Tag: ವಿ.ವಿ.ಎಸ್.ಲಕ್ಷ್ಮಣ್

  • NCA ಮುಖ್ಯಸ್ಥರಾಗಿ ಲಕ್ಷ್ಮಣ್ ಡಿ.13ಕ್ಕೆ ಪದಗ್ರಹಣ

    NCA ಮುಖ್ಯಸ್ಥರಾಗಿ ಲಕ್ಷ್ಮಣ್ ಡಿ.13ಕ್ಕೆ ಪದಗ್ರಹಣ

    ಮುಂಬೈ: ಭಾರತ ತಂಡದ ಮಾಜಿ ಆಟಗಾರ ವಿ.ವಿ.ಎಸ್ ಲಕ್ಷ್ಮಣ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‍ಸಿಎ) ಮುಖ್ಯಸ್ಥರಾಗಿ ಡಿಸೆಂಬರ್ 13 ರಂದು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಬಿಸಿಸಿಐ ವಾರ್ಷಿಕ ಸಭೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

    ಬಿಸಿಸಿಐ ವಾರ್ಷಿಕ ಮಹಾಸಭೆ ನಿನ್ನೆ ನಡೆದಿತ್ತು. ಈ ಸಭೆಯಲ್ಲಿ ಎನ್‍ಸಿಎ ಮುಖ್ಯಸ್ಥರ ಅಧಿಕಾರ ಸ್ವೀಕಾರ ಡಿ.13ರಂದು ನಡೆಯಲಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಸಭೆಯಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸದ ಬಗ್ಗೆ ಚರ್ಚೆ ನಡೆದಿದ್ದು, ಸರಣಿ ಮುಂದೂಡಲು ತೀರ್ಮಾನಿಸಲಾಗಿದೆ ಎಂದು ಆಪ್ತ ಮೂಲಗಳಿಂದ ಮಾಹಿತಿ ಹೊರಬಿದ್ದಿದೆ. ಇದನ್ನೂ ಓದಿ: ಬೌಲ್ಡಾದರೂ DRS ಮೊರೆ ಹೋಗಿ ಲೆಜೆಂಡ್ ಎನಿಸಿಕೊಂಡ ಅಶ್ವಿನ್

    ಬೆಂಗಳೂರಿನಲ್ಲಿ ಎನ್‍ಸಿಎ ಮುಖ್ಯಸ್ಥರಾಗಿ ದ್ರಾವಿಡ್ ಸೇವೆಸಲ್ಲಿಸುತ್ತಿದ್ದರು ಇದೀಗ ಅವರು ರಾಷ್ಟ್ರೀಯ ತಂಡಕ್ಕೆ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವುದರಿಂದ ತೆರವುಗೊಂಡಿರುವ ಎನ್‍ಸಿಎ ಮುಖ್ಯಸ್ಥ ಸ್ಥಾನಕ್ಕೆ ಲಕ್ಷ್ಮಣ್ ನೇಮಕಗೊಂಡಿದ್ದು, ಲಕ್ಷ್ಮಣ್ ಬಿಸಿಸಿಐ ಜೊತೆ ಒಪ್ಪಂದಕ್ಕೂ ಸಹಿ ಹಾಕಿದ್ದಾರೆ. ಡಿ.13 ರಂದು ಕೋಚಿಂಗ್ ಸಿಬ್ಬಂದಿಯೊಂದಿಗೆ ಬೆಂಗಳೂರಿಗೆ ಆಗಮಿಸಿ ಅಧಿಕಾರ ಪಡೆಯಲಿದ್ದಾರೆ ಎಂದು ಆಪ್ತ ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: 10 ವಿಕೆಟ್‌ ಕಿತ್ತು ಇತಿಹಾಸ ಸೃಷ್ಟಿಸಿದ ಭಾರತ ಮೂಲದ ಅಜಾಜ್‌ ಪಟೇಲ್‌

  • ದ್ರಾವಿಡ್ ಬಳಿಕ ಲಕ್ಷ್ಮಣ್ NCA ಮುಖ್ಯಸ್ಥ?

