Tag: ವಿ.ಸೋಮಣ್ಣ

  • ಸೋಮಣ್ಣಗೆ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಫಿಕ್ಸ್?- ಸಂಚಲನ ಮೂಡಿಸಿದ ಸಂಸದ ಬಸವರಾಜು ಹೇಳಿಕೆ

    ಸೋಮಣ್ಣಗೆ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಫಿಕ್ಸ್?- ಸಂಚಲನ ಮೂಡಿಸಿದ ಸಂಸದ ಬಸವರಾಜು ಹೇಳಿಕೆ

    ತುಮಕೂರು: ಎರಡು ವಿಧನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿರುವ ಮಾಜಿ ಸಚಿವ ವಿ ಸೋಮಣ್ಣಗೆ (V Somanna) ತುಮಕೂರು (Tumkur) ಲೋಕಸಭಾ ಕ್ಷೇತ್ರದ ಬಿಜೆಪಿ (BJP) ಟಿಕೆಟ್ ನೀಡಲು ಚಿಂತಿಸಲಾಗಿದೆ ಎಂಬ ಗುಟ್ಟನ್ನು ಹಾಲಿ ಸಂಸದ ಜಿಎಸ್ ಬಸವರಾಜು (GS Basavaraj) ಬಿಚ್ಚಿಟ್ಟಿದ್ದಾರೆ.

    ತುಮಕೂರು ನಗರದಲ್ಲಿ ನಡೆದ ವೀರಶೈವ ಸಮಾಜದ ಕಾರ್ಯಕ್ರಮವೊಂದರಲ್ಲಿ ಸಂಸದ ಬಸವರಾಜು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ನನಗೆ ವಯಸ್ಸಾದ ಕಾರಣ ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ. ಮುಂದಿನ ಚುನಾವಣೆಗೆ ನಮ್ಮ ಸಮುದಾಯದವರೇ ಆದ ವಿ ಸೋಮಣ್ಣಗೆ ಟಿಕೆಟ್ ಕೊಡುತ್ತಾರೆ. ದೆಹಲಿಗೆ ಹೋದಾಗ ನಾನು ಇದನ್ನು ಹೇಳಿದ್ದೇನೆ. ಹೀಗಾಗಿ ಸಮುದಾಯದ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು, ನಮ್ಮ ನಮ್ಮಲ್ಲಿ ಕಿತ್ತಾಟ ಮಾಡಿಕೊಂಡು ಬೇರೆಯವರಿಗೆ ಅನುಕೂಲ ಮಾಡಿಕೊಡಬಾರದು ಎಂದು ಸಮಾಜದ ಜನರಿಗೆ ಕಿವಿ ಮಾತು ಹೇಳಿದ್ದಾರೆ. ಇದನ್ನೂ ಓದಿ: ರೈಲ್ವೆ ಸಚಿವರು ದಣಿವರಿಯದಂತೆ ಕೆಲಸ ಮಾಡುತ್ತಿದ್ದು, ರಾಜೀನಾಮೆಗೆ ಆಗ್ರಹ ಸರಿಯಲ್ಲ: ಹೆಚ್‌ಡಿಡಿ

    ಸಂಸದ ಜಿಎಸ್ ಬಸವರಾಜು ಅವರ ಈ ಮಾತು ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಲೋಕಸಭಾ ಟಿಕೆಟ್ ಬಯಸಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದಿದ್ದ ಮಾಜಿ ಸಂಸದ ಮುದ್ದಹನುಮೇಗೌಡ, ಲೋಕಸಭಾ ಕ್ಯಾಂಡಿಡೇಟ್ ಎಂದೇ ಬಿಂಬಿಸಿಕೊಂಡಿದ್ದ ಲೇಔಟ್ ಚಿದಾನಂದರಿಗೆ ಸಂಸದರ ಈ ಹೇಳಿಕೆ ನಿದ್ದೆಗೆಡಿಸಿದೆ. ಅದರ ಜೊತೆಗೆ ಮಾಜಿ ಸಚಿವ ಮಾಧುಸ್ವಾಮಿ ಅವರೂ ಲೋಕಸಭೆಗೆ ಸೂಕ್ತ ಎಂದು ಜಿಲ್ಲಾ ಬಿಜೆಪಿಯಲ್ಲಿ ಚರ್ಚೆ ಮಾಡಿದ್ದಾರೆ. ಈ ನಡುವೆ ಜಿಎಸ್ ಬಸವರಾಜು ಅವರ ಹೊಸ ದಾಳಿ ಗೊಂದಲಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಯಾರೇ ಮಾತಾಡಿದ್ರು ಜೈಲಿಗೆ ಹಾಕ್ತೀವಿ ಎನ್ನೋಕೆ ಇದು ತಾಲಿಬಾನ್ ಅಲ್ಲ: ಎಂಬಿಪಿ ವಿರುದ್ಧ ಯತ್ನಾಳ್ ಕಿಡಿ

  • ಚುನಾವಣೆ ಆದ್ಮೇಲೆ ಬಿಎಸ್‌ವೈ ಒಂದು ಬಾರಿಯೂ ಫೋನ್ ಮಾಡಿಲ್ಲ – ಸೋಮಣ್ಣ ಬೇಸರ

    ಚುನಾವಣೆ ಆದ್ಮೇಲೆ ಬಿಎಸ್‌ವೈ ಒಂದು ಬಾರಿಯೂ ಫೋನ್ ಮಾಡಿಲ್ಲ – ಸೋಮಣ್ಣ ಬೇಸರ

    ಬೆಂಗಳೂರು: ಚುನಾವಣಾ ಸಮಯದಲ್ಲಿ ಯಡಿಯೂರಪ್ಪನವರು (BS Yediyurappa) ಪ್ರತಿದಿನ ಕರೆ ಮಾಡ್ತಿದ್ರು, ಚುನಾವಣೆ ಮುಗಿದ ಮೇಲೆ ಒಂದು ಬಾರಿಯೂ ಫೋನ್ ಮಾಡಿಲ್ಲ ಎಂದು ಮಾಜಿ ಸಚಿವ ವಿ. ಸೋಮಣ್ಣ (V Somanna) ಬೇಸರ ವ್ಯಕ್ತಪಡಿಸಿದರು.

    ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಂದು ವಿ. ಸೋಮಣ್ಣ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಕೆಲ ಕಾಲ ಪಕ್ಷದ ಸೋಲಿನ ಕುರಿತು ಅವಲೋಕನ ನಡೆಸಿದ ಅವರು, ಬಳಿಕ ಸೋಮಣ್ಣ ಅವರಿಗೆ ಸೋಲಿನ ಬಗ್ಗೆ ದೃತಿಗೆಡಬೇಡಿ, ಪಕ್ಷ ನಿಮಗೆ ಸೂಕ್ತ ಸ್ಥಾನಮಾನ ನೀಡಲಿದೆ ಎಂದು ಅಭಯ ನೀಡಿದರು. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಗೂಂಡಾ ರಾಜ್ಯ ಆಗಿ ಬದಲಾವಣೆ: ಕಟೀಲ್ ಕಿಡಿ

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿ. ಸೋಮಣ್ಣ, ಯಡಿಯೂರಪ್ಪ ಅವರು ಚುನಾವಣಾ ಸಮಯದಲ್ಲಿ ಪ್ರತಿದಿನ ಕರೆ ಮಾಡ್ತಿದ್ರು. ಚುನಾವಣೆ ಮುಗಿದ ಮೇಲೆ ಈವರೆಗೂ ಕರೆ ಮಾಡಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಕಾಶ್ಮೀರಿ ಪ್ರತ್ಯೇಕತಾವಾದಿ ಹತ್ಯೆಗೈದು ತಲೆಮರೆಸಿಕೊಂಡಿದ್ದ ಮುಜಾಹಿದ್ದೀನ್‌ ಉಗ್ರರು 33 ವರ್ಷಗಳ ಬಳಿಕ ಅರೆಸ್ಟ್‌

