Tag: ವಿ.ಸೋಮಣ್ಣ

  • ರಣಾಂಗಣವಾದ ವರುಣಾ ಕಣ; ಸಿದ್ದರಾಮಯ್ಯನಹುಂಡಿಯಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ

    ರಣಾಂಗಣವಾದ ವರುಣಾ ಕಣ; ಸಿದ್ದರಾಮಯ್ಯನಹುಂಡಿಯಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ

    – ಓರ್ವ ಆಸ್ಪತ್ರೆಗೆ ದಾಖಲು

    ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಹೊತ್ತಿನಲ್ಲಿ ವರುಣಾ (Varuna) ಕ್ಷೇತ್ರ ಪ್ರಬಲ ನಾಯಕರ ಪೈಪೋಟಿಯಿಂದ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿದೆ. ಸಿದ್ದರಾಮಯ್ಯನಹುಂಡಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಮಾರಾಮಾರಿ ನಡೆದಿದೆ.

    ಘಟನೆಗೆ ಕಾರಣ ತಿಳಿದುಬಂದಿಲ್ಲ. ಗಲಾಟೆ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತ ನಾಗೇಶ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೆಎಸ್ಎಸ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ. ಗಲಾಟೆಯಲ್ಲಿ ನಾಗೇಶ್‌ ಭುಜ ಮತ್ತು ಕಾಲುಗಳಿಗೆ ಗಾಯವಾಗಿತ್ತು. ಸದ್ಯ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಮೀನು ಮುಟ್ಟಿದ್ದೇನೆ ದೇಗುಲದ ಒಳಗೆ ಬರಬಹುದೇ?: ಹೊಸ್ತಿಲ ಹೊರಗೆ ನಿಂತು ರಾಹುಲ್ ಪ್ರಶ್ನೆ

    ಪಕ್ಷದ ಅಭ್ಯರ್ಥಿ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ವರುಣಾ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರಿಗೆ ತಿಳಿಸಲಾಗಿದೆ. ಗಾಯಾಳು ನೋಡಲು ಜೆಎಸ್‌ಎಸ್‌ ಆಸ್ಪತ್ರೆಗೆ ಸೋಮಣ್ಣ ಆಗಮಿಸಲಿದ್ದಾರೆ ಎನ್ನಲಾಗಿದೆ.

    ಸದ್ಯ ಸಿದ್ದರಾಮಯ್ಯನಹುಂಡಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಘಟನೆ ಸಂಬಂಧ ಮೂವರ ವಿರುದ್ಧ ಹಲ್ಲೆ ಆರೋಪ ಮಾಡಲಾಗಿದೆ. ಎನ್‌ಸಿಆರ್ ಮಾಡಿ ಪೊಲೀಸರು ಆರೋಪಿಗಳನ್ನು ಬಿಟ್ಟು ಕಳುಹಿಸಿದ್ದಾರೆ. ಇದನ್ನೂ ಓದಿ: ಏ.30ಕ್ಕೆ ಚನ್ನಪಟ್ಟಣಕ್ಕೆ ಮೋದಿ – ದಶಪಥ ಹೆದ್ದಾರಿ ಮಾರ್ಗ ಬದಲಾವಣೆ

  • ಸೋಮಣ್ಣ ಪ್ರಚಾರದ ವೇಳೆ ಕಾಂಗ್ರೆಸ್ ಕಾರ್ಯಕರ್ತರಿಂದ ಕಲ್ಲು ತೂರಾಟ – ಓರ್ವನಿಗೆ ಗಾಯ

    ಸೋಮಣ್ಣ ಪ್ರಚಾರದ ವೇಳೆ ಕಾಂಗ್ರೆಸ್ ಕಾರ್ಯಕರ್ತರಿಂದ ಕಲ್ಲು ತೂರಾಟ – ಓರ್ವನಿಗೆ ಗಾಯ

    ಮೈಸೂರು: ಸಿದ್ದರಾಮನಹುಂಡಿಯಲ್ಲಿ ಸೋಮಣ್ಣ ಪ್ರಚಾರದ ನಡೆಸುತ್ತಿದ್ದ ಸಂದರ್ಭದಲ್ಲಿ ಬಿಜೆಪಿ (BJP) ಪ್ರಚಾರ ರಥದ ಮೇಲೆ ಕಾಂಗ್ರೆಸ್ (Congress) ಕಾರ್ಯಕರ್ತರಿಂದ ಕಲ್ಲು ತೂರಾಟ ನಡೆಸಿರುವ ಆರೋಪ ಕೇಳಿ ಬಂದಿದೆ.

    ಸಿದ್ದರಾಮಯ್ಯ (Siddaramaiah) ಅವರ ಅಣ್ಣನ ಮನೆ ಮುಂದೆ ಪ್ರಚಾರ ಮಾಡುವಾಗ ಈ ಘಟನೆ ನಡೆದಿದೆ. ಘಟನೆ ವೇಳೆ ಬಿಜೆಪಿ ಕಾರ್ಯಕರ್ತ ನಾಗೇಶ್ ಮೇಲೆ ಹಲ್ಲೆ ನಡೆದಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ.

    ಘಟನೆಯೇನು?: ಪ್ರಚಾರಕ್ಕಾಗಿ ಬಿಜೆಪಿ ನಾಯಕರು ಸಿದ್ದರಾಮಯ್ಯನಹುಂಡಿಗೆ ಎಂಟ್ರಿ ಆಗುತ್ತಿದ್ದಂತೆ ಸ್ಥಳೀಯರಿಂದ ಕಿರಿಕ್ ನಡೆದಿರುವ ಆರೋಪ ಕೇಳಿ ಬಂದಿದೆ. ಗ್ರಾಮಕ್ಕೆ ಬಿಜೆಪಿ ನಾಯಕರು ಎಂಟ್ರಿ ಆಗುತ್ತಿದ್ದ ಕಾರುಗಳನ್ನು ತಡೆದು ಗಲಾಟೆ ನಡೆಸಿದ್ದಾರೆ. ಈ ವೇಳೆ ಕಾರಿನಿಂದ ಇಳಿದು ಯುವಕ ನಾಗೇಶ್ ಪ್ರಶ್ನೆ ಮಾಡಿದ್ದಾನೆ. ನಾಗೇಶ್ ಪ್ರಶ್ನೆ ಮಾಡುತ್ತಿದ್ದಂತೆ 30ಕ್ಕೂ ಹೆಚ್ಚು ಜನರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಪ್ರವೀಣ್‌ ನೆಟ್ಟಾರು ಕನಸು ನನಸು – ನೂತನ ಮನೆಯ ಗೃಹ ಪ್ರವೇಶ, ಸ್ಮಾರಕ ಲೋಕಾರ್ಪಣೆ

    ಪ್ರಚಾರ ರಥದಲ್ಲಿ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ (V Somanna), ಸಂಸದ ಪ್ರತಾಪ್ ಸಿಂಹ (Pratap Simha) ಇದ್ದರು. ಸ್ವಲ್ಪದರ  ಅಂತದರಲ್ಲೇ ಅಭ್ಯರ್ಥಿ ವಿ. ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಘಟನೆಯಿಂದ ಪಾರಾಗಿದ್ದಾರೆ. ಘಟನೆ ಕುರಿತು ವರುಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಯಾವ್ಯಾವ ಮತಗಟ್ಟೆಗಳನ್ನು ಸೂಕ್ಷ್ಮ, ಅತಿಸೂಕ್ಷ್ಮ ಘೋಷಿಸಬೇಕು – ಮಾಹಿತಿ ಕೋರಿ ಏಜೆಂಟ್‌ಗಳಿಗೆ ಕರಂದ್ಲಾಜೆ ಪತ್ರ

  • ಅಮಿತ್ ಶಾ, ವಿ.ಸೋಮಣ್ಣ ವಿರುದ್ಧ ಪೊಲೀಸರಿಗೆ ‘ಕೈ’ ನಾಯಕರ ದೂರು

    ಅಮಿತ್ ಶಾ, ವಿ.ಸೋಮಣ್ಣ ವಿರುದ್ಧ ಪೊಲೀಸರಿಗೆ ‘ಕೈ’ ನಾಯಕರ ದೂರು

    ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹಾಗೂ ಸಚಿವ ವಿ.ಸೋಮಣ್ಣ ವಿರುದ್ಧ ಕಾಂಗ್ರೆಸ್ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ದಾಖಲಿಸಿದೆ.

