Tag: ವೀಡಿಯೋ ಕಾಲ್

  • ಅಪರಿಚಿತೆಯ ಮಾತುಕೇಳಿ ವೀಡಿಯೋ ಕಾಲ್‍ನಲ್ಲಿ ನಗ್ನವಾಗಿ ಲಕ್ಷಾಂತರ ರೂ. ಕಳೆದುಕೊಂಡ!

    ಅಪರಿಚಿತೆಯ ಮಾತುಕೇಳಿ ವೀಡಿಯೋ ಕಾಲ್‍ನಲ್ಲಿ ನಗ್ನವಾಗಿ ಲಕ್ಷಾಂತರ ರೂ. ಕಳೆದುಕೊಂಡ!

    ಹುಬ್ಬಳ್ಳಿ: ಅಪರಿಚಿತ ಯುವತಿಯರನ್ನು ನಂಬಿ ವೀಡಿಯೋ ಕಾಲ್‍ನಲ್ಲಿ ನಗ್ನವಾಗುವ ಯುವಕರಿಗೆ ಪೊಲೀಸ್ (Police) ಇಲಾಖೆ ಎಷ್ಟೇ ಜಾಗೃತಿ ಮೂಡಿಸಿದರೂ, ವಂಚನೆ ಮಾತ್ರ ನಿಲ್ಲುತ್ತಿಲ್ಲ. ಅಪರಿಚಿತ ಯುವತಿಯೊಬ್ಬಳ ಮಾತುಕೇಳಿ ಯುವಕನೊಬ್ಬ ವೀಡಿಯೋ ಕಾಲ್‍ನಲ್ಲಿ ನಗ್ನವಾಗಿ 2.40 ಲಕ್ಷ ರೂ. ಕಳೆದುಕೊಂಡ ಪ್ರಕರಣ ಹುಬ್ಬಳ್ಳಿಯಲ್ಲಿ (Hubballi) ನಡೆದಿದೆ.

    ನಗರದ ದತ್ತಾತ್ರೇಯ ಎಂಬಾತ ಹಣ ಕಳೆದುಕೊಂಡ ಯುವಕನಾಗಿದ್ದಾನೆ. ಆತನಿಗೆ ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬಳು ಪರಿಚಯವಾಗಿದ್ದಳು. ಬಳಿಕ ಸಲುಗೆ ಬೆಳೆಸಿಕೊಂಡು ನಗ್ನವಾಗಿ ವೀಡಿಯೋ ಕಾಲ್‍ನಲ್ಲಿ ಮಾತಾಡುತ್ತಿದ್ದಳು. ಅಲ್ಲದೇ ಯುವಕನಿಗೂ ನಗ್ನವಾಗಲು ಸೂಚಿಸಿದ್ದಳು. ಕೆಲವು ದಿನಗಳು ಹೀಗೆ ಇಬ್ಬರೂ ಮಾತಾಡಿದ್ದು, ಬಳಿಕ ಯುವಕನ ವೀಡಿಯೋಗಳನ್ನು ಸುದ್ದಿವಾಹಿನಿಗಳಿಗೆ ನೀಡುವುದಾಗಿ ಅಪರಿಚಿತರು ಬ್ಲಾಕ್‍ಮೇಲ್ ಮಾಡಿದ್ದಾರೆ. ಅಲ್ಲದೇ ಜೀವನವನ್ನು ಹಾಳು ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ಆತ ಆರೋಪಿಸಿದ್ದಾನೆ. ಇದನ್ನೂ ಓದಿ: ಫೇಸ್‍ಬುಕ್‍ನಲ್ಲಿ ಪರಿಚಯ- ಸ್ನೇಹಿತನಿಂದ ಅಪ್ರಾಪ್ತೆಯ ಅಪಹರಿಸಿ ಗ್ಯಾಂಗ್ ರೇಪ್

    ಯುವಕನಿಗೆ ದೆಹಲಿ (Delhi) ಪೊಲೀಸರ ಹೆಸರಲ್ಲಿ ಮಾತನಾಡಿ, ಪ್ರಕರಣ ದಾಖಲಿಸುವ ಬೆದರಿಕೆ ಹಾಕಲಾಗಿದೆ. ಪ್ರಕರಣ ಮುಚ್ಚಿ ಹಾಕಲು ಹಣದ ಬೇಡಿಕೆಯಿಟ್ಟಿದ್ದು, ಅದರಂತೆ ದತ್ತಾತ್ರೇಯ ಹಂತ ಹಂತವಾಗಿ ವಂಚಕರಿಗೆ 2.40 ಲಕ್ಷ ರೂ. ಹಣ ನೀಡಿದ್ದಾನೆ. ಇಷ್ಟಕ್ಕೆ ಸುಮ್ಮನಾಗದೆ ವಂಚಕರು ಕೆಲವು ದಿನಗಳ ಬಳಿಕ ಯೂಟ್ಯೂಬರ್ ಹೆಸರಲ್ಲಿ ಬೆದರಿಕೆ ಹಾಕಿ ಮತ್ತೆ ಹಣದ ಬೇಡಿಕೆಯಿಟ್ಟಿದ್ದಾರೆ. ಇದರಿಂದ ಆತಂಕಗೊಂಡ ಯುವಕ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

    ಈ ಸಂಬಂಧ ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಕಲಿ ಟಿಕೆಟ್ ತೋರಿಸಿ ಏರ್‌ಪೋರ್ಟ್ ಒಳಗೆ ನುಗ್ಗಿದ ಮಹಿಳೆ- ಎಫ್‍ಐಆರ್ ದಾಖಲು

  • ಬೆತ್ತಲೆಯಾಗಿದ್ದು ವೀಡಿಯೋ ಮಾಡುವಂತೆ ಒತ್ತಾಯ- ಪತಿಯ ವಿರುದ್ಧ ಪತ್ನಿ ದೂರು

    ಬೆತ್ತಲೆಯಾಗಿದ್ದು ವೀಡಿಯೋ ಮಾಡುವಂತೆ ಒತ್ತಾಯ- ಪತಿಯ ವಿರುದ್ಧ ಪತ್ನಿ ದೂರು

    ಕಾಸರಗೋಡು: ಪತಿಯ ವಿರುದ್ಧವೇ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಕೇರಳದ ಕಾಸರಗೋಡು (Kasaragodu) ಜಿಲ್ಲೆಯ ನೀಲೇಶ್ವರಂನಲ್ಲಿ ನಡೆದಿದೆ.

