Tag: ವಿ.ಮನೋಹರ್

  • ದರ್ಶನ್ ಪ್ರಕರಣವನ್ನು ವಿಧಿಯಾಟ ಅಂತೀನಿ, ಸತ್ತವನಂತೂ ಒಳ್ಳೆಯವನಲ್ಲ: ವಿ.ಮನೋಹರ್

    ದರ್ಶನ್ ಪ್ರಕರಣವನ್ನು ವಿಧಿಯಾಟ ಅಂತೀನಿ, ಸತ್ತವನಂತೂ ಒಳ್ಳೆಯವನಲ್ಲ: ವಿ.ಮನೋಹರ್

    ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (Renukaswamy Murder Case) ನಟ ದರ್ಶನ್ (Actor Darshan) ಅರೆಸ್ಟ್ ಆಗಿದ್ದಾರೆ. ಇದೀಗ ದರ್ಶನ್ ಜೊತೆ ‘ಲಾಲಿಹಾಡು’ (Laali Haadu) ಚಿತ್ರದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದ ಸಂಗೀತ ನಿರ್ದೇಶಕ ವಿ.ಮನೋಹರ್ ದರ್ಶನ್ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರಕರಣವನ್ನ ವಿಧಿಯಾಟ ಎನ್ನುತ್ತೇನೆ. ಸತ್ತವನಂತೂ ಖಂಡಿತ ಒಳ್ಳೆಯವನಲ್ಲ ಎಂದು ಪಬ್ಲಿಕ್‌ ಟಿವಿಗೆ ವಿ. ಮನೋಹರ್ ಮಾತನಾಡಿದ್ದಾರೆ.

    ದರ್ಶನ್ ಪ್ರಕರಣವನ್ನು ವಿಧಿಯಾಟ ಅಂತೀನಿ. ಆಕಸ್ಮಿಕವಾಗಿ ಇದು ನಡೆದುಹೋಗಿದೆ. ಸತ್ತವನಂತೂ ಖಂಡಿತ ಒಳ್ಳೆಯವನಲ್ಲ. ಸಾವಿರಾರು ಹೆಣ್ಣು ಮಕ್ಕಳಿಗೆ ಕೆಟ್ಟ ಕೆಟ್ಟದಾಗಿ ಮೆಸೇಜ್ ಮಾಡಿರುವ ವಿಕೃತಕಾಮಿ ಎಂದು ಗುಡುಗಿದ್ದಾರೆ. ಅವನ ಪಾಪದ ಕೊಡ ತುಂಬಿದೆ ಅದಕ್ಕೆ ತಕ್ಕ ಶಿಕ್ಷೆ ಆಗಿದೆ. ಆದರೆ ಇದು ಪೊಲೀಸ್‌ನವರಿಂದ ಆಗಬೇಕಿತ್ತು. ಆದರೆ ದರ್ಶನ್ ಸರ್ ಬ್ಯಾಡ್ ಟೈಂ ಆಗಿರಬಹುದು. ಅವರು ಆ ಕಳಂಕದಿಂದ ಹೊರಬಂದು ಮೊದಲಿನಂತೆ ಸಿನಿಮಾದಲ್ಲಿ ಆಕ್ಟ್ ಮಾಡಲಿ ಎಂದು ವಿ. ಮನೋಹರ್ (Music Director V. Manohar) ಮಾತನಾಡಿದ್ದಾರೆ. ಇದನ್ನೂ ಓದಿ:ಕುವೆಂಪು ಕೃತಿಯಿಂದ ಪ್ರೇರಣೆ- ಯುವ ನಟನಿಗೆ ಸಿಂಪಲ್ ಸುನಿ ಆ್ಯಕ್ಷನ್ ಕಟ್

    ದರ್ಶನ್ ಹೀರೋ ಆಗುವ ಮೊದಲೇನೇ ‘ಜನುಮದ ಜೋಡಿ’ ಚಿತ್ರಕ್ಕೆ ಕ್ಯಾಮೆರಾ ಅಸಿಸ್ಟೆಂಟ್ ಆಗಿದ್ರಲ್ವಾ ಆವಾಗಲೇ ಪರಿಚಯ ಇತ್ತು. ಆಗಾಗ ಮುಹೂರ್ತ ಕಾರ್ಯಕ್ರಮಗಳಲ್ಲಿ ಸಿಗುತ್ತಾ ಇದ್ವಿ. ದರ್ಶನ್ ಬಹಳ ಸಹೃದಯಿ ಮನುಷ್ಯ. ಅನೇಕರಿಗೆ ಕಷ್ಟದಲ್ಲಿ ಸಹಾಯ ಮಾಡಿದ್ದಾರೆ. ‘ಲಾಲಿಹಾಡು’ ಸಿನಿಮಾ ಸಮಯದಲ್ಲಿ ನನಗೂ ಸಹಾಯ ಮಾಡಿದ್ದರು. ಕೆಲಸ ಮಾಡುವಾಗ ನನಗೆ ಡಯಟ್ ಮಾಡೋದು ಹೇಗೆ? ಯಾವ ವ್ಯಾಯಾಮ ಮಾಡಬೇಕು ಎಲ್ಲಾ ಹೇಳ್ತಿದ್ದರು. ಅದಾದ್ಮೇಲೆ ಮಧ್ಯೆ ಗ್ಯಾಪ್ ಆಯ್ತು ಎಂದು ವಿ.ಮನೋಹರ್ ಮಾತನಾಡಿದ್ದಾರೆ.

    ಇತ್ತೀಚೆಗೆ ಈ ಘಟನೆ ಆಗೋ ಮೂರು ದಿನದ ಮುಂಚೆ ನಾನು ಫೋನ್ ಮಾಡಿ ಕೇಳಿದೆ, ದರ್ಶನ್ ಸರ್ ‘ಲಾಲಿಹಾಡು’ ಆದ್ಮೇಲೆ ನಾವು ಮತ್ತೆ ಮಾಡಿಲ್ಲ ಅಂತ. ಖಂಡಿತ ಜೊತೆಯಲಿ ಕೆಲಸ ಮಾಡೋಣ ಎಂದರು. ಅದಾದ್ಮೇಲೆ ಮೂರು ದಿನದಲ್ಲಿ ಈ ಪ್ರಕರಣ ಆಯ್ತು. ಈ ಕಳಂಕದಿಂದ ಅವರು ಹೊರ ಬರಲಿ ಮತ್ತೆ ಸಿನಿಮಾಗಳಲ್ಲಿ ಮಾಡಲಿ. ಇಂಥಹ ದುರ್ಘಟನೆಗಳು ಯಾವತ್ತೂ ಆಗದೆ ಇರಲಿ ಎಂದು ಆಶಿಸುತ್ತೇನೆ ಎಂದು ದರ್ಶನ್ ಪ್ರಕರಣ ಕುರಿತು ಮನೋಹರ್ ಮಾತನಾಡಿದರು.