    ಇದೇ ವೇಳೆ ನಿಮಗೆ ಪಕ್ಷ ಧೈರ್ಯತುಂಬುವ ಕೆಲಸ ಮಾಡಿದೆಯಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ನನಗೆ ಏನು ಧೈರ್ಯ ತುಂಬಬೇಕ್ರಿ? 45 ವರ್ಷಗಳಿಂದ ಇದೇ ಕೆಲಸ ಮಾಡಿದ್ದೇನೆ. ನನ್ನ ಚಿನ್ನದಂತಹ ಕ್ಷೇತ್ರ ಬಿಟ್ಟಿದ್ದೇನೆ. ವರಿಷ್ಠರು ಹೇಳಿದ್ರಲ್ಲಾ ಅಂತಾ ಬೇರೆ ಕ್ಷೇತ್ರಕ್ಕೆ ಹೋದೆ. ಅಲ್ಲಿ ಸೋಲಾಯಿತು. ಅದನ್ನು ಅರಗಿಸಿಕೊಳ್ಳುವ ಶಕ್ತಿಯೂ ನನಗಿದೆ. ನಾವೆಲ್ಲರೂ ಮನುಷ್ಯರಲ್ವಾ? ನಾವೇನು ದೆವ್ವನಾ? ಪಕ್ಷ ನನಗಿಂತ ದೊಡ್ಡದು. ಪಕ್ಷ ಹೇಳಿದ್ದನ್ನು ನನ್ನಂತಹವರು ಮಾಡದೇ ಇನ್ಯಾರು ಮಾಡೋಕಾಗುತ್ತೆ ಎಂದು ಹೇಳಿದರು.

  • ನಾನು ಕೆಲಸಗಾರ, ಈಗ ನಿರುದ್ಯೋಗಿ ಆಗಿದ್ದೀನಿ : ಸೋಮಣ್ಣ

    ನಾನು ಕೆಲಸಗಾರ, ಈಗ ನಿರುದ್ಯೋಗಿ ಆಗಿದ್ದೀನಿ : ಸೋಮಣ್ಣ

    – ರಾಜಕೀಯ ನಿವೃತ್ತಿ ಇಲ್ಲ

    ಬೆಂಗಳೂರು: ನಾನು ಕೆಲಸಗಾರ, ಈಗ ನಿರುದ್ಯೋಗಿ ಆಗಿದ್ದೇನೆ. ಒಳ್ಳೆಯವರನ್ನು ಯಾರೂ ಗುರುತಿಸಲ್ಲ ಎಂದು ಬಿಜೆಪಿ (BJP) ಪರಾಜಿತ ಅಭ್ಯರ್ಥಿ ವಿ. ಸೋಮಣ್ಣ (V Somanna) ಬೇಸರ ವ್ಯಕ್ತಪಡಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಸೂಚನೆ ಮೇರೆಗೆ ಹೋಗಿ ಸ್ಪರ್ಧಿಸಿದೆ. ಚಾಲೆಂಜ್ ಆಗಿ ತಗೊಂಡೆ. ಪ್ರತಿಯೊಂದಕ್ಕೂ ಕಾಲ ಅಂತ ಇರುತ್ತದೆ. ನನ್ನ ಈ ಕ್ಷೇತ್ರ ಚಿನ್ನದಂತೆ ಇತ್ತು. ಹೈಕಮಾಂಡ್ ಹೇಳ್ತು ಅಂತ ಹೋದೆ. ಜನ ತೀರ್ಮಾನ ಮಾಡಿದ್ದಾರೆ. ಕ್ಷೇತ್ರಕ್ಕಿಂತ ಪಕ್ಷ ದೊಡ್ಡದು, ಪಕ್ಷದ ಮಾತು ಕೇಳಿದೆ ಅಷ್ಟೇ ಪಕ್ಷಕ್ಕೂ ಹಿನ್ನಡೆ ಆಗಿದ್ದು, ನಮಗೆಲ್ಲ ಒಂದು ಎಚ್ಚರಿಕೆ ಗಂಟೆಯಾಗಿದೆ. ಇನ್ನೇನು ಸೋತಾಗಿದೆ, ಏನ್ ಮಾತಾಡ್ಲಿ, ಸೋತಾಯಿತಲ್ಲ. ಮಾತಾಡೋದು ಅಗತ್ಯ ಇಲ್ಲ ಸೋತಿದ್ದೀನಿ ಅಷ್ಟೇ. ಜನರ ತೀರ್ಮಾನ ಇದು, ಬದ್ಧರಾಗಬೇಕು ಎಂದು ಹೇಳಿದರು.

    ಯಡಿಯೂರಪ್ಪ ಅವರನ್ನು ಪಕ್ಷ ಮೂಲೆಗುಂಪು ಮಾಡಲಿಲ್ಲ. ಅವರ ನಾಯಕತ್ವದಲ್ಲಿ ಚುನಾವಣೆ ಮಾಡಿದ್ದಿವಲ್ಲ. ಯಡಿಯೂರಪ್ಪ ಹೇಳಿದ್ದಾರಾ ಮೂಲೆಗುಂಪು ಮಾಡಿದ್ದಾರೆ ಅಂತ? ಸೋತ ತಕ್ಷಣ ಎಲ್ಲ ಮುಗಿದು ಹೋಯ್ತಾ? ಸೋಲಿಗೆ ಯಡಿಯೂರಪ್ಪ ಫ್ಯಾಕ್ಟರ್ ಕಾರಣ ಅಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಮೈಸೂರು ಜಿಲ್ಲೆಯ ಕ್ಷೇತ್ರಗಳ ಚುನಾವಣಾ ಫಲಿತಾಂಶ

    ಕಾಂಗ್ರೆಸ್‍ನ (Congress) ಗ್ಯಾರಂಟಿ ಯೋಜನೆಗಳೇ ಅವರ ಗೆಲುವಿಗೆ ಕಾರಣವಾಗಿದೆ. ಈ ದೇಶಕ್ಕೆ ಮೋದಿಯವರು ಪ್ರಶ್ನಾತೀತ ನಾಯಕರು. ಅವರ ಕೆಲಸಗಳು ಅವಿಸ್ಮರಣೀಯವಾಗಿದೆ. ನಾನು ಸೋಲನ್ನು ಒಪ್ಕೋಡಿದ್ದೇನೆ. ವರಿಷ್ಠರು ಕರೆ ಮಾಡಿದ್ದರು ಎಂದರು. ಇದನ್ನೂ ಓದಿ: ಚಾಮರಾಜನಗರ ಜಿಲ್ಲೆಯಲ್ಲಿ ಯಾರಿಗೆ ಗೆಲುವು? ಯಾರಿಗೆ ಸೋಲು?

    ರಾಜಕೀಯ ನಿವೃತ್ತಿ ಇಲ್ಲ. ನಾನು ಸಾಯೋತನಕ ಸಕ್ರಿಯ ಆಗಿರ್ತೇನೆ. ನಿವೃತ್ತಿ ಅನ್ನೋ ಪದವೇ ನನಗೆ ಗೊತ್ತಿಲ್ಲ. ನಿವೃತ್ತಿ ಎಷ್ಟು ಜನ ತಗೊಂಡಿದಾರೆ ಹೇಳಿ? ನಿವೃತ್ತಿ ಅನ್ನೋದೆಲ್ಲ ಒಂದು ನಾಟಕ ಎಂದು ಕಿಡಿಕಾರಿದರು. ಇದನ್ನೂ ಓದಿ: ಈ ಫಲಿತಾಂಶ ಲೋಕಸಭಾ ಚುನಾವಣೆಗೆ ದಿಕ್ಸೂಚಿ: ಕೆ. ಹೆಚ್ ಮುನಿಯಪ್ಪ