    ಚುನಾವಣಾ (Elections) ಪ್ರಚಾರದ ವೇಳೆ ಕರ್ನಾಟಕದಲ್ಲಿ ಕಾಂಗ್ರೆಸ್ (Congress) ಆಡಳಿತಕ್ಕೆ ಬಂದರೆ ಗಲಭೆಗಳು ಹಾಗೂ ಘರ್ಷಣೆಗಳು ನಡೆಯಲಿವೆ ಎಂದು ಮತದಾರರನ್ನು ಬೆದರಿಸಿದ್ದಾರೆ. ಬಿಜೆಪಿ ಹತಾಷೆಯಿಂದ ಇಂತಹ ಹೇಳಿಕೆಗಳನ್ನು ನೀಡುತ್ತಿದೆ. ಇಲ್ಲ ಸಲ್ಲದ ಹೇಳಿಕೆ ನೀಡಿರುವ ಅಮಿತ್ ಶಾ ಅವರನ್ನು ಬಂಧಿಸಬೇಕು ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ (Surjewala) ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಚುನಾವಣೆಗೆ ಅಣಿಗೊಳಿಸಲು ಮೋದಿ ರಣತಂತ್ರ – 50 ಲಕ್ಷ ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದ

    Amith

    ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಪ್ರತಿಕ್ರಿಯಿಸಿ, ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಇಲ್ಲಿನ ಜನ ಶಾಂತಿ ಪ್ರಿಯರಾಗಿದ್ದಾರೆ. ಆದರೆ ಅಮಿತ್ ಶಾ, ಗಲಭೆ ನಡೆಯಲಿದೆ ಎಂದು ಬೆದರಿಕೆ ಒಡ್ಡುತ್ತಾರೆ. ಸಾಮಾನ್ಯ ಜನ ಈ ಹೇಳಿಕೆ ನೀಡಿದ್ದರೆ ಇಷ್ಟರಲ್ಲೇ ಅವರ ಬಂಧನವಾಗುತ್ತಿತ್ತು. ಶಾ ಹೇಳಿಕೆಗೆ ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕು. ಚುನಾವಣಾ ಆಯೋಗ, ಶಾ ಅವರಿಗೆ ಪ್ರಚಾರಕ್ಕೆ ಬಾರದಂತೆ ನಿರ್ಬಂಧ ಹೇರಬೇಕು ಎಂದು ದೆಹಲಿ ಚುನಾವಣಾ ಆಯೋಗಕ್ಕೆ ದೂರು ನೀಡಿ ಒತ್ತಾಯಿಸಿದ್ದಾರೆ.

    ಸಚಿವ ವಿ.ಸೋಮಣ್ಣ ಚಾಮರಾಜನಗರ ಜೆಡಿಎಸ್ ಅಭ್ಯರ್ಥಿಗೆ ಬೆದರಿಕೆ ಹಾಗೂ ಆಮಿಷವೊಡ್ಡಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಹಾಗೂ ಪೊಲೀಸರು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡರು ಹರಿಹಾಯ್ದಿದ್ದಾರೆ.

    ಏ.25 ರಂದು ಅಮಿತ್ ಶಾ ಚುನಾವಣಾ ಪ್ರಚಾರದ ವೇಳೆ ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಗಲಭೆ ನಡೆಯಲಿದೆ ಎಂದಿದ್ದರು. ಇದನ್ನೂ ಓದಿ: ಟ್ರ್ಯಾಕ್ಟರ್‌ಗೆ ಮಾರುತಿ ಕಾರು ಚಕ್ರ ಹಾಕಿದ್ರೆ ಸರಿಯಾಗಿ ಓಡುತ್ತಾ? – ‘ಡಬಲ್ ಎಂಜಿನ್ ಸರ್ಕಾರ’ ಮುಖ್ಯ ಎಂದ ಮೋದಿ

  • ಜೆಡಿಎಸ್ ಅಭ್ಯರ್ಥಿಗೆ ಆಮಿಷ? – ಸೋಮಣ್ಣರದ್ದು ಎನ್ನಲಾದ ಆಡಿಯೋ ವೈರಲ್

    ಜೆಡಿಎಸ್ ಅಭ್ಯರ್ಥಿಗೆ ಆಮಿಷ? – ಸೋಮಣ್ಣರದ್ದು ಎನ್ನಲಾದ ಆಡಿಯೋ ವೈರಲ್

    ಚಾಮರಾಜನಗರ: ಸಚಿವ ಸೋಮಣ್ಣ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿರುವುದರಿಂದ ಚಾಮರಾಜನಗರ ಕೂಡ ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿದೆ. ನಾಮಪತ್ರ ವಾಪಾಸ್ ಪಡೆಯುವಂತೆ ಜೆಡಿಎಸ್ ಅಭ್ಯರ್ಥಿಗೆ ಆಮಿಷವೊಡ್ಡಲಾಗಿದೆ ಎನ್ನುವ ಆಡಿಯೋ ವೈರಲ್ ಆಗಿದೆ. ಅಲ್ಲದೇ ರಾಜ್ಯದಲ್ಲಿ ಚರ್ಚೆಗೂ ಕೂಡ ನಾಂದಿಯಾಡಿದೆ.

    ಹೌದು, ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನಸ್ವಾಮಿ ಅವರಿಗೆ ಬಿಜೆಪಿ ಅಭ್ಯರ್ಥಿ, ಸಚಿವ ವಿ.ಸೋಮಣ್ಣ ಕರೆ ಮಾಡಿ ನಾಮಪತ್ರ ವಾಪಸ್ ಪಡೆಯುವಂತೆ ಹೇಳುವ ಆಡಿಯೋ ತುಣುಕು ವಾಟ್ಸಪ್‌ನಲ್ಲಿ ಹರಿದಾಡುತ್ತಿದೆ. ಆಲೂರು ಮಲ್ಲು ಚಾಮರಾಜನಗರ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ನೀಡಿದ್ದು, ನಾಮಪತ್ರ ಸಲ್ಲಿಸಿದ್ದರು. ಲಿಂಗಾಯತ ಸಮುದಾಯಕ್ಕೆ ಸೇರಿದ್ದಾರೆ. ಉಮೇದುವಾರಿಕೆ ವಾಪಸ್ ಪಡೆಯಲು ಅವಕಾಶ ನೀಡಲಾಗಿತ್ತು. ಸೋಮಣ್ಣ ಅವರು ವರುಣಾ ಕ್ಷೇತ್ರದಲ್ಲಿ ಪ್ರಚಾರದಲ್ಲಿ ನಿರತರಾಗಿದ್ದರು. ಸೋಮವಾರ ಬೆಂಬಲಿಗರೊಬ್ಬರು ಆಲೂರು ಮಲ್ಲು ಅವರಿಗೆ ಕರೆ ಮಾಡಿ, ಸೋಮಣ್ಣ ಬಳಿ ಮಾತನಾಡಿಸಿದ್ದಾರೆ. ಅದರಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ.