  • ‘ಮಧುರಕಾವ್ಯ’ ಆಡಿಯೋ ಬಿಡುಗಡೆ : ಇದು ವೈದ್ಯಲೋಕದ ಕಾಳಗದ ಕಥೆ

    ‘ಮಧುರಕಾವ್ಯ’ ಆಡಿಯೋ ಬಿಡುಗಡೆ : ಇದು ವೈದ್ಯಲೋಕದ ಕಾಳಗದ ಕಥೆ

    ಯುರ್ವೇದ ಚಿಕಿತ್ಸಾ ಪದ್ದತಿಗೆ ಅದರದೇ ಆದ ಮಹತ್ವವಿದೆ.  ಇತ್ತೀಚಿನ ಕಾಲಮಾನದಲ್ಲಿ ಬಂದಿರುವ ಅಲೋಪತಿಗೆ ಈಗ ಹೆಚ್ಚು ಜನ ಮೊರೆ ಹೋಗುತ್ತಿದ್ದಾರೆ. ಹಾಗಾಗಿ  ಆಯುರ್ವೇದದ ಪ್ರಾಮುಖ್ಯತೆಯನ್ನು  ಜನರಿಗೆ ತಿಳಿಸಲೆಂದೇ, ಸ್ವತಃ  ಆಯುರ್ವೇದ ವೈದ್ಯರಾದ  ಮಧುಸೂದನ್ ಅವರು ‘ಮಧುರಕಾವ್ಯ’ (Madhura Kavya) ಎಂಬ ಚಲನಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಜೊತೆಗೆ ಪ್ರಮುಖ ಪಾತ್ರದಲ್ಲೂ ಸಹ ಅಭಿನಯಿಸಿದ್ದಾರೆ. ಈ ಚಿತ್ರದ ನಾಲ್ಕು ಹಾಡುಗಳ (Audio) ಪ್ರದರ್ಶನ ಹಾಗೂ ಆಡಿಯೋ ಬಿಡುಗಡೆ ಸಮಾರಂಭ ಎಸ್‌ಆರ್‌ವಿ ಥಿಯೇಟರಿನಲ್ಲಿ ನೆರವೇರಿತು. ಸತೀಶ್ ಮೌರ್ಯ ಅವರ ಸಂಗೀತ ಸಂಯೋಜನೆಯ 4 ಹಾಡುಗಳು ಚಿತ್ರದಲ್ಲಿದ್ದು, ಹಿರಿಯ ಸಂಗೀತ ನಿರ್ದೇಶಕ ವಿ.ಮನೋಹರ್ (V. Manohar) ಅವರು ಕಾರ್ಯಕ್ರಮದಲ್ಲಿ  ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡದ ಕಾರ್ಯವನ್ನು ಪ್ರಶಂಸಿಸಿದರು.

     

    ಒಂದಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿದ ಮಧುಸೂದನ್ (Madhusudan) ಕ್ಯಾತನಹಳ್ಳಿ ಅವರು  ಮೊದಲಬಾರಿಗೆ ಈ ಚಿತ್ರಕ್ಕೆ  ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಬಿಡುಗಡೆಯ ಹಂತ ತಲುಪಿರುವ ಈ ಚಿತ್ರದಲ್ಲಿ  ಆಯುರ್ವೇದ ವೈದ್ಯ ಮತ್ತು ಅಲೋಪಥಿ ವೈದ್ಯ ಪದ್ದತಿಯ ನಡುವೆ ನಡೆಯುವ ಸಂಘರ್ಷದ ಕಥಾವಸ್ತುವನ್ನಿಟ್ಟುಕೊಂಡು ಮಧುಸೂದನ್ ಕ್ಯಾತನಹಳ್ಳಿ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮಧುರಕಾವ್ಯ ಚಿತ್ರದಲ್ಲಿ ನಾಯಕಿಯ ಪಾತ್ರವಿಲ್ಲ.  ನಾಯಕನ ತಾಯಿಯಾಗಿ ರಂಗಭೂಮಿ ನಟಿ ಯಶೋಧ ಅವರು ಕಾಣಿಸಿಕೊಂಡಿದ್ದು, ಖಳನಾಯಕನಾಗಿ ರಾಜಕುಮಾರ್ ನಾಯಕ್ ನಟಿಸಿದ್ದಾರೆ. ಇದನ್ನೂ ಓದಿ:Exclusive: ಅರ್ಜುನ್ ಸರ್ಜಾ ನಿರ್ದೇಶನದ ಚಿತ್ರದಲ್ಲಿ ಉಪ್ಪಿ ಅಣ್ಣನ ಮಗ ನಟಿಸುತ್ತಾರಾ? ನಿರಂಜನ್ ಸ್ಪಷ್ಟನೆ

        

    ನಾಯಕ ಕಂ ನಿರ್ದೇಶಕ ಮಧುಸೂದನ್ ಮಾತನಾಡುತ್ತ  ಈ ಸಿನಿಮಾ ನನ್ನ ಕನಸು, ಬಿಜಿನೆಸ್‌ಗಾಗಿ ನಾವು ಈ ಸಿನಿಮಾ ಮಾಡಿಲ್ಲ. ಸಮಾಜಕ್ಕೊಂದು ಸಂದೇಶ ಕೊಡಬೇಕೆಂದು ಚಿತ್ರ ನಿರ್ಮಿಸಿದ್ದೇವೆ. ಹಣ ಗಳಿಸಬೇಕೆಂದರೆ ನಾನು ಸಿನಿಮಾನೇ ಮಾಡಬೇಕಾಗಿಲ್ಲ. ಈವರೆಗೆ  ಸಾವಿರಾರು ಜನ ರೋಗಿಗಳನ್ನು ನೋಡಿದ್ದೇನೆ. ನಾನು ಆ ರೋಗಿಗಳಿಗೆ ಮಾಡ್ತಿರುವ ಸೇವೆಯೇ ನಾನೀ ಸಿನಿಮಾ ಮಾಡಲು ಸ್ಪೂರ್ತಿ. ಬಹುತೇಕ ಖಾಯಿಲೆಗಳಿಗೆ ನಮ್ಮ ಹಿತ್ತಲಲ್ಲೇ ಔಷಧಿಯಿದೆ.  ಹಿತ್ತಲ ಗಿಡವನ್ನು ಹೇಗೆ ಬಳಸಿಕೊಳ್ಳಬೇಕು. ಅಲ್ಲದೆ ಒತ್ತಡದಿಂದಲೇ ರೋಗಗಳು ಹೇಗೆ ಹೆಚ್ಚಾಗುತ್ತವೆ ಎಂಬುದನ್ನು ಚಿತ್ರದಲ್ಲಿ ಹೇಳಿದ್ದೇವೆ.  ಅಲೋಪಥಿ ವೈದ್ಯರು ಹಣದಾಸೆಗಾಗಿ ನಾಟಿ ವೈದ್ಯ ಪದ್ದತಿಯನ್ನು ಹೇಗೆಲ್ಲಾ ಹತ್ತಿಕ್ಕುತ್ತಿದ್ದಾರೆ, ಪಾರಂಪರಿಕವಾಗಿ ಜನಸೇವೆ ಮಾಡಿಕೊಂಡು ಬಂದಿರುವ ನಾಟಿ ವೈದ್ಯರನ್ನು ಯಾವರೀತಿ  ತುಳಿಯುತ್ತಿದ್ದಾರೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ. ಅನಾದಿಕಾಲದಿಂದ ಜನರ ಆರೋಗ್ಯವನ್ನು  ಸಂರಕ್ಷಿಸುತ್ತ ಬಂದಿರುವ ಆಯುರ್ವೇದವನ್ನು ಉಳಿಸಬೇಕು ಎನ್ನುವುದೇ ನಮ್ಮ ಮೂಲ ಉದ್ದೇಶ. ಒಂದು ಚಿತ್ರ ಮಾಡುವಾಗ ಕಥೆಯೇ ಅದರ ನಾಯಕನಾಗಿರುತ್ತಾನೆ. ಜನರಿಗೆ ನಿಸ್ವಾರ್ಥದಿಂದ ಸೇವೆ ಸಲ್ಲಿಸುವ ಒಬ್ಬ ನಾಟಿ ವೈದ್ಯನಾಗಿ ನಾನು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಲಾಭಿ ನಡೆಸುವವರ ವಿರುದ್ಧ ಹೋರಾಟ ನಡೆಸಿ ನಾಟಿ ವೈದ್ಯ ಪದ್ಧತಿಯನ್ನು ರಕ್ಷಿಸುವಂಥ ಪಾತ್ರವದು. ಚಿತ್ರದಲ್ಲಿ ತಾಯಿ, ಮಗನ ನಡುವಿನ ಪ್ರೀತಿ ವಾತ್ಸಲ್ಯವಿದೆ. ಸಮಾಜಕ್ಕೆ ಒಂದು ಉತ್ತಮ ಮೆಸೇಜ್ ಕೂಡ ಚಿತ್ರದಲ್ಲಿದೆ.   ಈ ಚಿತ್ರದ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಸಹ ನಾನೇ ವಹಿಸಿಕೊಂಡಿದ್ದೇನೆ. ಉಡುಪಿ, ಮಂಗಳೂರು, ಶಿರಸಿ ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ. ಹಳ್ಳಿಯ ನಾಟಿವೈದ್ಯರ ಕುಟುಂಬವೊಂದು ಮೆಡಿಕಲ್ ಲಾಭಿಯ ವಿರುದ್ಧ ಹೋರಾಡುವ ಕಥೆಯಿದು. ಚಿತ್ರವನ್ನು ಸದ್ಯದಲ್ಲೇ ಬಿಡುಗಡೆ  ಮಾಡುವ ಯೋಜನೆಯಿದೆ ಎಂದು ಹೇಳಿದರು.

