ತುಮಕೂರು: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಸ್ ಮೈತ್ರಿ ಮಾಡಿಕೊಂಡರೆ ಮಾಡಿಕೊಳ್ಳಲಿ ಇಲ್ಲವೇ ಬಟ್ಟೆ ಬಿಚ್ಚಿ ಕುಣಿಯಲಿ, ನಮ್ಮ ಕೆಲಸ ನಾವು ಮಾಡಿಕೊಂಡು ಹೋಗುತ್ತೇವೆ ಎಂದು ಮಾಜಿ ಸಚಿವ ವಿ ಸೋಮಣ್ಣ ವ್ಯಂಗ್ಯವಾಡಿದ್ದಾರೆ.
ಇಂದು ತುಮಕೂರು ಸಿದ್ದಗಂಗಾ ಮಠ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಮುಖ್ಯ ಮಂತ್ರಿಯಾಗಿ ಕುಮಾರಸ್ವಾಮಿ ಸಂಕಷ್ಟ ಪರಿಸ್ಥಿತಿಯಲ್ಲಿ ಇದ್ದಾರೆ. ಸಿಎಂ ಆಗಿ ಅವರು ತಮ್ಮ ಕೆಲಸ ತಾವು ಮಾಡುತ್ತಿದ್ದಾರೆ. ಆದರೆ 37 ಶಾಸಕರೊಂದಿಗೆ ಅವರೊಂದಿಗೆ ಸಂಕಷ್ಟ ಅನುಭವಿಸುತ್ತಿದ್ದು, ಮತ್ತೊಬ್ಬ ಶಾಸಕನನ್ನು ಕರೆತರುವ ಶಕ್ತಿ ಇಲ್ಲ. ಅದ್ದರಿಂದ ಅವರು ಎರವಲು ವ್ಯವಸ್ಥೆಯಲ್ಲಿ ಮುಖ್ಯಮಂತ್ರಿಯಾಗಿ ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಅವರು ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲಿ ಅಥವಾ ಬಟ್ಟೆ ಬಿಚ್ಚಿ ಬೇಕಾದರು ಕುಣಿಯಲಿ ನಮಗೇ ಸಂಬಂಧವಿಲ್ಲ ಎಂದರು.
ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ನಿಲ್ಲಿಸಿ ಜನರ ಮುಂದೇ ಹೋಗುತ್ತೇವೆ. ಆದರೆ ಜನರು ಯಾರು ಗೆಲ್ಲ ಬೇಕು ಎಂದು ತೀರ್ಮಾನಿಸುತ್ತಾರೆ. ಬಿಜೆಪಿ ಏಕಾಂಗಿಯಾಗಿ ಹೋರಾಟ ಮಾಡಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು: ಬಿಜೆಪಿಯ ಹಿರಿಯ ನಾಯಕ, ಗೋವಿಂದರಾಜ ನಗರ ಶಾಸಕ ವಿ.ಸೋಮಣ್ಣ ಅವರು, ಮಹಿಳೆಗೆ ಏಕವಚನದಲ್ಲಿಯೇ ಕೆಳಮಟ್ಟದ ಪದ ಪ್ರಯೋಗಿಸಿ ನಿಂದಿಸಿರುವ ವಿಡಿಯೋ ವೈರಲ್ ಆಗಿದೆ.
ರಾಜಕಾರಣದಲ್ಲಿ ಸಭ್ಯ, ಮೃದು ಸ್ವಭಾವದ ನಾಯಕ ಅಂತಾ ಗುರುತಿಸಿಕೊಳ್ಳುವ ವಿ.ಸೋಮಣ್ಣರ ಕೆಳಮಟ್ಟದ ಮಾತುಗಳನ್ನು ಕೇಳಿದ ಜನರು ಶಾಕ್ ಆಗಿದ್ದಾರೆ. ಚುನಾವಣೆ ಸಮಯದಲ್ಲಿ ಮಹಿಳೆಯರಿಗೆ ಅಮ್ಮಾ.. ತಾಯಿ ಎಂದು ಕರೆಯುವ ರಾಜಕೀಯ ನಾಯಕರು ಸಹಾಯ ಕೇಳಲು ಹೋದಾಗ ಈ ರೀತಿಯ ಪದ ಪ್ರಯೋಗ ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ವಿಡಿಯೋದಲ್ಲಿ ಏನಿದೆ?: ಶಾಲಾ ಕಟ್ಟಡದ ವಿಚಾರಕ್ಕಾಗಿ ಕೆಲ ಸ್ಥಳೀಯ ಮಹಿಳೆಯರು ಶಾಸಕರನ್ನು ಭೇಟಿ ಆಗಿದ್ದರು. ಇದೇ ವೇಳೆ ಶಾಸಕರು, ಈಯಮ್ಮ ಏನ್ ಕಡಿಮೆ ಇಲ್ಲ, ಬೆಲ್ಟ್ ಬಿಚ್ಚಿ ಹೊಡೀತಿನಿ ನಿಂಗೆ, ಇರು ಏನ್ ಮಾಡ್ತೀನಿ ನೋಡು ಎಂದು ಅವಾಜ್ ಹಾಕಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ವಿ.ಸೋಮಣ್ಣ, ನಾನು 40 ವರ್ಷದಿಂದ ರಾಜಕೀಯದಲ್ಲಿ ಇದ್ದೇನೆ. ವಿಡಿಯೋದಲ್ಲಿರುವ ಧ್ವನಿ ನನ್ನದಲ್ಲ, ಯಾರೋ ಎಡಿಟ್ ಮಾಡಿರುವ ಕೆಲಸ ಇದಾಗಿದ್ದು, ಉದ್ದೇಶ ಪೂರ್ವಕವಾಗಿ ನನ್ನ ತೇಜೋವಧೆಗಾಗಿ ವಿಡಿಯೋ ಮಾಡಿಸಲಾಗಿದೆ ಎಂದು ಆರೋಪಿಸಿದ್ದಾರೆ. 40 ವರ್ಷಗಳ ನನ್ನ ರಾಜಕಾರಣದಲ್ಲಿ ಎಂದಿಗೂ ನಾನು ಇಷ್ಟು ಕೆಳಮಟ್ಟದ ಪದಗಳನ್ನು ಬಳಸಿಲ್ಲ. ಅದರಲ್ಲಿಯೂ ಮಹಿಳೆಯರ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದೇನೆ. ಪ್ರತಿದಿನ ಕಚೇರಿಗೆ ಆಗಮಿಸಿ ಸಾವಿರಾರು ಜನರ ಸಮಸ್ಯೆಗಳನ್ನು ಕೇಳಿ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ.