    ಕಾಂಗ್ರೆಸ್‍ನಲ್ಲಿ ಸಿಎಂ ಪೋಸ್ಟ್ ಕಚ್ಚಾಟ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದು ಅವರ ಪಕ್ಷದ ನಿರ್ಧಾರವಾಗಿದೆ. ಡಿಕೆಶಿ ನಮ್ಮ ತಾಲೂಕಿನವರು. ಸಿದ್ದರಾಮಯ್ಯ ಹಿರಿಯ ನಾಯಕ. ಸಿದ್ದರಾಮಯ್ಯ ಈಗಾಗಲೇ ಒಮ್ಮೆ ಸಿಎಂ ಆಗಿದ್ದಾರೆ. ಡಿಕೆಶಿ ಸಿಎಂ ಆಗಬೇಕಾಗಿರೋರು. ಯಾರನ್ನ ಸಿಎಂ ಮಾಡಬೇಕು ಅಂತ ಅವರ ಪಕ್ಷ ನಿರ್ಧರಿಸುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: ಡಿಕೆಶಿ, ಸಿದ್ದು ನಿವಾಸದ ಮುಂದೆ ಬೆಂಬಲಿಗರಿಂದ ಮುಂದಿನ ಮುಖ್ಯಮಂತ್ರಿ ಫ್ಲೆಕ್ಸ್ ಅಳವಡಿಕೆ

  • ಮತ ಎಣಿಕೆ ಆರಂಭಕ್ಕೂ ಮುನ್ನ ನಾಡದೇವತೆ ಮೊರೆ ಹೋದ ಸೋಮಣ್ಣ

    ಮತ ಎಣಿಕೆ ಆರಂಭಕ್ಕೂ ಮುನ್ನ ನಾಡದೇವತೆ ಮೊರೆ ಹೋದ ಸೋಮಣ್ಣ

    ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ (Assembly Election Result) ಆರಂಭಕ್ಕೂ ಮುನ್ನ ಬೆಳ್ಳಂಬೆಳಗ್ಗೆ ಚಾಮರಾಜನಗರ (Chamarajanagar)  ಹಾಗೂ ವರುಣ (Varuna) ಕ್ಷೇತ್ರದ ಅಭ್ಯರ್ಥಿ ವಿ. ಸೋಮಣ್ಣ (V Somanna) ನಾಡದೇವತೆ ಮೊರೆ ಹೋಗಿದ್ದಾರೆ.

    ಮೈಸೂರಿನ (Mysuru) ಚಾಮುಂಡಿ ಬೆಟ್ಟಕ್ಕೆ (Chamundi Hill) ಭೇಟಿ ನೀಡಿದ ಸೋಮಣ್ಣ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಿಯ ಮೊದಲ ಪೂಜೆ ಕಾರ್ಯದಲ್ಲೇ ಸೋಮಣ್ಣ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಕಾಲಿಗೆ ಮೊಬೈಲ್‌ ಕಟ್ಟಿಕೊಂಡು, ಕೇಸರಿ ಶಾಲು ಹಾಕ್ಕೊಂಡು ಮತ ಎಣಿಕೆಗೆ ಬಂದಿದ್ದ ಏಜೆಂಟ್‌ ವಾಪಸ್‌

    ವರುಣ ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿದ್ದು, ಚಾಮರಾಜನಗರದ ಜೊತೆಗೆ ವರುಣ ಕ್ಷೇತ್ರವನ್ನೂ ಸೋಮಣ್ಣ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಇದೀಗ ಮತ ಎಣಿಕೆ ಪ್ರಕ್ರಿಯೆಗೂ ಮುನ್ನ ನಾಡದೇವತೆಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿದ್ದಾರೆ. ಇದನ್ನೂ ಓದಿ: Karnataka Election 2023 Result – ರಾಜ್ಯಾದ್ಯಂತ ಮತ ಎಣಿಕೆ ಆರಂಭ LIVE Updates

  • ವರುಣಾ, ಚಾಮರಾಜನಗರದಲ್ಲಿ ಸ್ಪರ್ಧೆ ವಿಧಿ ನಿಯಮ : ಸೋಮಣ್ಣ

    ವರುಣಾ, ಚಾಮರಾಜನಗರದಲ್ಲಿ ಸ್ಪರ್ಧೆ ವಿಧಿ ನಿಯಮ : ಸೋಮಣ್ಣ

    – ಸಿದ್ದರಾಮಯ್ಯ ಜೊತೆ ಬಹಿರಂಗ ಚರ್ಚೆಗೆ ಸಿದ್ಧ

    ಮೈಸೂರು: ವರುಣಾ (Varuna) ಹಾಗೂ ಚಾಮರಾಜನಗರದಲ್ಲಿ (Chamarajanagar) ಸ್ಪರ್ಧಿಸುತ್ತಿರುವುದು ವಿಧಿನಿಯಮ ಎಂದು ಸಚಿವ ವಿ. ಸೋಮಣ್ಣ (V Somanna) ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಮಗನಿಗೆ ಒಂದು ಸೀಟ್ ಕೊಡಿ ನನಗೆ ಯಾವ ಟಾಸ್ಕ್ ಬೇಡ ಅಂತಾ ಹೈಕಮಾಂಡ್‍ಗೆ ಹೇಳಿದ್ದೆ. ಹೈಕಮಾಂಡ್ ಇಲ್ಲ ನೀವು ಹೋಗಿ ಎರಡು ಕಡೆ ಸ್ಪರ್ಧೆ ಮಾಡಿ. ನಿಮ್ಮ ಕೈಯಲ್ಲಿ ಇದು ಸಾಧ್ಯ ಅಂತಾ ಹೇಳಿ ನನಗೆ ಎರಡು ಟಿಕೆಟ್ ಕೊಟ್ಟಿದ್ದಾರೆ. ಇದು ವಿಧಿ ನಿಯಮ ಎಂದು ಹೇಳಿದರು.

    ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಅವರು, ಸಿದ್ದರಾಮಯ್ಯ ಅವರಿಂದ ವರುಣಾದಲ್ಲಿ ಒಂದು ಸಮುದಾಯಕ್ಕೆ ಮಾತ್ರ ಅನುಕೂಲವಾಗಿದೆ. ಸಿದ್ದರಾಮಯ್ಯ ಅವರ ಎದುರು ನನ್ನ ಕೂರಿಸಿ. ನಾನು ಅವರ ಆರೋಪಗಳಿಗೆ ಉತ್ತರ ಕೊಡುತ್ತೇನೆ. ನಿಮ್ಮ ಜೊತೆ ಹೊರಗಿನಿಂದ ಎಷ್ಟು ಜನ ಬಂದಿದ್ದಾರೆ. ಹಣ ಹಂಚಲು ಯಾರು ಯಾರು ಬಂದಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.

    ಪಟಾಲಂ ಬಿಟ್ಟು ಕ್ಷೇತ್ರವನ್ನು ನಡೆಸುತ್ತಿದ್ದಿರಿ. ನಾನು ಬೇಡ ನೀವು ಬೇಡ. ನಿಮ್ಮ ಬೆಂಬಲಿಗರು ಬೇಡ. ನನ್ನ ಬೆಂಬಲಿಗರು ಬೇಡ. ಎಲ್ಲರೂ ಕ್ಷೇತ್ರದಿಂದ ಹೊರಗೆ ಉಳಿಯೋಣ. ಜನ ಆಗ ತೀರ್ಮಾನ ಮಾಡುತ್ತಾರೆ. ನಿಮ್ಮದೆ ಆದ ಪಾಳೆಗಾರಿಕೆಯಲ್ಲಿ ಕ್ಷೇತ್ರ ನಡೆಸಿದ್ದೀರಿ. ನಾನು ನಿಮ್ಮ ಬಗ್ಗೆ ಕೆಳ ಮಟ್ಟದಲ್ಲಿ ಮಾತಾಡಲ್ಲ. ಹಾಗಂತ ನಾನು ಹೇಡಿಯಲ್ಲ ಎಂದು ಗುಡುಗಿದರು.