     

    ಸಂಗೀತ ನಿರ್ದೇಶಕ  ಸತೀಶ್ ಮೌರ್ಯ ಮಾತನಾಡಿ, ನಾನು ಹಂಸಲೇಖ ದೇಸಿ ಕಾಲೇಜಿನಲ್ಲಿ ಮನೋಹರ್ ಅವರನ್ನು ಹಲವು ಬಾರಿ ಭೇಟಿ ಮಾಡಿದ್ದೇನೆ. ಈ ಚಿತ್ರದಲ್ಲಿ 3 ಹಾಡುಗಳು ಹಾಗೂ 4 ಬಿಟ್ ಸಾಂಗ್ ಇದ್ದು, ದೇಸೀ ಶೈಲಿಯ ವಾದ್ಯಗಳನ್ನೇ ಬಳಸಿ ಮ್ಯೂಸಿಕ್ ಮಾಡಿದ್ದೇನೆ. ರಾಜೇಶ್ ಕೃಷ್ಣನ್, ಮಧು ಬಾಲಕೃಷ್ಣನ್, ಚಿತ್ರಾ ಅವರು ಹಾಡಿದ್ದಾರೆ ಎಂದು ಹೇಳಿದರು. ನಂತರ ರಾಜಕುಮಾರ್ ನಾಯಕ್, ನಾಚಪ್ಪ, ಹಾಗೂ ಬಸವರಾಜ ಮುಗಳಖೋಡ ಅವರು  ಚಿತ್ರದ ಕುರಿತಂತೆ ಮಾತನಾಡಿದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ವಿ.ಮನೋಹರ್ ಸಂಗೀತದ ಚುನಾವಣೆ ಹಾಡಿಗೆ ಉಪೇಂದ್ರ ಗಾಯಕ

    ವಿ.ಮನೋಹರ್ ಸಂಗೀತದ ಚುನಾವಣೆ ಹಾಡಿಗೆ ಉಪೇಂದ್ರ ಗಾಯಕ

    ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ  ರಾಜಕೀಯ ವಿಡಂಬನಾತ್ಮಕ ಕಥಾಹಂದರ ಹೊಂದಿರುವ ಚಿತ್ರ ದರ್ಬಾರ್ (Darbar). ಸತೀಶ್ ನಾಯಕನಾಗಿ ಕಾಣಿಸಿಕೊಂಡಿರುವ  ಈ ಚಿತ್ರಕ್ಕೆ  ವಿ.ಮನೋಹರ್ (V. Manohar) ಆಕ್ಷನ್ ಕಟ್ ಹೇಳಿದ್ದಾರೆ. ಈಚೆಗೆ ನಡೆದ  ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಉಪೇಂದ್ರ (Upendra)ದನಿಯಾಗಿರುವ ಚುನಾವಣೆ (Election) ಪ್ರಕ್ರಿಯೆಯನ್ನು ವಿಶ್ಲೇಶಿಸುವ ವಿಶೇಷ ಹಾಡಿನ (Song) ಲಿರಿಕಲ್ ವೀಡಿಯೋವನ್ನು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮ ಹರೀಶ್ ರಿಲೀಸ್ ಮಾಡಿದರು.

    ಈ ವೇಳೆ ಮಾತನಾಡಿದ ನಟ ಸತೀಶ್ ‘ನಮ್ಮ  ಚಿತ್ರದಲ್ಲಿರುವ 3 ಹಾಡುಗಳೂ ವಿಶೇಷವಾಗಿವೆ. ಮೊದಲ ಹಾಡು ‘ಯಾರಿವ ಯಾರಿವ’ ನಾಯಕನ ಹಿನ್ನೆಲೆ ಹೇಳುವ ಸಾಂಗ್ ಆಗಿದ್ದು ಮನೋಹರ್ ಅವರೇ ಇದಕ್ಕೆ ಸಾಹಿತ್ಯ ಬರೆದಿದ್ದಾರೆ. 2ನೇ ಹಾಡು ಮೆಲೋಡಿ. ಇದಕ್ಕೆ ಜಯಂತ್ ಕಾಯ್ಕಿಣಿ ಸಾಹಿತ್ಯ ರಚಿಸಿದ್ದಾರೆ. ಇನ್ನು ಮೂರನೇ ಹಾಡು ಎಲೆಕ್ಷನ್ ರಾಜಕೀಯದ ಬಗ್ಗೆ ವಿವರಿಸುವುದಾಗಿದೆ. ಇದನ್ನು ನಾನೇ ಬರೆದಿದ್ದೇನೆ. ಅದರಲ್ಲಿ ತುಂಬಾನೇ ವಿಷಯಗಳು ಅಡಗಿವೆ.  ನಾನು ಪ್ರತಿ ಲೈನ್ ಬರೆದಾಗಲೂ ಮನೋಹರ್ ಅವರು ಚೆನ್ನಾಗಿದೆ ಎಂದು ಪ್ರೋತ್ಸಾಹಿಸುತ್ತಾ ಬಂದರು. ಇರುವ ಸಾಹಿತ್ಯಕ್ಕೆ ಟ್ಯೂನ್ ಹಾಕುವುದು ತುಂಬಾ  ಚಾಲೆಂಜಿಂಗ್ ಕೆಲಸ ಅಂತ ನನಗೂ ಗೊತ್ತು. ಅದನ್ನೆಲ್ಲ ಮನೋಹರ್ ಅವರು ನಿಭಾಯಿಸಿದ್ದಾರೆ,  ನಾನು ಹೊರಗಿನ ಸಿಂಗರ್ ಕರೆಸೋಣ ಎಂದಾಗ ಮನೋಹರ್ ಅವರು ಬೇಡ, ನಮ್ಮವರಿಂದಲೇ ಹಾಡಿಸೋಣವೆಂದು ಹೇಳಿದರು. ಉಪೇಂದ್ರ ಅವರ ಹಾಡಂತೂ ಅದ್ಭುತವಾಗಿ ಬಂದಿದೆ’ ಎಂದರು. ಇದನ್ನೂ ಓದಿ:‘ಕೆಜಿಎಫ್’ ರೈಟರ್ ಸಿನಿಮಾ ಮೂಲಕ ಕನ್ನಡಕ್ಕೆ ಬಂದ ಬೋಲ್ಡ್ ಬ್ಯೂಟಿ

