Tag: ವೀಕೆಂಡ್‌ ವಿತ್‌ ರಮೇಶ್‌ 5

  • ಮಗ ಸತ್ತಾಗ ಆತ್ಮಸ್ಥೈರ್ಯ ತುಂಬಿ ಜೊತೆಯಾಗಿದ್ದು, ಪ್ರಭುದೇವ: ಪ್ರಕಾಶ್‌ ರಾಜ್‌

    ಮಗ ಸತ್ತಾಗ ಆತ್ಮಸ್ಥೈರ್ಯ ತುಂಬಿ ಜೊತೆಯಾಗಿದ್ದು, ಪ್ರಭುದೇವ: ಪ್ರಕಾಶ್‌ ರಾಜ್‌

    ವೀಕೆಂಡ್ ಟೆಂಟ್‌ನಲ್ಲಿ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ (Prabhudeva)  ಅವರ ಎಂಟ್ರಿಯಾಗಿದೆ. ನಟ ರಮೇಶ್ ಅರವಿಂದ್ ಜೊತೆ ಬದುಕಿನ ಬಾಲ್ಯದ ಹಲವಾರು ವಿಚಾರಗಳನ್ನ ನಟ ಹಂಚಿಕೊಂಡಿದ್ದಾರೆ. ಅದಷ್ಟೇ ಅಲ್ಲ, ಬಹುಭಾಷಾ ನಟ ಪ್ರಕಾಶ್ ರಾಜ್ (Prakash Raj) ಅವರು ಪ್ರಭುದೇವ ಬಗ್ಗೆ Weekend With Ramesh ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಮಗ ಸಿದ್ದು ಸತ್ತಾಗ, ಆತ್ಮಸ್ಥೈರ್ಯ ತುಂಬಿದ ಪ್ರಭುದೇವ ನಡೆಯ ಬಗ್ಗೆ ಮಾತನಾಡಿದ್ದಾರೆ.

    ಮೈಸೂರು ಮೂಲದ ನಟ ಪ್ರಭುದೇವ ಅವರಿಗೆ ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದೆ. ನಟ, ನಿರ್ದೇಶಕ, ಕೊರಿಯೋಗ್ರಾಫರ್ ಆಗಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ರು ಕೂಡ. ಕನ್ನಡ ಭಾಷೆ- ಕರ್ನಾಟಕದ ಬಗ್ಗೆ ಅಪಾರ ಪ್ರೀತಿಯನ್ನ ಇಟ್ಟುಕೊಂಡಿದ್ದಾರೆ. ಪ್ರಭುದೇವ-ಅವರ ತಂದೆ ಮುಗೂರ್ ಸುಂದರ್ ಇಡೀ ಕುಟುಂಬ ಚಿತ್ರರಂಗದಲ್ಲಿ ಕಲಾಸೇವೆ ಮಾಡುತ್ತಲೇ ಬಂದಿದ್ದಾರೆ. ಪ್ರಭುದೇವ ಅವರು `ಪದ್ಮಶ್ರೀ’ ಜೊತೆಗೆ 2 ರಾಷ್ಟ್ರ ಪ್ರಶಸ್ತಿ ಪುರಸ್ಕಾರ ಪಡೆದ ಪ್ರಭುದೇವ ಅವರು ಅಪ್ಪಟ ಕನ್ನಡದ ಪ್ರತಿಭೆ. 36 ವರ್ಷಗಳಲ್ಲಿ 100ಕ್ಕೂ ಅಧಿಕ ಸಿನಿಮಾಗಳಿಗೆ ಕೊರಿಯೋಗ್ರಫಿ ಮಾಡಿರುವ ಪ್ರಭುದೇವ ಅವರು 61 ಚಿತ್ರಗಳಲ್ಲಿ ನಟಿಸಿದ್ದಾರೆ, 15 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ, 3 ಸಿನಿಮಾಗಳ ನಿರ್ಮಾಣ ಮಾಡಿದ್ದಾರೆ. ಭಾರತದ ಸ್ಟಾರ್ ನಟರ ಜೊತೆ ಪ್ರಭುದೇವ ಕೆಲಸ ಮಾಡಿದ್ದಾರೆ. ಇಷ್ಟೇಲ್ಲಾ ಸಾಧನೆ ಮಾಡಿರುವ ಪ್ರಭುದೇವ ಅವರು ಕಷ್ಟದಲ್ಲಿರುವ ಸ್ನೇಹಿತರಿಗಾಗಿ ಮಿಡಿಯುವ ಮನಸ್ಸಿನ ಬಗ್ಗೆ ಪ್ರಕಾಶ್ ರಾಜ್ ವೀಕೆಂಡ್ ವಿತ್ ರಮೇಶ್‌ನಲ್ಲಿ ಹಂಚಿಕೊಂಡಿದ್ದಾರೆ.

