Tag: ವಿ.ಸೋಮಣ್ಣ

  • ಕೇಂದ್ರ ಸಚಿವ ವಿ.ಸೋಮಣ್ಣರ ಕಾರ್ಯಾಲಯ ವಿವಾದ ಸುಖಾಂತ್ಯ

    ಕೇಂದ್ರ ಸಚಿವ ವಿ.ಸೋಮಣ್ಣರ ಕಾರ್ಯಾಲಯ ವಿವಾದ ಸುಖಾಂತ್ಯ

    ತುಮಕೂರು: ಕೇಂದ್ರ ಸಚಿವ ವಿ.ಸೋಮಣ್ಣರ (V Somanna) ತುಮಕೂರು (Tumakuru) ಕಾರ್ಯಾಲಯದ ವಿವಾದ ಕೊನೆಗೂ ಸುಖಾಂತ್ಯಗೊಂಡಿದೆ. ಆಡಳಿತಾತ್ಮಕ ಒಪ್ಪಿಗೆಯೊಂದಿಗೆ ಭಾನುವಾರ ವಿದ್ಯುಕ್ತವಾಗಿ ನೂತನ ಕಚೇರಿ (Office) ಉದ್ಘಾಟನೆಗೊಂಡಿದೆ. ಮೈತ್ರಿ ಪಕ್ಷದ ಸಾವಿರಾರು ಕಾರ್ಯಕರ್ತರು, ಮುಖಂಡರ ಜಮಾವಣೆಯೊಂದಿಗೆ ಶಕ್ತಿ ಪ್ರದರ್ಶನ ಮಾಡಿ ನೂತನ ಕಾರ್ಯಾಲಯ ಆರಂಭಗೊಂಡಿದೆ.

    ತುಮಕೂರಿನ ಹಳೇ ಪ್ರವಾಸಿ ಮಂದಿರದಲ್ಲಿ ಕಾರ್ಯಾಲಯ ಆರಂಭಿಸಲು ರಾಜ್ಯ ಸರ್ಕಾರ ಮೊದಲು ಅನುಮತಿ ಕೊಟ್ಟಿತ್ತು. ನವೀಕರಣಗೊಂಡು ಉದ್ಘಾಟನೆಗೆ ಸಿದ್ಧಗೊಂಡ ಬಳಿಕ ಅನುಮತಿ ರದ್ದುಗೊಳಿಸಿತ್ತು. ಸರ್ಕಾರದ ಈ ಧೋರಣೆಗೆ ಮೈತ್ರಿ ನಾಯಕರು ಕೆಂಡಾಮಂಡಲವಾಗಿದ್ದರು. ಈ ನಡುವೆ ಸ್ವತಃ ಸಿಎಂ ಸಿದ್ದರಾಮಯ್ಯ (Siddaramaiah) ವಿ.ಸೋಮಣ್ಣರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. ಬಳಿಕ ಸಿಎಂ ಸಲಹೆ ಮೇರೆಗೆ ವಿ.ಸೋಮಣ್ಣ ಗೃಹ ಸಚಿವ ಜಿ.ಪರಮೇಶ್ವರ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಗೊಂದಲ ಪರಿಹರಿಸಿದ್ದಾರೆ. ಇದನ್ನೂ ಓದಿ: Bengaluru | ಹಣಕ್ಕಾಗಿ ತಾಯಿ-ಮಗನ ಕಿಡ್ನ್ಯಾಪ್‌ ಮಾಡಿ ಲೈಂಗಿಕ ಕಿರುಕುಳ – ರೌಡಿ ಶೀಟರ್ಸ್‌ ಗ್ಯಾಂಗ್ ಅರೆಸ್ಟ್

    ಹೀಗಾಗಿ ಯಾವುದೇ ಅಡ್ಡಿ ಆತಂಕ ಇಲ್ಲದೇ ಭಾನುವಾರ ಸುಸೂತ್ರವಾಗಿ ಕಚೇರಿ ಉದ್ಘಾಟನೆ ನಡೆದಿದೆ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸಿ ಮಂದಿರದ ಸುತ್ತಲೂ ಬಿಗಿ ಪೊಲೀಸ್ ಬಂದೋ ಬಸ್ತ್ ಒದಗಿಸಲಾಗಿತ್ತು. ಇದನ್ನೂ ಓದಿ: ಭಾರತದ ಸ್ಟಾರ್‌ ರೆಸ್ಲರ್ ವಿನೇಶ್ ಫೋಗಟ್‌ಗೆ ಚಿನ್ನದ ಪದಕ!

  • Tumkur | ಹೊಸ ಮೆಮು ರೈಲು ಸಂಚಾರ ಆರಂಭ: ವಿ. ಸೋಮಣ್ಣ

    Tumkur | ಹೊಸ ಮೆಮು ರೈಲು ಸಂಚಾರ ಆರಂಭ: ವಿ. ಸೋಮಣ್ಣ

    – ಬೆಂಗಳೂರು-ತುಮಕೂರು-ಅರಸಿಕೆರೆ ಮಾರ್ಗಕ್ಕೆ ಬರಲಿದೆ ಆಟೋಮೆಟಿಕ್ ರೈಲ್ವೆ ಸಿಗ್ನಲ್

    ತುಮಕೂರು: ನಗರದ ರೈಲು ನಿಲ್ದಾಣದಿಂದ ಮುಂದಿನ ಹದಿನೈದು ದಿನಗಳಲ್ಲಿ ಹೊಸದಾಗಿ ಮೆಮು ರೈಲು (Memu Express Train) ಸಂಚಾರ ಆರಂಭವಾಗಲಿದೆ ಎಂದು ಕೇಂದ್ರ ಜಲ ಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ (V Somanna) ಇಲ್ಲಿ ತಿಳಿಸಿದರು.

    ರಾಜ್ಯದಲ್ಲಿ ಹೊಸದಾಗಿ ಮೂರು ಮೆಮು ರೈಲು ಆರಂಭವಾಗಲಿದ್ದು, ಇದರಲ್ಲಿ ಒಂದು ತುಮಕೂರು ನಿಲ್ದಾಣದಿಂದ (Tumkur Railway Station) ಶುರುವಾಗಲಿದೆ. ನಗರದಿಂದ ಬೆಳಗ್ಗೆ 9 ಗಂಟೆಗೆ ಹೊರಟು 10ಕ್ಕೆ ಬೆಂಗಳೂರಿನ ಯಶವಂತಪುರ ನಿಲ್ದಾಣ ತಲುಪಲಿದೆ. ಸಂಜೆ 6 ಗಂಟೆಗೆ ಯಶವಂತಪುರದಿಂದ ಹೊರಟು ಸಂಜೆ 7 ಗಂಟೆಗೆ ನಗರಕ್ಕೆ ಬರಲಿದೆ. ಇದರಲ್ಲಿ 1,500 ಜನ ಪ್ರಯಾಣಿಸಬಹುದು ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ರೈಲ್ವೆ ಮಾರ್ಗದ ಸಾಮರ್ಥ್ಯ ಹೆಚ್ಚಿಸಿ ಬೆಂಗಳೂರು-ತುಮಕೂರು-ಅರಸಿಕೆರೆ ಮಾರ್ಗದಲ್ಲಿ 220 ಕೋಟಿ ರೂ. ವೆಚ್ಚದಲ್ಲಿ ಆಟೋಮೆಟಿಕ್ ರೈಲ್ವೆ ಸಿಗ್ನಲ್ ಅಳವಡಿಸುವ ಯೋಜನೆಗೆ ಮಂಜೂರಾತಿ ನೀಡಲಾಗಿದೆ. ಬೆಂಗಳೂರು-ತುಮಕೂರು ಭಾಗದ ಮುಂದಿನ 30 ವರ್ಷಗಳ ಬೆಳವಣಿಗೆ ದೃಷ್ಟಿಯಲ್ಲಿ ಇಟ್ಟುಕೊಂಡು ಯೋಜನೆ ರೂಪಿಸಲಾಗಿದೆ. ಇದರಿಂದ ರೈಲುಗಳ ಓಡಾಟ ಸುಲಭವಾಗುತ್ತದೆ ಎಂದು ವಿವರಿಸಿದರು. ಇದನ್ನೂ ಓದಿ: ಟ್ರೈನಿ ವೈದ್ಯೆ ಅತ್ಯಾಚಾರ & ಹತ್ಯೆ ಕೇಸ್‌; ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ

    ʻಅಮೃತ್‌ ಭಾರತ್ʼ ಯೋಜನೆಯಡಿ ರಾಜ್ಯದ 61 ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ನಗರದ ನಿಲ್ದಾಣಕ್ಕೆ 118 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಈಗಾಗಲೇ ಗುಬ್ಬಿ ನಿಲ್ದಾಣದ ಆಧುನೀಕರಣಕ್ಕೆ 7.50 ಕೋಟಿ ರೂ., ಹಾಸನದ ಶ್ರವಣಬೆಳಗೊಳ ನಿಲ್ದಾಣಕ್ಕೆ 9 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಗುಬ್ಬಿ ತಾಲ್ಲೂಕಿನ ದೊಡ್ಡಗುಣಿ ಹತ್ತಿರ ಸೈವಾಕ್ ನಿರ್ಮಾಣ ಕಾರ್ಯ ಒಂದು ತಿಂಗಳಲ್ಲಿ ಆರಂಭವಾಗಲಿದೆ ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಸದ್ಯಕ್ಕೆ ಪೊಲಿಟಿಕಲ್ ಸೇಫ್ – ಆದ್ರೆ ಮುಂದೇನು?

  • ವಿ.ಸೋಮಣ್ಣಗೆ ಬಿಗ್ ಶಾಕ್ – ಸಂಸದರ ಕಚೇರಿ ವಾಪಸ್ ಪಡೆದ ಸರ್ಕಾರ

    ವಿ.ಸೋಮಣ್ಣಗೆ ಬಿಗ್ ಶಾಕ್ – ಸಂಸದರ ಕಚೇರಿ ವಾಪಸ್ ಪಡೆದ ಸರ್ಕಾರ

    ತುಮಕೂರು: ಉದ್ಘಾಟನೆಗೆ ಸಿದ್ಧವಾಗಿದ್ದ ನೂತನ ಸಂಸದರ ಕಚೇರಿ ವಾಪಸ್ ಪಡೆದು ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣಗೆ (V Somanna) ರಾಜ್ಯ ಸರ್ಕಾರ ಶಾಕ್ ನೀಡಿದೆ.

    ತುಮಕೂರಿನ ರೈಲ್ವೆ ನಿಲ್ದಾಣ ಬಳಿ ಇರುವ ಹಳೆಯ ಪರಿವೀಕ್ಷಣಾ ಮಂದಿರವನ್ನು (Inspection Bungalow) ಸೋಮಣ್ಣ ಅವರಿಗೆ ಸರ್ಕಾರ ನೀಡಿತ್ತು. ಆ.18 ಭಾನುವಾರದಂದು ನೂತನ ಕಚೇರಿ ಉದ್ಘಾಟನೆಗೆ ಸಿದ್ದತೆ ಮಾಡಿಕೊಳ್ಳಲಾಗಿತ್ತು.

    ಸೋಮಣ್ಣ ಅವರು ನೂತನ ಕಚೇರಿಯಲ್ಲಿ ಟೇಬಲ್ ಹಾಗೂ ಕುರ್ಚಿಗಳನ್ನು ಹಾಕಿಸಿದ್ದರು. ವಿ.ಸೋಮಣ್ಣ, ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಸಚಿವರು ಭಾರತ ಸರ್ಕಾರ ಲೋಕಸಭಾ ಸದಸ್ಯರ ಕಚೇರಿ, ತುಮಕೂರು ಎಂದು ನಾಮಫಲಕ ಕೂಡ ಹಾಕಲಾಗಿತ್ತು. ಆದರೆ ರಾಜ್ಯ ಸರ್ಕಾರ ಯಾವುದೇ ಕಾರಣ ನೀಡದೇ ನೂತನ ಸಂಸದರ ಕಚೇರಿ ವಾಪಸ್ ಪಡೆದಿದೆ. ಇದನ್ನೂ ಓದಿ: ಕರ್ನಾಟಕ ಸೇರಿದಂತೆ ಯಾವುದೇ ರಾಜ್ಯದಲ್ಲಿ ಸದ್ಯಕ್ಕೆ ಉಪಚುನಾವಣೆ ಇಲ್ಲ

    ಕಚೇರಿ ಉಪಯೋಗಕ್ಕೆ ನೀಡಿದ ಅನುಮೋದನೆಯು ಈ ಕೂಡಲೇ ಹಿಂಪಡೆಯಲಾಗಿರುವ ಬಗ್ಗೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿ, ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ರಾಜಶೇಖರ ಸೂಚಿಸಿದ್ದಾರೆ. ಇದನ್ನೂ ಓದಿ: ಪ್ರಶಸ್ತಿಯನ್ನು ಪುನೀತ್‌ ರಾಜ್‌ಕುಮಾರ್‌, ದೈವಕ್ಕೆ, ದೈವ ನರ್ತಕರಿಗೆ ಅರ್ಪಣೆ ಮಾಡುತ್ತೇನೆ- ರಿಷಬ್ ಶೆಟ್ಟಿ

    ರಾಜ್ಯ ಸರ್ಕಾರದ ನಡೆಗೆ ತುಮಕೂರು ನಗರ ಬಿಜೆಪಿ ಶಾಸಕ ಜಿ.ಬಿ ಜ್ಯೋತಿ ಗಣೇಶ್ (Jyothi Ganesh) ಕಿಡಿಕಾರಿದ್ದಾರೆ. ಇಲ್ಲಿ ಇಷ್ಟು ವರ್ಷ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಕ್ಷುಲ್ಲಕ ರಾಜಕಾರಣ ಮಾಡಬಾರದು. ಈ ಜಾಗವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವ ಮಾತೇ ಇಲ್ಲ. ಯಾರು ಏನು ಮಾಡುತ್ತಾರೋ ನೋಡೋಣ. ಈ ಭಾನುವಾರ ಕಚೇರಿ ಉದ್ಘಾಟನೆ ಕಾರ್ಯಕ್ರಮಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಜಿಲ್ಲೆಯ ಎಲ್ಲಾ ಮುಖಂಡರಿಗೆ ಆಹ್ವಾನ ನೀಡಲಾಗಿತ್ತು. ಈಗ ಏಕಾಏಕಿ ರದ್ದು ಮಾಡಿ ಆದೇಶ ಮಾಡಿದ್ದಾರೆ. ಈ ರೀತಿಯ ನಡೆ ಸರಿಯಲ್ಲ ಎಂದು ಸಿಟ್ಟು ಹೊರಹಾಕಿದ್ದಾರೆ.

  • ಕೇಂದ್ರದಿಂದ ಕೊಬ್ಬರಿ ಹಣ ಬಿಡುಗಡೆ; 24 ಸಾವಿರ ರೈತರ ಖಾತೆಗೆ 346 ಕೋಟಿ ರೂ. ಜಮೆ: ಸೋಮಣ್ಣ

    ಕೇಂದ್ರದಿಂದ ಕೊಬ್ಬರಿ ಹಣ ಬಿಡುಗಡೆ; 24 ಸಾವಿರ ರೈತರ ಖಾತೆಗೆ 346 ಕೋಟಿ ರೂ. ಜಮೆ: ಸೋಮಣ್ಣ

    ತುಮಕೂರು: ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಿದ್ದ ಕೊಬ್ಬರಿ (Copra) ಬಾಕಿ ಹಣ 346.50 ಕೋಟಿ ರೂ.ಗಳನ್ನು 24,600 ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ (V Somanna) ತಿಳಿಸಿದ್ದಾರೆ.

    ಸುಮಾರು 27 ಸಾವಿರ ರೈತರಿಂದ ಒಟ್ಟು 3.15 ಲಕ್ಷ ಕ್ವಿಂಟಲ್ ಉಂಡೆ ಕೊಬ್ಬರಿಯನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಲಾಗಿತ್ತು. ಜಿಲ್ಲೆಯ ರೈತರಿಗೆ (Farmers) ಒಟ್ಟು 378 ಕೋಟಿ ರೂ. ಹಣ ಪಾವತಿಸಬೇಕಿತ್ತು. ಆಗಸ್ಟ್ 5ರ ವರೆಗೆ 346.50 ಕೋಟಿ ರೂ. ಜಮೆ ಮಾಡಿಸಲಾಗಿದೆ. ಇದರಿಂದ ಶೇ.92ರಷ್ಟು ರೈತರಿಗೆ (Farmers) ಹಣ ಪಾವತಿಸಿದಂತಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಬಾಕಿ ಇರುವ 2,438 ರೈತರಿಗೆ 31.65 ಕೋಟಿ ರೂ.ಗಳನ್ನು ಪಾವತಿಸಬೇಕಿದೆ. ಬಾಕಿ ಹಣವನ್ನೂ ಪಾವತಿಸುವಂತೆ ಸೂಚನೆ ನೀಡಲಾಗಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: 138ಕ್ಕೆ ಆಲೌಟ್‌ – 27 ವರ್ಷಗಳಲ್ಲಿ ಭಾರತಕ್ಕೆ ಮೊದಲ ಸರಣಿ ಸೋಲು; 110 ರನ್‌ ಗೆಲುವಿನೊಂದಿಗೆ ಸರಣಿ ಗೆದ್ದ ಲಂಕಾ

    ನಾಫೆಡ್‌ನಿಂದ ರಾಜ್ಯಕ್ಕೆ 691 ಕೋಟಿ ರೂ. ಬರಬೇಕಿದ್ದು, ಶೀಘ್ರ ಹಣ ಬಿಡುಗಡೆ ಮಾಡುವಂತೆ ಕೋರಿ ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರಿಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಶೀಘ್ರದಲ್ಲೇ ವೈದ್ಯಕೀಯ ಕಾಲೇಜುಗಳಿಗೆ 650 ಸಹಾಯಕ ಪ್ರಾಧ್ಯಾಪಕರು, 1,200 ದಾದಿಯರ ನೇಮಕ: ಶರಣಪ್ರಕಾಶ್‌ ಪಾಟೀಲ್ 

    ಕೊಬ್ಬರಿ ಮಾರಾಟ ಮಾಡಿದ ರೈತರಿಗೆ ಹಣ ಬಿಡುಗಡೆಗೆ ಸಹಕರಿಸಿದ ಸಚಿವ ಸೋಮಣ್ಣ ಅವರಿಗೆ ಶಾಸಕ ಜಿ.ಬಿ ಜ್ಯೋತಿಗಣೇಶ್ ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ವಿನೇಶ್ ತರಬೇತಿಗೆ ಕೇಂದ್ರ 75 ಲಕ್ಷ ರೂ. ಖರ್ಚು ಮಾಡಿದೆ – ಮನ್ಸುಖ್ ಮಾಂಡವಿಯಾ ಮಾಹಿತಿ

  • ರಾಜ್ಯದ ಬಾಕಿ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು ಕೇಂದ್ರಕ್ಕೆ ಡಿಕೆ ಸುರೇಶ್ ಮನವಿ

    ರಾಜ್ಯದ ಬಾಕಿ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು ಕೇಂದ್ರಕ್ಕೆ ಡಿಕೆ ಸುರೇಶ್ ಮನವಿ

    ನವದೆಹಲಿ: ರಾಜ್ಯದ ಬಾಕಿ ರೈಲ್ವೇ (Railway Project) ಹಾಗೂ ಜಲ ಮಿಷನ್ ಯೋಜನೆಗಳನ್ನು  ಆದಷ್ಟು ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಮಾಜಿ ಸಂಸದ ಡಿ.ಕೆ.ಸುರೇಶ್ (DK Suresh) ಮನವಿ ಮಾಡಿದ್ದಾರೆ.

    ಡಿಕೆ ಸುರೇಶ್ ಅವರು ದೆಹಲಿಯಲ್ಲಿ ಕೇಂದ್ರ ರೈಲ್ವೇ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ ಸೋಮಣ್ಣ (V Somanna) ಅವರನ್ನು ಬುಧವಾರ ಭೇಟಿ ಮಾಡಿ ಈ ಮನವಿ ಸಲ್ಲಿಸಿದರು. ಇದನ್ನೂ ಓದಿ: ಎಲ್ಲವನ್ನೂ ಸಿಬಿಐಗೆ ಕೊಡಲು ಸಾಧ್ಯವಿಲ್ಲ: ಪರಮೇಶ್ವರ್

    ಹೆಜ್ಜಾಲ, ಕನಕಪುರ ಹಾಗೂ ಚಾಮರಾಜನಗರ ಹೊಸ ರೈಲ್ವೇ ಮಾರ್ಗ ಈ ಹಿಂದೆಯೇ ಮಂಜೂರಾಗಿ, ಟೆಂಡರ್ ಪ್ರಕ್ರಿಯೆ ಆಗಿದ್ದರೂ ಕಾಮಗಾರಿ ಮಾತ್ರ ಆರಂಭವಾಗಿಲ್ಲ. ಅದೇ ರೀತಿ ರಾಜ್ಯದ ಅನೇಕ ರೈಲ್ವೇ ಯೋಜನೆಗಳು ಹತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿವೆ. ಈ ಯೋಜನೆಗಳಿಗೆ ಅನುದಾನ ನೀಡಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಎಂದು ಕೋರಿದರು. ಇದನ್ನೂ ಓದಿ: ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯಲ್ಲಿ ಹೆಚ್‍ಡಿಕೆಗೆ ಸ್ಥಾನ

    ಜಲಜೀವನ್ ಮಿಷನ್ ಅಡಿಯಲ್ಲಿ ಕುಡಿಯುವ ನೀರು ಯೋಜನೆಗಳಿಗೆ ಸಲ್ಲಿಸಿರುವ ಪ್ರಸ್ತಾವನೆಗಳು ಆರು ತಿಂಗಳಿನಿಂದ ಬಾಕಿ ಉಳಿದಿವೆ. ಅವುಗಳಿಗೆ ಮಂಜೂರಾತಿ ಕೊಡಿ ಎಂದು ಡಿಕೆ ಸುರೇಶ್ ವಿನಂತಿ ಮಾಡಿದ್ದು, ಸಚಿವ ಸೋಮಣ್ಣ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದನ್ನೂ ಓದಿ: ಹುತಾತ್ಮ ಅಗ್ನಿವೀರ್‌ ಕುಟುಂಬಕ್ಕೆ 98.39 ಲಕ್ಷ ನೀಡಲಾಗಿದೆ – ರಾಹುಲ್‌ ಆರೋಪದ ಬೆನ್ನಲ್ಲೇ ಸೇನೆ ಸ್ಪಷ್ಟನೆ

  • ಅಧಿಕಾರ ಸ್ವೀಕರಿಸಿದ ರಾಜ್ಯದ ನಾಲ್ವರು ಕೇಂದ್ರ ಸಚಿವರು

    ಅಧಿಕಾರ ಸ್ವೀಕರಿಸಿದ ರಾಜ್ಯದ ನಾಲ್ವರು ಕೇಂದ್ರ ಸಚಿವರು

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಸಂಪುಟದಲ್ಲಿ (Modi Cabinet) ಕೇಂದ್ರ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದ ಸಂಪುಟ ದರ್ಜೆ ಸಚಿವರಾದ ಪ್ರಲ್ಹಾದ್ ಜೋಶಿ, ಹೆಚ್.ಡಿ ಕುಮಾರಸ್ವಾಮಿ, ರಾಜ್ಯಖಾತೆ ಸಚಿವರಾದ ಶೋಭಾ ಕರಂದ್ಲಾಜೆ ಮತ್ತು ವಿ.ಸೋಮಣ್ಣ ಖಾತೆ ಹಂಚಿಕೆ ಬಳಿಕ ತಮ್ಮ ಕಚೇರಿಗಳಲ್ಲಿ ಅಧಿಕಾರ ಸ್ವೀಕರಿಸಿದರು.

    ಹೆಚ್.ಡಿ ಕುಮಾರಸ್ವಾಮಿ (HD Kumaraswamy)ಅವರು ಉದ್ಯೋಗ ಭವನದಲ್ಲಿರುವ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವಾಲಯದಲ್ಲಿ ಅಧಿಕಾರ ಸ್ವೀಕರಿಸಿದರು. ಪೂಜೆ ಸಲ್ಲಿಸಿ ಬಳಿಕ ಕಡತಕ್ಕೆ ಸಹಿ ಹಾಕುವ ಮೂಲಕ ಹೆಚ್‌ಡಿಕೆ ಅಧಿಕಾರ ಸ್ವೀಕರಿಸಿದರು. ಆಹಾರ ಮತ್ತು ನಾಗರಿಕ ಸರಬರಾಜು ಖಾತೆ, ನವೀಕರಿಸಬಹುದಾದ ಇಂಧನ ಖಾತೆ ಸಚಿವರಾಗಿ ಕೃಷಿ ಮತ್ತು ಊರ್ಜಾ ಭವನದಲ್ಲಿ ಪ್ರಲ್ಹಾದ್ ಜೋಶಿ (Pralhad Joshi) ಅಧಿಕಾರ ಸ್ವೀಕರಿಸಿದರು. ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣ – ನಟ ದರ್ಶನ್ ಸೇರಿ 13 ಆರೋಪಿಗಳು 6 ದಿನ ಪೊಲೀಸ್ ಕಸ್ಟಡಿಗೆ

    ವಿ. ಸೋಮಣ್ಣ (V Somanna) ರೈಲ್ವೆ ಹಾಗೂ ಜಲಶಕ್ತಿ ಭವನದಲ್ಲಿ ಜಲಶಕ್ತಿ ರಾಜ್ಯಖಾತೆಯನ್ನು ವಹಿಸಿಕೊಂಡರು. ಶೋಭಾ ಕರಂದ್ಲಾಜೆ (Shobha Karandlaje) ಅವರು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ರಾಜ್ಯಖಾತೆ ಮತ್ತು ಕಾರ್ಮಿಕ ಇಲಾಖೆ ರಾಜ್ಯಖಾತೆ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಇದನ್ನೂ ಓದಿ: ಬಿಜೆಪಿಯ ಮೋಹನ್ ಚರಣ್ ಮಾಝಿ ಒಡಿಶಾದ ನೂತನ ಸಿಎಂ

    ಅಧಿಕಾರ ಸ್ವೀಕಾರ ಬಳಿಕ ಮಾತನಾಡಿದ ಕೇಂದ್ರ ಸಚಿವ ವಿ. ಸೋಮಣ್ಣ, ಹೊಸ ಜವಾಬ್ದಾರಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ನನ್ನ ಪಕ್ಷಕ್ಕೆ ಧನ್ಯವಾದಗಳು. ಕಳೆದ ಹತ್ತು ವರ್ಷದಲ್ಲಿ ಮೋದಿ ಅವರ ನಾಯಕತ್ವ, ದೂರದೃಷ್ಟಿ ಚಿಂತನೆ ವಿಶ್ವ ಭಾರತದತ್ತ ನೋಡುವಂತೆ ಮಾಡಿದೆ. ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿದ್ದಾರೆ. ಸರ್ಕಾರದ ಸೌಲಭ್ಯಗಳನ್ನು 140 ಕೋಟಿ ಜನರಿಗೆ ಮುಟ್ಟಿಸಬೇಕು. ಅಶ್ವಿನಿ ವೈಷ್ಣವ್ ಅವರ ನೇತೃತ್ವದಲ್ಲಿ ರೈಲ್ವೆ ಇಲಾಖೆ ಹತ್ತು ವರ್ಷದಲ್ಲಿ ಹಲವು ಕೊಡುಗೆ ನೀಡಿದೆ. ಅಶ್ವಿನಿ ವೈಷ್ಣವ್ ಜೊತೆಗೆ ಕೆಲಸ ಮಾಡಲು ಆನಂದವಾಗುತ್ತದೆ. ವಿಕಸಿತ್ ಭಾರತ್ ಯಶಸ್ಸಿನತ್ತ ಕೊಂಡೊಯ್ಯಲು ಪ್ರಯತ್ನಿಸುತ್ತೇವೆ ಎಂದರು. ಇದನ್ನೂ ಓದಿ: ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್‌ಡಿಕೆ ರಾಜೀನಾಮೆ ನೀಡ್ತಾರೆ, ಚನ್ನಪಟ್ಟಣ ಕ್ಷೇತ್ರ ಉಳಿಸಿಕೊಳ್ತಾರೆ: ಡಿ.ಕೆ‌.ಸುರೇಶ್

    ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ಮಾನ್ಯ ಪ್ರಧಾನಿಗಳು ನನಗೆ ಈ ಖಾತೆ ನೀಡಿದ್ದಾರೆ. ನನಗೆ ಈ ಜವಾಬ್ದಾರಿ ನೀಡಿದ್ದಕ್ಕಾಗಿ ಮೋದಿ ಅವರಿಗೆ ಧನ್ಯವಾದಗಳು. ನಾನು ನಮ್ಮ ಕ್ಷೇತ್ರ, ರಾಜ್ಯ, ದೇಶದ ಜನತೆಗೆ ಧನ್ಯವಾದ ಹೇಳುತ್ತೇನೆ. ಪ್ರಧಾನಿ, ಮುಂದಿನ 125 ದಿನಗಳ ಕಾರ್ಯ ಹೇಗಿರಬೇಕು ಎಂಬುದಕ್ಕೆ ಮೊದಲೇ ಹೇಳಿದ್ದಾರೆ. ಪೀಯುಶ್ ಗೋಯಲ್ ಕೂಡ ಈ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ. 80 ಕೋಟಿ ಜನರಿಗೆ ದೊಡ್ಡ ಪ್ರಮಾಣದಲ್ಲಿ ಆಹಾರ ಭದ್ರತಾ ಕಾರ್ಯಕ್ರಮ ಮಾಡಿದ್ದಾರೆ. ಇಂತಹ ಸ್ಕೀಮ್ ನಡೆಸುವ ಇಲಾಖೆಯಲ್ಲಿ ಮೋದಿಯವರು ನನಗೆ ಸ್ಥಾನ ನೀಡಿದ್ದಾರೆ. ನಂಬಿಕೆ ಇಟ್ಟು ನನಗೆ ಈ ಖಾತೆ ನೀಡಿದ್ದಕ್ಕೆ ಧನ್ಯವಾದಗಳು. ನಿಜಕ್ಕೂ ಪ್ರಧಾನಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು. ಇದನ್ನೂ ಓದಿ: ಭಾರತದಿಂದ ಕಳ್ಳತನವಾಗಿದ್ದ 500 ವರ್ಷಗಳ ಪುರಾತನ ವಿಗ್ರಹ ಮರಳಿಸಲು ಮುಂದಾದ ಆಕ್ಸ್‌ಫರ್ಡ್ ವಿವಿ

  • ಹೆಚ್‌ಡಿಕೆ,  ಜೋಶಿ, ಶೋಭಾ, ಸೋಮಣ್ಣಗೆ ಮಂತ್ರಿ ಸ್ಥಾನ ಫಿಕ್ಸ್‌

    ಹೆಚ್‌ಡಿಕೆ, ಜೋಶಿ, ಶೋಭಾ, ಸೋಮಣ್ಣಗೆ ಮಂತ್ರಿ ಸ್ಥಾನ ಫಿಕ್ಸ್‌

    ನವದೆಹಲಿ: ಕರ್ನಾಟಕದ  ಹೆಚ್‌ಡಿ ಕುಮಾರಸ್ವಾಮಿ (HD Kumaraswamy), ಪ್ರಹ್ಲಾದ್‌ ಜೋಶಿ (Prahlad Joshi), ಶೋಭಾ ಕರಂದ್ಲಾಜೆ (Shobha Karandlaje), ವಿ ಸೋಮಣ್ಣ (ವಿ ಸೋಮಣ್ಣ)  ಅವರಿಗೆ ಸಚಿವ ಸ್ಥಾನ ಸಿಕ್ಕಿದೆ.

    ಇಂದು ಸಂಜೆ 7:15ಕ್ಕೆ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿರುವ ಮೋದಿ (Narendra Modi) ಅವರು ತಮ್ಮ ನಿವಾಸದಲ್ಲಿ ಬೆಳಗ್ಗೆ 11:30ಕ್ಕೆ ನೂತನ ಕ್ಯಾಬಿನೆಟ್‌ ಸಚಿವರಿಗೆ ಚಹಾ ಕೂಟವನ್ನು ಆಯೋಜಿಸಿದ್ದರು.

    ಈ ಸಂದರ್ಭದಲ್ಲಿ ಮೋದಿ ಅವರು ತನ್ನ ಎಲ್ಲಾ ಕ್ಯಾಬಿನೆಟ್‌ ಸಚಿವರಿಗೆ ಸಲಹೆ, ಸೂಚನೆ ನೀಡಿದ್ದಾರೆ. ಕರ್ನಾಟಕ ಹೆಚ್‌ಡಿ ಕುಮಾರಸ್ವಾಮಿ ಮತ್ತು ಪ್ರಹ್ಲಾದ್‌ ಜೋಶಿ ಅವರಿಗೆ ಕ್ಯಾಬಿನೆಟ್‌ ಖಾತೆ,  ಶೋಭಾ ಕರಂದ್ಲಾಜೆ ಮತ್ತು ವಿ.ಸೋಮಣ್ಣ ಅವರಿಗೆ ರಾಜ್ಯ ಖಾತೆ ಸಿಗುವ ಸಾಧ್ಯತೆಯಿದೆ.

  • ನಾನು ಮೋದಿ ಮುಖ ನೋಡಿ ಕೆಲಸ ಮಾಡಲ್ಲ: ಮಾಧುಸ್ವಾಮಿ

    ನಾನು ಮೋದಿ ಮುಖ ನೋಡಿ ಕೆಲಸ ಮಾಡಲ್ಲ: ಮಾಧುಸ್ವಾಮಿ

    – ಸೋಮಣ್ಣ ಗೆಲ್ಲೋದು ನನಗೆ ಇಷ್ಟವಿಲ್ಲ

    ತುಮಕೂರು: ಪ್ರತಾಪ್ ಸಿಂಹ, ಸಿ.ಟಿ.ರವಿ ಮೋದಿ (Narendra Modi) ಮುಖ ನೋಡಿ ಕೆಲಸ ಮಾಡಬಹುದು. ಆದರೆ ನಾನು ಮೋದಿ ಮುಖ ನೋಡಿ ಕೆಲಸ ಮಾಡಲ್ಲ ಎಂದು ಬಿಜೆಪಿ (BJP) ಟಿಕೆಟ್ ವಂಚಿತ ಮಾಜಿ ಸಚಿವ ಮಾಧುಸ್ವಾಮಿ (Madhuswamy) ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಸೋಮಣ್ಣ (V Somanna) ಗೆಲ್ಲೋದು ಸಂಸದ ಬಸವರಾಜು ಸೇರಿ ನನಗೂ ಇಷ್ಟವಿಲ್ಲ. ಸೋಮಣ್ಣ ಪರ ನಾನು ಕೆಲಸ ಮಾಡಲ್ಲ. ಯಡಿಯೂರಪ್ಪನವರೇ (BS Yediyurappa) ಟಿಕೆಟ್ ಕೊಡೋದಾಗಿ ನನಗೆ ಆಸೆ ಹುಟ್ಟಿಸಿದ್ದರು. ಈಗ ಟಿಕೆಟ್ ಕೊಡಿಸುವಲ್ಲಿ ಅವರು ವಿಫಲರಾಗಿದ್ದಾರೆ. ನನಗೆ ಯಡಿಯೂರಪ್ಪ ಅವರ ಮೇಲೆ ಬೇಸರ ಇದೆ. ಅಪ್ಪ-ಮಕ್ಕಳ ಅಸ್ಥಿತ್ವಕ್ಕಾಗಿ ಏನೇನೋ ಮಾಡಬಾರದು ಎಂದು ಕಿಡಿಕಾರಿದರು. ಇದನ್ನೂ ಓದಿ: ನನಗೆ ಟಿಕೆಟ್ ಕೊಡಿಸಿದ್ದು ಪತ್ನಿ ಕುಟುಂಬ ಅಲ್ಲ: ಯದುವೀರ್ ಸ್ಪಷ್ಟನೆ

    ವಿ.ಸೋಮಣ್ಣ ಹೊರಗಿನಿಂದ ಬಂದವರು. ಅವರು ಗೆಲ್ಲೋದು ಇಲ್ಲಿಯ ಮತದಾರರಿಗೆ ಬೇಡ. ಹಾಗಂತ ನಾನು ಕಾಂಗ್ರೆಸ್‌ಗೆ (Congress) ಹೋಗುತ್ತೇನೆ ಎಂದು ತಪ್ಪು ತಿಳಿಯಬೇಡಿ. ಸೋಮಣ್ಣ ಬಿಟ್ಟು ಬೇರೆಯವರಿಗೆ ಟಿಕೆಟ್ ಕೊಟ್ಟರೆ ನಾನು ಕೆಲಸ ಮಾಡುತ್ತಿದ್ದೆ. ಸೋಮಣ್ಣರನ್ನು ಬಲಿ ಕೊಡಲು ಸಂಸದ ಬಸವರಾಜು ಕರೆದುಕೊಂಡು ಬಂದಿದ್ದಾರೆ. ಕಾಂಗ್ರೆಸ್ ಜೊತೆ ಬಸವರಾಜು ಸಂಬಂಧ ಚೆನ್ನಾಗಿದೆ. ಕೆ.ಎನ್ ರಾಜಣ್ಣ ತಮಗೆ ಎರಡೂ ಪಕ್ಷದಲ್ಲಿ ಸ್ನೇಹಿತರಿದ್ದಾರೆ, ನಾವು ಗೆಲ್ಲುತ್ತೇವೆ ಎಂದಿದ್ದರು. ಜಿಎಸ್ ಬಸವರಾಜು ರಾಜಣ್ಣರ ಋಣ ತೀರಿಸಬೇಕಾಗಿದೆ. ಹಾಗಾಗಿ ಇವರೆಲ್ಲರೂ ಸೇರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲಿದ್ದಾರೆ ಎಂದರು. ಇದನ್ನೂ ಓದಿ: ನಾಳೆ ಲೋಕಸಭಾ ಚುನಾವಣೆ ದಿನಾಂಕ ಘೋಷಣೆ

  • ಸೋಮಣ್ಣಗೆ ತುಮಕೂರು ಕ್ಷೇತ್ರದ ಟಿಕೆಟ್ ನೀಡದಂತೆ ರಸ್ತೆ ತಡೆದು ಆಕ್ರೋಶ

    ಸೋಮಣ್ಣಗೆ ತುಮಕೂರು ಕ್ಷೇತ್ರದ ಟಿಕೆಟ್ ನೀಡದಂತೆ ರಸ್ತೆ ತಡೆದು ಆಕ್ರೋಶ

    – ಮಾಧುಸ್ವಾಮಿ ಅಭಿಮಾನಿಯಿಂದ ಪೆಟ್ರೋಲ್ ಸುರಿದುಕೊಂಡು ಹೈಡ್ರಾಮಾ

    ತುಮಕೂರು: ಮಾಜಿ ಸಚಿವ ವಿ.ಸೋಮಣ್ಣಗೆ (V.Somanna) ಟಿಕೆಟ್ ಕೊಡದಂತೆ ಜಿಲ್ಲೆಯ ನಾಲ್ಕು ತಾಲೂಕಿನ ಬಿಜೆಪಿ (BJP) ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ.

    ಚಿಕ್ಕನಾಯಕನಹಳ್ಳಿ, ಗುಬ್ಬಿ, ತಿಪಟೂರು, ತುರುವೇಕೆರೆ ತಾಲ್ಲೂಕಿನ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ತಿಪಟೂರು ತಾಲೂಕಿನ ಕೆ.ಬಿ ಕ್ರಾಸ್‍ನಲ್ಲಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ತುಮಕೂರು ಜಿಲ್ಲೆಗೆ ವಿ.ಸೋಮಣ್ಣಗೆ ಕೊಡುಗೆ ಏನೂ ಇಲ್ಲ. ಇದೇ ಕಾರಣಕ್ಕೆ ಸೋಮಣ್ಣಗೆ ಟಿಕೆಟ್ ಕೊಡಬಾರದು. ಸೋಮಣ್ಣ ಬದಲು ಜೆ.ಸಿ ಮಾಧುಸ್ವಾಮಿಗೆ (J.C. Madhu Swamy) ಟಿಕೆಟ್ ಕೊಡಬೇಕು ಎಂದು ಆಗ್ರಹಿಸಿ ರಸ್ತೆ ತಡೆದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮೋದಿ ಗ್ಯಾರಂಟಿಗೆ ವಾರಂಟಿ ಇಲ್ಲ: ಟಿಎಂಸಿ ನಾಯಕ ಟೀಕೆ

    ಕ್ಷೇತ್ರಕ್ಕೆ ವಲಸೆ ಬರುವ ವಿ.ಸೋಮಣ್ಣಗೆ ಟಿಕೆಟ್ ಕೊಟ್ಟರೆ ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ. ಅವರು ಬಂದರೆ ತುಮಕೂರು ಜಿಲ್ಲೆಗೆ ಗ್ರಹಣ ಹಿಡಿಯುತ್ತದೆ. ಸೋಮಣ್ಣ ರಾಜಕೀಯ ಆಕ್ರಮಣ ಮಾಡುತ್ತಾರೆ. ಇದರಿಂದ ಜಿಲ್ಲೆಯ ಜನ ವನವಾಸ ಬೀಳಬೇಕಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಇದೇ ವೇಳೆ ಸಂಸದ ಜಿ.ಎಸ್ ಬಸವರಾಜು ಅವರಿಗೆ ಧಿಕ್ಕಾರ ಕೂಗಿ, ಗೋ ಬ್ಯಾಕ್ ಸೋಮಣ್ಣ ಎಂದು ಘೋಷಣೆ ಕೂಗಿದ್ದಾರೆ. ಕೆ.ಬಿ.ಕ್ರಾಸ್ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಸೋಮಣ್ಣ ಅವರಿಗೆ ಟಿಕೆಟ್ ಕೊಡದಂತೆ ಬಿಜೆಪಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಇದೇ ವೇಳೆ ಮಾಧುಸ್ವಾಮಿ ಅಭಿಮಾನಿಯೊಬ್ಬ, ಅವರಿಗೆ ಟಿಕೆಟ್ ಕೊಡುವಂತೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಹೈಡ್ರಾಮಾ ಸೃಷ್ಟಿಸಿದ ಘಟನೆಯೂ ನಡೆಯಿತು. ಇದನ್ನೂ ಓದಿ: ಚಿಕ್ಕಬಳ್ಳಾಪುರ ಕ್ಷೇತ್ರದ ಮುಖಂಡರ ಸಭೆ ನಡೆಸಿದ ಕುಮಾರಸ್ವಾಮಿ; ಕ್ಷೇತ್ರಕ್ಕೆ ಬನ್ನಿ ಎಂಬ ಒತ್ತಾಯ ತಿರಸ್ಕರಿಸಿದ ಹೆಚ್ಡಿಕೆ, ನಿಖಿಲ್

  • Loksabha Election: ಸೋಮಣ್ಣ ಬಳಿಕ ಸಿ.ಟಿ ರವಿ, ಸುಧಾಕರ್, ಶ್ರೀರಾಮುಲು ಕಸರತ್ತು

    Loksabha Election: ಸೋಮಣ್ಣ ಬಳಿಕ ಸಿ.ಟಿ ರವಿ, ಸುಧಾಕರ್, ಶ್ರೀರಾಮುಲು ಕಸರತ್ತು

    ಬೆಂಗಳೂರು: ಲೋಕಸಭಾ ಚುನಾವಣೆ (Loksabha Election) ಸಮೀಪಿಸುತ್ತಿದ್ದಂತೆಯೇ ರಾಜಕೀಯ ಪಕ್ಷಗಳ ಚಟುವಟಿಕೆಗಳು ಗರಿಗೆದರಿವೆ. ಮಾಜಿ ಸಚಿವ ವಿ.ಸೋಮಣ್ಣ ಅವರ ತುಮಕೂರು ಸ್ಪರ್ಧೆಗೆ ಗ್ರೀನ್‍ಸಿಗ್ನಲ್ ಸಿಕ್ಕಿದೆ. ಈ ಬೆನ್ನಲ್ಲೇ ಬಿಜೆಪಿಯ ಉಳಿದ ಮಾಜಿ ಸಚಿವರಲ್ಲೂ ನಿರೀಕ್ಷೆಗಳು ಗರಿಗೆದರಿವೆ.

    ಲೋಕಸಭೆ ಟಿಕೆಟ್‍ಗೆ ಬಿಜೆಪಿಯ ಇನ್ನೂ ಮೂವರು ಮಾಜಿ ಮಂತ್ರಿಗಳು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಮಾಜಿ ಸಚಿವರಾದ ಸಿ.ಟಿ ರವಿ (CT ravi), ಡಾ.ಕೆಸುಧಾಕರ್ (Dr K Sudhakar) ಹಾಗೂ ಶ್ರೀರಾಮುಲು (Sri Ramulu) ಅವರು ಲೋಕ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ಮೂವರು ಮಾಜಿ ಸಚಿವರು ಈಗಾಗಲೇ ಹೈಕಮಾಂಡ್ ಭೇಟಿ ಮಾಡಿ ಲೋಕಸಭಾ ಟಿಕೆಟ್‍ಗಾಗಿ ಮನವಿ ಮಾಡಿದ್ದಾರೆ. ಸಿಟಿ ರವಿಯವರು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸ್ಪರ್ಧೆ ಬಯಸಿದ್ದಾರೆ. ಇನ್ನು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಡಾ.ಕೆ.ಸುಧಾಕರ್ ಟಿಕೆಟ್ ಕೇಳಿದರೆ, ಇತ್ತ ಬಳ್ಳಾರಿ ಕ್ಷೇತ್ರದಿಂದ ಶ್ರೀರಾಮುಲು ಟಿಕೆಟ್ ಪಡೆಯಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: Loksabha Election: ಮಾಧುಸ್ವಾಮಿ ಬಳಿಕ ಮತ್ತೊಬ್ಬರಿಂದ ಸೋಮಣ್ಣ ಸ್ಪರ್ಧೆಗೆ ವಿರೋಧ!

    ಹೈಕಮಾಂಡ್ ಗೆ ಸಮೀಪವರ್ತಿ ನಾಯಕರ ಮೂಲಕವೂ ಟಿಕೆಟ್‍ಗೆ ಲಾಬಿ ನಡೆಸಲಾಗುತ್ತಿದೆ. ಆದರೆ ಮಾಜಿಗಳಿಗೆ ಟಿಕೆಟ್ ಕೊಡುವ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಇನ್ನೂ ಯಾವುದೇ ಸಂದೇಶ ಕೊಟ್ಟಿಲ್ಲ. ಜೊತೆಗೆ ಲೋಕಸಭಾ ಕ್ಷೇತ್ರಗಳ ಸರ್ವೆ ಆಧರಿಸಿ ಗೆಲ್ಲುವವರಿಗೆ ಮಾತ್ರ ಟಿಕೆಟ್ ಕೊಡಲು ನಿರ್ಣಯ ಮಾಡಿದೆ. ಸರ್ವೆಗಳಲ್ಲಿ ಮಾಜಿ ಸಚಿವರ ಪರ ಮತದಾರರು ಒಲವು ತೋರಿದರೆ ಮಾತ್ರ ಟಿಕೆಟ್ ಸಿಗಲಿದೆ ಎಂಬ ಮಾಹಿತಿ ಬಿಜೆಪಿ ಮೂಲಗಳಿಂದ ತಿಳಿದುಬಂದಿದೆ.