    ಪತಿ ವಿರುದ್ಧ ದೂರು ನೀಡಿದ ಪತ್ನಿಗೆ 20 ವರ್ಷ ವಯಸ್ಸು. ಈಕೆಯ ಪತಿ ಬಂಕಲಂ ಮೂಲದವನು. ಮದುವೆಯಾದ ಬಳಿಕ ದಂಪತಿ ಪಾಲಾದಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದಾರೆ. ಆದರೆ ಇದೀಗ ಪತಿ ಹಾಗೂ ಪತ್ನಿಯ ನಡುವ ವೈಮನಸ್ಸು ಮೂಡಿದ್ದು, ಠಾಣೆವರೆಗೆ ತಲುಪಿದೆ. ಇದನ್ನೂ ಓದಿ: ತೆಲಂಗಾಣದಲ್ಲಿ ಭೀಕರ ರಸ್ತೆ ಅಪಘಾತ – ಬೀದರ್‌ನ ಸ್ನೇಹಿತರಿಬ್ಬರು ದುರ್ಮರಣ

    ಪತ್ನಿಯ ದೂರಿನಲ್ಲೇನಿದೆ..?: ಪತಿ ಕೆಲ ವ್ಯಕ್ತಿಗಳಿಂದ ಹಣ ಪಡೆದಿದ್ದಾನೆ. ಅಂತೆಯೇ ಹಣ ಕೊಟ್ಟವರು ಪತಿ ಬೆನ್ನು ಬಿದ್ದಿದ್ದಾರೆ. ಅಲ್ಲದೆ ಅದರಲ್ಲಿ ಓರ್ವ, ಪತ್ನಿಯನ್ನು ನಗ್ನವಾಗಿ ಕಾಣಿಸಿಕೊಳ್ಳಲು ಮತ್ತು ವೀಡಿಯೋ ಕರೆ ಮಾಡಲು ಒತ್ತಾಯಿಸಿದ್ದಾನೆ. ಅಂತೆಯೇ ಪತಿಯು ನಗ್ನವಾಗಿ ಇರುವಾಗ ವೀಡಿಯೋ ಕರೆ ಮಾಡುವಂತೆ ಪೀಡಿಸಿದ್ದಾನೆ. ಬೆದರಿಕೆ ಹಾಕಿ ಹಲ್ಲೆ ಮಾಡಿರುವ ಆರೋಪವನ್ನೂ ಪತ್ನಿ ಮಾಡಿದ್ದಾರೆ.

    ಸದ್ಯ ನೀಲೇಶ್ವರಂ ಪೊಲೀಸರು ಮಹಿಳೆಯ ದೂರು ಸ್ವೀಕರಿಸಿದ್ದಾರೆ. ಅಲ್ಲದೆ ಪತಿ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಡಿಯೋ ಕಾಲ್ ಮಾಡಿ ಹೆಂಡತಿ ತೋರಿಸದಿದ್ದಕ್ಕೆ ಸ್ನೇಹಿತನಿಗೆ ಚಾಕು ಇರಿತ

    ವಿಡಿಯೋ ಕಾಲ್ ಮಾಡಿ ಹೆಂಡತಿ ತೋರಿಸದಿದ್ದಕ್ಕೆ ಸ್ನೇಹಿತನಿಗೆ ಚಾಕು ಇರಿತ

    ಬೆಂಗಳೂರು: ವಿಡಿಯೋ ಕಾಲ್ (Video Call) ಮಾಡಿ ತನ್ನ ಹೆಂಡತಿಯನ್ನ ತೋರಿಸದಿದ್ದಕ್ಕೆ ಸಹೋದ್ಯೋಗಿಯೊಬ್ಬ ಸ್ನೇಹಿತನಿಗೆ ಚಾಕು ಇರಿದಿರುವ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣಾ (HSR Layout Police Station) ವ್ಯಾಪ್ತಿಯಲ್ಲಿ ನಡೆದಿದೆ.

    ಲೆನಿನ್ ಕಲೆಕ್ಷನ್ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ್ ಮಿಶ್ರಾ ತನ್ನ ಪತ್ನಿಯೊಂದಿಗೆ ಫೋನ್‌ನಲ್ಲಿ ಮಾತಾಡುತ್ತಿದ್ದ. ಈ ವೇಳೆ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್ ಎಂಬಾತ ಅಲ್ಲಿಗೆ ಬಂದಿದ್ದ. ರಾಜೇಶ್ ಮಿಶ್ರಾ ಫೋನ್ ನಲ್ಲಿ ಮಾತಾಡುತ್ತಿದ್ದನ್ನು ನೋಡಿ, ವಿಡಿಯೋ ಕಾಲ್ ಮಾಡು, ನಿನ್ನ ಹೆಂಡತಿಯನ್ನು (Wife) ನೋಡ್ಬೇಕು ಅಂದಿದ್ದಾನೆ. ಇದನ್ನೂ ಓದಿ: Budget 2023: ಮನೆ ಕಟ್ಟೋರಿಗೆ ಗುಡ್‌ ನ್ಯೂಸ್‌ – ಪ್ರಧಾನಮಂತ್ರಿ ಆವಾಸ್ ಯೋಜನೆಗಾಗಿ 79,000 ಕೋಟಿ ಅನುದಾನ

    ಇದರಿಂದ ಕೋಪಗೊಂಡ ರಾಜೇಶ್ ಮಿಶ್ರಾ, ಸುರೇಶ್ ಜೊತೆಗೆ ಮಾತಿನ ಚಕಮಕಿ ನಡೆಸಿದ್ದಾನೆ. ಮಾತು ವಿಕೋಪಕ್ಕೆ ತಿರುಗಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಸುರೇಶ್ ರಾಜೇಶ್ ಮಿಶ್ರಾಗೆ ಚಾಕು ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ರಾಜೇಶ್ ಮಿಶ್ರಾನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: 50 ಸಾವಿರ ವರ್ಷಕ್ಕೊಮ್ಮೆ ಗೋಚರಿಸುವ ವಿಸ್ಮಯ – ಬೆಂಗಳೂರಲ್ಲಿ ಗೋಚರಿಸಲಿಲ್ಲ ಹಸಿರು ಧೂಮಕೇತು