    ಕನ್ನಡಿಗ, ಬಹುಭಾಷಾ ನಟ ಪ್ರಕಾಶ್ ರಾಜ್ ಕಾರ್ಯಕ್ರಮದಲ್ಲಿ ವೀಡಿಯೋ ಸಂದೇಶದ ಮೂಲಕ ಸ್ನೇಹಿತ ಪ್ರಭುದೇವ ಅವರ ಹುಟ್ಟುಹಬ್ಬಕ್ಕೆ, ಸಿನಿ ಜರ್ನಿಗೆ ಶುಭಹಾರೈಸಿದ್ದಾರೆ. ಹಾಗೆಯೇ ಎಲ್ಲೂ ಹೇಳಿರದ ವಿಚಾರವೊಂದರನ್ನ ಹಂಚಿಕೊಂಡಿದ್ದಾರೆ. ಪ್ರಕಾಶ್ ರಾಜ್ ಅವರಿಗೆ `ಸಿದ್ದು’ ಎಂಬ ಮುದ್ದಾದ ಗಂಡು ಮಗನಿದ್ದ, 2004ರಲ್ಲಿ 5 ವರ್ಷದ ಮಗ ಸಿದ್ದು ನಿಧನರಾದರು. ಮಗನ ನಿಧನದ ಸಂದರ್ಭದಲ್ಲಿ ಧೈರ್ಯ,ಸಾಂತ್ವನ ತುಂಬಿದ ಬಗ್ಗೆ ಪ್ರಕಾಶ್ ರಾಜ್ ಹೇಳಿದ್ದಾರೆ. ಸಂಕಷ್ಟದ ಸಮಯದಲ್ಲಿ ಪ್ರಭುದೇವ ಸಾಥ್ ನೀಡಿದ್ದರ ಬಗ್ಗೆ ನಟ ಹಂಚಿಕೊಂಡಿದ್ದಾರೆ.

    ವೇದಿಕೆಯಲ್ಲಿ ಶಾಲೆಯ ಗೆಳೆಯರು ಸೇರಿದಂತೆ ಬಾಲ್ಯದ ಗೆಳೆಯರೆಲ್ಲರೂ ಸಹ ವೇದಿಕೆಯ ಮೇಲೆ ಬಂದು ಪ್ರಭುದೇವ ಅವರಿಗೆ ಸರ್ಪ್ರೈಸ್ ನೀಡುವ ಮೂಲಕ ಮತ್ತೊಮ್ಮೆ ಶಾಲಾ ದಿನಗಳು ಹಾಗೂ ಬಾಲ್ಯಕ್ಕೆ ಕರೆದುಕೊಂಡು ಹೋಗುವ ಕೆಲಸವನ್ನು ಮಾಡಿದ್ದಾರೆ. ಬಾಲ್ಯದ ಸ್ನೇಹಿತರನ್ನು ನೋಡಿ ನಾನು ಲುಂಗಿಯನ್ನು ಉಟ್ಟುಕೊಳ್ಳುವುದಿಲ್ಲ. ಇವರೆಲ್ಲರೂ ಲುಂಗಿಯನ್ನ ಉಟ್ಟುಕೊಳ್ಳುತ್ತಾರೆ. ಯಾಕೆಂದರೆ ಬೆಳಿಗ್ಗೆ ಎದ್ದು ನೋಡಿದ್ರೆ ಲುಂಗಿ ಮಾಯವಾಗಿತ್ತು ಎಂದು ಬಾಲ್ಯದಲ್ಲಿ ನಡೆದಂತಹ ಒಂದು ಪ್ರಸಂಗವನ್ನ ಮೆಲುಕು ಹಾಕಿ ಎಲ್ಲರ ಮುಖದಲ್ಲೂ ನಗೆಯನ್ನ ತರಿಸಿದ್ದಾರೆ. ಪ್ರಭುದೇವ ಮತ್ತು ಸ್ನೇಹಿತರು ಮಲಗಿದ್ದಾಗ ರಾತ್ರಿ ಲುಂಗಿ ಉಟ್ಟುಕೊಂಡು ಮಲಗಿದ್ದಾರೆ. ಆದರೆ ಪ್ರಭುದೇವ ಅವರು ಬೆಳಿಗ್ಗೆ ಎದ್ದಾಗ ಲುಂಗಿ ಮಾಯವಾಗಿತ್ತಂತೆ. ಇದರಿಂದ ನಾನು ಅಂದಿನಿಂದ ಲುಂಗಿ ಉಟ್ಟಿಕೊಳ್ಳುವುದನ್ನು ಬಿಟ್ಟೆ ಎಂದು ಪ್ರಭುದೇವ ತಿಳಿಸಿದ್ದಾರೆ.

  • `ಇಂಡಿಯನ್ ಮೈಕಲ್ ಜಾಕ್ಸನ್’ ಪ್ರಭುದೇವ ಕನ್ನಡಕ್ಕೆ ಕನ್ನಡಿಗರ ಚಪ್ಪಾಳೆ

    `ಇಂಡಿಯನ್ ಮೈಕಲ್ ಜಾಕ್ಸನ್’ ಪ್ರಭುದೇವ ಕನ್ನಡಕ್ಕೆ ಕನ್ನಡಿಗರ ಚಪ್ಪಾಳೆ

    ಕಿರುತೆರೆಯ ಜನಪ್ರಿಯ Weekend With Ramesh ಶೋನಲ್ಲಿ `ಇಂಡಿಯನ್ ಮೈಕಲ್ ಜಾಕ್ಸನ್’ ಪ್ರಭುದೇವ ಎಂಟ್ರಿಯಾಗಿದೆ. ಬಾಲ್ಯ ಜೀವನ, ಶಿಕ್ಷಣ, ಸಿನಿಮಾ ಕೆರಿಯರ್, ಡ್ಯಾನ್ಸ್, ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ಪ್ರಭುದೇವ ಅವರು ಈ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಪ್ರಭುದೇವ (Prabhudeva) ಅವರ ಕನ್ನಡಕ್ಕೆ (Kannada) ಕನ್ನಡಿಗರು ಫಿದಾ ಆಗಿದ್ದಾರೆ.