    ಆಡಿಯೋದಲ್ಲಿ ಏನಿದೆ?
    ಸೋಮಣ್ಣ: ‘ಏಯ್ ಮೊದ್ಲು ತಗೊಳಯ್ಯ, ಆಮೇಲೆ ಏನ್ ಬೇಕೋ ಮಾಡ್ತೀನಿ. ಏನಯ್ಯಾ ನೀನು, ಯಾವನದೋ ಮಾತು ಕೇಳ್ಕೊಂಡು… ಮಲ್ಲು ನೀನು ನನಗೆ ಹಳೆಯ ಸ್ನೇಹಿತ. ಅವನ್ಯಾವನೋ ತೊಟ್ಟಿ ನನ್ ಮಗನ ಮಾತು ಕೇಳಕ್ಕೆ ಹೋಗಬೇಡ. ನಿನಗೆ ಬದುಕೋದಕ್ಕೆ ಏನು ಬೇಕೋ ಎಲ್ಲವೂ ಮಾಡ್ತೀನಿ. ಅಣ್ಣ ಇದ್ದಾರೆ. ಮೊದ್ಲು ವಾಪಸ್ ತಗೋ. ಆಮೇಲೆ ಬಾಕಿದ್ ಮಾತಾಡ್ತೀನಿ. ನನ್ನ ಮಾತು ಕೇಳು. ನಿನ್ನ ಹಿತ ಕಾಪಾಡೋದು ನನ್ನ ಜವಾಬ್ದಾರಿ, ಸುದೀಪಣ್ಣನ ಜವಾಬ್ದಾರಿ. ಮಲ್ಲು, ಮರಮ್‌ಕಲ್, ನಾನು, ಸುದೀಪಣ್ಣ ಮೂರು ಜನ ಇರ್ತೀವಿ. ಉಪ್ಪಾರರ ದೇವಸ್ಥಾನದಲ್ಲಿ ಇದ್ದೇನೆ. ಮೊದಲು ಆ ಕೆಲಸ ಮಾಡು. ನಿನಗೆ ಕೈ ಮುಗಿತೀನಿ ಎಂದು ಸೋಮಣ್ಣ ಹೇಳುತ್ತಿದ್ದಾರೆ ಎನ್ನಲಾದ ಆಡಿಯೋ ತುಣುಕಿನಲ್ಲಿದೆ.

    ಜೆಡಿಎಸ್ ಅಭ್ಯರ್ಥಿ: ಇಲ್ಲ, ನಾನು ಯಾರ ಮಾತು ಕೇಳ್ಕೊಂಡು ನಿಂತಿಲ್ಲ. ವಾಪಸ್ ತಗೆಯೋದಕ್ಕೆ ಆಗಲ್ಲಣ್ಣ. ನಿಮ್ಮ ಜೊತೆಗೇ ಇರ್ತೀನಿ. ನೀವು ಹೇಳಿದಂಗೆ ಇರ್ತೀನಿ ಬಿಡಣ್ಣ, ಮುಂದೆ ನೀವೇ ಮುಖ್ಯಮಂತ್ರಿ ಆಗಬೇಕು ಎಂದು ನಾನೂ ಬಯಸ್ತೀನಿ.

    ಸೋಮಣ್ಣ: ಯಾವನೋ ಪೋಲಿ ನನ್ ಮಗನ ಮಾತು ಕೋಳ್ಕೊಂಡು… ಮೊದಲು ವಾಪಸ್ ತಗೋ, ಮಲ್ಲು… ಸರ್ಕಾರ ಬರ್ತದೆ. ಗೂಟದ ಕಾರು ಮಾಡಿ ಕೊಡ್ತೀವಿ. ಮೊದ್ಲು ತಗೊ, ದೇವರ ಮುಂದೆ ನಿಂತಿದ್ದೀವಿ. ಯಾರನ್ನೂ ಕೇಳೊಕ್ಕೆ ಹೋಗ್ಬೇಡ. ನಾವೆಲ್ಲ ಮಾತಾಡುತ್ತೀವಿ. ಮೊದ್ಲು ವಾಪಸ್ ತಗೊ. ಈಗ ಟೈಮಿಲ್ಲ. ಹೀಗೆ ಸಂಭಾಷಣೆ ನಡೆದಿದೆ.

    ಒಟ್ನಲ್ಲಿ ಲಿಂಗಾಯತ ವೋಟ್‌ಬ್ಯಾಂಕ್ ತಪ್ಪೋ ಆತಂಕದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಆಮಿಷವೊಡ್ಡಿದ್ದಾರೆಂಬ ಚರ್ಚೆ ನಡೆದಿದೆ. ಗೂಟದ ಕಾರಿನ ಆಮಿಷದ ಜೊತೆಗೆ ಹಣಕಾಸು ವಿಚಾರ ಚರ್ಚೆಗೆ ಬಂದಿದೆ. ಮುಂದೆ ಈ ಆಡಿಯೋ ವಿಚಾರ ಯಾವ ತಿರುವು ಪಡೆದುಕೊಳ್ಳುತ್ತೆ ಎಂಬುದು ಕುತೂಹಲ ಮೂಡಿಸಿದೆ.

  • ಸಿದ್ದರಾಮಯ್ಯ ಗುಡುಗಿದ್ರೆ ಆಸ್ಪತ್ರೆಯಲ್ಲಿ ಹೆರಿಗೆಯೇ ಆಗ್ಬಿಡುತ್ತೆ – ಶ್ರೀನಿವಾಸ್ ಪ್ರಸಾದ್ ಲೇವಡಿ

    ಸಿದ್ದರಾಮಯ್ಯ ಗುಡುಗಿದ್ರೆ ಆಸ್ಪತ್ರೆಯಲ್ಲಿ ಹೆರಿಗೆಯೇ ಆಗ್ಬಿಡುತ್ತೆ – ಶ್ರೀನಿವಾಸ್ ಪ್ರಸಾದ್ ಲೇವಡಿ

    ಮೈಸೂರು: ಸಿದ್ದರಾಮಯ್ಯ (Siddaramaiah) ಗುಡುಗಿದ್ರೆ ಹೆರಿಗೆ ಆಸ್ಪತ್ರೆಯಲ್ಲಿ ಹೆರಿಗೆಯೇ ಆಗ್ಬಿಡುತ್ತೆ ಎಂದು ಸಂಸದ ವಿ. ಶ್ರೀನಿವಾಸ ಪ್ರಸಾದ್ (V Srinivas Prasad) ಲೇವಡಿ ಮಾಡಿದ್ದಾರೆ.

