Tag: ವೀಡಿಯೊ

  • ವಿಜಯ್ ದೇವರಕೊಂಡ ಫ್ಯಾಮಿಲಿ ಟ್ರಿಪ್ – ಟೆಕ್ ಆಫ್ ವೇಳೆ ವಿಜಯ್ ತಾಯಿ ಗಲಿಬಿಲಿ

    ವಿಜಯ್ ದೇವರಕೊಂಡ ಫ್ಯಾಮಿಲಿ ಟ್ರಿಪ್ – ಟೆಕ್ ಆಫ್ ವೇಳೆ ವಿಜಯ್ ತಾಯಿ ಗಲಿಬಿಲಿ

    ಹೈದರಾಬಾದ್: ಟಾಲಿವುಡ್ ನಟ ವಿಜಯ್ ದೇವರಕೊಂಡ ಜೀವನವನ್ನು ಬಹಳ ಸೊಗಸಾಗಿ ನಡೆಸುತ್ತಿದ್ದಾರೆ. ತಮ್ಮ ಸಿನಿಮಾ ಶೂಟಿಂಗ್ ಮಧ್ಯೆ ಫ್ಯಾಮಿಲಿಗೂ ಅಷ್ಟೇ ಸಮಯ ಕೊಡುವ ಅವರು, ಇತ್ತೀಚೆಗಷ್ಟೇ ಕುಟುಂಬದೊಂದಿಗೆ ಖಾಸಗಿ ಜೆಟ್‍ನಲ್ಲಿ ಪ್ರಯಾಣಿಸುವ ಮೂಲಕ ತಿರುಪತಿ ವೆಂಕಟೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ವಿಜಯ್ ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಫ್ಯಾಮಿಲಿ ಜೊತೆ ವಿಜಯ್ ಸಖತ್ ಎಂಜಾಯ್ ಮಾಡಿದ್ದಾರೆ.

    vijaydevarakonda

    ಹೌದು, ವಿಜಯ್ ದೇವರಕೊಂಡ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದು, ಅವರ ಸಹೋದರ ಆನಂದ್ ದೇವರಕೊಂಡ ವೀಡಿಯೋವನ್ನು ಸೆರೆಹಿಡಿದಿದ್ದಾರೆ. ವೀಡಿಯೋದಲ್ಲಿ ವಿಜಯ್ ಅವರ ತಾಯಿ, ಫ್ಲೈಟ್ ಟೆಕ್ ಆಗುವ ವೇಳೆ ಭಯಭೀತರಾಗುತ್ತಾರೆ. ಆಗ ಆನಂದ್ ದೇವರಕೊಂಡ, ಏನು ಆಗುವುದಿಲ್ಲ ಎಂದು ಸಮಾಧಾನ ಪಡಿಸಲು ಪ್ರಯತ್ನಿಸುತ್ತಿರುತ್ತಾರೆ. ಅಲ್ಲದೇ ವಿಜಯ್ ತಂದೆ ಕೂಡ ಪತ್ನಿಯ ಕೈ ಹಿಡಿದುಕೊಳ್ಳುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ನಾಯಕ ದೇವರಕೊಂಡಗಿಂತಲೂ ದುಬಾರಿ ಸಂಭಾವನೆ ಪಡೆಯಲಿದ್ದಾರೆ ಮೈಕ್ ಟೈಸನ್

    vijay devarakonda

    ನಂತರ ವಿಜಯ್ ತಂದೆ ನ್ಯೂಸ್ ಪೇಪರ್ ಓದುತ್ತಿರುವುದನ್ನು, ವಿಜಯ್ ಮೊಬೈಲ್ ವೀಕ್ಷಿಸುತ್ತಿರುವುದನು ವೀಡಿಯೋದಲ್ಲಿ ನೋಡಬಹುದಾಗಿದೆ. ಅಲ್ಲದೇ ಇದೇ ಮೊದಲ ಬಾರಿಗೆ ವಿಜಯ್ ಕುಟುಂಬ ವಿಮಾನದಲ್ಲಿ ಪ್ರಯಾಣಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇನ್ನೂ ಕ್ಯಾಪ್ಷನ್‍ನಲ್ಲಿ ವಿಜಯ್ ದೇವರಕೊಂಡ ಟ್ರವೆಲ್ ಡೈರಿ ಆಫ್ ದೇವರಕೊಂಡ. ಶೂಟ್ ಹಾಗೂ ಎಡಿಟ್ ಮಾಡಿರುವುದು ನನ್ನ ಪುಟ್ಟ ಸಹೋದರ ಆನಂದ್ ದೇವರಕೊಂಡ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಂ ಭಾರತೀಯ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಮೈಕ್ ಟೈಸನ್