    ಮೈಸೂರು (Mysore) ಮೂಲದ ಪ್ರಭುದೇವ್ ಅವರು ಇತರೆ ಭಾಷೆಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ. ಭಾರತದ ಮೈಕಲ್ ಜಾಕ್ಸನ್ ಎಂದೇ ಖ್ಯಾತಿಗಳಿಸಿರುವ ಪ್ರಭುದೇವ ನಟ ನಿರ್ದೇಶಕ ಡ್ಯಾನ್ಸರ್ ಆಗಿದ್ದಾರೆ. ಈಗ ಐದನೇ ಆವೃತ್ತಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಎರಡನೇ ಸಾಧಕನಾಗಿ ಪ್ರಭುದೇವ ಆಗಮಿಸಿದ್ದಾರೆ. ಮೊದಲ ಸಂಚಿಕೆಯಲ್ಲಿ ರಮ್ಯಾ ಸ್ಪೂರ್ತಿಯ ಕಥೆ ಎಲ್ಲರಿಗೂ ಮೋಡಿ ಮಾಡಿತ್ತು. ಆದರೆ ಅವರ ಅತಿಯಾದ ಇಂಗ್ಲಿಷ್ ಬಳಕೆ ಬಗ್ಗೆ ಅಪಸ್ವರ ಕೇಳಿ ಬಂದಿತ್ತು. ಇನ್ನೂ ಬಾಲಿವುಡ್‌ನ ಬಹುಬೇಡಿಕೆ ನಟ, ನಿರ್ದೇಶಕ ಕೊರಿಯೋಗ್ರಾಫರ್ ಪ್ರಭುದೇವ ಬರುತ್ತಾರೆ ಎಂದಾಗ ಹಿಂದಿ & ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ ಎಂದು ಅಂದುಕೊಂಡವರೇ ಜಾಸ್ತಿ. ಆದರೆ ಆಗಿದ್ದೇ ಬೇರೆ.

    ಪ್ರಭುದೇವ ಅವರು ಅಪರೂಪಕ್ಕೆ ಇಂಗ್ಲಿಷ್ ಪದ ಬಳಸಿದ್ದರು ಕೂಡ ಅತೀ ಹೆಚ್ಚು ಕನ್ನಡದಲ್ಲಿಯೇ ಮಾತನಾಡಿದರು. ಅವರ ತಂದೆ ಮೂಗೂರು ಸುಂದರಂ, ತಾಯಿ, ಸಹೋದರ ನಾಗೇಂದ್ರ ಪ್ರಸಾದ್ ಸೇರಿ ಅವರ ಬಳಗ ಎಲ್ಲವೂ ಕನ್ನಡದಲ್ಲಿಯೇ ಮಾತನಾಡಿದ್ದರು. ಕೆಲವರಿಗೆ ಇದು ತಮಿಳು ಮಿಶ್ರಿತ ಕನ್ನಡ ಅಂತ ಅನಿಸಿರಬಹುದು. ಆದರೆ ಅದು ತಮಿಳು ಮಿಶ್ರಿತ ಕನ್ನಡ ಅಲ್ಲವೇ ಅಲ್ಲ. ಚಾಮರಾಜನಗರ ಭಾಷೆಯ ಕನ್ನಡವಿದು, ಕಾಡು ಭಾಷೆ ಅಂತಲೂ ಹೇಳುತ್ತಾರೆ. ಡಾ ರಾಜ್‌ಕುಮಾರ್ ಅವರು ಚಾಮರಾಜನಗರದ ಕಡೆಯವರು ಬಂದ್ರು ಅಂದ್ರೆ ನಮ್ಮ ಕಾಡಿನವ್ರು ಅಂತ ಹೇಳುತ್ತಿದ್ದರಂತೆ. ಅಷ್ಟೇ ಅಲ್ಲ, ದೋಸೆ ಕೊಡು ಎನ್ನಲು ತತ್ತಾಯ್ಯಾ ಒಂದ್ ದ್ಯಾಸ್ಯಾ ಅಂತ ಹೇಳುತ್ತಿದ್ದರಂತೆ. ಮನೆಯಲ್ಲಿ ಅಣ್ಣಾವ್ರು ಹೀಗೆ ಮಾತನಾಡ್ತಿದ್ರಂತೆ. ಒಟ್ನಲ್ಲಿ ರಮ್ಯಾ (Ramya) ಕನ್ನಡ ಬಳಕೆಗೆ ಅಸಮಾಧಾನ ವ್ಯಕ್ತವಾದ ಬೆನ್ನಲ್ಲೇ ಪ್ರಭುದೇವ ಅವರ ಕನ್ನಡಕ್ಕೆ ಕನ್ನಡಿಗರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಇದನ್ನೂ ಓದಿ: ದಶಕದ ನಂತರ ಮತ್ತೆ ಬಣ್ಣ ಹಚ್ಚಿದ ಸಂಗೀತ ನಿರ್ದೇಶಕ ಗುರುಕಿರಣ್

    ಶಾಲೆಯ ಗೆಳೆಯರು ಸೇರಿದಂತೆ ಬಾಲ್ಯದ ಗೆಳೆಯರೆಲ್ಲರೂ ಸಹ ವೇದಿಕೆಯ ಮೇಲೆ ಬಂದು ಪ್ರಭುದೇವ ಅವರಿಗೆ ಸರ್ಪ್ರೈಸ್ ನೀಡುವ ಮೂಲಕ ಮತ್ತೊಮ್ಮೆ ಶಾಲಾ ದಿನಗಳು ಹಾಗೂ ಬಾಲ್ಯಕ್ಕೆ ಕರೆದುಕೊಂಡು ಹೋಗುವ ಕೆಲಸವನ್ನು ಮಾಡಿದ್ದಾರೆ. ಅಮಾವಾಸ್ಯೆ ಎಂದರೆ ಎಲ್ಲರಿಗೂ ಭಯ ಇದ್ದೇ ಇರುತ್ತದೆ. ಆ ದಿನ ಮಗು ಜನಿಸಿದ್ರೆ ಹೇಗಾಗಿರಬೇಡ, ಆದರೆ ಮೂಗೂರು ಸುಂದರ್ ಅವರು ತಮ್ಮ ಮಗ ಅಮಾವಾಸ್ಯೆ ದಿನ ಹುಟ್ಟಿದ ಎಂದು ತುಂಬಾ ಖುಷಿಯನ್ನ ಪಟ್ಟಿದ್ದಾರೆ. ಅದನ್ನು ಸ್ವತಃ ಅವರೇ ಹೇಳಿದ್ದಾರೆ. ನನ್ನ ಮಗ ಅಮಾವಾಸ್ಯೆಯ ದಿನ ಹುಟ್ಟಿದ್ದು ನನಗಂತೂ ತುಂಬಾ ಸಂತಸವನ್ನು ತಂದಿದೆ ಎಂದು ವೇದಿಕೆಯ ಮೇಲೆ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಪ್ರಭುದೇವ ಅವರಿಗೆ ಹಪ್ಪಳ ಎಂದರೆ ತುಂಬಾ ಇಷ್ಟ. ಇದರಿಂದಾಗಿ ಹಪ್ಪಳದ ಕಥೆಯನ್ನ ಹೇಳಿದ್ದಾರೆ. ನಾವು ಮನೆಯಲ್ಲಿ ಇದ್ದಾಗ ಹಪ್ಪಳವನ್ನು ಜೋಡಿಸಿಕೊಂಡು ತಿನ್ನುತ್ತಿದ್ದೆವು ಎಂದು ನಟ ರಮೇಶ್ ಬಳಿ ಹೇಳಿದ್ದಾರೆ. ಇನ್ನು ಇದೇ ವೇಳೆ `ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ತಂದೆ ಮಗ ಇಬ್ಬರು ಸೇರಿಕೊಂಡು ಡ್ಯಾನ್ಸ್ ಮಾಡಿದ್ದಾರೆ.

    `ಪದ್ಮಶ್ರೀ’ ಜೊತೆಗೆ 2 ರಾಷ್ಟ್ರ ಪ್ರಶಸ್ತಿ ಪುರಸ್ಕಾರ ಪಡೆದ ಪ್ರಭುದೇವ ಅವರು ಅಪ್ಪಟ ಕನ್ನಡದ ಪ್ರತಿಭೆ. 36 ವರ್ಷಗಳಲ್ಲಿ 100ಕ್ಕೂ ಅಧಿಕ ಸಿನಿಮಾಗಳಿಗೆ ಕೊರಿಯೋಗ್ರಫಿ ಮಾಡಿರುವ ಪ್ರಭುದೇವ ಅವರು 61 ಚಿತ್ರಗಳಲ್ಲಿ ನಟಿಸಿದ್ದಾರೆ, 15 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ, 3 ಸಿನಿಮಾಗಳ ನಿರ್ಮಾಣ ಮಾಡಿದ್ದಾರೆ. ಭಾರತದ ಸ್ಟಾರ್ ನಟರ ಜೊತೆ ಪ್ರಭುದೇವ ಕೆಲಸ ಮಾಡಿದ್ದಾರೆ.

  • ಮುದ್ದು ಅಜ್ಜಿಯರಿಗಾಗಿ ಮುಂದಿನ ಬಾರಿ ಕನ್ನಡದಲ್ಲೇ ಮಾತಾಡ್ತೀನಿ: ರಮ್ಯಾ

    ಮುದ್ದು ಅಜ್ಜಿಯರಿಗಾಗಿ ಮುಂದಿನ ಬಾರಿ ಕನ್ನಡದಲ್ಲೇ ಮಾತಾಡ್ತೀನಿ: ರಮ್ಯಾ

    ಕಿರುತೆರೆಯ Weekend With Ramesh 5 ಕಾರ್ಯಕ್ರಮದ ಮೊದಲ ಅತಿಥಿಯಾಗಿ ಮೋಹಕತಾರೆ ರಮ್ಯಾ (Ramya) ಭಾಗವಹಿಸಿದ್ದರು. ಸಾಧಕರ ಸೀಟ್ ಮೇಲೆ ಕೂತಿದ್ದ ರಮ್ಯಾ ಅವರ ಸಾಧನೆಯನ್ನ ಎರಡು ಸಂಚಿಕೆಗಳಲ್ಲಿ ತೋರಿಸಲಾಯಿತು. ಈ ಕಾರ್ಯಕ್ರಮದಲ್ಲಿ ನಟಿ ರಮ್ಯಾ ಕನ್ನಡ ಮಾತನಾಡದೇ ಇಂಗ್ಲಿಷ್ ಬಳಸಿರುವುದಕ್ಕೆ ಸಖತ್ ಟ್ರೋಲ್ ಆಗಿದ್ದರು. ಇದೀಗ ನಟಿ ಮೌನ ಮುರಿದಿದ್ದಾರೆ. ತಾವು ಇಂಗ್ಲಿಷ್ ಮಾತನಾಡಿದ್ದು ಏಕೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ರಮ್ಯಾ ಅವರ ಸಂಚಿಕೆ ಪ್ರಸಾರ ಆದ್ಮೇಲೆ ಅತಿಯಾದ ಇಂಗ್ಲಿಷ್ ಬಳಕೆ ನೋಡಿದ ವೀಕ್ಷಕರು ನಮ್ಮ ಅಜ್ಜಿ, ನಮ್ಮ ತಾಯಿಗೆ ಇಂಗ್ಲಿಷ್ ಬರಲ್ಲ ಅಂತ ಟ್ರೋಲ್ ಮಾಡಲು ಆರಂಭಿಸಿದರು.

    ಇದು ವೀಕೆಂಡ್ ವಿತ್ ರಮೇಶ್ ಇಂಗ್ಲಿಷ್ ವರ್ಷನ್. ಕನ್ನಡ ಸಬ್ ಟೈಟಲ್ ಆದರೂ ಹಾಕಬೇಕಿತ್ತು. ಕನ್ನಡ ಕಾರ್ಯಕ್ರಮದಲ್ಲಿ ಕನ್ನಡವೇ ಮಾಯವಾಗಿರೋದು ದುರಂತ. ರಮ್ಯಾ ಸಾಧನೆ ಮಾಡಿರೋದು ಕನ್ನಡ ಚಿತ್ರರಂಗದಲ್ಲಿ ಮತ್ತು ಕರ್ನಾಟಕದಲ್ಲಿ. ಕನ್ನಡ ಬಿಟ್ಟು ಅತಿಯಾದ ಇಂಗ್ಲಿಷ್ ಬಳಕೆ ಆಗಿದ್ದು ಯಾಕೆ? ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಇದೀಗ ರಮ್ಯಾ ಪ್ರತಿಕ್ರಿಯೆ ಕೊಟ್ಟಿದ್ದಾರೆ.

    ಕಾರ್ಯಕ್ರಮದ ಹೆಸರೇ `ವೀಕೆಂಡ್ ವಿತ್ ರಮೇಶ್’ #Justsaying. ಕಾರ್ಯಕ್ರಮಕ್ಕೆ ಬಂದ ಅತಿಥಿಗಳು ಕನ್ನಡೇತರರು, ನಾನು ಎಲ್ಲರನ್ನು ಒಳಗೊಳ್ಳಲು ಪ್ರಯತ್ನಿಸುತ್ತಿದ್ದೆ ಅಷ್ಟೇ. ಮುಂದಿನ ಕಾರ್ಯಕ್ರಮ ಎಲ್ಲಾ ಮುದ್ದು ಅಜ್ಜಿಯಂದಿರಿಗಾಗಿ ಪೂರ್ತಿ ಕನ್ನಡದಲ್ಲೇ ಮಾತನಾಡುತ್ತೇನೆ. ನಾವೆಲ್ಲರೂ ಪ್ರೀತಿ ಮತ್ತು ದಯೆಯ ಭಾಷೆಯಲ್ಲಿ ಮಾತನಾಡೋಣ ಎಂದು ನಟಿ ರಮ್ಯಾ ಕಾಮೆಂಟ್ ಮಾಡಿದ್ದಾರೆ.

    ಆದರೆ ರಮ್ಯಾ ನೀಡಿರುವ ಪ್ರತಿಕ್ರಿಯೆ ಅನೇಕರಿಗೆ ಇಷ್ಟವಾಗಿಲ್ಲ. ನೀವು ಕನ್ನಡ (Kannada)  ಮಾತನಾಡುವವರೆಗೆ ಆ ಅಜ್ಜಿಂದಿರು ಇರಬೇಕಲ್ಲ ಎಂದು ನಟಿಗೆ ಟೀಕೆ ಮಾಡಿದ್ದಾರೆ.

  • ಕ್ರೇಜಿ ಕ್ವೀನ್ ರಕ್ಷಿತಾ ಜೊತೆ ಕಾಂಪಿಟೇಶನ್ ಶುರುವಾಗಿದ್ಹೇಗೆ, ರಮ್ಯಾ ಹೇಳಿದ್ದೇನು?

    ಕ್ರೇಜಿ ಕ್ವೀನ್ ರಕ್ಷಿತಾ ಜೊತೆ ಕಾಂಪಿಟೇಶನ್ ಶುರುವಾಗಿದ್ಹೇಗೆ, ರಮ್ಯಾ ಹೇಳಿದ್ದೇನು?