    ವರುಣಾ ಕ್ಷೇತ್ರದಲ್ಲಿ (Varuna Constituency) ಸಿದ್ದರಾಮಯ್ಯ ಅಬ್ಬರದ ಪ್ರಚಾರದ ಕುರಿತು ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಗುಡುಗಿದ್ರೆ ಹೆರಿಗೆ ಆಸ್ಪತ್ರೆಯಲ್ಲಿ ಹೆರಿಗೆಯೇ ಆಗುತ್ತೆ. ಲೋಕಸಭೆಯಲ್ಲೂ ರಾಹುಲ್ ಗಾಂಧಿನ (Rahul Gandhi) ನಿಲ್ಲಿಸಿಕೊಂಡು ಗುಡುಗಿದ್ರು, ಮೋದಿ ಮುಳುಗೇಹೋದರು ಅನ್ನೋಹಾಗೇ ಗುಡುಗಿದ್ರು. ಕೊನೆಗೆ ಏನಾಯ್ತು? ರಾಜ್ಯದಲ್ಲಿ ಕೇವಲ 1 ಸೀಟು ಗೆದ್ದರು ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಹನಿಮೂನ್‌ಗೆ ವಿದೇಶಕ್ಕೆ ಹಾರಿದ ಸಿಂಹಪ್ರಿಯಾ ಜೋಡಿ

    ಗುಡುಗಿ.. ಗುಡುಗಿ.. 30 ಸಾವಿರ ವೋಟ್‌ನಲ್ಲಿ ಸೋತರು. ವರುಣಾ ಕ್ಷೇತ್ರದಲ್ಲಿ 1 ಲಕ್ಷ ವೋಟ್ ಗೆಲ್ಲೋಕೆ ಸಾಧ್ಯನಾ? ಪ್ರತಿಪಕ್ಷ ನಾಯಕನಾಗಿ ಮಾತನಾಡುವ ಮಾತಾ ಅದು? ಸೋಮಣ್ಣ ಹೊರಗಿನವರು ಅನ್ನೋ ಸಿದ್ದರಾಮಯ್ಯ, ತಾವು ಬಾದಾಮಿಗೆ ಯಾಕೆ ಹೋದ್ರು? ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. ಇದನ್ನೂ ಓದಿ: ಸುಳ್ಳು ಸುದ್ದಿ ಬರೆದ ಸಿನಿಮಾ ವಿಶ್ಲೇಷಕನಿಗೆ ಚಳಿ ಬಿಡಿಸಿದ ನಟಿ ಊರ್ವಶಿ ರೌಟೇಲಾ

    ಇದೇ ವೇಳೆ ಬಿಜೆಪಿಯಲ್ಲಿ ಲಿಂಗಾಯತ ಮುಖ್ಯಮಂತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಮಿತ್ ಶಾ ಕೂಡ ಈ ಬಗ್ಗೆ ಮಾತನಾಡಬೇಡಿ ಅಂತಾ ಈಗಾಗಲೇ ಹೇಳಿದ್ದಾರೆ. ಮುಖ್ಯಮಂತ್ರಿ ಬಗ್ಗೆ ಫಲಿತಾಂಶದ ನಂತರ ಯೋಚನೆ ಮಾಡೋಣ ಅಂತಾ ಹೇಳಿದ್ದಾರೆ. ಫಲಿತಾಂಶದ ಮೇಲೆ ದಲಿತ ಸಿಎಂ, ಅಥವಾ ಲಿಂಗಾಯತ ಸಿಎಂ ಅನ್ನೋದು ನಿರ್ಧಾರವಾಗುತ್ತೆ. ಪಕ್ಷದ ವರಿಷ್ಠರು ಅದನ್ನ ತೀರ್ಮಾನ ಮಾಡ್ತಾರೆ ಎಂದು ಹೇಳಿದ್ದಾರೆ.

  • ವರುಣಾ ಕ್ಷೇತ್ರದಲ್ಲಿ 100 ಪರ್ಸೆಂಟ್ ಗೆಲ್ಲುವ ವಿಶ್ವಾಸವಿದೆ: ಸೋಮಣ್ಣ

    ವರುಣಾ ಕ್ಷೇತ್ರದಲ್ಲಿ 100 ಪರ್ಸೆಂಟ್ ಗೆಲ್ಲುವ ವಿಶ್ವಾಸವಿದೆ: ಸೋಮಣ್ಣ

    ಮೈಸೂರು: ವರುಣಾ (Varuna) ಕ್ಷೇತ್ರದಲ್ಲಿ ನನಗೆ 100 ಪಟ್ಟು ಗೆಲ್ಲುವ ವಿಶ್ವಾಸ ಹೆಚ್ಚಾಗಿದೆ. ಜನರ ಪ್ರೀತಿ, ವಿಶ್ವಾಸ, ಮಮಕಾರ ನನ್ನ ಮೇಲಿದೆ. ಚಾಮುಂಡೇಶ್ವರಿಯ ಆಶೀರ್ವಾದ ಹಾಗೂ ಮಹದೇಶ್ವರರ ಸಂದೇಶವಿದೆ ಎಂದು ವರುಣಾ ಕ್ಷೇತ್ರದ ಬಿಜೆಪಿ (BJP) ಅಭ್ಯರ್ಥಿ ವಿ.ಸೋಮಣ್ಣ (V.Somanna) ಹೇಳಿದ್ದಾರೆ.

    ಸೋಮಣ್ಣ ಹೊರಗಿನವರು ಎಂಬ ಸಿದ್ದರಾಮಯ್ಯ (Siddaramaiah) ಹೇಳಿಕೆ ವಿಚಾರವಾಗಿ ಮೈಸೂರಿನಲ್ಲಿ (Mysuru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ಈ ಬಾರಿ ಆಶೀರ್ವಾದ ಮಾಡುವ ನಂಬಿಕೆ ಜಾಸ್ತಿಯಿದೆ. ಯಾರು ಹೊರಗಿನವರು, ಒಳಗಿನವರು ಎನ್ನುವುದಕ್ಕಿಂತ ಹೆಚ್ಚಾಗಿ ನಮ್ಮ ಕಾಲದಲ್ಲಿ ಏನು ಮಾಡಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಸಿದ್ದರಾಮಯ್ಯ ಕೊಪ್ಪಳ (Koppal) ಹಾಗೂ ಬಾದಾಮಿಯಲ್ಲಿ (Badami) ಸ್ಪರ್ಧೆ ಮಾಡಲಿಲ್ವಾ? ಇದರ ಬಗ್ಗೆ ಅವರು ಮಾತನಾಡುವುದಿಲ್ಲ. ಸಿದ್ದರಾಮಯ್ಯ ವಾಸ್ತವಾಂಶ ಮಾತನಾಡಿದರೆ ಒಳ್ಳೆಯದು ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಜೆಡಿಎಸ್ ಭದ್ರಕೋಟೆಯಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ – ಯಾರ ಕೈ ಸೇರುತ್ತೆ ‘ಗುಬ್ಬಿ’ 