    ನಾಯಕಿ ಜಾಹ್ನವಿ ಮಾತನಾಡಿ ‘ಈ ಚಿತ್ರದಲ್ಲಿ ನಾನು ಅಪ್ಪರ್ ಮಿಡಲ್ ಕ್ಲಾಸ್ ಹುಡುಗಿಯ ಪಾತ್ರ ಮಾಡಿದ್ದೇನೆ. ಆಕೆ ಸೈಕಾಲಜಿ ಸ್ಟೂಡೆಂಟ್. ರಜೆಗೆಂದು ಊರಿಗೆ ಬಂದಾಗ ಹೀರೋ ಜತೆ  ಸ್ನೇಹ ಆಗಿ ಪ್ರೀತಿ ಬೆಳೆಯುತ್ತದೆ. ಲೈಫ್ ಪಾರ್ಟ್ನರ್ ಆಗಿ ನಾಯಕನ ಗುರಿ ಸಾಧಿಸಲು ಬೆನ್ನೆಲುಬಾಗಿ ನಿಲ್ಲುತ್ತೇನೆ ‘ಎಂದರು.

    ನಿರ್ದೇಶಕ ವಿ.ಮನೋಹರ್ ಮಾತನಾಡಿ,  ‘ಸತೀಶ್ ತಮ್ಮ ಚಿತ್ರವೊಂದಕ್ಕೆ ಹಾಡು ಬರೆಸಲು ಬಂದಾಗ ಸ್ನೇಹಿತರಾದರು. ಇದಕ್ಕೂ  ಮುಂಚೆ ನಿರ್ದೇಶನದ ಪ್ರಯತ್ನಗಳು ನಡೆಯುತ್ತಲೇ ಇತ್ತು. ಆಗಲಿಲ್ಲ, ಇವತ್ತಿನ ರಾಜಕೀಯವನ್ನು ವ್ಯಂಗ್ಯವಾಗಿ ಹೇಳುವ ಕಥೆಯಿದು. ನನಗೂ ಹಳ್ಳಿ ರಾಜಕೀಯದ ಬಗ್ಗೆ  ಆಸಕ್ತಿಯಿತ್ತು. ಹಾಗಾಗಿ  ನಾನು ನಿರ್ದೇಶನ ಮಾಡಲು ಒಪ್ಪಿಕೊಂಡೆ. ಮದ್ದೂರು ಬಳಿಯ ಹಳ್ಳಿಯೊಂದರಲ್ಲಿ  ಈ ಚಿತ್ರಕ್ಕೆ  ಶೂಟ್ ಮಾಡಿದಾಗ ಅಲ್ಲಿನ ಜನರೂ ನಮಗೆ ತುಂಬಾ ಸಹಕಾರ ನೀಡಿದರು’ ಎಂದರು.

    ಹಿರಿಯ ಕಲಾವಿದರಾದ ಎಂ.ಎನ್.ಲಕ್ಷ್ಮಿದೇವಿ, ಅಶೋಕ್, ಸಾಧುಕೋಕಿಲ, ನವೀನ್ ಡಿ, ಪಡೀಲ್, ಹುಲಿ ಕಾರ್ತೀಕ್, ಕಾಮಿಡಿ ಸಂತು ಹಾಗೂ ತ್ರಿವೇಣಿ ಹೀಗೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ  ಅಭಿನಯಿಸಿದ್ದಾರೆ.  ಮಾಸ್ ಮಾದ, ವಿನೋದ್ ಅವರ ಸಾರಥ್ಯದ 3 ಸಾಹಸ ದೃಶ್ಯಗಳು ಈ ಚಿತ್ರದಲ್ಲಿವೆ. ಮಂಡ್ಯ, ಮದ್ದೂರು ಹಾಗೂ ಕೋಲಾರ ಸಮೀಪದ ಮಾಲೂರಿನಲ್ಲಿ  ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

  • 23 ವರ್ಷಗಳ ನಂತರ ನಿರ್ದೇಶನಕ್ಕಿಳಿದ ಸಂಗೀತ ನಿರ್ದೇಶಕ ಮನೋಹರ್

    23 ವರ್ಷಗಳ ನಂತರ ನಿರ್ದೇಶನಕ್ಕಿಳಿದ ಸಂಗೀತ ನಿರ್ದೇಶಕ ಮನೋಹರ್

    ಮೆಲೋಡಿ ಹಿಟ್ ಸಿನಿಮಾಗಳ ಸಂಗೀತ ನಿರ್ದೇಶಕ ವಿ.ಮನೋಹರ್ (V. Manohar) ಬಹಳ ದಿನಗಳ ನಂತರ ನಿರ್ದೇಶನ ಮಾಡಿರುವ ಚಿತ್ರ ದರ್ಬಾರ್ (Darbar), ಸತೀಶ್ (Satish) ಕಥೆ ಬರೆದು ನಿರ್ಮಾಣದ ಜೊತೆಗೆ ನಾಯಕನಾಗೂ ನಟಿಸಿರುವ ಈ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಮಂಗಳವಾರ ಇದರ ಮೇಕಿಂಗ್ ವಿಡಿಯೋ ಪ್ರದರ್ಶನ  ಹಾಗೂ ಪತ್ರಿಕಾಗೋಷ್ಠಿ ಎಸ್.ಆರ್.ವಿ. ಥಿಯೇಟರಿನಲ್ಲಿ ನಡೆಯಿತು. ಇಲ್ಲಿ ಚಿತ್ರದ ವಿಶೇಷತೆಗಳ ಕುರಿತು ಚಿತ್ರತಂಡ ಮಾಹಿತಿಗಳನ್ನು ಹಂಚಿಕೊಂಡಿತು.

    ಈ ಸಂದರ್ಭದಲ್ಲಿ ಮಾತನಾಡಿದ ಮನೋಹರ್, ಸುಮಾರು 23 ವರ್ಷಗಳ ನಂತರ ನಾನು ನಿರ್ದೇಶನಕ್ಕೆ ಕೈ ಹಾಕಿದ್ದೇನೆ. ಅದಕ್ಕೆ ಸತೀಶ್ ಅವರೇ ಕಾರಣ. ನಾನು ಇಂದ್ರಧನುಷ್ ಚಿತ್ರ ಮಾಡಿದ ನಂತರ ಏನೇನೋ ಆಯಿತು. ಅಲ್ಲದೆ ನಾನೂ ಸೀರಿಯಲ್, ಸಂಗೀತ ನಿರ್ದೇಶನ ಅಂತ ಬ್ಯುಸಿಯಾಗ್ತಾ ಹೋದೆ. ಸಿನಿಮಾ ಶುರು ಮಾದ್ಬೇಕಂತ ಬಂದವರು ನಂತರ ಮುಂದುವರಿಯುತ್ತಲೇ ಇರಲಿಲ್ಲ,  ಸಿನಿಮಾರಂಗಕ್ಕೆ ಬರೋಕೂ ಮುನ್ನ ನಾನು ಕೆಲ ದಿನಪತ್ರಿಕೆಗಳಿಗೆ ಕಾರ್ಟೂನ್ ಬರೆಯುತ್ತಿದ್ದೆ. ಆಗಿಂದಲೇ ನಾನು ರಾಜಕೀಯದ ಬಗ್ಗೆ  ತಿಳಿದುಕೊಂಡಿದ್ದೆ. ಇದೇ ಕಂಟೆಂಟ್ ಇಟ್ಟುಕೊಂಡು ಸಿನಿಮಾ ಮಾಡಬೇಕು ಎಂದುಕೊಡಿದ್ದೆ. ಸತೀಶ್ ಅವರು ನನಗೆ ಹಿಂದೆ ದಿಲ್ದಾರ್   ಟೈಮ್‌ನಲ್ಲಿ ಸ್ನೇಹಿತರಾಗಿದ್ದರು. ಮೊನ್ನೆ ಮತ್ತೆ ಸಿಕ್ಕಾಗ ಅವರೊಂದು ಕಥೆ ಹೇಳಿದರು. ಅದರಲ್ಲೂ ಪಾಲಿಟಿಕ್ಸ್ ಇತ್ತು. ತುಂಬಾ ಚೆನ್ನಾಗಿ ಕಥೆ ಮಾಡಿದ್ದರು. ಇವತ್ತಿನ ರಾಜಕೀಯವನ್ನು ವ್ಯಂಗ್ಯವಾಗಿ ಹೇಳುವ ಸಬ್ಜೆಕ್ಟ್  ಎಂದು ದರ್ಬಾರ್ ಚಿತ್ರವನ್ನು ಆರಂಭಿಸಲು ಸೃಷ್ಟಿಯಾದ ಸಂದರ್ಭವನ್ನು ನಿರ್ದೇಶಕ ವಿ. ಮನೋಹರ್ ವಿವರಿಸಿದರು. ಇದನ್ನೂ ಓದಿ: ʻಪೊನ್ನಿಯಿನ್ ಸೆಲ್ವನ್-2ʼ ಟ್ರೈಲರ್ ರಿಲೀಸ್: ಚೋಳಾ ಸಾಮ್ರಾಜ್ಯಕ್ಕಾಗಿ ಮುಂದುವರೆದ ಹೋರಾಟ

    ಮಾತು ಮುಂದುವರೆಸಿದ ಅವರು, ಚಿತ್ರವನ್ನು ಶುರು ಮಾಡುವ ವೇಳೆಗೆ ಕೋವಿಡ್ ಬಂತು. ಎರಡನೇ ಅಲೆಯ ನಂತರ ಚಿತ್ರವನ್ನು ಕಂಪ್ಲೀಟ್ ಮಾಡಿದೆವು. ಮದ್ದೂರು ಬಳಿಯ ಹಳ್ಳಿಯೊಂದರಲ್ಲಿ   ಚಿತ್ರದ ಬಹುತೇಕ ಶೂಟಿಂಗ್ ನಡೆದಿದೆ.‌ ಅಲ್ಲಿಯ ಜನರೂ ಅಷ್ಟೆ ಚೆನ್ನಾಗಿ ಸಹಕಾರ  ನೀಡಿದರು. ಹಿರಿಯ ಕಲಾವಿದರಾದ ಎಂ.ಎನ್.ಲಕ್ಷ್ಮಿದೇವಿ, ಅಶೋಕ್, ಸಾಧು ಕೋಕಿಲ, ನವೀನ್ ಡಿ, ಪಡೀಲ್, ಹುಲಿ ಕಾರ್ತೀಕ್ ಹೀಗೆ ಸಾಕಷ್ಟು ಜನ ಅಭಿನಯಿಸಿದ್ದಾರೆ. ಜಾಹ್ನವಿ ಈ ಚಿತ್ರದಲ್ಲಿ  ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸಿದ್ದಾರೆ. ಅಲ್ಲದೆ ೩ ಹಾಡುಗಳು ಚಿತ್ರದಲ್ಲಿದ್ದು, ಟೈಟಲ್ ಸಾಂಗನ್ನು ಚಂದನ್ ಶೆಟ್ಟಿ ಹಾಡಿದ್ದಾರೆ, ರಾಜಕೀಯ ವಿಡಂಬನೆಯ ಹಾಡನ್ನು ಉಪೇಂದ್ರ ಹಾಡಿದ್ದಾರೆ, ಇನ್ನು ಡ್ಯುಯೆಟ್ ಹಾಡಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ, ಚಿತ್ರವೀಗ ಡಿಟಿಎಸ್ ಹಂತದಲ್ಲಿದ್ದು, ಏಪ್ರಿಲ್ ವೇಳೆಗೆ ತೆರೆಗೆ ತರುವ ಯೋಜನೆಯಿದೆ ಎಂದು  ವಿವರಿಸಿದರು. ನಂತರ ಚಿತ್ರದ ನಾಯಕ, ನಿರ್ಮಾಪಕ, ಸತೀಶ್ ಮಾತನಾಡುತ್ತ.  2 ದಿನಗಳಲ್ಲಿ ಸೆನ್ಸಾರ್‌ಗೆ ಹೋಗ್ತಿದ್ದೇವೆ, ನಮ್ಮ ಚಿತ್ರವು ನಿಜವಾಗಿಯೂ ನಾವು ಹಾಕುವ ಮತ ಸರಿಯಾಗಿದೆಯೇ, ಸೂಕ್ತ ವ್ಯಕ್ತಿಗೆ ನಾವು ಹಾಕ್ತಿದ್ದೇವಾ ಎಂಬ ಚಿಂತನೆಗೆ ಹಚ್ಚುವ ಕೆಲಸ ಮಾಡುತ್ತದೆ.  ವಿ.ಮನೋಹರ್ ಅಂಥವರೊಂದಿಗೆ ಕೆಲಸ ಮಾಡಿದ್ದು ಅದೃಷ್ಟವೇ ಸರಿ. ನಾನು ಹೇಳಿದ್ದನ್ನು ಅವರು ಬರೆಯುತ್ತಿದ್ದುದು ನೋಡಿ  ನನಗೆ ಮುಜುಗರವಾಯಿತ್ತು. ಪ್ರತಿ ಪಾತ್ರಕ್ಕೆ ಇಂಥವರೇ ಬೇಕೆಂದು ಸೆಲೆಕ್ಟ್ ಮಾಡಿಕೊಂಡು ನೀವೇ ಮಾಡಿ ಎಂದು ಒತ್ತಾಯಿಸಿ ಮಾಡಿಸಿದ್ದಾರೆ. ಅವರ ಒತ್ತಾಯಕ್ಕೆ ಮಣಿದು ನಾನೂ ಅಭಿನಯಿಸಿದ್ದೇನೆ ಎಂದು ಹೇಳಿದರು.

    ನಾಯಕಿ ಜಾಹ್ನವಿ ಮಾತನಾಡಿ ಇದು ನನ್ನ ಮೊದಲ ಚಿತ್ರ. ಮದ್ಯಮ ವರ್ಗದ  ಸೈಕಾಲಜಿ ಸ್ಟೂಡೆಂಟ್, ರಜೆಗೆಂದು ಊರಿಗೆ ಬಂದಾಗ ನಾಯಕನ ಪರಿಚಯವಾಗುತ್ತದೆ. ನಂತರ ಆತನಿಗೆ ಸಪೋರ್ಟ್ ಮಾಡುತ್ತೇನೆ. ಮೊದಲ ಚಿತ್ರದಲ್ಲೇ ಇಂಥ ದೊಡ್ಡ ಡೈರೆಕ್ಟರ್ ಜೊತೆ ವರ್ಕ್ ಮಾಡೋ ಅವಕಾಶವಿತ್ತು ಎಂದು ಹೇಳಿದರು. ನಟ ಹುಲಿಕಾರ್ತೀಕ್ ಹಾಗೂ  ಛಾಯಾಗ್ರಾಹಕ ಸಾಮ್ರಾಟ್ ಎಸ್. ಚಿತ್ರದ ಕುರಿತಂತೆ ಮಾತನಾಡಿದರು.   ಹಳ್ಳಿಯೊಂದರಲ್ಲಿ  ನಡೆಯುವ  ರಾಜಕೀಯ, ಅಧಿಕಾರಕ್ಕಾಗಿ ಅಲ್ಲಿನ  ಮುಖಂಡರು ನಡೆಸುವ ಲಾಭಿ ಇದನ್ನೆಲ್ಲ  ದರ್ಬಾರ್ ಚಿತ್ರದಲ್ಲಿ  ಹೇಳಲಾಗಿದೆ.  ಈ ಚಿತ್ರಕ್ಕೆ ಹಿರಿಯ ಸಂಗೀತ ನಿರ್ದೇಶಕ ವಿ.ಮನೋಹರ್ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಜೊತೆಗೆ ಸಂಗೀತ ನಿರ್ದೇಶನ ಕೂಡ ಮಾಡಿದ್ದಾರೆ,  ಜನುಮದ ಜೋಡಿ, ಸೂರ್ಯವಂಶ, ಜೋಡಿಹಕ್ಕಿ ಸೇರಿದಂತೆ ಕನ್ನಡದ ಹಲವಾರು ಸೂಪರ್ ಹಿಟ್ ಚಲನಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿರುವ ವಿ. ಮನೋಹರ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮೂರನೇ ಚಿತ್ರವಿದು.  ಸತೀಶ್  ಕಥೆ, ಚಿತ್ರಕಥೆ ಹಾಗೂ  ಸಂಭಾಷಣೆ ಬರೆದಿದ್ದು, ದರ್ಬಾರ್ ಪ್ರೊಡಕ್ಷನ್ಸ್ ಮೂಲಕ  ಬಿ.ಎನ್. ಶಿಲ್ಪ ಅವರು  ನಿರ್ಮಾಣ ಮಾಡಿದ್ದಾರೆ. ಮಾಸ್ ಮಾದ, ವಿನೋದ್ ಸಾರಥ್ಯದ 3 ಸಾಹಸ ದೃಶ್ಯಗಳು  ಚಿತ್ರದಲ್ಲಿವೆ, ಮಂಡ್ಯ,  ಮದ್ದೂರು ಹಾಗೂ ಕೋಲಾರ ಸಮೀಪದ ಮಾಲೂರಿನಲ್ಲಿ  ಚಿತ್ರೀಕರಣ ನಡೆಸಲಾಗಿದೆ. ಉಳಿದ ತಾರಾಬಳಗದಲ್ಲಿ  ಸಾಧುಕೋಕಿಲ, ನವೀನ್ ಡಿ ಪಡೀಲ್, ಹುಲಿ ಕಾರ್ತೀಕ್, ಕಾಮಿಡಿ ಸಂತು ಹಾಗೂ ತ್ರಿವೇಣಿ  ನಟಿಸಿದ್ದಾರೆ.

  • ಏಳು ಸಂಗೀತ ನಿರ್ದೇಶಕರ ಕಂಠದಲ್ಲಿ ಬಾಬಾ ಹಾಡುಗಳು

    ಏಳು ಸಂಗೀತ ನಿರ್ದೇಶಕರ ಕಂಠದಲ್ಲಿ ಬಾಬಾ ಹಾಡುಗಳು

    ಸಾಹಿತಿ, ನಿರ್ದೇಶಕ ಕೆ.ರಾಮ್‌ನಾರಾಯಣ್, ಶ್ರೀ ಶಿರಡಿ ಸಾಯಿಬಾಬಾ ಅಪ್ಪಟ ಭಕ್ತ. ಇವರ ನಿರ್ದೇಶನದ ’ರಾಜಾಮಾರ್ತಾಂಡ’, ’ಅಬ್ಬರ’ ಚಿತ್ರಗಳಲ್ಲಿ ಬ್ಯುಸಿ ಇದ್ದರೂ ಬಿಡುವು ಮಾಡಿಕೊಂಡು ’ಸಾಯಿ ನನ್ನಯ್ಯ’ ಶೀರ್ಷಿಕೆಯಲ್ಲಿ ಏಳು ಹಾಡುಗಳನ್ನು ರಚಿಸಿದ್ದಾರೆ. ಇದನ್ನೂ ಓದಿ: ಶಿವಣ್ಣ – ತಲೈವಾ ಸಿನಿಮಾಗೆ `ಜೈಲರ್’ ಟೈಟಲ್ ಫಿಕ್ಸ್

    ಸದರಿ ಗೀತೆಗಳನ್ನು ಮೆಚ್ಚಿಕೊಂಡ ಖ್ಯಾತ ಸಂಗೀತ ನಿರ್ದೇಶಕರು ತಾವೇ ಹಾಡಿಗೆ ಕಂಠದಾನ ಮಾಡುವುದಾಗಿ ತಿಳಿಸಿದ್ದಾರೆ. ಅದರಂತೆ ವಿ.ಮನೋಹರ್, ರವಿಬಸ್ರೂರು, ವೀರಸಮರ್ಥ್, ಧರ್ಮವಿಶ್, ಅನೂಪ್‌ಸೀಳನ್, ಶ್ರೀಧರ್‌ಸಂಭ್ರಮ್ ಹಾಗೂ ಆರ್.ಎಸ್.ಗಣೇಶ್‌ನಾರಾಯಣ್ ಭಕ್ತಿ ಪರವಶದಿಂದ ಹಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ.

    ಸಂಗೀತ ಎಸ್.ನಾಗು, ವಾದ್ಯಗಳ ಸಂಯೋಜಕರು ಕುಶಲ.ಎಸ್ ಅವರದಾಗಿದೆ. ಗುರುವಾರದಂದು ವಿ.ಮನೋಹರ್ ಹಾಡಿರುವ ’ಸಾಯಿ ನನ್ನಯ್ಯ’ ಶೀರ್ಷಿಕೆ ಮೊದಲ ಗೀತೆಯನ್ನು ಬಾಬಾ ಸನ್ನಿಧಿಯಲ್ಲಿ ಬಿಡುಗಡೆ ಮಾಡಲಾಗಿದೆ. ಇದೇ ರೀತಿ ಪ್ರತಿ ಗುರುವಾರದಂದು ಸೆಲಿಬ್ರಿಟಿಗಳಿಂದ ಲೋಕಾರ್ಪಣೆ ಮಾಡಲು ತಂಡವು ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ’ಆರೆಂಜ್ ಆಡಿಯೋ’ ಮೂಲಕ ಬಿಡುಗಡೆಗೊಂಡ ಹಾಡು ವೈರಲ್ ಆಗಿದ್ದು, ಎರಡನೇ ಗೀತೆಗೆ ಭಕ್ತಾದಿಗಳು ಕಾಯುತ್ತಿದ್ದಾರೆ. ಸದರಿ ಹಾಡುಗಳನ್ನು ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್ ಅವರಿಗೆ ಅರ್ಪಣೆ ಮಾಡಲಾಗಿದೆ.

    Live Tv

  • ತಂದೆಯಂತೆ ಎಡಗೈಯಲ್ಲಿ ಕೊಟ್ಟಿದ್ದು ಬಲಗೈಗೆ ಗೊತ್ತಾಗ್ಬಾರ್ದು ಅನ್ನೋ ವ್ಯಕ್ತಿತ್ವ ಅಪ್ಪುದು: ವಿ. ಮನೋಹರ್

    ತಂದೆಯಂತೆ ಎಡಗೈಯಲ್ಲಿ ಕೊಟ್ಟಿದ್ದು ಬಲಗೈಗೆ ಗೊತ್ತಾಗ್ಬಾರ್ದು ಅನ್ನೋ ವ್ಯಕ್ತಿತ್ವ ಅಪ್ಪುದು: ವಿ. ಮನೋಹರ್

    ಬೆಂಗಳೂರು: ತಂದೆ ದಿ. ಡಾ. ರಾಜ್ ಕುಮಾರ್ ಅವರಂತೆ ಎಡಗೈಯಲ್ಲಿ ಕೊಟ್ಟಿದ್ದು ಬಲಗೈಗೆ ಗೊತ್ತಾಗಬಾರದು ಅನ್ನೋ ವ್ಯಕ್ತಿತ್ವ ಪುನೀತ್ ಅವರದ್ದಾಗಿದೆ ಎಂದು ಸಂಗೀತ ನಿದೇರ್ಶಕ ವಿ ಮನೋಹರ್ ಹೇಳಿದ್ದಾರೆ.

    ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಪುನೀತ್ ಜೊತೆ 25 ವರ್ಷಗಳಿಂದ ಒಡನಾಟ ಇದೆ. ಅಣ್ಣಬಾಂಡ್, ಅಂಜನಿ ಪುತ್ರ ಎರಡು ಸಿನಿಮಾದಲ್ಲಿ ಆಕ್ಟ್ ಮಾಡಿದ್ದೀನಿ. ಸಿಕ್ಕಾಗಲ್ಲೆ ರಿದಮ್ ಬಗ್ಗೆ ಮಾಹಿತಿ ಕೊಡೋರು. ಅವರಿಗೆ ತುಂಬಾ ಪ್ರೀತಿ ಇತ್ತು ಎಂದು ಭಾವುಕರಾದರು. ಇದನ್ನೂ ಓದಿ: ಕರಗದ ಅಪ್ಪು ಅಭಿಮಾನಿಗಳ ಸಾಗರ – ನೂಕುನುಗ್ಗಲು, ಬ್ಯಾರಿಕೇಡ್ ತಳ್ಳಿ ಆಕ್ರಂದನ

    ತಂದೆಯ ರೀತಿಯಲ್ಲಿಯೇ ಎಡಗೈಯಲ್ಲಿ ಕೊಟ್ಟಿದ್ದು ಬಲಗೈಯಲ್ಲಿ ಗೊತ್ತಾಗಬಾರದು ಎನ್ನುವಂತಹ ವ್ಯಕ್ತಿತ್ವ ಅವರದ್ದು. ಸಂಘ ಸಂಸ್ಥೆಗಳಿಗೆ ತುಂಬಾ ಸಹಾಯ ಮಾಡುತ್ತಿದ್ದರು. ತುಂಬಾ ಫಿಟ್ ಆಗಿದ್ದ ಪುನೀತ್‍ಗೆ ಹೀಗೆ ಯಾಕಾಯ್ತು. ಪುನೀತ್ ಹಾಡು ಹಾಡೋಣ ಅಂತ ಒಂದು ಹಾಡು ರೆಡಿ ಮಾಡೋಕೆ ಹೇಳಿದ್ರು. ಅಷ್ಟರಲ್ಲಿ ಪುನೀತ್ ಗೆ ಹೀಗಾಯ್ತು ಎಂದು ಗದ್ಗದಿತರಾದರು. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯ ಬಗ್ಗೆ ಕೊನೆಯದಾಗಿ ವಿಶೇಷ ಪೋಸ್ಟ್ ಮಾಡಿದ್ದ ಅಪ್ಪು

    ನಿನ್ನೆ ಬೆಳಗ್ಗೆ ಅಪ್ಪುಗೆ ಹೃದಯಾಘಾತವಾಗಿತ್ತು. ಕೂಡಲೇ ಅವರು ಸ್ಥಳೀಯ ರಮಣಶ್ರೀ ಕ್ಲಿನಿಕ್ ಗೆ ತೆರಳಿದ್ದಾರೆ. ಅಲ್ಲಿ ಇಸಿಜಿ ಮಾಡಿಸಿಕೊಂಡು ಇನ್ನೇನು ಮನೆ ಕಡೆ ತೆರಳುವಷ್ಟರಲ್ಲಿ ಅಲ್ಲಿಯೇ ಕುಸಿದುಬಿದ್ದಿದ್ದರು. ಕೂಡಲೇ ಅವರನ್ನು ಕಾರಿನಲ್ಲಿಯೇ ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ, ಫಲಕಾರಿಯಾಗದೇ ನಿಧನರಾಗಿದ್ದಾರೆ. ಪುನೀತ್ ಅವರು ಓರ್ವ ಪುತ್ರಿ ಅಮೆರಿಕದಲ್ಲಿದ್ದು, ಅವರ ಬರುವಿಕೆಯ ನಂತರ ಅಂತ್ಯಕ್ರಿಯೆ ನಡೆಯಲಿದೆ.

  • ವರ್ಷದ ಬಳಿಕ ಅನು ಪ್ರಭಾಕರ್ ಕಮ್ ಬ್ಯಾಕ್

    ವರ್ಷದ ಬಳಿಕ ಅನು ಪ್ರಭಾಕರ್ ಕಮ್ ಬ್ಯಾಕ್

    ಬೆಂಗಳೂರು: ವರ್ಷದ ನಂತರ ನಟಿ ಅನು ಪ್ರಭಾಕರ್ ಮತ್ತೆ ಸ್ಯಾಂಡಲ್‍ವುಡ್‍ಗೆ ರೀ ಎಂಟ್ರಿ ಕೊಟ್ಟಿದ್ದು, ಕಾದಂಬರಿ ಆಧರಿತ ಚಿತ್ರದ ಮೂಲಕ ಕಮ್ ಬ್ಯಾಕ್ ಆಗಿದ್ದಾರೆ. ಅನುಪ್ರಭಾಕರ್ ಅಭಿಮಾನಿಗಳಲ್ಲಿ ಇದು ಅತೀವ ಸಂತಸವನ್ನುಂಟುಮಾಡಿದ್ದು, ತಮ್ಮ ನೆಚ್ಚಿನ ನಟಿಯನ್ನು ತೆರೆಯ ಮೇಲೆ ನೋಡುವ ಕಾತರದಿಂದ ಕಾಯುತ್ತಿದ್ದಾರೆ. ಅಷ್ಟೇ ವೇಗದಲ್ಲಿ ಸಿನಿಮಾ ಸಹ ಪೂರ್ಣಗೊಂಡಿದ್ದು, ಆಗಲೇ ಡಬ್ಬಿಂಗ್ ಹಂತದಲ್ಲಿದೆ.

    ಆರಂಭದಲ್ಲಿ ತಕ್ಕ ಪಾತ್ರಗಳು ಸಿಗಲಿಲ್ಲ ಎಂದು ಸಿನಿಮಾದಿಂದ ದೂರ ಉಳಿದರೆ, ನಂತರ ಸಂಸಾರ, ಮಕ್ಕಳ ಜವಾಬ್ದಾರಿಯ ಕಾರಣ ನಟನೆಗೆ ಕೆಲವು ವರ್ಷಗಳ ಬಿಡುವು ನೀಡಿದ್ದರು. ಇದೀಗ ಮತ್ತೆ ಪೂರ್ಣ ಪ್ರಮಾಣದಲ್ಲಿ ಅನುಪ್ರಭಾಕರ್ ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

    ಲೇಖಕಿ ಸಾರಾ ಅಬೂಬಕರ್ ಅವರ ‘ವಜ್ರಗಳು’ ಕಾದಂಬರಿ ಆಧಾರಿತ ಚಿತ್ರ ಇದಾಗಿದ್ದು, ಸಿನಿಮಾಗೆ ‘ಸಾರಾವಜ್ರ’ ಎಂದು ಹೆಸರಿಡಲಾಗಿದೆ. ನಿರ್ದೇಶಕಿ ಆರ್ನಾ ಸಾಧ್ಯ (ಶ್ವೇತಾ ಶೆಟ್ಟಿ) ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಾರಾವಜ್ರ ಮೂಲಕ ಅನುಪ್ರಭಾಕರ್ ನಟನೆಗೆ ಮರಳಿದ್ದಾರೆ. ಕಳೆದ ವರ್ಷ ‘ಅನುಕ್ತಾ’ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ ಅವರ ಕೊನೆಯ ಸಿನಿಮಾ. ಆದರೆ ವಜ್ರಗಳು ಕಾದಂಬರಿಯ ಜೀವಾಳ `ನಫಿಜಾ’ ಪಾತ್ರ. ಅದೇ ಪಾತ್ರದಲ್ಲಿ ಅನು ಮಿನುಗಿದ್ದಾರೆ ಎನ್ನಲಾಗಿದೆ.

    ಚಿತ್ರ ಡಬ್ಬಿಂಗ್ ಹಂತದಲ್ಲಿದ್ದು, ಸದ್ಯದಲ್ಲೇ ಚಿತ್ರದ ಒಂಬತ್ತು ಹಾಡುಗಳು ಬಿಡುಗಡೆಯಾಗುವ ನಿರೀಕ್ಷೆ ಇದೆ. ಬಾಲನಟಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಅನು ಪ್ರಭಾಕರ್ ಎರಡು ದಶಕಗಳಲ್ಲಿ ಸುಮಾರು 80 ಚಿತ್ರಗಳಲ್ಲಿ ನಟಿಸಿದ್ದಾರೆ. ನಟ ರಘು ಮುಖರ್ಜಿಯವರನ್ನು ಕೈಹಿಡಿದಿರುವ ಅವರಿಗೆ ಒಂದೂವರೆ ವರ್ಷದ ಮಗಳಿದ್ದಾಳೆ. ತಾಯ್ತನದ ಖುಷಿಯಲ್ಲಿರುವ ಅವರಿಗೆ, ಈಗ ಮುಸ್ಲಿಮ್ ಕುಟುಂಬವೊಂದರ ಕಥೆ ಹೇಳುವ ‘ನಫಿಜಾ’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಚಿತ್ರದ ಕುರಿತು ಮಾತನಾಡಿರುವ ಅನು ಪ್ರಭಾಕರ್, ಖ್ಯಾತ ಲೇಖಕಿಯ ಕಾದಂಬರಿಯ ಕಥಾವಸ್ತುವಿಗೆ ನಟನೆಯ ಮೂಲಕ ನ್ಯಾಯ ಸಲ್ಲಿಸಲು ಸಾಧ್ಯವೇ ಎನ್ನುವ ಅಳುಕು ಆರಂಭದಲ್ಲಿತ್ತು. ಆದರೆ ಇಂತಹ ಪಾತ್ರವೊಂದು ವೃತ್ತಿ ಬದುಕಿನಲ್ಲಿ ಸಿಗುತ್ತಿರುವುದು ಸೌಭಾಗ್ಯ ಹೀಗಾಗಿ ಪಾತ್ರ ಒಪ್ಪಿಕೊಂಡೆ ಎಂದರು.

    ಈ ಚಿತ್ರದಲ್ಲಿ ಪೋಷಕ ನಟರಾಗಿ ಕಾಣಿಸಿಕೊಂಡಿರುವ ಹಿರಿಯ ನಟ ರಮೇಶ್ ಭಟ್ ಮಾತನಾಡಿ, ಸಿನಿಮಾ ಮೂಲಕ ಕಾದಂಬರಿಗೆ ನ್ಯಾಯ ಕೊಡುವುದು ಕಷ್ಟದ ಕೆಲಸ. ಅದನ್ನು ನಿರ್ದೇಶಕಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಈ ಚಿತ್ರವು ಕನ್ನಡ ಚಿತ್ರರಂಗಕ್ಕೆ ಅತ್ಯುತ್ತಮ ಕೊಡುಗೆ ಎನಿಸಲಿದೆ ಎಂದಿದ್ದಾರೆ.

    ನಟ, ನಿರೂಪಕ ರೆಹಮಾನ್ ಹಾಸನ್, ಈ ಚಿತ್ರದಲ್ಲಿ ಬದ್ರುದ್ದಿನ್ ಪಾತ್ರ ನಿಭಾಯಿಸಿದ್ದಾರೆ. ದೇವೇಂದ್ರ ರೆಡ್ಡಿ ಸಂಭ್ರಮ ಡ್ರೀಮ್ ಹೌಸ್ ಲಾಂಛನದಡಿ ಚಿತ್ರ ನಿರ್ಮಿಸಲಾಗಿದೆ. ನರೇಂದ್ರ ಬಾಬು ಚಿತ್ರಕಥೆ, ಪತ್ರಕರ್ತ ಬಿ.ಎಂ. ಹನೀಫ್ ಸಾಹಿತ್ಯ ಹಾಗೂ ಪರಂ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಒಂಬತ್ತು ಹಾಡುಗಳಿಗೆ ವಿ.ಮನೋಹರ್ ಸಂಗೀತ ಸಂಯೋಜನೆ ಇದೆ.