    ವೀರಶೈವರು, ಒಕ್ಕಲಿಗರು, ಪ. ಜಾತಿ, ಪ. ಪಂಗಡದ ಮೀಸಲಾತಿ ಮುಟ್ಟಲು ನಿಮಗೆ ಸಾಧ್ಯವಿದೆಯಾ? ಲಿಂಗಾಯತರ ಬಳಿ ಕ್ಷಮೆ ಯಾಕೆ ಈಗ ಕೇಳುತ್ತಿದ್ದೀರಿ ಎಂಬುದು ಜನರಿಗೆ ಗೊತ್ತಿದೆ. ಬಸವಣ್ಣನ ಬಾವುಟ ಹಾಕಿಕೊಂಡು ಈಗ ಪ್ರಚಾರ ಮಾಡುತ್ತಿದ್ದೀರಿ. ಜನ ಇದನ್ನು ನಂಬುತ್ತಾರಾ? ನೀವೇ ದೊಡ್ಡ ನಾಯಕ ಅಂತಿದ್ದೀರಿ. ಈಗ ಯಾಕೆ ಸ್ಟಾರ್‌ಗಳನ್ನು ಕರೆದುಕೊಂಡು ಪ್ರಚಾರ ಮಾಡ್ತಿದ್ದಿರಿ? ಎಲ್ಲಾ ವರ್ಗದ ಜನರಿಗೆ ವಂಚನೆ ಮಾಡಿ ಪೇಪರ್‍ಮೆಂಟ್ ಕೊಟ್ಟು ಇಷ್ಟು ವರ್ಷ ರಾಜಕಾರಣ ಮಾಡಿದ್ದೀರಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕೈ ಅಭ್ಯರ್ಥಿಗೆ ಚುನಾವಣಾ ಅಧಿಕಾರಿಗಳಿಂದ ಶಾಕ್ – ಕೆಎಂ ಉದಯ್ ಬೆಂಬಲಿಗರ ಮನೆಯಲ್ಲಿ 2 ಕೋಟಿ ಹಣ ಪತ್ತೆ

    ವರುಣಾ ಕ್ಷೇತ್ರದ ಅಭಿವೃದ್ಧಿ ನಿಮಗೆ ತೃಪ್ತಿ ಕೊಟ್ಟಿದ್ದಿಯಾ ಹೇಳಿ? ಸಿಎಂ ಆಗಿದ್ದ ನೀವು ವರುಣಾ ಕ್ಷೇತ್ರವನ್ನು ಎಷ್ಟು ಅಭಿವೃದ್ಧಿ ಮಾಡಬಹುದಿತ್ತು ಅಷ್ಟು ಅಭಿವೃದ್ಧಿ ಮಾಡಿದ್ದಿರಾ? ಸಿದ್ದರಾಮಯ್ಯ ಅವರೇ ನಿಮ್ಮಂಥ ಅದೃಷ್ಟವಂತರು ಯಾರು ಇಲ್ಲ. ಏನೂ ಕೆಲಸ ಮಾಡದೆ ಇಷ್ಟು ವರ್ಷ ಇಲ್ಲಿ ಗೆದ್ದು ಬಂದು ಅಧಿಕಾರ ಅನುಭವಿಸಿದ್ದಿರಾ. ಸಿದ್ದರಾಮಯ್ಯ ಅವರೇ ಗೋವಿಂದರಾಜ ನಗರ ಕ್ಷೇತ್ರದ ಅಭಿವೃದ್ಧಿ ಹೇಗಿದೆ ನೋಡಿ. ನಾನು ಯಾವತ್ತೂ ಜಾತಿ ಮಾಡಿಲ್ಲ. ನನ್ನ ಜಾತಿಯರು ಅತ್ಯಂತ ಕಡಿಮೆ ಇರುವ ಕ್ಷೇತ್ರದಲ್ಲಿ ನಾನು ಗೆದ್ದು ಬಂದಿದ್ದೇನೆ ಎಂದರು. ಇದನ್ನೂ ಓದಿ: 2 ದಿನವೂ ಕಮಾಲ್ – ಕರ್ನಾಟಕದಲ್ಲಿ ದಾಖಲೆ ಬರೆದ ಮೋದಿ ರೋಡ್ ಶೋ

     

  • ಕಾರಿನ ಮೇಲೆ ನಿಂತಿದ್ದ ಸಚಿವ ಸೋಮಣ್ಣರನ್ನು ಕೆಳಗೆ ಬೀಳಿಸಿದ ಸುದೀಪ್ ಅಭಿಮಾನಿ

    ಕಾರಿನ ಮೇಲೆ ನಿಂತಿದ್ದ ಸಚಿವ ಸೋಮಣ್ಣರನ್ನು ಕೆಳಗೆ ಬೀಳಿಸಿದ ಸುದೀಪ್ ಅಭಿಮಾನಿ

    ಚಾಮರಾಜನಗರ: ಬಿಜೆಪಿ (BJP) ಪಕ್ಷದಿಂದ ನಟ ಸುದೀಪ್ (Sudeep) ಸಚಿವ ವಿ.ಸೋಮಣ್ಣ (V Somanna) ಪರವಾಗಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಶುಕ್ರವಾರ ಚಾಮರಾಜನಗರದಲ್ಲಿ (Chamarajanagar) ನಾಯಕರು ರೋಡ್ ಶೋ (Road Show) ನಡೆಸುತ್ತಿದ್ದ ವೇಳೆ ಸುದೀಪ್ ಹತ್ತಿರ ಹೋಗಲು ಧಾವಿಸಿದ ಅಭಿಮಾನಿ (Fan) ಸೋಮಣ್ಣ ಅವರನ್ನು ಬಿಳಿಸಿರುವ ಪ್ರಸಂಗ ನಡೆದಿದೆ.

    ಸಚಿವ ಸೋಮಣ್ಣ, ಕೊಳ್ಳೇಗಾಲ ಎನ್ ಮಹೇಶ್, ಗುಂಡ್ಲುಪೇಟೆ ನಿರಂಜನ್ ಕುಮಾರ್, ಹನೂರು ಪ್ರೀತನ್ ನಾಗಪ್ಪ ಪರ ಸುದೀಪ್ ಚಾಮರಾಜನಗರಲ್ಲಿ ರೋಡ್ ಶೋ ನಡೆಸಿದ್ದಾರೆ. ಗುಂಡ್ಲುಪೇಟೆ ಮೂಲಕ ರೋಡ್ ಶೋ ಆರಂಭ ಮಾಡಲಾಗಿದ್ದು, ಚಾಮರಾಜನಗರ, ಕೊಳ್ಳೇಗಾಲ, ಹನೂರು ಕ್ಷೇತ್ರದಲ್ಲಿ ರೋಡ್ ಶೋ ನಡೆದಿದೆ.

    ರೋಡ್ ಶೋ ವೇಳೆ ಸಚಿವ ಸೋಮಣ್ಣ ಹಾಗೂ ಸುದೀಪ್ ಕಾರಿನ ಮೇಲೆ ನಿಂತು ಜನರತ್ತ ಕೈ ಬೀಸುತ್ತಿದ್ದರು. ಆಗ ಸುದೀಪ್ ಬಳಿ ತೆರಳಲು ಅಭಿಮಾನಿಯೊಬ್ಬ ಕಾರಿನ ಮೇಲೆ ಹತ್ತಿದ್ದಾನೆ. ಬಳಿಕ ಆತ ಆಯತಪ್ಪಿದ್ದು, ಸಚಿವ ಸೋಮಣ್ಣ ಅವರನ್ನು ಹಿಡಿದುಕೊಂಡು ಕೆಳಕ್ಕೆ ಬಿದ್ದಿದ್ದಾನೆ. ಈ ವೇಳೆ ಸೋಮಣ್ಣ ಕೂಡಾ ಬಿದ್ದಿದ್ದು, ಅವರನ್ನು ಸುದೀಪ್ ಕಾರಿನ ಟಾಪ್‌ನಿಂದ ಕೆಳಕ್ಕೆ ಬೀಳದಂತೆ ಹಿಡಿದಿದ್ದರು. ಇದನ್ನೂ ಓದಿ: ತಂದೆಗೆ ಬಿಜೆಪಿ ಟಿಕೆಟ್ ಸಿಕ್ಕ ಖುಷಿಗೆ ಗಾಳಿಯಲ್ಲಿ ಗುಂಡು ಪ್ರಕರಣ – ಅಭ್ಯರ್ಥಿ ಪುತ್ರನ ವಿರುದ್ಧ ಎಫ್‍ಐಆರ್