    ದ್ರಾವಿಡ್ ಬಳಿಕ ಲಕ್ಷ್ಮಣ್ NCA ಮುಖ್ಯಸ್ಥ?

    ಬೆಂಗಳೂರು: ರಾಹುಲ್ ದ್ರಾವಿಡ್ ಭಾರತ ತಂಡದ ಕೋಚ್ ಆಗಿ ನೇಮಕಗೊಂಡ ಬೆನ್ನಲ್ಲೇ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‍ಸಿಎ) ಮುಖ್ಯಸ್ಥ ಸ್ಥಾನ ತೆರವಾಗಿದೆ. ಈ ಸ್ಥಾನಕ್ಕೆ ಇದೀಗ ಭಾರತ ತಂಡದ ಮಾಜಿ ಆಟಗಾರ ವಿ.ವಿ.ಎಸ್ ಲಕ್ಷ್ಮಣ್ ಆಯ್ಕೆಯಾಗುವುದು ಬಹುತೇಕ ನಿಶ್ಚಿತ ಎಂದು ವರದಿಯಾಗಿದೆ.

    ಎನ್‍ಸಿಎ ಮುಖ್ಯಸ್ಥರಾಗಿ ಸೇವೆಸಲ್ಲಿಸುತ್ತಿದ್ದ ರಾಹುಲ್ ದ್ರಾವಿಡ್ ಅವರನ್ನು ರವಿಶಾಸ್ತ್ರಿ ಟೀಂ ಇಂಡಿಯಾ ಕೋಚ್ ಹುದ್ದೆಯ ಅಧಿಕಾರವದಿ ಮುಗಿದ ಬಳಿಕ ಬಿಸಿಸಿಐ ನೂತನ ಕೋಚ್ ಆಗಿ ದ್ರಾವಿಡ್ ಅವರನ್ನು ನೇಮಿಸಿದೆ. ಆ ಬಳಿಕ ಬೆಂಗಳೂರಿನಲ್ಲಿರುವ ನ್‍ಸಿಎಗೆ ಮೂತನ ಮುಖ್ಯಸ್ಥರಿಗಾಗಿ ಬಿಸಿಸಿಐ ಹುಡುಕಾಟದಲ್ಲಿತ್ತು. ಇದೀಗ ಬಿಸಿಸಿಐ ಲಕ್ಷ್ಮಣ್ ಅವರನ್ನು ಎನ್‍ಸಿಎ ಮುಖ್ಯಸ್ಥರನ್ನಾಗಿ ಅಂತಿಮಗೊಳಿಸಿದೆ ಎಂದು ಬಿಸಿಸಿಐ ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ಟಿ20 ವಿಶ್ವಕಪ್ ಗೆದ್ದ ಖುಷಿಗೆ ಬೂಟ್‍ನಲ್ಲಿ ಬಿಯರ್ ಸೇವಿಸಿದ ಆಸ್ಟ್ರೇಲಿಯಾ ಆಟಗಾರರು

    ಕಾಮೆಂಟರಿ ಮತ್ತು ಐಪಿಎಲ್‍ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಮೆಂಟರ್ ಆಗಿರುವುದರಿಂದಾಗಿ ಎನ್‍ಸಿಎ ಮುಖ್ಯಸ್ಥರಾಗಲು ಮೊದಲು ಲಕ್ಷ್ಮಣ್ ಒಪ್ಪಿಕೊಂಡಿರಲಿಲ್ಲ. ಆ ಬಳಿಕ ಈ ಹಿಂದೆ ಸಹ ಆಟಗಾರರಾಗಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಮಾತುಕತೆ ನಡೆಸಿ ಲಕ್ಷ್ಮಣ್ ಅವರನ್ನು ಒಪ್ಪಿಸಿದ್ದಾರೆ ಎಂದು ವರದಿಯಾಗಿದ್ದು, ಈ ಮೂಲಕ ದಿಗ್ಗಜ ಆಟಗಾರರು ಮತ್ತೆ ಭಾರತ ಕ್ರಿಕೆಟ್ ತಂಡಕ್ಕೆ ನೆರವಾಗಲು ಮುಂದಾಗಿದ್ದಾರೆ. ಇದನ್ನೂ ಓದಿ: ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ

  • ಪಂತ್ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿವಿಎಸ್ ಲಕ್ಷ್ಮಣ್

    ಪಂತ್ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿವಿಎಸ್ ಲಕ್ಷ್ಮಣ್

    ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿ.ವಿ.ಎಸ್.ಲಕ್ಷ್ಮಣ್ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ರಿಷಭ್ ಪಂತ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

    ನಾಲ್ಕನೇ ಕ್ರಮಾಂಕದಲ್ಲಿ ಯಶಸ್ಸು ಸಾಧಿಸುವಲ್ಲಿ ರಿಷಭ್ ಪಂತ್ ವಿಫಲರಾಗುತ್ತಿದ್ದಾರೆ. ಹೀಗಾಗಿ ಅವರನ್ನು ಆ ಕ್ರಮಾಂಕದಿಂದ ಕೆಳಕ್ಕೆ ಕಳುಹಿಸಬೇಕು. ಸ್ವತಂತ್ರವಾಗಿ ಆಡಲು ಬಿಟ್ಟರೆ ಪಂತ್ ಮತ್ತೆ ಫಾರ್ಮ್ ಗೆ ಹಿಂತಿರುಗುತ್ತಾರೆ ಎಂದು ವಿ.ವಿ.ಎಸ್ ಲಕ್ಷ್ಮಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಐಪಿಎಲ್ 2019ರ ಆವೃತ್ತಿಯಲ್ಲಿ ದೆಹಲಿ ಕ್ಯಾಪಿಟಲ್ಸ್ ಪರ ಆಡಿದ್ದ 21 ವರ್ಷದ ರಿಷಭ್ ಪಂತ್, ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 45ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಆದರೆ ದುರದೃಷ್ಟವಶಾತ್ ಪಂತ್ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಕ್ರಮಾಂಕದಲ್ಲಿ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.

    ರಿಷಭ್ ಪಂತ್ ಐದನೇ ಅಥವಾ ಆರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಬೇಕು. ಅಲ್ಲಿ ಪಂತ್ ದೊಡ್ಡ ಹೊಡೆತಗಳನ್ನು ಆಡಲು ಸ್ವಾತಂತ್ರ್ಯ ಪಡೆಯಬಹುದು. ನಾಲ್ಕನೇ ಸ್ಥಾನದಲ್ಲಿ ಹೇಗೆ ರನ್ ಗಳಿಸಬೇಕು ಎಂಬುದು ಪಂತ್‍ಗೆ ತಿಳಿದಿಲ್ಲ. ಹಾಗಾಗಿ ಪಂತ್ ಮೇಲೆ ಹೆಚ್ಚು ಒತ್ತಡ ಹೇರುವ ಅಗತ್ಯವಿಲ್ಲ. ಎಲ್ಲಾ ಆಟಗಾರರು ತಮ್ಮ ವೃತ್ತಿಜೀವನದಲ್ಲಿ ಕೆಟ್ಟ ಗಳಿಗೆಯನ್ನು ಹೊಂದಿದ್ದಾರೆ. ಸ್ಟ್ರೈಕ್‍ಗಳನ್ನು ತಿರುಗಿಸುವ ಮೂಲಕ ಅವರು ತಮ್ಮ ಆಟವನ್ನು ವೈವಿಧ್ಯಗೊಳಿಸುತ್ತಿದ್ದಾರೆ. ಆದರೆ ದುರದೃಷ್ಟವಶಾತ್ ಪಂತ್ ಶಾಟ್ ಆಯ್ಕೆಯು ಇನ್ನಿಂಗ್ಸ್ ನ ಆರಂಭದಲ್ಲಿ ಸರಿಯಾಗಿ ಸಿಗುತ್ತಿಲ್ಲ ಎಂದು ವಿವಿಎಸ್ ಲಕ್ಷ್ಮಣ್ ತಿಳಿಸಿದ್ದಾರೆ.

    ಅಯ್ಯರ್, ಹಾರ್ದಿಕ್ ಸರಿಯಾದ ಆಯ್ಕೆ:
    ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಶ್ರೇಯಸ್ ಅಯ್ಯರ್ ಮತ್ತು ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಸರಿಯಾದ ಆಯ್ಕೆ. ಇಬ್ಬರೂ ಅನುಭವಿ ಆಟಗಾರರು. ಪಂತ್ ಮಹೇಂದ್ರ ಸಿಂಗ್ ಧೋನಿ ಅವರ ಸ್ಥಾನವನ್ನು ತುಂಬಬೇಕಿದೆ. ಈಗ ಪಂತ್ ಮೇಲೆ ವಿಭಿನ್ನ ಒತ್ತಡವಿದೆ. ಹಾಗಾಗಿ ಐದನೇ ಮತ್ತು ಆರನೇ ಸ್ಥಾನದಲ್ಲಿ ಪಂತ್ ಅವರನ್ನು ಬ್ಯಾಟಿಂಗ್ ಮಾಡಲು ಕಳುಹಿಸಬೇಕು. ಇದರೊಂದಿಗೆ ಪಂತ್ ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳಲು ಅವಕಾಶ ಸಿಗುತ್ತದೆ ಎಂದು ಮಾಜಿ ಕ್ರಿಕೆಟಿಗ ಅಭಿಪ್ರಾಯಪಟ್ಟಿದ್ದಾರೆ.

    ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟಿ-20 ಸರಣಿಯ ಎರಡನೇ ಪಂದ್ಯದಲ್ಲಿ ಪಂತ್ 4 ರನ್ ಗಳಿಸಲು ಶಕ್ತವಾಗಿದರು. ಮೂರನೇ ಪಂದ್ಯದಲ್ಲಿಯೂ 19 ರನ್ ಗಳಿಸಿದ ಪಂತ್ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ಮರಳಿದರು. ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಕೂಡ ಪಂತ್ ಶಾಟ್ ಆಯ್ಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

  • ಕೆಟಿಆರ್ ಚಾಲೆಂಜ್ ಸ್ವೀಕರಿಸಿದ ಸಚಿನ್, ಲಕ್ಷ್ಮಣ್

    ಕೆಟಿಆರ್ ಚಾಲೆಂಜ್ ಸ್ವೀಕರಿಸಿದ ಸಚಿನ್, ಲಕ್ಷ್ಮಣ್

    ಮುಂಬೈ: ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡಲ್ಕೂರ್ ಮತ್ತು ವಿ.ವಿ.ಎಸ್.ಲಕ್ಮಣ್ ಇಬ್ಬರು ನಗರಾಭಿವೃದ್ಧಿ ಸಚಿವ ಕೆ.ಟಿ.ರಾಮರಾವ್ ನೀಡಿದ್ದ #HarithaHaram ಚಾಲೆಂಜ್ ಸ್ವೀಕರಿಸಿದ್ದಾರೆ. ಸಚಿನ್ ಮತ್ತು ಲಕ್ಷ್ಮಣ್ ತಮ್ಮ ಮನೆ ಅಂಗಳದಲ್ಲಿ ಮೂರು ಸಸಿಗಳನ್ನು ಹಚ್ಚುವ ಮೂಲಕ ಚಾಲೆಂಜ್ ಪೂರ್ಣಗೊಳಿಸಿದ್ದಾರೆ. ಈ ಚಾಲೆಂಜ್ ಮೂಲಕ ನಮ್ಮ ರಾಜ್ಯವನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡೋಣ ಎಂಬ ಸಂದೇಶವನ್ನು ನೀಡಿದ್ದಾರೆ.