    ಕಿರುತೆರೆ ಪ್ರೇಕ್ಷಕರು ಕಾದು ಕುಳಿತಿದ್ದ Weekend With Ramesh 5 ಮೊದಲ ಸಂಚಿಕೆಗೆ ತೆರೆಬಿದ್ದಿದೆ. ಸಾಧಕರ ಸಾಲಿನಲ್ಲಿ ಸಾಧಕಿಯಾಗಿ ರಮ್ಯಾ ಅವರ ಜೀವನದ ಹಲವು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ವೇದಿಕೆಯಲ್ಲಿ ಕ್ರೇಜಿ ಕ್ವೀನ್ ರಕ್ಷಿತಾ (Rakshitha) ಜೊತೆಗಿನ ಕಾಂಪಿಟೇಷನ್ ಬಗ್ಗೆ ರಮ್ಯಾ (Ramya) ಬಾಯ್ಬಿಟ್ಟಿದ್ದಾರೆ. ನಮ್ಮ ಮಧ್ಯೆ ಈ ಜಟಾಪಟಿ ಶುರು ಆಗಿದ್ಹೇಗೆ ಎಂಬುದನ್ನ ಹೇಳಿದ್ದಾರೆ.  ಬಾಲ್ಯದಲ್ಲಿ ರಮ್ಯಾ ನೆಚ್ಚಿನ ಚಿತ್ರಾನ್ನ, ಅಪ್ಪು ಕೊಟ್ಟ ಫಸ್ಟ್ ಚೆಕ್, ಎಕ್ಸ್‌ಕ್ಯೂಸ್‌ ಮಿ ಚಿತ್ರದ ಬಗ್ಗೆ ಮಾತನಾಡಿದ್ದಾರೆ

    ತಮ್ಮ ಬಾಲ್ಯದ ದಿನಗಳಲ್ಲಿ ರಮ್ಯಾ ತುಂಬಾ ತುಂಟಿ ಆಗಿದ್ರಂತೆ. ಬೋರ್ಡಿಂಗ್ ಶಾಲೆಯಲ್ಲಿ ಓದ್ದಿದ್ದ ರಮ್ಯಾ, ಚಿತ್ರಾನ್ನ ಹಾಗೂ ಜಿಲೇಬಿ ಮೇಲಿರುವ ಪ್ರೀತಿಯನ್ನು ಹಾಗೂ ಅವರು ಹೇಗೆ ಚಿಪ್ಸ್ ಅನ್ನು ಸ್ಪೂನ್‌ನಂತೆ ಬಳಸಿ ಚಿತ್ರಾನ್ನ ತಿನ್ನುತ್ತಾರೆಂಬುದು ಅವರ ಸಹೋದರಿಯರು ಈ ಬಗ್ಗೆ ತಿಳಿಸಿದರು. ಶಾಲೆಯಲ್ಲಿನ ಕಠಿಣ ನಿಯಮಗಳು, ಅಲ್ಲಿನ ಶಿಕ್ಷಕರು, ಅಲ್ಲಿನ ಗೆಳೆಯರ ನೆನಪುಗಳನ್ನೆಲ್ಲ ಮಾಡಿಕೊಂಡರು. ರಮ್ಯಾರನ್ನು ಕಾಣಲು ಅವರ ಬಾಲ್ಯದ ಗೆಳತಿಯರಿಬ್ಬರೂ ಬಹು ದೂರದಿಂದ ಬಂದಿದ್ದರು. ರಮ್ಯಾ ಹೇಗೆ ಕತ್ತಲಾಗುತ್ತಿದ್ದಂತೆ ದೆವ್ವದ ಕತೆಗಳನ್ನು ಹೇಳಿ ಎಲ್ಲರನ್ನೂ ಹೆದರಿಸುತ್ತಿದ್ದರು. ರಮ್ಯಾ ಬಹಳವಾಗಿ ಹೆದರುವ ಅವರ ಗಣಿತ ಶಿಕ್ಷಕಿ ಸಹ ಶೋಗೆ ಬಂದು ಶೋನಲ್ಲಿಯೂ ಗಣಿತದ ಲೆಕ್ಕ ಬಿಡಿಸಲು ಹೇಳಿದರು. ಆದರೆ ರಮ್ಯಾ ಲೆಕ್ಕ ಬಿಡಿಸಿ ಭೇಷ್ ಎನಿಸಿಕೊಂಡಿದ್ದು ಆಪ್ತವಾಗಿತ್ತು.

    ನಂತರ ರಮ್ಯಾ, ಚಿತ್ರರಂಗಕ್ಕೆ ಬರಲು ಅವಕಾಶ ಸಿಕ್ಕಿದ್ದು ಹೇಗೆ? ಎಂಬುದನ್ನ ನಟಿ ವಿವರಿಸಿದರು. ಅಂದು ರಾಘಣ್ಣ, ರಮ್ಯಾರನ್ನು ನೋಡಿದ ಕೂಡಲೇ ಅವರನ್ನು ಸಿನಿಮಾದಲ್ಲಿ ನಟಿಸುವಂತೆ ಕೇಳಿದರು. ಆದರೆ ಅಪ್ಪು ಸಿನಿಮಾದ ಅವಕಾಶ ತಮಗೆ ತಪ್ಪಿ ನಂತರ `ಅಭಿ’ ಸಿನಿಮಾದ ಅವಕಾಶ ಸಿಕ್ಕಿತು. ಆ ಸಮಯದಲ್ಲಿ ಅಣ್ಣಾವ್ರವನ್ನು ಭೇಟಿಯಾಗಿದ್ದು, ಪಾರ್ವತಮ್ಮನವರು ತಮಗೆ ರಮ್ಯಾ ಎಂದು ಹೆಸರಿಟ್ಟ ಆ ಕ್ಷಣ. ಮೊದಲ ಸಿನಿಮಾದಲ್ಲಿ ಅಪ್ಪು ತಮಗೆ ಮಾಡಿದ ಸಹಾಯ. ಮೊದಲ ಚೆಕ್ ಅನ್ನು ಅಪ್ಪುವಿಂದ ಪಡೆದುಕೊಂಡಿದ್ದು, ಎಲ್ಲವನ್ನೂ ನೆನಪಿಸಿಕೊಂಡರು. ರಾಘಣ್ಣ (Raganna) ಹಾಗೂ ಶಿವಣ್ಣ (Shivanna) ಅವರುಗಳು ವಿಡಿಯೋ ಸಂದೇಶ ಕಳಿಸಿ, ರಮ್ಯಾಗೆ ಶುಭ ಹಾರೈಸಿದರು. ನಮ್ಮ ಸಂಸ್ಥೆಯಿಂದ ನೀವು ಬೆಳೆಯಲಿಲ್ಲ. ನಿಮ್ಮ ಪ್ರತಿಭೆಯಿಂದ ಬೆಳೆದಿರಿ ಎಂದು ರಾಘಣ್ಣ ಹಾಡಿ ಹೊಗಳಿದರು.

    `ಅಭಿ’ (Abhi) ಸಿನಿಮಾದ ಸಹಾಯಕ ನಿರ್ದೇಶಕ ಮಹೇಶ್ ಬಾಬು (Mahesh Babu) , ಹಾಗೂ ಅಪ್ಪು-ರಮ್ಯಾರ ಅರಸು, ಆಕಾಶ್ ಸಿನಿಮಾಗಳಿಗೆ ನಿರ್ದೇಶನ ಮಾಡಿದರು. ಬಂದು ರಮ್ಯಾರ ಸಿಟ್ಟಿನ ಬಗ್ಗೆ ಹೇಳಿದರು. ನನಗೆ ರಕ್ಷಿತಾಗೆ (Rakshitha) ಕಾಂಪಿಟೇಶನ್ ತಂದು ಇಟ್ಟಿದ್ದೆ ಇವರು ಎಂದು ರಮ್ಯಾ ಮಹೇಶ್‌ರ ಕಾಲೆಳೆದಿದ್ದಾರೆ. ಈ ಮಾತಿನ ನಡುವೆ ಪುನೀತ್ ಸ್ಮರಿಸಿದ ರಮ್ಯಾ, ಅಪ್ಪುವಿನಿಂದ ತಾವು ಕಲಿತ ಕೆಲವು ವಿಷಯಗಳ ಬಗ್ಗೆ ಮತ್ತು ತಾವು ಕಳೆದ ಅಮೂಲ್ಯ ಕ್ಷಣಗಳನ್ನು ನೆನಪಿಸಿಕೊಂಡರು. ಅಪ್ಪು ಅಗಲಿಕೆಯಿಂದ ಅನುಭವಿಸಿದ ನೋವು, ಅಪ್ಪು ಅಗಲಿದ ಆ ದಿನದ ಬಗ್ಗೆಯೂ ರಮ್ಯಾ ನೆನಪಿಸಿಕೊಂಡು ಕಣ್ಣೀರು ಹಾಕಿದರು.

    ಆ ನಂತರ ರಮೇಶ್ ಅರವಿಂದ್ Excuse Me ಸಿನಿಮಾದ ವಿಷಯ ತೆಗೆದರು. ಆ ಸಿನಿಮಾದ ಇಬ್ಬರು ನಾಯಕರಾದ ನಿರ್ಮಾಪಕರು ಸುನಿಲ್ ರಾವ್ ಹಾಗೂ ಅಜಯ್ ಅವರುಗಳು ರಮ್ಯಾ ಕುರಿತಾಗಿ ಮಾತನಾಡಿದರು. ನಟಿಯ ಮುಂದಿನ ಜರ್ನಿಗೆ ಶುಭಹಾರೈಸಿದರು. ಇನ್ನೂ `ವೀಕೆಂಡ್ ವಿತ್ ರಮೇಶ್ʼ ಮೊದಲ ಸಂಚಿಕೆಯು ನಗು, ಭಾವುಕತೆ, ನೆನಪು, ಪ್ರೀತಿ, ಸಾರ್ಥಕತೆ ಭಾವನೆಗಳಿಂದ ಕೂಡಿತ್ತು.

  • Weekend With Ramesh: ರಕ್ಷಿತಾ ಜೊತೆಗಿನ ಸ್ಪರ್ಧೆ ಬಗ್ಗೆ ರಮ್ಯಾ ಮಾತು

    Weekend With Ramesh: ರಕ್ಷಿತಾ ಜೊತೆಗಿನ ಸ್ಪರ್ಧೆ ಬಗ್ಗೆ ರಮ್ಯಾ ಮಾತು

    ಸ್ಯಾಂಡಲ್‌ವುಡ್ (Sandalwood) ನಟಿ ರಮ್ಯಾ (Ramya) ಚಿತ್ರರಂಗಕ್ಕೆ ಕಂಬ್ಯಾಕ್ ಆದಮೇಲೆ ಅವರದ್ದೇ ಹಾವಳಿ. ಒಂದು ದಶಕಗಳ ಕಾಲ ಚಿತ್ರರಂಗ ಆಳಿದ ಮೋಹಕತಾರೆ ಇದೀಗ `ವೀಕೆಂಡ್ ವಿತ್ ರಮೇಶ್ 5′ ಶೋನಲ್ಲಿ ಭಾಗವಹಿಸಿದ್ದಾರೆ. ಶೋ ಪ್ರಸಾರವಾಗಲು ಈಗಾಗಲೇ ಕೌಂಟ್‌ಡೌನ್ ಶುರುವಾಗಿದೆ. ಸದ್ಯ ರಮ್ಯಾ ಪ್ರೋಮೋ ಸದ್ದು ಮಾಡ್ತಿದೆ. ರಕ್ಷಿತಾ (Rakshitha)  ಜೊತೆಗಿನ ಸ್ಪರ್ಧೆ ಬಗ್ಗೆ ರಮ್ಯಾ ಮೌನ ಮುರಿದಿದ್ದಾರೆ. ಇದನ್ನೂ ಓದಿ: ಹೊಸ ಫೋಟೋಶೂಟ್‌ನಲ್ಲಿ ಮಹಾಲಕ್ಷ್ಮಿಯಂತೆ ಕಂಗೊಳಿಸಿದ ನಟಿ ಅಮೂಲ್ಯ