    ಹೆಚ್.ಎಸ್.ಆರ್ ಲೇಔಟ್ ಪೊಲೀಸರು ಆರೋಪಿ ಸುರೇಶ್ ನನ್ನ ಬಂಧಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಿವೃತ್ತ ಪ್ರೊಫೆಸರ್‌ಗೆ ಯುವತಿ ಕಾಲ್ – ಅಶ್ಲೀಲ ವೀಡಿಯೋ ಮಾಡಿ 21 ಲಕ್ಷ ನಾಮ ಹಾಕಿದ್ಲು

    ನಿವೃತ್ತ ಪ್ರೊಫೆಸರ್‌ಗೆ ಯುವತಿ ಕಾಲ್ – ಅಶ್ಲೀಲ ವೀಡಿಯೋ ಮಾಡಿ 21 ಲಕ್ಷ ನಾಮ ಹಾಕಿದ್ಲು

    ಧಾರವಾಡ: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ತಮ್ಮ ಖಾಸಗಿ ವೀಡಿಯೋಗಳನ್ನು ತೋರಿಸುವ ಮೂಲಕ ಜನರನ್ನು ಮರುಳು ಮಾಡಿ, ಅವರಿಂದ ಹಣ ಕಿತ್ತುಕೊಳ್ಳುವ ಜಾಲ ಹಬ್ಬುತ್ತಲೇ ಇದೆ. ಈಗ ಅದೇ ರೀತಿ ಯುವತಿಯೊಬ್ಬಳು ವೀಡಿಯೋ ಕಾಲ್ (Video Call) ಮುಖಾಂತರ ನಿವೃತ್ತ ಪ್ರೊಫೆಸರ್ (Retired Professor) ಒಬ್ಬರಿಗೆ ತನ್ನ ಖಾಸಗಿ ವೀಡಿಯೋ (Obscene Video) ತೋರಿಸಿ ದೊಡ್ಡ ಮೊಸವನ್ನೇ (Fraud) ಮಾಡಿದ್ದಾಳೆ.

    ಧಾರವಾಡದಲ್ಲಿ (Dharwad) ಇರುವ ನಿವೃತ್ತ ಪ್ರೊಫೆಸರ್ ಒಬ್ಬರಿಗೆ ಬರೋಬ್ಬರಿ 21 ಲಕ್ಷ ರೂ. ಹಣವನ್ನು ಉಂಡೆ ನಾಮ ಹಾಕಿರುವ ಯುವತಿ, ತನ್ನ ಸಹೋದರಿ ಮದುವೆಗೆ ಹಣ ಬೇಕು ಎಂದು ಮೊಬೈಲ್ ಕರೆ ಮಾಡಿ ಬೇಡಿಕೆ ಇಟ್ಟಿದ್ದಳು. ಮೊದಲು ಈ ನಿವೃತ್ತ ಪ್ರೊಫೆಸರ್‌ಗೆ ಮೊಬೈಲ್‌ನಲ್ಲಿ ಮಾತನಾಡುತ್ತ ಪರಿಚಯ ಮಾಡಿಕೊಂಡ ಯುವತಿ, ನಂತರ ಹಣದ ಬೇಡಿಕೆ ಇಟ್ಟಿದ್ದಾಳೆ.

    ಯುವತಿ ಹಣ ಕೇಳಿದಾಗ ನಿವೃತ್ತ ಪ್ರೊಫೆಸರ್ ಹಣ ಕೊಟ್ಟಿರಲಿಲ್ಲ. ಆಗ ವೀಡಿಯೋ ಕಾಲ್ ಮಾಡಿದ ಆ ಯುವತಿ, ಇವರ ಫೋಟೋ ತೆಗೆದುಕೊಂಡು ಅಶ್ಲೀಲ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾಳೆ. ಮಾರ್ಯಾದೆಗೆ ಅಂಜಿದ ನಿವೃತ್ತ ಪ್ರೊಫೆಸರ್, ಆಕೆ ಕೇಳಿದ್ದಕ್ಕೆ ಹಣ ಕೊಡುತ್ತಾ ಬಂದಿದ್ದಾರೆ. ಇದನ್ನೂ ಓದಿ: ಫಸ್ಟ್‌ ಟೈಂ ಬೆಂಗಳೂರಿನಲ್ಲಿ ಲ್ಯಾಂಡ್‌ ಆಯ್ತು ವಿಶ್ವದ ದೊಡ್ಡ ವಿಮಾನ

    ನಿವೃತ್ತ ಪ್ರೊಫೆಸರ್ 21 ಲಕ್ಷ ರೂ. ಕಳೆದುಕೊಂಡ ಬಳಿಕ ಹುಬ್ಬಳ್ಳಿ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಅಂಜಲಿ ಶರ್ಮಾ ಎಂಬಾಕೆ ಇವರಿಗೆ ವಿಡಿಯೊ ಕಾಲ್ ಮಾಡಿದ್ರೆ, ಆಕೆಯ ಜೊತೆ ಇದ್ದ ವಿಕ್ರಂ ಸೈಬರ್ ಕ್ರೈಂ ದೆಹಲಿ ಪೊಲೀಸ್ ಎಂದು ಹೆಸರು ಹೇಳಿ ದುಡ್ಡು ಪೀಕಿದ್ದಾನೆ.

    ಸದ್ಯ ನನಗೆ ಆದ ರೀತಿ ಬೇರೆ ಯಾರಿಗೂ ಆಗದಿರಲಿ, ಅದರಲ್ಲೂ ಯುವಕರು ಇಂತಹ ಬಲೆಗೆ ಬೀಳಬಾರದು ಎಂದು ನಿವೃತ್ತ ಪ್ರೊಫೆಸರ್ ಹೇಳಿದ್ದಾರೆ. ಅಲ್ಲದೇ ದೆಹಲಿ ಸೈಬರ್ ಕ್ರೈಂ ಪೊಲೀಸರಿಗೂ ಈ ಬಗ್ಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರೀತಿ ಹೆಸರಿನಲ್ಲಿ ಬಲವಂತದ ಮತಾಂತರ- ಮದುವೆ ಕಥೆ ಕಟ್ಟಿ ಧರ್ಮವನ್ನೇ ಬದಲಿಸಿದ!