    ಅಬ್ಬರದ ಪ್ರಚಾರದಲ್ಲಿ ನಟ ಸುದೀಪ್‌ರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಸಂತೇಮರಹಳ್ಳಿಯ ವೃತ್ತದಲ್ಲಿ ನೂಕುನುಗ್ಗಲು ಉಂಟಾಗಿದ್ದು, ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿಪ್ರಹಾರ ನಡೆಸಿದ್ದಾರೆ. ಇದನ್ನೂ ಓದಿ: ರೋಡ್ ಶೋನಿಂದ ಒಬ್ಬ ವಿದ್ಯಾರ್ಥಿಗೂ ತೊಂದರೆಯಾಗಬಾರದು ಅಂದ್ರು ಪ್ರಧಾನಿ: ಶೋಭಾ ಕರಂದ್ಲಾಜೆ

  • ಸಿದ್ದರಾಮಯ್ಯ ಹತಾಶರಾಗಿ ಸ್ಟಾರ್‌ಗಳನ್ನು ಪ್ರಚಾರಕ್ಕೆ ಕರೆಸಿಕೊಂಡಿದ್ದಾರೆ: ಸೋಮಣ್ಣ

    ಸಿದ್ದರಾಮಯ್ಯ ಹತಾಶರಾಗಿ ಸ್ಟಾರ್‌ಗಳನ್ನು ಪ್ರಚಾರಕ್ಕೆ ಕರೆಸಿಕೊಂಡಿದ್ದಾರೆ: ಸೋಮಣ್ಣ

    ಮೈಸೂರು: ಸಿದ್ದರಾಮಯ್ಯ ಹತಾಶರಾಗಿ ಸ್ಟಾರ್‌ಗಳನ್ನು ಕರೆಸಿಕೊಂಡು ಪ್ರಚಾರಕ್ಕೆ ಇಳಿದಿದ್ದಾರೆ ಎಂದು ಸಚಿವ ವಿ. ಸೋಮಣ್ಣ (V Somanna) ವ್ಯಂಗ್ಯವಾಡಿದರು.

    ಸಿದ್ದರಾಮಯ್ಯ ಪರ ಸ್ಟಾರ್‌ಗಳ ಪ್ರಚಾರ ವಿಚಾರವಾಗಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಒಂದೇ ದಿನ ಪ್ರಚಾರಕ್ಕೆ ಬರುತ್ತೇನೆ ಎಂದಿದ್ದ ಸಿದ್ದರಾಮಯ್ಯ ಈಗ ಮತ್ತೆ ಮತ್ತೆ ಬರ್ತಿದ್ದಾರೆ. ಅಷ್ಟೇ ಅಲ್ಲದೇ ಸಿದ್ದರಾಮಯ್ಯ ಹತಾಶರಾಗಿ ಸ್ಟಾರ್‌ಗಳನ್ನು ಕರೆಸಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ರಾಜಕುಮಾರ್ ಕುಟುಂಬಕ್ಕೂ ನನಗೂ 40 ವರ್ಷದ ಅವಿನಾಭಾವ ಸಂಬಂಧವಿದೆ. ಪುನೀತ್ ರಾಜಕುಮಾರ್ ಹೆಸರಿನಲ್ಲಿ ನಮ್ಮ ಕ್ಷೇತ್ರದಲ್ಲಿ ಬೃಹತ್ ಆಸ್ಪತ್ರೆ ಕಟ್ಟಿಸಿದ್ದೇನೆ ಎಂದರು.

    ಶಿವರಾಜ್ ಯಾಕೆ ಹೀಂಗೆ ಮಾಡಿದರು ನನಗೆ ಗೊತ್ತಿಲ್ಲ. ನನಗೆ ವಿಜಿ, ರಮ್ಯಾ (Ramya) ಬಗ್ಗೆ ಗೊತ್ತಿಲ್ಲ. ಸಿದ್ದರಾಮಯ್ಯ ಅವರು ಸ್ಟಾರ್ ಪ್ರಚಾರಕ್ಕೆ ಜೊತೆ ಬಂದು ಸೋಮಣ್ಣ ವಿರುದ್ಧ ಪ್ರಚಾರ ಮಾಡ್ತಿದ್ದಾರಲ್ಲ ನನಗೆ ಅದೇ ಖುಷಿ. ಜನ ಸೇರಿಸಲು ಸಿದ್ದರಾಮಯ್ಯ ಸ್ಟಾರ್‌ಗಳ ಜೊತೆ ಬರುತ್ತಿದ್ದಾರೆ ಅಷ್ಟೇ ಎಂದು ವ್ಯಂಗ್ಯವಾಡಿದರು.

    ತಮ್ಮಿಂದ ಮಾತ್ರ ವರುಣಾ (Varuna) ಕ್ಷೇತ್ರದ ಅಭಿವೃದ್ಧಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ತಮ್ಮ ಮನೆಯ ಕೋಳಿ ಕೂಗಿದರೆ ಮಾತ್ರ ಬೆಳಕು ಹರಿಯುತ್ತದೆ ಎಂಬ ರೀತಿ ಸಿದ್ದರಾಮಯ್ಯ ಮಾತಾಡ್ತಿದ್ದಾರೆ. ಸಿದ್ದರಾಮಯ್ಯ ಅವರು ಮನಸ್ಸು ಮಾಡಿದ್ದರೆ ಐದು ವರ್ಷದಲ್ಲಿ ವರುಣ ಕ್ಷೇತ್ರಕ್ಕೆ ಚಿನ್ನದ ತಗಡನ್ನೆ ಹೊಡೆಸಬಹುದಿತ್ತು. ವರುಣದಲ್ಲಿ ಒಂದು ಕಾಲೇಜ್ ಇಲ್ಲ, ಆಸ್ಪತ್ರೆ ಇಲ್ಲ, ರಸ್ತೆಗಳು ಸರಿ ಇಲ್ಲ. ಇದು ವರುಣ ಸ್ಥಿತಿಯಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ:ಬಜರಂಗದಳ ನಿಷೇಧಿಸಲು ನಿಮ್ಮ ಬಳಿ ಧೈರ್ಯ, ತಾಕತ್ ಇಲ್ಲ: ಕಾಂಗ್ರೆಸ್‌ ವಿರುದ್ಧ ಫಡ್ನವೀಸ್‌ ವಾಗ್ದಾಳಿ

    ಬದಾಮಿಯಲ್ಲೂ ಸಿದ್ದರಾಮಯ್ಯ ಯಾವ ಅಭಿವೃದ್ಧಿ ಕಾರ್ಯ ಮಾಡಲಿಲ್ಲ. ಜನರ ಋಣ ತೀರಿಸುವುದಕ್ಕೂ ಬದ್ಧತೆ ಬೇಕು. ನಾನು ಆ ಕೆಲಸವನ್ನು ಮಾಡಿದ್ದೇನೆ. ನಾನು ನಾನು ಎಂಬುದನ್ನು ಸಿದ್ದರಾಮಯ್ಯ ಅವರು ಮೊದಲು ಬಿಡಲಿ. ವರುಣಾ ಜನ ನನ್ನ ಗೆಲ್ಲಿಸಿದರೆ ನಾನು ವರುಣಾದಲ್ಲೇ ಇರುತ್ತೇನೆ. ವರುಣದಲ್ಲೇ ಮನೆನೂ ಮಾಡುತ್ತೇನೆ. ಶಾಶ್ವತವಾಗಿ ಇರುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಯುದ್ಧದ ನಡುವೆಯೂ ತೆರೆಯುತ್ತಿದ್ದ ಉಕ್ರೇನ್‌ ಹೈಪರ್‌ಮಾರ್ಕೆಟ್‌ ರಷ್ಯಾ ಕ್ಷಿಪಣಿ ದಾಳಿಗೆ ಉಡೀಸ್‌!

  • ಚಾಮರಾಜನಗರದಲ್ಲಿ ಹೈವೋಲ್ಟೇಜ್‌ ಫೈಟ್‌ – ಅಖಾಡದಲ್ಲಿ ಸಚಿವ ಸೋಮಣ್ಣ vs ಸಿದ್ದು ಶಿಷ್ಯ; ಯಾರಾಗ್ತಾರೆ ಪೈಲ್ವಾನ್?

    ಚಾಮರಾಜನಗರದಲ್ಲಿ ಹೈವೋಲ್ಟೇಜ್‌ ಫೈಟ್‌ – ಅಖಾಡದಲ್ಲಿ ಸಚಿವ ಸೋಮಣ್ಣ vs ಸಿದ್ದು ಶಿಷ್ಯ; ಯಾರಾಗ್ತಾರೆ ಪೈಲ್ವಾನ್?

    ಚಾಮರಾಜನಗರ: ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ (Chamarajanagara) ಹೈವೋಲ್ಟೇಜ್ ಕ್ಷೇತ್ರವಾಗಿ ಕಾಣಿಸಿಕೊಂಡಿದೆ. ಬಿಜೆಪಿ (BJP) ಅಭ್ಯರ್ಥಿ ವಿ.ಸೋಮಣ್ಣ (Somanna) ವರುಣಾ, ಚಾಮರಾಜನಗರ ಎರಡು ಕಡೆಯೂ ಸ್ಪರ್ಧೆ ಮಾಡಿರುವುದರಿಂದ ರಣಕಣವಾಗಿ ಚಾಮರಾಜನಗರ ಕ್ಷೇತ್ರ ಬದಲಾಗಿದೆ. ಮತ್ತೊಂದೆಡೆ ಕಾಂಗ್ರೆಸ್‌ನಿಂದ (Congress) ಮಾಜಿ ಸಿಎಂ ಸಿದ್ದರಾಮಯ್ಯ ಶಿಷ್ಯ ಪುಟ್ಟರಂಗಶೆಟ್ಟಿ (Puttarangashetty) ಅಖಾಡದಲ್ಲಿದ್ದು, ಸತತ ನಾಲ್ಕನೇ ಬಾರಿಯೂ ಗೆಲುವಿನ ಪತಾಕೆ ಹಾರಿಸಲು ಕೆಲಸ ಮಾಡುತ್ತಿದ್ದಾರೆ.

    ಕಾಂಗ್ರೆಸ್‌ನ ಸಿ.ಪುಟ್ಟರಂಗಶೆಟ್ಟಿ ಮತ್ತು ಬಿಜೆಪಿಯ ವಿ.ಸೋಮಣ್ಣ ನಡುವೆ ನೇರ ಹಣಾಹಣಿ ಇದ್ದು, ಇಬ್ಬರ ನಡುವೆ ಪ್ರಬಲ ಪೈಪೋಟಿ ಇದೆ. ವಿಜಯಮಾಲೆ ಯಾರಿಗೆ ಒಲಿದರೂ ಕೂಡ ಕಡಿಮೆ ಅಂತರದಲ್ಲಿ ಅನ್ನೋ ಚರ್ಚೆ ಜೋರಾಗಿದೆ. ಇದನ್ನೂ ಓದಿ: ಇದು ಮುಸ್ಲಿಂ ಲೀಗ್ ಪ್ರಣಾಳಿಕೆ – ವೇದಿಕೆಯಲ್ಲೇ ಕಾಂಗ್ರೆಸ್ ಪ್ರಣಾಳಿಕೆ ಸುಟ್ಟ ಈಶ್ವರಪ್ಪ

    ಚಾಮರಾಜನಗರ ಕ್ಷೇತ್ರದಲ್ಲಿ ಗೆದ್ದವರ ವಿವರ:
    1952ರಲ್ಲಿ ಕಿಸಾನ್ ಮಜ್ದೂರ್ ಪಾರ್ಟಿಯಿಂದ ಯು.ಎಂ.ಮಾದಪ್ಪ, 1957 (ದ್ವಿಸದಸ್ಯ) ಪ್ರಜಾ ಸೋಷಿಯಲಿಸ್ಟ್ ಪಾರ್ಟಿ- ಯು.ಎಂ.ಮಾದಪ್ಪ ಹಾಗೂ ಕಾಂಗ್ರೆಸ್‌ ರಾಚಯ್ಯ. 1962- ಕಾಂಗ್ರೆಸ್‌ನಿಂದ ಎಂ.ಸಿ.ಬಸಪ್ಪ, 1967- ಕಾಂಗ್ರೆಸ್‌ನಿಂದ ಎಸ್.ಪುಟ್ಟಸ್ವಾಮಿ, 1972- ಕಾಂಗ್ರೆಸ್‌ನಿಂದ ಎಸ್.ಪುಟ್ಟಸ್ವಾಮಿ, 1978- ಜನತಾ ಪಕ್ಷದಿಂದ ಎಂ.ಸಿ.ಬಸಪ್ಪ, 1983- ಕಾಂಗ್ರೆಸ್‌ನಿಂದ ಎಸ್.ಪುಟ್ಟಸ್ವಾಮಿ, 1985- ಕಾಂಗ್ರೆಸ್‌ನಿಂದ ಎಸ್.ಪುಟ್ಟಸ್ವಾಮಿ, 1989- ವಾಟಾಳ್‌ ಪಕ್ಷದಿಂದ ವಾಟಾಳ್ ನಾಗರಾಜ್, 1994- ವಾಟಾಳ್ ನಾಗರಾಜ್, 1999- ಬಿಜೆಪಿಯಿಂದ ಸಿ.ಗುರುಸ್ವಾಮಿ, 2004- ವಾಟಾಳ್ ನಾಗರಾಜ್, 2008- ಕಾಂಗ್ರೆಸ್‌ನಿಂದ ಪುಟ್ಟರಂಗಶೆಟ್ಟಿ, 2013- ಪುಟ್ಟರಂಗಶೆಟ್ಟಿ, 2018- ಪುಟ್ಟರಂಗಶೆಟ್ಟಿ.

    ಕಳೆದ ಚುನಾವಣೆಯಲ್ಲಿ ಯಾರಿಗೆ ಎಷ್ಟು ಮತ?
    ಕಾಂಗ್ರೆಸ್ ಸಿ.ಪುಟ್ಟರಂಗಶೆಟ್ಟಿ: ಪಡೆದ ಮತ 75,963
    ಬಿಜೆಪಿ ಮಲ್ಲಿಕಾರ್ಜುನಪ್ಪ: ಪಡೆದ ಮತ 71,050

    ಜಾತಿ ಲೆಕ್ಕಾಚಾರ ಏನು?
    ಕ್ಷೇತ್ರದಲ್ಲಿ ಒಟ್ಟು 2,09,494 ಜನಸಂಖ್ಯೆ ಇದೆ. ಅವರ ಪೈಕಿ 1,02,588 ಪುರುಷರು ಹಾಗೂ 1,06,891 ಮಹಿಳೆಯರಿದ್ದಾರೆ.
    ವೀರಶೈವ- 49,000
    ದಲಿತ- 40,500
    ನಾಯಕ- 24,250
    ಉಪ್ಪಾರ- 28,350
    ಕುರುಬ- 18,000
    ಮುಸ್ಲಿಂ- 15,000
    ಕ್ರಿಶ್ಚಿಯನ್- 6,000
    ಇತರೆ- 25,000

    ಈ ಬಾರಿ ಕಣದಲ್ಲಿರುವ ಅಭ್ಯರ್ಥಿಗಳು
    ಕಾಂಗ್ರೆಸ್- ಪುಟ್ಟರಂಗಶೆಟ್ಟಿ, ಬಿಜೆಪಿ- ವಿ.ಸೋಮಣ್ಣ, ಜೆಡಿಎಸ್- ಆಲೂರು ಮಲ್ಲು, ಬಿಎಸ್‌ಪಿ – ಹ.ರಾ.ಮಹೇಶ್, ಆಪ್- ಡಾ.ಗುರುಪ್ರಸಾದ್. ಇದನ್ನೂ ಓದಿ: ಬಜರಂಗದಳ ಅಲ್-ಖೈದಾ ಅಲ್ಲ: ಸಿದ್ದರಾಮಯ್ಯ ವಿರುದ್ಧ ಅಪ್ಪಚ್ಚು ರಂಜನ್ ಕಿಡಿ