    ಲಿಂಗಾಯತ ಸಿಎಂಗಳು ಭ್ರಷ್ಟ ಸಿಎಂಗಳು ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಲಿಂಗಾಯತ ಸಿಎಂ ವಿಚಾರ ನಾನು ಚರ್ಚೆ ಮಾಡಲ್ಲ. ಅದರ ಬಗ್ಗೆ ಪಕ್ಷದ ವರಿಷ್ಠರು ಮಾತನಾಡುತ್ತಾರೆ. ಒಂದು ಧರ್ಮವನ್ನು ಮತ್ತೊಂದು ಧರ್ಮಕ್ಕೆ ಹೋಲಿಕೆ ಮಾಡುವುದು ನಮ್ಮ ಕರ್ತವ್ಯ ಅಲ್ಲ. ರಾಜಕಾರಣಿಗಳು ತಮ್ಮ ಇತಿಮಿತಿಯಲ್ಲಿ ಮಾತನಾಡಬೇಕು. ನಿಜಲಿಂಗಪ್ಪನವರು, ವೀರೇಂದ್ರ ಪಾಟೀಲ್, ಜೆ.ಎಚ್.ಪಟೇಲ್, ಎಸ್.ಆರ್ ಬೊಮ್ಮಾಯಿ, ಯಡಿಯೂರಪ್ಪನವರು ತಮ್ಮದೇ ಆದ ಕೊಡುಗೆಯನ್ನು ಕೊಟ್ಟಿದ್ದಾರೆ ಎಂದು ದೇಶಕ್ಕೆ ಗೊತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ನಾಗಪುರದಿಂದ ಯಾರೇ ಬಂದರೂ ಚುನಾವಣೆ ಮಾಡಲು ಆಗಲ್ಲ: ಬಿಜೆಪಿ ನಾಯಕರಿಗೆ ಶೆಟ್ಟರ್ ತಿರುಗೇಟು 

    ಒಂದು ಬಾರಿ ಭಾವುಕರಾಗಿ ಮಾತನಾಡಿ ಎರಡೇ ನಿಮಿಷಕ್ಕೆ ಉಲ್ಟಾ ಹೊಡೆಯುವ ವ್ಯವಸ್ಥೆಯನ್ನು ನಾನು ನೋಡಿದ್ದೇನೆ. ಅದರ ಬಗ್ಗೆ ಹೆಚ್ಚು ಚರ್ಚೆ ಮಾಡಲ್ಲ. ಇದನ್ನು ಸಿದ್ದರಾಮಯ್ಯ ಮನವರಿಕೆ ಮಾಡಿಕೊಂಡು ರಾಜ್ಯದ ಎಲ್ಲಾ ವರ್ಗದ ಜನರ ಜೊತೆ ಒಡನಾಟ ಇಟ್ಟುಕೊಂಡು ಕೆಲಸ ಮಾಡಬೇಕಿದೆ. ಜಾತಿ ನಿಮಿತ್ತ ಮಾತ್ರ ಇದನ್ನು ವೈಭವೀಕರಿಸಬಾರದು ಎಂದು ತಿಳಿಸಿದರು. ಇದನ್ನೂ ಓದಿ: ಯುವಕನಿಗೆ ಕಪಾಳ ಮೋಕ್ಷ ಮಾಡಿದ ಎಂ.ಬಿ.ಪಾಟೀಲ್‌ 

    ಎಲ್ಲಾ ವರ್ಗದ ಜನರು ಸೋಮಣ್ಣನಂತಹ ಕೆಲಸಗಾರರು ಬೇಕು ಎಂದು ಕೇಳುತ್ತಿದ್ದಾರೆ. ಮತದಾರರು ಹತ್ತಾರು ಭಾರಿ ಯೋಚನೆ ಮಾಡಿ ನಿರ್ಧಾರ ಮಾಡುತ್ತಾರೆ. ವಸತಿ ಸಚಿವರಾಗಿ ಸೋಮಣ್ಣ ಏನು ಕೆಲಸ ಮಾಡಿದ್ದಾರೆ ಎಂಬುದು ಸಿದ್ದರಾಮಯ್ಯಗೆ ಗೊತ್ತಿದೆ. ನನ್ನ ಬಗ್ಗೆ ಸಿದ್ದರಾಮಯ್ಯನವರೇ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಸಿದ್ದರಾಮಯ್ಯ 8 ಸಾವಿರ ಕೋಟಿ ರೂ. ಅಕ್ರಮ ಮಾಡಿದ್ದಾರೆ: ಬೊಮ್ಮಾಯಿ ಆರೋಪ

  • ಸಿದ್ದರಾಮಯ್ಯಗಾಗಿ ಒದೆ ತಿಂದಿದ್ದೇನೆ, ನನ್ನ ಪ್ಯಾಂಟ್‌ ಹರಿದು ಹಾಕಿದ್ರು – ವಿ.ಸೋಮಣ್ಣ

    ಸಿದ್ದರಾಮಯ್ಯಗಾಗಿ ಒದೆ ತಿಂದಿದ್ದೇನೆ, ನನ್ನ ಪ್ಯಾಂಟ್‌ ಹರಿದು ಹಾಕಿದ್ರು – ವಿ.ಸೋಮಣ್ಣ

    ಚಾಮರಾಜನಗರ: 2006ರ ಚುನಾವಣೆಯಲ್ಲಿ (2006 Election) ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೋಸ್ಕರ (Siddaramaiah) ಒದೆ ತಿಂದಿದ್ದೇನೆ ಎಂದು ಸಚಿವ ವಿ.ಸೋಮಣ್ಣ (V Somanna) ಹೇಳಿದ್ದಾರೆ.

    ಚಾಮರಾಜನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮಣ್ಣ ಯಾರು? ಎಂದಿದ್ದ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಸಿಎಂ ನಾನೇ ಎಂಬ ಅಭಿಮಾನಿಗಳ ಮಾತು ಕೇಳಿ ಖುಷಿಯೂ ಆಗುತ್ತೆ, ನೋವು ಆಗುತ್ತೆ: ಸೋಮಣ್ಣ

    2006ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯಗೋಸ್ಕರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒದೆ ತಿಂದಿದ್ದೇನೆ. ಬರಿಮೈಯಲ್ಲಿ ದೇವಲಾಪುರದಿಂದ ಮೈಸೂರಿಗೆ ಹೋಗಿದ್ದೇನೆ. ಆವತ್ತು ನನ್ನ ಕಾರಿನ ಗ್ಲಾಸ್ ಒಡೆದಿದ್ರು, ಪ್ಯಾಂಟ್ ಹರಿದು ಹಾಕಿದ್ದರು. ಅಂದು ನನ್ನ ಸಮುದಾಯದವರನ್ನೇ ಎದುರು ಹಾಕಿಕೊಂಡು ಅವರಿಗೋಸ್ಕರ ಕೆಲಸ ಮಾಡಿದ್ದೆ. ಇದೆಲ್ಲಾ ಸಿದ್ದರಾಮಯ್ಯ ಸಾಹೇಬರ ತಲೇಲಿ ಇಲ್ಲ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಲಿಂಗಾಯತರನ್ನು ಸಿಎಂ ಮಾಡುತ್ತೇವೆ ಎಂದು ಕಾಂಗ್ರೆಸ್ ಘೋಷಣೆ ಮಾಡಲಿ : ಸೋಮಣ್ಣ ಸವಾಲು

    ನಾನು ಸಾಹೇಬ್ರೆ ಅಂತೀನಿ ಅವರು ಏಕ ವಚನದಲ್ಲಿ ಮಾತನಾಡ್ತಾರೆ, ಇದೇ ನನಗು ಅವರಿಗು ಇರೋ ವ್ಯತ್ಯಾಸ. ಸಿದ್ದರಾಮಯ್ಯ ಈಗ ವಿರೋಧ ಪಕ್ಷದ ನಾಯಕರೂ ಅಲ್ಲ ನಾನು ಮಂತ್ರಿನೂ ಅಲ್ಲ, ನಾನೂ ಅಭ್ಯರ್ಥಿ, ಅವರೂ ಅಭ್ಯರ್ಥಿ. ನಾನು ಅವರನ್ನು ಮುತ್ಸದ್ದಿ ನಾಯಕ ಎಂದು ಭಾವಿಸಿದ್ದೆ, ಅವರು ಅವನ್ಯಾರು, ಇವನ್ಯಾರು ಅನ್ನೋ ಡೈಲಾಗ್ ಕಡಿಮೆ ಮಾಡಿದ್ರೆ ಒಳ್ಳೇದು. ರಾಜಕೀಯದಲ್ಲಿ ತಾಳ್ಮೆ ಮುಖ್ಯ ಎಂದ ಸೋಮಣ್ಣ, ನಾನು ವರುಣಾದಲ್ಲಿ ಸ್ಪರ್ಧೆ ಮಾಡ್ತಿರೋದು ವಿಧಿ ನಿಯಮ ಎಂದು ಹೇಳಿದ್ದಾರೆ.