     

    View this post on Instagram

     

    A post shared by Vijay Deverakonda (@thedeverakonda)

    ಸದ್ಯ ವಿಜಯ್ ದೇವರಕೊಂಡ ನಿರ್ದೇಶಕ ಪುರಿ ಜಗನ್ನಾಥ್ ಆ್ಯಕ್ಷನ್ ಕಟ್ ಹೆಳುತ್ತಿರುವ ಲೈಗರ್ ಸಿನಿಮಾದಲ್ಲಿ ಬ್ಯೂಸಿಯಾಗಿದ್ದು, ಈ ಸಿನಿಮಾದಲ್ಲಿ ವಿಜಯ್ ಬಾಕ್ಸರ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಲ್ಲದೇ ಇತ್ತೀಚೆಗಷ್ಟೇ ಲೈಗರ್ ಸಿನಿಮಾದಲ್ಲಿ ಗಾಡ್ ಆಫ್ ದಿ ಬಾಕ್ಸಿಂಗ್ ಎಂದೇ ಖ್ಯಾತಿ ಪಡೆದಿರುವ ಅಮೆರಿಕಾದ ಮೈಕ್ ಟೈಸನ್ ಅಭಿನಯಿಸಲಿದ್ದಾರೆ ಎಂಬ ವಿಚಾರವನ್ನು ಚಿತ್ರತಂಡ ರಿವೀಲ್ ಮಾಡಿತ್ತು.

  • ವೀಡಿಯೋ: ಜೋರಾಗಿ ಬೀಸಿದ ಗಾಳಿಗೆ ಬಾಗಿಲಿನೊಂದಿಗೆ ತೂರಿಕೊಂಡು ಹೋದ 4ರ ಬಾಲಕಿ!

    ವೀಡಿಯೋ: ಜೋರಾಗಿ ಬೀಸಿದ ಗಾಳಿಗೆ ಬಾಗಿಲಿನೊಂದಿಗೆ ತೂರಿಕೊಂಡು ಹೋದ 4ರ ಬಾಲಕಿ!

    ವಾಷಿಂಗ್ಟನ್: 4 ವರ್ಷದ ಬಾಲಕಿಯೊಬ್ಬಳು ಮನೆಯ ಬಾಗಿಲು ತೆರೆಯೋಕೆ ಹೋದಾಗ ಜೋರಾಗಿ ಬೀಸಿದ ಗಾಳಿಗೆ ಬಾಗಿಲನ್ನ ಹಿಡಿದುಕೊಂಡೇ ಪಕ್ಕಕ್ಕೆ ತೂರಿಕೊಂಡು ಹೋದ ಘಟನೆ ಅಮೆರಿಕದ ಒಹಿಯೋದಲ್ಲಿ ನಡೆದಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ.

    ಕಾರಿನಿಂದ ಇಳಿದ 4 ವರ್ಷದ ಮ್ಯಾಡಿಸನ್ ಗರ್ಡನರ್ ತನ್ನ ತಾಯಿಗಿಂತಲೂ ಮೊದಲೇ ಬಂದು ಮನೆಯ ಬಾಗಿಲನ್ನ ತೆರೆಯುತ್ತಾಳೆ. ಬಾಗಿಲು ತೆರೆದೊಡನೆ ಜೋರಾಗಿ ಗಾಳಿ ಬೀಸಿದ್ದು, ಬಾಗಿಲಿನ ಸಮೇತ ಪಕ್ಕಕ್ಕೆ ತೂರಿಕೊಂಡು ಹೋಗಿದ್ದಾಳೆ. ಆಕೆ ಬಗಿಲಿನ ಚಿಲಕ ಹಿಡಿದುಕೊಂಡಿದ್ದರಿಂದ ಬಾಗಿಲಲ್ಲೇ ನೇತಾಡಿದ್ದು ಯಾವುದೇ ಹೆಚ್ಚಿನ ಅಪಾಯವಾಗಿಲ್ಲ. ಬಳಿಕ ಮ್ಯಾಡಿಸನ್ ತಾಯಿ ಬ್ರಿಟನಿ ಓಡಿಬಂದು ಮಗಳನ್ನ ರಕ್ಷಿಸಿದ್ದಾರೆ. ಈ ಎಲ್ಲಾ ದೃಶ್ಯಾವಳಿ ಮನೆ ಮುಂದೆ ಹಾಕಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಈ 9 ಸೆಕೆಂಡ್‍ಗಳ ವೀಡಿಯೋವನ್ನ ಬ್ರಿಟನಿ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದು ಈವರೆಗೆ 15 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. ಅಲ್ಲದೆ 15 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ.

    https://www.facebook.com/brittanygardner11/videos/10211952487671221/