    Live Tv
    [brid partner=56869869 player=32851 video=960834 autoplay=true]

  • ವೀಡಿಯೋ ಕಾಲ್ ಮಾಡಿ ನಗ್ನಳಾದ ಯುವತಿ – ರೆಕಾರ್ಡ್ ಇಟ್ಕೊಂಡು ಯುವಕನಿಗೆ ಬ್ಲ್ಯಾಕ್‌ಮೇಲ್

    ವೀಡಿಯೋ ಕಾಲ್ ಮಾಡಿ ನಗ್ನಳಾದ ಯುವತಿ – ರೆಕಾರ್ಡ್ ಇಟ್ಕೊಂಡು ಯುವಕನಿಗೆ ಬ್ಲ್ಯಾಕ್‌ಮೇಲ್

    ಮೈಸೂರು: ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳನ್ನು ಬಳಸಿ, ನಾನಾ ಕ್ರಿಮಿನಲ್ ಐಡಿಯಾಗಳನ್ನು ಮಾಡಿ ಮುಗ್ದ ಜನರಿಂದ ಹಣ ದೋಚುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಂತೆಯೇ ಇಲ್ಲೊಬ್ಬ ಅಪರಿಚಿತ ಯುವತಿ ಯುವಕನೊಬ್ಬನಿಗೆ ವೀಡಿಯೋ ಕಾಲ್ ಮಾಡಿ, ಬಳಿಕ ಅದರ ರೆಕಾರ್ಡ್‌ಗಳನ್ನು ಇಟ್ಟುಕೊಂಡು ಹಣಕ್ಕಾಗಿ ಡಿಮಾಂಡ್ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

    ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದ ಯುವಕ ವಾಸುವಿಗೆ ಭಾನುವಾರ ಬೆಳಗ್ಗೆ ಯುವತಿಯೊಬ್ಬಳಿಂದ ವೀಡಿಯೋ ಕಾಲ್ ಬಂದಿದೆ. ಆಕೆ ವೀಡಿಯೋ ಕಾಲ್ ಮಾಡುವುದಕ್ಕೂ ಮುನ್ನ ತನ್ನನ್ನು ಅಮೃತ ಎಂದು ಪರಿಚಯ ಮಾಡಿಕೊಂಡು ಚ್ಯಾಟ್ ಮಾಡಿದ್ದಾಳೆ. ಬಳಿಕ ವೀಡಿಯೋ ಕಾಲ್ ಮಾಡುತ್ತಲೇ ನಗ್ನಳಾಗಿದ್ದಾಳೆ. ಇದನ್ನೂ ಓದಿ: ಹಣದಾಸೆಗೆ ಮದುವೆ – ಅನಾರೋಗ್ಯದ ನೆಪ ಹೇಳಿ, ಹಣ ದೋಚಿಕೊಂಡು ಸೊಸೆ ಎಸ್ಕೇಪ್

    POLICE JEEP

     

    ಇದರಿಂದ ಕಸಿವಿಸಿಗೊಂಡ ವಾಸು ತಕ್ಷಣವೇ ವೀಡಿಯೋ ಕಾಲ್ ಅನ್ನು ಕಟ್ ಮಾಡಿದ್ದಾನೆ. ಆದರೆ ಬಳಿಕ ಅದೇ ವೀಡಿಯೋ ಕಾಲ್‌ನ ರೆಕಾರ್ಡ್ ಇಟ್ಟುಕೊಂಡು ಯುವತಿ ಹಣಕ್ಕಾಗಿ ಡಿಮಾಂಡ್ ಮಾಡಿದ್ದಾಳೆ. ಹಣ ಕೊಡದೇ ಹೋದರೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆಯನ್ನೂ ಒಡ್ಡಿದ್ದಾಳೆ. ಇದನ್ನೂ ಓದಿ: ಸಿದ್ದರಾಮಯ್ಯ ಕಾರಿನ ಮೇಲೆ ಕೊಡಗಿನ 2 ಕಡೆ ಮೊಟ್ಟೆ ದಾಳಿ

    ಈ ಹಿನ್ನೆಲೆ ವಾಸು ತಕ್ಷಣವೇ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾನೆ. ಈ ಬಗ್ಗೆ ಮೈಸೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮಹಿಳೆಯರಿಗೆ ವೀಡಿಯೋ ಕಾಲ್ ಮಾಡಿ ಅಸಭ್ಯ ವರ್ತನೆ – CPI ಅಮಾನತು

    ಮಹಿಳೆಯರಿಗೆ ವೀಡಿಯೋ ಕಾಲ್ ಮಾಡಿ ಅಸಭ್ಯ ವರ್ತನೆ – CPI ಅಮಾನತು

    ಹಾವೇರಿ: ದೂರು ನೀಡಲು ಬಂದ ಮಹಿಳೆಯರ ಜೊತೆ ಅಸಭ್ಯ ವರ್ತನೆ ಮಾಡುತ್ತಿದ್ದ ಹಾವೇರಿಯ ಸಿಪಿಐ ಅನ್ನು ಅಮಾನತು ಮಾಡಲಾಗಿದೆ.

    ಮಹಿಳಾ ಪೊಲೀಸ್ ಠಾಣೆ ಸಿಪಿಐ ಚಿದಾನಂದ ದೂರು ನೀಡಲು ಬರುವ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುವುದು ಅಲ್ಲದೇ ಅವರ ಜೊತೆಗೆ ವೀಡಿಯೋ ಕಾಲ್ ಮಾಡಿ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದನು. ಪ್ರಸ್ತುತ ಆ ವೀಡಿಯೋಗಳು ಸಹ ವೈರಲ್ ಆಗಿದೆ. ಇದನ್ನೂ ಓದಿ:  15 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ – 13 ಮಂದಿಗೆ 20 ವರ್ಷ ಜೈಲು

    ಠಾಣೆಗೆ ಬಂದ ಮಹಿಳೆಯರ ನಂಬರ್ ತೆಗೆದುಕೊಂಡು ಅವರಿಗೆ ಚಿದಾನಂದ ಬಾತ್ ರೂಂನಲ್ಲಿದ್ದಾಗ ವೀಡಿಯೋ ಕಾಲ್ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದನು. ಮಹಿಳೆಯರ ಜೊತೆಗೆ ಫೋನ್ ನಲ್ಲಿ ಕೆಟ್ಟದಾಗಿ ಮಾತನಾಡಿದ್ದು, ಓರ್ವ ಮಹಿಳೆಗೆ ಮಂಚಕ್ಕೆ ಕರೆದಿದ್ದಾನೆ ಎಂದು ಮಹಿಳೆಯರು ಆರೋಪಿಸಿದ್ದಾರೆ.