ನನ್ನ ಕಚೇರಿಗೆ ಸುಮಾರು 20 ರಿಂದ 30 ಮಹಿಳೆಯರು ಬಂದಿದ್ದರು. ಶಾಲಾ ಆವರಣದಲ್ಲಿರುವ ದೇವಸ್ಥಾನಕ್ಕೆ ಕಾಂಪೌಂಡ್ ಕಟ್ಟಬೇಕೆಂದು ಕೇಳಿಕೊಂಡಿದ್ದರು. ಕಾಂಪೌಂಡ್ ನಿರ್ಮಿಸುವುದರಿಂದ ಶಾಲೆಯ ಮಕ್ಕಳಿಗೆ ತೊಂದರೆ ಆಗಲಿದ್ದು, ದೇವಸ್ಥಾನಕ್ಕಾಗಿ ಬೇರೆ ಸ್ಥಳ ನಿಗದಿ ಮಾಡುತ್ತೇನೆ. ಸರ್ಕಾರದಿಂದ 10 ಲಕ್ಷ ರೂ.ಯನ್ನು ಸಹ ಕೊಡಿಸುತ್ತೇನೆ ಅಂತಾ ಹೇಳಿ ಕಳುಹಿಸಿದ್ದೆ ಎಂದು ಸೋಮಣ್ಣ ಅವರು ಸ್ಪಷ್ಟನೆ ನೀಡಿದ್ದಾರೆ.
ಮಾತು ಬದಲಿಸಿದ ಸೋಮಣ್ಣ: ವಿಡಿಯೋ ಕುರಿತು ಸ್ಪಷ್ಟನೆ ನೀಡುತ್ತಿದ್ದ ಶಾಸಕರು ಕ್ಷಣಾರ್ಧದಲ್ಲಿ ತಮ್ಮ ಮಾತುಗಳನ್ನು ಬದಲಿಸಿದ್ದಾರೆ. ಸ್ಪಷ್ಟನೆ ಆರಂಭದಲ್ಲಿ ನಾನು ಈ ಬಗ್ಗೆ ಸಿಬಿಐಗೆ ದೂರು ಸಲ್ಲಿಸುತ್ತೇನೆ ಅಂತಾ ಹೇಳಿದರು. ಕೊನೆಗೆ ನಾನು ಯಾವುದೇ ದೂರು ನೀಡಲ್ಲ ಅಂದರು. ನಾನೇನು ತಪ್ಪು ಮಾಡಿಲ್ಲ, ಅಲ್ಲಿರುವ ಧ್ವನಿ ನನ್ನದಲ್ಲ. ವಿಡಿಯೋ ವೈರಲ್ ಮಾಡಿರುವವರೇ ಅದಕ್ಕೆ ಸಾಕ್ಷ್ಯಾಧಾರ ಒದಗಿಸಲಿ. ಚುನಾವಣೆಯಲ್ಲಿ ಸೋತ ಹಿನ್ನೆಲೆಯಲ್ಲಿ ಕಾಂಗ್ರೆಸ್‍ನ ಮಾಜಿ ಶಾಸಕ ಪ್ರಿಯಾ ಕೃಷ್ಣ ಅವರೇ ಈ ವಿಡಿಯೋ ಮಾಡಿಸಿರುವ ಸಾಧ್ಯತೆಗಳಿವೆ ಎಂದು ಆರೋಪ ಮಾಡಿದರು.
ಇದೆಲ್ಲಾ ಸುಳ್ಳು ಅಂತಾದ್ರೆ, ವಿಡಿಯೋ ಮೂಲಕ ನಿಮ್ಮ ತೇಜೋವಧೆ ಆಗುತ್ತಿದ್ದರೆ ನೀವು ಯಾಕೆ ದೂರು ದಾಖಲಿಸಿಬರದು ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯಾರು ಏನ್ ಬೇಕಾದರೂ ಮಾಡಿಕೊಳ್ಳಲಿ, ನಾನೇನು ತಲೆ ಕೆಡಿಸಿಕೊಳ್ಳಲ್ಲ. ವಿಡಿಯೋದಲ್ಲಿರುವ ಧ್ವನಿ ಮಾತ್ರ ನನ್ನದಲ್ಲ ಎಂಬುದನ್ನು ಮಾತ್ರ ಸ್ಪಷ್ಟಪಡಿಸುತ್ತೇನೆ. ಗೌರವ, ಸಂಸ್ಕಾರದಿಂದ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ ಅಂತಾ ಅಂದ್ರು.
ತುಮಕೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಯಾರಿಗೂ ನೆಮ್ಮದಿಯಿಂದ ಇರಲೂ ಬಿಡಲ್ಲ. ದೇವೇಗೌಡರು ಅವರದೇ ಸ್ಟೈಲಿನಲ್ಲಿ ರಾಜಕೀಯ ಮಾಡ್ತಾರೆ ಅಂತಾ ಬಿಜೆಪಿ ಮಾಜಿ ಸಚಿವ ವಿ.ಸೋಮಣ್ಣ ಲೇವಡಿ ಮಾಡಿದ್ದಾರೆ.
ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವರು, ನಾನು ಸಹ ದೇವೇಗೌಡರ ಗರಡಿಯಲ್ಲಿ ಬೆಳೆದು ಬಂದವನು. ಅವರ ರಾಜಕೀಯ ಲೆಕ್ಕಾಚಾರ ಬಗ್ಗೆ ನನಗೂ ಸ್ವಲ್ಪ ಮಾಹಿತಿ ಇದೆ. ಪುತ್ರ ಕುಮಾರಸ್ವಾಮಿ ಸೇರಿದಂತೆ ಯಾರನ್ನೂ ನೆಮ್ಮದಿಯಿಂದ ಇರಲು ಬಿಡಲ್ಲ ಅಂತಾ ಟೀಕಿಸಿದ್ರು.
ಒಂದು ರಾಷ್ಟ್ರೀಯ ಪಕ್ಷ ಒಬ್ಬ ಯಡಿಯೂರಪ್ಪ ರನ್ನ ಸೋಲಿಸಲು ದೇವೇಗೌಡರ ಜೊತೆ ಸೇರಿ ನಿರಾಯುಧರಾಗಿದ್ದಾರೆ. ದಿನದಿಂದ ದಿನಕ್ಕೆ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ನಮಗೂ ಕಳವಳ ಹುಟ್ಟಿಸಿದೆ. ಈಗಾಗಲೇ ಕೇಂದ್ರದಲ್ಲಿ ಬೆಲೆ ಇಳಿಕೆಯ ಬಗ್ಗೆ ಚಿಂತನೆ ನಡೆದಿದೆ. ಬೆಲೆ ಏರಿಕೆ ದೇಶದ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ. ಮಾನ್ಯ ಪ್ರಧಾನಿ ಮೋದಿಯವರು ಬೆಲೆ ಏರಿಕೆಯನ್ನು ತಹಬದಿಗೆ ತರಲಿದ್ದಾರೆ ಅಂತಾ ಹೇಳಿದ್ರು.
ಬೆಂಗಳೂರು: ಬಿಜೆಪಿ ಮುಖಂಡ ವಿ. ಸೋಮಣ್ಣ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ತಪ್ಪಲಿದೆ ಅಂತಾ ರಾಜಕೀಯ ವಲಯದಲ್ಲಿ ಕೇಳಿ ಬರುತ್ತದೆ. ಈ ಸಂಬಂಧ ಭಾನುವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ಸಭೆ ನಡೆದಿತ್ತು. ಸಭೆಯಿಂದ ಹೊರ ಬಂದ ಬಳಿಕ ವಿ.ಸೋಮಣ್ಣ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದರು.
ಭಾನುವಾರ ಕೇಂದ್ರ ಸಚಿವ ಅನಂತ್‍ಕುಮಾರ್ ಮನೆಯಲ್ಲಿ ನಡೆದ ಸಭೆಯಲ್ಲಿ ಸೋಮಣ್ಣ ಅವರನ್ನು ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದಿಂದ ಕಣಕ್ಕೆ ಇಳಿಯುವಂತೆ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ. ನಿಮಗೆ ಇನ್ನು 4 ವರ್ಷ ಪರಿಷತ್ ಸದಸ್ಯ ಸ್ಥಾನ ಇದೆ. ನಮ್ಮ ಸರ್ಕಾರ ಬಂದ್ರೆ ಸಚಿವರಾಗುವುದು ಗ್ಯಾರೆಂಟಿ, ನೀವು ಗೋವಿಂದರಾಜನಗರದಲ್ಲಿ ಸ್ಪರ್ಧೆ ಮಾಡಿ, ಇಲ್ಲ ಈ ಎಲೆಕ್ಷನ್ ನಲ್ಲಿ ಸುಮ್ಮನಿದ್ದು ಬಿಡಿ ಎಂದ ಅನಂತಕುಮಾರ್ ಹೇಳಿದ್ದಾರೆ ಎನ್ನಲಾಗುತ್ತಿದೆ. ಈ ವಿಷಯವಾಗಿಯೇ ಸಾರ್ವಜನಿಕವಾಗಿ ಅನಂತಕುಮಾರ್ ಆಪ್ತನ ಮೇಲೆ ತಮ್ಮ ಕೋಪವನ್ನು ತೋರಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:ಹನೂರು ಕ್ಷೇತ್ರದಿಂದಲೇ ಸ್ವರ್ಧಿಸುವ ಬಯಕೆ, ಯಾವುದೇ ಷರತ್ತು ಇಲ್ಲದೇ ಪರಿಮಳಾ ನಾಗಪ್ಪ ಪಕ್ಷಕ್ಕೆ ಬರಲಿ: ಮಾಜಿ ಸಚಿವ ವಿ.ಸೋಮಣ್ಣ
ಅನಂತಕುಮಾರ್ ಅವರು ನೀಡಿದ ಸಲಹೆಯನ್ನು ಸೋಮಣ್ಣ ಬಹುತೇಕ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇತ್ತ ಇನ್ನೇರೆಡು ದಿನಗಳಲ್ಲಿ ಚುನಾವಣೆ ಸ್ಪರ್ಧೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇನೆ ಅಂತಾ ಸೋಮಣ್ಣ ಹೈಕಮಾಂಡ್ ಗೆ ತಿಳಿಸಿದ್ದಾರೆ ಅಂತಾ ಹೇಳಲಾಗಿದೆ.