    ಅಭಿ ಚಿತ್ರದಲ್ಲಿ ಪುನೀತ್‌ಗೆ (Puneeth) ನಾಯಕಿಯಾಗುವ ಮೂಲಕ ರಮ್ಯಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅದೇ ಸಮಯದಲ್ಲಿ ರಕ್ಷಿತಾ ಕೂಡ ಪೀಕ್‌ನಲ್ಲಿದ್ದರು. ಇವರಿಬ್ಬರು ಒಂದೇ ಸಮಯದಲ್ಲಿ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಇಬ್ಬರ ನಡುವೆ ಸ್ಪರ್ಧೆ ಅನ್ನೋದು ಮೊದಲ ಚಿತ್ರದಿಂದಲೇ ಶುರುವಾಗಿತ್ತು. ಪ್ರತಿ ಸಿನಿಮಾ ಸೆಲೆಕ್ಷನ್ ವೇಳೆ ಇಬ್ಬರ ನಡುವೆ ಪೈಪೋಟಿ ಇರುತ್ತಿತ್ತು. ಪ್ರತಿಯೊಂದು ಚಿತ್ರದ ವಿಚಾರಕ್ಕೂ ಜಿದ್ದಾಜಿದ್ದಿ ಏರ್ಪಟ್ಟಿತ್ತು.

    ರಮ್ಯಾ ಮುಟ್ಟಿದ್ದೆಲ್ಲ ಚಿನ್ನ ಎಂಬಂತೆ ಅವರು ನಟಿಸಿದ ಬಹುತೇಕ ಸಿನಿಮಾಗಳು ಸಿನಿಮಾ ಲಿಸ್ಟ್‌ಗೆ ಸೇರಿದವು. ಚಿತ್ರರಂಗದಲ್ಲಿ ಇದ್ದಷ್ಟು ದಿನ ನಂ 1 ನಟಿಯಾಗಿ ಮೆರೆದ ಅವರಿಗೆ ರಕ್ಷಿತಾ ಜೊತೆ ಸ್ಪರ್ಧೆ ಇತ್ತಂತೆ. `Weekend With Ramesh’ ಪ್ರೋಮೋದಲ್ಲಿ ರಕ್ಷಿತಾ ಜೊತೆ ಇದ್ದಿದ್ದ ಸ್ಪರ್ಧೆಯ ಬಗ್ಗೆಯೂ ರಮ್ಯಾ ಮಾತನಾಡಿದ್ದಾರೆ. 2002ರಲ್ಲಿ ರಕ್ಷಿತಾ ಜೊತೆಗಿನ `ಅಪ್ಪು’ ಸಿನಿಮಾ ರಿಲೀಸ್ ಆಗಿತ್ತು. 2003ರಲ್ಲಿ `ಅಭಿ’ ಸಿನಿಮಾ ರಿಲೀಸ್ ಆಗಿತ್ತು. ಇವರಿಬ್ಬರು ಒಂದೇ ಸಮಯದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು.

    ರಮ್ಯಾ (Ramya) ಅವರ ವೃತ್ತಿ ಜೀವನದಲ್ಲಿ ರಾಜ್‌ಕುಮಾರ್ ಕುಟುಂಬ ವಿಶೇಷವಾಗಿದೆ. ರಮ್ಯಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಪಾರ್ವತಮ್ಮ. ಅವರಿಗೆ ರಮ್ಯಾ ಎಂದು ನಾಮಕರಣ ಮಾಡಿದ್ದೂ ಅವರೇ. ಇದನ್ನು ರಮ್ಯಾ ಉಲ್ಲೇಖ ಮಾಡಿದ್ದಾರೆ. ಶ್ರೀನಗರ ಕಿಟ್ಟಿ ಹಾಗೂ ರಮ್ಯಾ ಅಭಿನಯದ `ಸಂಜು ಮತ್ತು ಗೀತ’ ಸಿನಿಮಾ ಯಶಸ್ಸು ಕಂಡಿತ್ತು. ಶ್ರೀನಗರ ಕಿಟ್ಟಿ ಕೂಡ ವೇದಿಕೆ ಏರಿದ್ದಾರೆ. ಈ ವೇಳೆ `ಐ ಲವ್ ಯೂ ಸಂಜು’ ಎಂದಿದ್ದಾರೆ ರಮ್ಯಾ. ಪುನೀತ್ ಹಾಗೂ ರಮ್ಯಾ ಅವರದ್ದು ಹಿಟ್ ಕಾಂಬಿನೇಷನ್. ಆ ಬಗ್ಗೆಯೂ ರಮ್ಯಾ ಮಾತನಾಡಿದ್ದಾರೆ. ರಮ್ಯಾ ಪುನೀತ್ ನೆನೆದು ಕಣ್ಣೀರು ಹಾಕಿದ್ದಾರೆ.