    ಈ ಹಿನ್ನೆಲೆ ಈತನ ವಿರುದ್ಧ ಎಸ್‍ಪಿ, ಪೂರ್ವ ವಲಯ ಐಜಿಪಿ ರವಿ.ಎಸ್ ಸೇರಿದಂತೆ ಹಲವರಿಗೆ ಮಹಿಳೆಯರು ದೂರು ನೀಡಿದ್ದು, ಅವರ ದೂರನ್ನು ಆಧರಿಸಿ ಪೂರ್ವ ವಲಯ ಐಜಿಪಿ ಹಾಗೂ ಅಧಿಕಾರಿಗಳು ಚಿದಾನಂದ ಬಗ್ಗೆ ತನಿಖೆ ಮಾಡಿದ್ದಾರೆ. ನಂತರ ಆತನನ್ನು ಅಮಾನತು ಮಾಡಲು ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಬ್ಯಾಟರಿ ಚಾರ್ಜಿಂಗ್ ವೇಳೆ ಸ್ಫೋಟ- ಓರ್ವ ಸಾವು, ನಾಲ್ವರು ಗಂಭೀರ

  • ಪತ್ನಿಗೆ ವೀಡಿಯೋ ಕರೆ ಮಾಡಿ ಮಾತಾಡುತ್ತಲೇ ನೇಣಿಗೆ ಶರಣಾದ!

    ಪತ್ನಿಗೆ ವೀಡಿಯೋ ಕರೆ ಮಾಡಿ ಮಾತಾಡುತ್ತಲೇ ನೇಣಿಗೆ ಶರಣಾದ!

    ಶಿವಮೊಗ್ಗ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಗೆ ವೀಡಿಯೋ ಕರೆ ಮಾಡಿ, ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗದ ಕೇಂದ್ರ ಕಾರಾಗೃಹದ ವಸತಿ ಗೃಹದಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನು ಕೇಂದ್ರ ಕಾರಾಗೃಹದ ವಾರ್ಡನ್ ಅಸ್ಪಾಕ್ ತಗಡಿ (24) ಎಂದು ಗುರುತಿಸಲಾಗಿದೆ. ಅಸ್ಪಾಕ್ ತಗಡಿ ಮೂಲತಃ ಬೆಳಗಾವಿ ಜಿಲ್ಲೆ ಹುಕ್ಕೇರಿ ಮೂಲದ ನಿವಾಸಿ. ಇವರು ಕಳೆದ ಎರಡೂವರೆ ವರ್ಷದಿಂದ ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ವಾರ್ಡನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಒಂದು ವರ್ಷದ ಹಿಂದೆ ವಿವಾಹವಾಗಿದ್ದ ಅಸ್ಪಾಕ್ ತಗಡಿಗೆ ಒಂದೂವರೆ ತಿಂಗಳ ಮಗುವಿದ್ದು, ಪತ್ನಿ ಬಾಣಂತನಕ್ಕೆ ತವರು ಮನೆಗೆ ತೆರಳಿದ್ದರು. ಇದನ್ನೂ ಓದಿ: ಪೆಟ್ರೋಲ್,ಡೀಸೆಲ್ ದರ ಇಳಿಕೆ ದೀಪಾವಳಿ ಕೊಡುಗೆ ಅಲ್ಲ, ಉಪಚುನಾವಣೆಗಳ ಕೊಡುಗೆ: ಸಿದ್ದರಾಮಯ್ಯ

    ವಿವಾಹವಾದ ಎರಡು ಮೂರು ತಿಂಗಳ ನಂತರದಿಂದಲೇ ಸಣ್ಣ ಪುಟ್ಟ ವಿಷಯಕ್ಕೆ ಪತಿ ಪತ್ನಿ ಇಬ್ಬರು ಜಗಳ ಆಡುತ್ತಿದ್ದರು ಎನ್ನಲಾಗಿದೆ. ಬುಧವಾರ ರಾತ್ರಿ ಸಹ ಪತ್ನಿಗೆ ವೀಡಿಯೋ ಕರೆ ಮಾಡಿದ್ದ ಅಸ್ಪಾಕ್ ತಗಡಿ ಈ ವೇಳೆಯೂ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಅಲ್ಲದೇ ಅತ್ತೆ ಮಾವನೊಂದಿಗೂ ಸಹ ಜಗಳವಾಡಿದ್ದಾನೆ ಎನ್ನಲಾಗಿದೆ. ಜಗಳ ಆಡುತ್ತಿರುವಾಗಲೇ ನೇಣು ಹಾಕಿಕೊಳ್ಳುವ ದೃಶ್ಯವನ್ನು ಪತ್ನಿಗೆ ತೋರಿಸಿದ್ದಾನೆ. ಪತಿಯ ಆತ್ಮಹತ್ಯೆ ನಿರ್ಧಾರಕ್ಕೆ ಕಂಗಾಲಾದ ಪತ್ನಿ ನಂತರ ಕಾರಾಗೃಹದ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ವಿಷಯ ತಿಳಿದು ಇತರೆ ಸಿಬ್ಬಂದಿ ವಸತಿಗೃಹಕ್ಕೆ ತೆರಳಿ ನೋಡುವಷ್ಟರಲ್ಲಿ ಅಸ್ಪಾಕ್ ತಗಡಿ ಕೊನೆಯುಸಿರು ಎಳೆದಿದ್ದಾನೆ.