    ಕೆಟಿ ರಾಮಾರಾವ್ ಚಾಲೆಂಜ್ ನೀಡಿದ 24 ಗಂಟೆಯಲ್ಲಿ ಸಚಿನ್ ಪೂರ್ಣ ಮಾಡಿ, ಟ್ವಿಟ್ಟರ್ ನಲ್ಲಿ ಮೂರು ಫೋಟೋಗಳನ್ನು ಹಾಕಿಕೊಂಡಿದ್ದಾರೆ. ಇತ್ತ ಲಕ್ಷ್ಮಣ್ ಸಹ ತಮ್ಮ ಟ್ವಿಟ್ಟರ್ ನಲ್ಲಿ ಮೂರು ಫೋಟೋಗಳನ್ನು ಹಾಕಿಕೊಂಡು, ನಾನು ಕೆಟಿಆರ್ ಚಾಲೆಂಜ್ ಪೂರ್ಣ ಮಾಡಿದ್ದೇನೆ. ನನ್ನ ಮನೆಯಂಗಳದ ತೋಟದಲ್ಲಿ ದಾಳಿಂಬೆ, ನೀರ್ ಸೇಬು ಮತ್ತು ಲಕ್ಷ್ಮಣ ಹಣ್ಣಿನ ಸಸಿಗಳನ್ನು ಹಚ್ಚಿದ್ದೇನೆ. ಈ ಚಾಲೆಂಜ್ ನ್ನು ನಾನು ವೀರೇಂದ್ರ ಸೆಹ್ವಾಗ್, ಮಿಥಾಲಿ ರಾಜ್, ಪಿ.ವಿ.ಸಿಂಧು ಅವರಿಗೆ ವರ್ಗಾವಣೆ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಈ ಕೆ.ಟಿ.ರಾಮರಾವ್ ಅವರಿಗೆ ಈ ಬಾಹುಬಲಿ ನಿರ್ದೇಶಕ ಎಸ್.ಎಸ್.ರಾಜಮೌಳಿ ಚಾಲೆಂಜ್ ನೀಡಿದ್ದರು. ಚಾಲೆಂಜ್ ಸ್ವೀಕರಿಸಿದ್ದ ಕೆಟಿಆರ್ ಸಹ ಮೂರು ಸಸಿಗಳನ್ನು ನಾಟಿ ಮಾಡಿದ್ದರು. ರಾಜಮೌಳಿ ಅವರಿಗೆ ನಿಜಾಮಾಬಾದ್ ಸಂಸದೆಯಾಗಿರುವ ಕವಿತಾ ರಾವ್ #ಹರಿತಾಹರಮ್ ಚಾಲೆಂಜ್ ನೀಡಿದ್ದರು. ಈ ಚಾಲೆಂಜ್ ಒಬ್ಬರಿಂದ ಒಬ್ಬರಿಗೆ ವರ್ಗಾವಣೆ ಮಾಡುವ ಮೂಲಕ ನಮ್ಮ ಪರಿಸರವನ್ನು ಹಸಿರಾಗಿಸೋಣ ಎಂಬ ಉದ್ದೇಶದಿಂದ ಆರಂಭಿಸಲಾಗಿದೆ.

    ಈ ಹಿಂದೆ ಕೇಂದ್ರ ಯುವಜನ ಮತ್ತು ಮತ್ತು ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರು ಮೇ 22 ರಂದು, “ನಾನು ಫಿಟ್ ಆದ್ರೆ ದೇಶ ಫಿಟ್ (#HumFitTohIndiaFit) ನೀವು ನಿಮ್ಮ ಫಿಟ್ ನೆಸ್ ಗೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋವನ್ನು ಶೇರ್ ಮಾಡಿ” ಎಂದು ಕೊಹ್ಲಿ, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ನಟ ಹೃತಿಕ್ ರೋಷನ್ ಅವರಿಗೆ ಫಿಟ್ ನೆಸ್ ಚಾಲೆಂಜ್ ಟ್ವೀಟ್ ಮಾಡಿದ್ದರು. ಈ ಚಾಲೆಂಜ್ ಎರಡು ತಿಂಗಳ ಹಿಂದೆ ಟ್ರೆಂಡ್ ಆಗಿತ್ತು. ಎಲ್ಲ ಸೆಲೆಬ್ರಟಿಗಳು ಚಾಲೆಂಜ್ ಸ್ವೀಕರಿಸುವ ಮೂಲಕ ತಮ್ಮ ಆಪ್ತರಿಗೆ ಟ್ಯಾಗ್ ಮಾಡುತ್ತಿದ್ದರು.