  • ಪತ್ನಿ ಬಳಿಯೇ 20 ಲಕ್ಷ ರೂ. ಸಾಲ ಪಡೆದಿರುವ ಸಚಿವ ಸೋಮಣ್ಣ

    ಪತ್ನಿ ಬಳಿಯೇ 20 ಲಕ್ಷ ರೂ. ಸಾಲ ಪಡೆದಿರುವ ಸಚಿವ ಸೋಮಣ್ಣ

    – ಶಾಸಕ ಎನ್‌. ಮಹೇಶ್‌ಗೆ ಸ್ಥಿರಾಸ್ತಿಯೇ ಇಲ್ಲ

    ಚಾಮರಾಜನಗರ: ಸಚಿವ ವಿ. ಸೋಮಣ್ಣ (V Somanna) ವರುಣಾ ಬಳಿಕ ಬುಧವಾರ ಚಾಮರಾಜನಗರದಲ್ಲಿ (Chamarajanagar Constituency) ತಮ್ಮ ಉಮೇದುವಾರಿಕೆ ಸಲ್ಲಿಸಿದ್ದು, ಆಸ್ತಿ ವಿವರಗಳನ್ನ ಘೋಷಣೆ ಮಾಡಿದ್ದಾರೆ.

    ಚರಾಸ್ತಿ ವಿಚಾರ ಗಮನಿಸಿದರೇ ಸೋಮಣ್ಣಗಿಂತ ಪತ್ನಿ ಶೈಲಜಾ ಶ್ರೀಮಂತರಾಗಿದ್ದು ಸೋಮಣ್ಣ (V Somanna) ಬಳಿ ಚರಾಸ್ತಿ 3.61 ಕೋಟಿ ಅಷ್ಟಿದ್ದರೇ, ಪತ್ನಿ ಶೈಲಜಾ 13.01 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ‌‌‌. ಪತಿಗಿಂತ ಶೈಲಜಾ ಶ್ರೀಮಂತರಾದರೂ ಯಾವುದೇ ವಾಹನ ಹೊಂದಿಲ್ಲ. ಆದರೆ ಸೋಮಣ್ಣ 3 ಕಾರುಗಳ ಮಾಲೀಕರಾಗಿದ್ದಾರೆ. ಇದನ್ನೂ ಓದಿ: ಟಿಕೆಟ್ ಮಾರಿಕೊಂಡ ವೀಡಿಯೋ ಇದ್ರೆ, ತಲೆ ಬೋಳಿಸಿಕೊಂಡು ರಾಜೀನಾಮೆ ನೀಡುತ್ತೇನೆ: ಅಶೋಕ್ ಖೇಣಿ

    ಸೋಮಣ್ಣ ಅವರ ಬಳಿ 4.1 ಲಕ್ಷ ರೂ. ನಗದು ಇದ್ದರೇ, ಅವರ ಪತ್ನಿ 9.99 ಲಕ್ಷ ರೂ. ನಗದನ್ನ ಹೊಂದಿದ್ದಾರೆ. ಇನ್ನೂ ಪತಿ- ಪತ್ನಿ ಇಬ್ಬರೂ ಸಾಲ ಹೊಂದಿದ್ದು ಸೋಮಣ್ಣಗೆ 2.9 ಕೋಟಿ ರೂ.ನಷ್ಟು ಸಾಲ ಇದ್ದರೇ ಪತ್ನಿ ಶೈಲಜಾ ಅವರಿಗೆ 4.5 ಕೋಟಿ ರೂ. ಸಾಲ ಇದ್ದು, ಪತ್ನಿ ಶೈಲಜಾ ಅವರ ಬಳಿಯೇ ಸೋಮಣ್ಣ 20 ಲಕ್ಷ ಸಾಲ ಪಡೆದಿದ್ದಾರೆ. ಸೋಮಣ್ಣ ಬಳಿ 10 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದರೇ, ಪತ್ನಿ 21 ಕೋಟಿಯಷ್ಟು ಸ್ಥಿರಾಸ್ತಿ ಹೊಂದಿದ್ದಾರೆ. ಇಬ್ಬರದೂ ಸ್ವಯಾರ್ಜಿತ ಆಸ್ತಿಯಾಗಿದ್ದು ಪಿತ್ರಾರ್ಜಿತವಾಗಿ ಯಾವುದೂ ಬಂದಿಲ್ಲ.

    ವಾಟಾಳ್ ಕೋಟ್ಯಾಧೀಶ:
    ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸಹ ಮಂಗಳವಾರ ನಾಮಪತ್ರ ಸಲ್ಲಿಸಿದ್ದು 5.3 ಕೋಟಿ ಮೌಲ್ಯದ ಆಸ್ತಿ ಇರುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ. ಚಿನ್ನಾಭರಣ ಹಾಗೂ ಸಾಲ ತಮಗಿಲ್ಲ ಎಂದು ವಾಟಾಳ್ ತಿಳಿಸಿದ್ದು 50 ಸಾವಿರ ರೂ. ನಗದು ಇದೆ ಎಂದು ಮಾಹಿತಿ ಕೊಟ್ಟಿದ್ದಾರೆ. ಬಹುತೇಕ ಆಸ್ತಿ ಪತ್ನಿಯಿಂದ ಬಂದದ್ದಾಗಿದೆ ಎಂದು ತಿಳಿಸಿದ್ದಾರೆ‌. ಇದನ್ನೂ ಓದಿ: ಟಿಕೆಟ್ ಸಿಗದಿದ್ದಕೆ 5 ವರ್ಷಗಳ ಬಳಿಕ ಮತ್ತೆ ಹುದ್ದೆಯನ್ನೇರಿದ ಪೊಲೀಸ್ ಅಧಿಕಾರಿ: ಸಾರ್ವಜನಿಕ ವಲಯದಲ್ಲಿ ಚರ್ಚೆ

    ಶಾಸಕ ಎನ್‌. ಮಹೇಶ್‌ಗೆ ಸ್ಥಿರಾಸ್ತಿಯೇ ಇಲ್ಲ:
    ಶಾಸಕ ಎನ್‌. ಮಹೇಶ್ (N Mahesh) ಅವರು ಕೊಳ್ಳೇಗಾಲದಲ್ಲಿ ನಾಮಪತ್ರ ಸಲ್ಲಿಸಿದ್ದು ಆಸ್ತಿ ವಿವರವನ್ನ ಘೋಷಣೆ ಮಾಡಿಕೊಂಡಿದ್ದು ತಮ್ಮ ಹೆಸರಲ್ಲಿ ಯಾವುದೇ ಸ್ಥಿರಾಸ್ತಿಗಳಿಲ್ಲ ಎಂದು ತಿಳಿಸಿದ್ದಾರೆ. ಚರಾಸ್ತಿಗಳು ಮಾತ್ರ ತಮ್ಮಲ್ಲಿ ಇದ್ದು ಅವುಗಳ ಮೌಲ್ಯ ಒಟ್ಟು 1.83 ಕೋಟಿ ಎಂದು ತಿಳಿಸಿದ್ದಾರೆ. ಇದರಲ್ಲಿ 1 ಕಾರು, 150 ಗ್ರಾಂ ಚಿನ್ನ ಮತ್ತು ಚಿಗುವೆರಾ ಎಂಬವರಿಗೆ 50 ಲಕ್ಷ ರೂ. ಸಾಲ ಕೊಟ್ಟಿರುವುದು ಸೇರಿದೆ.