    ಘಟನಾ ಸ್ಥಳಕ್ಕೆ ತುಂಗಾನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಮೃತ ವ್ಯಕ್ತಿಯ ಮರಣೋತ್ತರ ಶವ ಪರೀಕ್ಷೆ ನಡೆಸಿದ ವೈದ್ಯರು ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.

  • ಮೇಘನಾ, ಜೂ. ಚಿರುವಿಗೆ ಆಂಜನೇಯನ ದರ್ಶನ ಮಾಡಿಸಿದ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ!

    ಮೇಘನಾ, ಜೂ. ಚಿರುವಿಗೆ ಆಂಜನೇಯನ ದರ್ಶನ ಮಾಡಿಸಿದ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ!

    ಚೆನ್ನೈ: ನಟಿ ಮೆಘನಾ ರಾಜ್ ಹಾಗೂ ಅವರ 8 ತಿಂಗಳ ಮಗ ಸದ್ಯ ಬೆಂಗಳೂರಿನಲ್ಲಿಯೇ ಇದ್ದಾರೆ. ಕೊರೊನಾ ಮಹಾಮಾರಿಯಿಂದಾಗಿ ಅವರು ನಟ ಅರ್ಜುನ್ ಸರ್ಜಾ ಅವರ ಆಂಜನೇಯನ ದೇವಸ್ಥಾನದ ಉದ್ಘಾಟನೆಗೂ ತೆರಳಿಲ್ಲ. ಹೀಗಾಗಿ ಅರ್ಜುನ್ ಸರ್ಜಾ ಅವರು ತಾಯಿ- ಮಗನಿಗೆ ವೀಡಿಯೋ ಕಾಲ್ ನಲ್ಲೇ ದೇವರ ದರ್ಶನ ಮಾಡಿಸಿದ್ದಾರೆ.

    ಹೌದು. ಬುಧವಾರ ಅರ್ಜುನ್ ಸರ್ಜಾ ಅವರು ಮೇಘನಾರಿಗೆ ವೀಡಿಯೋ ಕಾಲ್ ಮಾಡಿದ್ದಾರೆ. ಈ ವೇಳೆ ಅಮ್ಮ-ಮಗನಿಗೆ ತಾವು ಕಟ್ಟಿಸಿರುವ ಆಂಜನೇಯನ ದರ್ಶನ ಮಾಡಿಸಿದ್ದಾರೆ. ಇದರ ಸ್ಕ್ರೀನ್ ಶಾಟ್ ತೆಗೆದುಕೊಂಡಿರುವ ಅರ್ಜುನ್ ಸರ್ಜಾ ನಂತರ ತಮ್ಮ ಇನ್‍ಸ್ಟಾ ಸ್ಟೋರಿಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಕೊರೊನಾದಿಂದ ಭೇಟಿ ನೀಡಲು ಸಾಧ್ಯವಾಗದ ಕಾರಣ ಹನುಮಾನ್ ದೇವಾಲಯವನ್ನು ವೀಡಿಯೋ ಕಾಲ್ ಮೂಲಕ ತೋರಿಸಿದ್ದಾರೆ. ಫೋಟೋದಲ್ಲಿ, ಜೂ. ಚಿರು ನೇರವಾಗಿ ಕ್ಯಾಮೆರಾವನ್ನೇ ನೋಡುತ್ತಿರುವುದನ್ನು ಕಾಣಬಹುದು. ಇದನ್ನೂ ಓದಿ: ಶಮಂತ್ ಮೇಲೆ ಚಪ್ಪಲಿ ಎಸೆದ ಪ್ರಶಾಂತ್ ಸಂಬರ್ಗಿ

    ಕೋವಿಡ್-19 ಕಾರಣದಿಂದಾಗಿ ಕುಂಬಾಭಿಷೇಕಕ್ಕೆ ಬರಲು ಸಾಧ್ಯವಾಗದ ಕಾರಣ ಚಿರು ಮಗನಿಗೆ ದೇವಾಲಯವನ್ನು ತೋರಿಸಿರುವುದಾಗಿ ಫೋಟೋ ಮೇಲೆ ಬರೆದುಕೊಂಡಿದ್ದಾರೆ. ಇದನ್ನು ಅರ್ಜುನ್ ಸರ್ಜಾ ಅವರ ಮಗಳು, ನಟಿ ಐಶ್ವರ್ಯಾ ಅರ್ಜುನ್ ಕೂಡ ತಮ್ಮ ಇನ್‍ಸ್ಟಾ ಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ದಿವ್ಯಾ ಸುರೇಶ್ ಮೇಲೆ ಕೈ ಮಾಡಿದ ಪ್ರಿಯಾಂಕ

     

    View this post on Instagram

     

    A post shared by Arjun Sarja (@arjunsarjaa)

    ದಿವಂಗತ ಚಿರಂಜೀವಿ ಸರ್ಜಾ ಅವರ ಮಾವ ಅರ್ಜುನ್ ಸರ್ಜಾ ಅವರು ಚೆನ್ನೈನ ಹನುಮಾನ್ ದೇವಾಲಯವನ್ನು ಉದ್ಘಾಟಿಸಿದ್ದಾರೆ. ಈ ಸಮಾರಂಭದಲ್ಲಿ ಧ್ರುವ ಸರ್ಜಾ ಮತ್ತು ಅವರ ಪತ್ನಿ ಪ್ರೇರಣಾ ಹಾಜರಾಗಿದ್ದರೆ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಮೇಘನಾ ಮತ್ತು ಜೂನಿಯರ್ ಚಿರು ಅವರಿಗೆ ಸಾಧ್ಯವಾಗಲಿಲ್ಲ.

     

    View this post on Instagram

     

    A post shared by Arjun Sarja (@arjunsarjaa)

    ಆಕ್ಷನ್ ಕಿಂಗ್ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಅರ್ಜುನ್ ಸರ್ಜಾ ಅವರು ಇತ್ತೀಚೆಗೆ ಚೆನ್ನೈನ ಹೊರವಲಯದಲ್ಲಿ ಹನುಮಾನ್ ದೇವಾಲಯವನ್ನು ನಿರ್ಮಿಸಿದ್ದಾರೆ. ಹನುಮನ ಕಟ್ಟಾ ಭಕ್ತನಾಗಿರುವುದರಿಂದ ದೇವಾಲಯವನ್ನು ನಿರ್ಮಿಸುವುದು ಅವರ ಕನಸಾಗಿತ್ತು. ಈ ಕನಸು ಇದೀಗ ನನಸಾಗಿದ್ದು, ಜುಲೈ 1 ಮತ್ತು 2 ರಂದು ಕುಂಬಾಭಿಷೇಕದೊಂದಿಗೆ ದೇವಾಲಯವನ್ನು ಉದ್ಘಾಟಿಸಲಾಯಿತು.