    ಅಭ್ಯರ್ಥಿಗಳ ಪ್ಲಸ್‌, ಮೈನಸ್‌ ಏನು?
    ಪುಟ್ಟರಂಗಶೆಟ್ಟಿ: ಚುನಾವಣೆಯಲ್ಲಿ ಬಿಜೆಪಿ ಕೊಡುವ ಒಳೇಟಿನಿಂದಾಗಿ ಕಾಂಗ್ರೆಸ್‌ಗೆ ಹೆಚ್ಚು ವರವಾಗುತ್ತಿದೆ. ಈಗಾಗಲೇ ಹ್ಯಾಟ್ರಿಕ್ ಜಯಭೇರಿ ಗಳಿಸಿರುವ ಕಾಂಗ್ರೆಸ್ ಶಾಸಕ ಪುಟ್ಟರಂಗಶೆಟ್ಟಿ, ಕ್ಷೇತ್ರದಲ್ಲಿನ ಮತ ಬ್ಯಾಂಕ್ ಮೇಲೆ ಹಿಡಿತ ಹೊಂದಿದ್ದಾರೆ. ಉಪ್ಪಾರ ಸಮುದಾಯ, ದಲಿತ, ಅಲ್ಪಸಂಖ್ಯಾತ, ಮುಸ್ಲಿಂ, ಹಿಂದುಳಿದ ಮತ ಕಾಂಗ್ರೆಸ್ ಕೈ ಹಿಡಿದಿದ್ದು, ಈ ಬಾರಿಯೂ ಮತ ಸಿಗುವ ಭರವಸೆ ಇದೆ. ಮೈನಸ್‌ ಅಂಶ ಹೇಳುವುದಾದರೆ, ಮೂರು ಬಾರಿ ಆಯ್ಕೆಯಾದರೂ ಮೂಲ ಸೌಕರ್ಯ ಕೊರತೆ. ಅಭಿವೃದ್ಧಿ ದೃಷ್ಟಿಕೋನ ಇಲ್ಲದಿರುವ ಶಾಸಕ ಎಂಬ ಮೂದಲಿಕೆ. ಸಾವಿರಾರು ಕೋಟಿ ಅನುದಾನ ತಂದು ಕ್ಷೇತ್ರ ಅಭಿವೃದ್ಧಿ ಮಾಡಿಲ್ಲ ಎಂಬ ಅರೋಪವಿದೆ.

    ವಿ.ಸೋಮಣ್ಣ: ಬಿಜೆಪಿಯ ಲಿಂಗಾಯತ ಪ್ರಬಲ ನಾಯಕ ಸ್ಪರ್ಧೆ ಮಾಡಿರುವುದು. ಲಿಂಗಾಯತ ಸಮುದಾಯದ ಹಿರಿಯ ಮುಖಂಡ. ದೂರದೃಷ್ಟಿ ಇಟ್ಟುಕೊಂಡು ಅಭಿವೃದ್ಧಿ ಮಾಡುವ ಭರವಸೆ. ಸಾವಿರಾರು ಕೋಟಿ ಅನುದಾನ ತರುವ ಚಾಕಚಕ್ಯತೆ. ಕ್ಷೇತ್ರದ ಎಲ್ಲಾ ಸಮುದಾಯದ ಮುಖಂಡರ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ. ಮೈನಸ್‌ ಪಾಯಿಂಟ್‌, ಹೊರಗಿನ ಅಭ್ಯರ್ಥಿ ಅರ್ಥಾತ್ ದೂರದ ಬೆಂಗಳೂರಿನಿಂದ ಬಂದಿದ್ದು, ಕೈಗೆ ಸಿಗಲಾರರು ಎಂಬ ಆರೋಪ. ಪಕ್ಷದ ಒಳಗಿನ ಗುದ್ದಾಟ, ಇಷ್ಟು ಚುನಾವಣೆಯಲ್ಲೂ ಒಳೇಟು ಕೊಡುತ್ತಿರುವುದು ಈ ಬಾರಿಯೂ ಮುಂದುವರೆಯುವ ಸಾಧ್ಯತೆ. ಬಿಎಸ್‌ವೈ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ವರುಣದಲ್ಲಿ ಹೆಚ್ಚು ಗಮನ ಕೊಟ್ಟು ಚಾಮರಾಜನಗರದತ್ತ ಕಡಿಮೆ ಸಮಯ ಕೊಟ್ಟಿದ್ದಾರೆ. ಇದನ್ನೂ ಓದಿ: ಯತ್ನಾಳ್‌, ಪ್ರಿಯಾಂಕ್‌ ಖರ್ಗೆಗೆ ಶೋಕಾಸ್‌ ನೋಟಿಸ್‌ ಜಾರಿ

    ಇಲ್ಲಿಯವರೆಗೂ ಕೂಡ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆಯಾಗಿದೆ. 9 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳೇ ಜಯಗಳಿಸಿದ್ದಾರೆ. ಅಲ್ಲದೇ ಒಂದು ಬಾರಿಯಷ್ಟೇ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಆದರೆ ಕಳೆದ ಮೂರು ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ದೊಡ್ಡ ಅಂತರದ ಗೆಲುವು ಸಿಕ್ಕಿಲ್ಲ. ಇದನ್ನೇ ಸ್ಟ್ರಾಟಜಿ ಮಾಡಿಕೊಂಡಿರುವ ಬಿಜೆಪಿ ಈ ಬಾರಿ ಮಾಜಿ ಸಿಎಂ ಸಿದ್ದರಾಮಯ್ಯ ಶಿಷ್ಯ ಪುಟ್ಟರಂಗಶೆಟ್ಟಿ ವಿರುದ್ಧ ಲಿಂಗಾಯತ ಸಮುದಾಯದ ಪ್ರಬಲ ನಾಯಕನನ್ನು ಅಖಾಡಕ್ಕಿಳಿಸಿದ್ದು, ಯಾರೂ ವಿಜಯಭೇರಿ ಬಾರಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

  • ಸೋಮಣ್ಣಗೆ ಲೋ ಬಿಪಿ

    ಸೋಮಣ್ಣಗೆ ಲೋ ಬಿಪಿ

    ಚಾಮರಾಜನಗರ: ಎರಡು ಕಡೆಯಲ್ಲೂ ಸತತ ಪ್ರಚಾರ ಮಾಡುತ್ತಿರುವ ಬೆನ್ನಲ್ಲೇ ಸಚಿವ ವಿ. ಸೋಮಣ್ಣಗೆ ಲೋ ಬಿಪಿ ಆಗಿ ತಲೆ ಸುತ್ತು ಬಂದ ಪ್ರಸಂಗ ಇಂದು ನಡೆಯಿತು.

    ರಾಜ್ಯ ವಿಧಾನಸಭಾ ಚುನಾವಣೆಗೆ (Election) ಇನ್ನೇನೂ ಕೆಲವೇ ದಿನಗಳು ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಬಿಸಿಲಿನಲ್ಲೂ ವರುಣಾ (Varuna), ಚಾಮರಾಜನಗರ (Chamarajanagara) ಎರಡು ಕ್ಷೇತ್ರದಲ್ಲೂ ವಿ. ಸೋಮಣ್ಣ (V Somanna) ಅವರು ಬೀರುಸಿನ ನಡೆಸುತ್ತಿದ್ದಾರೆ. ಸತತವಾಗಿ ಪ್ರಚಾರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸೊಮಣ್ಣಗೆ ಲೋ ಬಿಪಿಯಿಂದಾಗಿ ತಲೆ ಸುತ್ತು ಬಂದಿದೆ. ಕೂಡಲೇ ಅಲ್ಲಿದ್ದ ಕಾರ್ಯಕರ್ತರು ಸೋಮಣ್ಣ ಅವರನ್ನು ಚಾಮರಾಜನಗರ ಕೋಡಿಮೊಳೆ ಗ್ರಾಮದಲ್ಲಿ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ನಂತರ ಸೋಮಣ್ಣ ಮತ್ತೆ ಪ್ರಚಾರ ಆರಂಭಿಸಿದರು. ಇದನ್ನೂ ಓದಿ: ಮದುವೆ ಮನೆಯಲ್ಲಿ ಸಾವಿನ ಸೂತಕ – ಕುದಿಯುವ ರಸಂ ಪಾತ್ರೆಗೆ ಬಿದ್ದು ಯುವಕ ಸಾವು

    ಘಟನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಆರಾಮಾಗಿದ್ದೇನೆ, ಸ್ವಲ್ಪ ಲೋ ಬಿಪಿ. ನಂಗೆ ತಲೆ ಸುತ್ತು ಬಂತು. ಹಾಗೇ ಕಾರಿನಲ್ಲಿ ಕುಳಿತೆ. 20 ನಿಮಿಷ ರೆಸ್ಟ್ ಮಾಡಿದೆ. ವೈದ್ಯರು ಬಂದು ಚೆಕ್ ಮಾಡಿದರು. ರಕ್ತದೊತ್ತಡ 70ಕ್ಕೆ ಇಳಿದಿತ್ತು. ನಾನು ಸುಮ್ನೆ ಕುಳಿತುಕೊಳ್ಳುವವನು ಅಲ್ಲ. ಸಭೆ ಮುಗಿಸಿ ಮಲಗಿದಾಗ 4 ಗಂಟೆ ಆಗಿತ್ತು. ದೈಹಿಕವಾಗಿ ಬಳಲಿದ್ದೇನೆ ಅಷ್ಟೇ ಎಂದು ತಿಳಿಸಿದರು. ಇದನ್ನೂ ಓದಿ: ಹ್ಯಾಟ್ರಿಕ್ ಗೆಲುವಿನ ಬಳಿಕ ಮತ್ತೆ ಗೆಲ್ತಾರಾ ಹೆಚ್.ಕೆ ಕುಮಾರಸ್ವಾಮಿ? – ಸಕಲೇಶಪುರ ಮೀಸಲು ಕ್ಷೇತ್ರ ಯಾರಿಗೆ ಒಲಿಯುತ್ತೆ

  • ಒಂದು ಕೊಡ್ರಯ್ಯ ಅಂದ್ರೆ 2 ಕೊಟ್ಟವ್ರೆ; ಚಾಮರಾಜನಗರ ವೋಲ್ಟೇಜ್ ಆದ್ರೆ, ವರುಣಾ ಹೈವೋಲ್ಟೇಜ್: ಸೋಮಣ್ಣ

    ಒಂದು ಕೊಡ್ರಯ್ಯ ಅಂದ್ರೆ 2 ಕೊಟ್ಟವ್ರೆ; ಚಾಮರಾಜನಗರ ವೋಲ್ಟೇಜ್ ಆದ್ರೆ, ವರುಣಾ ಹೈವೋಲ್ಟೇಜ್: ಸೋಮಣ್ಣ

    ಚಾಮರಾಜನಗರ: ಒಂದು ಕೊಡ್ರಯ್ಯ ಅಂದ್ರೆ ಎರಡು ಕೊಟ್ಟವ್ರೆ, ಚಾಮರಾಜನಗರ (Chamarajanagar) ವೋಲ್ಟೇಜ್ ಆದ್ರೆ, ವರುಣಾ (Varuna) ಹೈ ವೋಲ್ಟೇಜ್ ಎಂದು ಸಚಿವ ವಿ.ಸೋಮಣ್ಣ (V Somanna) ಎರಡು ಕಡೆ ಸ್ಪರ್ಧಿಸಿರುವ ಬಗ್ಗೆ ಮಾರ್ಮಿಕವಾಗಿ ನುಡಿದರು.

    ಚಾಮರಾಜನಗರ ತಾಲೂಕು ಕೊತ್ತಲವಾಡಿಯಲ್ಲಿ ರೋಡ್ ಶೋ (Road Show) ವೇಳೆ ಮಾತನಾಡಿದ ಅವರು, ಎರಡು ಕಡೆ ಓಡಾಡುವುದು ಸುಲಭದ ಕೆಲಸ ಅಲ್ಲ, ವರುಣಾ ಹೈವೋಲ್ಟೇಜ್ ಅಂತ ಅವ್ರು ಹೇಳ್ತಿದ್ರು, ಆದ್ರೆ ಎಂಟೇ ದಿನಕ್ಕೆ ಹೈಯು ಇಲ್ಲ ಪೈಯು ಇಲ್ಲ ಆಗಿದೆ. ಇನ್ನೊಂದು ಮೂರು, ನಾಲ್ಕು ದಿನ ಹೋದ್ರೆ ಎಲ್ಲಾ ವೋಲ್ಟೇಜ್ ಹೋಗಿ ಅವರು ಏನಾಗುತ್ತಾರೆ ಅಂತ ನೀವೇ ನೋಡಿ ಎಂದು ವ್ಯಂಗ್ಯವಾಡಿದರು.

    ಗೋವಿಂದರಾಜನಗರ ತಬ್ಬಲಿ ಆಗಿದೆ, ನೂರಾರು ಜನ ಕಾರ್ಯಕರ್ತರು ಇಲ್ಲಿ ಬಂದು ಓಡಾಡುತ್ತಿದ್ದಾರೆ. ವರುಣಾದಲ್ಲಿ ಸಾವಿರಾರು ಜನರು ಬಂದು ಕೆಲಸ ಮಾಡುತ್ತಿದ್ದಾರೆ ಎಂದ ಅವರು, ಸಿದ್ದರಾಮಯ್ಯ ಅವರು ನಾನು ನಾಮಪತ್ರ ಹಾಕಿದ್ರೆ ಮತ್ತೆ ವೋಟ್ ಹಾಕುವುದಕ್ಕೆ ಮಾತ್ರ ಬರುತ್ತೇನೆ ಎಂದು ಹೇಳಿದ್ದರು. ಆದರೆ ಅವರು ಸೋಮವಾರದಿಂದ ವರುಣಾದಲ್ಲೇ ಇರುತ್ತಾರಂತೆ. ಮುಂದಿನ ಸೋಮವಾರದಿಂದ ವರುಣಾದಲ್ಲೇರುತ್ತೇನೆ, ನನ್ನ ಕೈಲಿ ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.

    ಸಿದ್ದರಾಮಯ್ಯ (Siddaramaiah) ಅವರ ಕುಟುಂಬ ಯಾವತ್ತೂ ರೋಡ್‌ಗೆ ಹೋಗಿ ಒಂದು ವೋಟ್ ಕೇಳಿರಲಿಲ್ಲ. ಈಗ ಎಲ್ಲಾ ಕಡೆ ಕೇಳ್ತಿದ್ದಾರೆ. ಎಲ್ಲಾ ಹೈ ವೋಲ್ಟೇಜ್ ಪ್ರಭಾವ ಎಂದ ಅವರು, ವರುಣಾದಲ್ಲಿ ಒಂದು ದಿನ ಅಲ್ಲ, ದಿನವೂ ನಮ್ಮ ಪ್ರಚಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ಹತಾಶರಾಗಿದ್ದಾರೆ. ಈ ರಾಜ್ಯದ ಮಾಜಿ ಸಿಎಂಗೆ ಮುಜುಗರವಾಗಬಾರದೆಂದು ಸಹಿಸಿಕೊಂಡಿದ್ದೇನೆ. ಅರ್ಥ ಮಾಡಿಕೊಂಡಿಲ್ಲ ಅಂದ್ರೆ ಹೇಗೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಹೂವಿನಲ್ಲಿ ಕಲ್ಲು ಬಂದಿಲ್ಲ, ಯಾರೋ ದುಷ್ಕರ್ಮಿಗಳು ಎಸೆದಿದ್ದಾರೆ : ಪರಮೇಶ್ವರ್

    ಪ್ರತಾಪ್ ಸಿಂಹರಿಂದಲೇ ಗಲಾಟೆಯಾಗ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಉತ್ತರಿಸಿದ ಅವರು, ಪ್ರತಾಪ್ ಸಿಂಹ ಜವಾಬ್ದಾರಿಯುತ ಲೋಕಸಭಾ ಸದಸ್ಯ. ಆತ ನನಗೆ ಸಹೋದರ ಸಮಾನ, ಪಕ್ಷದ ಭವಿಷ್ಯದ ನಾಯಕ, ವಾಸ್ತವಾಂಶ ಇರೋದನ್ನು ಮಾತಾಡ್ತಾರೆ ಎಂದರು. ಇದನ್ನೂ ಓದಿ: ಮೋದಿ ರೋಡ್ ಶೋ- ಮದುಮಗ ಆಯ್ತು, ಈಗ ಮದುವೆಗೆ ಹೋಗಲು ಕಷ್ಟಪಟ್ಟ ವಧು