಳ್ಳರು – ಚಿನ್ನ, ಹಣ, ಪೆಟ್ರೋಲ್‌ ಕಳ್ಳತನ

    Live Tv
    [brid partner=56869869 player=32851 video=960834 autoplay=true]

  • ಮುಸ್ಲಿಂ ಯುವಕರಿಗೆ ಹಿಂದೂ ವ್ಯಕ್ತಿಯಿಂದ ಹನುಮಾನ್ ಚಾಲೀಸಾ ಬೋಧನೆ

    ಮುಸ್ಲಿಂ ಯುವಕರಿಗೆ ಹಿಂದೂ ವ್ಯಕ್ತಿಯಿಂದ ಹನುಮಾನ್ ಚಾಲೀಸಾ ಬೋಧನೆ

    ನವದೆಹಲಿ: ಹಿಂದೂ ವ್ಯಕ್ತಿಯೊಬ್ಬ ಮುಸ್ಲಿಮರಿಗೆ ಹನುಮಾನ್ ಚಾಲೀಸಾ (Hanuman Chalisa) ಕಲಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಉತ್ತರ ಪ್ರದೇಶದ (Uttar Pradesh) ಅಲಿಗಢದ ಸಚಿನ್ ಶರ್ಮಾ ಹನುಮಾನ್ ಚಾಲೀಸಾವನ್ನು ಓದುತ್ತಿರುವ ಯುವಕ. ಈತ ವೀಡಿಯೋದಲ್ಲಿ ಹನುಮಂತ ದೇವಸ್ಥಾನದಲ್ಲಿ (Temple) ಕೇಸರಿ ಶಾಲನ್ನು ಧರಿಸಿ ಹನುಮಾನ್ ಚಾಲೀಸಾವನ್ನು ಪಠಿಸುತ್ತಿದ್ದಾನೆ. ಆತನ ಪಕ್ಕ ಮುಸಲ್ಮಾನ್ ಯುವಕರ ಗುಂಪೊಂದು ಕುಳಿತಿದ್ದು, ಅವರು ಹನುಮಾನ್ ಚಾಲೀಸಾವನ್ನು ಕೇಳುತ್ತಿದ್ದಾರೆ.

    ಸಚಿನ್ ಶರ್ಮಾ ಅಲಿಗಢದಲ್ಲಿ ಅಖಿಲ ಭಾರತ ಹಿಂದೂ ಸೇನೆಯ ಜಿಲ್ಲಾಧ್ಯಕ್ಷರಾಗಿ ಗುರುತಿಸಿಕೊಂಡಿದ್ದಾನೆ. ಈ ವೀಡಿಯೋ ಬಗ್ಗೆ ಸಚಿನ್ ಶರ್ಮಾ ಮಾತನಾಡಿ, ನಾನು ಹನುಮಾನ್ ಚಾಲೀಸಾವನ್ನು ಕಲಿಸಿದ ಪಾಠಗಳನ್ನು ಇತರ ಸಮುದಾಯದ ಜನರಿಗೆ ತಿಳಿಸಿ ಸನಾತನ ಧರ್ಮದ ಬಗ್ಗೆ ಅರಿವು ಮೂಡಿಸಲು ಈ ರೀತಿ ಮಾಡಿರುವುದಾಗಿ ತಿಳಿಸಿದ್ದಾನೆ. ಇದನ್ನೂ ಓದಿ: ಪಾಕಿಸ್ತಾನದ ಕಿರುಕುಳ, ತಾರತಮ್ಯಕ್ಕೆ ಬೇಸತ್ತು ಭಾರತಕ್ಕೆ ಬಂದ 100 ಹಿಂದೂಗಳು

    ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಮುಸ್ಲಿಂ ಧಾರ್ಮಿಕ ಬೋಧಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಹನುಮಾನ್ ಚಾಲೀಸಾ ಓದುವುದು ಸಮಸ್ಯೆಯಲ್ಲ. ಆದರೆ ಇತರ ಸಮುದಾಯಗಳ ಸದಸ್ಯರ ಮೇಲೆ ಹೇರುವುದು ಅಸಾಂವಿಧಾನಿಕ ಎಂದು ಕಿಡಿಕಾರಿದ್ದಾರೆ. ಇಗ್ಲಾಸ್ ಪೊಲೀಸ್ ಠಾಣೆ ವ್ಯಾಪ್ತಿಯ ಹಸ್ತಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಪಾಕಿಸ್ತಾನ ಅಪಾಯಕಾರಿ ಅಲ್ಲ, ಜವಾಬ್ದಾರಿಯುತ ರಾಷ್ಟ್ರ: ಶೆಹಬಾಜ್ ಷರೀಫ್

    Live Tv
    [brid partner=56869869 player=32851 video=960834 autoplay=true]

  • ಚೆನ್ನೈನ ಬೀದಿಬದಿಯಲ್ಲಿ ತರಕಾರಿ ಖರೀದಿಸಿದ ನಿರ್ಮಲಾ ಸೀತಾರಾಮನ್ – ವೀಡಿಯೋ ವೈರಲ್

    ಚೆನ್ನೈನ ಬೀದಿಬದಿಯಲ್ಲಿ ತರಕಾರಿ ಖರೀದಿಸಿದ ನಿರ್ಮಲಾ ಸೀತಾರಾಮನ್ – ವೀಡಿಯೋ ವೈರಲ್

    ಚೆನ್ನೈ: ತಮಿಳುನಾಡಿನ (Tamil Nadu) ಚೆನ್ನೈನ (Chennai) ಮೈಲಾಪುರ (Mylapore) ಪ್ರದೇಶದಲ್ಲಿ ರಸ್ತೆಬದಿಯ ವ್ಯಾಪಾರಿಗಳಿಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಶನಿವಾರ ತರಕಾರಿಗಳನ್ನು ಖರೀದಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಈ ವೀಡಿಯೋವನ್ನು ನಿರ್ಮಲಾ ಸೀತಾರಾಮನ್ ಅವರ ಕಚೇರಿ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ವೀಡಿಯೋದಲ್ಲಿ ತಮಿಳುನಾಡಿನ ಚೆನ್ನೈನ ಮೈಲಾಪುರ ಪ್ರದೇಶದ ಬೀದಿಬದಿ ವ್ಯಾಪಾರಿಗಳೊಂದಿಗೆ ಸಂವಾದ ನಡೆಸುತ್ತಾ ತರಕಾರಿಗಳನ್ನು ಖರೀದಿಸಿರುವುದನ್ನು ಕಾಣಬಹುದಾಗಿದೆ. ಮೊದಲಿಗೆ ಕೆಲವು ಗೆಣಸುಗಳನ್ನು ಆಯ್ದುಕೊಳ್ಳತ್ತಾರೆ, ಬಳಿಕ ಅದನು ಬಿಟ್ಟು ಹಾಗಲಕಾಯಿಯನ್ನು ಆಯ್ದು ತೂಕ ಮಾಡಿಸಿಕೊಂಡು ಖರೀದಿಸಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರದಲ್ಲಿ ನಡುವೆ ತರಕಾರಿ ಬೆಲೆಯಲ್ಲಿ ಕೂಡ ಗಗನಕ್ಕೇರಿದೆ. ಇದನ್ನೂ ಓದಿ: ಡಿಎಂಕೆ ಅಧ್ಯಕ್ಷರಾಗಿ 2ನೇ ಬಾರಿಗೆ ಎಂ.ಕೆ.ಸ್ಟಾಲಿನ್ ಅವಿರೋಧವಾಗಿ ಆಯ್ಕೆ

    ಸದ್ಯ ವೀಡಿಯೋಗೆ ಟ್ವಿಟ್ಟರ್ ಬಳಕೆದಾರರೊಬ್ಬರು, ವ್ಯಾಪಾರಿಗಳು ಮತ್ತು ಗ್ರಾಹಕರು ಹಣದುಬ್ಬರದಿಂದ ಹೇಗೆ ಉಳಿತಾಯ ಮಾಡಬಹುದು ಮತ್ತು ಬೆಲೆ ಏರಿಕೆಯನ್ನು ನಿಯಂತ್ರಣಕ್ಕೆ ತರಲು ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳಬಹುದು ಎಂದು ತಿಳಿದುಕೊಳ್ಳುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಕಾಂಡೋಮ್‍ಗಳನ್ನು ಹೆಚ್ಚಾಗಿ ಬಳಸ್ತಿರೋದು ನಾವು – ಭಾಗವತ್‍ಗೆ ಓವೈಸಿ ತಿರುಗೇಟು

    Live Tv
    [brid partner=56869869 player=32851 video=960834 autoplay=true]

  • ಸೇತುವೆ ನೆಲಸಮ ಮಾಡುವಾಗ ನದಿಗೆ ಬಿದ್ದ ಜೆಸಿಬಿ- ಪ್ರಾಣಾಪಾಯದಿಂದ ಚಾಲಕ ಪಾರು

    ಸೇತುವೆ ನೆಲಸಮ ಮಾಡುವಾಗ ನದಿಗೆ ಬಿದ್ದ ಜೆಸಿಬಿ- ಪ್ರಾಣಾಪಾಯದಿಂದ ಚಾಲಕ ಪಾರು

    ಲಕ್ನೋ: ಗಂಗಾ ನದಿಯ (River) ಮೇಲಿದ್ದ ಸೇತುವೆಯೊಂದನ್ನು (Bridge) ನೆಲಸಮ ಮಾಡುವಾಗ ಜೆಸಿಬಿ (JCB) ನೀರಿಗೆ ಬಿದ್ದು, ಚಾಲಕ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.

    ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಜನಸತ್ ಪ್ರದೇಶದಲ್ಲಿರುವ ಶಿಥಿಲಗೊಂಡ ಸೇತುವೆಯನ್ನು ಕೆಡಗುವಾಗ ಜೆಸಿಬಿ ನದಿಗೆ ಬಿದ್ದಿದೆ.

    ವೀಡಿಯೋದಲ್ಲಿ ಏನಿದೆ?: ಮುಜಾಫರ್‌ನಗರದ ಕಿರಿದಾದ ಸೇತುವೆಯಲ್ಲಿ ಬುಲ್ಡೋಜರ್ ನಿಂತಿರುವುದನ್ನು ನೋಡಬಹುದಾಗಿದೆ. ಜೆಸಿಬಿ ಯಂತ್ರವು ಹಳೆಯ ಸೇತುವೆಯನ್ನು ಕೆಡವಲು ಪ್ರಯತ್ನಿಸಿದಾಗ ಇದ್ದಕ್ಕಿದ್ದಂತೆ ಸೇತುವೆಯು ಪೂರ್ಣವಾಗಿ ಮುರಿದ್ದು ಬಿದ್ದಿದ್ದು, ಸೇತುವೆಯ ಮೇಲೆ ಇದ್ದ ಜೆಸಿಬಿಯು ನದಿಯೊಳಗೆ ಮುಳುಗಿದೆ. ಘಟನೆಯಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇದನ್ನೂ ಓದಿ: ಟೂರಿಸ್ಟ್ ಟೆಂಪೋ ಕಂದಕಕ್ಕೆ ಬಿದ್ದು 7 ವಿದ್ಯಾರ್ಥಿಗಳ ದುರ್ಮರಣ, 10 ಮಂದಿಗೆ ಗಾಯ

    ನೀರಿನಲ್ಲಿ ಕುಸಿದು ಬಿದ್ದ ಸೇತುವೆ 100 ವರ್ಷಗಳಷ್ಟು ಹಳೆಯದ್ದಾಗಿದೆ. ಕಾಲುವೆಯ ಉದ್ದಕ್ಕೂ ಪಾಣಿಪತ್-ಖತಿಮಾ ಹೆದ್ದಾರಿಯನ್ನು ವಿಸ್ತರಿಸುವ ಯೋಜನೆಯ ಭಾಗವಾಗಿ ನೆಲಸಮ ಕಾರ್ಯವನ್ನು ನಡೆಸಲಾಯಿತು. ಇದನ್ನೂ ಓದಿ: ಐಸಿಸ್ ಜೊತೆ ಸಂಪರ್ಕದ ಶಂಕೆ, ಮತ್ತೊಬ್ಬನ ಬಂಧನ – ಗಂಗಾವತಿಯಲ್ಲಿ ಖಾಕಿ ಕಣ್ಗಾವಲು

    Live Tv
    [brid partner=56869869 player=32851 video=960834 autoplay=true]

  • ಮ್ಯಾನೇಜರ್ ನಂಬರ್ ಕೇಳಿದ್ದೆ ತಪ್ಪಾ? – ಬಟ್ಟೆ ಚಿಂದಿಯಾಗುವಂತೆ ವ್ಯಕ್ತಿಗೆ ಹೊಡೆದ್ರು ಮಹಿಳೆಯರು

    ಮ್ಯಾನೇಜರ್ ನಂಬರ್ ಕೇಳಿದ್ದೆ ತಪ್ಪಾ? – ಬಟ್ಟೆ ಚಿಂದಿಯಾಗುವಂತೆ ವ್ಯಕ್ತಿಗೆ ಹೊಡೆದ್ರು ಮಹಿಳೆಯರು

    ಭೋಪಾಲ್: ಮಹಿಳೆಯರ ಗುಂಪೊಂದು ನಡುರಸ್ತೆಯಲ್ಲಿ ವ್ಯಕ್ತಿಯೊಬ್ಬನಿಗೆ ಬಟ್ಟೆ ಹರಿದು ಹೋಗುವಂತೆ ನಿರ್ದಯವಾಗಿ ಥಳಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಭಾನುವಾರ ರಾಯಪುರದ ಸ್ವಾಮಿ ವಿವೇಕಾನಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Raipur’s Swami Vivekananda International Airport) ವ್ಯಕ್ತಿಯೊಬ್ಬರು ಈ ವೀಡಿಯೋವನ್ನು ಸೆರೆಹಿಡಿದಿದ್ದು, ವೀಡಿಯೋದಲ್ಲಿ ರೊಚ್ಚಿಗೆದ್ದ ಮಹಿಳೆಯರು ಬೆಲ್ಟ್‌ನಿಂದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸುತ್ತಿರುವುದು ಮತ್ತು ಹಣದ ವಿಚಾರವಾಗಿ ಪದೇ, ಪದೇ ಕಪಾಳಮೋಕ್ಷ ಮಾಡಿ, ಗುದ್ದುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ವ್ಯಕ್ತಿ ಧರಿಡಿದ್ದ ಶರ್ಟ್ ಕಿತ್ತುಹೋಗುವಂತೆ ಹೊಡೆದಿದ್ದಾರೆ.

    ಈ ಘಟನೆ ಸಂಬಂಧ ಎರಡೂ ಕಡೆಯವರು ರಾಯ್‍ಪುರ ನಗರದ ಮನ ಪೊಲೀಸ್ ಠಾಣೆಯಲ್ಲಿ (Mana police Station in Raipur city) ಪ್ರಕರಣ ದಾಖಲಿಸಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ರಾಹುಲ್ ಟ್ರಾವೆಲ್ಸ್ (Rahul Travels) ಎಂಬ ಟ್ರಾವೆಲ್ ಕಂಪನಿಯ ಆಟೋ ಟ್ಯಾಕ್ಸಿ ಚಾಲಕ (Auto Taxi Driver) ದಿನೇಶ್ (Dinesh) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ರಸ್ತೆಗಾಗಿ ದಶಕಗಳಿಂದ ಹೋರಾಟ – ಆಸ್ಪತ್ರೆಗೆ ದಾಖಲಿಸಲು ವದ್ಧೆಯನ್ನು ಜೋಳಿಗೆಯಲ್ಲೇ ಹೊತ್ತೊಯ್ದರು

    ತಾನು ಟ್ರಾವೆಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಆದರೆ ಈ ವರ್ಷ ಮೇ ಮತ್ತು ಜೂನ್ ತಿಂಗಳ ಸಂಬಳವನ್ನೇ ಪಡೆದಿರಲಿಲ್ಲ. ಹೀಗಾಗಿ ಬಾಕಿ ಹಣವನ್ನು ವಸೂಲಿ ಮಾಡಲು ಕಚೇರಿಗೆ ಬಂದಾಗ, ಮಹಿಳಾ ಉದ್ಯೋಗಿಗಳು ತನ್ನೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದರು ಮತ್ತು ಜಗಳವಾಡಿದರು. ಮ್ಯಾನೇಜರ್‌ನ ನಂಬರ್ ಕೇಳಿದಾಗ, ಮಹಿಳೆಯರ ಗುಂಪು ತನ್ನನ್ನು ಥಳಿಸಿ ನಿಂದಿಸಲು ಪ್ರಾರಂಭಿಸಿದರು ಎಂದು ದಿನೇಶ್  ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

    ಜೊತೆಗೆ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಆಟೋ ಚಾಲಕನಿಗೆ ಜಾಕ್‌ಪಟ್‌ – ಓಣಂ ಬಂಪರ್‌ ಲಾಟರಿಯಲ್ಲಿ 25 ಕೋಟಿ ಗೆದ್ದ

    Live Tv
    [brid partner=56869869 player=32851 video=960834 autoplay=true]

  • ಇನ್ಮುಂದೆ ತಪ್ಪು ಮಾಡಲ್ಲ ಪ್ರಾಮಿಸ್ – ಟೀಚರ್‌ನ ಮುದ್ದಾಡಿದ ಪುಟ್ಟ ಬಾಲಕ

    ಇನ್ಮುಂದೆ ತಪ್ಪು ಮಾಡಲ್ಲ ಪ್ರಾಮಿಸ್ – ಟೀಚರ್‌ನ ಮುದ್ದಾಡಿದ ಪುಟ್ಟ ಬಾಲಕ

    ರಗತಿಯಲ್ಲಿ ಸದಾ ಚೇಷ್ಟೆ ಮತ್ತು ತುಂಟತನದಿಂದ ಗಲಾಟೆ ಮಾಡುತ್ತಿದ್ದ ಪುಟ್ಟ ಬಾಲಕನೋರ್ವ ತನ್ನ ಶಿಕ್ಷಕಿಗೆ ಕ್ಷಮೆ ಕೇಳಿದ ಪರಿಯ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    ಸೋಮವಾರ ಈ ವೀಡಿಯೋವನ್ನು ಟ್ವಿಟ್ಟರ್ ಬಳಕೆದಾರರೊಬ್ಬರು ಶೇರ್ ಮಾಡಿಕೊಂಡಿದ್ದು, ಕೋಪಗೊಂಡಿದ್ದ ಶಿಕ್ಷಕಿಯನ್ನು ಪದೇ, ಪದೇ ಕ್ಷಮೆ ಕೇಳುತ್ತಾ ಬಾಲಕ ಸಮಾಧಾನ ಪಡಿಸುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: 100 ಕಿಲೋಮೀಟರ್ ಕ್ರಮಿಸಿದ ಭಾರತ್ ಜೋಡೋ ಯಾತ್ರೆ – 7ನೇ ದಿನ ಮುಂದುವರಿದ ರಾಗಾ ಪಾದಯಾತ್ರೆ

    ವೀಡಿಯೋದಲ್ಲಿ ಕುರ್ಚಿ ಮೇಲೆ ಕುಳಿತಿದ್ದ ಶಿಕ್ಷಕಿಗೆ ನಿರಂತರವಾಗಿ ಬಾಲಕ ಕ್ಷಮೆ ಕೇಳುತ್ತಾ, ಮತ್ತೆ ಇಂತಹ ತಪ್ಪನ್ನು ಮಾಡುವುದಿಲ್ಲ, ಪ್ರಾಮಿಸ್ ಎಂದು ಭರವಸೆ ನೀಡುತ್ತಾನೆ. ನೀನು ತಪ್ಪನ್ನು ಮಾಡುವುದಿಲ್ಲ ಎನ್ನುತ್ತೀಯಾ ಮತ್ತೆ ಮಾಡುತ್ತೀಯಾ. ಹೋಗು ನಾನು ನಿನ್ನ ಜೊತೆ ಮಾತನಾಡುವುದಿಲ್ಲ. ಈ ಹಿಂದೆಯೂ ಮತ್ತೆ ತಪ್ಪು ಮಾಡುವುದಿಲ್ಲ ಎಂದು ಹೇಳಿದ್ದೆ. ಆದರೆ ಮತ್ತೆ ಮಾಡುತ್ತೀಯಾ ಎಂದು ಶಿಕ್ಷಕಿ ಹೇಳಿದಾಗ ಆಕೆಯನ್ನು ತಬ್ಬಿ, ಕೆನ್ನೆಗೆ ಅನೇಕ ಬಾರಿ ಚುಂಬಿಸಿ ಸಮಾಧಾನ ಪಡಿಸಿ, ಇಲ್ಲ, ಇಲ್ಲ ಪ್ರಾಮಿಸ್ ಮತ್ತೆ ತಪ್ಪು ಮಾಡುವುದಿಲ್ಲ ಎನ್ನುತ್ತಾ ಶಿಕ್ಷಕಿಯನ್ನು ಮುದ್ದಾಡಿ ತಾನೂ ಕೂಡ ಅದೇ ಪ್ರೀತಿಯನ್ನು ಮರಳಿ ಪಡೆಯಲು ಪ್ರಯತ್ನಿಸುವುದನ್ನು ನೋಡಬಹುದಾಗಿದೆ.

    ಕೊನೆಗೂ ಚುಂಬಿಸಿ ಶಿಕ್ಷಕಿಯ ಮನವೊಲಿಸಿದ ಪುಟ್ಟ ಬಾಲಕನ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು, ಸುಮಾರು 282,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಜೊತೆಗೆ 16,000ಕ್ಕೂ ಅಧಿಕ ಲೈಕ್ಸ್ ಮತ್ತು ಕಾಮೆಂಟ್‍ಗಳ ಸುರಿಮಳೆಯೇ ಹರಿದು ಬರುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಅಕ್ರಮ ಮರಳು ಸಾಗಣೆ- ಟೋಲ್ ಗೇಟನ್ನು ಮುರಿದ 13 ಟ್ರ್ಯಾಕ್ಟರ್‌ಗಳು

    ಅಕ್ರಮ ಮರಳು ಸಾಗಣೆ- ಟೋಲ್ ಗೇಟನ್ನು ಮುರಿದ 13 ಟ್ರ್ಯಾಕ್ಟರ್‌ಗಳು

    ಲಕ್ನೋ: ವೇಗವಾಗಿ ಬಂದ 13 ಮರಳು ತುಂಬಿದ ಟ್ರ್ಯಾಕ್ಟರ್‌ಗಳು ಉತ್ತರ ಪ್ರದೇಶದ ಆಗ್ರಾದ ಟೋಲ್ ಗೇಟ್‍ನ್ನು ಮುರಿದ ಘಟನೆ ನಡೆದಿದೆ.

    ಈ 13 ಟ್ರ್ಯಾಕ್ಟರ್‌ಗಳಿಗೆ ಅಕ್ರಮ ಮರಳನ್ನು ತುಂಬಲಾಗಿತ್ತು. ಇದರಿಂದಾಗಿ ಟ್ರ್ಯಾಕ್ಟರ್‌ನಲ್ಲಿದ್ದ ಚಾಲಕರು ಟೋಲ್ ಟ್ಯಾಕ್ಸ್ ಅನ್ನು ಪಾವತಿಸಲು ನಿಲ್ಲಿಸದೇ, ಆ ಗೇಟ್‍ನ್ನೇ ಮುರಿದುಕೊಂಡು ಹೋಗಿದ್ದಾರೆ. ಟ್ರ್ಯಾಕ್ಟರ್‌ಗಳು ಅತಿವೇಗದಲ್ಲಿ ಹಾದು ಹೋಗುವುದರಿಂದ ಗೇಟ್ ಮುರಿದಿದೆ. ಟೋಲ್ ಟ್ಯಾಕ್ಸ್ ಸಿಬ್ಬಂದಿ ಲಾಠಿ ಬೀಸಿ ವಾಹನಗಳನ್ನು ನಿಲ್ಲಿಸಲು ಪ್ರಯತ್ನಿಸಿದರೂ ಆ 13 ಟ್ರ್ಯಾಕ್ಟರ್ ನಿಲ್ಲಲಿಲ್ಲ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವೈರಲ್ ಆಗುತ್ತಿರುವ ಈ ವೀಡಿಯೋ 53 ಸೆಕೆಂಡ್‍ಗಳಿವೆ. ಈ ವೀಡಿಯೋವನ್ನು ಹಂಚಿಕೊಂಡ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದು, ಬಿಜೆಪಿಯ ಡಬಲ್ ಇಂಜಿನ್‍ನ ಸರ್ಕಾರ ಮರಳು ಮಾಫಿಯಾದಲ್ಲಿ ಧೈರ್ಯವನ್ನು ತೋರಿಸುತ್ತಿವೆ. ಬಿಜೆಪಿಯ ಅಡೆತಡೆಗಳು ಅವುಗಳಂತೆಯೇ ನಕಲಿಯಾಗಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ತಮ್ಮ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಅಂತ ಚಾಮುಂಡೇಶ್ವರಿ ಮೇಲೆ ಆಣೆ ಮಾಡಲಿ – ಸಿದ್ದರಾಮಯ್ಯಗೆ ಈಶ್ವರಪ್ಪ ಸವಾಲ್

    ಘಟನೆಗೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಟ್ರ್ಯಾಕ್ಟರ್‌ನ ಕೆಲವು ಚಾಲಕನ್ನು ಬಂಧಿಸಿದ್ದಾರೆ. ಆರೋಪಿಗಳೆಲ್ಲರೂ ಧೋಲ್‍ಪುರ್(ರಾಜಸ್ಥಾನ)ಕ್ಕೆ ಸೇರಿದವರಾಗಿದ್ದಾರೆ. ಇದನ್ನೂ ಓದಿ: ಗಣೇಶಮೂರ್ತಿ ಸ್ಥಾಪಿಸಿದ ಬಿಜೆಪಿ ನಾಯಕಿ ರೂಬಿಖಾನ್‌ಗೆ ಮುಸ್ಲಿಂ ಧರ್ಮಗುರುಗಳಿಂದ ಕೊಲೆ ಬೆದರಿಕೆ

    Live Tv
    [brid partner=56869869 player=32851 video=960834 autoplay=true]