  • ಪ್ರಚಾರಕ್ಕೆ ತೆರಳಿದ್ದ ಸೋಮಣ್ಣ, ಪ್ರತಾಪ್ ಸಿಂಹಗೆ ಗ್ರಾಮಸ್ಥರಿಂದ ಫುಲ್ ಕ್ಲಾಸ್

    ಪ್ರಚಾರಕ್ಕೆ ತೆರಳಿದ್ದ ಸೋಮಣ್ಣ, ಪ್ರತಾಪ್ ಸಿಂಹಗೆ ಗ್ರಾಮಸ್ಥರಿಂದ ಫುಲ್ ಕ್ಲಾಸ್

    ಮೈಸೂರು: ವರುಣಾ (Varuna) ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ (V Somanna) ಸಂಸದ ಪ್ರತಾಪ್ ಸಿಂಹ (Pratap Simha) ಅವರೊಂದಿಗೆ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ವೇಳೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿರುವ ಪ್ರಸಂಗ ನಡೆದಿದೆ.

    ವರುಣಾದ ಲಲಿತಾದ್ರಿಪುರದಲ್ಲಿ ಸೋಮಣ್ಣ ಹಾಗೂ ಪ್ರತಾಪ್ ಸಿಂಹ ಪ್ರಚಾರಕ್ಕೆ ತೆರಳಿದ್ದ ವೇಳೆ ಗ್ರಾಮಸ್ಥರು ತಾವು ಯಾವ ಅಭಿವೃದ್ಧಿ ಮಾಡಿದ್ದೀರಿ? ಎಂದು ಪ್ರಶ್ನಿಸಿದ್ದಾರೆ. ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಲಾಗದೆ ಸೋಮಣ್ಣ ಹಾಗೂ ಪ್ರತಾಪ್ ಸಿಂಹ ತಬ್ಬಿಬ್ಬಾಗಿದ್ದಾರೆ.

    ಸೋಮಣ್ಣ ಮೈಸೂರು (Mysuru) ಜಿಲ್ಲಾ ಉಸ್ತುವಾರಿಯಾಗಿದ್ರಿ. ಆವಾಗ ತಾವು ಏನು ಕೊಡುಗೆ ಕೊಟ್ರಿ? ಈಗ ಮತ ಕೇಳೋಕೆ ಬಂದಿದ್ದೀರಾ? ಎಂದು ಸೋಮಣ್ಣಗೆ ಗ್ರಾಮಸ್ಥರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಗ್ರಾಮಸ್ಥರು ತರಾಟೆಗೆ ತೆಗೆದುಕೊಳ್ಳುತ್ತಿದ್ದ ವೇಳೆ ವೀಡಿಯೋ ಮಾಡುತ್ತಿದ್ದ ವ್ಯಕ್ತಿಯ ಕೈಯಿಂದ ನಾಯಕರು ಮೊಬೈಲ್ ಅನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಇದನ್ನೂ ಓದಿ: ಸೋಮಣ್ಣನನ್ನು ಬಲವಂತವಾಗಿ ವರುಣಾದಲ್ಲಿ ನಿಲ್ಲಿಸಿದ್ದಾರೆ: ಸಿದ್ದರಾಮಯ್ಯ

    ವಿ ಸೋಮಣ್ಣ ಅವರು ವರುಣಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಕಣಕ್ಕಿಳಿದಿದ್ದಾರೆ. ಸೋಮಣ್ಣ ಪ್ರಚಾರಕ್ಕೆ ತೆರಳಿದ್ದ ವೇಳೆ ಮತದಾರರು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಸಿದ್ದು ಕುಟುಂಬದ ಮೂರನೇ ತಲೆಮಾರು ರಾಜಕೀಯ ಫೀಲ್ಡ್‌ಗೆ ಎಂಟ್ರಿ

  • ಸೋಮಣ್ಣನನ್ನು ಬಲವಂತವಾಗಿ ವರುಣಾದಲ್ಲಿ ನಿಲ್ಲಿಸಿದ್ದಾರೆ: ಸಿದ್ದರಾಮಯ್ಯ

    ಸೋಮಣ್ಣನನ್ನು ಬಲವಂತವಾಗಿ ವರುಣಾದಲ್ಲಿ ನಿಲ್ಲಿಸಿದ್ದಾರೆ: ಸಿದ್ದರಾಮಯ್ಯ

    ಮೈಸೂರು: ನನ್ನ ಬಗ್ಗೆ ವರುಣಾ (Varuna) ಜನರಿಗೆ ಅಪಾರವಾದ ಪ್ರೀತಿಯಿದೆ. ನನ್ನ ಮತ್ತು ವರುಣಾ ಸಂಬಂಧವನ್ನು ಕಿತ್ತುಹಾಕಲು ಯಾರಿಂದಲೂ ಸಾಧ್ಯವಿಲ್ಲ. ಯಾರೇ ಬರಲಿ, ಯಾರೇ ಅಭ್ಯರ್ಥಿಗಳನ್ನು ಬದಲಾಯಿಸಲಿ ಏನೇ ಆದರೂ ನನ್ನ ಗೆಲುವು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

    ಮೈಸೂರಿನಲ್ಲಿ (Mysuru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿಯಾದ ಸೋಮಣ್ಣನಿಗೂ (V.Somanna) ವರುಣಾ ಕ್ಷೇತ್ರಕ್ಕೂ ಸಂಬಂಧವಿಲ್ಲ. ಬಿಜೆಪಿಯವರು ಅವರನ್ನು ಬಲವಂತವಾಗಿ ಈ ಕ್ಷೇತ್ರದಲ್ಲಿ ನಿಲ್ಲಿಸಿದ್ದಾರೆ. ಅವನು ನಮ್ಮ ಜಿಲ್ಲೆಯವನೂ ಅಲ್ಲ. ಅವನು ರಾಮನಗರ (Ramanagara) ಜಿಲ್ಲೆಯವನಾಗಿದ್ದು, ಬೆಂಗಳೂರಿನಲ್ಲಿ (Bengaluru) ರಾಜಕಾರಣ ಮಾಡಿದ್ದಾನೆ. ವರುಣಾ ಕ್ಷೇತ್ರಕ್ಕೆ ಒಬ್ಬ ದುಡ್ಡಿರುವ ಅಭ್ಯರ್ಥಿಯನ್ನು ನಿಲ್ಲಿಸಬೇಕು ಎನ್ನುವ ಸಲುವಾಗಿ ಸೋಮಣ್ಣನನ್ನು ಇಲ್ಲಿ ನಿಲ್ಲಿಸಿದ್ದಾರೆ ಎಂದು ಟೀಕೆ ಮಾಡಿದರು. ಇದನ್ನೂ ಓದಿ: ಅಮವಾಸ್ಯೆ ದಿನದಂದು ಸತೀಶ್‌ ಜಾರಕಿಹೊಳಿ‌ ನಾಮಪತ್ರ ಸಲ್ಲಿಕೆ 