  • ವೀಡಿಯೋ ಕಾಲ್ ಮಾಡಿ ಕೋವಿಡ್ ಸೋಂಕಿತರೊಂದಿಗೆ ಮಾತನಾಡಿದ ಗವಿಮಠದ ಶ್ರೀಗಳು

    ವೀಡಿಯೋ ಕಾಲ್ ಮಾಡಿ ಕೋವಿಡ್ ಸೋಂಕಿತರೊಂದಿಗೆ ಮಾತನಾಡಿದ ಗವಿಮಠದ ಶ್ರೀಗಳು

    ಕೊಪ್ಪಳ: ಇತ್ತೀಚೆಗಷ್ಟೇ ಗವಿ ಮಠದ ವೃದ್ಧಾಶ್ರಮದಲ್ಲಿ 100 ಬೆಡ್ ಗಳ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ ತೆರದ ಬೆನ್ನಲ್ಲೇ ಇದೀಗ ಶ್ರೀಗಳು ಸ್ವತಃ ವೀಡಿಯೋ ಕಾಲ್ ಮಾಡಿ ಕೊರೊನಾ ಸೋಂಕಿತರ ಆರೋಗ್ಯ ವಿಚಾರಿಸಿದ್ದಾರೆ.

    ನಗರದ ಗವಿ ಮಠದ ವೃದ್ಧಾಶ್ರಮದಲ್ಲಿ 100 ಬೆಡ್ ಗಳ ಕೋವಿಡ್ ಕೇರ್ ಸೆಂಟರ್ ತೆರಯಲಾಗಿದೆ. ಈ ಕೋವಿಡ್ ಕೇರ್ ಸೆಂಟರ್‍ನಲ್ಲಿ ದಾಖಲಾದ ರೋಗಿಗಳಿಗೆ ವೀಡಿಯೋ ಕಾಲ್ ಮಾಡಿ ಶ್ರೀಗಳು ಮಾತನಾಡಿದ್ದಾರೆ. ಆರೋಗ್ಯ ವಿಚಾರಿಸಿ, ಯಾವುದೇ ರೀತಿಯ ಭಯಪಡದಂತೆ ರೋಗಿಗಳಲ್ಲಿ ಧೈರ್ಯ ತುಂಬಿದ್ದಾರೆ. ಕೋವಿಡ್ ಕೇರ್ ಸೆಂಟರ್ ತೆರೆಯುವುದಲ್ಲದೆ, ಸ್ವತಃ ತಾವೇ ರೋಗಿಗಳಿಗೆ ಕರೆ ಮಾಡಿ ಆರೋಗ್ಯ ವಿಚಾರಿಸುವ ಕಾಳಜಿ ತೋರಿದ್ದಾರೆ. ವೀಡಿಯೋ ಕಾಲ್ ಮೂಲಕ ಧೈರ್ಯ ತುಂಬಿದ ಶ್ರೀಗಳ ಮಾತಿಗೆ ಸೋಂಕಿತರು ಕೈ ಮುಗಿದಿದ್ದಾರೆ.

    ಜಿಲ್ಲಾ ಆಸ್ಪತ್ರೆಯಲ್ಲಿ ಬೆಡ್ ಫುಲ್ ಆಗುತ್ತಿದ್ದಂತೆ ಐತಿಹಾಸಿಕ ಗವಿಮಠದಿಂದ 100 ಬೆಡ್ ಆಸ್ಪತ್ರೆ ವ್ಯವಸ್ಥೆ ಮಾಡಲಾಗಿದೆ. ಗವಿ ಮಠದ ಸ್ವಾಮೀಜಿ ಕಾರ್ಯಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಕರೆ ಮಾಡಿ ಧನ್ಯವಾದ ತಿಳಿಸಿದ್ದಾರೆ. ಗವಿಮಠದ ವೃದ್ಧಾಶ್ರಮದಲ್ಲಿ 100 ಬೆಡ್‍ಗಳ ಆಸ್ಪತ್ರೆ ತಲೆ ಎತ್ತಿದ್ದು, ಕೊಪ್ಪಳ ಜಿಲ್ಲಾಡಳಿತದ ಮನವಿ ಹಿನ್ನೆಲೆ ಗವಿಸಿದ್ದೇಶ್ವರ ಸ್ವಾಮೀಜಿ 100 ಬೆಡ್‍ಗಳ ಆಸ್ಪತ್ರೆ ನಿರ್ಮಾಣ ಮಾಡಿಸಿದ್ದಾರೆ.

    ಒಟ್ಟು 100 ಹಾಸಿಗೆಯಲ್ಲಿ 70 ಆಕ್ಸಿಜನ್ ಬೆಡ್, 20 ಸಾಮಾನ್ಯ ಬೆಡ್ ಮಾಡಲಾಗಿದ್ದು, ಬಾಕಿ 10 ಬೆಡ್ ನಲ್ಲಿ 6 ಎಚ್‍ಎಫ್‍ಎನ್‍ಸಿ ಬೆಡ್ ಮತ್ತು 4 ವೆಂಟಿಲೇಟರ್ ಬೆಡ್ ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸ್ವಾಮೀಜಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ವೀಡಿಯೋ ಕಾಲ್‍ನಲ್ಲಿ ಮಹಿಳೆ ಮುಂದೆ ಬೆತ್ತಲಾಗಿ 20 ಸಾವಿರ ರೂ. ಕಳೆದುಕೊಂಡ!

    ವೀಡಿಯೋ ಕಾಲ್‍ನಲ್ಲಿ ಮಹಿಳೆ ಮುಂದೆ ಬೆತ್ತಲಾಗಿ 20 ಸಾವಿರ ರೂ. ಕಳೆದುಕೊಂಡ!