ಬೆಂಗಳೂರು: ವಿಧಾನಸಭಾ ಚುನಾವಣೆಗಾಗಿ ಟಿಕೆಟ್ ಆಕಾಂಕ್ಷಿಗಳು ತಮ್ಮ ಪಕ್ಷಗಳ ಬಾಗಿಲನ್ನು ನಿರಂತರವಾಗಿ ತಟ್ಟುತ್ತಿದ್ದಾರೆ. ಇತ್ತ ಬಿಜೆಪಿ ಸಹ ಇದೇ ತಿಂಗಳ ಎರಡನೇ ವಾರದಂದು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ ಅಂತಾ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳು ಹೈಕಮಾಂಡ್ ನಾಯಕರ ಜೊತೆ ರಹಸ್ಯ ಮಾತುಕತೆಯನ್ನ ನಡೆಸುತ್ತಿದ್ದಾರೆ.
ಮಾಜಿ ಸಚಿವ ಹಾಗು ಬಿಜೆಪಿ ಮುಖಂಡ ವಿ.ಸೋಮಣ್ಣ ಮಾತ್ರ ತಮಗೆ ಯಾವ ಕ್ಷೇತ್ರದಿಂದ ಟಿಕೆಟ್ ಲಭಿಸಲಿದೆ ಎಂಬುದರ ಗೊಂದಲದಲ್ಲಿ ಇದ್ದಾರಂತೆ. ಈ ಹಿಂದೆ ಸೋಮಣ್ಣ ಹನೂರು ಕ್ಷೇತ್ರದಿಂದ ಸ್ಪರ್ಧೆಗೆ ಇಳಿಯಲಿದ್ದಾರೆ ಅಂತಾ ಹೇಳಲಾಗಿತ್ತು. ಆದ್ರೆ ನಂತರ ಗುಂಡ್ಲುಪೇಟೆ ಕ್ಷೇತ್ರದಿಂದ ಟಿಕೆಟ್ ಸಿಗಲಿದೆ ಎಂಬ ಸುದ್ದಿಯೊಂದು ಬಿಜೆಪಿ ಅಂಗಳದಲ್ಲಿ ಕೇಳಿ ಬಂದಿತ್ತು. ಚುನಾವಣೆ ಸಮೀಪಿಸುತ್ತಿದ್ದಂತೆ ಮತ್ತೆ ಹನೂರು ಕ್ಷೇತ್ರವೇ ಫಿಕ್ಸ್ ಅಂತಾ ಸಹ ತಿಳಿದು ಬಂದಿತ್ತು. ಇದನ್ನೂ ಓದಿ:ಹನೂರು ಕ್ಷೇತ್ರದಿಂದಲೇ ಸ್ವರ್ಧಿಸುವ ಬಯಕೆ, ಯಾವುದೇ ಷರತ್ತು ಇಲ್ಲದೇ ಪರಿಮಳಾ ನಾಗಪ್ಪ ಪಕ್ಷಕ್ಕೆ ಬರಲಿ: ಮಾಜಿ ಸಚಿವ ವಿ.ಸೋಮಣ್ಣ
ಭಾನುವಾರ ಕೇಂದ್ರ ಸಚಿವ ಅನಂತಕುಮಾರ್ ಮನೆಯಲ್ಲಿ ನಡೆದ ಸಭೆಯಲ್ಲಿ ಸೋಮಣ್ಣ ಅವರನ್ನು ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದಿಂದ ಕಣಕ್ಕೆ ಇಳಿಯುವಂತೆ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ. ನಿಮಗೆ ಇನ್ನು 4 ವರ್ಷ ಪರಿಷತ್ ಸದಸ್ಯ ಸ್ಥಾನ ಇದೆ. ನಮ್ಮ ಸರ್ಕಾರ ಬಂದ್ರೆ ಸಚಿವರಾಗುವುದು ಗ್ಯಾರೆಂಟಿ, ನೀವು ಗೋವಿಂದರಾಜನಗದಲ್ಲಿ ಸ್ಪರ್ಧೆ ಮಾಡಿ, ಇಲ್ಲ ಈ ಎಲೆಕ್ಷನ್ ನಲ್ಲಿ ಸುಮ್ಮನಿದ್ದು ಬಿಡಿ ಎಂದ ಅನಂತಕುಮಾರ್ ಹೇಳಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಚುನಾವಣಾ ಪೂರ್ವ ಸರ್ವೆ ಬಿಜೆಪಿಗೆ ಎಚ್ಚರಿಕೆ ಗಂಟೆ: ವಿ.ಸೋಮಣ್ಣ
ಅನಂತಕುಮಾರ್ ಅವರು ನೀಡಿದ ಸಲಹೆಯನ್ನು ಸೋಮಣ್ಣ ಬಹುತೇಕ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇತ್ತ ಇನ್ನೇರೆಡು ದಿನಗಳಲ್ಲಿ ಚುನಾವಣೆ ಸ್ಪರ್ಧೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇನೆ ಅಂತಾ ಸೋಮಣ್ಣ ಹೈಕಮಾಂಡ್ ಗೆ ತಿಳಿಸಿದ್ದಾರೆ ಎಂದು ಪಬ್ಲಿಕ್ ಟಿವಿ ಮೂಲಗಳು ತಿಳಿಸಿವೆ.
ತುಮಕೂರು: ಪಬ್ಲಿಕ್ ಟಿವಿ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆ ನಮಗೆ ಎಚ್ಚರಿಕೆ ಗಂಟೆಯಾಗಿದೆ. ಆ ಎಚ್ಚರಿಕೆ ಗಂಟೆಯನ್ನು ಸ್ವೀಕಾರ ಮಾಡಿ, ಸರ್ವೆಯಲ್ಲಿ ನಮಗೆ ಎಲ್ಲಿ ತೊಂದರೆಗಳಿವೆ ಎಂಬುದು ಗೊತ್ತಾಗಿದ್ದು, ಅವುಗಳನ್ನು ಸರಿಪಡಿಸಿಕೊಳ್ಳುತ್ತೆವೆ ಎಂದು ಮಾಜಿ ಸಚಿವ ಬಿಜೆಪಿ ನಾಯಕ ವಿ.ಸೋಮಣ್ಣ ತಿಳಿಸಿದ್ದಾರೆ.
ಚುನಾವಣೆಗೆ ಇನ್ನೂ ಮೂರರಿಂದ ನಾಲ್ಕು ತಿಂಗಳು ಕಾಲಾವಧಿ ಇದೆ. ಹಾಗಾಗಿ ಮುಂದಿನ ದಿನಗಳಲ್ಲಿ ಜನಾಭಿಪ್ರಾಯ ಬದಲಾಗುವ ಸಾಧ್ಯತೆಗಳಿರುತ್ತವೆ. ಪಬ್ಲಿಕ್ ಟಿವಿ ಸರ್ವೆ ನಡೆಸಿರುವುದು ಸಂತೋಷ. ನಮ್ಮಲ್ಲಿ ಕೂಡ ಕೆಲವು ಸಮೀಕ್ಷೆಗಳ ಫಲಿತಾಂಶಗಳಿವೆ ಅಂತಾ ಅಂದ್ರು. ಇದನ್ನೂ ಓದಿ: ಯಾರಿಗೂ ಬಹುಮತವಿಲ್ಲ, ಮತ್ತೊಮ್ಮೆ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣ!
ಇಂದು ಬೆಳಗ್ಗೆ ತುಮಕೂರು ಜಿಲ್ಲೆಯ ಗುಬ್ಬಿ ನಗರದಲ್ಲಿ ಸೋಮಣ್ಣ ಅವರು ಕೆಲವೊಂದು ವಾರ್ಡ್ ಗಳಿಗೆ ಭೇಟಿ ಕೊಟ್ಟು ಕುಂದುಕೊರತೆ ಆಲಿಸಿದರು. ನಾನು ಗುಬ್ಬಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂಬ ಅಂತೆಕಂತೆಗಳಿಗೆ ಕಾರ್ಯಕರ್ತರು ಬೆಲೆ ಕೊಡಬಾರದು. ಫೆಬ್ರವರಿ ಎರಡನೇ ವಾರದಲ್ಲಿ ಟಿಕೆಟ್ ಯಾರಿಗೆಂದು ಹೈಕಮಾಂಡ್ ಅಂತಿಮ ಮಾಡುತ್ತದೆ ಅಂತಾ ಹೇಳಿದರು. ಇದನ್ನೂ ಓದಿ:ಹೈದರಾಬಾದ್ ಕರ್ನಾಟಕದಲ್ಲಿ ಈ ಬಾರಿ ಗೆಲುವು ಯಾರಿಗೆ?
ಬೆಂಗಳೂರು: ನಡೆದಾಡುವ ದೇವರ ವಿಚಾರಕ್ಕೆ ಬಂದ್ರೆ ಸುಟ್ಟು ಭಸ್ಮ ಆಗ್ತೀರಾ ಅಂತ ಸಚಿವ ಎಂ.ಬಿ.ಪಾಟೀಲ್ ವಿರುದ್ಧ ವಿಧಾನಪರಿಷತ್ ಸದಸ್ಯ ವಿ.ಸೋಮಣ್ಣ ವಾಗ್ದಾಳಿ ನಡೆಸಿದ್ದಾರೆ.
ಎಂ.ಬಿ.ಪಾಟೀಲ್ ಈಗ ನಿನಗೆ ವೀರಶೈವ ಲಿಂಗಾಯತರ ನೆನಪಾಯ್ತಾನೇಪ್ಪಾ? ಈಗ ಥಕ ಥೈ ಥಕ ಥೈ ಅಂತಾ ಏಕೆ ಕುಣಿತೀಯಾ? ಶ್ರೀಗಳನ್ನ ಮಧ್ಯೆ ಎಳೆದು ತರೋದು ಸರಿಯಿಲ್ಲ. ಅವರೇ ಈಗ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಸಾವಿರ ಸುಳ್ಳು ಹೇಳಿ ನಿಜ ಮಾಡಲು ಆಗಲ್ಲ. ಯಡಿಯೂರಪ್ಪ ಅವರನ್ನ ಸಿಎಂ ಅಭ್ಯರ್ಥಿ ಅಂತಾ ಘೋಷಣೆ ಮಾಡಿದ್ಮೇಲೆ ಈಗ ನಾಟಕ ಏಕೆ? ನಿನ್ನ ಹೆಂಡ್ತಿ, ಮಕ್ಕಳ ಮೇಲೆ ಏಕೆ ಅಣೆ ಹಾಕ್ತೀಯಾ? ಅವರನ್ನ ಏಕೆ ಸಾಯಿಸ್ತೀಯಾ ಪಾಪ? ನಿನಗೆ ಏನಾಗಿದೆ ಪಾಟೀಲ್? ಇವೆಲ್ಲವನ್ನು ಬಿಟ್ಟುಬಿಡು, ಸರಿಯಲ್ಲ ಅಂತ ಏಕವಚನದಲ್ಲಿ ಪ್ರಶ್ನಿಸಿ ವಾಗ್ದಾಳಿ ನಡೆಸಿದ್ರು.
ಸಣ್ಣ ವಯಸ್ಸಿನಲ್ಲೇ ಸಚಿವನಾಗಿದ್ದೀಯಾ. ಇನ್ನು ಐದಾರು ತಿಂಗಳು ಸಚಿವನಾಗಿ ಇರ್ತೀಯಾ ಅಷ್ಟೇ. ಅಮೇಲೆ ಏನ್ ಮಾಡ್ತಿಯಾಪ್ಪಾ ಪಾಟೀಲಾ? ಶಿವಕುಮಾರ ಮಹಾಸ್ವಾಮಿಗಳು ಪ್ರತಿಕ್ರಿಯೆ ನೀಡಿದ್ದಾರೆ. ವೀರಶೈವ – ಲಿಂಗಾಯತ ಎರಡೂ ಒಂದೇ. ಸಮಾಜ ಒಡೆಯುವ ಕೆಲಸ ಮಾಡಬೇಡಿ ಅಂತ ಸ್ವಾಮೀಜಿ ಸ್ಪಷ್ಟೀಕರಣ ನೀಡಿದ್ದಾರೆ. ಎಂ.ಬಿ ಪಾಟೀಲ್ ಅವ್ರು ನಾನು ಹೇಳಿದ್ದು ಸತ್ಯ, ಆಣೆ ಪ್ರಮಾಣ ಮಾಡ್ತೀನಿ ಅಂದಿದ್ದಾರೆ. ಏತಕ್ಕೋಸ್ಕರ ಆಣೆ ಪ್ರಮಾಣ ಮಾಡ್ತಿಯಪ್ಪಾ? ನಿನ್ ಮನೆ ಕಾಯೋಗಾ? ಬಿಜೆಪಿ ವರಿಷ್ಟರು ಯಡಿಯೂರಪ್ಪ ಅವ್ರನ್ನ ಮುಂದಿನ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಅದಕ್ಕೆ ಕಾಂಗ್ರೆಸ್‍ನವರಿಗೇಕೆ ತಳಮಳ ಶುರ ವಾಗಿದೆಯೋ ಗೊತ್ತಿಲ್ಲ. ಚುನಾವಣೆ ಐದಾರು ತಿಂಗಳಿರೋವಾಗ ಈ ರೀತಿ ಗೊಂದಲ ಸೃಷ್ಟಿಸೋದು ಸರಿಯಲ್ಲ. ಒಬ್ಬ ಸಮಾಜದ ನಾಯಕ ಸಿಎಂ ಆಗ್ತಾನೆ ಅಂತ ಘೋಷಣೆ ಮಾಡಿದ ತಕ್ಷಣ ಈ ರೀತಿ ಎಂ.ಬಿಪಾಟೀಲ್ ಹೇಳಿಕೆ ನೀಡ್ತಿರೋದು ಸರಿಯಲ್ಲ. ಮಾಧ್ಯಮದವರು ಇಂಥವರಿಗೆ ತಿಳುವಳಿಕೆ ಹೇಳಿ ಸರಿ ದಾರಿಗೆ ತೆಗೆದುಕೊಂಡು ಬನ್ನಿ ಅಂತ ಹೇಳಿದ್ರು.
ಸಿದ್ಧಗಂಗಾ ಶ್ರೀಗಳು ಈ ರಾಷ್ಟ್ರದ ನಡೆದಾಡುವ ದೇವರು. ಎಂಬಿ ಪಾಟೀಲ್ ಗೆ ಎಷ್ಟು ವರ್ಷದಿಂದ ಸಿದ್ದಗಂಗಾ ಶ್ರೀಗಳು ಗೊತ್ತು? 48-50 ವರ್ಷದಿಂದ ನಾನು ಅವರ ಅಪ್ಪಟ ಶಿಷ್ಯನಾಗಿ ಕೆಲಸ ಮಾಡಿದ್ದೇನೆ. ನಮ್ಮ ಹತ್ರನೇ ಸ್ವಾಮೀಜಿ ಅವರು ಇವತ್ತಿಗೂ ಕೂಡ ಒಂದು ಗುಟ್ಟನ್ನೂ ಬಿಟ್ಟುಕೊಟ್ಟವರಲ್ಲ. ಅವರು ಸಮಾಜದ ಸಾಮರಸ್ಯ ಕದಡುವಂತಹ ಕೆಲಸ ಯಾವತ್ತೂ ಮಾಡಿಲ್ಲ. ಅದಕ್ಕಾಗಿಯೇ ಸ್ವತಃ ಸ್ವಾಮೀಜಿಯವರೇ ಈಗಾಗಲೇ ಸ್ಪಷ್ಟೀಕರಣ ನೀಡಿದ್ದಾರೆ ಎಂದರು.
ಆದ್ದರಿಂದ ನಾನು ಎಂಬಿ ಪಾಟೀಲ್‍ರಿಗೆ ಇಷ್ಟು ಹೇಳ್ತೀನಿ. ನೀವು ಮಂತ್ರಿಗಳಾಗಿದ್ದೀರಿ. ನೀರಾವರಿ ಮಂತ್ರಿಯಾಗಿದ್ದೀರಿ. ಆ ಇಲಾಖೆನ ಸರಿಮಾಡಿಕೊಂಡು ಕೆಲಸ ಮಾಡಿಕೊಂಡು ಹೋಗಿ. ಯಡಿಯೂರಪ್ಪ ಅವರನ್ನ ಬಿಜೆಪಿಯ ರಾಷ್ಟ್ರೀಯ ನಾಯಕರು ಮುಂದಿನ ಮುಖ್ಯಮಂತ್ರಿ ಅಂತ ಹೇಳಿದ ತಕ್ಷಣನೇ ನಾಲ್ಕೂವರೆ ವರ್ಷ ಆರಾಮಾಗಿ ಕಾಲ ಕಳೆದುಕೊಂಡು ಇದ್ದೋರು ಇದ್ದಕ್ಕಿದ್ದಂಗೆ ಹೇಗೆ ವೀರಶೈವರ ಮೇಲೆ ನಿಮಗೆ ಅಭಿಮಾನ ಬಂತು? ಯಡಿಯೂರಪ್ಪ ಮುಖ್ಯಮಂತ್ರಿ ಆಗಬಾರದು ಅನ್ನೋ ಒಂದೇ ದೃಷ್ಟಿಕೋನದಿಂದ ಈ ಕೆಟ್ಟ ಚಾಳಿ ಕೈಗೆತ್ತಿಕೊಂಡಿದ್ದೀರ. ಆದ್ರೆ ಒಂದು ಸತ್ಯ, ಸಾವಿರ ಸಲ ಹೇಳಿದ್ರೂ ಸುಳ್ಳು ಸುಳ್ಳೇ. ನಡೆದಾಡುವ ದೇವರ ಬಗ್ಗೆ ಜಾಸ್ತಿ ಮಾತಾಡಿ, ಅಪಚಾರಕ್ಕೆ ಗುರಿಯಾಗಿ ಸುಟ್ಟಿಹೋಗ್ಬಿಟ್ರೆ ಇನ್ನು 5 ತಿಂಗಳಲ್ಲಿ ಬೇರೆ ಮಂತ್ರಿ ಬರಬೇಕಾಗುತ್ತೆ. ಅದಕ್ಕೆ ಅವಕಾಶ ಕೊಡ್ಬೇಡಿ. ಇನ್ಯಾರ ಬಗ್ಗೆಯಾದ್ರೂ ಮಾತಾಡಿ. ಸಿದ್ದಗಂಗಾ ಶ್ರೀಗಳ ಬಗ್ಗೆ ಮಾತಾಡಬೇಕಾದ್ರೆ ಅವರ ಇತಿಹಾಸ ಗೊತ್ತಿಲ್ಲದೆ ಮಾತಾಡಬೇಡಿ. ಇದನ್ನ ಇಲ್ಲಿಗೆ ನಿಲ್ಲಿಸಿ ನಿಮ್ಮ ಕರ್ತವ್ಯ ನಿರ್ವಹಣೆ ಮಾಡಿ. ಅದನ್ನ ಮಾಡೋದಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾ ಇದೆ. ಅವರು ಮಾಡ್ಕೋತಾರೆ. ಇಂಥ ಚಿಲ್ರೆ ಕೆಲಸವನ್ನ ದಯವಿಟ್ಟು ನಿಲ್ಲಿಸಬೇಕು ಎಂದು ತಿಳಿಸಿದರು.
ಇವರೊಬ್ಬರೇ ಲಿಂಗಾಯತರಲ್ಲ. ನಾವೆಲ್ಲರೂ ವೀರಶೈವರೇ ಲಿಂಗಾಯತರೇ. ಯಡಿಯೂರಪ್ಪ ಮುಂದಿನ ಮುಖ್ಯಮಂತ್ರಿ ಅಂದ ತಕ್ಷಣ ಬಂದುಬಿಡ್ತಾ? ನಾಲ್ಕೂವರೆ ವರ್ಷ ಯಾಕೆ ಸುಮ್ಮನಿದ್ರಿ? ಮಣ್ಣು ತಿಂತಿದ್ರಾ? ಸಿದ್ದರಾಮಯ್ಯನವರ ಕೈಲಿ ಅವತ್ತೇ ಮಾಡಿಸ್ಬೇಕಿತ್ತು. ಕೊನೇ ಮೂರ್ನಾಲ್ಕು ತಿಂಗಳು ಇದೆ, ನಿಮಗೆ ಠೇವಣಿ ಬರ್ತಿಲ್ಲ, ಎಲ್ಲೂ ಮಾರ್ಕೆಟ್ ಇಲ್ಲ ಅಂತ ವೀರಶೈವರು ಎಲ್ಲೋ ಒಂದು ಕಡೆ ಸೌಮ್ಯ ಸ್ವಭಾವದವ್ರು ಅಂತ ನೀವು ಈ ಥರ ಹಿಡ್ಕೊಂಡು ಸಮಾಜವನ್ನ ರುಬ್ಬಕ್ಕೆ ಯಾರ್ಯಾರ ಕೈಲೋ ಮಾಡಿಸ್ತೀರಲ್ಲ. ಎಂಬಿ ಪಾಟೀಲ್…… ಒಂದು ದಿನ ಇದೇ ತಿರುಗುಬಾಣವಾಗುತ್ತೆ. ಗೌರವದಿಂದ ನಡೆದುಕೊಳ್ಳಿ. ಇದು ಒಳ್ಳೆಯದಲ್ಲ. ಯಡಿಯೂರಪ್ಪ ಅವರು ಈ ರಾಜ್ಯಕ್ಕೆ ಕೊಟ್ಟಿರುವ ಸೇವೆ, ವಿಶೇಷವಾಗಿ ಎಲ್ಲಾ ಜಾತಿ ಎಲ್ಲಾ ವರ್ಗದ ಜನ ಅದನ್ನ ಅಕ್ಸೆಪ್ಟ್ ಮಾಡಿದ್ದಾರೆ. ಯಡಿಯೂರಪ್ಪ ಬಂದ್ರು, ಮುಂದಿನ ದಿನಗಳಲ್ಲಿ ನಮಗೆ ಕಷ್ಟವಾಗುತ್ತೆ ಅಂತ ಮೈ ಪರಚಿಕೊಂಡು, ಬಟ್ಟೆ ಬಿಚ್ಕೊಂಡ್ರೆ ನಾವೇನು ಮಾಡೋಕಾಗುತ್ತೆ? ಇದು ಒಳ್ಳೆಯದಲ್ಲ. ನಾಲ್ಕೂವರೆ ವರ್ಷ ಸುಮ್ಮನಿದ್ದು, ಈ ನಾಲ್ಕು ತಿಂಗಳಲ್ಲಿ ಯಾಕೆ ಕುಣೀತಿದ್ಯಾ ಥಕ ಥೈ ಅಂತ? ಮೊಸರಲ್ಲಿ ಕಲ್ಲು ಹುಡಕೋ ಅಪವಿತ್ರ ಕೆಲಸ ದಯವಿಟ್ಟು ಮಾಡ್ಬೇಡಿ ಅಂತ ಹೇಳಿದ್ರು.
ಮೈಸೂರು: ನಾನು ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ಇದೇ ನನ್ನ ಆಸೆಯಾಗಿದೆ. ಹೀಗಾಗಿ ನನ್ನ ಈ ಬಯಕೆಯನ್ನು ವರಿಷ್ಠರ ಗಮನಕ್ಕೆ ತಂದಿದ್ದೇನೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ರು.
ಅವರು ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷಕ್ಕೆ ಸೇರ್ಪಡೆ ಆಗುತ್ತಿರುವ ಪರಿಮಳಾ ನಾಗಪ್ಪ ಅವರು ಯಾವುದೇ ಷರತ್ತು ಇಲ್ಲದೇ ಬಿಜೆಪಿಗೆ ಸೇರಲಿ. ಅವರಂತವರು ಹಾಗು ನನ್ನಂತವರು ಪಕ್ಷಕ್ಕೆ ನೂರಾರು ಜನ ಬರ್ತಾರೆ ಹೋಗ್ತಾರೆ. ಆದರೆ ಅವರು ಟಿಕೆಟ್ ನೀಡಿದ್ರೆ ಮಾತ್ರ ಪಕ್ಷಕ್ಕೆ ಬರುವುದಾಗಿ ತಿಳಿಸಿದ್ದಾರೆ. ಇಂತಹ ಹೇಳಿಕೆಗಳು ಸರಿಯಲ್ಲ ಎಂದು ಸೋಮಣ್ಣ ಹೇಳಿದರು.
ಪರಿಮಳಾ ನಾಗಪ್ಪ ಅವರು ಪಕ್ಷಕ್ಕೆ ಬರುವುದಕ್ಕೆ ಆಂತರಿಕ ವಿರೋಧ ಇಲ್ಲ. ಆದರೆ ಅವರು ಯಾವುದೇ ಷರತ್ತು ಇಲ್ಲದೇ ಬಿಜೆಪಿ ಪಕ್ಷಕ್ಕೆ ಬರಬೇಕು ಎಂದು ಸೋಮಣ್ಣ ಅವರು ಪರಿಮಳಾ ನಾಗಪ್ಪ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.