    ವರುಣಾವನ್ನು ತಾಲೂಕು ಕೇಂದ್ರವನ್ನಾಗಿ ಮಾಡುತ್ತೇವೆ ಎಂಬ ಸಿಎಂ ಭರವಸೆಯ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ 4 ವರ್ಷಗಳ ಆಡಳಿತದಲ್ಲಿ ಯಾಕೆ ಮಾಡಲಿಲ್ಲ? ವರುಣಾ ತಾಲೂಕು ಕೇಂದ್ರ ಎಂಬುದು ಗೊತ್ತಾಗಲಿಲ್ಲ ಎಂದರೆ ಅವರು ರಾಜೀನಾಮೆ ನೀಡಲಿ. ರಾಜ್ಯ ಗೊತ್ತಿಲ್ಲ ಎಂದಮೇಲೆ ಮುಖ್ಯಮಂತ್ರಿ ಯಾಕಾಗಿದ್ದಾರೆ? ಮೊದಲು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಲಿ. ಈಗ ಚುನಾವಣೆ ಬಂದಮೇಲೆ ಗೊತ್ತಾಗಿದೆ ಎಂದರೆ ಅದು ಎಂತಹಾ ಮರೆವಿರಬಹುದು ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಕಾಂಗ್ರೆಸ್‌ಗೆ ಬಿಗ್‌ ಶಾಕ್‌ – ವಿನಯ್‌ ಕುಲಕರ್ಣಿ ಧಾರವಾಡ ಪ್ರವೇಶಿಸುವಂತಿಲ್ಲ 

    ಬಿಜೆಪಿ (BJP) ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ಕ್ಯಾಬಿನೆಟ್‌ನಲ್ಲಿಯೇ ವರುಣಾ ಕ್ಷೇತ್ರವನ್ನು ತಾಲೂಕನ್ನಾಗಿ ಮಾಡುತ್ತೇವೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನೂರಕ್ಕೆ ಇನ್ನೂರು ಪರ್ಸೆಂಟ್ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಅವರಿಗೆ ಕೇವಲ 60 ಸೀಟ್ ಒಳಗಡೆ ಅಷ್ಟೇ ಬರುವುದು. ಈ ನಾಲ್ಕು ವರ್ಷದಲ್ಲಿ ಮೈಸೂರಿಗೆ ಹಾಗೂ ವರುಣಾ ಕೇತ್ರಕ್ಕೆ ಏನು ಮಾಡಿದ್ದಾರೆ ಇವರು? ಇದೇ ಸೋಮಣ್ಣ ಉಸ್ತುವಾರಿ ಸಚಿವನಾಗಿದ್ದಾಗ ವರುಣಾ ಕೇತ್ರದ ಜನರಿಗೆ ಒಂದು ಮನೆ ಕೊಟ್ಟಿದ್ದಾನಾ? ಸೂರಿಲ್ಲದವರಿಗೆ ಸೂರು ನೀಡಿದ್ದಾನಾ? ಮನೆ ಕೇಳಲು ಹೋದವರಿಗೆ ಕಪಾಳಕ್ಕೆ ಹೊಡೆದಿದ್ದಾರೆ ಎಂದು ಜನಗಳೇ ಹೇಳುತ್ತಿದ್ದಾರೆ. ಈಗ ಚುನಾವಣೆ ಸಮಯದಲ್ಲಿ ಬಂದು ಅದು ಮಾಡುತ್ತೇವೆ ಇದು ಮಾಡುತ್ತೇವೆ ಎಂದರೆ ಇಲ್ಲಿಯವರೆಗೆ ಅಭಿವೃದ್ಧಿ ಕೆಲಸ ಮಾಡಿದವರು ಯಾರು ಎಂದು ಪ್ರಶ್ನೆಗಳ ಸುರಿಮಳೆಗೈದರು. ಇದನ್ನೂ ಓದಿ: ಅಣ್ಣಾಮಲೈ ವಿರುದ್ಧವೂ ಕಿಡಿಕಾರಿದ ಜಗದೀಶ್ ಶೆಟ್ಟರ್ 

    ಬೊಮ್ಮಾಯಿ (Basavaraj Bommai) ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ನಂಬರ್ ಒನ್ ಸುಳ್ಳುಗಾರ. ರಾಮದಾಸ್ ಅವರಿಗೆ ಟಿಕೆಟ್ ಕೊಡಲಿಲ್ಲ. ಜಗದೀಶ್ ಶೆಟ್ಟರ್ (Jagadish Shettar) ಅವರಿಗೂ ಟಿಕೆಟ್ ದಕ್ಕಲಿಲ್ಲ. ಈಶ್ವರಪ್ಪನವರಿಗೆ ಸರಿಯಾದ ಪಾಠ ಕಲಿಸಿದ್ದಾರೆ. ಅವರಿಗೆ ಬಾಯಿ ಸರಿ ಇರಲಿಲ್ಲ. ಲಕ್ಷ್ಮಣ ಸವದಿ (Laxman Savadi) ಕೂಡಾ ಹಿರಿಯ ನಾಯಕರು. ಅವರಿಗೂ ಯಾಕೆ ಟಿಕೆಟ್ ತಪ್ಪಿಸಿದರು? ಬಿಜೆಪಿ ಈಗ ಬಿಎಲ್ ಸಂತೋಷ್ (B.L.Santhosh) ಎಂಬ ವ್ಯಕ್ತಿಯ ಕಪಿಮುಷ್ಠಿಯಲ್ಲಿದೆ. ಬಿಜೆಪಿಯ ಈ ಎಲ್ಲಾ ಬೆಳವಣಿಗೆಗಳಿಗೆ ಸಂತೋಷ್ ಕಾರಣ. ಸೋಮಣ್ಣನವರನ್ನು ಹರಕೆ ಕುರಿ ಮಾಡಲು ಇಲ್ಲಿ ನಿಲ್ಲಿಸಿದ್ದಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ‘ಟಿಕೆಟ್ ಕೈತಪ್ಪಲು ಸಂತೋಷ್ ಕಾರಣ’ – ಶೆಟ್ಟರ್ ಆರೋಪಕ್ಕೆ ನಾವ್ ತಲೆಕೆಡಿಸಿಕೊಳ್ಳಲ್ಲ: ಬೊಮ್ಮಾಯಿ 

    ನಮ್ಮ ಪಕ್ಷಕ್ಕೆ ನಮ್ಮ ಸಿದ್ಧಾಂತವನ್ನು ಒಪ್ಪಿಕೊಂಡು ಯಾರೇ ಬಂದರು ಕೂಡಾ ಸೇರಿಸಿಕೊಳ್ಳುತ್ತೇವೆ. ಇವತ್ತು ನಮ್ಮ ಕಾರ್ಯಕರ್ತರನ್ನು ಭೇಟಿ ಮಾಡಿ ನಾಳೆ ನಾಮಪತ್ರವನ್ನು (Nomination Papers) ಸಲ್ಲಿಸುತ್ತೇನೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಶೆಟ್ಟರ್ ನಮ್ಮ ಸಿದ್ಧಾಂತ ಒಪ್ಪಿಕೊಳ್ಳುತ್ತಾರೆ: ಪರಮೇಶ್ವರ್