    – ಬಟ್ಟೆ ಬಿಚ್ಚುತ್ತಿದ್ದಂತೆ ರೆಕಾರ್ಡ್ ಮಾಡಿ 1 ಲಕ್ಷಕ್ಕೆ ಬೇಡಿಕೆಯಿಟ್ಳು

    ಬೆಂಗಳೂರು: ವ್ಯಕ್ತಿಯೊಬ್ಬ ವೀಡಿಯೋ ಕಾಲ್ ನಲ್ಲಿ ಮಹಿಳೆಯ ಮುಂದೆ ಬೆತ್ತಲಾಗಿ ಪೇಚಿಗೆ ಸಿಲುಕಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ವ್ಯಕ್ತಿಯನ್ನು ಅಂಬಿತ್ ಕುಮಾರ್ ಮಿಶ್ರಾ ಎಂದು ಗುರುತಿಸಲಾಗಿದೆ. ಈತ ಶ್ರೇಯಾ ಎಂಬ ಮಹಿಳೆಯ ಮುಂದೆ ಬೆತ್ತಲಾಗಿ ಹಣ ಕಳೆದುಕೊಂಡಿದ್ದಾನೆ.

    ಫೆಬ್ರವರಿ 9ರಂದು ಶ್ರೇಯಾ, ಅಂಬಿತ್ ಗೆ ವಾಟ್ಸಪ್ ಕಾಲ್ ಮಾಡಿದ್ದಾಳೆ. ಈ ವೇಳೆ ಅಂಬಿತ್ ನನ್ನು ಬಟ್ಟೆ ಬಿಚ್ಚುವಂತೆ ಕೇಳಿಕೊಂಡಿದ್ದಾನೆ. ಮಹಿಳೆಯ ಬಣ್ಣದ ಮಾತುಗಳಿಗೆ ಮರುಳಾದ ಅಂಬಿತ್ ಲೈವ್ ನಲ್ಲಿಯೇ ಬೆತ್ತಲಾಗಿದ್ದಾನೆ. ಈ ಎಲ್ಲಾ ದೃಶ್ಯಗಳನ್ನು ಶ್ರೇಯಾ ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾಳೆ.

    ಇದಾದ ಬಳಿಕ ಹಣ ನೀಡುವಂತೆ ಪೀಡಿಸಿದ್ದಾಳೆ. ಒಂದು ವೇಳೆ ನೀನು ಹಣ ಕೊಡದಿದ್ದರೆ ನಿನ್ನ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ಇದರಿಂದ ಗಾಬರಿಗೊಂಡ ಅಂಬಿತ್ ಮಹಿಳೆಗೆ 20 ಸಾವಿರ ರೂ. ನೀಡಿದ್ದಾನೆ. ಹಣ ಕಳೆದುಕೊಂಡ ಬಳಿಕ ಅಂಬಿತ್ ಮಹಿಳೆಯ ವಿರುದ್ಧ ವಂಚನೆ ಹಾಗೂ ಸುಲಿಗೆ ಪ್ರಕರಣವನ್ನು ದಾಖಲಿಸಿದ್ದಾನೆ.

    ಪರಿಚಯ ಆಗಿದ್ದು ಹೇಗೆ..?
    ಮ್ಯಾಟ್ರಿಮೋನಿಯಲ್ ವೆಬ್‍ಸೈಟ್ ಮೂಲಕ ಅಂಬಿತ್ ಹಾಗೂ ಶ್ರೇಯಾ ಪರಿಚಯವಾಗಿದೆ. ಅಲ್ಲದೆ ಮಹಿಳೆ ತಾನು ಟೆಕ್ಕಿಯಾಗಿದ್ದು, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾಳೆ. ನಂತರ ಮದುವೆ ಆಗುವ ಇಂಗಿತ ಕೂಡ ಅಂಬಿತ್ ಮುಂದೆ ಇಟ್ಟಿದ್ದಾಳೆ. ಅಂತೆಯೇ ಇಬ್ಬರು ಪರಸ್ಪರ ಪರಿಚಯ ಮಾಡಿಕೊಂಡಿದ್ದು, ಕ್ರಮೇಣ ಇಬ್ಬರು ಕ್ಲೋಸ್ ಆದರು.

    ಇತ್ತ ಇದನ್ನೇ ಬಂಡವಾಳ ಮಾಡಿಕೊಂಡ ಶ್ರೇಯಾ, ಅಂಬಿತ್ ಮುಂದೆ ತನ್ನ ಕರಾಳ ಮುಖ ಪ್ರದರ್ಶಿಸಿಯೇ ಬಿಟ್ಟಿದ್ದಾಳೆ. ವಾಟ್ಸಪ್ ವೀಡಿಯೋ ಕಾಲ್ ಮಾಡಿ ಮಾತಾಡ್ತಾ ಮಾತಾಡ್ತಾ ತನ್ನ ಬಟ್ಟೆ ಬಿಚ್ಚಿದ್ದಾಳೆ. ನಂತರ ಅಂಬಿತ್ ಗೆ ಕೂಡ ಬಟ್ಟೆ ಬಿಚ್ಚುವಂತೆ ಕೇಳಿಕೊಂಡಿದ್ದಾಳೆ. ಇತ್ತ ಶ್ರೇಯಾ ಮಾತು ನಂಬಿದ ಅಂಬಿತ್ ಕೂಡ ಆಕೆಯ ಮುಂದೆ ಬೆತ್ತಲಾಗಿದ್ದಾನೆ.

    ಅಂಬಿತ್ ಬಟ್ಟೆ ಕಳಚುತ್ತಿದ್ದಂತೆಯೇ ಶ್ರೇಯಾ ವೀಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾಳೆ. ನಂತರ 1 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಒಂದು ವೇಳೆ ಹಣ ಕೊಡದಿದ್ದರೆ ವೀಡಿಯೋ ವೈರಲ್ ಮಾಡುವುದಾಗಿ ಬೆದರಿಸಿದ್ದಾಳೆ. ಹೀಗಾಗಿ ಭಯಗೊಂಡು ಫೆ.7ರಂದು 20 ಸಾವಿರ ಹಣ ನೀಡಿದೆ. ಆದರೆ ಆಕೆ ಇನ್ನೂ ಹೆಚ್ಚಿನ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ ಎಂದು ಅಂಬಿತ್ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾನೆ.