Tag: ವಿ.ಸೋಮಣ್ಣ

  • ಸಂಸತ್ ಆವರಣದಲ್ಲಿ ರಾಣಿ ಚೆನ್ನಮ್ಮ ಜಯಂತ್ಯೋತ್ಸವ ಆಚರಣೆ

    ಸಂಸತ್ ಆವರಣದಲ್ಲಿ ರಾಣಿ ಚೆನ್ನಮ್ಮ ಜಯಂತ್ಯೋತ್ಸವ ಆಚರಣೆ

    – ಚೆನ್ಮಮ್ಮ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಿ: ಸೋಮಣ್ಣ

    ನವದೆಹಲಿ: ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮನವರ (Kittur Rani Chennamma) 201ನೇ ವಿಜಯೋತ್ಸವ ಹಾಗೂ ಜನ್ಮದಿನೋತ್ಸವವನ್ನು ಸಂಸತ್ ಆವರಣದಲ್ಲಿ ಆಚರಿಸಲಾಯಿತು. ಸಂಸತ್ (Parliament) ಆವರಣದ ಪ್ರೇರಣಾ ಸ್ಥಳದಲ್ಲಿರುವ ಚೆನ್ನಮ್ಮ ಪ್ರತಿಮೆಗೆ ತುಮಕೂರು ಲೋಕಸಭಾ ಸದಸ್ಯ ಹಾಗೂ ಕೇಂದ್ರ ಸಚಿವ ವಿ. ಸೋಮಣ್ಣ (V Somanna) ಪುಷ್ಪನಮನ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಸೋಮಣ್ಣ, ರಾಣಿ ಚೆನ್ನಮ್ಮನವರ ಪುತ್ಥಳಿಯನ್ನು ಸಂಸತ್ತಿನ ಆವರಣದಲ್ಲಿ 2007ರಲ್ಲಿ ಸ್ಥಾಪಿಸಲಾಗಿದೆ. ಕಳೆದ ವರ್ಷ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬೆಂಬಲ ಮತ್ತು ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ ಅವರ ಸಹಕಾರದಿಂದ 200ನೇ ರಾಣಿ ಚೆನ್ನಮ್ಮನವರ ವಿಜಯೋತ್ಸವ ಮತ್ತು ಜನ್ಮದಿನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗಿತ್ತು. ಅದೇ ರೀತಿ ಈ ವರ್ಷವೂ ಸಹ ರಾಣಿ ಚೆನ್ಮಮ್ಮನವರ 201ನೇ ವಿಜಯೋತ್ಸವ ಮತ್ತು ಜನ್ಮದಿನೋತ್ಸವ ಆಚರಣೆಯನ್ನು ಸಂಸತ್ತಿನ ಅವರಣದ ಪ್ರೇರಣಾ ಸ್ಥಳದಲ್ಲಿ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: 17 ವರ್ಷಗಳ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಕೆಟ್ಟ ಸಾಧನೆ ಬರೆದ ಕೊಹ್ಲಿ

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಕರ್ನಾಟಕದ ಸಂಸ್ಕೃತಿ, ಈ ದೇಶಕ್ಕೆ ಕೊಡುಗೆ ನೀಡಿದ ಕನ್ನಡದ ಮಹನೀಯರನ್ನು, ಸ್ವಾತಂತ್ರ‍್ಯ ಹೋರಾಟಗಾರರನ್ನು, ವೀರವನಿತೆಯರನ್ನು ನೆನಪಿಸುವ ಮತ್ತು ಅವರನ್ನು ಗೌರವಿಸುವ ಕೆಲಸ ಮಾಡುವಲ್ಲಿ ಸದಾ ಸನ್ನದ್ಧವಾಗಿದೆ. ಇದಕ್ಕೆ ಪೂರಕವಾಗಿಯೇ ನಾಳೆ ಸಿರಿಪೋರ್ಟ ಆಡಿಟೋರಿಯಂನಲ್ಲಿ ನಡೆಯಲಿರುವ ಕಿತ್ತೂರು ರಾಣಿ ಚೆನ್ನಮ್ಮನವರ 201ನೇ ವಿಜಯೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ವೀರರಾಣಿ ಚೆನ್ಮಮ್ಮನವರ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಲಿದ್ದಾರೆ ಎಂದರು. ಇದನ್ನೂ ಓದಿ: ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ವಾಪಸ್ – ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ

    ಸ್ವಾತಂತ್ರ‍್ಯ ಹೋರಾಟಗಾರ್ತಿ ರಾಣಿ ಚೆನ್ನಮ್ಮನವರ ಸಾಧನೆ ಮತ್ತು ಕಿತ್ತೂರಿನ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ಕರ್ನಾಟಕ ರಾಜ್ಯ ಸರ್ಕಾರ ಹೆಚ್ಚಿನ ಮುತುವರ್ಜಿಯಿಂದ ನಿರ್ವಹಿಸಬೇಕಾದ ಅವಶ್ಯಕತೆ ಇದೆ. ಇದಕ್ಕೆ ಪೂರಕವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಕಿತ್ತೂರು ಸಂಸ್ಥಾನದ ಕೋಟೆ ಕೊತ್ತಲೆಗಳಲ್ಲಿ ಸಮರ್ಪಕ ನಿರ್ವಹಣೆ ಇಲ್ಲದಿರುವುದನ್ನು ಸಾರ್ವಜನಿಕರು ಮನಗಂಡಿದ್ದು, ಈ ಬಗ್ಗೆ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅಧಿಕಾರ ನೀಡಬೇಕಾಗಿದೆ. ಬೈಲಹೊಂಗಲದಲ್ಲಿರುವ ರಾಣಿ ಚೆನ್ಮಮ್ಮನವರ ಸಮಾಧಿಯನ್ನು ಅಭಿವೃದ್ಧಿಗೊಳಿಸಿ, ಅದನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಬೇಕು. ವೀರ ರಾಣಿ ಚೆನ್ಮಮ್ಮನವರ ಜೀವನ ಮತ್ತು ಸಾಧನೆ ಕುರಿತು ಭಾರತೀಯ ಎಲ್ಲಾ ಭಾಷೆಗಳಲ್ಲೂ ಪುಸ್ತಕವನ್ನು ಹೊರತರಬೇಕೆಂದು ಮನವಿ ಮಾಡಿದೆ ಎಂದು ನುಡಿದರು. ಇದನ್ನೂ ಓದಿ: ಕಾವೇರಿ ಜಲಾನಯನ ಪ್ರದೇಶದಲ್ಲಿ ಹಿಂಗಾರು ಚುರುಕು – ನದಿ ಪಾತ್ರದ ಜನರಿಗೆ ಅಲರ್ಟ್

    ಈ ಸಂದರ್ಭದಲ್ಲಿ ಬೆಳಗಾವಿ ಸಂಸದರು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ರಾಜ್ಯ ಸಭಾ ಸದಸ್ಯೆ ಡಾ. ಸುಧಾಮೂರ್ತಿಯವರು, ಜಯಮೃತ್ಯುಂಜಯ ಸ್ವಾಮಿಜೀ, ಶ್ರೀ ವಚನಾನಂದ ಸ್ವಾಮಿಗಳು, ಜನಪ್ರತಿನಿಧಿಗಳು, ದೆಹಲಿ ಕನ್ನಡ ಸಂಘದ ಅಧ್ಯಕ್ಷ ಸಿಎಂ ನಾಗರಾಜ್ ಹಾಗೂ ದೆಹಲಿ ಕನ್ನಡಿಗರು ಉಪಸ್ಥಿತರಿದ್ದರು. ಇದನ್ನೂ ಓದಿ: ನಮ್ದೇನಿದ್ದರೂ 2028ಕ್ಕೆ ಸಿಎಂ ಕ್ಲೈಮ್‌, ಯತೀಂದ್ರ ಹೇಳಿಕೆ ಅದು ವೈಯಕ್ತಿಕ: ಸತೀಶ್‌ ಜಾರಕಿಹೊಳಿ

  • ಕೇಂದ್ರ ಸಚಿವ ಸೋಮಣ್ಣ ಮನೆಯಲ್ಲಿ ಜಾತಿಗಣತಿಗೆ 9 ಸಿಬ್ಬಂದಿ – ಸರ್ವೇಗೆ ಇಷ್ಟು ಜನ ಯಾಕೆ ಬಂದ್ರಿ ಅಂತ ಕ್ಲಾಸ್

    ಕೇಂದ್ರ ಸಚಿವ ಸೋಮಣ್ಣ ಮನೆಯಲ್ಲಿ ಜಾತಿಗಣತಿಗೆ 9 ಸಿಬ್ಬಂದಿ – ಸರ್ವೇಗೆ ಇಷ್ಟು ಜನ ಯಾಕೆ ಬಂದ್ರಿ ಅಂತ ಕ್ಲಾಸ್

    – ಸರ್ಕಾರಿ ನೌಕರರು ಸರ್ಕಾರದ ಏಜೆಂಟ್ ಆಗಿ ಕೆಲಸ ಮಾಡಬಾರದು ಅಂತ ಗರಂ

    ಬೆಂಗಳೂರು: ಕೇಂದ್ರ ಸಚಿವ ವಿ.ಸೋಮಣ್ಣ (V.Somanna) ಮನೆಯಲ್ಲಿ ಜಾತಿಗಣತಿ ಸರ್ವೇ (Caste Census) ನಡೆಸಲಾಗಿದೆ. ವಿಜಯನಗರದಲ್ಲಿರುವ ಸೋಮಣ್ಣ ಅವರ ನಿವಾಸಕ್ಕೆ ಸಿಬ್ಬಂದಿ ಆಗಮಿಸಿ ಸರ್ವೇ ನಡೆಸಿದ್ದಾರೆ.

    ಸರ್ವೇ ವೇಳೆ ಸಿಬ್ಬಂದಿಗೆ ಸೋಮಣ್ಣ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಂಪೂರ್ಣವಾಗಿ ಅಲೈನ್‌ನಲ್ಲೇ ಸರ್ವೇ ಮಾಡೋದ ಎಂದು ಸೋಮಣ್ಣ ಕೇಳಿದ್ದಾರೆ. ಅದಕ್ಕೆ, ಹೌದು ಅಂತ ಸಿಬ್ಬಂದಿ ತಿಳಿಸಿದ್ದಾರೆ. ಈ ರಾಜ್ಯದಲ್ಲಿ ಎಷ್ಟು ಜನ ಎಬ್ಬೆಟ್ಟು ಇದ್ದಾರೆ. ಅವರೆಲ್ಲ ಹೇಗೆ ಅನ್ಲೈನ್‌ನಲ್ಲಿ ಮಾಡಿಸಿಕೊಳ್ಳುತ್ತಾರೆ? ನೀವು ಅಧಿಕಾರಿಗಳು ಸರ್ಕಾರಕ್ಕೆ ಹೇಳಬೇಕಲ್ವಾ ಎಂದು ಗರಂ ಆಗಿದ್ದಾರೆ.

    ನಮ್ಮ ಕೇಂದ್ರ ಸರ್ಕಾರ ಮುಂದೆ ಗಣತಿ ಮಾಡಿಸುತ್ತೆ. ಹೇಗೆ ಮಾಡಿಸುತ್ತೆ ನೋಡಿ, ಅದನ್ನು ಸಹ ನೀವೇ ಮಾಡೋದು. ಅಷ್ಟು ಪ್ರಶ್ನೆಗಳು ಬೇಕಾ? ಇದೇಲ್ಲ ನೀವು ಸರ್ಕಾರಕ್ಕೆ ತಿಳಿಸೋದು ಬೇಡ್ವಾ? ಸರ್ಕಾರಿ ನೌಕರರು ಸರ್ಕಾರದ ಏಜೆಂಟ್ ಆಗಿ ಕೆಲಸ ಮಾಡಬಾರದು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

    ಈ ಸಿದ್ದರಾಮಯ್ಯ ಅವರಿಗೆ ಜಾತಿ ಲೆಕ್ಕ ಬೇಕು. ಅದಕ್ಕೆ ಇದನ್ನೆಲ್ಲ ಮಾಡ್ತಿದ್ದಾರೆ. ಸರ್ವೇ ಮಾಡೋಕೆ ನೀವು 9 ಜನ ಯಾಕೆ ಬಂದಿದ್ದೀರಿ ಎಂದು ಸೋಮಣ್ಣ ಪ್ರಶ್ನಿಸಿದ್ದಾರೆ. ಉಪಜಾತಿ ಯಾವುದು ಅಂತಾ ಕೇಳಿದಾಗ, ಅದೆಲ್ಲ ಯಾಕೆ ಬೇಕು? ಸಿದ್ದರಾಮಯ್ಯ ಜಾತಿ ಅಂತಾ ಬರೆದುಕೊಳ್ಳಿ ಎಂದು ಸೋಮಣ್ಣ ತಿಳಿಸಿದ್ದಾರೆ.

    ಇಡೀ ದೇಶದಲ್ಲಿ ಸಿದ್ದರಾಮಯ್ಯ ಜಾತಿ ಅಂತಾ ಮಾಡಿಕೊಳ್ಳಿಬಿಡಿ. ಮದ್ವೆ ಆದಾಗ ಎಷ್ಟು ವರ್ಷ ಅನ್ನೋ ಪ್ರಶ್ನೆಗೆ, ಇವೆಲ್ಲ ಯಾಕೆ? ದುರಂತ. ನಮ್ಮ ಅಪ್ಪ-ಅಮ್ಮನ ಕೇಳ್ಬೇಕು. 26 ಅಂತ ಬರೆದುಕೊಳ್ಳಿ. ಇದು ಸಿದ್ದರಾಮಯ್ಯ ವೋಟಿಗಾಗಿ ಮಾಡ್ತಿರೋದು. ಯಾರೋ ಅವಿವೇಕಿಗಳು ಹೇಳಿ ಮಾಡಿಸ್ತಿರೋದು. ಅನೇಕ ಪ್ರಶ್ನೆಗಳಿಗೆ ಸಿದ್ದರಾಮಯ್ಯ, ಡಿಕೆಶಿ ಹೆಸರನ್ನೇ ಹಾಕೊಳ್ಳಿ ಎಂದು ಸೋಮಣ್ಣ ಉತ್ತರಿಸಿದ್ದಾರೆ.

    ಉತ್ತರ ಕೊಡದಕ್ಕೆ ಆಗದೆ ಇರುವ ಪ್ರಶ್ನೆಗಳನ್ನೆಲ್ಲ ಹಾಕಿದ್ದೀರಾ. ಯಾವನೊ ತಲೆ ಕೆಟ್ಟಿರೋರು ಮಾಡಿದ್ದು, ಅವ್ನ ಕರೀರಿ. ವೃತ್ತಿ ವಿಚಾರವಾಗಿ ಎಲ್ಲಿ ಕೆಲಸ ಮಾಡೋದು ಎಂಬ ಪ್ರಶ್ನೆ, ಸಿದ್ದರಾಮಯ್ಯ, ಡಿಕೆಶಿಗೆ ಯಾವ ಗ್ರೂಪ್ ಅಂತಾ ಹಾಕ್ತೀರಿ ಎಂದು ಪ್ರತಿಯೊಂದಕ್ಕೂ ಸಿದ್ದರಾಮಯ್ಯ ಹೆಸರನ್ನು ಪ್ರಸ್ತಾಪಿಸಿದ್ದಾರೆ.

  • ತುಮಕೂರು ದಸರಾ ಉದ್ಘಾಟಿಸಿದ ಪರಮೇಶ್ವರ್

    ತುಮಕೂರು ದಸರಾ ಉದ್ಘಾಟಿಸಿದ ಪರಮೇಶ್ವರ್

    ತುಮಕೂರು: ನಂದಿ ಧ್ವಜ ಪೂಜೆ ಮಾಡುವ ಮೂಲಕ ತುಮಕೂರು ದಸರಾವನ್ನು (Tumakuru Dasara) ಗೃಹಸಚಿವ ಜಿ.ಪರಮೇಶ್ವರ್ (G.Parameshwar) ಉದ್ಘಾಟಿಸಿದರು.

    ತುಮಕೂರು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ದಸರಾ ಕಾರ್ಯಕ್ರಮದಲ್ಲಿ ದಸರಾ ಧ್ವಜಾರೋಹಣ ಮಾಡಿ, ಬಳಿಕ ಧಾರ್ಮಿಕ ಮಂಟಪವನ್ನು ಉದ್ಘಾಟನೆ ಮಾಡಿದರು. ಇದನ್ನೂ ಓದಿ: Mysuru Dasara | ನೀಲಿ ಜರಿ ಸೀರೆಯಿಂದ ಕಂಗೊಳಿಸುತ್ತಿರುವ ಚಾಮುಂಡಿ ದೇವಿ

    ಪತ್ನಿ ಕನ್ನಿಕಾ ಪರಮೇಶ್ವರ್, ಕೇಂದ್ರ ಸಚಿವ ವಿ ಸೋಮಣ್ಣ, ಶಾಸಕ ಜ್ಯೋತಿಗಣೇಶ್, ಸುರೇಶ್ ಗೌಡ, ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ, ಹನುಮಂತನಾಥ ಸ್ವಾಮೀಜಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ತುಮಕೂರು ದಸರಾಗೆ ರಮ್ಯಾ – ರವಿಚಂದ್ರನ್

    ದಸರಾ ಉತ್ಸವವು ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ 11 ದಿನಗಳ ಕಾಲ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದ್ದು, ಉತ್ಸವವನ್ನು ನೋಡಲು ಸಾರ್ವಜನಿಕರಿಗಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಪ್ರತೀ ದಿನ 250 ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ.

  • ಮೋದಿ ನಿವೃತ್ತಿಯಾಗಲ್ಲ, ಅವರ ಸೇವೆ ಇನ್ನೂ ದೇಶಕ್ಕೆ ಬೇಕು: ಸೋಮಣ್ಣ

    ಮೋದಿ ನಿವೃತ್ತಿಯಾಗಲ್ಲ, ಅವರ ಸೇವೆ ಇನ್ನೂ ದೇಶಕ್ಕೆ ಬೇಕು: ಸೋಮಣ್ಣ

    ತುಮಕೂರು: ಮೋದಿ (Narendra Modi) ಅವರು ನೂರು ವರ್ಷ ಬಾಳಬೇಕು, ಅವರ ಸೇವೆ ಭಾರತಕ್ಕೆ ಇನ್ನೂ ಬೇಕಾಗಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ (V Somanna) ಹೇಳಿದರು.

    ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬವನ್ನು ತುಮಕೂರಿನಲ್ಲಿ (Tumakuru) ಇಂದು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಮೋದಿ ಹುಟ್ಟುಹಬ್ಬ ಹಿನ್ನೆಲೆ  ಸೋಮಣ್ಣರ ನೇತೃತ್ವದಲ್ಲಿ ಪ್ರವಾಸಿ ಮಂದಿರದ ಅವರ ಕಚೇರಿ ಆವರಣದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದನ್ನೂ ಓದಿ: ತ್ರಿವಳಿ ತಲಾಖ್ ನಿಷೇಧದ ಬಳಿಕವೂ ಹೆಂಡತಿಗೆ ತಲಾಖ್ ನೀಡಿದ ಗಂಡ

    ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿತ್ತು. ಸ್ವತಃ ಸಚಿವ ಸೋಮಣ್ಣ ಬಿ.ಪಿ. ಹಾಗೂ ಶುಗರ್ ಚೆಕ್ ಮಾಡಿಸಿಕೊಂಡರು. ಅದಕ್ಕೂ ಮುನ್ನ ಕ್ಯಾತಸಂದ್ರದ ಸರ್ಕಾರಿ ಮಾದರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಮಾಡಿದರು. ತುಮಕೂರು ಲೋಕಸಭಾ ವ್ಯಾಪ್ತಿಯ 40 ಸಾವಿರ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಮಾಡಲಾಯಿತು. ಇದನ್ನೂ ಓದಿ: ಕೆಟ್ಟ ರಸ್ತೆಯಿಂದ ಬೆಂಗಳೂರು ತೊರೆಯಲು ಮುಂದಾದ 10,900 ಕೋಟಿ ಮೌಲ್ಯದ BlackBuck ಕಂಪನಿ

    ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ವಿ ಸೋಮಣ್ಣ, ಪ್ರಧಾನಿ ಮೋದಿ ಭಾರತವನ್ನು ವಿಶ್ವಗುರುವನ್ನಾಗಿ ಮಾಡಿಸಿದ್ದಾರೆ. ಮೋದಿ ಅವರ ನಾಯಕತ್ವ ಇಡೀ ವಿಶ್ವ ಒಪ್ಪಿಕೊಳ್ಳುತ್ತಿದೆ. ಕಳೆದ 11 ವರ್ಷದಲ್ಲಿ ಭಾರತ ಹಿಂದೆಂದೂ ಕಂಡಿರದಂತಹ ಅಭಿವೃದ್ಧಿ ಕಂಡಿದೆ ಎಂದರು. ಇದೇ ವೇಳೆ ಮೋದಿ ಅವರ ನಿವೃತ್ತಿ ಬಗ್ಗೆ ಮಾತನಾಡಿ, ಈಗಾಗಲೇ ಆರ್‌ಎಸ್‌ಎಸ್ ಮುಖ್ಯಸ್ಥರು ಅದರ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಮೋದಿ ಅವರ ಸೇವೆ ಇನ್ನೂ ದೇಶಕ್ಕೆ ಬೇಕು ಎಂದು ತಿಳಿಸಿದರು. ಇದನ್ನೂ ಓದಿ: 1 ಕೋಟಿ ನಗದು, 20 ಕೆಜಿ ಚಿನ್ನ ಸೇರಿ 21 ಕೋಟಿ ದರೋಡೆಯಾಗಿದೆ – ಎಸ್ಪಿ ಲಕ್ಷ್ಮಣ ನಿಂಬರಗಿ

  • ಧಾರವಾಡ-ಬೆಳಗಾವಿ ನೇರ ರೈಲು ಯೋಜನೆ ವಿಳಂಬಕ್ಕೆ ರಾಜ್ಯ ಸರ್ಕಾರ, ಸಂತೋಷ್‌ ಲಾಡ್‌ ಕಾರಣ: ಸೋಮಣ್ಣ

    ಧಾರವಾಡ-ಬೆಳಗಾವಿ ನೇರ ರೈಲು ಯೋಜನೆ ವಿಳಂಬಕ್ಕೆ ರಾಜ್ಯ ಸರ್ಕಾರ, ಸಂತೋಷ್‌ ಲಾಡ್‌ ಕಾರಣ: ಸೋಮಣ್ಣ

    ಬೆಳಗಾವಿ: ಧಾರವಾಡ-ಬೆಳಗಾವಿ (Dharwada -Belagavi) ನೇರ ರೈಲು ಯೋಜನೆ ವಿಳಂಬಕ್ಕೆ ರಾಜ್ಯ ಸರ್ಕಾರ, ಸಂತೋಷ್‌ ಲಾಡ್‌ (Santosh Lad) ಕಾರಣ ಎಂದು ರೈಲ್ವೇ ಖಾತೆಯ ರಾಜ್ಯ ಸಚಿವ ವಿ ಸೋಮಣ್ಣ (V Somanna) ದೂರಿದ್ದಾರೆ.

    ವಿವಿಧ ರೈಲ್ವೇ ಕಾಮಗಾರಿ ಶಂಕು ಸ್ಥಾಪನೆ ಕಾರ್ಯಕ್ರಮ ನೆರವೇರಿಸಲು ಬೆಳಗಾವಿಗೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಸಹಕಾರ ಇಲ್ಲದ ಕಾರಣ ಬೆಳಗಾವಿ-ಧಾರವಾಡ ನೇರ ರೈಲು ಯೋಜನೆ ವಿಳಂಬವಾಗುತ್ತಿದೆ ಎಂದು ಹೇಳಿದರು.

    ಹುಬ್ಬಳ್ಳಿಯಲ್ಲಿ ಇನ್ನೂ 45 ಎಕರೆ ಜಮೀನು ಸ್ವಾಧೀನ ಮಾಡಿಕೊಳ್ಳಬೇಕಿದೆ. ಈಗಾಗಲೇ ಎರಡು, ಮೂರು ಬಾರಿ ನಾನು ಮಾತಾಡಿದ್ದೇನೆ. ನಾನು ಎಷ್ಟು ಸಲ ಸಂಪರ್ಕ ಮಾಡಿದರೂ ಸಂತೋಷ್‌ ಲಾಡ್ ಸ್ಪಂದನೆ ಮಾಡುತ್ತಿಲ್ಲ. ನಾನು ಮಾತ್ರವಲ್ಲ ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ಅವರು ಕೂಡ ಮಾತಾಡಿದ್ದಾರೆ. ಇನ್ನೊಂದು ಬಾರಿ ನಾನೇ ಅವರ ಜೊತೆ ಮಾತನಾಡುತ್ತೇನೆ. ಬೆಳಗಾವಿಯಲ್ಲಿ ಈಗಾಗಲೇ ನೂರರಷ್ಟು ಭೂಸ್ವಾಧೀನವಾಗಿದೆ. ಸಂತೋಷ್‌ ಲಾಡ್‌ ಯಾಕೆ ಹಾಗೆ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಸ್ಪಂದನೆ ಮಾಡದೇ ಇದ್ದರೆ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಈ ಯೋಜನೆಗೆ ಈಗಾಗಲೇ 937ಕೋಟಿ ರೂ. ಹಣ ಮೀಸಲಿಡಲಾಗಿದೆ. ಸಂತೋಷ್ ಲಾಡ್‌ ಇನ್ನು ಬೆಳೆಯುತ್ತಿರುವ ವ್ಯಕ್ತಿ. ನಾನೇ ಅವರನ್ನು ಹುಡುಕಿಕೊಂಡು ಹೋಗುತ್ತೇನೆ. ಸಿದ್ದರಾಮಯ್ಯನವರ ಜೊತೆಗೆ ಮಾತಾಡಿದ್ದೇನೆ. ಧಾರವಾಡ ಜಿಲ್ಲಾಧಿಕಾರಿ ಜೊತೆ ಜೊತೆಗೆ ಹತ್ತಾರು ಬಾರಿ ಮಾತಾಡಿದ್ದೇನೆ. ಇಂದು ಧಾರವಾಡ ಡಿಸಿ ಸಿಕ್ಕಾಗ ನನ್ನದೇ ಭಾಷೆಯಲ್ಲಿ ಮಾತಾಡಿದ್ದೇನೆ ಎಂದರು.

    ಯಾವುದೇ ಕಾರಣಕ್ಕೂ ಯೋಜನೆಯನ್ನ ನಿಲ್ಲಿಸುವುದಿಲ್ಲ. ಬೇರೆ ರಾಜ್ಯದಲ್ಲಿ ರೈಲ್ವೇ ಯೋಜನೆಗಳಿಗೆ ಉತ್ತಮ ಸಹಕಾರ ನೀಡುತ್ತಿದ್ದರೆ ನಮ್ಮಲ್ಲಿ ಸರ್ಕಾರ ಯಾಕೆ ಹೀಗೆ ಮಾಡುತ್ತಿದೆ ಎನ್ನುವುದನ್ನು ರಾಜ್ಯ ಸರ್ಕಾರ ತಿಳಿಸಬೇಕು. ಕರ್ನಾಟಕದಲ್ಲಿ ಸರ್ಕಾರ ಅಭಿವೃದ್ಧಿ ಕೆಲಸದ ಕಡೆ ನೋಡುತ್ತಿಲ್ಲ. ಬೇರೆ ಕೆಲಸದಲ್ಲಿ ತಲ್ಲಿನರಾಗಿದ್ದಾರೆ ಎಂದು ಸಿಟ್ಟು ಹೊರಹಾಕಿದರು.

    ಇಂದು ಬೆಳಗಾವಿ, ಖಾನಾಪುರ ಸೇರಿ ಹಲವು ಕಡೆ ಮೇಲ್ಸೆತುವೆ ಕಾಮಗಾರಿ ಶಂಕು ಸ್ಥಾಪನೆ ಮಾಡಿದ್ದೇವೆ. ದೇಶದಲ್ಲಿ ರೇಲ್ವೆ ನಿಲ್ದಾಣಗಳ ಚಿತ್ರಣ ಬದಲಾಗುತ್ತಿದೆ. ಪ್ರಧಾನಿ ಕನಸಿನಂತೆ 2047 ವಿಕಸಿತ ಭಾರತದ ಕಡೆ ಹೆಜ್ಜೆ ಇಡುತ್ತಿದ್ದೇವೆ ಎಂದರು.

    ಸವದತ್ತಿ ರಾಮದುರ್ಗ ನಡುವಿನ ಹೊಸ ರೈಲಿಗೆ ಬೇಡಿಕೆಯಿದ್ದು ಪರಿಶೀಲನೆ ಮಾಡುತ್ತೇವೆ. ರೈಲು ಸಂಪರ್ಕ ಇಲ್ಲದ ರಾಜ್ಯಗಳಿಗೆ ರೈಲು ಸಂಪರ್ಕ ಕಲ್ಪಿಸಲಾಗುತ್ತಿದೆ. ಇಡೀ ದೇಶ ಬದಲಾವಣೆ ಮಾಡುವ ನಿಟ್ಟಿನಲ್ಲಿ ಪ್ರಧಾನಿ ಕೆಲಸ ಮಾಡ್ತಿದ್ದಾರೆ ಎಂದು ಸೋಮಣ್ಣ ಹೇಳಿದರು.

  • ಸೋನಿಯಾ ಗಾಂಧಿಗೆ ಧರ್ಮಸ್ಥಳದ ಬಗ್ಗೆ ಏನು ಗೊತ್ತಿದೆ? – ವಿ.ಸೋಮಣ್ಣ

    ಸೋನಿಯಾ ಗಾಂಧಿಗೆ ಧರ್ಮಸ್ಥಳದ ಬಗ್ಗೆ ಏನು ಗೊತ್ತಿದೆ? – ವಿ.ಸೋಮಣ್ಣ

    ಚಿಕ್ಕಬಳ್ಳಾಪುರ: ಸೋನಿಯಾ ಗಾಂಧಿ (Sonia Gandhi) ಅವರಿಗೆ ಧರ್ಮಸ್ಥಳದ (Dharmasthala) ಬಗ್ಗೆ ಏನು ಗೊತ್ತಿದೆ? ಅವರ ತಲೆಯಲ್ಲಿ ತಮ್ಮ ಮಗನನ್ನು ಪ್ರಧಾನಿ ಮಾಡಬೇಕು ಎನ್ನುವುದಷ್ಟೇ ಇದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ (V Somanna) ತಿಳಿಸಿದರು.

    ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದ್ದು, ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಅವರಿಗೆ ಮಹಿಳಾ ಸಂಘಟನೆಗಳು ಪತ್ರ ಬರೆದಿರುವ ವಿಚಾರವಾಗಿ ವಿ.ಸೋಮಣ್ಣ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಇದನ್ನು ಆ ಹೆಣ್ಣು ಮಕ್ಕಳಿಗೆ ಯಾರೋ ಹೇಳಿಕೊಟ್ಟು ಮಾಡಿಸಿರಬಹುದು. ಸಿದ್ದರಾಮಯ್ಯ ಮತ್ತು ಅವರ ತಂಡದ ಹೊಸ ಕಥೆಯಂತಿದೆ ಎಂದರು.ಇದನ್ನೂ ಓದಿ: ಕೊಂದವರು ಯಾರು? – ಧರ್ಮಸ್ಥಳ ಪ್ರಕರಣದ ಬಗ್ಗೆ ಮಹಿಳಾ ಸಂಘಟನೆಗಳಿಂದ ಸೋನಿಯಾ ಗಾಂಧಿಗೆ ಪತ್ರ

    ಡಿ.ಕೆ.ಶಿವಕುಮಾರ್ ಬುದ್ಧಿವಂತಿಕೆಗೆ ಬೇಸರ ಮಾಡಿಕೊಂಡಿರುವವರು ಹೀಗೆ ಮಾಡಿಸಿರಬಹುದು. ಇಂತಹದ್ದೆಲ್ಲವನ್ನೂ ಮಾಡುವುದೇ ಕಾಂಗ್ರೆಸ್‌ನವರ ಕುತಂತ್ರ. ಸೋನಿಯಾ ಗಾಂಧಿ ಅವರ ಬಗ್ಗೆ ಅಪಾರ ಗೌರವವಿದೆ. ಅವರು ಒಳ್ಳೆಯವರು. ನನ್ನ ಮಗ ರಾಹುಲ್ ಗಾಂಧಿ ಪ್ರಧಾನಿ ಆಗಬೇಕು ಎನ್ನುವ ತವಕದಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂದು ಹೇಳಿದರು.

  • ಧರ್ಮಸ್ಥಳ ಕೇಸ್‌ನಲ್ಲಿ ತಾವೇ ತೋಡಿದ ಹಳ್ಳಕ್ಕೆ ಬಿದ್ದರು, ಡಿಕೆಶಿ ಹೇಳಿಕೆ ವಾಪಸ್ ಪಡೆಯಲಿ: ವಿ.ಸೋಮಣ್ಣ

    ಧರ್ಮಸ್ಥಳ ಕೇಸ್‌ನಲ್ಲಿ ತಾವೇ ತೋಡಿದ ಹಳ್ಳಕ್ಕೆ ಬಿದ್ದರು, ಡಿಕೆಶಿ ಹೇಳಿಕೆ ವಾಪಸ್ ಪಡೆಯಲಿ: ವಿ.ಸೋಮಣ್ಣ

    – ನಾನು ರಾಜಕೀಯ ನಿವೃತ್ತಿ ತಗೋತೀನಿ ಅಂತಾ ಹೇಳಿಲ್ಲ: ಕೇಂದ್ರ ಸಚಿವ ಸ್ಪಷ್ಟನೆ

    ಬೆಂಗಳೂರು: ಧರ್ಮಸ್ಥಳ ಕೇಸ್ (Dharmasthala Case) ವಿಚಾರದಲ್ಲಿ ಕಾಂಗ್ರೆಸ್ ಅನವಶ್ಯಕವಾಗಿ ಮಾಡಿರುವ ತಪ್ಪಿಗಾಗಿ ಇನ್ನೊಬ್ಬರ ಮೇಲೆ ಗೂಬೆ ಕೂರಿಸ್ತಾರೆ. ತಾವೇ ತೋಡಿದ ಹಳ್ಳಕ್ಕೆ ಬಿದ್ದರು ಅಂತ ಕೇಂದ್ರ ಸಚಿವ ವಿ.ಸೋಮಣ್ಣ (V.Somanna) ಕಿಡಿಕಾರಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡಿದವರು ಅಲ್ಲ. ಧರ್ಮಸ್ಥಳಕ್ಕೆ ಇತಿಹಾಸ ಇದೆ. ಧಾರ್ಮಿಕ, ನಂಬಿಕೆ ಸ್ಥಳ. ಈ ಸ್ಥಳವನ್ನ ಅಸ್ಥಿರಗೊಳಿಸುವ ಪ್ರಯತ್ನ ಮಾಡ್ತಿದ್ದಾರೆ. ಯಾರೋ ಒಬ್ಬ ದೂರು ಕೊಟ್ಟ ಅಂತೇಳಿ ಕಾಂಗ್ರೆಸ್ ಎಸ್‌ಐಟಿ ಮಾಡಿದ್ರು. ಅವರಿವರ ಮಾತು ಕೇಳಿ ಎಸ್‌ಐಟಿ ಮಾಡಿದ್ರು ಅಂತಾ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ನಲ್ಲಿ ರಾಜಕೀಯ ಬೇಡ, ವರದಿ ಬರುವವರೆಗೆ ಕಾಯೋಣ – ಶಿವಾನಂದ ಪಾಟೀಲ್

    ಇದೇ ವೇಳೆ ಚಾಮುಂಡೇಶ್ವರಿ ದೇವಸ್ಥಾನದ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಅವರು ಈ ರೀತಿ ಮಾತನಾಡಬಾರದಿತ್ತು. ಇದು ಅಕ್ಷ್ಯಮ ಅಪರಾಧ. ಆರ್‌ಎಸ್‌ಎಸ್ ಬಗ್ಗೆ ಮಾತಾಡಿದಾಗ ಪರವಾಗಿಲ್ಲ ಶಿವಕುಮಾರ್ ಅಂದ್ಕೊಂಡಿದ್ವಿ. ರಾಣಿ ಪ್ರಮೋದದೇವಿ ಅವರು ಹೇಳಿರೋದು ಸರಿ ಇದೆ. ನಾವು ಮಸೀದಿಗೆ ಹೋಗಿ ನಮ್ಮದು ಅನ್ನೋದಕ್ಕೆ ಆಗುತ್ತಾ? ಚಾಮುಂಡೇಶ್ವರಿ ಭಾರತಕ್ಕೆ ದೇವತೆ. ಭಗವಂತ ನಿಮ್ಮನ್ನ ಮೆಚ್ಚುವುದಿಲ್ಲ. ಡಿಕೆಶಿ ಅವರ ಕುಟುಂಬವನ್ನ ಹತ್ತಿರದಿಂದ ನೋಡಿದ್ದೇನೆ. ಭಕ್ತಿ, ಪೂಜೆ ಮಾಡ್ತಾರೆ. ಡಿಕೆಶಿ ನಿಮ್ಮ ಹೇಳಿಕೆಯನ್ನ ವಾಪಸ್ ಪಡೆಯುವುದು ಒಳ್ಳೆಯದು ಎಂದು ಆಗ್ರಹಿಸಿದರು.

    ನಾನು ರಾಜಕೀಯ ನಿವೃತ್ತಿ ಅಂತೇಳಿಲ್ಲ. ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ ಅಂತೇಳಿದ್ದೇನೆ. ನಾನು ಆಕಸ್ಮಿಕವಾಗಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೆ. ಹಾಗಾಗಿ ಮುಂದೆ ತುಮಕೂರು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿಲ್ಲ ಎಂದಿದ್ದೇನೆ. ಅಲ್ಲದೆ ಸದಸ್ಯಕ್ಕೆ ರಾಜ್ಯಾಧ್ಯಕ್ಷ ಸ್ಥಾನ ಈಗ ಖಾಲಿ ಇಲ್ಲ. ಮೋದಿ ಅವರ ನೇತೃತ್ವದಲ್ಲಿ ಸೇವೆ ಮಾಡ್ತಾ ಇದೀನಿ, ಕೆಲಸ ಮಾಡ್ತೀನಿ ಅಂತೇಳಿದ್ದರು. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ನಲ್ಲಿ ಸರ್ಕಾರದ ನಡವಳಿಕೆಗೆ ಮಂಜುನಾಥ ಸ್ವಾಮಿಯೇ ಶಿಕ್ಷೆ ಕೊಡ್ತಾನೆ: ಹೆಚ್‌ಡಿಕೆ

    ಇನ್ನು ಕಾಂಗ್ರೆಸ್‌ಲ್ಲಿ ಕ್ರಾಂತಿಯೂ ಆಗುತ್ತೆ, ಕೆಲ ನಾಯಕರಿಗೆ ವಾಂತಿಯೂ ಆಗುತ್ತೆ. ಹೀಗೆ ಹೋಗ್ತಿದ್ರೆ ಕಾಂಗ್ರೆಸ್ ಅವರು ನಾಮಾವಶೇಷ ಆಗ್ತಾರೆ ಅಂತಾ ವ್ಯಂಗ್ಯವಾಡಿದರು.

  • ಸ್ವತಃ ದೇವರೇ ಹೇಳಿದ್ರೂ ಮತ್ತೆ ಚುನಾವಣೆಗೆ ನಿಲ್ಲಲ್ಲ: ಕೇಂದ್ರ ಸಚಿವ ವಿ.ಸೋಮಣ್ಣ ರಾಜಕೀಯ ನಿವೃತ್ತಿ ಮಾತು

    ಸ್ವತಃ ದೇವರೇ ಹೇಳಿದ್ರೂ ಮತ್ತೆ ಚುನಾವಣೆಗೆ ನಿಲ್ಲಲ್ಲ: ಕೇಂದ್ರ ಸಚಿವ ವಿ.ಸೋಮಣ್ಣ ರಾಜಕೀಯ ನಿವೃತ್ತಿ ಮಾತು

    ತುಮಕೂರು: ಕೇಂದ್ರ ಸಚಿವ ವಿ.ಸೋಮಣ್ಣ (V.Somanna) ರಾಜಕೀಯ ನಿವೃತ್ತಿ ಮಾತುಗಳನ್ನಾಡಿದ್ದಾರೆ. ಸ್ವತಃ ದೇವರೇ ಹೇಳಿದ್ರೂ ನಾನು ಮತ್ತೆ ಚುನಾವಣೆಗೆ ನಿಲ್ಲಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ತುಮಕೂರು ಜಿಲ್ಲೆಯ ಅಭಿವೃದ್ಧಿ ಬಗ್ಗೆ ವಿವರಿಸುತ್ತಿದ್ದ ಸೋಮಣ್ಣ, ಕೇಂದ್ರ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಹಾಗೂ ತುಮಕೂರು ಜಿಲ್ಲಾಭಿವೃದ್ಧಿ ವಿಚಾರದ ಬಗ್ಗೆ ಮಾತನಾಡುವಾಗ, ತುಮಕೂರು-ಬೆಂಗಳೂರು ನಾಲ್ಕು ಪಥದ ರೈಲ್ವೆ. ಸರ್ವೆ ಆಯ್ತು ಡಿಪಿಆರ್ ಶುರು ಮಾಡಿಸಿದ್ದೀನಿ. ಇದರ ಜೊತೆಗೆ ಎನ್‌ಹೆಚ್4ರ ತಿಮ್ಮರಾಜನಹಳ್ಳಿ ಅಭಿವೃದ್ಧಿ ಆಗುತ್ತದೆ. ಕೆಐಡಿಬಿಯವರ ಜೊತೆ ಮಾತನಾಡಿದ್ದೇನೆ ಎಂದರು. ಇದನ್ನೂ ಓದಿ: ಬೇಜವಾಬ್ದಾರಿ ಎಪಿಎಂಸಿ ಅಧಿಕಾರಿಗಳ ಅಮಾನತ್ತಿಗೆ ಸಚಿವ ಶಿವಾನಂದ ಪಾಟೀಲ್ ನಿರ್ದೇಶನ

    ಇದೆಲ್ಲಾ ಅಭಿವೃದ್ಧಿ ನಿಮಗಾಗಿ. ನಾನು ಇನ್ನು ಐವತ್ತು ವರ್ಷ ಇರ್ತೀನೇನಪ್ಪಾ.. ಇಲ್ಲ ಇರೋದಿಲ್ಲ. ನಾನು ಮತ್ತೇ ಎಲೆಕ್ಷನ್‌ಗೆ ನಿಂತ್ಕೊ ಅಂತ ದೇವ್ರು ಹೇಳಿದರೂ ಕೇಳುವವನಲ್ಲ. ನನ್ನ ಭಾವನೆ ಹಂಗಿದೆ ಎಂದು ತಿಳಿಸಿದರು.

    ಇದೆಲ್ಲಾ ಒಂದೊಂದು ಹೆಜ್ಜೆ ಗುರುತು ಎಂದು ಸೋಮಣ್ಣ ಹೇಳಿದ್ದಾರೆ. ಮಾತಿನ ಭರದಲ್ಲಿ ಹೇಳಿದರೋ ಅಥವಾ ಖಚಿತವಾಗಿ ಚುನಾವಣೆಗೆ ನಿಲ್ಲಲ್ವೋ ಗೊತ್ತಿಲ್ಲ ಎಂದು ಹೇಳಿದರು. ಇದನ್ನೂ ಓದಿ: ರಾಹುಲ್ ಗಾಂಧಿ ಭೇಟಿಯಾದ ಕರ್ನಾಟಕದ ಬೈಕ್ ಟ್ಯಾಕ್ಸಿ ಚಾಲಕರು

  • ಸದ್ಯದಲ್ಲೇ ಅರುಣ್ ರಾಜಕೀಯ ಪ್ರವೇಶ ಶತಸಿದ್ಧ – ಪುತ್ರನ ರಾಜಕೀಯ ಭವಿಷ್ಯ ನುಡಿದ ಸೋಮಣ್ಣ

    ಸದ್ಯದಲ್ಲೇ ಅರುಣ್ ರಾಜಕೀಯ ಪ್ರವೇಶ ಶತಸಿದ್ಧ – ಪುತ್ರನ ರಾಜಕೀಯ ಭವಿಷ್ಯ ನುಡಿದ ಸೋಮಣ್ಣ

    – ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪರೋಕ್ಷವಾಗಿ ಆಕಾಂಕ್ಷೆ ವ್ಯಕ್ತಪಡಿಸಿದ ಕೇಂದ್ರ ಸಚಿವ

    ಬೆಂಗಳೂರು: ತಮ್ಮ ಪುತ್ರ ಅರುಣ್ (Arun Somanna) ರಾಜಕೀಯ ಪ್ರವೇಶದ ಬಗ್ಗೆ ಕೇಂದ್ರ ಸಚಿವ ವಿ ಸೋಮಣ್ಣ (V Somanna) ಸುಳಿವು ಕೊಟ್ಟಿದ್ದಾರೆ.

    ಬೆಂಗಳೂರಿನಲ್ಲಿ ಮಾತಾಡಿದ ಅವರು, ಮುಂದಿನ ದಿನಗಳಲ್ಲಿ ಅರುಣ್ ರಾಜಕೀಯ ಪ್ರವೇಶ ಮಾಡುತ್ತಾರೆ. ಮುಂದೆ ಅವರಿಗೂ ಒಳ್ಳೆಯ ಭವಿಷ್ಯ ಸಿಗಲಿದೆ, ಅವರ ನಡವಳಿಕೆ ಅಷ್ಟು ಚೆನ್ನಾಗಿದೆ. ಅವರ ರಾಜಕೀಯ ಪ್ರವೇಶ ಆಗಿಯೇ ಆಗುತ್ತದೆ. ಬೆಂಗಳೂರೋ, ತುಮಕೂರೋ ಎಲ್ಲಿಂದ ರಾಜಕೀಯ ಪ್ರವೇಶ ಮಾಡುತ್ತಾರೆ ಗೊತ್ತಿಲ್ಲ. ಅದನ್ನೆಲ್ಲ ಪಕ್ಷ ಗಮನಿಸುತ್ತದೆ, ಪಕ್ಷ ತೀರ್ಮಾನ ಮಾಡುತ್ತದೆ ಎಂದು ಪುತ್ರನ ಹುಟ್ಟುಹಬ್ಬದ ದಿನವೇ ರಾಜಕೀಯ ಪ್ರವೇಶದ ಸಂದೇಶ ಕೊಟ್ಟರು. ಇದನ್ನೂ ಓದಿ: ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ಬರೆ; ಸಿಎಂ ಮಧ್ಯಪ್ರವೇಶಿಸಿ ಪರಿಹಾರ ಒದಗಿಸಲಿ: ಬೊಮ್ಮಾಯಿ ಆಗ್ರಹ

    ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಆಗುವ ಆಕಾಂಕ್ಷೆಯನ್ನು ಕೇಂದ್ರ ಸಚಿವ ವಿ ಸೋಮಣ್ಣ ಇದೇವೇಳೆ ಪರೋಕ್ಷವಾಗಿ ವ್ಯಕ್ತಪಡಿಸಿದರು. ಹೈಕಮಾಂಡ್‌ನವರಿಗೆ ಯಾರ‍್ಯಾರಿಗೆ ಯಾವ್ಯಾವ ಸ್ಥಾನ ಕೊಡಬೇಕು ಎಂದು ಗೊತ್ತಿದೆ. ಅಂಥ ಸಂದರ್ಭ ಬಂದಾಗ ವರಿಷ್ಠರು ಆ ತೀರ್ಮಾನ ತೆಗೆದುಕೊಳ್ಳುತ್ತಾರೆ. ಈ ವಿಷಯದಲ್ಲಿ ಯಾರ‍್ಯಾರು ಶಾಸಕರು ನನ್ನ ಪರ ಮಾತಾಡಿದ್ದಾರೋ ಅವರಿಗೆಲ್ಲ ನಾನು ಆಭಾರಿ ಆಗಿದ್ದೇನೆ. ಒಳ್ಳೆಯತನಕ್ಕೆ ಮಾತ್ರ ಬೆಲೆ ಸಿಗೋದು ಎಂದು ಹೇಳಿದರು. ಇದನ್ನೂ ಓದಿ: ಬೈರತಿ ಬಸವರಾಜ್ ವಿರುದ್ಧ ಕೊಲೆ ಕೇಸ್; ಸರ್ಕಾರದ ವಿರುದ್ಧ ಮುಗಿಬಿದ್ದ ಕೇಸರಿ ನಾಯಕರು

    ಇನ್ನು ಎರಡು ಕಡೆ ಸೋತವನನ್ನು ಮೂರನೇ ಕಡೆ ಟಿಕೆಟ್ ಕೊಟ್ಟರು. ತುಮಕೂರು ಜನ ನನ್ನ ಕೈಹಿಡಿದ್ರು, ಕೇಂದ್ರದಲ್ಲಿ ಮಂತ್ರಿಯಾಗಿದ್ದೇನೆ, ಜನರ ವಿಶ್ವಾಸಕ್ಕೆ ಋಣಿ. ಪಕ್ಷ ನಮ್ಮೆಲ್ಲರಿಗಿಂತ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು. ಪ್ರಧಾನಿಯವರು ನನಗೆ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ. ಪಕ್ಷದಲ್ಲಿ ಎಷ್ಟು ಬಣ ಇದೆಯೋ ಗೊತ್ತಿಲ್ಲ, ಯಾರೇ ಆಗಲೀ ನಾನೇ ಅನ್ನೋ ಮನಸ್ಥಿತಿ ಬಿಡಬೇಕು ಎಂದು ವಿಜಯೇಂದ್ರಗೆ (BY Vijayendra) ಪರೋಕ್ಷವಾಗಿ ಟಾಂಗ್ ಕೊಟ್ಟರು. ಇದನ್ನೂ ಓದಿ: ಕೊಲೆ ಕೇಸಲ್ಲಿ ಮೂರೂವರೆ ಗಂಟೆ ಪೊಲೀಸರಿಂದ ಗ್ರಿಲ್ – ಹೊರ ಬರ್ತಿದ್ದಂತೆ ಬೆಂಬಲಿಗರಿಂದ ಜೈಕಾರ

    ವಿಪಕ್ಷ ಶಾಸಕರಿಗೆ ಕಡಿಮೆ ಅನುದಾನ ಕೊಡುವ ಸರ್ಕಾರದ ನಡೆಗೆ ಸೋಮಣ್ಣ ಕಿಡಿ ಕಾರಿದ್ದಾರೆ. ಸಿದ್ದರಾಮಯ್ಯ ವಿರೋಧ ಪಕ್ಷದ ಶಾಸಕರಿಗೆ ಕಡಿಮೆ ಅನುದಾನ ಕೊಡುವಷ್ಟು ಸಣ್ಣತನ ತೋರಬಾರದು. ಸಿದ್ದರಾಮಯ್ಯ ತಮ್ಮ ನಿರ್ಣಯ ಪುನರ್ ಪರಿಶೀಲಿಸಲಿ, ಎಲ್ಲ ಶಾಸಕರಿಗೂ ಸಮಾನ ಅನುದಾನ ಕೊಡಲಿ, ಸಮಾನತೆ ಕಾಪಾಡಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: Uttar Pradesh | ಸ್ಕೂಲ್ ವ್ಯಾನ್‌ನಲ್ಲಿ 4 ವರ್ಷದ ಬಾಲಕಿ ಮೇಲೆ ರೇಪ್ – ಡ್ರೈವರ್ ಬಂಧನ

    ಸಿದ್ದರಾಮಯ್ಯ (Siddaramaiah) ಕೀಳು ಮಟ್ಟದ ತೀರ್ಮಾನ ತೆಗೆದುಕೊಂಡಿದ್ದಾರೆ. ನಾನು ದೊಡ್ಡ ರಾಜಕಾರಣಿ, ಎರಡು ಸಲ ಸಿಎಂ ಆಗಿದ್ದೀನಿ ಎಂದು ಜಂಬ ಕೊಚ್ಕೊಳ್ಳೋದನ್ನ ಸಿಎಂ ಬಿಡಬೇಕು. ತಾವೂ ಕೂಡ ಪಕ್ಷಪಾತಿ, ಅಧಿಕಾರಕ್ಕೆ ಅಂಟಿ ಕೂರುವವ ಎಂದು ಸಿದ್ದರಾಮಯ್ಯ ಸಾಬೀತು ಮಾಡಿದ್ದಾರೆ. ಖಜಾನೆ ಖಾಲಿ ಇದ್ದರೂ ಶಾಸಕರ ಮೂಗಿಗೆ ತುಪ್ಪ ಸವರಿದ್ದಾರೆ. ಎಲ್ಲ 224 ಶಾಸಕರ ಮೇಲೆ, ಜನರ ಮೇಲೆ ವಿಶ್ವಾಸ ಇರಲಿ. ಈ ಮೂಲಕ ಸಿದ್ದರಾಮಯ್ಯ ಖಳನಾಯಕ ಆಗಬಾರದು. ಸಿದ್ದರಾಮಯ್ಯನಂಥ ಬುದ್ಧಿವಂತರು ಅನುದಾನ ಕೊಡದಷ್ಟು ಸಣ್ಣತನ ತೋರಬಾರಬಾರದು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬೆಂಗಳೂರಿನ ಈ ಭಾಗದಲ್ಲಿ ಜು.21, 22ರಂದು ವಿದ್ಯುತ್‌ ವ್ಯತ್ಯಯ

  • ಸಿಎಂ ಬದಲಾವಣೆಗೆ ಸಿದ್ದರಾಮಯ್ಯ ಮೈಂಡ್ ಸೆಟ್ ಆಗಿದೆ: ಕೇಂದ್ರ ಸಚಿವ ಸೋಮಣ್ಣ ವ್ಯಂಗ್ಯ

    ಸಿಎಂ ಬದಲಾವಣೆಗೆ ಸಿದ್ದರಾಮಯ್ಯ ಮೈಂಡ್ ಸೆಟ್ ಆಗಿದೆ: ಕೇಂದ್ರ ಸಚಿವ ಸೋಮಣ್ಣ ವ್ಯಂಗ್ಯ

    ಚಾಮರಾಜನಗರ: ನಾಳೆಯ ಕಾಂಗ್ರೆಸ್ ಸಾಧನಾ ಸಮಾವೇಶ ಒಂದು ಡ್ರಾಮಾ ಎಂದು ಕೊಳ್ಳೇಗಾಲದಲ್ಲಿ ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ (V.Somanna) ವ್ಯಂಗ್ಯವಾಡಿದರು. ಹೈಕಮಾಂಡ್ ಹೇಳಿದಂತೆ ಕೇಳ್ತೀನಿ ಅಂತ ಸಿದ್ದರಾಮಯ್ಯ (Siddaramaiah) ಹೇಳಿ ಬಂದಿದ್ದಾರೆ. ಅವರು ಸಿಎಂ ಆದಾಗಲೇ ಒಪ್ಪಂದವಾಗಿದೆ ಎಂಬ ಮಾಹಿತಿ ನಮಗೂ ಇದೆ ಎಂದು ತಿಳಿಸಿದರು.

    ಆಡಳಿತ ಕುಸಿದಾಗ ಸಮಾವೇಶದ ಡ್ರಾಮಾ ಮಾಡ್ತಿದ್ದಾರೆ. ಹಿಂದಿನ ಸಿದ್ದರಾಮಯ್ಯ ಕಳೆದು ಹೋಗಿದ್ದಾರೆ. ರಾಜ್ಯ ಸರ್ಕಾರದಲ್ಲಿ ಹಣ ಇಲ್ಲ, ಪಾಪರ್ ಆಗಿದೆ. ಕೇಂದ್ರ ಸರ್ಕಾರ ನೀಡುವ ಅನುದಾನದಲ್ಲಿ ಕೆಲಸ ಮಾಡುತ್ತಿದೆ. ನಾವು ಕೊಡುವ ಯೋಜನೆ ಒಂದಾದರೆ, ಇವರು ಖರ್ಚು ಮಾಡುವುದೇ ಒಂದು. ಕಾಂಗ್ರೆಸ್‌‌ನಲ್ಲಿ ಹೈಕಮಾಂಡ್ ದೊಡ್ಡದು. ಏನು ಒಳ ಒಪ್ಪಂದ ಆಗಿದೆ ಅಂತಾ ಜ.26 ರೊಳಗೆ ಗೊತ್ತಾಗುತ್ತದೆ ಎಂದರು. ಇದನ್ನೂ ಓದಿ: ಇದು ಸಿಎಂ ಅಳಿವು-ಉಳಿವಿನ ಸಮಾವೇಶ, ಜನರ ಸಾವಿನ ಮೇಲೆ ಮೈಸೂರು ಸಾಧನಾ ಸಮಾವೇಶ – ಆರ್.ಅಶೋಕ್ ಲೇವಡಿ

    ನಮಗಿಂತ ಹೆಚ್ಚಾಗಿ ಸಿದ್ದರಾಮಯ್ಯನವರಿಗೆ ಒಪ್ಪಂದದ ಬಗ್ಗೆ ಗೊತ್ತಿದೆ. ಬದಲಾವಣೆಗೆ ಸಿದ್ದರಾಮಯ್ಯನವರ ಮೈಂಡ್ ಸೆಟ್ ಆಗಿದೆ ಎಂದು ಸೋಮಣ್ಣ ಹೇಳಿದರು.